| ಶ್ರೀಮದುಭಯಲಕ್ಷ್ಮೀರಮಣಾಯ ನಮಃ |
ಶ್ರೀಮನ್ನೇಮಿಚಂದ್ರಾಚಾರ್ಯ್ಯಕೃತ ಪ್ರತಿಷ್ಠಾ ತಿಲಕೋಕ್ತ

ಚತುರ್ವಿಂಶತಿ ತೀರ್ಥಕರ ಸ್ತ್ರೋತ್ರ

ಕನ್ನಡ ಅರ್ಥ ಸಹಿತ

ಇದರಲ್ಲಿ ತೀರ್ಥಕರ ತಂದೆ ತಾಯಿ, ಯಕ್ಷಾ ಯಕ್ಷಿ, ದೇಹಕಾಂತಿ, ಚಿಹ್ನೆ ದೀಕ್ಷಾವೃಕ್ಷ, ಮುಕ್ತಿಸ್ಥಾನ, ಉತ್ಸೇಧ ಪಟ್ಟಣ ನಕ್ಷತ್ರಗಳು ಹೇಳಲ್ಪಟ್ಟಿವೆ

ವೃಷಭ ಸ್ವಾಮಿ ಸ್ತುತಿಃ

ನಾಭಿಸ್ತಾತೋಥ ಮಾತಾ ವಿಲಸತಿ ಮರುದೇವ್ಯುತ್ತರಾದ್ಯಾಚಷಾಢಾ ಕೈಲಾಸಶೈಲಃ ಪರಮಪದಪದಂ ಪೂರ್ವಿನೀತಾವೃಷೋಂಕಃ | ಚಾಪಾನಾಂ ಪಂಚಶತ್ಯುನ್ನತಿ ರಪಿ ಕನಕಾ ಭಾಂಗದೀಪ್ತಿರ್ವಟೋಗೊ | ಯಸ್ಯಾಸೌ ಗೋಮುಖೇಶಃ ಪುರುರವತು ಜಿನೋ ನಸ್ಸಚಕ್ರೇಶ್ವರೀಶಃ | ೧ |

* * *

ಅರ್ಥ | ಯಸ್ಯ – ಯಾವ ವೃಷಭಸ್ವಾಮಿಗೆ, ತಾತಃ -ತಂದೆಯು, ನಾಭಿಃ- ನಾಭಿರಾಜನು. ಅಥಶಬ್ದವು ಮಂಗಳ ವಾಚಕವು. ಮಾತಾ -ತಾಯಿಯು ಮರುದೇವೀ – ಮರುದೇವಿಯೋ ತಾರಾ – ನಕ್ಷತ್ರವು, ಉತ್ತರಾದ್ಯಾಚಷಾಢಾ – ಉತ್ತರಾಷಾಢವೋ, ಪರಮಪದಪದಂ – ಮುಕ್ತಿಸ್ಥಾನವು, ಕೈಲಾಸಶೈಲಂ – ಕೈಲಾಸಪರ್ವತವೋ, ಪೂಃ – ಪಟ್ಟಣವು – ವಿನೀತಾ – ಅಯೋಧ್ಯೆಯೊ ಅಂಕಃ – ಚಿಹ್ನೆಯು, ವೃಷಃ – ಗೂಳಿಯೊ, ಉನ್ನತಿರಪಿ ಉತ್ಸೇಧವೂ ಕೂಡ, ಚಾಪಾನಾಂ – ಬಿಲ್ಲುಗಳ, ಪಂಚಶತೀ – ನೂರೋ, ಅಂಗದೀಪ್ತಿಃ – ಶರೀರಕಾಂತಿಯು, ಕನಕಾಭಾ – ಸುವರ್ಣದ ಕಾಂತಿಯೋಪಾದಿಯಲ್ಲಿ ಕಾಂತಿಯುಳ್ಳದ್ದೋ, ಆಗಃ – ದೀಕ್ಷಾವೃಕ್ಷವು ವಟಃ – ಆಲವೋ, ಗೋಮಖೇಶಃ – ಗೋಮುಖಯಕ್ಷನಿಗೆ ಸ್ವಾಮಿಯಾದ ಚಕ್ರೇಶ್ವರೀಶಃ – ಚಕ್ರೇಶ್ವರೀಯಕ್ಷಿಗೆ ಸ್ವಾಮಿಯಾದ, ಅಸೌಪುರುಜಿನಃ – ಈವೃಷಭತೀರ್ಥಂಕರನು, ನಃ – ನಮ್ಮನ್ನು ಅವತು – ರಕ್ಷಿಸಲಿ | ೧ |

* * *

ಅಜಿತ ಸ್ವಾಮಿ ಸ್ತುತಿಃ

ಮಾತಾಶ್ರೀ ವಿಜಯಾ ಪಿತಾಚ ಜಿತ ಶ್ರೂರೋಹಿಣೀಭಂ ಪುರಂ | ಸಾಕೇತಂ ಕನಕಾಂಗಭಾ ಧ್ವಜ ಇಭ ಸ್ಸ್ಯಾತ್ಸಪ್ತಪರ್ಣ್ನೋದೃಮಃ | ಸಂಮ್ಮೇಧ ಶ್ಯಿವಭೂಶ್ಯತಾನಿ ಧನುಷಾಂ ಚತ್ವಾರಿ ಪಂಚಾಶತಾ | ಮಾನಂ ಯಸ್ಯ ಸ ರೋಹಿಣೀ ಯುತ ಮಹಾ ಯಕ್ಷೇಟ್ಟನೀತಾಜ್ಜಿನಃ | ೨ |

ಅರ್ಥ | ಯಸ್ಯ – ಯಾವ ಅಜಿತಸ್ವಾಮಿಗೆ, ಮಾತಾ – ತಾಯಿಯು, ಶ್ರೀವಿಜಯಾ – ಶ್ರೀವಿಜಯಾದೇವಿಯೋ ಪಿತಾಚ – ತಂದೆಯೂ ಕೂಡ. ಜಿತಶತ್ರುಃ – ಜಿತಶತ್ರುರಾಜನೋ, ಭಂ – ನಕ್ಷತ್ರವು ರೋಹಿಣೀ – ರೋಹಿಣಿಯೋ, ಪುರಂ – ಪಟ್ಟಣವು, ಸಾಕೇಂತಂ -ಅಯೋಧ್ಯೆಯೋ, ಕನಕಾಂಗಭಾ ಚಿನ್ನದೋಪಾದಿಯಲ್ಲಿ ಶರೀರಕಾಂತಿಯೋ, ಧ್ವಜಃ – ಚಿಹ್ನೆಯು, ಇಭಃ – ಆನೆಯೋ, ದ್ರುಮಃ – ದೀಕ್ಷಾವೃಕ್ಷವು, ಸಪ್ತವರ್ಣಃ – ಏಳೆಲೆಬಾಳೆಯು – ಸ್ಯಾತ್- ಆಗುತ್ತಿದೆಯೋ, ಶಿವಭೂಃ – ಮೋಕ್ಷಭೂಮಿಯು, ಸಂಮೇಧಃ – ಸಂಮೇಧಪರ್ವತವೋ, ಮಾನಂ – ಪ್ರಮಾಣವು, ಧನುಷಾಂ – ಬಿಲ್ಲುಗಳ ಪಂಚಾಶತಾ – ಐವತ್ತರೊಡನೆ, ಚತ್ವಾರಿಶತಾನಿ – ನಾನೂರೋ, ರೋಹಿಣೀಯುತಮಹಾಯಕ್ಷೇಟ್ – ರೋಹಿಣೀ ಯಕ್ಷಿಯೊಡನೆ ಕೂಡಿದ ಮಹಾಯಕ್ಷನಿಗೆ ಸ್ವಾಮಿಯಾದ ಸಜಿನಃ – ಆಅಜಿತತೀರ್ಥಂಕರನು, ನಃ ನಮ್ಮನ್ನು ಪುನೀತಾತ್ – ಪವಿತ್ರವಾಗಿ ಮಾಡಲಿ | ೨ |

* * *

ಶಂಭವ ಸ್ವಾಮಿ ಸ್ತುತಿಃ

ಸೇನಾಂಬಾ ಜನಕೋ ದೃಢಾಖ್ಯ ನೃಪತಿಶ್ಮೀರ್ಷಂ ಮೃಗಾದ್ಯಂ ತುಭಂ | ಶ್ರಾವಂತೀ ನಗರೀ ಧ್ವಜಶ್ಚತುರಗಃಸಾಲಶ್ಚ ಚೈತ್ಯದ್ರುಮಃ | ಸಂಮೇಧಶ್ಯಿವಭೂಶ್ಯತಾನಿ ಧನುಷಾಂಚತ್ವಾರಿಮಾ ನಂತನು | ರ್ಗ್ಗೌರಾ | ಯಸ್ಯಸ ಶಂಭವ ಸ್ತ್ರೀ ಮುಖಯುಕ್ಪ್ರಜ್ಞಪ್ತಿನಾಥೋ ವತಾತ್ | ೩ |

* * *

ಅರ್ಥ | ಯಸ್ಯ – ಯಾವಶಂಭವಸ್ವಾಮಿಗೆ, ಅಂಬಾ – ತಾಯಿ, ಸೇನಾ – ಸೇನಯೋ, ಜನಕಃ – ತಂದೆಯು, ದೃಢಾಖ್ಯನೃಪತಿಃ – ದೃಢರಾಜನೊ ಭಂತು – ನಕ್ಷತ್ರವಾದರೋ, ಮೃಗಾದ್ಯಂಶೀರ್ಷಂ – ಮೃಗಶಿರೆಯೋ, ನಗರೀ – ಪಟ್ಟಣವು, ಶ್ರಾವಂತೀ – ಶ್ರಾವಂತಿಯೋ ಧ್ವಜಶ್ಚ – ಚಿಹ್ನೆಯೂ ಕೂಡ ತುರಗಃ – ಕುದುರೆಯೋ, ಸಾಲಶ್ಚ – ದೀಕ್ಷಾವೃಕ್ಷವೋ, ಚೈತ್ಯದ್ರುಮಃ – ಚೈತ್ಯವೃಕ್ಷವೋ, ಶಿವಭೂಃ – ಮುಕ್ತಿಭೂಮಿಯು, ಸಂಮೇಧಃ – ಸಂಮೇಧಪರ್ವತವೋ, ಮಾನಂ – ಪ್ರಮಾಣವು, ಧನುಷಾಂ – ಬಿಲ್ಲುಗಳ, ಚತ್ವಾರಿಶತಾನಿ – ನಾನೋರೋ, ತನುಃ – ಶರೀರವು, ಗೌರಾ – ಹೊಂಬಣ್ಣವಾದದ್ದೊ, ತ್ರಿಮುಖ ಯಕ್ಪ್ರಜ್ಞಪ್ತಿನಾಥ – ತ್ರಿಮುಖಯಕ್ಷನೊಡನೆಕೂಡಿದ ಪ್ರಜ್ಞಪ್ತಿಯಕ್ಷಿಗೆ, ಸ್ವಾಮಿಯಾದ, ಸಶಂಭವಃ – ಆ ಶಂಭವತೀರ್ಥಕರನು, ಅವತಾತ್ – ರಕ್ಷಿಸಲಿ.

* * *

ಅಭಿನಂದನ ಜಿನ ಸ್ತುತಿಃ

ಸಿದ್ಧಾರ್ಥಾಂಬಾ ಸುವರ್ಣಾಭ ರುಗಪಿ ಜನಕಶ್ಯಂಬರೋಂಕಃಕಪಿಃಪೂ | ಸ್ಸಾಕೇತಾ ಖ್ಯಾಶ್ರೀತಾಗ ಸ್ಸರಲ ಇತಿ ಪುನರ್ವಸ್ವಭಿಖ್ಯಂಭಮುರ್ವ್ವೀ | ಮುಕ್ತೇಸ್ಸಂಮ್ಮೇಧಶೈಲ ಸ್ತ್ರೀಶತಧನು ರಥೋರ್ಧ್ವಂಚ ಪಂಚಾಶತಾಯೋ | ಯಸ್ಯಾಸೌ ಶೃಂಖಲೇ ಶೋವತು ಜಗದಪಿ ಯಕ್ಷೇಶ್ವರೀಶೋಭಿನಂದಃ | ೪ |

ಅರ್ಥ | ಯಸ್ಯ – ಯಾವ ಅಭಿನಂದನಸ್ವಾಮಿಗೆ, ಅಂಬಾ – ತಾಯಿ, ಸಿದ್ಧಾರ್ಥ – ಸಿದ್ಧಾರ್ಥೆಯೋ, ಸುವರ್ಣಾಭರುಕ್ ಚಿನ್ನದಕಾಂತಿಯಂತೆ ಕಾಂತಿಯೊ, ಜನಕೋಪಿ – ತಂದೆಯೂ ಕೂಡ, ಶಂಬರಃ – ಶಂಬರರಾಜನೊ, ಅಂಕಃ – ಚಿಹ್ನೆಯು, ಕಪಿಃ – ಕಪಿಯೋ, ಪೂಃ – ಪಟ್ಟಣವು, ಸಾಕೇತಾಖ್ಯಾ – ಅಯೋಧ್ಯೆಯೋ, ಆಶ್ರಿತಾಗಃ – ದೀಕ್ಷಾವೃಕ್ಷವು, ಸರಲ ಇತಿ – ಧೂಪದ ಮರವೋ, ಭಂ – ನಕ್ಷತ್ರವು, ಪುನರ್ವಸ್ವಭಿಖ್ಯಂ ಪುನರ್ವಸುನಾಮವಾದದ್ದೋ, ಮುಕ್ತೇಃ ಮೋಕ್ಷದ, ಊರ್ವೀ – ಭೂಮಿಯು, ಸಮ್ಮೇಧ ಶೈಲಃ – ನಮ್ಮೇಧಪರ್ವತವೋ, ಆಯುಃ – ಉತ್ಸೇಧವು, ತ್ರಿಶತಧನುಃ – ಮುನ್ನೂರು ಧನಸ್ಸು, ಅಥೋರ್ಧ್ವಂಚ – ಅನಂತರ ಮೇಲೆಯು – ಪಂಚಾಶತ್ – ಐವತ್ತು ಧನುರುತ್ಸೇಧವು, ಶೃಂಖಲೇಶಃ – ಶೃಂಖ ಲಿಯಕ್ಷಸ್ವಾಮಿಯಾದ, ಯಕ್ಷೇಶ್ವರೀಶಃ – ಯಕ್ಷೇಶ್ವರೀಯಕ್ಷಿಗೆ ಸ್ವಾಮಿಯಾದ ಅಸೌಅಭಿನಂದಃ ಈ ಅಭಿನಂದನ ಜಿನನು, ಜಗದಪಿ – ಲೋಕವನ್ನು ಕೂಡ, ಅವತು – ರಕ್ಷಿಸಲಿ.

* * *

ಸುಮತಿ ತೀರ್ಥಕರ ಸ್ತುತಿಃ

ಕೋಕೋಂಕಃ ಫಲಿನೀತರುಃ ಪುರಮಥಾ ಯೋದ್ಯಾಮಭಾ ಜನ್ಮಭಂ | ಚಾಪಾನಾಂಚ ಶತತ್ರಯಃ ಪರಿಮಿತಿಃ ಕಾಂತಿಸ್ಸು ವರ್ಣೋತ್ತಮಾ | ಸಂಮೇಧ ಶ್ಯಿವಭೂರ್ವಿಭೂತಿ ಜನಕೋ ಮೇಘಪ್ರಭೋಮಂಗಲಾ | ಮಾತಾಯಸ್ಯ ಸಪಾತುನ ಸ್ಸುಮ ತಿರೀಡ್ವಜ್ರಾಂಕುಶಾ ತುಂಬುರೋಃ | ೫ |

* * *

ಅರ್ಥ | ಯಸ್ಯ – ಯಾವ ಸುಮತಿ ಸ್ವಾಮಿಗೆ, ಅಂಕಃ – ಚಿಹ್ನೆಯು, ಕೋಕಃ – ಚಕ್ರವಾಕಪಕ್ಷಿಯೋ, ತರುಃ – ದೀಕ್ಷಾವೃಕ್ಷವು, ಫಲಿನೀ – ಬೆಂಣೆಬಿದುರೋ, ಪುರಂ – ಪಟ್ಟಣವು, ಅಯೋಧ್ಯವೋ, ಜನ್ಮಭಂ – ಜನ್ಮನಕ್ಷತ್ರವು, ಮಖಾ-ಮಖೆಯೋ, ಪರಿಮಿತಿಃ – ಉತ್ಸೇಧವು, ಚಾಪಾನಾಂ – ಬಿಲ್ಲುಗಳ, ಶತತ್ರಯಃ – ಮುನ್ನೂರುಗಳೋ, ಶರೀರ ಕಾಂತಿಃ – ಶರೀರಕಾಂತಿಯು, ಸುವರ್ಣ್ನೋತ್ತಮಾ – ಚಿನ್ನದಂತೆ ಶ್ರೇಷ್ಠವಾದದ್ದೋ ಶಿವಭೂಃ – ಮುಕ್ತಿ ಭೂಮಿಯು, ಸಂಮೇಧಃ – ಸಂಮೇಧ ಪರ್ವತವೋ, ಮೇಘಪ್ರಭಃ – ಮೇಘಪ್ರಭರಾಜನು, ಜನಕಃ – ತಂದೆಯಾಗಿ, ವಿಭಾತಿ – ಪ್ರಕಾಶಿಸುತ್ತಾನೋ, ಮಂಗಲಾ – ಮಂಗಲೆಯು, ಮಾತಾ – ತಾಯೊ, ವಜ್ರಾಂಕುಶಾತುಂಬುರೋಃ – ವಜ್ರಾಂಕುಶಾ – ವಜ್ರಾಂಕುಶಾಯಕ್ಷಿ. ತುಂಬುರುಯಕ್ಷರಿಗೆ, ಈಟ್ – ಸ್ವಾಮಿಯಾದ, ಸುಮತಿಃ – ಸುಮತಿ ಜಿನುಸು, ನಃ – ನಮ್ಮಗಳನ್ನು, ಪಾತು – ರಕ್ಷಿಸಲಿ.

* * *

ಪದ್ಮಪ್ರಭ ತೀರ್ಥಕರ ಸ್ತುತಿಃ

ಪದ್ಮೋಂಕಃ ಫಲಿನೀತರುಃ ಪುರಮಥೋ ಕೌಶಂಬಿಕಾಮುಕ್ತಿಭೂ | ಸ್ಸಮ್ಮೇಧೋ ವರುಣಃ ಪಿತಾಜನನಭಂ ಚಿತ್ರಾಸುಸೀಮಾಂಬಿಕಾ | ಸಾರ್ಧಂಚಾಪಶತದ್ವಯಂ ಪರಿಮಿತೀ ರಕ್ತಾತನುರ್ಯಸ್ಯಸೋ | ವ್ಯಾತ್ಪದ್ಮಪ್ರಭ ಈಶ್ವರಃ ಕುಸುಮಯಕ್ಷಃಶ್ರೀ ಮನೋವೇಗಯೋಃ

* * *

ಅರ್ಥ | ಯಸ್ಯ – ಯಾವ ಪದ್ಮಪ್ರಭಸ್ವಾಮಿಗೆ, ಅಂಕಃ – ಚಿಹ್ನೆಯು, ಪದ್ಮ – ತಾವರೆಯು, ತರುಃ – ವೃಕ್ಷವು, ಫಲಿನೀ ಫ್ರೇಂಕಣಗಿಡವೊ, ಪುರಂ – ಪಟ್ಟಣವು, ಕೌಶಂಬಿಕಾ – ಕೌಶಂಬಿಯೊ, ಮುಕ್ತಿಭೂಃ – ಮೋಕ್ಷಭೂಮಿಯು, ಸಂಮೇಧಃ – ಸಂಮೇಧ ಪರ್ವತವೋ, ವರುಣಃ – ವರುಣರಾಜನು, ಪಿತಾ – ತಂದೆಯೊ, ಜನನಭಂ ಜನ್ಮನಕ್ಷತ್ರವು, ಚಿತ್ರಾ – ಚಿತ್ತಯೊ, ಅಂಬಿಕಾ – ತಾಯಿಯು, ಸುಸೀಮಾ – ಸುಸೀಮೆಯೊ, ಪರಿಮಿತಿಃ – ಉತ್ಸೇಧವು, ಸಾರ್ದ್ಧಂಚಾಪಶತದ್ವಯಂ – ಇನ್ನೂರೈವತ್ತು ಬಿಲ್ಲೋತನುಃ – ಶರೀರವು, ರಕ್ತಾ – ಕೆಂಪೊ, ಕುಸುಮಯ ಕ್ಷತ್ರೀಮನೋ ವೇಗಯೋಃ – ಕುಸುಮಯಕ್ಷಮನೋವೇಗಾಯಕ್ಷೀರಿಗೆ, ಈಶ್ವರಃ – ಸ್ವಾಮಿಯಾದ, ಸಪದ್ಮಪ್ರಭಃ – ಆಪದ್ಮಪ್ರಭಜಿನನು, ಅವ್ಯಾತ್ – ರಕ್ಷಿಸಲಿ | ೬ |

* * *

ಸುಪಾರ್ಶ್ವತೀರ್ಥಕರ ಸ್ತುತಿಃ

ಕಾಶೀಪೂಸ್ಸುಪ್ರತಿಷ್ಠೋ ವಿಲಸತಿಜನಕೋಂಬಾಚ ಪೃಥ್ವೀಶಿರೀಷ | ಶ್ಚೈತ್ಯದ್ರುರ್ಭಂವಿಶಾಖಾ ಶಿವಪದಮಥ ಸಂಮೇಧಭೂರ್ವಂಶಜಿದ್ರುಕ್ | ಕೋದಂಡಾನಾಂ ಶತೇದ್ವೇಮಿತಿರಪಿ ಮಕರೋಂಕಶ್ಚ ಯಕ್ಷೀಚಕಾಳೀ | ಯಸ್ಯಾ ಸೌ ನಸ್ಸುಪಾರ್ಶ್ವೋವಿತರತು ವರನಂದಾಖ್ಯ ಯಕ್ಷೇಶ್ವರಶ್ಯಂ | ೭ |

* * *

ಅರ್ಥ | ಯಸ್ಯ – ಯಾವ ಸುಪಾರ್ಶ್ವ ಜಿನನಿಗೆ, ಪೂಃ – ಪಟ್ಟಣವು, ಕಾಶೀ – ಕಾಶಿಯೋ, ಸುಪ್ರತಿಷ್ಠಃ – ಸುಪ್ರತಿಷ್ಠರಾಜನು, ಜನಕಃ – ತಂದೆಯಾಗಿ, ವಿಲನತ್ – ಪ್ರಕಾಶಿಸುತ್ತಾನೊ, ಅಂಬಾಚ – ತಾಯಿಯು, ಪೃಥ್ವೀ – ಪೃಥ್ವೀದೇವಿಯೊ, ಚೈತ್ಯದ್ರುಃ – ದೀಕ್ಷಾವೃಕ್ಷವು, ಶೀರಿಷಃ – ಬಾಗೆಮರವು, ಭಂ – ನಕ್ಷತ್ರವು, ವಿಶಾಖಾ – ವಿಶಾಖೆಯೋ; ಶಿವಪದಂ – ಮೋಕ್ಷಸ್ಥಾನವು, ಸಂಮೇಧಭೂಃ – ಸಂಮೇಧ ಪರ್ವತದ ಭೂಮಿಯೊ, ದ್ರುಕ್ – ಕಾಂತಿಯು, ವಂಶಜಿತ್ – ಬಿದುರನ್ನು ಜಯಿಸುವಹಸುರೋ, ಮಿತಿರಪಿ – ಉತ್ಸೇಧವು, ಕೋದಂಡಾನಾಂ – ಬಿಲ್ಲುಗಳ, ದ್ವೇಶತೆ – ಇನ್ನೂರೋ ಅಂಕಶ್ಚ – ಚಿಹ್ನೆಯು, ಮಕರಃ – ಮೊಸಳೆಯೊ, ಯಕ್ಷೀ – ಯಕ್ಷಿಯು, ಕಾಳೀ – ಕಾಳಿಯೊ, ವರನಂದಾಖ್ಯಯ ಕ್ಷೇಶ್ವರಃ – ವರಸಂದಿಯೆಂಬ ಹೆಸರುಳ್ಳ ಯಕ್ಷೇಶ್ವರನೊ, ಅನೌ ಸುಪಾರ್ಶ್ವಃ – ಈ ಸುಪಾರ್ಶ್ವ ಜಿನನು, ನಃ – ನಮಗೆ ಶಂ – ಸುಖವನ್ನು ವಿತರತು – ಕೊಡಲಿ.

* * *

ಚಂದ್ರಪ್ರಭತೀರ್ಥಕರ ಸ್ತುತಿಃ

ಜನ್ಮರ್ಕ್ಷಂತ್ವನುರಾಧಿಕಾ ಮೃಗಧರೋಂಕೋಗಶ್ಚ ನಾಗೋಬ್ಜಭಾ | ಸಾರ್ಧಾಚಾಪಶತಪ್ರಮಾ ಶಿವಪದಂ ಸಂಮೇಧ ಕೋಲಕ್ಷ್ಮಣಾ | ಮಾತಾ ಚಂದ್ರಪುರೀಪುರೀ ವಿಜಯಯಕ್ಷೋ ಯಕ್ಷಿಣೀ ಮಾಲಿನಿ | ಜ್ವಾಲಾದ್ಯಾಚ ಚಕಾಸ್ತಿ ಯಸ್ಯ ಚ ಮಹಾಸೇನಾತ್ಮಜಶ್ಚಂದ್ರಭಃ

* * *

ಅರ್ಥ | ಯಸ್ಯ – ಯಾವ ಚಂದ್ರಪ್ರಭಸ್ವಾಮಿಗೆ, ಜನ್ಮರ್ಕ್ಷಂ – ಹುಟ್ಟಿದ ದಿನ ನಕ್ಷತ್ರವು, ಅನುರಾಧಿಕಾ – ಅನುರಾಧೆಯೊ, ಅಂಕಃ – ಚಿಹ್ನೆಯು, ಮೃಗಧರಃ – ಚಂದ್ರನೊ ಅಗಶ್ಚ – ದೀಕ್ಷಾವೃಕ್ಷವು, ನಾಗಃ – ನಾಗಸಂಪಿಗೆಯೊ, ಅಬ್ಜಭಾಃ – ಬೆಳೀತಾವರೆಯೋಪಾದಿಯಲ್ಲಿ ಕಾಂತಿಯೊ, ಸಾರ್ಧಾಚಾಪಶತಪ್ರಮಾ- – ನೂರೈವತ್ತು ಬಿಲ್ಲಪ್ರಮಾಣವೋ, ಶಿವಪದಂ – ಮೋಕ್ಷಸ್ಥಾನವು, ಸಂಮೇಧಕಃ – ಸಂಮೇಧಪರ್ವತವೊ, ಮಾತಾ – ತಾಯಿಯು, ಲಕ್ಷ್ಮಣಾ – ಲಕ್ಷ್ಮಣೆಯೊ ಪುರೀ – ಪಟ್ಟಣವು, ಚಂದ್ರಪುರೀ – ಚಂದ್ರಪುರಿಯೊ, ವಿಜಯಯಕ್ಷಃ – ವಿಜಯನೆಂಬಯಕ್ಷನೊ, ಯಕ್ಷಿಣೀ – ಯಕ್ಷಿಯು ಜ್ವಾಲಾದ್ಯಾ – ಜಾಲಾಶಬ್ದವೇ ಮೊದಲಲ್ಲಿವುಳ್ಳ, ಮಾಲಿನೀಚ – ಮಾಲಿನೀ ಅಂದರೆ ಜ್ವಾಲಾಮಾಲಿನಿಯೊ ಮಹಾಸೇನಾತ್ಮಜಃ – ಮಹಾಸೇನ ರಾಜನ ಮಗನಾದ, ಸಚಂದ್ರಪ್ರಭಃ – ಆಚಂದ್ರಪ್ರಬುಸ್ವಾಂಇಯು, ಚಕಾಸ್ತಿ ಪ್ರಕಾಶಿಸುತ್ತಾನೆ.

* * *

ಪುಷ್ಟದಂತ ತೀರ್ಥಕರ ಸ್ತುತಿಃ

ಮೂಲಾಭಂಮಕರಧ್ವಜೋಜನಯಿತಾಸುಗ್ರೀವನಾಮಾಂಬಿಕಾ | ರಾಮಾಚಾಪಶತ ಪ್ರಮಾಣಮವನೀ ಮುಕ್ತೆಶ್ಚಸಂಮೇಧಕಃ | ನಾಗೋಗೋಜಿತಯಕ್ಷಕೋಪ್ಯಥ ಮಹಾಕಾಳ್ಯಾಖ್ಯಕಾಯಕ್ಷಿಣೀ | ಕಾಕಂದೀನಗರೀ ಸಿತಾಬ್ಜತನುದೃಕ್ತಂ ಪುಷ್ಟದಂತಂ ಭಜೇ | ೯ |

* * *

ಅರ್ಥ | ಯಸ್ಯ – ಯಾವಪುಷ್ಟದಂತ ಸ್ವಾಮಿಗೆ, ಮೂಲಾಭಂ – ಮೂಲಾನಕ್ಷತ್ರವೊ, ಮಕರಧ್ವಜಂ – ಮೊಸಳೆಚಿಹ್ನೆಯೊ, ಜನಯಿತಾಂ -ತಂದೆಯು, ಸುಗ್ರೀವನಾಮಾ – ಸುಗ್ರೀವನೆಂಬ ಹೆಸರುಳ್ಳವನೊ, ಅಂಬಿಕಾ – ತಾಇ, ರಾಮಾ – ರಾಮೆಯೋ, ಚಾಪಶತಪ್ರಮಾಣ – ನೂರುಬಿಲ್ಲು ಪ್ರಮಾಣವೊ, ಮುಕ್ತೇಃ – ಮುಕ್ತಿಯ, ಅವನೀ – ಭೂಮಿಯು, ಸಂಮೇಧಕಃ – ಸಂಮೇಧ ಪರ್ವತವೊ, ಅಗಃ – ದೀಕ್ಷಾವೃಕ್ಷವು, ನಾಗಃ – ನಾಗಸಂಪಿಗೆಯೊ, ಅಜತಯಕ್ಷಕಃ – ಅಜಿತಯಕ್ಷನೊ ಮಹಾಕಾಳ್ಯಾಖ್ಯಕಾಯಕ್ಷಿಣಿ – ಮಹಾಕಾಳೀಯೆಂಬ ಹೆಸರುಳ್ಳ ಯಕ್ಷಿಯೊ ಕಾಕಂದೀನಗರೀ – ಕಾಂಕಂದೀಪಟ್ಟಣವೊ, ತಂಪುಪ್ಪದಂತಂ – ಆಪುಷ್ಟದಂತ ಸ್ವಾಮಿಯನ್ನು ಭಜೇ – ಸೇವಿಸುತ್ತೇನೆ.

* * *

ಶೀತಲ ತೀರ್ಥಕರ ಸ್ತುತಿಃ

ಪೀತಾಭಾ ಬಿಲ್ವವೃಕ್ಷೋ ದೃಢರಥನೃಪತಿರ್ಜನ್ಮಕೃನ್ಮುಕ್ತಿ ಭೂಮಿ | ಸ್ಸಂಮೇಧಃ ಕಾಯಮಾನೋ ನವತಿಧನುರಥೋ ಭದ್ರಿಳಾಪೂಸ್ಸುನಂದಾ | ಮಾತಾಬ್ರಹ್ಮಾಚಯಕ್ಷಃ ಪದಯುಗಲನತಾ ಮಾನವೀ ಸ್ವಸ್ತಿಕೋಂಕಃ | ಪೂರ್ವಾಷಾಢಾಚ ಯಸ್ಯ ಪ್ರದಿಶತು ಸಜಿನಶ್ಯೀತಲಾಖ್ಯಶ್ಯ್ರಿಯಂ ನಮಃ | ೧೦ |

* * *

ಅರ್ಥ | ಯಸ್ಯ – ಯಾವ ಶೀತಲ ಸ್ವಾಮಿಗೆ ಪೀತಾಭಾ – ಹೊಂಬಣ್ಣವೊ ಬಿಲ್ವವೃಕ್ಷಃ – ಬಿಲಪತ್ರೆಮರವೊ, ಜನ್ಮಕೃತ್ – ತಂದೆಯು, ದೃಢರಥನೃಪತಿಃ – ದೃಢರಥರಾಜನೊ, ಮುಕ್ತಿಭೂಮಿಃ – ಮೋಕ್ಷಸ್ಥಾನವು, ಸಂಮೇಧಃ – ಸಂಮೇಧಪರ್ವತವೊ ಕಾಯಮಾನಂ – ಶರೀರಪ್ರಮಾಣವು, ನವತಿಧನುಃ – ತೊಂಭತ್ತುಬಿಲ್ಲೊ, ಭದ್ರಳಾಪೂಃ – ಭದ್ರಿಳಾಪಟ್ಟಣವೊ, ಮಾತಾ – ತಾಯಿಯು, ಸುನಂದಾ – ಸುನಂದೆಯೊ, ಯಕ್ಷಃ – ಯಕ್ಷನು, ಬ್ರಹ್ಮಾ – ಬ್ರಹ್ಮನೊ, ಪದಯುಗಲನತಾ – ಚರಣದ್ವಯನಮ್ರರು, ಮಾನವಿ – ಮಾನವಿಯೊ; ಅಂಕಃ – ಚಿಹ್ನೆಯು, ಸ್ವಸ್ತಿಕಃ – ಸ್ವಸ್ತಿಕವೊ ಪೂರ್ವಾಷಾಢಾಚ -ಪೂರ್ವಾಷಾಢಾ ನಕ್ಷತ್ರವೊ, ಶೀತಲಾಖ್ಯಃ -ಶೀತಲನಾಮಕನಾದ, ಸಜಿನಃ – ಆಜಿನನು, ನಃ – ನಮಗೆ, ಶ್ರೀಯಂ – ಸಂಪತ್ತನ್ನು, ಪ್ರದಿಶತು – ಕೊಡಲಿ | ೧೦ |

* * *

ಶ್ರೇಯಾಂಸ ತೀರ್ಥಕರ ಸ್ತುತಿಃ

ಯಕ್ಷೌಗೌರೀಶ್ವರೌಭಂ ಶ್ರಮಣ ಇತಿ ತರುಸ್ತಿಂದುಕೋಂಕಶ್ಚಗಂಡೋ | ಮಾನಂ ಚಾಸಿತಿಚಾಪಃ ಕನಕನಿಭತನುಸ್ಸಿಂಹನಾದಾ ಪುರೀ ಚ | ಸಂಮೇಧೋ ಮುಕ್ತಿಭೂಮಿರ್ವಿಲಸತಿ ಜನನೀವೈಷ್ಣವೀ ವಿಷ್ಣುರಾಜ | ಸ್ತಾತೋ ಯಸ್ಯಾಪಿ ತಸ್ಮೈ ನಮ ಇಹ ಸತತಂ ಶ್ರೇಯಸೇ ಶ್ರೀ ಜಿನಾಯ | ೧೧ |

* * *

ಅರ್ಥ | ಯಸ್ಯ – ಯಾವ ಶ್ರೇಯಾಂಸ ಸ್ವಾಮಿಗೆ, ಗೌರೀಶ್ವರೌ, ಗೌರಿಯು – ಈಶ್ವರನು, ಯಕ್ಷೌ – ಯಕ್ಷೀಯಕ್ಷರುಗಳೋ, ಶ್ರಮಣ ಇತಿ – ಶ್ರವಣ ಇಂತೆಂದು. ಭಂ – ನಕ್ಷತ್ರವೋ, ತರುಃ – ದೀಕ್ಷಾ ವೃಕ್ಷವು, ತಿಂದುಕಃ – ತುಂಬುರುಗಿಡವೋ, ಅಂಕಃ – ಚಿಹ್ನೆಯು, ಗಂಡಃ – ಗಂಡಕ ಮೃಗವು, ಮಾನಂ – ಉತ್ಸೇಧವು, ಅಸೀತಿಚಾಪಃ – ಎಂಭತ್ತು ಬಿಲ್ಲು, ಕನಕನಿಭತನುಃ – ಶರೀರವು ಸುವರ್ಣವರ‍್ಣವು, ಪುರೀಚ – ಪಟ್ಟಣವು, ಸಿಂಹನಾದಾ – ಸಿಂಹಾನಾದಾ ನಾಮಕವಾದದ್ದೋ, ಮುಕ್ತಿಭೂಮಿಃ – ಮುಕ್ತಿಸ್ಥಾನವು ಸಮ್ಮೇಧಃ – ಸಮ್ಮೇಧ ಪರ್ವವತೋ, ವೈಷ್ಣವೀ – ವೈಷ್ಣವೀ ನಾಮಕಳಾದ, ಜನನೀ – ತಾಯಿಯು, ವಿಲಸತಿ – ಹೊಳೆಯುತ್ತಾಳೊ, ತಾತಃ – ತಂದೆಯು, ವಿಷ್ಣು ರಾಜಃ – ವಿಷ್ಣುರಾಜನೊ, ಇಹ – ಇಲ್ಲಿ, ಶ್ರೇಯಸೆ – ಶ್ರೆಯೊ ನಾಮಕವಾದ, ಶ್ರೀಜಿನಾಯ – ಅಂತರಂಗ ಬಹಿರಂಗ ಲಕ್ಷ್ಮಿಯೊಡನೆ ಕೂಡಿದ ತೀರ್ಥಕರಿಗೋಸ್ಕರ, ಸತತಂ – ಸರ್ವಕಾಲದಲ್ಲೂ, ನಮಃ -ನಮಸ್ಕಾರವು | ೧೧ |

* * *

ವಾಸುಪೂಜ್ಯತೀರ್ಥಕರಸ್ತುತಿಃ

ಚಂಪಾನಿರ್ವೃತಿಭೂಶ್ಚಪೂ ಶತವಿಶಾಖಾಜನ್ಮಭಂ ಪಾಟಲೋ | ಗೋ ರಕ್ತಾತನುರಪ್ಯಥೋ ಮಹಿಷಕೋಂಕ ಸ್ಸಪ್ತತಿ ಶ್ಚಾಪಕಃ | ಉತ್ಸೇಧೋ ವಿಜಯಾಂಬಿಕಾ ಚ ವಸುಪೂಜ್ಯಃ ಕಾರಣಂ ಯಸ್ಯ ತಂ | ಗಾಂಧಾರೀಶ ಮಹಾ ಕುಮಾರ ವಿನುತಂ ಶ್ರೀ ವಾಸುಪೂಜ್ಯಂ ಭಜೇ | ೧೨ |

* * *

ಯಸ್ಯ – ಯಾವ ವಾಸುಪೂಜ್ಯಸ್ವಾಮಿಗೆ, ನಿವೃತ್ತಿ ಭೂಃ – ಮೋಕ್ಷಭೂಮಿಯು, ಪೂಶ್ಚ – ಪಟ್ಟಣವೂ, ಚಂಪಾ – ಚಂದಾಪುರವೊ, ಶತವಿಶಾಖಾಜನೈಭಂ – ಶತ ವಿಶಾಖೆ ಜನ್ಮ ನಕ್ಷತ್ರವೊ, ಅಗಃ – ದೀಕ್ಷಾವೃಕ್ಷವು, ಪಾಟಲಃ – ಪಾದರಿಯೊ, ತನುರಪಿ – ಶ್ರೀರವು, ರಕ್ತಾ – ಕೆಂಪೊ. ಅಂಕಃ – ಚಿಹ್ನೆಯು, ಮಹಿಷಕಃ – ಕೋಣನೊ, ಉತ್ಸೇಧೆ – ಔನ್ನತ್ಯದಲ್ಲಿ, ಸಪ್ತತಿ – ಇಪ್ಪತ್ತಾದ, ಚಾಪಕಃ ಬಿಲ್ಲೋ, ಅಂಬಿಕಾ – ತಾಯು, ವಿಜಯಾ -ವಿಜಯಾದೇವಿಯೊ, ಕಾರಣಂ – ಜನ್ಮಕಾರಣವು, ವಸುಪೂಜ್ಯಃ – ವಸುಪೂಜ್ಯರಾಜನೊ, ಗಾಂಧಾರೀಶ ಮಹಾಕುಮಾರ ವಿನುತಂ – ಗಾಂಧಾರೀಯಕ್ಷಿಗೆ ಪತಿಯಾದ ಮಹಾಕುಮಾರಯಕ್ಷನಿಂದ ಸ್ತುತಿಲ್ಪಟ್ಟ; ತಂಶ್ರೀವಾಸು ಪೂಜ್ಯಂ – ಆ ಶ್ರೀವಾಸುಪಝ್ಯಜಿನನನ್ನು ಭಜೇ – ಸೇವಿಸುತ್ತೇನೆ | ೧೧ |

* * *

ವಿಮಲ ತೀರ್ಥಕರ ಸ್ತುತಿಃ

ಜಂಬೂ ಶ್ಚೈತ್ಯತರುಃ ಪಿತಾ ಚ ಕೃತವರ್ಮಾಂಬಾ ಸುಶರ್ಮೋತ್ತರಾ | ಷಾಢಾಭಂ ಚ ಷಡಾನನೋ ಷ್ಯನುಚರಃ ಕಾಂಪಿಲ್ಯಕಂ ಪತ್ತನಂ | ಕೋಲೋಂಕಃ ಪರಿಮಾತಥೈವ ಧನುಷಾಂ ಷಷ್ಟಿಸ್ತು ಸಂಮೇಧಜಾ | ಮುಕ್ತಿರ್ಯಸ್ಯ ಪುನಾತು ನಸ್ಸವಿಮಲೋ ವೈರೇಟಿಕೇಟ್ಸ್ವರ್ಣರುಕ್ | ೧೩ |

* * *

ಯಸ್ಯ – ಯಾವ ವಿಮಲಸ್ವಾಮಿಗೆ, ಚೈತ್ಯತರುಃ – ದೀಕ್ಷಾವೃಕ್ಷವು, ಜಂಬೂಃ – ನೇರಳೆಯೊ, ಪಿತಾಚ – ತಂದಯು, ಕೃತವರ್ಮ – ಕೃವರ್ಮರಾಜನೊ, ಅಂಬಾ – ತಾಯು, ಸುಶರ್ಮಾ, ಸುಶರ್ಮಾದೇವಿಯೊ, ಭಂಚ – ನಕ್ಷತ್ರವು, ಉತ್ತರಾಷಾಢಾ – ಉತ್ತರಾಷಾಢವೊ, ಷಡಾನನೋಪಿ – ಷಣ್ಮುಖ ಯಕ್ಷನೂ, ಅನುಚರಃ – ಸೇವಕನೊ, ಪತ್ತನಂ – ಪಟ್ಟಣವು ಕಾಪಿಲ್ಯಕಂ – ಕಾಂಪಿಲ್ಯಪುರವೊ, ಅಂಕಃ – ಚಿಹ್ನೆಯು, ಕೋಲಃ – ವರಾಹವೊ, ತಥೈವ – ಆಪ್ರಕಾರವಾಗಿಯೆ, ಪರಿಮಾ ಪ್ರಮಾಣವು, ಧನುಷಾಂ – ಬಿಲ್ಲುಗಳ ಷಷ್ಟಿಃ – ಅರವತ್ತೊ, ಮುಕ್ತಿಸ್ತು – ಮೋಕ್ಷವೂ, ಸಂಮೇಧಜಾ – ಸಂಮೇಧ ಪರ್ವತದಲ್ಲಿ ಹುಟ್ಟಿದಂತಾದ್ದೋ, ವೈರೋಟಿಕೇಟ್ – ವೈರೋಟಿ ಯಕ್ಷಿಗೆ ಸ್ವಾಮಿಯಾದ, ಸ್ವರ್ಣರುಕ್ – ಚಿನ್ನದಕಾಂತಿಯೋಪಾದಿಯಲ್ಲಿ ಕಾಂತಿಯುಳ್ಳ, ಸವಿಮಲಃ – ಆವಿಮಲಜಿನನು, ನಃ – ನಮ್ಮನ್ನು, ಪುನಾತು – ಪವಿತ್ರವಾಗಿ ಮಾಡಲಿ.

* * *

ಅನಂತತೀರ್ಥಕರಸ್ತುತಿಃ

ಅಶ್ವತ್ಥೋದ್ರು ರನಂತಮತ್ಯಪಿ ತಥಾ ಪಾತಾಳಯಕ್ಷೋನುಗಃ | ಪಂಚಾಶದ್ಧನುರುನ್ನತಿಶ್ಯಿವಪದಂ ಸಂಮೇಧಭೂರೇವತೀ | ಭಂ ತಾತಶ್ಚ ಸಸಿಂಹಸೇನ ನೃಪತಿರ್ಲಕ್ಷ್ಮೀಸ್ಸವಿತ್ರೀಪುರಂ | ಸಾಕೇತಂ ಚ ಸಪಾತ್ವನಂತಜಿನಪಃ ಪೀತಶ್ಚ ಕೋರಧ್ವಜಃ | ೧೪ |

* * *

ಯಸ್ಯ – ಯಾವ ಅನಂತನಾಥ ಸ್ವಾಮಿಗೆ, ದುಃ – ದೀಕ್ಷಾವೃಕ್ಷವು, ಅಶ್ವತ್ಥಃ – ಅರಳಿಯೊ, ಅನಂತಮತ್ಯಪಿ – ಅನಂತಮತಿಯಕ್ಷಿಯು, ಪಾತಾಲ ಯಕ್ಷಃ ತಥಾ – ಪಾತಾಲಯಕ್ಷನು ಅನಂತಮತಿಯಂತೆ, ಅನುಗಃ – ಸೇವಕನೊ, ಪಂಚಾಶದ್ಧನುಃ – ಐವತ್ತು ಬಿಲ್ಲು, ಉನ್ನತಿಃ – ಉತ್ಸೇಧವೊ, ಶಿವಪದಂ – ಮೋಕ್ಷಸ್ಥಾನವು, ಸಂಮೇಧಭೂಃ – ಸಂಮೇಧಪರ್ವತದ ಭೂಮಿಯೊ, ಭಂ – ನಕ್ಷತ್ರವು, ರೇವತಿ – ರೇವತಿಯೊ, ತಾತಶ್ಚ – ತಂದೆಯೂ, ಸಸಿಂಹಸೇನನೃಪತಿಃ – ಆ ಸಿಂಹೆಸೇನ ರಾಜನೊ, ಸವಿತ್ರೀ – ತಾಯಿಯು, ಲಕ್ಷ್ಮೀಃ – ಲಕ್ಷ್ಮೀಯೊ, ಪುರಂ – ಪಟ್ಟಣವು, ಸಾಕೇತಂ < – ಅಯೋಧ್ಯೆಯೊ, ಚಕೋರಧ್ವಜಃ – ಚಕ್ರ ವಾಕಪಕ್ಷಿಯೆ ಚಿಹ್ನೆಯಾಗುಳ್ಳ, ಪೀತಃ – ಹೊಂಬಂಣನಾದ, ಸೊನಂತಜಿನಚಃ – ಆ ಅನಂತತೀರ್ಥಕರಪರಮದೇವನು, ಪಾತು – ರಕ್ಷಿಸಲಿ

* * *

ಧರ್ಮ ತೀರ್ಥಕರ ಸ್ತುತಿಃ

ಚತ್ವಾರಿಶಂದ್ಧನೂಂಷ್ಯುನ್ನತಿರಪಿಸಹಿತೈಃ ಪಂಚಭಿರ್ಮಾನಸೀಕೀಂ | ನಾಯಕ್ಷೌ ಸುವ್ರತಾಂಬಾ ಜನನಭಮಥ ಪುಷ್ಯಂಚ ಸಂಮೇಧಮುಕ್ತಿಃ | ದೀಕ್ಷಾಗಸ್ಸತ್ಕಪಿತ್ಥೋ ವಿಲಸತಿಜನಕೋ ಭಾನುರಂಕಶ್ಚ ವಜ್ರಂ | ಯಸ್ಯಾ ಸೌ ಧರ್ಮನಾಥೋ ವತು ಕನಕರುಚಿಃ ರತ್ನಪುರ್ಯ್ಯಾ ಅಧೀಶಃ | ೧೫ |

* * *

ಯಸ್ಯ – ಯಾವಧರ್ಮಜಿನನಿಗೆ, ಉನ್ನತಿಃ – ಉತ್ಯೇಧವು, ಸಹಿತೈಃ – ಕೂಡಿದಂತ, ಪಂಚಭಿಃ — ಐದುಗಳೊಡನೆ, ಚತ್ವಾರಿಂಶದ್ಧನೊಂಷಿ – ನಾಲ್ವತ್ತು ಬಿಲ್ಲುಗಳು, ಮಾನಸೀ – ಮಾನಸಿಯು, ಕಿಂನಾ – ಕಿನ್ನರನು, ಯಕ್ಷೌ – ಯಕ್ಷಿಯಕ್ಷರು, ಅಂಬಾ – ತಾಯಿಯು, ಸುವ್ರತಾ – ಸುಪತ್ರತೆಯು, ಜನ ನಭಂ – ಜನ್ಮನಕ್ಷತ್ರವೊ, ಪುಷ್ಯಂ – ಪುಷ್ಯವು, ಸಂಮೇಧಮುಕ್ತಿಃ – ಸಂಮೇಧ ಪರ್ವತದಲ್ಲಿ ಮೋಕ್ಷವು. ದೀಕ್ಷಾಗಃ ದೀಕ್ಷಾವೃಕ್ಷವು, ಸತ್ಕಪಿತ್ಥಃ – ಬೇಲವೊ, ಭಾನುಃ – ಭಾನುರಾಜನು, ಜನಕಃ – ತಂದೆಯಾಗಿ, ವಿಲಸತಿ – ಪ್ರಕಾಶಿಸುತ್ತಾನೊ, ಅಂಕಶ್ಚ – ಚಿಹ್ನೆಯು, ವಜ್ರಂ – ವಜ್ರವೊ, ರತ್ನ ಪುರ್ಯ್ಯಾ – ರತ್ನಪುರಿಗೆ, ಅಧೀಶಃ – ಸ್ವಾಮಿಯಾದ, ಕನಕರುಚಿಃ – ಸುವರ್ಣ ಕಾಂತಿಯುಳ್ಳ, ಧರ್ಮನಾಥ – ಧರ್ಮಜಿನನು, ಅವತು – ರಕ್ಷಿಸಲಿ |

* * *

ಶಾಂತಿ ತೀರ್ಥಕರ ಸ್ತುತಿಃ

ಐರಾಂಬಾ ಕನಕಾ ಭರುಕ್ಚ ಭರುಣೀ ಭಂಹಾಸ್ತಿನಂ ಪತ್ತನಂ ೦ ಭೂಜೋ ನಂದಿ ಕುಜೋ ಧ್ವಜಶ್ಚ ಹರಿಣಸ್ಸಂಮೇಧಜಾ ನಿರ್ವ್ವೃತಿಃ | ಚತ್ವಾರಿಂಶದಥೋ ಧನೂಂಷಿಪರಿಮಾಣಂ ವಿಶ್ವಸೇನಃ ಪಿತಾ | ಯಸ್ಯಾ ಸೌ ಗರುಡೇಶ್ವರೋ ವತು ಜಿನಶ್ಯಾಂತಿರ್ಮಹಾ ಮಾನಸೀಟ್ | ೧೬ |

* * *

ಅರ್ಥ | ಯಸ್ಯ – ಯಾವ ಶಾಂತಿಜಿನನಿಗೆ, ಅಂಬಾ – ತಾಯಿಯು, ಐರಾ – ಐರಾದೇವಿಯೊ, ಕನಕಾಭರುಕ್ – ಚಿನ್ನದ ಕಾಂತಿಯಂತಕಾಂತಿಯೊ, ಭರಣೀಭಂ – ಭರಣೀ ನಕ್ಷತ್ರವೊ, ಪತ್ತನಂ – ಪಟ್ಟಣವು, ಹಸ್ತಿನಂ – ಹಸ್ತಿನನಗರವೊ, ಭೂಜಃ – ದೀಕ್ಷಾವೃಕ್ಷವು, ನಂದಿಕುಜಃ – ನಂದಿವರ್ಧನಗಿಡವೊ, ಧ್ವಜಶ್ಚ – ಚಿಹ್ನೆಯು, ಹರಿಣಃ – ಹುಲ್ಲೆಯೊ, ನಿವೃರ್ತಿಃ – ಮೋಕ್ಷವು, ಸಂಮೇಧಜಾ – ಸಂಮೇಧಪರ್ವತದಲ್ಲಿ ಹುಟ್ಟಿದ್ದೋ, ಪರಿಮಾಣಂ – ಉತ್ಸೇಧವು, ಚತ್ವಾರಿಂಶದ್ಧನೂಂಷಿ – ನಾಲ್ವತ್ತು ಬಿಲ್ಲುಗಳೊ, ಪಿತಾ – ತಂದೆಯು, ವಿಶ್ವಸೇನಃ – ವಿಶ್ವಸೇನ ರಾಜನೊ, ಗರುಡೇಶ್ವರಃ – ಗರುಡ ಯಕ್ಷಸ್ವಾಮಿಯಾದ, ಮಹಾಮಾನಸೀಟ್ – ಮಹಾಮಾನಸೀ ಯಕ್ಷಿಗೆ ಸ್ವಾಮಿಯಾದ, ಜಿನಃ – ಕರ್ಮ್ಮ ಶತ್ರುವನ್ನು ಜಯಿಸಿದಂತ, ಶಾಂತಿಃ – ಶಾಂತಿತೀರ್ಥಕರನು, ಅವತು – ರಕ್ಷಿಸಲಿ

* * *

ಕುಂಥುತೀರ್ಥಕರ ಸ್ತುತಿಃ

ತಾತಃ ಶ್ರೀಸೂರಸೇನೋ ವಿಲಸತಿ ಕಮಲಾಖ್ಯಾ ಸವಿತ್ರೀ ಧ್ವಜೋಜೋ | ಜನ್ಮರ್ಕ್ಷಂ ಕೃತ್ತಿಕಾಂಗ ದ್ಯುತರಪಿ ಕನಕಾಭಾಪುರಂ ಹಾಸ್ತಿನಾಖ್ಯಂ | ತ್ರಿಂಶಚ್ಚಾಪಾಶ್ಚ ಪಂಚೊನ್ನತಿರಪಿ ತಿಲಕೋ ದ್ರುಶ್ಚ ಸಂಮೇಧಮುಕ್ತಿ | ರ್ಯಸ್ಯಾಸೌ ಕುಂಥುರವ್ಯಾತ್ತ್ರಿಜಗದಪಿಜಯಾ ಯುಕ್ತ ಗಂಧರ್ವ ಯಕ್ಷೇಟ್ | ೧೭ |

* * *

ಅರ್ಥ | ಯಸ್ಯ – ಯಾವ ಕುಂಥು ಜಿನನಿಗೆ, ತಾತಃ – ತಂದೆಯು, ಶ್ರೀಸೂರಸೇನಃ – ಸೂಸೇನ ರಾಜನೊ, ಕಮಲಾಖ್ಯಾ – ಕಮಲಾಯೆಂಬ ಹೆಸರುಳ್ಳ, ಸವಿತ್ರೀ – ತಾಯು, ವಿಲಸತಿ – ಹೊಳೆಯುತ್ತಾಳೊ, ಧ್ವಜಃ – ಚಿಹ್ನೆಯು, ಅಜಃ – ಆಡೊ, ಜನ್ಮರ್ಕ್ಷಂ – ಜನ್ಮ ನಕ್ಷತ್ರವು, ಕೃತ್ತಿಕಾ – ಕೃತ್ತಿಕೆಯೊ, ಅಂಗದ್ಯುತಿರಪಿ – ಶರೀರಕಾಂತಿಯೂ ಕೂಡ, ಕನಕಾಭಾ – ಚಿನ್ನದಕಾಂತಿಯುಳ್ಳದ್ದೊ, ಪುರಂ – ಪಟ್ಟಣವು, ಹಾಸ್ತಿನಾಖ್ಯಂ – ಹಾಸ್ತಿನವೆಂಬ ಹೆಸರುಳ್ಳದ್ದೊ, ಉನ್ನತಿಃ – ಉತ್ಸೇಧವು, ಪಂಚ – ಐದು, ಅಪೀಚ – ಮತ್ತು, ತ್ರಿಂಶಚ್ಚಾಪಾಃ – ಮುವತ್ತು ಬಿಲ್ಲುಗಳೊ, ದ್ರುಶ್ಚ – ದೀಕ್ಷಾ ವೃಕ್ಷವು, ತಿಲಕಃ – ತಿಲಕವೊ, ಸಂಮೇಧಮುಕ್ತಿಃ – ಸಂಮೇಧ ಪರ್ವತದಲ್ಲಿ ಮುಕ್ತಿಯೊ, ಜಯಾಯುಕ್ತ ಗಂಧರ್ವಯಕ್ಷೇಟ್ – ಜಯಾಯಕ್ಷಿಯೊಡನೆ ಕೂಡಿದ ಗಂಧರ್ವಯಕ್ಷನಿಗೆ ಸ್ವಾಇಯಾದ, ಅಸೌಕುಂಥುಃ – ಈ ಕುಂಥುಜಿನನು, ತ್ರಿಜಗದಪಿ – ಮೂರು ಲೋಕವನ್ನೂ ಕೂಡ, ಅವ್ಯಾತ್ – ರಕ್ಷಿಸಲಿ | ೧೭ |

* * *

ಅರತೀರ್ಥಕರಸ್ತುತಿಃ

ತಾತೋ ಭಾತಿ ಸುದರ್ಶನ ಸ್ತರು ರಥಾಮ್ರೋ ಭಂ ಧ್ವಜೋ | ಮೀನಂ ಕಾಂಚನ ರುಕ್ಪುರಂ ಗಜಪುರಂ ಮಾತಾ ಸುಮಿತ್ರಾ ಸತೀ | ಮಾನಂ ತ್ರಿಂಶದಥೊಃ ಧನುಂಷಿ ಶಿವಭೂ ಸ್ಸಂಮೇಧ ನಾಮಾ ಗಿರಿ | ರ್ಯಸ್ಯಾಸೌ ವಿಜಯೇಶ್ವರೋವತು ಮಹೇಂದ್ರೇಶೋರನಾಥೋ ಜಿನಃ | ೧೮ |

* * *

ಅರ್ಥ | ಯಸ್ಯ – ಯಾವ ಅರಸ್ವಾಮಿಗೆ, ಸುದರ್ಶನಃ – ಸುದರ್ಶನ ರಾಜನು, ತಾತಃ – ತಂದೆಯಾಗಿ, ಭಾತಿ – ಪ್ರಕಾಶಿಸುತ್ತಾನೊ, ತರುಃ – ದೀಕ್ಷಾವೃಕ್ಷವು, ಆಮ್ರಃ – ಮಾವೊ, ಭಂ – ನಕ್ಷತ್ರವು, ರೋಹಿಣೀ – ರೋಹಿಣಿಯೊ, ಧ್ವಜಃ – ಚಿಹ್ನೆಯು, ಮೀನಂ ಮೀನೊ, ಕಾಂಚನರುಕ್ – ಚಿನ್ನದಕಾಂತಿಯಂತೆ ಕಾಂತಿಯೊ, ಪುರಂ – ಪಟ್ಟಣವು, ಗಜಪುರಂ ಗಜಪುರವೊ, ಮಾತಾ – ತಾಯಿಯು, ಸತೀ – ಪತಿವ್ರತೆಯಾದ, ಸುಮಿತ್ರಾ – ಸುಮಿತ್ರಾದೇವಿಯೊ, ಶಿವಭೂಃ – ಮುಕ್ತಿಭೂಮಿಯು, ಸಮೇಧನಾಮಾ – ಸಂಮೇಧವೆಂಬ ಹೆಸರುಳ್ಳ, ಗಿರಿಃ – ಬೆಟ್ಟವೊ, ವಿಜಯೇಶ್ವರಃ – ವಿಜಯಾ ಯಕ್ಷಿಗೆ ಸ್ವಾಮಿಯಾದ, ಮಹೇಂದ್ರೇಶಃ – ಮಹೇಂದ್ರಯಕ್ಷನಿಗೆ ಅಧಿಪತಿಯಾದ, ಜಿನಃ – ಜಯಶಾಲಿಯಾದ, ಅರನಾಥಃ – ಅರಸ್ವಾಮಿಯು, ಅವತ್ತು – ರಕ್ಷಿಸಲಿ |

* * *

ಮಲ್ಲಿತೀರ್ಥಕರಸ್ತುತಿಃ

ಕುಂಭಃ ಕುಂಭಃ ಪಿತಾಂಕಃ ಪುರಮಥ ಮಿಥಿಲಾಂಬಾ ಪ್ರಜಾವತ್ಯಶೋಕ | ಶ್ಚೈತ್ಯದ್ರುಸ್ವರ್ಣ ವರ್ಣಾ ತನುರಥಪರಿಮಾವಿಂಶತಿಃ ಪಂಚಚಾಪಾಃ | ಅಶ್ವಿನ್ಯರ್ಕ್ಷಂ ಕುಬೇರಶ್ಚರಣಪರಿಣತೋ ಭಾತಿ ಸಂಮೇಧ ಮುಕ್ತಿ | ರ್ಯಸ್ಯಾ ಸೌ ಮಲ್ಲಿನಾಥೋವತು ಜಗದಪರಾದೇರ್ಜಿತಾಯಾ ಅಧೀಶಃ | ೧೯ |

* * *

ಅರ್ಥ | ಯಸ್ಯ – ಯಾವ ಮಲ್ಲಿಸ್ವಾಮಿಗೆ, ಕುಂಭಃ – ಕುಂಭರಾಜನು, ಪಿತಾ – ತಂದೆಯೊ, ಕುಂಭಃ – ಕಲಶವು, ಅಂಕಃ – ಚಿಹ್ನೆಯು, ಪುರಂ – ಪಟ್ಟಣವು, ಮಿಥಿಲಾ – ವಿಥಿಲೆಯೊ, ಅಂಬಾ – ತಾಯಿಯು, ಪ್ರಜಾವತೀ – ಪ್ರಜಾವತೀದೇವಿಯೊ, ಚೈತ್ಯದ್ರುಃ – ದೀಕ್ಷಾ ವೃಕ್ಷವು, ಅಶೋಕಃ – ಅಶೋಕವೊ, ತನು – ಶರೀರವು, ಸ್ವರ್ಣವರ್ಣಾ – ಚಿನ್ನದ ಕಾಂತಿಯುಳ್ಳದ್ದೊ, ಪರಿಮಾ – ಉತ್ಸೇಧವು, ವಿಂಶತಿಃ – ಇಪ್ಪತ್ತು. ಆಥ – ಅನಂತರ, ಪಂಚ – ಐದು, ಚಾಪಾಃ – ಬಿಲ್ಲುಗಳೊ, ಅಶ್ವಿನ್ಯರ್ಕ್ಷಂ – ಅಶ್ವಿನೀ ನಕ್ಷತ್ರವೊ, ಕುಬೇರಃ – ಕುಬೇರಯಕ್ಷನು, ಚರಣಪರಿಣತಃ – ವಾದನಮ್ರನಾಗಿ, ಭಾತಿ – ಪ್ರಕಾಶಿಸುತ್ತಾನೋ, ಸಂಮೇಧಮುಕ್ತಿಃ – ಸಂಮೇಧ ಪರ್ವತದಲ್ಲಿ ಮುಕ್ತಿಯೊ, ಅಪರಾರ್ದೇರ್ಜಿತಾಯಾಃ – ಅಪರಾಜಿತಾ ಯಕ್ಷಿಗೆ, ಅಧೀಶಃ – ಸ್ವಾಮಿಯಾದ, ಮಲ್ಲಿನಾಥಃ – ಮಲ್ಲಿಸ್ವಾಮಿಯು, ಜಗತ್ – ಲೋಕವನ್ನು ಅವತು ರಕ್ಷಿಸಲಿ | ೧೯ |

* * *

ಮುನಿಸುವ್ರತ ತೀರ್ಥಕರ ಸ್ತುತಿಃ

ಯಕ್ಷೌ ತೌ ಬಹುರೂಪಿಣೀ ಚ ವರುಣೋಗಶ್ಚಂಪಕೋ ಮುಕ್ತಿಭು | ಸ್ಸಂಮೇಧ ಶ್ಯ್ರಮಣೋಭ ಮುನ್ನತಿ ರಥೋಕೋದಂಡಕಾ ವಿಶಂತಿಃ | ಪದ್ಮಾವತ್ಯಭಿಧಾಂಬಿಕಾ ಸರಸಿಜಂ ಚಿಹ್ನಂ ಸುಮಿತ್ರಃ ಪಿತಾ | ಯಸ್ಯಾ ಸಾವ ಸಿತೋಸ್ತು ರಾಜಗೃಹರಾಣ್ನ ಸ್ಸುವ್ರತೇಶಃ ಶ್ರಿಯೈ | ೨೦ |

* * *

ಅರ್ಥ | ಯಸ್ಯ – ಯಾವ ಮುನಿಸುವ್ತ ಸ್ವಾಮಿಗೆ, ಬಹುರುಪಿಣೀಚ – ಬಹುರೂಪಿಣಿಯೂ, ವರುಣಃ – ವರುಣನು; ಯಕ್ಷೌ – ಯಕ್ಷೀ ಯಕ್ಷರೋ, ಅಗಃ – ದೀಕ್ಷಾವೃಕ್ಷವು, ಚಂಪಕಃ – ಸಂಪಿಗೆಯೊ, ಮುಕ್ತಿ ಭೂಃ – ಮೋಕ್ಷಭೂಮಿಯು, ಸಂಮೇಧಃ – ಸಂಮೇಧಪರ್ವತವೊ, ಭಂ – ನಕ್ಷತ್ರವು; ಶ್ರಮಣಃ – ಶ್ರಮಣವೊ, ಉನ್ನತಿಃ – ಉತ್ಸೇಧವು; ವಿಂಶತಿಃ ಕೋದಂಡಕಾಃ – ಇಪ್ಪತ್ತುಬಿಲ್ಲುಗಳೊ, ಪದ್ಮಾವತ್ಯಭಿಧಾ – ಪದ್ಮಾವತಿಎಂಬ ಹೆಸರುಳ್ಳ, ಅಂಬಿಕಾ – ತಾಯೊ, ಸರಸಿಜಂ – ತಾವರೆಯು, ಚಿಹ್ನೆಂ – ಗುರುತೊ, ಸುಮಿತ್ರಃ – ಸುಮಿತ್ರ ರಾಜನು, ಪಿತಾ – ತಂದೆಯೊ, ಅಸಿತಃ – ಕಪ್ಪಾದ, ರಾಜಗೃಹರಾಟ್ – ರಾಜಗೃಹಪಟ್ಟಣಕ್ಕೆ ಅಧಿಪತಿಯಾದ, ಸುವ್ರತೇಶಃ -ಮುನಿಸುವ್ತಸ್ವಾಮಿಯು; ನಃ – ನಮ್ಮ, ಶ್ರೀಯೈ – ಸಂಪತ್ತಿಗೋಸ್ಕರ, ಅಸ್ತು – ಆಗಲಿ | ೨೧ |

* * *

ನೇಮಿತಿರ್ಥಕರ ಸ್ತುತಿಃ

ವಂಶೋದ್ರುಃ ಕಂಬುರಂಕೋ ವಿಲಸತಿ ಶಿವದೇವ್ಯಂಬಿಕಾರ್ಕ್ಷಂಚ ಚಿತ್ರಾ | ಮುಕ್ತೇಭೂರೂರ್ಜಯಂತೋ ದಶಧನುರುದಯೋ ಭಾತಿ ಸರ್ವಾಹ್ಣಯಕ್ಷಃ | ಯಕ್ಷೀಕೂಷ್ಮಾಂಡನೀರುಗ್ಘನಜಿದಥಪುರಂ ಶೌರಿಪೂರ್ವಂ ಪುರಂವೈ | ಯಸ್ಯಾಸೌ ನೇಮಿನಾಥೋ ಜಲಧಿವಿ ಜಯಜಃ ಪಾಥುನೋ ನಾಥಬಂಧುಃ | ೨೨ |

* * *

ಯಸ್ಯ – ಯಾವ ನೇಮಿಸ್ವಾಮಿಗೆ, ದ್ರುಃ – ದೀಕ್ಷಾವೃಕ್ಷವು, ವಂಶಃ – ಬಿದರೊ; ಅಂಕಃ – ಚಿಹ್ನೆಯು, ಕಂಬುಃ – ಶಂಖವೊ, ಅಂಬಿಕಾ – ತಾಯಿಯಾದ, ಶಿವದೇವೀ – ಶವಿದೇವಿಯು, ವಿಲಸತಿ – ಹೊಳೆಯುತ್ತಾಳೊ, ಯಕ್ಷಂಚ – ನಕ್ಷತ್ರವೂ ಕೂಡ, ಚಿತ್ರಾ – ಚಿತ್ತಯೋ, ಮುಕ್ತೇಃ – ಮೋಕ್ಷದ ಭೂಃ – ಭೂಮಿಯು, ಊರ್ಜಯಂತಃ – ಉಜ್ಜಂತಗಿರಿಯೊ, ಉದಯಃ – ಉತ್ಸೇಧವು, ದಶಧನುಃ – ಹತ್ತುಬಿಲ್ಲೊ, ಸರ್ವಾಹ್ಣ ಯಕ್ಷಃ – ಸರ್ವಾಹ್ಣ ಯಕ್ಷನು, ಭಾತಿ – ಪ್ರಕಾಶಿಸುತ್ತಾನೊ, ಯಕ್ಷೀ – ಯಕ್ಷಿಯು, ಕೂಷ್ಮಾಂಡಿನೀ – ಕೂಷ್ಮಾಂಡಿನೀದೇವಿಯೊ, ರುಕ್ – ಕಾಂತಿಯು, ಘನಜಿತ್‌ಮೇಘವನ್ನೆ ಜಯಿಸುವಂಥಾದ್ದೊ, ಶೌರಿಪೂರ್ವಂ ಪುರಂ – ಶೌರಿಪುರವು, ಪುರಂ – ಪಟ್ಟಣವೊ, ಜಲಧಿವಿಜಯಜಃ – ಸಮುದ್ರ ವಿಜಯರಾಜನ ಮಗನಾದ, ನಾಥ ಬಂಧುಃ – ನಾಥವಂಶಕ್ಕೆ ಬಂಧುವಾದ, ಅಸೌನೇಮಿನಾಥಃ – ಈನೇಮೀಶ್ವರಸ್ವಾಮಿಯು, ನಃ – ನಮ್ಮನ್ನು, ಪಾತು ರಕ್ಷಿಸಲಿ | ೨೨ |

* * *

ಪಾರ್ಶ್ವತೀರ್ಥಂಕರಸ್ತುತಿಃ

ಸರ್ಪೋಂಕೋ ಜನಕ ಸ್ಸುಸೇನ ನೃಪತಿಃ ಮಾತಾ ಸತೀ ಬ್ರಾಹ್ಮಿಲಾ | ಪದ್ಮಾವತ್ಯಥ ಯಕ್ಷಿಣೀ ಧವತರು ಸ್ಸಂಮೇಧಜಾನಿರ್ವೃತಿಃ | ಜನ್ಮರ್ಕ್ಷಂತು ವಿಶಾಖಿಕಾ ನವಕರಾ ಮಾನಂ ತು ಕಾಶೀಪುರೀ | ಯಸ್ಯಾಸೌ ಧರಣೇಶ್ವರೋ ಹರಿತಭಃ ಪಾರ್ಶ್ವೋಜಿನಃ ಪಾತು ನಃ | ೨೩ |

* * *

ಯಸ್ಯ | ಯಾವ ಪಾರ್ಶ್ವನಾಥಸ್ವಾಮಿಗೆ, ಅಂಕಃ – ಚಿಹ್ನೆಯು, ಸರ್ಪಃ – ಹಾವೋ, ಜನಕಃ – ತಂದೆಯು, ಸುಸೇನನೃಪತಿಃ – ವಿಶ್ವಸೇನನು ಮಹಾರಾಜನೊ, ಮಾತಾ – ತಾಯು, ಸತೀ – ಪತಿವ್ರತೆಯಾದ, ಬ್ರಾಹ್ಮಿಲಾ – ಬ್ರಾಹ್ಮಿಲಾದೇವಿಯೊ, ಯಕ್ಷಿಣೀ-ಯಕ್ಷಿಯು ಪದ್ಮಾವತೀ – ಪದ್ಮಾವತಿಯೊ, ಧವತರುಃ – ಕಗ್ಗಲೀಮರವೊ, ಸಂಮೆಧಜಾ – ಸಂಮೇಧಪರ್ವತದಲ್ಲಿ ಹುಟ್ಟಿದ. ನಿರ್ವೃತಿಕಃ – ಮೋಕ್ಷವೊ, ಜನ್ಮರ್ಕ್ಷಂತು – ಜನ್ಮನಕ್ಷತ್ರವು, ವಿಶಾಖಿಕಾ – ವಿಶಾಖಾನಕ್ಷತ್ರವೊ, ಮಾನಂತು – ಉತ್ಸೇಧವಾದರೂ, ನವಕರಾಃ – ಒಂಭತ್ತುಮೊಳವೊ, ಪುರೀ – ಪಟ್ಟಣವು ಕಾಶೀ – ಕಾಶಿಯೊ ಧರಣೇಶ್ವರಃ – ಧರಣೇಂದ್ರ ಯಕ್ಷನಿಗೆ ಸ್ವಾಮಿಯಾದ. ಹರಿತಭಃ – ಹಸರುಕಾಂತಿಯುಳ್ಳ ಪಾರ್ಶ್ವಃ -= ಪಾರ್ಶ್ವನಾಮಕನಾದ, ಜಿನಃ – ತೀರ್ಥಂಕರನು, ನಃ – ನಮ್ಮನ್ನು, ಪಾತು – ರಕ್ಷಿಸಲಿ | ೨೩ |

* * *

ಶ್ರೀವರ್ಧಮಾನ ಸ್ವಾಮಿ ಸ್ತುತಿಃ

ಖ್ಯಾತಂ ಕುಂಡಪುರಂ ಪುರಂ ಜನನ ಭಂ ಸ್ವಾತೀತು ಸಿಂಹಧ್ವಜಃ | ಸಾಲೋದ್ರುಃ ಪ್ರಿಯಕಾರಿಣೀ ಚ ಜನನೀ ಪಾವಾಪುರೇ ನಿರ್ವೃತಿಃ | ಉತ್ಸೇಧಃ ಕರಸಪ್ತಕಂ ಕನಕ ಭಾಕ್ಸಿದ್ಧಾಯಿನೀ ಸೇವಕಾ | ಮಾತಂಗೋಪಿ ಚ ಯಸ್ಯ ವೀರ ಜಿನಪಂ ಸಿದ್ಧಾರ್ಥ ಜಂ ತಂ ಭಜೇ | ೨೪ |

* * *

ಯಸ್ಯ – ಯಾವ ವರ್ಧಮಾನಸ್ವಾಮಿಗೆ, ಪುರಂ – ಪಟ್ಟಣವು, ಖ್ಯಾತಂ – ಪ್ರಸಿದ್ಧವಾದ, ಕುಂಡಪುರಂ – ಕುಂಡಪುರವೊ, ಜನನಭಂ – ಜನ್ಮನಕ್ಷತ್ರವು, ಸ್ವಾತೀ – ಸ್ವಾತಿಯೊ, ಸಿಂಹಧ್ವಜಃ – ಸಿಂಹಚಿಹ್ನೆಯುಳ್ಳವನೊ, ದ್ರುಃ – ದೀಕ್ಷಾವೃಕ್ಷವು, ಸಾಲಃ – ಧೂಪದಮರವೊ, ಜನನೀ – ತಾಯಿಯು, ಪ್ರಿಯಕಾರಿಣೀ – ಪ್ರಿಯಕಾರಿಣೀದೇವಿಯೊ, ಪಾವಾಪುರೇ – ಪಾವಾಪುರದಲ್ಲಿ, ನಿರ್ವೃತಿಃ – ಮೊಕ್ಷವೊ, ಉತ್ಸೇಧಃ – ಔನ್ನತ್ಯವು, ಕರಸಪ್ತಕಃ – ಏಳೆ ಮೊಳವೊ, ಕನಕಭಾಃ – ಸುವರ್ಣಕಾಂತಿಯೊ, ಸೇವಿಕಾ – ಯಕ್ಷಿಯು, ಸಿದ್ಧಾಯಿನೀ – ಸಿದ್ಧಾಯಿನಿದೇವಿಯೊ, ಸಿದ್ಧಾರ್ಥಜಂ – ಸಿದ್ಧಾರ್ಥರಾಜಪುತ್ರನಾದ ತಂ ವೀರಜಿನಪ – ಆ ವರ್ಧಮಾನಸ್ವಾಮಿಯನ್ನು, ಭಜೇ – ಸೇವಿಸುತ್ತೇನೆ | ೨೪ | ಶ್ರೀ ಶ್ರೀ ಶ್ರೀ

ಇತಿ ಚತುರ್ವಿಂಶತಿ ತೀರ್ಥಕರ ಸ್ತೋತ್ರಂ ಸಂಪೂರ್ಣಂ

* * *