ಶ್ರೀಮನ್ನಿರ್ವೃತಿವನಿತಾ | ಕೋಮಳಮುಖತಿಳಕನಮಳಗುಗಣನಿಳಯಂ || ಚಾಮೀಕರಸಮದೇಹಂ | ಪ್ರೇಮದಿನೆಮಗೀಗೇಮುಕ್ತಿಯಂಪುರುದೇವಂ || ೧ || ಎಮಗೀಗೆವಿಪುಳಸುಖಮಂ | ಸಮನಸವಂದ್ಯರ್ಮ್ಮನೋಜಮದಕರಿಸಿಂಹರ್‌ || ಕ್ರಮಕರಣರಶಿತಭೋದರ್ | ಸಮಸ್ತಸರ್ವ್ವಜ್ಞನಿರುಪಮಾನಂತಸುಖರ್ || ೨ || ಪರಮಾತ್ಮನನನುಪಮನಂ | ದುರಿತಾರಿಯನಿತ್ಯಪೂರ್ವನಂಶಾಶ್ವತನಂ || ಧರಿ ಯಿಸಿಮನದೊಳ್‌ಪೇಳ್ವೇಂ | ಪರಮಾಗಮಸಾರಮಂಮನೋಮುದದಿಂದಂ || ೩ || ಹಿತಮಲ್ಲದುದಕ್ಕಂಜುವೆ | ಹಿತಮಬಯಸುತ್ತಮಿರ್ಪ್ಪೆಯದರಿಂನಿನಗಾಂ || ಹಿತಮಲ್ಲದುದಂಕೆಡಿಸುವಹಿತಮಂಮಾಳ್ಪುದನೆಪೇಳ್ವನೊಲುವಡೆಭವ್ಯಂ || ೪ || ಕೇವಳಬೋಧನಮತದಿಂ | ಜೀವಂಕೇಳ್ತ್ರಿಃಪ್ರಕಾರದಿಂವರ್ತ್ತಿಸುಗುಂ || ಭಾವಕರಪ್ಪ ವಿಶಿಷ್ಟರ್ | ಭಾವಿಸೆ ಬಹಿರಂತರಾತ್ಮಪರಮಾತ್ಮತೆಯಂ || ೫ || ತನುಮೊದಲಾದ ವನೆಲ್ಲಂ | ಮನದೊಳ್ತಾನಾತ್ಮನೆಂಬ ವಿಭ್ರಮಯುಕ್ತಂ || ಜಿನಮಾರ್ಗ್ಗಬಾಹ್ಯನಾತಂ | ಗನುಪಮಸುಖ ಮಾಗದವನೆಕೇಳ್ಬಹಿರಾತ್ಮಂ || ೬ || ದುರಿತಸಮೂಹದಿನಗಲುವೆ | ದುರಿತಂಗಳುವಮಪ್ಪಸಕಳಭಾವದಿನಗಲ್ವೇಂ || ಪರಮಾತ್ಮನೆ ನಾನೆಂಬೀ | ವರಭಾವನೆಯುಳ್ಳನಂತರಾತ್ಮನಮೋಘಂ || ೭ || ರಾಗಾದಿಭಾವದೊಳ್‌ದ್ರಾಗಾದಿಗಳಿಂದ ಮಷ್ಟಕಮ್ಮ್ದೊಳವರಿಂ || ದಾಗುತ್ತಮಿರ್ಪ್ಪದೇಹದೊ | ಳಾಗಳುಮೊಂ ದಾ ನಿರಾಕುಳಂ ಪರಮಾತ್ಮಂ || ೮ || ನಿರಘಂಶಾಶ್ವತನಭವಂ | ಪರಮಾತ್ಮಂ ಜ್ಞಾನರೂಪನುತ್ತಮಸೌಖ್ಯಂ || ಪರಮೇಷ್ಠಿಶಾಂತನರ್ಹಂ | ನಿರುಪಮನಧಿಕಂ ನಿರಾಮಯಂರ್ದ್ವಂದ್ವಂ || ೯ || ವೃ || ಜರೆಮರಣವಿದೂರಂನಿರ್ಮಳಂನಿರ್ವಿಕಲ್ಪಂ | ಸುರನರಭುಜಗೇಂದ್ರಸ್ತುತ್ಯನಾದ್ಯಂತಹೀನಂ || ಪರಮನಧಿಕವೀರ್ಯ್ಯಂ ಶಂಕರಂತತ್ವಸಾರಂ | ಹರನಧಿಕಚರಿತ್ರಂನಿರ್ವ್ವಿಶಂಕಂಮುನೀಂದ್ರಂ || ೧೦ || ನರದೇಹದೊಳಿರ್ದ್ದಾತ್ಮನ | ನಾನೆಂದುಂನಾರಕಾಂಗಿನಾರಕನೆಂದುಂ || ತಿರಿಕಶರೀರದೊಳಿರ್ದ್ದುಂತಿರಿಕಂತಾನೆಂದು ಬಗೆಗುಮಾಬಹಿರಾತ್ಮಂ || ೧೧ || ಸುರದೇಹದೊಳಿರ್ದ್ದಾತ್ಮಂ | ಸುರನೆಂದುಂನಿರುತದಿಂದಮವರಿಂಭಿನ್ನಂ || ನಿರುಪಮನಘಕುಲರಹಿತಂ | ಜರೆಮರಣವಿದೂರನಮಲ ಬೋಧಸಮೇತಂ || ೧೨ || ಎನ್ನಧನವೆನ್ನಪುತ್ರರಿ | ದೆನ್ನಯಗೃಹ ವೆನ್ನವಸ್ತುವಾಹನವೆನುತಂ || ತನ್ನ ನಿಜಾತ್ಮನನರಿಯದೆ | ಮಂನಿಸುಗುಂಮೂಢಮತಿಯೊಳೊಂದಿದಜೀವಂ || ೧೩ || ಆಂಕರಿಕ ನೆನಾಂ ಶ್ವೇತನೆ | ನಾಂಕುಲಜನೆನಾಂ ಧನಾಢ್ಯನಾಂದೊಳ್ಳಿಗನೆಂ | ಬಾಂಕರಮಂತಾನಾರ್ಪ್ಪಂ | ತಾಂಕರಮತಿಶುದ್ಧನೆಂಬ ಬಗೆಯಿಲ್ಲದರಂ || ೧೪ || ರಾಗದ್ವೇಷಂಗಳೊಳಿಂ | ತಾಗಳುಮತವರಿಯದೊವಿದುವರ್ತ್ತಿಸುತಿರ್ಕ್ಕುಂ || ರಾಗದ್ವೇಷದ ದೆಶೆಯಿಂ | ನೀಗದುಸಂಸೃತಿಯೆನಿಪ್ಪಬಗೆಯಿಲ್ಲದವಂ || ೧೫ || ಎನಿತೊಳವು ಕರ್ಮ್ಮದಿಂದಂ | ಜನಿಯಿಸಿದವುದೇಹಿಗಳ್ಗೆವರ್ತ್ತನೆಗಳ್ಕೇ || ಳ್ಮನದೊಳ್‌ಬಗೆಯಂ ತಾಳ್ಗುಗು | ಮನಿತುಮನಾತ್ಮಂಗಡೆಂದುಬಹಿರಾತ್ಮಜನಂ || ೧೬ || ಜಿನನಾಥನನರಿಯದನುಂ | ಜಿನನಾಥನಮಾರ್ಗದಲ್ಲಿರುಚಿಯಿಲ್ಲದನುಂ || ಜಿನನಾಥನಂಗೆರಗದನುಂ | ಘನಮಿಥ್ಯದೃಷ್ಟಿಯವನೆತಾಂಬಹಿರಾತ್ಮಂ || ೧೭ || ವ || ದುರಿತಸಮೂಹಮಂತಳೆದುತತ್ಕೃತಮಾಗುವದ್ವೇಷಜಾತಿಸಂ | ವರಮೆನಿಸಿರ್ದ್ದ ದುಃಖಜಲ ಸಂಭೃತಮಪ್ಪ ಭವಾಂಬುರಾಶಿಯೊ || ಳ್ತಿರುತಕ್ಕುಮಾವುದತಿಸುಂ ದರಮಪ್ಪ ಸುಬೋಧಮೊಂದರಿಂ | ವರಜಿನಮಾರ್ಗ್ಗದಿಂಬಗೆವೊಡಂತದು ತಾಂಬಹಿರಾತ್ಮಸಂಕುಲಂ || ೧೮ || ದುರಿತಂಗಳರೂಪಿನೊಳಂ | ಪರಮ ನಿಜಾತ್ಮ ನೊಳಮಖಿಳಭಾವಂಗಳೊಳಂ || ವಿರಹಿತವಿಭ್ರಮನಾವಂ | ಪರಿಕಿಸಲಿನ್ನಂತರಾ ತ್ಮನಾತಂನಿರುತಂ || ೧೯ || ಉ || ಆವುದು ಕರ್ಮ್ಮದಿಂ ಪೊರೆಯದಂತನನನ್ಯಜನಕ್ಕೆ ಪೇಳುಮಿ | ನ್ನಾವುದು ಬೋಧರೂಪಮದನನ್ಯರಪಕ್ಷದಿ ಕೇಳ್ದುಮರ್ತ್ಥಿಯಿಂ || ಪಾವುದು ಸೌಖ್ಯವಮಾವುದರೋಳ್‌ಬಗೆ ಯಂಸ್ಥಿರಮಾಗಿಮಾಳ್ಕುಮಿಂ | ನಾವುದುಮೂರ್ತ್ತಮಂತದನೆಭಾವಿಕುಮತ್ತವನಲ್ತೆಸಜ್ಜನಂ || ೨೦ || ವಿಸದೊಳ್ಸ ಮಾನಮಪ್ಪೀ | ವಿಸಯಂಗಳನೆಯ್ದೆ ಬಿಟ್ಟುನಿರ್ವ್ವೇಗತೆಯಿಂ || ದಸಧರ್ಮ್ಮಮ ನಾಂ ಧರಿಯಿಸಿ | ವಿಸದಮಹಾಪರಮದೇವನಂ ಭಾವಿಸುವೇಂ || ೨೧ || ಪರಮಾತ್ಮನಾವುದೊಂದದು || ನಿರುತಂತಾನಪ್ಪೆನೆಂನರೂಪಾವುಗರಿಂ || ಪರಮಾತ್ಮ ರೂಪನೆನುತಂ | ಸುರುಚಿರಮತಿಯಪ್ಪನಿಂದ ಭಾವಿಸುತಿಕ್ಕುಂ || ೨೨ || ಆನಪ್ಪಡನಘನೆಂಬೀ | ಧ್ಯಾನ ನಿರ್ವ್ವಾಣಹೇತು ವೆಂದುನಿಜಾತ್ಮನ || ಧ್ಯಾನ ದೊಳೆಕೂಡಿನೆಗಳತ್ತೇನುಂ ಚಿಂತಿಸುವನಲ್ಲಪರಪರಿಣತೆಯಂ || ೨೩ || ತಂನಂತಾಂತಂನಂದಂ | ತನ್ನೊಳು ನಿಂದಾವನೋರ್ವರಾಧಿಸುವಂ || ತನ್ನಂ ಮನೆಯ್ದಲು ಕಂಡೆನ್ನಂ ಶುದ್ಧಾಂತರಾತ್ಮನೆನಿಕುಂ ನಿರುತಂ || ೨೪ || ಪರಮಾತ್ಮನ ಭಾವನೆಯಿಂ | ಪರಮಾಗಮ ಕಾರ್ಯ್ಯಮೆಲ್ಲಮಂಪಲಕಾಲಂ || ಧರಿಯಿ ಸುವನಲ್ಲಮನದೊಳ್‌ | ಧರಿಯಿಸುವದೆವಚಕಾಯದೊಳುಧರಿಯಿಸುಗುಂ || ೨೫ || ಭವಸಂಭವಹೇತುಗಳಂ ಸುವಿದಿತಮಾಗರಿದುಜೈನಮಾರ್ಗಕ್ರಮದಿಂ || ದವುಬೇರೆಂನಿಂದೆಂಬೀ | ಭುವನನುತಂಗಂತರಾತ್ಮವೆಸರೆಸದಿಕ್ಕುಂ || ೨೬ || ಆನಪ್ಪೊಡಘೆವಿಹೀನನತೆ | ತಾನಪ್ಪೊಡೆಕರ್ಮ್ಮಂ ಜನಿತಮೀಯೊ ಡಲೆನುತಂಜ್ಞಾನಿ ಯದರೆಲ್ಲಾಮೋಹಮ | ನೇನುಂಪೊರ್ದಿಸದೆನೆಗಳ್ಗುಮಾತ್ಮೋನ್ನತಿಯೊಳ್ || ೨೭ || ಕಾಣೌಪಡುತಿರ್ಪ್ಪುವೆಲ್ಲಂ | ಕಾಣಲ್ತಾವರಿಯವೆಂನಹಷೋನ್ನತಿಯಂ || ಕಾಣುತ್ತಿಪ್ಪಾತ್ಮನೊಳಾಂ | ಮಾಣದೆ ಚ್ಚುತ್ತವಿಪ್ಪೆನೆಂಬಂ ಸುಜನಂ || ೨೮ || ವಿನುತದೃಗಬೋಧಸೌಖ್ಯದಿ | ನನುಪಮ ಮಾಗಿರ್ದ್ದ ತಂನ ನಿಜರೂಪಮನಿಂ || ತನುನಯದಿಂದರಿದಾತನೆ | ಜಿನಮತದಿಂದಂತರಾತ್ಮ ನೆಂಬಂ ನಿರುತಂ || ೨೯ || ಮುನ್ನೆಂನಾತ್ಮನನರಿಯದೆ | ಮನ್ನಿಸಿ ಪುತ್ರಾದಿ ಜನರನೆನ್ನವರೆನುತಂತಿ ನ್ನೆಗಮಘವಶದಿಂದಂ | ಬನ್ನವ ನಾನೆಯ್ದೆ ಕೆಟ್ಟೆನೆಂಬಂ ಸುಜನಂ || ೩೦ || ತನ್ನ ಶರೀರಂ ಕೆಟ್ಟೊಡೆ | ಮನ್ನಿಸನಾಂಕೆಟೆನೆಂದುವಿಭ್ರಮರಹಿತಂ || ತನ್ನ ವ್ರತಮುಂ ಕೆಟ್ಟೊಡೆ | ಮನ್ನಿಪನಿಂತಾನು ಕಟ್ಟೆನೆಂದರಿದೊಡೆಯಂ || ೩೧ || ನಾನಲ್ಲಂದುಃ ಕುಲಜನು | ನಾನಲ್ಲಂಕ್ಷತ್ರಿಯಾದಿಜಾತಿಸಮುತ್ಥಂ || ನಾನಲ್ಲಂ ಪಂಡಿತನುಂ | ನಾನಲ್ಲಂ ಬಾಲವೃದ್ಧಯಟ್ವನರೂಪಂ || ೩೨ || ಯನ್ನನಿಜಾತ್ಮನನರಿಯದೆ | ಮುನ್ನಂಸಂಸಾರದಲ್ಲಿ ತೊಳಲ್ದುದು ಸಾಲ್ಗಿಂ || ನೆನ್ನ ನಿಜಾತ್ಮನನೆನ್ನಿಂ | ದೆನೊಳು ನಾಂ ಬಿಡದೆ ನಿಂತು ಭಾವಿಸುತಿರ್ಪ್ಪೆಂ || ೩೩ || ವೃ || ಅರಿದುಸಮಸ್ತದೋಷ ಮನಘೋದ್ಬವ ಮಂಸದಸದ್ವಿಭೇದದಿಂ | ದರಿದುನಿಜಾತ್ಮತ್ವ ಮುಮನಂತತಿಶುದ್ಧ ಮೆನಿಪ್ಪಭಾವದೊಳ್‌ || ನೆರದುನಿಜಾತ್ಮತ್ವಮುಮ ನಹರ್ನ್ವಿಶಮರ್ತ್ಥಿಯಿಂ ಭಾವಿಸಿರ್ಪ್ಪವಂ | ಪರಿಗುಮಘಂ ಗಳಂ ಬಗೆದುನೋಳ್ಪಡವನುಗ್ಗಡಿವಂತರಾತ್ಮಕಂ || ೩೪ || ಕೂಡದಘಕುಲ ದೊಳೆಂದುಂ | ಕೂಡದೆದೇಹದೊಳುಮೊಂದಿಯೊಂ ದುವನಲ್ಲಂ || ಮಾಡಿದಗುಣ ಗಣದಿಂದಂ | ನೋಡಿಮನಂ ಪಿಂಗದವನೆ ತಾಂ ಬಹಿರಾತ್ಮಂ || ೩೫ || ಕಡೆಯಿಲ್ಲದಕಾಣ್ಕೆಯೊಳುಂ | ಕಡೆಯಿಲ್ಲದುಸಖದಪೇರ್ಮ್ಮೆ ಯೊಳಗೀಪರಮಂ || ಕಡೆಯಿಲ್ಲದಬೋಧದೊಳುಂ | ಕಡೆಯಿಲ್ಲದಧೈರ್ಯ್ಯಗುಣದೊ ಳಂನೆರದಿರ್ಪ್ಪಂ || ೩೬ || ರಹಿತರಸವರ್ಣ್ನ ಗಂಧಂ | ರಹಿತಸ್ಪರ್ಶನನಮೂರ್ತ್ತ ನಕ್ಷಯನನಘಂ || ರಹಿತಕಲಷಂಜಿನೇಂದ್ರಂ | ರಹಿತಭಯಂ ರಹಿತಕೋಪನಭವಂ ಪರಮಂ || ೩೭ || ನರ ನಾರಕ ಪುರಷಸ್ತ್ರೀ | ಸುರನಸುರಂ ಪೇಡಿ ಮೂಕ ಬಂಡಂ ಕಿತವಂ || ಸಿರಿವಂತನರಸನೆಂಬಿವು | ನಿರುತದಿನಲ್ಲಂ ನಿಜಾತ್ಮನಮ ಲನಮೂರ್ತ್ತಂ || ೩೮ || ಜಲಚರಮುಂ ಖಗಚರಮುಂ | ಸ್ತಲಚರಮುಂಸ್ಥಾವರಂಗ ಳುಂ ತ್ರಸಗಣಮುಂ || ಖಲಕರ್ಮ್ಮಜಮಪ್ಪುದರಿಂ | ಮರಣಜರಾಜನ ನಮವರೊಳೆಂದುಂ ಪೊರ್ದ್ದಂ || ೩೯ || ಅಗಲ್ಪಂ ಸಂಸ್ಥಾನಂಗಳಿ | ನಗಲ್ದಂ ಮಾರ್ಗಣೆಗಳಿಂ ಗುಣಸ್ಥಾನಕದಿಂ || ಅಗಲ್ದಂ ಜೀವಸಮಾನೆಯಿ | ನಗಲ್ದಂ ಸಂಹನನದಿಂದಮಾತ್ಮಂ ನಿಜದಿಂ || ೪೦ || ಕೂಡಂ ಕಷಾಯದೊಳ್ಕೇ | ಳ್ಕೂಡಂ ನವನೋಕಷಾಯದೊಳ್ನಿಶ್ಚಯದಿಂ || ಕೂಡಂ ಮಿಥ್ಯಾದಿಗಳೊ | ಳ್ಕೂಡಂ ರಾಗಾದಿದೋಷಕುಲದೊಳ್ಪರಮಂ || ೪೧ || ಪಿಂಗಿದನಘದಿಂದಾತ್ಮಂ | ಪಿಂಗಿದನೀಬ್ರಾಹ್ಮಣಾದಿಜಾತಿಗಳಿಂದಂ || ಪಿಂಗಿದನೊಡ ಲ್ಗಳಸಿಕ್ಕಿಂ | ಪಿಂಗಿದನಘಜನಿತಮಪ್ಪರಾಗಾದಿಗಳಿಂ || ೪೨ || ಪಿಂಗಿದಮೂರ್ತ್ತೆತೆ ಯಿಂದಂ | ಪಿಂಗಂಸಮ್ಯಕ್ತ್ವಮಾದಿಯಾಗುಣ ದಿಂದಂ || ಪಿಂಗಂವರಸುಖದಿಂದಂ | ಪಿಂಗಂಸ್ವದ್ರವ್ಯ ಮಾದಿಯೊಪ್ಪೊಳುಗುಣದಿಂ || ೪೩ || ವೃ || ಭವಮರಣವಿಮುಕ್ತಂ ಕೇವಲಜ್ಞಾನರೂಪಂ | ಸುವಿದಿತನಘದೂರಂಶುದ್ಧನಾದ್ಯಂತಹೀನಂ || ಪ್ರವಿಮಲಸುಖಯುಕ್ತಂ ಶಾಶ್ವತಂ ಯೋಗಿಗಮ್ಯಂ | ಶಿವಸುಖಮನೆ ಬೇಳ್ಪಂ ನೋಳ್ಪಡೀಯಂದಮಾತ್ಮಂ || ೪೪ || ತೊರೆದು ಬಹಿರಾತ್ಮರೂಪಂ | ನೆರದುವಿಶುದ್ಧಾಂತರಾತ್ಮ | ನೊಳು ಮುದದಿಂದಂ || ಮರೆಯದೆ ಭಾವಿಸಪರಮನ ನರಿಯದುಪೋದಲ್ಕೆಕರ್ಮ್ಮವೆಂದರ್ವ್ವಿಬುಧರ್ || ೪೫ || ಪರಮಾತ್ಮನನುಳಿದಾವಂ ಪರವಸ್ತುಗಳಲ್ಲಿನಿಲುಗುಮವನತಿಮೂರ್ಖಂ || ಪರಮಾತ್ಮನನರಿದಾವಂ | ಪರಮಾತ್ಮನೊಳೊಂದಿನಿಲುಗುಮವನತಿಶಾಂತಂ || ತವಂ || ೬೪ || ತನ್ನಂದ ಮಲ್ಲದಿರ್ದ್ದುವ | ನೆನ್ನಂದಮನುತ್ತಬಗೆವವಂದುರ್ಜ್ಜನನಿಂ || ತನ್ನಂದವನರಿದಾವಂ | ನನ್ನೊ ಳುಮೆಚ್ಚುತ್ತಮಿಕ್ಕುಮವನತಿಸುಜನಂ || ೪೭ || ಎನಗಿವರಾನಿವರ್ಗೆಂಬೀ | ಮನಮಂತಾಳ್ದಿರ್ಪ್ಪನಲ್ತೆಬಗೆವಡೆಮೂಢಂ || ತನುಮೊದಲಾದನವೆಲ್ಲಂ || ಮನದಿಂಬೇರೆಂವವೆಂಬನಕ್ಕುಂಜ್ಞಾನೀ || ೪೮ || ಮಳಹೇತುಗಳಂಮನದೊಳು | ತಳದಿರ್ಪ್ಪಂಲೋಕದೊಳಗೆಕಷ್ಟನೆನಿಕ್ಕುಂ || ಖಳಕರ್ಮ್ಮಮೊಂದದಂತಿರೆ | ವಿಳಸದ್‌ಶುತ್ಮನಲ್ಲಿನೆಗಳ್ವಂಶಿಷ್ಟಂ || *** **** ***** || ೪೯ || ಅಂಗಾದಿ ದ್ವಿತಯಂಗಳ | ಪಿಂಗುಗೆಯಂ ಮಾಡದಾತನೆ ಜ್ಞಾನಿಗಡಾ || ಪಿಂಗಿಸಿ ಸಹಜನಿಜಾತ್ಮಾ | ಲಂಗನಮಂ ಮಾಡಿದಾತನಕ್ಕುಂ ಜ್ಞಾನೀ || ೫೦ || ತಂನ ನಿಜಾತ್ಮನ ಸುಖದೊಳು | ತಂನಂ ಕೂಡದನಭೋಗಿಯಕ್ಕುಂ ನಿರುತಂ || ತಂನಾತ್ಮನೊಳನುಭವಮಂ | ತಂನಿಂದಂ ಮಾಡಿದವನೆಭೋಗಿಯನಿಕ್ಕುಂ || ೫೧ || ಮನಮೊಲಿದಾತ್ಮನೊಳಾತ್ಮನ | ನನುಭವಮಂ ಮಾಡಿ ವಿಷಯಸು ಖದೊಳುಮುದಮಂ || ಮನದೊಳ್‌ತಾಳ್ದದಭವ್ಯಂ | ಮುನಿಜನವಂದ್ಯಂಸರಸ್ವತೀ ಮುಖತಿಳಕಂ || ೫೨ || ಹೇಯಮಮುಂಪರಮೋಪಾ | ದೇಯಮುಮಂಬೇರು ಮಾಡಿಪೇಳಲುಬಲ್ಲಂ || ನ್ಯಾಯಯುತನಾಗಿನೆಗಳ್ದಿ | ರ್ದಾಯತಿಪತಿಲೋಕದೊಳಗೆ ಪಂಡಿತನಕ್ಕುಂ || ೫೩ || ಬಿಟ್ಟುಪರಿಗ್ರಹಭರಮಂತೊಟ್ಟುಗುಣಾಭರಣಮಂನಿಜಾ ತ್ಮಸ್ಥಿತಿಯಂ || ನಿಟ್ಟಿಸಿನೆಗಳ್ವಮುನೀಂದ್ರ | ಪುಟ್ಟಂ ಭವಜಳಗಳಲ್ಲಿಯಕ್ಕುಂ ಮುಕ್ತಂ || ೫೪ || ಆವಂ ಪರಮ ಧ್ಯಾನ ಸ | ರೋವರದೊಳುಮುಳುಗಿಮುದದಿನೋ ಲಾಡುಗುವಂ || ಸಾವುಂಪುಟ್ಟುಮೆನಿಪ್ಪೀ | ನೋವಂತಳದಿರ್ದ್ದಜಲ್ಮಮಳಮಂತೊ ಳಗುಂ || ೫೫ || ಸ್ವಾಧೀನಂಸುಖಮೆಂಬ ಪ | ರಾಧೀನಂ ದುಃಖಮೆಂಬನುಡಿಯ ದುತಥ್ಯಂ || ಸ್ವಾಧೀನಮೆತಂನಾತ್ಮಾ | ರಾಧನೆಯಿಂನಿತ್ಯಸೌಖ್ಯಮಪ್ಪುದರಿಂದಂ || ೫೬ || ಭವದೊಳುಮುಂನಂಪಡೆಯದ | ಸುವಿಸುದ್ಧನಿಜಾತ್ಮನಲ್ಲಿಮುದಮಂತಳಿಗುಂ || ಪ್ರವಿಮಲಮತಿಯಪ್ಪಾತಂ | ಭವತಿನವೆ ಪ್ರೀತಿಯೆಂಬವಾಕ್ಯಕ್ರಮದಿಂ || ೫೭ || ಪಲವಡೆಯೊಳುಪಲವೊಂದಂ | ಕಲಿವುದು ತಂನಾತ್ಮನಲ್ಲಿನೆಲಸದಮುಂನಂ || ನೆಲಸಲುಬಲ್ಲಡೆತಂನೊಳು | ಪಲವೊಂದಂಕಲಿವೆನೆಂಬ ಬುದ್ಧಿಯನುಳನೀಂ || ೫೮ || ಸಂಕಲ್ಪವಿಕಲ್ಪಂಗಳ | ಬಿಂಕದಸಿಲ್ಕಿಲ್ಲದಾತನೆಯ್ದುಗುಸುಖಮುಂ || ೫೯ || ಕನಕಂಮಂಣೊಳಗಿರ್ದ್ದುಂ | ಕನಕತ್ವಮನೆಂತುಬಿಡದೆವರ್ತ್ತಿಸುತಿರ್ಕ್ಕುಂ | ಘನಕರ್ಮ್ಮದೊಳೊಂದಿರ್ದ್ದುಂ | ಘನಕರ್ಮ್ಮವಸಕ್ಕೆಸಲ್ವನಂತಮಹಿಮಾತ್ಮಂ || ೬೦ || ನೀರೊಳಗೆಪುಟ್ಟಿಪದ್ಮಂ | ನೀರೊಳಂತಾಂಮುಟ್ಟದಂತೆನಿಜಶುದ್ಧಾತ್ಮಂ || ಸಾರಮಣಿಮಲ್ಲದೀ ಸಂ | ಸಾರದೊಳೊಂದಿರ್ದ್ದುಮೊಂದನಮಳಿನಮೂರ್ತಂ || ೬೧ || ರಾಗಾದಿಭಾವಮೊಂದಲು | ರಾಗಾದಿಗಳಿಂದಮಾಗಿವರ್ತ್ತಿಕುಮಾತ್ಮಂ || ರಾಗಾದಿ ವಸ್ತುವಂದಲು | ರಾಗಾದಿಗಳಿಂದಮಪ್ಪ ಪಳುಕಿನತೆರದಿಂ || ೬೨ || ಮರದಳುಕಿಚ್ಚುಂ ಕಲ್ಲೊಳು | ಸುರುಚಿರಕಳಧೌತಮಂಸುಪಾಲೊಳುನೆಯ್ಯುಂ || ಪೊರದಪ್ಪಂತಿರೆಜೀವಂ | ಪೊರದಿಕ್ಕುಂ ದೇಹದಲ್ಲಿ ಕವಿಜನಮಿತ್ರಂ || ೬೩ || ಸ್ವಪರದ್ರವ್ಯಾದಿಗಳಿಂ | ದಪವಗತನಪ್ಪಂತೆ ಕಲ್ಲಿನಿಂಕಳಧೌತಂ || ಸ್ವಪರದ್ರವ್ಯಾದಿಗಳಿಂ | ದಪಗತನಕ್ಕುಂನಿಜಾತ್ಮನುಂನಿಜದಿಂದಂ || ೬೪ || ಪೆಪ್ಪಿಟ್ಟುಕಡದುಪಾಲೊಳು | ತುಪ್ಪಂಬಡೆವಂತೆ ಯೋಗಿತನ್ನೊಳುಮುದಕಡದು ಪಾಲೊಳು | ತುಪ್ಪಂ ಬಡೆವಂತೆ ಯೋಗಿ ತನ್ನೊಳು ಮುದದಿಂ || ದೊಪ್ಪಿರ್ದ್ದು ತಂನರೂಪಿಂ ದೊಪ್ಪುವಸೌಖ್ಯ ಯಮನೆ ಪಡೆಗು ತಂಣನೆ ತಳಿಗುಂ || ೬೫ || ಕಡಿದೊಡೆ ಮರನೊಳುಕಿಚ್ಚಂ | ಪೊಡೆವರೆ ಪೊಸಿನಲ್ಲಿ ಪರವರಂತಿರೆ ತಂನಂ || ಪಡೆವರ್ನ್ನಿಜಶುದ್ಧಾತ್ಮನೊ | ಳೆಡೆಯುಡುಗದೆ ಭಾವಿಸಲ್ಕೆ ಪಡೆಯರ್ಪ್ಪರದಿಂ || ೬೬ || ತಂನನೆಭಾವಿಸಿಮುಕ್ತಿಯ | ನುನ್ನತಮಪ್ಪುದನೆ ಪಡೆಯವರೆಂದಡೆ ನಾಕಾ || ದ್ಯುನ್ನತಪದಮಂ ಪಡೆಯದೆ | ಪೊನ್ನುಳ್ಳಡೆ ಪಡೆಯಲರಿಯವಸ್ತುಗಳೊಳಗೇ || ೬೭ || ಧ್ಯಾನಂಕಿಚ್ಚಾಗೆ ಲಸ | ದ್ಜ್ಞಾನಂ ತಿದಿಯಾಗೆ ವೃತ್ತಮೌಷಧಮಾಗಲು || ಜ್ಞಾನಿಸುಡುಗಾತ್ಮಲೋಹಮ | ನೇನುಂ ಮಳಮೊಂದುನಿಲ್ಲದಂತಿರೆಮುದದಿಂ || ೬೮ || ರಾಗದ್ವೇಷಗುಣಾನ್ವಿತ | ರಾಗಲು ಕಾತಂಗೆ ತತ್ವಮಾಗದು ಗಮ್ಯಂ || ರಾಗದ್ವೇಷದ ಭರಮಂ ಬೇ ಗಂಬಿಟ್ಟೆಸೆಪ ಮುನಿಗೆ ಗಮ್ಯಂ ನಿರುತಂ || ೬೯ || ರಮಿಯಿಸುಗಾತ್ಮನೊಳಾದಂ | ಸಮತೆಯೊಳೊಂದಿರ್ದುಪರಸುಖಮಂಬೆಳ್ಪಂ || ೭೦ || ತಳೆದಂಗೆ ರಾಗ ಭರಮಂ | ವಿಳಸತ್ಶುದ್ಧಾತ್ಮರೂಪಮಾಗದುಗಮ್ಯಂ || ಬೆಳಗದಕಂನಡಿಯೊಳುಸ | ಸ್ತಿಲಕಾದ್ಯಾನ್ವಿತ್ಸಸುಶೋಭೆ ತೋರದತೆರದಿಂ || ೭೧ || ಕಡುಮುದದಿಂತಂನಾತ್ಮನೊ | ಳೆಡೆಯುಡುಗದೆ ಕಿರಿದುಪೊತ್ತುನಿಂದಡೆ ಕರ್ಮ್ಮಂ || ಕಡಿದೊಟ್ಟಿದಪುಳ್ಳಿಗಳಂ | ಮಿಡುಗುರುಸುಡವಂತೆಸುಡುಗುಕವಿಜನಮಿತ್ರಂ || ೭೨ || ನೀರುಂಪಾಲುಂ ಬೆರಸಿರೆ | ನೀರಂಬಿಟ್ಟಂತೆಹಂಸೆಪಾಲುಂಕುಡುಗುಂ || ಚಾರುಗುಣರ್ತ್ತಂಮಾತ್ಮನ | ನಾರಾಧಿಸವಂತೆದೇಹದಿಂಬೇರ್ಕೆಯ್ದಂ || ೭೩ || ಕಡುದುಃಖದಿಂದಬೆಂದುಂ | ಬಿಡದಿಕ್ಕುಂ ಜ್ಞಾನರೂಪಮಂ ಜ್ಞಾನಮಯಂ ಕಡುಗಿಚ್ಚಿನಿಂದ ಬೆಂದಂ ಬಿಡ ದಂತಿರೆ ತಂನರೂಪಂ ಕಳುಧೌತಂ || ೭೪ || ಪಿಂಗಿಸಿ ತಂನ ನಿಜಾತ್ಮನ | ನಂಗದಿನತ್ಯರ್ತ್ಥಿಯಿಂದೆ ಭಾವಿಸಿ ಕರ್ಮ್ಮಂ || ಪಿಂಗಿ ಪರಿಪಟ್ಟು ಪೋಕುಂ | ಸಿಂಗದದನಿಗಂಜಿ ಪರಿವ ಕರಿಗಳ ತೆರದಿಂ || ೭೫ || ಸುಖಮಕ್ಕುಶುದ್ಧಾತ್ಮನೊಳು | ಸುಖತಾನಕ್ಕುಮಖಿಲಪೆದದೊಳುಗುಣದಿಂದಂ || ಸುಖಮಕ್ಕುಪರದೊಳುಕೇಳು | ಸುಖತಾನಲ್ಲಿವರ್ತ್ತಿಕುಂನಿರ್ಗ್ಗುಣದಿಂದಂ || ೭೬ || ಮುನಿಪತಿಯ ಶುದ್ಧಚಿತ್ತದೊ | ಳನುಪಮಪ್ಪಾತ್ಮತತ್ವಮುದಯಿಸೆ ಬೇಗಂ || ಘನಕರ್ಮ್ಮವಜ್ರಮಳಿಗುಂದಿನಕರನು ದಯದೊಳುಕಿಡುವತಮಮಂಪೋಲ್ಕುಂ || ೭೭ || ನರಕದೊಳು ದುಃಖಮುಗ್ರಂ | ತಿರಿಕತ್ವದೊಳಂತೆ ನರರೊಳಂ ದೇವರೊಳಂಪೊರೆದಿಕ್ಕುಂಸುಖದುಃಖಂ | ಪರಮಾರ್ತ್ಥಂಮೋಕ್ಷಮೊಂದೆಸುಖ ಮಯಮಕ್ಕುಂ || ೭೮ || ಸಮಚಿತ್ತದಲ್ಲಿಕೂಡಿ | ರ್ದ್ದಮಳನಿಜಾತ್ಮೋಪಯೋಗದೊ ಳುವರ್ತ್ತಿಸುಗುಂ || ಭ್ರಮೆಯಂತಾಳ್ದುವನಲ್ಲನು | ನಮರ್ದಂಸೇವಿಸುವಪುರುಷ ನುಂಬನೆವಿಷಮಂ || ೭೯ || ಆಪಾಪಕರ್ಮ್ಮವಶದಿಂ ದಾವಾವಶರೀರದಲ್ಲಿವರ್ತ್ತಿಸು ತಿರ್ಕ್ಕುಂ || ಬಾವಿಪೊಡಾಯಾಮಾನಂ | ಜೀವಂತಾನಕ್ಕುಮಾಗಿಯುಂಪೊರೆಯ ನವಂ || ೮೦ || ಮಂಡಿತಗುಣಗಣನಪ್ಪಾ | ಪಂಡಿತಸಂಯೋಗಿಂಯಂನಿಜಾತ್ಮಸ್ಥಿತಿಯಂ || ಕಂಡನನೊಂದೆವುಕರ್ಮ್ಮಂ | ಕೆಂಡಂಗಳನೊರಲೆಮುಟ್ಟಲಾರ್ಪವೆ ಪೇಳಿಂ || ೮೧ || ತಂನಿಂಬೇರೆಂದಘಮಂ | ಮನ್ನಿಸಿ ಯೋಗಸ್ಥನಾಗಿ ವರ್ತ್ತಿಸಲಾತಂ || ಗುನ್ನತಸುಖಮಯಮಾಗುವ | ತಂನಂದಮನೆಯ್ದಿನಿಲುವುದಾವುದುಗಹನಂ || ೮೨ || ಬಿಟ್ಟತೊಡಂಬೆಯನೆಂದುಂ | ಮುಟ್ಟವುಪಣ್ಣಂತೆಬೋಧಯುತನಂಕರ್ಮ್ಮಂ || ಬಿಟ್ಟಬಳಿಕ್ಕಾತ್ಮನೊಳದು | ಮುಟ್ಟದುಗಡಮೆಂದುಪೇಳ್ದನಧ್ಯಾತ್ಮವಿದಂ || ೮೩ || ಕಡಿದೊಡಮೇಂಮುರಿದೊಡ ಮೇಂ | ನೊಡದೊಂಡಂ ಮೂಢನಪ್ಪನೀಯ ಳಿಯೊಡಲಂ || ಸುರುಚಿರಮದರೊಳು ಮೋಹಮ | ನೆಡೆಯುಡುಗದೆ ನಲಿವೆಂನೊಳೆಂಬಂ ಧನ್ಯಂ || ೮೪ || ಚಿಂತಿಸಿದೊಡೆ ವಸ್ತುಗಳಂ | ಚಿಂತಾಮಣಿಕುಡುವ ತೆರದಿನಿಜ | ಶುದ್ಧಾತ್ಮಂ || ಚಿಂತಿಸಲು ತಂನನೀಗುಮ | ನಂತಚತುಷ್ಟಯದೊ ಳೊಂದಿದರ್ಹತ್ಪದಮಂ || ೮೫ || ಎನಿತೆನಿತುಬಿಡುಗುವಿಷಯಮ | ನನಿತೆನಿತೆನಿ ಜಾತ್ಮರೂಪದೊಳುವರ್ತ್ತಿಸುಗುಂ || ತೆನಿತೆನಿತುವ ರ್ತ್ತಿಪಾತ್ಮನೊ | ಳಿನಿತನಿತಾತಂಗೆಸಾರ್ಗುಮನುಪಮಸೌಖ್ಯಂ || ೮೬ || ಬಿಡದಿರ್ದ್ದಡೆವಿಷಯಂಗಳ | ನೆಡೆಯುಡುಗದೆ ಭಾವಿಸಲ್ಕೆಬಾರದು ತಣನಂ || ಪಿಡಿದಿರ್ದ್ದುಬೆಳಲಪಂಣಂ | ಪಿಡಿಯಲ್ಕಾರ್ಪಣೆ ಸಮಂತು ಬಿಲ್ಲಂ ಪುರುಷಂ || ೮೭ || ಪೊರೆದುಂ ಕ್ರೋಧಾಧಿಗಳೊಳು | ಪರಿಣಮಿಸಂತತ್ವ ರೂಪದಿಂ ಪರಮಾತ್ಮಂ | ಪೊರೆದುಂ ಘನದಿಂ ವ್ಯೋಮಂ | ಪೊರೆಯದ ತೆರದಂತೆ ತತ್ಕೃತಾನ್ವಿತಗುಣದಿಂ || ೮೮ || ಮನದೊಳುಕಷಾಯಮುಳ್ಳಂ | ಗನಘಮೆನಿಪ್ಪಾತ್ಮತತ್ವಮಾಗದು ಗಮ್ಯಂ | ಘನಮೊಂದಿಪರ್ವ್ವಿಪುದರಿಂ | ದಿನಕರನಂತಖಿಲದೇಹಿಗಾಗದಗಮ್ಯಂ || ೮೯ || ಅಗಲ್ದುಕರ್ಮ್ಮಸಮೂಹದಿ | ನಗಲ್ದಂಜ್ಞಾನಾದಿಗುಣದಿನಕ್ಷಯನಭವಂ || ಸುಗತಿಗೆಸದಿರ್ದ್ದಮಾರ್ಗಂ | ವಿಗತಜರಾಮರಣದಿಂದನಗಲ್ದಂಶುದ್ಧಂ || ೯೦ || ಯೆಂನವಿಭಾವದಿಂದತನುವಾದುದುಮಾದೊಡೆಮೇನುಚೋದ್ಯಮೆ | ಯೆಂನ ವಿಭಾವಪೋಗಲಳಿಗುಂತನುಜೀವನನಾದಿಯೆಂಬಿದಂ || ಮಂನಿಸುಬೇರೆಮನ್ನಿಸ ದೆತೋರಲುಪಟ್ಟಪದಾರ್ತ್ಥವೆಲ್ಲಮಂ | ಭಿನ್ನಮಿದೆಂದುತೋರುವುದು ಸಮ್ಯಗ್ದೃಷ್ಟಿ ಗದೇನುಚೋದ್ಯಮೆ || ೯೧ || ಕಾರಣಮಿಲ್ಲದೇಹದೊಳಗಿರ್ದವೆನಿನ್ನಶರೀರಿಜೀವನೆ | ಕಾರಣಮಿರ್ದಪೈತಿಳಿಯಲಾಗದೆನೀಂಬಿಡುಪುಣ್ಯಪಾಪಮಂ || ಸಾರದೆಬಾಹ್ಯವ ಸ್ತುಗಳೊಳೊಂದಡೆನಿಂದಡೆನಿರ್ವಿಕಲ್ಪನಾಕಾರಮನೆ ನೀಂಬಂಣಿಸುವೆ ನಿತ್ಯನಿರಂ ಜನಬೋಧರೂಪನಂ || ೯೨ || ಸಾರೆಲೆಜೀವಚಿದ್ವಿಷಯಮಾಪರಭಾವಮಪ ತ್ತುವಿಟ್ಟುನೀಂ | ಸಾರಲಾಕಬ್ಬುನಂ ಪರುಷವೇದಿಯ ಮುಟ್ಟಲು ಹೇಮಮಾದುದೆ || ಕಾರಣಮಂತುಟೆಂದಬಗೆ ಭಾವಿಸು ನಿರ್ಮ್ಮಲಮಪ್ಪ ನಿಶ್ಚಲಾ | ಕಾರಮನೇನ ಬಣ್ಣಿಸುವೆ ನಿತ್ಯನಿರಂಜನ ಬೋಧರೂಪನಂ || ೯೩ || ಕಂನಡಿಯೆಂಬುದೊಂದುಪ್ರ ತಿಬಿಂಬವ ನೋಡಲುತೋರುತಿಕ್ಕವಾ | ಕನಂಡಿಕೊಂಕತಿದ್ದಕೆಬಲ್ದುದೆನೊಡನಿಮಿ ತ್ತಮೆಂಬುದಂ || ಬಂಣಕನಾದಿ ಮಾತನುಡಿವೈಪರಮಾತ್ಮನೀನೆಕಾರಣಂ | ನಿಂನವಿಕಲ್ಪದಿಂದೊಗೆ ದಕಂನಡಿಬೇರದುತೋರಬಲ್ಲುದೆ || ೯೪ || ತನುತನಗೆಂ ಬತನ್ವಿತನಗೆಂಬರಾಜ್ಯರಂಜ | ತನಗೆಂಬ ದರ್ಪಮನುದರ್ಪಿಯೆತಂನೊಳತಾನೆಭಾ ವಿಸಲು || ತನುತನಗಲ್ಲತನ್ವಿತನ ಗಲ್ಲದನಂತನಗಲ್ಲರಾಜ್ಯರಂಜನೆ | ತನಗಲ್ಲದೆಂದುಳಿ ದುನಿಂದುದೆಯೋಗಿಗೆಯೋಗಲಕ್ಷಣಂ || ೯೫ || ಆರೇನೆಂದೊಡಮೊಂ ದೆತಂನಮನದೊಳುಮಾನಾಪಮಾನಂಗಳುಂ | ತಾರಂ ನಿಸ್ಪೃಹ ನಿಃಕಳಂಕನೆನಿಸಲು ನಿಃಶಂಕನಾದೊಂಗೆ ಸಂಸಾರಂ || ಸಾರದುಭಾವಿಕಾಲದೆಡೆಯೊಳುಮುಂಗೆಯ್ದ ಪಾಪಕ್ರಿಯಾ | ಕಾರಂಕೆಟ್ಟುದುಜಾತರೂಪಪದದೊಳ್‌ನಿಂದಂಗದೇಂಚೋದ್ಯಮೆ || ೯೬ || ಪುಟ್ಟುದನಲ್ಲಜೀವನನಶರೀರದೊಳೆಂತುಪುಟ್ಟಿದಂ | ಕೆಟ್ಟುದನಾದಿಯೆಂ ಬನುಡಿಪಟ್ಟಿದನಪ್ಪಡೆ ಸಾವನೆಯ್ದನೆ || ನೆಟ್ಟನೆಕಂಡರಂತೆನುಡಿವೈಪರಮಾತ್ಮ ನಚಿತ್ಸ್ವರೂಪನಂ | ಪುಟ್ಟವೀರಂನಿಂನಳ ವೆತೋರಲುಬರ್ಪುದೊಬ್ರಹ್ಮವಿದ್ದೆಯಂ || ೯೭ || ತೋರಲುಬಾರದಂತದನೆ ತೋರಲು ಬಲ್ಲಡೆ ಬಲ್ಲನೆಲ್ಲವಂ | ತೋರುಗು ಬಾಹ್ಯವಸ್ತುಪರಮಾತ್ಮನನಾತ್ಮನ ಚಿತ್ಸ್ವರೂಪನಂ || ತೋರುವಶಾಸ್ತ್ರವೆಂಬಪರ ವಾದಿಗಳಂತವುಸಾಧ್ಯವಲ್ಲನಿ ತೋರಲುಕಾರೆನಿಂನಳವೆ ನಿತ್ಯ ನಿರಂಜನಬೋಧ ರೂಪನಂ || ೯೮ || ಯಿಂತುಟಿದೆಂ ದುತೋರಲಿಕೆಬಾರದುದೇಹದೊ ಳಿರ್ದಜೀವನಂ | ಚಿಂತಿಸಬಾರದೆಂದೊಡದು ಬ್ರಾಹ್ಮಣ ಕ್ಷತ್ರಿಯ ವೈಶ್ಯ ಶೂದ್ರರೆಂ | ಬಂತುಳೆತಾನಮೂರ್ತನತಿನಿರ್ಮ್ಮಲನಿಶ್ಚಲ ನೆಂದೊಡಾತ್ಮ | ನಂತುಟಿದೆಂದುಕಲ್ಪಿ ಸಲುಬಲ್ಲರೆ ನಿಶ್ಚಲನಂ ನಿಜಾತ್ಮನಂ || ೯೯ || ತನುವುಂಜೀವನುಮೊಂದೆಕಾಲದೊ ಳುತಾನುತ್ಪತ್ತಿಯಪ್ಪಲ್ಲಿಗೀ | ತನುವಿಂಜೀವನಿದೆಂಬರಲ್ಲದೊಡ್ಡದೇಂಕಾಣಲ್ ಬಕ್ಕುಮೇಜೀವನಂ || ತನುವಿಂದಂ ದಿಟವಾಯ್ತು ಜೀವಸಿರವಂತನ್ಮಾರ್ಗ್ಗದಿಂ ಸಾಧ್ಯನಾ | ತನುಮುದ್ರಾಂಕಿತನಿರ್ವಿಕಾರನಿರವಂ ಛದ್ಮಸ್ಥನೇಂಬಲ್ಲನೆ || ೧೦೦ || ಅನಲಂ ಮುನ್ನಮೊ ಭಾವಿಸಲ್ಕನಲನಿಂದು ರ್ವೀರುಹಂಮುನ್ನಮೊ | ತನುತಾಂ ಮುನ್ನಮೊನಿಶ್ಚಯಂತನುವಿನಿಂದಂಜೀವನೇ ಂಮುನ್ನಮೋ || ಕನಕಂಮುನ್ನಮೋ ನೋಳ್ಪಡಾಕನಕದಿಂಕಲ್ಮುಂನಮೋಪೇಳಿಮೆಂ | ತೆನೆತದ್ಭೇದಕನಾವನಂತವನೆತ ತ್ವಜ್ಞಾನಿಭವ್ಯೋತ್ತಮಂ || ೧೦೧ || ಯಿದುಮುನ್ನಾ ದುದೊಪುಣ್ಯಪಾಪವ ಶದಿಂದಂತಾನೆತಂನಿಂದವಾ | ದುದೊ ತಾಯಿತಂದೆಗಳತ್ತೆಣಿಂ ದಮುದಯಂ ಗೆಯ್ದತ್ತೊ ಮಿಂದ್ರಿಯೌ || ಘದಿನಾಯ್ತೊದಿಟದಿಂದಮೆಂದೆನಿ ಪವಂಗೀಜೀವನು ತ್ಪತ್ತಿಯಂ | ವಿದಿತಂ ಮಾಡಿದನಾವನಂತವನೆತತ್ವಜ್ಞಾನಿಭವ್ಯೋ ತ್ತಮಂ || ೧೦೨ || ದರ್ಶನಮುಂಸಜ್ಞಾನಮು | ಮುರುಚಾರಿತ್ರಮುಂನಿಜಾತ್ಮನೊಳಾ ದಂ || ಸ್ಥಿರಮಾದವಂಗೆ ನೆಗಳುಂ | ಪರಮಾರ್ತ್ಥಮುಮಾತ್ಮರೂಪಮಪ್ಪುದರಿಂದಂ || ೧೦೩ || ಸದಮಳನಪ್ಪನಿಜಾತ್ಮನೊ | ಳೊದವಿದವರ್ತ್ತನೆಯೊಳಿರ್ದ್ದುಬಿಟ್ಟದನಾ ವಂ || ಮದಮಾಯಾದಿಯೊಳೆಸುಗುಗು | ಮದಹಸ್ತಿಸ್ನಾನದಂದಮವನಚರಿತ್ರಂ || ೧೦೪ || ಅರಹಂತಾದಿಸುಭವ್ಯ | ರ್ಪ್ಪರಮಾತ್ಮನೊಳೆಸಗ್ರಿಮುಕ್ತಿಪಡೆದುದರಿಂದಂ || ಪರಮಾರ್ತ್ಥಕಾಂಕ್ಷೆಯಪ್ಪಂ | ಪರಮಾತ್ಮನೊಳೆಸಗುಗುಣಿಸೆಪರಪರಿಣತೆಯಂ || ೧೦೫ || ಜಾತಸ್ವರೂಪಮಪ್ಪುದು | ಭೂತಳದೊಳುಪೂಜ್ಯಮದುವೆದುರ್ಲ್ಲಭಮದರಿಂ || ಜಾತಸ್ವರೂಪನಂತಳ | ತೋರುಮಹಾಲಕ್ಷ್ಮಿಯಲ್ಲಿನೆರೆಯಲುಬೆಳ್ಪಂ || ೧೦೬ || ಮುನಿಪಡೆವ ಸುಖಮನಿಂದ್ರಂ | ವನಿತೆಯರೊಳು ಕೋಟಿ ಸಂಖ್ಯೆ ವುಳ್ಳವರೊಳುತಾ | ನನುಭವಿಸಿ ಪಡೆಯಲಾರಂ | ಮುನಿಯ ಸುಖಕ್ಕದರಿನುಪ ಮೆಯಿಲ್ಲಂಜಗದೊಳ್ || ೧೦೭ || ಸಮನಪ್ಪಂಪೊಂಗಲ್ಲೊಳು | ಸಮನಪ್ಪಂಶತ್ರು ಮಿತ್ರಸುಖದುಃಖದೊಳುಂ || ಸಮನಪ್ಪಂಗೃಹವನದೊಳು | ಸಮನಪ್ಪಂಪುಣ್ಯಪಾಪ ಗಳೊಳುಂದುಮನಮಂ || …. || ೧೦೮ || ಗಿರಿದುರ್ಗ್ಗಾದಿಗಳಲ್ಲಂ | ಶರಣಲ್ಲಿವುದೇ ಹಿಗಳ್ಗೆನಿಜಶುದ್ಧಾತ್ಮಂ || ಶರಣಕ್ಕುಂನಿಜಸುಖಮಂ | ದುತಾರಿಗಳಳಿಯದಂತೆಕಾ ವುದರಿಂದಂ || ೧೦೯ || ಪರಮಾತ್ಮನನಘಹರನಂ | ಗುರುವಚನದಿನರಿದು ನಂಬಿನೆಗಳುತ್ತಿರ್ದುಂ || ಪೊರೆವಡೆ ವಿಷಯದಭರದೊಳು | ಕುರುಡಂನುಲಿವೆಸೆ ವತೆರನನಂತದುಪೋಲ್ಕುಂ || ೧೦೦ || ವೋರಂತಿರೆಪರಮಾತ್ಮನ | ನಾರೈದದ ರಲ್ಲಿನಿಲ್ಲದಜ್ಞಾನತಯಿಂ || ಘೋರಬ್ರತದೊಳುನೆಗಳ್ದಡೆ | ನೀರಂಪೊಸೆ ದಲ್ಲಿಬೆಣ್ಣೆಯರಸುವತೆರದಿಂ || ೧೧೧ || ಸಮಚಿತ್ತಮೆಂಬಜಲದಿಂ ಸಮಸ್ತದುರಿತೌ ಘಪಂಕಮಲಕರ್ಚ್ಚಿದೆವಿ || ಕ್ರಮದಿಂತೊಳೆವಡೆದೇಹಮ | ನಮೇಧ್ಯಮಂ ಪಿಡಿದು ಪೊರೆಗತೊಳವಂತಕ್ಕುಂ || ೧೧೨ || ಲೌಕಿಕಕೂಟಮಪ್ಪುದುಂ ಲೋಕದೊಳತಿನಿಂ ದ್ಯಮವರದೆಸೆಯಿಂಕಿಡುಗುಂ || ಶ್ರೀಕರಮಾಗುವಧರ್ಮ್ಮಂ | ಶೋಕಭಯಾದ್ಯಖಿಲ ದುಃಖಸಂತತಿಸಾರ್ಗಂ || ೧೧೩ || ವ್ರತಮಿಲ್ಲದಾತಮೂರ್ಖಂ | ಹಿತಮರಿಯ ದನಧಿಕ ಮೋಹಿಬೋಧವಿಹಿನಂ || ಯುತರಾಗಂವಿಷಯಪರಂ | ಧೃತಹೀನನೆನಿಪ್ಪ ನರನೆ ಲೌಕಿಕನಕ್ಕುಂ || ೧೧೪ || ವಿಷಯದೊಳು ತೊಡರ್ದುಮುಂನಂ | ವಿಷಯಭವಾಂಬುಧಿಯ ನಡುವನೆಟ್ಟನೆತಿರಿದೈ || ವಿಷಯದಸಿಕಿಂಬಿಟ್ಟಂ | ವಿಶದಜ್ಞಾನೋಪಯೋಗಮಂ ತಳೆ ಭವ್ಯ || ೧೧೫ || ಸುವಿದಿತಪದಾರ್ಥಸೂತ್ರಂ | ಭವಭೀತಂಸಂಯಮಾಸ್ಪದಾನ್ವಿತಂಸಮಯುಕ್ತಂ || ನವನೋಕಷಾಯರಹಿತಂ | ಭವನದೊಳಕ್ಕುಂವಿಶುದ್ಧಯೋಗಕ್ಕರ್ಹಂ || ೧೧೬ || ಯೆನಿತೆನಿತುಬಿಡುಗುವಸ್ತುವ | ನನಿತನಿತಕ್ಕುಂಸಮಂತತಪಸುಧ್ಯಾನಂ || ಘನಮಕ್ಕೆನಿತೆನಿ ತೆರದಿಂ | ತನಿತನಿತೊಂದಿರ್ದಶುಭಮುಮಶುಭಮುಬೆಳಗುಂ || ೧೧೭ || ಬೋಧದಿನಕ್ಕುಂ ಮೋಕ್ಷಂ | ಬೋಧಂದರ್ಶನವಿಹೀನಮಾದೊಡಶಕ್ಯಂ || ಬೋಧಂದೃಗ್ಮಯಮಪ್ಪುದು | ಸಾಧಿಸಲಾರವುಸುವೃತ್ತಮಿಲ್ಲದೊಡಾರ್ಗಂ || ೧೧೮ || ಅಣುಮಾತ್ರಮಪ್ಪಡಂ ತಾಂ | ಪೆಣದಿಕ್ಕಾವಂಗೆರಾಗಮಾದಿವಿಭಾವಂ || ಗುಣನಿಧಿಯಪ್ಪನಿಜಾತ್ಮನೊ | ಳಣವಳಿಕೆಯವಂಗೆಕೂಡದಿನಿತೋದಿದೊಡಂ || ೧೧೯ || ಬಿಡದಿರ್ಪ್ಪಮನಮನಾ ತ್ಮನೊ | ಳೊಡಗೂಡಿರ್ದದರಿನಗಲ್ದೊಡತಿ ದುಃಖಸುಗುಂ || ಮಡುವಿನೊ ಳಾಡುವಮತ್ಸ್ಯಂ | ಮಡುವಂಬಿಟ್ಟೆಳೆಗೆಬಂದು ಮಿಡುಕುವ ತೆರದಿಂ || ೧೨೦ || ಪಲುಬೀಳದೆಮೆಯ್ಯಿತೆರಳದೆ | ತಲೆ ನಡುಗದೆ ಬುದ್ಧಿಕೆಡದೆ ಕರಣಸಮೂಹಂ || ಬಲವಳಿಯದೆ ಮುಂನಮೆ ತಾಂ | ನೆಲಸುಗೆತಂನಾತ್ಮನಲ್ಲಿ ಸುಖಮಂಬೆಳ್ಪಂ || ೧೨೧ || ಯಮರಾಜವೀರಭಟನಾ | ಕ್ರಮಮಪ್ಪವ್ಯಾಧಿಪುಟ್ಟಪೀಡಿಸದಂನಂ || ಯಮನೆಯ್ದಿಕೆಡಿಸದಂನಂ | ಯಮನಿಯಮಧ್ಯಾನಯುಕ್ತರಕ್ಕೆಮಹಾತ್ಮರೂ || ೧೨೨ || ಶ್ರೀಯುಂರೂಪುಂಸಾಖ್ಯಮು | ಮಾಯುಂಯವ್ವನಮಮಾಜ್ಞೆಯುಂಕ ಲಿತನಮುಂ || ಮಾಯಂಮಂಜಿನಪುಂಜಂ | ಶ್ರೀಯುತಶುದ್ಧಾತ್ಮರೂಪಮೆಂದರಿನಿತ್ಯಂ || ೧೨೩ || ದಾನದಿನಕ್ಕುಂಭೋಗಮ | ನೂನತಪಶ್ಚರಣದಿಂದಮ ಕ್ಕುಂಸ್ವರ್ಗಂ || ಜ್ಞಾನಯುತನಾಗಿತಂನಂ | ಧ್ಯಾನಿಸಲಕ್ಕುಂವಿನೂತಪರಮಸ್ಥಾನಂ || ೧೨೪ || ಮುನಿಪತಿದರ್ಶನಶುದ್ಧಂ | ವಿನುತ ಯಶಂಶೀಲರತ್ನನಚಳಿತಧೈರ್ಯ್ಯಂ || ಮನಸಿಜ ಮದಕರಿಸಿಂಹಂ | ವಿನಯನಿದಾನಂ ಸರಸ್ವತೀಮುಖತಿಳಕಂ || ೧೨೫ || ಭವ್ಯಜನಕುಮುದಚಂದ್ರಂ | ದ್ರವ್ಯಜ್ಞಾನೋಪಯೋಗಯುಕ್ತನತರ್ಕ್ಯಂ || ಸೇವ್ಯ ತಪಶ್ಚರಣಯುತಂ | ಸೇವ್ಯಗುಣಂ ಚಾರುಚರಿತನಭಿಜನಮಿತ್ರಂ || ೧೨೬ || ಯಮನಿಯಮಧ್ಯಾನಯುತಂ | ಸಮಚಿತ್ತಂತತ್ವಮೇದಿವೈರಾಗ್ಯಯುತಂ || ಸಮಿತಕಷಾಯಂನಿಸ್ಪೃಹ | ನಮಲಂಭವ್ಯಂಸರಸ್ವತೀಮುಖತಿಳಕಂ || ೧೨೭ || ನಿರಘರ್ಶಾಸ್ವತರಭವ | ರ್ಪರಮಾತ್ಮಜ್ಞಾನರೂಪರನುಪಮಸೌಖ್ಯ || ರ್ಪರಮಪದಸ್ಥರ್ಸಿದ್ದ | ರ್ಪರಮಪದಸ್ಥದೊಳುನಿಲಿಸುಗೆಂಮಂದಯೆಯಿಂ || ೧೨೮ || ಪರಮಜಿನೇಶ್ವರ ಮತದೊಳು | ಪರಿಕಿಸಿಸಾರಾಯಮಪ್ಪವಂಕೊಂಡುಕರಂ || ವಿರಚಿಸಿತಪ್ಪುದರಿಂದಂ | ಪರಮಾಗಮಸಾರಮಾದುದೀಕೃತಿಯಿಂದುಂ || ೧೨೯ || ವರಚಂದ್ರಕೀರ್ತಿಮುನಿಪತಿ | ವಿರಚಿಸಿದೀಗ್ರಂಥದಲ್ಲಿ ತಪ್ಪುಳ್ಳಡದಂ || ಪರಮಾಗಮವೇದಿಗಳಾ | ದರದಿಂದಂ ತಿರ್ದ್ದಿ ಪರಗುಪೇಕ್ಷಿಸವೇಡಂ || ೧೩೦ || ಇದನಾವಂ ಭಾವಿಸುಗುಂ | ಮುದದಿಂದಂಕೇಳ್ದುಮೋದು ಗುಂಕಲ್ಪಿಸುಗುಂ || ತ್ರಿದಶೇಂದ್ರಾದಿವಿಶಿಷ್ಟಾ | ಭ್ಯುದಯಮುಮಂ ಮೋಕ್ಷಪದಮುಮಂ ಪೊಡೆಗುಮವಂ || ೧೩೧ || ಶುಭಮಕ್ಕೆಶಾಂತಿಪೊರ್ದುಗೆ | ವಿಭವಂಕೈಸಾ ರ್ಗೆಧರ್ಮ್ಮದೊಳುಗೀಳ್ಕೆಮನಂ || ಶುಭಮತಿಯಿಂತೀಗ್ರಂಥಮ | ನಭಿವರ್ಣ್ನಿಸುತಿ ರ್ಪ್ಪಭವ್ಯಕೋಟಿಗೆನಿಚ್ಚಂ || ೧೩೨ || ಪರಮಾಗಮಸಾರ ಸಂಪೂರ್ಣವು

* * *