ಶ್ರೀಮತ್ಪಂಚಗುರುಭ್ಯೋ ನಮಃ

ಶ್ರೀಮದ್ದೇವೇಂದ್ರವೃಂದಪ್ರಕಟಮಕುಟಮಾಣಿಕ್ಯಮಾಲಾಮರೀಚಿ | ಸ್ತೋಮವ್ಯಾ ಕೀರ್ಣ್ನಚಂಚತ್ಪ ದಕಮಳಯುಗಂ ಭವ್ಯಲೋಕೈಕಕಲ್ಟಾ || ರಾಮಂ ಕೈವಲ್ಯಬೋಧೋ ದಯನಮಳಗುಣ ಬ್ರಾಜಿತಂ ಮುಕ್ತಿಲಕ್ಷ್ಮೀ | ಪ್ರೇಮಂ ಮಾಳ್ಕೆಮ್ಮೊಳೊಳ್ಪಿಂ ಶಿವಪದಸುಖಮಂ ಧೀರ ವೀರಂ ಜಿನೇಂದ್ರಂ || ೧ ||

ವೃ || ಬಳಿಸಂದಷ್ಟವಿಧೋಗ್ರದೋಷಮಳಮಂ ನಿರ್ಮ್ಮೂಲನಂ ಗೈದುಸ | ದ್ಬಳದಿಂ ನಿರ್ಮ್ಮಳ ರುಂ ವಿಶೇಷಗುಣರತ್ನಾಳಂಕೃತರ್ಸ್ಸೌಖ್ಯಸಂ || ಕುಳವಿಸ್ತಾರಿತರುಂನಿರಾಕುಳ ರುಮಾಗಿರ್ದರ್ತ್ತ್ರಿಲೋ ಕಾಗ್ರದೊಳ್ | ತೊಳಗುತ್ತೊಪ್ಪುವ ಸಿದ್ಧರೀಗೆಮಗೆ ಸಂಸಿದ್ಧತ್ವಮಂ ಸಂತತಂ || ೨ ||

ವೃ || ಗೆಲಿದಿಪ್ಪತ್ತೆರಡು ಪರೀಷಹಮುಮಂ ಚಾರಿತ್ರದೋಳ್ ಸತ್ತಪಂ | ಸಲೆ ವಿಭ್ರಾಜಿಸೆ ಷಡ್ವಿ ಧಪ್ರಕರಜೀವಕ್ಕೆಯ್ದೆ ಕಾರುಣ್ಯಮಂ | ಸಲಿಸುತ್ತಂ ವ್ರತವೃತ್ತಿಯೊಳ್ನೆರೆದು ಪಂಜಾಚಾರದೊಳ್ಕೂಡಿಯು | ಜ್ಜ್ವಳಿಪಾಚಾರ್ಯ್ಯರನೂನಬೋಧರೆಮಗೀಗಾಚಾರಸಂಪ್ತಿಯಂ || ೩ ||

ವೃ || ಪರಮ ಜಿನೇಂದ್ರಚಂದ್ರ ಮುಖನಿರ್ಗತವಾಕ್ಸುಧೆಯಿಂಕುಳಿ ರ್ಕ್ಕೊಡು | ತ್ತಿರೆಪರಮಾಗಮೋ ಕ್ತನುತತತ್ವವಿಭೇದಮನೊಲ್ದುಭವ್ಯಬಂ || ಧುರಸಭೆಗಾವಗಂನೆರೆಯೆ ಬೋಧಿಪಸಚ್ಚರಿತಕ್ಕೆನಾಡೆಮೈ | ಸಿರಿವಡೆದೊಪ್ಪಿತೋರುವುಪದೇಶಕರೀಗೆಮಗಾತ್ಮಸೌಖ್ಯಮಂ || ೪ ||

ವೃ || ಬಿಡದೆಚತುರ್ಗ್ಗತಿಭ್ರಮಣೆಯಂ ಬರಿಸುತ್ತಿಹಕಷ್ಟಕರ್ಮ್ಮಮಂ | ಕೆಡಿಸಿ ಸಮರ್ತ್ಥಮಪ್ಪಪದ ದೊಳ್ತರಿಸಂದುವಿಶುದ್ಧಭಾವದಿಂ || ಪೊಡವಿಗೆ ಸೇವ್ಯಮಾಗಿ ಸೊಗಸು ತ್ತಿಹಸಾಧುಪದಂಗಳೀಗೆ ಸೈ | ಪೊಡರಿಪಭವ್ಯಸಂತತಿಗೆಬೆಳ್ಪನಿತಂ ಮನಮೊಲ್ದು ರಾಗದಿಂ || ೫ ||

ಕಂ || ಸಂಚಿತದುರಂತದುಷ್ಕೃತ | ಸಂಚಯಮಂ ಕಿಡಿಸಲಾರ್ಪ ಬಲಮುಳ್ಳದರಿಂ || ಪಂ ಚಪರಮೇಷ್ಠಿಪದಕಮ | ಳಂಚಲಿಸದೆನಿಲ್ಕೆ ಮನ್ಮನೋಮಾನಸದೊಳ್ || ೬ ||

ಕಂ || ಜಿನಮುಖ ಕಮಳ ವಿನಿರ್ಗ್ಗತೆ | ಘನತರಭಾಷಾತ್ಮೆಲೋಕವಂದಿತೆವಾಗ್ಗಾ || ಮಿನಿಕೂರ್ತು ನೀಪ್ರಬಂಧದೊ | ಳೆನಿಸುಂನೆಲಸಿರ್ದ್ದುತಿರ್ದ್ಧುಗತಿಚತುರತೆಯಿಂ || ೭ ||

ಕಂ || ಕರುಣಿಸುಗೆ ತಮ್ಮಪದಮಂ | ನಿರುತಂ ವರವೀರಸೇನಜಿನಸೇನಾಖ್ಯ || ರ್ಬ್ಭರವಶದಿಸಿಂಹ ಣಂದಿಗ | ಳುರುಮುದದಿಂಸಾರ್ದ್ದಗೃದ್ದಪಿಂಛಾಚಾರ್ಯ್ಯರ್ || ೮ ||

ಕಂ || ನಡೆವೆಡಯೊಳ್ನಾಲ್ಪೆಡರಳಂ | ಪೊಡವಿಯಮೆಟ್ಟದಮಹೋನ್ನತಿಕೆಯಪೆಂಪಂ || ಪಡೆದರ್ಧರೆಹೊಗಳ್ವಿನೆಗಂ | ಪಡೆಮಾತೇಂಸಂದ * ಕೊಂಡಕುಂದಾಚಾರ್ಯ್ಯರ್‌ | ೯ || *(ಕುಂದ)

ವೃ || ಪಿರಿದುಂಖ್ಯಾತಿಯನಾಂತುಲೋಕವರಿಯಲ್ಸಂದಿರ್ದರಾಚಾರ್ಯರು | ರ್ವ್ವರೆಯೊಳ್ ಸ್ವಾಮಿವೆಸರ್ಗ್ಗೆನೋಂತುಗುಣಭದ್ರರ್ಪ್ಪೂಜ್ಯಪಾದರ್ಕ್ಕಳ || ಚ್ಚರಿಕೈಮಿಕ್ಕ ಸಮಂತಭದ್ರ ಮುನಿಪಸ್ಯಾದ್ವಾ ದಲಕ್ಷ್ಮೀಮನೋ | ಹರಸಂಸೇವ್ಯರಪಾ ದಪದ್ಮನಿವಹಂಮಾಳ್ಕೆಮ್ಮೊಳಿಷ್ಟಾರ್ಥಮಂ || ೧೦ ||

ವೃ || ಅಕಳಂಕಮುನೀಶ್ವರವಾ | ಕ್ಪ್ರಕಟನವಜ್ರಪ್ರಹಾರದಿಂ ಪರವಾದಿ || ಪ್ರಕರಗಿರಿಪಕ್ಷನಿಚಯಂ | ಸಕಳಶ್ವಂಬೆತ್ತುದೆಂದಡೆನಗಿದುಚಿತ್ರಂ || ೧೧ ||

ಕೇವಲಿಗಳಕೆಲಕೆಲದೊಳು | ಭಾವಿಸೆಪೆಸರ್ಗೊಳಲುಬಹುದುಗಣಧರಸಭೆಯೊಳ್ || ದೇವೇಂದ್ರಮುನೀಶ್ವರರಂ | ಭಾವಜಮದಗಜವಿದಾರಪಂಚಾನನರಂ || ೧೨ ||

ಕಂ || ಸೇನಗಣಾಗ್ರಣಿ *ಕುಮಾರ | ಸೇನಬ್ರತಿನಾಥನೊಡನೆತೊಡರ್ದುಮನೋಜಂ || ಮೀನಧ್ವಜಮಂಬಿಸುಟಭಿ | ಮಾನತೆಯಿಂದೈದೆನಾಡೆಮೈಗರೆದಿರ್ಪ್ಪಂ || ೧೩ || * (ಯೆನಿಪ ಸೆನವ್ರತಿ)

ವೃ || ಭಾಟ್ಟಂಕಟ್ಟುಕಳಲ್ದುಬಾಯಬಿಡುವಂಸಾಂಖ್ಯಂತೆರಳ್ದೋಡಿಕ | ಣ್ಗೆಟ್ಟಿರ್ಪ್ಪಂಮಝ ಬಾಪ್ಪುಬೌದ್ಧ ನಡೆಯೊಳ್ಬಿರ್ದ್ದೊಪ್ಪುವಂನಾಸ್ತಿಕಂ || ಭ್ರಷ್ಟಾಗಿರ್ಪ್ಪನುಮಿಕ್ಕವಾದಿನಿಚ ಯಂಪಾಯಾವದಾರೆಂದುಕೈ | ಗೊರ್ಟ್ಟಿರ್ಪ್ಪರ್ವರಸೇನದೇವರಿದಿರೊಳ್‌ನಿಲ್ವನ್ನ ರಾರ್ಧಾತ್ರಿಯೊಳ್ || ೧೪ ||

ಕುಂ || ಯತಿಗಳೊಳನಂತವೀರ್ಯ | ವ್ರತಿಪತಿನೆಗಳ್ದಂವಿನೇಯಜನತಾನಂದಂ || ಶ್ರುತಲಕ್ಷ್ಮೀ ಮಕರಂದಂ | ನತನರಪತಿವೃಂದನರ್ತ್ಥಿಪಿಕಮಾಕಂದಂ || ೧೫ ||

ವೃ || ಪಸರಿಪಕನ್ನಡಕ್ಕೊಡೆಯನೋರ್ವನೆಸತ್ಕವಿಪಂಪನಾವಗಂ | ವಸುಧೆಗೆಚಕ್ರಿಯಂ ತಮರಭೂಮಿಗೆವಾಸವನಂತೆಸಂತತಂ || * ರಸಕುರಗೇಂದ್ರನಂತೆಗಗನಕ್ಕೆವರ ರವಿಯಂತೆಧಾತ್ರಿಯೊ | ಳ್ಬೆಸವಡೆದಿರ್ದ್ದನೀಗಳೆಮಗೀಗೆತದೀಯವಚೋವಿಳಾಸಮಂ || ೧೬ || *(ಸೆಗು)

ಕಂ || ಕವಿಗಳೊಳುಬಂಧುವರ್ಮಂ | ಕವಿಯಿವರ್ಗಳಮುಂದೆಕವಿಗಳೆಂಬವರೆಲ್ಲಂ || ಚವಿಗೆಟ್ಟಿರ್ಪ್ಪರ್ತ್ತೊಳಗುವ | ರವಿಯಂಬಳಸಿರ್ಪ್ಪ ಬಹಳಭಗಣಗಳವೋಲ್ || ೧೭ ||

ವೃ || ಪೊನ್ನು ಗನೋಜೆಪಂಪನರಸಮೊಪ್ಪುವಕಾವ್ಯರೀತಿಯಾವಗಂ | ರನ್ನನಲಂ ಘವೆತ್ತಪೊ ಸಮಾತುಗಜಾಂಕುಶನರ್ಥಗೌರವಂ | ಮುನ್ನಿನಬಂಧುವರ್ಮಗುಣವರ್ಮರಜಾಣ್ನು ಡಿನಾಗಚಂದ್ರನ | ತ್ಯುನ್ನತಿವೆತ್ತದೇಶಿನೆಲಸಿರ್ಕೆಮದೀಯ ಕಥಾಪ್ರನಂಧದೊಳ್ || ೧೮ ||

ಕಂ || ಅವರಿವರೆನ್ನದೆಜಿನಮತ | ಕವಿಗಳಚರಣಾಂಬುಜಂಗಳನವರತಂಸಂ || ಭವಿಸಿರ್ಕ್ಕೆ ನಾಗರಾಜಾ | ಖ್ಯವಚೋಮೃತಸದಯಸೇವ್ಯತರಮಾನಸದೊಳ್ || ೧೯ ||

ವೃ || ಪೊಸಬಗೆದೇಶಿವೆತ್ತುಚಿತಮಂ ಪ್ರತಿಪಾಲಿಸುವರ್ಥದೊಳ್ಪುರಂ | ಜಿಸೆರಸಭಾವದೊಳ್ನೆಗೆ ಳ್ವಳಂಕೃತಿಕೈಮಿಗೆಪೇಳ್ದುಕಾವ್ಯಮಂ | ವಸುಧೆಗೆಸೇವ್ಯಮಂಮೆರೆಯಬ ಲ್ಲವಡಂಕವಿಯಲ್ಲದಂದುರ | ಕ್ಕಸಗವಿರಾಜರಾಜಿತಸಭಾಂತರದೊಳ್ ಸೊಗಸಲ್ಕೆಬಲ್ಲನೇ || ೨೦ ||

ವೃ || ಕುದಿದೆಡೆಯಾಡಿನೋಡಿಪದಮೊಂದೆರಡಂಸರಗೊಂಡುಮೇಲುಗಾ | ಣದೆ ಬಳಿಕಂ ಮನಂ ಜರಿದುಜಾನಿಸಿಚಿಂತಿಸಿ ಗೂಡುಗೊಂಡುಮಾ | ಗದೆಮಲೆಯಲ್ಲಿಕೇದಗೆ ಯನೇರಿದ ಕೋಡಗ ನಂತೆ ಹಾಸ್ಯಸಂ ಪದಕೆಡೆಯಪ್ಪದುಷ್ಕವಿಗಳಿಲ್ಲದೊಡೇ ನಿಳೆಶೂನ್ಯಮಪ್ಪುದೇ || ೨೧ ||

ವೃ || ಬೆರಗಂಪತ್ತಿಸಿಬೇರದೊಂದುಪದವಿನ್ಯಾಸಂಸಮಾಸಂಗಳಿಂ | ಮಿರುಕಂಬೆ ತ್ತುದೆನಲ್ಕಳಂ ಕೃತಿಗಳಿಂತಳ್ಪೋದುಚಿತ್ರಾರ್ಥದೊಳ್‌ | ಮೆರೆದಿಂಪಂಪಡೆಯಲ್ಕಡಪೇಳ್ವೆಡೆವ ಲಂನಾಗಂಕಳಾವಲ್ಲಭಂ | ನೆರೆಬಲ್ಲಂಬಿಡುಗರ್ವಮಂಕುಳಕಮಂಸತ್ಕಾವ್ಯಬಂಧಂಗಳಂ || ೨೨ ||

ಕಂ || ಸೀರುಡುವಿನಂತೆಕೆಲದೊಳ್ | ಗಾರುಂಗೆಡದಲ್ಲಿಫಲವೆಬಲ್ಲರಸಭೆಯೊಳ್ | ಬೇರೊಂದ ರಚಿಸಿಕೃತಿಯಂ | ತೋರಲ್ಕರಿಯಂಖಳಂಗದೇಂ ಮೂಗುಂಟೇ || ೨೩ ||

ವೃ || ಕಿರುವಳ್ಳಂಕ್ಷೀರನೀರಾಕರಮನುಸುರರಂಸೂರ್ಯನಂತಾಗೆರಾತ್ರೀ | ಸ್ವರನಂಪಿಂ ಪಂವೈ ರಾವಣವನ್ನುಪೊರಡಂಕಾಮನಂ ಬಕ್ಕುಲಕ್ಷ್ಮೀ | ಕರಹಂಸೀವೃಂದಮಂಖೂಳೆ ಯರುಚತುರಾಕಾರರಂಮೆಚ್ಚದಂತೀ | ಧರೆಯೊಳ್‌ದೌರ್ಜನ್ಯರೆಲ್ಲಂಪರಕೃತಿನುತಿಗಂಸಲ್ವರಲ್ಲಂ ನಿತಾಂತಂ || ೨೪ ||

ಕಂ || ಬೋನಮನೇರಿಸಲರಿವದೆ | ಶ್ವಾನಂಗಳುರಳ್ವವಲ್ಲಿದನ್ಯರಕೃತಿಯಂ || ಹೀನಿಸಲಲ್ಲದೆಕುನ್ನಿಗ | ಳೇನರಿವವೆ ಕೃತಿರಹಸ್ಯಮಂ ಸುಕವಿಯವೋಲ್ || ೨೫ ||

ಕಂ || ಮುಕುರಂ ಮುಖಮೋ *ಟಂಗಂ | ಪ್ರಕೋಪಮಂಪುಟ್ಟಪಂ ತೆದುರ್ಜ್ಜನರೆಡೆಯೊಳು || ಸುಕವಿಕೃತಕಾವ್ಯರತ್ನಂ | ಪ್ರಕರ್ಶಮಂ ಮಾಡಲೀಯ್ಯದಿಂ ತಿದುಸತ್ಯಂ || ೨೬ || *(ಂದಿ)

ವೃ || ವಿಪುಳಾಕಾಶವಿಲೀನಹೇಮಕಳಶವ್ರಾತಂಗಳಿಂಕರ್ಬುರಾ | ತಪವಿಖ್ಯಾತವಿಚಿತ್ರ ರತ್ನರಚಿತ ಪ್ರಾಕಾರಸಂದೋಹದಿಂ | ತಪನೀಯೊನ್ನತವಪ್ರದಿಂಮೆರೆವುದೆತ್ತಂನೋಡೆಸೇ ಡೆಂಬಸೇ | ವ್ಯಪದಂಭಾವಿಸೆನೂತ್ನಚೈತ್ಯಗೃಹಸಂದೋಹಂಗಳಿಂಸಂತತಂ || ೨೭ ||

ಕಂ || ಆಪುರದೊಳು ಜಿನಶಾಸನ | ದೀಪಕನತ್ಯಧಿಕಪುಣ್ಯಮೂರ್ತಿಜಿನೇಂದ್ರ || ಶ್ರೀಪಾದಕ ಮಳಭೃಂಗಂ | ಭಾಪುರೆನೆಗಳ್ದಂವಿವೇಕವಿಟ್ಠಲದೇವಂ || ೨೮ ||

ಕಂ || ಆತನಸತಿಭಾಗೀರಥಿ | ನೂತನೆಭೂಜಾತೆಯೆನಿಪರವರ್ಗ್ಗುಜೆಯಿಸಿದರು | ಕೌತುಕಮಿಗೆ ನಾಗೇಂದ್ರಂ | ಮಾತೇಂಸಮ್ಯಕ್ತ್ವವಾರ್ಧಿತಿಪ್ಪರಸಾಖ್ಯಂ || ೨೯ ||

ವ || ಮತ್ತಮಾಯೀರ್ವ್ವರೊಳು ||

ವೃ || ಕೌಸಿಕಗ್ರೋತ್ರನತ್ಯಧಿಕಪುಣ್ಯಪವಿತ್ರೆನುದಗ್ರತತ್ವನ | ಭ್ಯಾಸಿತಸತ್ಕವಿತ್ವನವನೀ ತಳವಂದ್ಯನನಿ ಂದ್ಯನೇ *ಹಸಂ | ತ್ರಾಸನಶೀಲನರ್ಥಿಜನತಾಪ್ರತಿಪಾಲನನಂತವೀರ್ಯ್ಯಯೋ | ಗೀಶಪದಾಬ್ಜಭೃಂಗನ ಭಿಮಾನಸುರೇಂದ್ರವಿನೂತಭೂಧರಂ || ೩೦ || *(ನ)

ಕಂ || ತವರಾಜ್ಯದಸಿರಿಯಂತಿರೆ | ಸವಿಯಂಸಾಲಿಡುವುದಖಿಳಬುಧತತಿಗೆಲ್ಲಂ || ಕವಿಯೊಳು ನಾಗೇಂದ್ರನನಿಜ | ಕವಿತೆಯಕನ್ನಡದನುಡಿಯ ಬೆಡಗಿನಗಡಣಂ || ೩೧ ||

ಕಂ || ಷಂದತಿಸಗರದವಿನಯಾ | ವೃಂದಂಕೊಂಡಾಡಿಪೇಳ್ವುದೆನೆ ಕನ್ನಡದಿಂ || ಮಂದಮತಿ ಯಪ್ಪನಾಂಮನ | ದಂದೇಂಪೇಳಲ್ಕೆವೊಲಿದುಪುಣ್ಯಾಸ್ರವಮಂ || ೩೨ ||

ಕಂ || ಮುನ್ನಂಸಂಸ್ಕೃತದಿಂದ | ತ್ಯುನ್ನತಿವೆತ್ತಿರಲು ಕೇಳ್ದುಸಗರದನಗರಂ || ಕನ್ನಡಿಸೆನೆ ನಾಗೇಂದ್ರಂ | ಕನ್ನಡಿಸಿದನೊಲಿದುನೋಡಿಪುಣ್ಯಾಸ್ರವಮಂ || ೩೩ ||

ಕಂ || ವಿನಯನಿಧಿನಾಗರಾಜಂ | ಗನುಪಮಗುಣನಿಧಿಯನಂತವೀರ್ಯಬ್ರತಿಪಂ || ಮನಮೊಲಿ ದುಪೇಳ್ದತೆರದಿಂ | ಜನಹಿತಮಂಪೇಳ್ವೆನೊಲಿದು ಪುಣ್ಯಾಸ್ರವಮಂ || ೩೪ ||

ವಂ || ಅದೆಂತೆಂದೊಡೆ ||

ವೃ || ವಿಪುಳಾಂದ್ರೀಂದ್ರದವೀರನಾಥಸಭೆಯೊಳ್‌ಶ್ರೀಮನ್ಮಹಾಮಂಡಲಾ | ಧಿಪತಿಶ್ರೇಣಿ ಕನಳ್ಕರೀಂ ದಬೆಸಗೊಂಡಂಗೌತಮಸ್ವಾಮಿಯಂ | ನೃಪಚೂಡಾಮಣಿಭಕ್ತಿಯಿಂದೆರಗಿ ತಾಂಸಮಸ್ಯಕ್ತ್ವರತ್ನಾಕರಂ | ನಿಪುಣಂನಿರ್ವೃತಿಸಾರಸಂಪದಸುಖಶ್ರೀಗಾಣ್ಮನಪ್ಪಂದಮಂ || ೩೫ ||

ವೃ || ಅಂತು ಸಕಳಭೂಪಾಳ ಚೂಡಾಮಣಿ ಗಣಧರಚೂಡಮಣಿಗಳಪ್ಪ ಗೌತಮಸ್ವಾ ಮಿಗಳ ನಾತ್ಮೀಯಮೌಳಿಮಂಡನ ಮೌಕ್ತಿಕಮಣಿಗಣ ಮರೀಚಿ ಮಂಜರೀಜಾಳದಿಂ ಚರಣನಖಚಂದ್ರಮಂ ರವಿಉಪಂದ್ರತಪಮನೊಲಯ್ಯ ಕರಕಮಳ ಚಕೋರಕಂ ವಿನ್ಯಸ್ತಮಸ್ತಕನಾಗಿಂತನ್ದೆನೆಲೇ ಸ್ವಾಮಿ, ಪಾರಮಿಲ್ಲದ ಘೋರಸಂಸಾರಾಂಬುರಾಶಿಯ ಸುಳಿಗಳೊಳು ಮುಳುಗುವ ಜೀವರಾಶಿಯನುದ್ಧರಿಸಿ ಸಿದ್ಧಪದವಿಯನೆಯ್ದಿಪಸಾಗಾರ ಧರ್ಮಸ್ವರೂಪಮಂ ಕಾರುಣ್ಯಮಂ ಮಾಳ್ಪುದೆನೆ, ಮುನೀಂದ್ರವೃಂದಾರಕಂ ದಶನಕಾಂ ತಿಶಶಿಮಂಡಲದವಸಿಯ ಬಿಸಿಲಂ ಬಿದಿವರಿಯಿಸಲಿಂತೆದರು || ದೇವಪೂಜೆಯೆಂದುಂ, ಗುರೂಪಾಸ್ತಿಯೆಂದುಂ, ಸ್ವಾಧ್ಯಾಯಮೆಂದುಂ, ಸಂಯಮಮೆಂದುಂ, ತಪಮೆಂದುಂ ಗೃಹಸ್ಥರಿಂಗೆ ಆರುತೆರದಿಂ ಧರ್ಮಸಂಗ್ರಹಮಕ್ಕುಂ, ಅಲ್ಲಿಯೊಂದೊಂದು ನೆಗಳ್ತೆಯೊ ಳೋರೋರ್ವರ್ಪ್ರಸಿದ್ಧಿವಡೆ ದು ಸ್ವರ್ಗಾಪವರ್ಗಂಗಳನೆಯ್ದಿದ ಪುಣ್ಯಪುರುಷರುಗಳ ಕಥೆಗಳಂ ಕೇಳೆಂದು ಪೇಳಲೊಡರ್ಚಿ ದರದೆಂತೆನೆ ||

೧ನೇ ಮಾಲೆಗಾತಿಯರ ಕಥೆ

ವೃ || ಪರಿಕಿಸಿಮಾಲೆಗಾರನತನೂಜೆಯರೀರ್ವರುಮಾಯ್ದುಪೂಗಳಂ | ಪುರದ ಜಿನೇಂದ್ರ ಮಂದಿರದಬಾಗಿಲನರ್ಚಿಸಿನಾಕನಾಯಕಂ | ಗರಸಿಯರಾದರಾಮೊದಲಸ್ವರ್ಗ ದೊಳೆಂದೆನೆಭಕ್ತಿಯಂ ದಕೇ | ಳರುಹನನರ್ಚ್ಚಿಪಾತನವಿನೂತನ ಪುಣ್ಯಮನೇನನೆಂಬುದೋ || ೩೬ ||

ವೃ || ಖಳನಕ್ರಕ್ರೂರಕರ್ಕ್ಕಾಟಕತಿಮಿತಿಮಿವ್ಯಾಳಸುಂಡಾಳಭೇಕೀ | ಕುಳಭೀಳಂಶೂಕ್ತಮುಕ್ತಾಫ ಳಮಣೆಗಣನಾನಾಮರೀಚಿಪ್ರತಾನೋ | ವಿಳಭೂಭೃತ್ಕೂಟಕೋಟಿಪ್ರಚುರತರತ ರಂಗಾಳಿಭದ್ರಂಸಮುದ್ರಂ || ೩೭ ||

ಕಂ || ಧರೆಯೆಂಬಂಬುಜಮಿಪ್ಪುದು | ಶರಧಿಸರೋವರದನಡುವೆಕರ್ಣ್ನೆಕೆವೋಲ್ಕಂ | ಧರಮಿಪ್ಪುದಲ್ಲಿಮಂದರ | ಗಿರಿಯಿಂದಂರಮ್ಯಮಾಯ್ತುಜಂಬೂದ್ವೀಪಂ || ೩೮ ||

ವ || ಮತ್ತಮೀಜಂಬೂದ್ವೀಪದ ಪೂರ್ವವಿದೇಹದ ವತ್ಸಕಾವತೀವಿಷಯದಾರ್ಯಾ ಖಂಡದ ಸುಸೀಮಾನಗರಮನಾಳ್ವಂಸಕಳಚಕ್ರವರ್ತ್ತಿವರದತ್ತನೆಂಬಂ ||

ವೃ || ವಿನೆಯಂಕೈಮಿಗೆಪಾಳಿಯಂನಿರಿಸಿವೃದ್ಧಾಚಾರದೊಳ್ ಬಂದುಸ | ಜ್ಜನರಂ ರಕ್ಷಿಸಿ ದುಷ್ಟರಂಕಿಡಿಸಿಬಾಹುಸ್ತಂಭದೊಳ್ ವಿಶ್ವಮೇ | ದಿನಿಯಂಸ್ಥಾಪಿಸಿಕೀರ್ತಿಯಂ ತಳೆವುತೆಂಷಡ್ಭಾಗದೊಳ್‌ರಾಗದಿಂ | ಧನಮಂಸಾಧಿಸಿಪೆಂಪುವೆತ್ತುವರದತ್ತಂಪೇರ್ಮೆ ಯಂತಾಳ್ದಿದಂ || ೩೯ ||

ವ || ಅಂತಾ *ಮಹಾಭೂಪಾಳ ನೊಂದುದಿನ ವೊಡ್ಡೋಲಗಮಿರ್ಪುದಾಪ್ರ ಸ್ತಾವದೊಳು || *(ಮಹೀಪಾಳ)

ಕಂ || ಪಸಿಯಡಕೆಗಳಂಮಾವಿನ | ರಸವಣ್ಗಳಮಾತುಳಂಗದಫಲಮಂ || ವಸುಧೀಶಂ ಗೊಲಿದಿತ್ತಂ | ವಸಂತಚರನಂತೆಋಷಿನಿವೇದಕನೋರ್ವಂ || ೪೦ ||

ವ || ತಂದಿತ್ತು ಸಾಷ್ಟಾಂಗವೆರಗಿ ಪೊಡಮಟ್ಟುದೇವಾ, ನಮ್ಮ ಪಟ್ಟಣದಪೊರವೊಳಲ ನಂದನವನದ ಗಂಧಮಾದನಪರ್ವತಕ್ಕೆಸಿವಘೋಷತೀರ್ಥಕರ ಸಮವಶರಣಂಬಂದಿರ್ಪುದೆಂದು ಬಿನ್ನವಿಸಲರಸಂ ಕೇಳ್ದು, ಸಿಂಹಾಸನದಿಂದಿಳಿದು ಅವರಿರ್ದದೆಸೆಗೇಳಡಿ ಯಂನಡೆದು ಸಾಷ್ಟಾಂಗ ವೆರಗಿ ಪೊಡವಟ್ಟುಬಳಿಕಮವಂಗಂಗಚಿತ್ತಮಂಕೊಟ್ಟುಬಳಾಧ್ಯಕ್ಷನಂಬರಿಸಿ ಆನಂದಭೇರಿಯಂ ಪೊಯ್ಸಿ ಪರಿಜನಪುರಜನ ಸಮೇತ ಮರ್ಚನಾ ದ್ರವ್ಯಪುರಸ್ಸರಂ ಪೊರಮಟ್ಟುಗಂಧಸಿಂದುರಸ್ಕಂಧಾ ರೂಢನಾಗಿ ನಡೆತಪ್ಪೆಡೆಯೊಳು ||

ವೃ || ಕ್ಷಿತಿಚಕ್ರಂಗತಿಚಕ್ರಗಂಧಗಳಿತಪ್ರೋದ್ದಾನ *ಜಂಭಾರಶೋಭಿತವಾಕಾಶಮನೂ ನಚಿತ್ರಪಟನಾನಾಕೇತುಮಾಳಾವಿರಾ || ಜಿತವಾಸಾವಿವರಂಮುದ್ರಂಗಕಹಳೋದ್ಯದ್ಭೂ ರಿಭೇರಿರವಾ | ನ್ವಿತವಾಗಲ್ತಳರ್ದಂನಗಕ್ಕೊಲವಿನಿಂಭೂಪಾಲಕಂಠೀರವಂ || ೪೧ || * (ಬಂಬಾ)

ವ || ಆಗಳಾ ಸಮವಸರಣಮನೈದಿವಂದು ದೂರೋತ್ಸಾರಿತವಾಹನನಾಗಿ ಕತಿಪಯಪರಿ ಜನಬೆರಸೋಳಗಂಪೊಕ್ಕು ಗಂಧಕುಟಿಯಂಬಲವಂದು ಜಿನಮುಖದರ್ಶ ನದಿಂ ಹಷ್ಮಮನಾಂತು ವಸ್ತುಸ್ತವ ರೂಪಸ್ತವ ಗುಣಸ್ತವನಂಗಳಿಂ ಸ್ತುತಿಗೆಯ್ದು ತ್ರೈಲೋಕ್ಯಪೂ ಜಾರ್ಹನಂ ಪೂಜಿಸಿ ಮುನ್ನಮೆಬಂದಿರ್ದ ಚತುರ್ನಿಕಾಯಾಮರರಂನೋಡಿ ಗಣಧರರ್ಗೆ ವಂದಿಸಿ ಮನುಷ್ಯಕೋಷ್ಠ ದೊಳ್ಕುಳ್ಳಿರ್ಪನ್ನೆಗಮಿತ್ತಲು ||

ವೃ || ನನೆಗಣ್ಗಳ್ನೈದಿಲಂಸಾಲಿಡೆಬಿಗಿದಕುಚಂಬಿಂಕಮಂಬೀರೆಕಾಲಂ | ದುಗೆಬಂಡುಂ ಡಿರ್ದಪೆಣ್ದುಂಬಿಗಳರವಮನೊಟ್ಟೈಸೆಮಂದಸ್ಮಿತಾಸ್ಯಂ || ಮುಗುದಾಳಾಪಂಗಳಂ ಮುಂದಿಡೆಕನಕಕ ನತ್ಕಾಂಚಿಯೊಳ್ನೀವಿಯಂಸಾ | ವಗಿಸುತ್ತಂಬಂದರೀರ್ವಸುಲಲಿತಚತು ರಾಪಾಂಗೆಯರ್ಕಾಂತೆಯರ್ಕಳ್ || ೪೨ ||

ವ || ಅಂತಾ ದೇವವಧುಗಳನೊಡಗೊಂಡುಬಂದು ಪ್ರಧಾನದೇವನೋರ್ವಂ ನಿನ್ನ ದೇವಿಯರಿವರೆಂದು ಸೌಧರ್ಮೇಂದ್ರಂಗೆ ಸಮರ್ಪಿಸಲದಂವರದತ್ತಂಕಂಡು ಚೋದ್ಯಂಪಟ್ಟವ ರಾವಪುಣ್ಯದ ಫಲದಿಂದಿಲ್ಲಿಗೆ ಬಂದರೆಂದ ವಿನೆಯವಿನಮಿತನಾಗಿ ಗಣಧರರಂಬೆಸಗೊಂಡಡವ ರಿಂತೆಂದರೀ ಪಟ್ಟಣದಮಾಲೆಗಾರಂಗಂ ಆತನಪೆಂಡತಿಗಂ ಪುಷ್ಕಳಾವತಿ ಕುಸುಮಲತೆಯರೆಂಬ ಪೆಸರನುಳ್ಳ ಕನ್ನೆಯರಾಗಿಪುಟ್ಟ ನವಯೌವ್ವನೆಯರಾಗಿ ಪುಷ್ಪಕರಂಡಕಂಗಳಂ ಕೊಂಡುಪೂದೋ ಂಟಕ್ಕೆಪೋಗಿ ನಿಚ್ಚಲುಂಪೂಗಳಂ ಕೊಯ್ದು ಕೊಂಡು ಮನೆಗೆಬರುತ್ತಾ ಮಾರ್ಗದಬಸದಿಯಪೊಸಲೊಳೊಂದೊಂದುಪೂವನರ್ಚಿಸುತ್ತಂ ಕೆಲವು ದಿವಸಂಗಳ್ಪೋಗೆ, ಒಂದುದಿನ ಜಿನಮುಖದೊಳು ಪೂಗೊಯ್ವಲ್ಲಿ ಸರ್ವ ದೃಷ್ಟಮಾಗೀರ್ವರುಂ ಮುಡುಪಿತತ್ಫಲದಿಂಸೌಧರ್ಮೇಂದ್ರಂ ಗರಸಿಯರಾಗಿ ಬಂದರೆನೆ ವರದತ್ತಂ ಕೇಳ್ದುವಿಸ್ಮಯಂ ಬಟ್ಟು ಜಿನಪೂಜೆಯಮಹಿಮೆಗಾಶ್ಚರ್ಯಂ ಬಟ್ಟಿರಲು, ಮತ್ತ ಮಿಂತೆಂದರು ||

೨ನೇ ಮಹಾರಾಕ್ಷಸನ ಕಥೆ

ವೃ || ಪರಮಜಿನೇಂದ್ರಪೂಜೆಗನುಮೋದಮನಾಂತುಸುಬೋಧಹೀನನಂ | ಬರಚರನಾ ಗಿಯಂದಮರಮುಕ್ತಿಸುಖಕ್ಕೊಳಗಾದನೆಂದೊಡ | ಚ್ಚರಿಮಿಗೆಯೊಲ್ದುಪೂಜಿ ಪನಪುಣ್ಯನಿಬಂಧಮನಂ ತುಟೆಂತುಟೆಂ | ದುರುಮುದದಿಂದೆಬಣ್ಣಿಸಲುಬಲ್ಲವನಾ ವನವನೀತಳದೊಳ್ || ೪೩ ||

ವ || ಈ ವೃತ್ತದ ಕಥೆಯೆಂತೆಂದೊಡೆ ||

ಕಂ || ಲಂಕಾನನಗರಿಯೊಳತಿನಿ | ಶ್ಶಂಕಂಮಹರಾಕ್ಷಸಾಭಿಧಾನಂಬೆತ್ತಾ || ಪಂಕಜಸಕನ ತಿಕೀರ್ತಿಶ | ಶಾಂಕಂಸುಖದಿಂದಲರಸುಗೆಯ್ಯುತ್ತಿರ್ದ್ದಂ || ೪೪ ||

ವ || ಆತನೊಂದುದಿವಸಂ ಜಲಕ್ರೀಡೆಗೆಂದು ತನ್ನಮನೋಹರೋದ್ಯಾನ ದೊಳ್ಕೋಕನದ ಕುಮುದಕಲ್ಹಾರಬಕಬಳಾಹಕಮರಾಳಾನೀಕದಿಚೆಲ್ವೆತ್ತಭೂಕಾಂತೆಯ ಕೊರಳಮುತ್ತಿನ ಪದಕದಂತೆಬಿತ್ತರ ಮನಾಂತಿರ್ದಸರೋವರಕ್ಕೆ ಂದು ನೀರುಹದನಿಟ್ಟೆ ಲುಗಳ ಮೇಲೆ ಕೀಲಿಸಿರ್ದಚೆನ್ನ ನಪ್ಪಕಂನೀಲ ದಂತಿರಿದೀವರದಪಸೆಯೊಳು ಮಂದಜೀ ವನೆಯಾಗಿ ಸಂದಿರ್ದಪೆಣ್ದುಂಬಿಯಂಕಂಡು ವೈರಾ ಗ್ಯಂಪುಟ್ಟೆ ||

ಕಂ || ಸುಡಲೀಸಂಸ್ಕೃತಿಯಂಬುದು | ಕಡಲಿನತೆರೆಮುಗಿಲನೆರವಿಮಂಜಿನಪುಂಜಂ || ಕುಡುಮಿಂಚುನಸಿರಿಗಾಳಿಯ | ಸೊಡರ್ಗುಡಿಸುರಚಾಪದೆಸಕಮೆನೆನಚ್ಚುವರೆ || ೪೫ ||

ವ || ಎಂದು ಮನದೋಳ್ತರಿಸಂದು ಆಸರೋವರದ ತಟವನದೊಳು ಚರಿಸುತ್ತಂ ಪ್ರತಿಮಾಯೋಗದೊಳಿರ್ದ ಮುಮುಕ್ಷುಮುಖ್ಯರಂ ಕಂಡು ವಂದಿಸಿ ಧರ್ಮಶ್ರವಣಮಂಕೇಳ್ದು ತದನಂತರ ಮಿಂತೆಂದಂ ||

ಕಂ || ಎನ್ನಪುರಾತನಜನ್ಮದ | ಬಿನ್ನಣವಂ ಪೇಳ್ವುದೆಂದೊಡಾಮುನಿನಾಥಂ || ಮನ್ನಿಸಿಕೇ ಳೆಂದತ್ಯು | ತ್ಪನ್ನಾವಧಿಬೋಧನಾಗಳಂದ್ರಿಂತೆಂದಂ || ೪೬ ||

ವ || ಮತ್ತೀಭರತಕ್ಷೇತ್ರದೊಳು ಸುರಮ್ಯವಿಷಯದಪೌದನಾ ಪುರದೊಡೆಯಂ ಕನಕರಥನೆಂಬಂ ಜಿನಪೂಜೆಯಮಾಡಿದನಾಕಾಲದೊಳು ನೀಂತಿಶಾಂತರಿಯುಂ ಭದ್ರ ಮಿಥ್ಯಾದೃಷ್ಟಿ ಪ್ರೀತಿಂಕರನೆಂಬ ಪೆಸರನಾಂತುಬಂದಾ ಪೂಜೆಯಂಕಂಡು ಪೂಜಾನುಮೋದದಿಂ ಪುಂಡರೀಕಿಣಿಯ ಪುರದ ಪೇರಡವಿ ಯೊಳು ಯಕ್ಷನಾಗಿಪುಟ್ಟ ||

ಕಂ || ದಾವಾಗ್ನಿಯಪೊಯಿಲಿಂದಂ | ಜೀವಮುನಿವ್ರಜದೊಳಾದ ಉಪಸರ್ಗಮನೀ || ನೋವದೆಕೆಡಿಸಿದವಂಕಾ | ಲಾವಧಿಯಿಂಸತ್ತುಸುಗತಿಯಂಪಡೆದಿರ್ದೈ || ೪೭ ||

ವ || ತದನಂತರ ಪುಷ್ಕಳಾವತೀವಿಷಯದ ವಿಜಯಾರ್ಧಪರ್ವತದಲ್ಲಿಯ ವಿಯಚ್ಚರ ರಾಜ ತಟ್ಟಲಪುಂಗಮಾತನರಸಿಶ್ರೀಪ್ರಭೆಗೆ ಮುದಿತನೆಂಬ ಮಗನಾಗಿ ಕುಮಾರಕಾಲದೊಳು ದೀಕ್ಷೆ ಯಂಕೊಂಡು ತಪಂಗೆಯ್ವುತ್ತಿರೆ ||

ಕಂ || ಗಗನಾಭಾಗದೊಳೋರ್ವಂ | ಖಗಪತಿಪೋಗುತ್ತಮಿರಲುನೀನಾತಂಗಂ || ಮಗನಪ್ಪೆನೆಂಬಭಾವನೆ | ನೆಗಳ್ದುದುನಿನಗಲ್ಲಿಕಾಲವಶದಿಂದಾಗಳ್ || ೪೮ ||

ವ || ಯಿಂತು ಯದ್ಭಾವಂ ತದ್ಭವತಿಯೆಂಬಂತೆ ಮುಡುಪಿ ವಿದ್ಯಾಧರನಾಗಿಪುಟ್ಟ ರಾಜ್ಯಸುಖಮನನುಭವಿಸಿ ಕಡೆಯೊಳು ಸಮಾಧಿಯಿಂ ಶರೀರಭಾರಮನಿಳುಪಿ ಸನತ್ಕುಮಾರಕ ಲ್ಪದೊಳಮರನಾಗಿ ಪುಟ್ಟರ್ದಲ್ಲಿಂಬಂದು ಮಹಾರಾಕ್ಷಸನೀನಾದೆ ಯೆಂಬುದದಂಕೇಳ್ದಾಗಳೆ ವೈರಾಗ್ಯತತ್ಪರನಾಗಿ ತನ್ನ ಮಗಂದಿರಪ್ಪ ಮಹಾರಾಕ್ಷಸ ಭಾನುರಾಕ್ಷಸರೆಂಬೀರ್ವರ್ಗಂ ಸಕಳರಾಜ್ಯ ಮಂಕೊಟ್ಟು ತಪಂಬಟ್ಟು ಮುಕ್ತಿಯನೆಯ್ದಿದನೆಂದೊಡದು ಕಾರನ ಜಿನಪೂ ಜಾನುಮೋದನ ಪುಣ್ಯಕ್ಕೆ ಪಡಿಯಿಲ್ಲೆಂದು ಮತ್ತಮಿಂತೆಂದು ||

೩ನೇ ಮಂಡೂಕನ ಕಥೆ

ವೃತ್ತ || ಪುರದಿಂದುರ್ದ್ದುರನೊಂದುಪೂವಿನೆಸಳಂದಂತಾಗ್ರದಿಂಕರ್ಚಿನಿ | ರ್ಭರದಿಂ ಪೂಜಪೆನೆಂದುಪೋಪಪಥದೋಳ್ಭೂಪೇಂದ್ರಸೈನ್ಯೌಘಸಿಂ | ಧುರಪಾದಪ್ರತಿಘಾತದಿಂ ಮುಡುಪಿಯುಂದೇವತ್ವಮಂತಾಳ್ದುದ | ಚ್ಚರಿಯುಂತಾನೆನೆಪೂಜಿಸೊಲ್ದುಜಿನರಂನೀಂಸೇ ವೃಭವ್ಯೋತ್ತಮಾ ||

ವ || ಮತ್ತಮೀ ವೃತ್ತದ ಕಥೆಯೆಂತೆಂದೊಡೆ ಈ ಜಂಬೂದ್ವೀಪದ ಭರತದಾರ್ಯ್ಯ ಖಂಡದ ಮಗಧದೇಶದಲ್ಲಿ ||

ಕಂ || ರಾಜಗೃಹಮೆಂಬನಗರಂ | ರಾಜಿಸುಗುಂಸುರಜನೇಂದ್ರನಗರಮಿದೆಂಬೊಂ || ದೋಜಿಯೊಳಿರಲದನಾಳ್ವಂ | ಸೌಜನ್ಯಂಶ್ರೆಣಿಕಂಧರಾಧಿಪನೆನಿಪಂ || ೫೦ ||

ವ || ಆತನೊಂದುದಿವಸ ಒಡ್ಡೋಲಗದೊಳಿರಲು ಋಷಿನಿವೇದಕಂ ಬಂದುದೇವ, ತ್ವದೀಯಶ್ರೇಯೋವದ್ಧಮಾನನಪ್ಪಶ್ರೀವರ್ದ್ಧಮಾನ ಸ್ವಾಮಿಗಳ ಸಮವಸ ರಣಂಬಂದು ವ್ಸಿಪುಲಾಚಲದೋಳ್ನೆಲಸಿರ್ದ್ದುದೆನಲವನೀಶಂ ಭಾಸುರಮಪ್ಪ ಕೇಸರಿಪೀಠದಿಂದೆರ್ದ್ದಾ ದೆಸೆಗೇಳಡಿಯಂ ನಡೆದೆರಗಿ ||

ಕಂ || ಹರ್ಷಂಮನದೋಳ್ಪುಳಕೋ | ತ್ಕರ್ಷಂತನುವಿನೊಳು ಮೂಣ್ಮೆಭೂಪತಿಕೊಟ್ಟಂ || ಶೀರ್ಷಾಭರಣಸಮೇತಂ ವರ್ಷದಕಣಿಯೆನೆಚರಂಗೆತಾಂಬೇಡಿದುದಂ || ೫೧ ||

ವ || ಅಂಗಚಿತ್ತಮನಾತಂಗಿತ್ತು ಆನಂದಭೇರಿಯಂಪೊಯಿಸಿ ಪುರಮಂ ಪೊರಮಟ್ಟು ವಿಪುಲಾಚಲಮನೈದಿ ತದ್ಗಿರೀಂದ್ರಸಾನುಪ್ರದೇಶದೊಳು ಸೌಂದರ್ಯಮನಾಂತ ಚೋಚಮೋಚಮಾ ಕಂದಾನೋಕಹಪ್ರಕೀರ್ಣ್ನ ಮಾದನಂದನ ವನಮಂನೋಡಿ ಮೆಚ್ಚು ತಂಬಂದು ಕತಿಪಯಪರಿಜನ ಪರಿವೃತನರ್ಚನಾದ್ರವ್ಯಂಬೆರಸು ಸಮವಸರಣಮಂಪೊಕ್ಕು ಗಂಧಕುಟಿಯಂ ತ್ರಿಃಪ್ರದಕ್ಷಿಣಂಗೈದು ತ್ರಿಲೋಕನಾಥಂಗಭಿಮುಖನಾಗಿ ||

ಕಂ || ಕೇವಲಬೋಧೊದಯದಿಂ | ದೇವತ್ರೈಜಗದೊಳುಳ್ಳವಸ್ತುಗಳನಿತಂ || ನೀವರಿವಂತಿ ರೆಪೆರರಾ | ರ್ಭೂವಳಯದೊಳರಿವರುಂಟೆವೀರಜಿನೇಂದ್ರಾ || ೫೨ ||

ವ || ಎಂದು ದರ್ಶನಸ್ತುತಿಗೈದನೇಕಾರ್ಚನೆಗಳಿಂದರ್ಚಿಸಿ ವಂದಿಸಿ ತದನಂತರಂ ಗೌತಮಾದಿಗಣಧರರ್ಗೆವಂದಿಸಿ ಮನುಷ್ಯಕೋಷ್ಠದೋಳ್ಕುಳ್ಳಿರ್ದ್ದುಧರ್ಮ್ಮಶ್ರವಣಮಂ ಕೇಳ್ವವಸರ ದೊಳು ||

ವೃ || ಮಂಡೂಕಾಕೃತಿರತ್ನಕುಂಡಲಕಿರೀಟದ್ಯೋತಿವಿಸ್ತಾರಕಂ | ಮಂಡೂಕಪ್ರತಿ ರೂಪುಲಾಂ ಛನಚಳಚ್ಚಿಹ್ನಧ್ವಜಾಡಂಬರಂ | ಮಂಡೂಕಾಹ್ವಯದೇವನೋರ್ವ ನಲವಿಂಬಂದಂಸಭಾಮಧ್ಯದೋ | ಳ್ಕಂಡರ್ವಿಸ್ಮಯಚಿತ್ತರಾಗಿ ಪಿರಿದೊಂದಾಶ್ಚರ್ಯ್ಯ ಮಂತಾಳ್ವಿನಂ || ೫೩ ||

ವ || ಆಗಳಾ ಸುರಾನೀಕಮಾದೇವರೂಪಂಕಂಡು ಬೆಕ್ಕಸಬಟ್ಟರಲೀತನಿಲ್ಲಿಗೇಂ ಕಾರಣಬಂದನಾವಪುಣ್ಯದ ಫಲದಿಂ ದೇವನಾದನೆಂದು ಶ್ರೇಣಿಕೆ ಮಹಾರಾಜಂಗೌತಮ ಸ್ವಾಮಿಗಳಂ ಬೆಸಗೊಳ್ವುದಂ ಅವರಿಂತೆಂದರ್ನೀನಾಳ್ವರಾಜಗೃಹದ ರಾಜಶೇಷ್ಠಿ ನಾಗದತ್ತನಾ ತನಪೆಂಡತಿ ಭವದತ್ತೆಯೆಂಬಳಾ ಯೀರ್ವರ್ಪಲಕಾಲಂಸುಖದಿಂದಿರ್ದ್ದು ನಾಗದತ್ತಂ ಭವದತ್ತೆಯಾರ್ತ್ಥದಿಂಸತ್ತು ತನ್ನಮನೆಯಪಿಂದಣಭಾವಿಯೋಳ್ಕಪ್ಪೆಯಾಗಿಪುಟ್ಟ ||

ಕಂ || ಇರುತಿರಲಾವೈಶ್ಯನಸತಿ | ಭರದಿಂರೂಪಕ್ಕೆಪೋಗೆಕಂಡದುಜಾತಿ || ಸ್ಮರನಾಗಿಬೆನ್ನಬೆನ್ನನೆ | ಪರಿತರಲಾಪರದಿಬೆರ್ಚಿತಳವೆಳಗಾದಳ್ || ೫೪ ||

ವ || ಬಳಿಕಾಕೆಯಕಂಡಾಗಳೆ ಧ್ವನಿಗೊಡುತ್ತಿರೆ ಬೆಗಡುಗೊಂಡೋಡಿಬಂದು ಮನೆಯಂ ಪೊಕ್ಕಂಜಿವರಮೇಲೆ ಕಪ್ಪೆಯಂಬಿಸುಟರೆಂಬಂತೆ ಬೆಚ್ಚಿ ನಿಚ್ಚಮದರಕಾಟಕ್ಕೆ ಕೋಟಲೆಗೊಳಲೊಂದು ದಿವಸ ಸುವ್ರತಾಚಾರ್ಯ್ಯರೆಂಬವಧಿಜ್ಞಾನಿಗಳಂಕಂಡು ವಂದಿಸಿ ಯಾಮಂಡೂಕನೆನ್ನಕಂ ಡಕಂಡಾಗಳ್ಬೆನ್ನಂ ಬಿಡದಿರ್ಪಕಾರಣಮದೇನೆಂದು ಬೆಸಗೊಳಲ ವರವಧಿಯಂ ಪ್ರಯೋಗಿಸಿ ನೋಡಿಂತೆಂದರು ||

ಕಂ || ಯೀತಂನಿನ್ನಯಮೋಹದ | ದೈತಂವಿಭುನಾಗದತ್ತನಂಗಜವಿಕಳೋ | ಪೆತಂ ಬೆನ್ನೂಳುಬರುತಿ | ಪ್ಪಾತಂತಾನೆನಲುಪರದಿ ವಿವಿಸ್ಮಯಬಟ್ಟಳ್ || ೫೫ ||

ವ || ಮತ್ತಮದಂ ಕಂಡು ಕೊಂಡುಪೋಗಿ ಉಚಿತಸ್ಥಾನದೊಳಿರಿಸುವುದುಂ ನೀನು ವರ್ಧಮಾನಸ್ವಾಮಿಗಳ ವಂದನಕ್ಕಾನಂದಬೇರಿಯಂ ಪೊಯಿಸಲಾದುರ್ದ್ದುರಂಕೇಳ್ದರಿದು, ಶುಭಪರಿಣಾಮಂ ಪುಟ್ಟತಾನುಂವಂದನೆಗೈದು ಪೂಜೆನಿಮಿತ್ತಂ ಪೂವಿನೆಸಳಂ ಕಚ್ಚಿಕೊಂಡು ಪುರಮಂಪೊರಮಟ್ಟು ಬಟ್ಟೆಯೊಳುಬಪ್ಪಾಗಳೂ ||

ಕಂ || ಹರಿವೆಸರನಾಳ್ದುದಕ್ಕೋ | ಸರಿಸದೆಕೋಪದೊಳುಪಾದದಿಂಮೆಟ್ಟದೊಡಾ | ಕರಿಯೆಯ್ದಿಯಾನೆಮೆಟ್ಟದ | ಸೊರೆಯೆನೆದುರ್ದ್ದುರನುಪಿಟ್ಟುಪೀರಾಯ್ತಾಗಳ್ || ೫೬ ||

ವ || ನೀನೇರಿದಾನೆಯಿಂ ದಾನೆಗೊಲೆಗೊಳಗಾಗಿ ಶರೀರಭಾರಮನಿಳುಪಿ ಸ್ವರ್ಗದೊಳು ದೇವನಾಗಿಬಂದನೆನೆ, ಶ್ರೇಣಿಕಂಕೇಳ್ದು ಕಪ್ಪೆ ಪೂಜಾನುಮೋದದ ಫಲದಿಂ ದೇವನಾದುದೆಂ ದಡೆಮನುಷ್ಯರುತ್ರಿಕರಣಶುದ್ಧಿಯಿಂ ಪೂಜಿಸಿದವರಪವರ್ಗಲಕ್ಷ್ಮಿಯಂ ಪಡೆವುದಾದುವುದು ಚೋದ್ಯ ಮೆನಲು ಗಣಧರರು ಮತ್ತಮಿಂತೆಂವರು ||

೪ನೇ ಪುಷ್ಪಾಂಜಲಿಯ ಕಥೆ

ವೃ || ದುರಿತಾರಾತಿಜಿನಾಧಿಪಂಗೊಲವಿನಿಂಪುಷ್ಪಾಂಜಲೀಪೂಜೆಯಂ | ನಿರುತಂವಿ ಪ್ರಜೆ ಮಾಡಿಚಕ್ರಿಪದಮಂತಾಳ್ಪೊಯ್ದುಮತ್ತಂತಪೋ | ಭರದಿಂಮುಕ್ತಿಯನೈದಿಕೀರ್ತ್ತಿವಡೆದ ರ್ತ್ತಾವೆಂದೆನಲ್ಪೂಜಿಸಾ ದರದಿಂಭವ್ಯಜಿನೇಂದ್ರಪಾದಯುಗದಿಂನೀನೈದುವೈಬೇಳ್ಪುದಂ || ೫೭ ||

ವ || ಮತ್ತಮೀ ವೃತ್ತದಕಥೆಎಂತೆಂದೊಡೆ ||

ಕಂ || ಆಗಳುಜಂಬೂದ್ವೀಪದ | ಶ್ರೀಗಂಶೃಂಗಾರಮಾಗಿಪೂರ್ವವಿದೇಹಂ || ರಾಗಂಬೆತ್ತಿರಲದರೊಳು | ಸಾಗರಮೆನೆಕೆರೆಯುಯೆಂಬನದಿಯೆಸೆದಿಕ್ಕುಂ || ೫೮ ||

ವ || ಅದರದಕ್ಷಿಣ ತಟದಮಂಗಳಾವತೀ ವಿಷಯದರತ್ನಸಂಚಯಪುರಮನಾಳ್ವಂ ವಜ್ರಸೇನನಾತನವಲ್ಲಭೆ ಜಯಾವತಿಯೊಂದುದಿವಸಂ ||

ಕಂ || ನಾಡೆಮನಂಗೊಳೆತನ್ನೊಡ | ನಾಡುವಕೇಳದಿಯರುವೆರಗುವಭ್ರಂಕಶಮಂ || ಮಾಡಮನೇರಿಜಯಾವತಿ | ನೋಡುತ್ತಿರೆಗುರುನಿತೆಂಬೆನಾಲ್ಕುಂದೆಸೆಯಂ || ೫೯ ||

ವ || ಅನ್ನೆಗಂತೊಟ್ಟನೆಕಟ್ಟಿದಿರೊಳು ಪಟ್ಟಣದನಡುವಣ ಬಸದಿಯಿಂದೋದಿ ಪೊರಮಡುವಕುಸುಮಧಾಮ ಕೋಮಳರಪ್ಪ ಬಾಳಕರಂಕಂಡು ನೆಟ್ಟನಳಲುತಗುಳ್ದೂ ||

ಕಂ || ಜನಿಸಿದಚಿಂತಾವಲ್ಲಿಗೆ | ಘನಕುಚೆನೀರ‍್ವೊಯ್ವಮಾಳ್ಕೆಯಿಂಸುರಿತರೆಕ | ಣ್ಬನಿಗಳುತರತರದಿಂದಂ | ತನುಲತೆಬಾಡಿದಡೆತಳಿವತಣ್ಬನಿಗಳವೋಲ್ || ೬೦ ||

ವ || ಅದಂಕಂಡು ಮೇಳದಕೆಳದಿಯೋರ್ವಳಿಂತೆಂದಳೂ ||

ಕಂ || ಏನಕ್ಕಬರಿದೆನಿನ್ನೊಂ | ದಾನನಕೊರಗಿತ್ತುಕಣ್ಗಳಿಂಬಾಷ್ಪಜಲಂ | ಬಾನಲ್ವರಿದ ಪವೆನಗಿದ | ನೀನರಿಪಾನಿನ್ನಬಗೆಯಬಗೆಯಂಮಾಳ್ಪೆಂ || ೬೧ ||

ವ || ಎಂದುಬಿಡದೆ ಬೆಸಗೊಳಲಾಕೆಯಿಂತೆಂದಳು ||

ಕಂ || ಮಿಕ್ಕಾನೆಕುದುರೆತೇರಬ | ಲಕ್ಕಿದಿರಾಗುವಭಟರ್ಕ್ಕಳಿರ್ದ್ದೇನುಫಲಂ || ಮಕ್ಕಳು ಮಿಲ್ಲದರರಮನೆ | ಮಿಕ್ಕಿನಮನೆಯಂತದಲ್ತುವರಮನೆಯಲ್ತೇ || ೬೨ ||

ವ || ಎಂಬ ನುಡಿಯಕೇಳ್ದಾಗಳಾ ವೃಂತ್ತಾಂತಮಂ ಮತ್ತೇಭಗಾಮಿನಿ ವಜ್ರಸೇನಂ ಗರುಚಲರಸನವಧರಿಸಿ ಕತಿಪಯಪರಿಮಿತ ಪರಿಜನಂ ಬೆರಸುಕರುಮಾಡಮನೈದಿ ತದಗ್ರ ತಳ ದೊಳಿರ್ದ್ದ ನಿಜವಲ್ಲಭೆಯಲ್ಲಿಗೆವಂದರ್ಧಾಸನದೋಳ್ಕುಳ್ಳಿರ್ದ್ದುತ್ತರೀಯ ವಸನದಶರ ಗಿಂಸುರಿ ವಬಾಷ್ಪೋದಕಬಿಂದುಸಂದೋಹಮಂ ತೊಡದು, ನಿನ್ನ ದುಃಖಕ್ಕೆ ಕಾರಣ ಮೇನೆನುತ್ತಮತ್ತಿಂ ತಂದಂ ||

ವೃ || ಬಾಡಿದುದೇಕೆನಿನ್ನತನುವಲ್ಲರಿ ಇಂದು ಮುಖೇಂದುನಾಡೆನೀ | ರೋಡಿದುದೇಕೆ ಕೇದಗೆ ಯಕಂಪೆಳಸಿರ್ದ್ದೆಳೆದುಂಬಿವಿಂಡಿನಿಂ || ಕೂಡಿರಲೇಕೆನಿನ್ನಳಕಸಂತತಿಗೀಳ್ದಿರಲೇ ಕೆತಳ್ವುಮಂ | ಮಾಡದೆಪೇಳುನೀನೆಗೆನೀಳಸರೋಜವಿಲೋಲಲೋಚನೆ || ೬೩ ||

ವ || ಎಂಬುದುಂ ಜಯಾವತಿ ನಾಣ್ಚಿಮಾಗಿಯ ಕೋಗಿಲೆಯಂತೆಮೋನವ ಟ್ಟರ್ಪುದುಂ ಕೆಲದಕೆಳದಿಯಿಂತೆಂದಳು ||

ಕಂ || ಇಂದೀಜಿನಮಂದಿರದಿಂದಂ | ಸೌಂಧರರೂಪರ್ಕ್ಕುಮಾರಕರ್ಪೊರಮಡೆಕಂ || ಡಿಂದೀವರಾಕ್ಷಿಸುರಿದ | ಳ್ತಂದಳ್ಮಿಗಲಳವಿಗಳಿದಬಾಷ್ಪಾಂಬುಗಳಂ || ೬೪ ||

ವ || ಎಂಬುದು ಮವನೀಶನಾಗಲಾ ವನಿತೆಯಮನದ ಪುತ್ರದೋಹಳಮನರಿದೀ ಗಳಂತೆ ನೀಂನೆನೆದ ಕಜ್ಜಮನುಜ್ಜಿಗಿಪೆನೆಂದು ಜಿನರಾಜಮಂದಿರಕ್ಕೊಡಗೊಂಡುಪೋಗಿತ್ರೈಲೋಕ್ಯಸ್ವಾಮಿಯಂ ನಾನಾವಿಧಾರ್ಚನಿಯಿಂದರ್ಚಿಸಿ ಪೊಡಮಟ್ಟು ಅನಂತರಂ ಜ್ಞಾನಸಾಗರರೆಂಬ ಮುನಿಗಳ್ಗೆವಂದಿಸಿ ಧರ್ಮ್ಮಶ್ರವಣಾನಂತರಮಾದಂಪತಿ ಗಳಿಂತೆಂದರು ||

ಕಂ || ಕರುಣಿಪುದೆಮ್ಮಯಜನ್ಮಂ | ನಿರರ್ತ್ಥಕಂಪೋಗದಂತುನಂದನನೋರ್ವ್ವಂ || ಭರದಿಂದುದಯಿಪತೆರನಂ | ಪರಮಾರ್ತ್ಥಂದುರಘತಿಮಿರಕುಳದಿಗ್ಮಕರಾ || ೬೫ ||

ವ || ಎಂಬುದವರಿಂತೆಂದರು ಷಟ್ಖಂಡಮಂಡಲಮನಾಳ್ವ ಚಕ್ರವರ್ತ್ತಿಯಾಗಿಯುಂ ಚರಮಾಂಗಧಾರಿಯೋರ್ವ್ವಂ ಕುಮಾರನುದಯಿಪನೆನಲು ಘನಸ್ವನಮಂಕೇಳ್ದ ವನಮಯೂರನಂತೆ ದಂಪತಿಗಳಾನಂದಮೈದಿ ಮಂದಿರಕ್ಕೆಪೊಗಿ ಸುಖದಿಂರಾಜ್ಯಂ ಗೆಯ್ಯುತ್ತಿರ್ಪ್ಪನ್ನಗಂ ||

ವೃ || ಭಾವಿಸಿನೋಡೆ ನೋಡೆಬೆಳಪಾನನದೋಳ್ತಲೆದೋರಿದಲ್ತುಮಿಂ | ದೀವರಲೋ ಲಲೋಚನೆಯಪೀನಕುಚಾಗ್ರದೊಳಂದುಕಪ್ಪುಸ | ದ್ಬಾವಮನಾಂತುತೋರ್ಪತನುಮಧ್ಯ ದೊಳಂಪೃಥುಳಸ್ವ | ಭಾವಮಿನ್ನೆಪೊಗಳ್ದಪ್ಪುದೊಸತಿಯನೂತನಗರ್ಭ ವಿಳಾಸದೇಳ್ಗೆಯಂ || ೬೬ ||

ವ || ಬಳಿಕಂ ನವಮಾಸಂನೆರದು ಶುಭದಿನದೊಳೋರ್ವ ಕುಮಾರನಂಪಡೆದು ರತ್ನಶೇಖರನೆಂದು ಪೆಸರನಿಟ್ಟು ಸಪ್ತವತ್ಸರಸಮೃದ್ಧಿಯಿಂಮೇಲೆಜೈನೋಪಾಧ್ಯಾಯರ ಪಕ್ಕದೊಳೋ ದಲಿಡಲಾತಂ ಸಕಲಶಾಸ್ತ್ರಪ್ರವೀಣವಾಗಿ ||

ಕಂ || ನವಯೌನ್ನನಲಕ್ಷ್ಮಿಯನಿಂ | ತವಯವದಿಂತಾಳ್ದಿರತ್ನಶೇಖರನಾಗ || ಳ್ನವಿರೇರಿ ದತನುವಂಕದ | ಬವರಮನೋಳಕೊಳ್ವಮಾಸವಳನಂಪೋಲ್ವಂ || ೬೭ ||

ವ || ಮತ್ತಾಸಮಯದೊಳೂ ||

ವೃ || ಪರಷುಷ್ಟೊತ್ಕೃಷ್ಟರಾಗಂವಿಕಚವಿಚವಿಳಂಶೈತ್ಯಸೌರಭ್ಯಮಾಂದ್ಯಾ | ಚರಣೋಳ್ಂ ದಾನಿಳಂದರ್ಪಕಭುಜವಿಜಯಶ್ರೀವಿಳಾಸೋದಯಂಬಂ | ಧುರಗಾನಧ್ವಾನಚಂಚನ್ಮರು ಶಿರನಿಕರಂಚಂದ್ರಿಕಾವಲ್ಲರಿಪ್ರಸ್ಫುರಿತೋದ್ಯಚ್ಚೆಂದ್ರಬಿಂಬಂಬಗೆಗೆಬಳಿಸಲಬ್ಬಂದುದಾಗಳ್ವ ಸಂತಂ ||

ವ || ಅಂತು ಬಂದವಸಂತಾಗಮದೊಳು ರತ್ನಶೇಖರಂ ವನಜಲಕೇಳಿಗೆಪೋಗಿ ನಂ ದನವರರಮಣಿಮಯ ಮಂಟಪದೊಳೊಳಗೆ ವಿಚಿತ್ರಹೇಮ ಸಿಂಹಾಸನದ ಮೇಲೆ ಕುಳ್ಳಿರ್ದಾ ತ್ಮೀಯವಿಳಾಸಿನೀಜನದ ನೃತ್ಯಮಂನೋಡುತ್ತಿರಲಾಸಮಯದೊಳೋರ್ವ ವಿದ್ಯಾಧರಂಗಗನದೋ ಳ್ಪೋಗುತ್ತಂ ತನ್ನವಿಮಾನಂ ಮಂಟಪದಮೇಲೆ ಕೀಲಿಸಲ್ಕೆಳಗಂ ನೋಡಿ ತಾನವರಸಮೀಪಕ್ಕೆಬಂದು ಪೂರ್ವಜನ್ಮದ ಸಂಸ್ಕಾರದಿಂದ ದೋರೋರ್ವರಂ ನೋಡಿ ಪರಸ್ಪರಸ್ನೇಹವೀರ್ಬರ್ಗಂಪುಟ್ಟೆಯು ಚಿತಸಂಭಾಷಣಗಳಂ ಮಾಡಿ ಒಂದುಸಿಹ್ಮಾಸನದಮೇಲೆ ಕುಳ್ಳಿರ್ಪುದಾವಿದ್ಯಾಧರಂಗೆ ರತ್ನಶೇಖರನಿಂ ತೆಂದಂ ||

ಕಂ || ನೀನಾರೆಲ್ಲಿಗೆಪೋದಪೆ | ಏನಿಲ್ಲಿಗೆ ಬಂದೆಯೆಂದುಬೆಸಗೊಳಲಾತಂ || ಮಾನನಿಧಿ ಖಚರಪತಿಹಸಿ | ತಾನನನಾರತ್ನಶೇಖರಂಗೊಲವಿಂದಂ ||

ವ || ಎಂತೆಂದನೀವಿಜಯಾರ್ದ್ಧಪರ್ವತದ ದಕ್ಷಿಣಶ್ರೇಣಯಸುಕಂಠಪುರಮನಾಳ್ವ ಜಯವರ್ಮಂಗೆ ಯಾತನವಧುವಿನಯಾವತಿಗಂ ಪುಟ್ಟದಮೇಘವಾಹನನೆಂಬ ಸಕಲ ವಿಧ್ಯಾನಾಥನಾನು ಎನಗೆಂಮತಂದೆ ರಾಜ್ಯಮಂಕೊಟ್ಟು ದೀಕ್ಷೆಗೊಂಡಿರ್ಪುದಾಂ ಸೇಚ್ಛಾವಿಹಾರದಿಂ ಬರುತ್ತಂಕಂಡೆನೆಂದು ವಿದ್ಯಾಧರಂ ಮತ್ತಿಂತೆಂದಂ ||

ಕಂ || ಯನಗರಿಪಲ್ಪೇಳ್ವುದನಿ | ನ್ನನುಪಮವಂಶಪ್ರಭಾವಮಂಬುಧನುತಮಂ || ಜನನಾಥತನಯಪೇಳೆಂ | ದನುವಿಸಿಖಚರೇಂದ್ರವಲ್ಲಭಂಬೆಸಗೊಂಡಂ || ೭೦ ||