ಪದ್ಮಾವತಮ್ಮನವರ ಅರತಿ ಹಾಡು

ಮುದ್ದುಪದಕಿಟ್ಟಗೆಜ್ಜೆಪರಾಕು | ವಜ್ರಮಾಣಿಕದಹಾವಿಗೆಯುವರಾಕು | ಉಗ್ರತನದಿಂ ದದೇವಿಪರಾಕು | ಪದ್ಮಗಂಧಿನಿಗೆ | ಪರಾಕುಯೆಂದೆನುತ | ಪದ್ಮಾದಾರತಿ ಯಬೆಳಗಿದರು | ೧ | ಕರದೊಳುಕಂಕಣಕಡಗಪರಾಕು | ಬೆರಳಮುದ್ರಿಕೆಯುಂ ಗುರುವುಪರಾಕು | ಕುಸುಮಗಂಧಿನೆಗೆಪರಾಕುಯೆಂದೆನುತ | ಕುಸುಮಾದಾರತಿಯ ಬೆಳಗಿದರು | ೨ | ಕಂಠದೊಳೆಸೆವಚಿಂತಾಕು ಪರಾಕು | ವ್ಯಂಟವುಕುಪ್ಪಸಭಾ ವುಲಿಯುಪರಾಕು | ಪಂಚರತ್ನದತಳಿಸರಿಗೆ ಪರಾಕುಯೆಂದೆನುತಮುತ್ತಿನಾರತಿಯ ಬೆಳಗಿದರು | ೩ | ಮುತ್ತಿನತೊಂಡಲುದಂಡೆಪರಾಕು | ಗೊಂಡೆಯುಚೌಲಿರೇ ಗಟೆಪರಾಕು | ಕಮಲಗಂಧಿನಿಗೆ ಪರಾಕುಯೆಂದೆನುತ – ಕಮಲಾದಾರತಿಯ ಬೆಳಗಿದರು | ೪ | ಬಿಡೆನಿನ್ನಚರಣವದೇವಿಪರಾಕು | ಕೊಡುನನಗೆ ಬೇಡಿದವರವ ಪರಾಕು | ಪಾರ್ಶ್ವಜಿನನನೆನೆವೆಪರಾಕು | ಯೆಂದೆನುತಾರತಿಯಬೆಳಗಿದರು | ೫ |

* * *

ಚಂಡಿನ ಹಾಡು

ಚಂಡನಾಡಿದರು | ಚೂವಿನ ಚಂಡನಾಡಿದರು | ರತಿಯಪೋಲ್ವಸತಿಯು ಮನ್ಮಥನಪೋಲ್ವ ಪತಿಯುಸುಖದಿ ಚಂಡನಾಡಿದರು | ಪಲ್ಲ | ಪಾತ್ರದಾನಿಯು | ಸಕಲಶಾಸ್ತ್ರವೇದಿಯು | ದಾತೃಶೂರನೆನಿಸಿಜೈ | ವಾತೃಕವಕ್ತ್ರಸತಿಯನೋಡುತ | ಚಂಡನಾಡಿದನುಹೂವಿನ ಚಂಡನಾಡಿದನು | ೧ | ಚಂಪಕನಾಶಿಕೆಯು | ಪೊಳೆವ ಸೊಂಪಿನಬಾಲೆಯು | ಇಂಪುಗೂಡಿದ | ಇಂದಿರವದನೆ | ಕಂಪುಗೂಡಿದ ಚಂಪಕಪು ಷ್ಟದ | ಚಂಡನಾಡಿದಳು | ೨ | ಅಂಚೆಗೆ ಮನೆಯು | ರುಚಿರಪಂಚಾಸ್ಯಮಧ್ಯೆಯು | ಪಂಚಬಾಣನಸತಿಯರೂಪ | ವಂಚಿಸಿ ಪೊಳೆವಮಾನಿನಿಯೊಡನೆ ಚಂಡನಾಡಿದನು | ೩ | ಸಾರಹೃದಯವನು ಪೊಳೆವಸುಕುಮಾರನೆ ನಿಪನು | ಚಾರುಕಲೆಯಳಿದುಪೊಳೆವ | ಧೀರಪುರುಷಮರುಗಪತ್ರದ ಚಂಡನಾಡಿದನು | ೩ | ಸಾಮಜಗಮನೆಯು ಪೊಳೆವ | ಹೇಮರುಚಿರೆಯು | ಕೋಮಲತೆರದಿಕಾಮಿನೀಯಕುಲದಿ | ಸುಮನದಿಂದ ಸಮೆದಚಂಡವಾಡಿದನು | ೫ | ಮೆಲ್ಲಮೆಲ್ಲನೆ | ನಲ್ಲನಮುಖವ ನೋಡುತಲೆ | ಛಲ್ಮೆಗೂಡಿ ಬಾಲೆಯೆನೆವ | ಮಲ್ಲೆಗೆಹೂವಿನಿಂದ ಪೊಳೆವ ಚಂಡನಾಡಿದಳು | ೬ | ರುಂದ್ರವಿಭವನೂಪೂರ್ಣ್ನ | ಚಂದ್ರಮುಖದಿರಾಜಿಪನು | ಸಾಂದ್ರಸುಖ ವಪಡೆದುದೇವೇಂದ್ರನೆನಿಸಿ | ಪಾದ್ರಿಯಹೂವಿನ ಚಂಡನಾಡಿದನು | ೭ | ವಾರೆನೋಟ ದೊಳ್‌ ನೋಡುತವರನ | ತೋರದುರುಬಿನ | ಭಾರವತಾಳ್ದು ಚಾರುನೇತ್ರೆ | ತೋರಹೂವಿನಚಂಡಪಿಡಿದು ಚಂಡನಾಡಿದಳು | ೮ | ದ್ವಿರದಗಮನೆಯುಸತ್ಪತಿಕ ದ | ಸ್ವರದಮಾನಿನಿಯ | ನಾಕಸತಿಯಗೆಲಿದವಳೊಡನೆ | ಅಶೋಕೆಹೂವಿನ | ಚಂಡಪಿಡಿದುಚಂಡನಾಡಿದನು | ೯ | ಪನ್ನಗವೇಣಿಯುಸದ್ಗುಣಗಳಾಂತ | ಮನ್ನಣೆಪುರುಷನು | ಸನ್ನೆಸೈಜ್ಞೆಯರಿತುಸೇವಂತಿಗೆ ಪುಷ್ಪ | ದಚಂಡಪಿಡಿದು ಚಂಡನಾಡಿದರು | ೧೦ | ಮೊಲ್ಲೆಮಲ್ಲಿಗೆ | ಮರುಗ | ದವನಚಂಪಕ ನಾಗವು | ಕಮಲಕಲ್ಹಾರವಕುಳಕುಟಜಜಾಜಿಪುಷ್ಪದಚಂಡ ಚಂಡನಾಡಿದರು | ೧೧ | ಧನಸಮೃದ್ಧಿಯು ಆಗಲೆಂದು | ಮನವಿಶುದ್ಧಿಯಿಂ | ಕನಕಪುರದೊಳ್‌ ರಾಜಿಪವೀರಜಿನರಯಕ್ಷಿಯನೆನೆದು | ಚಂಡನಾಡಿದರು | ಹೂವಿನಚಂಡನಾಡಿದರು

* * *

ಚಂಡಿನಪದರಾಗಥಳಕ್

ನವರತುನಗಳಿಂದಸಮೆದ | ನವಸುಕಂತುಕಮಂ | ಕವಿವಿನೂತದಂಪತಿಗಳ್ ಜವದೊಳಾಡಿದರು | ವ | | ಮಾರನಿಭಸುವರನುನೀರೇರುಹಾಕ್ಷಿಯೊಳ್‌ | ಸಾರಸಾರ ಸದಚಂಡನು | ಧೀರನಾಡಿದಂ | ೧ | ಕಂದದಾಕುಂದದಚಂಡನು | ಕುಂದರದನೆಪೂ | ರ್ಣ್ನೇಂದುವದನಪತಿಯ ನೋಡಿ | ಮಂದಹಾಸದೊಳ್‌ | ೨ | ಮಲ್ಲಿಕಾಮು ಕುಳದಚಂಡನು | ಪುಲ್ಲೆಗಂಣೆಯೊಳ್ ಪುಲ್ಲಶರಸಬಾಣದಂತೆ | ನಿಲ್ಲದಾಡಿದಂ | ೩ | ಕಂಪುಳ್ಳಚಂಪಕಾದಿ ಪೂಜೊಂಪಸೊಂಪಿನಿಂ | ಮೆಪುಳ್ಳಚಂಡನಾಡಿದರು | ಸಂಪತ್ತಿನಿಂದಲೇ | ೪ | ಓರೋರ್ವ್ವರೋರೆ | ನೋಟದಿಂದ ಜಾರೆಲಜ್ಜೆಯು | ಚಾರುಕಂಚುಕಢಾಳಿಸಲ್ | ಶೃಂಗಾರಖೇಲದೊಳ್ | ೫ | ವರವಧುಗಳಂತುಕಗತಿಯ | ಪರಿಯನೀಕ್ಷಿಸಿಮೇರೆದುದೀರೂಪಕವುಧರೆಯೊಳ್‌ | ಭರತಶಾಸ್ತ್ರದೊಳ್ | ೬ | ಕನಕಗಿರಿಬಸದಿಯಪದ್ಮಿನಿಕಟಾಕ್ಷದೊಳ್‌ | ಅನಿಮಿಷದಮಿಥುನಗಳೆಂದು | ಜನರುನುತಿಪರು | ೭ |

* * *

ರಾಗಸುರಟಆದಿತಾಳಆರತಿಹಾಡು

ಶ್ರೀಕೂಷ್ಮಾಂಡಿನಿಗೆ | ರಾಕೇಂದುಮುಖಿಗೆ | ಕೋಕಿಲವಾಣಿಯರು | ಶ್ರೀಕರಾರತಿ ಮಾಡಿ | ವ | ಸಿಂಧುವಿಜಯಜನ | ಮಂಧರಧೀರನ | ಬಂಧುರಯಕ್ಷಿಗೆ | ಸುಂ ದರಿಯರ್ಸ್ಸೇರಿ | ೧ | ಶಿವದೇವೀಸುತ | ಭುವನಪತಿಯ ಯಕ್ಷ | ಶಿವಕರಸರ್ವ್ವಾಹ್ಣ | ನವರಸಯುತಸತಿಗೆ | ೨ | ಪುತ್ರಲಾಲಿನಿಗೆ | ಪುತ್ರರಕ್ಷಿಣಿಗೆ | ಪುತ್ರವರ್ದ್ಧಿನಿಗೆ | ಚಿತ್ರದಾರತಿಮಾಡಿ | ೩ | ಮರಕತ ವೈಢೂರ್ಯ್ಯ | ಕುರುವಿಂದಸುವಜ್ರ | ವರಮುಕ್ತಾಮುಖ | ಸುರುಚಿರಮಣಿಗಳಿಂ | ೪ | ಪೊನ್ನಿನಹಸೆಯೊಳ್‌ | ರನ್ನದೊಳ್ ಢಾಳಿಪ | ಸನ್ನುತೆಯಕ್ಷಿಗೆ ಚನ್ನೆಯರೆಲ್ಲರು | ೫ | ವಾಮಕಟಿತಟದೊಳ್ | ಪ್ರೇಮಪ್ರಿಯಂಕರನ | ವಾಮಕರದೊಳಾಮ್ರ | ಧಾಮ ಮಂಜರಿಯನ್ನು | ೬ | ದಕ್ಷಿಣಕರಗಳೊಳ್ | ಪ್ರೇಕ್ಷಾಶುಭಂಕರಪಕ್ಷಾಮ್ರಫಲಗಳ | ಪೇಕ್ಷಾ ಧಾರಿಣಿಗೆ | ೭ | ಚೂತವನಚ್ಛಾಯಾ | ಪೂತಪ್ರದೇಶದೊಳ್ | ಭೂತಪೂರ್ವ್ವಪ್ರಿಯ | ನಾಥಚರವಾಹೆಗೆ | ೮ | ಅಂಬಾಲೆಗೆಜಗ | ದಂಬಿಕೆಗಂಬೆಗೆ | ಕಂಬುಸುಕಂಠಿಗೆ ನಂಬಿದ ರ್ಪ್ವೊರೆವಗೆ | ೯ | ಕನಕಾದ್ರಿವಾಸೆಗೆ | ಜನವರದಾಯಿನಿಗೆ | ವನಿತಾಮಣಿ ಕೂಷ್ಮಾಂ | ಡಿನಿಮಹಾದೇವಿಗೆ | ೧೦ |

* * *

ರಾಗಸುರಟಆರತಿಹಾಡು

ರಾಮಜಾನಕೀಯರ್ಗ್ಗಾರತಿಬೆಳಗಿರೆ | ಪ | ಕೌಶಲನಗರದ | ಧೀಶರಾಮನಿಗೆ | ದಾಶರಥಿಗೆ ಮತ್ತಾ | ಕಾಶಿನಿಯರು | ೧ | ಕುಶಲದಿಂದೆಸೆದಿಹಮಿಸುನಿಮಂಟಪದೊಳು | ವಸುವತೀ ಸುತೆಗೂಡಿ | ವಸುಧೀಶನು | ೨ | ಮಿಥಿಲೇಂದ್ರತನುಜಗೆ ಪ್ರಥಿತಸೀತೆಗೆ ಮನು | ಮಥಸತಿ ರೂಪೆಗೆಸು | ದತಿಯರ್ಕ್ಕಳು | ೩ | ಚಿತ್ತಜರೂಪಗೆ | ಮತ್ತೇ ಭಗಮನೆಗೆ | ಮುತ್ತಿ ನಾರತಿಯನು | ಚಿತ್ತಿನಿಯರು | ೪ | ಧಾವಳ್ಯವರ್ಣ್ನಗೆ | ಲಾವಣ್ಯಭರಿತೆಗೆ | ತೀವಿದರತುನಗಳಿಂ | ಭಾವಕಿಯರು

* * *

ಬಳೆಯ ತೊಡಿಸುವ ಹಾಡು

ಬಳೆಯತೊಡಲು ಬಂದರಬಲೆಯರು | ನಳಿನಾಕ್ಷಿಯರ್ತ್ತಮ್ಮನಳಿತೋಳಿಗೆತಕ್ಕ | ಬಳೆಯತೊಡಲು ಬಂದರಬಲೆಯರು | ಪಲ್ಲ | ಇಂದ್ರನಸತಿಯ ಚಲ್ವಿಕೆಯನು ಪೋಲುವ | ಚಂದ್ರಮುಖಿಯರತಿಚಲ್ವೆಯರು | ಸಾಂದ್ರಸುಖವತಾಳ್ದಸೊಭಗಿ ನಂಗನೆಯರು | ಇಂದ್ರನೀಲದಬಳೆಗಳಮುದದಿ | ೧ | ಹಸರುಹಳದಿನೀಲ ಜೇನುತುಪ್ಪವು ಮತ್ತೆ | ಕುಶಲಕುಂಕುಮವರ್ಣ್ನವನುಪೊಳುವ | ಹೊಸಪರಿಬಳೆಗಳ ತೊಡಲುಬೇಕೆನುತಲಿ | ಕುಸುಮಗಂಧಿನಿಯರು ಕುಶಲೆಯರು | ೨ | ಹಸ್ತಕಡಗಹಿಂ ಬಲೆಚಲ್ವಕಂಕಣ | ಉತ್ತಮಬಳೆಭಾಪುರಿಯನ್ನಿಟ್ಟು | ರತ್ನಗಳ್ಕೆತ್ತಿದುಂಗುರ ಗಳಿಂಪೊಳೆ ವಚಲ್ಹಸ್ತಗಳ್ನೀಡಿ ದರ್ಚ್ಚದುರೆಯರು | ೩ | ತಿಂಗಳತಿಳುವೆಳಿಗನ | ವೋಲ್ವ ದೃಷ್ಟಿಯಿಂ | ಶೃಂಗರಿಸುತಪೊಸಬಳೆಗಳನು | ಮಂಗಳಾಂಗಿಯರ್ಮ್ಮನದಿಚ್ಛೆಯಬಳೆಗಳ ಶೃಂಗರಿಸೆಂದರು ಬಳೆಗಾರನ | ೪ | ಮುತ್ತುಮಾಣಿಕರತ್ನದೊಡವೆಗಳಳವಟ್ಟು | ಕತ್ತುರಿತಿಲಕವಪಣೆಯೊಳಿಟ್ಟು | ಚಿತ್ತಜನರಸಿಚಲ್ವಿಕೆಯನುಪೋಲುವ | ಚಿತ್ತರಬೊಂಬೆಯ ರೈದಿದರು | ೫ | ಅಣಿಯಮುತ್ತಿನಕಟ್ಟಾಣಿಗಳ್ಪೊಳೆಯೆಕ | ಲ್ಯಾಣಿಯರ್ಶ್ಶಾಸ್ತ್ರ ಪ್ರವೀಣೆಯರು | ಕ್ಷೋಣಿಯೊಳ್ಗೀರ್ವಾಣರಾಣಿಯರೆನಿಪ | ಕಟ್ಟಾಣಿಯರ್ತ್ತೊಟ್ಟರು ಬಳೆಗಳನು | ೬ | ಮತ್ತೆಚಳ್ಕೆರೆಯೊಳುನೆಲಸಿರ್ದ್ದು ಬಳೆಯಪ್ರತ್ಯಕ್ಷದಿ ಕೊಟ್ಟಚಕ್ರೆಶ್ವರಿಯ | ಮುತ್ತೈದೆತನಸ್ಥಿರಿರಲು ಬೇಕೆನುತಲೆ | ಚಿತ್ತದೊಳೆಸೆದುತೊಟ್ಟರುಬಳೆಯ | ೭ |

* * *

ಸರಸ್ವತಮ್ಮನವರ ಹಸೆಗೆ ಕರೆದ ಶೋಭಾನೆ

ಶ್ರೀಜಿನಮುಖಸರೋಜದೊಳುದಿಸಿದ | ರಾಜೀವಮುಖಿಯೇಬಾ | ರಾಜಾರುಣ ನಿಭತೇಜೋಯುತೆ ಸುರಭೂಜಲತಾಂಗಿಯೆಬಾ | ವ್ಯಾಜರಹಿತ ವಿಭ್ರಾಜಿತಾಕ್ಷಯ ಮಾರ್ಗ್ಗ | ಬೀಜದತಿರುಳೆಯೆಬಾ | ತ್ರೈಜಗದಖಿಲೇಂದ್ರ | ಪೂಜಿತನೂತ್ನವ | ಯೋಜಾಂಘ್ರಿಯುಗಲೆಯೆಬಾ | ವಾಗ್ದೇವಿರಾಜಿಸುವಹಸೆಗೆ ಕರೆದರು | ೧ | ವಾಣಿಕಾಳೋರಗವೇಣಿ ತ್ರಿಭುವನವಕಾಣಿಪಕನ್ನಡಿಬಾ | ಏಣಾಂಕಮುಖಪಂಚಬಾಣ ನಮತ್ತರೇಣುಗಮನನಿಭೆಬಾ | ವೀಣಾಪುಸ್ತಕವಾಣಿಪರಮಕಲ್ಯಾಣಿ ಮಂಗಳರೂ ಪೆಬಾ | ಕ್ಷೋಣಿರತ್ನಾಧಾರೆ | ಶ್ರೇಣಿಯೊಳ್ ಮಾನವ | ಶ್ರೇಣಿಯಾನಂದೆಯೆಬಾ | ವಾಗ್ದೇವಿಮಾಣಿಕದಹಸೆಗೆ ಕರೆದರು | ೨ | ಭಾರತಿಬುಧಜನಸಾರಥಿಮುನಿಜನ | ವಾರಿಜರವಿಬಿಂಬೆಬಾ | ಶಾರದೆಸನ್ನುತತ್ರೈರತ್ನಾಬ್ಜಕಾನಾರದಹಂಸೆಯೆಬಾ | ಪಾರಾವಾರಗಂಭೀರೆ ಸಕಲದೋ | ಷಾರಣ್ಯಪರಶುವೆಬಾ | ಮಾರಹರನೆಕೀರ್ತ್ತಿಕ್ಷೀ ರಸಾಗರಪೂರ್ಣ್ನ | ಕೈರವಪ್ರಿಯಬಿಂಬೆಬಾ | ವಾಗ್ದೇವಿಚಾರುಮಂಟಪಕೆ ಕರೆದರು | ೩ | ನೀಲಕುಂತಳೆನವ್ಯಬಾಲೇಂದುನಿಟಲೆವಿ | ಶಾಲಲೋಚನಯುಗೆಬಾ | ಸ್ಥೂ ಲಪಯೋಧರೆ | ಶೈಲನಿತಂಬೆಶುಂಡಾಲಾಂತಕಮಧ್ಯೆಬಾ | ಲೀಲಾನಿಧಿಸುಪ್ರವಳಾಂ ಘ್ರಿಯುಗಳಾಕ್ಷಮಾಲಾಹಸ್ತಯೆಬಾ | ಕೀಲಿತ ನವರತ್ನ ಹೇಮಮಯಾಂಗದೆ | ತ್ರೈಲೋಕ್ಯನಾಯಕಿಯೆ ಭಾ ವಾಗ್ಧೇವಿನೀಲದಹಸೆಗೆಕರೆದರು |೪ | ಪಾತ್ರರಹಿತ ಮಿಥ್ಯಾಶಾಸ್ತ್ರವಿಪಿನನೀತಿ | ಹೋತ್ರಸನ್ನಿ ಭಳೆಯೆಬಾ | ಭೂತ್ರಯನುತಜಿನಶಾಸ್ತ್ರ ನಿನ್ನವನ | ಚೈತ್ರ ಸುಮಾಸವೆಬಾ | ಧಾತ್ರಿಯೊಳನುಪಮಮಾತೃವೆಭವವಾರ್ದ್ಧಿ ಭೈತ್ರೆಪವಿತ್ರೆಯೆ ಬಾ | ಶ್ರೀತ್ರೈರತ್ನಸುಗಾತ್ರಳೆ ಅಕ್ಷಯ | ಸೂತ್ರದಪುತ್ಥಳಿಯೆಬಾ | ವಾಗ್ದೇವಿ | ನೇತ್ರಾತಿಶಯಕೆ ಕರೆದರು | ೫ | ರೂಢಿಯೊಡೆದಹಂಸಾರೂಢೆಸಕಲವಿದ್ಯಾ | ಪ್ರೌಢೆಸದಾನಂದೆಬಾ | ಬೇಡಿದಭಾಗ್ಯವ ನೀಡುವಬಿಡುಗಣ್ಣನಾಡಿವೆತರುನನೀ ಬಾ | ಕೂಡಿದನಖಿಲಸೌಖ್ಯನೀವ ಸಕಲಜನಚೂಡಾಮಣಿಯೆನೀಬಾ | ನೋಡಿದ ಣಿಯದಂಗ | ಆಡಿದಣಿಯದು | ದ್ಗಾಢೆಸದ್ಗುಣಮಣಿಬಾ | ವಾಗ್ದೇವಿವೈಢೂರ್ಯ್ಯದ | ಹಸೆಗೆಕರೆದರು | ೬ | ಆದಿಮಧ್ಯಾಂತವಿಚ್ಛೇದಸರ್ವ್ವಾಗಮ | ಭೇದಪ್ರಕಾಶಯೆ ಬಾ | ಶೋಧಿತನಾನಾಭೇದ ಭಾಷೆಯಗೂಡಿಓದುವದೇವಿಯೆಬಾ | ಮೇಧಿನಿತ್ರಯಕಾ ಮೋದಸೆವಸು | ಮಾಧುರ್ಯ್ಯವಚನೆಯೆಬಾ | ಆದಿಜಿನರದಿವ್ಯನಾದ ಪೀಯೂಷಾಂ ಬೋಧಿ ಸಂಭವಲಕ್ಷ್ಮಿಯೆಬಾ | ವಾಗ್ದೇವಿ | ಗೋಮೇಧಿಕರದಹಸೆಗೆಕರೆದರು | ೭ |

* * *

ಪೃಥ್ವೀದೇವಿಗೆ ಹೂವು ಮುಡಿಸಿದ ಹಾಡು. ರಾಗಶಹನ

ಮಗಧದೇಶದೊಳಿಹ | ಸೊಗಯಿಪಕನಕಾಖ್ಯ | ನಗರದಧೀಶನ | ಮಿಗೆಜಯಂ ಧರನ | ನಗಲದೆ ವರ‍್ತಿಪ | ಬಗೆಮೋಹದಸತಿಪೃಥ್ವೀದೇವಿಗೆ ನಾಗಸಂ | ಪಿಗೆಪೂಗ ಳನುಮುಡಿಸಿದರು | ೧ | ಶರದಿಂದುಕಿರಣವಜರೆವದುಕೂಲಾಂ | ಬರೆಗೆಕೃಪಾಕರೆಗೆ | ಸುರುಚಿರಮೌಕ್ತಿಕ | ವರಮಣಿ ಹಾರಾದಿ | ಭರದಿಂಶೃಂಗಾರಪೂರಿತ ಸುಂದರಿಗೆ | ಸುರಗಿಯಪೂವಮುಡಿಸಿದರು | ೨ | ಸರಸೀರುಹಾಕ್ಷಿಗೆ | ದ್ವಿರದೇಂದ್ರಗಮನೆಗೆ | ಹರಿವರ್ಮ್ಮನನುಜಾತೆಗೆ | ಸರಸಿಜಗಂಧಿಗೆ | ಸ್ಮರಸತಿರೂಪೆಗೆ | ವರಮಹಾಮಂ ಡಲೇಶನ ಮಹಾಮಾತೆಗೆ | ಇರುವಂತಿಗೆಹೂವ ಮುಡಿಸಿದರು | ೩ | ಗಿರಿಪುರದಧಿ ಪತಿ | ಮೆರೆವಶ್ರೀವರ್ಮನ | ಪರಮಭಾಗ್ಯದಸುತೆಗೆ | ಸರಸಧುರೀ ಣೆಯರ್‌ | ತರುಣೀಮಣಿಯರು | ಕರುಣಾಲವಾಲೆಶ್ರೀ | ಧರಣೀದೇವಿಗೆ | ಪರಿಮಳಜಾಜಿಯ ಮುಡಿಸಿದರು | ೪ | ಇಂತುನೇಮೀಶರನಂತರಾಳದೊಳೊಗೆದ | ನಂತೆಗೆಕಲ್ಪಕುಜ | ದಂತೆಮಾಮಂಡಲ | ವಾಂತನಾಗಕುಮಾರನ | ಚಿಂತೆಯಿಲ್ಲದೆಹಡೆದಧಾತ್ರೀ ದೇವಿಗೆಸೇ | ವಂತಿಗೆಯಪೂವಮುಡಿಸಿದರು | ೫ |

* * *

ಬಳುವಳಿ ಹಾಡು ರಾಗಕೇದಾರಆಟ್ಟಹಾಳ

ಕುವರೀಮಣಿಯೆಸಾರಮ್ಮ | ಸುವಿವೇಕಿಯೆ | ಪ | ಚಂದಿರವದನೆ ಸೌನಂದೆಯೆಕರಿ ಪುರಕಾ | ನಂದದಿಂದಲೆಪೋಗಿ | ಚಂದದಿಸುಖಿಸೌ | ೧ | ನಳಿನಾಕ್ಷಿಯರ್ಶತ | ಕೆಳದಿಯರೊಡಗೂಡಿ | ಫಳಿಲನೆನೀಸಾರಮ್ಮ | ಕಳವಳಿಸದೆ | ೨ | ಕನಕಖಚಿತಮಣಿ | ಘನಭೂಷಣಗಳನೀ | ಮನಮೊಲಿಯೆ ಇತ್ತೆನು | ಅನುಮಾನಿಸದೆ | ೩ | ಸಾಪ ತ್ನಿಯರೊಳನು | ತಾಪವನೆಸಗದೆ | ಓಪನೊಳತಿಚತುರೆ | ಭಾವೆನಿಸೌ | ೪ | ಅತ್ತೆ ಮಾವರ್ಗ್ಗಾಣು | ಮುತ್ತೆನಿಸೌವಧು | ಮೊತ್ತದೊಳತಿನಿಪುಣೆ | ಮತ್ತೇಭಗಮನೆ | ೫ | ನೀಕೋರಿದುದನಾನ | ನೇಕವಾಗೀವೆನು | ಕೇಕೀಸುಪಿಂಛಕಚೆ | ಕೋಕಿಲವಾಣಿ | ೬ | ಸುರಧನುಸನತ್ಕು | ವರಚಕ್ರಿಹಸ್ತದೊಳ್ | ವರನಂದನೆ ಸುನಂದೆಯಕರವನಿತ್ತು | ೭ | ಅಂದುತ್ರಿವರ್ಗದಿಂ | ಚಂದದಿಂಸಲಹೆಂದು | ಕುಂದದೆ ಬಳುವಲಿಯ | ಸುಂದರಿಗಿತ್ತಂ | ೮ | ಉಭಯಕುಲಕೆನೀ | ನಭಿಮತಳಿನಸೌ | ವಿಭುಕನಕಗಿರೀಶಂ | ಶುಭವೀಯಲಿ

* * *

ಬಾಗಿಲ ತಡೆಯುವ ಹಾಡು

ವಾರಣಗಮನೆವೈಯ್ಯಾರಿಮನೋಹರಿ | ನಾರೀಮಣಿಯು ಖೇಚರಿಯುಇವಳು | ನಾರೀಮಣಿಯುಖೇಚರಿಯು | ೧ | ಸಾರಿಬಂದಳು ಬಾಗಿಲತಡೆದಿಹಳ್ಯಾರು ಸಾ ರಮ್ಮಪಡಿಗಳತೆಗೆದುಕೆಲ | ಸಾರಮ್ಮಪಡಿಗಳ ತೆಗೆದು | ೨ | ವೀರಖೇಚರಿಯಾದ ರೊಳ್ಳಿತು ನಡೆಯಣ್ಣ | ಯಾರಮಾತಿನಮೇಲೆ ತಂದೆ ನೀನುಮ | ತ್ಯಾರಮಾತಿನಮೇಲೆ ತಂದೆ | ೩ | ವೀರನು ಮನುಜಮಂದಾರನುದಾರನು | ಯಾರಕೇಳಲುಬೇಕು ತಂಗಿನಾನು | ಮತ್ಯಾರಕೇಳಲುಬೇಕು ತಂಗಿ | ೪ | ಬಲ್ಲಿದನಾದೊಡೆರಿಪುರಾಯರನೆಲ್ಲ | ತಲ್ಲಣಗೊಳಿಸುಹೋಗಣ್ಣ ನೀನು ತಲ್ಲಣಗೊಳಿಸುಹೋಗಣ್ಣ | ೫ | ಎಲ್ಲರಮರ್ದಿಸಿ ವಿಜಯಾರ್ದ್ಧಶೈಲದ | ಫುಲ್ಲಾಕ್ಷಿಯನು ತಂದೆನಮ್ಮ ನಾನು | ಫುಲ್ಲಾಕ್ಷಿಯನುತಂದೆ ನಮ್ಮ | ಎಲ್ಲಿಯನಾರಿಯೊಫುಲ್ಲಾಕ್ಷಿ ಇವಳಲ್ಲ | ನಲ್ಲೆಯೆಂದರೆಬಿಡೆನಣ್ಣ ನಾನು | ನಲ್ಲೆಯಂದರೆಬಿಡೆನಣ್ಣ | ೭ | ಸಲ್ಲಲಿತಾಂಗಿಯರೊಳಗತಿರೂಪಿನ ಚಲ್ಲೆಗಣ್ಣೆಯುಕಾ ಣೆತಂಗಿ | ಇವಳು ಚಲ್ಲೆಗಣ್ಣೆಯುಕಾಣೆತಂಗಿ | ೮ | ಮೆಚ್ಚಿ ಬಂದಳಮನ | ದಿಚ್ಚಯರಿತುಬಹುಗಚ್ಚುಮಾತಿಗೆಬಿಡೆವಣ್ಣ | ನಿನ್ನ ಗಚ್ಚು ಮಾತಿಗೆಬಿಡೆವಣ್ಣ | ೯ | ಕಚ್ಛಮಹಾ ಭೂಪನುದರಸುಧಾಕರೆ | ಮೆಚ್ಚಿಬಂದವಳಲ್ಲ ತಂಗೀ ಇವಳು | ಮೆಚ್ಚಿ ಬಂದವಳ್ಳಲ್ಲ ತಂಗಿ | ೧೦ | ಪಲ್ಲವಾಧರೆಯಾದರೊಳ್ಳಿತುನಡೆಯಣ್ಣ | ಬಲ್ಲವಿಕೆಯ ತೋರಬೇಡನಿನ್ನ | ಬಲ್ಲವಿಕೆಯತೋರಬೇಡ | ೧೧ | ಫುಲ್ಲಶರನಮಂತ್ರದೊ ಲ್ಲಭೆಯನು ಇಂತು | ಗೆಲ್ಲುವನುಡಿಯದಿರಕ್ಕ ನಿನ್ನಗೆಲ್ಲುವನುಡಿಯದಿರಕ್ಕ | ೧೨ | ದುಷ್ಟರಾಯರಕಡಿ | ದಟ್ಟುವಸಮಯದಿ | ಬಟ್ಟೆಯೊಳಗೆಸಿಕ್ಕಿದವಳುನಡು | ಬಟ್ಟೆ ಯೊಳಗೆಸಿಕ್ಕಿದವಳು | ೧೩ | ಪಟ್ಟಧರೆಯುನಮಿರಾಜನನುಜೆ ಇವಳು | ಬಟ್ಟೆಯೊಳಗೆ ತರಲಿಲ್ಲ ನಡುಬಟ್ಟೆಯೊಳಗೆತರಲಿಲ್ಲ | ೧೪ | ಸಾರಿಬಂದಡೆಯಾಬಿಡುವೆ ನಮ್ಮಣ್ಣನ | ವಾರಿಜಾಕ್ಷಿಯೆ ಹೆಸರೇನೆ | ನಿನ್ನ | ವಾರಿಜಾಕ್ಷಿಯಹೆಸರೇನೆ | ೧೫ | ಪಂಕಜಮುಖಿ ಯಳೆಕೊಂಕಿದಕುರುಳವಳೆ | ಬಿಂಕಗಾತಿಯ ಹೆಸರೇನು | ನಿನ್ನ | ಬಿಂಕಗಾತಿಯ ಹೆಸರೇನೆ | ೧೬ | ಕುಂಕುಮಾಂಗಿನಿ | ಕೇಳುಸಾರಸವತಿಯು | ಮೀನಾಂಕನರಸಿಯೆನ್ನ ಹೆಸರು | ಮೀನಾಂಕರನರಾಣಿಯೆನ್ನಹೆಸರು | ೧೭ | ಅಂಬುಜಾಂಬಕಿಸುಂದರಾಂಗಿ | ಪೂರ್ಣ್ಣೇಂದು | ವಿಡಂಬೆನಿನ್ನಯ ಹೆಸರೇನೆ | ವಿಡಂಬೆನಿನ್ನಯ ಹೆಸರೇನೆ | ೧೮ | ರಂಭೆಪುತ್ಥಳಿಬೊಂಬೆ | ಕರುಣಸಾಗರಚಂದ್ರಬಿಂಬೆ | ಕಾಣಮ್ಮಯನ್ಹೆಸರು | ಚಂದ್ರಬಿಂಬೆ ಕಾಣಮ್ಮಯೆನ್ನ ಹೆಸರು | ೧೯ | ಸೊಗಯಿಪವಿಜಯಾ ರ್ದ್ಧಶೈಲದೊಡತಿಕೇಳು | ಗಗನಚಾರಿಯ ಯೆನ್ಹೆಸರು | ಕೇಳು | ಗಗನಾಚಾರಿಯು ಯೆನ್ನ ಹೆಸರು | ೨೦ | ಖೇಚರಿಯೊಭೂಚರಿಯೊನೀವತ್ತಿಗೆಯು ಕಾಣೆ | ಸೂಚಿಸಿನಡೆನಿನ್ನ ಹೆಸರ | ನೀನು ಸೂಚಿಸಿನಡೆನಿನ್ನ ಹೆಸರ | ೨೧ | ಭೂಚರ ರನುಮರ್ದ್ಧಿಸಿ | ದತಿವಿದ್ಯಾಚಾರಿಯು ಕಾಣಮ್ಮಯೆನ್ನ ಹೆಸರು | ಕೇಳು | ವಿದ್ಯಾಚಾರಿ ಯು ಯೆನ್ನ ಹೆಸರು | ೨೨ | ಬಿಡೆನಿನ್ನಗಾಡಿಯ | ನಡೆನಡೆಬಾಗಿಲೋಳ್‌ | ಬಿಡೆನು ಕಾಣೆಲೆಮೃಗನೇತ್ರೆ | ನಾನು | ಬಿಡೆನುಕಾಣೆಲೆಮೃಗನೇತ್ರೆ | ೨೩ | ಕಡು ಕಡುಗಾತಿಯನು | ತಂದನುಚಕ್ರಿಯು | ನಡೆವುದೆಲ್ಲಿನಳಿನಾಕ್ಷಿ | ನಾವುನಡೆವುದೆಲ್ಲಿಗೆ ನಳಿನಾಕ್ಷಿ | ಹೆಮ್ಮೆಯನಿನ್ನಯ ಮಾತನು ಬಿಡುಯಿಷ್ಟು | ಸುಂಮನೆಬಿಡ್ವೊಪಂಕಜಾಕ್ಷಿ | ನಿನ್ನ | ಸುಮ್ಮನೆಬಿಡ್ವೊಪಂಕಜಾಕ್ಷಿ | ೨೫ | ಅಷ್ಟರೊಳಗೆಚಕ್ರಗತಿಮೋಹನೆನಿಸದ | ಪಟ್ಟವದನೆ ಪದ್ಮಗಂಧಿ | ನಾನು | ಪಟ್ಟವದನೆಪದ್ಮ ಗಂಧಿ | ೨೬ | ವಯ್ಯಾರವನು ಬಿಡು | ಅಖಿಲಸ್ತ್ರೀಯರಿಗೆಲ್ಲ | ದಮ್ಮೈಯ್ಯಯೆನುತಿರು | ಹೋಗುನೀನುದಮ್ಮೈಯ್ಯ ಯೆನುತಿರುಹೋಗು | ೨೭ | ಸಾರಹೃದಯಚಕ್ರಿ | ಪಾದಪಂಕಜಕನ್ನಡಿ | ಕೇಳಮ್ಮ ಯನ್ನೆ ಹೆಸರುಕನ್ನಡಿಕೇಳಮ್ಮಯೆನ್ನ ಹೆಸರು | ೨೮ | ಚಿದ್ರೂಪಪತಿತಿಲ | ಕುಸುಮನಾಸಿಕೆ ಕೇಳು | ವಿದ್ರುಮಧರೆಹೆಸರೇನೆ | ನಿನ್ನ ವಿದ್ರೂಮಧರೆ ಹೇಸರೇನೆ | ೨೯ | ಭದ್ರಗಮನೆಸಾರ್ವ | ಭೌಮಸರ್ದ್ಧಾಂಗಿ | ಸುಭದ್ರೆ ಕೇಳಮ್ಮ ಯೆನ್ಹೆಸರು | ಸುಭದ್ರೆಕೇಳಮ್ಮಯೆನ್ಹೆಸರು | ೩೦ | ಅಣ್ಣನೀನೇನುಕೊಡುವೆ | ನಮ್ಮತ್ತಿಗೆಯುಬಣ್ಣ | ಗಾತಿಯುಕೊಡುವಳಲ್ಲಾ | ಯಿವಳುಬಣ್ಣಗಾತಿಯು ಕೊಡುವಳಲ್ಲಾ | ೩೧ | ಬಣ್ಣಬಾಯ್ದೆರೆಯಳೆಬೇಡಿದುದೀವೆನು ಕಣ್ಣಿಟ್ಟದ್ದನ್ನು ಕೇಳು ತಂಗಿ | ನೀನು ಕಣ್ಣಿ ಟ್ಟದ್ದನ್ನು ಕೇಳು ತಂಗಿ | ೩೨ | ಅಣ್ಣ ನಿನ್ನಯಕರ | ಕಮಲ ಮುದ್ರಿಕೆಯ | ಹೊಂಬಣ್ಣ ದೆಳೆಯಕಂಠಿಕೆಯ | ಕೊಡುಹೊಂಬಣ್ಣದೆಳೆಯ ಕಂಠಿಕೆಯ | ೩೩ | ಮಂಗಲಾಭರಣವ | ತಂಗಿಯರಿಗೆ ಕೊಟ್ಟು ತನ್ನಂಗನೆಯನು ಕೈಹಿಡಿದು | ತನ್ನ ಅಂಗನೆಯನ್ನು ಕೈಹಿಡಿದು | ೩೪ | ಬಂದುಮಂಚದ ಮೇಲೆ | ಕುಳಿತನುಚಕ್ರೇಶ | ತನ್ನ ಅಂಗನೆ ಸುಭದ್ರೆ ಸಹಿತ | ತನ್ನಂಗನೆಸುಭದ್ರೆ ಸಹಿತ | ೩೫ | ಕಣ್ಣಬೆಳ್ದಿಂಗ ಳಿಂದದಿ | ಲೋಕವಾಲಿಸುತಣ್ಣ | ಗಿರೆಂದುಹರಸಿದೆವು | ನಾವುತಣ್ಣಗಿರೆಂದು ಹರಸಿದೆವು | ೩೬ |

* * *

ರಾಗಖರಹರಪ್ರಿಯರೂಪಕಆರತೀಪದ

ಪುರುಪರಮೇಶಗೆ | ವರಸುವರ್ಣ್ನಭಾಸಗೆ | ಪ | ಕುರವಿಂದದಾರತಿಯನು | ಸುರತರುಣಿ ಯರೆತ್ತಿರೆ | ಅಪ | ಪುರುಚಿನಪನ ದಕ್ಷಿಣದೊಳ್ | ಉರುಯಶಸ್ವತಿಯು ಎಡದೊಳ್ | ಪರವರ್ಣ್ನಿನಿಸುನಂದೆಯುಂ | ವರಹಸೆಯೊಳ್ | ವೈಖರಿಯೊಳು | ೧ | ಭವನವಾಸಿನಿಯರು ಬಂದು | ಭುವನಪತಿಗೆಮೋದದಿಂ | ಭವನಲೋಕದ ಮಣಿಗಳಿಂ | ಜವದೊಳಾರತಿಯನು | ಭೌಮವಾಮೆಯರು ಜ್ಯೋತಿ | ರ್ಬ್ಭಾಮಿನಿಯರಾದರದೊಳು | ವ್ಯೋಮಗಾಮಿನಿಯರುಂ | ಪ್ರೇಮದೊಳಾರತಿ ಯನು | ೩ | ಲಲಿತಗೀತನೃತ್ಯದಿಂ | ವಿಲುಲಿತಾಹಾರೆಯರ್ | ಮಲಯಪುರದ ವೃಷಭಜಿನಗೆ | ಲಲನೆಯರುವಿಶಿಷ್ಟರು | ೪ |

* * *

ಬ್ರಾಹ್ಮಿಲಾದೇವಿಯ ಆರತೀಹಾಡು ರಾಗ ದರ್ಬಾರುತ್ರಿಪು

ಪುರಹೂತವಿನುತೆಗೆ | ನರನಾಥನಮಿತೆಗೆ | ಪರಮಜಗನ್ಮಾತೆಗೆ | ಸುರಸತಿ ಮೊದಲಾದ | ವರವನಿತೆಯರಿಂದ | ಭರದಿಂಸೇವಿತಳಾದ ಶ್ರೀಬ್ರಾಹ್ಮಿಲೆಗೆ | ಮರಕದಾರತಿಯ ಬೆಳಗಿದರು | ೧ | ತ್ರೈಲೋಕ್ಯಪತಿಯಸತ್ಕಾಲದೊಳ್ಪ್ರಸವಿಸೆ | ಭೂಲೋಕದೊಳ್ ಸ್ತ್ರೀಯಾಗಿ | ಜಾಲಾದಿಂಪರ್ತ್ತಿಪಲೋಲಾಕ್ಷಿಬ್ರಾಹ್ಮಿಲೆಗೆ | ಲೀಲೆಯಿಂಮೂರುಭವದಿಮುಕ್ತಿ ಗಾಮಿನಿಗೆ | ಶೀಲೆಯರಾರತಿಯಬೆಳಗಿರೆ | ೨ | ವಿಶ್ಯಸೇನಸತಿಗೆ | ವಿಶ್ವೈಕವಂದೈಗೆ | ವಿಶ್ವೇಶ್ವರಿಖ್ಯಾತೆಗೆ | ಶಾಶ್ವತಸುಖ ಪ್ರದಭರ್ಮಾದ್ರಿವಾಸಶ್ರೀ | ಪಾರ್ಶ್ವೇಶಮಾತೆಗೆ | ಶಶ್ವನ್ನಾರಿಯರು | ವಿಶ್ವಾಸದೊಳಾ ರತಿಯ ಬೆಳಗಿರೆ | ೩ |

* * *

ರಾಗಸುರಟರೂಪಕಸರಸ್ವತಿಯಮ್ಮನವರ ಆರತೀ ಹಾಡು

ನೀರೆಯರಾರತಿಯನೆತ್ತಿರೆ | ಶಾರದಾಂಬೆಗೆ | ಪ | ತ್ರೈಜಗತ್ತಿಗೆರೆಯನಾದ | ಶ್ರೀಜಿನಾಬ್ಜ ವದನದಲ್ಲಿ | ನೈಜದಿಂದನಿಜಸಿಮಹಾ | ತೇಜದಿಂದರಾಜಿಪಳಿಗೆ | ೧ | ವಾಣಿ ಕಲ್ಯಾಣಿ ನಿಪುಣೆಕ್ಷೋಣಿಗೈಕನಿಖಿಲಪ್ರಾಣಿ | ಏಣನೇತ್ರೆಉರಗವೇಣಿ | ಮಾಣದೀಗ ವಂದನೆಮಾಡಿ | ೨ | ಕನಕಖಚಿತ ವಜ್ರದಹಸೆಯೊಳ್‌ | ವಿನಮಿತಾಮರವ್ರಜಳಿಗೆ | ಮುನಿವಿನೂತಭಾರತಿಗೆ ಚಿನುಮಮಾಂಗಿಗೆಸುಮುದದಿಂ | ೩ |

* * *

ಆಶೀರ್ವಾದ

ಆಯುರ್ವ್ವೃದ್ಧಿಯು | ಶ್ರೀಯುಸಮೃದ್ಧಿಯು | ಪ | ಜಾಯಾಪ್ರಿಯರಿಗೆಸುಖೋ | ವಾಯದಿಂದಾಗಲೀ | ಅನ | ಸಂಚಿತಸುಕೃತದಿ | ಪಂಚಕಲ್ಯಾಣಪ್ರ | ಪಂಚದೊಳೆಸೆವರ ಹಂತರದಯದಿಂ | ೧ | ಅಷ್ಟಕರ್ಮ್ಮವ ಮುನ್ನ | ನಷ್ಟಪಡಿಸಿಮತ್ತೆ | ಅಷ್ಟಗುಣ ವತಾಳ್ದಸಿದ್ಧರುಜಯದಿಂ | ೨ | ಪಂಚಾಚಾರದಿ | ಚಂಚಲಿಸದೆನಿ | ಶ್ಚಿಂತದಿಯೆಸೆವಾ ಚಾರ್ಯ್ಯರಕೃಪೆಯಿಂ | ಮಿಥ್ಯಾತ್ವವಬಿಟ್ಟು | ಸತ್ಯದಪಥವನು | ನಿತ್ಯದಿತೋರ್ಪ್ಪು ಪಾಧ್ಯಾಯರ ಕೃಪೆಯಿಂ | ೪ | ಸರ್ವ್ವಸಂಗವಬಿಟ್ಟು | ಸರ್ವ್ವರ್ದ್ಧಿಯತಾಳಿ | ಉರ್ವ್ವಿರಾಜಿತ | ಸರ್ವ್ವಸಾಧುಗಳ ಕೃಪೆಯಿಂ

* * *

ರಾಗ ಬೇಹಾಗುಮಿಶ್ರಚಾಪು

ಮಂಗಲುವೀಯಲಿ | ತುಂಗಕನಕಗಿರಿ | ಯಂಗಜಹರಶ್ರೀಪಾರ್ಶ್ವೇಶಂ | ಪ | ಶ್ರೀಮನ್ನತಸುರಮೌಲಿಘಟಿತಮಣಿ | ಸ್ತೋಮರಂಜಿತಪದಯುಗವನಜರ್‌ | ಕಾಮಹರರುಪರಮೇಷ್ಠಿಗಳೈವರ್ | ಕಾಮಿತಪ್ರದಮೂರತುನಂಗಳ್ | ೧ | ಜಿನಧ ರ್ಮ್ಮಾಗಮಬಿಂಬಾಲಯಗಳ್ | ಅನಘರ್ಪ್ಪುರು ಮುಖಜಿನಚಂದ್ರರ್‌ | ದಿನಮಣಿ ಸಂಖ್ಯಾಷಟ್ಖಂಡೇಶರ್ | ಮನುಜೇಂದ್ರರ್ಬ್ಭರತಾದಿಗಳುಂ | ೨ | ನವಬಲದೇವರ್‌ ನವಕೇಶವರುಂ | ನವಸಂಖ್ಯಾಪ್ರತಿವಿಷ್ಣುಗಳುಂ | ಭುವಿಯೊಳ್‌ ತ್ರೈಷಷ್ಟಿ ಶಲಾಕಾಖ್ಯಾ | ದಿವಿಜನುತರಾಮನುಜರ್ ಪ್ರಥಿತರ್ | ೩ | ಸಪ್ತವಿಧಾಖಿಲವರಗಣಧರರುಂ | ಆ ಪ್ತೋದಿತತತ್ವಾ ಭ್ಯಾಸರ್ | ಗುಪ್ತಿಬಲರ್ | ಸರ್ವ್ವರ್ದ್ಧಿಗಳುಂತಾವ್ | ತಪ್ತತಪೋ ಧರಮುಖಮುನಿಗಳ್ | ೪ | ಜಯೆಮುಂತಾದಷ್ಟಸುದೇವತೆಯರ್ | ನಯಯು ತವಿದ್ಯಾದೇವತೆಯರ್ | ದಯೆಗುಣಯುತಜಿನಮಾತಾಪಿತೃಗಳಾಜಯಕರಯಕ್ಷೀಯ ಕ್ಷರುಗಳ್ | ೫ | ಮೂವತ್ತೆರಡನಿಮಿಷವತಿಗಳಾತಿಥಿ | ದೇವತೆಗಳ್ಗ್ರಹವಿಸರಗಳುಂ | ಭೂವಿನುತಾಷ್ಟಸುದಿಕ್ಕನ್ಯಯಕೆಯರ್ | ಕೋವಿದದಶದಿಕ್ಪಾಲಕರುಂ | ೬ | ಜ್ಯೋತಿರ್ಷ್ಯಂ ತರಭವನಕಲ್ಪದೊಳ್ | ಪೂತಜಂಬೂಶಾಲ್ಮಲಿಗಳೊಳುಂ | ಖ್ಯಾತಿಪಡೆದಮಂ ದರಕುಲರಜತದಿ | ನೂತರುಚಕಕುಂಡಲಗಿರಿಗಳೊಳ್ | ೬ | ವಕ್ಷಾರೇಷ್ಯಾಕಾರಧರ ಗಳೊಳ್ | ಅಕ್ಷಯ ನಂದೀಶ್ವರದೀವಿಯೋಳ್ | ಲಕ್ಷಣಯುಕ್ತಾಕೃತ್ತಿಮವರಸಹ | ಸ್ರಾಕ್ಷಪೂಜ್ಯಚೈತ್ಯಾಲಯಗಳ್ | ೮ | ಚೌವ್ವೀಸ ಜಿನರಮುಕ್ತಿಸ್ಥಳಗಳ್ | ಭೂವಂದಿತತೀ ರ್ತ್ಥಕರರ್ಗ್ಗೆ | ದೇವರಚಿತ ಪೂಜಾಮಹಿಮಾಯುತ | ಪಾವನ ಪಂಚಕಲ್ಯಾಣಗಳುಂ | ೯ | ಶ್ರೀಜಿನ ಪೂಜಾಫಲದಿಂನಿಮಗೆ | ತೇಜಸ್ಕೀರ್ತ್ತಿಮನೋರಥಗಳ್ | ನೈಜಾ ರೋಗ್ಯಸುಧರ್ಮ್ಮಗಳಾಗಲೀ | ರಾಜಿವಾಯುಃ ಶ್ರೀವರ‍್ಧಿಗಳುಂ | ೧೦ |

* * *

ಆಶೀರ್ವ್ವಾದ ರಾಗ ಕಮಾಚು ರೂಪಕತಾಳ

ಭೋಗಭಾಗ್ಯಭಾಗಿಯಾಗಿರಿ | ನಾಗಿಣಿಕಟಾಕ್ಷದಿಂ | ಪ | ಬೇಗದಿಂಪರಸ್ಪರಾನು | ರಾಗರಸಾಂಬುಧಿಮಗ್ನರಾಗಿರಿ | ಅಪ | ಪುಣ್ಯವಂತನಾಗುನರವ | ರೇಣ್ಯನುಸ ದ್ಗುಣಿವರನೆ | ಮಾನ್ಯನುಕ್ಷೋಣಿಯೊಳಗ್ರ | ಗಣ್ಯನುಸ್ಥಿರ ಜೀವಿಯಾಗು | ೧ | ನಿತ್ಯಮಂಗಳೆಯಾಗಿ ಇಳೆಯೊಳ | ಸತ್ಯವಾಡದೆವಧುಪಾತಿ | ವ್ರತ್ಯವಂತೆಯನಿಸಿರುಕೃತ್ಯಾ | ಕೃತ್ಯಪರಿಣತೆಯಾಗಿ ಬಾಳೌ | ೨ | ಧರ್ಮ್ಮಕರ್ಮ್ಮವರಿತುನಡೆಯಿರಿ | ಮರ್ಮ್ಮವರ್ತ್ತನೆ ಯೆಸಗದಿರಿ | ನರ್ಮ್ಮಕರ್ಮ್ಮದಿಂದನೀವ್ ಸೌ | ಧರ್ಮ್ಮಸುತಜಿನನನುಬಿಡದಿರಿ | ೩ | ಬಂಧುಬಳಗಸಮೃದ್ಧಿಯಾಗಿ | ಸಿಂಧುವೋಲ್ಗಂಭೀರರಾಗಿ | ಕುಂದದೌ ದಾರಿಗಳಾಗಿ | ಕಂದಗಳ್ ನಿಪುಣರು ಪುಟ್ಟಲಿ | ೪ | ಧರೆಯೊಳು | ಕನಕಶಿಖರಿ ಯೊಳು | ವರಪದ್ಮಾವತಿಕೃಪೆಯಿಂ | ವರವಧುಗಳ್ ನಿರ್ವ್ವಿಘ್ನದಿ | ಉರುಸಮ್ಯಕ್ತ್ವದಿಬಾಳಲಿ | ೫ |

* * *

ಆಶೀರ್ವಾದ, ರಾಗಜುಂಜೋಟರೂಪಕ

ಚಿರಜೀವಿಗಳಾಗಿರಲೀ ಮಿಥುನಂ | ವರಹೇಮಚಲಪದ್ಮಾವತಿಕೃಪೆಯಿಂ | ಪ | ಸದಾನುಸೌಭಾಗ್ಯವ್ರಜ | ಪ್ರದಾಯಕಿವರಪದ್ಮಾವತಿದಯೆಯಿಂ | ೧ | ತ್ರಿಕಾಲದೊಳ್ಕೃತ ಸ್ತುತಿ | ಪ್ರಕಾಮಿತಫಲಭಾಗ್ಯಾಧಿಕರಾಗಿರಿ | ೨ | ಫಣಾಮಣಿಪ್ರ ಭೂಷಣ | ತ್ರಿಣೇತ್ರಯುತಸುಪದ್ಮಾವತಿಕೃಪೆಯಿಂ | ನಿರಂತರಂಪರಸ್ಪರಾ | ನುರಾಗರಸಸಮು ದ್ರೋದರದೊಳಿರಿ | ೪ | ಸುಧರ್ಮ್ಮದೊಳುದಾರದೊಳ್ | ಸುಧೀಯುತರೆನಿಸಿರಿ ದಂಪತಿಗಳ್ನೀಮ್ | ೫ |

* * *

ಹೋಮ ಪ್ರದಕ್ಷಿಣೆಮಾಡುವಾಗ ಹೇಳುವ ಹಾಡು,
ರಾಗಹುಸೇನಿಆದಿತಾಳ

ಪಾವನತ್ರೇತಾನಲಗಳನು | ಸೇವಿಸಿದಂಪತಿಗಳ್ ಬಲಗೊಂಡರು | ಪ | ಭಾಮಿಸಿ ವಿಶ್ವಾಭ್ಯುದಯನಿಶ್ರೇಯಸಸಿದ್ಧಿಯಂ | ಅಪ | ಶಾಂತಿಕಹೋಮವದಿವದೊಳ್ | ಕಾಂತೆಯಕರದತ್ತವಸ್ತುಗಳಿಂದ | ಕಾಂತನುಚತುರಾಹುತಿಗಳನು ಕ್ರಮದೊಳೆಸಗಿ | ೧ | ಪೌಷ್ಠಿಕಹೋಮದೊಳ್ನಿಶಿಯೊಳ್ | ಶ್ರೇಷ್ಠಸುಹಸೆಯೊಳು ಪವಿಷ್ಟರಾಗಿ | ತುಷ್ಪಭಕತಿಯೊಳು ಪೂರ್ಣ್ನಾಹುತಿಯೊಳುನಿಂತು | ೨ | ಸಾವಧಾನದಿಮೂರುಸೂಳ್ | ಪಾವಕಕುಂಡತ್ರಯದ ಚೌದಿಕ್ಕಿನೊಳು | ತ್ರಾವತ್ತ್ಯೇಕಶಿರೋನ್ನತಿಗಳ ನೆಸಗಿ | ೩ | ಕಲಕೀರನಿಭವಾಣಿಯು | ಜಲರುಹಗಂಧಿಯುಸಾಧ್ವಿಯುಪಧುವು | ಸುಲಲಿತ ಸಂಹನನಪತಿಯಪದವನುಸ್ಮರಿಸಿ | ೪ | ಕನಕಾದ್ರಿಪಾರ್ಶ್ವೇಶನ | ಮನಧಿಜಾನಿಸಿ ಜಾಯಾಪತಿಗಳ್ | ಘನತರಭಕುತಿಯೊಳು ಪ್ರದಕ್ಷಿಣೆಯೊಳೆಸೆದರ್ | ೫ |

* * *

ಪದ್ಮಾವತಮ್ಮನವರ ಶೋಭಾನೆ

ಬಾರಮ್ಮಯನ್ನಭಾಗ್ಯದಲಕ್ಷ್ಮೀಫಣಿವೇಣಿ | ತೋರಮ್ಮಭಯವನು | ಮೂರ್ಲ್ಲೋಕ ದೊಡತಿಯೆಂದೆನಿಸಿಪ್ರಜ್ವಲಿಸಿದೆ | ಈಜಗವರದೆಸಲಹೆಧರಣನ ಪ್ರೀಯೆ | ಶ್ರೀಜಗದಾಂ ಬೆಯನು ಕರೆದರು | ೧ | ಕಳಕಳಿಸುವಪುಟ್ಟಕದಪಿಲಿಹರಳೋಲೆ | ಸುಳಿನಾಭಿಯರಸಿ ಪದ್ಮಾಂಬೆಯಲ್ಲಿಗೆಯೆ | ಕಳಕಳಿಸುವಮುಖವನಜಪ್ರಕಾಶನ | ಇಳೆಯಾಣ್ಮನಾದ ಶ್ರೀಧರಣರೋಲಕಮ್ಮನಳಿನಾಕ್ಷಿಯರ‍್ಹಾಸೆಗೆ ಕರೆದರು | ೨ | ಚಂದ್ರಗಾವಿಯನುಟ್ಟು | ಇಂದ್ರಮಾಣಿಕವಿಟ್ಟು | ಚಂದ್ರಬಿಂಬವೆಗುಣ ಸಾಂದ್ರೆಯಲ್ಲಿಗೆಯೆ | ಇಂದ್ರದಿಕ್ಕಿನಲ್ಲಿರುವ ಮಂದರಪತಿಯಾದ | ಚಂದ್ರಪೂಜಿತ ಜಿನಚಂದ್ರರೋಲಗಲಕೆ | ಚಂದಿರವದನೆಯರು ಕರೆದರು | ೩ | ಮೊಲ್ಲೆಮಲ್ಲಿಗೆ ಜಾಜಿಸುರಗಿಸಂಪಿಗೆ ಸಹ | ಉಲ್ಲಾಸದೊಳುಪೋ ಲ್ವಚಲ್ವೆಯಲ್ಲಿಗೆಯೆ | ಫುಲ್ಲಬಾಣನಗೆಲ್ದುಸಲ್ಲೀಲೆಯೊಳುನಿಂದ | ಬಲ್ಲಿದ ಶ್ರೀಮಲ್ಲಿ ನಾಥರೋಲಗಕೆ ಪುಲ್ಲಾಕ್ಷಿಯರ‍್ಹಾಸೆಗೆ ಕರೆದರು | ೪ | ಧರಣರಾಜನ ಪಟ್ಟದರಸಿಯಂ ದೆನಿಸಿದೆ | ಶಿರಿಭಾಗ್ಯಶರಧಿಗಂಭಿರೆಯಲ್ಲಿಗೆಯೆ | ತರಣಿಕೋಟಿಸುಪ್ರಕಾಶಪಾರ್ಶ್ವೇಶನ ಚರಣಸೇವಯಮಾಳ್ಘೆವೆಂಬತವಕದಿ | ತರಳಾಕ್ಷಿಯರ‍್ಹಾಸೆಗೆ ಕರೆದರು |

* * *

ಮಂಗಳಾರತಿ

ಜಯವೃಷಭೇಶಗೆ | ಜಯನಾಭಿರಾಜಗೆ | ಜಯಮರುದೇವಿಯಶಸ್ವತಿ ಸುನಂದೆಗೆ | ಜಯ ಗೋಮುಖಚಕ್ರೇಶ್ವರಿಭರತೇಶಗೆ ಜಯವೃಷಭಸೇನಗೆ | ಜಯಭುಜಬಲಿಗೆ ಜಯವೆಂದಾರತಿ ಬೆಳಗಿದರು | ೧ | ಜಯಚಂದ್ರಪ್ರಭನಿಗೆ | ಜಿತಚಂದ್ರಪ್ರಭನಿಗೆ | ಜಯಮಹಾಸೇನೆಗೆ | ಜಯಶ್ರೀಸುನಂದೆಗೆ | ಜಯವಿಜ ಯಯಕ್ಷೆಗೆ | ಜಿನಧರ್ಮ್ಮಪಕ್ಷಗೆ ಜಯಜ್ವಾಲಾಮಾಲೆಗೆ | ಧೃತಪುಷ್ಪ ಮಾಲೆಗೆ | ಜಯವೆಂದಾರತಿಯ ಬೆಳಗಿದರು | ೨ | ಜಯಶೀತಲೇಶಗೆ | ನುತಭೂತಲೇಶಗೆ | ಜಯದೃಢರಥಗೆ | ಜಯಲಕ್ಷ್ಮಣಿಗೆ | ಜಯಬ್ರಹ್ಮರಾಯಗೆ | ದೃಢಶುಭಕಾಯಗೆ | ಜಯ ಮಾನವಿಗೆ | ನುತಮಾನವಿಗೆ | ಜಯವೆಂದಾ ರತಿಯಬೆಳಗಿದರು | ೩ | ಜಯನೇಮಿನಾಥಗೆ | ಮುಕ್ತಿಶ್ರೀನಾಥಗೆ | ಜಯಸಿಂಧುವಿಜಯಗೆ | ಜಯಶಿವದೇವಿಗೆ | ಜಿಯಸರ್ವ್ವಾಹ್ಣಗೆ | ಧೃತಧರ್ಮ್ಮ ಚಕ್ರಗೆ | ಜಯಕೂಷ್ಮಾಂಡಿಗೆ ಭುವನ ಪ್ರಚಂಡೆಗೆ | ಜಯವೆಂದಾರತಿಯ ಬೆಳಗದಿರು | ೪ | ಜಯಪಾರ್ಶ್ವನಾಥಗೆ | ಲೋಕೈಕನಾಥಗೆ | ಜಯವಿಶ್ವಸೇನೆಗೆ | ಜಯಬ್ರಾಹ್ಮಿಲೆಗೆ | ಜಯಧರಣೇಂದ್ರಗೆ | ನುತಫಣೀಂದ್ರಗೆ | ಜಯಪದ್ಮಾವತಿಗೆ | ಜಯಗುಣವತಿಗೆ ಜಯವೆಂದಾರತಿಯ ಬೆಳಗಿದರು | ೫ | ಜಯ ಮಹಾವೀರಗೆ | ಜಲಧಿಗಂಭೀರಗೆ | ಜಯಸಿದ್ಧಾರ್ತ್ಥಗೆ | ಜಯಪ್ರಿಯ ಕಾರಿಣಿಗೆ | ಜಯಗೌತಮನಿಗೆ | ಜಯ ಮಾತಂಗಗೆ | ಜಯ ಸಿದ್ದಾಯಿನಿಗೆ | ಶುಭಫಲದಾಯಿನಿಗೆ ಜಯವೆಂದಾರತಿಯಬೆಳಗಿದರು | ೬ | ಜಯ ವಧೂವವರಿಗೆ ಜಯಮಾಣವಕರಿಗೆ ಜಯ ಕನ್ನಿಕೆಯರ್ಗ್ಗೆ | ಜಯಶಿಶುಗಳಿಗೆ | ಜಯಪ್ರಸ್ತುತಗೃಹ | ಸ್ಥಿತ ಬಂಧುಜನರಿಗೆ | ಜಯಮಾತಾಪಿತೃಗಳಿಗೆ | ಜಯಸರ್ವ್ವರಿಗೆ ಜಯವೆಂದಾರತಿಯ ಬೆಳಗಿದರು | ೭ |

ಜಯಶಾಂತಿಜಿನನಿಗೆ | ಜಯಕಾಂತಿಯುತನಿಗೆ | ಜಯಕಾಮದೇವಗೆ | ಜಯಸೌಮ್ಯಭಾವಗೆ | ಜಯಚಕ್ರೇಶಗೆ | ನುತಚೆಕ್ರೇಶಗೆ | ಜಯಷೋಡಶತಮ | ಜಯತೀರ್ತ್ಥಂಕರನಿಗೆ | ಜಯಭೃತಭವ್ಯಗೆ | ಕವಿಕೃತಕಾವ್ಯಗೆ | ಜಯ ಸುರಸೇಪ್ಯಗೆ | ಮುನಿಸಂಶ್ರಾವ್ಯಗೆ | ಜಯವೆಂದಾರತಿಯ ಬೆಳಗಿದರು | ೧ | ಜಯಜಿನಪಾಣಿಗೆ | ಜಯಪ್ರಜ್ಞಶಾಣೆಗೆ | ಜಯಸೂಕ್ಷ್ಮಧಿಷಣೆಗೆ | ನಯನ ಜಿತೇಣಿಗೆ | ಜಯಕರ್ಮ್ಮಕೃವಾಣಿಗೆ | ಜಯಜಲಧಿದ್ರೋಣಿಗೆ | ಜಯ ನೀಲವೇಣಿಗೆ | ಜಯಧೃತವೀಣೆಗೆ | ಜಯಕಲ್ಯಾಣಗೆ | ಜಯಪದ್ಮವಾಣಿಗೆ | ಜಯನಿಃಶ್ರೇಣಿಗೆ | ಜಯಗುಣಮಣಿಗೆ | ಜಯವೆಂದಾರತಿಯಬೆಳಗಿದರು | ೨ | ಜಯಬ್ರಹ್ಮೇಶಗೆ | ಕಾರಾಪುರೇಶಗೆ | ಜಯಘೋಟಕಾರೂಢಗೆ | ಭಯರೂಪ ಗೂಢಗೆ | ಜಯಖಡ್ಗಹಸ್ತಗೆ | ಭೂವನಪ್ರಶಸ್ತಗೆ | ಜಯರತ್ನಭೂಷಗೆ | ಜಯಭೀಮವೇಷಗೆ | ಜಯಪುಣ್ಯ ಮೂರ್ತ್ತಿಗೆ | ವಿಖ್ಯಾತಕೀರ್ತ್ತಿಗೆ | ಜಯಜಿತಕಾಮಗೆ | ಪರಮತಭೀಮಗೆ | ಜಯವೆಂದಾರತಿಯ ಬೆಳಗಿದರು | ೩ | ಜಯಜ್ವಾಲಾಮಾಲೆಗೆ | ಧೃಡ ರತ್ನಮಾಲೆಗೆ | ಜಯಚಂದ್ರನಾಥನಪದಪಂಕಜಾಳಿಗೆ | ಜಯಸೀತರೂಪೆವಿಜಯಯಕ್ಷ ಮಹಿಷೆಗೆ | ಜಯಭಕ್ತಿಗಾಢೆಗೆ | ಮಹಿಷಾರೂಢೆಗೆ | ಜಯಸುಪ್ರಶಸ್ತಗೆ | ಧೃತ ಅಷ್ಟಹಸ್ತೆಗೆ | ಜಯಉದ್ಯೋಗಪುರಸ್ಥಿತಮಾತೆಗೆ | ಜಯವೆಂದಾರತಿಯ ಬೆಳಗಿದರು | ೪ | ಜಯ ಪಾರ್ಶ್ವಯಕ್ಷಿಗೆ | ಜಯಪಂಕಜಾಕ್ಷಿಗೆ | ಜಯಭವ್ಯರಕ್ಷೆಗೆ | ಪರಮತಶಿಕ್ಷೆಗೆ | ಜಯಜೈನಪಕ್ಷೆಗೆ | ಭಕ್ತ ಸಂರಕ್ಷಗೆ | ಜಯಸೂಕ್ಷ್ಮಕುಕ್ಷಿಗೆ ವಾಹಾಹಿಪಕ್ಷೆಗೆ | ಜಯಕಾಮಾಕ್ಷಿಗೆ | ಧೃತಪುಣ್ಯಸಾಕ್ಷಿಗೆ | ಜಯ ಫಣಿರಾಜನರಸಿಪದ್ಮಾಂಬೆಗೆ | ಜಯವೆಂದಾರತಿಯ ಬೆಳಗಿದರು | ೫ |

* * *

ಮರುದೇವಮ್ಮನವರನ್ನು ಹಸೆಗೆ ಕರೆಯುವ ಹಾಡು ರಾಗಬೇಗಡೆತ್ರಿಪುಟತಾಳ

ಶ್ರೀಮರುದೇವಿಯೆ | ರಾಮಾಕುಲಮಣಿಯೆ | ತಾಮರಸಾಂಘ್ರಿಯೆ | ಕಾಮಿತಪ್ರದೆಯೆಂದು | ರಾಮೆಯರುಹಸೆಗೆ ಕರೆದರು | ಪ | ಲೋಕೈಕಮಾತೆಯೆ | ರಾಕೆಂದು ವದನೆಯೆ | ಪಾಕಾರಿಪೂಜಿತಯೆ | ಶೋಕಾದಿರಹಿತೆಯೆ | ಕೋಕನಿಭಕುಚ ಶುಕ ಸುವಾಣಿಯೆ | ನಾಕನರಸುರ ಫಣಿಪತೀಶರ | ನೇಕರಿಂವಂದಿತಪದಾಬ್ಜೆಯೆ | ಶ್ರೀಕರಿಯೆಶುಭಕಾರಿಯೆ | ದಯಮಾಡುಹಸೆಗೆ ಮಹಾದೇವಿ | ೧ | ಮಂದಗಮನೆಭದ್ರ | ಮಂದಿರದೊಳಗಂದ | ಬೃಂದಾರಕಬೃಂದದುಂದುಭಿ ಮೊಳಗಲು | ಸುಂದರೀ ರಂಭಾದಿನುರ್ತ್ತನ | ಗಂಧಿಗಂಧರ್ವ್ವಾದಿಗಾನಗ | ಳೆಂದವುಂಪದ್ಮಿನಿಸುಶಂಕಿನಿ | ಬಂಧುರದ ಧವಲಗಳುಢಾಳಿಸೆ | ಕುಂದಣದಹಸೆಗೆ ಕರೆದರು | ೨ | ರತಿಪತಿಸತಿಯಂ | ಅತಿಶಯರೂಪಿನಿಂ | ಗತಿಯಿಂಮರಾಳಮ | ಶತಪತ್ರಮನಕ್ಷಿಯಿಂ | ಮಥಿಸುವಾಸರ ಸತಿಯವಿದ್ಯದಿ | ಯತಿಯಮನಮತಿಗಾಡಿಯಿಂದಂ | ಹತಿಯಿಸುವ ಮನುನಾಭಿ ರಾನ | ಹಿತಸತಿಯೆ ಪುರದೇವಜನನಿಯೆ | ಮತಿಕುಶಲೆಯೆ ಹಸೆಗೆ ದಯೆಮಾಡು | ೩ |

* * *

ರಾಮಸೀತೆಯರ ಹಸೆಗೆ ಕರೆದ ಹಾಡು, ರಾಗಶಂಕರಾಭರಣ

ರಾಮಚಂದ್ರಸೀತೆಯರನು | ಹೇಮಖಚಿತರತುನದ್ಹಸೆಗೆ | ಸಾಮಜಾಭಗಾ ಮಿನಿಯರು | ಪ್ರೇಮದಿಂ ಕರೆದರುನುತಿಸಿ | ಪ | ಮನುಕುಲಾಂಬುನಿಧಿ ವಿಧುವನು | ಅನುಮಿಷರಿಂವಿನೂತೆಯನು | ವನಜಲೋಚನೆಯರುಭರದಿ | ವಿನಯದಿಂದ ನುತಿಸಿಪಾಡಿ | ೧ | ದಶರಥಹೃದಯಾಪಹಾರ | ವಶಕರಣಧುರೀಣೆಯಾದ | ಶಶಿಮುಖಿಪರಾಜಿತೆಯ | ಕುಶಗರ್ಭಸಾಗರಜಿನ | ಯುವತಿಕುಲಲಲಾಮೆಸುಗುಣೆ | ಭುವನದೊಳತಿಸಾಧ್ವಿಯೆಂದು | ದಿವಿಜರಚಿತ ಕುಸುಮವರ್ಷಮ | ಜವದಿತಾಳ್ದ ಭೂಸುತೆಯನು | ೩ | ಹಸ್ತಿಗಮನೆಹಸ್ತಿನಿಯರ | ಹಸ್ತಲಾಗ ಶಂಕಿನಿಯರ | ಶಸ್ತಚೌರಿಚಾಮರಗಳು | ವಿಸರದೊಳುಢಾಳಿಸುತಿರೆ | ೪ | ಚಿತ್ತಜಾತ ರಾಣಿಯರ ಮೊತ್ತದಂತೆಚಿತ್ತಿನಿಯರು | ಸುತ್ತಿಸೀತಾಸುವೃತ್ತ | ಮೊತ್ತ ಗುಣ ಕಥನಮಪಾಡಿ | ೫ | ರಾಮಚಂದ್ರಜಾನಕಿಯರ್ಗ್ಗೆ | ಭಾಮೆಪದ್ಮಗಂಧಿನಿಯರು | ಪ್ರೇಮದಿಂದ ರಚಿಸೆಮುಕ್ತಾ | ಧಾಮಸೇಸೆಗಳನುಮುದದಿ | ೬ |

* * *

ಜ್ವಾಲಿನಿಯಮ್ಮನವರನ್ನು ಹಸೆಗೆ ಕರೆಯುವ ಹಾಡು, ರಾಗಕಲ್ಯಾಣಿಮಿಶ್ರಚಾಪು

ಚಂದ್ರಪ್ರಭಜನಪಚಂದ್ರಧ್ವಜ | ಚಂದ್ರಪುರಾಧಿಪ | ಪ | ಚಂದ್ರಕಾಂತಸಂಸ್ಪರ್ದ್ಧಿ ಸಂಕಾಶನ | ಇಂದ್ರ ವಿಜಯಯಕ್ಷಸತಿಯೆ | ದಯಮಾಡೆಂದು | ಚಂದ್ರಾಸೈಯರುಹಸೆಗೆ ಕರೆದರು | ಅಪ | ಸುರುಚಿರಹೀರಸನ್ನಿಭಸುಶರೀರಯೆ | ಕರುಣಾರ್ದ್ರ ಹೃದಯೆಭ ಜಕವರ್ಯ್ಯಪಾಲಿನಿಯೆ | ದುರುಳಭೊತಾದಿನಿಗ್ರಹಸಂಮರ್ದ್ಧಿನಿಯೆ | ಸರಸಿಜಾಕ್ಷಿಶ್ಯಾಮಯ | ಕ್ಷಪ್ರಿಯರಾಣಿಯೆ | ಮರಕತದಹಸೆಗೆದಯ ಮಾಡು | ೧ | ಚಕ್ರ ಕಾರ್ಮ್ಮುಕಪಾಶಾಫಲಕವಾಮಹಸ್ತೆ | ಚಕ್ರಸ್ತನಿಯೆಶೂಲಬಾಣಝಷಾಸಿಕರೆ | ವಕ್ರಧರ್ಮ್ಮಿಗಳಿಗೆ | ವಕ್ರಗ್ರಹಚ್ಛವಿಯೆ | ಚಕ್ರೀಂದ್ರಭೋಗಪ್ರದಧುರಂಧರೆಸಾರ | ಸಕ್ರಮಮಂಜುಳೆಯೆದಯಮಾಡು | ೨ | ವಿಂಧ್ಯಾದ್ರಿದಕ್ಷಿಣನೀಲಾದ್ರಿಯಿಂದೈದಿ | ಉದ್ಯೋಗಪುರದಿನೆಲಸಿಭವ್ಯರಿಗೆ | ಸದ್ಯಃಫಲೋದ್ಯಾನವಿದ್ಯಾವಿದಗ್ಧೆಯೆ | ವಂಧ್ಯಾಸುತದಾನಧುರ್ಯ್ಯಸುಹೃದಯಳೆ | ಹೃದ್ಯಸುಗದ್ದುಗೆ ಗೆದಯಮಾಡು | ೩ |

* * *

ಬ್ರಹ್ಮದೇವರನ್ನು ಹಸೆಗೆ ಕರೆಯುವ ಹಾಡು, ರಾಗಕರಹರಿಪ್ರಿಯಆದಿತಾಳ

ಶ್ರೀತಲಯಕ್ಷಬಾರೈ | ನೂತರತುನದ್ಹಸೆಗೆ | ಪೂತೆಮಾನವಿಸಹಿತ | ವೀತಿವಾಹನ ಸುಮತಿ | ಪ | ಶ್ರೀಚತುರ್ವ್ವಕ್ತ್ರನೆ | ಖೇಚರಧೀರನೆ | ಶ್ರೀಚರಣಾಬ್ಜಗಳಿಗೆ | ಚಾಚುವೆನ್ನಳಕಮಂ | ೧ | ಮಾನವಿಲವನಪ್ರ | ಸೂನುಮಧುಸೇವಾ | ಧೀನರೋಲಂಬನೆ | ದೀನಜನ ಬಂಧುವೆ | ೨ | ನ್ಯಸ್ತದುರಾಗ್ರಹ | ಧ್ವಸ್ತದುಷ್ಟಗ್ರಹ ವ್ಯಸ್ತಕುಮತನಿವಹ | ಶಸ್ತಸುಖವಿಗ್ರಹ | ೩ | ಪರಶುಪಾಶಕುಠಾರ | ವರವಜ್ರಧಾರಿಯೆ | ಉರುತರಹೇಮಾಭ | ವರಮೌಲಿಧೃತಜಿನನೆ | ೪ | ಧರಣಿಕಾರಾಪುರ | ವರಮಾಣಿಭದ್ರನೆ | ಸರಸಿಜ ಪತಿಗೆಸದಾ | ವರವಿತ್ತುಪಾಲಿಪನೆ | ೫ |

* * *

ಹಿಂದೂಸ್ತಾನಿಕಾಪಿ, ವೀಳ್ಯಕೊಡುವಾಗ ಹೇಳುವ ಹಾಡು

ಸುವಿನಯದಿಂದಿತ್ತರಂ | ನವಕರ್ಪ್ಪೂರದವೀಳಯಗಳ | ಪ | ಭರತಚಕ್ರಿಯು ಪಟ್ಟ | ದರಸಿಸುಭದ್ರೆಯು | ಮಿರುಗುವಹಸೆಯೊಳು | ಮೆರೆಯುವ ಕಾಲದಿ | ೧ | ರಾಜವದನೆಯರ | ರಾಜಕುವರಿಯರ | ರಾಜಿಪಾರತಿರಾ | ರಾಜಿಸಿದಬಳಿಕ | ೨ | ಸುರಪತಿ ಸದನವೊ | ಪರಿಣಯಗೃಹವೊ | ಪರಿಪರಿ ಜನರಿಗೆ | ಪಿರಿದುಕುಶಲವೆಂದು | ೩ |

* * *

ಆಶೀರ್ವಾದ, ರಾಗಯಮುನಾಕಲ್ಯಾಣಿಆದಿತಾಳ

ಕರುಣಿಸು ಶ್ರೀಧರಣೇಂದ್ರನೆ | ಪ | ಪರಿಪಾಲಿಸುವರವಧುಗಳನು | ಅಪ | ಮುಕ್ತಾ ಹಾರಾಲಂಕೃತಕುಚಯುಗ | ರಕ್ತಾರುಣಕರಕಿಸಲಯವರವಂ | ೧ | ಓಪನಹೃದಯ ಮಮೋಹದೊಳಾಗಳ್ | ಈಪರಿಭೇದಿಪ | ಪಾಂಗವಿರಾಜಿಯ | ೨ | ದಂಪತಿಗಳ್ ನಾಗೇಂದ್ರ ಸದಯದಿಂ | ಪೊಂಪುಳಿಭೋಗಿಗಳಾಗಿರಿ ನಿಚ್ಚಂ | ೩ | ಸರ್ದ್ಧರ್ಮ್ಮ ವಬಿಡದುದ್ಧರಿಸಿರಿನೀವ್ | ನಿರ್ದ್ಧರದಿಂಸದ್ವ್ರಯವನು ಎಸಗಿರಿ | ೪ | ಸಮ್ಮತರೆನಿಸಿರಿ | ದುರ್ಮ್ಮನಬೇಡಿರಿ | ನಿಮ್ಮಯಕುಲಕತಿ | ಕೀರ್ತ್ತಿಯನೆಸಗಿರಿ | ೫ |

* * *

ಆಶೀರ್ವಾದ

ಸಂತತಾನಂದದೊಳ್ನಿಶ್ಚಿಂತೆಯಿಂಸುಖಿಸಿರಿ | ಪ | ಶಾಂತಿವಿನಯಗುಣವಾಂತ ದಂಪತಿ ಗಳ್ನೀವ್ | ಅಪ | ಭೊಗದೊಳ್ನಾಗೇಂದ್ರನೊಲ್ | ತ್ಯಾಗದೊಳ್‌ಕರ್ಣ್ನನೊಲ್ | ಸಾಗರದಂತೆಗಂಭೀರಮಾನಸರಾಗಿ | ೧ | ವಿದ್ಯೆಯೊಳ್‌ಬುದ್ಧಿಯೊಳ್ | ಶುದ್ಧ ಸಮ್ಯಕ್ತ್ಯದೊಳ್‌ | ಬದ್ಧಾದರದೊಳ್‌ | ಪ್ರಸಿದ್ಧಮಾನಸರಾಗಿ | ೨ | ಸಾರಸದ್ಧರ್ಮದೊಳು | ದಾರರುಎನಿಸಿರಿ | ಸೇರಿದಜನಕುಪಕಾರವರಚಿಸಿರಿ | ೩ | ಚಾರುಮಾಕ ಟಾಕ್ಷದೊಳ್ | ಶರದೆಯಕೃಪೆಯಿಂ | ಭೂರಿವೈಭವದಿಂದ | ಧೀರ ಮಾನಸರಾಗಿ | ೪ | ನೀತಿನೈಪುಣ್ಯರುಂ | ಖ್ಯಾತಿಸಂಪನ್ನರುಂ | ಘಾತಿವಿಜಯಪಾರ್ಶ್ವ | ನಾಥನಕರುಣೆಯಿಂ | ೫ |

ಭದ್ರಂ ಭೂಯಾತ್

* * *

ಕವಿ ವಿಷಯ

ಸ್ವಸ್ತಶ್ರೀ ವಿಜಯಾಭ್ಯುದಯ ಶಾಲಿವಾಹನ ಶಕ ೧೨೫೩ನೆ ಪ್ರಜಾಪತಿವರ್ಷದಲ್ಲಿ (೧೩೩೧ನೇ ಯಸವಿಯಲ್ಲಿ) ಸಗರ (ಸಾಗರ)ವೆಂಬ ನಗರದಲ್ಲಿ ಕೌಶಿಕಗೋತ್ರದ ವಿಠ್ಠಲದೇವ ಭಾಗೀರಥಿ ಇವರುಗಳಿಗೆ ನಾಗರಾಜನೆಂಬುವನು ಮಗನಾದನು ಈತನಿಗೆ ಮಾಸಿವಾಳ ನಾಗರಾಜನೆಂಬ ಹೆಸರು ಉಂಟು ಈತನಗುರುವು ಅನಂತವೀರ್ಯರೆಂಬುವರು. ಗುರುವಿನ ಅಪ್ಪಣೆಮೇರೆ ಸಗರದನಗರದವರಿಗೋಸ್ಕರ ಈ ಪುಣ್ಯಾಸ್ರವವೆಂಬ ಗ್ರಂಥವನ್ನು ಮಾಡಿದನು. ಇದರಲ್ಲಿ ೧೨ ಅಧ್ಯಾಯದಲ್ಲಿ ೫೪ ಕಥೆಗಳು ಇರುತ್ತವೆ. ಈ ಗ್ರಂಥದಲ್ಲಿ (೧) ದೇವಪೂಜೆ, (೨) ಗುರೂಪಾಸ್ತಿ (೩) ಸ್ವಾಧ್ಯಾಯ (೪) ಸಂಯಮ (೫) ತಪಸ್ಸು (೬) ದಾನ ಎಂಬ ಈ ೬ ವಿಷಯದಗಳಲ್ಲಿ ಪ್ರಶಿದ್ದರಾದವರ ಕಥೆಗಳು ಇರುತ್ತವೆ.

ದೇವ ಪೂಜಾವಿಷಯದಲ್ಲಿ ಪ್ರಶಿದ್ಧರಾದವರ ಕಥೆಗಳು

೧ ನೇ ಮಾಲೆಗತಿಯರ ಕಥೆ
೨ ನೇ ಮಹರಾಕ್ಷಸನ ಕಥೆ
೩ ನೇ ಮಂಡೂಕನ ಕಥೆ
೪ ನೇ ಪುಷ್ಪಾಂಜಲಿ ಕಥೆ
೫ ನೇ ಭರತನ ಕಥೆ
೬ ನೇ ಕರೆಕಂಡುವಿನ ಕಥೆ
೭ ನೇ ವಜ್ರದಂತನ ಕಥೆ
೧೨ ನೆಯ ಅಧ್ಯಾಯದ ಕೊನೆಯಲ್ಲಿರುವ ವೃತ್ತಗಳು

ಶ್ರೀ

* * *