ಅಷ್ಟಮೋಧ್ಯಾಯ ಪ್ರಾರಂಭಃ

ಅಥನಶ್ವಾಜಿನಾಧೀಶಮನಘಂವಿಶ್ವವೆದಿನಂ | ಬ್ರಾಹಣಾದಿತ್ರಿವರ್ಣಾನಾಮ ಘಭೆದೊ ವಿಧೀಯತೆ || ೧ || ಚತುರ್ವಿಧಂಭವೆದತದಾರ್ತವಾದಿವಿಭದತಃ | ಆರ್ತ್ತವಂ ಸೌತಿಕಂಆರ್ತಂತತ್ಸಂಸರ್ಗಜಮಿತ್ಯಪಿ || ೨ || ಅರ್ತವಂಪುಷ್ಪರಜಸಿರುತುಶ್ಚೆತ್ಯ ಭಿಧೀಯತೆ | ಪ್ರಕೃತಂವಿಕೃತಂಚೆತಿಸ್ತ್ರೀಣಾಂತದ್ವಿವಿಧಂಭವೆತ್ || ೩ || ಕಾಲಜೆತ್ರ್ಯ ಹಮಶೌಚಂತದ್ರಜೊದರ್ಶನಾತ್ಸರಂ | ಅರ್ಧರಾತ್ರಾತ್ಪರಂತ ಚ್ಚೆತ್ಪ್ರಭಾ ತಾದ್ಯಘವಿಷ್ಯತೆ || ೪ || ವಿಕೃತೆತದ್ರಜೊಯಾವತ್ತಾವತ್ತಸ್ಯಾಆಘಂಭವೆತ್ | ತದ್ವತೀದೂಷಿತಾಭಿಖ್ಯಾಪ್ರಕೃತೆ ತುರಜಸ್ವಲಾ || ೫ || ಅಸ್ನಾನಾತ್ಪುಪ್ಪಿಣೀಬ್ರಹ್ಮಚಾರಿ ಣಿಮಂಡನೋಜ್ಹತಾ | ಅಂಜಿನಾಭ್ಯಂ ಗಗಂಧಾನುಲೇಪಸ್ರಗ್ವರ‍್ಜಿ ತಾಭವೆತ್ || ೬ || ತಯಾಂಸಹಾ

* * *

ಅನಂತರದಲ್ಲಿ ಪಾಪರಹಿತನಾದಂಥ, ಸಮಸ್ತವನ್ನು ತಿಳಿದಂಥ, ಜಿನೇಸ್ವರನನ್ನು ನಮಸ್ಕರಿಸಿ, ಬ್ರಾಹ್ಮಣಾದಿ ಮೂರುವರ್ಣಗಳಿಗೆ ಸೂತಕಭೇದವುಹೇಳಲ್ಪಡುತ್ತೆ || ೧ || ಸೂತಕವು ಆರ್ತವ ಸಾತಿಕ, ಆರ್ತ, ತತ್ಸಂಸರ್ಗಜಿ, ಇಂತೆಂದು ನಾಲ್ಕು ಪ್ರಕಾರವು || ೨ || ಆರ್ತವ ಷಷ್ಟ, ರರಸ್, ಋತು, ಇಂತೆಂದು ಹೆಸರುಗಳು. ಸ್ತ್ರೀಯರುಗಳಿಗೆ ಆರುತುವು, ಪ್ರಕೃತ, ವಿಕೃತ, ವೆಂದು ಎರಡು ಭೇದವು || ೩ || ತಿಂಗಳು ತಿಂಗಳಿಗೆ ಆಗತಕ್ಕ (ಪ್ರಕೃತ) ರುತುವಿನಲ್ಲಿ ಆ ಋತು ಕಂಡ ಮೇಲೆ ಮೂರುದಿವಸ ಆಶೌಚವು, ಅರ್ಧರಾತ್ರಿಯಾದ ನಂತರವಾದರೆ ಪ್ರಾತಃಕಾಲಾದಿಯಾಗಿ ದಿಯಾಗಿ ಮುರುದಿವಸವು ಆಪೇಕ್ಷಿಸಲ್ಪಡುತ್ತೆ || ೪ || ವಿಕೃತಿಯಲ್ಲಿ ಆ ರಜಸ್ಸು ಎಷ್ಟುದಿವಸ ಇರುವದೋ ಅಷ್ಟುದಿವಸಮಾತ್ರಾ ಆ ಶೌಚವು, ದ್ರವ್ಯ ರೋಗಾದಿಗಳಿಂದ ಆದ ಸೂತಕಿಯು (ದೂಷಿತಾ) ಎಂದೂ, ಮಾಸ ಮಾಸಕ್ಕೆ ಆಗುವ ಸೂತಕಿಯು (ರಜಸ್ವಲಾ) ಇಂತೆಂದು ಹೆಸರು ಉಳ್ಳವಳು || ೫ || ಪುಷ್ಪವತಿಯು, ಆ ನಾಲ್ಕು ನೇದಿವಸದ ಸ್ತಾನಪರ್ಯಂತರದಲ್ಲೂ, ಬ್ರಹ್ಮಚಾರಿಣಿಯಾಗಿಯು, ಅಲಂಕಾರ ರಹಿತೆಯಾಗಿಯು, ಕಣ್ಣುಕಪ್ಪು, ಅಭ್ಯಂಗನ, ಗಂಧ, ಪುಷ್ಪಮಾಲೆ, ಇವುಗಳನ್ನು ಬಿಡತಕ್ಕದ್ದು || ೬ || ರಜಸ್ವಲೆಯೊಡನೆ ಊಡಮಾಡತಕ್ಕ ಎರಡು ವರ್ಷದ ಹುಡುಗನು ಸ್ನಾನದಿಂದ ಶುದ್ಧಿಯು ಆ ಸೂತಕಿಯನ್ನು ಮುಟ್ಟುತ್ತ ಸ್ತನ್ಯ

* * *

ರ್ಶ್ನಬಾಲಸ್ತುದ್ವ್ಯಬ್ದ್ಯಃಸ್ನಾನಶುದ್ದ್ವತಿ | ತಾಂಸ್ಪೃರ್ಶಸ್ತನ್ಯಪಾಯೀವಾಪ್ರೊಕ್ಷಣೆನ ವಿಶುದ್ಧ್ಯತಿ || ನಸ್ವಪೆ ದ್ವೃಕ್ಷಮೂಲೆಸಾಖಟ್ಟಾದೌಚದಿವಾಪಿಚ | ಸ್ಮರೆತ್ಪಂಚನಮಸ್ಕಾರಮಂ ತ್ರಂಪುಣ್ಯಸ್ತವಾನ್ಸದಾ || ೮ || ರಜಸ್ವಲಾಚತುರ್ತ್ಥೆಹ್ನಿಸ್ನಾಯಾದ್ಗೊಸರ್ಗ್ಗತಃಪರಂ | ಪೂರ್ವಾಹ್ಣೆಘಟಿಕಾಷಟ್ಕಂಗೊಸರ್ಗ್ಗಮಿತಿ ಭಾಷಿತಂ || ೯ || ತಸ್ಮಿನಹನಿಯೊಗ್ಯಸ್ಯಾದು ದಕ್ಯಾಗೃಹಕರ್ಮ್ಮಣಿ | ದೆವಪೂಜಾಗುರೂಪ್ರಾಪ್ತಿ ಹೂಮಸೆವಾಸು ಪಂಚಮೆ || ೧೦ || ಸ್ರಾವೆಗರ್ಭಸ್ಯಮಾತುಸ್ಯಾದಾಶೌಚಂದಿವಸತ್ರಯಂ | ಪಾತೆಸತಿಯಥಾ ಮಾಸದಿವಸಂಚತದಿಪ್ಯತೆ || ೧೧ || ಅಪಪ್ರಸೂತಾವಾಶೌಚಂಸೂತಿಕಾಶೌಚವನ್ಮತಂ | ಪಿತುಃಸ್ನಾನಾಂತಮೆವಾಸ್ಯಾ ದಫೆಮೆತೆಷುಸರ್ವದಾ || ೧೨ || ಪಾತೆಪಪ್ರಸವೆಚೈವಜ್ಞಾತೀ ನಾಂಸ್ನಾನಮಿಷ್ಯತೆ | ಸ್ರಾವಃಪಾತೊ ಪ್ರಸೂತಿಶ್ಚಯಾನ್ಮಾಸಂತ್ರಯೆ

* * *

ಪಾನಮಾಡುವ ಬಾಲಕನು ಜಲಪ್ರೋಕ್ಷಣದಿಂದ ಶುದ್ಧಿಯು || ೭ || ಆ ರಜಸ್ವಲೆಯು, ಮರದಕೆಳಗೆ, ಮಂಚ ಮೊದಲಾದ್ದದಲ್ಲಿ, ಹಗಲಲ್ಲಿ ಕೂಡನಿದ್ರೆಮಾಡಬಾರದು. ಪಂಚನಮಸ್ಕಾರ ಮಂತ್ರವನ್ನು, ಪುಣ್ಯಕರವಾದ ಸ್ತೋತ್ರವನ್ನು ಸ್ಮರಿಸತಕ್ಕದ್ದು. ಬಾಯಿಯಿಂದ ಉಚ್ಚರಿಸಕೂಡದು || ೮ || ನಾಲ್ಕನೇದಿವಸ ದನಗಳು ಬಿಟ್ಟ ನಂತರ ರಜಸ್ವಲೆಯು ಸ್ನಾನಮಾಡತಕ್ಕದ್ದು. ಸೂರ‍್ಯೋದಯವಾದ ಆರು (೬) ಘಳಿಗೆಗೋವು, ಬಿಡುವಕಾಲವೆಂದು ಹೇಳಲ್ಪಟ್ಟಿತು || ೯ || ಆ ಸ್ನಾನಮಾಡಿದಾಕೆಯು ಆ ದಿವಸ ಅಡಿಗೆ ಮುಂತಾದ ಮನೇ ಕೆಲಸದಲ್ಲಿ ಯೋಗ್ಯಳು. ಜಿನಪೂಜೆತಪಸ್ವಿಗೆ ಆ ಹಾರದಾನ, ಹೋಮಕರ್ಮದ ಉದ್ಯೋಗ ಇವುಗಳಿಗೆ ಐದನೇದಿವಸ ಯೋಗ್ಯಳು || ೧೦ || ಗರ್ಭಕ್ಕೆ (ಸ್ರಾವೆ) ಅಂದರೆ ಮೂರುತಿಂಗಳೊಳಗೆ ನಾಶವಾದರೆ, ತಾಯಿಗೆ ಮೂರುದಿವಸ ಆ ಶೌಚವು (ಪಾತ) ಅಂದರೆ ಆರು ತಿಂಗಳೊಳಗೆ ಗರ್ಭನಾಶವು. ಆದರೆ ಅಗ್ಗೆ ಎಷ್ಟುತಿಂಗಳೂ ಅಷ್ಟು ದಿವಸ ಆಶೌಚವು || ೧೧ || (ಅಪಪ್ರಸೂತಾ) ಅಂದರೆ ಒಂಭತ್ತು ತಿಂಗಳೊಳಗೆ ಗರ್ಭನಾಶವಾದರೆ ಸೂತಿಕಾಶೌ ಚದಂತೆ ಆ ಶೌಚವು. ಅಂದರೆ ಹತ್ತು ದಿವಸ ಆಶೌಚವು ಹಿಂದೆ ಹೇಳಿದಮೂರು ವಿಧ ಆ ಶೌಚದಲ್ಲಿ ತಂದೆಗೆ ಸ್ನಾನಮಾತ್ರದಿಂದಲೆ ಶುದ್ಧಿಯು || ೧೨ || ಪಾತದಲ್ಲೂ, ಅಪಪ್ರಸವದಲ್ಲಿಯೂ ಕೂಡ ಜ್ಞಾತಿಗಳಿಗೆ ಸ್ನಾನಮಾತ್ರವೇಯ, ಅಪೇಕ್ಷಿಸಲ್ಪ

* * *

ತ್ರಯೆ || ೧೩ || ಅನತೀತದಶಾಹಸ್ಯಬಾಲಸ್ಯಮರಣೆಸತಿ | ಪಿತ್ರೊರ‍್ದಶಾಹಮಾಶೌಚಂತ ದುಪೈತಿಚಸೂ ತಕಾತ್ || ೧೪ || ದಶಾಹಸ್ಯಾಂತದಿವಸೆಮೃತಾಊರ್ಧ್ವಂದಿನತ್ರಯಂ | ಆಘಂತತಃಪ್ರಭಾತೆತುದಿವಸತ್ತಿತಯಂಪುನಃ || ೧೫ || ಊರ್ಧ್ವಂದಶಾಹಾನ್ಮರಣೆ ಮಾತುಶ್ಚಜನಕಸ್ಯಚ | ದಶಾಹಂಸೊದರಾಣಾಂಚಜ್ಞಾತಿನಾಂತುತದಾಪ್ಲತಿಃ || ೧೬ || ಸಂಸ್ಕಾರಸ್ಯಾಗ್ನಿಖನನಂನಾಮ್ನಃ ಪ್ರಾಗ್ಬಾಲಕಸ್ಯತು | ದಂತಾದುಪರಿ ಬಾಲಸ್ಯದಹನಂ ಸಂಸ್ಕೃತಿರ್ಭವೆತ್ || ೧೭ || ಪ್ರಸವೆಪಿತೃಮುಖ್ಯಾನಾಮಾಸನ್ನಾನಾಂದಶಾಹಕಂ | ತುರ್ಯುಂ ವಿಶ್ವಂತರಾಂತಾಸ್ಯುರಾಸನ್ನಾಸ್ತತ್ಪರೆಪರೆ || ೧೮ || ಪಂಚಮಾನಾಂತುಷಡ್ರಾತಂ ಷಷ್ಟಾನಾಂತು ಚತುರ್ದಿನಂ | ಸಪ್ತಮಾನಾಂತ್ರಿರಾತ್ರಂಸ್ಯಾತ್ತದೂರ್ಧ್ವಂನಾಪ್ಲವಾದಿ ಕಂತಂ || ೧೯ || ವಿದುಷಾಮಾಹಿ ತಾಗ್ನೀನಾಂಗುಣೊತ್ಕರ್ಷಜಿಷಾಂಮೃತೌ | ಆಶೌಚಂದ

* * *

ಡುತ್ತೆ. ಸ್ರಾವ, ಪಾತ, ಅಪಪ್ರಸೂತ ಎಂಬ ಈ ಮೂರು ಕ್ರಮವಾಗಿ ಮೂರುಮೂರುತಿಂಗಳಲ್ಲಿ ಅಪೇಕ್ಷಿಸಲ್ಪಡುತ್ತೆ || ೧೩ || ಹತ್ತು ದಿವಸದೊಳಗೆ ಬಾಲಕನು ಮರಣವಾದರೆ ತಂದೆತಾಯಿಗಳಿಗೆ ಹತ್ತು ದಿವಸ ಆಶೌಚವು, ಆ ಬಾಲಕನ ಮರಣ ಸೂತಕವು ಆ ಜನನ ಸೂತಕದಲ್ಲಿಯೇ ಕಳಿಯುತ್ತೆ || ೧೪ || ಹತ್ತನೇದಿವಸದ ಕೊನೆಯಲ್ಲಿ ಆ ಸಿಸು ಮರಣವಾದರೆ ಮೇಲೆ ಎರಡುದಿವಸ ಆ ಮರಣ ಸೂತಕವು. ಅನಂತರದಲಿ ಪುನಹಾಪ್ರಭಾತದಲ್ಲಿ ಮರಣವಾದರೆ ಮೂರುದಿವಸ ಆ ಶೌಚವು || ೧೫ || ಹತ್ತು ದಿವಸದ ಅನಂತರ ಸಿಸುವು ಮರಣವಾದರೆ, ತಂದೆ, ತಾಯಿ, ಸಹೋದರರು ಇವರುಗಳಿಗೆ ಹತ್ತು ದಿವಸ ಆ ಶೌಚವು ಜ್ಞಾತಿಗಳಿಗೆ ಸ್ನಾನಮಾತ್ರವೇಯೆ || ೧೬ || ಬಾಲಕನು ಹೆಸರಿಡುವದಕ್ಕೆ ಮುಂಚೆ ಮರಣ ಹೊಂದಿದರೆ, ಭೂಮಿಯಲ್ಲಿ ಅಗದು ಹೂಳುವದು, ಸಂಸ್ಕಾರವು ಆಗುತ್ತೆ ಹಲ್ಲು ಹುಟ್ಟಿದ ನಂತರ ಸುಡುವದು ಸಂಸ್ಕಾರವು ಆಗುತ್ತೆ. || ೧೭ || ಪ್ರಸವಸೂತಿಕದಲ್ಲಿ, ತಂದೆ ಮುಂತಾದವರಿಗೂ ಆ ಸನ್ನರಿಗೂ ಹತ್ತು ದಿವಸವು ಆಸನ್ನರೆಂದರೆ ನಾಲ್ಕು ತಲೆಯವರಿಗೆ ಇರುವ ಸಮಸ್ತರೂ ಆಸನ್ನರು || ೧೮ || ಐದನೇತಲೆಯವರಿಗೆ ಆರುದಿವಸವು, ಆರನೇ ತಲೆಯವರಿಗೆ ಐದುದಿವಸವೂ ಏಳನೇ ತಲೆಯವರಿಗೆ ಮೂರುದಿವಸವು, ಅಲ್ಲಿಂದ ಮೇಲೆ ಸ್ನಾನವೂ ಇಲ್ಲ || ೧೯ || ವಿದ್ವಾಂಸರು, ಆಹಿತಾಗ್ನಿಗಳು, ಗುಣಶ್ರೇಷ್ಠರು, ಇವರು ಮರಣಹೊಂ

* * *

ಹದನಾದಿಸ್ಯಾದನ್ಯೆಷಾಂಮರಣಾಂದಿಕಂ || ೨೦ || ಮರಣೆತುಪ್ರಸೂತೌಚಸೂತ ಕಂಪಂ ಚವಾಸರಾನ್ | ಕ್ಷತ್ರಿಯಾಣಾಂದ್ವಿಜಾನಾಂಚವಾವಾಸರಾಣಿದಶೈವತು || ೨೧ || ದಿನಾನಿದ್ವಾದಶೈವಸ್ಯಾತ್ತ್ರಿವರ್ಣನಾಂಪರಿಸ್ಫುಟಂ | ಶೂದ್ರಾಣಾಂಪಕ್ಷಮಾತ್ರಂ ತತ್ಪರಸಶ್ಶುದ್ಧಿರೀರಿತಾ || ೨೨ || ತದಾಪುಂಪ್ರಸವೆಮಾತುರ್ದೆ ಶಾಹಮನಿರೀಕ್ಷಣಂ | ಅಘಂವಿಂಶತಿರಾತ್ರಸ್ಯಾದನಧೀಕಾರಲಕ್ಷಣಂ || ೨೩ || ಸ್ತ್ರೀಪ್ರಸೂತಾತಧೈವಸ್ಯಾದ ದಿನಿರೀಕ್ಷಣಂ | ಪಶ್ಚಾದನಧಿಕಾರಾಫಂತಸ್ಯಾತ್ರಿಂಶದ್ದಿನಂಮತಂ || ೨೪ || ಅವಶಿಷ್ಟಾಹಮಾಶೌಚಮಂತರಾವಿದಿತೆಸತಿ | ಅರ್ವ್ವಾಗ್ದಶಾಹಾಜ್ಜನ್ಮಾದೌತತ ಊರ್ಧಂದಿನತ್ರಯಂ || ೨೫ || ವಿದಿತೆವತ್ಸರಾದೂ ರ್ಧ್ವಂಸ್ನಾನಮೆವವಿಧೀಯತೆ | ಅತೀತಕಾಲಜಾಶೌಚಂಜನನೆತುನವಿದ್ಯದೆ || ೨೬ || ಉಪನೀತಿವಿಹೀನಸ್ಯಮಣೆ ಪ್ಯತಿಕಾಲಜಂ | ಅಫಂನಾಚರಿತೆಸ್ವೀಯೈಃ ಸ್ನಾನಮೆವತದಾಭವೆತ್ || ೨೭ || ಎವಂದಶಾ ಹಪರ್ಯ್ಯಂತಮೆ

* * *

ದಿದರೆ ಆ ಶೌಚವು ದಹನಾದಿಯಾಗಿಯು, ಇತರರಿಗೆ ಮರಣಾದಿಯಾಗಿ ಆ ಶೌಚವು ಆಗುತ್ತೆ || ೨೧ || ಮರಣಪ್ರಸೂತದಲ್ಲಿ, ಬ್ರಾಹ್ಮಣರಿಗೆ ಹತ್ತು ದಿವಸವು ಕ್ಷತ್ರಿಯರಿಗೆ ಐದುದಿವ್ಸವು ವೈಶ್ಯರಿಗೆ ಹನ್ನೆರಡು ದಿವಸವು ಶೂದ್ರರಿಗೆ ಒಂದು ಪಕ್ಷವು ಆಶೌಚವು ಅನಂತರದಲ್ಲಿ ಶುದ್ಧಿಯು || ೨೨ || ತಾಯಿಗೆ ಗಂಡುಮಗ ಹುಟ್ಟಿದರೆ ನೊಡುವದಕ್ಕೆ ಯೋಗ್ಯವಲ್ಲದ್ದು ಹತ್ತುದಿವಸವು. ದೇವಪೂಜಾದಿ ಅಧಿಕಾರ ಇಲ್ಲದೇ ಇರುವ ಸೂತಕವು ಇಪ್ಪತ್ತು ರಾತ್ರಿಯು ಆಗುತ್ತೆ || ೨೩ || ಹೆಣ್ಣು ಮೊಗು ಹುಟ್ಟಿದರೆ ನೋಡುವದಕ್ಕೆ ಯೋಗ್ಯವಲ್ಲದ್ದು ಹತ್ತುದಿವಸವು ಅನಂತರ ದೇವಪೂಜಾ ದಿಅಧಿಕಾರ ಇಲ್ಲದೇ ಯಿರುವದಯ ಮೂವತ್ತು ದಿವಸವು ಸಮ್ಮತವು || ೨೪ || ಜನನಾದಿ ಸೂತಕವು ಹತ್ತು ದಿವಸದೊಳಗೆ ತಿಳಿದರೆ ಉಳಿದ ದಿವಸದ ಆಶೌಚದಲ್ಲೇ ತೀರುತ್ತೆ ಹತ್ತು ದಿವಸ ಆದ ಮೇಲೆ ಆದರೆ ಮೂರುದಿವಸ ಆಶೌಚವು || ೨೫ || ಒಂದು ವರ್ಷದನಂತರ ಕೇಳಿದರೆ ಸ್ನಾನವೇ ಮಾಡಲ್ಪಡುತ್ತೆ ಹತ್ತು ದಿವಸ ಕಳಿದಬಳಿಕ ಜಾತಾಶೌಚವು ಇರುವದಿಲ್ಲ || ೨೬ || ಉಪನಯನವಿಲ್ಲದ ಮರಣವು ಹತ್ತು ದಿವಸ ಕಳಿದಿದ್ದರೆ ಆತನ ಸಂಬಂದಿಳಿಗೆ ಆಶೌಚವಿಲ್ಲಸ್ನಾನ ಮಾತ್ರವೇಯೇ ಆಗುತ್ತೆ ತತ್ಕರ್ಮ್ಮವಿಧೀಯತೆ | ಪಿಂಡಂತಿಲೊದಕಂಚಾಪಿಕರ್ತ್ತಾದದ್ಯಾತ್ತದಾನ್ವಹಂ || ೨೮ || ಎಕಾದಶಾಹ್ನಿ ದಹನಭೂಷಾವಾಹನಕಾರಕಾನ್ | ಇತಿಷಟ್ಟುರುಷಾಃ ಸ್ನಾನಭೊಜನೈಃ ಪರಿತರ್ಪ್ಪಯೆತ್ || ೨೯ || ದ್ವಾದಶೆದಿವಸೆಶ್ರೀಮಜ್ಜಿನಪೂಜಾಪುರಸ್ಸರಂ | ಮುನೀನಾಂ ಬಾಂಧವಾನಾಂಚಶ್ರಾದ್ಧಂಕುರ್ಯ್ಯಾತ್ಸಮಾಹಿತಃ || ೩೦ || ಶ್ರದ್ಧಯಾನ್ನ ಪ್ರಧಾನಂತುಸದ್ಬ್ಯಃಶ್ರಾದ್ಧಮಿತೀಷ್ಯತೆ | ಮಾಸೆಮಾಸೆಭವೆತ್ ಶ್ರಾದ್ಧಂತದ್ದಿನೆವತ್ಸರಾವಧಿ || ೩೧ || ಅತಉರ್ದ್ವಂಭವೆದಬ್ದ ಶ್ರಾದ್ಧಂದ್ವಾದಶವತ್ಪರಂ | ಅದ್ವಾದಶಾಬ್ದಮೆ ವೈತತ್ಕ್ರಿಯತೆಪ್ರತಗೋಚರಂ || ೩೨ || ಮೃತೆಭರ್ತರಿತಜ್ಜಾಯಾದ್ವಾದಶ್ನೊಂಜಲಾಶಯೆ | ಸ್ನಾತ್ವಾವಧೂ ಭ್ಯಃಪಂಚಭ್ಯಸ್ತತ್ರದ ದ್ಯಾದುಪಾಯನಂ || ೩೩ || ವಿಧವಾಯಾ ಸ್ತತೊನಾರ್ಯಾಜಿನದೀಕ್ಷಾಸಮಾಶ್ರಯಃ | ಶ್ರೆಯಾನುತಸ್ವೀದ್ವೈ

* * *

ಹತ್ತು ದಿವಸಪರ್ಯ್ಯಂತರದಲ್ಲೂ ಈ ಕರ್ಮಗಳು ಮಾಡಲ್ಪಡುತ್ತೆ. ಆ ನಂತರಕರ್ತೃವು ಪಿಂಡವನ್ನು ತಿಲೋದಕವನ್ನು ಕೊಡುವುದು || ೨೮ || ಹನ್ನೊಂದನೇ ದಿವಸ, ಶವವನ್ನು ಸುಟ್ಟ, ಅಲಂಕರಿಸಿದ, ಹೊತ್ತ, ಈ ಆರು ಜನಗಳನ್ನು ಸ್ನಾನಭೋಜನಗಳಿಂದ ಸಂತರ್ಪಣೆಮಾಡುವದು || ೨೯ || ಹನ್ನೆರಡನೇದಿವಸ ಜಿನೇಶ್ವರನ ಪೂಜಿಯೊಡನೆ ಮುನಿಗಳಿಗೂ ಬಾಂಧವರುಗಳಿಗೂ ಸಮಾಧಾನಯುಕ್ತನಾಗಿ ಆಹಾರದಾನವನ್ನು ಮಾಡತಕ್ಕದ್ದು || ೩೦ || ಯೋಗ್ಯ ಪುರುಷರಿಗೋಸ್ಕರ ಪುಣ್ಯಕಾರಣವೆಂಬ ವಿಶ್ವಾಸದಿಂದ ಆಹಾರದಾನ ಮಾಡುವದು ಶ್ರಾದ್ಧವಿಂತೆಂದು, ಹೆಸರು ಆಶ್ರಾದ್ಧ ದಿವಸದಲ್ಲಿ ವರ್ಷಪರ್ಯ್ಯಂತರದಲ್ಲೂ, ತಿಂಗಳು ತಿಂಗಳಲ್ಲೂ ಶ್ರಾದ್ಧವು ಆಗುತ್ತಲಿಧೆ || ೩೧ || ಅನಂತರ ಪ್ರತಿವರ್ಷವು ಶ್ರಾದ್ಧವು ಆಗತಕ್ಕದ್ದು. ಹನ್ನೆರಡು ವರ್ಷಪರ್ಯಂ ತರ ಪ್ರೇತಗೋಚರ ಕರ್ಮ್ಮವು ಮಾಡಲ್ಪಡುತ್ತೆ || ೩೨ || ಭರ್ತೃಮೃತನಾದರೆ ಆತನ ಸ್ತ್ರೀಯು ಹನ್ನೆರಡನೇದಿವಸ ಜಲಾಶಯದಲ್ಲಿಸ್ನಾನಮಾಡಿ ಐದುಜನ ಸುಮಂಗಲೇರಿಗೆ ಬಾಯಣವನ್ನು ಕೊಡತಕ್ಕದ್ದು || ೩೩ || ಅನಂತರ ವಿಧವಾ ಸ್ತ್ರೀಯು ಜಿನದೀಕ್ಷೆಯನ್ನು ಆಶ್ರಯಿಸುವುದು, ಉತ್ಕೃಷ್ಟವು ಅಥವಾವೈಧವ್ಯದೀಕ್ಷೆಯು ಆ ವೇಳೆ ಯಲ್ಲಿ ಸ್ವೀಕರಿಸಲು ಯೋಗ್ಯವು || ೩೪ || ಆವೈದವ್ಯದೀಕ್ಷೆಯಲ್ಲಿ ಬ್ರಹ್ಮಚ ರ್ಯ್ಯತೆಗೆದುಕ್ಕೊಳ್ಳುವದು, ಕಂಠದಲ್ಲಿರುವ ಐರಧವ್ಯದೀವಾಗ್ರಾಹ್ಯತತದಾ || ೩೫ || ತತ್ರವೈಧವ್ಯದೀಕ್ಷಾಯಾಂದೇಮವ್ತಪರಿಗ್ರಹಃ | ಕಂಠಸೂತ್ರಪರಿತ್ಯಾಗಃಕರ್ಣಭೂಷಣ ವಜನಂ || ೩೬ || ಶೇಷಭೂಷಾನಿವೃತ್ತಶ್ಚವಸ್ತ್ರಖಂಡಾಂತರೀಯಕಂ | ಉತ್ತರೀಯೇಣ ವಸ್ತ್ರೇಣಮಸ್ತಕಾಚ್ಛಾದನಂಸದಾ || ೩೭ || ಖಟ್ವಾಶಯಾಂಜನಲೇಪಹರಿ ದ್ರಾಪ್ಲವವರ್ಜನಂ | ಶೋಕಕ್ರಂದನಿವ್ರತ್ತಿಶ್ವವಿಕಥಾನಾಂಚವರ್ಜನಂ || ೩೮ || ತ್ರಿಸಂಧ್ಯಂ ದೇವತಾಸ್ತೋತ್ರಂಜಪಃಶಾಸ್ತ್ರಃಶ್ರುತಿಃಸ್ಮೃತಿಃ | ಅನುಪ್ರೇಕ್ಷಾಭಾವನಂಚಭಾವನಂಚಾತ್ಮ ನಸ್ತಥಾ || ೩೯ || ಯಥೋಚಿತಂಪಾತ್ರದಾನಮೇಕಭುಕ್ತಮಗೃದ್ಧಿತಃ | ತಾಂಬೂಲವ ರ್ಜನಂಚೈವಸರ್ವಮೇತದ್ವಿಧೀಯತೆ | ಯದಿಸ್ಪೃಶತಿತ್ಪಾತ್ರಾಂತದ್ವಸ್ತ್ರಂತತ್ಪ್ರದೇಶಕಂ | ತದಾಸ್ನಾತ್ವಜಪೇದಷ್ಟಕತಕೃತ್ವೋಪರಾಜಿತಂ || ೪೦ || ಇತ್ಥಂಚತುರ್ವಿಧಮುದೀರಿತ ಮಾರ್ತವಾದಿಶ್ರಾವಾದಿಭೇದವಶತಃಖಲುಯಕ್ತಿಯುಕ್ತಂ | ಆಶೌಚಮಾಚರಿತಿಯಶ್ಶುಚಿ ತಾಮುಪೈತಿ

* * *

ಉಟ್ಟುಕೊಂಡು ಉತ್ತರೀಯದಿಂದ ಪುಸ್ತಕವನ್ನು ಸರ್ವದಾಮರವಮಾಡುವದು || ೩೫ || ಮಂಚಸುಪ್ಪತ್ತಿಗೆ, ಕಣ್ಣು ಕಪ್ಪು, ಅರಿಶಿನಾದಿಜಪ ಇವುಗಳ ಬಿಡೋಣವು. ಶೋಕದಿಂದ ಅಳುವದು, ಭುಕ್ತ ಕಥೆ, ರಾಜ ಕಥೆ, ಚೋರ ಕಥೆ ಮೊದಲಾದದ್ದನ್ನು ಬಿಡಬೇಕು || ೩೬ || ತ್ರಿಸಂಧ್ಯೆಗಳಲ್ಲಿ ದೇವತಾ ಸ್ತೋತ್ರ, ಜಪ, ಶಾಸ್ತ್ರ ಕೇಲುವದು, ಸ್ಮರಣೆ ಮಾಡುವದು, ದ್ವಾದಶಾನುಪ್ರೇಕ್ಷೆ ಭಾವನೆಯು ಆತ್ಮಧ್ಯಾನವು || ೩೮ || ಯಥಾಯೋಗ್ಯವಾಗಿ ಪಾತ್ರದಾನವು ಇಚ್ಛೆಯಿಲ್ಲದೇ ಏಕ ಭುಕ್ತ ಮಾಡುವದು ತಾಂಬೂಲ ಬಿಡುವದು. ಈ ಪ್ರಕಾರವಾಗಿ ಎಲ್ಲಾ ಮಾಡಲೀಕ್ಕೆ ಯೋಗ್ಯವು || ೩೯ || ಸೂತಕದವರ ಪಾತ್ರೆಗಳನ್ನು, ಅವರ ವಸ್ತ್ರವನ್ನು, ಅವರು ವಾಸಮಡುವ ಪ್ರದೇಶವನ್ನು, ಸ್ಪರ್ಶ ಮಾಡಿದರೆ ಆಗ ಸ್ನಾನ ಮಾಡಿ ಅಪರಾಜಿತವಾದಿ ಗರ್ಭಾದಿಗಳ ಭೇದದ್ದೆಶೆಯಿಂದ ಹೇಳಲ್ಪಟ್ಟ ನಾಲ್ಕುವಿಧವಾದ ಅಶೌಚವನ್ನು ಯಾವೋನು ನಿಶ್ಚಯವಾಗಿ ಯುಕ್ತಿಯೊಡನೇ ಕೂಡಿ ಆಚರಿಸುತ್ತಾನೋ ಆತನು ಸಮೀಚೀನವಾದ ಬ್ರ

* * *

ಸದ್ಬ್ರಹ್ಮವರ್ಚಸಪರಃಸುಜನೈಕಸೆವ್ಯಃ || ೪೧ ||
ಇತ್ಯಾರ್ಷೆಸ್ಕೃತಿಸಂಗ್ರಹ ಅಫಭೇದವರ್ಣನೋನಾಮ
ಅಷ್ಟಮೋಧ್ಯಾಯಃ

ನವಮೋಧ್ಯಾಯಃ

ಮಧ್ಯೆಸಭಮಥಾನ್ಯೆದ್ಯುರ್ನಿವಿಷ್ಟೊಹರಿವಿಷ್ಟರೆ | ಕ್ಷಾತ್ರಂವೃತ್ತಮುಪಾದಿಕ್ಷತ್ಸಂಹತಾನ್ ಪಾರ್ಥಿವಾನ್‌‌ಪ್ರತಿ || ೧ || ಶ್ರೂಯತಾಂಭೊಮಹಾತ್ಮಾನಃಸರ್ವೆಕ್ಷತ್ರಿಯಪುಂಗವಾಃ | ಕ್ಷತತ್ರಾಣಿನಿಯುಕ್ತಾಃಸ್ಥಯೂ ಯಮಾದ್ಯೆನವೆಧಸಾ || ೨ || ತತ್ತ್ರಾಣೇಚನಿಯುಕ್ತಾನಾಂ ವೃತ್ತಂವಃಪಂಚಧೊದಿತಂ | ತನ್ನಿಶಮ್ಯಯಥಾ ಮ್ನಾಯಂಪ್ರವರ್ತಧ್ವಂ ಪ್ರಜಾಹಿತೆ || ೩ || ತಚ್ಚೆದಂಕುಲಮತ್ಯಾತ್ಮಪ್ರಜಾನಾಮನುಪಾಲನಂ | ಸಮಂಜ ಸತ್ವಂಚೆತ್ಯೆವಮುದ್ದಿಷ್ಪಂಪಂಚ

* * *

ಹ್ಮ ವರ್ಚಸುವುಳ್ಳವನಾಗಿ ಸತ್ಪುರುಷಗಳಿಂದ ಸೇವ್ಯನಾಗಿ ಶುಚಿತ್ವನ್ನು ಪಡೆಯುತ್ತಾನೆ || ೪೧ ||

ಇತ್ಯಾರ್ಷೆಸ್ಮೃತಿಸಂಗ್ರಹೆ ಅಫಭೆದವರ್ಣನೋ
ನಾಮ ಅಷ್ಟಮಾಧ್ಯಾಯಃ

ಅನಂತರದಲ್ಲಿ ಭರತೇಶ್ವರನು ಎಂಬ ಮನವು ಮತ್ತೊಂದು ದಿವಸದಲ್ಲಿ ಸಭಾಮದ್ಯದಲ್ಲಿ ಸಿಂಹಾಸನದಲ್ಲಿ ಕುಳಿತವನಾಗಿ ಕೂಡಿಯಿರುವಂಥಾ ಧೊರೆಗಳನ್ನು ಕುರಿತು ಕ್ಷತ್ರಿಯ ಸಂಬಂಧವಾದ ನಡತೆಯನ್ನು ಉಪದೇಶ ಮಾಡಿದನು || ೧ || ಐಯ್ಯಾ ಮಹಾ ಪ್ರಭಾವವುಳ್ಳಂಥಾ ಕ್ಷತ್ರಿಯ ಶ್ರೆಷ್ಟರುಗಳಿರಾ ಕೇಳಲ್ಪಡಲೀ ನೀವುಗಳು ಆದಿ ಬ್ರಹ್ಮನಿಂದ ಕ್ಷತರಾದ ಪ್ರಜಾಸಂ ರಕ್ಷಣೆಯಲ್ಲಿ ನಿಯಮಿಸಲ್ಪಟ್ಟಂಥ, ನಿಮ್ಮಗಳ ವರ್ತನೆಯು ಐದು ಪ್ರಕಾರವಾಗಿ ಹೇಳಲ್ಪಟ್ಟಿತು ಅದನ್ನು ಕೇಳಿ, ಶಾಸ್ತ್ರವನ್ನು ಅತಿಕ್ರಮಿಸಿದೇ ಪ್ರಜೆಗಳಹಿತದಲ್ಲಿ ಪ್ರವರ್ತಿಸಿ || ೩ || ಆ ಈ ವರ್ತನೆಯು, ಕುಲಪಾಲನ

ಮತಿಪಾಲನ, ಆತ್ಮಪಾಲನ, ಪ್ರಜಾಪಲನ, ಸಮಂಜಸತ್ವ, ಇಂತೀ ಪ್ರಕರವಾಗಿ, ಐಯ್ದುಭೇದವನ್ನು ಪಡದ್ದಾಗಿ ಉದ್ದೇಶಿಸಲ್ಪಟ್ಟಿತು || ೪ ||

* * *

ಭೆದಭಾಕ || ಕುಲಾನುಪಾಲನಂತತ್ರಕುಲಾಮ್ನಾಯಾನುರಕ್ಷಣಂ | ಕುಲೊಚಿತಸಮಾಚಾರ ಪರಿರಕ್ಷಣಲಕ್ಷಣಂ || ೫ || ಕುಲಾನುಪಾಲನಂಪ್ರೊಕ್ತಂವಕ್ಷೆಮತ್ಯನುಪಾಲನಂ | ಮತಿರ್ಹಿತಾರ್ಹಿತಜ್ಞಾನಮಾತ್ರಿಕಾಮುತ್ರಿ ಕಾರ್ತ್ಥಯೊಃ || ೬ || ತತ್ಪಾಲನಂ ಕಥಂಸ್ಯಾಚ್ಚೆದವಿದ್ಯಾಪರಿವರ್ಜನಾತ್ | ಮಿಥ್ಯಾಜ್ಞಾನಮವಿದ್ಯಾ ಸ್ಯಾದದತ್ವೆತತ್ವಭಾವನಾ || ೭ || ಆಪ್ತೊಪಜ್ಞಂಭವೆತ್ತತ್ವಮಾಪ್ತೊದೊಷಾವೃತಿಕ್ಷಯಾತ್ | ತಸ್ಮಾತ್ತಮ ಭ್ಯಸ್ಯೆನ್ಮನೊಮಲಮಪಾಸಿತುಂ || ೮ || ರಾಜವಿದ್ಯಾಪರಿಜ್ಞಾನಾದೈಹಿಕೆರ‍್ಥೆದೃಢಾಮತಿಃ | ಧರ್ಮಶಾಸ್ತ್ರಪರಿ ಜ್ಞಾನಾತ್‌ಮತಿರ್ಲೊಕದ್ವಯಾಶ್ರಿತಾ || ೯ || ಆತ್ರಿಕಾಮುತ್ರಿಕಾ ಪಾಯತ್ಪರಿರಕ್ಷಣಮಾತ್ಮನಃ | ಆತ್ಮಾನುಪಾ ಲನಂನಾಮತದಿದಾನೀಂವಿ

* * *

(ಕುಲಪಾಲನ) ಆ ಐಯ್ದರಲ್ಲಿ, ಕುಲಕ್ಕೆಯೋಗ್ಯವಾದ ಆಚಾರಪರಿಪಾಲನೆಯೆ ಲಕ್ಷಣವಾಗಿ ಉಳ್ಳಂಥ, ಕುಲಶಾಸ್ತ್ರವನ್ನು ಸಂರಕ್ಷಿಸುವಂಥಾದ್ದು ಕುಲಾನು ಪಾಲನವೆಂಬ ಒಂದನೇವೃತ್ತಿಯು || ೫ || (ಮತಿಪಾಲನ) ಕುಲಪಾಲನೆಯು ಹೇಳಲ್ಪಟ್ಟಿತು, ಮತ್ಯನುಪಾಲನೆಯನ್ನು ಹೇಳುತ್ತೇನೆ, ಈ ಜನ್ಮ ಸಂಬಂಧವಾದಂಥ, ಉತ್ತರಜನ್ಮಸಂ ಬಂಧವಾದಂಥ, ಪ್ರಯೋಜನ ನಿಮಿತ್ತದ್ದಲ್ಲಿ ಉಪಕಾರಿಯಾದಂಥಾ ಅನುಪಕಾರಿಯಾದಂಥಾದ್ದನ್ನು ತಿಳಿಯುವಜ್ಞಾನವು ಮತಿಪಾಲನೆಯು || ೬ || ಆಮತಿಪಾಲನೆಯು ಹ್ಯಾಗಾಗುತ್ತದೆ ಎಂದರೆ, ಅವಿದ್ಯಾ ಪರಿವರ್ಜ್ಜನೆ ದೆಶೆಯಿಂದ ಆಗುತ್ತಿದೆ. ಅವಿದ್ಯಾ ಎಂದರೆ, ಮಿಥ್ಯಾಜ್ಞಾನವು, ಆತ್ಮಸ್ವರೂಪವೆಲ್ಲದೇ ಇರುವಂಥಾದ್ದರಲ್ಲಿ ಆತ್ಮಭಾವ ಭಾವನೆಯು || ೭ || ಆಪ್ತನಿಂದ ಹೇಳಲ್ಪಂಟಂಥಾದ್ದು, ಆ ಆತ್ಮಸ್ವರೂಪವಾಗುತ್ತೆ, ದೋಷಗಳ ಆವರ್ಣೆಯನ್ನು ನಾಶಮಾಡುವದರ ದೆಶೆಯಿಂದ, ಆಪ್ತನಾಗುತ್ತಾನೆ | ಆ ಕಾರಣದ ದೆಶೆಯಿಂದ, ಮನಸ್ಸಿನ ಕಲ್ಮಷವನ್ನು ಹೊಗಲಾಡಿಸುವದಕ್ಕೋಸ್ಕರ ಆ ಆಪ್ತನ ಮತವನ್ನು ಅಭ್ಯಾಸ ಮಾಡತಕ್ಕದ್ದು || ೮ || ರಾಜ ವಿದ್ಯಾತಿಳವಳಿಕೇ ದೆಶೆಯಿಂದ ಈ ಜನ್ಮಪ್ರಯೋಜನದಲ್ಲಿ ಬುದ್ಧಿಯು ದೃಢವಾದಂಥಾದ್ದಾಗುತ್ತೆ, ಧಮ್ಮಶಾಸ್ತ್ರಪರಿಜ್ಞಾನದ್ದೆಶೆಯಿಂದ ಈ ಜನ್ಮಪರಜನ್ಮ ಎರಡರಲ್ಲಿಯು ಹಿತವಾದ ಬುದ್ಧಿಯು ಉಂಟಾಗುತ್ತೆ || ೯ || (ಆತ್ಮಪಾಲನ) ಈ ಜನ್ಮ ಸಂಬಂಧವಾದ ಉತ್ತರಜನ್ಮ ಸಂಬಂಧವಾದ ಕೇಡುಗಳ ಬಾರದಂತೆ ತಂನ ಸಂರಕ್ಷಣೆಯು ಆತ್ಮಾನು ಪಾಲನವೆಂಬುವಂಥಾ

* * *

ವೃಣ್ಮಹ || ೧೦ || ಆತ್ರಿಕಾಪಾಯಸಂರಕ್ಷಾಸು ಪ್ರತೀತೈವಧೀಮತಾಂ | ವಿಷಶಸ್ತ್ರಾದ್ಯಪಾ ಯಾನಾಂ ಪರಿರಕ್ಷಣಲಕ್ಷಣಃ || ೧೧ || ತತಾಮುತ್ರಿಕಾಪಾಯರಕ್ಷಾವಿಧಿರನೂದ್ಯತೆ | ತದ್ರಕ್ಷಣಂಚಧರ್ಮಣಧರ್ಮೋಹ್ಯಾಪತ್ಪ್ರತಿಕ್ರಿಯಾ || ೧೨ || ಕೃತಾತ್ಮರಕ್ಷಣಶ್ಚೈವಂ ಪ್ರಜಾನಾಮನುಪಾಲನ | ರಾಜಾಯತ್ನಂಪ್ರಕುರ್ವಿತರಾಜ್ಞಾಮೌಲೋಹ್ಯಯಂಗುಣಃ || ೧೩ || ಕಥಂಚಪಾಲನೀಯಾಸ್ತಾಃ ಪ್ರಜಾಶ್ಚತ್ತತ್ಪ್ರಪಂಚಿತಃ | ಸ್ಪಷ್ಟಂಗೋಪಾಲದೃಷ್ಟಾಂ ತಮೂರಿಕೃತ್ಯವಿವೃಣ್ಮಹೇ || ೧೪ || ಗೋಪಾಲಕೋಯಥಾಯತ್ನಾತ್‌ಗಾಸ್ಸಂರಕ್ಷತ್ಯ ತಂದ್ರಿತಃ | ಕ್ಷ್ಮಾಪಾಲಶ್ಚಪ್ರಯತ್ನನತಥಾರಕ್ಷನ್ನಿಹಜಾಃಪ್ರಜಾಃ || ೧೫ || ತದ್ಯಥಾಯದಿಗೌಃಕ ಶ್ಚಿದಪರಾಧೀಸ್ವಗೋಕುಲೇ | ತದಮಂಗಚ್ಛೇದನಾದ್ಯುಗ್ರದಂಡೈಸ್ತೀವ್ರಮಯೋಜಯನ್ || ೧೬ ||

* * *

ದ್ದು. ಅದನ್ನ ಈಗ ವಿವರಿಸುತ್ತೇವೆ || ೧೦ || ಈ ಜನ್ಮ ಸಂಬಂಧವಾದಂಥಾ ಸಂರಕ್ಷಣೆಯು ಬುದ್ಧಿಶಾಲಿಗಳಿಗೆ ಪ್ರಸಿದ್ಧವಾದಂಥಾದ್ದೇಯೆ. ವಿಷ, ಶಸ್ತ್ರ, ಮುಂತಾದ ಅಪಾಯವುಳ್ಳಂಥಾವರುಗಳ ಪರಿರಕ್ಷಣ ಲಕ್ಷಣವುಳ್ಳಂಥಾದ್ದು || ೧೧ || ಆ ಕಾರಣದ ದೆಶೆಯಿಂದ ಉತ್ತರ ಜನ್ಮ ಸಂಬಂಧವಾದ ಸಂರಕ್ಷಣಾವಿಧಿಯು ಹೇಳ್ಪಡುತ್ತಿಧೆ. ಧರ್ಮದಿಂದ ಅದರ ಸಂರಕ್ಷಣೆಯು ಅಗುತ್ತೆ. ಪರರವಿಪತ್ತನ್ನು ಹೋಗಲಾಡಿಸುವದೇ ಧರ‍್ಮ, ನಿಶ್ಚಯವು || ೧೨ || (ಪ್ರಜಾಪಾಲನ) ಮಾಡಲ್ಪಟ್ಟ ಆತ್ಮ ಸಂರಕ್ಷಣೆಯುಳ್ಳಂಥ ಧೊರೆಗಳಿಗೆ ಈ ಗುಣವು ಮೂಲದ್ರವ್ಯವಾದಂಥಾದ್ದು, ಅಂದರೆ, ಸಮಗ್ರವಾಗಿ, ಸ್ಪಷ್ಟವಾಗಿ ಗೋಪಾಲ ದೃಷ್ಟಾಂತವನ್ನು ಲಿಂಗೀಕರಿಸಿ, ವಿವರಿಸುತ್ತೇವೆ || ೧೪ || ಗೋಪಾಲಕನು ಪ್ರಯತ್ನದ್ದೆಶೆಯಿಂದ ಗೋವುಗಳನ್ನು ತೂಕಡಿಕೆಯಿಲ್ಲದೇ ಇರುವಂರಾವನಾಗಿ ಹ್ಯಾಗೆ ರಕ್ಷಿಸುತ್ತಾನೋ ಹಾಗೆ ಭೂಪತಿಯೂ ಕೂಡ ಪ್ರಯತ್ನದಿಂದ ಸ್ವಕೀಯರಾದಂಥಾ ಪ್ರಜೆಗಳನ್ನು ಯಾವದಾದರೂವಂದು ಗೋವು ಅಪರಾಧವನ್ನು ಮಾಡಿದಂಥಾದ್ದಾರೆ ಗೋಪಾಲಕನು ಅದರ ಅಂಗಚ್ಛೇದ ಮುಂತಾದದಂಡಗಳಿಂದ ಕೂರವಾಗಿ ಪ್ರಯೋಗಿಸದೆ ಇ

* * *

ಪಾಲಯೇದನುರೂಪಣದಂಡನೈವಸಿಯಂತ್ರಯನ್ | ಯಥಾಗೋಪಸ್ತಥಾಭೂಪಃ ಪ್ರಜಾಸ್ವಾಃ ಪರಿಪಾಲಯೇತ್ || ೧೭ || ತೀಕ್ಷ್ಣದಂಡೋಹಿನೃಪತಿಸ್ತ್ರೀವ್ರಮುದ್ವೀಜಯೇ ತ್ಪ್ರಜಾಃ || ೧೮ || ಯಥಾಗೋಪಾಲಕೋಮೌಲಂಪಶುವರ್ಗ್ಗಂಸ್ವಗೋಕುಲೆ | ಪೋಷಯನ್ನೇವಪುಷ್ಪಸ್ಯಾದ್ಗೋಷೋಷಂಪ್ರಾಜ್ಯಗೋಧನಃ || ೧೯ || ತಥೈವನೃ ಪತಿರ್ಮೌಲಕಂತ್ರಮಾತ್ಮಯಮೇಕತಃ | ಪೋಷಯನ್‌ಪುಷ್ಟಿಮಾಪ್ನೋತಿಸ್ವಪರಸ್ಮಿಂಶ್ಚ ಮಂಡಲೆ || ೨೦ || ಪುಷ್ಟೋಮೌಲೆನತಂತ್ರೇಣಯೋಹಿಪಾರ್ತ್ಥಿವಕುಂಜರಃ | ಸಜಯೇತ್ಪೃಥವೀಮನಾಂಸಾಗರಾಂತಮಯತ್ನತಃ || ೨೧ || ಪ್ರಭಗ್ನಚರಣಂಕಿಂ ಚಿದ್ಗೋದ್ರವ್ಯಂಚತ್ಪ್ರಮಾದತಃ | ಗೋಪಾಲಸ್ತಸ್ಯಸಂಧಾನಂಕುರ್ಯಾದ್ಬಂಧಾದ್ಯುಪಕಮೈಃ |

* * *

ರುವಂಥಾವನಾಗಿ ಅದಕ್ಕೆ ಅನುಗುಣವಾದ ದಂಡದಿಂದಲೇ ನಿಯಮಿಸುವಂಥಾವನಾಗಿ ಹ್ಯಾಗೆ ರಕ್ಷಿಸುತ್ತಾನೋ, ಹಾಗೆ ಧೊರೆಯುತಂನ ಸ್ವಕೀಯರಾದಂಥಾ ಪ್ರಜೆಗಳನ್ನು ರಕ್ಷಿಸಬೇಕು || ೧೭ || ಕ್ರೂರವಾದ ದಂಡ ಉಳ್ಳಂಥಾ ಧೊರೆಯುತೀವ್ರವಾಗ ಪ್ರಜೆಗಳನ್ನುದುಃಖಪಡಿಸುತ್ತಾನೆ ಅದರ ದಶೆಯಿಂದ ವೈರಾಗ್ಯವನ್ನು ಹೊಂದಿದಂಥ ಪ್ರಜಾಧಿಕಾರಿಗಳುಳ್ಳಂಥ ಆ ಪ್ರಜೆಗಳು ಈ ಧೊರೆಯನ್ನು ಬಿಟ್ಟಾರು || ೧೮ || ಗೋಪಾಲಕನು ತಂನ ಗೋಕುಲದಲ್ಲಿ ಬಂಡವಾಲವಾದಂಥ ಪಶುವರ್ಗವನ್ನು ಪೋಷಿಸುವಂಥಾವನಾಗಿಯೇ ಪುಷ್ಪನಾದಂಥಾವನಾಗಿ ಗೋಪೋಷಣೆಯಿಂದ ಅಧಿಕವಾದ ಗೋಧನವುಳ್ಳಂಥವನಾಗುತ್ತಾನೆ || ೧೯ || ಅದೇ ರೀತಿಯಾಗಿ ದೊರೆಯು ಸ್ವಕೀಯವಾದ ಪ್ರಜೆಗಳೆಂಬ ಬಂಡವಾಲಿನ ತಂತ್ರವನ್ನು ಮುಖ್ಯವಾಗಿ ಪುಷ್ಟೀಕರಿಸೂವಂಥಾವನಾಗಿ ತಂನ ದೇಶದಲ್ಲೂ ಅನ್ಯ ದೇಶದಲ್ಲೂ ಪುಷ್ಟಿಯನ್ನು ಹೊಂದುತ್ತಾನೆ || ೨೦ || ಮೂಲತಂತ್ರದಿಂದ ಯಾವ ರಜಶ್ರೇಷ್ಠನು ಸ್ಪುಟವಾಗಿ ಪುಷ್ಟೀ ಹೊಂದುತ್ತಾನೋ ಆ ಧೊರೆಯು ಪ್ರಯತ್ನವಿಲ್ಲದೇ ಸಮುದ್ರವೇ ಕೊನೆಯಾಗಿ ಉಳ್ಳಂಥ ಈ ಭೂಮಿಯನ್ನು ಜಯಿಶ್ಯಾನು || ೨೧ || ಪ್ರಮಾದ್ರದ್ದೆಶೆಯಿಂದ ಸ್ವಲ್ಪ ಮುರಿದ ಕಾಲು ಉಳ್ಳಂಥಾದ್ದಾದರೆ ಗೋಪಾಲಕನು ಆ ಮುರಿದ ಕಾಲಿನ ಸಂಧಾನವನ್ನು ಕಟ್ಟುವದು ಮೊದಲಾದ ಉಪಕ್ರಮಗಳಿಂದ ಮಾಡುತ್ತಾನೆ |

* * *

ಬದ್ಧಾಯಚತೃಣಾದ್ಯಸ್ಮೃದತ್ವಾದಾರ್ಡ್ಯೆನಿಯೊಜಯೆತ್ | ಉಪದ್ರವಾಂತರೆಪ್ಯೆವಮಾಶು ಕುರ್ಯಾತ್ಪ್ರ ತಿಕ್ರಿಯಾಂ || ೨೩ || ಯಥಾತಥಸರೆಂದ್ರೊಪಿಸ್ವಬಲೆವ್ರಣಿತಂಭಟಂ | ಪ್ರತಿಕುರ್ಯಾದ್ಭಿಷಗ್ವರ್ಯಾನ್ನಿ ಯೊಜ್ಯೌಷಧಸಂಪದಾ || ೨೪ || ದೃಡೀಕೃತಸ್ಯಚಾ ಸ್ಯೊದ್ವಂಜೀವನಾದಿಪ್ರಚಿಂತಯೆತ್ | ಸತ್ಯೆವಂಭರತ್ಯ ವರ್ಗ್ಗೊಸ್ಯಶಶ್ವದಾಪ್ನೊತಿನಂದಥುಂ || ೨೫ || ಯಧೈವಕುಲಗೊಪಾಲಃ ಸಂಧ್ಯಚಲನೆಗವಾಲ | ತದಸ್ಮಿಸ್ಥಾಪಯನ್ ಪ್ರಾಗವತ್ಕುರ್ಯಾದ್ಯೊ ಗ್ಯಾಂಪ್ರತಿಕ್ರಿಯಾಂ || ೨೬ || ತಥಾನೃಪೊಪಿಸಂಗ್ರಾಮೆಭೃತ್ಯ ಮುಖ್ಯೆಪ್ಯಸೌಸತಿ | ತತ್ಪದೆಪುತ್ರಮವಾಸ್ಯಭ್ರಾತರಂವಾನಿಯೊ ಜಯೆತ್ || ೨೭ || ಇತಿಚೈವಂಕೃತ ಜ್ಞೊಯಂನೃಪಯಿತ್ಯನುರಕ್ತತಾಂ | ಉಪೈತಿಭೃತ್ಯಸರ್ಗೆರ್ಸ್ಮಿಭವೆಚ್ಚಧೃವಯೊಧನಃ || ೨೮ || ಯಥಾಖಲ್ವಪಿಗೋಪಾಲಃಕ್ರಿಮಿದಷ್ಟಗವಾಂಗಣೆ | ತದ್ಯೊದ್ಯಮೌಷಧಂದತ್ವಾ

* * *

ಕಟಲಪ್ಪಟ್ಟ ಕಾಲುವುಳ್ಳಂಥಾ ಈ ಗೋವಿಗೆ ಹುಲ್ಲು ಮೊದಲಾದ್ದನ್ನು ಕೊಟ್ಟುದೃಢತ್ವದಲ್ಲಿ ನಿಯೋಗಿ ಸುತ್ತಾನೊ ಈ ಪ್ರಕಾರವಾಗಿ ಬೇರೇ ಉಪದ್ರವದಲ್ಲಿಯೂ ಕೂಡ ಶೀಘ್ರವಾಗಿ ಪ್ರತಿಕ್ರಿಯೆಯನ್ನು ಹ್ಯಾಗೆ ಮಾಡುತ್ತಾನೆಯೊ || ೨೩ || ಹಾಗೆ ಧೊರೆಯೂ ಕೂಡ ತನ್ನ ಸೇನೆಯಲ್ಲಿ ಘಾಯವನ್ನು ಹೊಂದಿದಂಥಾ ಭಟನನ್ನು ಕುರಿತು ವೈದ್ಯ ಶ್ರೇಷ್ಠರುಗಳನ್ನ ನಿಯೋಗಿಸಿ ಪ್ರತೀಕಾರ ಮಾಡತಕ್ಕದ್ದು || ೨೪ || ಧೃಢೀಕರಿಸಲ್ಪಟ್ಟ ಆ ಭಟನಿಗೆ ಶ್ರೇಷ್ಠವಾದ ಜೀವನ ಮೊದಲಾದ್ದನ್ನು ಚಿಂತಿಸತಕ್ಕದ್ದು | ಹೀಗಾಗುತ್ತಿರಲಾಗಿ ಭೃತ್ಯವರ್ಗವು ಈ ಧೊರೆಯೊಳಗೆ ಬಾರಿ ಭಾರಿಗೂ ಸಂತೋಷವನ್ನು ಹೊಂದುತ್ತಧೆ || ೨೫ || ಹ್ಯಾಗೆ ಗೋಪಾಲಕನು, ಗೋವುಗಳ ಸಂಧಿಯು ಅಸ್ಥಿಯ ಚಲನೆಯಲ್ಲಿ ಆ ಅಸ್ಥಿಯನ್ನು ಸ್ಥಾಪಿಸುವಂಥವನಾಗಿ ಪೂರ್ವದೋಪಾದಿಯಲ್ಲಿ ಯೋಗ್ಯವಾದ ಪ್ರತಿಕ್ರಿಯೆಯನ್ನು ಮಾಡುತ್ತಾನೊ ಹಾಗೆ, ಧೊರೆಯೂಕೂಡ ಯುದ್ಧದಲ್ಲಿ ಭೃತ್ಯ ಮುಖ್ಯನು ಹೋದಂಥಾ ಪ್ರಾಣವುಳ್ಳಂಥಾವನಾಗುತ್ತಿರಲೀಕಾಗಿ ಆ ತನಸ್ಥಾನದಲ್ಲಿ ಇವನ ಮಗನನ್ನಾದರು ಹಾಗಲ್ಲದೇ ಹೋದರೆ ತಂಮನನ್ನಾದರು ನೇಮಿಸತಕ್ಕದ್ದು ಹೀಗಾಗುತ್ತಿರಲಾಗಿ ಈ ದೊರೆಯು ಕೃತಜ್ಞನಾದಂಥಾವನು ಇಂತೆಂದು ಭೃತ್ಯವರ್ಗವು ಅನುರಾಗಿ ಭಾವವನ್ನು ಹೊಂದುತ್ತದೆ ದೃಢವಾದ ಯುದ್ಧ ವುಳ್ಳಂಥಾವನು ಆಗುತ್ತಾನೆ || ೨೮ ||

* * *

ಕರೊತ್ಯಸ್ಯಪ್ರತಿಕ್ರಿಯಾಂ || ತಧೈವಪೃಥುವೀಪಾಲೊದುರ‍್ವಿಧಂಸ್ವಾನುಜೀವಿನಂ | ವಿಮನಸ್ಕಂವದಿ ತ್ವೈನಂಸೌಜಿತ್ಯೆಸಂನಿವೆಜಯೆತ್ || ೩೦ || ವಿರಕ್ರೊಹ್ಯನುಜೀವೀಸ್ಯಾದಲಬ್ಧೊಹಿತಜೀವಿನಃ | ಪ್ರ ಭೊರ್ವಿಮಾನನಾಚ್ಚೈವತಸ್ನಾನ್ನೈನಂವಿರೂಕ್ಷಯೆತ್‌ || ೩೧ || ತದ್ಗೊತ್ರೀಯವ್ರಣಸ್ಥಾನಕ್ರಿಮಿಸಂಭವಸಂನಿಭಂ || ೩೧ || ವಿಧಿತ್ವಾತತ್ಪ್ರತೀ ಕಾರಮಾಶುಕುರ್ಯಾದ್ವಿಶಾಂಪತಿಃ || ೩೨ || ಬಹುನಾಪಿನದತ್ತೆನಸೌಚಿತ್ಯಮನುಜೀವಿನಾಂ | ಉಚಿತಾತ್ಸ್ವಾಮಿ ಸಂಮಾನಾದ್ಯದ್ಯೆಷಾಂಜಾಯತೆಧೃತಿಃ || ೩೩ || ಗೋಪಾಲಕೊ ಯಥಾ ಯೊಧೆಸ್ವೇಮಹೊಕ್ಷಂಭರಕ್ಷಮಂ | ಜ್ಞಾತ್ವಾಸ್ಯನಸ್ಯಕರ್ಮಾದಿವಿದದ್ಯಾದ್ಗಾತ್ರ ಪೃಷ್ಟಯೆ || ೩೪ || ತಥಾನೃಪೊಪಿಸೈನ್ಯೆಸ್ವೆಯೊದ್ದಾರಂಭಟಸತ್ತಮಂ | ಜ್ಞಾತ್ವೈನಂ ಜೇವನಂಪ್ರಾಜ್ಯದತ್ವಾ ಸಂಮಾನಯೇಷ್ಣತೀ || ೩೫ || ಕೃತಾಪದಾನಂತ ದ್ಯೊಗ್ಯೈಃಸತ್ಕಾರೈಃಪ್ರೀ

* * *

ಹ್ಯಾಗೆ ಸಮರ್ಥನಾದ ಗೋಪಾಲಕವುನುಗೋಸಮೂಹ ಕ್ರಿಮಿಯಿಂದ ಕಚ್ಚಲ್ಪಟ್ಟಂಥಾದ್ದಗುತ್ತಿರಲಾಗಿ ಅದಕ್ಕೆ ಯೋಗ್ಯವಾದ ಜೌಷದವನ್ನು ಕೊಟ್ಟು ಇದಕ್ಕೆ ಪ್ರತೀಕಾರವನ್ನು ಮಾಡುತ್ತಾನೋ, ಹಾಗೆ ಧೊರೆಯುದರಿದ್ರನಾದಂಥ ತನ್ನ ಅನುಜೀವಿಯನ್ನು ಮನಸ್ಸುಯಿಲ್ಲದೇ ಇರುವಂಥಾವನನ್ನಾಗಿ ತಿಳಿದು ಒಳ್ಳೆ ಚಿತ್ತ ಉಳ್ಳಭಾವದಲ್ಲಿ ಚಂದಾಗಿ ನಿಯಮಿಸತಕ್ಕದ್ದು ತನಗೆ ಅಯೋಗ್ಯವಾದ, ಜೀವನವುಳ್ಳಂಥ ಅನುಜೀವಿಯು ಈ ಧೊರೆಯೊಳಗೆ ವಿರಕ್ತಿಯನ್ನು ಹೊಂದಿದವನಾಗಿ ಈ ಪ್ರಭುವಿಗೆ ಅಮರ್ಯಾದೆ ಮಾಡುವದರದೆಶೆಯಿಂದ, ಈ ಸೇವಕನನ್ನು ವಿಮನಸ್ಕನನ್ನಾಗಿ ಮಾಡಬಾರದು. ಆಗೋಸ್ಥಾನದ ಕ್ರಿಮಿಉತ್ಪತ್ತಿಗೆ ಸಮಾನವಾದಂಥಾದ್ದನ್ನಾಗಿ ತಿಳಿದು ಪ್ರಜಾಪಾಲಕನಾದಂಥಾ ಧೊರೆಯು ಅನುಜೀವಿದಾರಿದ್ರ್ಯಾದಿಗಳಿಗೆ ಪ್ರತೀಕಾರ ಮಾಡತಕ್ಕದ್ದು. ಬಹಳವಾಗಿ ಕೊಟ್ಟದ್ದರಿಂದಲೂ ಕೂಡ ಅನುಜೀವಿಗಳಿಗೆ ಒಳ್ಳೇ ಮನೋಭಾವವು ಆಗುವದಿಲ್ಲ ಯೋಗ್ಯವಾದಂಥ ಸ್ವಾಮಿ ಸನ್ಮಾನನೆಯಿಂದ ಧೀರವಾದ ಮನಸ್ಸು ಈ ಪ್ರಜೆಗಳಿಗೆ ಹುಟ್ಟುತ್ತೆ || ೩೩ || ಗೋಪಾಲಕನು ತಂನ ಗೋವುಗಳ ಹಿಂಡಿನಲ್ಲಿ, ಭಾರಕ್ಕೆ ಯೋಗ್ಯವಾದಂಥ ದೊಡ್ಡವೃಷಭವನ್ನು ತಿಳಿದು ಇದರ ಶರೀರಪುಷ್ಟಿಗೋಸ್ಕರ ನಸ್ಯಕರ್ಮ ಮುಂತಾದ್ದನ್ನು ಕೊಡುತ್ತಾನೆಯೊ ಹಾಗೆ ಧೊರೆಯು ಕೂಡ ಸ್ವಕೀಯವಾದ ಸೇನೆಯ

* * *

ಧಾಯಚ | ಕ್ಷೀರೊಪಯೊಗದಾನದ್ಯೈರ್ವರ್ದ್ಧಯೆತ್ ಪ್ರತಿವಾಸರಂ || ೪೨ || ಭೂಪೊಪ್ಯೆವಮು ಪಾಸನ್ನಂವೃತ್ತಯೆಸಮುಪಾಸಿತುಂ | ಯಥಾನುರೂಪೈಸ್ಸಮಾನೈಃ ಸ್ವೀಕುರ್ಯ್ಯಾದನುಜೀವಿನಂ || ೪೪ || ಸ್ವೀಕೃತಸ್ಯಚತಸ್ಯೊದ್ಘಜೀವನಾದಿ ಪ್ರಚಿಂತ ಯಾಯೊಗಕ್ಷೆಮಂಪ್ರಯುಂಜೀತಕೃತಕ್ಲೆಶಸ್ಯಸಾದರಂ || ೪೫ || ಯದೈವಖಲು ಗೊಪಾಲಃಪರ್ಶೂಕ್ರೆತುಂಸಮುದ್ಯತಃ | ಕ್ಷೀರಾವಲೊಕ ನಾದ್ಯೈಸ್ತಾನ್ ಪರೀಕ್ಷ್ಯ ಗುಣವತ್ತಮಾನ್ || ೪೬ || ಕ್ರೀಣಾತಿಶಕುನಾ ದೀನಾಮವಧಾರಣತತ್ಪರಃ | ಕುಲಪು ತ್ರಾನ್‌ನೃಪೊಪ್ಯೆವಂ ಕ್ರೀಣೀಯಾತ್‌ಸುಪರೀಕ್ಷಿತಾನ್ || ೪೭ || ಕ್ರೀತಾಂಶ್ಚವೃತ್ತಿಮೌ

* * *

ನು ಹುಟ್ಟಿದಂಥಾ ಈ ಕರುವನ್ನು ತಾಯಿಯೊಡನೇ ಕೂಡ ಒಂದುದಿನದಲ್ಲಿ ಇಟ್ಟು ಇದ್ದು ಅನಂತರ ಮತ್ತೊಂದುದಿವಸದಲ್ಲಿ ಕೃಪೆಯಿಂದ ಆರ್ದ್ರವಾದ ಬುದ್ಧಿಯುಳ್ಳವನಾಗಿ ಮೆಲ್ಲಗೆ ಇದರಕಾಲಿನಲ್ಲಿ ಬಂಧನ ವಿಧಿಯನ್ನು ಮಾಡಿ ಪ್ರಯತ್ನ ದ್ದೆಶೆಯಿಂದ ಗರ್ಭಮಲದೊಡನೇ ಕೂಡ ನಾಭಿನಾಳವನ್ನು ಹೋಗಲಾಡಿಶಿಜೆಂತು ಹುಟ್ಟುತ್ತಿಧೆಯೆಂಬ ಶಂಕೆ ವುಂಟಾಗುತ್ತಿರಲಾಗಿ ಪ್ರತೀಕಾರವನ್ನು ಮಾಡಿ ಕ್ಷೀರೋಪಯೋಗದಾ ನಾದಿಗಳಿಂದ ಪ್ರತಿದಿನದಲ್ಲಿಯೂ ವೃದ್ದಿ ಪಡಿಸು ತ್ತಾನೋ ಹಾಗೆ ಧೊರೆಯೂಕೂಡ ಜೀವನಕ್ಕೋಸ್ಕರ ಉಪಾಸನೇ ಮಾಡುವದಕ್ಕಾಗಿ ಸಮೀಪವರ್ತಿ ಯಾದಂಥ ಸೇವಕನನ್ನು ಆತನಿಗೆ ಅನುಗುಣವಾದ ಸನ್ಮಾನಗಳಿಂದಸ್ವೀಕರಿಸತಕ್ಕದ್ದು. ಸ್ವೀಕೃತನಾ ದಂಥಾ ಆತನಿಗೆ ಶ್ರೇಷ್ಠವಾದ ಜೀವನಾದಿ ಚಿಂತೆಯಿಂದ ಮಾಡಲ್ಪಟ್ಟ ಕ್ಲೇಶವುಳ್ಳಂಥಾವನಿಗೆ ಅದರದೊಡನೆ ಕೂಡಿಕ್ಕೊಂಡಿರೋಣ ಹ್ಯಾಗೋ ಹಾಗೆ ಯೋಗಕ್ಷೇಮವನ್ನು ಪ್ರಯೋಗಿಸತಕ್ಕದ್ದು || ೪೫ || ಹ್ಯಾಗೆ ಗೋಪಾಲಕನು ಪಶುವನ್ನು ಕ್ರಯಮಾಡುವದಕ್ಕೆ ಉದ್ಯುಕ್ತನಾ ದಂಥಾವನಾಗಿ ಹಾಲು ನೋಡುವದೇ ಮೊದಲಾದಂಥಾವುಗಳಿಂದ ಗುಣಶ್ರೇಷ್ಠ ವಾದಂಥಾವುಗಳನ್ನು ನಿರೀಕ್ಷಿಸಿ, ಶಕುನಮೊದಲಾದಂಥಾವುಗಳ ನಿಶ್ಚೆಯದಲ್ಲಿ ಆಸಕ್ತನಾದಂಥವನಾಗಿ ಕ್ರಯವನ್ನು ಮಾಡುತ್ತಾನೋ ಆಪ್ರಕಾರವಾಗಿ ಧೊರೆಯೂಕೂಡ ಚಂದಾಗಿ ಪರೀಕ್ಷಸಲ್ಪ

* * *

ಲ್ಯೆನತಾನ್ಯಥಾವಸರಂಪ್ರಭುಃ | ಕೃತ್ಯೆಷುವಿನಿಯುಂಜೀತಕೃತ್ಯೈಃಸಾಧ್ಯಂ ಫಲಂಹಿತತ್ || ೪೮ || ಯದ್ವಚ್ಚಪ್ರತಿಭೂಃಕಶ್ಚಿದ್ಗೊಕ್ರಿಯೆಪ್ರತಿಗೃಹ್ಯತೆ | ಬಲವಾನ್ ಪ್ರತಿಭೂಸ್ತದ್ವದ್ಗ್ರಾ ಹ್ಯೊಭೃತ್ಯೊಪಸಂಗ್ರಹೆ || ೪೯ || ಯಾಮಮಾತ್ರಾವಶಿಷ್ಟಾಯಾಂರಾತ್ರಾವುತ್ಥಾಯಯತ್ನತಃ | ಚಾರಯಿತ್ವೊಚಿತೆದೆಶೆಗಾಃ ಪ್ರಭೂತತೃಣೊದಕೆ || ೫೦ || ಪ್ರಾತಸ್ತರಾಮಥಾನೀಯ ವತ್ಸಪೀತಾವಶಿಷ್ಟಕಂ | ಪಯೊಧೊಗ್ಗಿಯಥಾ ಗೊಪೊನವನೀತಾದಿಲಿಪ್ಸಯಾ || ೫೧ || ತತಾಭೂಪೊಪ್ಯ ತಂದ್ರಾಲುರ್ಬ್ಭಕ್ತಗ್ರಾಮೆಷುಕಾರಯೆತ್ | ಕೃಷಿಂಕರ‍್ಮಾಂತಿಕೈರ್ಬ್ಬೀ ಜ ಪ್ರದಾನದ್ವೈರುಪಕ್ರಮೃಃ || ೫೨ || ದೆಶೆಪಿಕಾರಯೆ

* * *

ಟ್ಟ ಕುಲಪುತ್ರರನ್ನು ಕ್ರಯಾಮಾಡತಕ್ಕದ್ದು. ಕ್ರಯಕ್ಕೆ ತೆಗೆದು ಕ್ಕೊಳ್ಳಲ್ಪಟ್ಟ ಅವರುಗಳನ್ನು ಕಾಲಾನುಗುಣವಾಗಿ ವೃತ್ತಿಮೌಲ್ಯದಿಂದ ಕಾರ್ಯಗಳಲ್ಲಿ ನಿಯಮಿಸತಕ್ಕದ್ದು. ಆ ಪ್ರಯೋಜನವು ಭೃತ್ಯರುಗಳಿಂದ ಸಾಧ್ಯವಾಗತಕ್ಕಂಥಾದ್ದು || ೪೮ || ಯಾವಮೇರೆ ಗೋಕ್ರಯದಲ್ಲಿ ಒಬ್ಬಜಾಮೀನದಾರನು ಗ್ರಹಿಸಲ್ಪಡುತ್ತಾನೆ ಆ ಮೇರೆ ಭೃತ್ಯರುಗಳ ಸಂಗ್ರಹದಲ್ಲಿಯೂ ಕೂಡ ಬಲಿಷ್ಠನಾದ ಹೊಣಗಾರನು ಗ್ರಹಿಸುವದಕ್ಕೆ ಯೋಗ್ಯವಾದಂಥಾವನು || ೪೯ || ರಾತ್ರಿಯು ಒಂದು ಝಾವ ಮಾತ್ರಾ ಉಳಿದ್ದಾ ಗುತಿರಲಾಗಿ ಎದ್ದು ಪ್ರಯತ್ನದ್ದೆಶೆಯಿಂದ ಅದಿಕವಾದ ಹುಲ್ಲುನೀರುವುಳ್ಳಂಥ ಪ್ರದೇಶದಲ್ಲಿ ಸಂಚಾರಮಾಡಿಸಿ ಪ್ರಾತಃಕಾಲದಲ್ಲಿ ತೆಗೆದುಕ್ಕೊಂಡು ಬಂದ ಕರೂಪಾನ ಮಾಡಿಮಿಕ್ಕ ಹಾಲನ್ನು ಬೆಣ್ಣೆಮುಂತಾದವನ್ನು ಪಡೆಯಲಿಛ್ಚೆಯಿಂದ ಕರೆಯಿತ್ತಾನೆಯೋ ಆ ಪ್ರಕಾರವಾಗಿ ಧೊರೆಯೂಕೂಡ ತೂಕಡಿಕೆಯಿಲ್ಲದೇ ಇರುವಂಥಾವನಾಗಿ ಭಕ್ತಗ್ರಾಮಗಳಲ್ಲಿ ಬೀಜಹಾಕೋಣವೇ ಮೊದಲಾದಂಥ ಕೋನೆಕರ್ಮಳಿಂದ ಕೃಷಿಯನ್ನು ಮಾಡಿಸತಕ್ಕದ್ದು ಅತ್ಯಂತವಾದ ಪ್ರದೇಶದಲ್ಲಿ ಕೃಷೀವಲರಿಂದ ಕೃಷಿಯನ್ನು ಮಾಡಿಸತಕ್ಕದ್ದು ಧಾನ್ಯಾದಿ ಸಂಗ್ರಹನಿಮಿತ್ತವಾಗಿ ಆ ಪ್ರಜೆಗಳ ದೆಶೆಯಿಂದ ನ್ಯಾಯವಾದ ಅಂಶೆಯನ್ನು ತೆಗೆದುಕೊಳ್ಳತಕ್ಕದ್ದು ಹಾಗಾಗುತ್ತಿರಲಾಗಿ ಬಾಂಡಾಗಾರಾದಿ ಸಂಪತ್ತಿ ನಿಂದ ಪುಷ್ಟವಾದ ತಂತ್ರವು

* * *