ವ || ಎನೆರತ್ನಶೇಖರನಿಂತೆಂದಂ ||

ಕಂ || ಪೇಳುವುದೊಲುವರ್ಗಂಮ | ತ್ತಾಳೋಚನೆಬಗೆದಕಾರ್ಯ್ಯಗತಿಯಂಸ್ಥಿತಿಯಂ || ಕೇಳವುದೆನುತ್ತಮವನೀ | ಪಾಲುಸುತಂಪೇಳಲಾಗಲುದ್ಯುತನಾದಂ || ೭೧ ||

ವ || ಇಲ್ಲಿಯರತ್ನ ಸಂಚಯಪುರಾಧಿನಾಥಂ ವಜ್ರಸೇನಂಗೆ ಮಗನಪ್ಪರತ್ನಶೇಖರ ನೆಂಬುದದಂ ಕೇಳ್ದಾಯೀರ್ಬ್ಬರ್ಗ್ಗಂ ಮಿತ್ರತ್ವಮಗ್ಗಳಮಾಗಿ

ವೃ || ಜಿನರಾಜಾರ್ಚನೆಯೋಳ್ಕರಂಮದಗಜೇಂದ್ರಾರೋಡದೋಳ್ಚಾರುಚಂ | ದನಗಂ ಧೋತಿರ್ಥದಿಂನಂದನವನಕ್ರೀಡಾವಿಳಾಸಂಗಳೋ | ಳ್ವನಿತಾನೂತನಗೀತನರ್ತ್ತನವಿಲೋಕ ವ್ಯಾಪ್ತಿಯೋಳ್ಪಿಂಗಿಪ | ರ್ದ್ದಿನಮಂಮನ್ಮಥರೂಪರೂರ್ಜಿತಯಶರ್ನ್ನಾನಾವಿನೋದಂ ಗಳೀಂ ||

ವ || ಅಂತೀರ್ವ್ವರಂ ದಿವಸವಾಪಾರಂಗಳಂ ಮನೋನುರಾಗದಿಂಕಳಿಪುತಿರ್ದ್ದೊ ಂದುದಿವಸಂ, ರತ್ನಶೇಖರಂ ಮೇಘವಾಹನಂಗಿಂತೆಂದಂ ||

ಕಂ || ಮೇರುನಗೊಪಮದೊಳುವಿ | ಸ್ತಾರಿಪಜಿನಮಂದಿರಂಗಳಂಪೂಜಿಸುವ || ತ್ಯಾರಂಭವೆನ್ನಮದನೊಳು | ಬೇರೂರಿಹುದಖಿಳಖಚರವಂಶಲಲಾಮಾ || ೭೩ ||

ವ || ಎನೆಮೇಘವಾಹನನಿಂತೆಂದಂ ||

ಕಂ || ಎನ್ನಯವಿಮಾನಮಂಸೌ | ಖ್ಯೋನ್ನತಮಂನೂತ್ನರತ್ನವಿಭ್ರಾಜಿತಮಂ || ಮುನ್ನೇರುವುದೆನಲವನೀ | ಶಂನಯದಿಂಮೇಘವಾಹನಂಗಿಂತೆಂದಂ || ೭೪ |

ವ || ಆನುಂಸಾಧಿತ ವಿದ್ಯನಾದಲ್ಲದೀವಿಮಾನಮನೇರುವಾತನಲ್ಲೆನೆಮೇಘವಾಹನಂ ತನ್ನಲ್ಲುಳ್ಳ ವಿದ್ಯಾಮಂತ್ರಂಗಳ ನಾತಂಗುಪದೇಶಂಮಾಡಿ ||

ಕಂ || ಉತ್ತರಸಧಾಕನಾದಂ | ಮತ್ತೆನಿಸದೆಪರಿಜನಂಗಳಂತೊಲಗಿಸಿತಾ || ನತ್ಯಧಿಕಜಮೇಘವಾಹಂ | ಮಿತ್ರಂನೋಡಲ್ಕೆಮಿನ್ನವರಾಗಲ್ವೇಡಾ || ೭೫ ||

ವ || ಮತ್ತಮಾಗಳ್ ರತ್ನಶೇಖರಂ ಧ್ಯಾನನಿಷ್ಠಾಪರನಾಗಿ ಮಂತ್ರಂಗಳಂ ಜಪಿಯಿ ಸಲವು ಐನೂರುವಿದ್ಯಗಳುಬಂದು ಮುಂದೆ ನಿಂದಿರ್ದ್ದು ಬೆಸನೇನೆಂಬುದು ಮವರ್ಗ್ಗಿಂತೆಂದಂ ||

ಕಂ || ಎರಡುವರೆದ್ವೀಪಂಗಳ | ಸುರುಚಿರಜಿನಮಂದಿರಂಗಳಂಪೂಜಿಪೆನೆಂ || ಬುರುತರಚಿತ್ತಾಹ್ಲಾದಮ | ನಿರದೀಗಳೆನೀವುಮಾಳ್ಪುದೆಂದಂಕುವರಂ || ೭೬ ||

ವ || ಅಂತೆಗೈಯ್ವೆವೆಂದಾ ವಿದ್ಯಗಳು ವಿಮಾನಮನೇರಿಸಿಕೊಂಡುಪೋಗಲೆರಡುವರೆ ದ್ವೀಪಂಗಳರ್ಹದ್ದಿಂಬಗಳಂ ಪೂಜಿಸಿ ಮತ್ತಲ್ಲಿಂಮಗುಳ್ದಾತ್ಮೀಯವಿಷಯದ ವಿಜಯಾರ್ದ್ದ ಸಿದ್ಧಕೂಟಕ್ಕೆ ಬಂದು ಜಿನರಂಪೂಜಿಸಿ ಯಾಕೂಟದ ಮುಂದಣ ರತ್ನ ಮಂಟಪದೊ ಳೀರ್ವ್ವರುಂ ಕುಳ್ಳಿರಲಾಸಮಯದೊಳಲ್ಲಿಗೆ ವಿಜಯಾರ್ದ್ಧದದಕ್ಷಿಣಶ್ರೇಣಿಯ ರಥನೂಪುರಚಕ್ರವಾಳಪುರಮನಾಳ್ವ ವಿದ್ಯುದ್ವೇಗಂಗಂಸುಖಕಾರಿಣಿಗಂಪುಟ್ಟದ ಮದನಮಂಜಾಷೆಯೆಂಬಳ್ಪಲಂಬರ್ವ್ವಿಳಾಸಿನೀಜ ನಂಬೆರಸೂ ||

ಕಂ || ಅಡಿಕೆಂದಳೀರಂತನುಲತೆ | ಯಡಕೆಯಸೊಸಿಯಂತಮಾಳದಳದೋಳ್ಕಪ್ಪಂ || ಮುಡಿಯಧರಂಪವಳಂಪ | ಣ್ಗುಡಿಯಂಗೆಲೆಖಚರರಾಜನಂದನೆಯಾಗಳ್‌ || ೭೭ ||

ವ || ಜಿನಪೂಜೆಯಂಮಾಡಲು ಸಿದ್ಧಕೂಟಕ್ಕೆ ವಂದು ಮುಂದಣಮಂಟಪದೊ ಳ್ಕುಳ್ಳಿರ್ದ ರತ್ನಶೇಖರನಂಕಂಡು ಸೋಲ್ತುವಿಹಳೆಯಾಗಿರ್ಪುದಾವೃತ್ತಾಂತಮಂ ವಿದ್ಯುದ್ವೇಗಂ ಕೇಳ್ದಲ್ಲಿಗೈತಂದು ರತ್ನಶೇಖರ ಮೇಘವಾಹನರಂ ಕಂಡವರಂನಿಜನಿವಾಸಕ್ಕೊಡಗೊಂಡು ಪೋಗಿಯಭ್ಯಾಗತಪ್ರತಿಪತ್ತಿಯಂ ಮಾಡಿಸಿ, ಮುನ್ನ ತನ್ನ ಮಗಳಂ ಬೇಡಿಯ ಟ್ಟಿದನೇಕ ವಿದ್ಯಾಧರಕುಮಾರರ್ಗ್ಗಂಜಿಸ್ವಯಂ ಬರಮಂ ಮಾಳ್ಪುದಾಮದನಮಂಜೂಷೆ ||

ಕಂ || ಅಳಿವಧುಮಿಕ್ಕಿನಪೊಗ | ಳ್ಗೆಳಸದೆನವಪಾರಿಜಾತದಲರ್ಗ್ಗೆಳಸುವವೋ || ಲ್ಕಳಸ್ತಶನಿ ಕೂರ್ತ್ತಿಕ್ಕಿದ | ಳಿಳೇಶಮಣಿಶೇಖರಂಗೆಮಾಲೆಯನಾಗಳ್ || ೭೮ ||

ವ || ಅದಂ ಕಂಡು ಸಮಸ್ತವಿದ್ಯಾಧರಲೋಕಮಕೃತಪರಾದಂಗೆಕೋಪಿಸಿ ತಮ್ಮ ತಮ್ಮ ಮಂತ್ರಿಮುಖ್ಯರಮಾತಂಮೀರಿ ಕದನೋದ್ಯೋಗಮನೆತ್ತಿಕೊಂಡಿರ್ಪುದಮಾತ್ಯರ್ವ್ಗ ಮುನ್ನಮೆ ಸಂಧಿಮಾಡಲ್ವೇಳ್ದುರತ್ನಶೇಖರನಲ್ಲಿಗೆ ಜಿನನೆಂಬದೂತನನಟ್ಟದೊಡಾತಂಬಂದು ನೃಪಕುಮಾರನಂ ಕಂಡು ಪೊಡವಟ್ಟಂತೆಂದಂ ||

ಕಂ || ಧೂಮಶಿಖಿಮುಖ್ಯವಾದಮ | ಹೀಮಂಡಲ ಖಚರರಾಜರಟ್ಟಿದರೆನ್ನಂ || ನೀಮೀಗಳೀವುದುಚಿತಂ | ಪೂಮಾಲೆಯನಿನಗೆಸೂಡಿದಬಲೆಯನರಸಾ || ೭೯ ||

ವ || ಎಂಬನುಡಿಯಂಕೇಳ್ದು ಸಿಡಿಲಧ್ಯನಿಯಂಕೇಳ್ದಸಿಂದೂರವಿರೋಧಿಯಂತೆ ಗಜರಿ ಘರ್ಜಿಸಿ ರತ್ನ ಶೇಖರಂ ಮೇಘವಾಹನನಮೊಗಮನವಳೋಕಿಸುತ್ತಲಾ ದೂತಂಗಿತೆಂದಂ ||

ಕಂ || ತಮಗೆಂತಲೆದೊರೆಯೆಂಬುದು | ಸಮನಿಸಲರಿಯದರುನಿನ್ನನೆಂತಟ್ಟದವೊ || ಲಮಿತಬಲವಾಗಿಬರವೇ | ಳ್ಸಮರಕ್ಷೋಣಿಯೊಳುಕಾಣಲಕ್ಕೆನ್ನಳವಂ || ೮೦ ||

ವ || ಎಂದುಂ ಮುಳಿಸಿನುಡಿದು ನೀನುನಿನ್ನವರಂಸಂಗ್ರಾಮಭೂಮಿಗೆಬೇಗ ಮೊಡಗೊಂಡುಬಾಯೆಂದು ದೂತನಂ ನಿರಾಕರಿಸಿ ಮರಳಿಕಳುಪಲಾತಂಬಂದು ತತ್ಸ್ವರೂಪಮಂ ವಿದ್ಯಾಧರರ್ಗ್ಗೆ ಪೇಳಲವರೆಲ್ಲಂ ಕೇಳ್ದತಿಕುಪಿತರಾಗಿ ||

ವೃ || ತುರಗಮಯಂಧರಿತ್ರಿಮದಗಂಧಮಯಂಪವನಂವಿಚಿತ್ರಪ್ರಭಾ | ಸುರಕವಚಪ್ರತಾ ನಮ ಣಿಲೋಚಿಮಯಂದೆಸೆಯಾತಪತ್ರಪಾಂ || ಡುರಮಯಮಂಬರಂಭಟಮ ಯಂಭುವನಂ ಧಿಟಮಾಗೆಬಂದುದ | ಚ್ಚರಿಮಿಗೆರತ್ನಶೇಖರನೊಳಾಂತಿರಿಯಲು ಖಚರಾದಿನಾಯಕರ್ || ೮೧ ||

ವ || ಅಂತುಬಂದೊಡ್ಡಿದ ವಿದ್ಯಾಧರಚತುರಂಗಬಲಮಂಕಂಡು ರತ್ನಶೇಖರನುಂ ಮೇಘವಾಹನನುಂ ತಮ್ಮವಿದ್ಯಾಬಲದಿಂ ಚತುರಂಗಬಲಮಂನಿರ್ಮಿಸಿ ||

ವೃ || ಪಕ್ಕರೆಯಿಕ್ಕಿಬಂದವುಹಯಂಪವಣಿಲ್ಲದೆವಾರಣಂಗಳೆ | ಕ್ಕೆಕ್ಕೆಯೊಳೆಯ್ದೆಪಂಣಿನಡೆತಂದವುಭೋರ್ಗರೆಯುತತ್ತತೇರ್ಗ್ಗಳಾ ರ್ದ್ದರ್ಕ್ಕೆವದಿಂದೆಪೂಡಿನಡೆತಂದವುವೀರಭ ಟಾಳಿಬಂದುದಂ | ದಳ್ಕದೆರತ್ನಶೇಖರನತಿಕ್ರಮದುಗ್ರಸಮಗ್ರಸೈನಿಕಂ || ೮೨ ||

ವ || ಅದಂ ನೋಡಿ ವಿದ್ಯುದ್ವೇಗಂ ತನ್ನೊಡಗೂಡಿದ ಖಚರರಾಜರಂ ಕಾಳಗಕ್ಕೆ ನಿರೂಪಿಸಲಿತ್ತಂ ರತ್ನಶೇಖರನಾತ್ಮೀಯ ಬಲದದಳನಾಯಕರ ಮೊಗಮಂ ನೋಡಿ ಕೈವೀಸೆ ||

ಕಂ || ಕರಿಕರಿಯೊಳ್ತುರಗಂಗಳು | ತುರಗಗಳೊಳುರಥವುರಥದೊಳಾಳೊಳು || ಪಿರಿದುಂ ಪೊತ್ತುಂಕಾದು | ತ್ತಿರೆಬೆಂಗೊಟ್ಟೋಡಿದತ್ತುಖೇಚರಸೈನ್ಯಂ || ೮೩ ||

ವ || ಅದಂ ಕಂಡು ವಿದ್ಯಾಧರರಾಜರೆಲ್ಲಂ ಮುನಿಸಂ ಮೊಗಕ್ಕೆತಂದು ತಮ್ಮೋಳೋ ರೋರ್ವರ ಮೂದಲಿಸಿ ಮುಟ್ಟವಂದ ರತ್ನಶೇಖರನಂ ಸುತ್ತಿಮುತ್ತುವುದಾತನುದ್ದಂ ಡಮಪ್ಪಚಾಪ ದಂಡಮಂಕೊಂಡೇರಿಸಿ, ಅಕ್ಷೂಣಬಾಣಜಾಳದಿಂ ವಿರೋಧಿ ವಿಯಚ್ಚರ ನಾಯಕರಂ ಕೆಲಂಬರಂ ಪಡಲ್ವಡಿಸಲದಂಕಂಡೂ ||

ಕಂ || ಎನಿತೊಳವುತಮ್ಮವಿದ್ಯಗ | ಳನಿತರೊಳದ್ಭುತಮನೆಸಗೆಪ್ರತಿವಿದ್ಯಗಳಿಂ || ದನಿತಂಪರಿಹರಿಸಿದನಿಂ | ದನನುಪಮಬಲರತ್ನಶೇಖರಂಗಿದಿರಾವಂ || ೮೪ ||

ವ || ಆಗಳ್ವಿಗಳಿತ ವಿದ್ಯಾಧರರಾದ ವಿದ್ಯಾಧರರಾಜರಂ ನೋಡಿ ರತ್ನಶೇಖರ ನಿಂತೆಂದಂ ||

ಕಂ || ಕುಡುವುದುನಿಮಗುಳ್ಳದುಮಂ | ಪಡೆವುದುದಯಮಂ ವಿಧೇಯರಪ್ಪುದುನಿಚ್ಚಂ || ನಡೆವುದರಿವಿಟ್ಟಗೆಂದಡೆ | ಬಿಡೆಕೈಕೊಂಡಿದುವಿಯಚ್ಚರಾಧಿಪರೆಲ್ಲಂ || ೮೫ ||

ವ || ಅಂತವರೊಡಂಬಟ್ಟು ತಮ್ಮುಳ್ಳೊಡಮೆಯಂ ಕೊಟ್ಟಾಳ್ವೆಸನಪೂಣ್ಕೆಯಂ ಪೂಣ್ದಿಪ್ಪುದವರೆಲ್ಲರಂ ಸ್ವೀಕರಿಸಿಮಹಾವಿಭೂತಿಯಿಂ ವಿದ್ಯುದ್ವೇಗನರಾಜಧಾನಿಯಂ ಪೊಕ್ಕು ಸಂಭ್ರಮದಿಂ ಮದನಮಂಜೂಷೆಯಂ ಮದುವೆಯಾಗಿ ||

ಕಂ || ಮಾವನಮನೆಯೊಳುಸುಖದಿಂ | ದಾವಗಮಿರುತರ್ದ್ದುತೆನ್ನಪಿತೃಮಾತೃಗಳಂ || ಭೂವನಿತೇಶಂನೋಳ್ಪಂ | ದಾವೇಷಮನಸ್ಕನಾಗಿತಳರ್ದನುದಾತ್ತಂ || ೮೬ ||

ವ || ಅಂತವರನೋಡಲುತ್ಸುಕಿತನಾಗಿ ಸಮಸ್ತವಿದ್ಯಾಧರರ್ವೆರಸುವಿದ್ಯುದ್ವೇಗನುಂ ತಾನುಂ ವಿಳಾಸಿನೀಜನಂಗಳುಂ ಮದನಮಂಜೂಷೆಯುಂ ವಿತ್ರನಪ್ಪ ಮೇಘವಾಹನನುಂ ಗಗನತಳಮಂಖಚ ರಮಂಡಳಿಯ ವಿಮಾನಂಗಳುವ್ಯಾಪಿಸೆ ವಿಮಾನಾರೂಢನಾಗಿ ನಡೆವಡೆಯೊಳೂ ||

ಕಂ || ಪಗಲಸಿರಿತೊರ್ವೆಮಂಡನ | ರುಗುಮಾಳಿಕೆಕೂಡಿದೆಶೆಗಳಂ ಚಿತ್ರಿಸೆಕೇ || ತುಗಳೊ ಗೆದವಭ್ರತಳದೊಳು | ಪುಗೆಮಿಳಿರೆವಿಳಾಸದಿಂದಮುಂದೈತಂದಂ || ೮೭ ||

ವ || ಅಂತುಬರ್ಪಾಗಳುತನ್ನಸುತನ ಬರವಂಮುನ್ನರಿದು, ವಜ್ರಸೇನ ಮಹಾರಾಜಂ ಪರಿವಾರಸಹಿತಂಬಂದಿದಿರ್ಗೊಂಡು ಮಗನಕಂಡು ತನಗೆರಗಿದನಂತೆಗೆದು ಬಿಗಿದು ತಕ್ಕೈಸಿಕೊಂ ಡುಪರಸಿ ಬಳಿಕಾತ್ಮೀಯ ಪುರಮ ಪೊಗುತಪ್ಪಾಗಳೂ ||

ಕಂ || ಪುರವಧುಗಳೆಲ್ಲಕೈಗೈ | ದರಸನನಿದಿರ್ಗೊಳ್ವವಿಧದೊಳೈತಂದೋರ್ವಳು || ಭರವಶದಿನೋಡಿಮದನನ | ಶರಕ್ಕೆಗುರಿಯಾಗಿನಾಡೆವಿಹ್ವಳೆಯಾದಳ್ || ೮೮ ||

ವ || ಅಂತೆಲ್ಲರುಂ ಅಚ್ಚರಿಪಟ್ಟುನೋಡಲು ನಿಜರಾಜಮಂದಿರಮಂಪೊಕ್ಕು ತಾಯಿಪಾದಕ್ಕೆರಗಿಯಿಂದುತನ್ನ ಬಳಿಯೋಳ್ಬಂದವಿದ್ಯಾಧರರ್ಗೆಲ್ಲಮುಡಲುಂ ತೊಡಲುಕೊಟ್ಟು ಕೆಲವುದಿವಸಕ್ಕೆಲ್ಲರಂಕಳುಪಿ ಸುಖದಿಂದಿರುತ್ತೊಂದು ದಿವಸಂ ರತ್ನಶೇಖರನು ಮೇಘವಾಹನನುಂ ಮದನಮಂಜೂಷೆಯೊಡನೆ ರಡುವರೆಮೇರು ಶಿಖರಾಗ್ರದಜಿನಮಂದಿರವಂದನಾನಿಮಿತ್ತರ ಪೋಗಿಯಲ್ಲಿಯ ಜಿನಮಂದಿರಂಗಳಂ ಪೂಜಿಸಯಾಬಸದಿಯ ರತ್ನ ಮಂಟಪದ ಶಶಿಕಾಂತದ ವೇದಿಕೆಯೊಳು ಕುಳ್ಳಿರ್ಪುದಾಸಮಯದೊಳು ||

ಕಂ || ಚಾರಣಯುಗ್ಮಂನಭದಿಂ | ದೋರಂತೈತರಲುಕೂಡಿನೋಳ್ಪರಕಣ್ಗ || ಳ್ಕೋರೈಸುತ್ತಿರೆಮಿಂಚಿನ | ಸಾರಮಿದೇನೆಂದುನಾಡೆಬಿಡೆಬೆದರುವಿನಂ ||೮೯ ||

ವ || ಅಂತು ನೋಡಲವನೀತಳಕ್ಕವತರಿಸಿರ್ದಮಿತಗತಿ ಜಿತಾರಿಗಳೆಂಬ ಚಾರಣರ್ಗೆ ಭಕ್ತಿಯಿಂವಂದಿಸಿ ಧರ್ಮ್ಮಶ್ರವಣಾನಂತರಂ ರತ್ನಶೇಖರನಿಂತೆಂದಂ, ಎನ್ನಪುಣ್ಯಕ್ಕೆಕಾರಣ ಮಂ ಸಖನಮೇಲೆಯುಂ ಎನ್ನರಸಿಮದನ ಮಂಜೂಷೆಯ ಮೇಲೆಯನಗತಿಸ್ನೇಹಮಾದ ಕಾರಣಮಂ ಬೆಸಸಿಮೆನಲವರಿಂತೆಂದರೀ ಜಂಬೂದ್ವೀಪದ ಭರತಕ್ಷೇತ್ರದಾರ್ಯ್ಯಾಖಂಡ ದಮೃಣಾಳನಗರಕ್ಕೆ ಶಂಭವನಾಥ ತೀರ್ಥಾವತಾರದಲ್ಲಿ ಜಿತಾರಿಯೆಂಬರಸನಾತನರಸಿ ಕನಕಮಾಲೆಯವರ್ಗೆ ವಿಪ್ರ ಶೃತಕೀರ್ತ್ತಿಯೆಂಬ ಪುರೋಹಿತನಾತನವಲ್ಲಭೆ ಬಂದು ಮತಿಯವರ್ಗ್ಗೆ ಮಗಳು ಪ್ರಭಾವತಿಯೆಂಬಳು ರಾಜಪುತ್ರಿಯರೊಡಗೂಡಿ ಜೈನಪಂಡಿತೆಯ ಸಮೂಪದೊಳೋದಿಕಳಾನಿಧಿಯಾಗಿರ್ಪುದೊಂ ದುದಿವಸಂ ನಿಜಮಂದಿರದ ನಂದನವನದೊಳು ಬಂದುಮತಿಯುಂ ಶ್ರುತಕೀರ್ತಿಯುಂ ಕ್ರಿಡಿಸುತ್ತಿರ್ದುಪುಳಿನತಳದ ತೆಳಿರ್ವಾಸಿನಮೇಲೆ ನಿದ್ರಾಮುದ್ರಿತಲೋಚನೆಯಾಗಿರೆ ಶ್ರುತಕೀರ್ತ್ತಿಕುಸು ಮಾಪಚಯನಿಮಿತ್ತಂ ತಿರುಗುತ್ತಮಿರಲಿತ್ತಲಾಕೆಯ ಮೈಯ್ಯಪರಿಮಳಕ್ಕೆಳಸಿ ಮಿಷಮವಿಷೋರಗಂಕೊಂಬುದುಂ ವಿಗತಜೀವೆಯಾಗಿರ್ದಳನ್ನೆಗಂ, ಶೃತಕೀರ್ತ್ತಿಬಂದುತೊಡೆವೆಯ್ದೆಚ್ಚರಿಸೆ ಆಕೆನುಡಿ ಯದೆ ದೀರ್ಘನಿದ್ರೆಯೊಳಿರೆ ನೋಡಿತಳವೆಳಗಾಗಿ ||

ವೃ || ಮುಳಿಯದೆಮೂರ್ಚ್ಛೆಯಾಂತು ಸಿರದಿರ್ಪುದಿದಾವುದುಮೆನ್ನಕೂರ್ಮೆಯೋಳ್ | ಮಲಿನಮದುಂಟೆಮಾಡಿದಪರಾಧಮುಮೆಳ್ಳನಿತಿಲ್ಲಮಿಂತಿದ | ಕ್ಕಳಲಿಪಿದೇಕೆಯೆಂದು ಶೃತಕೀರ್ತಿ ವಿಕಸಿತಕೀರ್ತಿಯಾಗಿಬಾ | ಯಳಿದಿರಲಿಂತುಟಲ್ತೆವಿಷಯಾತುರರೇಂ ಗಡಮುಂದುಗಾಣ್ಬರೇ ||

ವ || ಅಂತು ಪುರೋಹಿತಂ ಪಿರಿದುದುಃಖಮನೈದಿಯಳುತ್ತಿರಲು ಬಂಧುಜನ ಮೆಲ್ಲಂಕೇಳ್ದು ಬಂದಾಕೆಯಂ ಸಂಸ್ಕಾರಂಮಾಡಲನುಗೈಯ್ಯೆತಾನತಿ ಸ್ನೇಹಿತನಪ್ಪುದರಿಂದದಕ್ಕೊಡಂಬಡದಿರೆ, ವಿಪ್ರರೆಲ್ಲಚೋದ್ಯಂಬಟ್ಟಿರ್ಪಿನಂ ಶ್ರುತಕೀರ್ತ್ತಿಪಿರಿದುಪೊತ್ತಳಲ್ದುಬಳಲ್ದಾತನೊಂದು ಲತಾಭವನದೊಳು ಮರದುತೂಗಡಿಸೆಬಂಧುಗಳಾಕೆಯನೊಯ್ದುಸಂಸ್ಕರಿಸಲದಂ ಕೇಳ್ದು ||

ಕಂ || ಚಿತ್ತಜತಾಪಮುಮನಮಂ | ಸುತ್ತಿರೆಮಿಗೆತಕ್ಕುಗೆಟ್ಟುಪೌರೋಹಿತನು || ದ್ವೃತ್ತತೆಯನೊಕ್ಕುಧೈರ್ಯಗೆ | ಡುತ್ತಂದತ್ತೂರಮತ್ತನಂತಾಗಿರ್ದಂ || ೯೧ ||

ವ || ಅದನ್ನಾತನತನೂಜಿ ಪ್ರಭಾವತಿಕಂಡು ಓರ್ವದಿವ್ಯಮುನಿಗಳ್ಲಿಗೊಂಡುಪೋಗಿ ಸಂಸ್ಕಾರಸ್ವರೂಪಮನವರಿಂತಿಳಿಯಲರಿಪುವುದುಂಶ್ರುತಕೀರ್ತಿ ವೈರಾಗ್ಯಪರಾಯಣನಾಗಿ ದೀಕ್ಷೆಯಂಕೊಂಡು ಮಂತ್ರವಾದಮಂ ಪಠಿಯಿಸಿ ಚಾರಿತ್ರೆದೊಳು ಮಳಿನಮನೈದಿತನ್ನಮಂತ್ರಕ್ಕೆ ಸಹಕಾರಿಯಾಗಲ್ಕೆ ವಿದ್ಯಾಸಿದ್ಧಿನಿಮಿತ್ತಂ ಪ್ರಭಾವತಿಯನೊಡಗೊಂಡು ಪೋಗಿ ಗಿರಿಗುಹಾಂ ತರಮಂಪೊಕ್ಕು ಆಕೆಯಕ್ಷತೆಪುಷ್ಪಾದಿಗಳಂ ಜಪಿಯಿಸಿ ಮಂತ್ರಸಿದ್ಧಿಯಿಂದ ನೇಕ ವಿದ್ಯಂಗಳಂಪಡೆದಾ ವಿದಯ್‌ಆಬಲದಿಂದೊಂದು ನಗರಮಂವಿಗೂರ್ವಿಸಿ ಅದರೊಳ್ವಿಳಾಸವತಿಯರಪ್ಪ ಸ್ತ್ರೀಯರಂಪುಟ್ಟಸಿ ಯವರೊಡನೆ ಕ್ರೀಡಿಸುತ್ತಿರ್ಪನ್ನೆಗಮದಂಕಂಡು ಪ್ರಭಾವತಿಸಂಬೋಧೀಸಲಾತನಿಂತೆಂದಂ ||

ಕಂ || ಎನ್ನಂಪ್ರತಿಬೋಧಿಪೆನೆಂ | ಬುನ್ನತಿಯಂಬಿಡುವಿವೇಕವಿಕಳತೆಪಿರಿದುಂ || ಬಿನ್ನಣ ಮಂನೀಂನುಡಿದಡೆ | ನಿನ್ನೋಜೆಗೆನೋಜಿನಾಡೆಬಪ್ಪವನಲ್ಲಂ || ೯೨ ||

ವ || ಎಂಬುದಾಕೆ ಮತ್ತಂ ಮಾಣದೆ ವೈರಾಗ್ಯಕಾರಣಮಪ್ಪ ನುಡಿಯಂನುಡಿಯಲಾನುಡಿಗಂಕನಲ್ದು ಪರ್ಣ್ನಲಘವಿದ್ಯೆಯಿಂದಾಕೆಯ ನಾಕ್ಷಣದೊಳ್ಕೊಂಡೊಯ್ದೊಂದು ನಟ್ಟಡವಿಯೊ ಳ್ಬೀಸಾಡಿಸಲಾ ಪ್ರಭಾವತಿ ಬೆಗಡುಗೊಂಡು ನಾಲ್ದೆಸೆಯಂನೋಳ್ಪಾಗಲು ||

ವೃ || ವಿಕಸಿತಪುಷ್ಪದಂತರಳಿಕನ್ನಡಿಗರ್ಕರವಂತೆಬನ್ನಿಬಂ | ದಕಿಯರನಾಮದಂತೊಗೆದ ಪಾದರಿರೋಗಿಗಳಂತೆತಾರಿಪಾ | ವಕನಶರೀರದಂತಿರುರಿಸುಂಕಿಗನಂತಿರೆಚಲ್ವುಸಂದಲಾ | ವಕನನಿ ಯೋಗದಂತೊಗೆದಬೊಬ್ಬುಲಿಪರ್ವಿದಟವ್ಯಮದ್ಭುತಂ || ೯೩ ||

ಕಂ || ಪುಲಿಗಳಪರವರಿಹೂತಿಯ | ನೆಲೆಭಲ್ಲೂಕಂಗಳಿಕ್ಕೆದಾಣಂವೃಕ್ಷಾ || ವಳಿಗಳಕಣೆಯೆಂದೆನೆ ತ್ತಲಿಸುತ್ತಿಹವಿಂಧ್ಯದಟವಿಷಡೆದುದುಗುರ್ವಂ || ೯೪ ||

ವ || ಅಂತಾಘೋರಾಕಾಂತಾರದೊಳಾಕೆ ಧರ್ಮಧ್ಯಾನದಿಂ ದ್ವಾದಶಾನುಪ್ರೇಕ್ಷಗಳಂ ಭಾವಿಸುತ್ತಿರ್ದಳಿತ್ತ, ಶ್ರುತಕೀರ್ತ್ತಿತನ್ನಮಗಳಂಕೆಲವುದಿವಸಕ್ಕೆನೆನೆದು ತನ್ನವಳೋಕಿನೀ ವಿದ್ಯೆಯಂ ನೋಡಲಟ್ಟುವುದಾವಿದ್ಯೆ ಪ್ರಭಾವತಿಯಂಕಂಡು ನಿನಗೆಲ್ಲಿಸುಖಮುಂಟಲ್ಲಿಗೆ ನಿನ್ನನೊಯ್ವೆನೆನೆ, ಪ್ರಭಾವತಿ ಯೀಂತೆಂದಳಂತಾದೊಡೆನ್ನ ಕೈಲಾಸಪರ್ವತಕ್ಕೆ ಕೊಂಡುಪೋಗೆ ನಲಾ ವಿದ್ಯೆಕೊಂಡುಪೋಗಿ ಯಾಯೆಡೆಯೊಳಿರಿಸಿ ತಾಂ ತನ್ನನಿವಾಸಕ್ಕೆ ಪೋವುದಾದ್ವಿಜೋತ್ತಮೆಯಲ್ಲಿಯ ಮಣಿಮಯಚಿತ್ರಜಿ ನಭವನಂಗಳಂಕಂಡು ಭಕ್ತಿಪೂರ್ವಕಮವೆಲ್ಲಮಂಪೂಜಿಸಿ ಪೆರತೊಂದು ಜಿನಾಲಯದ ಮುಂಸಣಿಂದೂ ಫಳವೇದಿಕಾಮಧ್ಯಪ್ರದೇಶಮನಳಂಕರಿಸಿರ್ಪನ್ನೆಗಂ ||

ವೃ || ಕುಂಕುಮವರ್ಣ್ನೇಕುಕ್ಕುಟಭುಜಂಗವರೂಥಿನಿಭಾಳನೇತ್ರೇತೀ | ಬ್ರಾಂಕುಶೆಸೇವ್ಯ ಪಾಶವರದಾಯಕಸತ್ಫಲಹಸ್ತೆವಾ | ಳಂಕೃತೆಬಂದಳಂದುಪದ್ಮಾವತಿನೂಪುರಮಂಜುಳಸ್ವನ | ಕಂಕಣಝಂಕೃತಪ್ರಚುರನಾದಮಗುರ್ವಿಸಲಾಪ್ರದೇಶದೊಳ್ || ೯೫ ||

ವ || ಅಂತೆಯ್ತಂದು ||

ಕಂ || ವರಜಿನಕೂಟಕ್ಕೆಲ್ಲಂ | ಪಿರಿದೊಸಗೆಯೊಳೈದೆಮಾಡಿಪೂಜೆಗಳಂನಿ || ರ್ಭರಭಕ್ತಿಭಾರದಿಂದಂ | ಹರುಷಮನಾಂತನಿತವೇಗದಿಂಮುಗುಳ್ದಾಗಳ್ || ೯೬ ||

ವ || ವೇದಿಕೆಯಮೇಲಿರ್ದ ಪ್ರಭಾವತಿಯಂ ಕಂಡು ನೀನಾರೆಂದು ಬೆಸಗೊಳ್ವುದುಂ ಪ್ರಭಾವತಿತನ್ನ ವೃತ್ತಾಂತಮಂ ಸವಿಸ್ತರಂಪೇಳ್ವಾಸಮಯದೊಳು ||

ಕಂ || ನೆರೆದುಸುರರೊಳೀಮಣಿಮಯ | ಕಿರೀಟದರುಚಿಗಳ್ಪಳಂಚೆದೆಸೆಯಪುಷ್ಟೋ || ತ್ಕರದಪಡಲಗೆಗಳಂಪಿಡಿ | ದಿರದೈಯ್ತಂದುದುಜಿನೇಂದ್ರವಂದನೆಗಾಗಳ್ || ೯೭ ||

ವ || ಅಂತುಬಂದ ಚತುರ್ನ್ನಿಕಾಯಾಮರರಂಕಂಡು ಯಿವರಿಲ್ಲಿಗೇಂಕಾರಣಬಂದರೆಂದು ಪದ್ಮಾವತಿಯಂ ಪ್ರಭಾವತಿಬೆಸಗೊಂಬುದಾದೇವಿಯಂತೆಂದಳೆಲೆ ಕಾಂತೆ ಪುಷ್ಪಾಂಜಲಿಯ ಪೂಜೆಯಂ ಮಾಡಲ್ಬಂದರದೆಂತೆಂಬೆಯಪ್ಪೊಡೆಯಿಂದ್ಯಭಾದ್ರ ಪದಶುದ್ಧ ಪಂಚಮಿಯಪ್ಪುದರಿಂ ದೇವರ್ಕ್ಕಳೆಲ್ಲರ್ಗಂ ಪುಷ್ಪಾಂಜಲಿಯವಿಧಾನ ಮುಂಟದಕ್ಕೆ ಬಂದರೆನಲು ತತ್ಸ್ವರೂಪಮನೆನಗೆ ಪೇಳ್ವುದೆನಲಾಗಳು || ಭಾದ್ರಪದಂ ಮೊದಲಾಗಿ ಚೈತ್ರಮಾಸಂ ಕಡೆಯಾಗಲಾವಮಾಸಂಗಳೊಳಾದರು ಆಮಾಸದಶುದ್ಧಪಂಚಮಿಯೊಳು ಪವಾಸಂ ಮುಖ್ಯವಾಗಿ ಪೂರ್ವಹ್ಣಕಾಲದಲ್ಲಿ ಝಾವಝಾವ ಕ್ಕೊಮ್ಮೊಮ್ಮೆ ಚವ್ವೀಸತೀರ್ಥಕರ ಪ್ರತಿಮೆಗಭಿಷೇಕಪೂಜೆಗಳಂಮಾಡಿ ಇಪ್ಪತ್ತುನಾಲ್ಕುಪಡಿಯನಿಟ್ಟು ಚತುರ್ವಿಂಶತಿ ತೀರ್ಥಕರ ನಾಮಪೂರ್ವಕಂ ಪ್ರದಕ್ಷಿಣಗೊಂಡು ಪುಷ್ಪಂಗಳಂಸುರಿವುದದೆಂತೆನೆ ||

ಕಂ || ಕೇಳೆಲೆವಿಪ್ರಜೆನೀನಾಂ | ಪೇಳ್ದಪೆನಖಿಳತೀರ್ಥನಾಥರವರಪದಮಂ || ಲೀಲೆಯೊಳ ರ್ಚಿಪುದೊಲವಿಂ | ನೀಳಸರೋಜಾತನೇತ್ರೆಭಕ್ತಿಸಮೇತಂ || ೯೮ ||

ವೃ || ಪುರುಜಿನನಾಥರಂಕನಕಕೇತಕಿಯಿಂದಜಿತಾಭಿಧಾನರಂ | ನಿರುಪಮಚಂಪ ಕೀಕುಸುಮದಿಂವಿಭುಶಂಭವತೀರ್ಥನಾಥರಂ | ಸುರುಚಿರಸಿಂಧುವಾರವನಮಂಜರಿಯಿಂದಭಿನಂದನರ್ಕ್ಕಳಂ | ಪರಿಮಳಸೇವ್ಯಮಾನವಕುಳಂಗಳಿನರ್ಚಿಪುದುತ್ತರೋತ್ತರಂ || ೯೯ ||

ವೃ || ಸುಮತಿಗಳಂಪ್ರಸಿದ್ಧಸುರಗೊನ್ನೆಗಳಿಂಪದುಮಪ್ರಭಾಖ್ಯರಂ | ವಿಮಳತೆವೆತ್ತುತೋರ್ಪಬೆಳುದಾದವರೆಯಿಂದೆಸುಪಾರ್ಶ್ವನಾಥರಂ | ಭ್ರಮರವಿರಾಜಪಾಟಳಿಗಳಿಂದೆಶಶಿ ಪ್ರಭಾನಾಮ ಧೇಯರಂ | ಸಮನಿಪನಾಗಸಂಪಿಗೆಯ ಪುಷ್ಪದೊಳರ್ಚಿಪುದುತ್ತರೋತ್ತರಂ || ೧೦೦ ||

ವೃ || ನಿರುತಂಪೂಜಿಸುವರ್ಸಹಸ್ರದಳದಿಂಶ್ರೀಪುಷ್ಪದಂತಾಖ್ಯರಂ | ಪಿರಿದುಂಶೀತಳನಾಥರಂಬಗೆಯೆಭಾಸ್ವನ್ನೀಳನೀರೇಜದಿಂ | ಸುರರಾಜಾರ್ಚಿತಪಾದಪದ್ಮಯುಗಳಂಶ್ರೇಯಾಂಸರಂ ನೈದಿಲಿಂ | ಸ್ಮರವಿಧ್ವಂಸಕವಾಸುಪೂಜ್ಯಿನರಂಕುಂದಪ್ರಸೂನಂಗಳಿಂ || ೧೦೧ ||

ವೃ || ವಿಮಳಸ್ವಾಮಿಗಳಂಸಮೇರುಕುಸುಮಾನೀಕಂಗಳಿಂಸಂದಸಂ | ಯಮಸಂಪನ್ನರನಂ ತತೀರ್ಥಕರನಾಹೇಮಾಬ್ಜದಿಂಧರ್ಮ್ಮರಂ | ಭ್ರಮರವ್ರಾಜಿಕದಂಬಪುಷ್ಪಚಯದಿಂಶಾಂತೀಶರಂ ಮಲ್ಲಿಕಾ | ಸಮನೋದ್ದಾಮಗಳಿಂದಪೂಜಿಸೆನರಂಧನ್ಯಂಧರಾಚಕ್ರದೊಳ್ || ೧೦೨ ||

ವೃ || ತಿಳಕಂಕುಂಥುಗೆತಳ್ತರಂಗೆಕುಮುದಪ್ರೋತ್ಫುಲ್ಲವೈಯ್ಯಯ್ಯನಿ | ರ್ಮ್ಮಳಕೀರ್ತ್ತೀವರಮಲ್ಲನಾಥಜಿನರ್ಗಂಬಂದೂಕಪುಷ್ಪಾಳಿಕೇ | ವಳಬೋಧಂಮುನಿಸೂವ್ರತಂಗೆಮುಚುಕುಂದಂ ಕುಂದಪುಷ್ಪಂಗಳಿಂ ದಪಲವಿಂದರ್ಚಿಸುಸೇವ್ಯಮಾನನವಮಿಯಂಪೂಜಾವಿಧಾನೋತ್ತರಂ || ೧೦೩ ||

ವೃ || ಮದುಸಮಯೋಚಿತಪ್ರಭವಮಾಧವಿನೇ ಮಿಜಿನಂಗೆಸೌರಭಾ | ವದಿವಿರವಂತಿಯಂ ಗಜಮದಾಪಹಪಾರಿಶ್ವಜಿನರಿಂಗೆ ಸಂತತಂ | ವಿದುಸರೋಜ್ವಳಪ್ರಚುರಕೀರ್ತ್ತಿವಿರಾಜಿತನಾಪ್ತಸಂಪದ | ಕ್ಕದಿಪತಿವರ್ಧಮಾನಜಿನರ್ಗೆಸುರಗೀಪ್ರಸವಂವಿರಾಜಿಕುಂ || ೧೦೪ ||

ಕಂ || ಇಂತೀಪುಷ್ಪಗಳಿಂದೋ | ರಂತರ್ಚಿಸಿದಿವದೊಳುನಿಶಾಕಾಲದೊಳ || ತ್ಯಂತಂಮಾ ಳ್ಪುದುಪೂಜೆಗ | ಳಂತಡೆಯದೇಕೇಳ್ಸರೋರುಹಾಯತನೇತ್ರೆ || ೧೦೫ ||

ವ || ಇಂತೋಜೆವೆತ್ತಪೂಜೆಗಳನೆರಡನೆಯ ದಿನದೊಳ್ಮಾಡಿ ಮರುದಿವಸಂ ಮಧ್ಯಾಹ್ನಪರಿ ಯಂತರಮೊಡರ್ಚಿ ಬಳಿಕ್ಕಾತ್ಮೀಯಮಂದಿರಕ್ಕೆಪೋಗಿ ಇಪ್ಪತ್ತುನಾಲ್ಕುತಂಡ ಋಷಿಯರಂನಿಲಿಸಿ ಕೈಯೊಳಿಕ್ಕುವುದದುಕೂಡದಿರ್ದಡೆ ಒಂದುತಂಡಕ್ಕೆಮಾಳ್ಪುದಂತದು ಸಮನಿಸದಿರ್ದೊಡೊಬ್ಬಋಷಿ ಯರ್ಗಾದೊಡಂ ನಿರಂತರಂಮಾಡಿಸಿ ತದನಂತೆಮೆರಡು ಮಿಥುನಕ್ಕುಣ ಲಿಕ್ಕಿ ಯುಡಕೊಡುವುದು. ಬಳಿಕ್ಕಮಾದಿನಮಾತುಳಂಗ ಫಲಾದಿಗಳಂ ಬಾಯಿನಮಂಕೊಡುವುದು ತಾಂಪಾರಣೆಯಂಮಾಡಿ ಈಪರಿಯಲ್ಲಿ ನಾಲ್ಕದಿನಂನೋಂತುಪುಷ್ಪಾಂಜಲಿಯ ವಿಧಾನಮಂತೀರ್ಚಿನವಮಿಯೊಳುಪವಾಸಮಿ ರ್ದುಜಿನರಿಗಭಿಷೇಕಪೂಜೆಯಂಮಾಡಿ ರತ್ನಾಂಜಲಿಯಿಂ ಶಾಂತಿಧಾರೆಯಂಕೊಟ್ಟು ಹಿಂದೆ ಹೇಳಿ ದಪುಷ್ಪಂಗಳು ದೊರಕೊಳ್ಳದಿರ್ದಡೈದುಪ್ರಕಾರದ ಪೂಗಳಿಂ ಪುಷ್ಪಾಂಜಲಿಯಂ ಮಾಡಿ ಯೀಪರಿಯೊ ಳೈದು ವರ್ಷಂಬರಂನೋಂಪುದು ಉದ್ಯಾಪನೆಯಕ್ರಮವೆಂತೆಂದೊಡೆ ಚವ್ವೀಶತೀರ್ಥಕರಪ್ರತುಮೆ ಯಂ ಸುವರ್ಣ್ನರಜತಕಾಂಶ್ಯಲೋಹಪಾಷಾಣಾದಿಗಳಿಂದಯಥಾಶಕ್ತಿಯಿಂಮಾಡಿಸಿ ಬಸದಿಗೆಕೊಟ್ಟು ಋಷಿಯರ್ಗೆ ತಟ್ಟುಕುಂಚ ಪುಸ್ತುಕಗಳಂ ಅಜ್ಜಿಯರ್ಗೆ ವಸ್ತ್ರಗಳುಮಂ ಕೊಡುವುದು ಚಾತುರ್ವರ್ಣ್ನಕ್ಕಾಹಾರದಾನಮಂಮಾಡಿ ಈ ಕ್ರಮದಿಂ ನೋಂತ ನೋಂಪಿಯಫಲದಿಂದ ಸ್ವರ್ಗಸುಖಮನನುಭವಿಸಿ ಯಥಾಕ್ರಮದಿಂಮೋಕ್ಷಸುಖಮನೈದುವರು. ಉದ್ಯಾಪನೆಗೆ ಶಕ್ತಿಯಿಲ್ಲದಿರ್ದ್ದಡೈದುವರ್ಷಂ ಹೊಂಬಣ್ಣದ ಕ್ಕಿಗಳಂಮಾಡಿ ಪುಷ್ಪಾಂಜಲಿಸಂಕಲ್ಪದಿಂ ಜಿನರಮುಂ ದೆಪೂಜಿಸುವುದು ಪಿಂತಣ ಉದ್ಯಾಪನೆಯಫಲಮಂಕೊಡುವುದು ಎಂದು ಪದ್ಮಾವತಿಪೇಳಲು ಪ್ರಭಾವತಿ ಕೇಳ್ದೀನೋಂಪುಯನಾಂ ಕೈಕೊಂಡೆನೆಂಬುದು. ಪದ್ಮಾವತಿಇಂತೆಂದಳು. ನೀನಿಲ್ಲ ನೋಂತ ನಂತರಂ ಮನುಷ್ಯಕ್ಷೇತ್ರದಲ್ಲಿ ಪ್ರವರ್ತಿಸೆಂದಾಕೆಯ ನೈದುದಿವಸಪರಿಯಂತಂ ನೋನಿಸಲದಂಕಂಡು ಸಂತುಷ್ಟರಾಗಿ, ದೇವರ್ಕ್ಕಳು ನಿಜವಾಸಕ್ಕೆ ಪೋದರನ್ನೆಗಮಿತ್ತಲು ||

ಕಂ || ಆವನಿತೆಯಜಿನಭಕ್ತಿಯ | ಭಾವನೆಯಂನೋಡಿನಾಡೆಲತೆದೂಗುತ್ತಂ || ಭೂವಿಶ್ರುತೆ ಪದ್ಮಾವತಿ | ದೇವಿಮನೋನುರಾಗದಿಂದ ಹರುಷವನಾಂತಳ್ || ೧೦೬ ||

ವ || ತದನಂತರಂ ||

ವೃ || ಪಾಟನೆದಿವ್ಯಮೂರ್ತ್ತಿಪದುಮಾವತಿವಿಪ್ರಜೆಯೊಳುಪೇಳ್ದಧ | ರ್ಮ್ಮಾವಧಿ ಜೀವಮಾ ತದನುಕಂಪೆಗೆಸಂಮುದವೆತ್ತುತಂದಳಿಂ | ದೀವರನೇತ್ರೆಯಂಸುಕೃತಗಾತ್ರೆಯನಂದುಮೃಣಾಳಪಟ್ಟಣ | ಕ್ಕೇವೊಗಳ್ದಪೆನಾಕೆಯ ಪುರಾತನನೂತನಪುಣ್ಯದೇಳ್ಗೆಯಂ || ೧೦೭ ||

ಕಂ || ಅಂದಾಧಾತ್ರೀತಿಳಕದ | ಪಿಂದಣಮುಚುಕುಂದಕುಂದಕುಸುಮಾಸನಮ || ತ್ತೀಂದೀವರಾಳಿಪರಿವೃತ | ನಂದನದೊಳಗಿಳಿಪಿಪೋದಳಂದಾಕ್ಷಣದೋಳ್ || ೧೦೮ ||

ವ || ಆಗಳಾ ಪ್ರಭಾವತಿ ಪರಿಪೂರ್ಣ್ನಪುಣ್ಯಪ್ರಭಾವತಿಯಾಗಿ ಬಂದು ತುಂಗಕೂಟ ಕೋಟಿಪರಿಚುಂಬ್ಯಮಾನ ವಿಯನ್ಮಂಡಲಮಪ್ಪಭೂತಿಳಕದೊಳಗಂಪೊಕ್ಕು ತ್ರಿಭುವನಾರಾ ಧ್ಯಂಗಭಿಮುಖಿಯಾಗಿ ಚತುರ್ಭಕ್ತಿಪೂರ್ವಕಂ ಬಂದಿಸಿ ಬಳಿಕಂ ತ್ರಿಭುವನಸಂಯಮ ಮುನಿಗಳ್ಗೆ ವಂದನೆಯಂಮಾಡಿ ಧರ್ಮ್ಮಶ್ರವಣಾನಂತರಂ ವೈರಾಗ್ಯಪರಾಯಣೆಯಾಗಿ ಎಲೆಸ್ವಾಮಿ ಎನಗೆ ದೀಕ್ಷೆಯಂ ಕಾರುಣ್ಯಂಗೈವುದೆನಲವರವಧಿಯಂ ಪ್ರಯೋಗಿ ನೀಪಂಪಿರಿ ನೀಂಪಿರಿ ದಪ್ಪಲೇಸಂಬಗೆದೌ ನಿನಗಾಯುಷ್ಯಂ ಮೂರುದಿನಮೆನಲ್ಕಿರೆ ಲೇಸೆಂದುದೀಕ್ಷೆಗೊಂಡು ತ್ರಿವಾಸರಂ ಪುಷ್ಪಾಂಜಲಿಯವಿ ಧಾನಮನೆಲ್ಲರ್ಗೆ ತಿಳಿಯಪೇಳು ತ್ರಿಮಿರ್ಪನ್ನೆಗಮಿತ್ತಲು ||

ಕಂ || ಶ್ರುತಕೀರ್ತ್ತಿತನ್ನಮೆಗಳಿ | ಪ್ಪತಿಶಯಮಂನೋಡಲೆಂದುಮವಳೋಕಿನಿಯಂ || ಹತಮತಿಕಳುಹಲ್ಬಂದಳು | ಕ್ಷಿತಿನುತಜಿನಭವನದೆಡೆಗೆಯತಿಶಯದಿಂದಂ || ೧೦೯ ||

ವ || ಬಂದಾಕೆಯ ತಪೋವೃತ್ತಿಯಂಕಂಡು ಮಗುಳ್ದುಪೋಗಿಯಾವೃತ್ತಾಂತಮನಾತಂ ಗರಿಪಿದೊಡವಂ ಹೇವರಿಸಿತನ್ನೋಪಾದಿಯಂ ಮಾಳ್ಪೆನೆಂದು ಎಲ್ಲಾವಿಧ್ಯಂಗಳಂ ನೀವುಪೋಗಿ ಪ್ರಭಾವತಿಯತಪಕ್ಕೆ ವಿಘಾತಿಯಂಮಾಡಿ ಬಪ್ಪುದೆಂದು ಬೆಸನಮನೀಯಲಾ ವಿದ್ಯಂಗಳೆಲ್ಲಂಬಂದು ಆಕೆಯ ಸ್ಯಕ್ತ್ವಪೂರ್ವಕಮಪ್ಪ ತಪಸಿಗನೇಕ ಉಪಸರ್ಗಗಳಂಮಾಡಲದಕ್ಕೋಸರಿಸದೆ ಮೇರುವಿನಂತೆ ಅಚಲಿತೆಯಾಗಿ ನಿರ್ಮಳಧರ್ಮಧ್ಯಾನಮಾನಸದಿಂದಿರ್ಪನ್ನೆಗಮಿತ್ತಲಾಕೆಯ ತಪಃಪ್ರಬಾವಕ್ಕೆ ಆಸನಕಂಪಮಾಗಿ ಧರಣೇಂದ್ರಂ ಪದ್ಮಾವತಿಸಹಿತಂಬಂದುದಂಕಂಡು ಮಾರುತಪ್ರಘಾತಕ್ಕೆ ತೆರಳ್ದೋಡುವ ನೀರದಂಗಳಂತೆ ವಿದ್ಯಗಳೆಲ್ಲಂ ಅದೃಶ್ಯಂಗಳಾಗಿಪೋಗೆ ಪ್ರಭಾವತಿಪರೀಷಹಜಯ ಮಾದ ಪರಿಣಾಮ ಶುದ್ಧಿಯೊಳ್ಮುಡುಪಿಯಚ್ಚ್ಯುತಕಲ್ಪದ ಪದ್ಮಾವರ್ತ್ತವಿಮಾನದೊಳ್ಪದ್ಮನಾಭವೆಸರ ಮಹರ್ದ್ಧಿಕದೇವನಾಗಿಪುಟ್ಟ ತನ್ನಮುನ್ನಿನತಂದೆ ಶ್ರುತಕೀರ್ತ್ತಿಯಂ ಪ್ರತಿಬೋಧಿಸಲ್ವೇಡಿ ಮಹಾವಿಭೂತಿಯಿಂಬಂದು ಸಂಸಾರಸ್ವರೂಪಮಂತಿಳಿಪಿ ತಮ್ಮ ಗುರುಗಳ ಸಮೀಪಕ್ಕೊಡಗೊಂಡುಪೋಗಿ ಪುನರ್ದೀಕ್ಷೆಯಂಕೊಡಿಸಿತಾಂಗುರುಳಿಗೆವಂದಿಸಿ ಮಗುಳೆಯಚ್ಚ್ಯುತಕಲ್ಪಕ್ಕೆಪೋಗಿ ಸುಖದಿಂದ ರ್ಪನ್ನೆಗಮಿತ್ತಲು ||

ಕಂ || ಪನ್ನೆರಡುಂತಪದಿಂದ | ತ್ಯುನ್ನತಮತಿನೆಗಳ್ದುಮಂತರಂಗದಮಳಮಂ || ಕೆನ್ನಂತೊಲ ಗಿಸಿತೊಳಗುವ | ರನ್ನದದೀವಿಗೆಯತೆರನುನನುಕರಿಸಿರ್ದಂ || ೧೧೦ ||

ವ || ಅಂತುಗ್ರೋಗ್ರತಪಶ್ಚರಣಮಂಮಾಡಿ ಕಡೆಯೊಳ್ಸಮಾಧಿಯಿಂ ಮುಡುಪಿಯಚ್ಯುತಕಲ್ಪದ ಪ್ರಭಾಸವಿಮಾನದೊಳು ಪ್ರಭಾಸನೆಂಬ ದೇವನಾಗಿಪುಟ್ಟದನನ್ನೆಗಂ ಮುನ್ನಿನ ಪದ್ಮನಾಭ ದೇವನ ಪಟ್ಟದಮಹಾದೇವಿಯರ ನಂತರಂಕಳಿಯೆ ಕಡೆಯೊಳು ಪದ್ಮಿನಿದೇವಿಯೆಂಬಳರಸಿಯಾಗೆ ಪದ್ಮನಾಭಂ ಸುಖದಿನಿರ್ದಾಯುಷ್ಯಾಪಸಾನದೊಳಾ ಕಲ್ಪದಿಂಬಂದುರತ್ನಶೇಖರಂನೀನಾದೆ ಆ ಕಲ್ಪದ ಪ್ರಭಾಸದೇವಂಬಂದು ನಿನ್ನಮಿತ್ರಂ ಮೇಘವಾಹನ ನಾದಂ ಪದ್ಮನಾಭನರಸಿ ಪದ್ಮಿನಿಯಲ್ಲಿಂ ಬಂದು ನಿನ್ನಪ್ರಿಯವಲ್ಲಭೆ ಮದನಮಂಜೂಷೆಯಾದಳದುಕಾರಣದಿಂ ನಿಮ್ಮೊಳನ್ಯೋನುಪ್ರೀತಿಸಂ ಭವಿಸಿತೆಂದು ಚಾರಣರ್ಪೇಳರತ್ನ ಶೇಖರಂಕೇಳ್ದು ವಿಸ್ಮಯಂಬಟ್ಟು ತಾನುಂ ಪುಷ್ಪಾಂಜಲಿ ನೋಂಪಿಯಂ ಚಾರಣರಪಕ್ಕದೊಳು ಕೈಕೊಂಡ ವರ್ಗೆ ವಂದಿಸಿ ತನ್ನಪುರಕ್ಕೆಮಗುಳ್ದು ಬಂದು ||

ಕಂ || ಎನಿತಪಳವುಂಜಿನಭವನಗ | ಳನಿತಕ್ಕಂಮಾಡಿಕೂಡೆಪುಷ್ಪಾಂಜಲಿಯಿಂ || ದನುಪಮಪೂಜೆಗಳೊದವಂ | ಜನನಾಥಂಸುಖದಿನರಸುಗೈಯ್ಯುತ್ತಿರ್ದಂ || ೧೧೧ ||

ವ || ತದನಂತರ ವೊಂದುದಿವಸಂ ವಜ್ರಸೇನಮಹಾರಾಜಂ ಸಕಳಸಾಮಂತಸಂದೋಹಂ ಬೆರಸೊಡ್ಡೋಲಗದೊಳಿರ್ಪನ್ನೆಗಂ ವನಪಾಲಕಂಬಂದು ದೌವಾರಿಕನಿರೂಪಿತನೊಳಗಂಪೊಕ್ಕು ವಜ್ರಸೇನಂಗೆರಗಿ ವಿಚಿತ್ರಪರಿಮಳಮನೋಹಾರಿಯಪ್ಪ ಕನಕಕಮಳಮಂತಂದುಕೊಡಲದರೊಳು ಮೃತವಾಗಿರ್ದ್ದ ಭ್ರಮರಮಂಕಂಡು ||

ಕಂ || ಒಂದಿಂದ್ರಿಯದಭೀಲಾಷೆಯೊ | ಳಿಂದಿರದಳಿಮುಳಿದುದೆಂದಡಖಿಳೇಂದ್ರಿಯದೊ || ಳ್ಸಂದಿರ್ದನರರದುಃಖದ | ಗುಂದಲೆಯಂಪವಣಿಸಲ್ಕೆಬಲ್ಲವನಾವಂ || ೧೧೨ ||

ವ || ಎಂದು ಪರಿಚ್ಛೇದಿಸಿ ತನಗದುವೆವೈರಾಗ್ಯಕ್ಕೆ ಕಾರಣಮಾಗೆ ರತ್ನಶೇಖರಂಗೆ ಸ ಮಸ್ತರಾಜ್ಯಮಂಕೊಟ್ಟು ಸಾಸಿರ್ವರರಸುಮಕ್ಕಳ್ವೆರಸು ಪೊರಮಟ್ಟುಬಂದು ಯಶೋಧರ ಮುನೀಂದ್ರಪಾದೋಪಾಂತ್ಯದೊಳು ದೀಕ್ಷೆಯಂಕೈಕೊಂಡು ಬಾಹ್ಯಾಭ್ಯಂತರ ಪರಿಗ್ರಹಗಳಂ ತೊರೆದು ತಪದೊಳು ನಿಷ್ಠಾಪರನಾಗಿರ್ದಮನ್ನೆಗಮಿತ್ತಲು ರತ್ನಶೇಖರಂ ರಾಜ್ಯಂಗೈಯ್ವತ್ತಿರಲಿತ್ತಲಾಯು ಧಾಗಾರದೊಳು ಚಕ್ರರತ್ನಂ ಪುಟ್ಟಲದುನರ್ಚಿಸಿ ದಿಗ್ವಿಜಯೋದ್ಯೋಗ ಚಿತ್ತನಾಗಿ ಪ್ರಯಾಣಭೇರಿ ಯಂಪೊಯಿಸಿ ಷಡಂಗಬಲಸಮೇತ ಮೆತ್ತಿನಡೆದು ಷಟ್ಖಂಡಮೇದಿನಿಯಂ ಬಾಳ್ಕೆಯಿಸಿ ಮರಳಿ ಬಂದು ಪುರಮಂ ಪೊಕ್ಕು ತಂದೆಗೆ ಕೇವಲ ಜ್ಞಾನಪುಟ್ಟಲದಂ ಕೇಳ್ದು ಭವ್ಯಜನಸಮೇತಂಪೋಗಿ ವಂದಿಸಿ ಕೇವಳ ಪೂಜೆಯಂಮಾಡಿ, ರಾಜ್ಯಂಗೆಯ್ಯುತ್ತಿರಲ್ಕವು ದಿವಸಕ್ಕೆ ಮದನಮಂಜೂಷೆಗರ್ಭವತಿ ಯಾಗಿ ನವಮಾಸಂನೆರೆದು ಕನಕಪ್ರಭನೆಂಬ ಮಗನಂಪಡೆದು ಸುಖದಿಂದರಸುಗೈಯ್ವುತ್ತಿರೆ ||

ವೃ || ಇರಿಹಂವಾಯದೊಳುಷ್ಣವಗ್ನಿಮುಖದೊಳ್ ಯುದ್ಧಂದಿಟಂಮಲ್ಲರೊಳ್ | ಮರಹುಂವಿಥ್ಯೆಯೊಳಾಸೆದೇವಗತಿಯೊಳ್ ಶಂತಾಕುಳಂಪುಲ್ಲೆಯೊ | ಳ್ತೊರಹಂಕ್ಷೀಣಮದಂಗಳೊಳ್‌ಬಡತನಂ ಸ್ತ್ರೀಮಧ್ಯದೊಳ್ಕೀಳಿಗಂ | ದೆರಕಂಗೋವಿನೋಳಲ್ಲದಿಲ್ಲಪೆರತೇನಾರೈಯ್ವಡಾದೇಶದೊಳ್ || ೧೧೩

ವ || ಇಂತು ತೊಂಭತ್ತೊಂಭತ್ತು ಲಕ್ಕೆಯುಂ ತೊಂಭತ್ತೊಂಭತ್ತುಸಾವಿರದ ದೊಂಭೈನೂರ ತೊಂಭತ್ತೊಂಭತ್ತು ಪೂರ್ವೆಸಂಖ್ಯೆಯಿಂರಾಜ್ಯಂಮಾಡುತ್ತಿರ್ಪುದುಂ ||

ವೃ || ಕಮಳದಸೊಕ್ಕುಸೋರೆಪೊಣರ್ವಕ್ಕಿಗಳಿಚ್ಛೆಯಮೆಚ್ಚುನಚ್ಚುಗೆ | ಟ್ಟಮಳಿನಬೆಟ್ಟವೋರ್ಗುಡಿಸೆನೆಯ್ದೆವಿಶಾಲಲಕ್ಷ್ಮಿಸೈ | ಪಮರ್ದಿರೆಜೊನ್ನವಕ್ಕಿಯಪರಾಸಿಗೆ ಪೂರ್ವದರಾಗದುತ್ಸವಂ | ಸಮನಿಸೆಭಾನುಪಶ್ಚಿಮಪಯೊಳೊಯ್ಯನೆಮೈಯ್ಯನಿಕ್ಕಿದಂ || ೧೧೪ ||

ವ || ಅಂತು ದಿನನಾಯಕನಪರಬ್ಧಿನಿಕಟನಂದನಮಂ ಸಾರುವುದನಂತರಂ ||

ಕಂ || ಮಡಗಿದುದುಕಾರಣದಸಿರಿ | ಯೊಡೆಯನಸಿರಿಯಂತೆಸಂಜೆಗೆಂಪಾಕ್ಷಣದೊಳ್ || ಮಡುಗವಿದುದುಕತ್ತಲೆಕರ | ಮಡರ್ದುದುಖಳನೆರ್ದೆಯಪಡಿಯತೆರೆದಂತಾಗಳ್ || ೧೧೫ ||

ವ || ಮತ್ತಮಿನಿಸಾನುಬೇಗದಿಂ ||

ವೃ || ಕರಮೆಸೆದಿತ್ತುಕೌಮುದಿಬಿತ್ತುಚಕೊರಿಯತುತ್ತುನೀರಜೋ | ತ್ಕರದ ಪಪತ್ತುತಾರೆಗಳತತ್ತು ಸುಧಾಂಬುಧಿಯೊತ್ತುಜಾರಸೌರಿ | ಧರಿಯರಮಿತ್ತುವಂಬರಪುಳಿಂದಿಯಮೂಗಿನಮುತ್ತನೋಡಲ | ಚ್ಚರಿಯೆನಿಸಿತ್ತು ಮೂಡಣದೆಶೆಯಿಂದೊಗೆ ತಪ್ಪಹಿಮಾಂಶುಮಂಡಲಂ || ೧೧೬ ||

ವ || ಆಸೊಗಯಿಸಿದ ಚಂದ್ರೋದಯದೊಳು, ರತ್ನಶೇಖರನನಂತ ಮಂಡಳೀಕದಂಡನಾಥಪ್ರಕರಸಮೇತ ರಾತ್ರಿಯೋಲಗದೊಳಿರ್ಪುದು, ತನ್ನಸಂಸಾರದಸುಖಕ್ಕೆ ಜೀವಿತಮಂ ಕೊಡುವಂತೆ ತೊಟ್ಟನೆಕಟ್ಟದಿರೊಳುಳ್ಕಾಪಾತಮಾಗಲದಂ ಕಂಡು ವೋಲಗಮಂ ವಿಸರ್ಜಿಸಿ ಶಜ್ಜಾಗೃ ಹಕ್ಕೆಬಂದು ತಳ್ಪತಳಮನಳಂಕರಿಸಿರ್ಪುದುಂ ||

ಕಂ || ಪಿರಿದುಂವೈರಾಗ್ಯಶ್ರೀ | ನೆರದಿರೆತನ್ನೊಳುಮದಕ್ಕೆಮಚ್ಚರಿಸಿದವೋಲ್ || ಭರದಿಂಮಣಿಶೇಖರಭೂ | ವರನಂನಿದ್ರಾವಧುಟಪೊರ್ದ್ದಳುನಿಯತಂ || ೧೧೭ ||

ವ || ಅಂತು ಕಣ್ಣೊಳೆ ಬೆಳಗಂಮಾಡೆ ತನ್ನ ಪುಣ್ಯೋದಯಕ್ಕನುಕೂಲಮಾದಸೂರ್ಯ್ಯೋದಯದೊಳು ಬಂಧುಜನಮಂಬರಿಸಿ ಪಿರಿಯಮಗಂ ಕನಕಪ್ರಭಂಗೆ ರಾಜ್ಯಮಂಕೊಟ್ಟು ಮೋಘವಾಹನಂಮೊದಲಾದನೇಕ ರಾಜಪುತ್ರರ್ವ್ವೆರಸುಪೋಗಿತ್ತಿಗುಪ್ತಾಚಾರ್ಯ್ಯರ ಸಮಕ್ಷಮ ದೊಳ್ದೋಕ್ಷೆಯಂಕೊಂಡು ಕೇವಲಜ್ಞಾನಂಪುಟ್‌ಎ ಕ್ರಮದಿಂಮೋಕ್ಷಮನೈದಿದನಾಮದನಮಂಜೂಷೆ ಕೆಲಂಬರರಸಿಯರ್ವೆರಸು ದೀಕ್ಷೆಯಂಕೊಂಡು ತಪಂಗೈದು ತಮ್ಮತಮ್ಮ ಪುಣ್ಯಕ್ಕನುಸಾರಿಯಾದ ಸ್ವರ್ಗದೋಳ್ದೇವರಾಗಿ ಪುಟ್ಟದರಿಂತು ಪ್ರಭಾವತಿದ್ವಿಜನಂದನೆ ಜಿನೇಂದ್ರಂಗೆ ಪೂಜೆಯಂಮಾಡಿ ಇಂತಪ್ಪ ಪುಣ್ಯಪ್ರಭಾವ ಮನೆಯ್ದಿದಳೆಂದಡೆ, ಅನವರತಂ ಜಿನಪೂಜೆಯಂಮಾಳ್ಪ ಭವ್ಯರ ಪುಣ್ಯಪ್ರಭಾವಕ್ಕೆ ಪವಣಿಲ್ಲೆನೆಮಸದೆಗೊಂಡು ||

ವೃ || ಸರಸಂಸಾಹಿತ್ಯವಿದ್ಯಾದರನಮಳಯಶೋಭಾಮಿನೀವಲ್ಲಭಂಭಾ | ಸ್ಕರತೇಜಂಭವ್ಯಲೋಕಪ್ರಿಯನತುಳಗುಣಾಲಂಕೃತಂ ಜೈನಯೋಗೀ | ಶ್ವರಪಾದಾಂಭೋಜಭೃಂಗಂ ಕವಿಮುಖ ಮುಕುರಂ ಚಿತ್ತದೋಳ್ನಾಡೆಹರ್ಷೊ | ತ್ಕರಮಂತಾಳ್ದೊಪ್ಪುತಿರ್ದಂ ಸುಲಲಿತಕವಿತಾಕಲ್ಪವಲ್ಲೀ ವಸಂತಂ || ೧೧೮ ||

ಗದ್ಯ || ಇದುದಿ ಜರಾಜರಾಜಿತ ಕಿರೀಟತಟಘಟಿತ ನೂತ್ನರತ್ನಪ್ರತಾನಮರೀಚೀರಂಚಿತ ಭಗವದರ್ಹತ್ಪರಮೇಶ್ವರ ಪಾದಾರವಿಂದಮಕರಂದ ಮಧುಕರಾಯಮಾನ ಶ್ರೀಮದನಂತವೀ ರ್ಯ್ಯಮುನೀಂದ್ರಪದನಖಮಯೂಖಲೇಖಾಲಲಾಮ ಭಾರತೀಭಾಳನೇತ್ರನುಭಯ ಕವಿತಾವಿಳಾಸಂ ಮಾಸಿವಾಳದನಾಗರಾಜ ವಿರಚಿತಮಪ್ಪ ಪುಣ್ಯಾಸ್ರವದೊಳು ಪೂಜಾಜುವೋದನಿರೂಪಣಂ ಪ್ರಥಮಾಧಿಕಾರಂ || ಶ್ರೀ ಶ್ರೀ ಭರತನಕಥೆ

|| ಶ್ರೀಮದಜಿತ ಜಿನಾಯನಮಃ ||

ಕಂ || ಶ್ರೀಜಿನರಾಜಪದಾಂಬುಜ ! ರಾಜಿತಮಧುಕರನುದಾತ್ತಕಲ್ಪಮಹೀಜಂ || ಪೂಜಾನುಮೋದನೂತ್ನಬಿ | ಡೌಜಂನಲಿದಂಸರಸ್ವತೀಮುಖತಿಳಕಂ || ೧೧೯ ||
ವ || ಅಂತು ಸಂತೋಷಮನೆಯ್ದಿ ಗಣಧರಾಗ್ರಣ್ಯರಂ ಮುಂದಣ ಕಥೆಗಳಂ ಬೆಸಗೊಳ್ವು ದುಮವರಿಂತೆಂದರು ||

ವೃ || ಜಗತೀಭೂಷಣನಾಮನೋರ್ವ್ವಪರದಂ ಶ್ರೀಮಜ್ಜಿನಾಧೀಶನಂ | ಘ್ರಿಗಳಂಪೂಜಿಪೆನೆಂಬಭಾವದೊಲವಿಂದೇವತ್ವಮಂತಾಳ್ದಿದಂ | ಜಗದೊಳ್ತಾನೆನಲಿಂದ್ರವಂದ್ಯನಪದದ್ವಂದ್ವಂಗಳಂ ಭಕ್ತಿಯೊ | ಳ್ಬಗೆಸಂದರ್ಚಿಸಿದಾತನೊಂದೆಸಕಮಂಪೇಳ್ಬಣ್ಣಿಸಲ್ಬಲ್ಲರಾರ್‌ || ೧೨೦ ||

ವ || ಮತ್ತಮೀವೃತ್ತದ ಕಥೆಎಂತೆಂದೊಡೆ ||

ವೃ || ರಾಮಂ ರಾವಣನಂ ಪಡಲ್ವಿಡಿಸಿ ಸೀತಾದೇವಿಯಂಕೊಂಡತಿ | ಪ್ರೇಮಂ ಕೈಮಿ ಗೆಬಂದಯೋಧ್ಯಪುರಮಂಸಾನಂದದಿಂಪೊಕ್ಕಸುಂ | ತ್ರಾಮೋದ್ಯದ್ವಿಭವಾನ್ವಿತಂಮುದದಿ ರಾಜ್ಯಂಗೆ ಯ್ಯುತಿರ್ದ್ದಂ ಯಶೋ | ರಾಮಂದುರ್ಧರವೈರಿಭೂಭುಜಕುಳವ್ಯಾಳೇಭಕಂಠೀರವಂ || ೧೨೧ ||