ಶ್ರೀಶತನುತವಿನುತಫಣೇಶ | ಕೃತಪೂಜಿತದಿವಿಜಜನೇಶ | ಅತಿಸೇವಿತಮನುಜಲೋಕೇಶ | ವಿತತಪ್ರಕಾಶ | ಭೂರಿಬುಧಾನ್ವಿತ ಭವ್ಯಜನಾವಲಿ ವಾರಿಧಿವರ್ದ್ಧನಪೂರ್ನ ವಿಶೇಷ | ಸಂತತಸುಖಕೋಶ ಜಯ ಜಯ | ೧ | ಜೀವಪ್ರಮುದಿತಸಕಲಜೀವ | ಕ್ರಮ ಕಲಿತರಾಜೀವ | ಸುಮನೋಗಣಚಿತ್ರಜೀವ | ಸುಮತಿಪ್ರಭಾವ | ಮುಕ್ತಿರಮಾರಮಣೀ ಮಣಿಸಂಗಮಯುಕ್ತ ಸಮಾಚರಲಾಂಛಿತ ಭಾಮಚಂದ್ರಪ್ರಭಜಿನದೇವಜಯಜಯ | ೨ | ನಂದಾನಂದಾದಿಕ ಹೃದನುಬಂಧ | ಬಂಧಾವಾತಾನ್ವಿತೆ ಬಂಧುಬಂಧೂರಬ ಲಹವೃಂದ | ವೃಂದಾರಕ ವಂದಿವಂದಿತ ಭಕ್ತಸುರಾವಲಿ ವರ್ಷಿತಸಾಂದರನೂತನಭಾಸ್ವ ತಮಂದಮಂದಾರಕಕುಂದ ಜಯಜಯ | ೩ | ಸಾರಸರಸಕ್ಷದ್ಭೂತಕಾರ | ಕಾರೇ ಕ್ಷುಮಾಣ ನೃಲೋಕಲೋಕಾಶೇಜನಕಲೋಕ | ಲೋಕಾಹಿತನಾಕಿನಾಕಿಪರಾನ್ತಿ ವಸತ್ವಸುಚಕ್ಷುರನೇಕವಿಲೋಕಿತ | ದಿವ್ಯವಿನೂತನ ನೂತನತಮಕಾಯ ಜಯಜಯ | ೪ | ಚಂದ್ರಚಂದ್ರಾ ಭಾನುತಮುನೀಂದ್ರ ಚಂದ್ರಾಂಕಸುದಾಬ್ಧಿಚಂದ್ರ ಚಂದ್ರೇಶಸೂಸುತಚಂದ್ರ | ಚಂದ್ರೈಶಾನೃಚಂದ್ರ ಚಂದ್ರಜಿನಾಧಿಪ ಪೂಜ್ಯಪದಾಂ ಬುಜವೃಂದ ಸಮಾತಿಸಮಾಕೃತಿ ಚಂದ್ರ | ಚಂದ್ರ ಪ್ರಭಜಿನಚಂದ್ರ ಜಯಜಯ | ೫ | ಕಾಂತೆಹೃದಯಹೃದಯದೊಳುಕಾಂತೆ | ಸದಯ ಚಂದ್ರಪ್ರಭಕಾಂತ ವ್ರತಭಾಜಿತವಿ ಧುರಕಾಂತ | ಜ್ಞಾತೆಹೃದ್ಯಾಂತೆಜಾತಕೃತೋಹರಸಂಸ್ಕೃತಚಂದ್ರಜಿನಾತಿ ಮನೋಹರ ಜಲಸುಧ್ವಾಂತೆ | ಸಂತೋಷಸ್ವಾಂತೆ ಜಯಜಯ | ೬ | ಶಾಂತೆಮಹಲಾರೂಪಾ ನಿಶಾಂತೆ | ಬಹುಸುಗುಣಾಮಣಿನಿಶಾಂತೆ | ವಿಹಿತಮೋದಶಾಂತೆ ಸ್ತನಭಾರಕಾಂತೆ | ಸ್ವಾಂತಹರಾಯತವೇಣಿನೃತಾತಿ ವಸಂತಭವಾಕರ ಕಮಲಲತಾಂತೆ | ವೃಂತೋಜ್ವಲ ವೃಂತೆ ಜಯ ಜಯ | ೭ | ರಾಮೆಮತಿತತಿ ಕುಸುಮಾಭಿರಾಮೆ | ರತಿಸಮ ರೂಪಾಭಿರಾಮೆ | ಅತಿವಿಭವಾಭಿ ರಾಮೆ | ಕೃತನಸ್ತೋಮೆಸಾತಿಶಯಾಂ ಗವಿಭೂಷಿತ ಭೂಸುರನಾಕವಿಲೋಕಿತಕುಮು ಸ್ತೋಮೆ | ನೂತನತಮಬಾಮೆಜಯಜಯ | ೮ | ತೇನೆಶಾಂತರಾಜ ಪಂಡಿತೇನೆ | ಲಾಂಭೋದ್ವನ ಕೀರ್ತ್ತಿತೇನೆ | ಶಾಂತರ್ಷನುತಿ ತೇನೆ | ಪ್ರಾರ್ತ್ಥಸಂಧಾನೆ | ಸಾರ್ತ್ಥಕೆ ಶೋಭನಸಾರ ಸುನಾಮುನಿ ತೀರ್ತ್ಥಕೃತೋದ್ಧಿ ವಿವಾಹವಿಧಾನೆ ಶ್ರೇಯೋನಿಧಾನೆ.

* * *

ಆಶೀರ್ವಾದ

ಶ್ರೀಮತ್ಪಂಚಕಲ್ಯಾಣ ವೈಭವಯುತ | ಸ್ವಾಮಿ ಅರಹಂತರದಯದಿಂದ ಬೇಗದಿಂ ದಶ್ರೀಮಂತನಾಗುವಿದ್ಯಾಲಂಕೃತನಾಗು | ಶ್ರೀಮತಿಯಾಗು ಸದ್ಗುಣಿಯಾಗು | ನುತೆಯಾಗು | ೧ | ತ್ರೈಲೋಕ್ಯಾಗ್ರ ನಭಸ್ಥಿತನಿರ್ಲೇಪಾ | ಲೋಲಸಿದ್ಧರದಯದಿಂದ ಬೇಗದಿಂದ | ಮೂಲಪ್ರಕೃತಿ ವಿಘಾತಕನೀನಾಗು | ಸ್ಥೂಲಸಮ್ಯಕ್ತ್ಯಾನ್ವಿತೆಯಾಗು | ನುತೆಯಾಗು | ೨ | ಪಂಚಾಚಾರ ಪರಾಯಣರೆನಿಸಿದ | ಪಂಚಾಚಾರ್ಯರ ಕೃಪೆಯಿಂದ | ಬೇಗದಿಂದ ಸಂಚಿತಾಚಾರವರಾಯಣನೀನಾಗು | ಪಂಚಾಚಾರಾ ನ್ವಿತೆಯಾಗುನುತೆಯಾಗು | ದ್ವಾದಶಾಂಗಾದಿಚತುರ್ದ್ಧಶಪೂರ್ವ್ವಾಂತ್ಯ | ವೇದಜ್ಞೋಪಾಧ್ಯರದಯದಿಂದ ಬೇಗದಿಂದ | ಆಧಾರ ಲಬ್ಧಾಖಿಲಶೃತನಾಗುಪ್ರ ಮೋದದಿಂವಿದ್ಯಾನ್ವಿತೆಯಾಗುನುತೆಯಾಗು | ೪ | ಅಕ್ಷೂಣಶೀಲತಪವ್ರತಗಳನಾಂತ | ಮೋಕ್ಷ ಸಾಧಕಸಾಧುದೇವರ ಕೃಪೆಯಿಂದ | ಮೋಕ್ಷಲಕ್ಷ್ಮೀ ಸತ್ಕಟಾಕ್ಷಗನೀನಾಗು | ಅಕ್ಷೂಣತರಸುಖವತಿಯಾಗುನುತೆಯಾಗು | ೫ |

* * *

ಆಶೀರ್ವಾದ

ಶ್ರೀ ಮದರಹಂತರಿಗೆ | ಪ್ರೇಮದಿಂದ ಪೊಡೆವಟ್ಟು | ಭಾಮೆಶಾರದಾಂಬೆಯನು ನಾನನುತಿಪೆ | ಕಾಮರೂಪನಾದ ಗುಣೋದ್ಧಾಮನಂಣೈಯ್ಯನು ಶ್ರೀಮತಿ ಯಾಗು | ಸಖಿಯಾಗು | ೧ | ಉತ್ಸಾಹದವೇಳುಯೊಳುಸ್ವಸತಿವಚನವುಗೂಡಿ | ಮತ್ತೆ ಗುರುಹಿರಿಯರು ಬ್ರಾಹ್ಮಣ್ಯಗೂಡಿ | ಮುತ್ತಿನಕ್ಷತೆಯನಾಂತುವಿಸ್ತರದಿಂದ ಹರಸುತ | ಒತ್ತಿಲಿನಿಂದುನುಡಿದರು | ೨ | ಅಣ್ಣೈಯ್ಯನ ಹಸೆಯೊಳು | ಮನ್ನಣೆಯಿಂ ಕುಳ್ಳಿರಿಸಿ | ಬಣ್ಣಭಂಗಾರವನಿಟ್ಟುಭಾಮಿನಿಯರು | ಮನ್ನಿಸಾರತಿಯನೆತ್ತಿ ಪುಣ್ಯಭಾಗಿಯಾಗೆಂದು | ಬಿನ್ನಣದಿಂದ ಹರಸಿದರು | ೩ | ಸದ್ಧರ್ಮವ ಬಿಡದಿರು | ವರ್ದ್ಧಮಾನ ನೀನಾಗು | ವೃದ್ಧಿಯಾಗಿ ಶ್ರೀಬಲಾಯುಷ್ಯನುಸಂತತ | ಸಿದ್ಧಿಸಿನಿರೋಗಿಯಾಗಿ ಬುದ್ಧಿವಂತನಾಗಿಜನಕ | ಮುದ್ದಾಗಿ ನೀನು ಸುಖಿಯಾಗು | ೪ | ಜೀರ್ಣ್ನಜಿನಚೈತ್ಯಾಲಯವರ್ಣ್ನರಾಜ್ಯ ಭ್ರಷ್ಟರನ್ನು | ಪೂರ್ಣ್ನ ವಾಗುದ್ಧಾರಮಾಡು ನಿರ್ಣ್ನಯದಿಂದ | ಕಣ್ನಂನಂತೆ ತ್ಯಾಗಿಯಾರು ಅರ್ಣ್ನವ ಗಂಭೀರನಾಗು | ನವಗೆ ಉನ್ನತತೌರುಮನೆಯಾಗು | ೫ | ದಾನಪೂಜೆಶೀಲೋಪಾಸ | ದಾನಿಯ ಮವನುಬಿಡದೆ | ಜ್ಞಾನಿಗಳ ವಡನಾಡಿ ಜ್ಞಾನಮೌನದಿ | ಸಾನುರಾಗದಿಂದ ತಾಳಿ ಶ್ರೀನಿವಾಸನೀನಾಗು | ಜೈನಧರ್ಮವಬಿಡದಿರು | ೬ | ಲೆಕ್ಕವಿಲ್ಲದನ್ನಛತ್ರ | ಮಕ್ಕಳೋ ದಿಸುವಮಠ ಲೆಖ್ಖದರವಟ್ಟಿಗೆಯಭಾವಿಕೆರೆಗಳ | ಇಕ್ಕಿಸಿನಿಚ್ಚಲು ನೀನು | ರೊಕ್ಕವು ಳ್ಳನಾಗಿಜಗದಿ | ಚಿಕ್ಕಣ್ಣ ನೀನು ಸುಖಿಯಾಗು | ೭ | ಅನ್ನದಾನಕನ್ಯಾದಾನವಸ್ತ್ರದಾನ ಮೊದಲಾಗಿ | ನಿನ್ನಿ ಶಕ್ತಿಮರಸದೆಚನ್ನಾಗಿನಡಸು | ಮುನ್ನಮಾತೃಪಿತೃಗಳ ಮನ್ನಿಸಿಯನುಜೆಯರಿಗೆ | ಉನ್ನತತವರು ಮನೆಯಾಗು | ೮ | ಸಾಗಾರಾನಾಗಾರ ಧರ್ಮಗಳನೀನುನಡೆಸುತ ಭೋಗದೊಳಗಿರು ಸಮ್ಯಕ್ತ್ಯವನು ಬಿಡದೆ | ಶ್ರೀಗಧೀಶನಾಗಿ ಮುಂದೆಯೋಗಿಯಾಗಿ ಪುಣ್ಯರಾಸಿ ಆಗುಜಿನೇಂದ್ರರಕೃಪೆಯಿಂದ | ೯ |

* * *

ರಾಗ-ಕಾಂಭೋಧಿ ಅಥವಾ ಬೇಗಡೆ ಅಥವಾ ಕಮಾಚು
ತ್ರಿಪುಡತಾಳ – ಋತುವಾದ ಕಾಲದಲ್ಲಿ ಹೇಳುವ ಶೋಭಾನೆ

ಗಗನವಲ್ಲಭಪುರಕೆ | ಅಧಿಪತಿಯಾದ | ಅಗಣಿತವಿಕ್ರಮಿಯ | ಸೋದರಿಯಾದ | ಸುಗುಣೆಯ ಶಸ್ವತಿಯು | ಪೂರ್ವಾಹ್ಣಕಾಲದೊಳ್ | ಮಿಗಿಲಾದಶುಭ ಲಗ್ನದೊಳ್ | ಪಂಚಾಂಗಶುದ್ಧಿಯು | ಬಗೆಂಯೆಧವಲಾಂಬರವುರಾಜಿಸೆ | ಝಗಝಗಿಪಮು ಕ್ತಾದಿಹಾರವು | ಮಿಗೆಸುವಾಸಿನಿಗಣವು ನೆರೆದಿರೆ | ಸೊಗಸಿನಿಂ ಪ್ರಥಮರ್ತ್ತುವಾದಳು | ಗಗನಚರಿಯೆಹಸೆಗೇಳು | ೧ | ಬಿಸಜಗಂಧಿನಿಯಾಗಳ್ | ಸೌವಾಸಿನಿಯರಿಂ | ಕುಸುಮಗುಚ್ಛಮಧರಿಸೆ | ವಿದ್ಯಾಧರೇಶಗೆ | ಸಸಿವದನೆಯರೆರಗಿ | ಮನವರಿಕೆ ಮಾಡೆ | ಬೆಸಗೊಳಲ್ಮಂತ್ರೀಂದ್ರನು | ಜೋತಿಷ್ಕವರ್ಯರು | ಉಸುರಿದರ್ಷ್ಟಟ್ಖಂಡಪ ತಿಯಾಗೆಸೆವ ಓರ್ವಸುಪುತ್ರನಂ | ಅಸದೃಶಪರಾಕ್ರಮಿಗಳ್ ಶತಸುತ | ರೆಸಗುವರ್ಸ್ಸೌಭಾಗ್ಯವತಿಗೆಂದು | ನಸುನಗುತ ಸೆಗೆಹಕರೆದರು | ೨ | ಉತ್ತಮಾರ್ಯಿ ಕೆಯಾಗಳ್ | ಕನ್ಯಾಮಣಿ | ಮತ್ತೋರ್ವಳುದ್ಭವಿಪಳ್ | ಎನ್ನಲವರ್ಗೆ ಇತ್ತನುತ್ತ ಮರತ್ನಮಂ | ಅತ್ತಲ್ ಸುತ್ತ | ಮತ್ತಕಾಶಿನಿಯರ್ಸ್ಸೇರಿ | ಸಡಗರದೊಳಾಗಳ್‌ | ಚಿತ್ತಜನಸತಿಜರೆವಸಿಂಗರ | ವೆತ್ತಮತ್ತೇಭೇಂದ್ರಗಮನೆಗೆ | ಮುತ್ತು ರತ್ನಾದಿಗಳ ಮಡುಲೊಳ | ಗೆತ್ತಿಸುರಿದರ್ಸ್ಸತ್ಫಲಂಗಳ | ಮುತ್ತೈದೆಯರ್ಬ್ಬಿತ್ತರದಿಂದ | ೩ | ಋತುಮತಿಯಶಸ್ವತಿಗೆ | ಹಿತಸತಿಯರಾಗಳ್ | ಸತತಮಂಗಲೆಯಾಗೆಂ ದುಕುಂಕುಮಚಂದ್ರ | ವಿತತಹರಿದ್ರಗಳಂ | ನೀಲಾಂಜನಾದಿಯ | ನತಿಶೋಭೆಯಿಂ ರಚಿಸೆ | ಕಸ್ತೂರಿತಿಲಕಮ | ಮಥಿಪಷ್ಟಮಿಚಂದ್ರನಂತಿಹ | ನುತಿಪಪಣೆ ಯೊಳಗಿಟ್ಟುಚರಣಕೆ | ಲತೆಯನರುಣದುಕೂಲವಸ್ತ್ರಮ | ನತಿಶಯದಕುಪ್ಪುಸಮನಂಗಕೆ | ರತಿಗೆಣೆಯರ್ಸ್ಸಿಂಗರಿಸಿದರು | ೪ | ಪಾಲುಶರ್ಕ್ಕರೆಘೃತಮಂ | ಭಕ್ಷಂಗಳಶೀ ಲೆಯರ್ಮಾಷಾನ್ನಮಂ | ಸೌವರ್ಣ್ನದ | ತಾಲಿಯೊಳ್ | ತೀವಿತಂದು | ಪನಸಪತ್ರದಿ | ಲೋಲಾಕ್ಷಿಗೆ ಬಡಿಸಿ | ಸುಖದಿಂದಭುಂಜಿಸೆ | ಲೀಲೆಯಿಂ ಮಲ್ಲಿಗೆಯ ಗೊಂಚಲ | ಆಲಲನೆಪಿಡಿದೈದಿಗಮಿಸಿದಳೀ | ಲಲಿತರತ್ನದ ಸುಪೀಠಕೆ | ಬಾಲಹಂಸೆಯ ತೆರದೊಳೊಪ್ಪುತ | ಬಾಲೆಯರುಹಸೆಗೆಕರೆದರು | ೫ | ತೆಳುವಸರಿನವರೆಯ್ದಿ | ಗೂಡೆಗಳೊಳಿರ್ಪ | ತೊಳದೆಳ್ಳುಬೆಲ್ಲಗಳ | ರಾಸಿಯನುಮಾಡಿ | ನಳಿತೋಳ್ಗಳಿಂದಿ ಡಿದು | ಉಂಡೆಗಳ ಮಾಡಿ | ಥಳಥಳಸುವತಾಲಿಯೊಳ್ | ತಾಂಬೂಲಗಳನು | ಹೊಳೆವಕದಳೀಚಿಪ್ಪು ಮಾದಲ | ಪನಸಜಂಬೀರಾಮ್ರದಾಡಿಮ | ಇಳಿಯೊ ಳಿಹಸುಫಲಗಳ ಮಂಗಲ | ಮಿಳಿತವಸ್ತುವದೇವಿಮಡುಲೊಳು | ಬಳಿಯೊಳು ತುಂಬಿ ಇರಿಸಿದರು | ೬ | ಇಂತುತ್ರಿರಾತ್ರಿಯೊಳಗೆ | ಮಡುಲುತುಂಬಿ | ಕಾಂತೆ ಯರ್ದ್ಧವಲಂಗಳ | ಪಾಡುತೆಶುಭ | ವಾಂತಚತುರ್ತ್ಥದಿನದೊಳ್‌ ಮಂಗಲಸ್ನಾನ | ವಾಂತುಪ್ರತಿರತಿದೇವಿಯೊಳ್ | ಢಾಳಿಸುತಿರಲು | ಆತರಿಸದೀರಾತ್ರಿಕಾಲದೊಳ್ಪಿಂತೆ ಯೆಸಗಿದರೆಂತೊದೇವಿಗೆ | ಅಂತೆರಚಿಸಲು ಮುತ್ತಿನಾರತಿ | ಯಾಂತುಸೇಸೆಯ ತೆಳಿದುವರಸುತ | ಕಾಂತೆಯರುಹಸೆಗೆಕರೆದರು | ೭ |

* * *

ಯಶಸ್ವತಿ ಸುನಂದೆಯರಿಗೆ ಮಡುಲು ತುಂಬಿದ ಹಾಡು ನೋಟ್

ತ್ರಿಭುವನಪತಿಪುರುಪತ್ನಿಯರಂ | ತ್ರಿಭುವಲಲನಾರಾಧ್ಯೆಯರಂ | ವಿಬುಧೇಂದ್ರನಸತಿ ಮುಖ್ಯೆಯರುಂ | ಶುಭಫಲವೀಯುತಪಾಡಿದರುಂ | ಪ | ತ್ರಿದಶಾಂಗನೆಯರ್ಸ್ಸಂ ತಸದೊಳ್ | ತ್ರಿದಿವೋದ್ಭವಫಲಕುಸುಮಗಳಿಂ | ಸುದತೀರತ್ನ ಗಳೀರ್ವ್ವರ್ಗ್ಗಂ | ಸದಮಲ ಮುಕ್ತಾಸೇಸೆಗಳಿಂ | ೧ | ಶೃಂಗಾರಬ್ಧಿಯಶಸ್ವತಿಗುಂ | ಭೃಂಗಾ ಳಿಕೆಸೌನಂದೆಗುಂ | ಭೃಂಗಾರಾದ್ಯುಪಕರಣಗಳಿಂ ಕಂಗೋಳಿಸುವದು ಕೂಲಾದಿಗಳಿಂ | ೨ | ಭವನಾವಾಸದದೇವಿಯರುಂ | ಭುವನಾನರ್ಗ್ಘ್ಯಸುವಸ್ತುಗಳಂ | ನವವಿಧ ನವಮಣಿ ಪುಂಜಗಳಂ | ಜವಡಿಂಡರ್ಪ್ಪಿಸಿಪೊಗಳಿದರುಂ | ೩ | ಭೌಮಾಂಗ ನೆಯರ್ಕ್ಕೌತುಕ್‌ ದೊಳ್‌ | ವ್ಯೋಮಯಾನವ್ಯೋಂದಿದವತರಿಸಿಕಾಮಿಪ ಹೇಮಫ ಲಾದಿಗಳಂ | ಪ್ರೇಮದೊಳರ್ಪ್ಪಿಸಿನುತಿ ಬಿದರು | ಸುಮತಿಸತಿಯರ್ಸ್ಸುಮ್ಮಾನದಿಂದ

| ೪ | ಪ್ರಥಮಾರ್ತ್ತವದೋಳ್ಭೂ | ಸುತೆಗೆನೀರೆಯರಾಗಳ್ | ಪ್ರಥಿತನಾನಾ ಫಲಗಳನಿತ್ತು ಮಡುಲಲ್ಲಿ | ಅತಿಶಯದ ಪೂವಮುಡಿಸಿದರು.

* * *

ಮಧ್ಯಮಾವತಿ ರಾಗ

ಯಶಸ್ವತಿಯಮ್ಮನವರನ್ನು ಹಸೆಗೆ ಕರೆಯುವ ಹಾಡು,
ಗರ್ಬ್ಭಿಣಿಯರನ್ನು ಹಸೆಯಮೇಲೆ ಕುಳ್ಳಿರಿಸಿದಾಗ ಹೇಳುವುದು

ಶ್ರೀಮತ್ಸಾಕೇತಪುರ | ಸ್ವಾಮಿ ಶ್ರೀನಾಭಿರಾಜ | ಕಾಮಿನಿಮರುದೇವಿಪುತ್ರತ್ರೈ ಜಗಧೀಶ | ಸೋಮಾರ್ಕ್ಕಕೋಟಿತೇಜಶ್ರೀವೃಷಭೇಶ್ವರಭಾಮಿನೀಕುಲ ಮಣಿಯಶಸ್ವತಿ | ಯಾಮಹಾಸತಿದಿವ್ಯಭೋಗದೊ | ಳಾಮನೋಹರಯಾಮದೊಳುತಾ | ನೀಮಹಾ ಷ್ಟಸ್ವಪ್ನಗಳನುಂ ಪ್ರೇಮದಿಂಕಂಡದನುಪೇಳ್ವೆ | ೧ | ಮತ್ತೇಭವೃಷಭಹರಿ | ಸುತ್ತಿದಶಂ ಖನಳಿನಾಕಾರ | ಎತ್ತಲು ಶೋಭಿಪ | ಭಾಸ್ಕರವಿಧುರತ್ನ ಕೆತ್ತಿದ ಜಲಪೂರ್ಣ್ನಕುಂಭ ಯುಗಗಳನ್ನು | ವೃತ್ತ ಘಟಕುಚೆಕಂಡು ಸ್ವಪ್ನದೊಳರ್ತಿಯಿಂದೆಲೆ | ಪುರುಜಿನಾಧಿವ | ನೊತ್ತಿನೊಳುಪವಿಷ್ಟೆಳಾಗುತ | ಮತ್ತೆಭದ್ರಾಸನದೊಳೊಲವಿಂ | ಮತ್ತೇಭಗಮನೆ ಪೇಳಿದಳು | ೨ | ರಾಜೀವದಳನಯನೆ | ರಾಜಿವಸ್ವಪ್ನಫಲದಿಂ | ಈ ಜಗದೊಳು ಈರೇಳುರತ್ನಗಳಿಗು | ಮಾಜದೆನವನಿಧಿಭಂಡಾರಗಳಿಗುಸಾಜದಿಂ | ಷಟ್ಬಂಡಗಧಿಪತಿ | ತೇಜದಿಂಪ್ರಖ್ಯಾತನಾಗುವ | ನೈಜದಿಂಮುಕುತಿಯನುಸಾಧಿಪ | ಸೋಜಿಗದಸುತನು ದಯಿಸುವನೆಂದು | ಮೂಜಗದೊಡೆಯನುಸುರಿದಂ | ೩ | ಶ್ರೀವಿತರಾಗೋಕ್ತಿಯಂ | ಭಾವಕಿಯಸ್ವತಿಯು | ಸಾಔಧಾನದಿಕೇಳಿಹಾರ್ಫಾಂಬುಧಿಯೋಳುಗಿ | ಜೈವಾತೃಕನನ್ನು ಜರೆಯುವ ವಕ್ತ್ರವು | ಕೋವಿದೆಯಚೂಚುಕಯುಗಂಗಳು | ಭಾವದಿಂಧಿಕ್ಕರಿಸೆ ನೀಲಮ | ಪಾವನೆಗೆ ಹರಿಕಟಿಯುತುಂಬಲ್ | ಜವದೇತ್ರಿವಳಿಗಳುಂಢಾಳಿಪ | ಪಾವನಶೀಲೆ ದಯಮಾಡು | ೪ | ಮೇರುಗಿರಿಯ ಕೃತ್ರಿಮ | ಸಾರಜಿ ನಾಲಯಗಳ | ಸಾರಿವಂದಿಪೆನೆಂಬಧುರವನೀಕ್ಷಿಪೆನೆಂಬ | ನೀರೆಗೆದೋಹಳವಾದಕಾರಣದಿಂ | ಚಾರುಸದ್ಧರ್ಮಾಢ್ಯನಹ ಮೇಣ್ | ಧೀರಮಾಗಧಮುಖ್ಯವ್ಯಂತರ | ಶೂರರನು ನಿಜಬಾಣದರ್ಶನಕಾರಣದಿ ಎರಗಿಸುವಾತನನ್ನು ಪಡೆಯುವ ಮಾತೆ ಹಸೆಗೇಳು | ೫ | ವ್ಯೋಮಯಾನವನೇರಿ ಭೂಮಿಯನೆಲ್ಲ ವಚರಿಸಿ | ಆಮಹಾಗಂಗಾ ಸಿಂಧೂನದಿಗಳೊಳ್ಮಿಂದು | ಪೂಮಾಲೆಗಳನೇಕಗಳ ಕಂಠದೊಳ್ಧರಿಸಿ | ಭೌಮಮು ಖ್ಯಾಮರರ ಸೇವೆಯ | ನೀಮಹಿಯೊಳಗೆತಾಳುನಾಕದ | ಹೇಮರತ್ನಾಭರಣವಸ್ತ್ರಸು | ಧಾಮದಿಂ ತನುವನ್ನು ಶೋಭಪ ಪ್ರೇಮದಬಯಕೆ ದೇವಿಗಾಯ್ತು | ೬ | ಸ್ವಾಮಿಪುರುಜಿನಾಧಿಪಂ | ಭಾಮಿನಿ ಯಶಸ್ವತಿಗೆ ವ್ಯೋಮಯಾನಾದಿನಿಖಿಲ ಬಯಕೆಗಳ ತೀರ್ಚೆ | ಕಾಮಿನಿಯರ್ತ್ತೊಭತ್ತಾರು ಸಹಸ್ರರ್ಗೆರೆಯಂ | ರಾಮೇಗಂ ಗಾಸಿಂಧುದೇವಿಯರಿಂಮಹಾಮಜ್ಜನಸುಪೂಜಿತ | ಭೀಮರಿಪುಹರ ಚಕ್ರಮಣಿ ಮುಖಧಾಮಸುತನನುಪಡೆವ ಮಹಿಳಿಯೆ | ಹೇಮಪೀಠಕೆದಯಮಾಡು | ೭ | ರಾಕೇಂದುನಿಭಮುಖಿಗೆಕೋಕಪಯೋಧರೆಯರ್ | ನಾಕಲೋಕದಮಣಿಭೂಷಣ ದುಕೂಲಾದ್ಯ | ನೇಕವಸಪಾವಾರಿಜಾತಾದಿ ಮಾಲೆಗಳಿಂ | ದಾಕುಮಾರಿಗಲಂಕರಿಸಲಾ | ಪಾಕಶಾನನಸತಿಯರೂಪಂ | ನಾಕವಾಳರ್ದ್ಧಿಕ್ಕರಿಸೆ | ಭೂಲೋಕದೊಳ್ ವಿಖ್ಯಾತೆ ಸೊಬಗಿನ | ಕಣಿಯೆಬಾರೆಂದುಕರೆವರು | ೮ | ವೀರವೃಷಭಜಿನಸಂಸಾರಸಾಕ್ಷಿಗೆ ಗರ್ಬ್ಭದೊಳ್ | ಸಾರಿದತ್ರಿಪಂಚಸಪ್ತಮ ಮಾಸಗಳೊಳು | ಚಾರುಪಮೋದಪುಂಸವನ ಸೀಮಂತ | ಸಾರಮೋದಸುಕರ್ಮ ವಿಧಿಗಳ | ಭೂರಿ ವೈಭವದಿಂದ ವಿರಚಿಸಿ | ಕೋರಿದಿಷ್ಟಾರ್ಥಗಳ ಜನರಿಗೆ ಬೀರಿದನುಸರುತರುವಿನಂದದಿ | ನೀರೆ ಬಾರಮ್ಮ ಜಯ ಜಯ | ೯ |

* * *

ಬಾಣಂತಿಯಾದ ಅಪರಾಜಿತಾದೇವಿಯನ್ನು
ಹಸಗೆಕರೆಯುವ ಹಾಡು, ರಾಗಶಂಕರಾಭರಣ

ಇಂದುವದನೆಯಪರಾಜಿತಾದೇವಿಯ | ಕುಂದರದನೆಯನುಸುಗುಣೆಯ ಬಾಣಂತಿಯ | ಸುಂದರಿಯರುಹಸೆಗೆ ಕರೆದರು | ೧ | ದಾಶರಥಿ ಯಜನನಿಯ ದಶರಥಸತಿಯ | ಕೌಶಲ್ಯದೇವಿ | ಕುಶಲಸಂಪೂರ್ಣ್ನೆಯ | ಕುಶಲೆಯರುಹಸೆಗೆ ಕರೆದರು | ೨ | ಸುತ್ತು ಹಾಕಿದ್ದ ನೀಲದ ಸೀರೆಯಧರಿಸಿ | ಉತ್ತಮ ಭುಜಗಳೊಳ್ | ಪೂರ್ಣ್ನಕು ಪ್ಪುಸವಿಟ್ಟು | ಬಿತ್ತರದಹಸೆಗೆ ಕರೆದರು | ೩ | ನೀತಿನಿಪುಣೆ ಬಾಣಂತಿ ಕೌಶಲ್ಯೆಗೆ | ಜಾತೀ ಫಲಪತ್ರಲವಂಗಾದಿಭರಿತಸುಪಾತ್ರೆಗಳ ಮುಂದೆ ಇರಿಸಿದರು | ೪ | ನೀಲಾಳಕಿಗೆ ಕಸ್ತೂರಿತಿಲಕವಿಟ್ಟು | ಲೋಲಾಕ್ಷಿಗೆಕರ್ಪ್ಪೂರಾಂಜನ ವಿಟ್ಟು | ಲೀಲೆಯೆ ಬಾರೆಂದು ಕರೆದರು | ೫ | ವಾಮಾಂಕದೊಳಭಿರಾಮ ಶಿಶುವನಿಟ್ಟು | ಪ್ರೇಮಸಾಗರ ದೊಳೋಲಾಡಿದ ಬಾಣಂತಿಯ | ಭಾಮಿನಿಯರುಹಸೆಗೆ ಕರೆದರು | ೬ | ಮುನ್ನಿನಸುಕೃತದಿಂದಷ್ಟಮ ಬಲಭದ್ರನನ್ನು ಹಡೆದುಸುತಸಹಿತಢಾಳಿಸುತಿರ್ಪ್ಪ | ಸನ್ನುತೆಯನುಹಸೆಗೆ ಕರೆದರು | ೭ | ಮುನಿಸುವ್ರತ ತೀರ್ತ್ಥಕರಂತರಾಳದೊಳ್ | ಜನಿಸಿದ ಕುವರಲಲಾಮ ಬಲರಾಮನ | ಜನನಿಯನುಹಸೆಗೆಕರೆದರು | ೮ | ಮೋಕ್ಷಗಾಮಿಯಲಕ್ಷ್ಮಹಾಗ್ರಜನ ಮಾತೆಯ | ಈಕ್ಷಿಪರಕ್ಷಿಗಳ್ | ಸಾಫಲ್ಯಗಳೆಂದು | ಲಕ್ಷಣೆಯರು | ಹಸೆಗೆ ಕರೆದರು

* * *

ಜೀವಂಧರನ ಜೋಗುಳಿ

ಜೋಜೋಜೋಜೋಶ್ರೀಜೀವಂಧರೆನ | ಜೋಜೋಜೋಜೋ | ಪಿತೃ ಸತ್ಯಂಧರನೆ | ಜೋಜೋ ವಿಜಯಾದೇವಿಯಮುದ್ದು ಸುತನೇ | ಜೋಜೋ | ಕುರುವಂಶ ಮುಕ್ತಾಫಲನೆ | ಜೋಜೋ | ಪಲ್ಲ | ಜೋಜೋಗಂಧೋತ್ಕಟಶ್ರೇಷ್ಟಿಪೋಷಿತನೆ | ಜೋಜೋವೈಭವಜಿತಪುರಂದರನೆ | ಜೋಜೋ ಮೀನಕೇತನಸುಂದರನೆ | ಜೋಜೋನಾಲ್ಕೆರಡುಸ್ತ್ರೀಯರೊಲ್ಲಭನೆ | ೧ | ಬಾಲಕಾಲದೊಳ್ಪಂಚಶತ ಪುತ್ರರೊಡಗೂಡಿ | ಲೀಲೆಇಂದಲೆ ಕ್ರೀಡಿಸುವಕಾಲದೊಳು | ಶೀಲಚ್ಯುತನಾಗಿ ಬಂದಾರ್ಯ್ಯನಂದಿಯ | ಕಾಲದೋಷಾಗತ ಭಸ್ಮಕಹರನೆ | ೨ | ರಾಜಪುರದೊಳು ಪಶುಸಂಗ್ರಹಣ ಮಾಡಲ್ | ರಾಜಾಜ್ಞೆ ಇಂದಪೋಷಿಸಲಾಕ್ಷಣದೊಳ್ | ಮಾಜದೆ ಸಖರೊಡನೆ ಕಾಲಕೂಟ ವ್ಯಾಧ | ರಾಜನಸಮರದೊಳ್ಗೆದ್ದ ಸುಂದರನೆ | ೩ | ವೀಣೆಇಂದಲೇ ಗಂಧರ್ವ್ವ ದತ್ತೆಯನು | ಜಾಣತನದಿಗೆಲ್ಲೆ ಯುದ್ಧಕೆ ಬರಲು | ತ್ರಾಣಗೆಡಿಸಿದೆ | ಮಹಾ ರಾಜಸುತರನ್ನು | ಕ್ಷೋಣಿಯೊಳ್ ಕೀರ್ತ್ತಿ ಪಡೆಮುದ್ದು ಸುಂತನೆ | ೪ | ವನವೀಥಿಯೊಳ್ಗಜಬಾಧೆಗೆಸಿಕ್ಕಿದ | ವನಜಾಕ್ಷಿಗುಣಮಾಲೆಮೊರೆ ಇಡಲಾಗ | ಘನಸಿಂಹನಾದದಿಂ ಮದಗಜಗವನ್ನು | ಶುನಕಂಮಾಡವಳಂ | ಪಡೆ ದಮಹಾತ್ಮ | ೫ | ಧನಪತಿ ಎಂಬಭೂಪತಿಪುತ್ರಿ ಪದ್ಮೆಗೆ | ವನವೀಥಿಯೊಳಹಿ ದಂಶನವಾಗಲ್ | ಘನಯಕ್ಷಮಂತ್ರದಿಂವಿಷವನ್ನು ಹರಿಸೆ | ಮನಮೆ ಚ್ಚಲವಳಿಗೆಪತಿ ಯಾದಶೂರ | ೬ | ವನಮಧ್ಯದೊಳಕೃತ್ತಿಮಕೀಲಿತವರ | ಜಿನಶಾಂತಿ ಚೈತ್ಯಮಂದಿರ ದಕವಾಟವು ಜನರೆಲ್ಲಸ್ತುತಿನವಂದದಿನಿನ್ನ ಕರತಾಗೆ ಧನದಸುಪುಷ್ಟ ಕದಂತ ಬಾಯ್ದೆ ರೆಯೆ | ೩ | ಆವಿದ್ಯಮಾನವಂ ಕೇಳಿದಾಕ್ಷಣದೊಳ್ ತಾನಾಗಿ ಬಂದು ಪ್ರಾರ್ಥಿಸೆಶ್ರೇ ಷ್ಠಿವರನ | ಭಾವತಿಳಿದುತತ್ಪುತ್ರಿಕ್ಷೇಮ ಶ್ರೀಗೆ | ನೀವಧು ವರನಾಗಿ ಬಾಳ್ದಸುಕುಮಾರ | ೮ | ಮಾವಿನಹಂಣಿಗೆಗುರಿತಪ್ಪಲವರ | ಮಾವಿನಫಲವಕತ್ತರಿಸಿನೀನವರ | ಭಾವಮೈದರಮಾಡಿ | ಕನಕಮಾಲೆಯನಾಗ | ಮಾವನಮಗಳನ್ನು ಮಾಳ್ದಸುಜಾಣ | ೯ | ಧನಿಕಸಾಗರದತ್ತನಬಹುಕಾಲದ | ಘನರತ್ನ ರಾಸಿವಿಕ್ರಯ ವಾಗದಿರಲು | ವನಜಾಕ್ಷನೆನಿನ್ನ ಪಾದಾಗಮನದಿಂ | ಮನಮೆಚ್ಚುವಂತೆ ವಿಕ್ರಯವಾಗಲಾಗ | ೧೦ | ಕಾರಣದಿಂದಲೆ ಪ್ರಾರ್ತ್ಥಿಸಲವನಕುಮಾರಿಕಮಲೆಯೆಂಬಕಮಲ ಲೋಚನೆಯಂ | ಧಾರೆಯನೆರೆಯೆ ಸಂತೋಷಿಸಿ ಮುಂದಣ ಕಾರ್ಯ ಕಾರಣಕಾಗಿ | ತ್ವರೆಯಿಂದ ತೆರಳೆ | ಬುದ್ಧಿಷೇಣನು ಹಾಸ್ಯವಮಾಡೆತಲೆದೂಗಿ | ಬುದ್ಧಿಯಿಂಕಾಮರೂಪಿತ್ವವ ನಾಂತು | ವೃದ್ಧದ್ವಿಜನಾಗಿಸುರಮಂಜರಿಗೆ | ಸನ್ನದ್ಧವಾಗವಳನ್ನು ವಲಿಸಿದಜಾಣ | ೧೨ | ಸೂಕ್ಷ್ಮದಿಂದಲೆಯಂತ್ರಸಿತವಾರಾಹವ | ನಿರ್ಲ್ಲಕ್ಷ್ಯದಿಂದಲೆ ಚ್ಛೇದಿಸೆಮಾತು ಲನಿಂ | ಲಕ್ಷ್ಮಣಾದೇವಿಯೆಂಬುವಕನ್ಯಾರತ್ನವ | ಪಕ್ಷೀಕರಿಸಿಧಾರೆಯನಾಂತಮದನ | ೧೩ | ಪಿತೃ ಸಂಹಾರಕನಾದ | ಕಾಷ್ಠಾಂಗಾರನ | ಪಿತೃದೇವತೆಗಳಿಗರ್ಪ್ಪಿಸೆ ಪೌರಜನರು | ಶತ್ರುರಹಿತರಾಗಿಸುಖಿಯಾಗೆಲ್ಲರುಕರ್ತನೀರಾಜಗೃಹಕ್ಕೆಂದುಸ್ತುತಿಸೆ | ೧೪ | ರಾಜಾಧಿರಾಜರೆಲ್ಲರ್ಗೂಡಿಪಟ್ಟವಂ | ರಾಜಗೃಹಕೆಮಾಳ್ಪಸಮಯದೊಳ್ನೆನಸಿ | ನಿಜಮಾತೃವಿಜಯಾ ದೇವಿಯನಂದಾಢ್ಯನಿಂ | ರಾಜವೈಭವದಿಂದ ಒರಮಾಳ್ಪೆಪುರಕೆ | ೧೫ | ಪಟ್ಟಾಭಿಷಿಕ್ತನಾಗಷ್ಟಪತ್ನಿಯರ್ಗ್ಗೂಡಿ | ಕಷ್ಟಕ್ಕೆ ತಲೆಗೊಟ್ಟಪೊರೆದಶಿಷ್ಟರ್ಗ್ಗ | ಭೀಷ್ಟವನಿತ್ತುಸಂತೋಷಿಸಿ ಪೋಷಕ ಶೆಟ್ಟಗೆ | ಶ್ರೇಷ್ಠಿತ್ವವನಿತ್ತಶೂರ | ೧೬ | ಯಜ್ಞನಾಶನವಾಯೆಂದು ಮಿಥ್ಯಾಜನ | ರ್ಜ್ಜಿಜ್ಞಾನದಿಂತಾಟಿತಕ್ವಾನಗೆನೀ ಪ್ರಜ್ಞೆಯಿಂ ಬೋಧನೆ | ಯಕ್ಷನಾಗವನ ಕೃತಜ್ಞತೆಯಿಂಬಹುಸ್ತುತಿ ಗೇಳ್ವಜೀಯ | ೧೭ | ಸತ್ಯಂ ಧರನೆಂಬ ಸ್ವಸುತನಿಗೆ ರಾಜ್ಯವಂ | ನಿತ್ಯಸುಖಿಯಾಗಿ ಬಾಳೆಂದುತಾನಿತ್ತು | ನಿತ್ಯಸುಖದ ಮಾಗಾನ್ವೇ ಷಣದಿಂ | ಸತ್ಯತವವನಾಂತ ಮೋಕ್ಷಲಕ್ಷ್ಕೀಶ ಜೋಜೋ | ೧೮ |

* * *

ನೇಮಿಶ್ವರ ಸ್ವಾಮಿಯ ಶೋಭಾನೆ

ಮದಗಜನಡೆನುಡಿಮೃದುಚೊಕ್ಕಪದಗಳ | ವದಗಿನಿಂಪಾಡುವಸುದತಿಯಲ್ಲಿಗೆಯೆ | ಧಗಧಗಿಸುವ ಸಿಂಹಪೀಠದಿರಾಜಿಪ | ಮದನಾರಿ ವಿಜಯನೇಮೀಶನೋಲಗಕಮ್ಮ | ಮದಗಜಗಮನೆಯರುನಡೆದರು | ೧ | ಕೊಂಕಿದಕುರುಳುಕೋಮಲೆಕಾಮನರ್ದ್ಧಾಂಗಿ | ಶಂಖಗೊರಳಸುವ್ರವೀಣೆಯಲ್ಲಿಗೆಯೆ | ಶಂಖಚಕ್ರಾಧರಕಡಲುತಲ್ಲಣಿವಂತೆ | ಶಂಖನಾದಿಸಿದನೋಮಿಶನೋಲಗಕಮ್ಮ | ಪಂಕಜವದನೆಯರು ನಡೆದರು | ೨ | ಬಾಲೆಯವ್ವನದ ಸುಶೀಲೆಮನ್ಮಥರತಿ | ಲೋಲದರೂಪೆಕುಶಲೆಯಲ್ಲಿಗೆಯೆ | ಬಾಲತನದಿದೀಕ್ಷೆಪಡೆದು ಮೆರೆವಪುಣ್ಯ ಲೋಲ ಸರ್ವ್ವಜ್ಞ ನೇಮಿಶನೋಲಗಕಮ್ಮ | ಲೋಲಲೋಚನೆಯರು ನಡೆದರು | ೩ | ಮಂದಗಮನೆನಿನ್ನಚಂದಕ್ಕೆರತಿಪತಿ | ಬಂದಲಾವಣ್ಯದಬೊಂಬೆಯಲ್ಲಿಗೆಯೆ | ಮಂದರಗಿರಿಯೊಳುಮಿಂದು ದೇವೇಂದ್ರರಿಂವಂದ್ಯನೆನಿಪಾ ನೇಮೀಶನೋಲಗಕಮ್ಮ | ಮಂದಗಮನೆಯರು ನಡೆದರು | ೪ | ಬಗಸೆಗಣ್ಗಳಬಟ್ಟಕುಚದಭಾವಕಿರನ್ನ | ನಗೆಮುಖಸೊಗಸುಸು ಗಂಧಿಯಲ್ಲಿಗೆಯೆ | ಜಗದೊಳುಜ್ಜಂತಗಿರಿಯೊಳು ನೆಲಸಿಮೋಕ್ಷಮಿಗೆ ಪೋದನಿತ್ಯನೇ ಮೀಶನೋಲಗಕಮ್ಮ | ಮೃದುಮದಗಂಧಿನಿಯರು ನಡೆದರು | ೫ |

* * *

ವದ್ಧರ್ಮಾನ ಸ್ವಾಮಿಯ ಶೋಭಾನೆ

ಶ್ರೀಮಂದನಂತಚುತುಷ್ಟಯರೂಪ | ಶಮಿತಕುಪಾಪ | ಅಮಿತಸು ರೂಪ | ಯಮಿಕುಲ ದೀಪ | ದಮಿತೇಕ್ಷುಚಾಪ | ಶ್ರೀಮದನಂತಚತುಷ್ಟಯರೂಪ | ಕಾಮಿತ ಫಲದಾಯಕ ಜಿನದೇವನ | ಸಾಮಜ ಗಮನೆಯರುನುತಿಸಿದರು | ೧ | ಕುಂಡಪುರೇಶಸಿದ್ಧಾ ರ್ತ್ಥಸು ಪುತ್ರ | ದಂಡಿತ ಗಾತ್ರ | ಚಂಡಗ ಚೈತ್ರ | ಖಂಡಿತ ಗೋತ್ರ | ಪಂಡಿತ ಮಿತ್ರ | ಕುಂಡಪುರೇಶಸಿದ್ಧಾರ್ತ್ಥ ಸುಪುತ್ರ | ಖಂಡಿತಚಂಡಕರ್ಮ್ಮೋದ್ದಂಡನಬೇಗ | ಪುಂಡರೀಕಾಸ್ಯೆಯರುನುತಿಸಿದರು | ೨ | ಅಡಿವರಾಗ್ರದೊಳ್ ಮಿಂದಸುವೀರ | ಭದ್ರಶರೀರ | ಸಾಂದ್ರಸಪೂರ | ಕ್ಷುದ್ರವಿದೂರ | ರೌದ್ರಸಂಹಾರ | ಅದ್ರಿವರಾಗ್ರದೊಳ್ ಮಿಂದಸುವೀರ | ಛೀದ್ರಕರ್ಮ್ಮಾಮಲಚರಿತನಬೇಗದಿಭದ್ರಗಮನೆಯರುನುತಿಸಿದರು | ೩ | ಜಿನಮತ ವಾರ್ದ್ಧಿವರ್ದ್ಧನ ಪೂರ್ಣ್ನಸೋಮ | ಅನುಪಮಧಾಮ | ವಿನಿಹಿ ತಕಾಮ | ಮುನಿಜನ ಪ್ರೇಮ | ಜ್ಞಾನಸುಸೀಮ | ಜಿನಮತ ವಾರ್ದ್ಧಿವರ್ದ್ಧನಪೂ ರ್ಣ್ನಸೋಮ | ವಿನುತಾಮರಪತಿನುತಪದಪದ್ಮನ | ವನಜಾಯತನೇತ್ರೆಯರು ನುತಿಸಿದರು. | ೪ | ದಿನಕರವಿಧುಶತಕಿರಣಸಂಕಾಶ | ಘನಜ್ಞಾನೇಶ | ಜನನವಿನಾಶ | ಕನಕಪ್ರಕಾಶ | ಜ್ಞಾನಸುಕೋಶ | ದಿನಕರವಿಧುಶತಕಿರಣಸಂಕಾಶ | ವಿನಮಿತಜನ ಮನಸಾಭೀಷ್ಟವನೀವ ಅನುಪಮವಿಕ್ರಮನ ನುತಿಸಿದರ | ೫ | ನಿಮ್ಮೂಲನಕರನಿಖಿಲ ದುರ್ಮ್ಮೋಹ | ನಿರ್ಮ್ಮಲದೇಹ | ಶರ್ಮ್ಮಸುಗೇಹ | ಕರ್ಮ್ಮವಿದಾಹ | ಧಮ್ಮಸಂದೋಹ | ನಿಮ್ಮೂಲನಕರನಿಖಿಲದೊರ್ಮ್ಮೋಹ | ದುರ್ಮ್ಮತತಿಮಿರಮಾರ್ತ್ತಾಂಡನಚರಿತೆಯ | ನಿರ್ಮ್ಮಲಹೃದಯೆಯರು ನುತಿಸಿದರು | ೬ | ವರವಚನಾಂಬುಧಿರಾಂಬುಧಮಾಲ | ವಿರಹಿತಕಾಲ | ಸುರನರಪಾಲ | ವರಮಂತ್ರಮೂಲ | ಸ್ಮರಗರ್ವ್ವಕೀಲ | ವರ ವಚನಾಂಬುಧಿರಾಂಬುಧಮಾಲ | ಕರುಣಾಕರಶರನಿಧಿಗಂಭೀರನ | ದರಹಿರಿಸಿತಾಸ್ಯೆ ಯರುನುತಿಸಿದರು | ೭ | ಭಾವಜಮದಹರಪರಮಚರಿತ್ರ | ಭವಜಲಭೈತ್ರ | ಚವಿವರಗಾತ್ರ | ಕುವಲಯನೇತ್ರ | ಕವಿನುತಪಾತ್ರ | ಭಾವಜಮದ ಹರಪರಮರಿತ್ರೆ | ಸೇವಕಜನಭವಹಾರಕನೀನೆಂದು | ಭಾವಕಿಜನರುಗಳು ನುತಿಸಿದರು | ೮ | ಪರಮಾಗಮ ವರವಚನ ನಿರ್ಗ್ಘೋಷ | ವರಸರ್ವಭಾಷ | ವಿರಹಿತದೋಷ | ಪರಹಿತವೇಷ | ನಿರಘನಿರ್ದ್ಧೋಷ | ಚರಮಾಗಮ ವರವಚನ ನಿಗ್ಘೋಷ | ಪರವಾದೀಭಕಂಠೀರವರೂಪನ | ಸ್ಮರಸತಿಸದೃಶೆಯರು ನುತಿಸಿದರು | ೯ | ಮಾ ರಮದಾವಹರಣ ಮಹಾವೀರ | ಸುರಗಿರಿಧೀರ | ಶರಧಿಗಂಭೀರ | ವರವಜ್ರಸಾರ | ಪರಮಶರೀರ | ಮಾರಮದಾಪಹರಣಮಹಾವೀರ | ಘೋರಸಂಸಾರ ಸರಿತ್ಪತಿಚರ ಣನ | ಕೋರಕರದನೆಯರು ನುತಿಸಿದರು | ೧೦ | ಪಾಕಶಾಸನನುತಚರಮಪ ದೇಶ | ಶೋಕವಿನಾಶ | ಲೋಕಹಿತೇಶ | ಸಕಲಜ್ಞಾನೇಶ | ಮಕರಾಂಕಪಾಶ | ಪಾಕಶಾಸನನುತಚರಮಚದೇಶ | ಶ್ರೀಕನಕಾಹ್ವಯಪುರದವೀರೇಶನ | ರಾಕಾಸಮವದನೆಯರು ನುತಿಸಿದರು | ೧೧ |

* * *

ಮೈನೆರೆದ ಶೋಭಾನೆ

ಬಾಳೆಯವನದಲ್ಲಿ ಭಾಮೆಮೈನೆರೆದಳು ಬಾಳೆಯಹಣ್ಣು ಬರಬೇಕು | ಬರಬೇಕು ನಮ್ಮನೆಗೆ | ಭಾಮೆಮೈನೆರೆದವಸಗೆಗೆ | ೧ | ತೆಂಗಿನವನದಲ್ಲಿರಂಭೆ ಮೈನೆರೆದಳು | ತೆಂಗಿನಕಾಯಿ ಬರಬೇಕು | ಬರಬೇಕು ನಮ್ಮನೆಗೆ | ರಂಭೆಮೈ ನೆರದವಸಗೆಗೆ | ೨ | ಹಲಸಿನವದಲ್ಲಿ ಅರಸಿಮೈನೆರೆದಳು | ಹಲಸಿನ ಹಂಣು ಬರಬೇಕು | ಬರಬೇಕು ನಂಮನೆಗೆ | ಅರಸಿಮೈನೆರೆದ ವಸಗೆಗೆ | ೩ | ಕಿತ್ಲೆಯವನದಲ್ಲಿ ನಿಸ್ತ್ರೆಮೈನೆರೆದಳು ಕಿತ್ತಳೆಹಣ್ಣು ಬರಬೇಕು | ಬರಬೇಕುನಮ್ಮನೆಯ ನಿಸ್ತ್ರೆಮೈನೆರೆದವಸಗೆಗೆ | ೪ | ನಿಂ ಬೆಯವನದಲ್ಲಿ ರಂಭೆಮೈನೆರೆದಳು | ನಿಂಬೆಯಹಣ್ಣು ಬರಬೇಕು ಬರಬೇಕು ನ ಮ್ಮನೆಯರಂಭೆಮೈನೆರೆದವಸಗೆಗೆ | ೫ | ಜಾಜಿಯವನದಲ್ಲಿ ಜಾಣೆಮೈನೆರೆದಳು ಜಾಜಿಯಹೂವುಬರಬೇಕು | ಬರಬೇಕುನಮ್ಮನೆಯ | ಜಾಣೆಮೈನೆರೆದ ವಸಗೆಗೆ | ೬ | ಸಂಪಿಗೆ ವನದಲ್ಲಿ | ಕೆಂಪಿಮೈ ನೆರೆದಳು | ಸಂಪಿಗೆಯ ಹೂವು ಬರಬೇಕು | ಬರಬೇಕು ನಮ್ಮನೆಯ | ಕೆಂಪಿಮೈನೆರೆದವಸಗೆಗೆ | ಮಲ್ಲಿಗೆ ವನದಲ್ಲಿ ಚಲ್ವೆ ಮೈನೆರೆದಳು ಮಲ್ಲಿಗೆ ಹೂವು ಬರಬೇಕು | ಬರಬೇಕುನಮ್ಮನೆಯ | ಚಲ್ವೆಮೈನೆರೆದವಸಗೆಗೆ | ಮೊಲ್ಲೆಯವನದಲ್ಲಿನಲ್ಲೆ ಮೈನೆರೆದಳು | ಮೊಲ್ಲೆಯಹೂವು ಬರಬೇಕು | ಬರಬೇಕು ನಮ್ಮನೆಗೆ | ನಲ್ಲೆ ಮೈ ನೆರೆದವಸಗೆಗೆ | ಸುರಗಿಯವನದಲ್ಲಿ ಸುಗುಣೆಮೈನೆರೆದಳು | ಸುರಗಿಯಹೂವುಬರಬೇಕು ಬರಬೇಕು ನಮ್ಮನೆಗೆ | ಸುಗುಣೆಮೈ ನೆರೆದವಸಗೆಗೆ |

* * *

ಭರತೇಶ್ವರನ ಶೋಭಾನೆ

ಶ್ರೀಸುರಪತಿನರಪತಿಫಣಿಪತಿನುತ | ಭಾಸುರಪದಯುಗಲ | ಸಾಕೇತಪುರಾ | ಧೀಶಕರಕಮಲನತತಭರ | ತೇಶನಪರಿಪಾಲ | ಸನ್ನುತಶೀಲ | ವಾಸವಾರ್ಚ್ಚಿತ ಪದಸರೋಜವಿ | ಳಾಸಮುಕ್ತಿ ಶ್ರೀರಮಾಪತಿ | ಸಾಸಿರಾಮಲನಾಮಪುರುಪರಮೇಶ ಪಾಲಿಸಭೀಷ್ಟ ಸಿದ್ಧಿಯ | ಲೇಸಿತ್ತು ಯಮಗೆಕೃಪೆದೋರು | ೧ | ವಾಣಿವಿಭವ ಕಟ್ಟಾಣಿ | ನಿಶ್ರೇಯಶ್ರೇಣಿ | ಕ್ಷೋಣಿಗಧಿಕಕಲ್ಯಾಣಿ | ಗೀರ್ವಾಗ್ವಾಣಿ | ತ್ರಾಣಿಪಂಕಜ ಪಾಣೀ | ಬ್ರಹ್ಮಚಾರಿಣಿಕಾಣಿಸುಮತಿಕೃಪಾಣಿ | ಪನ್ನಗವೇಣಿ | ಮಾಣದೆನ್ನ ಯಮನದ ಸಂಚಳಕಾಣಿಸದಳಿನವರತಗುಣಮಣಿ | ಜಾಣೆನಿನಗೆಣೆಗಾಣಿ ಮತಿಗಳಿ | ಗೂನಬಾರದೆ ಪಾಲಿಸೆನ್ನನು | ಏಣಲೋಚನೆಯೆಕೃಪೆದೋರು | ೨ | ಹುಂಡಾವಸರ್ಪ್ಪಿಣಿ ಕಾಲದೋಷದೊಳಿರ್ಪ್ಪ | ದಂಡಣೆಗಳ ಕೆಡಿಸಿ | ಸದ್ಧರ್ಮ್ಮವನು | ದ್ದಂಡದೊಳಗೆನಡೆಸಿ | ಭವ್ಯಜನಂಗಳ | ಹಿಂಡುಗಳನೆರಕ್ಷಿಸಿ | ಲೋಕವನೊಲಿಸಿ | ಚಂಡಿಚೌಡಿ ಚಾಮುಂಡಿ ಭೈರವಿ | ಚಂಡಗ್ರಹ ಶಿರಖಂಡಮಂಡಲೆ | ಚಂಡವಿಕ್ರಮ ಭೂತಗಣದೋದ್ದಂಡವಿಗ್ರಹ ಜ್ವಾಲಮಾಲಿನಿ | ಪುಂಡರೀಕಾಕ್ಷಿಕೃಪೆದೋರು | ೩ | ಪದ್ಮವಿಷ್ಟರೆಪದ್ಮ ಮಂದಿರೆ ಪದಪದ್ಮ | ಪದ್ಮರಾಗೋಜ್ವಲಿತೆ | ಸದ್ಗುಣಗಣ | ವಿದ್ರುಮಕರಪೂಜಿತೆ | ಸುಕ್ಷೀರಸಮುದ್ರ ಗಂಭೀರಯುಂತೆ | ಲೋಕೈಕಮಾತೆ | ಭದ್ರಪೀಠನಿವಾಸ ಶ್ರೀಜಿನ | ಮುದ್ರಕೀಲಿ ತಶೇಖರಾನ್ವಿತೆ | ಛಿದ್ರಭೂತಗಣಾಧಿತಾಡನ | ರುದ್ರರೌದ್ರ | ಭಯಂಕರಾನ್ವಿತೆ | ಪದ್ಮಾವತಿದೇವಿಕೃಪೆದೋರು | ೪ | ವೀರಸೇನಾನ್ವಯಾಂಬರ ಸೂರ್ಯರೆನಿಪಶ್ರೀ | ಚಾರುಸಮಂತಭದ್ರ | ದೇವಾಗಮದ್ವಾರ ಜ್ವಾಲಿನಿಮುದ್ರ | ಷಟ್ಕರ್ಮ್ಮವಿಚಾ ರುಸದ್ಗುಣಸಮುದ್ರ | ಶ್ರೀಮುನಿಭದ್ರ | ಚಾರುವಚನತುಷಾರ ಗುಣಗಂ | ಭೀರಸುಜನೋದ್ಧಾರಯತಿಮಂ | ದಾರಮುನಿಕುಲ | ಧೀರ ಆಗಮ | ಸಾರಶ್ರೀಲಷ್ಮೇ ಸೇನಮುನಿವರ | ಚಾರುಚರಣಕ್ಕೆ ನಮೋಯೆಂಬೆ | ೫ | ನವರತ್ನ ಖಚಿತರಾಜಿಪ ಮಂಟಪದೊಳು | ದಿವಿಜಕನ್ನೆಯರೊಲಿದು | ಮುತ್ತಿನಹಸೆ | ಸುವಿಧಾನದೊಳಗೊಯ್ದು | ಕತ್ತುರಿಕುಂಕುಮದ ಸಾರಣೆಗೈದು | ಪರಿವಾರವೈದು | ತವಕದೊಳುತರುಣಿಯ ರಸಂದಣಿ | ಕವಿಜನಸ್ತುತಿಯಿಂದಪಾಡುತ | ಭುವನದೊಡೆಯನಭರತ ರಾಜನ | ನವಕಳೇವರಸಾರ್ವ್ವಭೌಮನ | ಯುವತಿಯರು ಹಸಗೆ ಕರೆದರು | ೬ | ಆಯು ಧಶಾಲೆಯೊಳಗೆ ಸುದರ್ಶನಚಕ್ರ | ಆಯತದೊಳುಜನಿಸಿ | ಸಕಲಸುರನಿ | ಕಾಯವೆಲ್ಲ ವುಸ್ತುತಿಸಿ | ವ್ಯಂತರರು | ವೈಯ್ಯಾರದೊಳು ಭಜಿಸಿ | ಮಂಗಲವೆರಸಿ | ದಾಯದಿಂ ಪದಿನಾಲ್ಕು ರತ್ನನಿ | ಕಾಯಸಂಯುತಸಂಖ್ಯೆದೊರೆಗಳ | ರಾಯನುಮ್ಮಳೆವೇ ರಿಮನೆಯೋಳು | ಪ್ರೀಯದಿಂದಿಗ್ವಿಜಯಸಾಧಿಪ | ರಾಯನಹಸೆಗೆ ಕರೆದರು | ೭ | ಧರೆಯೊಳಗುಳ್ಳಸೇನೆಯ ಗೂಡಿ ಪೂರ್ವ್ವಸಾ | ಗರಮಗಧನಜಯಸೀ ಬೇಗದೊಳುಸಾ | ಗರವರತನ ಬರಿಸಿ | ತದ್ವಿಜೆ ಯಾರ್ದ್ |ದ ಗಿರಿಯಗುಹೆಯದಾಟಿಸಿ ವ್ಯಂತರ ರೊಲಿಸಿ | ಶರವಶದಿಚೀಲಾತವರತನ ಜರೆದುಸಿಂಧುಜಿನೇಂದ್ರ ರಂಘ್ರಿಯ | ಪರಮಭಕ್ತಿಯೊಳೆರಗಿ ಪೂಜಿಸಿ | ಸುರರು ಪೂಮಳೆಗರೆಯೆಹರುಷದಿ ಭರತರಾ ಜೇಂದ್ರಹಸೆಗೇಳ | ೮ | ಪೂರ್ವ್ವಪಶ್ಚಿಮಖಾಂಡದ ಮ್ಲೇಚ್ಛರೊಂದಿಸಿ | ಸರ್ವ್ವರತ್ನಗ ಳೊಪ್ಪಿಸಿ | ಹಿಮವಂತದೇವ | ರೂರ್ವ್ವಿಪೂಗಳೆಸ್ತುತಿಸಿ | ಗಂಗಾಸಿಂಧುದೇವಿ | ಈರ್ವ್ವರಮನ್ನಿಸಿ | ಚಿತ್ತವನೊಲಿಸಿ | ಊರ್ವ್ವಿಯೊಳುವೃಷಭಾಚಲಕೇತಾ | ಸರ್ವ್ವಕಟಕಸಮೇತಪೋಗಿಯೆ | ಪರ್ವ್ವತದಿತನ್ನಂಕಮಾಲೆಪೂರ್ವರಂದದಿಸ್ಥಾಪಿಸಿದ ಶ್ರೀಸಾರ್ವ್ವಭೌಮೇಂದ್ರಹಸಗೇಳು | ೯ | ಗಗನವಲ್ಲಭಪುರದಿಂದಲ್ಲಿ ನಮಿರಾಜ | ಸುಮತಿಸಾಗರಸಮೇತ | ಸೇನೆಯನುಕಂ | ಗೊಳಿಪಂತೆ ತಾನೋಡುತ | ಐಶ್ವರ್ಯದ | ಬಗೆಗೆಹೆ ಚ್ಚಳಗೊಳ್ಳುತ್ತ | ಸಂತೋಷಪಡುತ | ದುಗುಲದನಿವಾಳಿಯನುವಪ್ಪಿಸಿ | ಯುಗಳ ಕಂಗಳಮುಗಿದುವಿನಮಿಯು | ನಗುತವಿನಯದೊಳಾಡಿಹಾಸ್ಯವಸುಗುಣೆ ಮನ್ನಣೆ | ಇತ್ತು ಕಳುಹಿದ | ಜಗದಗ್ರಗಣ್ಯಹಸೆಗೇಳು | ೧೦ | ಕಾಳಿಂದಿಮಧುವಾಣಿ | ಆಳಿಯರೈಡಿಸಂ | ಮೇಳೆದೊಳಗೆವೇಳಲು | ಸುಭದ್ರೆಯ | ಆಳಾಪದೊಳುಪಾಡಲು | ಸಂತೋಷದಿಂ | ಹೇಳಲಳವೆನೋಡಲು | ಬಾಸ್ಪಾಂಬುಬರಲು ಹೇಳಿಕಳುಹಿಸೆ | ಬುದ್ಧಿಸಾಗರ | ಪೇಳಿದಂದಿರಜತಗಿರಿಯೊಳು | ಲೀಲೆಯಿಂನಮಿವಿನಮಿರಾಜರು | ತಾಲಿಬಂದಿಮೂಹೂರ್ತ್ತವೆಸಗಿದ | ಬಾಲಾರ್ಕ್ಕತೇಜಹಸೆಗೇಳು | ೧೧ | ಉಭಯ ಶ್ರೇಣಿಗಳದೇ ಶೋತ್ತರಶತಪುರಿ | ಪ್ರಭುಗಳೆಲ್ಲರುವೆರಸಿ | ಸುಭದ್ರೆಗೆ | ವಿಭವದಿಂ ಶೃಂಗರಿಸಿ | ದಿಬ್ಬಣಗೂಡಿ | ಶುಭಮುಹೂರ್ತ್ತವ ಸಾಧಿಸಿ | ಪಯಣವರಚಿಸಿ | ರಭಸದಿಂದಲೆ ಪೋಗಿ ಕಟಕದಿಪ್ರಭುಕುಲೋತ್ತಮ ಸಾರ್ವ್ವಭೌಮನ | ಸಭೆ ಸಹಿತ ನಮಿವಿನಮಿರಾಜರು | ಶುಭಮನದಿತಕ್ಕೈಸಿಮನ್ನಿಸಿದ | ಅಭಿನವಮದನನೆ ಹಸೆಗೇಳು | ೧೨ | ಪರಮಸಂಭ್ರವೆದೊಳಗಿರದೆ ಗಂಗಾಸಿಂಧು | ಸುರದೇವಿ ಯರಕರೆಸಿ | ಸುಭದ್ರೆನೊಡ್ಹರುಷದಿಂ ಮನವೆಳಸಿ | ಅಗ್ರಜ ನಿಂತು | ಅರಿದಪ್ಪಣೆಯ ಪಾಲಿಸಿ | ಹರ್ಮ್ಯಕೆಗಮಿಸಿ | ತೆರಳಿಯೊಳುಹಾಸ್ಯಗಳನಾಡುತ | ಬೆರಳ ಮುದ್ರಿಕೆಯನ್ನು ಸೆಳೆಯುತ | ಭರದಿ ಈರ್ವರಹೇಮಕರಗಳ | ಪಿಡಿದು ಮುದ್ರಿಕೆ ಬೆರಳಿಗಿಟ್ಟ ಶ್ರೀ | ಭರತೇಶನರಾಣಿಹಸೆಗೇಳು | ೧೩ | ಸಕಲದಿಗ್ದೇಶದ | ಸಕಲಕಿನ್ನರಿಯರು ಪ್ರಕಟಿಸೆಮಂಗಳವ ಸುಭದ್ರೆಗೆ | ವಿಕಸಿತಕಂಕಣದ | ತೊಂಡಿಲುಗಟ್ಟಿ | ಸಖಿಯರಿ ರದೆಮೆರೆವ ಸಂಭ್ರಮದೊಳಿರುವ | ಸುಖಮುಖೋದ್ಗತವಾಣಿಯನು ಶ್ರೀಅಖಿಲಡವ | ಳಾಗಮವಪಾಡಲು | ಅಖಿಲಮರಶುತ ಕೀಲಿತದಪಾ | ಲಕಿಯೊಳ್ ಬಿಜಯಂ ಗೈಸಿಗಮಿಸಿದ | ಮುಕುರವದನೆಯೆಹಸೆಗೇಳು | ೧೪ | ಸರಸಿಜಗಂಧಿಯರ್ವ್ವೆ ರಸಿಚಾಮರಗಳ | ತರತರದೋಳುಬೀಸುತ್ತ ದೇಹದಕಾಂತಿ | ಪರಿಪರಿಯೊಳುಸೂಸುತ್ತ | ಪಾವುಗೆ ಮೆಟ್ಟಿ | ಸ್ಮರನಿಗಿಮ್ಮಡಿದೋರುತ್ತ | ನಲ್ಲನಸ್ಮರಿಸುತ್ತ | ಪರಮಹರುಷವತಾಳಿ ಮನದೊಳ | ಗಿರದೆಹೇಮಾಮೃತವಮೀಯಲು | ಭರದಿಧಾರೆಯಮಂಟಪಕೆ ತಾ | ನಿರದೆಮೆಟ್ಟಕ್ಕಿಯೊಳು ನಿಂದಶ್ರೀ | ಭರತೇಶನರಾಣಿಯಹಸೆಗೇಳು | ೧೫ | ಇಂದುವಿನಂದದಿಸೌಂದರಪಡೆದಳ | ಇಂದುವದನೆಕಾಂತೆಯ | ಕುಂದರದನೆಬಂದುಗೆ ಬಾಯ್ದೆರೆಯ | ಸುಂದರವೆತ್ತ | ಸಿಂಧುರದನಡೆಯ | ಸುಭದ್ರೆಯ | ತಂದುಮೆಟ್ಟಿಕ್ಕಿ ಯೊಳು ನಿಲ್ಲಿಸೆ | ಅಂದವನುಶ್ರೀಸಾರ್ವ್ವಭೌಮನು | ಕಂಡುಮನದೊಳುಜಮ್ಮ ದಟ್ಟಲು | ಇಂದ್ರವೈಭವದಿಂದಗಮಿಸಿದ | ಕಂದರ್ಪ್ಪರೂಪ ಹಸೆಗೇಳು | ೧೬ | ಮಂ‌‌ಗಳ ವಾದ್ಯಗಳ್‌ ಮುಳುಗಲು ದಿಕ್ತಟವ | ಅಂಗನೆಯರು ಬರಲು | ಭೂಸುರರು ಶ್ರೀ ಮಂಗಲಾಷ್ಟಕವಾಡಲು | ಮುತ್ತಿನತೊಂದಿ | ಅಂಗಳಿರದೆಸೂಡಲು | ಶೋಭನವ ಪಾಡಲು | ಡಂಗೂಢಾಳಿಪರಾಜರಾಯನ | ಅಂಗಕಿಕ್ಕಲುಪುಷ್ಟಮಾಲೆಯ | ಅಂಗನಾಮಣಿಗಿಡಲುತಿಲಕವ | ಸಂಗಡದಿ ಕೈಧಾರೆಯೆರೆಯಲು | ಅಂಗನೆಯರುಹಸೆಗೆ ಕರೆದರು | ೧೭ | ಹರುಷದಿಂದ ದಂಪತಿಗಳು ಹೋಮವನು ಬಲ | ವೆರಸಿ ವಂದನೆಗೆಯ್ಯುತ್ತ | ದೇವಿಯರುಕುಳ್ಳಿರಿಸಿ ಗಾನವಪಾಡುತ್ತ ಸೌರುಭಫಲಭರಿತ ಧಾನ್ಯಗಳಿಡುತ್ತ | ರಸಹಾಸ್ಯದೋರುತ | ತರುಣಿಯರುಮುತ್ತಿನಸುರನ್ನದ | ಹರಿನೀಲ ದಾರತಿಯನ್ನು ಕುಲಿಶದ | ವರವೈಢೂರ್ಯ್ಯದಪವಳಹೇಮದಿ | ಪರಿಪರಿಯರತ್ನದಲಿ ರಚಿಸಿದ | ಮರಕತದಾರತಿಯಬೆಳಗಿದರು | ೧೮ | ಮಾಗೆಯನೀಗಿದ ಕೋಗಿಲೆಯಂದದಿ | ರಾಗರಸದಿ ಪಾಡುತ್ತ | ನಾಗಿಣಿಯರು | ಶೋಭೆಯಿಂ ನರ್ತ್ತಿಸುತ್ತ | ಆಗಮದೊಳು | ನಾಗವಲಿಯಮಾಡುತ್ತ | ದಾನವಕೊಡುತ | ಮೇಘೇಶ್ವರಗೆತಾನಿರದೆಪೇಳಲು ತ್ಯಾಗದೊಳು ಕಟಕದೊಳು ಮನ್ನಿಸಿ | ದಾಗ ಭೂಸುರರೆಲ್ಲಜಯವೆನೆ | ರಾಗದಿಂ ಕಿನ್ನರರು ಪಾಡಲು | ನಾಗಿಣಿಯರು ಹಸೆಗೆ ಕರೆದರು | ೧೯ | ಸರಿಗಮಪಧನಿಸಮೆಂಬೇಳು ಸ್ವರಗಳಿಂದ | ಸುರವರ ನಾರಿಯರು | ನರ್ತ್ತಿಸುತಶ್ರೀ | ಭರತರಾಜನಪಾಡಲು ಪಾಠಕಜನ | ರಿರದೆಪೊಗಳು ತಿರಲು | ಗಾನವವೇಳಲು | ತರಿಕುತಜ್ಜಂತರಿಕುತಾಹತ | ತಾರಿಕಿಟತಜ್ಝಂತದಿಕಂತಕ | ಗಾರಿಗಮಪಧಮಪನಿಪಸಸನಿ | ಸಾರಿರಿಗಮಪಗಮಪಮಗರಿ | ಸಾರೋದಿನತ್ತೃನ ದೊಳೆಸೆದರು | ೨೦ | ವಿಕಸಿತಕಮಲರಾಕೆಂದುವದನೆಯರು | ಪ್ರಕೃತಝಂಕೃತವೆನ್ನುತ್ತ ನಾರಿಯರು ಶ್ರೀವಿಕಲವುಮ್ಮಳಿವೇರುತ್ತ | ಸಕಲರಾಗಸಖೀ | ಯರೊಲಿದುಪಾಡುತ್ತ | ಅಭಿನವದೋರುತ | ತಕಿಟಧಿಮಿತಾಂ ತೊಂಗಿಣಾಂಗಿಣಿ | ಧಿಕಟಝಣ ಝಣಂತರಿಕಿಣ | ಪ್ರಕೃತಝಾಣಂಝಣಂತಕ್ಕಿಣ | ನಿಖಿಳನಿಗಮಪ | ಗಮಪವೆನಿಸುವ | ಸಕಲನರ್ತ್ತನದೊಳೆಸೆದರು | ೨೧ | ಇಂತುಮಂಗಳವಾದ್ಯದೊಡನೆ ಖೇಚರನಮಿ | ಸಂತಾನದಲಿಪುಟ್ಟಿದ | ಕುವರಿಯರ | ಸಂತೋಷದಲಿ ನೋಡಿದ | ಪುತ್ರರಿಗೆ ತಾನೋಂತುಮದುವೆಮಾಡಿದ | ನಂಬಿಗೆಯದೋರುತ | ಕಂತುರಾಜರ ಬರಿಸೆಬರ ದಿರಲಂತರಂಗವತಿಳಿದುಚಿತ್ತಕೆ | ಇಂತು ವೈರಾಗ್ಯವನುಪುಟ್ಟಿಸಿ | ಕಂತುರಾಜರಕಂಡು ತೆರಳಿಯ | ನಂತವೈಭವದಿಪುರಕ್ಕೈದಿ | ೨೨ | ಸಾಕೇತಪುರ ದೊಳನೇಕ ಚೈತ್ಯಾಲಯ | ನಾಕೇಶನಿಂರಚಿಸಿ | ಜಿನಧರ್ಮ್ಮವ | ಲೋಕದೊಳಗೆ ಪರ್ಬ್ಬಿಸಿ | ಕೈಲಾಸಕ್ಕೆ ನಾಕರೆಲ್ಲರಬರಿಸಿ | ಅಭಿಷೇಕಗೈಸಿ | ಲೋಕನಾಥನೆಂದೆನಿಪ ಸಕಲವಿ | ವೇಕದೊಳು ಜನರನ್ನು ಪಾಲಿಸ | ನೇಕಕಾಲವು ರಾಜ್ಯ ರಕ್ಷಿಸಿ | ಕಾಕುಕರ್ಮ್ಮವಬಿಡದೆಕೆಡಿಸಿದ | ಶ್ರೀ ಕಾಂತಜಿನೇಂದ್ರ ಹಸೆಗೇಳು | ಇಂತುಮಂಗಳವಪಾಡುವಕೇಳುವ ಜನ | ಸಂತಾನಸುಖವಿರಲಿ | ನಿತ್ಯಕಲ್ಯಾಣ | ವಾಂತುಮಂಗಳವಾಗಲಿ | ಭರತಚಕ್ರಿಗಿ | ದ್ದಂತೆನವನಿಧಿಬರಲಿ | ಸಂಪದಹೆಚ್ಚಲಿ | ಅಂತು ಮಧುಗಿರಿಪುರದಬಸದಿಯೊಳ್ | ದಂತಿವೈರಿಯಪೀಠಮಧ್ಯದಿ | ನಿಂತುವೈರಾಗ್ಯವನು ಪುಟ್ಟಿಸಿ | ಕಂತುರಾಯನಕಂಡು ತೆರಳಿದ | ನಂತವೈಭವನೆಹಸೆಗೇಳು | ೨೪ | ಧರೆಯೆಳಾಸ್ಥಾನಕ್ಕಾಗಿ ಶೋಭನಸ್ಥಿರವಾಗಿ | ಇರಲಿ ಸಕಲಜನರು | ನಿರುತವಡೆ | ಪರಮಸಂಭ್ರಮವಿರಲು | ಒರಲುಮನೋಹರು ಷದೊಳೋಲಾಡಲು | ಸುಖದೊಳಗಿರಲು | ಭರತಚಕ್ರಿನರೇಂದ್ರನಂದದಿ | ಸ್ಥಿರದಿ ಸುಖದೊಳೋಲಾಡಿ ಹರುಷದಿ | ಇರದೆವರಮುಕ್ತಿಕಾಂತೆಗೆತಾ | ನಿರತರಾಗುವರೆಂ ದುಪೇಳಿದಭರತಕಲ್ಯಾಣಧವಲವ | ೨೫ |

* * *