೧೯೯೨ರಿಂದ ೧೯೯೫ ರವರೆಗೆ ಕನ್ನಡ ವಿಶ್ವವಿದ್ಯಾಲಯ ಕೃಷಿ ಪದಕೋಶ ಅಧ್ಯಯನ ಕೈಗೊಂಡಿತು. ಈ ಸಂದರ್ಭದಲ್ಲಿ ಕೃಷಿಗೆ ಸಂಬಂಧಿಸಿದ ಎಲ್ಲ ಬಗೆಯ ಪದಗಳನ್ನು ಕಲೆ ಹಾಕಲಾಯಿತು. ಕಲೆ ಹಾಕಿದ ಪದಗಳನ್ನು ಹಲವು ಬಗೆಯಲ್ಲಿ ವಿಂಗಡಿಸಲಾಯಿತು. ಬೆಳೆಗಳು, ಉಪಕರಣಗಳು, ಅಳತೆ, ಭೂಮಿ, ಹೀಗೆ ವಿಂಗಡಿಸಿದ ಪದಗಳನ್ನು ಇಟ್ಟುಕೊಂಡು ಕೆಲವು ಪದಗಳಿಗೆ ಕರ್ನಾಟಕದಾದ್ಯಂತ ಇರುವ ಪರ‍್ಯಾಯ ಪದಗಳನ್ನು ಗುರುತಿಸಿ ಅವುಗಳಿಗೆ ನಕ್ಷೆಗಳನ್ನು ತಯಾರಿಸಲಾಯಿತು. ಹೀಗೆ ನಕ್ಷೆ ತಯಾರಿಸಿದಾಗ ಪರ‍್ಯಾಯ ರೂಪಗಳು ಬಳಕೆಯಾದದ್ದು ಪ್ರತ್ಯೇಕ ಗ್ರಿಡ್‌ಗಳಾಗಿರುವುದನ್ನು ಕಂಡಿತು. ಇದು ಇನ್ನೂ ಕುತೂಹಲ ಕೆರಳಿಸಿತು. ಪದಗಳ ಬಳಕೆಗೆ ಅದರದೇ ಆದ ಸ್ವರೂಪ ಮತ್ತು ವ್ಯಾಪ್ತಿ ಇರುವುದು ಕಂಡುಬಂತು. ಇದನ್ನು ಕೂಲಂಕುಶವಾಗಿ ನೋಡಿದಾಗ ಇದಕ್ಕೆ ಅನೇಕ ಭೌಗೋಳಿಕ ಮತ್ತು ಸಾಮಾಜಿಕ ಕಾರಣಗಳಿರುವುದು ತಿಳಿಯಿತು. ಇದನ್ನು ಇಟ್ಟುಕೊಂಡು ಪದವಿನ್ಯಾಸದ ಟಿಪ್ಪಣಿಯಲ್ಲಿ ಕಳೆ ರೂಪವನ್ನು ಬಳಸಿಕೊಳ್ಳಲಾಗಿದೆ.

ಬೆಳೆಯ ನಡುವೆ ಬೆಳೆಯುವ ಕಳೆ ಅಥವಾ ಹುಲ್ಲನ್ನ ಕಳೆ ಎಂದು ಕರೆಯುತ್ತಾರೆ. ಈ ಪದಕ್ಕೆ ಕರ್ನಾಟಕದಾದ್ಯಂತ ಸುಮಾರು ೧೬ ಬಗೆಯಲ್ಲಿ ಪರ‍್ಯಾಯ ರೂಪಗಳನ್ನು ಬಳಸಿರುವುದು ಕಂಡುಬಂದಿದೆ. ಇದರಲ್ಲಿ ಕೆಲವು ಪದಗಳು ಹತ್ತಿರದ ಸಂಬಂಧ ಇರುವುದರಿಂದ ಅವುಗಳನ್ನು ಒಂದೆಡೆ ಸೇರಿಸಿ ಪದಗಳ ವಿಂಗಡಣೆ ಮಾಡಿದರೆ ಒಂಬತ್ತು ಬಗೆಗಳು ಸಿಗುತ್ತವೆ. ೧. ಕಳೆ, ಕಳೆವ್, ಕಳಿ, ಖಳೆ ೨. ಸದೆ, ಸದಿ, ಸದೇವು, ಸೊದೆ, ೩. ಸತ್ತೆ ೪. ಕಸ ೫. ಹುಲ್ಸು ೬. ಹೊಲ್ಸು ೭. ಕಜವು ೮. ಪಂತಿ. ಪಂಕ್ತಿ ೯. ಕಲೆ.

ಮೇಲೆ ಹೇಳಿದ ಒಂಬತ್ತು ವಿಭಾಗಗಳನ್ನು ಆಧರಿಸಿ ನಕ್ಷೆಯನ್ನು ಸಿದ್ಧಪಡಿಸಲಾಗಿದೆ. ಈ ನಕ್ಷೆಯನ್ನು ನೋಡಿದರೆ ಕರ್ನಾಟಕದಾದ್ಯಂತ ಬಹುತೇಕೆ ಜಿಲ್ಲೆಗಳಲ್ಲಿ ಕಳೆ ಪದ ಬಳಕೆಯಿರುವುದನ್ನು ನೋಡಬಹುದಾಗಿದೆ. ತುಂಗಭದ್ರ ಅಥವಾ ಕೃಷ್ಣ ನದಿಯ ಕೆಳಗೆ ಕೆಲವು ಭಾಗಗಳಲ್ಲಿ ಬಿಟ್ಟರೆ ಬಹುತೇಕ ಕಳೆ ಬಳಕೆಯಾಗಿದೆ. ಬೀದರ್, ಗುಲಬರ್ಗಾ, ವಿಜಾಪುರ, ಬಾಗಲಕೋಟೆ ಜಿಲ್ಲೆಗಳಲ್ಲಿ ಹುಲ್ಲು, ಕಸ ಮತ್ತು ಸೆದೆ, ಸದೆಯ ಬಳಕೆಯಿರುವುದನ್ನು ನೋಡಬಹುದಾಗಿದೆ. ಅತ್ಯಂತ ವಿರಳವಾಗಿ ಬಳಕೆಯಿರುವ ಸತ್ತೆ ಕಜವು, ಪಂಕ್ತಿ ಪಂತಿ ಹೊಲ್ಸು ಪದಗಳು ಕಂಡುಬಂದಿವೆ.

ಕೋಲಾರ ಜಿಲ್ಲೆಯ ಎರಡು ತಾಲ್ಲೂಕುಗಳಲ್ಲಿ ಸತ್ತೆ ಪದ ಬಳಕೆಯಾಗಿರುವುದು, ದಕ್ಷಿಣ ಕನ್ನಡದ ಎರಡು ತಾಲ್ಲೂಕುಗಳಲ್ಲಿ ಪಂತಿ, ಪಂಕ್ತಿ ಪದದ ಬಳಕೆಯಾಗಿರುವುದನ್ನು ಗಮನಿಸಬಹುದು. ಉಡುಪಿ ಜಿಲ್ಲೆಯ ಮೂರು ತಾಲ್ಲೂಕುಗಳಲ್ಲಿ ಕಜವು ಪದ ಬಳಕೆಯಾಗಿದೆ. ಇದು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಮತ್ತು ದಕ್ಷಿಣ ಕನ್ನಡದ ಒಂದು ತಾಲ್ಲೂಕುಗಳಲ್ಲಿ ಕಲೆ ಬಳಕೆಯಿರುವುದರಿಂದ ಬಹುಶಃ ವ್ಯಕ್ತಿಯ ಬಳಕೆಯಲ್ಲಿ ಕಳೆಯ ಬದಲಿಗೆ ಕಲೆ ಎಂದು ಬಳಸಿರುವ ಸಾಧ್ಯತೆ ಇದೆ. ಉತ್ತರ ಕರ್ನಾಟಕದ ಜಿಲ್ಲೆಯಾದ ಬೀದರ್ ಮತ್ತು ಕಲಬುರ್ಗಿಯಲ್ಲಿ ಹುಲ್ಲು ಪದ ಕೂಡ ಹೆಚ್ಚಾಗಿ ಬಳಸಿರುವುದನ್ನು ನೋಡಬಹುದು. ಈ ರೂಪ ಚಿಕ್ಕಮಗಳೂರಿನ ಒಂದು ತಾಲ್ಲೂಕಿನಲ್ಲಿ ಮತ್ತು ಉತ್ತರ ಕನ್ನಡ ಜಿಲ್ಲೆಯ ಒಂದು ತಾಲೂಕಿನಲ್ಲಿ ಮತ್ತು ದಕ್ಷಿಣ ಕನ್ನಡದ ಒಂದು ತಾಲ್ಲೂಕಿನಲ್ಲಿ ದೊರೆತಿದೆ. ಇದಕ್ಕೆ ಕಾರಣಗಳು ಹುಡುಕುವುದು ಕಷ್ಟ ಬಹುಶಃ ಬೇರೆ ಕಡೆಯಿಂದ ವಲಸೆ ಬಂದವರ ಪದ ಇದಾಗಿರಲು ಸಾಧ್ಯವಿದೆ.

ಈ ಎಲ್ಲ ವಿವರಗಳನ್ನು ಕೆಳಗಿನ ಕೋಷ್ಟಕಗಳಲ್ಲಿ ವಿವರವಾಗಿ ನೀಡಲಾಗಿದೆ. ಕೋಷ್ಟಕ ೧ರಲ್ಲಿ ಬಳಕೆಯಾದ ಎಲ್ಲ ರೂಪಗಳ ಪಟ್ಟಿಯನ್ನು ಕೋಷ್ಟಕ ೨ ರಲ್ಲಿ ಪರ‍್ಯಾಯ ರೂಪಗಳನ್ನು ಮತ್ತು ಅವುಗಳ ಧ್ವನಿ ವ್ಯತ್ಯಾಸ ರೂಪವನ್ನು ನೀಡಲಾಗಿದೆ. ಕೋಷಟ್ಕ ೨ ರಲ್ಲಿ ಈ ಎಲ್ಲ ಪರ‍್ಯಾಯ ರೂಪಗಳು ಜಿಲ್ಲಾ ಮತ್ತು ತಾಲೂಕುಗಳಲ್ಲಿ ಬಳಕೆಯಾದ ವಿವರ ನೀಡಲಾಗಿದೆ. ಕೋಷ್ಟಕ ೪ ರಲ್ಲಿ ನಕ್ಷೆ ನೀಡಿದೆ.

ಕೋಷ್ಟಕ ೧ – ಕಳೆ ರೂಪದ ಪರ್ಯಾಯ ಮತ್ತು ಧ್ವನಿವ್ಯತ್ಯಾಸ ಇರುವ ಪದಗಳ ವಿವರ

೧. ಕಳೆ

೨. ಕಳೆವ್

೩. ಖಳೆ

೪. ಕಳಿ

೫. ಸದೆ

೬. ಸದಿ

೭. ಸದೇವು

೮. ಸೊದೆ

೯. ಸತ್ತ

೧೦. ಕಸ

೧೧. ಹುಲ್ಲು

೧೨. ಹೊಲ್ಸು

೧೩. ಕಜವು

೧೪. ಪಂತಿ

೧೫. ಪಂಕ್ತಿ

೧೬. ಕಲೆ

ಕೋಷ್ಟಕ ೨ – ಕಳೆಪದಕ್ಕೆ ಕಂಡು ಬರುವ ಪರ್ಯಾಯ ರೂಪಗಳ ಧ್ವನಿವ್ಯತ್ಯಾಸದ ಪದಗಳ ವಿವರ

೧. ಕಳೆ ಕಳೆ
ಕಳೆವ್
ಖಳೆ
ಕಳಿ
೨. ಸದೆ ಸದೆ
ಸದಿ
ಸದೇವು
ಸೊದೆ
೩. ಸತ್ತೆ ಸತ್ತೆ
೪. ಕಸ ಕಸ
೫. ಹುಲ್ಲು ಹುಲ್ಲು
೬. ಹೊಲ್ಸು ಹೊಲ್ಸು
೭. ಕಜವು ಕಜವು
೮. ಪಂತಿ ಪಂತಿ
ಪಂಕ್ತಿ
೯. ಕಲೆ ಕಲೆ

ಕೋಷ್ಟಕ – ಕಳೆ, ಕಳೆವ್, ಖಳೆ ಮತ್ತು ಕಳಿ ರೂಪ ಬಳಕೆಯಾದ ಜಿಲ್ಲೆಗಳು ಮತ್ತು ತಾಲೂಕುಗಳ ವಿವರ

ಕ್ರ. ಸಂ. ಜಿಲ್ಲೆಗಳು ತಾಲೂಕುಗಳು
೧. ಉಡುಪಿ ಇಲ್ಲ
೨. ಉತ್ತರ ಕನ್ನಡ ೧೦
೩. ಕಲಬುರ್ಗಿ
೪. ಕೊಡಗು
೫. ಕೊಪ್ಪಳ
೬. ಕೋಲಾರ
೭. ಗದಗ
೮. ಚಾಮರಾಜನಗರ ಇಲ್ಲ
೯. ಚಿಕ್ಕಮಗಳೂರು
೧೦. ಚಿತ್ರದುರ್ಗ
೧೧. ತುಮಕೂರು ೧೦
೧೨. ದಕ್ಷಿಣ ಕನ್ನಡ ಇಲ್ಲ
೧೩. ದಾವಣಗೆರೆ ಇಲ್ಲ
೧೪. ಧಾರವಾಡ
೧೫. ಬಳ್ಳಾರಿ ಎಲ್ಲ ತಾಲೂಕು
೧೬. ಬಾಗಲಕೋಟೆ ಇಲ್ಲ
೧೭. ಬೀದರ್ ಇಲ್ಲ
೧೮. ಬೆಳಗಾವಿ ೧೦
೧೯. ಬೆಂಗಳೂರು ೧೧
೨೦. ಮಂಡ್ಯ ಎಲ್ಲ ತಾಲೂಕು
೨೧. ಮೈಸೂರು ಎಲ್ಲ ತಾಲೂಕು
೨೨. ರಾಯಚೂರು
೨೩. ವಿಜಾಪುರ ಇಲ್ಲ
೨೪. ಶಿವಮೊಗ್ಗ
೨೫. ಹಾಸನ ಎಲ್ಲ ತಾಲೂಕು
೨೬. ಹಾವೇರಿ ಎಲ್ಲ ತಾಲೂಕು

ಸದೆ, ಸದಿ, ಸದೇವು ಮತ್ತು ಸೊದೆ ರೂಪದ ಜಿಲ್ಲಾ ಮತ್ತು ತಾಲೂಕುವಾರು ಬಳಕಯ ವಿವರ

ಕ್ರ.ಸಂ. ಜಿಲ್ಲೆಗಳು ತಾಲೂಕುಗಳು
೩. ಕಲಬುರ್ಗಿ
೭. ಬೀದರ್
೨೩. ವಿಜಾಪುರ

 

ಜಿಲ್ಲೆ ಮತ್ತು ತಾಲೂಕು ವಾರು ಸತ್ತೆ ರೂಪ ಬಳಕೆಯಾದ ವಿವರ

೧. ಕೋಲಾರ

 

ಕಸ ಪದದ ಬಳಕೆಯ ಜಿಲ್ಲಾತ್ತು ತಾಲೂಕುವಾರು ವಿವರ

೧. ಕಲಬುರ್ಗಿ
೨. ಕೊಪ್ಪಳ
೩. ಬಾಗಲಕೋಟೆ
೪. ಬೆಳಗಾವಿ
೫. ವಿಜಾಪು

 

ಹುಲ್ಲು ಪದದ ಬಳಕೆಯ ಜಿಲ್ಲಾ ಮತ್ತು ತಾಲೂಕುಗಳ ವಿವರ

೧. ಉತ್ತರ ಕನ್ನಡ
೨. ಕಲಬುರ್ಗಿ
೩. ಚಿಕ್ಕಮಗಳೂರು
೪. ದ. ಕನ್ನಡ
೫. ಬೀದರ್

 

ಹೊಲ್ಸು ಪದದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ

ಕಜವು ಪದದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರ ವಿವರ

೧. ಉಡುಪಿ

 

ಪಂತಿ ಮತ್ತು ಪಂಕ್ತಿ ಪದದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ದಕ್ಷಿಣ ಕನ್ನಡ

 

ಕಳೆ ಪದದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಉತ್ತರ ಕನ್ನಡ
೨. ದಕ್ಷಿಣ ಕನ್ನಡ

08_365_PV-KUH

9_365_PV-KUH