ಕಂ || ಕಾರಣಮುಂದುಂಟಾಕೆಗೆ | ಧಾರುಣಿಗಧೀನಾಥಚಿಂತೆಯನುಬಿಡುಬೇಗೆಂ || ದೋರಂತಸರೀರವಚನಂ | ನೀರದಮಾರ್ಗದೊಳಗಾದುದಚ್ಚರಿಯೆಪ್ಪಿನ || ೧೫೮ ||

ವ || ಅದಂಕೇಳ್ದಿಳಿದು ದೇವವನಚತಪ್ಪಿಲ್ಲಮೋಘಮೆಂದು ನಿಶ್ಜೈಸಿಪಾದ ಮಾರ್ಗದಿಂತನ್ನ ಪುರಕ್ಕೆಬಂದು ಪರಿಹನಸಮೇತಂ ರಾಜಮಂದಿರಮಂಪೊಕ್ಕು ಸುಖಮಿರುತ್ತಿರಲಿತ್ತಂ ||

ಕಂ || ಕರಿಕಟ್ಟಾಸುರದಿಂದಂ | ಪರಿದುಕರಂಸೇದೆವಟ್ಟುನಂದನವನದೊಳ್ || ದೊರೆವೆತ್ತುತೋರ್ಪಕಮಳಾ | ಕರಮಂಸಾರ್ದತ್ತುವಿಗತಮತ್ತನುದಾತ್ತಂ || ೧೫೯ ||

ಕಂ || ಸುರಪುರದಂತಮರಷಮಯ | ಸ್ಮರಶರಬಿಲ್ನಿಡಿಯತೆರದಿ ಶರಮಯಮಬ್ಜೋ || ದರನಕರದಂತೆಶೋಭಾ | ಕರಚಿತ್ರಮಯಂಸರೋವರಂ ಸೊಗಯಿಸುಗುಂ || ೧೬೦ ||

ವ | ಅಂತು ಸೊಗಯಿಸುವನೀರಜಾಕರಮಂ ಪೇರಾನೆಬಂದುಪುಗುವುದುಂ ಜಲದೇ ವತೆಯರ್ಕಂಡು ಪದ್ಮಾವತಿಯಂತೆಗೆದುಕೊಂಡುಮಾಕೊಳದ ತಡಿಯಲಿರಿಸುವುದುಮಿತ್ತಲು ||

ಕಂ || ಪಟುದಟಾಳಿವೃತವಿಚಕಿಳ | ಕುಟುಮಳಮುಮನಾಯ್ಡು ಕೊಯ್ಯಲಡಂ ದಾಸರಸೀ || ತಟಕೆಯ್ತಂದನದೋರ್ವಂ | ಭಟನೆಂಬುವನತ್ಯುದಾರಮಲಾಕಾರಂ || ೧೬೧ ||

ವ || ಅಂತಲ್ಲಿಗೆ ವಂದುಶೋಕಂಗೆಯ್ಯುತ್ತಿರ್ದ ಪದ್ಮಾವತಿಯಂಕಂಡು ಕರುಣಾ ರ್ದ್ರಹೃದಯನಾಗಿ ನೀನೆನಗೆ ಸಹೋದರಿ ಎಂದು ಸಂಬೋಧಿಸಿ ಯಮ್ಮಮನೆಗೆ ಬರಲ್ವೇ ಕೆಂಬುದುಂ ನೀನಾರೆನೆ ಆಂ ಹಸ್ತಿಪುರದ ಮಾಲೆಗಾರನೆಂದು ಪೇಳಿತನ್ನಪುರಗೊಂಡುಪೋಗಿ ತಂಗಿಯೆಂದುಕೊಂಡಾಡಿ ನಿಜನಿವಾಸದೊಳಿರಿಸಿ ಶಾಂತಮ್ಮ ವ್ಯಾಪಾರಕ್ಕೆ ಪೊಪುದುಮನ್ನೆಗಂ ||

ಕಂ || ಅವನಸತಿಪುರುಡಿನೆವದಿಂ | ಬರಮನೆಪೊಣರ್ಚಿಮಾರದತ್ತಾಖ್ಯಮಹಾ || ಹವಸೀಲೆತನ್ನ ಮನೆಯಿಂ | ದವೆಪೊರಮಡಿಸಿದಳ್ಕನಲ್ದುಪದ್ಮಾವತಿಯಂ || ೧೬೨ ||

ವ || ಅಂತು ನಿರ್ಧಾಟಿಸಿನೂಕಿಕಳೆಯೆ ||

ಕಂ || ಆನೆತ್ತಡವಿಯಿದೆತ್ತಂ | ಮಾನ್ಯಕಪರಿತಂದುಕೊಳದೊಳಿಕ್ಕುವುದೆತ್ತಂ || ತಾನಿಲ್ಲಿಗೆಬರವೆತ್ತಿ | ನ್ನೇನೆಂಬುದೊಯಕಟನಿಧಿಯದುರ್ನಿಳಸನಮಂ || ೧೬೩ ||

ವ || ಎಂದತಿದುಃಖಿತೆಯಾಗಿ ಪೊರಮಟ್ಟಾಪುರದ ಪೊರಗಣಪಿತೃವನ ಪ್ರದೇಶದೊಳೊಂದು ಪರ್ಣಕುಟೀರಮಿರಲಲ್ಲಿಗೆ ವಂದು ಪ್ರಸೂತೆಯಾಗಿಗಂಡುಗೂಸಂ ಮುಂದಿಟ್ಟುಕೊಂಡಿರ್ದಳಾ ಸಮಯದೊಳೋರ್ವಂಬಂದು ಮಾತಂಗವೇಷದಿಂ ಪದ್ಮಾವತಿಗೆ ಪೊಡಮಟ್ಟು ||

ಕಂ || ನೀನೆನ್ನ ಒಡತಿ ಎಂದೆನೆ | ಮಾನಿನಿನಸುನಕ್ಕಿದೆತ್ತವೋದಪೆಪೆಸರಿಂ || ನೀನಾರಿಲ್ಲಿಗೆ ಬಂದುದ | ದೇನೆನಗರಿಪೆನೆನಗುತಯವನಿಂತೆದಂ || ೧೬೪ ||

ವ || ಈ ಜಂಬೂದ್ವೀಪದ ಭರತಕ್ಚೇತ್ರದ ವಿಜಯಾರ್ಧಪರ್ವತದ ದಕ್ಷಿಣಶ್ರೇಡಿಯವಿದ್ಯತ್ಪುರದೊಡೆಯ ವಿದ್ಯುತ್ಪ್ರಭಂಗೆ ಯಾತನಮನೋರಮೆವಿದ್ಯುಲ್ಲೇಖೆಗೆಪುಟ್ಟದ ಬಾಳದೇವನಾ ನೆನ್ನಪೆಂಡತಿ ಕನಕಮಾಲೆವೆರಸುದಕ್ಷಿಣಾಭಿಮೂಖಾನಾಗಿ ಪೋಗುತ್ತಿರಲು ರಾಮಗಿರಿಯ ವೀರಭೆಟ್ಟಾರಕರ ಮೇಲೆನ್ನವಿಮಾನಂಪೋಗದೆ ನಿಲುವುದಾದನದಕ್ಕೆ ಮುಳಿದುಬೆಟ್ಟಾರಕಗುಪಸರ್ಗಂಮಾಡೆ ಯದಕ್ಕೆ ಧರಣೇಂದ್ರ ಪದ್ಮಾವತಿಗಾಸನಕಂಪಮಾಗಿ ಅಲ್ಲಗೆ ಬಂದೆನ್ನಂಪಾರಭವಿಸಿ ಭಳಿಕ್ಕೆನ್ನಲ್ಲುಳ್ಳವಿದ್ಯಮನೆಲ್ಲವಂ ಛೇದಿಸಿದೊಡಾ ನದಕ್ಕೆ ಅಳ್ಕಿದೇವಿಗಾನತನಪ್ಪುದುಮದಕ್ಕುಪಶಂತಿಯನೈದಿರ್ಪುದುಂ ಎಲೆ ದೇವಿ ವಿದ್ಯೆಯನೆನಗೆ ಕಾರುಣ್ಯಂಗೆಯ್ಯೆನೆ ಪದ್ಮಾವತಿಯಿಂತೆಂದಳೀ ಹಸ್ತಿನಾಪುರದ ಸ್ಮಶಾನಸೊಳೋರ್ವಳು ಪ್ರಸೂತೆಯಾಗಲಾ ಬಾಲಕನಂ ನೀಂ ರಕ್ಷಿಸುತ್ತಿರಲಾತಂಗೆ ರಾಜ್ಯವಾದಸಮಯದಲ್ಲಿ ನಿನ್ನವಿದ್ಯಂಗಳು ನಿನಗೆಸಾಧ್ಯಮಾದಪವೆಂದಟಡೆ ಆಂ ಮಾದಿಗವೇಷದೊಳಂ ದಿನದಿನಂ ಮೊದಲಾಗಿ ಮಸಣವಟ್ಟಿಗೆಯಂ ಕಾದಿರ್ದೆನೆನೆ ಪದ್ಮಾವತಿಕೇಳ್ದು ಸಂತೋಷಂಬಟ್ಟು ||

ಕಂ || ಆದಡೆನೀನೀಕೂಸುಮ | ನಾದರದಿಂಸಲಹೆನುತ್ತ ಕೊಟ್ಟಳುಮುದದಿಂ || ಮಾದಿಗವೇಷದೊಳಿಹವಿ | ದ್ಯಾಧರತಿಳಂಗೆಬಾಲೆ ಬಾಲನನಾಗಳ್ || ೧೬೫ ||

ವ || ಆಗಳಾ ವಿದ್ಯಾಧರಂಕುಮಾರನಂಕೊಂಡುಪೋಗಿ ತನ್ನವಲ್ಲಭೆ ಕನಕಮಾಲೆಯಕೈಯ್ಯೊಳ್ಕುಡುವುದುಂ ಆಕೆಯಾಕೂಸಿನ ಕೈಯ್ಯಹರ್ತ್ತಿಂಕಂಡು ಕರೆಕಂಡುವೆಂಬ ಪೆಸರನಿಟ್ಟು ಸಲಹುತ್ತಿರಲಿತ್ತಲು ||

ಕಂ || ನಿರತಿಶಯಬ್ರಹ್ಮಚಾರಿ | ವರಮತಿಗಾಂಧಾರಿವೆಸರಿನಕ್ಕಂಗಳುತಾಂ || ಪುರದಪೊರವೊಳಲಬಸದಿಯ | ಸುರುಚಿರತಪನೀಯವೇದಿಕಾಗ್ರದೊಳಿರ್ಪರ್ || ೧೬೬ ||

ವ || ಅವರಸಮೀಪಕ್ಕೆ ಪದ್ಮಾವತಿಪೋಗಿ ಚೈತ್ಯಾಲಯಮಂಪೊಕ್ಕು ಸಮಾಧಿಗುಪ್ತಾಚಾ ರ್ಯರಂ ಕಂಡವರ್ಗೆವಂದಿಸಿ ದೀಕ್ಷೆಯಂಕಾರುಣ್ಯಂಮಾಳ್ಪುದೆನಲವಧಿಯಂ ಪ್ರಯೋಗಿಸಿ ಮುನೀಂ ದ್ರರಿಂತೆಂದನಿವಗಿನ್ನು ಕೆಲಕಾಲದಿಂಮೇಲೆಯಲ್ಲದೆ ಧಿಕ್ಷೆಯಿಲ್ಲೆಂಬುದಾಕೆ ಯದೇಕೆನೆ, ಪಿಂದಣಜನ್ಮ ದೊಳುನೀಂ ಮೂರುಸೂಳ್‌ಬ್ರತಂಗಳಂಮಾಡಿದಫಲದಿ ಮೂರುದುಃಖಮನನುಭವಿಸಿ ಯಿನ್ನವರುಪಶಮದಿಂ ನಿನ್ನಮಗನರಾಜ್ಯಸಂಪತ್ತಿಯುಮಂ ನೋಡಿ ಬಳಿಕ್ಕಾತಂಗೂಡಿ ನಿನಗೆದೀಕ್ಷೆಯಕ್ಕುಮೆನೆ ಪದ್ಮಾವತಿಕೇಳ್ದು ಸಂತೋಷಮನಾಂತು ಮಗುಳ್ದುಬಂದು ಪುತ್ರಮುಖಾವಲೋಕನಂಗೆಯ್ದು ಗಾಂಧಾರಿಬ್ರಹ್ಮಚಾರಿಣಿಯಕ್ಕಂಗಳ ಪಕ್ಕದೊಳಿರುತಿರಲು ||

ವೃ || ಆಕರಕಂಡುನಿಂಗಖಿಳಶಾಸ್ತ್ರಸಮಾಗಮಂ ಸಮಸ್ತವಿ | ದ್ಯಾಕುಶಲತ್ವಮಂ ಖಚರವಲ್ಲಭ ನಭ್ಯಸಿಸುತ್ತಮಿರ್ಪಿನಂ | ಪ್ರಾಕಟಕೀರ್ತಿಯಂತಳೆದುಬೇರೆಚತುರ್ಮುಖನೆಂಬಪೇರ್ಮೆಯಂ | ಸ್ವೀಕರಿಸಿರ್ದ್ದನುದ್ಘತರಯೌವ್ವನಕಾಲದೊಳಾ ಕುಮಾರಕಂ || ೧೯೭ ||

ವ || ಅಂತೆಖಿಳಕಳೆಗಳೊಡನೆ ನಿಯಮಿಸಿದ ಕ್ರಮದೊಳೆಬೆಳೆಯುತ್ತಿರ್ಪಿನಮಾ ಕಾಲದೊಳು ಜಯಭದ್ರರು ವೀರಭದ್ರಾಚಾರ್ಯರಲ್ಲಿಗೈತಪ್ಪಎಡೆಯೊಳಯ ನರಕಪಾಲಂಬಿದ್ದಿರಲದರಬಾ ಯೊಳೊಂದು ಬಿದಿರುಂ ಕಣ್ಗಳಪೊಳಲ್ಗಳಿಂದೆರಡು ಬಿದಿರುಕಂದಿರಕೋಲಕಾವಿನಂತೆ ಬೆಳೆದಿಪ್ಪುದಂ ಅದಂಕಂಡು ವೀರಭದ್ರಾಚಾರ್ಯರು ಜಯಭದ್ರಚಾರ್ಯರು ಬೆಸಗೊಂಡರೆಲೆಸ್ವಾಮಿ ಈಪ್ರಕಾರದೊಳಿವುಪುಟ್ಟಿದ ಕಾರಣಮೇನೆನಲಾಚರ್ಯರಿಂತೆಂದರೀಪಟ್ಟಣದೋಳೋರ್ವ ರಾಜಪುತ್ರಂ ರಾಜ್ಯಂಗೆಯ್ವನಾತನೇರುವ ಗಜದಂಕುಶದಂಡವೊಂದು, ಮವನಬೆಳ್ಗೊಡೆಯದಂಡವೊಂದು ಮಾತನವಿಜಯಧ್ಯಜದಂಡವೊಂದು ಮಾಗಲ್ಕೆಪುಟ್ಟದವೆನೆ ಕೆಲದೊಳೋರ್ವಪಾರ್ವಂ ಕೇಳುತ್ತಿರ್ದವಂ ಖಂಡಿಸಿಕೊಂಡು ಪೋಗುತ್ತಿರೆ ವಿದ್ಯಾಧರಬಾಳಕನಪ್ಪ ಕರೆಕಂಡುಕುಮಾರಂ ಕಂಡವಕ್ಕೆ ಬೆಲೆಯಂ ಕೊಂಬುದನ್ನೆಗಂ ಕೆಲವುದಿನಕಾ ಪುರಾಧಿಪತಿಯಪ್ಪ ||

ಕಂ || ಬಲವಾಹನನಂತಕನೃಪ | ನಿಳೆಯವನೆಯ್ದಲ್ಕೆಕೆಲವುಭೂಭುಜರೆಲ್ಲಂ || ನಲಿದಾತನರಾಜ್ಯಶ್ರೀ | ಲಲನೆಯಕೈವಿಡಿವೆವೆಂಬಬಗೆಯಂತಂದರ್ || ೧೬೮ ||

ವ || ಅದಕ್ಕೆ ಬಳವಾಹನನಮಂತ್ರಿವರ್ಗಮೆಲ್ಲಂ ನೆರೆದು ||

ಕಂ || ನೃಪನಿಲ್ಲದಧರೆಚಂದ್ರಾ | ತಪಮಿಲ್ಲದರಾತ್ರಿಸೂರ್ಯನಿಲ್ಲದಗಗನಂ || ಕೃಪೆಯಿಲ್ಲದರಿಂಮಾನ್ಯ | ದ್ವಿಪಮಿಲ್ಲದಸೇನೆತಾನದೇನೆಸೆದಪುದೋ || ೧೬೯ ||

ವ || ಎಂದು ತಮ್ಮೊಳೆಲ್ಲಂ ನಿಶ್ಚೈಸಿಪಟ್ಟದಾನೆಯಂ ತರಿಸಿ ಬರಿಕೈಯೊಳು ಕನಕಕಲಶಮಂ ಕೊಟ್ಟು ಮಂತ್ರವಿಧಾನದಿಂದರ್ಚಿಸಿ ಬಿಟ್ಟಡದು ರಾಜ್ಯಕರ್ಹನನರಸುತ್ತಂ ಬಂದು ಪುರದಪೊರಮೆ ಯ್ಯಪಿತೃವನದೊಳಿರ್ದ ಕರೆಕಂಡುಕುಮಾರನಂಕಂಡಾತ್ಮೀಯ ಶುಂಡಾದಂಡದಗ್ರಪಲ್ಲವದ ಸುವರ್ಣಕಲಶದ ಗಂಧೋದಕಮನಾತನುತ್ತಮಾಂಗದೊಳು ರಾಜ್ಯಾಭಿಷೇಕಂ ಗೈಹು ತನ್ನೊರ್ಧ್ವಪಿಂಡದಮೇಲಿಟ್ಟುಕೊಂಡು ಮಗುಳ್ದು ಪುರಜನರಿಜನರೊಡನೆ ಜಯರವಂಬೆರಸು ಪುರಮಂ ಪುಗುತಪ್ಪಾಗಳ್ ||

ವೃ || ಎತ್ತಿದವೊಂದುಬೆಳ್ಗೊಡೆಗಳಂಬರಮಿಂಬುಗಿಡಲ್ಗೆ ಚಾಮರಂ | ತಳ್ತೊಡವಿಸಿದವುಮಧುರಮಂಗಳಗಾಯಕಗೆಯ್ಯೆನಿಸ್ವನಂ | ಮತ್ತೆದಿಂಗಂತಮಂಪೊಡೆವಭೇರಿಗಳಚ್ಚರಿಯಾಗೆಭೂ | ಪೋತ್ತಮನಾಗ್ನೆಪರ್ವಿನಿಲೆಪೊಕ್ಕನಿಳಾಧಿಪರಮ್ಮಹರ್ಮ್ಯಮಂ || ೧೭೦ ||

ವ || ಅಂತರಮನೆಯ ಮುಂದಣೋಲಗಶಾಲೆಗೆತಂದಾಗಜೇಂದ್ರಂರಾಜೇಂದ್ರನನಿ ಳುಪುವುದುಂ ಬೆಂಬಳಿಯೊಳುವಿದ್ಯಾಧರ ಭಾಳದೇವಂಬಂದುಕುಮಾರನವಂಶಮುಮಂ ತನ್ನವೃತ್ತಾಂಶಮೆಲ್ಲಮ ನನುಕ್ರಮದಿಂದಪೇಳೆಕುಲವೃದ್ಧರೆಲ್ಲರುಂ ಸಂತೋಷಂ ಬಟ್ಟು ಸಿಂಹಾಸನದ ಮೇಲೆಕುಳ್ಳಿರಿಸಿ ಸಾಮ್ರಾಜ್ಯಪಟ್ಟಮಂ ಕಟ್ಟುವುದುಂ ಬಾಳದೇವಂಗೆಮುಂಪೋ ದವಿದ್ಯೆಗಳೆಲ್ಲಂ ಸಾಧ್ಯವಾಗಲಾತಂ ಕರೆಕಂಡುಮಹಾರಾಜನಂ ಬೀಳ್ಕೊಂಡು ಪದ್ಮಾವತಿಗೆ ಪೊಡವಟ್ಟು ಪೊದನನ್ನೆಗಮಿತ್ತಲು ||

ವೃ || ಮಡಿಗೊರಲಿಂದಸೌಖ್ಯವಡೆದಿರ್ದವುದಿಕ್ಕರಿಕಂಠನಾಳಮಂ | ತಡವಿದನಂದುಪನ್ನಗ ಮಹೀಪತಿಕೂರ್ಮನಬೆನ್ನಖಪ್ಪರಂ | ಖಿಡಿವಿಡುತಿರ್ಪ್ಪುದಂದುವದೆಮಾರ್ಣದುದಕ್ಷಿಣಬಾಹು ದಂಡದೊ | ಳ್ಪೊಡವಿಯನಾವಗಂತಳೆಯಲಾ ಕರೆಕಂಡುಧರಾಧಿನಾಯಕಂ || ೧೭೧ ||

ವ || ಅಂತು ಸುಖದಿಂ ರಾಜ್ಯಗೆಯುತ್ತಂ ಪ್ರತಿಕೂಲ ರಾಜರೆಲ್ಲರತೇಜಂ ಗೆಡಿಸಿ ||

ಕಂ || ಕರಕಂಡುಕ್ಷಿತಿಪಾಳನ | ನಿರುಪಮವಿಜಯಪ್ರತಾಪಮಂ ಕೇಳ್ದುನಿ || ರ್ಭರದಿಂದೆ ದಂತಿವಾಹಂ | ಚರರಂಕಳುಹಿದನುವಿಗ್ರಹಾಗ್ರಹಚಿತ್ತಂ || ೧೭೨ ||

ವ || ಅಂತಾಸಮಯದೊಳೋರ್ವ ದೂತಂ ಬಂದು ಕರೆಕಂಡುಮಹಾರಾಜನಂ ಕಂ ಡು ಪೊಡವಟ್ಟು ಬಿನ್ನವಿಸಿದಂ, ದೇವಾ, ನೀವುಮದೀಯಸ್ವಾಮಿಗಳಾಳುಗೆಲಸಮಂ ಪೂಣ್ದುಸುಖದಿಂ ರಾಜ್ಯಂ ಮಾಡುವುದೆನೆ, ಕೇಳ್ದು ಕೆರಳ್ದ ಕೇಸರಿಯಂತೆ ವಿಕ್ರಮದಿಂಕೃತಾಂತನಂತೆ ಮಾಮಸಗಿಂ ತೆಂದಂ ನಾಳೆಸಂಗ್ರಾಮಭೂಮಿಯೊಳಾ ರೊಡೆಯರಪ್ಪರವರಿಗಾಳು ಗೆಲಸಮಾಗಲಿ ಪೋಗೆಂದಾ ಚರನಂ ತಿರಸ್ಕರಿಸಿಪುರಮಂ ಪೊರಮಡಿಸಿಕಳೆವುದವಂಮಾರಿಯದೂತನಂತೆ ಮಗುಳ್ದು ಬಂದು ತನ್ನೊಡೆಯದಂತಿವಾ ಹನನಂ ಕಂಡು ತತ್ಸ್ವರೂಪಮಂ ಪೇಳುತ್ತಿರ್ಪನ್ನೆಗಮಿತ್ತಲು ||

ವೃ || ಕರಿವೃಂದಂಬೃಂಹಿತಂನಿರ್ಭರತರಹಯಹೇಷಾರವಂಸ್ಯದನಪ್ರ | ಸ್ಫುರಿತೋದ್ಯಚ್ಚಕ್ರ ನಾದಂಪಟುಭಟಕುಳದಾಸಿಂಹನಾದಮಗಳಾಶಾಂ | ತರಮಂತಳ್ಪೊಯ್ಯೆಕೇತು ವ್ರಜಮಿಳಿರೆನಭೋಭಾ ಗದೊಳ್‌ಕೋಪದಿಂದಂ | ಪೊರಮಟ್ಟಂದಂತಿ ವಾಹಕ್ಷಿತಿಪನೊಳಿರಿಯಲ್ ರಾಜರಾಜೇಂದ್ರಚಂದ್ರಂ || ೧೭೩ ||

ವ || ಅಂತು ನಡೆತಪ್ಪಾಗಲೋರ್ಮ್ಮೊದಲೊಳೆ ಪೊಯ್ವನಿಸ್ಸಾಳಂಗಳನಿನಾದಂಗಳಬ್ಬರಿಸುವ ಬೊಬ್ಬೆಯಕೊಳಾಹಳಂಗಳೊಳಂ ಭೂಮಂಡಲಂ ಬಾಯ್ವಿಡಲೆತ್ತಿಬಂದು ಚಂಪಾಪುರಮಂ ಸುತ್ತಿಬಿಟ್ಟಿಪ್ಪುದಂ ಕಂಡು ದಂತಿವಾಹನಂ ಚೋದ್ಯಂಬಟ್ಟು ತಾನುಂತನ್ನಬಲಾಧ್ಯಕ್ಷನಂ ಬರಿಸಿ ಸನ್ನಾಹಭೇರಿಯಂ ಪೊಯಿಸಿ ||

ವೃ || ಜಳನಿಧಿಮೇರೆಯಂಪ್ರಳಯದೊಳ್ತಳರ್ವಂದದಿನಾಂಕುಶಶೌರ್ಯ್ಯದೋ | ರ್ವಳನಿಧಿದಂತಿವಾಹನಬಳಂ ಪೊರಮಟ್ಟುನುಕೋಂಟೆಯಂಚತು | ರ್ಬಳವತಿರೌದ್ರದೊಳ್ಕರಿಯಂಹರಿಯಿಂರಥದಿಂಪದಾತಿಯಿಂ | ದಿಳೆಯೆಡೆಗೆಟ್ಟುಪೋದುದೆನೆಮಾ ರ್ಪೊಡೆಯಂತವಿಪಂದುಗರ್ವದಿಂ || ೧೭೪ ||

ವೃ || ಎತ್ತಿದಕೊಂತಮೇರಿಸಿದ ಬಿಲ್ವರಿಯಿಂದಲೆಗಲ್ದಬಾಳ್ತೊಳಂ | ಗುತ್ತಿಹತೋ ಮರಂಝ ಡಿವಕಕ್ಕಡೆಶೆಲ್ಲೆಯಂಗಳ | ತ್ಯುತ್ಕಟಮಾಗೆಬಂದುಸಮರಾಂ ಗಣದೊಳ್ತಲೆಮುಟ್ಟುದಂದುಮೂ | ವತ್ತೆರಡಾಯುಧಂಬೆರಸುವಾರಣವಾಹನವೀರಸಾಧನಂ || ೧೭೫ ||

ವ || ಅಂತು ಸಂದಣಿಸಿಬಂದ ವ್ಯೂಹಮನೊಡ್ಡುವ ಸಮಯದೊಳು ಪದ್ಮಾವತಿ ದಂತಿವಾಹನದಲ್ಲಿಬಂದುಪಿಂದಣವೃತ್ತಾಂ ತಮಂ ಪೇಳ್ವುದು ಮತ್ಯುದ್ಗತಕಂ ಠನಾಗಿ ಕಾಂತೆಯಮು ಖಾವಳೋಕನಂ ಗೈಯ್ಯುತ್ತಂ ||

ಕಂ || ಗಜದಿಂದಿಳಿದಾಗಳೆಯಾ | ತ್ಮಜನಂಪೆತ್ತಂತೆದಂತಿವಾಹನನೊಲವಿಂ || ನಿಜಸುತನೆ ಡೆಗೆಯ್ತಂದಂ | ವಿಜಯಶ್ರೀರಮಣನಾತ್ಮಸತಿವೆರಸಾಗಳ್ || ೧೭೬ ||

ವ || ಅಂತು ತನ್ನ ತನ್ನ ಸಮೀಪಕ್ಕೆಬಂದ ತಂದೆಗೆ ಸಾಷ್ಟಾಂಗವೆರಗಿದ ಕರೆಕಂಡುರಾಜನಂ ದಂತಿವಾಹನಂ ದಿಕ್ಕರಿಕರಾನುಕಾರಿಗಳಪ್ಪ ಕರಂಗಳೀಂತೆಗೆದು ತರ್ಕೈಸಿಕೊಂಡನೇಕಾಶೀರ್ವಾದಂಗಳಿಂಪರಸಿ ತಂದೆಮಕ್ಕಳೊಂದಾಗಿ ಮಗುಳ್ವುದು ಜನಂಗಳಾಶ್ಚರ್ಯಂಬಡೆ ಪುರಮಂ ಪೊಗುತಪ್ಪಾಗಳು ||

ವೃ || ಮಾಡಮನೇರಿವಪ್ರಸಿಖರಂಗಳನೇರಿ ಸಮಸ್ತ ದೇವತಾ | ನೀಡಮನೇರಿಪೌರತಳದೋಳೊಗಳಂಬಿಡದೇರಿಯಳ್ಕರಿಂ | ನೋಡಿದುದೊಂದುಪೌರಜನಮಾಪ್ತಜನಂನಲವಿಂಸುಹೃಜ್ಜನಂ | ಗೂಡಿಕಡಂಗಿದಿಟ್ಟವೆಳಗಿಂಗುಡಿಗಟ್ಟೆ ಪುರಾಂಗನಾಜನಂ || ೧೭೭ ||

ವ || ಅಂತೆಲ್ಲರುಂ ನೋಡೆ ರಾಜವೀದಿಯೊಳಾನೆಬಂದು ರಾಜಭವನಮಂ ಪೊಕ್ಕು ತಮ್ಮನಿಬರುಂಸುಖದಿಂದಿರುತ್ತಂ ಕರೆಕಂಡುಕುಮಾರಗಪ್ರತಿಮರೂಪುಕಳಾವತಿಗಳೆನಿಸಿದ ಕ್ಷತ್ರಿಯಪುತ್ತಿ ಯರೆಂಟುಸಾವಿರ ಕನ್ನೆಯರಂ ಮದುವೆಯಂ ಮಾಡು ಸಮಸ್ತರಾಜ್ಯಮಂ ಕೊಟ್ಟುದಂತಿವಾಹನಂ ಪದ್ಮಾವತಿಯೊಳಿಷ್ಟ ವಿಷಯಂಗಳಂ ಭೋಗಿಸುತ್ತಿರೆಕರೆಕಂಡು ಮಹಾರಾಜಂ ರಾಜ್ಯಲಕ್ಷ್ಮಿಗೆ ವಲ್ಲಭನಾಗಿರುತಿರಲಾ ಸಮಯದೊಳು ||

ವೃ || ಚೇರನಬಲ್ಪುಪಾಂಡ್ಯನಪೊಡರ್ಪುಮಚೋಳನಬಾಹುವೀರ್ಯಮಂ | ಬಾರಿಸಲಾರ್ಗಸಾಧ್ಯಮೆನೆದೇವವಿಚಾರಿಸವೇಳ್ಕುಮೆಂದುಕೈ | ವಾರಿಸಿಮಂತ್ರಿಮುಖ್ಯರೊಲವಿಂದವೆ ಬಿನ್ನವಿಸಲ್ಕೆಕೇಳ್ದುಕಂ | ಠೀರವನಂತೆಘರ್ಜಿಸಿದನಾಕರೆಕಂಡುಧರಾಧಿನಾಯಕಂ || ೧೭೮ ||

ವ || ಅಂತಾಸ್ಫೋಟಿಸಿ ಪ್ರಸ್ಥಾನಭೇರಿಯಂ ಪೊಯಿಸಿ ||

ವೃ || ಬಗೆಯೆಕುಳಾಚಳಂಗಳೆನೆಮತ್ತಗಜೇಂದ್ರಘಟಾಳಿರೌದ್ರದಿಂ | ದೊಗೆತರೆಸೈಸೈಸಾಗರಮಿದೆಂದೆನೆವಾಜಿರಾಜಿಗೆ | ಳ್ಮಿಗೆಬರೆಭೂತಳಂನೆರೆಯದೆಂದೆನೆಕೋಟಿವರೂಥಸಂಕುಳಂ | ಸೊಗಸಿರೆಬಂದುಬಗ್ಗಿಸುತನಿಂದೆರೆಪಾದಬಲಂನಿರಂತರಂ || ೧೭೯ ||

ವ || ಅಂತು ಮೇರೆಗೆಟ್ಟಾ ವೀರಸೇನೆಯಂಕೂಡಿಕೊಂಡು ತೆಗೆಯೊಳ್ವೀಡಬಿಟ್ಟು ||

ಕಂ || ದೂತನನಟ್ಟಿದಡವನಂ | ದಾತುರದಿಂಪೋಗಿಕಂಡುಮಗುಳ್ದಾಕ್ಷಣದಿಂ || ದೈತಂದೊಡೆಯಂಗೆಂದಂ | ಭೂತಟ್ಟಿದರೆನ್ನನರಸನೆಡವುದುಬೇಗಂ || ೧೮೦ ||

ವ || ಎಂಬುದುಮಾಪದದೊಳೆತ್ತಿ ಯುದ್ಧಭುಮಿಯಂಕೈಕೊಂಡು ಬೀಡಂಬಿಡುವುದಂಕೇಳ್ದು ||

ವೃ || ವಾರಣವೃಂದದಿಂದಪವನವೇಗತುರಂಗಮಸಂಕುಳಂಗಳಿಂ | ವೀರಭಟಾವಳಿಯಿಂರಥಿರಥಾವಳಿಯಿಂ ನೆಲನಿಂಬುಗೆಟ್ಟುದಿ | ನ್ನಾರಿದನಾಂಪರೆಂದು ಜರಿವುತ್ತಿರೆದಿಕ್ಪತಿಗಳ್ಸಮಗ್ರದಿಂ | ಚೇರನುದಗ್ರಜೋಳನತಿಬಲ್ಲಿದಪಾಂಡ್ಯನಿದಿರ್ಚಿತಾಗಿದರ್ || ೧೮೧ ||

ವ || ಅಂತು ಭಯಬಲಂತಮ್ಮೊಳುಕಾದಿ ಮಣ್ಮಳಿಯಾಗಿದಿನಾವಸಾನದೊಳೆರಡುಂ ಬೀಡುತೆಗೆತೆಗೆದು ಬಿಟ್ಟುಮರುದಿನಸಂಗ್ರಾಮರಂಗಮಂ ಕೈಕೊಂಡುಕಾದುತ್ತಿರಲು ಕರೆಕಂಡುಮಹಾರಾಜನ ಸೇನೆಯಂಕದೊಳು ಹಿಮ್ಮೆಟ್ಟೆಕಂಡು ಮದವಾರಣಮನಡರ್ದುತಮದೊಡ್ಡಿನಮೇಲೆತರಣಿಪಾಯ್ವಂತೆ ಕರಿಕಳಭಗಳ ಮೇಲೆ ಕಂತೀರವಂಕವಿದಂತೆ ನಿಜವಾರಣಮನಣದುನೂಂಕಿ ಚೋಳಚೇರಪಾಂಡ್ಯನಂಬಾಳ್ದಲೆವಿಡಿದು ಮಗಳ್ದು ಬೀಡಂಪೊಕ್ಕು ||

ವೃ || ಅವರಕಿರೀಟದೊಳ್ಪಳಸಿತೋರ್ಪಹಿರಣ್ಮಯ ಜೈನಬಿಂಬಮಂ | ವಿವರಿಸಿ ನೋಡಿಕಂಡುಮಹೀವತಿಬೆಚ್ಚಿಪ್ರೀತಿಯಿಂ | ದವರ್ಗೆವಿನಯವೃತ್ತಿಯಸಾರ್ಚಿ ಬಳಿಕ್ಕವರೊಳ್ನಿವಿರ್ಚಿದಂ | ಪವಣಿಸಬಾರದೆಂದೆನಿಪಕೂರ್ಮೆಯನಾವಸುಧಾಧಿನಾಯಕಂ || ೧೮೨ ||

ವ || ಬಳಿಕ್ಕವರಸಮ್ಯಕ್ತ್ವಮಂಕೇಳ್ದು ಮನ್ನಿಸಿನೀವೆನ್ನ ಬಂಧುಗಳೆಂದು ಬೇಡಿದುತ್ತಮಂ ಕೊಟ್ಟುತ್ತಮಕ್ಷಮೆಯಂಮಾಡಿ ಯವರಂಕೂಡಿಕೊಂಡು ತೆರೆಯಸಮೀಪಕ್ಕೆಬಂದು ಬೀಡಂಬಿಟ್ಟರ್ಪು ದುಮಿತ್ತಲು ||

ವೃ || ತಳಿಹದಪಚ್ಚೆಯಂಗಿತಲೆಸುತ್ತಿದ ಕತ್ತರವೀರಿಟೊಂಕದೊಳ್ತಳೆದಸಿಧೇನುಮೇರಿಸಿದ ಬಿಲ್ಲುಬಲಗೈಯೊಳು ತೂಗುವಂಬುಪೇ | ರ್ಬುಲಿಗಳುಮೇಲುವಾಯ್ಧು ತಲೆಮೆಟ್ಟಿದಯಕ್ಕವಡಂಕರಿಂಗಿಕ || ತ್ತಲಿಸುಮೆಯ್ಯತಿಂದೊಡೆಯರೆಯ್ತರೆನೊಳ್ಪವರ್ಗಾಯ್ತುಕೌತುಕಂ || ೧೮೩ ||

ವ || ಅಂತು ಬಂದೀರ್ವರುಂ ಬಲ್ಲಾ ದಟ್ಟೆಯದಾರಪಟ್ಟಿದೊಳು ನಿಂದಿರ್ದುದೌವ್ವಾರಿಕಂಗೆ ದಾರನುಂ ಶಿವನುಂಎಂಬ ಬೇಡರ್ಬಂದಿದ್ದರೆಂಬುದರಸಗೆ ಅರಿವೆನಲಾತಂನಂತೆ ಗೆಯ್ಯೆನೆಂದು ಪೋಗಿ ಯೊಳಗಂಪೊಕ್ಕು ಕರೆಕಂಡುಮಹಾರಾಜಂಗೆ ಬಿನ್ನವಿಸಲರಸ ಕೇಳ್ದೊಡಗೊಂಡುಬಾ ಯೆಂಬುದಮಂ ಕೊಂಡುಪೋಗಿ ಕಾಣಿಸೆವಂದಿಗರು ||

ಕಂ || ವಾರಣದಮುತ್ತಮಂಕಂ | ಠೀರವದನಖಂಗಳಂಚಂದನಮಂಕ || ಸ್ತೂರಿಯವೀಲೆಗಳಂಪೃ | ಥ್ವೀರಮಣಂಗಿತ್ತುವನಚರರ್ಪೊಡಮಟ್ಟರು || ೧೮೪ ||

ವ || ಅಂತು ಸಾಷ್ಟಾಂಗವೆರಗಿ ಪೊಡಮಟ್ಟುಬಿನ್ನವಿಸಿದ ರ್ದೇವಾ ಈ ಬೀಡಿಂಗೆಗವ್ಯೂತಿತ್ರಯಾಂತರದಲ್ಲಿ ಪರ್ವತದಮೇಲೆ ದಾರಶಿವಮೆಂಬ ಪಟ್ಟಣದಲ್ಲಿ ಸಹಸ್ರಸ್ತಂಭದ ಜಿನಾಲಯ ಮಾಜಿನಾಲಯದ ಕೆಲದಪರ್ವತದಮೇಲೊಂದು ವಾಲ್ಮೀಕಮಿರ್ಪುದು ಆಪುತ್ತಮಂ ನಿಚ್ಚಮೊಂದು ಬಳಿಯಾಣೆಯಾತ್ಮೀಯಹಸ್ತದೊಳು ಜಲಮಂ ತಾವರೆಯ ಪುಷ್ಟಮಂಕೊಂಡುಬಂದಾ ವುರುಗಾಲಯಮಂ ಪ್ರದಕ್ಷಿಣಂಗೆಯ್ದುದಕಮಂ ತೆಳಿದು ಕಮಳದಿಂಪೂಜಿಸಿ ಪೊಡಮಟ್ಟು ಪೋದು ದೆಂದು ಬಿನ್ನವಿಸಲ್ಕೇಳ್ದು ಕರೆಕಂಡು ಮಹಾರಾಜನವರ್ಗೆಪಸಾಯತದಾನಮಂ ಕೊಟ್ಟು ||

ವೃ || ಆಗಳೆಪೋಗಿ ಪಾರ್ಶ್ವಜಿನಪುಂಗವನಂವಿವಿಧಾರ್ಚನೆಗಳಿಂ | ಬೇಗದಿಪೂಜೆಗೆ ಯ್ದುರುಗವಾಸಮನೀಕ್ಷಿಸಲೆಂದುಬರ್ಪಿನಂ | ಪೊಗಜವೊಂದುಬಂರ್ತಿಯಿಂಪಿಡಿದು ಕೊಂಡುಸುರೇಂದ್ರಸಾಮ್ಯಮ | ಪ್ಪಾಗಮೊಂದುಬುದುಬಲಗೊಂಡುದು ರುಂದ್ರಪಗೇಹಮಂ || ೧೮೫ ||

ವ || ತದನಂತರಂ ಬರಿಕೈಯೊಳು ಮೊಗದುತಂದ ನಿರ್ಮಳೋದಕದಿಂ ಸಿಂಚನಂಗೈಯ್ದು ಸುಗಂಧಬಂಧುರಂಗಳಪ್ಪಿಂದೀವರದ ಪೂಗಳಿಂದರ್ಜಿಸಿ ಪೊಡಮಟ್ಟುಪೋಪುದುಂ ಕರೆಕಂಡು ಮಹಾರಾಜಂಕಂಡು ಚೋದ್ಯಂಬಟ್ಟು ಪುತ್ತಂಕಿತ್ತಲೆಕೆಡದಲೆಯಂಮಾಡಿ ಯಸಲ್ವೇಳ್ದು ನಿರೂಪಿಸಲಗಳ್ದು ನೋಡಲದರ ಮದ್ಯದೊಳ್ಮನೋಹರಮಪ್ಪ ಮಣಿಮಯಮಂ ಜೌಷೆಯಂಕಂಡು ಕೆಲಕ್ಕೆತೆಗೆದು ನೋಳ್ಪಾಗಳುನೇಸರಕಿರಣಂ ಗಳಿದೆಸೆಷ್ಟನಾಗಗ್ಗಳದೇವನೆಂದು ಪೆಸರನಿಟ್ಟು ನಯನದೊಳು ಪಾರಿಶ್ವನಾಥಪ್ರತುಮೆಯಂ ಸ್ಥಾಪ್ಯಮಂಮಾಡಿ ಮುನ್ನಿನಪ್ರತಿಮಾಗ್ರದಲ್ಲಿಯ ಕಲ್ಲಗಂಟಂಕಂಡೂ ||

ಕಂ || ಯಿದರಿಂದೀಪ್ರಥುಮೆಯಚಲು | ವದುಮಪ್ಪಂಗೆಟ್ಟುದೆಂದುಕಲುಗುಟಿಗನತಂ || ದದಸಾಣೆಯಿಕ್ಕಬೇಕೆನೆ | ಬೆದರಿನೃಪಾಳಂಗಮಂಬಳಿಕ್ಕಿಂದೆಂದಂ || ೧೮೬ ||

ಕಂ || ನೀರಶೆರೆಯಿದರಮೇಲೆವಿ | ಚಾರಿಸದೆನೃಪೇಂದ್ರಶ್ತ್ರಮಿಕ್ಕಿದಡಿದರೊಳು || ನೀರಾಕರಮೊಗೆದಪ್ಪುದು | ಬಾರಿಪರಾರಿದನೆನುತ್ತವಂಪೆರಸಾರ್ದಂ || ೧೮೭ ||

ವ || ಅದಂಕಂಡು ಕರೆಕಂಡುಮಹಾರಾಜಂ ಬಿನ್ನಾಣಿನಿಂತೆಂದ ನನ್ನಾಣಿಬೇಗ ವಡಿಯನಲವನಿಂತೆಂದು ನಂತಾದೊಡೆನೀನುಮಿಲ್ಲಾನು ಮಿಲ್ಲಮಿದಕ್ಕುಪಾ ಯಮನೊಂದಂ ಪೇಲ್ವೆನ ದೆಂತೆಂದೊಡೆ ತಾಳಪ್ರಮಾಣೋತ್ಸೆಧದಮರನ ನಟ್ಟಿಮೇಲೆನೆಲಹಕಿಟ್ಟಯಾ ನೆಲಹಿನಮೇಲೇರಿನೋಡುತ್ತಿರಲುಳಿವಂತಕ್ಕುಮೆನಲಾಕ್ಷಣದೊಳೆಮಾಡಿಸಿ ತಾನೇರಿಕೊಂಡು ಪೊಯ್ಯೆಂಬುದುಂ ||

ಕಂ || ಜಿನಶರಣೆಂದವನಾಗಳು | ಮನಸಂದಾಗ್ರಹದಿನಗ್ರದೇಶಮನುಳಿಯಿಂ || ದಿನಿಸುಂಮುಟ್ಟದಮುನ್ನವೆ || ವನನಿಧಿಕವಿದತ್ತುಭೂತಳಂ ತೆಯ್ತವಿನಂ || ೧೮೮ ||

ವ || ಅದನರಸಂ ಕಂಡಾತಂಕಂಗೊಂಡು ದರ್ಭಶಯನದಲ್ಲಿ ಪ್ರತುಮೆಯಂ ಮರಳಿಕಾಣ್ಬನ್ನೆಗಂ ದ್ವಿವಿಧಸನಸ್ಯಸನಮೆಂದು ಕೈಯ್ಯಿರ್ವನ್ನೆಗ ಮಾಸಮಯದೊಳೋರ್ವ ನಾಗಕುಮಾರದೇವಂ ಬಂದು ಕಣ್ಗಮಾಗಿತೆಂದಂ ಕಲಾದಮಹಾತ್ಮೆಯಿಂ ಪ್ರತುಮೆಯಂ ರಕ್ಷಿಸಲ್ಬಾರದದುಕಾರಣಂ ಜಲಮಯಮಂಮಾಡಿದೆನ್ನಂ ನಿಂದೆಗೆಯ್ಯಲ್ಬೇಡಾಗ್ರಹಮಂಬಿಟ್ಟು ಕಳೆವುದುನಲೊಡನೆ ದರ್ಭಶಯನದಿಂದೆರ್ದು ಕರೆಕಂಡುಮಹಾರಾಜಂನಾಗಕುಮಾರ ದೇವನಿಂತೆಂದ ನಂತಾದೊಡೆ ನಯಣಮಂಕೇಣವಿಲ್ಲದೆ ಮಾಡಿದಮಹಾನುಭಾವನಾತಂ ಪುತ್ತಿನೊಳು ಪ್ರತುಮೆಯಂಬಯ್ತಿಟ್ಟ ಪ್ರತಿಮಭವ್ಯನಾವನೆಂದು ಬೆಸರಗೊಂಬುದುಂ ನಾಗಕುಮಾರದೇವ ನಿಂತೆಂದ ನೀವಿಜಯಾರ್ಧಪರ್ವತದುತ್ತರ ಶ್ರೇಣಿಯನಭಸ್ತಿಳಕ ಪುರದೊಡೆಯನಮಿತ ವೇಗಸುವೇಗರೆಂಬರು ಮಾರ್ಯಾಖಂಡದ ಜಿನಾಲಯಮಂ ಪೂಜಿಸಲ್ಬಂದು ಮಳಯಗಿರಿಯೊಳು ರಾವಣಂರಚಿಸಿದ ರತ್ನಮಯಮಪ್ಪ ಚೈತ್ಯಾಲ ಯೆಮಂಕಂಡು ವಂದಿಸಿದ ಯಲ್ಲಿಯಜಿನಭವನಗಳಿಗೆಲ್ಲಿ ಪೂಜೆಯಂಮಾಡಿ ಆ ಪ್ರದೇಶದೊಳು ವಿಹಾರಿಸುತ್ತಂ ಪಾರ್ಶ್ವನಾಥಪ್ರತಿಕೃತಿಯಂಕಂಡು ಮಂದಿಸಿನೊಳಿಕ್ಕಿ ಕೊಂಡುದೊಳು ವಿಹಾರಿಸುತ್ತಂ ಪಾರ್ಶ್ವನಾಥಪ್ರತಿಕೃತಿಯಂಕಂಡು ಮಂದಸಿನೊಳಿಕ್ಕಿ ಕೊಂಡುಬರುತ್ತೀಪರ್ವತದಲ್ಲಿ ಪಯಣಮಂಮಾಡಿ ಮಂಜಾಷೆಯನಿರಿಸಿ ನಿನೋದಕ್ಕೆಪೋಗಿ ಯವಧಿಜ್ಞಾನಿಗಳಂಕಂಡು ವಂದಿಸಿ ಮಂಜಾಷೆಬಾರದಕಾರಣ ಮೇನೆಂದು ಬೆಸಗೊಂಬುದಾ ಮುನೀಶ್ವರನಿಂತೆಂದು ಪೂರ್ವದನಯಣದಮೇಲೆ ಮತ್ತೊಂದುನಯಣಮಂ ರಚಿಯಿನಲ್ಬೆಕೆಂದು ಪ್ರತುಮೆಸೂಚಿಸಿದಕಾರಣ ಮಲ್ಲಿ ನೆಲಸಿತೆನೆಯದಂ ಸುವೇಗಂಕೇಳ್ದು ದುರ್ಧ್ಯಾನದೊಳ್ಸತ್ತು ಆನೆಯಾಗಿಪುಟ್ಟಿ ಮಂಜಾಷೆಯಂ ಪೂಜಿಸುತ್ತಿರಲು ಕರೆಕಂಡು ಮಹಾರಾಜಂ ಬಂದು ಮಂದಸಂತೆಗೆದು ನೋಳ್ಪಾಗಜಂ ಸನ್ಯಸನಮಂಕೊಂಡು ಮುಡುಪಿ ಸ್ವರ್ಗದೊಳ್ಪುಟ್ಟುವುದುಂ ಪ್ರತುಮೆಗೆ ಸ್ಥಿರತ್ವಮಾದಪುದೆಂಬುದನ ಮಿತ ಸುವೇಗರ್ಕೇಳ್ದು ನಯಣನಾರ್ಮಾಡುವರೆಂದು ಚೆಸಗೊಳ್ವುದುಂ ಮುನೀಶ್ವರರಿಂತೆಂದರೀ ವಿಜಯಾರ್ಧದಕ್ಷಿಣಶ್ರೇಣಿಯರಥದೂಪುರಚಕ್ರವಾಳ ಪುರದರಸರ್ನೀಳ ಮಹಾನೀಳರ್ತಮ್ಮವಿದ್ಯಗ ಳಮ ಮಗುಳೆಪಡೆದು ವಿಜಯಾರ್ಧಕ್ಕೆಪೋಗಿ ತವಮನಾಂತು ಸ್ವರ್ಗದೊಳುದೇವರಾದರೆಂಬಿದಂ ಮುನಿಗಳಿಂದ ಮುತವೇಗರ್ಕೇಳ್ದಾಗಳೆದೀಕ್ಷೆಗೊಂಡಮಿ ತವೇಗಂಮುಡುಪಿಬ್ರಹ್ಮೋತ್ತರಕಲ್ಪದಲ್ಲಿಯ ನಿಮಿಷನಾದಂ | ಸುವೇಗಂಪ್ರತುಮೆ ಯಾರ್ಥದಿಂದಳಿದೀಯಸ್ತಿಯಾದನಮಿತವೇಗಂಮಗುಳ್ದು ಬ್ರಹ್ಮೋತ್ತರದಿಂದಿಂಬಂದು ಸುವೇಗಚರಹಸ್ತಿಯಂ ಬೋಧಿಸಿದಕಾರಣಂ ಜಾತಿಸ್ಮರನಾಗಿ ಸಮ್ಯಕ್ತ್ವಪೂರ್ವಕಮಪ್ಪ ಬ್ರತಂಗಳಂ ಕೈಕೊಂಡುವುತ್ತಮಂ ಪೂಜಿಸುತ್ತಿರಲೋರ್ವನೀ ಫಣಿನಿವಾಸಮನಗುಳ್ದನೆಂದು ನೀಂಸನ್ಯಸನಮಂ ಕೈಕೊಂಬುದೆಂದಮಿತೆಂದನೀ ವಾಲ್ಮೀಕಮನಗಳ್ದಕಾರಣ ಮಾಗಂಧವಾರಣಂ ಸನ್ಯಸನಮಂ ಕೈಕೊಂಡುದು ಮುನ್ನನೀಸೀಕೆರೆಯಲ್ಲಿ ಧನದತ್ತನೆಂಬ ಗೋಪಾಳನಾಗಿರ್ದೊಂದು ಸಹಸ್ರದಳದಪೊಂದಾವರೆಯ ಪೂರ್ವ ಜಿನೇಂದ್ರನ ಮಂದೀಡಾದ ಪುಣ್ಯದಫಲದಿಂಕರೆಕಂಡುಮಹಾರಾಜಂ ನೀನಾದೆಯೆಂದುಪೇಳ್ದು ನಾಗಕುಮಾರದೇವಂ ಕರಿಪತಿಯಸ ಮೀಪಕ್ಕೆಪೋಗಿ ಧರ್ಮಶ್ರವಣಮಂ ಪೇಳೆಕೇಳ್ದು ಶುಭಪರಿಣಾಮದಿಂ ಶರೀರಭಾರಮನಿಳಿಪಿ ಸಹಸ್ರಾರಕಲ್ಪದೊಳ್ದೇವನಾಗೊಪುಟ್ಟದ ನಿತ್ತಕರೆಕಂಡುಮಹಾರಾಜಂ ತನ್ನೆ ದೆಸರೊಳು ತನ್ನ ತಾಯಿ ಪದ್ಮಾವತಿಯ ಹೆಸರೊಳು ತನ್ ದೇವನಪರಸರೊಳಂ ಮೂರುನಯಣಮಂಮಾಡಿಸಿ ಜಿನಪ್ರತಿಷ್ಟೆ ಯಂಮಾಡಿ ತನ್ನ ಮಗಂ ವಸುಪಾಳಂ ಗೆರಾಜ್ಯಮಂ ಕೊಟ್ಟು ತನ್ನ ತಂದೆ ದಂತಿವಾಹನನುಂ ಜೇರಚೋಳಪಾಂಡ್ಯಪ್ರಮುಖ ಕ್ಷತ್ರಿಯರ್ವೆರಸುಪದ್ಮಾವತಿ ಸಮೇತಂ ದೇಕ್ಷೆಯಂ ಕೈಕೊಂಡು ವಿಶಿಷ್ಟಮಪ್ಪ ತಪಮಂಮಾಡಿ ಯಾಮುಷ್ಯಾವಸಾನದೊಳು ಸನ್ಯಸನವಿಧಾಸದಿಂಮುಡುಪಿ ಸಹಸ್ರಾರ ಕಲ್ಪದೊಳ್ದೇವನಾಗಿಪುಟ್ಟದಂ ದಂತಿವಾಹನನಾದಿಯಾಗೆಲ್ಲರುಂ ತಮ್ಮಪರಿಣಾಮಶುದ್ಧಿಯೊಳು ಮುಡುಪಿ ಯಮರರಾದರಿಂತೀಕ್ರಮದೊಳು ಗೋಪಾಳನೊಂದು ಪೂವ್ವಿನಿಂ ಜಿನನನರ್ಚಿಸಿಪಿರಿದಪ್ಪ ರಾಜ್ಯವಿಭೂತಿಯಂ ಪಡೆದನೆಂದಡೆ ತ್ರಿಕರಣಶುದ್ಧಿಯಿಂಪೂಜಿಸಿದರಮಹಿಮೆಯ ನೇನನೆಂಬುದೆಂದು ಮತ್ತಮಿಂತೆಂದರು ||

* * *

ವಜ್ರದಂತನಕಥೆ

ವೃ || ಅನುಪಮಪುಣ್ಯನಪ್ರತಿಮಚಕ್ರಧರಂಜಿನರಾಜವೂಜೆಯಂ | ಮನಮೊಲಿದರ್ತ್ಥಿಯಿಂ ರಚಿಸಿ ತಾನವನೀಶ್ವರನಾದನೆಂದಡಿ | ನ್ನನುದಿನಮರ್ಚ್ಚಿಪಾತನವಿನೂತನಪುಣ್ಯದಪೆಂಪನೊಳ್ಪನಿಂ | ತನಿತಿನಿತೆಂದುಲೆಕ್ಖಮಿಡಬಲ್ಲವನಾವನಿಳಾತಳಾಗ್ರದೊಳ್ || ೧ ||

ವ || ಮತ್ತಮೀ ವಥತ್ತದಕಥೆಯೆಂತೆಂದೊಡೆ || ಈ ಜಂಬೂದ್ವೀಪದ ಪೂರ್ವವಿದೇ ಹದ ಪುಷ್ಕಳಾವತಿವಿಷಯದಲ್ಲಿ ||

ವೃ || ಪುರವೊಂದಿಪ್ಪುದುದೇವರಾಜಪುರಂಕೀಳ್ಮಾಡುತಂನೋಳ್ಪಡ | ಚ್ಚರಿಕೈಮಿಕ್ಕಿರೆ ಪುಂಡ ರೀಕಿಣಿಪುರಂವಾರಾಂಗನಾನೀಕದಿಂ || ಕರಿವಾಹಬ್ರಜದಿಂಬುಧಪ್ರತತಿಯಿಂ ಸೌಧಾಳಿಯಿಂ ರಾಜಮಂ | ದಿರವಿಸ್ತಾರದಿನಭ್ರಚುಂಬಿಕಲಶಪ್ರಾಕಾರದಿಂಸಂತತಂ || ೨ ||

ವ || ಅಂತಾಪುರಕ್ಕೆ ತೀರ್ಥಕರಕುಮಾರಂ ಯಶೋಧರಮಹಾರಾಜಂ ವಲ್ಲಭನಾಗಿರ್ದು ಮೊಂದುದಿವಸಂ ವೈರಾಗ್ಯಂಪುಟ್ಟ ವಜ್ರದಂತೆನೆಂಬ ತನ್ನ ಮಗಂಗೆ ರಾಜ್ಯಮಂಕೊಟ್ಟು ತಾಂ ತಪೋರಾಜ್ಯಮನಪ್ಪುಗೆಯ್ದುಯಿಪ್ಪುದುಮಿತ್ತಲೂ ||

ವೃ || ಪಿರಿದುಂಪ್ರತ್ಯರ್ಥಿಭೂಭೃತ್ಕುಲಧರಧರಾಗ್ರಂಗಳೊಳ್ಕೆಂಬಿಸಿಲ್ಭಾ | ಸುರದಿಂಪರ್ವ್ವಿತ್ತೆನಲ್ತಂನಯ ವಿಪುಳಲಸತ್ತೇಜಮಂತಾವಗಂತ || ಳ್ತಿರೆಧಾತ್ರೀಚಕ್ರಮಂದಕ್ಷಿಣ ನಿಜಭುಜದಿಂತಾಳ್ದಿದಂಧಾತ್ರಿಯಿಂದಂ | ಧರಣೀಶಂವಜ್ರದಂತಂರಿಪುನೃಪಕೃತಾಂತಂ ಜಯಶ್ರೀವಸಂತಂ ||

ಪ || ಅಂತು ವಿಕ್ರಾಂತವಿಳಾಸದಿಂ ರಾಜ್ಯಂಗೆಯ್ವುತ್ತೊಂದು ದಿವಸಮೊಡ್ಡೋಲಗದೊಳಿರ್ಪುದುಂ ದುಕೂಲವಸ್ತ್ರಗಳೊಳು ಗುಡಿಗಳಂಗಟ್ಟು ಯೀರ್ವರ್ಬಂದು ಪೊಡವಟ್ಟಂತೆಂದರ್ ದೇವಾ ಶಸ್ತ್ರಶಾಲೆಯೊಳು ಚಕ್ರರತ್ನಂ ಪುಟ್ಟತೆಂದನೊರ್ಬಂ | ಮತ್ತೊರ್ಬಂ ನಿಂಮತಂದೆಯಶೋಧರ ಭಟ್ಟಾರಕರ್ಗ್ಗೆ ಕೇವಲಜ್ಞಾಣ ಪುಟ್ಟತೆಂದು ಬಿನ್ನವಿಸಿದೊಡಾಯೀರ್ವರಿಗಂಗಚಿತ್ತಮಂಕೊಟ್ಟು ಆನಂದಭೇರಿಯಂಪೊಯ್ಸಿ ಪರಿಜನ ಪರಿವೃತಂ ಪಟ್ಟದಾನೆಯ ಬೆಂಗೆವಂದುಮುಂದೆ ಸಂದಣಿಸಿಪೊಯ್ವಮಂಗಳತೂರ್ಯಪ್ರಣಾದದಿಂ ಪ್ರದಿಕೃತಿಗಳಕರ್ಣಕ್ಕೆ ಕರ್ಣಾವತಂಸಮಾಗೆ ಸಮವಸರಣಮನೆಯ್ದೆ ವಂದುಗಂ ಧಸಿಂಧೂರದಿಂದವನಿಗವತಿಸಿವೊಳಗಂಪೊಕ್ಕುಜಿನರಕಾಯಕಾಂತಿ ಯೊಳುಮ್ಮಳಿಸಿ ಬಳಿಕನೇಕಾರ್ಚನೆಗಳಿಂದರ್ಚಿಸಿ ತದನಂತರ ಮಧಿಕವಿಶೋಧಿಪರಿಣಾಮದೊಳ್ಪುಟ್ಟದ ಪುಣ್ಯದ ಫಲದಿಂದ ಅವಧಿಜ್ಞಾನಮಾಗಳೆ ತನಗೆ ಸಂಭವಿಪುದುಂ | ಜಿನರಂಬೀಳ್ಕೊಂಡು ಪುಂಡರೀಕಿಣಗೆಬಪ್ಪುದುಂ ||

ಕಂ || ಭರದಿಂದಾಯುಧನಿಳಯ | ಕ್ಕರಸಂನಡೆತಂದುಚಕ್ರಪುಝೆಯನೊಲವಿಂ || ಪಿರಿದುಂಮಾಡೆಬಳಿಕ್ಕಂ | ಪರಚಕ್ರದಮೇಲೆನಡೆಯಲುದ್ಯುತನಾದಂ || ೪ ||

ವ || ಆಗಳುಬಳಾಧ್ಯಕ್ಷನಂಬರಿಸಿ ಪ್ರಸ್ಥಾನಭೇರಿಯಂಪೊಯ್ಸಿವೊರಮಟ್ಟುನಡೆಯೆ ||

ಕಂ || ದೆಸೆಗಳುಮಂಸುಳಿದವುಮಾ | ಗಸವಡಗಿತ್ತಬ್ಧಿಗಳ್ಕಲಂಕಿದವೆತ್ತಂ || ವಸುಧಿಚತುರಂಗಪದರಜ | ದೆಸಕದಿನುಳ್ಳಳ್ಕಿಕಡುನಡುಗಿತ್ತಾಗಳ್ ||

ವ || ಅಂತೆತ್ತಿನಡೆದು ಷಟ್ಖಂಡಭೂಮಂಡಳಮಂ ಬಾಯ್ಕೆಳಿಸಿಮಗುಳ್ದುಬಂ ದುಸುಖದಿಂ ರಾಜ್ಯಂಗೆಯ್ದೂ ಪುರಾಣದೊಳ್ಪ್ರಸಿದ್ಧಿಪೆತ್ತನೆಂದೊಡೀ ಜಿನಪೂಜೆಯ ನೇನೆಂಬುದೆನಲ್ಕೇಳ್ದೂ

ವೃ || ನಿರವದ್ಯಂವಿಶ್ವವಿದ್ಯಾಪತಿಸಕಳಗುಣಾಳಂಕೃತಂ ಸೂಕ್ತಿರತ್ನಾ | ಕರನರ್ಹತ್ಪಾದ ಪಂಕೇರುಹಷಡುಚರಣಂ ಕೀರ್ತಿಕಾಂತಾಮನೋಜಂ | ಸ್ಥಿರವಾಕ್ತಂಭವ್ಯಸೇವ್ಯಂ ಸಕಲಕಲವಿಜನಾನಂದಮಂ ದಾರಭೂಜಂ | ಧರಯೊಳ್ ತಾಂ ಪೆಂಪುವೆತ್ತಂ ಸುಲಲಿತ ಕವಿತಾಕಲ್ಪವಲ್ಲೀವಸಂತಂ || ೬ ||

ಗದ್ಯ || ಇದು ದಿವಿಜರಾಜವಿರಾಜಿತ ಕಿರೀಟತಟಘಟಿತನೂತ್ನ ರತ್ನಪ್ರತಾನಮರೀಚೀ ಮಂ ಜರೀರಂಜಿತ ಭಗವದರ್ಹತ್ಪರಮೇಶ್ವರ ಪಾದಾರವಿಂದ ಮಕರಂದಮದಕರಾಯಮಾನ ಶ್ರೀಮದನಂತವೀರ್ಯ್ಯ ಮುನೀಂದ್ರನಖಪದಮಯೂಖಲೇಖಾಲಲಾಮಂ ಭಾರತೀಭಾಳನೇತ್ರಂ ಉಭಯಕವಿತಾವಿಳಾಸಂ ಮಾಸಿವಾಳದ ನಾಗರಾಜವಿರಚಿತಮಪ್ಪ ಪುಣ್ಯಾಸ್ರವದೊಳು ಪೂಜಾನುಮೊ ದನ ಫಲನಿರೂಪಣಂ ದ್ವಿತೀಯಾಧಿಕಾರಂ ||

೧೨ನೆಯ ಅಧ್ಯಾಯದ ಅಂತ್ಯದಲ್ಲಿರುವ ವೃತ್ತಗಳು

ವೃ || ಪಿರಿದೊಂದಾನಂದದಿಂ ದಾನದ ಕಥೆಗಳುಮಂ ಕೇಳ್ವಭವ್ಯಳಿಗೆಂದು | ಸ್ಥಿರಸೌಖ್ಯಸ್ತ್ರೀ ಯುಮತ್ಯೂರ್ಜಿತವಿಮಳಯಶೋಲಕ್ಷ್ಮಿಯುಂದಿವ್ಯರೂಪುಂ || ಪರಮಾರ್ಥಂಶಕ್ತಿಸಾಮರ್ಥ್ಯಮು ಮತಿಸೊಬಗುಂ ಭಾವಿಸಲ್ಮುಕ್ತಿಕಾಂತಾ | ಪರಿರಂಭೋತ್ಸಾಹಸೌಖ್ಯೋನ್ನತಿ ಸಮನಿಸುಗುಂ ಮಂಗಳಂ ಶ್ರೀವಿಳಾಸಂ || ೧ ||

ವೃ || ಇದನೊಲಿದೋದಿವೋದಿಸಿಮನಂಬುಗೆಕೇಳ್ದೋದವಿಪ್ಪಭವ್ಯಲೋ | ಕದೊಳುವಿ ರಾಜಕುಂ ನರಸುರೇಂದ್ರ ಪದೋನ್ನತಿಮುಕ್ತಿಸಂಪದಂ || ಸದಮಳಕೀರ್ತ್ತಿತಾನೆನಲು ವಿಕೃತಿಭಾಸುರವೆತ್ತುಧಾತ್ರಿಯೊಳ್ | ಮುದಮನೊಡರ್ಚಿಪವಿದುದವೇಣ್ದೆಶೆಯಂ ಶಶಿಸೂರ್ಯ್ಯರಿರ್ಪ್ಪನಂ || ೨ ||

ಕಂ || ಶ್ರುತವಾರ್ದ್ಧಿಯಾರ್ಯ್ಯಸೇನ | ವ್ರತಿಪತಿಕೊಂಡಾಡಿತಿರ್ದ್ದಿಕನ್ನಡದೊಳ್ಪಂ || ಪ್ರತಿಪಾಲಿಸಿದಪನೆನಲೀ | ಕೃತಿಪೆರ್ಮ್ಮೆಯನಾರಿತುಂದೆಂಬುದೇನಚ್ಚರಿಯೋ || ೩ ||

ಕಂ || ಇದರಿಂಸಗರದನಗರ | ಕ್ಕುದಿತೋದಿತಪುಣ್ಯವಾಗೆಪುಣ್ಯಾಸ್ರವಮಂ || ಚದುರಕವಿನಾಗರಾಜಂ | ಮೃದುಬಂಧರಸೋಕ್ತಿಯಿಂಮನಂಬುಗೆ ಪೇಳ್ದೇಂ || ೪ ||

ವೃ || ಪಿರಶರಯುಗ್ಮಚಂದ್ರಪರಿಸಂಖ್ಯೆಶಕಾಬ್ದಮದಾಗೆವತ್ಸರಂ | ಸರಸಿಜನಾಭಗರ್ಭ ಮಳ ವಟ್ಟರಲಾಷಾಢಶುದ್ಧ ಜೌತಿಯೊಳಂ || ಬೆರಸಿರೆಶುಕ್ರವಾರಮಿಗೆ ಪುನರ್ವಸುತಾರೆಯೊಳ್ ಪ್ರಬಂಧವಿ | ಸ್ತರವಡೆಯಿತುಭಾವಿಸೆ ವಿನಯಜನೋದ್ಧರಣೈಕಕಾರಣಂ || ೫ ||

ಗದ್ಯ || ಇದು ದಿವಜರಾಜವಿರಾಜತ ಕಿರೀಟತಟಘಟನೂತ್ನ
ತ್ನ ಪ್ರತಾನಮರೀಚೀಮಂಜರೀರಂಜಿತ ಭಗವದರ್ಹತ್ಪರಮೇಶ್ವರ
ಪಾದರವಿಂದ ಮಕರಂದಮದಕರಾಯಮಾನ ಶ್ರೀಮದನಂತ
ವೀರ್ಯ ಮುನೀಂದ್ರನಖಪದಮಯೂಖಲೇಖಾಲಲಾಮಂ
ಭಾರತೀಭಾಳನೇತ್ರಂ ಉಭಯಕವಿತಾವಿಳಾಸಂ
ಮಾಸಿವಾಳದ ನಾಗರಾಜ ವಿರಚಿತಮಪ್ಪ ಪು
ಣ್ಯಾಸ್ರವದೊಳು ದಾನ ದಾನಾನುಮೋದ
ಪುಣ್ಯಪ್ರಭಾವ ನಿರೂಪಣಂ ದ್ವಾದ
ಶಾಧಿಕಾರಂ || ಶ್ರೀ ಶ್ರೀ ಶ್ರೀ

ಭದ್ರ ಭೂಯಾತ್

* * *