ಈ ಲೇಖನದಲ್ಲಿ ಪದವಿನ್ಯಾಸ ಟಿಪ್ಪಣಿಗೆ ಎರೆಮಣ್ಣು ಪದವನ್ನು ಆಯ್ದುಕೊಳ್ಳಲಾಗಿದೆ. ಎರೆಮಣ್ಣು ಪದಕ್ಕೆ ಪರ್ಯಾಯವಾಗಿ ಹದಿನೈದು ರೂಪಗಳು ಬಳಕೆಯಾಗಿರುವುದು ಕಂಡುಬಂದಿದೆ. ಅವುಗಳಲ್ಲಿ ೧. ಯೆರೆಮಣ್ಣು, ಎರೆಮಣ್ಣು, ಎರಿಮಣ್ಣು, ಎರಮಣ್ಣ್ ರೂಪಗಳು ಹತ್ತಕ್ಕಿಂತ ಹೆಚ್ಚಿನ ಜಿಲ್ಲೆಗಳಲ್ಲಿ ಬಳಕೆಯಾಗಿವೆ. ಉಳಿದ ಕಪ್ಮಣ್ಣು, ಅಂಟ್ಮಣ್ಣು, ಕರೆಮಣ್ಣು, ಗೋಡುಮಣ್ಣು, ಎಡ್ಮೆಮಣ್ಣು, ಕರುವಯ್ಯ, ಕರ್ಲು ಮತ್ತು ಮಡ್ಕೆ ಮಣ್ಣು ರೂಪಗಳು ವಿರಳವಾಗಿ ಒಂದೊಂದು ಜಿಲ್ಲೆಯಲ್ಲಿ ದೊರೆತಿದೆ.
ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕವನ್ನು ಪ್ರತ್ಯೇಕಿಸುವ ಎ ಕಾರ ಮತ್ತು ಇ ಕಾರಗಳ ಬಳಕೆಯಾಗಿರುವುದನ್ನು ಇಲ್ಲಿ ನೋಡಬಹುದಾಗಿದೆ. ಉತ್ತರ ಕರ್ನಾಟಕದ ಬೀದರ್, ಗುಲ್ಬರ್ಗಾ, ವಿಜಾಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಬಳ್ಳಾರಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ ಜಿಲ್ಲೆಗಳಲ್ಲಿ ‘ಇ’ಕಾರಂತ ರೂಪಗಳಾದ ಎರಿಮಣ್ಣು, ಎರಿಮಣ್ಣ್, ಕರಿಮಣ್ಣು ರೂಪಗಳು ಸಿಗುತ್ತವೆ. ಹಾಗೆಯೇ ದಕ್ಷಿಣ ಕರ್ನಾಟಕವನ್ನು ಪ್ರತಿನಿಧಿಸುವ ‘ಎ’ ಕಾರಂತ ರೂಪಗಳಾದ ಯೆರೆ ಮಣ್ಣ್, ಎರೆ ಮಣ್ಣುಪದಗಳು ಕರೇ ಮಣ್ಣು, ಕರೆಮಣ್ಣು ರೂಪಗಳು ಬೆಂಗಳೂರು, ಕೋಲಾರ, ಮೈರು, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಬಳಕೆಯಾಗಿದೆ. ಈ ಎರಡೂ ರೂಪಗಳನ್ನು ಬಿಟ್ಟರೆ ಬೆಂಗಳೂರು ಗ್ರಾಮಾಂತರ ಮತ್ತು ನಗರ ಜಿಲ್ಲೆಗಳನ್ನು ಸೇರಿಕೊಂಡಂತೆ ತುಮಕೂರು, ಹಾಸನ ಮತ್ತು ಕೊಡಗು ಜಿಲ್ಲೆಗಳಲ್ಲಿ ಕಪ್ ಮಣ್ಣು ಎನ್ನುವ ರೂಪ ಬಳಕೆಯಾಗಿರುವುದು ಕಂಡುಬಂದಿದೆ.
ಉಳಿದ ರೂಪಗಳಾದ ಅಂಟ್ಮಣ್ಣು, ಕಣೈ ಮಣ್ಣು, ಜೇಡಿ ಮಣ್ಣು, ಗೋಡು, ಎಡ್ಮೆ, ಕರುವಯ್ಯ, ಕರ್ಲು ಮತ್ತು ಮಡ್ಕೆ ಮಣ್ಣು ರೂಪಗಳು ಒಂದೆಡೆ ದೊರೆತಿಲ್ಲ. ಬದಲಿಗೆ ದಕ್ಷಿಣ ಕರ್ನಾಟಕದ ಬೇರೆ ಬೇರೆ ಜಿಲ್ಲೆಗಳಲ್ಲಿ ಒಂದೊಂದು ತಾಲೂಕಿನಲ್ಲಿ ಈ ರೂಪಗಳು ಬಳಕೆಯಾಗಿರುವುದನ್ನು ನೋಡಬಹುದು. ಕಣೈ ಮಣ್ಣು ಮತ್ತು ಜೇಡಿ ಮಣ್ಣು ರೂಪಗಳು. ಕೊಡಗು ಜಿಲ್ಲೆಯ ಒಂದೊಂದು ತಾಲೂಕಿನಲ್ಲಿ ಬಳಕೆಯಾದರೆ. ಗೋಡು ಮಣ್ಣು ರೂಪ ಬೆಂಗಳೂರಿನ ಎರಡು ತಾಲ್ಲೂಕಿನಲ್ಲಿ ಮಾತ್ರ ಬಳಸಿರುವುದು ಕಂಡುಬಂದಿದೆ. ಹಾಗೆಯೇ ಎಡ್ಮೆರೂಪ ಮತ್ತು ಕರುವಯ್ಯ ರೂಪಗಳು ಉಡುಪಿಯ ಒಂದೊಂದು ತಾಲೂಕಿನಲ್ಲಿ ಬಳಕೆಯಾಗಿರುವುದು ನೋಡಬಹುದು. ಉಳಿದ ಕರ್ಲು ಮತ್ತು ಮಡ್ಕೆ ಮಣ್ಣು ರೂಪ ಚಿಕ್ಕಮಗಳೂರಿನಲ್ಲಿ ಬಳಸಿರುವುದು ಚಿತ್ರದ ಮೂಲಕ ನೋಡಬಹುದು. ಎರೆ ಮಣ್ಣು ರೂಪದ ಬಳಕೆ ರಾಜ್ಯದಾದ್ಯಂತ ಬಹುರೂಪಿಯಲ್ಲಿ ಬಳಕೆಯಾಗಿದೆ. ಒಂದೇ ಬಗೆಯ ಪದಗಳನ್ನು ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಕೊಡುಗು, ಉಡುಪಿ, ಚಿಕ್ಕಮಗಳೂರು, ಬೆಂಗಳೂರು ಪ್ರಾಂತ್ಯದಲ್ಲಿ ಮಾತ್ರ ಉಳಿದ ಬೇರೆ ಬೇರೆ ರೂಪಗಳು ಕಂಡುಬಂದಿರುವುದು ಕುತೂಹಲಕರವಾಗಿದೆ.
ಈ ಎಲ್ಲ ವಿವರಗಳನ್ನು ಕೆಳಗಿನ ಕೋಷ್ಟಕಗಳಲ್ಲಿ ವಿರಿಸಲು ಪ್ರಯತ್ನಿಸಲಾಗಿದೆ. ಕೋಷ್ಟಕ ೧ ರಲ್ಲಿ ಎರೆಮಣ್ಣು ರೂಪಕ್ಕೆ ಸಿಕ್ಕ ಎಲ್ಲ ಪದಗಳ ಪಟ್ಟಿ ನೀಡಲಾಗಿದೆ. ಕೋಷ್ಟಕ ೨ರಲ್ಲಿ ಎರೆಮಣ್ಣು ರೂಪಕ್ಕೆ ಸಿಕ್ಕ ಪರ್ಯಾಯ ರೂಪಗಳು ಮತ್ತು ಅವುಗಳಿಗೆ ಇರುವ ದ್ವನಿವ್ಯತ್ಯಾಸ ರೂಪಗಳ ಪಟ್ಟಿ ಕೊಡಲಾಗಿದೆ. ಕೋಷ್ಟಕ ೩ ರಲ್ಲಿ ಈ ಎಲ್ಲ ರೂಪಗಳು ಜಿಲ್ಲಾ ಮತ್ತು ತಾಲೂಕುವಾರು ಬಳಕೆಯಾದ ವಿವರವನ್ನು ನೀಡಿದೆ. ಕೋಷ್ಟಕ ೪ರಲ್ಲಿ ‘ಎ’ ಕಾರಂತ ಮತ್ತು ‘ಇ’ ಕಾರಂತ ಬಳಕೆಯ ವಿವರವನ್ನು ನೀಡಲಾಗಿದೆ. ಕೋಷ್ಟಕ ೫ ರಲ್ಲಿ ಈ ಎಲ್ಲ ವಿವರಗಳನ್ನು ನೀಡುವ ನಕ್ಷೆಗಳನ್ನು ಕೊಡಲಾಗಿದೆ.
ಕೋಷ್ಟಕ ೧ – ಎರೆಮಣ್ಣು ಪದಕ್ಕೆ ಸಿಕ್ಕ ಒಟ್ಟು ಪರ್ಯಾಯ ಮತ್ತು ಧ್ವನಿವ್ಯತ್ಯಾಸದ ರೂಪಗಳು
೧. ಯರೆ ಮಣ್ಣು
೨. ಎರೆ ಮಣ್ಣು
೩. ಯರಿ ಮಣ್ಣ್
೪. ಎರಿಮಣ್ಣು
೫. ಯರ್ಮಣ್ಣು
೬. ಕರೀ ಮಣ್ಣು
೭. ಕರಿಮಣ್ಣು
೮. ಕರೆ ಮಣ್ಣ
೯. ಕಪ್ ಮಣ್ಣು
೧೦. ಅಂಟ್ಮಣ್ಣು
೧೧. ಕಣೈ ಮಣ್ಣು
೧೨. ಜೇಡಿ ಮಣ್ಣು
೧೩. ಗೋಡು
೧೪. ಎಡ್ಮೆ
೧೫. ಕರುವಯ್ಯ
೧೬. ಕರ್ಲು
೧೭. ಮಡ್ಕೆ ಮಣ್ಣು
ಕೋಷ್ಟಕ ೨ – ಎರೆಮಣ್ಣು ರೂಪದ ಪರ್ಯಾಯ ರೂಪಗಳು
ಪರ್ಯಾಯ ರೂಪ | ಧ್ವನಿವ್ಯತ್ಯಾಸವಿರುವ ರೂಪ |
೧. ಎರೆ ಮಣ್ಣು | ಯರೆ ಮಣ್ಣು |
ಎರೆ ಮಣ್ಣು | |
ಎರಿ ಮಣ್ಣು | |
ಯರಿ ಮಣ್ಣ್ | |
ಯರ್ಮಣ್ಣು | |
೨. ಕೆರೆ ಮಣ್ಣು | ಕೆರೆ ಮಣ್ಣು |
ಕರಿ ಮಣ್ಣು | |
ಕರೀ ಮಣ್ಣು | |
೩. ಕಪ್ ಮಣ್ಣು | ಕಪ್ ಮಣ್ಣು |
೪. ಅಂಟ್ಮಣ್ಣುಚ | ಅಂಟ್ಮಣ್ಣು |
೫. ಕಣೈ ಮಣ್ಣು | ಕಣೈ ಮಣ್ಣು |
೬. ಜೇಡಿ ಮಣ್ಣು | ಜೇಡಿ ಮಣ್ಣು |
೭. ಗೋಡು | ಗೋಡು |
೮. ಎಡ್ಮೆ | ಎಡ್ಮೆ |
೯. ಕರುವಯ್ಯ | ಕರುವಯ್ಯ |
೧೦. ಕರ್ಲು | ಕರ್ಲು |
೧೧. ಮಡ್ಕೆ ಮಣ್ಣು | ಮಡ್ಕೆ ಮಣ್ಣು |
ಕೋಷ್ಟಕ ೩ – ೧. ಯರೆ ಮಣ್ಣು, ಎರೆ ಮಣ್ಣು, ಎರಿ ಮಣ್ಣು, ಯರಿ ಮಣ್ಣ್, ಯರ್ಮಣ್ಣು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ
ಜಿಲ್ಲೆಗಳು | ತಾಲೂಕುಗಳು |
೧. ಉಡುಪಿ | – |
೨. ಉತ್ತರ ಕನ್ನಡ | ೩ |
೩. ಕಲಬುರ್ಗಿ | ಎಲ್ಲ ತಾಲೂಕು |
೪. ಕೊಡಗು | – |
೫. ಕೊಪ್ಪಳ | ಎಲ್ಲ ತಾಲೂಕು |
೬. ಕೋಲಾರ | ಎಲ್ಲ ತಾಲೂಕು |
೭. ಗದಗ | ಎಲ್ಲ ತಾಲೂಕು |
೮. ಚಾಮರಾಜನಗರ | ಎಲ್ಲ ತಾಲೂಕು |
೯. ಚಿಕ್ಕಮಗಳೂರು | ೨ |
೧೦. ಚಿತ್ರದುರ್ಗ | ಎಲ್ಲ ತಾಲೂಕು |
೧೧. ತುಮಕೂರು | ೭ |
೧೨. ದಕ್ಷಿಣ ಕನ್ನಡ | ೧ |
೧೩. ದಾವಣಗೆರೆ | ಎಲ್ಲ ತಾಲೂಕು |
೧೪. ಧಾರವಾಡ | ಎಲ್ಲ ತಾಲೂಕು |
೧೫. ಬಳ್ಳಾರಿ | ಎಲ್ಲ ತಾಲೂಕು |
೧೬. ಬಾಗಲಕೋಟೆ | ಎಲ್ಲ ತಾಲೂಕು |
೧೭. ಬೀದರ್ | ಎಲ್ಲ ತಾಲೂಕು |
೧೮. ಬೆಳಗಾವಿ | ಎಲ್ಲ ತಾಲೂಕು |
೧೯. ಬೆಂಗಳೂರು | ೨ |
೨೦. ಮಂಡ್ಯ | ೬ |
೨೧. ಮೈಸೂರು | ಎಲ್ಲ ತಾಲೂಕು |
೨೨. ರಾಯಚೂರು | ಎಲ್ಲ ತಾಲೂಕು |
೨೩. ವಿಜಾಪುರ | ಎಲ್ಲ ತಾಲೂಕು |
೨೪. ಶಿವಮೊಗ್ಗ | ೫ |
೨೫. ಹಾಸನ | ಎಲ್ಲ ತಾಲೂಕು |
೨೬. ಹಾವೇರಿ | ಎಲ್ಲ ತಾಲೂಕು |
೨. ಕೆರೆಮಣ್ಣು, ಕರಿಮಣ್ಣು, ಕರೀ ಮಅಣು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ
ಜಿಲ್ಲೆಗಳು | ತಾಲೂಕುಗಳು |
೧. ಕೋಲಾರ | ೭ |
೨. ಚಿಕ್ಕಮಗಳೂರು | – |
೩. ದಕ್ಷಿಣ ಕನ್ನಡ | ೩ |
೪. ಬೆಳಗಾವಿ | ೧ |
೫. ಬೆಂಗಳೂರು | ೬ |
೭. ಹಾಸನ | ೧ |
೩. ಕಪ್ ಮಣ್ಣು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿರ
೧. ಕೊಡಗು | ೧ |
೨. ಕೋಲಾರ | ೭ |
೩. ತುಮಕೂರು | ೩ |
೪. ಬೆಂಗಳೂರು | ೮ |
೫. ಹಾಸನ | ೧ |
೪. ಅಂಟ್ಮಣ್ಣು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಮಂಡ್ಯ | ೧ |
೫. ಕಣೈ ಮಣ್ನು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಕೊಡಗು೧ | ೧ |
೬. ಜೇಡಿ ಮಣ್ಣು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ಕೊಡಗು | ೧ |
೭. ಗೋಡು ರೂಪದ ಜಿಲ್ಲಾ ಮತ್ತು ತಾಲೂಕುವಾರ ವಿವರ
೧. ಬೆಂಗಳೂರು | ೨ |
೮. ಎಡ್ಮೆ ರೂಪದ ಜಿಲ್ಲಾ ಮತ್ತು ತಾಲೂಕುವಾರ ವಿವರ
೧. ದ.ಕನ್ನಡ | ೧ |
೯. ಕುರುವಯ್ಯ ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ
೧. ದ. ಕನ್ನಡ | ೧ |
೧೦. ಕರ್ಲು ರೂಪದ ಜಿಲ್ಲಾ ಮತ್ತು ತಾಲೂಕುವಾರು ವಿವರ
೧.ಉತ್ತರ ಕನ್ನಡ | ೧ |
ಕೋಷ್ಟಕ ೪ – ‘ಎ’ ಕಾರಂತ ಮತ್ತು ‘ಇ’ಕಾರಂತ ರೂಪಗಳ ಬಳಕೆಯ ವಿವರ
೧. ಯರೆಮಣ್ಣು, ಎರೆಮಣ್ಣು, ಕರೆಮಣ್ಣು, ಕರೇಮಣ್ಣು
ಜಿಲ್ಲೆ | ತಾಲೂಕುಗಳು |
ಮಂಡ್ಯ | ೭ |
ಶಿವಮೊಗ್ಗ | ೨ |
ಚಿತ್ರದುರ್ಗ | ಎಲ್ಲ ತಾಲೂಕು |
ಚಿಕ್ಕಮಗಳೂರು | ೩ |
ಕೋಲಾರ | ೭ |
ದಕ್ಷಿಣ ಕನ್ನಡ | ೧ |
ಎರಿಮಣ್ಣು, ಎರಿಮಣ್ಣ್ ಮತ್ತು ಕರಿಮಣ್ಣು ರೂಪಗಳು
ಜಿಲ್ಲೆ | ತಾಲೂಕುಗಳು |
ಧಾರವಾಡ | ಎಲ್ಲ ತಾಲೂಕುಗಳು |
ಗದಗ | ಎಲ್ಲ ತಾಲೂಕುಗಳು |
ಹಾವೇರಿ | ಎಲ್ಲ ತಾಲೂಕುಗಳು |
ಬೆಳಗಾವಿ | ಎಲ್ಲ ತಾಲೂಕುಗಳು |
ರಾಯಚೂರು | ಎಲ್ಲ ತಾಲೂಕುಗಳು |
ಕೊಪ್ಪಳ | ಎಲ್ಲ ತಾಲೂಕುಗಳು |
ಬೀದರ್ | ಎಲ್ಲ ತಾಲೂಕುಗಳು |
ವಿಜಾಪೂರ | ಎಲ್ಲ ತಾಲೂಕುಗಳು |
ಬಾಗಲಕೋಟೆ | ಎಲ್ಲ ತಾಲೂಕುಗಳು |
Leave A Comment