ವ || ಅಂತು ಸುಖದಿಂದಿರ್ದೊಂದುದಿವಸಂ ಭರತನಂಕರೆದಿಂತೆಂದಂ, ನಿನಗೆನ್ನ ರಾಜ್ಯದೊಳಾವಪಟ್ಟಣಂ ನಿನ್ನ ಮನಕ್ಕೆ ಬರ್ಪುದಂ ಬೇಡಿಕೊಳ್ಳೆನ ಭರತಂಮಹಾಪ್ರಸಾದಮೆಂದು, ಮೂರುಲೋಕದ ತುಟ್ಟತುದಿಯೊಳಿಪ್ಪ ಸಿದ್ದ ಪದವಿಯಂ ಕೈಕೊಂಬೆನೆಂಬುದುಂ ರಾಮಂ ಮಂದಸ್ಮಿತವದನನಿಂತೆಂದಂ ||

ಕಂ || ಇನ್ನುಂರಾಜ್ಯಶ್ರೀಯೊಳು | ಸನ್ನುತಮತಿನೆರೆದುಬಳಿಕ ಮುಕ್ತಿಶ್ರೀಯುಳ || ಮನ್ನಣೆವಡೆವುದುನೀಮ | ತ್ತೆನ್ನೊಡಗೂಡುವುದುಧಾತ್ರಿಜೆಯೆಂಬಿನೆಗಂ || ೧೨೨ ||

ವ || ಎಂಬುದುಭರತನಿಂತೆಂದಂ ||

ಕಂ || ಪಿಂದಾಂತಪಕ್ಕೆನಡೆಯ | ಲ್ಮೊಂದಿಸಿದಿರ್ದೇವಮೀಗಳೊಲಂವಿಂದನಿ || ರ್ಬ್ಬಂಧದಿಕೆಡಿಸಿದೆರಘುಪತಿ | ನೀಂದಯೆಗೈಮೆನಗೆಸಿದ್ಧಪದವಿಯನಧಿಪಾ || ೧೨೩ ||

ವ || ಎಂದುರಘಜಂಗೆರಗಿ ಭರತಂವೈರಾಗ್ಯನಿರನಾಗಿ ತಪಕ್ಕಿಚ್ಛೈಸಿ ಪೊಮಡುಸಮ ಯದೊಳು ಲಕ್ಷ್ಮೀಧರನಡ್ಡಂಬಂದು ಕೈಯಂಪಿಡಿಯಲ್ಕಾ ರಾಮಸ್ವಾಮಿ ಕಂಡಿಂತೆಂದನೆಲೆ ಲಕ್ಷ್ಮಣ ನೀನೆನ್ನ ಮನದೊಳಿರ್ದ್ದುದಂ ಮಾಡಿದೆಮೆಂದುಮೆಚ್ಚಿ ಬಳಿಕ್ಕಂಭರತನನೊಡಂಬಡಿಸಿ ನಿಲಿಸಿರ್ಪನ್ನೆಗಂ

ವೃ || ಗಗನಂಕೊಡೆಜಲಕ್ಕನಾಗಿಮೆರೆಯಲ್ಮದ್ಯಾಂಬುನೈರ್ಮಲ್ಯದಿಂ | ಸೊಗಸಲ್‌ಶಾಳಿಯಪಾಲನುಂಡು ಗಿಳಿಗಳ್ಚಕ್ಕಂದದಿಂದುಕ್ಕಿಮೇ | ಲ್ಕೊಗೆಯಲ್ದರ್ಪ್ಪಕಬಾಣಜಾಲಹತಿಯಿಂಪಾಂಥರ್ಕ್ಕಳುಳ್ಳಕ್ಕಿಮೆ | ಯ್ದೆಗೆಯಲ್ಬಂದುದುನೋಡೆನಾಡೆಶರದಂಬನ್ನೋಡಿಬಾಷ್ಪಡಂಬಿನಂ || ೧೨೪ ||

ವ || ಅಂತು ಬಂದಶರದಾಗಮನಲಕ್ಷ್ಮಿಯಂ ರಘುನಂದನಂ ನೋಡಿ ಭರತಂಗೆ ಸಂಸಾರದಮೇಲಣ ಪ್ರೀತಿಪುಟ್ಟಲ್ವೇಳ್ಕೆಂದು ಜಲಕ್ರೀಡಾರಂಭವನೋಡರ್ಚಿ ||

ವ || ಅಂತು ಬಂದಶರದಾಗಮನಲಕ್ಷ್ಮಿಯಂ ರಘುನಂದನಂ ನೋಡಿ ಭರತಂಗೆ ಸಂಸಾರದಮೇಲಣ ಪ್ರೀತಿಪುಟ್ಟಲ್ವೇಳ್ಕೆಂದು ಜಲಕ್ರೀಡಾರಂಭವನೋಡರ್ಚಿ ||

ವೃ || ಕರಿಣಿ ವೃಂದದಮೇಲೆವಾರವನಿತಾ ಸಂದೋಹಮಿರ್ದತ್ತುಖೇ | ಚರಿಯರ್ನೀಲನ ಗೇಂದ್ರಚೂಳಿಕೆಗಳೋಳ್‌ಚಲ್ವಾದರೆಂಬಂತೆಸಿಂ || ಧುರಕುಂಭಸ್ತನಿಯರ್ಸರೋಜಮುಖಿಯರ್ಕ್ಕ ಸ್ತೂರಿಕಾಮೋದೆಯ | ರ್ವ್ವರದಿವ್ಯಾಂಬರಭೂಷಣಾನ್ವಿತೆಯರೆತ್ತಂನೋಳ್ಪಡಂ ತಾವಗಂ ||

ವ || ಅಂತು ಕಾಮನಕಾಳಕ್ಕೆ ಪಣ್ಣಿ ಬಂದ ಪೆಣ್ಣಾನೆಗಳಿಂತೆ ಕೈಗೆಯ್ದು ಬಂದಿರ್ದ್ದ ಪೆಂಡವಸದ ತಂಡಮಂನೋಡಿ ಭರತಮನದೊಳ್ನಿರುತಮಾದ ವೈರಾಗ್ಯ ವಜ್ರಲೇಪಮಂಕರ್ಚ್ಚಿಕಳೆಯಲ್ಕೆಂದು ಜಲಕ್ರೀಡೆಗೆತನ್ನಂತಃಪುರದ ವಧೂಜನಸಮೇತಂ ಸೀತೆವೆರಸಿ ನೀಂಪೋಗೆಂದು ಭರತನಂ ಕಳುಪುವುದು ಮಾತನಂತೆಗೆಯ್ವೆನೆಂದುಪೋಗಿಯೊಂದು ಸರೋವರದೊಳನಿಬರುಂ ಜಲಕ್ರೀಡೆಯಂನೀಡಿ ಮಾಡುತ್ತಿರೆ ತಾನೊಂದೆಡೆಯತಣ್ಪುಳಿಲ ತಾಣದೊಳು ಧ್ಯಾನಮಾನಸನಾಗಿ ದ್ವಾದಶಾನುಪ್ರೇಕ್ಷಗಳಂ ಭಾವಿಸುತ್ತಿರ್ಪನ್ನೆಗಮಲ್ಲಿ ಜಲಕ್ರೀಡೆಗಳಂ ತೀರ್ಚ್ಚಿಯವರ್ಗ್ಗಳಂ ಕೂಡಿಕೊಂಡು ಮಗುಳ್ದುಬಪ್ಪಾಗಳೋರ್ವನೈತಂ ದಿಂತೆಂದಂ || ದೇವನಿಮ್ಮಡಿಗಳ ರಾಜ್ಯಶ್ರೀಪಾದಕ್ಕೆ ಮೂಲಸ್ತಂ ಭಮೆನಿಸಿರ್ದ ತ್ರಿಜಗದ್ಭೂ ಷಣಗಜಂ ಕ್ರೋಧೀಎಂಬ ಮದದೊಳ್ಮತ್ತನಾಗಿ ಕಟ್ಟಿರ್ದಲೋಹದಕಂ ಭಮಂ ತೊಟ್ಟನೆ ಮುರಿದಿಕ್ಕಿ ಲೋಹದಶೃಂಖಲೆಗಳಂ ಪಟ್ಟುಪರಿಯಮಾಡಿ ಕಟ್ಟಪಂಜರದಿಂ ಪೊರಮಟ್ಟು ಬರುತಬ್ಬರಿಸುವಾಲೆಕಾರರ ಬೊಬ್ಬೆಗಳಿಗೆ ಬೆಬ್ಬಳಂ ಪೊಗದೆ ರಾಮಲಕ್ಷ್ಮಣರಂ ಲೆಕ್ಕಂಗೊಳ್ಳದೆ ಪಕ್ಕದೊಳಕ್ಕುಳಿಸದೆ ಪತ್ತೆಸಾರಿದವೀರಭಟರ ನೊಕ್ಕಲಿಕ್ಕಿ ರಾಜವೀಥಿಯಿಂಪುರಮಂ ಪೊರಮಟ್ಟು ಬರುತ್ತಿರ್ಪುದೆಂದು ಪೇಳ್ವದನ್ನೆಗಂ ||

ವೃ || ಅಳಿನೊಳಾಳನಿಟ್ಟುತುರಗಂಗಳನಾತುರದಿಂದಲಿಕ್ಕಿಶುಂ | ಡಾಳನಿಕಾಯಮಂವದನದಿಂದಿರದೆತ್ತಿ ಬಿಡುಪ್ರದೇಶಮಂ | ಶೀಳಿಬಿಸುಟ್ಟುಸಂಹರಿಪಕಾಲನವೋಲ್ತ್ರಿಜಗದ್ವಿಭೂಷಣ | ವ್ಯಾಳಗಜೇಂದ್ರನೈತರಲುಕಂಡನದಂಭರತಕ್ಷಿತೀಶ್ವರಂ || ೧೨೬ ||

ವ || ಅಂತು ಮಾಮಸಕಂಮಸಗಿಬಪ್ಪ ಕರಿಯಂಕಂಡು ತನ್ನೊಡನೆಮುಂದೆ ಬರ್ಪಸಾಮಂತ ಸೀಮಂತಿನಿಯರು ಭಯಂಗೊಳ್ವರೆಂದೆಲ್ಲರಂಪೆರಗಿಕ್ಕಿ ಕಟ್ಟಾನೆಯಂ ಮುಟ್ಟೆ ಆ ಗಜಂ ಮಂತ್ರವಾದಿಯಂಕಂಡ ಗ್ರಹದಂತೆ ನಿಗ್ರಹಮುನುಳಿದು ತನ್ನ ಮೇಲಿಟ್ಟುಕೊಂಬುದುಂ ಪುರಜನಂಗಳೆಲ್ಲಂ ಚೋದ್ಯಂಬಡೆ ನಿಜರಾಜಮಂದಿರಮಂ ಪೋಕ್ಕನನ್ನೆಗಮಾದ್ವಿಪೇಂ ದ್ರನುದಿನದಿನಮೊದಲಾಗಿ ನೀರಂಕುಡಿಯದೆ ಕವಳಂಗೊಳ್ಳದಿ ಪುದುಮದರಪರಿಚಾರಕಂಬಂದು ರಾಮಂಗೆ ಬಿನ್ನವಿಸಲ್ಕೇಳ್ದು ತನ್ನ ತಮ್ಮಂದಿರ್ವೆರಸುಬಂದು ಹಸ್ತಿಯಂ ಸಂಬೋಧಿಸೆ ಕೈಕೋಳ್ಳದಿರೆ ರಾಮಂ ಚಿಂತಾಕ್ರಾಂತನಾಗಿರ್ಪಿನಮಾದ್ವಿರದೇಂದ್ರಂಮೂರುದಿನಂಬರಂನಿರಾಹಾರನಾಗಿರಲತ್ತಂ || ಋಷಿನಿವೇದಕಂಬಂದು ಪೊಡವಟ್ಟಂತೆಂದು ಬಿನ್ನ ಹಂಮಾಡಿದಂ ನಿಮ್ಮ ಪುಣ್ಯೋದಯದಿಂ ದೇಶಭೂಷಣಭಟ್ಟಾರಕರ ಸಮವಶರಣಂ ಮಹೇಂ ದ್ರೋದ್ಯಾನಕ್ಕೆ ಬಂದಿಪ್ಪುದೆನೆಕೇಳ್ದು ಬಡವಂನಿಧಾನವಂಕಂಡಂತೆ ಹರುಷಮಂತಾಳ್ದು ಆನಂದ ಭೇರಿಯಂಪೊಯ್ಸಿ ಸರ್ವಜನಸಮೇತಂ ಬಂದು ಗಂಧ ಕುಟಿಯಂಪೊಕ್ಕುತ್ರಿಳೋಕವಂದ್ಯನನ ನೇಕಾರ್ಚನೆಗಳಿಂದರ್ಚಿಸಿ ತದನಂತರಂ ಬೆಸಗೊಂಡನೆಲೆಸ್ವಾಮಿ ತ್ರಿಜಗದ್ಭೂಷಣಂ ಕೋಪದಿಂತೊಲಗಿ ಆಹಾರಂಗೊಳ್ಳದ ಕಾರಣಮೇನೆನೆ ಭಟ್ಟಾರಕರಿಂತೆಂದರದು ಭರತನಂಕಂಡು ಜಾತಿಸ್ಮರನಾಯ್ತೆನೆ ಯಂತಾದೊಡದರ ಭವಾಂತರವೃತ್ತಾಂತಮಂ ಕಾರುಣ್ಯಂಮಾಳ್ಪುದೆನೆ ಕೇವಳಿಗಳು ಭರತನ ತ್ರಿಜಗದ್ಭೂಷನ ಭವಾಂತರಮಂಪೇಳಲುದ್ಯುಕ್ತರಾದರದೆಂತೆಂದೊಡೆ ||

ಕಂ || ನೀನಾಳ್ವಯೋಧ್ಯಪುರದೊ | ಳ್ತಾನಿಪ್ಪಂಸುಪ್ರಭಂಮಹಾತೇಜಯುತಂ || ದಾನಿಪ್ರಹ್ಲಾದಿನಿಯೆಂ | ಬಾನಾಮದಕಾಂತೆನೋಡೆಮಡತಿಯಾದಳ್ || ೧೨೭ ||

ವ || ಅಂತವರೀರ್ವರ್ಗ್ಗಂ ಚಂದ್ರೋದಯ ಸೂರ್ಯ್ಯೋದಯರೆಂಬ ಮಕ್ಕಳ್ಪುಟ್ಟವೃಷಭಸ್ವಾಮಿಗಳ ಬೆಂಬಳಿಯೊಳೆ ದೀಕ್ಷೆಯಂ ಕೈಕೊಂಡು ಮರೀಚಿಯಿಂದ ಕೆಟ್ಟು ಮುಡುಪಿ ಪಲಕಾಲಂ ತಿರ್ಯ್ಯಂಚಗತಿಯೊಳು ಭ್ರಮಿಸಿ ತದನಂತರಂ ಕುರುಜಾಂಗಣವಿಷಯದ ಹಸ್ತಿನಾಪುರಮನಾಳ್ವ ಹರಿಪತಿಗಮಾತನರ್ಧಾಂಗಿ ಮನೋಹರಿಗಂ ಚಂದ್ರೋದಯನಾ ಮಂಬಂದು ಕುಳಂಕರವೆಸರಮಗನಾಗಿ ಶ್ರೀಧಾಮೆಯೆಂಬ ರಾಜಪುತ್ರಿಯೊಳ್ ಮದುವೆಯಾಗಿ ಸುಖದಿಂದಿ ರುತ್ತಿರಲಾ ಹರಿಪತಿಯಪ್ರಧಾನಂ ವಿಶ್ವಾವಸುಗಂ ಅಗ್ನಿಕಾಂಡೆಗಂ ಸೂರ್ಯ್ಯೋದಯನಾಮಂಬಂದು ಮೂಢಶ್ರುತಿಯೆಂಬ ಮಗನಾಗಲಾಹರಿಪತಿ ತನ್ನ ಮಗ ಕುಳಂಕರಂಗೆ ಸಮಸ್ತರಾಜ್ಯಮಂಕುಡೆ ಮೂಢಶೃತಿ ಪ್ರಧಾನನಾಗಿರ್ದೊಂದುದಿವಸಂ | ಕುಳಂಕರಂ ತಾಪಸರಂ ಪೂಜಿಸಲು ಪೋಗುತ್ತ ಭಿನಂದನ ಭಟ್ಟಾರಕರಂ ಕಂಡುವಂದಿಸಿ ಧರ್ಮರ್ಶರವಣಮಂಕೇಳ್ದು ಬ್ರತಂಗಳಂಕೈಕೊಳ್ವುದಾ ಭಟ್ಟಾರಕರಿಂತೆಂದು ದರ್ನಿನಗೊಂದು ಪೂರ್ವವೃತ್ತಾಂತಮಂ ಪೇಳ್ವೆವದೆಂತೆನೆ ನಿಮ್ಮ ತಂದೆ ಹರಿಪತಿ, ಮನೋಹರಗೆಭ್ಯಮೆಂಬ ತಾಪಸನಾಗಿರ್ದು ಮುಡುಪಿಮತ್ತಮಾ ತಾಪಸಾಶ್ರಮದ ಸಮೀಪದ ಶುಷ್ಕವೃಕ್ಷಗಳೋಳ್ಮಹೋರಗನಾಗಿರ್ದಪನೆಂದು ಭಟ್ಟಾರಕರ್ರು‍ಳಂಕರಂಗೆಪೇಳಲ್ಕದಂ ಕೇಳ್ದಲ್ಲಿಗೆವೋಗಿ ನೋಳ್ಪನ್ನೆಗಂ ಪನ್ನಗನಾಗಿರೆಕಂಡುತಾಂ ದೃಢವ್ರತಾಚಾರಮನಪ್ಪುಗೆಯ್ದೊಡೆ ತನ್ನ ಪ್ರಧಾನಂ ಮೂಢಶ್ರುತಿಕಂಡು ಆ ವ್ರತಂಗಳಂಕೆಡಿಸೆ ಆ ಈರ್ವರನುಜಾರೆಯಪ್ಪ ಶ್ರೀಧಾಮೆಕೊಲೆಸತ್ತು ||

ಕಂ || ಮೊಲನುಂಮುಂಗಿಲಿಯುಂಮ | ತ್ತಿಲಿನವಿಲುಂಮತ್ತದೊಮ್ಮೆಪಾವುಂವೃಷಭಂ | ಸಲೆಕರಿಮಂಡುಕನಾಗಿಯು | ಮಲಸದೆತಿರುಗುತ್ತಮಿರ್ದ್ದರಿಪ್ಪನ್ನೆವರಂ || ೧೨೮ ||

ವ || ಮತ್ತಮಾಕಪ್ಪೆ ಕರೀಂದ್ರಪಾದಘಾತದಿಂದಮುಡುಪಿ ಭೇಕ ಮಾಗಿಪುಟ್ಟಯಾಗಜೇಂದ್ರಪಾದಹತಿಯಿಂ ಮರಣಮನೈದಿ ಮೂರುಬಾರಿ ಕಪ್ಪೆಯಾಗಿಯಾ ಕರಿಯಿಂಮಡುಪಿಕರ್ಕ್ಕಟಮನಾಂತಿರ್ಪುದಾವಾರಣಂ ಮರಣದೊಳೊಂದು ಮಾರ್ಜಾರನಾಗಿರ್ದ ವಿಷದಂಶವಿ ಳಯೆಮನೈದಿ ಚರಣಾಯುಧನಾಗಲಾ ಕರ್ಕ್ಕಾಟಂವಾಯಸದಿಂದ ಹತನಾಗಿ ತಾಂಮೊಸಳೆಯಾಯ್ತಾ ಕೋಳಿಕೀನಾಶನಿವಾಸಮನೆಯ್ದಿ ಮೀನಾಗಿಪುಟ್ಟ ಯಿವುಮೊದಲಾಗಿ ಅನೇಕಯೋನಿಗಳೊಳು ಜನಿಯಿಸಿಬಂದೂ ||

ಕಂ || ರಾಜಗೃಹಮೆಂಬಪುರದೊಳು | ರಾಜಿಸಿದಂವಿಪ್ರನೋರ್ವಬಹ್ವಾಸನನೆಂ || ದೋಜೆವಿಧನವನಪೆಂಡತಿ | ಭೂಜನಸಂಸ್ತುತೆಯುಳೂಕೆಯೆಂಬಳ್ಪಸರಿಂ || ೧೨೯ ||

ವ || ಈರ್ವರ್ಗಂ ಮೂಡಶ್ರುತಿಯೆಂಬ ಜೀವಂಬಂದು ವಿನೋದನೆಂಬ ಮಗನಾಗಿ ಸಮಿದೆಯೆಂಬಳ್ಗೆವಲ್ಲಭನಾಗಿರ್ಪುದುಂ, ಇತ್ತಕುಳಂಕರನಾಮಜೀವಂಬಂದು ಆಕೆಯಕಿರಿಯಮ ಗಂರಮಣನೆಂಬ ನಾದನಾರಮಣಂ ವಿದ್ಯಾರ್ಥಿಯಾಗಿ ದೇಶಾಂತರಂಪೋಗಿ ವಿದ್ಯಾಭ್ಯಾಸಂಗೆಯ್ದು ಮಗುಳ್ದುರಾಜಗೃಹಕ್ಕೆಬಂದು ರಾತ್ರಿಯೋಳ್ಪುರಮಂ ಪೊಗಲ್ಪಡಯದೆ ಪೊರವಳಲಯಕ್ಷಿಣಿಯ ದೇವಾಲಯದೊಳಿರ್ಪುದುಂ ||

ಕಂ || ಅತ್ತಲವಳ್ನಾರಾಯಣ | ದತ್ತಾಖ್ಯಂಜಾರನುಸುರ್ದಸಂಕೇತಕ್ಕಂ || ಚಿತ್ತಭವತಾಪದಿಂಬೇ | ಯ್ವುತ್ತಂರಾತ್ರಿಯೊಳುಸಮಿದೆಯಂದೈತಂದಳ್ || ೧೩೦ ||

ವ || ಅಂತುಬಂದು ಯಕ್ಷಿಣಿಯಭವನಮಂಪೊಕ್ಕು ತನ್ನುಪಪತಿಯಂಕಾಣದೆ ಸಮಿದೆಯನಂಗಾಗ್ನಿ ಸಮಿದೆಯಾಗಿ ಮುನ್ನಂಬಂದಿರ್ಪ ರಮಣನಂಕಂಡು ನೀನಾರೆಂದು ಬೆಸಗೊಳ್ವನ್ನೆಗಂ ||

ಕಂ || ಹಿಂದೆನೆಬಂದುವಿನೋದಂ | ಸಂದಯಮಂತಾಳ್ದೊತನ್ನತಮ್ಮನನಾಗಳ್ || ಕೊಂದನವಿವೇಕವಿಕಳಂ | ಸೌಂದರ್ಯ್ಯಗೊಲಿದಮನುಜರೇನಂಮಾಡರ್ || ೧೩೧ ||

ವ || ಅಂತವನಂವಧಿಯಿಸಿ ಸಮಿದೆಯನೊಡಗೊಂಡುಪೋಗುತ್ತಿರೆ ||

ಕಂ || ಅವಳತಿವಿಹೋದ್ರೇಕದಿ | ನವಯವದಿಂಮುಳಿದುಕೊಲೆವಿನೋದನನಾಗಳ್ || ಅವರೀರ್ವ್ವರೊಂದಿದುರ್ಧರ | ಭವಸಾಗರದಲ್ಲಿಮೂಡಿಮುಳುಗುತ್ತಿರ್ದ್ದರ್ || ೧೩೨ ||

ವ || ಬಳಿಕಮಾ ಈರ್ಬರೊಂದು ಭೀಮಾಟವಿಯೊಳ್ವನಮಹಿಷಂಗಳಾಗಿಪುಟ್ಟಪೊರ್ದಿ ಅಂತಕನಿವಾಸಮನೆಯ್ದಿ ಕರಡಿಗಳಾಗಿ ಕಾಳ್ಗಿಚ್ಚಿಂಬೆಂದು ಬೇಡರಾಗಿಯುವರ್ಕಾಲಂಗೊಂಡು ||

ಕಂ || ಹರಿಣಿಯಬಸುರೋಳ್ಮುದದಿಂ | ಹರಿಣದ್ವಯಮಾಗಿಜನಿಯಿಸಲ್ಕಾಪದದೋಳ್ || ಹರಿಣಯುಗದಮಾತೃಕೆಯಂ | ಶರದಿಂದಂಬೇಡನೆಚ್ಚು ಕೆಡಹಿದನೋರ್ವಂ || ೧೩೩ ||

ವ || ಅಂತದಂಕೊಂದಾ ಎರಡುಮರಿಗಳಪುಳಿಂದಂಕೊಂಡುಪೋಗಿ ಸಲಹುತಿರಲವುಬೆಳೆದು ಶೈಶವಮಂಕಳೆದಿಪ್ಪನ್ನೆಗಮಿತ್ತ ವಿಮಳನಾರ್ಥಸರ್ವರ್ಜ್ಞರಂವಂದಿಸಲ್ಕೆಸ್ವಯಂಭೂತಿರಥನೆಂಬ ರಸಂ ಪೋಗುತ್ತಂ ಆ ಎರಡುಹರಿಣಂಗಳಂಕಂಡು ||

ಕಂ || ಕಾಡೊಡೆಯಂಗವನೀಪತಿ | ಬೇಡಿದುದಂಕೊಟ್ಟುಹರಿಣ ಪೋತಕಯುಗಮಂ || ನೀಡಿಲ್ಲದೆಕೊಂಡೊಯ್ದಂ | ಕೂಡಿದುದಂಕಾಲಲಬ್ಧಿಯಂಮೀರುವರಾರ್ || ೧೩೪ ||

ವ || ಅಂತು ಕೊಂಡು ಪೋಗಿ ಸಲಹುತ್ತಮಿರೆ ಅವುಬೆಳೆದು ಅದೇ ಹಾರದ ಮನೆಯೊಳ್ಕಟ್ಟುವುದು ಮವರೊಳುಕಿರಿಯರಮಣಚರನಪ್ಪ ಹರಿಣಂಉಪಶಾಂತೆ ಚಿತ್ತದೋಳ್ಮುಡುಪಿ ಸ್ವರ್ಗದೋಳ್ದೇವನಾಗಿ ಪುಟ್ಟದುದು. ಇತ್ತಲು ವಿನೋದಚರನಪ್ಪ ಹರಿಣಂದುರ್ಭಾವದಿಂಸತ್ತು ತಿರ್ಯ್ಯಗ್ಗತಿಯೋಳ್ಬ್ರಮಿಸುತ್ತಮಿರ್ದುದು ಮಿತ್ತಲುಪಲ್ಲವದೇಶದ ಕಾಪಿಲ್ಯನಗರದ ಧನದತ್ತನೆಂಬ ಪರದಂಗಂ ಆತನಪೆಂಡತಿ ಧಾರಿಣಿಯೆಂಬಳಾ ಯೀರ್ವರ್ಗಂ ಸ್ವರ್ಗದಿಂ ರಮಣಚರದೇವಂಬಂದು ಭೂಷಣನೆಂಬಮಗನಾಗಿ ಪುಟ್ಟದದಿನಂ ಮೊದಲಾಗಿ ಋಷಿಯರರೂಪುಮಾತ್ರಮಂಕಂಡಡೆ ದೀಕ್ಷೆಗೊಂಬೆನೆಂಬಾದೇಶಮಂಧನದತ್ತಂಕೇಳ್ದಾತನಂ ಪದಿನೆಂಟು ಕೋಟಿ ದ್ರವ್ರಕ್ಕೊಡೆಯನಂಮಾಡಿ ಯುತ್ತುಂಗಹರ್ಮ್ಯದಳುದಗ್ರಪ್ರದೇಶಮನೇರಿಸಿ ಸುಕುಮಾರಪದವಿಯೊಳಿರಿಸುವುದುಮಿಪ್ಪನ್ನೆಗಂ ||

ವೃ || ನೆರೆದದಿವೌಕಸರ್ಕಳವಿಮಾನದರತ್ನ ಮರೀಚಿಮಾಲೆಗ | ಳ್ಸುರಪತಿಚಾಪವಲ್ಲರಿಗಳಂ ಪರಪುತ್ತಿರೆಹೇಮಕಿಂಕಿಣೀ | ಸ್ವರಮಮರ್ದ್ದುಪುದುಂಗೊಳಿಸೆಬಂದುದು ದೇವನಿಕಾಯಮಾಗಳಂ | ಬರತಳಮಂಪಳಂಚಲೆಯೆಬಂಧುರಮಂಗಲಗೀತನಿಸ್ವನಂ || ೧೩೫ ||

ವ || ಅಂತು ಶ್ರೀಧರಭಟ್ಟಾರಕರ ಕೇವಲಪೂಜೆಗೆ ಪೋಪದೇವಾಗಮನಮಂಕಂಡು ಭೂಷಣಂಜಾತಿಸ್ಮರನಾಗಿ ಮಾಡದಿಂದಿಳಿದಾರುಮಂ ಕಾಣದಂತೆ ಗೂಢವೇಷದಿಂ ಪೊರಮಟ್ಟು ತಾನುವಂದನಾ ನಿಮಿತ್ತಂ, ಸಮವಸರಣಕ್ಕೆಪೋಗುತ್ತಂ ಬಟ್ಟೆಯೊಳುಪಥ ಶ್ರಾಂತನಾಗಿ ಒಂದುನಂದ ನದ ಮಾಮರದಕೆಳಗೆ ತಳಿರಹಾಸಿಕೆಯಮೇಲೆ ನಿದ್ದೆಗೈ ಯ್ಯುತಿರ್ಪುದಾತನ ಮೆಯ್ಯ ಸೌರಭಕ್ಕಾಸಕ್ತನಾಗಿ ಯೊಂದು ಕಾಳೋರಗಂಬಂದು ಪಿಡಿಯೆ ಶುಭಧ್ಯಾನದಿಂ ಮುಡುಪಿ ಮಾಹೇಂದ್ರಕಲ್ಪದೊಳ್ ದೇವನಾಗಿಪುಟ್ಟದನಾ ಭುಷಣ ನತಂದೆ ಧನದತ್ತಂ ಪುತ್ರಮೋಹದಿಂದ ಸತ್ತುತಿರ್ಯ್ಯುಗ್ಗತಿಯೊಳು ತಿರುಗುತ್ತಿರಲಿತ್ತಂ ಭೂಷಣ ಚರನಪ್ಪದೇವಂ ಮಾಹೇಂದ್ರಕಲ್ಪದಿಂಬಂದು ಪುಷ್ಕರಾರ್ಧದ್ವೀಪದ ಚಂದ್ರಾದಿತ್ಯ ಪುರದೊಡೆ ಯಂಪ್ರಕಾಶಂಗಂ ಆತನಭಾರ್ಯ್ಯೆ ಯಶೋಮಾಧವಿಗಂ ಜಗದ್ಯುತಿಯೆಂ ಬಮಗನಾಗಿಪುಟ್ಟ ||

ಕಂ || ಉತ್ತಮಪಾತ್ರಕ್ಕೊಲವಿಂ | ದುತ್ತಮವಸ್ತುಗಳನಿತ್ತದಾನದಫಲದಿಂ || ಮತ್ತಾತದೇವಕು ರುವಿನೊ | ಳುತ್ತಮವಂಶದೊಳುನಾಡೆಸಂಭವಿಸಿರ್ದ್ಧಂ || ೧೩೬ ||

ವ || ಮತ್ತಲ್ಲಿಂಕಳಿದು ಸ್ವರ್ಗದೊಳ್ದೇವನಾಗಿ ಪುಟ್ಟರ್ದನಂತರಂ ಆ ಕಲ್ಪದಿಂದಚ್ಯುತನಾಗಿಬಂದೀ ಜಂಬೂದ್ವೀಪದಪರವಿದೇಹದ ನಂದ್ಯಾವರ್ತ್ತ ಪುರಾಧಿನಾಥಂ ಸಕಳಚಕ್ರ ವತ್ರ್ತಿಯಚಳನಾತನ ಪಟ್ಟದರಸಿ ಬಾಳಹರಿಣಿಯಾ ಯೀರ್ವ್ವಗ್ಗಂ ರಾಮನೆಂಬ ಕುಮಾರನಾಗಿ ||

ವೃ || ಮನಸಿಜನಂಪರಾಭವಿಸಿರೂಪಿನಗಾಡಿಯೊಳೇಳ್ಗೆವೆತ್ತಯೌವ್ವನದೊಳು ಮೂರು ಲೋ ಕಮುಮಕಂಡುಜರುತ್ತುಣಸಮಮಾಗಿಮಾ | ನಿನಿಯರಚಿತ್ತದೊಳ್ಮುದಮ ನಾವಗಪುಟ್ಟಸಿ ಚಕ್ರನಾಥನಂ | ದನನಭಿರಾಮನೆಂಬ ನಿಜನಾಮನೂರ್ವ್ವಗುಂಟುಮಾಡಿದಂ || ೧೩೭ ||

ವ || ಅಂತು ಪೆಂಪೇರಿದ ಗಾಡಿಯೊಳು ರೂಢಿವಡೆದುಮಂತಃಪುರಚಶಃ ಸಹಸ್ರವನಿ ತಾ ನಿಕರಕ್ಕೆ ವಲ್ಲಭವನಾಗಿರ್ದ್ದಿಷ್ಟವಿಷಯ ಭೊಗಸಾಗರದೊಳೋಲಾಡಿ ಬಳಿಕ್ಕ ವೈರಾಗ್ಯಂಪುಟ್ಟ ತಪಕ್ಕೆ ಪೋಪಪದದೊಳ್ತಂಮ ತಂದೆಯಪ್ಪಚಳಂಮಾನಿನಿಯರು ಪಗಲಿಯ್ಯದಿರೆ ಗೃಹದಲ್ಲಿರ್ದ್ದುರ ಮಪ್ಪಣುವ್ರತಂಗಳಂ ಪಾಲಿಸಿ ಮುಡುಪಿ ಬ್ರಹ್ಮೋತ್ತರಕಲ್ಪದಲ್ಲಿ ದೇವನಾಗಿಪುಟ್ಟರ್ದ್ದನಿತ್ತಲು ||

ಕಂ || ಧನದತ್ತಂಸಂಸಾರದ | ವನಾಂತರದೊಳ್ತೊಳಲಿಬಂದುಪೌದನಪುರದೊಳ್ || ಜನಿಸಿರ್ದ್ದಗ್ನಿಮುಖಂಗಂ | ವನಜಾನನೆಶಕುನಿಯೆಂಬವದುವಿಂಗಾಗಳ್ || ೧೩೮ ||

ವ || ಮೃದುಮತಿಯೆಂಬ ಮಗನಾಗಲಾತನನೋದಲಿಡುವುದು, ಉಪಾದ್ಯನನೊಟ್ಪೈಸಿವೊದಲೊಲ್ಲದೆ ಸಪ್ತವ್ಯಸನವಿಭೂತನಾಗಿರಲವನತಂದೆ ಅಗ್ನಿ ಮುಖಂಕಂಡು ಜನಾಪವಾದಕ್ಕಂಜಿ ಮನೆಯಿಂದಂಪೊರಮಡಿಸೆ ದೇಶಂತರಂಪೋಗಿ ಕಳಾವಿದ್ಯೊಪಾಧ್ಯಾಯರ ಸಮೀಪದೊಳೋದಿ ಬಹುವಿದ್ಯಾವಿಶಾರದನಾಗಿ ಯೌವ್ವನದೊಳ್ಮೆರೆದು ಮಗುಳ್ದು ಪೌದನಪುರಕ್ಕೆ ಬಂದು ದೇಶಾಂತರ ವೇಷದೊಳುತಂಮಮನೆಗೆಯ್ತಂದು ತಂಮತಾಯಂ ನೀರಕುಡಿವೆನೆಂದು ಬೇಡಲಾಕೆ ತಂಗರಗದಿಂ ಶೈತ್ಯೋದಕಮಂ ಕುಡುಯಲೆರೆವುತ್ತ ದುಃಖಿ ತೆಯಾಗಿಯಳುತ್ತಿರೆ ಯಾತಂಕಂಡು ಯೆಲೆಯಂಮ್ಮಯಿ ದೇನುಕಾರಣ ದುಃಖ ಮನೈದುವಿರೆನೆನಿನ್ನಂದದಮಗಂ ದೇಶಾಂತರಂ ಪೋದನೆನಲಾ ಮೃದುಮತಿ ಅಂತಾದೊ ಡಾಂ ನಿಮ್ಮಮಗನೆಂಬುದುಂ, ಶಕುನಿಸಂಶಯಂಮಾಡಿ ಪಿಂದಣಕುರುಪುಗಳಂ ಪೆಳ್ದಡಾಕೆ ನಂಬಿ ತಮ್ಮೊಳುಕೂಡಿಕೊಂಬುದುಂ ಅಗ್ನಿಮುಖಂಬಂದುನೋಡಿ ಪರಮಾನಂದಮನೆಯ್ದಿ ವಸಂತೆ ರಮಣಿಯರೆಂಬ ಯೀರ್ವ್ವರ್ಸೂಳಯರ್ಗೆ ಧನಮಲ್ಲಮಂತೆತ್ತು ನಿರ್ದ್ಧನನಾಗಿ ಕನ್ನಗಳ್ಳರೊಡನಾಡಿ ಶಶಾಂಕಪುರಕ್ಕೆ ಪೋಗಿ ರಾತ್ರಿಯೊಳ ರಾಜಭವನಮಂಸಾರ್ದು ಸಜ್ಜಾಗೃಹಕ್ಕೆ ಕನ್ನಮಿಕ್ಕಲುಜ್ಜಿಗಿಸಂವ ಸಮಯದೊಳು ಮಾಪುರದೊಡೆಯಂ ನಂದಿವರ್ದ್ಧನಮಹಾರಾಜಂ ಶಶಾಂಕಮುಖಭಟ್ಟಾರಕರಸ ಮೀಪಕ್ಕೆಪೋಗಿ ಧರ್ಮ್ಮ ಶ್ರವಣಮಂಕೇಳ್ದು ವಿಷಯವಿರಕ್ತನಾಗಿಬಂದು ರಾತ್ರಿಯೊಳು ತನ್ನರಸಿಗೆ ಪ್ರಭಾತದೊಳು ದೀಕ್ಷೆಗೋಳ್ವನೆಂದು ಸಂಸಾರಸ್ವರೂಪಮಂ ಕನ್ನವಿಕ್ಕಲ್ಬಂದಿರ್ದ್ದ ಮೃದುಮತಿಕೇಳ್ದು ಮೃದುವತಿಯೆಂಬಪೆಸರನನ್ವರ್ತ್ಥನಂಮಾಡಿ ತನಗೆವೈರಾಗ್ಯಂಪುಟ್ಟೆ ಆಗಳೆಪೋಗಿ ಪ್ರಭಾತದೊಳೆ ದೀಕ್ಷೆಯಂಕೊಂಡು ಪನ್ನೆರಡುವರುಷಂ ಬರಂಗುರು ಸಮೀಪದೊಳಿರ್ದು ಎಕವಿಹಾರಿಯಾಗಿರ್ಪುದುಮಿತ್ತಲು ||

ಕಂ || ಪುರಮಿರ್ಪ್ಪುದುಮವಳೊಕನ | ಪುರಮಾಪುರದಿಂದಸರಿತ್ಪ್ರದೇಶದೊಳೆತ್ತಂ || ಗಿರಿಯಿರ್ಪುದೊಂದುಸುರವರ | ಗಿರಿಯೆನಲುತ್ತುಂಗರತ್ನಕೂಟವಿರಾಜಂ || ೧೩೯ ||

ವ || ಮತ್ತಮಲ್ಲಿ ||

ಕಂ || ಆಗಿರಿಯಗ್ರದೊಳಪಗತ | ರಾಗರ್ಗ್ಗುಣಸಾಗರಾಭಿಧಾನಂಪ್ರತಿಮಾ || ಯೋಗದೊಳಿರ್ದ್ಧಂಮುಕ್ತಿ | ಶ್ರೀಗೀಶಂಭವ್ಯಲೋಕವಂದಿತಚರಣಂ || ೧೪೦ ||

ವ || ಅಂತುನಾಲ್ಕುತಿಂಗಳು ಯೋಗನಿಯೋಗಮನಪ್ಪುಕೆಯ್ದಿರ್ದ ಭಟ್ಟಾರಕರಂ ಚತುರ್ನಿಕಾಯಾಮರರಯ್ದೆಕಂಡು ಪುರಮೆಲ್ಲಂನೋಡಿ ಚೋದ್ಯಂಬಡಲು, ಪೂಜಿಸಿಪೋ ಪುದುಮಾ ಮುನಿರಾಜಂ ಕೈಯೆತ್ತಿಯಾರು ಮಂಕಾಣಲೀಯ್ಯದೆ ಗಗನಚಾರಣನಪ್ಪುಯದರಿಂ ಗಗನಕ್ಕೊಗೆದು ಪೋಪುದು ಮಿತ್ತಲು ಆಚಾರ್ಯ್ಯನಿಮಿತ್ತಂ ಮೃದುಮತಿಗುರುಗಳು ಮವಳೋಕನಪುರಕ್ಕೆ ಬರಲು ಪುರಜನಮೆಲ್ಲರು ಬೆಟ್ಟದಮೇರಣಮಹಾತಪಸ್ವಿಗಳು ಬಂದರೆಂದು ತಮತಮಗೆ ಕೊಂಡಾಡಿ ಪೂಜೆಯಂಮಾಡೆ ಮೃದುಮತಿಯದಕ್ಕೊಂಡಬಟ್ಟು ಮೋನದೊಳಿರ್ದ್ದುಪೂಜಿಸಿಕೊಂಬುದು ಮತಂರ್ಮ್ಮುಹೂರ್ತ್ತಮಾತ್ರದೊಳ್ತಿರಿಯಗ್ಗತಿ ನಾಮಕರ್ಮ್ಮಂಕಟ್ಟ ಬ್ರಹ್ಮೋತ್ತಕರಕಲ್ಪದಲ್ಲಿ ದೇವನಾಗಿ ಮುನ್ನಂಪುಟ್ಟರ್ದ್ದಭಿರಾಮನಪ್ಪ ದೇವನಂಕಂಡು ಈರ್ವ್ವರ್ಗಂ ಪ್ರೀತಿಸಮನಿಸಿ ಅಲ್ಲಿಂಬಂದಭಿ ರಾಮಚರಾಮರಂ ಭರತನಾದಂ, ಮೃದುಮತಿ ಚರಾಮರಂಬಂದು ತ್ರಿಜಗದ್ಭೂಷಣನಾಮದ ಹಸ್ತಿಯಾದನೆಂಬುದುಂ ರಾಮಸ್ವಾಮಿಕೇಳ್ದಚ್ಚರಿವಡಲದಂ ಭರತನತಾಯಿ ಕೈಕೆ ವಿರಕ್ತೆಯಾಗಿ ವ್ಯಾಕುಳತ್ವಮನುಳಿದು ಮೂನೂರ್ವರು ರಾಜಪುತ್ರಿಯರೊಡನೆ ಪ್ರಿಯಮತಿಯ ಜ್ಜಿಕೆಯರ ಪಕ್ಕದೊಳು ತಪಮಕೈಕೊಂಡಿಪುದು ಮಾಗಜಂಪರಿಣತಜ್ಞಾನನಾಗಿ ವಿಶಿಷ್ಟಮಪ್ಪ ಶ್ರಾವಕವ್ರತಗಳಂಧರಿಸಿ ||

ವೃ || ಕರಿವೃಂದಂಬಂದು ನೀರ್ಗ್ಗುಡಿದನದಿಯೊಳ್ನಿರೂಡಿಹಸ್ತಿವ್ರಜಂಪು | ಷ್ಕರದಿಪೂಯ್ದಿ ಕಿನಿರೋಡಿದ ಚಿಗುರೆಲೆಯಂತುತ್ತಿಮೇಕತ್ವಮಂಬಿ | ತ್ತರಿಸುತ್ತಂಸ್ವಚ್ಛಭಾವಂ ನೆಲೆಗೊಳೆತ್ರಿಜಗದ್ಭೂಷಣಂ ನಾಡೊಳೆಲ್ಲಂ | ತಿರುಗತ್ತಿರ್ದತ್ತುಮತ್ಯುತ್ತಮಮಣುಗುಣ ಶಿಕ್ಷಾವ್ತತವ್ಯಾಪ್ತಚಿತ್ತಂ || ೧೪೧ ||

ವ || ಅನಂತರಂ ಸಕಲಜನಪದಮೆಲ್ಲಮಂ ಭವಣಿಯಂಬಂದಾಪ್ರಾಸುಕಾಹಾರಂಗಳಂ ದರ್ದ್ದರಾನುಷ್ಠಾನಮಾಡಿ ಸಮಾಧಿಯಿಂಮುಡುಪಿ ಬ್ರಹ್ಮೋತ್ತರಕಲ್ಪದೋಳ್ದೇವನಾಗಿಪುಟ್ಟದುದಿತ್ತ ಆದೇಶದಜನಂಗಳೆಲ್ಲ ಮದರಕಳೇವರಪ್ರತಿಕೃತಿಯಂ ಪ್ರತಿಷ್ಟೆಯಂಮಾಡಿ ಇದರಪ್ರಸಾದದೊಳು ನಿರುಜರಾಗಿರ್ದ್ದೆವೆಂದು ಕೊಂಡಾಡಿದೊಡೆ ಮೂಢಜನಂಗಳುಮೆಲ್ಲರು ಮರಿಯದೆ ವಿನಾಯ ಕನೆಂದು ಭಕ್ತಿಗೆಯ್ಯುತ್ತಿರ್ದ್ದರತ್ತಲ್ಭರತ ಭಟ್ಟಾರಕರ್ತಪಃ ಪ್ರಭಾವದಿಂಚಾರಣಾದ್ಯನೇಕ ಋದ್ಧಿಪ್ರಾಪ್ತರಾಗಿ ವಿಹರಿಸಿ ಕೇವಳಜ್ಞಾನಂಪುಟ್ಟೆ ಮೋಕ್ಷಮನೆಯ್ದಿದನಿಂತು ಭೂಷಣಂಜಿನಪೂಜೆಯಂ ಮಾಳ್ಪೆನೆಂಬ ಚಿತ್ತದೊಳ್ಮುಡುಪಿ ಇಂತಪ್ಪವಿಭೂತಿಗೊಡೆಯನಾದನೆಂದಡೆ ನಿಚ್ಚಂಜಿನೇಂದ್ರಪೂಜೆಯಂ ಮಾಳ್ಪರ ಮಹಿಮೆಯನೇನೆಂಬೆನೆಂದು ಮತ್ತಮಿಂತೆಂದರು ||

* * *

೬ನೇ ಕರೆಕಂಡುವಿನಕಥೆ

ವೃ || ಮನಸಂದಿಂದ್ರನರೇಂದ್ರವಂದ್ಯನಪದದ್ವಂದಂಗಳಂ ಪೂಜಿಪಾ | ತನಪೆಂಪಂಪೆರತೇನ ನೆಂಬುದದನುಂಗೋಪಾಳಕಂನಿರ್ದ್ಧನಂ | ಧನದತ್ತಂಜಿನರಾಜನಂಘ್ರಿಯುಗಮಂ ಹೆಮಾಬ್ಜದಿಂಪೂ ಜೆಗೆ | ಯ್ವೆನಸುಂಭೂಭುಜನಾದನೆಂದಡದನಿನ್ನೇವಣ್ಣಿಪೇಂಬಣ್ಣಿಪೇಂ ||

ವ || ಮತ್ತಮೀವೃತ್ತದ ಕಥೆಎಂತೆಂದೊಡೆ ಈ ಜಂಬೂದ್ವಿಪದಭರತಕ್ಷೇತ್ರದಾರ್ಯ್ಯಾಖಂಡದ ಕುಂಡಳದೇಶದೊಳು ||ಜ

ಕಂ || ನಾರಂಗದಸಹಕಾರದ | ಬೇರಿಂಕಾತಿರ್ದ್ದಪನಸವೃಕ್ಷದಚಲುವೆ || ತ್ತಾರಾಮಂಗಳ ಸಿರಿಯಂ | ತೇರೆಕರಂನೋಡೆನಾಡೆಕಣ್ಗೆಸೆದಿಕ್ಕುಂ || ೧೪೩ ||

ವ || ಆಪಟ್ಟಣಮಂ ನೀಳಮಹಾನೀಳರಾಳ್ವರಾಪುರದ ವಣಿಗ್ವರಂವಸುಮಿತ್ರನಾತನರಮಣಿ ಮಸುಮಿತ್ರೆಎಂಬಳವರಮನೆಯೊಳು ಜೀವದನಂಗಳಂ ಕಾವ ಗೋಪಂ ಧನದತ್ತನೊಂದುದಿವಸಂ ಪೇರಡವಿಯೊಳುಭೋರನೆಬರುತ್ತಮೊಂದು ನೀರಜಾಕರ ಮಂಕಂಡದರಮಧ್ಯದೊಳು ಜಲಸ್ತ್ರೀಯ ಮುಖಮಡಲದಂತಾನಂದಮನುಂಟುಮಾಲ್ಪ ಸಹಸ್ರದಳದಪೊಂದಾವರೆಯ ಪುಷ್ಪಮಂಕಂಡು ||

ಕಂ || ಇದು ಪೊಸತಿದನೊಯ್ದಾನತಿ | ಮುದದಿಂದೆನ್ನೊಡೆಯಗೀವೆನೆಂದತಿಭರದಿಂ || ಪದುಮಾಕರಮಂಪೊಕ್ಕಂ | ಸದಮಳಗುಣವಿತ್ತಚಿತ್ತನಾಧನದತ್ತಂ || ೧೪೪ ||

ವ || ಅಂತಾತನಾಸರೋವರಮಂಪೊಕ್ಕು ಹೇಮತಾಮರಸಮಂ ಕೀಳುವ ಸಮಯದೊಳು ಪೊಸತಾವರೆಯಂದದೊಳು ||

ಕಂ || ರನ್ನದಪುತ್ರಿಕೆಯಂತಿರೆ | ತನ್ನ ಯರೊಪೆಸೆಯೆತೊಟ್ಟನಾಪೂಗೊಳದಿಂ || ಪನ್ನಗವಧೂಟಿಯೋರ್ವ್ವಳು | ಚನ್ನೆಮನೊಜಾತಶರಮೆನಲ್‌ಪೊರಮಟ್ಟಳ್ || ೧೪೫ ||

ವ || ಅಂತು ಪೊರಮಟ್ಟೆಲೆಗೋಪಾಳ ಈ ಪೂವ್ವಂ ಎಲ್ಲರಿಂಗಧಿಕಂಗಲ್ಲದೆ ಕೋಡದಿರೆನೆ ಕರಲೇಸೆಂದು ಧನದತ್ತಂ ದತ್ತವದಾನನಾಗಿ ಪೂವ್ವಂಕೊಂಡುಬಂದದರ ವೃತ್ತಾಂತಮಂ ತನ್ನೊಡೆಯಂಗರುಪಲಾ ವಸುಮಿತ್ರಂ ಕೇಳ್ದುಮಂತಾದೊಡೆಮಗಿಂದಧಿಕನರಸನಾತಂಗೊಯ್ದು ಕೊಡಲ್ವೇಕೆಂದು ಗೋರಕ್ಷಕನೊಡಂಗೊಂಡು ರಾಜಭವನಕ್ಕೆಪೋಪ ಸಮಯದೊಳು ಧರಾಧಿನಾಥಂ ಸಹಸ್ರಕೂಟ ಜಿನಾಲಯಕ್ಕೆ ವಂದನಾ ನಿಮಿತ್ತಂಪೊರಮಟ್ಟು ಬರುತ್ತಿರಲು ಶ್ರೇಷ್ಠಿ ಯೊಡನೆಬರುತ್ತಂ ಧನದತ್ತಂಗೋಪಂ ತಂದಪೊದಾವರೆಯ ಪೂವಿನ ಕಾರಣಮಂ ಭೂಧರಂ ಗುರುಪುತ್ತಂಬರಲರಸಂ ಜಿನಾಲಯಮಂಪೊಕ್ಕು ಜಿನೇಂದ್ರಮುಖಾವಳೋಕನದಿಂ ಸೌಖ್ಯಮನೈದಿ ಪೊಡವಟ್ಟು ದರ್ಶನಸುತ್ತಿಗೈದು ತದನಂತರಂ ಕೆಲದೊಳಿರ್ದ್ದ ತ್ರಿಗುಪ್ತಾಚಾರ್ಯ್ಯರ್ಗೆ ನಮೋಸ್ತುಗೈದು ಧರ್ಮ್ಮಶ್ರವಣಾನಂತರಂ ಮುಮುಕ್ಷುಗಿಂತೆಂದನೆಲೆ ಸ್ವಾಮಿ ಎಲ್ಲರಿಂದಧಿಕರಾರೆಂಬುದು ಮುನೀಂದ್ರರಿಂತೆಂದರಿಲ್ಲರೆಂದಧಿಕ ಜಿನರೆಂದು ಪೇಳೆಕೆಲದೊಳಿರ್ದ್ಧಧನದತ್ತಂಕೇಳ್ದು ||

ಕಂ || ಆದೊಡೆಕೊಳ್ಳಲೆಜಿನಪತಿ | ನೀಧೊರೆಗಡಮೂಜಗಕ್ಕೆನುತ್ತಂಗೋಪಂ || ಕೈದಳದಿಂದೀಡಾಡಿದ | ನಾದಿಜಿನೇಶ್ವರನಮುಂದೆಪೊಂದಾವರೆಯಂ || ೧೪೬ ||

ವ || ಅದಕ್ಕೆಲ್ಲರುಂ ನಗಲ್ಪರಮೇಶ್ವರನಡಿಗಳೆಡೆಯೊಳು ಪೂವ್ವಂಕೆಸರ್ಗೈಯಿಂದಿರಿಸಿಪೋಪುದಿತ್ತಲು ||

ಕಂ || ತೀವಿದಕೊಳಂಗಳಿಂದಂ | ಮಾವಿನಮರದೋಳಿಯಿಂವಿರಾಜಿಸುತಿರ್ಕ್ಕುಂ || ಶ್ರಾವಸ್ತಿಮದರೊಳಿಪ್ಪಂ | ಭೂವಿನುತನುದಾತ್ತಚಿತ್ತಾದಾಗರದತ್ತಂ || ೧೪೭ ||

ವ || ಆತನಪೆಂಡತಿ ನಾಗದತ್ತೆಯೆಂಬಳು ಪಾಣ್ಬೆದುರ್ವ್ವ್ಯಸನವೃತ್ತಿಯಾಗಿ ಯಲ್ಲಿದ್ವಿಜ ಜನ್ಮದಸೋಮಶರ್ಮನೊಳು ಪುದುವಾಳುತ್ತಿರ್ಪುದುಂ ಸಾಗರದತ್ತನರಿದು ತನಗದುವೆ ವೈರಾಗ್ಯಮಾಗಿ ದೀಕ್ಷೆಗೊಂಡುಗ್ರೋಗ್ರತಪಮಂ ಮಾಡಿ ಶರೀರಭಾರಮನಿಳುಪಿ ಸ್ವರ್ಗದೊಳ್ಪುಟ್ಟಿ ಅಲ್ಲಿಂಬಂದು ಅಂಗದೇಶದ ಚಂಪಾಪುರದೊಡೆಯಂ ವಸುಪಾಲನಾತನರಸಿ ವಸುಮತಿಯವರೀರ್ವರ್ಗ್ಗಂ ದಂತಿವಾಹನನೆಂಬ ಮಗನಾಗಲಾವಸು ಪಾಲಂಸುಖದಿಂದಿ ರುತ್ತಿರಲಿತ್ತಲ್ ಕಳಿಂಗದೇಶದ ದಂತಪುರದವಲ್ಲಭಂ ಬಲವಾಹನನೋರ್ಬ್ಬಂರಾಜ್ಯಂ ಮಾಡುತ್ತಿರ್ಪುದುಂ, ದಿನಜಾರನಪ್ ಸೋಮಶರ್ಮ್ಮಂ ಸತ್ತನೇಕದುರ್ಗತಿಗಳೊಳು ಭ್ರಮಿಸಿ ಬಂದು ಕಳಿಂಗದೇಶದೊಳು ನರ್ಮ್ಮದಾತಿಳ ಕಮೆಂಬ ಹಸ್ತಿಯಾಗಿಪುಟ್ಟವುದುಂ, ಆಪುರದ ಬಳವಾಹನಂಪಿಡಿದು ತನ್ನ ಮಿತ್ರನಪ್ಪ ದಂತಿವಾಹ ನನತಂದೆ ಮನುಪಾಲಂ ಗಟ್ಟಲಾ ಕಟ್ಟಾನೆಯಾತನಮನೆಯೊಳಿರುತಿರೆ ||

ವೃ || ಇತ್ತಲುನಾಗದತ್ತೆ ಮಡಿದುದುರ್ಗ್ಗನಿರೋಧದೊಳಿರ್ದ್ದುಬಿರ್ದ್ದುಬಂ | ದತ್ತಮತಾಮ ಲಿಪ್ತಪುರದೊಳ್ ಪೆಸರ್ವ್ವೆತ್ತವಣಿಗ್ವರಂಗೆಸಂ | ಪತ್ತಿನೊಳಾವಗಂಧನದನಂಗೆಲಿದಂದನುರೂಪಿ ನಿಂದವೈ | ಶ್ಯೋತ್ತಮೆನಾಗದತ್ತೆವೆಸರಿಸತಿಯಾದಳಿದೇಂವಿಚಿತ್ರಮೋ || ೧೪೮ ||

ವ || ಅಂತು ವಸುದತ್ತಂಗೆ ವಲ್ಲಭೆಯಾಗಿ ಸುಖದಿಂದಿರುತ್ತಿರಲ್ಕೆಲವಾನುದಿವಸಕ್ಕೆ ನಾಗದತ್ತೆಗೆ ಗರ್ಭಮಾಗಿ ನವಮಾಸಂನೆರೆದು ಧನವತಿಯೆಂಬಮಗಳಂಪೆತ್ತು, ಬಳಿಕ್ಕೆರಡನೆಯ ಗರ್ಭದೊಳು ಧನಶ್ರೀಯೆಂಬಮಗಳಂಪಡೆದು ಪಿರಿಯಮಗಳಪ್ಪ ಧನವತಿಯನಾಪುರದ ವೈಶೈಂ ಧನದತ್ತನಾತ ನಭಾರ್ಯ್ಯೆ ಧನಮಿತ್ರೆಯವರ್ಗುದಿಸಿದ ಧನಪಾಳಂಗೆ ಮದುವೆಯಂ ಮಾಡಿ ಕಿರಿಯಮಗಳಪ್ಪ ಧನಶ್ರೀಯಂ ವತ್ತಕಾವಿಷಯದ ಕೌಶಂಬೀಪುರದೊಡೆಯಂ ವಸುಪಾಳನಾತನ ಮನೋವಲ್ಲಭೆ ವಸುಮತಿಯೆಂಬಳವರಮಗಂ ವಸುಮಿತ್ರಂಗೆ ವಿವಾಹಮಂಮಾಡಲಾಕೆ ಸುದೃಷ್ಟಿಯಪ್ಪವಸುಮಿತ್ರನ ಸಂಸರ್ಗದೊಳು ಜೈನತನಮ ಳವಟ್ಟರಲಾಕೆಯತಾಯಿನಾಗದತ್ತೆ ಧನಶ್ರೀಯಂ ನೋಡಲು ಬರೆ ನಿಜಜನನಿಯಂ ತಮ್ಮ ಗುರುಗಳಲ್ಲಿಗೊಡಗೊಂಡುಪೋಗಿ ಯಣುವ್ರತಂಗಳಂ ನೀಯಿಸುವುದುಂ ನಾಗದತ್ತೆ ಕೈಕೊಂಡಲ್ಲಿಂತಳರ್ದುಪಿರಿಯಮಗಳ್ ಧನವತಿಯಂನೋಳ್ಪೆನೆಂದಾಕೆಯಲ್ಲಿಗೆ ಬಂದಡವಳು ತನ್ನ ಬೌದ್ಧಾಚಾರತನಮಂತಮ್ಮ ತಾಯಿಗೆ ಪ್ತತಿಬೋಧಿಸಿ ಬ್ರತಂಗಳಂಕೆಡಿಸಿ ಭ್ರಷ್ಳಚಾರಿತ್ರೆ ಯಂಮಾಳ್ಪುದು ಮದಂಧನಶ್ರೀಕೇಳ್ದು ತಮ್ಮತಾಯಂಬರಿಸಿ ಎಲ್ಲಾವಸ್ತುಸ್ವರೂಪಮಂ ತಿಳಿಯೆಪೇಳ್ದು ಮಗುಳೆಬ್ರತಮನಿಲಿಸೆ ಧನವತಿಮೂರುಸೂಳ್ ಬ್ರತಭಂಗಮಂಮಾಡೆ ನಾಲ್ಕನೆಯಲ್ಲಿ ಧೃಡವ್ರತಧಾರೆಯಾಗಿ ಶುದ್ಧಚಾರಿತ್ರದೊಳ್ನೆಗಳ್ದು ಕಾಲಾಂತರದಿಂ ಮುಡುಪಿ ಕೌಶಂಬಿಪುರದ ರಸುವಸುಪಾಲಂಗಂಸುಮತಿಗಂಕುಮುಹೂರ್ತ್ತದೊಳು ಪುತ್ರಿಯಾಗಿ ಪುಟ್ಟುವುದುಂಅದನರಸುಕೇಳ್ದು ವಿರಸನಾಗಲಾಕೂಸನಾರುಮಂ ಕಾಣಲೀಯ್ಯದೆ ಮಂದಾಸಿ ನೊಳಿಟ್ಟು ಮದಕ್ಕೆತಕ್ಕನಿತುಧನಮನಾ ಮಂದಾಸಿನೊಳಿರಿಸಿ ಮೇಲೆ ತನ್ನ ಪೆಸರಂಕಮಾಲೆ ಯಂಬರಸಿ ಮುದ್ರಿಸಿ ಶಿಶುವಿನಪುಣ್ಯಮಂಪೋಲಿಸಿ ಯಿತ್ತಡಿಯಿಡಿದು ಪರಿವುತಿರ್ದಯಮುನೆನಡುಗಡೆಗೊಯ್ದು ಬಿಡುವುದು ಮದುತೆರೆಗಳೆಂಬ ಕರಪಲ್ಲವಗಳಿಂ ನೆಗಪಿಕೊಂಡು ಬಂದು ಗಂಗಾಸಂಗಮದ ಗಾಧಮಪ್ಪ ಪದ್ಮಹ್ರದದಲ್ಲಿನೂಂಕುವುದು ಮಲ್ಲಿಗೆಬಂದಿರ್ದ್ದ ಕುಸುಮಪುರದ ಪುಲ್ಲವಡಿಗಂ ವಸುದತ್ತಂಕಂಡು ನಿರ್ಧನಂನಿಧಿಯಂಕಂಡಂತೆ ತನ್ನ ಮನೆಗೆ ಮಂದಾಸಮಂಕೊಂಡುಬಂದು ನಿಜವಧುಮಪ್ಪ ಕುಸುಮಮಾಲೆಗೆ ಕೊಡುವುದು ಮಾಕೆಯಾಮಂದಾಸಿನ ಮುಚ್ಚಳಮಂತೆರೆದು ನೋಲ್ಪನ್ನೆಗಂ ||

ಕಂ || ಮಿಸುಪಶಶಿಲೇಖೆನಭದಿಂ | ಪೊಸತಿಲ್ಲಿಗೆವಂದುದೆಂದುಕುಸುಮಾವಳಿಮಂ || ದಸಿನಪಡಿದೆರದುಕಂಡಳು | ಶಿಶುವಂಮಣಿಗಣಮರೀಚಿಬಳಸಿರಲೆತ್ತಂ || ೧೪೯ ||

ವ || ಅಂತುನೋಡಿ ಪೆಣ್ಗೂಸುಮಂಕಂಡು ಕಡುವುಕೈಯ್ಯೋದಂತೆ ಪುಳುಕಿತೆಯಾಗಿ ಪದ್ಮಗ್ರಹದಲ್ಲಿ ಪ್ರಭವಿಸಿದಕಾರಣಮಾಕುಸಿಂಗೆ ಪದ್ಮಾವತಿಯೆಂಬ ಪೆಸರನಿಟ್ಟುಕೊಂಡಾಡಿ ನಡಪುತ್ತಿರಲಾಕೆ ನವಯೌವ್ವನಪ್ರಾಪ್ತೆಯಾಗಿ ||

ವೃ || ಮಿಸುಗುವನಾಗಕರ್ನ್ನಿಕೆಯೊಮೇಣ್ಖಚರಾಂಗನೆಯೋಸುರೇಂದ್ರನಾ | ವಸಥದೊಳಿ ರ್ದುಬಂದ ಸುರಸೌಂದರಿಯಾಗದೆಮಾಣಳೆಂದುಭಾ | ವಿಸಿನಡೆ ನೋಡಿ ನೋಡಿಕುಸುಮಾವಳಿಪೆರ್ಚಿ ದಮೋಹರಾಗದೊಂ | ದೆಸಕಮನಾಂತುಮತ್ತೆತಳೆದಳ್ಪುಳಕೋದ್ಗಮಂಶರೀರದೊಳ್ ||

ವ || ಅಂತು ಸಂತೋಷಮನೈದಿರ್ಪಿನಮಿತ್ತಲೋರ್ವಂ ದಂತಿವಾಹನನ ಸಮೀಪಕ್ಕೆ ಬಂದು ಕುಸುಮಪುರದ ವೃತ್ತಾಂತಮಂ ಪೇಳುತ್ತಿರಲು, ದಂತಿವಾಹನಂ ಪದ್ಮಾವತಿಯರೂ ಪಿನಂ ದಮಂ ಬೆಸರಗೊಂಬುದು ಮಾತನಿಂತೆಂದಂ || ದೇವಾ, ಮಾಕೆಯರೂಪಾತಿಶಯಮಂ ಪೇಳ್ವಡೆ ಕೇಸಡಿಗಳ ಕೆಂಪಿಂಗೆ ಕೆಂದಳಿರಕೆಂಪಂ ಕೇವಣಿಸಿದಂತೆ, ಸುಖನಿಕಾಯಂಗಳಿಗೆ ತಾರಾವಳಿಗಳ ತೋರವೆಳಗುಗಳಂ ತಳ್ತಿಕ್ಕಿದಂತೆ ಜಂಘಾಯುಗಕ್ಕೆ ಅನಂಗನದೋಣಿಯ ಚೆಲ್ವನೆಣಿಗೊಟ್ಟಂತೆ, ಊರುಯುಗಕ್ಕೆಕದಳೀಕಂ ಭಗಳಸಿರಿಯಂಕಾಣ್ಕೆಯಿತ್ತಂತೆ, ನಾಭಿಮಂ ಡಳಕ್ಕೆ ಗಂಭೀರವೃತ್ತಿಯಂಗ ವಸಣಿಗೆಯಿಕ್ಕಿದಂತೆ, ಬಡನಡುವಿಗೆಳಲತೆಯಕುಡಿಯ ಬೆಡಂಗಂಸಾರ್ಚಿದಂತೆ, ಕುಚಮಂಡಳಕ್ಕೆ ಕನಕಕಲಶಂಗಳಸಿರುಯಂ ಶೃಂಗರಿಸಿ ದಂತೆ, ನಳಿತೋಂಗೆ ಸಿರೀಸದಮಾಲೆಯ ಲೀಲೆಯಂಸಾಲಿ ಕ್ಕಿದಂತೆ ಅಂಗುಳಿಗಳ್ ಅಲರಸರನಬಾಣಂಗಳ ಬಂಧುರತೆಯಂ ಕೇಣಿಗೊಟ್ಟಂತೆ, ಬಿಂಬಾಧರಕ್ಕೆ ಪವಳದಂ ಬಂಪಕ್ಕರೆಯಿಕ್ಕಿದಂತೆ, ಕಣ್ಗಳಿಗೆತಾವರೆಯನಿಟ್ಟೆಸಳವಿಳಾಸಮಂಪಟ್ಟಂಗಟ್ಟದಂತೆ, ನಿಡುವುರ್ವಿಂಗೆಕರ್ವಿಲ್ಲಬಿಂಕಮಂಸುಂಕವಿಕ್ಕಿದಂತೆ, ನಗೆಮೊಗಕ್ಕೆ ಚಂದ್ರಮಂಡಲಮ ದೊಪ್ಪಮಂ ಕಪ್ಪಮಿಕ್ಕಿದಂತೆ ಕರ್ಣಪಾಳಿಕೆಗಳಿಗೆ ಮಿಂಚಿನ ಪನ್ಯಾಕಾರಮನಿತ್ತಂತೆ, ನಾಸಿಕಕ್ಕೆ ಸಂಪಗೆಯರಳ ಸೌಂಧರೆಯಂ ಸೂರೆಗೊಟ್ಟಂತೆ, ಅಳಿಕುಳನೀ ಲಕುಂತಳಂಗಳಿಗೆ ಕನ್ನೈದಿಲಕಾಂತಿಗಳಂ ಮನ್ನೆಯತೆರೆತೆತ್ತಂತೆ, ಸುಶೀಲಸುಯಿಲಿಂಗೆ ಸುರಬಿಗಂಧಮಂಶಿಶ್ರೂಷೆಗೆ ಯಿಸಿದಂತೆ ಶೃಂಗಾರಕ್ಕೆಸೀಮೆಯಾಗಿರ್ಪಳೆಂಬುದುಂ ದಂತಿವಾಹನಂಕೇಳ್ದು ಕಿವಿವೇಟಂಗೊಂಡಾಗಳೆ ಕುಸುಮಪುರಕ್ಕೆ ವಂದಾಕೆಯರೂ ಪುಮಂಕಂಡು ಮಾಲೆಗಾರನಂಕರೇದೀಕನ್ನೆ ಯಾರಮಗಳೆಮಗೆ ಪುಸಿಯಿಲ್ಲದೆಪೇಳೆನೆ ಕುಸುಮದತ್ತನಾಕೆಯಿರ್ದ ಮಂದಾಸನಮಂ ತಂದುಮುಂದಿಳಿಪುವುದು ಮದರಮೇಲೆಬ ರೆದಿರ್ದಂಕಮಾಲೆಯ ಪ್ರಶಸ್ತಿಯುಮಂ ತಂದುಮುಂದಿಳಿಪುವುದು ಮದರಮೇಲೆಬ ರೆದಿರ್ದಂಕಮಾಲೆಯ ಪ್ರಶಸ್ತಿಯುಮಂ ಮುದ್ರೆಯುಮಂನೋಡಿ ಪದ್ಮಾವತಿಯಂ ತಸ್ಥಮನರಿದು ಮದುವೆಯಾಗಿ ತನ್ನ ಪಟ್ಟಣಕ್ಕೆ ಮಗುಳ್ದುಬಂದು ಪದ್ಮಾವತಿಯುಂ ದಂತಿವಾಹನನುಂ ಸುಖದಿಂದಿರುತ್ತಿರಲವರತಂದೆ ||

ಕಂ || ವಸುಪಾಲಂಕೆನ್ನೆಯನರೆ | ಯಸದಳಮಾಗಿರಲುಕಂಡು ವೈರಾಗ್ಯಪರಂ || ವಸುಮತಿಯನಾತ್ಮತನಯಂ, ಗೊಸೆದಿತ್ತಂದಂತಿವಾಹನಂಗಾಕ್ಷಣದೊಳ್ || ೧೫೧ ||

ವ || ಬಳಿಕ್ಕಂ ತಾಂದೀಕ್ಷೆಗೊಂಡು ತಪಮಂ ಬಟ್ಟುಮುಡುಪಿದಿವದೊಳುದಿವಿಜನಾಗಿ ಜನಿಸಿರ್ದನಿತ್ತಲು ||

ಕಂ || ಒಂದುದಿನಂಪದ್ಮಾವತಿ | ಸೌಂಧರಿರುತುಮತಿಯುಮಾಗಿಶೋಭಿಸಿದಳ್‌ಪೂ || ರ್ಣೇಂದುಮುಖಿಪೂತನೂತನ | ಮಂದಾರಲತಾವಿಳಾಸದಂತಾಪಥದೊಳ್ || ೧೫೨ ||

ವ || ಬಳಿಕ್ಕ ಚತುರ್ಥಸ್ನಾನಾನಂತರಪವಿತ್ರಗಾತ್ರೆಯಾಗಿ ಬೆಳ್ವಸದನಂ ಬೆಡಂಗನೀಯೆ ದಂತಿವಾಹನನಸೂಳ್ಗೆ ವಂದು ಸುಖಸುಪ್ತೆಯಾಗಿ ಬೆಳಗಪ್ಪಜಾವದೊಳು ||

ಕಂ || ವಾರಣವಿರೋಧಿಯಂಮದ | ವಾರಣಮಂತೊಳಗುತಿಪ್ಪಪಂಕಜಸಖನಂ || ವಾರಿರುಹವದನೆಕಂಡಳು | ಭೋರನೆಕನಸಂಬಳಿಕ್ಕಮೆಚ್ಚತ್ತಾಗಳ್ || ೧೫೩ ||

ವ || ಸೂರ್ಯೋದಯಮಾಗಲೊಡನೆ ಬಂದು ತನ್ನ ವಲ್ಲಭಂಗೆ ಕಂಡ ಕನಸಂ ಮನಸಂದುನಿರೂಪಿಸುವುದಂ ದಂತಿವಾಹನಂ ನಗುತ್ತಿಂತೆಂದಂ ||

ವೃ || ಹರಿಯಿಂದಪ್ರತಿಮಪ್ರತಾಪಿಗಜದಿಂಭೂಪೋತ್ತಮಂಸೂರ್ಯನಿಂ | ಪಿರಿದುಂಸೇ ವ್ಯಜನಪ್ರಮೋದನಕರಂತಾನಪ್ಪನತ್ಯಂತಸೌಂ | ಧರರೂಪಂತನಯಂವಿಳಾಸನಿಳಯಂಪೊಚ್ಚಂ ಡದೊರ್ದಂಡದು | ರ್ಧರವೈರಿಪ್ರಬಳಾಟವೀದವದಹಂಪಂ ಕೇಜಪತ್ರೇಕ್ಷಣೆ || ೧೫೪ ||

ವ || ಎಂಬುದಂ ಕೇಳ್ದು ಮುದಮನಾಂತು ಸುಖದಿನಿರುತ್ತಿರಲು ಕೆರೆಯಪಟ್ಟಣ ದವಸುಮಿತ್ರನ ಗೋವಂಧನದತ್ತಂ ಪಾವಸೆಮಡುವಿನೊಳೀಸಾಡಿಪೊಕ್ಕಲ್ಲಿಜಳನಾಳಿಕೆಕಾಲ್ಕಳಂಸುತ್ತೆ ಸತ್ತು ಪದ್ಮಾವತಿಯಗರ್ಭದೊಳು ಸಂಕ್ರಮಿಸುವುದು ಮತ್ತಲವರೊಡೆಯಂ ವಸುಮಿತ್ರಂ ಕೇಳ್ದುಬಂ ದುಶಬಮಂತೆಗೆದು ಸಂಸ್ಕರಿಸಿ ತನಗದುವೆನಿರ್ವೇಗಮಾಗಿಪೋಗಿ ಸುಗುಪ್ತಾಚಾರ್ಯರಪಕ್ಕದೊಳು ತಪಮಂ ಕೊಂಡು ಮುಡುಪಿ ಸ್ವರ್ಗದೊಳು ದೇವನಾಗಿಪುಟ್ಟಿದ ನಿತ್ತಲು ಪದ್ಮಾವತಿಗೆ ||

ವೃ || ನಡುನಸುಪೊಂಗೆಪಿಂಗಿರೆವಳಿತ್ರಯಮಾನನದೊಳ್ಪೊದಳ್ದುದಾಂ | ಗುಡಿವಿಡೆಬೆಳ್ಪುಪೀ ವರಪಯೋಧರಚೂಚುಕದೊಳ್‌ಕಳಂಕುಮಂ | ದೊಡರಿಸೆಬಂಬಲಂ ಬಳಲ್ದುಬಾಡಿರೆಮೇಂಬಸುರಾ ದುದೆಂಬಸೈ | ಪೊಡರಿಸೆಚಿತ್ತದೊಳ್ಪತಿಗೆ ಗರ್ಭಮನಾಂತುಲತಾಂಗಿಯೊಪ್ಪೊದಳ್ || ೧೫೫ ||

ವ || ತದನಂತರಂ ಕಾಮುಗಿಲುಕವಿದ ಕತ್ತಲೆಯೊಳ್ ಕೈಕೊಳ್ಳಿಯಂ ಬೀಸಿದಂತೆ, ಧಳ್ಳಿಸುವ ಮಿಂಚಿನೊಳು ತಂದಲಮಿಂಬಾಗಿಪಸರಿಸೆಸಿಂಧುರಸ್ಕಂಧದಮೇಲೇ ಪುರುಷಾಕಾರಮನಡ ವಳಿಸಿ ಕೊಂಡಂಕುಶಮಂ ತಾನೆಪಿಡಿದು ತನ್ನರಸನಂ ಪೆರಗಿರಿಸಿ ಪಟ್ಟಣದಪೊರವಳಲೊಳು ವಿಹಾರಿಸುವಬಯಕೆ ತೊಟ್ಟನೆಪುಟ್ಟಲದಂದಂತಿವಾಹನಂ ಕೇಳಿ ಚಿತ್ತದೋಹಳಮಂ ಬಿತ್ತರಿಸಲ್ವೇಡಿ ಯಾತ್ಮೀಯಮಿತ್ರನಪ್ಪ ವಾಯುವೇಗನಂಕರೆದು ಪೇಳಲಾತನು ಮೆಲ್ಲಮಂವಿಘರ್ವಿಸೆ ||

ವೃ || ಪಡುವಣಭಾಗದಿಂದೊಗೆದನೀಳಘನಾಘನಮಾಗಳೆಸುತ್ತಿಕಾ | ಲಿಡೆಕಡುಮಿಂಚುತ ಳ್ತೊಗೆಯೆನಾಲ್ದೆಸೆಯಲ್ಲಿಯರಂಗಿಕಪ್ಪುಕಾ | ನಿಡೆಮೊಳಗುರ್ವಿಪರ್ವುತಿರೆಕಂಬನಿಯೊಯ್ಯನಂ | ದೊಡರಿಸಿ ಮೇಘಕಾಲದವಿಗೂರ್ವ ಣೆಯಂಪಡೆದಂವಿಯಚ್ಚರಂ || ೧೫೬ ||

ವ || ಅಂತು ವಿದ್ಯಾನಿರ್ಮಿತವಾಗಿ ವಾಯುವೇಗಂ ಮೇಘಾಗಮಕಾಲಮಂ ಪ್ರಾರಂಭಿಸುವುದು ಮದಂ ದಂತಿವಾಹನಂ ನೋಡಿ ಆ ಪ್ರೀಯಪ್ರಾಣನಾಥೆಯ ಮುಖಕ ಮಲಮಂ ನಿರೀಕ್ಷಿಸುತಂ ಬಯಸಿದಬಯಕೆಸತ್ಫಲಮಾಯ್ತೆಂದು ತನಗೆಮುನ್ನ ಮುಪಾಯನಮಾಗಿ ಬಂದಿರ್ದ ನರ್ಮದಾತಿಳಕದ್ವಿಪೇಂದ್ರಮಂ ಪಣ್ಣಲ್ವೆಳ್ದುತಾನುಂ ಕೈಗೆಯ್ದು ಪದ್ಮಾವತಿಯಂಬರಿಸಿ ಪೂರ್ವಾಸನ ದೊಳಾಕೆಯಂ ಕುಳ್ಳಿರಿಸಿ ಪೆರವಕ್ಕಮಂತಾನಳವಡಿಸಿ ಮೊಡನೆಗಢಣಿಸಿಬಪ್ಪ ರಾಜಪುತ್ರರ್ಗೆತ್ತಿದ ಸತ್ತಿಗೆಗಳಿಂದಂ ಬರತಳಂಪುಂಡರೀಕಷಂಡದಂತೆ ಕಣ್ಗೊಪ್ಪಮೀಯೆ, ಎಡೆಯುಡುಗದೆ ಪೊಡೆವಭೇರಿಗಳ ವೀರವದ್ದಣಾದಿಸಂದಣಿಯೊಳು ಬೀರುವಕಹಳೆಗಳನಿ ನಾದಂ ದಿಗ್ಮಂಡಲಮಂಸುತ್ತಿ ಮುತ್ತೆ ವೀರವಿಳಾಸದಿಂ ಪುರಮಂಪೊರ ಮಟ್ಟು ಏರಿದಗಜಮನಂಕುಶದಿಂದಣಿಯಲಂ ತದಣಿಯರಮೆದ್ದು ಜಾತಿಸ್ಮರನಾಗಿ ಗಾಳಿಗೆಗರಿಮೂಡಿದಂತೆ ಮನಕ್ಕೆ ಮದಮೊಗೆದಂತೋಡಿ ನಟ್ಟಡವಿಯಂಪುಗುವುದುಂ ಪರಿಜನಂಗಳೆಲ್ಲಂ ವಿಸ್ಮಯಂಬಟ್ಟು ಪಿಂದಾಗಿಪ್ಪುದುಂ ದಂತಿವಾಹನಂ ದಂತಿವಾಹನನೆಂಬ ಪೆಸರನನ್ವರ್ಥಂಮಾಡಿಪೊಳೆಯದೆಕಳವಳಿಸದೆ ಪಳುವಿನೊಳು ಪೋಗುತ್ತಂ ಪೆಸರನನ್ವರ್ಥಂಮಾಡಿಪೊಳೆಯದೆಕಳವಳಿಸದೆ ಪಳುವಿನೊಳು ಪೋಗುತ್ತಂ ಪರ್ವಿದಾಲದಮರದಕೊಂಬನಿಂಬಿಬಿಂಪಿಡಿದು ಮೇಲಣಿಂಗೊಗೆದು ಮಗುಳ್ದುಮರನನಿಳದು ಚಿಂತಾಕ್ರಾಂತನಾಗಿ ||

ಕಂ || ಹಾಪದ್ಮಾವತಿಸುಂದರಿ | ರೂಪುಕಳಾಮೂರ್ತೆಯತ್ತವೊದಪೆಯೆಂ || ದಾಪತ್ತಿಂಗೊಳಗಾಗಿಮ | ಹೀಪಾಳಂಬೆಳುಗಿಪೊಗಿಯಿರಲಾಪದದೊಳ್ || ೧೫೭ ||