ನಾಗಕುಮಾರನ ಶೋಭಾನೆ

ಶ್ರೀನಾಭೇಯಾದಿಸಕಲಜಿನರಿಗಧಿಕಾನಂದದಿಂದೆರಗಿ | ಶಾರದಾದೇವಿಗಾನತನಾನಾಗಿ ಪೇಳುವೆ ಹಸೆಗೆ | ಜೈನಸಮಯಾಂಭೋನಿಧೀಂದುವೆ | ದೀನಜನಸಂತಾನಸನ್ನಿಭ | ದಾನಿಫಣಿನಸೂನುವನು ಕರೆ | ದಾನವೀನಶೋಭಾನೆಯನು ಕೇಳಿ ಜನರೆಲ್ಲ | ೧ | ವರಜಂಬೂದ್ವೀಪದಭರತ ಕ್ಷೇತ್ರದೋಳ್ಮೆರೆವಾರ್ಯ್ಯಾಖಾಂಡದ | ಮಗಧದೇ ಶದೊಳಿರುವಕನಕಪುರದ | ಜಯಂಧರ ನರಸಿಪೃಥ್ವೀವರಸುದೇವಿಗೆ | ಇರದೆ ಬಂದವತರಿಸಿದಿವಸೇ ಶ್ವರನತೇಜವ ಮರಸುವಮಲಾ | ಕರದವಿಕ್ರಮಂ | ಧರನೆಬಾ ಹಸಗೆ ಕರೆದರು | ೨ | ಅರಮನೆವತ್ತಿನವನದಜಿನೇಂದ್ರನ | ಪರಮನಿಳಯಕೆ ಬಂದು | ಕಚ್ಚಿದವಜ್ರ | ವರಕವಾಟವತೆಗೆದು | ಮತ್ತಲ್ಲಿಹ | ಗರಳಕೂಪದಮರ ಣವನುಪರಿ | ಹರಿಸಿಸರ್ವ್ವನಕರುಣದಿಂದಲೀ ಉರಗಸುತನೆಂಬರಿಕೆನಾಮವ | ಧರಿಸಿದಭಿವವ | ಸ್ಮರನೆಬಾಹಸೆಗೆ ಕರೆದರು | ೩ | ಹರೆಯಲಜ್ಞಾನವು ಬರಲು ಸುಜ್ಞಾನವು ಸರಸ್ವತಿಸಮವೆನಸಿ | ಸಕಲವಿದ್ಯದಿರವನೆಲ್ಲವಗ್ರಹಿಸಿ | ಕಿಂನರಿಮನೋ | ಹರಿಯರಿಬ್ಬರಹಿರಿದು ಕಿರಿದೆಂ | ದರಿದು ಮದಗಜತುರುಗಸಹಪಿಡಿ | ದಿರದೆಓಜಿಂ ದರನುಮಕ್ಕಳ | ನೆರೆಗೆಲಿದಹೀಂದ್ರಕ | ವರನೆಬಾಹಸೆಗೆಕರೆದರು | ೪ | ಗುರುವಾಕ್ಯದಿಂದವನಿಯಬೆಡದೆಲ್ಲವ | ತಿರುಗಿಬಂದಡಿಗೆಬಿದ್ದ | ವ್ಯಾಲನನುಪಚರಿಸಿ ನಂದನದೊಳಿರ್ದ್ದ | ಗಜಂಗಳ | ತಿರುಗಿ ಪೊಳಲಿಗೆಹರುಷದಿಂಬಂ | ದರುಣಪ ಶ್ಮಿಮಶರಧಿಗಿಳಿದಾ | ಇರುಳೊಳರುಹನ ಪರಮಭಕ್ತಿಯೊಳ್ಸ್ಮರಿಸುತಿರ್ದ್ಧಹಿಕು | ವ ರನೆ ಬಾಹಸೆಗೆ ಕರೆದರು | ೫ | ಮಂಡಲಪತಿಜಯಂಧರನಗ್ರಪ್ರೀತಿಯ | ಪೆಂಡ ತಿವಿಶಾಲಾಕ್ಷಿಯ | ಗರ್ಭಜನಾಗಿ | ದಂದಿಶ್ರೀಧರನಹಿಯಪುತ್ರನಶಿರವ | ಖಂಡಿ ಸೆನೆಕೈಕೊಂಡು ಬಸದಿಗೆ | ದಂಡುಕವಿಯಲುಕಂಡು ತಲೆಗಳ | ಚಂಡನಾ ಡಿದಗಂಡು ವ್ಯಾಲನ | ಕಂಡುಮೆಚ್ಚಿದ | ಕುಂಡಲಿಸುತನೆಹಸೆಗೇಳು | ೬ | ಇನನುದಯದೊಳ ರಸಿಗುಜನನಿಗುಶಿರ | ವನುಬಾಗಿಪರದೇಶವ | ನೀಕ್ಷಿಸಿಬಹೆನೆನುತಮಧುರಾ ಪುರವ | ಸಾರ್ದ್ದಲ್ಲಿಮಾ | ನಿನಿಯಕಥನದಿ ಮುನಿದುಷ್ಟವಾ | ಕ್ಯನಿಗೆವ್ಯಾಲನವಿನ ಯಂದಿಂದರ | ಮನೆಯ ಸಿಂಹಾಸನ ಸುಲಕ್ಷ್ಮೀ | ವಿನಯನಾದಹಿ | ತನಯನೆಬಾಹ ಸೆಗೆ ಕರೆದರು | ೭ | ಜನನುತನಂದ ಭೂಮೀಶನಾತ್ಮಜೆ ತ್ರಿಭು | ವನರತಿಯನುಗೆ ಲಿದು | ವೀಣೆಯೊಳ್ಜಿನ | ಭವನದಪಡಿದೆರದು | ಭೀಮರಾಕ್ಷ | ಸನೊಳುರಮ್ಯಕವ ನಿತೆ ಕಪ್ಪವ | ವಿನಯದಿಂಕೊಂಡನಿತರೊಳುಕಾಂ | ಚನಸುಗುಹೆಯೊಳುವಿಮತ | ಸುದರ್ಶನೆಯಕಂಡಹಿ | ತನಯನೆಬಾ ಹಸೆಗೆ ಕರೆದರು | ೮ | ಅನುರಾಗ ದೊಳು ವಿದ್ಯವನಿಮಿಷದೊಳುಸಾಧ್ಯ | ವನುಮಾಡಿವೇತಾಲನ | ಗೆಲಿದುಪೋಗಿ | ಜನಪ ಸೋಮಪ್ರಭನ | ಏಳಿಸಿವನರಾಜನಿಗೆ ಪುಂಡ್ರವರ್ದ್ದನವನಿತ್ತಾ | ತನನಿಜಾತ್ಮೆಯನು ಸುಲಗ್ನದಿ | ವನಜಕರವಿಡಿದನುಪಮಸುಖಂಗ | ಳನನುಭವಿಸುತಿರ್ದ್ದಹಿ | ತನಯನೆ ಬಾಹಸೆಗೆ ಕರೆದರು | ೯ | ವರಸುಪ್ರತಿಷ್ಠಪುರದಜಯವರ್ಮ್ಮನಪು | ತ್ರರುಛೇ ದ್ಯಭೇದ್ಯರನು | ಮನ್ನಿಸಿಸವಿದು | ಗರಳಾಮ್ರದಪಣ್ಣನು | ಶತಭಟರ್ಸ್ಸಾಸಿರಭಟ ರ್ಗ್ಗಳಶಿರವಬಾಗಿಸಿ ಚರಣಕಂತರಪುರವಪೊಕ್ಕತಿ | ಹರುಷದಿಂಸಖರ್ವ್ವೆರಸಿ ಸುಖಸಾಗರದೊಳಿರ್ದ್ದಹಿಕು | ವರನೆಬಾ ಹಸೆಗೆ ಕರೆದರು | ೧೦ | ಸಿಂಧುದೇಶದ ಶೋಭಾವತಿಯಚಂಡಪ್ರಭ | ನಂದುಸೌರಾಷ್ಟ್ರಖ್ಯದ | ವಿಷಯದೊಳು | ಅಂದದಗಿರಿ ಪುರದ | ಹರಿವರ್ಮ್ಮನ | ಬಂದುಮಗಳೆನಗಿಂದುಕೊಡಬೇ | ಕೆಂದೊಡಾತನಬಂದು ಸೆರೆಹಿಡಿ | ತಂದು ಮಾವನನಂದೆನೆಗೆನಲ | ವಿಂದೆರೆಯನಾದಹಿ | ನಂದನನೆಬಾಹಸೆಗೆ ಕರೆದರು | ೧೧ | ದಿವಿಜೇಂದ್ರವೈಭವದೊಳು ಬಂದು ಭೂಧರ | ನಿವಹದೊ ಳೂರ್ಜ್ಜಯಂತ | ಪರ್ವ್ವತದಭಿನವ ನೇಮಿಜಿನಗತ್ಯಂತ | ಭಕ್ತಿಯೊಳಭಿಷೇ | ಕವನುವಿರಜಿಸಿ ವಿವಿಧವಾದ್ಯದ | ರವದಿಯತಿನಿಕಾಯವನುಪೂಜಿಸಿಜಿನ | ಭವನವನು ಪೊರಮಟ್ಟವನಿಪಾಲಕ | ನಿವಹಕೈದಿದ | ಪವನಾಶನಾತ್ಮಜನೆ ಹಸೆಗೇಳು | ೧೨ | ಕರಿಪುರದಭಿಚಂದ್ರನಗ್ರಜಶುಭಚಂದ್ರ | ವರವತ್ಸಜನಪದದ | ಕೌಶಂಬಿಯೊ | ಳಿರುತಿರ್ದುವಿಜಯಾರ್ಧದ | ರತ್ನಸಂಚಯ | ಪುರದವಿದ್ಯಾಧರಸುಕಂಠಗೆ | ಧರೆಯಕೊಟ್ಟಳಿದಿರವಲಾಲಿಸಿ | ತೆರಳಿಯಲ್ಲಿಂದುರುಳಖಚರನ | ಶಿರವಕೆಡಹಿದ | ಉರಗೇಂದ್ರಸುತನೆಹಸೆಗೇಳು | ೧೩ | ಸುಜನಶಿರೋರತ್ನವಜ್ರಕಂಠಗೆ ನೂತ್ನ | ವಿಜಯಾರ್ದ್ಥನಗವಂದಿನ | ಪಟ್ಟಣವಿತ್ತು | ಭುಜಬಲದಿಂದವನ | ತಂಗಿಯಹಸ್ತಾಂ | ಭುಜವಪಿಡಿದುಭೂಭಜರ ವಸ್ತುವ | ಗಜತುರುಂಗವನತಿನವೀನದಿ ಸೃಜಿಸಿಯಂ ಗನಾವ್ರಜವಪಡೆದು ಸಾಮಜಪುರಕೆ ನಡೆದ | ಭುಜಗೇಂದ್ರಸುತನೆ ಹಸೆಗೇಳು | ೧೪ | ಅನಾಗಪುರದರಸಿನತನುಜೆಯಧರಣೀನಾಥಶುಭಚಂದ್ರನ | ಸುತೆಯರೆಣ್ಬ ರಾನಂದದೊಳು ಸುದಿನ | ಮದುವೆಯಾಗಿ | ಆನೃಪರಕ್ಷಾ ರಾಜಜನನ | ಸನ್ಮಾನವನುಗೈದಾನವೀನಡಿ | ಜೈನನೃಪಜಯಸೇನನಾತ್ಮಜೆ | ಮೇನಕಿಗೆಯಾದಾ ನಾಗನುತನೆ ಹಸೆಗೇಳು | ೧೫ | ಸ್ಮರರೂಪಮಹಾವ್ಯಾಲ ಸಹಿತಸೇನಾಜನ | ವೆರಸಿದಕ್ಷಿಣ ಮಧುರ | ಪುರವವೊಕ್ಕಲ್ಲಿರುವನರಾಧೀಶ್ವರ | ಮೇಘವಾಹನ | ನುರುತರಮಲೋದರ ದೊಳುದಿಸಿದ | ತರುಣಿ ಶ್ರೀಮತಿವರಸುನಾಟ್ಯದಿ | ಸರಿಗೆ ಭಾಜಿಸಿಮುರಜವವಳಿಗೆ | ಎರೆಯನಾದ ಹಿಕುವರನೆಭಾಹಸೆಗೆ ಕರೆದರು | ೧೬ | ಪೊರಮಟ್ಟು ದಕ್ಷಿಣ ಮಧುರೆಯಿಂತೆಂಕಣ | ಶರಧಿಮಧ್ಯದೊಳಿರುವ | ವಿಜಯಜಿನ | ಗೆರಗಿ ಭುವನತಿಲಕ ದ್ವೀಪದದೌಷ್ಟ್ರಾಂ | ಬರಚರೇಶನಕೊರಳಖಂಡಿಸಿ | ವರಸುಸುತೆಯರಶೆರೆಯಜಿನಮಂ | ದಿರದೊಳಿರಿಸಿದ ದುರುಳನೊಳು ಸಂಗರವನೆಸಗಿದ | ಉರಗೇಂದ್ರಸುತನೆ ಹಸೆಗೇಳು | ೧೭ | ಇಂದೀವರಾಕ್ಷಿಯರೈ ನೂರು ಮಂದಿಯ | ತಂದೆಯೊಡನೆಪುಟ್ಟಿದ | ತಂಗಿಯಗರ್ಬ್ಬ | ದಿಂದಿರದುದಯಿಸಿದ | ವಾಯುವೇಗನ | ಕೊಂದುಸತಿಯರಣ್ಣಿಂದರಿಬ್ಬಿರ | ಬಂಧನವಬಿಡಿಸಿಂದು ಮುಖಿಯರಾ | ನಂದದಿಂದಲೆ ಬಂದು ಪಾಣಿಯ | ನಂದುಪಿಡಿದಹಿ | ನಂದನನೆ ಬಾಹಸೆಗೆ ಕರೆದರು | ೧೮ | ಸಾಗರದಿಂದಿಳೆಗಿಳಿದಂಘ್ರಿಗೆತಲೆ | ವಾಗಿದಭಟತತಿಯ | ಮನ್ನಿಸಿಪಿರಿ | ದಾಗಿಕಾಂಚೀಪುರಿಯ | ಪಲ್ಲವಾತ್ಮಜೆಯ | ಪೋಗಿ ಮದುವೆಯನಾಗಿ ಅಗಣಿತ | ಭೋಗದೊಳಗಿರ್ದ್ದಾಗಮಗುಳ್ದನು | ರಾಗದಿಂದಲೆ ಬೇಗಮುಂದಕೆ | ಸಾಗಿದನುಪಮ | ನಾಗೇಂದ್ರಸುತನೆ ಹಸೆಗೇಳು | ೧೯ | ಸೇರಿಕಾಳಿಂಗಾಖ್ಯವಿಮಲ ದೇಶಕೆಮುಖ್ಯ | ವಾರಣಾಪುರದಲ್ಲಿಹ | ಚಂದ್ರಗುಪ್ತಮ | ಹಾರಾಜನಾತ್ಮಜೆಯ | ಮದುವೆಯಾಗಿ | ನಾರಿಯಗಲದೆಮಾರಲೀಲ | ಚಾರುಸುಖಕೂಫಾರದೊಳುನಲ | ವೇರಿದಭಿನವಭೂರಿಪುಣ್ಯದ | ವೀರನಾಗಕು | ವರನೆಬಾಹಸೆಗೆ ಕರೆದರು | ೨೦ | ಪೃಥುವಿಗಗ್ಗಳವಾದ ಕೊಂಕಣದೇಶದೊ | ಳತಿರಂಜಿಸುವ ತ್ರಿಲೋಕ | ತಿಳಕಪುರದಚ ತುರದೊಳ್ವಿನಾಯಕ | ವಿಜಯಂಧರನ | ಸತಿಯುವಿಜಯಾವತಿಗೆ ಪುಟ್ಟಿದ | ಸುತೆಸುಲಕ್ಷ್ಮೀಮತಿಗೆಪೇಳ್ದನಿಂ | ನತಿನುರೂಪಿನಕಥೆಯನೆನಲಗ | ಣಿತಮುದವ ನಾಂತಹಿ | ಸುತನೆಬಾಹಸೆಗೆ ಕರೆದರು | ೨೧ | ಮದನಮಂಜರಿ ಅತಿಶಯದಿಲಕ್ಷ್ಮೀ ಮತಿ | ಸದಮಲ ಶೃಂಗಾರವ | ವೇಳಲುಕೇಳಿ | ಮುದದಿದಂತೀಪುರವ | ನುಳಿದುವೋಗಿ | ತ್ರದಿಶಪತಿವಿಭವದೊಳಗವಳನು | ಮದುವೆಯಾಗತ್ಯಧಿ ಕಸಂತೋಷದೊಳು ಸನ್ಮುನಿಪದಕೆಬಂದೆರ | ಗಿದಜಯಂಧರವ | ಸುಧೀಶಾತ್ಮೆಜನೆ ಹಸೆಗೇಳು | ೨೨ | ಮತ್ತಾಮುನಿಪನಿಂದಜಂಬೂ ದ್ವೀಪದೊಳಂದ | ವೆತ್ತೈರಾವತದ | ವೀತಶೋಕಾಖ್ಯ | ಮಿತ್ತಪುರದಸನ್ನುತಸದ್ಗುಣಿಧನ | ದತ್ತನಿಗುಧನ ದತ್ತೆಗಿರ ದುತ್ಪತ್ತಿಯಾದಹಿ | ದತ್ತನೆಂಬುವ | ಸುತ್ತಮುಕ್ತಿಗೆ ಚಿತ್ತವಿತ್ತರಿಯುತ್ಸಲಿರ್ದ್ದಹಿ | ದತ್ತನೆಬಾಹಸೆಗೆ ಕರೆದರು | ೨೩ | ಕುಸುಮಾಸ್ತ್ರಾನಿಭವನಾಗದತ್ತ ಬಳಿಕನಾಗ | ವಸುವೆಂಬಿಂಗನೆಯ | ಕೂಡಿರ್ದ್ದುರಾ | ಜಿಸುವಶ್ರೀಪಂಚಮಿಯ | ಉಪವಾಸವನು | ಒಸೆದುಕೈಕೊಂಡ ಸಮವ್ರತವನು | ಹಸನಗೆಡಿಸದೆ | ಎಸೆವವರಸುಖದ | ರಸಕೆ ಕಾಯವಬಿಸುಟನೆನ | ಲಾಲಿಸಿದಜಯಂಧರ | ವಸುಮತೀಶಾತ್ಮಜನೆ ಹಸೆಗೇಳು | ೨೪ | ಪರಮಪಾವನಸೌಧರ್ಮ್ಮಕಲ್ಪದೊಳುಸುಂ | ದರವಾದರುಣಪ್ರಭ | ವಿಮಾನ ದೊಳ್‌ | ಸುರಚಿರಸೂರ್ಯಪ್ರಭ | ದೇವೇಂದ್ರ ನಾ | ಗಿರಲುಮುನ್ನಿನ ಉರಗವಸುವೆ | ತರುಣಿಯಾದಳುಸುರನಿಗೆಂದಘ | ಹರರುಪೇಳುತ್ತಿರಲು ಮನದೊಳು | ಹರುಷವಾಂತಹಿಕು | ಪರನೆಬಾಹಸೆಗೆ ಕರೆದರು | ೨೫ | ಸುರಪಸೂರ್ಯ್ಯ ಪ್ರಭನೈತಂದುಮನುನಿಭ | ಚರಿತಜಯಂಧರನ ಪೃಥ್ವೀದೇವಿ | ಸುರುಚಿರುದರದೊಳಗೆ ಪುಟ್ಟಿರೆನಾಗ | ವರಕುಮಾರನ | ಉರಗವಸು | ನಿರ್ಜ್ಜರೆಯುನಿನಗೆಂದೊರೆಯೆ ಮಾನದೊಳು ನೆರೆದವಿಕ್ರಮಂ | ಧರನೆಬಾಹಸೆಗೆ ಕರೆದರು | ೨೬ | ವನಿತೆಲಕ್ಷ್ಮೀಮತಿ ಮೂರುಭವದಸತಿ | ಜನನಿಜನಕರಿಂದು | ನಿನಗಾದರಂದಿನಭವದವರೆ ಎಂದು | ಪಿಹಿತಾಸ್ರವ | ಮುನಿಗಳು ಸುರಲುಘನ ಸುಮುದದೊಳು | ಮನಸಿ ಜಾಂತನಕನನು ಪಮಾಂಘ್ರಿಯ | ವಜನಕೊಂದಿಸಿ ಜನಪಸಹಿತರ | ಮನೆಯಪೊಕ್ಕಹಿ | ತನಯನೆಬಾ ಹಸೆಗೆ ಕರೆದರು | ೨೭ | ಅರಸುಜಯಂಧರ ಎಲೆ ವಿಕ್ರಮಂಧರ | ಕರೆದುತಾರೆಂದ ನೆಂದು | ಸಚಿವನಯಂಧರನುಸುರಲು ಬಂದುವೇಣ್ಭಾಸಿರ | ತರುಣಿಜನರನುಪರ ಮಸಖರನು | ನೆರೆದಬಲವನು ವೆರಸಿಮುದದೊಳು | ತೆರಳಿಕಾಂಚನಪುರ ಪ್ರವೇಶವ | ವಿರಚಿಸಿದಹೀಂದ್ರಕು | ವರನೆ ಬಾಹಸೆಗೆ ಕರೆದರು | ೨೮ | ತಂದೆತಾಯಿಗಳಡಿಗೆರೆ ಗಿಸಂಗಡಗೂಡಿ | ಬಂದಖೇಚರಕುಮಾರ | ಸಿಂಹವರೂಢ | ಸಿಂಧೂರನಗರೇಶ್ವರ | ಹರಿವರ್ಮ್ಮನ | ಸೌಂಧರಾಧಿಪವೃಂದತಮ್ಮಯ | ಮಂದಿರಕೆ ಪುಗಲೆಂದು ಸಂಭ್ರಮ | ದಿಂದ ಬಳಿಕ ಪುರಂಧರರಾಭಾ | ನಂದದಿಂದೆಸೆವ | ಜಯಂಧರನಾತ್ಮಜನೆ ಹಸೆಗೇಳು | ೨೯ | ಲೋಲಲೋಚನೆಪೃಥ್ವೀದೇವಿ ಸಹಿತ ಪೃಥ್ವೀಪಾಲ ಜಯಂಧರನು | ದೀಕ್ಷೆಯನಾಂತು | ಏಳಲಕ್ಷಯಕಂದು | ಬಳಗಂಗಳ | ಜಾಲಸಹವನು ಕೇಳಿಯಾದಿ | ಸುಲೀಲೆಯೊಳು ವನಮಾಲಿತನುಭವ || ನೋಲು ಅಗಣಿತಕಾಲದವನಿಯ | ನಾಳಿದಹಿಸುತ | ಭೂಲಕ್ಷ್ಮೀಶ್ವರನೆಹಸೆಗೇಳು | ೩೦ | ನಾರಿಲಕ್ಷ್ಮೀಮತಿಯುದರಾ ಬ್ಧಿಗುಡುಪತಿ ಮಾರಸನ್ನಿಭ ದೇವ | ಕುಮಾರಗೆ | ಶೇರಿಸಿಭೂಭಾರವ | ದೀಕ್ಷೆಗೆವೋಗಿ | ಮೂರು ಕಾಲದಿಚಾರುತಪದೊಳು | ಕ್ರೂರಕರ್ಮದ ಬೇರಕೆಡಿಸಿದ | ಮಾರಗಜಕಂಠೀರವಾಹಿಕು | ಮಾರಮುನಿಪದ | ವಾರಿಜಗಳಿಗೆ ನಮೋಯಂಬೆ | ೩೧ | ಕಂದರ್ಪ್ಪಾಂತಕಕಾರಾಪುರದ ನೇಮಿಶ್ವರ | ಗಂದು ಕೈವಲ್ಯವಾದ | ಕಾಲದೊಳಹಿ | ನಂದನ ನಾಮವಾದ | ಕೇವಲಿಯಾಗಿ | ಗಂಧಕುಟಿಯೊಳುನಿಂದು ಶತಪತಿವೃಂದ ಪೂಜಿತದಿಂದ ಮೆರೆದ | ಲ್ಲಿಂದಮಹಿಗೈತಂದು ಮುಕ್ತಿಗೆ | ಸಂದಸಿದ್ಧರರವಿಂದಾಂಘ್ರಿಗಳಿಗೆಜಯವೆಂಬೆ | ೩೨ |

* * *

ಮರುಳುದುಂಬುವ ಹಾಡು

ಋಷಿಗಳು ಕಳುಹಿದರು | ಹೊಸಫಲದಮಾವಿನ | ಮಿಸುನಿಅಂದದಲಿ ಹೊಳೆಯುವ | ಹೊಳೆವ ಮಾವಿನಹಣ್ಣು, ಅಸಿನಡಿಗ್ಹರಸಿಕಳುಹಿದರು | ೧ | ಕಾಯಿತೆಂಗಿನಕಾಯಿ | ಛಾಯವುಳ್ಳರಿಶಿನ | ಕ್ಷೀರಸಾಗರದ ಬಿಡಮುತ್ತು | ಬಿಡಮುತ್ತು ಅಕ್ಕೈಯ್ಯನಿಗೆ | ಅಪ್ಪಾಜಿಕೊಟ್ಟುಕಳುಹಿದರು | ೨ | ಹಣ್ಣು ಬಾಳೆಯಹಣ್ಣು ಬಣ್ಣವುಳ್ಳರಿಶಿನ | ಪುಣ್ಯ ಸಾಗರದಬಿಡಮುತ್ತು | ಬಿಡಮುತ್ತು ಅಕ್ಕೈಯ್ಯನಿಗೆ | ಅಣ್ಣೈಯ್ಯಕೊಟ್ಟುಕಳು ಹಿದರು | ೩ | ದೇವೇಂದ್ರ ಕಳುಹಿದನು | ದೇವಲೋಕದ ಫಲವ | ದೇವಕಿಯು ಹೊನ್ನ ಹರಿವಾಣ | ಹರಿವಾಣದೊಳಗಿರಿಸಿ | ದೇವಿಗೆ ತುಂಬಿದಳೆ ಮಡುಲನ್ನು | ೪ | ನಾಗೇಂದ್ರ ಕಳುಹಿದನು | ನಾಗಲೋಕದ ಫಲವ | ನಾಗಕಿಯು ಹೊನ್ನ ಹರಿವಾಣ | ಹರಿವಾಣದೊಳಗಿರಿಸಿ ದೇವಿಗೆ ತುಂಬಿದಳೆ ಮಡುಲನ್ನು | ೫ | ಚಿಪ್ಪಿನಬಾಳೆಯಹಣ್ನು ಚಿಗರೊಡೆದಬಿಳಿಯೆಲೆ | ಸತ್ಯಸಾಗರದಬಿಡಮುತ್ತು | ಬಿಡಮುತ್ತು ಅಕ್ಕೈಯನಿಗೆ | ಮಾವಾಜಿಕೊಟ್ಟು ಕಳುಹಿದರು | ೬ | ಭದ್ರಗಜಗಮನೆಬಾಶರನಿಧಿಯೆಮಡಲೊಡ್ಡು | ಸಮುದ್ರಭೂಪತಿಯಮಗಳಿಗೆ | ಮಗಳು ಅಕ್ಕೈಯ್ಯನಿಗೆ | ಸುಭದ್ರೆಗೆ ತುಂಬಿದರು ಮಡುಲನ್ನು | ೭ |

* * *

ವಸಗೆಯ ಶೋಭಾನೆ

ಶ್ರೀಜಿನಪತಿಗೆನಮೋಯೆಂದುನೀ | ರೇಜದಳಾಕ್ಷಿಶಾರದೆಗಿಂದುನಾ | ನೋಜೆಯೊಳ ಭಿವಂದಿಸಿ ಬಂದುಮುನಿ | ಭೂಜಂಗಳಬಲಗೊಂಡುಪದ್ಮಾಂಬೆಗೆ | ರಾಜಿಸಿದೊಸಗೆ ಯನುರಚಸುವೆನು | ೧ | ರಾಜಗೃಹನಗರಾಧಿಪನಸತಿ | ರಾಜೀವಮುಖಿ ಸದ್ಗುಣಸ ದನ | ಗಜ | ರಾಜನಸಮ ಸುಲಲಿತಗಮನದ್ವಿಜ | ರಾಜಸಮಾನರುಚಿಯಾದ್ಹಸೆಯ ಮೇಲೆ ಮಹಿರಾಜಕನ್ನೆಯರುರಚಿಸಿದರು | ೨ | ಬಿಳಿದುಟ್ಟು ಉದಯದೊಳಗೆನಿಂದು ಕಂಡು | ತಿಳಿದುಸುಮಾಂಗಲ್ಯವತಿಯೆಂದು | ಕೇಳಿ | ನಳಿನಾಕ್ಷಿ ಪದ್ಮಾವತಿಯೆಂದು ಸ್ತ್ರೀಯರೋಳುಪುಣ್ಯವತಿ ಜಿನಮಾತೆಯಾಗುವಳೆಂದು | ತಿಳಿದು ಸುರಿದರು ಮನವಲಿದು | ೩ | ಶಶಿಮುಖಿಯರುಪದ್ಮಾಪತಿಯುನೆರೆ | ದೊಸಗೆಯವೇಳೆ ಧರಾಪತಿಯು ಕೇಳಿ | ನಸುನಗುತೊರೆಯೆಶಚಿವಪತಿಯುಬೇಗ | ಬೆಸಗೊಳ್ಳೆಜೋ ಯಿಸರುಗಳತತ್ಫಲಗಳ | ಉಸುರಿದರಿಂತುಮನವಲಿದು | ೪ | ಶುಭತಿಥಿವಾದ ನಕ್ಷತ್ರಗಳು ಬಂದಶುಭಯೋಗ ಕರಣಸುಲಗ್ನದೊಳುನಿಂದ | ಶುಭಭಾವಗ್ರಹ ದೃಷ್ಟಿಯೊಳುವೇಳೆ | ಶುಭಶಕುನದಿಜಿನರಾಜ ನಂಬಿಕೆಯಾಗಿ | ಉಭಯಲೋಕದೊ ಳುವುಸುರಿದರು | ೫ | ಇತ್ತ ಪದ್ಮಾವತಿ ಋತುವಾಗಿಚ | ಲ್ವೆತ್ತುರಾಜಿಸೆಬಹುತರವಾಗಿ | ತಾನು | ಚಿತ್ತಜನರಸಿಗೆಮಿಗಿಲಾಗಿ ನೃಪ | ಗತ್ತಮಾನಿನಿಯರುನಮಿಸಿಸಂತೋಷದಿಂದ | ಬಿತ್ತರದೊಸಗೆಯನು ರಚಿಸಿದರು | ೬ | ಚಂದ್ರಕುಂಕುಮವರಿಶಿನವಿಟ್ಟು | ಕಂಣಿಗಿಂದ್ರನೀಲಾಭ ದಂಜನವಿಟ್ಟುದಿವ | ಸೇಂದ್ರನಂತೆನೆವ ಚಂದನಬಟ್ಟುಪೂರ್ಣ್ನ | ಚಂದ್ರವದನೆಗಲ ತೆಗೆಯಿಟ್ಟುಮೆರೆಯೆನ | ರೇಂದ್ರನಲಕ್ಷ್ಮಿಯ ತೆರದಿಂದ | ೭ | ನೀವಿಯಕ್ಕುಪ್ಪುಸುವನೆತೊಟ್ಟುಚಂದ್ರ | ಗಾವಿಯಸೀರೆಯಬಿಗಿದುಟ್ಟುರತ್ನ | ತೀವಿದಾಭರಣಂಗಳತೊಟ್ಟುನಾ | ನಾವಿಧಪರಿಮಳಮಾಲೆಗಳಿಂದಲೂ | ದೇವಿಶೃಂ ಗರಿಸೆ ಮೆರೆದಳು | ೮ | ಹಾಲುಶರ್ಕ್ಕರೆಭಕ್ಷಾಜ್ಯವನುಹೊನ್ನ | ತಾಲಿಯೊಳಗೆಮಾಷಾ ನ್ನವನುತಂದು | ಬಾಲೆಯರಿಕ್ಕೆ ಭೋಜ್ಯಂಗಳನುಗುಣ | ಶೀಲೆಪನಸವತ್ರದಭಾ ಜನದೊಳು | ಲೀಲೆಯೊಳುಉಂಡುಸುಖಿಯಾಗಿ | ೯ | ರನ್ನದವೇದಿಕೆಯೊಳು ಕುಳಿತುಸಂ | ಪನ್ನೆ ಮಲ್ಲಿಗೆಯಗೊಂಚಲನಾಂತುಹಗ | ಲನ್ನುಕಳಿಯೆರಾತ್ರಿಯೊ ಳಿಂತುಬಹು | ಬಿನ್ನಾಣದ ಧವಲವಪಾಡುತಸತಿಸು | ಗುಣೆಯರು ಬಂದು ನೆರೆದರು | ೧೦ | ಮೀನೇಕ್ಷಣಘಟಕುಚದವರುಮದ | ದಾನೆಯಶಿರಪೊರವಾರವರುಪಿಕ | ಗಾನಗಮಕಗಂಭೀರೆಯರು ಸುರ | ಮಾನಿನಿಯರನೇಳಿಪಚನ್ನೆಯರು | ಬಿನ್ನಾಣದ ಶೋಭಾನೆಯ ರಚಿಸಿದರು | ೧೧ | ಸಂತೋಷದಿಂ ದಿನಮೂರನ್ನು ಕಳಿ | ದಂತರಮಂಗಲಸ್ನಾಸವನುಶುಭ | ವಾಂತಚತುರ್ತ್ಥದದಿವನದೊಳು ಆ | ರಂತರಿಸಲುಘಟಿಕೆಗಳಿಂಮಾನಿನಿಯರು | ಸಂತೋಷದಿ ನೀರಯೆರೆದರು | ೧೨ | ನಳಿನವದನೆಯರು ನಡೆತಂದುತಮ್ಮ | ಬೆಳಕಿಗೆ ಕಣ್ಣಬೆಳಗು ಮುಂದುಮಾಡಿ | ತೆಳುವಸುರಿನವನಿತೆಯರಿಂತುಬಂದು | ತೊಳೆದೆಳ್ಳುಬೆಲ್ಲವ ಗೂಡೆಯೊಳಗೆ ತಂದು | ನಳಿತೋಳನೆತ್ತಿಯಿಡಿದರು | ೧೩ | ಚಿಗುಳಿತಂಬಿಟ್ಟಿನ ಉಂಡೆಗಳಿಟ್ಟು | ಮಿಗೆತಾಂ ಬೂಲದ ಗುಡ್ಡೆಗಳು ಬಹು | ಸೊಗಯಿಪಬಾಳೆಯಹಂಣುಗಳ ಚಿಪ್ಪ | ಬಗೆಬಗೆ ಮಂಗಲವಸ್ತುಗಳನು ತುಂಬಿ | ಸುಗುಣೆಯರು ತಂದು ಇರಿಸಿದರು | ೧೪ | ಭ್ರಮರಾಳಕಬಟ್ಟಹೆರೆನೊಸಲಕರಿ | ಗಮನದ ಬಳ್ದಾವರೆಎಸಳಕಣ್ಣ | ಮರಿದಶಂಖಗೊರಲು ಕುಶಲವಾ | ದಮರವನಿತೆಯ ರಿಗಮರಿದಚಲ್ವಿಕೆ | ಗಮ್ಯತಮಂಗಲವ ಎಸಗಿದರು | ೧೫ | ಕ್ರಮದೊಳುದ್ರವ್ಯಪಂಚಕದಿಂದ ಮತ್ತೆ | ಅಮರುವಶೀತಲಜಲದಿಂದ ಮೇಲೆ | ಗಮಕದ ಉಷ್ಣೋದಕದಿಂದ ಮಾಡೆ | ವಿಮಲಾಂಗಿಯರಲಂಕಾರದಿಶೃಂಗರಿಸಿದ | ರ್ಕ್ಕಮಲಗಂಧಿನಿಯರು ನೀರೆರೆದರು | ಸ್ನಾನಾಲಂಕಾರವನಾಂತುಬರೆ | ಭೂನುತವತಿಕಡು ಚಲುವಾಂತುಪೂರ್ವ್ವಾನನ ದಿಂದ ಸ್ವಸ್ತಿಕವೇರಿನಿಂತಿರೆ | ಮಾನಿನಿಭಾಪಗೆ ಮರೆಯಾಂತು ಪಶ್ಮಿಮ | ದಾನನದಿಂದಲೆ ನಿಂತ ಸುಖಿಯಾಗಿ | ೧೭ | ಅಚ್ಚಬಿಳಿಯ ಸೀರೆಯನುಡಿಸಿ ಹೊಸ | ಗಚ್ಛಮಲ್ಲಿಗಸರವಮುಡಿಸಿ | ನೆರೆ | ಹೊಚ್ಚಮುತ್ತಿನಭೂಷಣವಿಡಿಸಿಬಹು | ಅಚ್ಚರಿಯಿಂದರತಿಗೆಸಮ ಇವಳೆಂದು | ನಿಸ್ಚಯದಿನಲಿದುಪೊಗಳಿದರು | ೧೮ | ವೇಳಿಸಾಮಾನ್ಯ ವಿಶೇಷವಾದ ಮಂತ್ರಜಾಲದಿದಶದೇವರ ಬೇಗವರಿದಾಳೋಚಿ ಸಿಪೂಜಿಸಿಬೇಗಶಾಸ್ತ್ರ | ದೋಳ್ವರೆವಂತೆಸದಾಮೋದಗಳಿಂದ | ಬಾಲೆಗುಪತಿಗುಸ್ಥಿರ ದಿಂದ | ೧೯ | ಮಂಗಲಸ್ತೋತ್ರಾಶಿರ್ವ್ವಾದವನುದ್ವಿಜ | ಪುಂಗವರೊರೆಯೆಸು ಲಗ್ನವನುಕಂಡು | ಹಿಂಗದೆತೆರೆಮುಖನೋಟವನು ನೋಡಿ | ಅಂಗ ನೆನಲಿಯೆ | ಓರೋರ್ವ್ವರ ನೋಟಮ | ನಂ ಗೊಂಡುನಲಿಯೆನರಪತಿಯು | ೨೦ | ಚಂದ ನಕ್ಷತೆ ಈ ಪದ್ಮಾವತಿಯಶೊಭಗಿಂದಮೆರೆಯೆಪಣೆಗಿಡೆಪತಿಯು | ಸತಿ | ಇಂದ ಘಲಾಕ್ಷದನುಮತಿಯಬಲ್ಲ | ಇಂದುವದನೆಕೊಡಲಾಪತಿ ಸತಿ ಶರಗಿಂದ ಕಟ್ಟಿದರು ನೆರೆಜೊತೆಯ | ೨೧ | ಕುಶಜಲಸೇಚನೆಯನು ಮಾಡಿ ಹೋಮ | ವೆಸಗಲುಕ್ರಮಕರಣವುಗೂಡಿಸ್ತ್ರೀಯ್ಯ | ರೊಸೆದುಗಿರಾಜನವನು ಮಾಡಿಬಹು | ಕುಶಲತೆಯಿಂದೆಲ್ಲರ್ಗ್ಗೆಹಸ್ತವನೀಡಿ | ವಸೆದುದಾನಗಳ ಅನುಗೂಡಿ | ೨೨ | ಪತಿ ಪುತ್ರವತಿಯರೈವರಿಗೆ ಕೊಟ್ಟು ಪುಣ್ಯ | ಸತಿಯುಮಾಂಗಲ್ಯ ವಸ್ತುವನ್ನಿಟ್ಟು ಸಹಿ | ಪ್ರತಿಯನೆಬಾಯಿನಗಳ ಕೊಟ್ಟು ಜಗ | ನ್ನು ತೆಶರ್ಕ್ಕರಾಜ್ಯಸರ್ವ್ವೌಷಧಿಗಳ ಕೊಂಡು | ಪತಿಯೊಡನುಂಡುಸುಖಿಯಾಗಿ | ೨೩ | ಪತಿಸುಮಿತ್ರನುಗೂಡಿ ಸುಖದಿಂದ ಜಗನ್ನುತೆತ್ರಿಜಗಜ್ಜನನಿಯುಬಂದ | ಮುನ್ನಿನತುಳಪುಣ್ಯದ ರಾಶಿಗಳಿಂದಲೋಕ | ಜಿನಮುನಿಸುವ್ರತಜಿನನಹೊತ್ತಂಬಿಕೆ | ಶ್ರುತಿಯಿದುಭವ್ಯರಿಗೆ ಚಂದ |

* * *

ತೊಟ್ಟಲಿಕ್ಕುವ ಶೋಭಾನೆ

ಜೋಜೋಸೋಮವಂಶಾಂಬುಧಿಚಂದ್ರ | ಜೋಜೋಜಿನಮತಾಂಬರದಿವಸೇಂದ್ರ | ಜೋಜೋ | ಪಲ್ಲ | ಶ್ರೀ ಜಂಬೂದ್ವೀಪದೈರಾವತದೊಳುದಿಸಿ | ಪೂಜಿತ ಶ್ರೀಪಂಚಮಿವ್ರತವನ್ನು ಧರಿಸಿ | ರಾಜಿಪಸೌಧರ್ಮ್ಮಕಲ್ಪದೊಳುದ್ಭವಿಸಿ | ಈ ಜಯಂಧ ರಗೀಗಸುತನಾಗಿ ಜನಿಸಿ | ೧ | ಅಸಮಮಾತೆಯ ಗರ್ಬ್ಭದಿಧುರವನೀಕ್ಷಿಪ ಬಯಕೆ ಯಿಂದೆ | ಎಸೆವಭರತಕ್ಷೇತ್ರದಿವಿಕ್ರಮಂದ ರಾಖ್ಯವನುತಳದೆ | ವಸತಿವಜ್ರದ ಕದವನೀ ಪೋಗಿತೆಗೆದೆ | ವಿಷದಕೂಪದಿಕೆಡದೆನಾಗ ಸುತನಾದೆ | ೨ | ಇನ್ನು ಭೂಮಿಯ ಸಕಲವಿದ್ಯೆಗಳ ಕಲಿವೆ | ಕಿಂನ್ನರಿಮನೋಹರಿಯರೋರದಿರವನೀತಿಳಿವೆ | ಉನ್ನತಪರಾಕ್ರಮದಿಕರಿಹಯವನೀಹಿಡಿವೆ | ಹೊನ್ನಜೂಜಾಡಿಗೆಲಿದವರಿಗೆ ಕೊಡುವೆ | ೩ | ಚರಣಕೆರಗಿದ ವ್ಯಾಲನೃಪನಮನ್ನಿಸುವೆ ಹಿರಿಯಣ್ಣ ನಿಂದಪಟ್ಟಣ ವಪೊರ ಮಡುವೆ | ತರುಣಿಕಥನದಿದುಷ್ಟವಾಕ್ಯನಮದವನೀಮುರಿವೆ | ಹರುಷದಿಂದುತ್ತ | ರ ಮಧುರೆ ಯೊಳಿರುವೆ | ೪ | ನಂದಭೂಪನಮಗಳ ವೀಣೆಯೊಳುಗೆಲುವೆ | ಮುಂದೆವಿಪಿನದಿ ವಿನುತಜಿನರಿಗೊಂದಿಸುವೆ | ತಂದುರಮ್ಯಕನವನವನಿತೆಯನು ಕೊಡುವೆ | ಅಂದಿರದೆ ಮತ್ತೆ ಕಾಂಚನಗುಹೆಯ ನೀಪೋಗುವೆ | ೫ | ವಿನುತ ವಿದ್ಯಾದರದೇ ವಿಯರನುವಶಗೈವೆ | ಇನಿಸಳಕದೆವುಗ್ರಬೇತಾಳನನುಗೆಲಿವೆ ಮೊನೆಗಾರಸೋಮಪ್ರಭನ ಏಳಿಸುವೆ | ವನರಾಜನಿಗೆ ಪುಂಡ್ರವದ್ಧನಪುರ ವನೀಕೊಡುವೆ | ೬ | ಮದುವೆಯಾಗುವೆಯಲ್ಲಿ ವನರಾಜನಣುಗಿಯನು | ಕದನಕರ್ಕ್ಕಶಛೇದ್ಯಭೇದ್ಯಾದಿಭೂವರನು | ಪದಕೆ ಎರಗಿಸಿಕೊಂಡು ವಿಷದಫಲಗಳನು | ಹೆದರದೆ ಭಕ್ಷಿಸುವೆ ಮನದಣಿಯೆನೀನು | ೭ | ಶತಭಟಸಹಸ್ರ ಭಟನಿವಹದೊಳು ನಡೆದು | ಅತಿಶಯದೊಳಂತೆರ ನಗರಿಯೊಳಗಿರ್ದ್ದು | ಅ ತುಳಬಲಸಿಂಧುನೃಪಸೆರೆಯ ನೀಹಿಡಿದು | ಕ್ಷಿತಿವಹರಿವರ್ಮ್ಮನಣುಗೆಯ ನಾಳ್ಪೆಒಲಿದು | ೮ | ಹತ್ತಿಉಜ್ಜಂತಗಿರಿ ಜಿನರಿಗಚಿಸುವೆ | ಮತ್ತೆ ಖೇಚರಸುಕಂಠನಶಿರವನೀ ಹೊಡೆವೆ | ಉತ್ತಮದ ವಿಜಯಾರ್ದ್ಧಪರ್ವ್ವತಕಡಿಯನಿಡುವೆ | ಮತ್ತ ಕಾಶಿನಿಜನರಅಲ್ಲಿಂದತರುವೆ | ೯ | ನಡೆದು ದಕ್ಷಿಣ ಮಧುರೆಯರಸಿನಾತ್ಮಜೆಯ | ಒಡೆಯನಾಗಿರ್ದ್ದು ವಾರಾಸಿಜಿನ ಪತಿಯಿ | ಅಡಿಗೆರಗದವಾಯುವೇಗನಕೊಂದು ಸೆರೆಯ | ಬಿಡಿಸಿಸತಿಯರರಕ್ಷಿಸುವೆ ಬಹುತತಿಯ | ೧೦ | ಬಳಿಕ ಕಾಂಚೀಪುರೀ ವಲ್ಲವಾತ್ಮಜೆಯ | ನಳಿನಹಸ್ತವಪಿಡಿದು ದಂತೀ ಪುರಾಪತಿಯ | ಜಲಧಿಸುತೆಯನುಗೆಲುವಸುತೆಯ ತಾವರೆಯ | ಪೊಳೆವಹಸ್ತವ ಪಿಡಿದೆ | ಎಳೆನಾಗತನಯ | ೧೧ | ಅಮಲಗುಣಿವಿಜಯಂಧರಾವನೀ ವತಿಯರ | ಮಣಿವಿಜಯಾವತೀಸುತಲಕ್ಷ್ಮೀಮತಿಯ | ಅಮಿತವಿಭವದಿ ಮದುವೆ ಯಾಂತುಶ್ರೀಪಂಚಮಿಯ | ವಿಮಲಕಥೆಯನು ಕೇಳ್ವೆನಮಿಸಿ ಮುನಿಪತಿಯ | ೧೨ |

ಜಗದೊಳನುಪಮನಾಗಿ ಸಕಲಸಂಪದವ | ಮಿಗಿಲಾಗಿ ಬಂದು ಕನಕಪುರದ | ಅಗಣಿತಾನಂದದಿಂದಾಳ್ದುಸಂಪದವ | ಮಗನಿಗವನಿಯನಿತ್ತುತಾಳ್ವೆಮಹಾ ತಪವ | ೧೩ | ಮನಸಿಜೋಪನು ಸರ್ವ್ವಾಹ್ಣಜಕ್ಕಳೆನೇಮಿಚಂದ್ರ | ಜಿನನಕಾಲದಿ ಗಂಧಕುಟಿಪಡೆಯಲಿಂದ್ರ | ವಿನುತ ಮುಕ್ತೀಶನಾಗುವೆನರೇಂದ್ರ | ಘ ನದಯಾಂ ಭೋರಾಶಿಬಹುಪೂರ್ಣ್ನಚಂದ್ರ | ೧೪ |

* * *

ರಾಗಪಂಥುವರಾಳಿರೂಪಕ
ಮುಹೂರ್ತಕಂಭವಂ ಸ್ಥಾಪಿಸುವಾಗ ಹೇಳುವ ಹಾಡು

ಶ್ರೀಶುಭಕರಕೌಶಲಕರ | ನಾಶಿತಾಂತರಾಯನಿಕರ | ಧೀಶನುತಶ್ರೇಯಸ್ಕರ | ಆಶಾಜನ ತೃಪ್ತಿಂಕರ | ಪ | ಸಿಂಧೂರಹರಿದ್ರಾಕ್ಷತ | ಚಂದನ ಕುಂಕುಮವಲ್ಲವ | ಮಂದಾರ ಕುಸುಮಮಾಲಾ | ಬೃಂದಧರಸ್ತಂಭವೆ ಜಯ | ೧ | ಷೋಡಶಕರ್ಮ್ಮಗಳಾದ್ವಿಜರಿಗೆ | ಕೂಡಿರುವಾಬಿರುದುಗಳೆನೆ | ರೂಢಿಯೊಳೀಸುಂದರತರ | ಷೋಡಶ ಕಂಭಗ ಳೆಸೆದವು | ೨ | ಪಂಚಮಶರಪಿಕವಾಣಿಯ | ವಂಚಿಪ ಸೌವಾಸಿನಿಯರ | ಪಂಚಕದಿಂಸಮಲಂಕೃತ | ಪಂಚಮಣಿಸ್ತಂಭವೆಜಯ | ೩ | ದಂಪತಿಗಳ್ಗಿಷ್ಟಾರ್ತ್ಥವ | ಇಂಪಾದಸು ಮಂಗಲವಂ | ಪೆಂಪಿನೊಳೀಯುವಮಹಿಮೆಯ | ಸೊಂಪಿನಸು ಸ್ತಂಭವೆಜಯ | ೪ | ಶ್ರೀಮಲಯಪುರಾಧೀಶ್ವರ | ಕೋಮಲವದಕರುಣೆಯೋಳುಂ | ಭೂಮಿಯೋಳತಿರಾಜಿಸುವುದು | ಕ್ಷೇಮದೊಳೇವರ್ತ್ತಿಪುದಿದು | ೫ |

* * *

ಪದ್ಮಾವತಮ್ಮನವರನ್ನು ಹಸೆಗೆ ಕರೆಯುವುದು

ಪುರುಷರಮೇಶನ | ಪುಣ್ಯಪ್ರಕಾಶನ | ಚರಣಕಮಲಗಳಿಗೆರಗಿಶಾರದೆಯನ್ನ | ಧರಣೇಂದ್ರನರಸಿಪದ್ಮಾಂಬೆಯಹಸೆಗೆಂದು | ಕರೆದುಶೋಭಾನೆಯ | ನೊರೆವೆಲಾಲಿಪು ದೆಂದು | ಸರಸಿಜಾಗರಗಂಧಬಂಧುರವಾಸ್ಯಳ | ಪರಮಪಾವನೆಶಶಿನಿಭಾನನೆ | ಭರದಿಹಸೆಗೇಳೆಂದು | ಎನುತಲೆ ಇಂದುವದನೆಯರು ಕರೆದರು | ೧ | ತಿಳುವೆಳೆದಿಂಗಳ | ತಿಳುವೆಳಕಿನವಜ್ರ | ಪಳುಕಿನನವರತ್ನ ಮಂಟಪಶೋಭೆಯ | ಕಳಕಳಿಸುವಹೇಮ ಮಯಸಿಂಹಾಸನೆ | ಸುಲಲಿ ತಪಂಚವದಾನ್ವಿತಧ್ಯಾನೆ | ಇಳಿಕರ್ದ್ದಮಪುಷ್ಟವೃಷ್ಟಿಯ ಸೂಸುತ | ಕಳಶಕನ್ನಡಿ ಬೆಳಕಿನಿಂದಲೆ | ಬಳಿರೆಭಾಪುರೆಯೆಂದು ಪೊಗಳುವ ಇಂದುವದನೆಯರು ಕರೆದರು | ೨ | ಗುಣಮಣಿ ಭೂಷಿತೆ | ಗೀರ್ವ್ವಾಣಭಾಷಿತೆ | ಅಣಿಮಾದಿಗುಣಯುತೆಭುವನೈಕಮಾತೆ | ಝಣಝಣತ್ಕಾರಕಂಕಣ ನೊಪುರಯುತೆ | ಮಣಿಮಯಹೇಮಸಿಂಹಾಸನಾಲಂಕೃತೆ | ಬಣಗುಭೂತಭಯಂಕರಾಭಯಪೇಶ್ರಿತೇ | ಪ್ರಣವಪೂರ್ವ್ವಕ ಯಂತ್ರ ಮಂತ್ರ ಪಾಪಹರನಿರ್ಲ್ಲೇ ಪರೂಪೆಯ | ಮಣಿಗೆರಗಿಹ ಸೆಗೆಕರೆದರು | ೩ | ಮಂಗಳಮೂರ್ತ್ತಿಭುಜಂಗಶೇಕರದಿ | ವ್ಯಾಂಗವಸನೆ ಮುಕ್ತ್ಯಂಗನಾಪ್ರಿಯೆ | ಸಂಗೀತಲೋಲೆ ಸಾಮ್ರಾಜ್ಯವೈಭವಲೀಲೆ | ತುಂಗರಂಗತು ರಂಗಕುಕ್ಕುಟವಾಹನೆ | ಹಿಂಗದೆಮ್ಮನುಪಾಲಿಸೆನುತಲಿ | ಮಂಗಳಾಂಗಿಯ ರೊಲಿದುಬೇಗದಿದೇ | ವಾಂಗನೆಯರುಹಸೆಗೆ ಕರೆದರು | ೪ | ತಂದೆಮುನಿದುಕೊಲ | ಲೆಂದುಸಲಹಿಬೇಗತಂದುದಕ್ಷಿಣಕಾಗಿ | ನಿಂದೆಕಾನನದೊಳು | ಮಂದಿಕಂದುರೆರಥ | ಅಂದಿನ ದಿನದೊಳು | ಕಂದನೀಹೊಳೆಯೆಂದುಕರುಣದಿಸಲುಹಿದೆ | ಇಂದುಮೃದು ಮದಗಂಧಿಯರುಮುದ | ದಿಂದಹಸೆಗೇಳೆಂದುಯೆನುತಲೆ | ಇಂದುವದನೆಯರು ಕರೆದರು | ೫ | ಜಿನದತ್ತರಾಯನು | ತನುವನಿಂದಿಸೆಲಕ್ಕಿ | ವನದಮಧ್ಯದಿನಿಂದಚಿನು ಮಯಾಂಬಿಕೆಗೆ | ವನಗೊಂಡು ಶ್ರೀಪಾಲಚಕ್ರಿಗೆ ಬೆಸಗೈದೆ | ಮಿನುಗುವರತ್ನಚಕ್ರವನಿತ್ತು ಸಲಹಿದೆ | ವನದಿಪೊಂಬುಜಪಟ್ಟಣವ ನೀಮಾಡದೆ | ಘನತರದವರುಷವ | ಜನರಿಗೆ ತೋರಿದೆ | ಎನುತಮುಕ್ತ್ಯಂಗನೆಯರಿರದತಿ | ಮನವಲಿದುಕೊಂಡಾಡಿ ಪಾಡುತ್ತ | ವನಜಾಯತನೇತ್ರೆಯರು ಕರೆದರು | ೬ | ಯಕ್ಷರಾಕ್ಷಸಭೂತ | ಯಕ್ಷಕೋಟಿಗಳಿಗ | ಧ್ಯಕ್ಷ ಈಕ್ಷೀಪಶುಭಲಕ್ಷಣವತಿಯೆ | ಸುಕ್ಷೇಮಸುಖವನ್ನು ತೋರಿರಕ್ಷಿಸುತಾಯೆ | ಯ ಕ್ಷಕಿನ್ನರತೆಂಬುರಾಮರಸೇವಿತೆ | ಪಕ್ಷಿವಾಹನೆಜಲ ಧಿಸುಖಸಂಚಾರಿತೆ | ಯಕಿಪಾರಿಶ್ವೇಶನ | ಯಕ್ಷಕರುಣಕಟಾಕ್ಷೆ ಬಾರೆಂದುಜ | ಲಜಾಕ್ಷಿಯರ‍್ಹಸೆಗೆ ಕರೆದರು | ೭ |

* * *

ಗಂಡುಹಸೆಗೆ ಕರೆದ ಶೋಭಾನೆ

ಶ್ರೀಮದಗಣ್ಯಪುಣ್ಯೋದಯದಿಂದತಿ | ಕ್ಷೇಮಾರೋಗ್ಯಸೌಭಾಗ್ಯದಿಗಳ ಮ | ಹಾಮಹಿಮವನೀಗಳು ಪಡೆದಿರ್ಪ್ಪ | ಪಡೆದಿರ್ಪ್ಪಸುಗುಣನೆಹಸೆಗೇಳೆಂದುರಾ | ಮಾಮಣಿಯರು ಒಲಿದು ಕರೆದರು | ೧ | ಸುಜ್ಞಾನೋಹಾದಿಗಳಿಂದ ಮೆರೆವ ಸುಪ್ರಜ್ಞಾಬಲದಿಂದ ಮರಧನಂಜಯ | ಸಂಜ್ಞಕೋಶಂಗಳನು | ಕಾವ್ಯವನು | ಕಾವ್ಯವನೋದಿದಕೋವಿದಬಾರೆಂದು | ಪ್ರಜ್ಞೆಯರುಹಸೆಗೆಕರೆದರು | ೨ | ಛಂದೋ ಲಂಕರನಾಟಕಬಾಣ | ಸಂದತರ್ಕ್ಕಾವ್ಯಾಕರಣಶಾಸ್ತ್ರಂಗಳ | ಸಂದೋಹವನೋದಿ ರುವನೆರೆನಿಪುಣ | ನೆರೆನಿಪುಣ ಶಿರೋಮಣಿಬಾರೆಂದು | ಪರಮಾನಂದೆಯರುಹಸೆಗೆ ಕರೆದರು | ೩ | ಸಂಗೀತ ಶಾಸ್ತ್ರದವೈದ್ಯಶಾಸ್ತ್ರದಬಹು | ತುಂಗಜ್ಯೋತಿಶ್ಯಾಸ್ತ್ರದ ಮಂತ್ರಶಾಸ್ತ್ರದ | ಸಂಗತನೀತಿಶಾಸ್ತ್ರದಸಾರಂಗವ | ಸಾರಂಗವ ತಿಳದವನೆಬಾರೆಂದುಸು | ಮಂಗಲೆಯರು ಹಸೆಗೆ ಕರೆದರು | ೪ | ವೇದಪುರಾಣಶ್ರುತಿಸಾರಸಿ ದ್ಧಾಂತಾದಿಕಾ ಧ್ಯಾತ್ಮ ಪ್ರಾಭೃತಮೀಮಾಂ | ಸಾಧಿಸುಸಂಯುತ | ಸುಸಂಯುತಸಾರತತ್ಪಾರ್ಥ ಮೋಕ್ಷಶಾಸ್ತ್ರಜ್ಞ | ಬಾರೆಂದೆನುತಾವರೆಯರು ಹಸೆಗೆ ಕರೆದರು | ೫ | ಹಾರತಾರಾನಂದನೆ ಭವ್ಯವಹಾರನಿಶ್ಚಯಶಾಸ್ತ್ರಮೃದು | ಪಾರಾವಾರಾವನೈದಿದನೆಪುಣ್ಯಾತ್ಮನೆ | ಪುಣ್ಯಾತ್ಮನೆಮುದದಿಂದಹಸೆಗೇಳೆಂದು | ವಾರಿಜದಳನೇತ್ರೆಯರು ಕರೆದರು | ೬ | ಇಂತು ಮಹೋತ್ಸವ ಆನಂದ ಮೂರ್ತಿಯ | ನಾಂತಪಂಡಿತ ದೇವರಾಜನೆಲಕ್ಷ್ಮೀಕಾಂ ತನಾಗಿಹನೆಂದು | ನೆರೆಹರಿಸಿ | ನೆರೆಹರಸಿಮಿಂಚುವ ಮಿಂಚಿನಬೊಂಬೆಯಂತಿರ್ದ್ದ ಕಾಂತೆಯರು ಹಸೆಗೆ ಕರೆದರು | ೮ |

* * *

ಅರಿಸಿನದಕ್ಕಿಯ ತೊಳಿಸುವ ಶೋಭಾನೆ

ಸುವ್ವಿಸುವ್ವಿಸುವ್ವಾಲೆ | ಪ | ಸುರನರೋರಗಸನ್ನುತ | ಚರಣಕಮಲಗಳಿಂದೊಪ್ಪುವ | ಸುರುಚಿರಪಂಚಪದಾತ್ಮ ಕರೆನಿಸುವ | ಪರಮೇಷ್ಠಿಗಳೈವರಿಗೆರಗುವೆನು | ೧ | ಚಕ್ರಿಣಿನಗೆಮುಖ ದಾವರೆ | ಚಕ್ರದಂಡೆಯಸೋರ್ಮ್ಮುಡಿಯವಳೆ | ಚಕ್ರದೊಡೆ ಯಪೂಜಿಸಿದಧರ್ಮ್ಮ | ಚಕ್ರದೊಡೆಯ ಪುರುಜಿನಪನಯಕ್ಷಿ | ೨ | ರೋಹಿಣಿನಗೆ ಮುಖಧಾವರೆಯಿಂ | ರೋಹಿಣಿಯ ರಸನಗೆಲಿದವಳೆ | ಮೋಹಮಲ್ಲನ ಪೂಜಿಸಿಗೆಲಿದ | ಸಾಹಸಾಜಿತಜಿನೇಶನಯಕ್ಷಿ | ೩ | ಶಂಭವಜಿನಪನ ಸೇವಕಿ | ಕುಂಭಕುಚೆಯಳೆಪ್ರಜ್ಞಪ್ತಿನಿರಂಭೇರಗೆಲಿದ ಸ್ವಭಗಿನ ಹೊನ್ನಬಾಳೆಯ | ಕಂಭದೊಡೆ ಗಳಿಂದೆಸೆವತಿಚಲ್ವೆ | ೪ | ಅಭಿನಂದನಜಿನಸೇವಕಿ | ಸುಭಗುಣಸೌಖ್ಯದನಾಯಕಿ | ವಿಭವದವಜ್ರಶೃಂಖಲೆಪುಣ್ಯಮೂರುತಿ | ಇಭಗಮನೆಯೆ ಇಂದುವದನೆಬಾರಮ್ಮ | ೫ | ಬಾ ರಕ್ಕ ಹಿರಿಯಕ್ಕ ವರ ಹೀರನೆರಿಯವಳೆ | ತೋರಮುತ್ತಿನಹಾರನಿನಗಿದೆ | ನಾರಿಬಾರಮ್ಮ ಸುಗುಣದ ನಿಧಿಯೆ | ತೋರದುರುಬಿನಕ್ಕೈಯ್ಯ | ೬ | ತಾಯಿ ತಾಯಿಯಂತಕರೆಯುಕೆ | ಯನ್ನಬಾಯಿ ಬಾಯಿಗೆ ಅಂಜಿಕೆಯೆ | ತಾಯಿ ತಂದೆಗಳ ನೆಲಸಿಸಲಹುವ | ತಾಯಿಬಾರೆನ್ನ ತಾಯಮ್ಮ | ೭ | ಅತ್ತೆ ಅತ್ತೆಯಂತ ಕರೆಯುಕೆಯನಗೆ | ಹೊತ್ತಿಗೊತ್ತಿಗೆ ಅಂಜಿಕೆ | ಅರ್ತ್ಥಿಯಿಂಪಡೆದಮೊಮ್ಮಕ್ಕಳ ವಸಗಿಗೆ | ಅರ್ತ್ಥಿಯಿಂದಲೆ ಮಾಡಿಬನ್ನಿ ರತ್ತಮ್ಮ | ೮ | ಮುತ್ತಿನವರಳೊಳುಚೊಕ್ಕನೆಲ್ಕಕ್ಕಿಯ | ನಿಸ್ತ್ರೇಯರೈವರು ತೊಳಿಸುತ್ತ | ಉತ್ತಮಯಕ್ಷಿಪದ್ಮಾವತಿದೇವಿಯ | ನಿಸ್ತ್ರೆಪರಾಕೆಂದೊಲಿದು ಪಾಡುವರು | ೯ | ಚಿನ್ನದವರಳೊಳುಸುರಿದು ನೆಲ್ಲಕ್ಕಿಯ | ಚನ್ನೆಯರೈವರು ತೊಳಸುತ್ತ | ಪನ್ನಗಧರೆ ಪದ್ಮಾವತಿದೇವಿಯ | ಬಿನ್ನಾಣವೆಡೆಗೆಂದೊಲಿದು ಪಾಡುವರು | ೧೦ | ರನ್ನದವರಳೊಳುರಾಜಾನ್ನದಕ್ಕಿಯ | ಕನ್ನೆಯರೈವರು ತೊಳೆಸುತ್ತ | ಚನ್ನೆ ಪದ್ಮಾವತಿದೇವಿಯ | ಸನ್ನುತಿಸುತತಾವುತೊಳಸಿದರು | ಸುವ್ವಿಸುವ್ವಾಲೆ | ೧೧ |

* * *

ಅರಿಸಿನದಕ್ಕಿ ತೊಳಿಸುವಾಗ ಹೇಳುವಹಾಡು

ಸುವ್ವಿಸುವ್ವಿ ಎನ್ನಿ ಬನ್ನಿರೆ | ಓಮಾನಿನಿಯರ | ಸುವ್ವಿಸುವ್ವಿ ಎನ್ನಿಬನ್ನಿರೆ | ಓಮಾನಿ ನಿಯರ | ಪ | ಅಲರಶರನದೇವತೆಯರು | ಘಲಿರುಘಲಿರೆನುತ್ತ ಬಂದು | ಕಲಿಲಹರಸುಜಿನನಪಾದ | ಲಲಿತಪದಗಳನ್ನು ವಾಪ | ೧ | ಕನ್ನೆಸುಗುಣರನ್ನೆಯ ರೆಯ್ದಿ | ಪೊನ್ನಿನಕುಂಡನಿಯೊಳಗೆ ವೀತ | ಬಣ್ಣದಕ್ಕಿಯನ್ನು ಸುರಿದು | ರನ್ನ ಮುಸಲವನ್ನು ಪಿಡಿದು | ೨ | ಮೀರಿತೋರ್ಪ್ಪನಟನಕುಚಗಳ್ | ಸಾರಹಾರಗಳ ನುಜರಿಯೆ | ತೋರದುರುಬಿನಮಾಲೆಜಾರೆ | ಚಾರಶೃಂಗಾರೆಯರಿರ | ೩ | ಮತ್ತೆಕಾಶಿನಿಯರುಸೇರಿ | ಮುಕ್ತಾಕುಂಡನಿಶಾಲಿಗಳನು | ಸುತ್ತಿ ಮುತ್ತೈದೆಯರುಗಳ್ | ಬಿತ್ತುರದೊಳುಢಾಳಿಸುತಿರೆ | ೪ | ಭರತಚಕ್ರಿಸತಿಸುಭದ್ರೆ | ಪರಮಕಲ್ಯಾಣವಿಧಿಯ | ವರಸುನಾಂದಿಸಮಯವೀಗ | ಹರುಷದಿಂದಯಮಾಡಿರಮ್ಮ | ೫ |

* * *

ಉದ್ದುಗಲ್ಲು ಗೋಧಿಗಲ್ಲು ಇಕ್ಕುವ ಶೋಭಾನೆ

ಕಲ್ಲುಚಿನ್ನದಕಲ್ಲು | ಕಲ್ಲುರನ್ನದ ಕಲ್ಲು | ಕಲ್ಲುಗೋಧುವೆಯವಡೆಗಲ್ಲು | ವೆಲ್ಲ | ಹಟ್ಟೀಲಿಚಪ್ಪರ | ಒಪ್ಪಂದಿಂದೆದ್ದವೊ | ವಿಪ್ರಜೋಯಿಸರಕರಸಿದರು | ಕರೆಸಿದರು ಅಪ್ಪಾಜಿ | ಬಂಧುಗಳಿಗೆ | ಓಲೆಬರೆಯುದಕೆ | ೧ | ಬಾಗಲಲ್ಲಿ ಚಪ್ಪರ | ಬೇಗದಲ್ಲಿ ಎಸೆದವೊ | ರಾಯಜೋಯಿಸರ ಕರೆಸಿದರ | ಕರೆಸಿದರು ಅಪ್ಪಾಜಿ ಬಂಧುಗಳಿಗೆ | ಓಲೆಬರೆಯುವದಕ್ಕೆ | ೨ | ಗಟ್ಟದಲೆ:ಲೆ | ಅಟ್ಟಿಯು ಓಲೆಯ | ನಿಸ್ತ್ರೆಅಕ್ಕೈಯನಪುರುಷ | ಪುರುಷಮಕ್ಕಳುಸಹಿತಾಗಿ | ಬಿದಿಗೆಯಿಂ ಮೊದಲೆ ಬರಹೇಳಿ | ೩ | ಕಣಿಮೆಯಕೆಳಕೆ | ಕಳುಹಿಯುಓಲೆಯ | ನಿಸ್ತ್ರೆತಂಗೆಮ್ಮನ ಪುರುಷ | ಪುರುಷ ಮಕ್ಕಳು | ಸಹಿತಾಗಿ ತದಿಗೆಯಿಂ ಮೊದಲೆಬರಹೇಳಿ | ೪ | ಉದ್ದುಗಲ್ಲಿಕ್ಕುಕೆ | ಯಾರೇರಕರೆಸುವೆ | ಮುದ್ದುಮಾಳಿಗೆಯಹರದೀಯ | ಹರದಿಅಕ್ಕೈಯ್ಯನ | ಉದ್ದುಗಲ್ಲಿಕ್ಕುಕೆ ಕರಸುವೆ | ೫ | ಗೋಧಿಗಲ್ಲಿಕ್ಕುಕೆ | ಯಾರೇರಕರೆಸುವೆ | ಗೋಧಿಮಾಳಿಗೆಯ ಹರಡೀಯ | ಹರದಿಅಕ್ಕೈಯ್ಯನ | ಗೋಧಿಗಲ್ಲಿಕ್ಕುಕೆಕರೆಸುವೆ | ೬ | ಕಡಲೆಗಲ್ಲಿಕ್ಕುಕೆ | ಯಾರೇರ ಕರೆಸುವೆ | ಕಡಲೆಮಾಳಿಗೆಯಹರದೀಯ, ಹರದಿತಂಗೆಮ್ಮನ | ಕಡಲೆಗಲ್ಲಿಕ್ಕುಕೆಕರೆಸುವೆ | ೭ |

* * *

ರಾಗಜಂಗಲ್ ಆದಿತಾಳ
ಉದ್ದುಗಲ್ಲು ಗೋಧಿಗಲ್ಲಿಕ್ಕುವಾಗ ಹೇಳುವ ಹಾಡು

ಉರುತರನಾಂದಿಯ | ವಿರಚಿಸಿ ಬನ್ನಿರಿ | ವರನಾರೀವಾರಂ | ಪುರಪರಮೇಶ್ವರ ಲಗುನದ ಕಾರ್ಯ್ಯದೊಳ್ | ವರಮಾನಂದದೊಳು | ಪ | ಶುಭತಿಥಿವಾರಾಕರಣ ಲಗ್ನಗಳ್‌ | ವಿಭವದ ಯೋಗಂಗಳ್ | ಅಭಿಮತಫಲದಾಯಕ ವೃಷಲಾಂಛನ | ವಿಭುವಿಗೆಲಭಿಸಿದವು | ೧ | ಪೂರ್ವ್ವಾರ್ಜ್ಜಿತಸುಕೃತಫಲೋದಯದಿಂ | ದೀರ್ವ್ವರ್ಖ ಚರಿಯರುಂ | ಪಾರ್ವ್ವಾಣವಿಧು ಮುಖಿಯರ್‌ ಕೈವಿಡಿವರ್ | ಸರ್ವ್ವಜ್ಞ ನನೀಗಳ್ | ೨ | ಯವರವೆಗಳುನುಂಹಸನಾಗೆನಗಿರಿತವಕದಿ ನೀರೆಯರುಂ | ಪವಿಧರನುತಪುರುವಿನಮುಂಗಡೆಯೊಳ್ | ಯುವತಿಯುಗಲ ಬಳಿಯೊಳ್‌ | ೩ | ಚಣಕದಳಂಗಳಮಾಫದಳಂಗಳ | ಅಣಿಮಾಡಿರಿ ಮುದದಿಂಝಣಝಣರವಯು ತನಲಯಾದಿಸುಭೂ | ಷಣಗಣಮಾನಿನಿಯರ್‌ | ೪ | ಮಲಯಪುರಾಧಿಪ ವೃಷಭೇಂದ್ರನಪದ | ಕಲಘಸುಭಕ್ತಿಯೊಳುಂ | ಲಲನಾಮಣಿಯರ್ಪ್ಪಾಡಿದರಿಂತು | ಸುಲಲತಧವಲಗಳಂ | ೫ |

* * *

ಎಣ್ಣೆವತ್ತುವ ಶೋಭಾನೆ

ವಂದಿಸುವೆನುಶಾರದೆನಿಮಗೆ | ಕೆಂದಾವರೆಯಸಳಿನಚರಣಕೆ ಚಂದ್ರಪ್ರಭಜಿನರಶ್ರುತ ಕೆರಗಿ | ಶ್ರುತಕೆರಗಿಧರಣೇಂದ್ರಪದ್ಮಾಂಬೆಗೆ ಅಭ್ಯಂಗದಪದನಸ್ವರವೆತ್ತೆ | ೧ | ಎಣ್ಣೆ ವತ್ತುವರರಮನೆಗೆ | ಬಣ್ಣದಮೇಲ್ಕಟ್ಟನೆ ಕಟ್ಟಿಸಣ್ಣ ಮುತ್ತುಗಳಸರಗಳ | ಸರಗಳ ಕಾರಣತೋರಣ | ಕನ್ನಡಿಅಂದದಲಿಹೊಳೆವಂತೆ | ಹೊಳೆವಂತೆ ಧರಣೇಂದ್ರ ಪದ್ಮಾಂಬೆಗೆ ಎಣ್ಣೆವರಬರಹೇಳಿ | ೨ | ಬಟ್ಳಲ್ಲೆಣ್ಣೆಯನಿರಿಸಿ | ಪಟ್ಟೆಯಹಸೆಹಾಸಿ | ಬಟ್ಟಿ ಮುತ್ತುಗಳಕೆಲಕಿರಿಸಿ | ಕೆಲಕಿರಿಸಿ | ಧರಣೇಂದ್ರಪದ್ಮಾಂಬೆಗೆ ಎಣ್ಣೆ ವತ್ತುವರ ಬರಹೇಳಿ | ಕಿಂಡ್ಳಲ್ಲೆಣ್ಣೆಯನಿರಿಸಿ | ಬಣ್ಣದಹಸೆಹಾಸಿ | ಸಣ್ಣ ಮುತ್ತುಗಳ ಕೆಲಕಿರಸಿ | ಕೆಲಕಿರಿಸಿಧರಣೇಂದ್ರ ಪದ್ಮಾಂಬೆಗೆ | ಉರಗೆಣ್ಣೆವತ್ತುವರಬರಹೇಳಿ | ೪ | ದುಂಡುಮು ತ್ತಿನತೊಡಿಗೆಯ | ಸಡುಲಿಸಿಇಂಬಿನಿಂಬಿಚ್ಚಲುಮರು | ದುಂಬಿಸಾರಂಗಮೃಗಜಾತಿ | ಮೃಗಜಾತಿಗಳೆಲ್ಲ ಮನಸೋತವು | ಇಂದಿನಮೇವಮರತಾವು | ೫ | ಕಡಗಮುತ್ತಿನ ತೊಡಿಗೆಯಸಡಲಿಸಿ | ಮುಡಿಜಡೆಗಳ ಬಿಚ್ಚಲುಸರಸಾಲುಮುಡಿದಮಲ್ಲಿಗೆಯು | ಎಡಬಲ ಎಡಬಲಕುದುರಲು | ಪೊಡವಿಮೇಲ್ಹಸೆಗೆ ಕರೆದರು | ೬ | ಒದುಒದುರಲಿ ಮಂಡೆಹುದುರಾಗಿ ಬರುತಿದೆಎಳೆಯನಾಗೇಂದ್ರ ಹೊಳೆವಂತೆ | ಹೊಳೆವಂತೆ ಧರಣೇಂದ್ರಪದ್ಮಾಂಬೆಗೆ | ಉಗುರೆಣ್ಣೆಯನುಂಡುನಿಡೆಸೆಯ | ೭ | ಒತ್ತೊತ್ತಲಿ ಮಂಡೆ | ಸುತ್ತಾಗಿಬರುತಿದೆ | ಸುತ್ತೆಳೆನಾಗೇಂದ್ರಹೊಳಿವಂತೆ | ಹೊಳೆವಂತೆ ಧರಣೀಂದ್ರ ಪದ್ಮಾಂಬೆಗೆ | ಒತ್ತೆಣ್ಣೆಯನುಂಡುನಿಡೆಸೆಯೆ

* * *

ಶಾಸ್ತ್ರದ ನಿರೇರೆಯುವ ಶೋಭಾನೆ

ಈಗ ತೋಡಿದಭಾವಿ | ಈಗಾಗಲೆಜಲಬಂದೂ | ಬಾಳಿಯವನಕೆಹರಿದವು | ಹರಿದುಮಿಕ್ಕನೀರರಾಯನ ಜಳಕಕ್ಕೆ ತೆಗೆತಂದು | ೧ | ಆಗತೋಡಿದ ಭಾವಿ | ಆಗಲೆಜಲಬಂದೂಹೂವಿನವನಕೆಹರಿದವು | ಹರಿದುಮಿಕ್ಕನೀರರಾಯನಜಳಕಕ್ಕೆ ತೆಗೆತನ್ನಿ | ೨ | ಅಂದದಲಿ | ಚಂದದಲಿ ನೂರಂದದಲಿ ಒಲೆಹೂಡಿ | ಗಂಧದಚಕ್ಕೆ ತಳಕಿಕ್ಕಿ ತಳಕಿಕ್ಕಿ ನೀರು ಕಾದೊ | ರಾಜ್ಯವಾಳುವರಮಗನಿಗೆ | ೩ | ಆಯದಲಿ ಭಾಯದಲಿನೂರಾಯದಲಿ | ಒಲೆಹೂಡಿಮಾವಿನಚಕ್ಕೆತಳಕಿಕ್ಕಿ | ತಳಕಿಕ್ಕಿನೀರುಕಾದೊ | ಭೂಮಿಆಳುವವರಮಗನಿಗೆ | ೪ | ಬಚ್ಚಲ ಮರೆಯಚ್ಚ ಗಟ್ಟನೇನೆಂಬೆ | ಹತ್ತುಕಾಲ್ಗುರುಡನೆಲಪಂಸೆ | ನೆಲಪಂಸೆಚೆನ್ನದಬೊಂಬೆ | ಅಗೆದ್ದುನೀರಬೆರಸಿದರು | ೫ | ಮೀಯಾಣದಮನೆಯ ಆಯವನೇನೆಂಬೆ | ಆರುಕಾಲ್ಗರುಡ ನೆಲಪಂಸೆ | ನೆಲಪಂಸೆಚಿನ್ನದಬೊಂಬೆ | ಆಗೆದ್ದುನೀರಬೆರಸಿರು | ೬ | ಆರಕ್ಕೆಕೊಂಡರು | ನೂರಕ್ಕೆ ಬೆಲೆಯಾದೊ | ಶರಗುಸೋಕಿದರೆ ಘಲಿರೆಂಬ | ಫಲಿರೆಂಬಕಾಲುಮಣಿಯ | ರಾಯನಮೀಯಡಿಗೆತೆಗೆತನ್ನಿ | ೭ | ನೂರಕ್ಕೆಕೊಂಡರು | ಇನ್ನೂರಕೆ ಬೆಲೆಯಾದೊ | ತಟ್ಟೆಸೋಕಿದರೆ ಘಲಿರೆಂಬ | ಘಲಿರೆಂಬ ಕಾಲುಮಣೆಯರಾಯನಮೀಯಡಿಗೆತೆಗೆತನ್ನಿ | ೮ | ಆರು ಕಾಲೇಣಿಯಅಟ್ಟಕ್ಕೆ ಹಾಕಿದರು | ಆರುಮಾನೆಣ್ಣೆತೆಗೆತನ್ನಿ | ತೆಗೆತಂದು ನಿಸ್ತ್ರೆಯರು | ರಂಭೆರೊತ್ತಿದರು ಉಗುರೆಣ್ಣೆ | ೯ | ಹತ್ತು ಕಾಣೆಯ ಅಟ್ಟಕ್ಕೆ ಹಾಕಿದರು | ಹತ್ತು ಮಾನೆಣ್ಣೆತೆಗೆತನ್ನಿ | ತೆಗೆತಂದುನಿಸ್ತ್ರೆಯರು | ರಂಭೆ ರೊತ್ತಿದರು | ಉಗುರೆಣ್ಣೆ | ೧೦ | ಅಟ್ಟಡಿಗೆಅಡಿಗಲ್ಲು ಮೆಟ್ಟಡಿಗೆಸೋಪಾನ | ಪಚ್ಚೆಯಕಲ್ಲುಪದುಮದ | ಪದುಮದ ಬಚ್ಚಲಮನೆಗೆ ಹೋಗಿಮೀವಾತೆ ಮದುವಳಿಗ | ೧೧ | ಆಯಡಿಗೆ ಆಡಿಗಲ್ಲು ಮೇಯಡಿಗೆಸೋಪಾನ | ಪಚ್ಚೆಯಕ ಲ್ಲುಪದುಮದ | ಪದುಮದಬಚ್ಚಲಮನೆಗೆ ಹೋಗಿ ಮೀವಾತಮದವಳಿಗ | ೧೨ | ಚಿನ್ನದೊಂಟಿಯುತೆಗೆದು ತನ್ನ | ತಂಗಿಕೈಯ್ಯಲಿಕೊಟ್ಟು | ಪಟ್ಟೆಯನಳಿದುಬೆಳಿದುಟ್ಟು | ಬೆಳಿದುಟ್ಟುಅಣ್ಣೈಯ್ಯ | ರಾಯತಾ ಹೊರಟಜಳಕಕ್ಕೆ | ೧೩ | ಪಚ್ಚೆವಂಟಿಯತೆಗೆದು | ತಮ್ಮಕ್ಕನಕೈಯ್ಯಲಿಕೊಟ್ಟು | ಪಟ್ಟೆಯನಳಿದುಬೆಳಿದುಟ್ಟು | ಬೆಳಿದುಟ್ಟು ಅಣ್ಣೈಯ್ಯ ರಾಯತಾ ಹೊರಟಜಳಕಕ್ಕೆ | ೧೪ | ಚಿನ್ನದಕಡಾಯಿಗೆ ರನ್ನದ ತಂಬಿಗೆ ಹಾಕಿ | ರನ್ನದ ಭಾರಕ್ಕೆ ನಡುಬಳುಕಿ | ನಡುಬಳುಕಿಮುಡಿಸಡಲಿಸು | ವರ್ಣ್ನೆಯರು ನೀರ ಬೆರಸಿದರು | ೧೫ | ರನ್ನದ ಕಡಾಯಿಗೆ | ರವೆಯದತಂಬಿಗೆ ಹಾಕಿ | ರನ್ನದಭಾರಕ್ಕೆ ನಡುಬಳುಕಿ | ನಡುಬಳುಕಿ ಮುಡಿಸಡಿಲಿಸು | ವರ್ಣ್ನೆಯರು ನೀರಬೆರಸಿದರು | ೧೬ | ತಾಳುತಾಳೆಂದರೆ ತಾಳದೆತಂಬಿಗೆ | ತಾಳದೆನೀರು ಎರೆಯುತ್ತ | ಎರೆವಅಮ್ಮನ ಪಿಲ್ಲಿಜಾರಿದವೆನೀರಜಲಕಿಗೆ | ೧೭ | ನಿಲ್ಲುನಿಲ್ಲೆಂದರೆ ನಿಲ್ಲದೆ | ತಂಬಿಗೆನಿಲ್ಲದ ನೀರ ಎರೆಯುತ ಎರೆವ ಅಮ್ಮನಪಿಲ್ಲಿಜಾರಿದವೇ ನೀರಜಲಕಿಗೆ | ೧೮ | ನೀರುನಿಲ್ಲದ ತಾವು ನೀರೇಕೆ ನಿಂತವು | ಊರಿಗೆದೊಡ್ಡವರ | ಮಗಮಿಂದ | ಮಗಮಿಂದಅಣ್ಣೈಯ್ಯನೀಲದಸತ್ತಿಗೆಯನೆರಳಲ್ಲಿ | ೧೯ | ಕೆಸರುನಿಲ್ಲದಕೆತಾವು | ಕೆಸರೇ ನಿಂತವು | ಹೆಸರಿಗೆದೊಡ್ಡವರ | ಮಗಮಿಂದ | ಮಗೆವಿಂದ ಅಣ್ಣೈಯ್ಯ | ಕಳಶದಸತ್ತಿಗೆಯನೆರಳಲ್ಲಿ | ೨೦ | ಬಾಳೆಯವನದಲ್ಲಿ | ಬಳಸುಬೀಸುವಘಾಳಿ | ಇಂದೊಂದುಘಳಿಗೆತಡಮಾಡು | ತಡಮಾಡಮ್ಮೈಯ್ಯನಮಗಮಿಂದುಮನೆಗೆ ಬರುವಾಗ | ೨೧ | ಕಿತ್ಲೆಯ ವನದಲ್ಲಿ | ಸುತ್ತಾಬೀಸುವಘಾಳಿ | ಇಂದೊಂದು ಘಳಿಗೆತಡಮಾ | ಡಮ್ಮೈಯ್ಯನಮಗಮಿಂದು ಮನೆಗೆ ಬರುವಾಗ | ೨೨ | ನಿಂಬೆಯವನದಲ್ಲಿ ನಿಂದುಬೀಸುವಘಾಳಿ | ಇಂದೊಂದುಘಳಿಗೆ ನಿಲಬೇಕು | ನಿಲಬೇಕಮ್ಮೈಯ್ಯನ ಮಗಮಿಂದುಮನೆಗೆ ಬರುವಾಗ | ೨೩ | ಆರುಮುತ್ತಿನ ಮಣಿಯ | ಒಂದುಆರತಿಮಾಡಿ | ಕಿತ್ತಳಿಹಣ್ಣು ನಡುವಿರಿಸಿ | ನಡುವಿರಿಸಿ ಅವರಕ್ಕ | ತನ್ನ ತಮ್ಮನಿಗಾರತಿಯಬೆಳಗಿದಳು | ೨೪ |

* * *

ಗೋಮಟೇಶ್ವರ ಸ್ವಾಮಿಯವರ ಆರ್ತಿ ಹಾಡು

ಸುರಪತಿವಂದ್ಯಗೆ | ಸೂರ್ಯ್ಯತೇಜನಿಗೆ | ಪರಮಮಂಗಲನಿಗೆದಿವ್ಯಬೋಧನಿಗೆ | ವರಗುಣ ನಿಲಯಗೆ | ಯೋಗ್ಯನೆಂದ್ಯನಿವಗೆ | ತರಣಿವಿಧೂತ್ಕರಕಿರಣವಸೋಲಿಪಗೆ | ಗುರುಸುಕದಾತೃಗೆ | ಪರಮಖ್ಯಾತೆಗೆ | ವರಗುಣ ಜಾತೆಗೆ | ಮರಕತಮೂರ್ತ್ತಿಗೆ | ಸುರತರುಣಿಯರಾರತಿಯ ಬೆಳಗಿದರು | ೧ | ಪುರುಜಿನತನುಜಗೆ | ಪೂರ್ಣ್ನ ಸೌಖ್ಯನಿಗೆ | ನಿರುಪಮಗುಣನಿಗೆ | ತೀರ್ಣ್ನ ಸಂಸ್ಕೃತಿಗೆ | ವರಪೌದನೇಶಗೆ ವರ್ಣ್ನಪಾಲಕಗೆ | ಭರತನಜಯಸಿದ | ಪರಮಶೂರನಿಗೆ | ಪರಮದೆಹರಣಗೆ | ವರಜನಶರಣಗೆ | ಗುರುಭವತರಣಿಗೆ ವಿರಹಿತತರುಣಿಗೆ | ಮರಕತದಾರತಿಯ ಬೆಳಗಿದರು | ೨ | ಶ್ರೀಗೋಮಟೇಶ್ವರಗೆ | ಶ್ರೀಪತಿಸುತನಿಗೆ | ತುಂಗದೋರ್ಬ್ಬಲನಿಗೆ | ವಿಪುಲಸೌಖ್ಯನಿಗೆ | ಮಂಗಲಮಹಿಮಗೆ | ಭಂಗಾರರಹಿತಗೆ | ತುಂಗಗುಣಾಕರ ಪುಂಗವಮಹಿತಗೆ ಸಂಗರಧೀರಗೆ | ಮಂಗಲಸಾರಗೆ | ಅಂಗಜನನಿನಗೆ | ಬೆಳಗುಳವಾ ಸಗೆ ಅಂಗನೆಯರಾರತಿಯ ಬೆಳಗದಿರು | ೩ |

* * *

ನಾಗಕುಮಾರನ ಆರತಿ ಹಾಡು

ವರಚಂದ್ರನಾಥನಚರಣಕೆ ಸುತಿಸುವೆ | ಸರಸವತಿಯ ಭಜಿಸಿ | ಧರೆಯೊಳು ಶನಶಾಖ್ಯಪುರದ ಜಯಂಧರ ನರಸಿಮಹಿಷೆ ಎನಿಸಿ | ಮೆರೆವಪೃಥ್ವೀದೇವಿತೆರಳನ ಚರಿತೆಯ | ಬರೆವೆನು ಮಂಗಲಕರದೊಳು ಜನರೆಲ್ಲ | ಹರುಷದೊಳಾರತಿಯ ಬೆಳಗಿದರು | ೧ | ಉದರದೊಳಿರುವಾಗ | ಕದನವನೋಡುವ ಹೃದಯವ ಪುಟ್ಟಿಸುತ | ಉದಯವಾಗಲು ವಜ್ರಕದಗಳತೆಗೆದು | ವಿಷದ ಕೂಪದೊಳು ಬೀಳಲು | ಸದರದುರುಗಪೆಡೆ | ವದಗಿಪಿಡಿಯೆಫಣಿ | ವಿಧುರಾಜನೆನಿಸಿದ | ಚದು ರವಿಕ್ರಮನಿಗೆ ಚದುರೆಯರಾರತಿಯ ಬೆಳಗಿದರು | ೨ | ಕಿನ್ನರಿಮನೋ ಹರಿಯನ್ನು ಗೆಲಿದುಮದ | ದುನ್ನತಗಜವೇರಿ | ಭಿನ್ನಕಾಲಿನಹಯವನ್ನು ತನ್ವಶಜೂಜು ಪ್ರಸನ್ನತೆಯನುದೋರಿ | ಇನ್ನೊಂದು ನೇತ್ರ ನಮನ್ನಿಸಿ ಶ್ರೀಧರ | ನನ್ನು ಭಂಗಿಸಿದಂತ | ಪನ್ನಗಧ್ವಜನಿಗೆ | ರನ್ನದಾರತಿಯ ಬೆಳಗಿದರು | ೩ | ಪೊಳಲುನುಳಿದು ವೀಣೆಯೊಳುತ್ರಿಭುವನಪತಿ | ಗೆಲಿದುಭೀಮಾಸುರನ | ಲಳಿಕಿಸಿವಿದ್ಯಾಲಲನೆ ಸುದರ್ಶನೆ | ಒಲಿಸಿವೇ ತಾಳನನು | ತುಳಿದುವಾಟದಬೀಳಕುಳಿತದರೊಳ ಗುಯ್ಯಲೆಳಸಿ ಆಡುತ ಲಕ್ಷ್ಮೀಲಲಿತಪತಿಯಗೆಲಿದ | ಚಲುವನಿಗಾರತಿಯ ಬೆಳಗಿದರು | ೪ | ಪಿಡಿದುಸೋಮಪ್ರಭನೆಡೆಯೊಳು ಛೇದ್ಯನ | ಒಡನೆಭೇದ್ಯನಮನ್ನಿಸಿ | ಕಡುವಿಷದಾಮ್ರವಪಿಡಿದುಸೇವಿಸಿ ಸಿಂಧು ಪೊಡವೀಶನನುಜಯಸಿ | ಬೆಡಗಿನಗು ಣವತಿವಡಗೂಡಿನೇಮಿಶ | ಅಡಿಗಳಜಯಗೈದ | ಕಡುಗಾಢಸೂರಹರಗೆಬೆ ಡಗಿಯರಾರತಿಯಬೆಳಗಿದರು | ೫ | ದುಷ್ಟಸುಕಂಠನಕುಟ್ಟಿವಿಜಯಗಿರಿ | ಪಟ್ಟಣವನು ಸಾಧಿಸಿ | ಕಟ್ಟಾಣಿಯರು ಅಳವಟ್ಟಂಕ ಮಾಲೆಯ | ಇಟ್ಟುವ್ಯಾಲನಮನ್ನಿಸಿ | ಮೆಟ್ಟಿ ವೇತಾಳಸೆರೆಇಟ್ಟಸತಿಯರ | ಅಭೀಷ್ಟವಸಲಿಸುವ | ಶ್ರೇಷ್ಠ ಸುರರಿಗೆ | ಕಟ್ಟಾಣಿಯರಾರತಿಯ ಬೆಳಗಿದರು | ೬ | ಅಲ್ಲಿಗೆ ಕುಶಲವು | ಉಲ್ಲಾಸಕಥೆ | ಭಾರಲಲ್ಲಿಲಾವಣ್ಯರಚನ | ಅಲ್ಲಿಲಕ್ಷ್ಮೀಮತಿ | ಸಲ್ಲೀಲೆಕಲ್ಯಾಣ | ಅಲ್ಲಿಪಂಚಮಿಕಥನ | ಅಲ್ಲೈದು ಸಾಸಿರ | ನಲ್ಲೆಯರರಸನಲ್ಲೆಂಟುಸಾಸಿರ | ವಲ್ಲಭನೆನಿಸಿದ | ಬಲ್ಲದಗಾರತಿಯ ಬೆಳಗಿದರು | ೭ | ಪನ್ನೆರಡ್ಯೋಜನಯಿನ್ನುಯಿಳಿತಥಾಳ | ಹೊನ್ನುಸಹಿತಪುರಕೆ | ಪನ್ನ ಗಸುತಬಹನೆನ್ನಲುಪಿತನೆದ್ದು | ರನ್ನುಗೊಳತಗೃಹಕೆ | ತನ್ನ ಸುತನ ಕರೆದುನ್ನತವಿಭವಪ್ರಸನ್ನದಿಬಂದಪ್ರಸನ್ನಸೂರರಿಗೆ | ರನ್ನದಾರತಿಯ ಬೆಳಗಿದರು | ೮ | ತಂದೆ-ತಾಯಿಗಳಾನಂದದಿರಾಜ್ಯವ | ಕಂದನವಶಗೈದು ಸಂದರುಮುಕ್ತಿಗೆ | ಒಂದುನಾಸಿರ ವರುಷ | ಸೌಂಧರ್ಯ್ಯವನುತಾಳಿ | ದಂದುಗವ ನುಪರಿದಂದುಮುಕ್ತಿಗೆತಾನುಸಂದಶ್ರೀಫಣಿರಾಜ | ನಂದನನಿಗಾರತಿಯ | ಇಂದಿರೆಯರು ಮುದದಿಬೆಳಗಿದರು | ೯ |

* * *