ಜಗತ್ತಿನಲ್ಲಿ ಸಾವಿರಾರು ಭಾಷೆಗಳು ಬಳಕೆಯಲ್ಲಿವೆ. ಭಾರತ ದೇಶವೊಂದರಲ್ಲೇ ನೂರಾರು ಭಾಷೆಗಳಿವೆ ಎಂದು ಭಾಷಾತಜ್ಞರು ಹೇಳುತ್ತಾರೆ. ಕರ್ನಾಟಕ ರಾಜ್ಯದಲ್ಲೇ ಹತ್ತಾರು ಭಾಷೆಯ ಬಳಕೆಯಾಗುತ್ತಿವೆ. ಹೀಗೆ ಬಳಕೆಯಾಗುವ ಭಾಷೆಗಳ ನಡುವೆ ಅನೇಕ ಸಮಾನತೆಗಳಿರುವುದನ್ನು ಗುರುತಿಸುತ್ತ ಬಂದಿದ್ದೇವೆ. ಕನ್ನಡ, ತಮಿಳು, ಮಲಯಾಳಂ, ತುಳು ಮತ್ತು ತೆಲುಗು ಭಾಷೆಗಳ ನಡುವೆ ಸಮಾನ ಅಂಶಗಳನ್ನು ಕಂಡಿದ್ದೇವೆ. ಈ ಎಲ್ಲ ಭಾಷೆಗಳ ಮೂಲ ಒಂದೇ ಎಂತಲೂ ಹೇಳುತ್ತ ಬಂದಿದ್ದೇವೆ. ಹೀಗೆ ಅನೇಕ ಭಾಷೆಗಳ ನಡುವೆ ಇರುವ ಸಂಬಂಧವನ್ನು, ಸಮಾನತೆಯನ್ನು ಗುರುತಿಸುವುದು ಒಂದು ಬಗೆ. ಹಾಗೆಯೇ ಒಂದೇ ಭಾಷೆಯಲ್ಲಿ ಅನೇಕ ವ್ಯತ್ಯಾಸಗಳನ್ನು ಗುರುತಿಸುವುದು ಒಂದು ಬಗೆ. ಹಾಗೆಯೇ ಒಂದೇ ಭಾಷೆಯಲ್ಲಿ ಅನೇಕ ವ್ಯತ್ಯಾಸಗಳನ್ನು ಕೂಡ ಗುರುತಿಸಬಹುದಾಗಿದೆ. ವಿಶಾಲ ಕರ್ನಾಟಕದ ಉತ್ತರದ ತುದಿಯಿಂದ ದಕ್ಷಿಣದ ತುದಿಯವರೆಗೆ ಪೂರ್ವದ ಕೊನೆಯಿಂದ ಪಶ್ಚಿಮದ ಕರಾವಳಿವರೆಗೆ ಕನ್ನಡ ಒಂದೇ ಭಾಷೆ ಬಳಕೆಯಲ್ಲಿದೆ. ಈ ಎಲ್ಲ ಕನ್ನಡ ಭಾಷೆ ಒಂದೇ ರೀತಿಯಲ್ಲಿಲ್ಲ. ಹಲವಾರು ಕನ್ನಡಗಳು ಬಳಕೆಯಲ್ಲಿವೆ.

ಕರ್ನಾಟಕದ ಉದ್ದಗಲಕ್ಕೂ ಇರುವ ಹಲವು ಕನ್ನಡಗಳಲ್ಲಿ ಒಂದೇ ಪದಕ್ಕೆ ಉಚ್ಛಾರಣೆಯಲ್ಲಿ ಇರುವ ಭಿನ್ನತೆಯನ್ನು ಗುರುತಿಸಬಹುದಾಗಿದೆ. ಹಾಗೆಯೇ ಒಂದೇ ಪದಕ್ಕೆ ಬೇರೆ ಬೇರೆ ರೀತಿಯ ಶಬ್ದಗಳ ಬಳಕೆಯಿರುವುದನ್ನು ನೋಡಬಹುದು. ಉತ್ತರ ಕರ್ನಾಟಕ ಮತ್ತು ದಕ್ಷಿಣ ಕರ್ನಾಟಕದ ಬಳಕೆಯ ಒಂದು ಪದದಲ್ಲಿನ ಬಳಕೆಯಲ್ಲಿ ಉತ್ತರ ಕರ್ನಾಟಕದವರು ‘ಇ’ ಕಾರಾಂತವಾಗಿ ಬಳಸಿದರೆ ದಕ್ಷಿಣ ಕರ್ನಾಟಕದವರು ‘ಎ’ ಕಾರಾಂತವಾಗಿ ಬಳಸುವುದನ್ನು ಸಾಮಾನ್ಯವಾಗಿ ಗುರುತಿಸುತ್ತೇವೆ. ಉದಾ. ದಕ್ಷಿಣ ಕರ್ನಾಟಕದವರು ಮನೆ, ಒಂಟೆ, ಆನೆ ಪದಗಳನ್ನು ಬಳಸಿದರೆ, ಉತ್ತರ ಕರ್ನಾಟಕದವರು ಇದೇ ಪದಗಳನ್ನು ಮನಿ, ಒಂಟಿ, ಆನಿ ಎಂದು ಬಳಸುವುದನ್ನು ನೋಡಬಹುದು. ಒಂದು ಪದಕ್ಕೆ ಇರುವ ಈ ಭಿನ್ನ ವಿನ್ಯಾಸವನ್ನು ಕೃಷಿಯಲ್ಲಿ ಬಳಕೆಯಾಗುವ ಅನೇಕ ಪದಗಳಿಂದ ವಿವರಿಸಲು ಪ್ರಯತ್ನಿಸಲಾಗಿದೆ.

ಪದವಿನ್ಯಾಸ ಈ ಟಿಪ್ಪಣಿಗೆ ಕೃಷಿಯಲ್ಲಿ ಬಳಸುವ ಮುಖ್ಯ ಸಾಧನ ಕುಂಟೆಯನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಈ ಪದದ ಬಳಕೆ ಮತ್ತು ಈ ವಸ್ತುವಿಗೆ ರಾಜ್ಯಾದಾದ್ಯಂತ ಬೇರೆ ಬೇರೆ ಕಡೆಗಳಲ್ಲಿ ಬಳಸುವ ಪರ‍್ಯಾಯ ಪದಗಳನ್ನು ನಕ್ಷೆಯ ಮೂಲಕ ಗುರುತಿಸಲಾಗಿದೆ.

‘ಕುಂಟೆ’ ಎನ್ನುವ ಪದ ಕೃಷಿಯಲ್ಲಿ ಹೊಲ ಉಳಲು ಬಳಸುವ ಮುಖ್ಯವಾದ ಒಂದು ಸಾಧನ. ಈ ಪದದ ಬಳಕೆಯನ್ನು ಗಮನಿಸಿದರೆ ಮುಖ್ಯವಾಗಿ ಮೂರು ರೂಪಗಳು ಸಿಗುತ್ತವೆ. ೧. ಕುಂಟೆ, ಕುಂಟಿ, ಗುಂಟ್ವೆ ಅಥವಾ ಗುಂಟೆ ಜೊತೆಗೆ ರಾಜ್ಯದ ಯಾವುದೋ ಒಂದೊಂದು ತಾಲೂಕುಗಳಲ್ಲಿ ಮೂರು ಭಿನ್ನ ರೂಪದ ಪರ‍್ಯಾಯ ಪದ ಸಿಕ್ಕಿರುವುದನ್ನು ನೋಡುತ್ತೇವೆ. ಬೆಳಗಾವಿಯ ಒಂದು ತಾಲೂಕಿನಲ್ಲಿ ಕೂಟಿ ಎನ್ನುವ ಪದ ಗುಲಬರ್ಗಾದ ಒಂದು ತಾಲೂಕಿನಲ್ಲಿ ಕುಂಟ ಎನ್ನುವ ಪದ ಮತ್ತು ಬೀದರ್ ಜಿಲ್ಲೆಯ ಒಂದು ತಾಲೂಕಿನಲ್ಲಿ ಗಳೇ ಎನ್ನುವ ಪದ ಮತ್ತು ಬೀದರ್ ಜಿಲ್ಲೆಯ ಮತ್ತೊಂದು ತಾಲೂಕಿನಲ್ಲಿ ಕುಂಟ ಎನ್ನುವ ಪದಗಳು ದೊರೆತಿವೆ. ಉಳಿದಂತೆ ಇಡೀ ರಾಜ್ಯದಾದ್ಯಂತ ಮೇಲೆ ಸೂಚಿಸಿದ ಮೂರು ರೂಪಗಳು ಮಾತ್ರ ದೊರಕುತ್ತವೆ. ಈ ಹಿಂದೆಯೇ ಹೇಳಿದಂತೆ ಉತ್ತರ ಕರ್ನಾಟಕದಲ್ಲಿ ಕುಂಟೆ ಎನ್ನುವ ಪದ ‘ಇ’ ಕಾರಂತವಾಗಿ ಕುಂಟಿ ಎಂದು ಬಳಕೆಯಾಗಿರುವುದು ಸರ್ವೇಸಾಮಾನ್ಯವಾಗಿದೆ. ಉತ್ತರ ಕರ್ನಾಟಕದ ೫೯ ತಾಲೂಕುಗಳಲ್ಲಿ ಕುಂಟಿ ಬಳಕೆಯಾದರೆ ದಕ್ಷಿಣ ಕರ್ನಾಟಕದಲ್ಲಿ ೬೨ ತಾಲೂಕುಗಳಲ್ಲಿ ಕುಂಟೆ ಎನ್ನುವ ಪದದ ಬಳಕೆಯಾಗಿದೆ.ಕೋಲಾರ ಜಿಲ್ಲೆಯ ಬಹುತೇಕ ಭಾಗದಲ್ಲಿ ಮತ್ತು ಬೆಂಗಳೂರು ಜಿಲ್ಲೆಯ ಕೆಲವೆಡೆ ಗುಂಟ್ವೆ, ಗುಂಟೆ ಎನ್ನುವ ಪದದ ಬಳಕೆಯಾಗಿರುವುದನ್ನು ನಕ್ಷೆಯ ಮೂಲಕ ನೋಡಬಹುದು.

ನಕ್ಷೆಯನ್ನು ಗಮನಿಸಿದರೆ ಉತ್ತರ ಮತ್ತು ದಕ್ಷಿಣ ಕರ್ನಾಟಕದ ನಡುವಿನ ಬಹುಮುಖ್ಯ ವ್ಯತ್ಯಾಸವನ್ನು ನೋಡಬಹುದು. ಉತ್ತರ ಕರ್ನಾಟಕದ ತುತ್ತತುದಿಯಲ್ಲಿ ಬೀದರ್ ಜಿಲ್ಲೆಯ ಮೂರು ತಾಲೂಕುಗಳಲ್ಲಿ ಮತ್ತು ಕಲಬುರ್ಗಿಯ ಎರಡು ತಾಲೂಕುಗಳಲ್ಲಿ ಕುಂಟೆ ಎನ್ನುವ ಪದದ ಬಳಕೆ ಕ್ಷೇತ್ರಕಾರ್ಯಕರ್ತರು ಗುರುತಿಸಿದ್ದಾರೆ. ಬಹುಶಃ ಈ ಪ್ರದೇಶದಲ್ಲಿ ‘’ಕಾರಂತವಾಗೇ ಬಳಕೆಯಾಗಬಹುದು ಎನಿಸುತ್ತದೆ. ಅಥವಾ ಕ್ಷೇತ್ರಕಾರ್ಯದಲ್ಲಿ ಸುಶಿಕ್ಷಿತರು ಬೆಂಗಳೂರು ಕನ್ನಡಕ್ಕೆ ಮಾರು ಹೋದವರನ್ನು ಸಂದರ್ಶಿಸಿರಬಹುದು. ಇದನ್ನು ಮತ್ತೊಮ್ಮೆ ಪರೀಕ್ಷಿಸಿದರೆ ಗೊತ್ತಾಗುತ್ತದೆ. ಕೋಲಾರ ಜಿಲ್ಲೆಯಲ್ಲಿ ಗುಂಟ್ಟೆ, ಗುಂಟೆ ಎಂದು ಬಹುಶಃ ತೆಲುಗು ಪ್ರಭಾವದಿಂದ ಬಳಕೆಯಾಗಿರುವ ಸಾಧ್ಯತೆ ಇದೆ. ಬೀದರ್‌ನಲ್ಲಿ ಒಂದೆಡೆ ಕುಂಟ ಎಂದು ಮರಾಠಿ ಪ್ರಭಾವದಿಂದ ಬಳಕೆಯಾಗಿರುವ ಸಂಭವವಿದೆ. ಬೆಳಗಾವಿಯ ಒಂದೇ ತಾಲೂಕಿನಲ್ಲಿ ಕೂಟಿ ಎಂದು ಬಳಕೆಯಾದ ಬಗೆ ಕೂಲಂಕುಶವಾಗಿ ನೋಡಬೇಕು.

ಉತ್ತರ ಕನ್ನಡದ ಕೆಲವು ತಾಲೂಕು ಉಡುಪಿ ಮತ್ತು ದಕ್ಷಿಣ ಕನ್ನಡ ಜಿಲ್ಲೆ, ಕೊಡಗಿನ ಎರಡು ತಾಲೂಕುಗಳು ಚಿಕ್ಕಮಗಳೂರು. ಶಿವಮೊಗ್ಗ ಜಿಲ್ಲೆಯ ಕೆಲವು ತಾಲೂಕುಗಳ ವಿವರಗಳು ದೊರೆತಿಲ್ಲ. ಈ ಎಲ್ಲ ವಿವರಗಳನ್ನು ಕೆಳಗಿನ ಕೋಷ್ಟಕಗಳಲ್ಲಿ ನೀಡಿದೆ.

ಕೋಷ್ಟಕ ೧ರಲ್ಲಿ ಪದದ ಪರ‍್ಯಾಯ ಮತ್ತು ಧ್ವನಿ ವ್ಯತ್ಯಾಸದ ಎಲ್ಲ ಪದಗಳ ಪಟ್ಟಿ ನೀಡಿದೆ. ಕೋಷ್ಟಕ ೨ರಲ್ಲಿ ಕುಂಟೆ ಪದಕ್ಕೆಸಿಕ್ಕ ಪರ‍್ಯಾಯ ರೂಪಗಳು ಮತ್ತು ಅವುಗಳ ಧ್ವನಿ ವ್ಯತ್ಯಾಸ ರೂಪಗಳನ್ನು ನೀಡಿದೆ. ಕೋಷ್ಟಕ ೩ರಲ್ಲಿ ಎಲ್ಲ ಪರ‍್ಯಾಯ ರೂಪಗಳು ಜಿಲ್ಲೆ ಮತ್ತು ತಾಲೂಕುವಾರು ದೊರೆತ ವಿವರಗಳನ್ನು ನೀಡಲಾಗಿದೆ. ಕೋಷ್ಟ-೪ರಲ್ಲಿ ‘ಎ’ಕಾರಂತ ಬಳಕೆ ವಿವರ ಇದೆ. ಕೋಷ್ಟಕ ೫ರಲ್ಲಿ ನಕ್ಷೆ ನೀಡಲಾಗಿದೆ.

ಕೋಷ್ಟಕ ೧ – ಕುಂಟೆ ಪದದ ಪರ್ಯಾಯ ಮತ್ತು ಧ್ವನಿವ್ಯತ್ಯಾಸ ರೂಪಗಳ ಬಳಕೆಯ ವಿವರ

೧. ಕುಂಟೆ

೨. ಕುಂಟಿ

೩. ಗುಂಟ್ವೆ

೪. ಕೂಟಿ

೫. ಗುಂಟೆ

೬. ಕುಂಟ

೭. ಗಳೇ

ಕೋಷ್ಟಕ ೨ – ಕುಂಟೆ ಪದದ ಪರ್ಯಾಯ ಮತ್ತು ಧ್ವನಿವ್ಯತ್ಯಾಸ ಇರುವ ಪದಗಳು

೧. ಕುಂಟೆ ಕುಂಟೆ
ಕುಂಟಿ
ಕುಂಟ
೨. ಗುಂಟ್ವೆ ಗುಂಟ್ವೆ
ಗುಂಟೆ
೩. ಕೂಟಿ ಕೂಟಿ
೪. ಗಳೇ ಗಳೇ

. ಕುಂಟೆ, ಕುಂಟ, ಕುಂಟಿ ರೂಪದ ಜಿಲ್ಲಾ ಮತ್ತು ತಾಲೂಕುವಾರು ಬಳಕೆಯ ವಿವರ

೧. ಉತ್ತರ ಕನ್ನಡ
೨. ಕಲಬುರ್ಗಿ ಎಲ್ಲ ತಾಲೂಕು (ಒಂದು ತಾಲೂಕು ಬಿಟ್ಟು)
೩. ಕೊಡಗು
೪. ಕೊಪ್ಪಳ ಎಲ್ಲ ತಾಲೂಕು
೫. ಗದಗ ಎಲ್ಲ ತಾಲೂಕು
೬. ಚಾಮರಾಜನಗರ ಎಲ್ಲ ತಾಲೂಕು
೭. ಚಿಕ್ಕಮಗಳೂರು
೮. ಚಿತ್ರದುರ್ಗ ಎಲ್ಲ ತಾಲೂಕು
೯. ತುಮಕೂರು ಎಲ್ಲ ತಾಲೂಕು
೧೦. ದಾವಣಗೆರೆ ಎಲ್ಲ ತಾಲೂಕು (ಒಂದು ತಾಲೂಕು ಬಿಟ್ಟು)
೧೧. ಧಾರವಾಡ ಎಲ್ಲ ತಾಲೂಕು
೧೨. ಬಳ್ಳಾರಿ ಎಲ್ಲ ತಾಲೂಕು
೧೩. ಬಾಗಲಕೋಟೆ ಎಲ್ಲ ತಾಲೂಕು
೧೪. ಬೀದರ್ ಎಲ್ಲ ತಾಲೂಕು
೧೫. ಬೆಳಗಾವಿ ಎಲ್ಲ ತಾಲೂಕು
೧೬. ಬೆಂಗಳೂರು ಎಲ್ಲ ತಾಲೂಕು (ಎರಡು ತಾಲೂಕು ಬಿಟ್ಟು)
೧೭. ಮಂಡ್ಯ ಎಲ್ಲ ತಾಲೂಕು
೧೮. ಮೈಸೂರು ಎಲ್ಲ ತಾಲೂಕು
೧೯. ರಾಯಚೂರು ಎಲ್ಲ ತಾಲೂಕು
೨೦. ವಿಜಾಪುರ ಎಲ್ಲ ತಾಲೂಕು
೨೧. ಶಿವಮೊಗ್ಗ
೨೨. ಹಾಸನ ಎಲ್ಲ ತಾಲೂಕು
೨೩. ಹಾವೇರಿ ಎಲ್ಲ ತಾಲೂಕು

. ಗುಂಟೆ ಮತ್ತು ಗುಂಟ್ವೆ ರೂಪದ ಜಿಲ್ಲಾ ಮತ್ತು ತಾಲೂಕುವಾರು ಬಳಕೆಯ ವಿವರ

೧. ಕೋಲಾರ ಎಲ್ಲ ತಾಲೂಕು

. ಕೂಟಿ ರೂಪದ ಜಿಲ್ಲಾ ಮತ್ತು ತಾಲೂಕುವಾರು ಬಳಕೆಯ ವಿವರ

೧. ಬೆಳಗಾವಿ

. ಗಳೇ ರೂಪದ ಜಿಲ್ಲಾ ಮತ್ತು ತಾಲೂಕುವಾರು ಬಳಕೆಯ ವಿವರ

೧. ಗುಲಬರ್ಗಾ

ಕೋಷ್ಟಕ

. ಕುಂಟೆ ರೂಪದ ಎ’ ಕಾರಾಂತ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಉತ್ತರ ಕನ್ನಡ
೨. ಕಲಬುರ್ಗಿ
೩. ಕೊಡಗು
೪. ಚಾಮರಾಜನಗರ ಎಲ್ಲ ತಾಲೂಕು
೫. ಚಿಕ್ಕಮಗಳೂರು
೬. ಚಿತ್ರದುರ್ಗ ಎಲ್ಲ ತಾಲೂಕು
೭. ತುಮಕೂರು ಎಲ್ಲ ತಾಲೂಕು
೮. ದಾವಣಗೆರೆ
೯. ಬಳ್ಳಾರಿ
೧೦. ಬಾಲಗಕೋಟೆ
೧೧. ಬೀದರ್
೧೨. ಬೆಂಗಳೂರು ಎಲ್ಲ ತಾಲೂಕು
೧೩. ಮಂಡ್ಯ ಎಲ್ಲ ತಾಲೂಕು
೧೪. ಮೈಸೂರು ಎಲ್ಲ ತಾಲೂಕು
೧೫. ಶಿವಮೊಗ್ಗ
೧೬. ಹಾಸನ ಎಲ್ಲ ತಾಲೂಕು

. ಕುಂಟಿ ಕಾರಾಂತ ರೂಪದ ಬಳಕೆಯ ಜಿಲ್ಲಾ ಮತ್ತು ತಾಲೂಕುವಾರು ವಿವರ

೧. ಉತ್ತರ ಕನ್ನಡ
೨. ಕಲಬುರ್ಗಿ
೩. ಕೊಪ್ಪಳ ಎಲ್ಲ ತಾಲೂಕು
೪. ಗದಗ ಎಲ್ಲ ತಾಲೂಕು
೫. ಧಾರವಾಡ ಎಲ್ಲ ತಾಲೂಕು
೬. ಬಳ್ಳಾರಿ
೭. ಬಾಗಲಕೋಟೆ
೮. ಬೀದರ್
೯. ಬೆಳಗಾವಿ ಎಲ್ಲ ತಾಲೂಕು
೧೦. ವಿಜಾಪುರ ಎಲ್ಲ ತಾಲೂಕು
೧೧. ಹಾವೇರಿ ಎಲ್ಲ ತಾಲೂಕು

10_365_PV-KUH

11_365_PV-KUH