ಸಮ್ಯಜ್ಞಾನಾಧಿಕಾರ
ಶ್ಲೋ || ಅನ್ಯೂನಮನತಿರಿಕ್ತಂಯಥಾತಥ್ಯಂವಿನಾಚವಿಪರೀತಾತ್ |

* * *

ಜೀವರತ್ನಗಳು, ಒಬ್ಬ ಚಕ್ರವರ್ತ್ತಿಗೆ ೧೪ ರತ್ನಗಳು || ೪೫ || ದೇವೇಂದ್ರ ಅಸುರೇಂದ್ರ ನರೇಂದ್ರರುಗಳಿಂದಲೂ ಯತಿಪತಿಗಳಿಂದಲೂ ಸ್ತೋತ್ರ ಮಾಡಲ್ಪಟ್ಟಂಥಾ ಪಾದಾಂಭೋಜ ಉಳ್ಳಂಥಾವರಿಗಳಾಗಿಯೂ ಧರ್ಮ್ಮಚಕ್ರಧರರಾಗಿಯೂ ಲೋಕರಕ್ಷಕರಾಗಿಯೂ ಇರುವಂಥಾವರುಗಳು ಸಮ್ಯಗ್ದರ್ಶನದಿಂದ ಕೃತಾರ್ಥರಾ ದಂಥಾವರುಗಳು || ೪೬ || ಸಮ್ಯರ್ಗ್ಶನವೇಶರಣಾಗಿ ಉಳ್ಳಂಥಾವರುಗಳು ಮುಪ್ಪಿಲ್ಲದೆ ಇತುವಂಥಾ, ರೋಗವಿಲ್ಲದೆ ಇರುವಂಥಾ ನಾಶವಿಲ್ದೆ ಇರುವಂಥಾ ಬಾದೆಯಿಲ್ಲದೆ ಇರುವಂಥಾ, ಕೆಡಿಸಲ್ಪಟ್ಟಶೋಕಭಯಶಂಕವುಳ್ಳಂಥಾ, ಮೋಕ್ಷವನ್ನೂ ದಶದಿಕ್ಕುಗ ಳಿಂದಲೂ ಬಂದಂಥಾ ಸುಖ ವಿದ್ಯಾ ವಿಭವವನ್ನು ನಿಷ್ಕಲ್ಮುಷಭಾವವನ್ನು ಪಡೆಯುತ್ತಾರೆ || ೪೭ || ಜಿನೇಶ್ವರನಲ್ಲಿ ಭಕ್ತಿ ಉಳ್ಳಂಥಾ ಭವ್ಯನು ಅಳೆಯುವದಕ್ಕೆ ಅವಶಕ್ಯವಾದ ಪ್ರಮಾಣವುಳ್ಳಂಥಾದೇವೇಂದ್ರ ಚಕ್ರ ಮಹಾತ್ಮೆಯನ್ನು ನರೇಂದ್ರರ ಮಸ್ತಕದಿಂದ ಪೂಜಿಸುವದಕ್ಕೆ ಯೋಗ್ಯವಾದಂತ್ಥಾ ರಾಜೇಂದ್ರ ಚಕ್ರವನ್ನು ಕೆಳಗೆ ಮಾಡಲ್ಪಟ್ಟ ಸಮಸ್ತಲೊಕವುಳ್ಳಂತ್ಥಾ ಧರ್ಮೇಂದ್ರ ಚಕ್ರವನ್ನು ಪಡೆದು ಮೋಕ್ಷವನ್ನೂ ಕೂಡ ಹೊಂದುತ್ತಾನೆ

ಉಪಾಸಕಾಧ್ಯಯನ ಸಮ್ಯಗ್ದರ್ಶನಾಧಿಕಾರಃ

(ಅಥಸಮ್ಯಜ್ಞಾನಾಧಿಕಾರ) ಕಡಮೆ ಇಲ್ಲದೆ ಇರೋಣಹ್ಯಾಗೋ, ಹಾಗೆ ಅತಿಕ್ರಮಿಸದೆ ಇರೋಣ ಹ್ಯಾಗೋ ಹಾಗೆಯಥಾರ್ತ್ಥಾವಾಗೋಣ ಹ್ಯಾಗೋ ಹಾಗೆ ವಿಪರೀತದ್ದೆಶೆಯಿಂದಹೊರ್ತಾಗಿ ಸಂದೇಹವಿಲ್ಲದೆ ಇರೋಣ

* * *

ನಿಸ್ಸಂದೇಹಂವೆದಯದಾಹುಸ್ತದ್ಜ್ಞಾನಮಾಗಮಿನಃ | ಪ್ರಥಮಾನುಯೊಗ ಮರ್ಥಾಖ್ಯಾನಂಚರಿತಂ ಪುರಾಣಮಪಿಪುಣ್ಯಂ || ಬೋಧಿಸಮಾಧಿನಿಧಾನಂ ಬೋಧತಿಬೋಧಸ್ಸಮೀಚೀನಃ || ೫೦ || ಲೋಕಾಲೋಕವಿಭಕ್ತೆರ್ಯುಗ ಪರಿವೃತ್ತೆಶ್ಚತುರ್ಗತೀನಾಂಚ | ಅದರ್ಶಮಿವತಥಾಮತಿರವೈತಿಕರಣಾನು ಯೋಗಂಚ || ೫೧ || ಗೃಹಮಧ್ಯನಗಾರಾಣಾಂಚಾರಿತ್ರೋತ್ಪತ್ತಿವೃದ್ಧಿರಕ್ಷಾಂಗಂ | ಚರಣಾನುಯೊಗಸ ಮಯಂಸಮ್ಯಜ್ಞಾನಂವಿಜಾನಾತಿ || ಜೀವಾಜೀವಸುತತ್ವೇ ಪುಣ್ಯಾಪುಣೈಚಬಂಧಮೋಕ್ಷೌಚ || ದ್ರವ್ಯಾನು ಯೋಗದೀಪಃಶ್ರುತ ವಿದ್ಯಾಲೋಕಮಾತನುತೆ || ೫೨ ||

ಅಥಸಮ್ಯಕ್ಚಾರಿತ್ರಾಧಿಕಾರ
ಮೋಹತಿಮಿರಾಪಹರಣೆದರ್ಶನಲಾಭಾದವಾಪ್ತಸದ್ಜ್ಞಾನಃ || ರಾಗದ್ವೆ

* * *

ಹ್ಯಾಗೋಹಾಗೆ, ಹ್ಯಾಗೆತಿಳಿದನೋ ಎಂಬುವದುಯಾವದೋ ಅದನ್ನು ಆಗಮಉಳ್ಳಂತ್ಥಾವರು ಸಮ್ಯಜ್ಞಾನವನ್ನಾಗಿ ಹೇಳುವರು || ೪೯ || ಸಮೀಚೀನ ವಾದಂಥಾ ಸಮ್ಯಜ್ಞಾನವು ಪ್ರಥಮಾನುಯೋಗವಾದಂತ್ಥಾ ಆರ್ತ್ಥಾಖ್ಯಾನವನ್ನು ಅಂದರೆ ಧರ್ಮ್ಮಮಹಾತ್ಮ್ಯೆಯನ್ನು ಹೇಳುವ ಇತಿಹಾಸನ್ನು ಪುಣ್ಯಪುರಷಚರಿಯೆಯನ್ನು ತೀರ್ಥಕರ ಪುರಾಣವನ್ನು ಪಾವನವಾದಂತ್ಥಾ ಧರ್ಮಧ್ಯಾನಕ್ಕೆ ಕಾರಣವಾದ ಬೋಧಿಸಮಾಧಿನಿದಾನವನ್ನು ತಿಳಿಯುತ್ತದೆ || ೫೦ || ಆ ಪ್ರಕಾರ ಬುದ್ಧಿವುಳ್ಳಂಥಾವನ ಅಂದರೆ ಸಮ್ಯಜ್ಞಾನ ಉಳ್ಳಂತ್ಥಾವನು ಲೋಕಾಲೋಕವಿಭಾಗಕ್ಕು ಯುಗಪರಿವರ್ತ ನೆಗೂ, ಚತುರ್ಗತಿಗಳಿಗೂ ಕನ್ನಡಿಯೋಪಾದಿಯಲ್ಲಿರುವಂತ್ಥಾ ಕರ್ಣಾನು ಯೋಗವನ್ನೂ ಕೂಡಾತಿಳಿಯುತ್ತಾನೆ || ೫೧ || ಸಮ್ಯಜ್ಞಾನವು ಗೃಹಸ್ಥರು ಗಳಯ ತಿಗಳಚಾರಿತ್ರದ ಉತ್ಪತ್ತಿಗೂ ವೃದ್ಧಿಗೂ ಸಂರಕ್ಷಣೆಗೂ ಅಂಗವಾದಂಥಾ, ಚರಣಾ ನುಯೋಗವೆಂಬ ಸಮಯವನ್ನು ತಿಳಿಯುತ್ತಧೆ || ೫೨ || ದ್ರವ್ಯಾನು ಯೋಗವೆಂಬ ದೀವೆಗೆ ಉಳ್ಳಂತ್ಥಾವನು ಜೀವಾಜೀವತತ್ವಗಳನ್ನು ಪುಣ್ಯಪಾಪಗಳನ್ನು ಬಂಧ ಮೋಕ್ಷಗಳನ್ನು ಶ್ರುತಜ್ಞಾನದ ದರ್ಶನವನ್ನೂ ಕೂಡ ವಿಸ್ತರಿಸುತ್ತಾನೆ || ೫೨ ||

(ಸಮ್ಯಜ್ಞಾನಾಧಿಕಾರಃ)
ಅಥ ಸಮ್ಯಕ್ಚಾರಿತ್ರಾಧಿಕಾರಃ

ಮೋಹವೆಂಬಕತ್ತಲೆಯ ನಿವಾರಣೆಉಂಟಾಗುತ್ತಿರಲೀಕಾಗಿ ಸಮ್ಯಗ್ದರ್ಶನಲಾಭ ದ್ದೆಶೆಯಿಂದ ಪಡೆಯಲ್ಪಟ್ಟಂಥಾ ಸಮ್ಯಜ್ಞಾನುಳ್ಳಂತ್ಥಾ ಸ

* * *

ಷನಿವೃತ್ಯೈಚರಣಂಪ್ರಿಪದ್ಯತೆಸಾಧುಃ || ೫೪ || ರಾಗದ್ವೇಷನಿವೃತ್ತೆರ್ಹಿಂಸಾದಿನಿ ವರ್ತನಾಕೃತಾಭವತಿ || ಅನಪೇಕ್ಷಿತಾರ್ಥವೃತ್ತಿಃಕಃಪುರುಷಸ್ಸೆವತೆನೃಪತೀನ್ || ೫೫ || ಹಿಂಸಾನೃತಚೌರೈಭ್ಯೊಮೈಥುನ ಸವಾಪರಿಗ್ರಹಾಭ್ಯಾಂಚ | ಪಾಪಪ್ರಣಾಳಿಕಾಭ್ಯೊವಿ ರತಿಸ್ಸಂಜ್ಞಸ್ಯಚಾರಿತ್ರಂ || ೫೬ || ಸಕಲಂವಿಕಲಂ ಚರಣಂತತ್ಸಕಲಂಸರ್ವಸಂಗವರಿತಾನಾಂ | ಅನಗಾರಾಣಾಂವಿಕಲಂ ಸಾಗಾರಾಣಾಂಸಸಂಗಾನಾಂ || ೫೭ || ಗೃಹಿಣಾಂತ್ರೆಧಾ ತಿಷ್ಠತ್ಯಣುಗುಣ ಶಿಕ್ಷಾವ್ರತಾತ್ಮಕಂಚರಣಂ | ಪಂಚತ್ರಿಚತುರ್ಭೆದಂತ್ರಯಂ ಯಥಾಸಂಖ್ಯಮಾಖ್ಯಾತಂ || ೫೮ || ಫ್ರಾಣಾತಿಪಾತವಿತಥಂವ್ಯಾಹಾರಸ್ತೆ ಯಕಾಮಮೂರ್ಛೆಭ್ಯಃ | ಸ್ಥೂಲೆಭ್ಯಃಪಾಪೆಭ್ಯೊವ್ಯುಪರಮಣಮಣುವ್ರತಂಭವತಿ || ೫೯ || ಸ್ವಯಮೆವಾತ್ಮನಾತ್ಮಾನಂಹೀನ ಸ್ಯಾತ್ಮಾಕಷಾಯವಾನ್ | ಪೂರ‍್ವಂಪ್ರಾಣ್ಯಂ ತರಾನಾಂತುಶ್ಚಾತ್ಸ್ಯಾದ್ವಾನವಾವಧಃ ||

* * *

ತ್ಪುರಷನು ರಾಗ ದ್ವೇಷನಿವೃತ್ತಿಗೋಸ್ಕರ ಸಮ್ಯಕ್ಚಾತ್ರವನ್ನು ಪಡೆಯುತ್ತಾನೆ || ೫೪ || ರಾಗದ್ವೇಷಗಳ ಬಿಡುವದರದೆಸೆಯಿಂದಹಿಂಸಾದಿಸಂವೃತ್ತಿಯು ಮಾಡಲ್ಪಟ್ಟದ್ದು ಆಗುತ್ತಿಧೆ ಅಪೇಕ್ಷಿಸಲ್ಪಡದೇ ಇರುವದ್ರವ್ಯಾಪಾರವುಳ್ಳ ಯಾವಪುರುಷನು ಧೊರೆಗಳನ್ನು ಸೇವಿಸುತ್ತನೆ || ೫೫ || ಚಂದಾ ಗಿತಿಳಿಯುವಂತ್ಥಾವನಿಗೆ ಪಾಪಗಳಿಗೆ ಬಚ್ಚಲುಗಳಾದಂತ್ಥಾ ಹಿಂಸ ಸುಳ್ಳು ಕಳ್ಳತನಗಳ ದೆಶೆಯಿಂದಲು ಸ್ತ್ರೀಯರತಿಸೇವೆ ಪರಿಗ್ರಹಗಳದೆಶೆಯಿಂದಲೂ ಕೂಡ ವಿರಮಣವು ಸಮೃಕ್ಚಾರಿತ್ರವು ಆಗುತ್ತಿಧೆ || ೫೬ || ಸಮ್ಯಕ್ಚಾರಿತ್ರವು ಸಕಲವು ವಿಕಲವು ಇಂತೆಂದು ಎರಡು ಪ್ರಕಾರವಾಗಿ ಆಗು ತ್ತಿಧೆ ಆಸ ಕಲಚಾರಿತ್ರವು ಸಮಸ್ತಸಂಸಾರ ಸಂಬಂಧದ್ದೆಸೆಯಿಂದ ತೊಲಗಿದಂತ್ಥಾಯತಿಗಳಿಗೆ, ವಿಕಲಚಾರಿತ್ರವು ಸಂಸಾರಸಂಬಂಧದೊಡನೆ ಕೂಡಿದಂಥಾ ಗ್ರಹಸ್ಥರುಗಳಿಗೆ ಆಗುತ್ತಿಧೆ || ೫೭ || ಗೃಹಸ್ಥರುಗಳಿಗೆ ಚಾರಿತ್ರವು ಮೂರುಪ್ರಕಾರವಾಗಿ ಅಣುವ್ರತ ಗುಣವ್ರತ ಶಿಕ್ಷಾವ್ರತಸ್ವರೂ ಪವಾದಂಥಾದ್ದು ಅಣುವ್ರತ ಗುಣವ್ರತ ಶಿಕ್ಷಾವ್ರತವೆಂಬ ಈ ಮೂರು, ಸಂಖ್ಯೆಯನ್ನು ಅತಿಕ್ರಮಿಸಿದೆ ಐದು ಭೇದ ಮೂರುಬೇದ ನಾಲ್ಕು ಭೇದವುಳ್ಳಂಥಾದಾಗಿ ನಿಶ್ಚಯಿಸಲ್ಪಟ್ಟು ಇಧೆ || ೫೮ || ಸ್ಥೂಲಗಳಾದಂತ್ಥಾ ಪಾಪರೂಪಗ ಳಾದಂತ್ಥಾ ಪ್ರಾಣವಧೆ, ಸುಳ್ಳು ಹೇಳೋಣ, ಕಳ್ಳತನ ರತಿ ಪರಿಗ್ರಹಗಳ ದೆಶೆಯಿಂದ ವಿರತಿಯು ಅಣುವ್ರತವು ಆಗುತ್ತಿಧೆ || ೫೯ || ಕ್ರೋಧಮಾನ ಮಾಯಾ ಲೋಭಗಳೆಂಬ ಚತುಷ್ಕಷಾಯ ವುಳ್ಳಂತ್ಥಾವನುತಾನೇ ತನ್ನಿಂದ ತನ್ನನ್ನು ಮೊದಲಲ್ಲಿ ಹಿಂಸಿಸುತ್ತಾನೆ ಅನಂತರದಲ್ಲಿ ತನಗೆಶತೃಗ

* * *

ಸಂಕಲ್ಪಾತ್ಕೃತಕಾರಿತಮನನಾದ್ಯೊಗತ್ರಯಸೃಚರಸತ್ವಾನ್ | ನಹಿನಸ್ತಿಯುತ್ತ ದಾಹುಃಸ್ಥೂಲವಧಾದ್ವಿರ ಮಣಂನಿಪ್ರಣಾಃ || ೬೧ || ಚ್ಛೆದನಬಂಧನಪೀಡಾತಿ ಭಾರಾರೊಪಣಂವ್ಯತೀಚಾರಾಃ | ಆಹಾರವಾರಣಾ ಪಿಚಸ್ಥೂಲವಧಾದ್ಯುಪರತೆಃ ಪಂಚ || ೬೨ || ಸ್ಥೂಲಮಲೀಕಂನವದತಿಪರಾನ್ ವಾದಯತಿಸತ್ಯಮಪಿ ವಿಪದೆ | ಯತ್ತದ್ವದಂತಿಸಂತಃಸ್ಥೂಲಮೃಷಾವಾದವೈರಮಣಂ || ೬೩ || ಪರಿವಾದರ ಹೊಭ್ಯಾಖ್ಯಾಪೈ ಶೂನ್ಯಂಕೂಟಲೇಖ್ಯಕರಣಂಚ | ನ್ಯಾಸಾವಹಾರಿತಾಪಿ ಚವ್ಯತಿಕ್ರಮಾಃ ಪಂಚಸತ್ಯಸ್ಯ || ೬೪ || ನಿಹಿತಂವಾ ಪತಿತಂವಾಸುವಿಸ್ಮೃತಂ ವಾಪರಸ್ವಮವಿಸೃಷ್ಟಂ | ನಹರತಿಯನ್ನಚಧತ್ತೆತದಕೃಶಚೌರ್ಯಾದ್ಯುಪಾರಮಣಂ || ೬೫ || ಚೊರಪ್ರಯೊಗಚೊ

* * *

ಳಾದ ಅನ್ಯಪ್ರಾಣಿಗಳಿಗಾದರೊಹಿಂಸೆಯು ಆಗುತ್ತಿಧೆಯೋ ಅಥವಾ ಇಲ್ಲವೊ || ೬೦ || ಮನೊವಾಕ್ಕಾಯಗಳೆಂಬ ಯೋಗದಸಂಕಲ್ಪವಾದಂಥಾ ಅಂದರೆಮಾಡಲ್ಪಟ್ಟದ್ದ ರದ್ದೆಶೆಯಿಂದ ಪರರಿಂದ ಮಾಡಿಸಲ್ಪಟ್ಟದ್ದರದೆಶೆಯಿಂದ ಅನುಮತಿಪಡೋಣ ದರದೆಶೆಯಿಂದ ಚರಪ್ರಾಣಿಗಳನ್ನು ಹಿಂಸೆ ಮಾಡುವದಿಲ್ಲವೆಂಬುವದು ಯಾವದುಂಟೊ ಅದನ್ನು ಪ್ರವೀಣರಾದಂಥಾವರುಗಳು ಸ್ಥೂಲಹಿಂಸೇದೆಶೆಯಿಂದ ವಿರತಿಯನ್ನಾಗಿ ಹೇಳುವರು || ೬೧ || ಕತ್ತರಿಸುವದು, ಕಟ್ಟುವದು ನೋಯಿಸುವದೂ, ಇವುಗಳು ಅತಿಭಾರವನ್ನು ಹೊರಿಸುವದು ಆಹಾರವನ್ನು ತಡೆಯುವದು ಈ ಐದು ಕೂಡಸ್ಥೂಲವಧೇ ದೆಶೆಯಿಂದ ವಿರತಿಗೆ ಅತೀಚಾರಗಳು ಆಗುತ್ತಿವೆ || ೬೨ || ಸ್ಥೂಲವಾದಸುಳ್ಳನ್ನು ವಿಪತ್ತಿಗೋಸ್ಕರ ಯಥಾರ್ಥವನ್ನೂ ಕೂಡ ಹೇಳುವದಿಲ್ಲ ಅನ್ಯರುಗಳನ್ನು ಹೇಳುವಹಾಗೆ ಮಾಡುವದಿಲ್ಲಯೆಂಬುವದು ಯಾವದೋ ಅದನ್ನು ಸತ್ಪುರುಷರುಗಳು ಸ್ಥೂಲ ಮೃಫಾತಿಯನ್ನಾಗಿ ಹೇಳುತ್ತಾರೆ || ೬೩ || ಒಬ್ಬೊಬ್ಬರಿಗೆ ಒಂದೊಂದು ವಿಧವಾಗಿ ಧರ್ಮೋಪದೇಶ ಮಾಡುವದು ಸ್ತ್ರೀಪುರುಷರುಗಳ ರತಿಕ್ರೀಡಾ ಮುಂತಾದ ಅಂತರಂಗವನ್ನು ಹೇಳುವದು ಅನ್ಯರಮೇಲೆ ಕ್ಷುದ್ರವನ್ನು ಹೇಳುವದು ಒಬ್ಬರು ಮೋಸಹೋಗುವಂತೆ ಬರವಣಿಗೆಮಾಡುವದು. ಒಂದು ಮಾತನ್ನು ತೋರಿಸಿಹಾರಿಸುವದು ಈ ಐದು ಕೂಡ ಸತ್ಯವಾಕ್ಯಕ್ಕೆ ಅತೀಚಾರಗಳು || ೬೪ || ನಿಕ್ಷೇಪವನ್ನು ಆದಾಗ್ಯೂ ಹೊರಗೆ ಬಿದ್ದಂತ್ಥಾದ್ದನ್ನದರೂ ಮರತಂಥಾದ್ದನ್ನಾದರೂ ಕೊಡಲ್ಪಡದೆ ಇದ್ದಂಥಾದ್ದನ್ನಾದಾಗ್ಯೂ ತಾನು ಅಪಹರಿಸುವದಿಲ್ಲಾ ಮತ್ತೊಬ್ಬರಿಗೆ ಪರಸ್ವತ್ತನ್ನು ಕೊಡುವದಿಲ್ಲವೆಂಬುವದುಯಾವದೋ ಅದುಸ್ಥೂಲ ಕಳ್ಳತನದ್ದೆಶೆಯಿಂದ ಬಿಡೋಣ ಆಗುತ್ತಿಧೆ || ೬೫ ||

* * *

ರಾರ್ಥಾದಾನವಿಲೊಪಸದೃಶಸಮ್ಮಿಶಾಹಃ | ಹೀನಾಧಿಕವಿನಿಮಾನಂಪಂಚಾಸ್ತೆ ಯವ್ಯತೀಚಾರಾಃ || ೬೬ || ನಚಪರದಾರಂಗಚ್ಛತಿನಪರಾನ್‌‌‌ಗಮಯ ತಿಚಪಾಪಭೀತೆರ್ಯ್ಯತ್ | ಸಾಪರದಾರನಿವೃತ್ತಿಃಸ್ವದಾ ರಸಂತೊಷನಾಮಾಪಿ || ೬೭ || ಅನ್ಯವಿವಾಹಾರಕರಣಾನಂಗಕ್ರೀಡಾವಿಟತ್ವವಿಪುಲತೃಷಾಃ ಇತ್ವರಿಕಾಗಮನಂ ಚಾಸ್ಮರಸ್ಯಪಂಚವ್ಯತೀಚರಾಃ || ೬೮ || ಧನಧಾನ್ಯಾದಿಗ್ರಂಥಂಪರಿಮಾಯಾತತೋ ಧಿಕೆಷುಸ್ವೃಹತಾ | ಪರಿಮಿತಿಪರಿಗ್ರಹಸ್ಯಾದಿಚ್ಛಾಪರಿಮಾಣನಾಮಾಪಿ || ೬೯ || ಅತಿವಾಹ ನಾತಿಸಂಗ್ರಹವಿಸ್ಮಯಲಾಭಾ ದಿಭಾರವಹನಾನಿ | ಪರಿಮಿತಪರಿಗ್ರಹಸ್ಯಚವಿಕ್ಷೆಪಾಃಪಂ ಚಲಕ್ಷ್ಯಂತೆ || ೭೦ || ವಧಾದಸತ್ಯಾಚ್ಚೌರ್ಯಾ ಚ್ಛಕಾಮಾದ್ಗ್ರಂಥಾನ್ನಿವರ್ತ್ತನಂ |

* * *

ಮತ್ತೊಬ್ಬರಿಂದ ಕಳ್ಳತನ ಮಾಡಿಸುವದು, ಕಳ್ಳರ ದ್ರವ್ಯವನ್ನು ಕ್ರಯಕ್ಕೆ ತೆಗದು ಕೊಳ್ಳುವದು ದುರ್ಭಿಕ್ಷ ಮುಂತಾದವುಗಳಲ್ಲಿ ಆಹೀನ ಕರೀದಿಗೆತೆಗದುಕೊಳ್ಳುವದು ತುಪ್ಪಕ್ಕೆ ಹಿಪ್ಪೆ ತುಪ್ಪ ಮುಂತಾದವುಗಳ ಬೆರಿಸುವದು, ಕ್ರಯ ವಿಕ್ರಯಗಳಲ್ಲಿ ಹೆಚ್ಚು ಕಡಮೆಯಾಗಿ ಅಳೆಯುವದು ತೂಗುವದು ಈ ಐದು ಅಚೌರ್ಯವ್ರತಕ್ಕೆ ಅತೀಚಾರಗಳು || ೬೬ || ಪರಸ್ತ್ರೀಯರನ್ನು ಕ್ರೀಡಾರ್ಥವಾಗಿ ಹೊಂದುವದಿಲ್ಲ ಮತ್ತೊಬ್ಬರನ್ನು ಪರಸ್ತ್ರೀ ಸಂಬಂಧಕ್ಕೆ ಕಳುಹಿಸುದಿಲ್ಲ ಎಂಬುವದು ಯಾವದೋ ಅದು ಪಾಪಭೀತೀದೆಶೆಯಿಂದ ಪರದಾರ ನಿವೃತ್ತಿ ವ್ರತವುಸ್ವದಾರ ಸಂತೋಷವೆಂಬ ಹೆಸರುಉಳ್ಳ ದ್ದು ಕೂಡ ಆಗುತ್ತೆ || ೬೭ || ಅನ್ಯರಿಗೆ ವಿವಾಹ ಮಾಡಿಸುವದು, ಯಾವ ಯಾವ ಸ್ಥಾನದಲ್ಲಿ ಹ್ಯಾಗೆಹ್ಯಾಗೆ ಕ್ರೀಡಿಸಬೇಕೋ ಅದನ್ನು ಬಿಟ್ಟು ಗುದಾಮೈಥುನ ಮುಂತಾದ್ದ ಮಾಡುವದು ಭಂಡಹಾಡು ಮುಂತಾದ ವಿಟ ಭಾವವು. ತನ್ನ ಸ್ತ್ರೀಯನ್ನಾದಾಗ್ಯೂಪಡೆಯುವುದು ಈ ಐದು ಸ್ಥೂಲಕಾಮವಿಲ್ಲದೆ ಇರುವಂಥಾವನಿಗೆ ಅತೀಚಾರವು || ೬೮ || ದ್ರವ್ಯಧಾನ್ಯಮುಂತಾದ ಪರಿಗ್ರಹವನ್ನು ಪರಿಮಾಣಮಾಡಿ ಅದರ ದೆಶೆಯಿಂದ ಅಧಿಕವಾದಂಥಾವುಗಳಲ್ಲಿ ಆಶೆ ಇಲ್ಲದೇ ಇರುವಂಥಾ ಭಾವವು ಪರಿಮಿತಪರಿಗ್ರಹವೆಂಬ ವ್ರತವು ಇಚ್ಛಾಪರಿಮಾಣವೆಂಬ ಹೆಸರು ಉಳ್ಳಂಥಾದ್ದು ಕೂಡಾ ಆಗುತ್ತಧೆ || ೬೯ || ಅತ್ಯಂತ ವಾಹನವು, ಅತಿಸಂಗ್ರಹವು ಪರರಭೊಗವನ್ನು ನೋಡಿ ಆಶ್ಚರ್ಯಪಡೋಣವು ಭೋಗಾಸಕ್ತಿಯು ಅತಿ ಭಾರವನ್ನು ವಹಿಸುವದ್ರೊಗವುಗಳಾದಂಥಾ ಐದೂಕೂಡ ಪರಿಮಿತ ಪರಿಗ್ರಹವ್ರತಕ್ಕೆ ಕಂದುಸಂ

* * *

ಪಂಚಕಾಣುವ್ರತಂರಾತ್ರ್ಯಭುಕ್ತಿಃಪಷ್ಟಮಣುವ್ರತಂ || ೭೧ || ಅಹ್ನೊಮುಖೆವಾಸಾನೇಚ ಯೊದ್ವೆದ್ವೆಘಟಿ ಕೆತ್ಯಜನ್ | ನಿಶಾಬೊಜನದೊಷಜ್ಞೊಸ್ನಾತ್ಯಸೌಪುಣ್ಯಭಾಜನಂ || ೭೨ || ಮೌನಂಭೊಜನವೇಳಾ ಯಾಂಜ್ಞಾನಸ್ಯವಿನಯೊಭವತ್ | ರಕ್ಷಣಂಚಾಭಿಮಾ ನಸ್ಯೆತ್ಯುದ್ದಿಶಂತಿಮುನಿಂಶ್ವರಾಃ || ೭೩ || ಹದನಂಮೂತ್ರಣಂಸ್ನಾನಂಪೂಜನಂಪರ ಮೆಷ್ಠನಾಂ | ಭೊಜನಂಸುರತಂಸ್ತೊತ್ರಂಕುರ್ಯ್ಯಾನ್ಮೌನಸ ಮಾಹಿತಃ || ೭೪ || ಮಾಂಸರಕ್ತಾರ್ದ್ರಚರ್ಮ್ಮಾಸ್ತಿಪೂಯದರ್ಶ್ಶಿನತಸ್ತ್ಯಜೆತ್ | ಮೃತಂಗೀವೀಕ್ಷಣಾದನ್ನಂ ಪ್ರತ್ಯಾಖ್ಯಾನಾನ್ನಸೆವನಾತ್ || ೭೫ || ಮಾತಂಗಸ್ವಪಚಾದೀನಾಂದರ್ಶನೆತದ್ವಚಶ್ರುತೆ | ಭೊಜನಂಪರಿಹರ್ತ್ತವ್ಯಂಮಲಮೂತ್ರಾದಿದರ್ಶನೆ || ೭೬ || ಪಂಚಾಣುವ್ರತನಿ ಧಯೊನಿರತಿಕ್ರಮಣಾಃ ಫಲಂತಿಸುರ

* * *

ರಗಳು || ೭೧ || ಹಿಂಸೆದೆಸೆಯಿಂದಲೂ, ಸುಳ್ಳಿನದೆಸೆಯಿಂದಲೂ, ಕಳ್ಳತನದ್ದೆಸೆಯಿಂ ದಲೂ ಕಾ ಮದ್ದೆಸೆಯಿಂದಲೂ ಪರಿಗ್ರಹ ದ್ದೆಶೆಯಿಂದಲೂ ವಿರತಿಯು ಈ ಐದು ಅಣುವ್ರತವು ರಾತ್ರಿ ಕಾ ಲದಲ್ಲಿ ಭೋಜನಮಾಡದೆ ಇರೋಣವು ೬ನೇ ಅಣುವ್ರತವು, ರಾತ್ರಿ ಭೋಜನದ ದೋಷವನ್ನು ತಿಳಿದಂಥಾ ಯಾವ ಪುರುಷನು ಹಗಲಿನ ಮುಖದಲ್ಲೂ ಕೊನೆಯಲ್ಲೂ ಎರಡು ಯೆರಡು ಘಳಿಗೆಗಳನ್ನು ಬಿಡುವಂಥಾ ವನಾಗಿಊಟಮಾಡುತ್ತಾನೋ ಆತನು ಪುಣ್ಯಭಾಜನನು || ೭೨ || ಭೋಜನಕಾಲದಲ್ಲಿ ಮೌನವುಜ್ಞಾನಕ್ಕೆ ವಿನಯವು ಆಗುತ್ತದೆ, ಮುನೀಶ್ವರರುಗಳು ಅಭಿಮಾನಕ್ಕೆ ಸಂರಕ್ಷಣೆ ಇಂತೆಂದು ಕೂಡ ಉದ್ದೇಶ್ಯ ಮಾಡುತ್ತಾರೆ || ೭೨ || ಮೌನದೊಡನೆ ಕೂಡಿದಂಥಾವನಾಗಿ, ಮಲವಿಸರ್ಜನೆಯನ್ನು ಮೂತ್ರವಿಸರ್ಜನೆಯನ್ನು ಸ್ನಾನವನ್ನು ಪಂಚಪರಮೇಷ್ಠಿಗಳ ಪೂಜೆಯನ್ನು ಭೋಜನವನ್ನು ರತಿ ಕ್ರೀಡೆಯನ್ನು ಸ್ತೋತ್ರವನ್ನು ಮಾಡತಕ್ಕದ್ದು || ಮಾಂಸರಕ್ತ ಹಸೀಚರ್ಮ, ಅಸ್ಥಿ, ದುರ್ಗಂಧಪದಾರ್ಥ, ಇವುಗಳ ಕಾಣೋದರದೆಶೆ ಯಿಂದಲೂ ಸತ್ತಂಥಾಪ್ರಾಣಿಗಳನ್ನು ನೋಡುವದರ ದೆಶೆಯಿಂ ದಲೂ, ತಾನು ವ್ರತಮಾಡಿ ತ್ಯಜಿಸಿದ್ದ ವಸ್ತುವನ್ನು ಸೇವಿಸುವದರ ದೆಶೆಯಿಂದಲು ಅನ್ನವನ್ನು ಬಿಡತಕ್ಕದ್ದು || ೭೫ || ಮಾದಿಗ ಹೊಲೆ ಯರ ಮುಂತಾದವರಗಳ ಕಾಣುವದರಲ್ಲೂ ಅವರವಾಕ್ಕುಗಳ ಕೇಳುವದರಲ್ಲಯೂ ಮಲ ಮೂತ್ರ ಮುಂತಾದವುಗಳ ಕಾಣುವದರಲ್ಲೂ ಭೋಜನ ಮತ್ತು ಪರಿಹರಿಸುವದಕ್ಕೆ ಯೋಗ್ಯವಾದಂ ಥಾದ್ದು || ೭೬ || ಯಾವಅಣುವ್ರತಗಳನ್ನು ಪರಿಜ್ಞಾನವು ಅಣಿಮಾದ್ಯಷ್ಟಗುಣಗಳು ದಿವ್ಯಶರೀರವುಡ ಕೂಡ ಅದು ಸ್ಥೂಲ

* * *

ಲೋಕಂ | ಯತ್ರಾವಧಿರಷ್ಟಗುಣಾದಿವ್ಯಶರೀರಂಚಲಭ್ಯಂತೆ || ೭೭ || ಮಾತಂಗೊ ಧನದೆವಶ್ಚವಾರಿಷೆಣಸ್ತತಃಪರಃ | ನೀಲೀಜಯಶ್ಚಸಂಪಾಪ್ತಾಃ ಪೂಜಾತಿಶಯಮುತ್ತಮಂ || ೭೮ || ಮದ್ಯಮಾಂಸಮಧು ತ್ಯಾಗೈಃಸಹಾಣುವ್ರತಪಂಚಕಂ | ಅಷ್ಟೌಮೂಲ ಗುಣಾನಾಹುಃಗೃಹಿಣಾಂಶ್ರವಣೊತ್ತಮಾಃ || ೭೯ || ಮಾಂಸಾಶಿಷುದಯಾ ನಾಸ್ತಿನಸತ್ಯಂಮದ್ಯಪಾಯಿಷು | ಧರ್ಮಭಾವೊನಜೀವೆಷುಮಧೂದುಂಬರಸೇವಿಷು || ೮೦ || ಮದ್ಯಪಲಮಧುನಿಶಾಸನಂಚಫಲೀವಿರತಿಪಂಚಕಾಪ್ತನುತಿಃ | ಜೀವದಯಾಜಲಗಾಲನಮಿತಿಚಕ್ವಚಿದಷ್ಟಮೂಲಗುಣಾಃ || ೮೧ || (ಇತಿಅಣುವ್ರತಾ ಧಿಕಾರ) (ಗುಣವ್ರತ) ದಿಗ್ವ್ರತಮನ ರ್ಥದಂಡವ್ರತಂಚಭೋಗೊಪಭೋಗಪರಿಮಾಣಂ | ಅನುಬೃಹ್ಮಣಾದ್ಗುಣಾನಾಮಾಖ್ಯಾಂತಿಗುಣವ್ರ ತಾನಾರ‍್ಯಾಃ || ೮೨ || ದಿಗ್ವಲಯಂಪರಿಗಣಿತಂಕೃತ್ವಾತೊಹಂಬಹಿರ‍್ನಯಾಸ್ಯಾಮಿ | ಇತಿಸಂಕಲ್ಪೊ

* * *

ಪಡೆಯುಲ್ಪಡುತ್ತಿವೆಯೋ ಅತೀಚಾರ ರಹಿತಗಳಾದಂಥಾ ಪಂಚಾಣುವ್ರತಗಳೆಂಬ ನಿಧಿಗಳು ದೇವಲೋಕವನ್ನು ಫಲಿಸುತ್ತಲಿವೆ ಅಹಿಂಸಾವ್ರತದಲ್ಲಿ ಮಾತಂಗನು, ಸತೃವ್ರತದಲ್ಲಿ ಧನದೇವನು ಆಚಾರವ್ರತದಲ್ಲಿ ವಾರಿಷೇಣನು, ಬ್ರಹ್ಮಚರ್ಯವ್ರತದಲ್ಲಿ ನೀಲಿಯು, ಪರಿಮಿತ ಪರಿಗ್ರಹವ್ರತದಲ್ಲಿ ಜಯಕುಮಾರನು, ಉತ್ತಮವಾದಂಥಾ ಪೂಜಾತಿಶಯವನ್ನು ಪಡೆದರು ಯತಿಶ್ರೇಷ್ಠರುಗಳು ಗೃಹಸ್ಪರುಗಳಿಗೆ ಮದ್ಯಮಾಂಸಮಧುತ್ಯಾಗಗಳೊಡನೆ ಪಂಚಾಣುವ್ರತಗಳನ್ನುಯೆಂಟು ಮೂಲ ಗುಣಗಳನ್ನಾಗಿ ಹೇಳುವರು || ಮಾಂಸಾಹಾರಿಗಳಲ್ಲಿದಯೆ ಇಲ್ಲಾ ಮದ್ಯಪಾನಿಗಳಲ್ಲಿ ಸತ್ಯವಿಲ್ಲಾ ಜೇನುತುಪ್ಪವನ್ನು ಅತ್ತಿ ಆಲ ಗೋಣಿ ಬಸರಿ ಅರಳಿ ಹಣ್ಣುಗಳ ಇವುಗಳನ್ನು ಸೇವಿಸುವರಲ್ಲಿ ಧರ್ಮಭಾವವಿಲ್ಲಾ || ೮೦ || ಮದ್ಯವನ್ನು ಮಾಂಸವನ್ನು ಜೇನುತುಪ್ಪವನ್ನು ರಾತ್ರಿಭೋಜನವನ್ನು ಪಣ್ಪಾಲ್ಮರದ ಹಣ್ಣುಗಳನ್ನು ಬಿಡೋಣವು ಪಂಚಪರಮೇಷ್ಠಿಗಳ ಸ್ತೋತ್ರವು ಜೀವದಯೆಯು ನೀರಸೋದಿಸೋಣವು ಇಂತೆಂದು ಕೆಲವರಲ್ಲಿ ಎಂಟು ಮೂಲಗುಣಗಳು || ದಿಗ್ವ್ರತವು ಅನರ್ಥದಂಡತವು ಭೋಗೋಪ ಭೋಗಪರಿಮಾಣವ್ರತವುಗುಣಗಳನ್ನು ವೃದ್ಧಿಹೊಂದಿಸುವದರ ದೆಸೆಯಿಂದ ಪೂಜ್ಯರಾದಂಥಾವರುಗಳು ಈ ಮೂರನ್ನು ಗುಣವ್ರತಗಳಿಂತೆಂದು ಹೇಳುತ್ತಾರೆ || ೮೨ || ಸೂಕ್ಷ್ಮನಿವೃತ್ತಿಗೋಸ್ಕರ ಮರಣಪರ‍್ಯಂತರದಲ್ಲೂ ದಶದಿಕ್ಕಿನಲ್ಲಿ ಇಷ್ಟುಗಾವುದಗಳನ್ನು ಲೆಖ್ಖ ಮಾಡಲ್ಪಟ್ಟಂಥಾದ್ದಾನ್ನಾಗಿ ಮಾಡಿ ಈ ಪರಿಗಣಿಸಲ್ಪಟ್ಟ ಪ್ರದೇಶದ್ದೆಶೆಯಿಂದ ಹೊರಗೆ ಹೋಗುವದಿಲ್ಲಾ ಇಂತೆಂದು ಸಂ

* * *

ರಂಭವಿಫಲಂವನಸ್ಪತಿಚ್ಛೆದಂ | ಸರಣಂಸಾರಣಮಪಿಚಪ್ರಮಾದಚರ್ಯಾಂಪ್ರಭಾಷಂತೆ || ೯೫ || ಕಂದರ್ಪಃಕೌತ್ಕುಚೃಂಮೌಖರ್ಯಮತಿಪ್ರಸಾದನಂಪಂಚ | ಅಸಮೀಕ್ಷ್ಯಚಾಧಿ ಕರಣಂವ್ಯತೀತಯೊನ ರ್ಥದಂಡಕೃದ್ವಿರತೇಃ || ೯೬ || ಅಕ್ಷಾರ್ಥಾನಾಂಪರಿಸಂ ಖ್ಯಾನಾಂಭೋಗಪಭೋಗಪರಿಮಾಣಂ | ಅರ್ಧವತಾಮಪ್ಯವಧೌರಾಗರತೀನಾಂತ ನೂಕೃತಯೆ || ಭುಕ್ತ್ವಾಪರಿಹಾತವ್ಯೊಭೊಗೋಭುಕ್ತ್ವಾ ಪುನಶ್ಚಭೊಕ್ತವ್ಯಃ | ಉಪಭೊಗೊಶನವಸನಪ್ರಭೃತಿಃಪಂಚೆಂದ್ರಿಯೊವಿಷಯಃ || ೯೭ || ತ್ರಸಹತಿ ಪರಿಹರಣಾರ್ಥಂಕ್ಷೌದ್ರಂಪಿಶಿತಂಪ್ರಮಾಣಪರಿಹೃತಯೆ | ಮದ್ಯಂಚವರ್ಜನೀಯಂ ಜಿನಚರಣೌಶರಣಮುಪಯಾತೈಃ || ೯೮ || ಅಲ್ಪಫಲಬಹುವಿಘಾತಾನ್ಮೂಲಕಮಾ ರ್ದ್ರಾಣಿಶೃಂಗವೇರಾಣೀ | ನವನೀತನಿಂ ಬಕುಸಮಕೈತಕಮಿತ್ಯೆತದವಹೇಯಾ || ೯೯ || ಸ್ಥೂಲಿಸೂಕ್ಷ್ಮಾಸ್ತಥಾಜೀವಾಸಂತ್ಯುದುಂಬರಮ

* * *

ಶ್ರುತಿಯೆಂಬುದಾಗಿ ಆಗುತ್ತದೆ || ೯೪ || ಭೂಮಿನೀರುಅಗ್ನಿ ವಾಯು ಇವುಗಳ ಸಂಬಂಧವಾದ ಆರಂಭವು ಪ್ರಯೋಜನ ವಿಲ್ಲದೆ ಇರೋಣ ಹ್ಯಾಗೋಹಾಗೆ ಮರಣವನ್ನು ಕಡಿಯೋಣವನ್ನು ತಿರುಗೋಣವನ್ನು ಅನ್ಯರ ತಿರಿಗಿಸೋಣವನ್ನು, ಪ್ರಮಾದಚರ್ಯವನ್ನಾಗಿ ಹೇಳುತ್ತಾರೆ || ಕಾಮವು ಭಂಡತನವು ಮೂರ್ಖತನವು ಅತ್ಯಲಂಕಾರಮಾಡೊಣವು ಚಂದಾಗಿ ನೋಡದೇ ಪದಾರ್ಥಯಿಡೋಣವು ಅನರ್ಥದಂಡ ವಿರತಿವ್ರತಕ್ತೆ ಈ ೫ ಅತೀಚಾರಗಳು || ೯೫ || ಪ್ರಯೋಜನವುಳ್ಳವಸ್ತುಗಳ ಪರಿಚ್ಚೇದನದಲ್ಲಿ ಅನುರಾಗ ಅಸಕ್ತಿಗಳ ಕೃಶಮಾಡುವದಕ್ಕೋಸ್ಕರ ಇಂದ್ರಿಯಾರ್ಥಗಳ ಗಣನೆಮಾಡೋಣವು ಭೋಗೋಪಭೋಗ ಪರಿಮಾಣವಿಂತೆಂದು ಆಗುತ್ತಲಿಧೆ || ೯೬ || ಅನುಭವಿಸಿ ಬಿಡುವದಕ್ಕೆ ಯೋಗ್ಯವಾದಂಥಾದ್ದು ಭೋಗವು ಅನುಭವಿಸಿ ಪುನಃ ಅನುಭವಿಸೋಣವು ಉಪಭೋಗವು ಈ ಪಂಚೇಂದ್ರಿಯ ವಿಷಯಕವಾದ ಭೋಗೋಪಭೋಗವು ಅನ್ನವಸ್ತ್ರ ಮೊದಲಾದಂಥಾದ್ದು || ೯೭ || ಜಿನೇಶ್ವರನಪಾದವನ್ನು ಸಂರಕ್ಷಕವನ್ನಾಗಿ ಪಡೆದಿರುವಂಥಾವರುಗಳಿಂದ ದ್ವೀಂದ್ರಿಯಾದಿ ಹಿಂಸಾನಿವಾರಣಾರ್ತ್ಥವಾಗಿ ಜೇನುತುಪ್ಪವು ಮಾಂಸವು ಪ್ರಮಾಣದಪರಿಹಾರಕ್ಕೋಸ್ಕರ ಮದ್ಯವು ಬಿಡುವದಕ್ಕೆ ಯೋಗ್ಯವಾದಂಥಾವುಗಳು || ೯೮ || ಸ್ವಲ್ಪಪ್ರಯೋಜನವು ಬಹುಪ್ರಾಣಿಘಾತವು ಆಗುವದರದೆಶೆಯಿಂದ ಮೂಲಂಗಿಯು ಹಸೀಶುಂಠಿಗಳು ಬೆಣ್ಣೆಯು ಬೇವಿನಹುವೂ ತಾಳೇದಂಟು ಅಥವಾ ತಾಳೇಹುವಿನಹಿಟ್ಟು ಹೀಗೆಯೆಂಬು ವಂಥಾದ್ದು

* * *

ಧ್ಯಗಾಃ ತನ್ನಿಮಿತ್ತಂಜಿನೊದ್ದಿಷ್ಟಂಪಂಚೊದುಂಬರವರ್ಜನಂ || ೧೦೦ || ರಸಸಂಪೃ ಕ್ತಫಲಂಯೊದಶತಿತ್ರಸತನುರಸೈಶ್ಚಸಂಮಿಶ್ರ || ತಸ್ಯ ಮಾಂಸನಿವೃತ್ತಿರ್ವಿಫಲಾಖ ಲುಭವತಿಪುರುಷಸ್ಯ || ೧೦೧ || ……ಫಲೆತ್ರಿಭುವನವಿಜಯೀಂ ಶಿಲೀಂದ್ರಕಂನಸೇವೇಶ || ಆಪಂಚದಶತಿಥಿಭ್ಯಃಪಯೊಪಿವತ್ಸೊ ದ್ಭವಾಸಮಾರಭ್ಯ || ೧೦೨ || ಗಾಲಿತಂಶುದ್ಧಮಪ್ಯಂಬುಯಸಂಮೂರ್ಚತಿಮುಹೂರ್ತತಃ | ಅ ಹೊರಾತ್ರಂತದುಷ್ಣಂಸ್ಯಾತ್‌ಕಾಂಚಿಕಂದೊರವಹ್ನಿಕಂ || ೧೦೩ || ಧೃತಿಪ್ರಾಯೆಷುಪಾ ತ್ರೆಷುತೊಯಂಸ್ನೆ ಹಂತುನಾಶ್ರಯೆತ್ | ನವನೀತಂನಧರ್ತವ್ಯಮೂರ್ದ್ವಂ ತುಪ್ರಹರಾರ್ಧತಃ || ಯದನಿಷಂತದ್ವ್ರತ ತಯೇದ್ಯಚ್ಚಾನುಪಸೆವ್ಯಮೆತದಪಿಚಹ್ಯಾತ್ || ಅಭಿಸಂಧಿಕೃತಾವಿರತಿರ್ವಿಷಯಾದ್ಯೋಗಾದ್ವ್ರತಂಭವತಿ || ೧೦೫ || ನಿಯಮೊ

* * *

ಬಿತುವದಕ್ಕೆ ಯೋಗೃವಾಂಥಾದ್ದು || ೯೯ || ಸ್ಥೂಲಪ್ರಾಣಿಗಳು ಅದೇ ಪ್ರಕಾರಸೂಕ್ಷ್ಮ ಪ್ರಾಣಿಗಳೂ ಕೂಡ ಅತ್ತಿ, ಆಲ, ಅರಳಿ, ಬಸರಿ, ಗೋಣೀಯೆಂಬಪಂಚೊದುಂ ಬರಹಣ್ಣುಗಳು ಮಧ್ಯಗಳಾಗಿರುತ್ತವೆ ಆನಿಮಿತ್ತವಾಗಿಪಂಚೋದುಂಬುರ ವರ್ಜನೆಯು ಜಿನೇಶ್ವರನಿಂದ ಹೇಳಲ್ಪಟ್ಟಿತು || ದ್ವೀಂದ್ರಿಯಾದಿ ಪ್ರಾಣಿಗಳ ರಸದೊಡನೆ ಮಿಶ್ರವಾ ದಂತ್ಥಾ ರಸಸಂಯುಕ್ತಫಲವನ್ನು ಯವೋನು ಕಚ್ಚುತ್ತಾನೆಯೂ ಆ ಪುರುಷನಿಗೆ ಮಾಂಸನಿವೃತ್ತಿ ವ್ರತವುನಿಷ್ಫಲವಾಗುತ್ತದೆ || ೧೦೧ || ಬಿಲಪತ್ರೆಹಂಣನ್ನು ಸೋರೆದಕಾಯನ್ನು ಭಂಗೀಸಪ್ಪನ್ನು ಅಣಬೆಯನ್ನು ಕರೂಹುಟ್ಟಿದ್ದು ಮೊದಲ್ಗೊಂಡು ೧೫ ದಿವಸಗಳ ಪರ‍್ಯಂತರಗೋವುಯಮ್ಮೆ ಆಡುಮುಂತಾದ ಹಾಲುಗಳನ್ನು ಸೇವಿಸತಕ್ಕದ್ದು ಅಲ್ಲಾ || ೧೦೨ || ನೀರುಶೋಧಿಸಲ್ಪಟ್ಟಗ್ಯುಪುನಃ ಸಂಮೂರ‍್ಫನ ಪ್ರಾಣಿವುಳ್ಳದ್ದಾಗುತ್ತೆಶೋಧಿಸಲ್ಪಟ್ಟನೀರು ೨ ಘಳಿಗೆ ಶುದ್ದವಾದಂಥಾದ್ದು ಕಾಯಿಸಲ್ಪ ಟ್ಟನೀರು ಅಹೋರಾತ್ರಿಗಳಲ್ಲಿ ಪರಿಶುದ್ದವಾದಂಥಾದ್ದು ಗಂಜಿಯು ಆರುವಪರ‍್ಯಂತರ ಪರಿಶುದ್ಧವಾದಂಥಾದ್ದು || ಚರ‍್ಮ ಮೂಳೆ ಮುಂತಾದವುಗಲಿಂಧ ಮಾಡಲ್ಪಟ್ಟ ಪಾತ್ರೆಗಳಲ್ಲಿ ನೀರನ್ನು, ಯಣ್ಣೆಯನ್ನು ಆಶ್ರಯಿಸತಕ್ಕದಲ್ಲ, ಮೂರೂ ಮುಕ್ಕಾಲುಘಳಿಗೆ ಕಾಲದ್ದೆಶೆ ಯಿಂದ ಅನಂತರದಲ್ಲಿ ಭೆಣ್ಣೆಯುಗ್ರಹಿಸುವದಕ್ಕೆ ಯೋಗ್ಯವಾದಂತ್ಥಾದಲ್ಲ || ೧೦೪ || ಯಾವದು ಇಷ್ಟವಾದಂಥಾದ್ದು ಅಲವೊ ಅದನ್ನು ವ್ರತಮಾಡಿ ಬಿಡತಕ್ಕದ್ದು ಯಾವದು ಸೇವಿಸುವದಕ್ಕೆ ಯೋಗುವಾದಂಥಾದ್ದಲವೋ ಅದನ್ನು ಕೂಡ ಬಿಡತಕ್ಕದ್ದು ಸಂಕಲ್ಪದಿಂದಮಾಡಲ್ಪಟ್ಟಂಥಾ ವಿರತಿಯುಯೋಗ್ಯವಾದಂಥಾ ವಿಷಯದ್ದೆಶೆಯಿಂದ ವ್ರತವಾಗುತ್ತಿ

* * *

ಯಮಶ್ಚವಿಹಿತೊದ್ವೆಧಾಭೊಗೋಪಭೋಗಸಂಹಾರಾತ್ || ನಿಯಮಃಪರಿಮಿತಕಾಲೊ ಯಾವಜ್ಜೀವಂಯಮೊಧ್ರಿಯತೆ || ೧೦೬ || ಭೊಜನವಾಹನಶಯನ ಸ್ನಾನಪ್ರವಿತ್ರಾಂಗರಾಗಕುಸುಮೇಷು || ತಾಂಬೂಲವಸನಭೂಷಣಮನ್ಮಥ ಸಂಗೀ ತಗೀತೆಷು || ೧೦೭ || ಅದ್ಯದಿವಾರಜನೀವಾಪಕ್ಷೊಮಾ ಸಸ್ತಥರ‍್ತುರಯನಂವಾ || ಇತಿಕಾಲಪರಿಚ್ಛಿತ್ಯಾಪ್ರತ್ಯಾಖ್ಯಾನಂಭವೆನ್ನಿಯಮಃ || ೧೦೮ || ವಿಷಯ ವಿಷತೊನುಪ್ರೆಕ್ಷಾನುಸ್ಮೃತಿರತಿಲೌಲ್ಯಮತಿತೃಷಾನುಭವೌ || ಭೊಗೊಪಭೋಗಪರಿಮಾ ವ್ಯತಿಕ್ರಮಾಃ ಪಂಚಕಥ್ಯಂತೆ || ದೇಶಾವಕಾಶಿಕಂವಾಸಾಯಮಯಿಕಂ ಪ್ರೊಷದೊ ಪವಾಸೊವಾ || ವೈಯ್ಯಾಪೃತ್ಯಂಶಿಕ್ಷಾವ್ರ ತಾನಿಚತ್ವಾರಿಶಿಷ್ಟಾನಿ || ದೇಶಾವಕಾಶಿಕಂ ಸ್ಯಾತ್ ಕಾಲಪರಿಚ್ಛೆದನೆನದೆಶಸ್ಯ || ಪ್ರತ್ಯಹಮಣುವ್ರತಾನಾಂಪ್ರತಿ ಸಂಹಾರೊವಿಶಾಲಸ್ಯ || ೧೧೧ || ಗೃಹಹಾರಿಗ್ರಾಮಾಣಾಂಕ್ಷೇತ್ರನದೀದಾವಯೊಜನಾ

* * *

ದೆ || ೧೦೫ || ಭೋಗೋಪಭೋಗಗಳನ್ನು ಬಿಡುವದರದೆಶೆಯಿಂದ ಮಾಡಲ್ಪಟ್ಟವ್ರ ತವುನಿಯಮವ್ರತವೆಂತಲೂ ಯಮವ್ರತವೆಂತಲ್ತೂ ಪ್ರಕಾರವಾಗಿ ಆಗುತ್ತಿಧೆ. ಕ್ಲುಪ್ತಮಾಡಲ್ಪಟ್ಟ ಕಾಲವುಳ್ಳಂಥಾ ವೃತವು ನಿಯಮವ್ರತವು ಯಾವವ್ರತವು ಯಾವಜ್ಜೀ ವವು ಧರಿಸಲ್ಪಡುತ್ತೊ ಅದು ಯಮವ್ರತವು || ೧೦೬ || ಭೋಜನ ವಾಹನ, ಮಲಗೋಣ, ಸ್ನಾನ, ಪವಿತ್ರ ಕರವಾದ ಅನುಲೇಪನ ಪುಷ್ಟ, ತಾಂಬೂಲ ವಸ್ತ್ರ, ಆಭರಣ, ಮನ್ಮಥ ಸಂಬಂಧ, ಗಾನ ಇವುಗಳಲ್ಲಿ ಈಗ ಹಗಲು ರಾತ್ರೆ ಪಕ್ಷಮಾಸ ಋತು ಅಯನವನ್ನಾದಾಗ್ಯು ಕಾಲ ನಿಯಮದಿಂದ ಈ ಪ್ರಕಾರವಾಗಿ ಪ್ರತ್ಯಾಖ್ಯಾನವೆಂದರೆ ಭೋಜನಾದಿ ಪೂರ್ವೋಕ್ತಪದಾರ್ಥವನ್ನು ಬಿಡೋಣವು ನಿಯಮವ್ರತವಾಗುತ್ತಿದೆ || ೧೦೮ || ಭೋಗ್ಯಪದಾರ್ಥ ವೆಂಬ ವಿಷೆದ್ದೆಶೆಯಿಂದ ವುಪೇಕ್ಷೆಮಾಡದೆ ಇರೋಣವು, ಅಡಿಗಡಿಗೆ ಭೋಗೋಪ ಭೋಗಗಳನ್ನು ಸ್ಮರಿಸುತ್ತಿರುವದು ಅತಿಚಂಚಲತ್ವವು, ಅತಿ ಯಾಗಿ ಆಶೆಮಾಡೋಣವು, ಅತಿ ಭೋಗಾನುಭೋಗ ಮಾಡೋಣವು, ಈ ಐದು ಭೊಗೊಪಭೋಗವ್ರತಾತೀ ಚಾರಗಳಾಗಿ ಹೇಳಲ್ಪಡುತ್ತಿವೆ ||

ಗುಣವ್ರತಾಧಿಕಾರಃ

(ಶಿಕ್ಷಾವ್ರತಾಧಿಕಾರ) ದೇಶಾವಕಾಶಿಕ ಸಾಮಾಯಿಕ ಪ್ರೋಷದೋಪವಾಸ ವೈಯ್ಯಾಪೃತ್ಯ ಇವು ನಾಲ್ಕು ಶೀಕ್ಷಾವ್ರತಗಳು || ೧೧೦ || ಅಣುವ್ರತಿಗಳಿಗೆ ಪ್ರತಿ ದಿವಸದಲ್ಲೂ ಕಾಲಪ್ರಮಾಣ ದಿಂದಾ ವಿಶಾಲವಾದ ದೇಶದಸಂಕೋಚವು ದೇಶಾವಕಾಶಿಕ ವಾಗುತ್ತೆ || ೧೧೧ || ತಪೋವೃದ್ಧ ರಾದ

* * *

ನಾಂಚ || ದೇಶಾವಕಾಶಿಕಸ್ಯಸ್ಮರಂತಿಸೀಮಾಂತಪೋವೃದ್ಧಾಃ || ೧೧೨ || ಸಂವತ್ಸರಮೃತು ಮಯನಂಮಾಸಚತುರ್ಮಾಸಪಕ್ಷಮೃಕ್ಷಂಚ || ದೇಶಾವಕಾಶಿಕಸ್ಯಪ್ರಾಹಃಕಾಲಾ ವಧಿಂಪ್ರಾಜ್ಞಾಃ || ೧೧೩ || ಸೀಮಾಂತಾನಾಂಪರತಃಸ್ಥೂಲೆತರಪಂಚಪಾಪಸಂತ್ಯಾಗಾತ್ | ದೇಶಾವಕಾಶಿಕೆನಚಮಹಾವ್ರತಾನಿ ಪ್ರಸಾಧ್ಯಂತೆ || ೧೧೪ || ಪ್ರೆಷಣಶಬ್ದಾನಯನಂ ರೂಪಭಿವ್ಯಕ್ತಿಪುದ್ಗಲಕ್ಷೆಪಾ || ದೆಶಾವಕಾಶಿಕಸ್ಯವ್ಯಪದಿಶ್ಯಂತೆರ್ಯಯಾಃಪಂಚ || ೧೧೫ || ಆ ಸಮಯಮುಕ್ತಿಮುಕ್ತಂಪಂಚಾಘಾನಾಮಶೇಷಭಾವನ || ಸರ್ವತ್ರಚಸಾವರಯಿಕಾಃ ಸಾಮಾಯಿಕಂನಾಮಶಂಸಂತಿ || ೧೧೬ || ಮೂರ್ಧರುಹಮುಷ್ಟಿವಾ ಸೊಬಂ ಧಂಪರ್ಯ್ಯಂಕಬಂದನಂಚಾಪಿ || ಸ್ಥಾನಮುಪವೆಶನಂವಾಸಮಯಂಜಾನಂತಿಸಮಯ ಜ್ಞಾಃ || ೧೧೭ || ಎಕಾಂತೆಸಾಮಯಿಕಂನಿರ್ವ್ವ್ಯಾಪೆಕ್ಷೆನನೆಷುವಾಸ್ತುಷಚ || ಚೈತ್ಯಾಲಯೆಷುವಾಪಿಚಪಿರಿಚೆ ತವ್ಯಂಪ್ರಸಂ

* * *

ವರು ದೇಶಾವಕಾಶಿಕಕ್ಕೆ ಮನೆ ಕಟಕ, ಗ್ರಾಮ, ಕ್ಷೇತ್ರ, ನದಿ, ಕಾಡು ಯೋಚನ, ಇವುಗಳ ಎಲ್ಲೆಯನ್ನು ಸ್ಮರಿಸುತ್ತಾರೆ || ೧೧೨ || ಸಂವತ್ಸರ ಋತು, ಅಯನ, ತಿಂಗಳು, ಚತುರ್ಮಾಸ, ಪಕ್ಷ, ನಕ್ಷತ್ರ, ಭುಕ್ತಿಯೂ ಕೂಡ ದೇಶಾವಕಾಶಿಕಕ್ಕೆ ಕಾಲಾವಧಿಯನ್ನಾಗಿ ಪ್ರಾಜ್ಞರು ಹೇಳುವರು || ೧೧೩ || ಎಲ್ಲೆಯ ಅಂತ್ಯಗಳ ಪರದಲ್ಲಿ ಸ್ಥೂಲಸೂಕ್ಷ್ಮವಾದ ಐದು ಪಾಪಗಳು ಬರದೇ ಇರುವದ್ದರಿಂದ ದೇಶಾವಕಾಶಿಕದಿಂದಲಾದರೋಮಹಾವ್ರತಳು ಅಲಂಕರಿಸಲ್ಪಡುತ್ತವೆ || ೧೧೪ || ತಾನು ಪ್ರಮಾಣಮಾಡಿರುವದರಿಂದ ಆಚೆಗೆ ಕಳುಹಿಸವದು ಶಬ್ದಮಾಡಿವದೂ, ನೋಡುವದೂ ರೂಪು ತೋರಿಸುವದು ಕಲ್ಲಿಡುವದು ಈ ೫ ದೇಶಾವಕಾಶಿಕಕ್ಕೆ ಅತೀಚಾರಗಳು || ೧೧೫ || ಸಾಮಾಯಿಕವನ್ನು ತಿಳಿದವರು ಆ ಸಮಯದವರಿಗೆ ಬಿಡಲ್ಪಟ್ಟು ಎಲ್ಲಾ ಕಡೆಯಲ್ಲೂ ಕೂಡ ಉಳೀದೇರೂ ಭಾವದಿಂದ ಐದು ಪಾಪಗಳ ಬಿಡೋಣವು ಸಾಮಾಯಿಕ ಇಂತೆಂದು ಹೇಳಲ್ಪಡುತ್ತೆ || ೧೧೬ || ಸಾಮಾಯಿಕವನ್ನು ತಿಳಿದವರು ಜೊಟ್ಟುಕಟ್ಟುವದು, ಕೈ ಮುಚ್ಚಿ ಬಿಡುವದು ಬಟ್ಟೆಯನ್ನು ಕಟ್ಟುವದು, ಪಲ್ಯಂಕಾ ಸನಮಾಡುವದೂ ನಿಂತಿದ್ದು. ಕಾಯೋತ್ಪರ್ನ ಮಾಡುವದು ಕೂತುಕೇಳು ವದೂ ಕೂಡ ಸಾಮಾಯಿಕಕ್ಕೆ ಸಮಯವನ್ನಾಗಿ ತಿಳಿಯುತ್ತಾರೆ || ೧೧೭ || ನಿರ್ವ್ಯಾಪೇಕ್ಷೆಯಾದ ಏಕಾಂತಸ್ಥಳವಾದ ವನದಲ್ಲಾಗಲಿ ಮನೆಯಲ್ಲಾಗಲಿ ಚೈತ್ಯಾಲಯದಲ್ಲಾಗಲಿ ಪ್ರಸನ್ನವಾದ ಬುದ್ಧಿಯಿಂದ ಸಾಮಾಯಿಕವು ಮಾಡತಕ್ಕದ್ದು || ೧೧೮ || ಉಪವಾಸದಲ್ಲಿ ಏಕಭಕ್ತದಲ್ಲಿ ಕಾಯವ್ಯಾ

* * *

ವ್ಯಾಪತ್ರಿವ್ಯಪನೊದಃಪದಯೊಸಂವಾಹನಂಚಗುಣರಾಗತ್ || ವೈಯ್ಯಾಪೃತ್ಯಂಯೊ ವಾನುಪಗ್ರಹೊನ್ಯೆಪಿಸಯ್ಯಮಿನಾಂ || ೧೩೨ || ನವಪುಣ್ಯೈಃಪ್ರತಿಪತ್ತಿಃಸಪ್ತಗುಣಸ ಮಾಹಿತೆನಶುದ್ಧೆನ || ಅಪಸೂನಾರಂ ಭಾಣಾಮಾರ್ಯಾಣಾಮಿಷ್ಯತೆದಾನಂ || ೧೩೩ || ಖಂಡನೀಪೇಷಣೀಚುಲ್ಲೀ ಉದಕುಂಭಿಪ್ರಮಾ ರ್ಹನೀ || ಪಂಚಸೂನಾಗೃಹ ಸ್ಥಸ್ಯತೆನಮೊಕ್ಷಂನಗಚ್ಚತಿ || ೧೩೪ || ಸ್ಥಾಪನಮುಶ್ಚೈಸ್ಥಾನಂಪಾದೊದಕಮ ರ್ಚನಂಪ್ರಣಾಮಶ್ಚ || ವಾಕ್ಕಾಉಹೃದಯಶುದ್ದಯಎಷಣಶುದ್ಧಿಶ್ಚನವವಿಧಂಪುಣ್ಯಂ || ೧೩೫ || ಶ್ರದ್ಧಾಶಕ್ತಿರ್ಭಕ್ತಿರ್ವಿಜ್ಞಾನಮಲುಬ್ದತಾದಯಾಕ್ಷಾಂತಿಃ || ಯಸ್ಯೈತೆಸಪ್ತಗು ಣಾಸ್ತಂದಾತಾರಂ ಪ್ರಶಂಸಂತಿ || ೧೩೬ || ಗೃಹಕರ್ಮಣಾಪಿಣಿಚಿತಂಕರ‍್ಮಮಿ ಮಾರ್ಷ್ಟಿಖಲುಗೃಹವಿಮುಕ್ತಾನಾಂ || ಅತಿಥೀನಾಂಪ್ರತಿಪೂಜಾರಂಧಿರ ಮಲಂಧಾ ವತೆವಾರಿ || ೧೩೭ || ಉಚ್ಚೈಗೊತ್ರಂಪ್ರಣತೆರ್ಭೋ ಗೊದಾನಾದುಪಾಸನಾತ್ಪೂಜಾ | ಭಕ್ತೆಃಸುಂದರರೂಪಂಸ್ತವನಾತ್ಕೀರ್ತ್ತಿಃತಪೊನಿಧಿಷು || ೧೩೮ || ಕ್ಷಿತಿಗತಮಿ ವವಟಬೀಜಂಪಾತ್ರಗತಂದಾನಮಲ್ಪಮ

* * *

ವೈಯ್ಯಾಪೃತ್ಯವುಆಗುತ್ತೆ || ೧೩೨ || (೭) ಗುಣದೊಡನೆಕೂಡಿದಂಥ ಶುದ್ಧನಿಂದ (೯) ವಿಧ ಪುಣ್ಯಗಳಿಂದ ಗೌರವ ಮಾಡುವದು ಐದು ಸೂನು ಕೃಷ್ಯಾದ್ಯಾರಂಭ ಇವುಗಳಿಂದ ಬಿಡಲ್ಪಟ್ಟ ಪೂಜ್ಯರುಗಳಿಗೆ ಧಾನವಾಗಿ ಅಪೇಕ್ಷಿಸಲ್ಪಡುತ್ತೆ || ೧೩೩ || ಕತ್ತರಿಸುವದು, ಅರೆಯುವದು ಅಡಿಗೆ ಮಾಡುವದು, ನೀರು ತರೂವದು, ಕಸಾ ಗುಡಿಸುವದು ಈ ೫ ಕ್ಕೂ ಸೂನು ಎಂದು ಹೆಸರು. ಗೃಹಸ್ಥರಿಗೆ ಈ ೫ ಇರುವದ್ದರಿಂದ ಮೋಕ್ಷ ಆಗುವದಿಲ್ಲ || ೧೩೪ || ನಿಲ್ಲಿಸುವದು, ಉತ್ಕೃಷ್ಟಸ್ಥಾನವು ಕಾಲು ತೊಳೆಯುವದು, ಪಾದಪೂಜೆಯು ನಮಸ್ಕಾರ ಮಾಡುವದು ವಾಕ್, ಶರೀರ, ಮನಸ್ಸುಗಳ ಶುದ್ಧಿಯು, ಭಿಕ್ಷಾಶುದ್ಧಿಯು ಈ ೯ಕ್ಕು ನವವಿಧ ಪುಣ್ಯವೆಂದು ಹೆಸರು || ೧೩೫ || ನಂಬಿಕೆಯು, ಶಕ್ತಿ, ಭಕ್ತಿಯು, ಜ್ಞಾನವು ಲೋಭತ್ವ ಇಲ್ಲದಿರುವದು, ದಯೆಯು, ಶಮೆಯು, ಈ ೭ ಯಾವದಾತೃವಿಗೆ ಇಧೆಯೊ ಆತನು ಹೊಗಳಿಸಿಕೊಳ್ಳುತ್ತಾನೆ || ೧೩೬ || ಮನೆಯನ್ನು ಬಿಟ್ಟ ಯತಿಗಳಿಗೆ ಆಹಾರ ದಾನ ಮುಂತಾದ ಪೂಜೆಯು ಗೃಹ ವ್ಯಾಪಾರದಿಂದ ಮಾಡಲ್ಪಟ್ಟ ಕರ್ಮವನ್ನು ನಿಶ್ಚಯವಾಗಿ ಹಾಳಮಾಡುತ್ತೆ ಹ್ಯಾಗೆ ಕಲ್ಮುಷವನ್ನು ನೀರು ಹೋಗಲಾ ಡಿಸುತ್ತೋ ಹಾಗೆ || ೧೩೭ || ಯತಿಗಳಲ್ಲಿ ನಮಸ್ಕಾರದ್ದೆಶೆಯಿಂದ ಉತ್ಕೃಷ್ಟಗೋತ್ರ ಪ್ರಾಪ್ತಿಯು ಆಹಾರಾದಿದಾನದ್ದೆಶೆಯಿಂದ ಭೋಗಪ್ರಾಪ್ತಿಯು ಸೇವೇದೆಶೆಯಿಂದ, ಪೂಜ್ಯತ್ವವು ಭಕ್ತಿದ್ದೆಶೆ

* * *

ಪಿಕಲೆ || ಫಲತಿಚ್ಛಾಯಾವಿಭವಂಬಹುಫಲಮಿಷ್ಟಂಶರೀರಭೃತಾಂ || ೧೩೯ || ಆಹಾರೌಷಧಯೊರಪ್ಯು ಪಕರಣಾವಾಸಯೊಶ್ಚದಾನೆನ | ವೈಯ್ಯಾಪತ್ಯಂಬೃವತೆ ಚತುರಾತ್ಮತ್ವೆನಚತುರಸ್ರಾಃ || ೧೪೦ || ಭೈಷಜ್ಯದಾನತೊಜೀವೊಬಲರ್ವಾನ್‌ರೊಗ ವರ್ಜಿತಃ | ಸಲ್ಲಕ್ಷಣಸ್ಸುವಜ್ರಾಂಗಸ್ತಪ್ತ್ವಾಮೊಕ್ಷಂವ್ರಜೆದಸೌ || ೧೪೧ || ಶಾಸ್ತ್ರದಾನಫಲೆ ನಾತ್ಮಾಕಲಾಸುಸಕಲಾಸ್ವಪಿ | ಪರಿಜ್ಞಾತಾದ್ಭವತ್ವಶ್ಚಾತ್ಕೆವಲಜ್ಞಾನಭಾಜನಂ || ೧೪೨ || ಅವಾಸದಾನತೊಜೀವಃಸ್ವರ್ಗಾವಾಸಪತಿರ್ಭವೆತ್ || ತಸ್ಮಾದಾಗತ್ಯಸಂತಪ್ಯಮೊಕ್ಷವಾಸ ಮುಪವ್ರಜೆತ್ || ೧೪೩ || ಶ್ರೀಷೆಣಃವೃಷಭಸೆನಃಕೌಂಡೆಶಃಸೂಕರಶ್ಚದೃಷ್ಟಾಂತಾಃ | ವೈಯ್ಯಾಪೃ ತ್ಯಸ್ಯೈತೆಚತುರ್ವಿ ಕಲ್ಪಸ್ಯಮಂತವ್ಯಾಃ || ದೆವಾಧಿದೆವಚರಣೆಪರಿಚರಣಂ ಸರ್ವದುಃಖನಿರ್ಹರಣಂ | ಕಾಮದಾಹಿ

* * *

ಯಿಂದ, ಮನೋಹರವಾದರೂಪು, ಸ್ತೋತ್ರಮಾಡುವದರದೆಶೆಯಿಂದ ಕೀರ್ತಿಯು ಉಂಟಾಗುತ್ತೆ. ಒಳ್ಳೇಕಾಲದಲ್ಲಿ ಒಳ್ಳೇ ಭೂಮಿಯಲ್ಲಿ ಬಿದ್ದಂಥ ಆಲದಮರದ ಬೀಜವು ಸಣ್ಣದಾದಾಗ್ಯೂ ನೆಳಲಿನ ಐಶ್ವರ್ಯವನ್ನು ಕೊಡುತ್ತೆ ಅದೇರೀತಿಯಾಗಿ ಸತ್ಪಾತ್ರಕ್ಕೆ ದಾನವು ಸ್ವಲ್ಪವಾದಾಗ್ಯು ಐಶ್ವರ್ಯವನ್ನು ಇಷ್ಟವಾದ್ದನ್ನು ಬಹಳಫಲವನ್ನು ಕೊಡುತ್ತೆ || ೧೩೯ || ಬುದ್ಧಿಶಾಲಿಗಳು, ಆಹಾರ ಔಷಧ ಪುಸ್ತುಕಾದಿ ಉಪಕರಣವು, ಆಶ್ರಯವು ಇವುಗಳದಾನದಿಂದ ನಾಲ್ಕು ಪ್ರಕಾರವಾಗಿ ವ್ಯೆಯ್ಯಾ ಪೃತ್ಯವನ್ನು ಹೇಳುತ್ತಾರೆ || ೧೪೦ || ಭೈಷಜ್ಯದಾನದಿಂದ ಜೀವನುಬಲವಾನಾಗಿಯು, ರೋಗವಿಲ್ಲ ದೆಯು, ಸುಲಕ್ಷಣನಾಗಿಯು, ವಜ್ರವೃಷಭಾದಿ ಸಂಹನನಾಗಿಯೂ, ಆಗಿ, ತಪಸ್ಸುಮಾಡಿ ಮೋಕ್ಷವನ್ನು ಪಡೆಯುತ್ತಾನೆ || ೧೪೧ || ಶಾಸ್ತ್ರದಾನಂದ ಜೀವನು ಸಮಸ್ತ ಕಲೆಗಳಲ್ಲಿಯೂ ತಿಳಿದವನು ಆಗುತ್ತಾನೆ ಅನಂತರದಲ್ಲಿ ಕೇವಲ ಜ್ಞಾನಕ್ಕೆ ಭಾವನನಾಗುತ್ತಾನೆ || ೧೪೨ || ಅವಾಸದಾನದಿಂದ ಸ್ವರ್ಗದ ಅವಾಸಕ್ಕೆ ಪತಿಯಾಗುತ್ತಾನೆ ಅಲ್ಲಿಂದ ಬಂದು ತಪಸ್ಸುಮಾಡಿ ಮೋಕ್ಷಾವಾಸವನ್ನು ಪಡೆಯುತ್ತಾನೆ || ೧೪೩ || ಈ ಪ್ರಸಿದ್ಧವದ ನಾಲ್ಕು ವಿಧವಾದ ವೈಯ್ಯಾಪೃತ್ಯಕ್ಕೆ ಶ್ರೀಷೇಣನು ಆಹಾರದಾನದಲ್ಲಿಯೂ, ವೃಷಸೇನನು ಭೈಷಜ್ಯದಾನದಲ್ಲಿಯೂ, ಕೌಂಡೇಶನು ಶಾಸ್ತ್ರದಾನದಲ್ಲಿಯೂ ಹಂದಿಯೂ ಆವಾಸದಾನದಲ್ಲಿಯೂ, ದೃಷ್ಟಾಂತವನ್ನು ಪಡೆದಿರುತ್ತಾರೆ || ೧೪೪ || ಪ್ರೀ

* * *

ಕಾಮದಾಹಿನಿಪರಿಚಿನುಯಾದಾದೃತೊನಿತ್ಯಂ || ೧೪೫ || ಅರ್ಹಚ್ಚರಣಸಪ ರ್ಯಾಮಹಾನುಭಾವ ಮಾ ತ್ಮನಾಮವದತ್ || ಭೆಕಃಪ್ರಮೊದಮತ್ತಃಕುಸು ಮೆನೈಕೆನರಾಜಗೃಹೆ || ಹರಿತವಿಧಾನನಿಧಾನೆಹ್ಯ ನಾದರಾಸ್ಮರಣಮತ್ಸರತ್ವಾನಿ || ವೈಯ್ಯಾಪೃತ್ಯಸ್ಯೈತೆವ್ಯತಿಕ್ರಮಾಃಪಂಚಕಥ್ಯಂತೆ ||

ಇತಿಶಿಕ್ಷಾವ್ರತಾಧಿಕಾರಃ

(ಸಲ್ಲೆಖಾನಾ) ಉಪಸರ್ಗೆದುರ್ಭಿಕ್ಷೆಜರಸಿರುಜಾಯಾಂಚನಿಷ್ಪ್ರತೀಕಾರೆ || ಧರ್ಮಾ ಯತನುವಿಮೋಚನೆ ಮಾಹುಃಸಲ್ಲೆಖನಾಮಾರ್ಯಾಃ || ಅಂತಃಕ್ರಿಯಾಧಿ ಕರಣಂತಪಃ ಫಲೌಸಕಲದರ್ಶಿನಸ್ತುವತೆ || ತಸ್ಮಾದ್ಯಾ ವೆದ್ವಿಭವಂಸಮಾಧಿಮರಣೆ ಪ್ರಯತಿತವ್ಯಂ || ಸ್ನೆಹಂವೈರಂಸಂಗಂಪರಿಗ್ರಹಂಚಾಪಹಾಯಶುದ್ಧಮನಾಃ | ಸ್ವಜನಂಪರಿಜನಮ ಪಿಚಕ್ಷಾಂ

* * *

ತಿಯುಳ್ಳವನಾಗಿ, ಬೇಡಿದ್ದನ್ನು ಕೊಡುವಂಥ ಕಾಮನನ್ನು ಸುಟ್ಟಂಥ, ದೇವೇಂದ್ರರಿಗೆ ದೇವನಾದವನ ಪಾದಗಳಲ್ಲಿ ಸಮಸ್ತ ದುಃಖವನ್ನು ನಾಶಮಾಡುವ, ಪೂಜೆಯನ್ನು ನಿತ್ಯದಲ್ಲೂ ಮಾಡತಕ್ಕದ್ದು || ೧೪೫ || ಸಂತೋಷದಿಂದ ಮದಿಸಿದ ಕಪ್ಪೆಯು, ರಾಜಗೃಹ ಪಟ್ಟಣದಲ್ಲಿ ಒಂದು ಪುಷ್ಪದಿಂದ ಅಂðತ್ಪರಮೇಶ್ವರನ ಪೂಜೆಯ ಮಹಿಮೆಯನ್ನು ಮಹಾತ್ಮರಿಗೆ ಹೇಳಿತು || ೧೪೬ || ಹಸಿಯ ಎಲೆಯಮೇಲೆ ಇಡು ವದು, ಹಸಿಯ ಎಲೆಯಿಂದ ಮುಚ್ಚುವುದು, ಪ್ರೀತಿ ಇಲ್ಲದೆ ಇರುವದು ಕೊ ಟ್ಟದ್ದನ್ನ ನೆನಿಸುವದು ಮಾತ್ಸರ್ಯ್ಯಪಡುವದು ಈ ೫ ವೈಯ್ಯಾಪೃತ್ಯಕ್ಕೆ ಅತೀಚಾರಗಳು || ೧೪೭ ||

ಇತಿಶಿಕ್ಷಾವ್ರತನಿ

(ಅಥಸಲ್ಲೇಖನಾಕಾರ್ರಪೂಜ್ಯರುಗಳು ಪ್ರತೀಕಾರ ಮಾಡುವದಕ್ಕೆ ಆಗದೇ ಇರುವಂಥ, ಉಪಸರ್ಗದಲ್ಲಿ, ದುರ್ಭಿಕ್ಷೆಯಲ್ಲಿಮುಪ್ಪಿನಲ್ಲಿ, ರೋಗದಲ್ಲಿ ಧರ್ಮದಿಂದ ಶರೀರವನ್ನು ಬಿಡುವದಕ್ಕೆ ಸಲ್ಲೇಖನೆಯೆಂದು ಹೇಳುವರು || ೧೪೮ || ಸಮಸ್ತ ಜನಗಳು ಮನಶ್ಯುದ್ಧಿ ಮಾಡುವದನ್ನು ತರ್ಪಫಲವೆಂದು, ಹೇಳುವರು ಆಕಾರಣ ದೆಶೆಯಿಂದ ಸರ್ವಸಾಮರ್ತ್ಥ್ಯದಿಂದಲೂ ಸಮತಾ ಭಾವದೋಡನೆ ಕೂಡದ ಮರಣದಲ್ಲಿ ವ್ರತಯತ್ನಮಾಡತಕ್ಕದ್ದು || ಪರಿಶುದ್ಧವಾದ ಮನಸ್ಸು ಉಳ್ಳಂಥಾವನಾ

* * *