ಕರ್ನಾಟಕದಲ್ಲಿ ಒಂದು ಕನ್ನಡ ಇಲ್ಲ. ಹಲವು ಕನ್ನಡಗಳಿವೆ. ಒಂದು ಪ್ರದೇಶದ ಕನ್ನಡ ಉಳಿದ ಕನ್ನಡ ಭಾಷೆಗಿಂತ ಉಚ್ಛಾರಣೆಯಲ್ಲಿ, ಧ್ವನಿಯಲ್ಲಿ, ಅರ್ಥದಲ್ಲಿ ಭಿನ್ನವಾಗಿರುವುದು ಕಾಣುತ್ತೇವೆ. ಈ ಭಿನ್ನತೆಯನ್ನು ಭಾಷಾ ಪ್ರಭೇದಗಳು, ಉಪಭಾಷೆಗಳು ಎಂದೆಲ್ಲ ಭಾಷಾ ವಿಜ್ಞಾನಿಗಳು ಕರೆದಿದ್ದಾರೆ. ಸಾಮಾಜಿಕವಾಗಿ ಮತ್ತು ಭೌಗೋಳಿಕವಾಗಿ ಇರುವ ಈ ಭಿನ್ನತೆಯನ್ನು ಗುರುತಿಸುವುದು ತುಂಬಾ ಮುಖ್ಯ ಈ ಪದ ವಿನ್ಯಾಸದ ಟಿಪ್ಪಣಿಯಲ್ಲಿ ಸಾಮಾಜಿಕ ಪ್ರಭೇದಕ್ಕಿಂತ ಭೌಗೋಳಿಕ ಭಿನ್ನತೆಯನ್ನು ಗುರುತಿಸಲು ಯತ್ನಿಸಲಾಗಿದೆ.

ಹೀಗೆ ಭೇದಗಳು ಇರುವುದನ್ನು ಕರ್ನಾಟಕ ನಕ್ಷೆಯಲ್ಲಿ ಗುರುತಿಸಲು ಆರಂಭಿಸಿದ ತಕ್ಷಣ ಈ ಬಳಕೆಗೆ ತನ್ನದೇ ಗಡಿರೇಖೆಗಳನ್ನು ಗುರುತಿಸಲು ಸಾಧ್ಯ ಇದೆ. ಉದಾಹರಣೆಗೆ ಭತ್ತ ಅನ್ನುವ ಪದವನ್ನು ಕರ್ನಾಟಕದಾದ್ಯಂತ ಮೂರು ಬಗೆಯಲ್ಲಿ ಬಳಕೆ ಇದೆ. ೧. ಭತ್ತ, ೨. ನೆಲ್ಲು ಮತ್ತು ೩. ಕಳವಿ ಈ ಮೂರು ಬಗೆಯ ವ್ಯತ್ಯಾಸಗಳಿಗೆ ತನ್ನದೇ ಆದ ಗಡಿಗಳು ಇವೆ. ಈ ಭಾಷಾ ಗಡಿಗಳಿಗೆ ತನ್ನದೇ ಆದ ಮುಖ್ಯವಾದ ಕಾರಣಗಳಿವೆ. ಅದೇ ರೀತಿ ಈ ಸಂಚಿಕೆಯ ಪದ ವಿನ್ಯಾಸದಲ್ಲಿ ವಿವರಿಸಬೇಕೆಂದಿರುವ ಬೆಳೆ ಪದ ಹೇಗೆ ಬಳಕೆಯಾಗಿದೆ ಎನ್ನುವುದನ್ನು ಕರ್ನಾಟಕದ ನಕ್ಷೆಯಲ್ಲಿ ತೋರಿಸಲಾಗಿದೆ.

ಬೆಳೆ ಎನ್ನುವ ಪದ ಕರ್ನಾಟಕದಲ್ಲಿ ಐದು ಬಗೆಯಲ್ಲಿ ಬಳಕೆಯಾದರೂ ಮುಖ್ಯವಾಗಿ ಎರಡು ಭಿನ್ನ ರೂಪವನ್ನು ಕಾಣಬಹುದಾಗಿದೆ. ಅದು ಮುಖ್ಯವಾಗಿ ತುಂಗಭದ್ರ ನದಿ ಈ ಗಡಿಯನ್ನು ನಿರ್ಮಿಸಿದೆ. ಉತ್ತರ ಕರ್ನಾಟಕದ ಸುಮಾರು ೧೦ ಜಿಲ್ಲೆಗಳಲ್ಲಿ ಬೆಳೆ ಪದವನ್ನು ಬೆಳಿ ಎಂದು ಕರೆಯಲಾಗಿದೆ. ದಕ್ಷಿಣದ ಎಲ್ಲ ಜಿಲ್ಲೆಗಳಲ್ಲಿ ಬೆಳೆ ಪದದ ಬಳಕೆ ಇದೆ. ಮುಖ್ಯವಾಗಿ ಈ ಪದದ ಬಳಕೆ ‘ಎ’ ಕಾರ ‘ಇ’ ಕಾರಗಳ ಭಿನ್ನತೆಯನ್ನು ಗುರುತಿಸಬಹುದಾಗಿದೆ. ದಕ್ಷಿಣ ಕನ್ನಡದ ಎರಡು ತಾಲೂಕುಗಳಲ್ಲಿ, ಶಿವಮೊಗ್ಗ ಜಿಲ್ಲೆಯ ಒಂದು ತಾಲೂಕಿನಲ್ಲಿ ಬೇರೆ ಬಳಕೆ ಇದೆ. ಉತ್ತರ ಕರ್ನಾಟಕದ ಸುಮಾರು ಹತ್ತು ಜಿಲ್ಲೆಗಳಲ್ಲಿ ಒಂದೇ ಏಕರೂಪ ಇದೆ. ಆದರೆ ಬೀದರ್ ಜಿಲ್ಲೆಯ ತುಟ್ಟ ತುದಿಯಲ್ಲೂ ದಕ್ಷಿಣ ಕರ್ನಾಟಕದಂತೆ ಬೆಳೆ ರೂಪ ಕಂಡುಬಂದಿದೆ. ಹಾಗೆಯೇ ಬೆಳಿ ಎನ್ನುವ ರೂಪ ಉತ್ತರ ಕನ್ನಡದ ಒಂದು ತಾಲೂಕಿನಲ್ಲಿ ಕಾಣಸಿಗುತ್ತದೆ. ತುಂಬಾ ಕುತೂಹಲದ ವಿಷಯ ಎಂದರೆ ಉತ್ತರದ ತುಟ್ಟ ತುದಿಯ ಬೀದರ್ ಜಿಲ್ಲೆಯ ಒಂದು ತಾಲೂಕಿನಲ್ಲಿ ದಕ್ಷಿಣದ ರೂಪವಾದ ಬೆಳೆ ರೂಪ ಕಂಡು ಬಂದಿರುವುದು. ಇದು ಕೇವಲ ಬೆಳೆ ಪದಕ್ಕೆ ಸಂಬಂಧಿಸಿದಂತೆಯೂ ಈ ಮಾತು ಸತ್ಯ ಹೀಗೆ ಇರಲು ಬೇರೆ ಏನಾದರೂ ಕಾರಣ ಇರಬೇಕು. ಅದನ್ನು ಕೂಲಂಕುಶವಾಗಿ ನೋಡಬೇಕಾಗಿದೆ.

ಬೆಳೆ ಪದಕ್ಕೆ ಕರ್ನಾಟಕದಾದ್ಯಂತ ಸಿಕ್ಕ ಪರ‍್ಯಾಯ ರೂಪಗಳು ಮತ್ತು ಅವುಗಳಿಗೆ ದೊರೆತ ಧ್ವನಿ ವ್ಯತ್ಯಾಸ ರೂಪಗಳು ಮತ್ತು ಆ ರೂಪಗಳು ಕರ್ನಾಟಕದಾದ್ಯಂತ ಬಳಕೆಯಾದ ವಿವರಗಳು ಕೋಷ್ಟಕಗಳಲ್ಲಿ ನೀಡಿದೆ. ಜೊತೆಗೆ ಇದಕ್ಕೆ ಪೂರಕವಾಗಿ ನಕ್ಷೆಯನ್ನೂ ಕೊಡಲಾಗಿದೆ.

ಕೋಷ್ಟಕ ೧ರಲ್ಲಿ ಬೆಳೆ ರೂಪ ಬಳಕೆಯಾದ ಎಲ್ಲ ಪದಗಳ ಪಟ್ಟಿ ನೀಡಲಾಗಿದೆ. ಕೋಷ್ಟಕ ೨ರಲ್ಲಿ ಬೆಳೆ ಪರ‍್ಯಾಯ ರೂಪಗಳು ಮತ್ತು ಆ ಪರ‍್ಯಾಯ ರೂಪಗಳಲ್ಲಿ ಕಾಣುವ ಧ್ವನಿವ್ಯತ್ಯಾಸ ಕಾಣುವ ಪದಗಳನ್ನು ನೀಡಿದೆ. ಕೋಷ್ಟಕ ೩ರಲ್ಲಿ ಈ ಎಲ್ಲ ರೂಪಗಳು ಜಿಲ್ಲಾ ಮತ್ತು ತಾಲೂಕುವಾರು ಬಳಕೆಯಾದ ವಿವರಗಳನ್ನು ಕೋಷ್ಟಕ ೪ ರಲ್ಲಿ ‘ಎ’ ಕಾರದ ಬಳಕೆಯ ವಿವರಗಳನ್ನು ನೀಡಿದೆ. ಕೋಷ್ಟಕ ೫ ರಲ್ಲಿ ನಕ್ಷ ನೀಡಲಾಗಿದೆ.

ಕೋಷ್ಟಕ ೧ – ಬೆಳೆ ಪದದ ಪರ್ಯಾಯ ಮತ್ತು ಧ್ವನಿವ್ಯತ್ಯಾಸ ರೂಪಗಳ ಬಳಕೆಯ ವಿವರ

೧. ಬೆಳೆ

೨. ಬೆಳಿ

೩. ಬೆಲೆ

೪. ಬೇಸಾಯ

೫. ಪೀಕು

ಕೋಷ್ಟಕ ೨ – ಬೆಳೆ ರೂಪದ ಪರ್ಯಾಯ ರೂಪಗಳ ಬಳಕೆಯ ವಿವರ

೧. ಬೆಳೆ ಬೆಳೆ
ಬೆಳಿ
ಬೆಲೆ
೨. ಬೇಸಾಯ ಬೇಸಾಯ
೩. ಪೀಕು ಪೀಕು

ಕೋಷ್ಟಕ – ಬೆಳೆ, ಬೆಳಿ ಮತ್ತು ಬೆಲೆ ರೂಪದ ಬಳಕೆಯ ಜಿಲ್ಲಾವಾರು ಮತ್ತು ತಾಲೂಕುವಾರು ವಿವರ

ಕ್ರ.ಸಂ. / ಜಿಲ್ಲೆ ತಾಲೂಕುಗಳು
೧. ಉಡುಪಿ ಎಲ್ಲ ತಾಲೂಕು
೨. ಉತ್ತರ ಕನ್ನಡ ಎಲ್ಲ ತಾಲೂಕು
೩. ಕಲಬುರ್ಗಿ ಎಲ್ಲ ತಾಲೂಕು
೪. ಕೊಡಗು ಎಲ್ಲ ತಾಲೂಕು
೫. ಕೊಪ್ಪಳ ಎಲ್ಲ ತಾಲೂಕು
೬. ಕೋಲಾರ ಎಲ್ಲ ತಾಲೂಕು
೭. ಗದಗ ಎಲ್ಲ ತಾಲೂಕು
೮. ಚಾಮರಾಜನಗರ ಎಲ್ಲ ತಾಲೂಕು
೯. ಚಿಕ್ಕಮಗಳೂರು ಎಲ್ಲ ತಾಲೂಕು
೧೦. ಚಿತ್ರದುರ್ಗ ಎಲ್ಲ ತಾಲೂಕು
೧೧. ತುಮಕೂರು ಎಲ್ಲ ತಾಲೂಕು
೧೨. ದಕ್ಷಿಣ ಕನ್ನಡ ಎಲ್ಲ ತಾಲೂಕು (ಒಂದು ತಾಲೂಕು ಬಿಟ್ಟು)
೧೩. ದಾವಣಗೆರೆ ಎಲ್ಲ ತಾಲೂಕು
೧೪. ಧಾರವಾಡ ಎಲ್ಲ ತಾಲೂಕು
೧೫. ಬಳ್ಳಾರಿ ಎಲ್ಲ ತಾಲೂಕು
೧೬. ಬಾಗಲಕೋಟೆ ಎಲ್ಲ ತಾಲೂಕು
೧೭. ಬೀದರ್ ಎಲ್ಲ ತಾಲೂಕು
೧೮. ಬೆಳಗಾವಿ ಎಲ್ಲ ತಾಲೂಕು
೧೯. ಬೆಂಗಳೂರು ಎಲ್ಲ ತಾಲೂಕು
೨೦. ಮಂಡ್ಯ ಎಲ್ಲ ತಾಲೂಕು
೨೧. ಮೈಸೂರು ಎಲ್ಲ ತಾಲೂಕು
೨೨. ರಾಯಚೂರು ಎಲ್ಲ ತಾಲೂಕು
೨೩. ವಿಜಾಪುರ ಎಲ್ಲ ತಾಲೂಕು
೨೪. ಶಿವಮೊಗ್ಗ ಎಲ್ಲ ತಾಲೂಕು (ಒಂದು ತಾಲೂಕು ಬಿಟ್ಟು)
೨೫.ಹಾಸನ ಎಲ್ಲ ತಾಲೂಕು
೨೬. ಹಾವೇರಿ ಎಲ್ಲ ತಾಲೂಕು

ಬೇಸಾಯ ರೂಪದ ಬಳಕೆಯ ಜಿಲ್ಲಾವಾರು ಮತ್ತು ತಾಲೂಕುವಾರ ವಿವರ

೧. ದಕ್ಷಿಣ ಕನ್ನಡ

ಪೀಕು ರೂಪದ ಬಳಕೆಯ ಜಿಲ್ಲಾವಾರು ಮತ್ತು ತಾಲೂಕುವಾರು ವಿವರ

೧. ಶಿವಮೊಗ್ಗ

ಕೋಷ್ಟಕ – ಬೆಳೆ ಎ’ ಕಾರಾಂತ ರೂಪದ ಬಳಕೆಯ ಜಿಲ್ಲಾವಾರು ಮತ್ತು ತಾಲೂಕುವಾರು ವಿವರ

ಕ್ರ.ಸಂ. ಜಿಲ್ಲೆ ತಾಲೂಕುಗಳು
೧. ಉಡುಪಿ ಎಲ್ಲ ತಾಲೂಕು
೨. ಉತ್ತರ ಕನ್ನಡ ಎಲ್ಲ ತಾಲೂಕು
೩. ಕೊಡಗು ಎಲ್ಲ ತಾಲೂಕು
೪. ಕೋಲಾರ ಎಲ್ಲ ತಾಲೂಕು
೫. ಗದಗ ಎಲ್ಲ ತಾಲೂಕು
೬. ಚಾಮರಾಜನಗರ ಎಲ್ಲ ತಾಲೂಕು
೭. ಚಿಕ್ಕಮಗಳೂರು ಎಲ್ಲ ತಾಲೂಕು
೮. ಚಿತ್ರದುರ್ಗ ಎಲ್ಲ ತಾಲೂಕು
೯. ತುಮಕೂರು ಎಲ್ಲ ತಾಲೂಕು
೧೦. ದಕ್ಷಿಣ ಕನ್ನಡ
೧೧. ದಾವಣಗೆರೆ ಎಲ್ಲ ತಾಲೂಕು
೧೨. ಬಳ್ಳಾರಿ
೧೩. ಬೀದರ್
೧೪. ಬೆಂಗಳೂರು ಎಲ್ಲ ತಾಲೂಕು
೧೫. ಮಂಡ್ಯ ಎಲ್ಲ ತಾಲೂಕು
೧೬. ಮೈಸೂರು ಎಲ್ಲ ತಾಲೂಕು
೧೭. ಶಿವಮೊಗ್ಗ ಎಲ್ಲ ತಾಲೂಕು
೧೮. ಹಾಸನ ಎಲ್ಲ ತಾಲೂಕು

ಬೆಳೆ ಇ’ ಕಾರಾಂತ ರೂಪದ ಬಳಕೆಯ ಜಿಲ್ಲಾವಾರು ಮತ್ತು ತಾಲೂಕುವಾರು ವಿವರ

ಕ್ರ.ಸಂ ಜಿಲ್ಲೆ ತಾಲೂಕುಗಳು
೧. ಉತ್ತರ ಕನ್ನಡ
೨. ಕಲಬುರ್ಗಿ ಎಲ್ಲ ತಾಲೂಕು
೩. ಕೊಪ್ಪಳ ಎಲ್ಲ ತಾಲೂಕು
೪. ಗದಗ ಎಲ್ಲ ತಾಲೂಕು
೫. ದಾವಣಗೆರೆ
೬. ಧಾರವಾಡ ಎಲ್ಲ ತಾಲೂಕು
೭. ಬಳ್ಳಾರಿ
೮. ಬಾಗಲಕೋಟೆ ಎಲ್ಲ ತಾಲೂಕು
೯. ಬೀದರ್ ಎಲ್ಲ ತಾಲೂಕು
೧೦. ಬೆಳಗಾವಿ ಎಲ್ಲ ತಾಲೂಕು
೧೧. ರಾಯಚೂರು ಎಲ್ಲ ತಾಲೂಕು
೧೨. ವಿಜಾಪುರ ಎಲ್ಲ ತಾಲೂಕು
೧೩. ಹಾವೇರಿ ಎಲ್ಲ ತಾಲೂಕು

12_365_PV-KUH