ಶ್ರೀ

ಕ್ರಿಯಾಸಂಗ್ರಹ

ಗ್ರಂಥವು

ಚಾಮರಾಜನಗರದ ಬ್ರಹ್ಮಸೂರಿ ಪಂಡಿತರವರ ಮಕ್ಕಳು
ಪದ್ಮರಾಜ ಪಂಡಿತರಿಂದ ಪರಿಷ್ಕರಿಸಲ್ಪಟ್ಟು

ಮೊದಲೇ ಛಾಪಾ ೫೦೦ ಕಾಪಿಗಳು

ಸ್ವಕೀಯ ಶ್ರೀ ಭಾರತೀ ಭವನ ಮುದ್ರಾಕ್ಷರ ಶಾಲೆಯಲ್ಲಿ
ಮುದ್ರಿಸಿ ಪ್ರಕಟಿಸಲ್ಪಟ್ಟಿತು

ಬೆಂಗಳೂರು ಮಲ್ಲೇಶ್ವರ
ಸನ್ ೧೯೧೫ನೆಯ ಇಸವಿ
ರಿಜಿಸ್ಟರ‍್ಡ್ ಕಾಪೀರೈಟ್

ಕ್ರಯ ೮ ಆಣಾ
ಟಪಾಲು ಹಾಸಲು ೧ ಆಣಾ

ಸಟೀಕಾ ಈರ್ಯಾಪಥಶುದ್ಧಿಃ

ಈರ್ಯಾಪಥವೆಂದರೆ ಪಾಪಭೀತಿಯಿಲ್ಲದ ಸ್ವೇಚ್ಛಾಮಾರ್ಗವು || ಇದಕ್ಕೆ ಶುದ್ಧಿ ಎಂತ ಅರ್ಥವು || ಅಂದರೆ ತಾನು ಆಯಾಯದಿವಸದಲ್ಲಿ ಮಾಡಲ್ಪಟ್ಟ ಪಾಪವನ್ನು ಕಳಿಯತಕ್ಕದ್ದೆಂತ ಅರ್ಥವು ||

ಕ್ಲೋ || ಕರಚರಣ ತನುವಿಘಾಂದಟತಾ ನಿಹತಃ ಪ್ರಮಾದತಃ
ಪ್ರಾಣೀ || ಈರ್ಯಾಪಥಮಿತಿ ಭೀತ್ಯಾ ಮುಂಚೇ ತದ್ದೋಷ ಹಾನ್ಯರ್ಥಂ ||

* * *

ಟೀಕು || ಅಟತಾ-ಸಂಚಾರಮಾಡತಕ್ಕ ನನ್ನಿಂದ, ಕರಚರಣ ತನುವಿಘಾತಾತ್-ಕರ-ಕೈಗಳ, ಚರಣ-ಕಾಲುಗಳ, ತನು-ಶರೀರದ, ವಿ ಘಾತಾತ್-ವಿಶೇಷವಾಗಿ ತಗಲುವದರ ದೆಶೆಯಿಂದಲೂ, ಪ್ರಮಾದತಃ-ಪಂಚದಶ ಪ್ರಮಾದಗಳ ದೆಶೆಯಿಂದಲೂ, ಪ್ರಾಣೀ-ಜೀವನು, ನಿಹತಃ-ಸಂಹರಿಸಲ್ಪಟ್ಟಿತು, ಇತಿ-ಹೀಗೆಂತೆಂದು, ಭೀತ್ಯಾ-ಭಯದಿಂದ, ತದ್ದೋ ಷಹಾನ್ಯರ್ಥಂ-ತದ್ದೋಷ-ಆ ಹಿಂಸಾದೋಷದ, ಹಾನ್ಯರ್ಥಂ-ವಿನಾಶಾರ್ಥವಾಗಿ, ಈರ್ಯಾಪಥಂ-ಆ ಪಾಪಮಾರ್ಗವನ್ನು, ಮುಂಚೆ-ಬಿಡುತ್ತೇನೆ ||

* * *

ದಂಡಕ || ಪಡಿಕ್ಕಮಾಮಿ ಭತ್ತೆ ಈರಿಯಾವಹಿಯಎ | ವಿರಾ ಹಣಾಎ | ಅಣಾಗುತ್ತೆ | ಆಯುಗ್ಗಮಣೆ | ಣಿಗ್ಗಮಣೆ | ಠಾಣೆಗಮಣೆ | ಚಂಕಮಣೆ | ಪಾಣುಗ್ಗ ಮಣೆ | ಬೀಜಗ್ಗಮಣೆ | ಹರಿದುಗ್ಗಮಣೆ | ಉಚ್ಚಾರಪಸ್ಸವಣ ಖೇಳಸಿಂಹಾಣಾಎ | ವಿಯಡಿಪಠ್ಠಾವಣಿಯಾಯೆ | ಜೆ ಜೀವಾ ಏಇಂದಿಯಾವಾ | ಬಿಇಂದಿಯಾವಾ | ತಿಇಂದಿಯಾವಾ | ಚ ಉರಿಂದಿಯಾವಾ | ಪಂಚೇದಿಯವಾ | ಣೊಲ್ಲಿದಾವಾ | ಪಿಲ್ಲಿದಾ ವಾ | ಸಂಘಟ್ಟಿದಾವಾ | ಸಂಘಾದಿದಾನಾ | ಓದ್ದಾವಿದಾವಾ | ಪರಿಧಾವಿದಾವಾ | ಕಿರಿಂಬೆದಾವಾ | ಲೆಸ್ಸಿದಾವಾ | ಛಿಂದಿದಾವಾ | ಭಿಂದಿಡಾವಾ | ಠಾಣದೋವಾ | ಠಾಣಚಂಕಮಣದೋವಾ | ತಸ್ಸಉತ್ತರಗುಣಂ | ತಸ್ಸವಾಯ ಚ್ಛಿತ್ತಕರಣಂ | ತಸ್ಸವಿಸೋಹಿಕರಣಂ | ಜಾವರಹಂತಾ ಣಂ | ಭಯವಂತಾಣಂ | ಣಮೋಂಕಾರಂಕರೇಮಿ | ತಾವಕಾಯಂ | ವಾ ವಕಮ್ಮಂ | ದುಚ್ಚರಿಯಂ | ಬೋಸ್ಸರಾಮಿ | ಣಮೋ ಇತ್ಯಾದಿ ||

* * *

ಟೀ || ಭತ್ತೇ-ಭಕ್ತಿ ಗೋಸ್ಕರ, ಪಡಿಕ್ಕಮಾಮಿ – ಪ್ರತಿಕ್ರಮಣವನ್ನು ಮಾಡುತ್ತೇನೆ. ಈರ್ಯಾವಹಿಯಾಯೆ-ಈರ್ಯಾಪಥದಲ್ಲಿ, ವಿ ರಾಹಣಾಯೆ-ಚುರ್ವಿಧಾ ರಾಧನೆಯಿಲ್ಲದೇ ಯಿರುವುದರಲ್ಲಿ, ಆಣಾಗುತ್ತೆ-ಜ್ಞಾನಗುಪ್ತಿಯಿಲ್ಲದೇಯಿರುವದರಲ್ಲಿ. ಆಯುಗ್ಗಮಣೆ-ಬರುವದರಲ್ಲಿ ನಿಗ್ಗಮಣೆ-ಹೊರಡುವದರಲ್ಲಿ, ಠಾಣೆ-ಕೂತುನಿಂ ತಸ್ಥಳದಲ್ಲಿ, ಗಮಣೆ-ವಾಹನಾದಿಗಳಿಂದ ಪ್ರಯಾಣಮಾಡುವುದರಲ್ಲಿ ಚಂಕಮಣೆ-ಹೆಜ್ಜೆಯಿಡುವದರಲ್ಲಿ, ಪಾಣುಗ್ಗ ಮಣೆ-ಕೈಗಳ ಎತ್ತುವದರಲ್ಲಿ, ಬೀಜಗ್ಗಮಣೆ-ಬೋಜೋದ್ಗಮನದಲ್ಲಿ, ಹರಿದುಗ್ಗಮಣೆ-ಗರಿಕೆ ಮುಂತಾದವುಗಳ ಕೀಳುವದರಲ್ಲಿ, ಉಚ್ಚಾರವಸ್ಸವಣ ಖೇಳಸಿಂಹಾಣಾಯೆ-ಉಚ್ಚಾರ-ಮಲಮೂತ್ರ ಬಿಡುವದರಲ್ಲಿ, ಪಸ್ಸವಣ-ಬೆವರುವದರಲ್ಲಿ, ಖೇಳ ಉಗುಳುವುದರಲ್ಲಿ ಸಿಂಹಾಣಾಯೆ – ಸಿಂಬಳಾ ತೆಗೆಯುವದರಲ್ಲಿ ವಿಯಡಿಪ್ಪ ಯಿಠ್ಠಾವಣಿಯಾ ಯೆ – ವಿಕೃತಿಪ್ರತಿಷ್ಠಾಪನೆಯಲ್ಲಿ, ಜೇಜೀವ್ಯಾ-ಯಾವಜೀವಗಳು, ಯೇ ಇಂದಿಯಾವಾ-ಏಕೇಂದ್ರಿಯಗಳಾದಾಗ್ಯು, ಬೀಇಂದಿಯಾವಾ-ದ್ವೀಂದ್ರಿಯಗಳಾದಾಗ್ಯು, ತೀಇಂದಿಯಾವಾ-ತ್ರೀಂದಿಯ ಗಳಾದಾಗ್ಯು, ಚ ವುರಿಂದಿಯಾವಾ-ಚತುರಿಮದ್ರಿಯಗಳಾದಾಗ್ಯು, ಪಂಚೇದಿಯಾವಾ-ಪಂಚೇಂದ್ರಿಯಗಳಾದಾಗ್ಯು, ನೊಲ್ಲಿದಾವಾ-ತಳ್ಳಲ್ಪಟ್ಟಂಥಾವುಗಳಾದಾಗ್ಯು ಪಿಲ್ಲಿದಾವಾ-ತಾವಾಗಿಹತ್ತಿದ ಇರುವೇ ಮುಂತಾದವುಗಳಾದಾಗ್ಯು, ಸಂಘಟ್ಟಿದಾವಾ-ಸಂಘಟಿಸಲ್ಪಟ್ಟಂ ಥಾವುಗಳಾದಾಗ್ಯು, ಸಂಘಾದಿದಾವಾ-ಸಂಘಾತಮಾಡಲ್ಪಟ್ಟಂಥಾವುಗಳಾದಾಗ್ಯು, ಅಂದರೆ ಗುಂಪುಸೇರಿಸಲ್ಪಟ್ಟಂಥಾವುಗಳಾದಾಗ್ಯು, ಓದ್ಧಾವಿದಾವಾ-ಮೇಲಕ್ಕೆ ಎರಚಲ್ಪಟ್ಟಂಥಾವುಗಳಾದಾಗ್ಯು, ಪರಿಧಾವಿದಾವಾ-ವೋಡಿಸಲ್ಪಟ್ಟಂಥಾವು ಗಳಾದಾಗ್ಯು, ಕಿರಿಂಚಿದಾವಾ-ಪಕ್ಕಕ್ಕೆ ಎರಚಲ್ಪಟ್ಟಂಥಾವುಗಳಾದಾಗ್ಯು, ಲೆಶ್ಮಿದಾಬಾ-ಕೃಷ್ಣನೀಲಾದಿ ದುರ್ಲೇಶ್ಯ ಮಾಡಲ್ಪಟಂಥಾವುಗಳಾದಾಗ್ಯು ಛಿಣದುದಾವಾ ಛೇದಿಸಲ್ಪಟ್ಟಂಥಾವು ಗಳಾದಾಗ್ಯು ಬಿಂದಿದಾವಾ-ಭೇದಿಸಲ್ಪಟ್ಟಂಥಾವುಗಳಾದಾಗ್ಯು, ಠಾಣದೋವಾ, ಸ್ಥಾನದ್ದೆಶೆಯಿಂದಲಾದಾಗ್ಯು, ಠಾಣಚಂಕಮಣದೋವಾ-ಸ್ಥಾನಚಂಕ್ರಮಣದ್ದೆಶೆಯಿಂ ದಲಾದಾಗ್ಯು, ಕೂತಸ್ಥಳದಲ್ಲೇ ಕಾಲುಮುಂತಾದವುಗಳನ್ನು ಆಡಿಸುವದರ ದೆಶೆಯಿಂದಲಾದಾಗ್ಯು, ತಸ್ಸ-ಆ ಪಾಪಗುಣಕ್ಕೆ, ಉತ್ತರಗುಣಂ – ಅದಕ್ಕೆ ಪ್ರತಿ ಗುಣವಾದಂಥಾದ್ದು, ತಸ್ಸ-ಆ ಪಾಪಗುಣಕ್ಕೆ, ಪಾಯಿಚ್ಛಿತ್ತ ಕರಣಂ – ಪ್ರಾಯಶ್ಚಿತ್ತವನ್ನು ಮಾಡುವಂಥಾದ್ದು, ತಸ್ಸನಿಸೋಹಿಕರಣಂ – ತಸ್ಸ – ಆ ಪಾಪಕ್ಕೆ, ವಿಸೋಹಿಕರಣಂ – ವಿಶುದ್ಧಿಯನ್ನು ಮಾಡತಕ್ಕದ್ದು, ಜಾವಾ – ಯಷ್ಟು ಪರ್ಯಂತರ, ಅರಹಂತಾಣಂ – ಅರಹಂತರಾದಂಥ, ಬಯವಂತಾಣಂ – ಭಗವಂತನಿಗೆ, ಣಮೋಂಕಾರಂ – ನಮಸ್ಕಾರವನ್ನು, ಕರೇಮಿ ಮಾಡುತ್ತೇನೆಯೋ, ತಾವಾ- ಅಷ್ಟುಪರ್ಯಂತರದರಲ್ಲೂ ಕಾಯಂ – ಶರೀರ ಮಮಕಾರವನ್ನು, ಪಾಪಕಮ್ಮಂ – ಪಾಪಕರ್ಮವನ್ನು, ದುಚ್ಚರಿಯಂ – ದುಶ್ಚಾರಿತ್ರವನ್ನು, ಬೋಸ್ಸರಾಮಿ – ಬಿಡುತ್ತೇನೆ ||

* * *

ಈರ್ಯಾಪಥೇ ಪ್ರಚಲತಾದ್ಯ ಮಯಾ ಪ್ರಮಾದಾದೇಕೇಂದ್ರಿಯ ಪ್ರಮುಖ ಜೀವನಿಕಾಯಬಾಧಾ || ನಿರ್ವರ್ತಿತಾಯದಿಭವೇತಯುಗಾಂ ತರೇಕ್ಷಾ ಮಿಥ್ಯಾ ತದಸ್ತು ದುರಿತಂ ಗುರುಭಕ್ತಿ ತೋ ಮೇ ||

* * *

ಟೀ || ಅದ್ಯ-ಈಗ, ಈರ್ಯಾಪಥೇ – ಸ್ವೇಚ್ಛಾಮಾರ್ಗದಲ್ಲಿ, ಪ್ರಚಲತಾ ಸಂಚರಿಸುತ್ತಿರುವಂಥಾ, ಮಯಾ-ನನ್ನಿಂದ, ಪ್ರಮಾದಾತ್ – ಪ್ರಮಾದದ್ದೆಶೆಯಿಂದ ಮಾಡಲ್ಪಟ್ಟಂಥಾ, ಏಕೇಂದ್ರಿಯಪ್ರಮುಖ ಜೀವನಿಕಾಯಬಾಧಾ – ಏಕೇಂದ್ರಿಯ – ಏಕೇಂದ್ರಿಯಯವೇ, ಪ್ರಮುಖ – ಮೊದಲಾದಂಥ, ಜೀವ – ಪ್ರಾಣಿಗಳ, ನಿಕಾಯ – ಸಮೂಹದ, ಬಾಧಾ- ಪೀಡೆಯು, ನಿರ್ವರ್ತ್ತಿತಾ – ಹಿಂತಿರಿಗಿಸಲ್ಪಟ್ಟಂ ಥಾದ್ದು, ಭವೇತಯದಿ – ಆದಂಥಾದ್ದೇ ಆದರೆ, ಯುಗಾಂತರೇಕ್ಷಾ – ಬಹುಕಾಲವನ್ನು ನೋಡುತ್ತಿರುವ, ಮಿಥ್ಯಾ – ಮಿಥ್ಯಾದರ್ಶನವು, ದುರಿತಂ – ಪಾಪವು, ಗುರುಭಕ್ತಿ ತಃ – ಗುರುವಿನಭಕ್ತಿದೆಶೆಯಿಂದ, ಮೇ – ನನಗೆ, ಅತತ್ – ಆ ಪಾಪಮೊದಲಾದಷ್ಟು ಅಲ್ಲದೇಯಿರುವದು, ಅಸ್ತು ಆಗಲಿ ||

* * *

ದಂಡಕ || ಇಚ್ಛಾಮಿಭತ್ತೆ | ಈರಿಯಾವಹಮಾಳೋಚೇಯಂ | ಪುಬ್ಬುತ್ತರ ದಖ್ಖಿಣಪಚ್ಛಿಮ ಚವುದಿಸು ವಿದಿಸಾಸು ವಿಹರಮಾಣೇಣ ಜಗಂತರದಿಠ್ಠಿಣಾ ದಠ್ಠೌವಾ ಡವಡವ ಚರಿಯಾಏ | ಪಮಾದ ದೋಸೇ ಣ ಪಾಣ ಭೂದ ಜೀವಸತ್ತಾಣಂ || ಏದೇಸಿಂ ಉವಘಾದೋ ಕದೋ ವಾ ಕಾರಿದೋವಾ ಸಮಣುಮಂಣದೋ ತಸ್ಸಮೇದು ದುಖ್ಖಡಂ || ಣ ಮೋ ಇತ್ಯಾದಿ ||

ಟೀ || ಭತ್ತೇ – ಭಕ್ತಿ ಗೋಸ್ಕರ, ಇಚ್ಛಾಮಿ – ಅಪೇಕ್ಷಿಸುತ್ತೇನೆ, ಈರಿಯಾವಹಂ – ಈರ್ಯಾಪಥವನ್ನು, ಆಳೋಚೇಯಂ – ಆಳೋಚನೆ ಮಾಡುತ್ತೇನೆ, ಪುಬುತ್ತರ ದಖ್ಖಿಣ ಪಚ್ಚಿಮಚಉದಿಸು | ಪೂರ್ವೋತ್ತರ ದಕ್ಷಿಣ ಪಶ್ಚಿಮವೆಂಬ ನಾಲ್ಕು ದಿಕ್ಕುಗಳಲ್ಲಿ, ವಿಧಿಸಾಸು – ಅಗ್ನಿ ಯೇಮೊದಲಾದ ವಿದಿಕ್ಕುಗಳಲ್ಲಿ, ವಿಹರಮಾಣೇಣ – ಸಂಚರಿಸುತ್ತಿರುವಂಥಾ ನನ್ನಿಂದ, ಜಗಂತರದಿಠ್ಠಿಣಾ – ನೊಗಪ್ರಮಾಣ ಪ್ರದೇಶ, ದೃಷ್ಟಿಯಿಂದ, ದ ಠ್ಠೌವಾ – ನೋಡಿದಾಗ್ಯು, ಡವಡವಚರಿಯಾಯೆ – ತವಕತವಕವಾದನಡತೆಯಲ್ಲಿ, ಪ್ರಮಾದದೋಸೇಣ – ಪ್ರಮಾದ ದೋಷದಿಂದ, ವಾಣಭಾದಜೀ ವಸತ್ತಾಣಂ – ಪ್ರಾಣವಿಶಿಷ್ಟವಾದ ಜೀವಸತ್ವಗಳಾದಂಥ, ಏದೇಶಿಂ – ಯಿವುಗಳ, ಉವಘಾದೋ – ಉಪಘಾತವು ಅಂದರೆ ಹಾನಿಯು, ಕದೋವಾ – ನನ್ನಿಂದ ಮಾಡಿದ್ದಾದಾಗ್ಯು, ಕಾರಿದೋವಾ – ಮಾಡಿಶಿದ್ಧಾದಾಗ್ಯು, ಸಮಣಮಣ್ಣದೊ – ವೊಡಂಬಬತ್ತಿರುವಂಥ, ತಸ್ಸಮೇ – ಆ ನನಗೆ, ದುಖ್ಖಡಂ – ದುಷ್ಕರವಾದಂಥಾದ್ದು ||

* * *

ಪಾಪಿಷ್ಠೇನ ದುರಾತ್ಮನಾ ಜಡಧಿಯಾ ಮಾಯಾ ವಿನಾ ಲೋಭಿನಾ | ರಾಗದ್ವೇಷಮಲೀಮಸೇನ ಮನಸಾ ದುಷ್ಕರ್ಮಯನ್ನಿರ್ಮಿತಂ || ತ್ರೈಲೋಕ್ಯಾಧಿಪತೇ ಜಿನೇಂದ್ರಭವತಃ ಶ್ರೀಪಾದ ಮೂಲೇಧುನಾ | ನಿಂದಾಪೂರ್ವಮಹಂ ಜಹಾಮಿ ಸತತಂ ನಿವೃತ್ತಯೇ ಕರ್ಮಣಾಂ ||

* * *

ಟೀ || ಪಾಪಿಷ್ಠೇನ – ಪಾಪಶೀಲವಾದಂಥ, ದುರಾತ್ಮನಾ-ದುಷ್ಪರಿಣಾಮವುಳ್ಳಂಥ, ಜಿಡಧಿಯಾ – ಮಂದಬುದ್ಧಿಯುಳ್ಳಂಥ, ಮಾಯಾವಿ ನಾ – ವಂಚಕನಾದಂಥ, ಲೋಭಿನಾ – ಅತ್ಯಾಶೆಯುಳ್ಳಂಥಾ, ರಾಗದ್ವೇಷ ಮಲೀಮಸೇನ – ರಾಗದ್ವೇಷಗಳಿಂದ ಅತ್ಯಂತಮಲಿನವಾದಂಥ, ಮನಸಾ – ಮನಸ್ಸಿನಿಂದ, ಯುದ್ದುಷ್ಕರ್ಮ – ಯಾವಪಾಪವು, ನಿರ್ಮಿತಂ – ಮಾಡಲ್ಪಟ್ಟಿತೋ, ತ್ರೈಲೋಕ್ಯಾಧಿಪತೇ – ಮೂರುಲೋಕಕ್ಕೂ ಸ್ವಾಮಿಯಾದಂಥ, ಜಿನೇಂದ್ರ – ಜಿನೇಶ್ವರನೇ, ಭವತಃ – ನಿನ್ನ, ಶ್ರೀಪಾದ ಮೂಲೇ – ಸಂಪದ್ಯುಕ್ತವಾದ ಪಾದದಬುಡದಲ್ಲಿ, ಅಧುನಾ – ಈಗ, ಅಹ ನಾನು, ನಿಂದಾಪೂರ್ವಂ ಯಥಾತಧಾ – ನಿಂದೆಯೇ ಮೊದಲಾಗೋಣ ಹ್ಯಾಗೋಹಾಗೆ, ಸತತಂ – ಸರ್ವಕಾಲದಲ್ಲಿ, ಕಾರ್ಮಣಾಂ – ಕರ್ಮಗಳ, ನಿರ್ವೃತ್ತಯೇ – ಹಿಂತಿರಿಗಿಸುವದಕ್ಕೋಸ್ಕರ, ತತ್ – ಆ ಪಾಪವನ್ನು, ಜಹಾಮಿ – ಬಿಡುತ್ತೇನೆ || ೧ ||

* * *

ಸಟೀಕಾ ಸಾಮಾಯಿಕಾ

ವ್ಯ || ನಮಶ್ಶ್ರೀ ವರ್ಧಮಾನಾಯ ನಿರ್ಧೂತ ಕಲಿಲಾತ್ಮನೆ || ಸಾ ಲೋಕಾನಾಂ ತ್ರಿಲೋಕಾನಾಂ ಯದ್ವಿದ್ಯಾದರ್ಪಣಾಯತೇ || ೧ ||

* * *

ತಾ || ಯಾವವರ್ಧಮಾನಸ್ಯಾಮಿಯ ಕೇವಲಜ್ಞಾನವು ಅಲೋಕದೊಡನೆಕೂಡಿದ ಮೂರು ಲೋಕಗಳಿಗೆ ಕನ್ನಡಿಯೋಪಾದಿಯಲ್ಲಿ ಆಚರಿಸುತ್ತಿದೆಯೋ, ಆ ಪ್ರಶಿದ್ಧನಾದಂಥ ಕೊಡಹಲ್ಪಟ್ಟಂಥಾ ಪಾಪದ ಸ್ವರೂಪವುಳ್ಳಂಥ, ಸಂಪದ್ಯುಕ್ತನಾದ ವರ್ಧಮಾನಸ್ವಾಮಿಗೋಸ್ಕರ ನಮಸ್ಕಾರವನ್ನು ಮಾಡುತ್ತೇನೆ || ೧ ||

* * *

ವೃ || ಜಿನೇಂದ್ರ ಮುನ್ಮೂಲಿತ ಕರ್ಮಬಂಧಂ ಪ್ರಣಮ್ಯ ಸನ್ಮಾರ್ಗ ಕೃತ ಸ್ವರೂಪಂ | ಅನಂತ ಬೋಧಾದಿ ಭವಂ ಗುಣೌಘಂ ಕ್ರಿಯಾಕಲಾಪಂ ಪ್ರಕಟಂಪ್ರವಕ್ಷ್ಯೇ | ೨ | ತಾ || ಕೀಳಲ್ಪಟ್ಟಂಥ, ಕರ್ಮಬಂಧವುಳ್ಳಂಥ, ಸನ್ಮಾರ್ಗದಿಂದ ಮಾಡಲ್ಪಟ್ಟ ಸ್ವರೂಪವುಳ್ಳಂಥ, ಜನೇಶ್ವರನನ್ನೂ ಅನಂತಜ್ಞಾನವೇ ಮೊದಲಾದಂಥಾವುಗಳ ದೆಶೆಯಿಂದ ಹುಟ್ಟಿದಂಥ ಜಿನಗುಣ ಸಮೂಹವನ್ನು ನಮಸ್ಕರಿಸಿ, ಸಮ್ಯಕ್ಕ್ರಿಯಾ ಸಮೂಹವನ್ನು, ಪ್ರಕಟವಾಗೋಣ ಹ್ಯಾಗೋಹಾಗೆ ಹೇಳುತ್ತೇನೆ | ೨ |

* * *

ವೃ || ಯಾಸ್ಸರ್ವಾಣಿ ಚರಾಚರಾಣಿ ವಿವಿಧದ್ರವ್ಯಾಣಿತೇಷಾಂ ಗುಣಾನ್ | ಪರ್ಯಾಯಾನಪಿ ಭೂತಭಾವಿಭವತಸ್ಸರ್ವಾನ್ಸದಾ ಸರ್ವಥಾ || ಜಾನೀತೇ ಯುಗಪತ್ಪ್ರತಿಕ್ಷಣಮತಸ್ಸರ್ವಜ್ಞ ಇತ್ಯುಚ್ಯತೇ | ಸರ್ವಜ್ಞಾಯ ಜಿನೇಶ್ವರಾಯ ಮಹತೇ ವೀರಾಯ ತಸ್ಮೈ ನಮಃ || ೩ ||

* * *

ತಾ || ಯಾವಸ್ಯಾಮಿಯು ಸಮಸ್ತಗಳಾದಂಥ ಜಂಗಮಸ್ಥಾವರಗಳಾದಂಥ ನಾನಾಪ್ರಕಾರವಾದಂಥ ದ್ರವ್ಯಗಳನ್ನೂ, ಆ ದ್ರವ್ಯಗಳ ಹಿಂದೆ ಆದಂಥ ಮೂಂದೆ ಆಗತಕ್ಕಂಥ ಈಗ ಆಗುತ್ತಿರುವಂಥ ಸಮಸ್ತಗಳಾದಂಥ ಪರ್ಯಾಯಗಳನ್ನೂ ಕೂಡ ಸರ್ವಕಾಲದಲ್ಲೂ ಸರ್ವಪ್ರಕಾರದಲ್ಲಿಯೂ, ಪ್ರತಿಕ್ಷಣದಲ್ಲಿಯೂ ಏಕಕಾಲದಲ್ಲಿಯೂ ತಿಳಿಯುತ್ತಾನೆಯೋ, ಈಕಾರಣದ್ದೆಶೆಯಿಂದ ಸರ್ವಜ್ಞನಿಂತೆಂದು ಹೇಳಲ್ಪಡುತ್ತಾನೆ. ಸಮಸ್ತವನ್ನು ತಿಳಿದಂಥಾ ಕರ್ಮಕ್ಷಯ ಮಾಡತಕ್ಕಂಥಾವರಿಗೆ ಅಧಿಪತಿಯಾದಂಥ, ಜಿನಶ್ರೇಷ್ಠನಾದಂಥ, ಮಹಾಪುರುಷನಾದಂಥ ಆ ವರ್ಧಮಾನ ಸ್ವಾಮಿಗೋಸ್ಕರ ನಮಸ್ಕಾರವನ್ನು ಮಾಡುತ್ತೇನೆ || ೩ ||

* * *

ವೃ || ಯೇಭ್ಯಾಸಯಂತಿ ಕಥಯಂತಿ ವಿಚಾರಯಂತಿ | ಸಂಭಾವಯಂತಿ ಚ ಮುಹುರ್ಮು ಹುರಾತ್ಮತತ್ವಂ || ತೇಮೋಕ್ಷಮಕ್ಷಯಮನೂನಮನಂತಸೌಖ್ಯಂ | ಕ್ಷಿಪ್ರಂ ಪ್ರಯಾಂತಿ ನವಕೇವಲ ಲಬ್ಧಿರೂಪಂ || ೪ ||

* * *

ತಾ || ಯಾರುಗಳು ಭಾರಿಭಾರಿಗೂ ನಿಜಾತ್ಮತತ್ವವನ್ನು ಅಭ್ಯಾಸಮಾಡುತ್ತಿಧಾರೆಯೋ ಹೇಳುತ್ತಾರೆಯೋ ವಿಚಾರಮಾಡುತ್ತಾರೆಯೋ ಚಂದಾಗಿ ಭಾವನೆಯನ್ನೂ ಮಾಡುತ್ತಾರೆಯೋ ಅವರುಗಳು ನಾಶರಹಿತವಾದಂಥ ಜ್ಞಾನದರ್ಶನವೀರ್ಯಗಳಲ್ಲಿ ಕಡಮೆಯಿಲ್ಲದೇ ಯಿರುವಂಥ ನಾಶವಿಲ್ಲದೇಯಿರುವ ಸೌಖ್ಯವುಳ್ಳಂಥ, ನಕಕೇವಲಲಬ್ಧಿಸ್ವರೂಪವುಳ್ಳಂಥ, ಮೋಕ್ಷವನ್ನು ಶೀಘ್ರವಾಗಿ ಪಡೆಯುತ್ತಾರೆ | ೪ |

* * *

ವೃ || ಖಮಾಮಿ ಸವ್ವಜೀವಾಣಂ ಸವ್ವೇಜೀವಾ ಖಮಂ ತು ಮೇ || ಮೆತ್ತಿ ಮೆ ಸವ್ವಭೂದೇಸು ವೈರಂ ಮಝ್ಝಣ್ಣ ಕೇಣಚಿತ್ || ೫ ||

* * *

ತಾ || ಸಮಸ್ತಜೀವಗಳಿಗೋಸ್ಕರವು ಕ್ಷಮೆಯನ್ನು ಮಾಡುತ್ತೇನೆ. ಸಮಸ್ತಜೀವಗಳು ನನಗೋಸ್ಕರ ಕ್ಷಮೆಯನ್ನು ಮಾಡಲಿ. ನನಗೆ ಸಮಸ್ತ ಜೀವಗಳಲ್ಲಿಯೂ ಮೈತ್ರಭಾವವೂ, ನನಗೆ ಯಾವಜೀವದೊಡನೆಯು ವಿರೋಧವೂ ಇಲ್ಲ || ೫ ||

* * *

ವೃ || ಅಶರಣಮಶುಭನಿತ್ಯಂ ದುಃಖಮನಾತ್ಮಾನ ಮಾವಸಾಮಿ ಭವಂ || ಮೋಕ್ಷಸ್ತದ್ವಿಪರೀತಾತ್ಮೇತಿ ಧ್ಯಾಯಂತು ಸಾಮಯಿಕೇ || ೬ ||

* * *

ತಾ || ಸಂರಕ್ಷಕರು ಇಲ್ಲದೇ ಯಿರುವಂಥ ಮಂಗಳಯಿಲ್ಲದೇ ಯಿರುವಂಥ ಶಾಶ್ವತವಿಲ್ಲದೇ ಯಿರುವಂಥ ವ್ಯಥಾರೂಚವಾದಂಥ ತಾನಲ್ಲದೇ ಯಿರುವಂಥ ಸಂಸಾರದಲ್ಲಿ ವಾಸಮಾಡುತ್ತೇನೆ. ಈ ಸಂಸಾರಕ್ಕೆ ವಿವರ್ಯಯವಾದ ಸ್ವರೂಪವುಳ್ಳಂಥಾದ್ದು ಮುಕ್ತಿಯು. ಹೀಗಿಂತೆಂದು ಸಾಮಯಿಕದಲ್ಲಿ ಧ್ಯಾನ ಮಾಡತಕ್ಕದ್ದು || ೬ ||

* * *

ವೃ || ಆಸಮಯಮುಕ್ತಿ ಮುಕ್ತಂ | ಪಂಚಾಘಾನಾಂ ಮನೋವಚಃ ಕಾಯೈಃ || ಸರ್ವತ್ರ ಚ ಸಾಮಯಿಕಂ | ಸಾಮಯಿಕಾನಾಮ ಶಂಸಂತಿ ||

* * *

ತಾ || ತಾನು ಸಂಕಲ್ಪ ಮಾಡಿದ ಕಾಲದಲ್ಲಿ ಬಿಡೋಣಹ್ಯಾಗೋ ಹಾಗೆ ಹಿಂಸಾದಿ ಪಾಪಗಳ ಮನಸ್ಸು ವಾಕ್ಕು ಶರೀರ ಇವುಗಳಿಂದ ಬಿಡಲ್ಪಟ್ಟಂಥಾದ್ದು ಸಾಮಾಯಿಕವೆಂಬ ವ್ರತವು ಹೀಗೆಂತೆಂದು ಹೆಸರನ್ನು ಎಲ್ಲಾ ಶಾಸ್ತ್ರಗಳಲ್ಲಿಯೂ ಕೂಡ ಸಾಮಾಯಿಕ ಶಾಸ್ತ್ರವನ್ನು ಹೇಳುವಂಥಾವರು ಪ್ರಶಂಸೆ ಮಾಡುತ್ತಾರೆ || ೭ ||

* * *

ವೃ || ಭಗವನ್ನ ಮೋಸ್ತು ತೇ ಏಪೋಹಮಥ ಪೌರ್ವಾಹ್ಣಿ ಕದೇವ ವಂದನಾಂ ಕರಿಷ್ಯಾಮ್ಯಥ ಸಾಮಾಯಿಕ ಸ್ವೀಕಾರಃ ||

* * *

ತಾ || ಭಗವಂತನೆ ನಿನಗೋಸ್ಕರ ನಮಸ್ಕಾರವು ಈ ನಾನು ಪ್ರಾತಃಕಾಲ ಸಂಬಂಧಿಯಾದ ದೇವತಾವಂದನೆಯನ್ನು ಮಾಡುತ್ತೇನೆ. ಈ ನಮಸ್ಕಾರಾನಂತರದಲ್ಲಿ ಸಾಮಾಯಿಕವ್ರತದ ಅಂಗೀಕಾರವು |

* * *

ವೃ || ಸಿದ್ದಂ ಸಂಪೂರ್ಣ್ನಭವ್ಯಾರ್ಥಂ ಸಿದ್ದೇಃಕಾರಣಮುತ್ತಮಂ || ಪ್ರಶಸ್ತದರ್ಶ್ಶನ ಜ್ಞಾನಚಾರಿತ್ರಪ್ರತಿಪಾದನಂ || ೮ ||

* * *

ಸುರೇಂದ್ರಮಕುಟಾ ಶ್ಲಿಷ್ಟಪಾದಪದ್ಮಾಂಶು ಕೇಸರಂ || ಪ್ರಣಮಾಮಿ ಮಹಾವೀರಂ ಲೋಕ ತ್ರಿತಯಮಂಗಳಂ || ೯ ||

* * *

ತಾ || ಪ್ರಶಿದ್ಧನಾದಂಥ ಸಮಗ್ರವಾದ ಭವ್ಯಪ್ರಯೋಜನವುಳ್ಳಮಥ ಮುಕ್ತಿಗೆ ಹೇತುವಾದಂಥ ಸರ್ವಶ್ರೇಷ್ಠನಾದಂಥ ಅತ್ಯಂತ ಪ್ರಸಿದ್ಧವಾದ ಸಮ್ಯಗ್ದರ್ಶನ ಜ್ಞಾನಚಾರಿತ್ರಗಳು ಹೇಳೋಣವುಳ್ಳಂಥ ದೇವೇಂದ್ರನ ಕಿರೀಟದಿಂದ ತಗಿಸಲ್ಪಟ್ಟ. ತಾವರೆಯೋಪಾದಿಯಲ್ಲಿರುವ ಪಾದಗಳ ಕಿರಣಗಳೆಂಬಂಥ ಕಿಂಜಲ್ಕವುಳ್ಳಂಥ ಮೂರುಲೋಕಕ್ಕೂ ಶುಭಸ್ವರೂಪನಾದಂಥ ವರ್ಧಮಾನಸ್ವಾಮಿಯನ್ನು ನಮಸ್ಕರಿಸುತ್ತೇನೆ | ೯ |

* * *

ವೃ || ಸಿದ್ಧವಸ್ತುವಚೋಭಕ್ತ್ಯಾ ಸಿದ್ಧಾನ್ಪ್ರಣಮತಸ್ಸದಾ || ಸಿದ್ಧಕಾರ್ಯಾಃ ಶಿವಂ ಪ್ರಾಪ್ತಾಃ ಸಿದ್ಧಿಂ ದಧತು ನೋವ್ಯಯಂ || ೧೦ ||

* * *

ತಾ || ಸಿದ್ಧಪರಮೇಷ್ಠಿಗಳ ದ್ರವ್ಯಭಾವವಾಗ್ಭಾವ ಭಕ್ತಿಭಾವದಿಂದ ಸಿದ್ಧಪರಮೇಷ್ಠಿಗಳನ್ನು ಸರ್ವಕಾಲದಲ್ಲೂ ನಮಸ್ಕಾರಮಾಡುವಂಥಾವರುಗಳಿಗೆ ಪ್ರಶಿದ್ಧವಾದ ಕಾರ್ಯವುಳ್ಳಂಥ ಮುಕ್ತಿಯನ್ನು ಪಡೆದಂಥಾವರುಗಳು ನಮಗಳಿಗೆ ನಾಶರಹಿತವಾದಂಥ ಮುಕ್ತಿಯನ್ನು ಕೊಡಲಿ || ೧೦ ||

* * *

ವೃ || ನಮೋಸ್ತು ದುತಪಾಪೇಭ್ಯಃ ಸಿದ್ಧೇಭ್ಯ ಋಷಿಸಂಸದೇ | ಸಾಮಾಯಿಕಂ ಪ್ರಪದ್ಯೇಹಂ ಭವ ಭ್ರಮಣಸೂದನಂ || ೧೧ ||

* * *

ತಾ || ಕೊಡಹಲ್ಪಟ್ಟ ಪಾಪವುಳ್ಳಂಥ ಸಿದ್ಧಪರಮೇಷ್ಠಿಗಳಿಗೋಸ್ಕರ ಯತಿಸಭೆಗೋಸ್ಕರ ನಮಸ್ಕಾರವು ಆಗಲಿ, ನಾನು, ಸಂಸಾರದಲ್ಲಿ ತಿರುಗೋಣವನ್ನು ಹೋಗಲಾಡಿಸಲ್ಪಟ್ಟಂಥ ಸಾಮಾಯಿಕ ವ್ರತವನ್ನು ಪಡೆಯುತ್ತೇನೆ || ೧೧ ||

* * *

ವೃ || ಸಮತಾ ಸರ್ವಭೂತೇಷು ಸಂಯಮ ಶ್ಶುಭಭಾವನಾಃ | ಆರ್ತರೌದ್ರಪರಿತ್ಯಾಗ ಸ್ತದ್ಧಿ ಸಾಮಾಯಿಕವ್ರತಂ || ೧೨ ||

* * *

ತಾ || ಸಮಸ್ತ ಪ್ರಾಣಿಗಳಲ್ಲು ಸೌಮ್ಯಭಾವವು ವ್ರತಸ್ವೀಕಾರವು ಶುಭಕರವಾದ ಧ್ಯಾನಗಳನ್ನು ಮಾಡೋಣವು ಆರ್ತಧ್ಯಾನ ರೌದ್ರ ಧ್ಯಾನಬಿಡೋಣವು ಯಾವದೋ ಅದು ನಿಶ್ಚಯವಾಗಿ ಸಾಮಾಯಿಕ ವ್ರತವು || ೧೨ ||

* * *

ವೃ || ಸಾಮ್ಯಂ ಮೇ ಸರ್ಪ ಭೂತೇಷು ವೈರಂ ಮಮ ನ ಕೇನಚಿತ್‌ | ಆಶಾಸ್ಸರ್ವಾಃ ಪರಿತ್ಯಜ್ಯ ಸಮಾಧಿ ಮಹಮಾಶ್ರಯೇ || ೧೩ ||

* * *

ತಾ || ಸಮಸ್ತಪ್ರಾಣಿಗಳಲ್ಲು ನನಗೆ ಸಮತಾಭಾವವು ಯಾರೊಡನೆಯು ನನಗೆ ವಿರೋಧವು ಇಲ್ಲ. ಸಮಸ್ತಗಳಾದಂಥ ಲೋಭಗಳನ್ನು ಬಿಟ್ಟು ನಾನು ಧ್ಯಾನೈಕಾಗ್ರತ್ವವನ್ನು ಆಶ್ರಯಿಸುತ್ತೇನೆ || ೧೩ ||

* * *

ವೃ || ರಾಗದ್ವೇಷಾನ್ಮ ಮತ್ವಾದ್ವಾ ಹಾಮಯಾಯೇ ವಿರೋಧಿತಾಃ | ಕ್ಷಾಮ್ಯಂತು ಜಂತಂವಸ್ತೇ ಮೇ ತೇಭ್ಯೋ ಮೃಷ್ಯಾಮಹಂ ಪುನಃ || ೧೪ ||

* * *

ತಾ || ಪ್ರೀತೀದೆಶೆಯಿಂದಲಾದರು ಮಮಕಾರದ್ದೆಶೆಯಿಂದಲಾದರು ನನ್ನಿಂದ ಯಾರುಗಳು ವಿರೋಧಮಾಡಲ್ಪಟ್ಟರೋ (ಅದು) ಕಷ್ಟವು ಆ ಪ್ರಾಣಿಗಳು ನನಗೋಸ್ಕರ ಕ್ಷಮೆಯನ್ನು ಮಾಡಲಿ ನಾನಾದರೋ ಆಪ್ರಾಣಿಗಳಿಗೋಸ್ಕರ ಕ್ಷಮೆಯನ್ನು ಮಾಡುತ್ತೇನೆ || ೧೪ ||

* * *

ವೃ || ಮನಸಾ ವಪುಷಾ ವಾಚಾ ಕೃತ ಕಾರಿತ ಸಂಮತೈಃ || ರತ್ನತ್ರಯಭವಂ ದೋಷಂ ಗರ್ಹೇ ನಿಂದಾಮಿ ವರ್ಜಯೇ || ೧೫ ||

* * *

ಮನಸ್ಸಿನಿಂದಲೂ ಕಾಯದಿಂದಲೂ ವಾಕ್ಕಿನಿಂದಲೂ ಮಾಡುವದರಿಂದಲೂ ಮಾಡಿಸುವದರಿಂದಲೂ ವಡಂಬಡುವುದರಿಂದಲೂ ಸಮ್ಯಗ್ಧರ್ಶನ ಜ್ಞಾನಚಾರಿತ್ರಗಳೆಂಬ ರತ್ನತ್ರಯಗಳಿಗೆ ಉಂಟಾಗುವ ದೋಷವನ್ನು ತಿರಸ್ಕರಿಸುತ್ತೇನೆ ದೂಷಿಸುತ್ತೇನೆ ಬಿಡುತ್ತೇನೆ || ೧೫ ||

* * *

ವೃ || ತೈರೈಶ್ಚಂ ಮಾನವಂ ದೈವಮುಪಸರ್ಗಂ ಸಹೇಧುನಾ || ಕಾಯಾಹಾರ ಕಷಾಯಾದೀನ್ ಪ್ರತ್ಯಾಖ್ಯಾಮಿ ತ್ರಿ ಶುದ್ಧಿತಃ || ೧೬ ||

* * *

ತಾ || ತಿರ್ಯಗ್ಜಂತುಗಳಿಂದ ಹುಟ್ಟಿದಂಥ ಮನುಷ್ಯರದೆಶೆಯಿಂದ ಹುಟ್ಟಿದಂಥ ದೇವತೆಗಳ ದೆಶೆಯಿಂದ ಹುಟ್ಟಿದಂಥ ಉಪಸರ್ಗವನ್ನು ಈಗ ಸಹಿಸುತ್ತೇನೆ. ಕಾಯವಾಙ್ಮನಸ್ಸುಗಳೆಂಬ ತ್ರಿಕರಣ ಶುದ್ಧಿಯದೆಶೆಯಿಂದ ಶರೀರ ಆಹಾರ ಕ್ರೋಧಮಾನ ಮಾಯಾ ಲೋಭವೇ ಮೊದಲಾದವುಗಳನ್ನು ಪ್ರತ್ಯಾಖ್ಯಾನ ಮಾಡುತ್ತೇನೆ. (ಮನೋವಾಕ್ಕಾಯ ಮೂಲಕ ಬಿಡುವದಕ್ಕೆ ಪ್ರತ್ಯಾಖ್ಯಾನವೆಂದು ಹೆಸರು) | ೧೬ |

* * *

ವೃ || ರಾಗಂ ದ್ವೇಷಂ ಭಯಂ ಶೋಕಂ ಪುಕರ್ಪೌತ್ಸುಕ್ಯದೀನ ತಾಃ || ಮಿತ್ಸೃಜಾಮಿ ತ್ರಿಧಾ ಸರ್ವಮರತಿಂ ರತಿಮೇವಚ || ೧೭ ||

* * *

ತಾ || ಪ್ರೀತಿಯನ್ನು ವಿರೋಧವನ್ನು ಭೀತಿಯನ್ನು ದುಃಖವನ್ನು ಅತ್ಯಂತ ವಿಷಯಾದಿ ಸಂತೋಷ ಆಸಕ್ತಿ ದೀನತ್ವಗಳನ್ನು ಸಮಸ್ತವಾದಂಥ ಬೇಸರಿಕೆಯನ್ನು ರತಿಯನ್ನೂ ಕೂಡ ಅಂದರೆ ಅತ್ಯಂತಾಸಕ್ತಿಯನ್ನೂ ಕೂಡ ಸಮಸ್ತವನ್ನು ಮನವಚನಕಾಯಗಳೆಂಬ ಮೂರು ಪ್ರಕಾರದಿಂದಲೂ ಬಿಡುತ್ತೇನೆ | ೧೭ |

* * *

ವೃ || ಜೀವಿತೇ ಮರಣೇ ಲಾಭೇ ಲಾಭೇ ಯೊಗೇ ವಿಪರ್ಯಯೇ || ಬಂಧಾವರೌ ಸುಖೇ ದುಃಖೇ ಸರ್ವಥಾ ಸಮತಾ ಮಮ || ೧೮ ||

* * *

ತಾ || ಬದುಕೋಣದರಲ್ಲಿಯೂ ಮೃತಿಯಲ್ಲಿಯೂ ಇಷ್ಟಾರ್ಥ ಪ್ರಾರ್ಥನೆಯಲ್ಲಿಯೂ ಇಷ್ಟಾರ್ಥ ಹೋಗುವದರಲ್ಲಿಯೂ ಸಂಬಂಧದಲ್ಲಿಯೂ ಇದಕ್ಕೆ ವಿಪರೀತವಾದ ಅಸಂಬಂಧದಲ್ಲಿಯೂ ಪಾಪಬಂಧಗಳ ಪಙ್ತಯಲ್ಲಿಯೂ, ಸೌಖ್ಯದಲ್ಲಿಯೂ, ವ್ಯಥೆಯಲ್ಲಿಯೂ, ಸರ್ವಪ್ರಕಾರದಲ್ಲಿಯೂ, ನನಗೆ ಸಮಭಾವವು | ೧೮ |

* * *

ವೃ || ಆತ್ಮೈವ ಮೇ ಸದಾ ಜ್ಞಾನೇ ದರ್ಶನೇ ಚರಣೇತಥಾ || ಪ್ರ ತ್ಯಾಖ್ಯಾನೇ ಮಮಾತ್ಮೈವ ತಥಾ ಸಂವರಯೋಗಯೊಃ | ೧೯ |

* * *

ತಾ || ನನಗೆ ಸರ್ವಕಾಲದಲ್ಲಿಯೂ, ಜ್ಞಾನದಲ್ಲಿಯೂ, ತತ್ವಾರ್ಥ ಶ್ರದ್ಧಾನದಲ್ಲಿಯೂ ಆಪ್ರಕಾರವಾಗಿ ಚಾರಿತ್ರದಲ್ಲಿಯೂ, ನಿಜಾತ್ಮನೇಯೇ || ಪುತ್ಯಾಖ್ಯಾನದಲ್ಲಿಯೂ, ಆ ಪ್ರಕಾರವಾಗಿ ಕರ್ಮವನ್ನುತಡೆಯೋಣ, ಧ್ಯಾನ ಇವುಗಳಲ್ಲಿಯೂ, ನನಗೆ ನಿಜಾತ್ಮನೇಯೇ | ೧೯ |

* * *

ವೃ || ಏಕೋ ಮೇ ಶಾಶ್ವತಶ್ಚಾತ್ಮಾಜ್ಞಾನದರ್ಶನಲಕ್ಷಣಃ || ಶೇಷಾಬಹಿರ್ಭವಾಭಾವಾಃ ಸರ್ವೇ ಸಂಯೋಗಲಕ್ಷಣಾಃ | ೨೦ |

* * *

ತಾ || ಸಿದ್ಧಜ್ಞಾನ ಸಿದ್ಧದರ್ಶನ ಲಕ್ಷಣವುಳ್ಳಂಥ ಒಬ್ಬನಾದಂಥ ಆತ್ಮನು ಸ್ಥಿರವಾದಂಥಾವನು. ಉಳಿದಂಥ ಆತ್ಮ ಬಾಹ್ಯದಲ್ಲಿ ಹುಟ್ಟಿದಂಥ ಸಮಸ್ತವಾದ ಪರ್ಯಾಯಗಳು ಸಂಬಂಧ ಲಕ್ಷಣವುಳ್ಳಂಥಾವುಗಳು ||

* * *

ವೃ || ಸಂಯೋಗ ಮೂಲಂ ಜೀವೇನ ಪ್ರಾಪ್ತಾ ದುಃಖಪರಂಪರಾ || ತಸ್ಮಾತ್ಸಂಯೋಗ ಸಂಬಂಧಂತ್ರಿಧಾ ಸರ್ವಂ ತ್ಯಜಾಮ್ಯಹಂ || ೨೧ ||

* * *

ತಾ || ಸಂಬಂಧವೇ ಬುಡವಾಗಿವುಳ್ಳಂಥ ವ್ಯಥಾಪಙ್ತಯ ಪ್ರಾಣಿಯಿಂದ ಪಡೆಯಲ್ಪಟ್ಟಿತು. ಆ ಕಾರಣದ್ದೆಶೆಯಿಂದ ಕರ್ಮಸೇರೋಣದರಿಂದ ಉಂಟಾದ ಸಂಬಂಧವನ್ನು ಮೂರು ಪ್ರಕಾರವಾಗಿ ಸಂಸಾರಾದಿ ಸಮಸ್ತವನ್ನು ನಾನು ಬಿಡುತ್ತೇನೆ || ೨೧ ||

* * *

ವೃ || ಏವಂ ಸಾಮಾಯಿಕಂ ಸಮ್ಯಕ್ ಸಾಮಾಯಿಕ ಮಖಂಡಿ ತಂ || ವರ್ತತಾಂ ಮುಕ್ತಿ ಮಾನಿನ್ಯಾ ವಶ್ಯಚೂರ್ಣಾಯಿತಂ ಮಮ ||

* * *

ತಾ || ಈ ಪ್ರಕಾರವಾಗಿ ಚಂದಾಗಿ ವಿರಾಮವಿಲ್ಲದೇ ಯಿರೋಣ ಹ್ಯಾಗೋಹಾಗೆ ವರ್ತಿಸುತ್ತಿರುವಂಥಾವರುಗಳಿಗೆ ಸಾಮಾಯಿಕವ್ರತವು, ನನಗೆ ಮುಕ್ತಿ ಎಂಬಸ್ತ್ರೀಯ ವಶೀಕರಣಕ್ಕೆ ಚೂರ್ಣದೋಪಾದಿಯಲ್ಲಿ ಇರುವಂಥಾದ್ದು ||

* * *

ಅಥಜಿನೇಂದ್ರ ವಂದನಾಯಾಂ ಪೂರ್ವಾಚಾರ್ಯಾನುಕ್ರಮೇಣ ಸಕಲ ಕರ್ಮಕ್ಷಯಾರ್ಥಂ ಭಾವಪೂಜಾ ವಂದನಾಯಾಂ ಸ್ತವಸಮೇತ ಶ್ರೀಮತ್ಸಿದ್ಧ ಭಕ್ತಿಂ ಕರೋಮ್ಯಹಂ ||

* * *