|| ಓಂ ನಮಸ್ಸಿದ್ಧೇಭ್ಯಃ ||

ಮೂಲ || ಶ್ರೀಮುಕ್ತಿ ಕಾಂತಾಸಂಸರ್ಗನಿತ್ಯಾನಂದಂಸಮೀಯುಷೆ | ನಮಸ್ತೀರ್ಥ ಕೃತರಭರ್ತ್ರೆವರ್ಧಮಾನಜಿನಶಿನೆ || ೧ || ಅರ್ಥತೊಗ್ರಂಥತಶ್ಚಾರ್ಷೊಧರ್ಮ ಶಾಸ್ತ್ರಸ್ಯಸಂಗ್ರಹಃ | ವಕ್ಷ್ಯತೆನೆ ತರತ್ಕಿಂಚಿಚ್ಛಾಸ್ತ್ರಪ್ರಾಮಾಣ್ಯಸಿದ್ಧಯೆ || ೨ || ಅಥಾತೊಧರ್ಮಜಿಜ್ಞಾಸಾಸಮಾಹಿತಮತಿಃ ಕೃತೀ | ಶ್ರೇಣಿಕsಪರಿಪಪ್ರಚ್ಚಗೌಡ ಮಂಗಣಭೃತ್ಷ್ರಭಂ || ೩ || ಭಗವನ್ನರ್ಥತಃ ಕೃತ್ನ್ಸಂಶ್ರುತಂ ಸ್ವಾಯಂಭುವಾನ್ಮುಖಾತ್ | ಗ್ರಂಥತಃಶ್ರೊತುಮಿಚ್ಛಾಮಿಸದ್ಧ ರ್ಮಂತ್ವದನುಗ್ರಹಾತ್ || ೪ || ತ್ವಮಕಾರಣಬಂಧು ರ್ನಸ್ತ್ವಮಕಾರಣವತ್ಸಲಃ | ತ್ವಮಕಾರಣ ವೈದ್ಯೊಸಿದುಃಖಾತಂ ಕಾರ್ತ್ತಿತಾ.

* * *

ತಾತ್ಪರ್ಯ || ಸಂಪದೃಕ್ತಳಾದ ಮುಕ್ತಿಕಾಂತೆಯ ಸಂಸರ್ಗದಿಂದ, ನಿತ್ಯಾನಂದವನ್ನು ಪಡೆದಿರುವಂಥ, ತೀರ್ಥಕರನಾದಂಥ, ಸ್ವಾಮಿಯಾದಂಥ, ವರ್ಧಮಾನಜಿನೇ ಶ್ವರನಿಗೋಸ್ಕರ ನಮಸ್ಕಾರವನ್ನು, ಮಾಡುತ್ತೇನೆ || ೧ || ಅರ್ಥದ್ದೆಶೆಯಿಂದಲ್ಲೂ, ಗ್ರಂಥದ್ದೆಶೆಯಿಂದಲೂ ಕೂಡ ಋಷಿಗಳಿಂದ ಹೇಳಲ್ಪಟ್ಟಂಥ ಧರ್ಮಶಾಸ್ತ್ರದ ಸಂಗ್ರಹವು ಹೇಳಲ್ಪಡುತ್ತದೆ. ಕಲ್ಪಿತವಾದ ಮತ್ತೊಂದು ಸ್ವಲ್ಪವಾದಾಗ್ಯೂ ಶಾಸ್ತ್ರ ಪ್ರಾಮಾಣ್ಯ ಸಿದ್ಧಿಗೋಸ್ಕರ ಹೇಳಲ್ಪಡುವದಿಲ್ಲ || ೨ || ನಮಸ್ಕಾರಾನಂತರದಲ್ಲಿ ಧರ್ಮವನ್ನು ತಿಳಿಯಲಿಚ್ಛೆಯಿಂದ ತೆಗದು ಕೊಳ್ಳಲ್ಪಟ್ಟಬುದ್ಧಿಯುಳ್ಳಂಥ ಕೃತಾರ್ಥಾನಾದಂಥ ಶ್ರೇಣಿಕನು, ಗಣಧರ ಸ್ವಾಮಿಯಾದ ಗೌತಮ ಋಷಿಯನ್ನು ಪ್ರಶ್ನೆ ಮಾಡಿದನು || ೩ || ಎಲೈ ಭಗವಂತನೇ ಸ್ವಯಂಭೂ ಸಂಬಂಧವಾದ ಮುಖದ್ದೆಶೆಯಿಂದ ಅತ್ಯಂತವಾಗಿ ಅರ್ಥದ್ದೆಶೆಯಿಂದ ಕೇಳಲ್ಪಟ್ಟಿತು. ನಿನ್ನನುಗ್ರಹದ್ದೆಶೆಯಿಂದ ಸದ್ಧರ‍್ಮವನ್ನು ಗ್ರಂಥರೂಪವಾಗಿ ಕೇಳಲು ಅಪೇಕ್ಷಿಸುತ್ತೇನೆ || ೪ || ನೀನು ನಮಗೆ ಕಾರಣವಿಲ್ಲದೆ ಬಂಧುವಾದಂಥಾವನು. ನೀನು ಅಕಾರಣ ವಾತ್ಸಲ್ಯವುಳ್ಳಂಥಾ ವನು. ದುಃಖದಿಂದಲೂ ಬಾಧೆಯಿಂದಲೂ, ವ್ಯಾಕುಲವುಳ್ಳದ್ದಾಗಿ ಮಾಡಲ್ಪಟ್ಟ ಮನುಸ್ಸುಳ್ಳಂಥಾವರಿಗೆ

* * *

ತ್ಮನಾಂ || ೫ || ಪುಣ್ಯಾಭಿಷೇಕಮಭಿತಃ ಕುರ್ವಂತೀವಶೀರಸ್ಸುನಃ | ವ್ಯೊಮಗಂಗಾಂ ಬುಸಚ್ಛಾಯಾಯುಷ್ಮತ್ಪದನಖಾಂಶವಃ || ೬ || ತವದೀಪ್ತತಪೊಲಬ್ದೆ ರಂಗಲಕ್ಷ್ಮಿ ಪ್ರತಾಯನೀ ಅಕಾಲೆಪ್ಯನು ಸಂಧತ್ತೆಸ್ರಾಂದ್ರಬಾಲಾತಪಶ್ರಿಯಂ || ೭ || ತ್ವಯಾಜಗದಿ ದಂಕೃತ್ಸ್ನಮವಿದ್ಯಾಮೀಲಿತೆಕ್ಷಣ | ಸದ್ಯಃಪ್ರಬೊಧಮಾನೀತಂಭಾಸ್ವತೆವಾಬ್ಜನೀವನಂ || ೮ || ಯನ್ನೆಂದುಕಿರಣೈಸ್ಸ್ಪೃಷ್ಟಮನಾಲೀ ಢಂರವೆಃಕರೈ | ತತ್ತ್ವಯಾಹೇಲಯಾದಸ್ತ ಮಂತರ್ದ್ವಾಂತಂವ ಚೊಂಶುಭಿಃ || ೯ || ತವೋಚ್ಛ್ರಿಕಾಸ್ಫುರಂತ್ಯೆಕಾಯೊರ್ಗಿಸಪ್ತ ಮಹರ್ಧಯಃ ತರ್ಮೆಂಧನದ ಹೊದ್ದೀ ಪ್ರಾಸ್ಸಪ್ರಾರ್ಚ್ಚಿಫೆಇವಾರ್ಚಿಫಃ || ೧೦ || ಇದಂಪುಣ್ಯಾಶ್ರಮಸ್ಥಾನಂಪವಿತ್ರಂತ್ವತ್ಪ್ರತಿ ಶ್ರಯಾತ್ | ರಕ್ಷಾರಣ್ಯಮಿವಾಭಾತಿ ತಪೊಲಕ್ಷ್ಮ್ಯಾಸಿರಾಕುಲಃ || ಅತ್ರೈತೆಪಶವೊವನ್ಯಾಃ ಪುಷ್ಟಾಮೃಷ್ಟೈಸ್ತೃಣಾಂಕುರೈಃ | ನಕ್ರೂರಮೃಗಸಂಭಾಧಾಂಜಾನಂತ್ಯಪಿಕದಾಚನ || ೧೨ || ಪಾದ

* * *

ಕಾರಣವೈದ್ಯನಾಗಿದ್ಧೀಯೇ || ೫ || ನಿಮ್ಮ ಪಾದಗಳ ಉಗುರುಗಳ ಕಾಂತಿಗಳು ದೇವಗಂಗೆಯ ನೀರಿಗೆ ಸಮಾನವಾದ ಕಾಂತಿಯುಳ್ಳಂಥಾವುಗಳಾಗಿ ನಮಗಳ ಶಿರಸ್ಸುಗಳಲ್ಲಿ ಎಲ್ಲಾ ಕಡೆಯಲ್ಲೂ ಅಭಿಷೇಕವನ್ನು ಮಾಡುತ್ತಿವೆಯೋ ಎಂಬುವಾಗಿವೆ || ೬ || ದೀಪ್ತ ತಪೋಲಬ್ಧಿಯುಳ್ಳ ನಿನ್ನ ವಿಸ್ತಾರವಾದ ಶರೀರ ಕಾಂತಿಯು ಅಕಾಲದಲ್ಲಿಯೂ ಕೂಡ ನಿಬಿಡವಾದ ಎಳಬಿಸಿಲ ಕಾಂತಿಯನ್ನು ಧರಿಸುತ್ತಿಧೆ || ೭ || ಅಜ್ಞಾನದಿಂದ ಮುಚ್ಚಲ್ಪಟ್ಟ ಕಣ್ಣು ಉಳ್ಳಂಥ ಈ ಜಗತ್ತು, ನಿನ್ನಿಂದ, ಕಮಲವನವು ಸೂರ್ಯನಿಂದಲೋಪಾದಿಯಲ್ಲಿ ಅತ್ಯಂತವಾಗಿ ತತ್ಕ್ಷಣದಲ್ಲಿ ಎಚ್ಚರಿಕೆಯನ್ನು ಪಡೇಸಲ್ಪಟಿತು. || ೮ || ಯಾವದು ಚಂದ್ರ ಕಿರಣಗಳಿಂದ ಮುಟ್ಟಲ್ಪಡಲಿಲ್ಲವೋ, ಸೂರ್ಯನ ಕಿರಣಗಳಿಂದ ನೆಕ್ಕಲ್ಪಡುವದಿಲ್ಲವೋ ಆ ಅಂತರ್ಗತವಾದ ಅಂಧಕಾರವು ನಿನ್ನಿಂದವಾಕ್ಕಿನ ಕಿರಣಗಳಿಂದ ಹೋಗಲಾಡಿಸಲ್ಪಟ್ಟಿತು || ೯ || ಎಲೈಯೋಗಿಯೇ, ಉದ್ಗತವಾದ ಜ್ವಾಲೆಯುಳ್ಳಂಥಾ ಕರ್ಮವೆಂಬ ಸವದೆಯನ್ನು ಸುಡುತ್ತಿರುವಂಥ ಪ್ರಕಾಶಮಾನಗಳಾದಂಥ ಏಳಾದ ದೊಡ್ಡದಾದ ಋದ್ದಿಗಳು ಅಗ್ನಿಯ ಜ್ವಾಲೆಗಳೋಪಾದಿಯಲ್ಲಿ ಪ್ರಕಾಶಿಸುತ್ತಿವೆ || ೧೦ || ನಿನ್ನ ಸಂಬಂಧದ್ದೆಶೆಯಿಂದ ಪವಿತ್ರವಾದಂಥ ತಪೋ ಲಕ್ಷ್ಮಿಗೆ ವ್ಯಾಕುಲವಿಲ್ಲದೆ ಇರುವಂಥ ಈ ಪುಣ್ಯಾಶ್ರಮಸ್ಥಳವು, ಸಂರಕ್ಷಿಸುವ ಅರಣ್ಯದೋಪಾ

* * *

ಪ್ರಧಾವನೊತ್ಸೃಷ್ಟೈಃಕಮಲುಜಲೈರಿವ | ಅಮೃತೈರಿವವರ್ಧಂತೆಮೃಗಶಾಬಾಃ ಪವಿತ್ರಿತಾಃ || ೧೩ || ಸಿಂಹಸ್ತನಂಧಯಾನತ್ರ ಕರಿಣ್ಯಃಪಾಯಯಂತ್ಯಮೂಃ | ಸಿಂಹಧೆನುಸ್ತನಂಸ್ವೈ ರಂಸ್ಪೃಶಂತಿ ಕಲಭಾಇಮೆ || ೧೪ || ಅಹೊಪರಮ ಮಾಶ್ವರ್ಯಯದವಾಚೊಪ್ಯಮೀಮೃಗಾಃ | ಭಜಂತಿ ಭಗವತ್ಪಾದಚ್ಛಾಯಾಂ ಮುನಿಗಣಾಇವ || ೧೫ || ಇತಿಪ್ರಸ್ಪಷ್ಟ ಮಹಾತ್ಯ್ಮಃಕೃತೀಜಗದನುಗ್ರಹ ಭಗವನ್ ಭವ್ಯಸಾರ್ಥ್ಸಸೃಸಾರ್ಥವಾಹಾಯತೆಭವಾನ್ || ೧೬ || ಇತಿಪ್ರಶ್ರಯವಾಣೀಂಚ ಮುದೀರ್ಯ್ಯಮಗ ಧಾಧಿಪಃ ವ್ಯರಮದ್ದಸನಜ್ಯೋತ್ಸ್ನಾಕೃತಪುಷ್ಟಾರ‍್ಚನಾಸ್ಥಿತಿಃ || ೧೭ || ತತಸ್ತಮೃಷಯೊ ದೀಪ್ತತಪೊಲಕ್ಷ್ಮಿವಿಭೂಷಣಾ | ಪ್ರಶಶಂಸುರಿತಿಪ್ರೀತಾಧಾರ್ಮಿ

* * *

ದಿಯಲ್ಲಿ ಪ್ರಕಾಶಿಸುತ್ತಿದೆ || ೧೧ || ಈ ಅರಣ್ಯದಲ್ಲಿ ಸಮೃದ್ಧಿಯಾದ ಗರಿಕೆಗಳ ಮೊಳಕೆಗಳಿಂದ ಪುಷ್ಟಿಯನ್ನು ಹೊಂದಿದಂಥಾ ವನದಲ್ಲಿ ಹುಟ್ಟಿದ ಪಶುಗಳು ಯಾವಾಗಲೂ ಕ್ರೂರ ಮೃಗಗಳ ಬಾಧೆಯನ್ನೂ ಕೂಡ ತಿಳಿಯುವದಿಲ್ಲ || ೧೨ || ಪವಿತ್ರವಾಗಿ ಮಾಡಲ್ಪಟ್ಟಂಥ ಈ ಹುಲ್ಲೇ ಮರಿಗಳು ಕಾಲು ತೊಳೆಯುವದಕ್ಕೋಸ್ಕರ ಇಡಲ್ಪಟ್ಟಂಥಾ ಕಮಂಡಲು ನೀರುಗಳಿಂದ ಅಮೃತಗಳಿಂದ ಲೋಪಾದಿಯಲ್ಲಿ ವೃದ್ಧಿಹೊಂದುತ್ತವೆ. || ೧೩ || ಈ ಹೆಣ್ಣಾನೆಗಳು ಸಿಂಹನ ಮರಿಗಳನ್ನು ಪಾನಮಾಡಿಸುತ್ತಿವೆ. ಈ ಆನೇ ಮರಿಗಳು ಹೆಣ್ಣು ಸಿಂಹದಸ್ತನವನ್ನು ಮುಟ್ಟುತ್ತಿವೆ. || ೧೪ || ಅಹೋ ಅತ್ಯಂತ ಅಶ್ಚರ್ಯವು ಯಾವಕಾರಣದ್ದೆಶೆಯಿಂದ ಈ ಮೃಗಗಳು ಮಾತುಗಳು ಇಲ್ಲದೇ ಇರುವಂಥಾವುಗಳಾದಾಗ್ಯೂ ಕೂಡ ಯತಿಸಮೂಹಗಳೋ ಪದಿಯಲ್ಲಿ ಭಗವಂತನಪಾದ ಕಾಂತಿಗಳನ್ನು ಸೇವಿಸುತ್ತಿವೆ. || ೧೫ || ಎಲೇ ಭಗವಂತನೇ, ಈ ಪ್ರಕಾರವಾಗಿ ವ್ಯಕ್ತವಾದ ಮಹಿಮೆವುಳ್ಳಂಥಾ ಕೃತಾರ್ಥನಾದಂಥಾ ನೀನು ಭವ್ಯ ಸಮೂಹಕ್ಕೆ ಯಥೇಚ್ಛ ಹಣವುಳ್ಳ ವರ್ತಕ ನೋಪಾದಿಯಲ್ಲಿ ಆಗಿದ್ಧೀಯೆ || ೧೬ || ಮಗಧ ದೇಶಾಧಿಪತಿಯಾದ ಶ್ರೇಣಿಕನು ಈ ಪ್ರಕಾರವಾಗಿ ನಮ್ರೀಭಾವವುಳ್ಳ ಮಾತನ್ನು ಹೇಳಿ, ಹಲ್ಲುಗಳ ಕಾಂತಿಯಿಂದ ಮಾಡಲ್ಪಟ್ಟ ಪುಷ್ಪಗಳ ಪೂಜಾ ರೀತಿಯುಳ್ಳಂಥಾವನಾಗಿಸುಮ್ಮನಾದನು || ೧೭ || ಅನಂತರದಲ್ಲಿ ಪ್ರಕಾಶಮಾನವಾದ ತಪಶ್ರೀ ಆಭರಣ ಉಳ್ಳಂಥ ಸಂತುಷ್ಟರಾದ ಯತಿಗಳು ಧಾರ್ಮಿಕನಾದಂಥಾ ಮಗಧ ದೇಶಕ್ಕೆ ಅಧಿಪತಿಯಾದಂಥ ಆ ಶ್ರೇಣಿಕನನ್ನು ಈ ಪ್ರಕಾರ ಪ್ರಶಂಸೆ ಮಾ

* * *

ಕಂಮಗಧೆಶ್ವರಂ || ೧೮ || ಸಾಧುಭೋಮಗಧಾಧೀಶಸಾಧು ಪ್ರಶ್ನೆವಿದಾಂವರ | ಪೃಚ್ಛತಾದ್ಯತ್ವಯಾ ತತ್ವಂಸಾಧುನಃಪ್ರೀಣಿತಂಮನಃ || ೧೯ || ಪಶ್ಯಧರ್ಮತರೊರರ್ಥಃ ಫಲಂಕಾಮಸ್ತುತದ್ರಸಃ | ಸತ್ರಿವರ್ಗ್ಗಸ್ತ್ರ ಯಸ್ಯಾಸ್ಯಮೂಲಂಪುಣ್ಯಕಥಾ ಶ್ರುತಿಃ || ೨೦ || ಧರ್ಮಾದರ್ಥಶ್ಚ ಕಾಮಶ್ಚಸ್ವರ್ಗಶ್ಚಿತೃವಿಗಾನತಃ | ಧರ್ಮಃ ಕಾಮಾ ರ್ಥಯೊಸ್ಸೂತಿರಿತ್ಯಾಯುಷ್ಮನ್‌ವಿನಿಶ್ಚಿನು || ೨೧ || ಧಮಾರ್ಥೀ ಸರ್ವಕಾಮಾರ್ಥೀ ಧರ್ಮ್ಮಾರ್ಥೀಧನಸೌಖ್ಯರ್ವಾ | ದರ್ಮ್ಮೊಹಿಮೂಲ ಸರ್ವಾಸಾಂಧನರ್ಧಿ ಸುಖಸಂಪದಾಂ || ೨೨ || ಧರ್ಮಃ ಕಾಮದುಘಾಧೇನು ರ್ಧರ್ಮಶ್ಚಿಂತಾಮಣಿ ರ್ಮಹಾನ್ | ಧರ್ಮಃ ಕಲ್ಪತರುಃ ಪ್ರೊಕ್ತಾಧರ್ಮೊಯಂ ನಿಧಿರಕ್ಷಯಃ || * || ೨೩ || ಪಶ್ಯಧರ್ಮಸ್ಯ ಮಹಾತ್ಮ್ಯಂಯೊಪಾಯಾತ್ಪರಿರಕ್ಷತಿ || ಯತ್ರ ಸ್ಥಿತಂನರಂದೂರಾ ನ್ನಾತಿಕ್ರಾಮಂತಿದೇವತಾಃ || ೨೪ || ವಿಚಾರನೃಪ

* * *

ಡಿದರು || ೧೮ || ಎಲೇ ಮಗಧಾಧಿಪತಿಯೇ ಒಳ್ಳೇದು, ಪ್ರಶ್ನೆಯನ್ನು ಕೇಳುವಂಥಾವರೊಳಗೆ ಶ್ರೇಷ್ಠನಾದಂಥಾವನೇ ಒಳ್ಳೇದು, ಪದಾರ್ಥಸ್ವರೂಪವನ್ನು ಕೇಳಲಿಛ್ಛೆಯು ಳ್ಳನಿನ್ನಿಂದ ನಮ್ಮ ಮನಸ್ಸು ಚಂದಾಗಿ ಸಂತೋಷ ಪಡಿಸಲ್ಪಟ್ಟಿತು || ೧೯ || ನೋಡು, ದರ್ಮವೆಂಬ ವೃಕ್ಷಕ್ಕೆ ಫಲವು, ದ್ರವ್ಯವು, ಕಾಮವಾದರೋ ಆ ಧರ್ಮದರಸವು ಪುಣ್ಯಕಥಾ ಶ್ರವಣಾ ಅರ್ಥ ಕಾಮ ಮೋಕ್ಷಗಳೆಂಬ ತ್ರಿವರ್ಗಗಳೊಡನೆ ಕೂಡಿದಂಥ ಆ ಧರ್ಮವೆಂಬ ವೃಕ್ಷಕ್ಕೆ ಬುಡವಾದಂಥಾದ್ದು || ೨೦ || ವ್ಯತ್ಯಾಸವಿಲ್ಲದೇ ಧರ್ಮದ್ದೆಶೆಯಿಂದ ಅರ್ಥವು, ಕಾಮವೂ ಸ್ವರ್ಗವೂ ಕೂಡಾ ಆಗುತ್ತದೆ. ಧರ್ಮವು ಕಾಮವನ್ನು ಅರ್ಥವನ್ನು ಉಂಟುಮಾಡುವಂಥಾದ್ದು. ಎಲೇ ಆಯುಷ್ಯಶಾಲಿಯೇ, ಈ ಪ್ರಕಾರವಾಗಿ ನಿಶ್ಚಯಿಸು || ಧರ‍್ಮಾಪೇಕ್ಷೆಯುಳ್ಳಂಥಾವನು ಸಮಸ್ತ ಇಷ್ಟಪ್ರಯೋಜ ನವುಳ್ಳಂಥಾವನು. ಧರ‍್ಮಾಪೇಕ್ಷೆಯುಳ್ಳಂಥಾವನು ದ್ರವ್ಯಸುಖವುಳ್ಳಂಥಾವನು ಆಗುತ್ತಾನೆ. ಸಮಸ್ತವಾದಂಥ ದ್ರವ್ಯವೃದ್ಧಿ ಸುಖ ಸಂಪತ್ತುಗಳಿಗೆ ಧರ್ಮವುಬುಡವುನಿಶ್ಚಯವು || ಧರ್ಮವು ಕಾಮಧೇನುವಾದಂಥಾದ್ದು, ಧರ್ಮವು ದೊಡ್ಡ ಚಿಂತಾಮಣಿ ಯಾದಂಥಾದ್ದು ಧರ್ಮವು ಸ್ಥಿರವಾದ ಕಲ್ಪ ವೃಕ್ಷವಾದಂಥಾದ್ದು, ಧರ್ಮವುನಾಶ ರಹಿತವಾದ ನಿಧಿಯಾದಂಥಾದ್ದು || ೨೩ || ಧರ್ಮದ ಮಾಹಾತ್ಮೆಯನ್ನು ನೋಡು, ಯಾವ ಧರ್ಮವು ವಿಪತ್ತುಗಳಿಂದ ಸಂರಕ್ಷಿಸುತ್ತಿಧೆ ಲೋಕಾತ್ಮ ದಿವ್ಯಪ್ರತ್ಯಯತೊಪಿಚ | ಧೀಮನ್‌ಧರ್ಮಸ್ಯಮಾಹಾತ್ಮ್ಯಂನಿರ್ವಿಚಾರಮವೈಹಿಭೊ || ೨೫ || ಸದ್ದರ್ಮೊವಿನಿ ಪಾತೆಭೃಯಸ್ಮಾತ್ಸಂ ಧಾರಯೆನ್ನರಂ | ಧತ್ತೆಚಾಭ್ಯುದಯಸ್ಥಾ ನೆನಿರಪಾಯ ಸುಖೊದಯೆ || ೨೬ || ವ್ಯಾಜಹಾರಾತಿಗಂಭೀರಮಧುರೊ ದಾರಯಾಗಿರಾ | ಭಗವನ್‌ಗೌತಮಸ್ವಾಮಿ ಶ್ರೊತನ್ ಸಂಬೊಧರನ್ನಿತಿ || ೨೭ || ಶ್ರುತಂಮಯಾ ಶ್ರುತಸ್ಕಂಧಾ ದಾಯುಫ್ಮಂತೊಮಹಾಧಿಯಃ | ವಿಬೊಧತ ಮಹಾಧರ್ಮಫ್ಮಂಯಥಾವತ್ಕಥಯಾಮಿವಃ || ೨೮ || ಯತ್ಪ್ರಜಾಪತಯೆಬ್ರಹ್ಮಾ ಭರತಾಯಾದಿತೀರ್ಥಕೃ | ಪ್ರೊವಾಚತದಹಂತೆದ್ಯವಕ್ಷ್ಯೆ ಶ್ರೆಣಿಕಭೊಶೃಣಿ || ೨೯ || ಮಹಾಧಿಕಾರಾಶ್ಚತ್ವಾರಃ ಶ್ರುತಸ್ಕಂಧಸ್ಯವರ್ಣ್ಚತಾಃ | ತೇಷಾಮಾ

* * *

ಯೋ ಯಾವ ಧರ್ಮದಲ್ಲಿ ಇರುವಂಥಾವನನ್ನು ಕ್ಷುದ್ರ ದೇವತೆಗಳು ಅತಿಕ್ರಮಿಸುವದಿಲ್ಲವೊ || ೨೪ || ಎಲೇ ಬುದ್ಧಿ ಶಾಲಿಯೇ, ಚನ್ನಾಗಿ ವಿಚಾರ ಮಾಡುವದರಿಂದಲೂ ಕೊಲೆ, ಹುಸಿ, ಕಳವು, ಪರದಾರ ಅತಿಕಾಂಕ್ಷ ನಿವಾರಣ ಮಾಡುವ ಧೊರೆಯಿಂದಲೂ, ಪಾಪಿಷ್ಠರು ಕಷ್ಟಪಡುವ, ಧಾರ್ಮಿಕರು ಸುಖಪಡುವ, ಲೋಕದ್ದೆಶೆಯಿಂದಲೂ, ಧರ್ಮದ ನಡತೆಯಿಂದ, ಸುಖವನ್ನು ಕಾಣವ, ತನ್ನಿಂದಲೂ, ಧಾರ್ಮಿಕನಲ್ಲಿ ದೇವತಾಕೃಪೆ, ಉಂಟಾಗುವ ದೇವತಾ ಸಂಬಂಧವಾದ ನಂಬಿಕೆ ದೆಶೆಯಿಂದಲೂ ಕೂಡ, ಎಲೇ ಕ್ಷಣಿಕನೇ, ದರ್ಮದ ಮಹಿಮೆಯನ್ನು ಪುನರ್ವಿಚಾರಣೆ ಇಲ್ಲದೇ ಇರೋಣ ಹ್ಯಾಗೋ ಹಾಗೆತಿಳಿ || ಯಾವಕಾರಣದ್ದೆ ಶೆಯಿಂದ ಆ ಧರ್ಮವು, ಅವಿಪತ್ತುಗಳದೆಶೆಯಿಂದ ಮನುಷ್ಯನನ್ನು ಪುಷ್ಟಿಮಾತ್ತಿಧೆಯೋ. ಆ ಧರ್ಮ್ಮವುಹಾನಿ ಇಲ್ಲದೇ ಇರುವಂಥ ಸುಖಾವಿರ್ಭಾವ ಉಳ್ಳ ಅಭ್ಯದಯಸ್ಥಾನದಲ್ಲಿ ಧರಿಸುತ್ತಿಧೆ ||೨೬ || ಈ ಪ್ರಕಾರವಾಗಿ ಅತಿಗಂಭೀರವಾದಂಥಾ ಮಧುರವಾದಂಥಾ ಪ್ರೌಢವಾದಂಥಾ ಮಾತಿನಿಂದ ಭಗವಂತನಾದ ಗೌತಮಸ್ವಾಮಿಯು, ಕೇಳತಕ್ಕವರನ್ನು ಚಂದಾಗಿ ಬೋಧಿಸುವಂಥಾವನಾಗಿ ಹೇಳಿದನು || ೨೭ || ಆಯುಷ್ಯ ಉಳ್ಳಂಥ ಮಹಾ ಬುದ್ಧಿ ಉಳ್ಳಂಥಾವರಗಳೇ (ಶ್ರುತ ಸ್ಕಂಧವೆಂದರೆ,) ದ್ವಾದಶಾಂಗವೇದದ್ದೇಶೆಯಿಂದ ನನ್ನಿಂದ ಕೇಳಲ್ಪಟ್ಟಂಥಾ ಮಹಾ ಧರ್ಮವನ್ನು ಕೇಳಿ, ನಿಮಗೆ ಯಥಾರ್ಥವಾಗಿ ಹೇಳುತ್ತೇನೆ || ೨೮ || ಎಲೈ ಶ್ರೇಣಿಕನೇ ಕೇಳು, ಆದಿಬ್ರಹ್ಮರಾದ ಪ್ರಥಮತೀರ್ಥಕರಾದ ವೃಷಭಸ್ವಾಮಿಯು ಭರತ ರಾಜರ್ಷಿ

* * *

ದ್ಯೊನುಯೊಗೊಯಂ ಸತಾಂಸಚ್ಚರಿತಾಶ್ರಯಃ || ೩೦ || ದ್ವಿತೀಯಃ ಕರಣಾದಿಸ್ಯಾದನುಯೊಗಃ ಸಯತ್ರವೈ | ತ್ರೈಲೋಕ್ಯಕ್ಷೆತ್ರ ಸಂಖ್ಯಾನಂಕುಲಪತ್ರೆಧಿರೊಪಿತಂ || ೩೧ || ಚರಣಾದಿಸ್ತೃತೀಯ ಸ್ಯಾದನುಯೊಗೊ ಜಿನೊದಿತಃ | ಯತ್ರಚರ್ಯಾವಿಧಾನಸ್ಯಪ ರಾಸುದ್ಧಿರುದಾಹೃತಾ || ೩೨ || ತುರ್ಯೊದ್ರವ್ಯಾನುಯೊಗಸ್ತುದ್ರ ವ್ಯಾಣಾಂಯತ್ರನಿರ್ಣಯಃ | ಪ್ರಮಾಣನಯನಿಕ್ಷೆಪೈ ಸದಾದ್ಯೈಶ್ಚಕಿಮಾದಿಭಿಃ || ೩೩ || ಸೊರ್ಥ ತೊಪರಿಮೆಯೊಪಿ ಸಂಖ್ಯೆಯಾಃ ಶಬ್ದತೊಮತಃ | ಕೃತ್ಸ್ನಸ್ಯವಾಙ್ಮಯಸ್ಯಾಸ್ಯ ಸಂಖ್ಯೆಯ ತ್ವಾನತಿಕ್ರಮಾತ್‌ || ೩೪ || ದ್ವೆಲಕ್ಷೆಪಂಚಪಂಚಾಶತ್ಸಹಸ್ರಾಣಿ ಚತುಶ್ಶತಃ | ಚತ್ವಾರಿಂ ಶತ್ತಥಾದ್ವೆಚಕೊಟ್ಯೊಸ್ಮಿನ್ ಗ್ರಂಥಸಂಖ್ಯಯಾ || ೩೫ || ಏಕತ್ರಿಂಶಚ್ಚ ಲಕ್ಷಾಸ್ಯು ಶತಾನಾಂಪಂಚಸಪ್ತ

* * *

ಗೋಸ್ಕರಯಾವದನ್ನು ಹೇಳಿದನೋ ಅದನು ಯೀಗ, ನಾನು ನಿನಗೆ ಹೇಳುತ್ತೇನೆ || ೨೯ || ದ್ವಾದಶಾಂಗ ವೇದವೆಂಬ ಶ್ರುತಸ್ಕಂಧಕ್ಕೆ ನಾಲ್ಕು ಮಹಾಧಿಕಾರಗಳು ಹೇಳಲ್ಪಟ್ಟವು. ಅವುಗಳೊಳಗೆ ಸತ್ಪುರುಷರುಗಳ ಸಚ್ಚರಿತ್ರದ ಆಶ್ಚಯವುಳ್ಳಂಥಾದ್ದು ಪ್ರಥಮಾನುಯೋಗವು || ೩೦ || ಎಲ್ಲಿ ಕುಲಪತ್ರದಲ್ಲಿ ಅರೋಪಿಸಲ್ಪಟ್ಟಂಥ ಮೂರು ಲೋಕ ಕ್ಷೇತ್ರ ಸಂಖ್ಯಯು ಹೇಳಲ್ಪಟ್ಟಿತೋ, ಅದು ಎರಡನೇದಾದಂಥಾ ಕರಣಾನುಯೋಗವು || ೩೧ || ಎಲ್ಲಿ ಚಾರಿತೆ ವಿಧಾನಕ್ಕೆ ಉತ್ಕೃಷ್ಟವಾದ ಪರಿಶುದ್ಧಿಯು ಹೇಳಲ್ಪಟ್ಟಿತೊ : ಜನೇಶ್ವರನಿಂದ ಹೇಳಲ್ಪಟ್ಟ ಆಚರಾಣಾದಿಯಾದ ಅನುಯೋಗವು ಮೂರನೇದು ಆಗುತ್ತದೆ || ೩೨ || ಎಲ್ಲಿ ಪ್ರಮಾಣನಯ ನಿಕ್ಷೇಪಗಳಿಂದ, ಸ್ಯಾದಸ್ತೀತ್ಯಾದಿಸಪ್ತ ಭಂಗಿಗಳಿಂದ ದ್ರವ್ಯಗಳ ನಿರ್ಣಯವು ಹೇಳಲ್ಪಟ್ಟಿತೊ, ಆ ದ್ರವ್ಯಾನುಯೋಗವು, ನಾಲ್ಕನೇದಾದಂಥಾದ್ದು || ೩೩ || ಆ ಶ್ರುತ ಸ್ಕಂಧವು ಅರ್ಥದ್ಧೆಶೆಯಿಂದ ಅಪರಮಿತವಾದಂಥಾದ್ದಾದಾಗ್ಯೂಕೂಡ ಶಬ್ದದ್ದೆಶೆಯಿಂದ ಲೆಖ್ಖ ಮಾಡುವದಕ್ಕೆ ಯೋಗ್ಯವಾದಂಥಾದ್ದಾಗಿ ಅತ್ಯಂತವಾದ ಈ ವಾಜ್ಮಯಕ್ಕೆ ಲೆಖ್ಖ ಮಾಡುವದಕ್ಕೆ ಯೋಗ್ಯಭಾವದ ಅತಿಕ್ರಮವಿಲ್ಲದೇ ಇರುವದರ ದೆಶೆಯಿಂದ ಸಮ್ಮತವಾದಂಥಾದ್ದು ||೩೪ || ಗ್ರಂಥಸಂಖ್ಯೆಯಿಂದ ಈ ಶ್ರುತ ಸ್ಕಂಧದಲ್ಲಿ ಎರಡು ಲಕ್ಷವು ಐವತ್ತೈದು ಸಾವಿರವು ನಾನೂರು, ನಲ್ವತ್ತೆರಡು ಕೋಟಿಗಳು || ೩೫ || ಮೂವತ್ತೊಂದು ಲಕ್ಷವು ಐನೂರು ಎಪ್ಪತ್ತು ಅನುಷ್ಟಪ ಶ್ಲೋಕದಿಂದ ಗ್ರಂ

* * *

ತಿಃ | ಗ್ರಂಥಸಂಖ್ಯಾಚವಿಜ್ಞೆಯಾಶ್ಲೊಕೆನಾನುಷ್ಟಭೆನಹಿ || ಗ್ರಂಥ ಪ್ರಮಾಣನಿಶ್ಚಿತ್ಯೈ ಪದ ಸಂಖ್ಯೊಪದರ್ಣತೆ | ಪಂಚೈವೆಹಸಹಸ್ರಾಣಿಪದಾನಾಂಗಣಿಮಾನತಃ || ಶತಾನಿಷೊಡಶೈವಸ್ಯುಶ್ಚತುಸ್ತ್ರೀಂ ಶಚ್ಚಕೊಟಿಯಃ | ತ್ರ‍್ಯಶೀತಿಲಕ್ಷಾಸ್ಸಪ್ತೈವ ಸಹಸ್ರಾಣಿಶ ತಾಷ್ಟಕಂ || ಅಷ್ಟಾಶೀತಿಶ್ಚವರ್ಣ್ನಾಸ್ಸ್ಯಃ ಸಂಹತಾಮಧ್ಯಮಂಪದಂ | ಪದನೈತೆನ ಮೀಯಂತೆಪೂರ್ವ್ವಾಂಗ ಗ್ರಂಥವಿಸ್ತರಃ || ೩೯ || ತಥಾಹೀದಂ ಧರ್ಮಶಾಸ್ತ್ರಂ ಸುಧರ್ಮಶ್ರುತರಂ ಕೇವಲೀ ಸಂಧರ್ಮ ಪ್ರಚಯಂನೆ ಫತೃಖಿಲಂವವನತರಂ || ಜಂಬೂನಾಮಾತತಃ ಕೃತ್ಸ್ನಂಸ್ಮೃತಿಂತಾಮನು ಶುಶ್ರುವಾನ್ | ಪ್ರದಯಿಪ್ಯತಿಲೊಕೆ ಸ್ಮಿಸೊಂತ್ಯಃಕೆವಲಿನಾಮಿಹ || ೪೧ || ಅಹಂಸುಧರ್ಮ್ಮೊ ಜಂಬ್ವಾಖ್ಯೊನಿಖಿಲಶ್ರುತ ಧಾರಿಣಃ | ಕ್ರಮಾತ್ಕೈ ವಲ್ಯಮುತ್ಪಾದ್ಯ ನಿರ್ವಾಸ್ಯಾಮಸ್ತ ಯೊವಯಂ || ೪೨ || ತ್ರಯಾಣಾಮಸ್ಮದಾದೀನಾ ಕಾಲಃಕೆವಲಿ ನಾಮಿಹ |

* * *

ಥ ಸಂಖ್ಯೆಯು ತಿಳಿಯತಕ್ಕದ್ದು || ೩೬ || ಗ್ರಂಥ ಪ್ರಮಾಣದ ನಿಶ್ಚಯಕ್ಕೋಸ್ಕರ ಪದ ಸಂಖ್ಯೆಯು ಹೇಳಲ್ಪಡುತ್ತದೆ. ಗಣನೆವುಳ್ಳ ಪ್ರಮಾಣದ್ದೆಶೆಯಿಂದ ಪದಗಳ ಐದೇಸಾವಿರಗಳು || ೩೭ || ಹದಿನಾರು ನೂರಂದರ, ಸಾವಿರದ ಆರನೂರು ಮೂವ್ವತ್ತು ನಾಲ್ಕು ಕೋಟಿಗಳು ಎಂಭತ್ತು ಮೂರು ಲಕ್ಷಗಳು ಏಳು ಸಾವಿರಗಳು ಎಂಟುನೂರೂ || ೩೮ || ಹದಿನೆಂಟು ಅಕ್ಷರಗಳು ಆಗುತ್ತಿವೆ. ಈ ಸೇರಿಸಲ್ಪಟ್ಟ ಅಕ್ಷರಗಳು ಮದ್ಯ ಪದವು, ಈ ಪದದಿಂದ ಪೂರ್ವಾಂಗದ ಗ್ರಂಥವಿಸ್ತರವು ಪ್ರಮಾಣಿಸಲ್ಪಡುತ್ತಿವೆ. || ಹಾಗೇ ಸರಿ, ಈ ದರ್ಮಶಾಸ್ತ್ರವನ್ನು ಸಮಾನಧರ್ಮವುಳ್ಳ ಸುಧರ್ಮನೆಂಬ ಕೇವಲಿಯು, ಎಲ್ಲಾ ಈ ಧರ್ಮಶಾಸ್ತ್ರವನ್ನೂ ಹೇಳುವಂಥಾವನಾಗುತ್ತಾನೆ. || ೪೦ || ಅನಂತರದಲ್ಲಿ ಜಂಬೂಮುನಿಯು ಈ ಸ್ಮೃತಿಯನ್ನು ಅತ್ಯಂತವಾಗಿ ಈ ಲೋಕದಲ್ಲಿ ಪ್ರಶಿದ್ಧಿ ಮಾಡುತ್ತಾನೆ. ಈ ಭರತಕ್ಷೇತ್ರದಲ್ಲಿ ಕೇವಲಿಗಳೊಳಗೆ ಆತನೇ ಕೊನೆಯವನಾದಂಥಾವನು || ೪೧ || ನಾನು ಸುಧರ್ಮ ಗಣಧಾರನು ಜಂಬೂಮುನಿಯು ಸಮಸ್ತ ಶಾಸ್ತ್ರಧಾರಿಗಳಾದಂಥಾವರುಗಳು ಕ್ರಮವಾಗಿ ಕೇವಲ ಜ್ಞಾನವನ್ನು ಉತ್ಪಾದನೆ ಮಾಡಿ ಅನಂತರದಲ್ಲಿ ನಾವುಗಳು ಮುಕ್ತಿಯನ್ನು ಪಡೆಯುತ್ತೇವೆ || ೪೨ || ಭಗವಂತನಾದ ವರ್ಧಮಾನ ಸ್ವಾಮಿಯ ಮೋಕ್ಷಾನಂತರದಲ್ಲಿ ನಾನು ಮೊದಲಾದ ಮೂರು ಕೇವಲಗಳ ಅರುವತ್ತೆರಡು ವರ್ಷ ಪ್ರಮಾಣ

* * *

ದ್ವಾಷಷ್ಟಿ ವರ್ಷ ಪಿಂಡಸ್ಯಾದ್ಭಗವನ್ನಿರ್ವೃತೆಃಪರಂ || ೪೩ || ತತೊಯಥಾಕ್ರಮಂ ವಿಷ್ಣುರ್ನಂದಿ ಮಿತ್ರೊಪರಾಜಿತಃ | ಗೊವರ್ಧನೊಭದ್ರ ಬಾಹುತ್ಯಾಚಾರರ್ಯ್ಯಾ ಮಹಾಧಿಯಃ || ಚತುರ್ದಶಮಹಾ ವಿದ್ಯಾಸ್ಥಾನಾನಾಂಪಾರಗಾಇಮೆ || ತಾಂತ್ಮೃತಿಂ ದ್ಯೋತಯಿಷ್ಯಂತಿಕಾ ರ್ತ್ಸ್ನನಶರರ್ದಃಶತಂ || ೪೫ || ವಿಶಾಖಪ್ರೊಷ್ಠಿಲಾ ಚಾರ್ಯ್ಯೆಃಕ್ಷತ್ರಿಯೊಜಯಸಾಹ್ವಯಃ | ನಾಗಸೆನಶ್ಚ ಸಿದ್ಧಾರ್ಥೊ ದೃತಿಷೆಣಸ್ತಥೈವಚ || ೪೬ || ವಿಜಯೊಬುದ್ಧಿಮಾನ್ಗಂಗದೆವೊಧರ್ಮಾದಿಶಬ್ದನಃ | ಸೆನಶ್ಚದಶಪೂರ್ವಾಣಾಂಧಾರಕಾ ಸ್ಸ್ಯುರ್ಯಥಾಕ್ರಮಂ ತ್ಯ್ರಕೀತಿಶತಮಬ್ದಾನಾಮೆತೆ ಫಾಂಕಾಲ ಸಂಗ್ರಹಃ | ತಥಾಚಕೃತ್ಸ್ನಮೆವೆ ದಂಥವರಶಾಸ್ತ್ರನಯದೂರ್ತತೆ || ೪೭ || ತತೊನಕ್ಷತ್ರನಾಮಾಚಜ ಯಪಾಲೊ ಮಹಾತಪಾಃ | ಪಾಂಡುಶ್ಚಧ್ರುವಸೆನಶ್ಚ ಕಲಸಾಚರ್ಯ್ಯಇತಿಕ್ರರ್ಮಾ || ೪೮ || ಏಕಾದಶಾಂಗವಿದ್ಯಾನಾಂ

* * *

ವುಳ್ಳಂಥಾದ್ದಾಗುತ್ತೆ || ೪೩ || ಅನಂತರದಲ್ಲಿ ಯಥಾಕ್ರಮವಾಗಿ ವಿಷ್ಣುಯತಿಯು ನಂದಿ ಮಿತ್ರ ಯತಿಯು ಅಪರಾಜಿತ ಯತಿಯು ಗೋವರ್ಧನಯತಿಯು ಭದ್ರಬಾಹು ಯತಿಯು ಇಂತೆಂದು ಅಚಾರ್ಯರುಗಳು ಮಹಾಬುದ್ಧಿಯುಳ್ಳಂಥಾವರುಗಳು || ೪೪ || ಚತುರ್ದಶ ಮಹಾ ವಿದ್ಯಾಸ್ಥಾನಗಳ ಪಾರಂಗತರಾದಂಥ ಈ ವಿಷ್ಣು ಮೊದಲಾದ ಋಷಿಗಳು ಅಸ್ಮೃತಿಯನ್ನು ನೂರು ವರ್ಷಗಳಲ್ಲಿ ಸಮಗ್ರತ್ವದಿಂದ ಪ್ರಕಾಶಮಾಡುತ್ತಾರೆ || ೪೫ || ವಿಶಾಖ ಪ್ರೋಷ್ಠಿಲಾಚಾರ್ಯ ಋಷಿಯು ಕ್ಷತ್ರಿಯನಾದಂಥಾ ಜಯ ಋಷಿಯು ನಾಗಸೇನ ಋಷಿಯು ಅದೇ ಮೇರೆ ಧೃತಿಫೇಣ ಋಷಿಯು || ೪೬ || ವಿಜಯ ಋಷಿಯು ಬುದ್ಧಿಯುಳ್ಳಗಂಗದೇವ ಋಷಿಯು ಯಥಾಕ್ರಮವಾಗಿ ದ್ವಾದಶಾಂಗ ವೇದದಲ್ಲಿ ಹನ್ನೆರಡನೇ ಅಂಗದ ದಶಪೂರ್ವಗಳನ್ನು ಧರಿಸುವಂಥಾವರುಗಳು ಆಗುತ್ತಾರೆ || ೪೭ || ಇವರುಗಳ ಕಾಲಸಂಗ್ರಹವು ನೂರು ಎಂಭತ್ತು ಮೂರು ವರ್ಷಗಳು. ಆಗಲೂ, ಈ ಧರ್ಮಶಾಸ್ತ್ರವು ಸಂಪೂರ್ಣವಾಗಿಯೇ ಹೇಳಲ್ಪಡುತ್ತಿದೆ || ೪೮ || ಅನಂತರದಲ್ಲಿ, ನಕ್ಷತ್ರನಾಮ ಋಷಿಯು, ಮಹಾ ತಪಸ್ಸುಳ್ಳ ಜಯಪಾಲ ಋಷಿಯು, ಪಾಂಡು ಋಷಿಯು, ಧೃವಸೇನ ಋಷಿಯು, ಕಂಸಾಚಾರ್ಯ ಋಷಿಯು, ಇಂತೆಂದು, ಕ್ರಮವಾಗಿ || ೪೯ || ಏಕಾದಶಾಂಗ ವಿದ್ಯಗಳ ಪಾರಂಗತರಾದ ಮುನೀಶ್ವರರುಗಳು ಆಗುತ್ತಾರೆ. ಇವರುಗಳ ಕಾಲವು, ವರ್ಷಗಳ ಇನ್ನೂರ

* * *

ಪಾರಗಾಸ್ಯುರ್ಮುನಿಶ್ವರಾಃ | ವಿಂಶಂದ್ವಿಶತಮಬ್ದಾನಾಂ ಮೆತೆಷಾಂಕಾಲ ಇಷ್ಯತೆ || ತದೆತದ್ಧರ್ಮ್ಮಶಾಸ್ತ್ರಂ ತುಪಾದೊನಂಪ್ರಥಷ್ಯತೆ | ಭಾಜನಾಭಾವತೊಭೂಯೊ ಜಾಯೆತಾಂಗಕನಿಷ್ಠತಾ || ಸುಭದ್ರಶ್ಚಯಶೊಭದ್ರೊಭದ್ರಬಾಹುರ್ಮ್ಮಹಾಯಶಾಃ | ಲೊಹಾರ್ಯ್ಯಶ್ಚಡತ್ಯಮೀಜ್ಞೆಯಾಃಪ್ರಥಮಾಂಗಾಬ್ಧಿಪಾರಗಾಃ || ೫೨ || ಶರದಾಂಶತಮೆತೆಷಾಂಸ್ಯಾದಷ್ಟಾದಶಭಿರ್ಯ್ಯುತಂ | ತುರ್ಯೊಭಾಗ ಸ್ಸ್ಮೃತೆಸ್ತಸ್ಯಾಃತದಾಸ್ಯಾಃಪ್ರಥ ಇಷ್ಯತೆ || ೫೩ || ತತಃಕ್ರಮಾತ್ಪ್ರಹಾಯೆಷಾಸಾಸ್ಮೃತಿಸ್ಸ್ವಲ್ಪ ಮಾತ್ರಯಾ | ಧೀಪ್ರಮೊಷಾದಿದೊಫೆಣವಿರಲೈದ್ಧಾರಇಷ್ಯತೆ || ೫೪ || ಜ್ಞಾನವಿಜ್ಞಾನಸಂಪನ್ನ ಗುರುಪರ್ವ್ವಾನ್ವ ಯಾದಿದಂ | ಪ್ರಮಾಣಂಯಚ್ಚ ಯಾವಚ್ಚಯದಾಯತ್ರಪ್ರಕಾಶತೆ || ೫೫ || ತದಾಪೀದಮನುಸ್ಮರ್ತ್ತುಂ ಪ್ರಭವಿಷ್ಯಂತಿಧೀಧನಾ | ಜಿನಸೆನಾಗ್ರಗಾಃ ಪೂಜ್ಯಾಃಕವೀನಾಂ ಪರಮೇಶ್ವ

* * *

ಇಪ್ಪತ್ತು ಹೇಳಲ್ಪಡುತ್ತಿದೆ || ೫೦ || ಆ ಸಮಯದಲ್ಲಾದರೋ, ಈ ಧರ್ಮಶಾಸ್ತ್ರವು, ಕಾಲುಭಾಗ ಕಡಮೆಯಾದಂಥಾದ್ದಾಗಿ, ಪ್ರಶಿದ್ದ ಮಾಡಲ್ಪಡುತ್ತಿದೆ, ಬಹಳವಾಗಿ ವಕ್ತೃಶ್ರೋತೃಗಳೆಂಬ ಭಾಜನಗಳ ಅಭಾವದ್ದೆಶೆಶಯಿಂದ ಶಾಸ್ತ್ರಾಂಶ ಕಡಮೆಯು ಆಗುವಂಥಾದ್ದು || ೫೧ || ಸುಭದ್ರ ಋಷಿಯು, ಮಹಾಯಶಸ್ಸು ವುಳ್ಳಂಥಾ ಭದ್ರಬಾಹು ಋಷಿಯು, ಲೋಹಾಚಾರ್ಯ್ಯ ಋಷಿಯು, ಇಂತೆಂದು, ಇವರುಗಳು ಪ್ರಥಮಾಂಗವೆಂಬ ಸಮುದ್ರದ ಪಾರಂಗತರಾಗಿ ತಿಳಿಯುವದಕ್ಕೆ ಯೋಗ್ಯರಾದಂಥಾವರುಗಳು || ೫೨ || ಇವರುಗಳಿಗೆ ವರ್ಷಗಳ ಹದಿನೆಂಟರೊಡನೆ ಕೂಡಿದ ನೂರು ಆಗುತ್ತಿಧೆ. ಆಗ ಆಯಿಸ್ಮೃತಿಯ ನಾಲ್ಕನೇ ಭಾಗವು ಪ್ರಶಿದ್ಧಿ ಮಾಡಲ್ಪಡುತ್ತಿದೆ || ೫೩ || ಅನಂತರದಲ್ಲಿ ಕ್ರಮವಾಗಿ ಆಯೀಸ್ಮೃತಿಯು ಜನಗಳ ಬುದ್ಧಿ ಹಾನಿ ದೋಷದಿಂದ ಕ್ಷೀಣವಾಗಿ ಸ್ವಲ್ಪಮಾತ್ರದಿಂದ, ವಿರಳರಾದ ಋಷಿಗಳಿಂದ ಧರಿಸಲ್ಪಡುತ್ತದೆ || ೫೪ || ಯಾವ ಸಮಯದಲ್ಲಿ ಎಷ್ಟು ಪ್ರಮಾಣವು ಯಾವದು ಪ್ರಕಾಸಿಸುತ್ತಿಧೆಯೋ, ಆಯೀ ಧರ್ಮ್ಮಶಾಸ್ತ್ರವು, ಜ್ಞಾನ ವಿಜ್ಞಾನ ಸಂಪನ್ನ ಗುರುಪರ್ವ್ವ ಕ್ರಮದೆಶೆಯಿಂದ ಹೇಳಲ್ಪುಡತ್ತಿದೆ || ೫೫ || ಹಾಗಾದಾಗ್ಯೂ ಕೂಡ ಬುದ್ಧಿಯೇ ದ್ರವ್ಯವಾಗಿ ಉಳ್ಳಂಥಾವರುಗಳು ಈ ಧರ್ಮಶಾಸ್ತ್ರವನ್ನು ಭಾವಿಸುವದಕ್ಕೋಸ್ಕರ ಸಮರ್ತ್ಥರಾಗುತ್ತಾರೆ. ಜಿನ ಸೇನಾಚಾರ್ಯ್ಯರೇ ಕೊನೆಯಾದಂಥ ಕವಿಗಳಿಗೆ ಪರಮೇಶ್ವರರಾದಂಥಾವರುಗಳು ಪೂಜಿಸು

* * *

ರಾಃ || ೫೬ || ಋಷಿಪ್ರಣೀತಮಾಷ್ಯತ್ಂರ್ಸ್ಯಾಸೂಕ್ತಂಸೂನೃತೆಶಾಸನಾತ್ | ಧರ್ಮ್ಮಾ ನುಶಾಸನಾಚ್ಚೆದಂಧರ್ಮ್ಮಶಾಸ್ತ್ರಮಿತಿಸ್ಮೃತಂ || ೫೭ || ಪ್ರಥಮೆಸ್ಯಾದುಪೊದ್ಘಾತಃ ಪ್ರಮಾಣಾದಿರ್ದ್ವಿತೀಯಕೆ || ತ್ರತೀಯೆಕುಲಧೃತ್ ಕಾರ್ಯ್ಯಃ ಚತುರ್ತ್ಥೆವರ್ಣ್ಣಸಂಭವಃ || ಪಂಚಮೆದಿಜಸತ್ಕಾರಃಷಷ್ಟೆನಿತ್ಯಕ್ರಿಯಾವಿಧಿಃ | ನೈಮಿತ್ತಿ ಕಕ್ರಿಯಾತೊಸ್ಯಾದಾಶೌ ಚವಿಧಿರಷ್ಟಿಮೆ || ೫೯ || ನವಮೆರಾಜನೀತಿಸ್ಸ್ಯಾತ್ ದಶಮೆಶ್ರಾವಕವ್ರತಂ | ಏಕಾದಶೆ ಯತೆರ್ದ್ಧರ್ಮ್ಮಃ ಪ್ರೊಚ್ಯತೆಸ್ಮೃತಿ ಸಂಗ್ರಹೆ || ೬೦ || ಪ್ರಣಿಗದತಿಸತರ್ತ್ಥಂ ಗೌತಮೆಭಕ್ತಿ ನಮ್ರಾಮುನಿಪರಿಷದಶೆ ಷಾಶ್ರೋತುಕಾಮಾಸ್ಮೃತಿ ಂತಾಂ | ಮಗಧನೃಪತಿನಾಮಾಸಾವ ಧಾನಾತದಾಭೂತ್ ಹಿತಮವಗಣಯೆ ದ್ವಾಕಸ್ಸುಧೀ ರಾಪ್ತವ್ಯಾಕ್ಯಂ || ೬೧ || ಇತ್ಯಾರ್ಷೆ ಸ್ಮೃತಿಸಂಗ್ರಹ ಉಪೋದ್ಘಾತವರ್ಣ್ಣನಂ ನಾಮ ಪ್ರಥಮೋಧ್ಯಾಯಃ

* * *

ವದಕ್ಕೆ ಯೋಗ್ಯರಾದಂಥಾವರುಗಳು || ೫೬ || ಈ ಶಾಸ್ತ್ರವು ಋಷಿಗಳಿಂದ ಹೇಳಲ್ಪಟ್ಟಂಥಾದ್ದಾದ್ದರಿಂದ ಅರ್ಷವೆಂಬ ಹೆಸರು ವುಳ್ಳಂಥಾದ್ದಾಗುತ್ತಿದೆ. ವಳ್ಳೇಹಿತವನ್ನು ಹೇಳುವದರ ದೆಶೆಯಿಂದ ಸೂಕ್ತವಾಗುತ್ತದೆ ಧರ್ಮ್ಮವನ್ನು ಹೇಳುವದರ ದೆಶೆಯಿಂದಲೂ ಕೂಡ ಧರ್ಮಶಾಸ್ತ್ರವಿಂತೆಂದುಸ್ಮರಿಸಲ್ಪಟ್ಟತು || ೫೭ || ಪ್ರಥಮಾದ್ಯಾಯದಲ್ಲಿ ಉಪೋದ್ಘಾತವು, ದ್ವಿತೀಯಾಧ್ಯಾಯದಲ್ಲಿ ಪ್ರಮಾಣ ಮೊದಲಾದದ್ದು, ಮೂರನೇ ಅಧ್ಯಾಯದಲ್ಲಿ, ಮನುಗಳ ಕಾರ್ಯ್ಯವು, ಚುತುರ್ತ್ಥಾಧ್ಯಾಯದಲ್ಲಿ ವಣ್ನೋತ್ಪತ್ತಿಯು || ೫೮ || ಐದನೇ ಅಧ್ಯಾಯದಲ್ಲಿ ಬ್ರಾಹ್ಮಣ ಸತ್ಕಾರವು, ಆರನೇ ಅಧ್ಯಾಯದಲ್ಲಿ ನಿತ್ಯಕ್ರಿಯಾವಿಧಿಯು, ಅನಂತರ ನೈಮಿತ್ತಿಕ ಕ್ರಿಯೆಯು ಆಗುತ್ತಿದೆ, ಎಂಟನೇದರ‍್ಲಲಿ ಆಶೌಚವಿಧಿಯು || ೫೯ || ನವಮದಲ್ಲಿ ರಾಜನೀತಿಯು, ಹತ್ತನೇ ಅಧ್ಯಾಯದಲ್ಲಿ ಶ್ರಾವಕವ್ರತವು, ಹನ್ನೊಂದನೇ ಅಧ್ಯಾಯದಲ್ಲಿ ಯತಿಯ ಧರ್ಮ್ಮವು ಈ ಸ್ಮೃತಿ ಸಂಗ್ರಹದಲ್ಲಿ ಹೇಳಲ್ಪಡುತ್ತಲಿಧೆ || ೬೦ || ಈ ಪ್ರಕಾರವಾಗಿ ಗೌತಮ ಋಷಿಯು ಹೇಳುವಂಥಾವನಾಗಿತ್ತಿರಲೀಕಾಗಿ, ಆ ಸಮಯದಲ್ಲಿ ಆ ಸ್ಮೃತಿಯನ್ನು ಕೇಳಲಿಚ್ಛೆಯುಳ್ಳಂಥಾ ಸಮಸ್ತ ಮುನಿಸಭೆಯು ಮಗಧ ದೇಶಾಧಿಪತಿಯಾದ ಶ್ರೇಣಿಕನೊಡನೆ ಅವಧಾನದೊಡನೆ ಕೂಡಿದಂಥಾದ್ದಾಯ್ತು. ಬುದ್ಧಿಶಾಲಿಯಾದ ಯಾವೋನು ತಾನೇ ಆಪ್ತ ವಾಕ್ಯವನ್ನು ಗಣನೇಮಾಡದೇ ಇದ್ದಾನು || ಇತಿಸ್ಮೃತಿಸಂಗ್ರಹ ಉಪೋದ್ಘಾತ ವರ್ಣನಂನಾಮ ಪ್ರಥಮೋದ್ಯಾಯಃ.

* * *

ದ್ವಿತೀಯೋಧ್ಯಾಯ ಪ್ರಾರಂಭಃ

ಮೂಲ || ಪ್ರಮಾಣನೆಯನಿಕ್ಷಪಾನ್‌ಶ್ರೇಣಿಕಂಗೌತಮೊಬ್ರವಿತ್ ಪ್ರಶನದ್ಧ ಶತನಾಭೀಷು ಜಲಸ್ನಪಿತತತ್ತನುಃ || ೧ || ಪ್ರಮಾಣಂಸಕಲಾದೆಶೀನ ಯಾದಭ್ಯರ್ಹಿತಂಮತಃ | ವಿಕಲಾದೆಶಿನಸ್ತಸ್ಯವಾಚಕೊಪಿತಧೊಚ್ಯತೆ || ೨ || ಸ್ವಾರ್ತ್ಥನಿಶ್ಚಯಕತ್ವನಪ್ರಮಾಣಂ ನಯ ಇತೃಸತ್ | ಸ್ವಾರ್ತ್ಥೈಕದೇಶನಿರ್ನ್ನೀಶೀಲಕ್ಷಣೊ ಹೀನಯಸ್ಮೃತಃ || ೩ || ತದೆವ ಜ್ಞಾನ ಮಾಸ್ತೆಯಂ ಪ್ರಮಾಣಂನೆಂ ದ್ರಿಯಾದಿಕಂ || ಪ್ರಮಾಣೆಏವತಜ್ಞಾನಂ ನೈಕತ್ರ್ಯಾದಿ ಪ್ರಮಾಣಭಿತ್ || ೪ || ನನುಪ್ರಮೀಯತೆಯೆನ ಪ್ರಮಾಣಂತದಿತೀರಣೆ | ಪ್ರ

* * *

ದ್ವಿತೀಯೋಧ್ಯಾಯ ಪ್ರಾರಂಭಃ

ತಾತ್ಪರ್ಯ್ಯ || ಈಚೆಗೆ ಹೊರಡುತ್ತಿರುವಂಥಾ ದಂತಗಳ ಕಾಂತಿ ಎಂಬ ಜಲದಿಂದ ಸ್ನಾನ ಮಾಡಲ್ಪಟ್ಟ ಆತನ ಶರೀರವುಳ್ಳಂಥಾ ಗೌತಮ ಋಷಿಯು ಶ್ರೇಣಿಕನನ್ನು ಕುರಿತು ಪ್ರಮಾಣ ನಯ ನಿಕ್ಷೇಪಗಳನ್ನು ಹೇಳಿದನು || ೧ || ವಿಕಾಲಾ ದೇಶಿ ಎಂದರೆ ಸಂಪೂರ್ಣವಾಗಿ ಆ ದೇಶ ಮಾಡಲ್ಪಡದೇ ಇರುವಂಥ, ನಯದ್ದೆಶೆಯಿಂದ ಸಕಲಾ ದೇಶಿಯಾದ ಪ್ರಮಾಣವು ಪ್ರತ್ಯೇಕವಾದಂಥಾದ್ದಾಗಿ ಹೇಳಲ್ಪಟ್ಟಿತು. ವಾಚಕವೂ ಕೂಡ ಹಾಗೆ ಹೇಳಲ್ಪಡುತ್ತಲಿಧೆ || ೨ || ಸ್ವಾರ್ತ್ಥ ನಿಶ್ಚಯಮಾಡುವ ಸ್ವಭಾವದಿಂದ, ಪ್ರಮಾಣವು, ನಯವಿಂತೆಂದು, ಹೇಳತಕ್ಕದ್ದಲ್ಲ. ನಯವು ಸ್ವಾರ್ತ್ಥದ ಏಕದೇಶ ನಿರ್ಣ್ಣಯಲಕ್ಷಣವಾದಂಥಾದ್ದು, ನಿಶ್ಚಯವು || ೩ || ಮತಿಶ್ರುತಾವಭಿಮನಃ ಪರ್ಯ್ಯಯ ಕೇವಲ ಜ್ಞಾನವೆಂಬ ಐದು ಭೇದವುಳ್ಳ ಆ ಜ್ಞಾನವೇಯೆ, ಪ್ರಮಾಣವಿಂತೆಂದು, ನಿಶ್ಚಯಿಸತಕ್ಕದು, ಇಂದ್ರಿಯ ಮೊದಲಾದಂಥಾದ್ದು ಪ್ರಮಾಣವಲ್ಲ. ಆ ಐದು ಭೇದವುಳ್ಳಜ್ಞಾನವು ಪ್ರಮಾಣಗಳಾಗುತ್ತಿವೆ. ಅಂದರೆ, ಮತಿ ಶ್ರುತಜ್ಞಾನಗಳೆರಡು, ಪರೋಕ್ಷಜ್ಞಾನಗಳೆಂತಲೂ, ಅವಧಿ ಮನಃ ಪರ್ಯ್ಯಯ ಕೇವಲ ಜ್ಞಾನಗಳು ಪ್ರತ್ಯಕ್ಷ ಜ್ಞಾನವೆಂತಲು ಎರಡು ವಿಧವಾಗಿ ತಿಳಿಯತಕ್ಕದ್ದು. ಒಂದುಮೂರು ಮೊದಲಾದ ಪ್ರಮಾಣ ಭೇದವಿಲ್ಲ || ೪ || ಅಯ್ಯಾ ಯಾವದರಿಂದ ಪ್ರಮಾಣೀಕರಿಸಲ್ಪಡುತ್ತಿಧೆಯೋ, ಅದು, ಪ್ರಮಾಣವು. ಇಂತೆಂದು, ಪ್ರಮಾಣ ಲಕ್ಷಣ ಹೇಳಲ್ಪಡುವ ವಿಷಯದಲ್ಲಿ ಪ್ರಮಾಣ ಲಕ್ಷಣವಾದ ಜ್ಞಾ

* * *

ಮಾಣಲಕ್ಷಣಸ್ವಸ್ಯಾದಿಂದ್ರಿಯಾದಿ ಪ್ರಮಾಣತಾ || ೫ || ಅಕ್ಷೋಭ್ಯೋಹಿ ಪರಾವೃತ್ತಂ ಪರೊಕ್ಷಂಶ್ರುತಮಿಪ್ಯತೆ | ಯಥಾತಥಾಸ್ಮೃತಿಸ್ಸಂಜ್ಞಾಚಿಂತಾಚಾಭಿನಿಯೊಧಿಕಂ || ೬ || ಅವಗ್ರಹಾದಿವಿಜ್ಞಾನ ಮಕ್ಷಾದಾತ್ಮಾಭಿಧಾನತಃ ಪರಾವೃತ್ತತಮ್ನಾತಂಪ್ರತ್ಯಕ್ಷಮಪಿ ದೇಶತಃ || ೭ || ಪ್ರತ್ಯಕ್ಷ ಲಕ್ಷಣಂಪ್ರಾಹುಃಸ್ಪಷ್ಟಂಸಾಕಾರಮಂಜಸಾ | ದ್ರವ್ಯಪರ್ಯ್ಯಾಯ ಸಾಮಾನ್ಯಂವಿಶೆಷಾತ್ಮಾರ್ತ್ಥವೆದನು || ೮ || (ಇತಿ ಪ್ರಮಾಣಲಕ್ಷಣಂ ಸಂಪೂರ್ಣಮ್‌) ಸಧರ್ಮ್ಮಣೈವ ಸಾಧ್ಯಸೃಸಾಧರ್ಮ್ಮ್ಯಾದವಿರೋಧತಃ | ಸ್ವಾದ್ವಾದಪ್ರವಿಭಕ್ತಾರ್ತ್ಥ ವಿಶೇಷವ್ಯಂಜಕೊನಯಃ || ೯ || ಸಂಕ್ಷಪಾ

ನಕ್ಕೆ, ಇಂದ್ರಿಯ ಮೊದಲಾದದ್ದು, ಪ್ರಮಾಣಭಾವವಾಗುತ್ತಿದೆ || ೫ || ಇಂದ್ರಿಯಗಳ ದೆಶೆಯಿಂದ ಪರಾವೃತ್ತವಾದಂಥಾ ಶ್ರುತಜ್ಞಾನವು, ಸ್ಮೃತಿಚಿಂತಾ, ಅಭಿನಿಬೋಧಿಕವೆಂಬ ಮತಿಜ್ಞಾನ ದೋಪಾದಿಯಲ್ಲಿ ಪರೋಕ್ಷವಾದಂಥಾದ್ದಾಗಿದೆ || ೬ || ಅವಗ್ರಹಾದಿ ವಿಜ್ಞಾನವು, ಇಂದ್ರಿಯ ದ್ದೆಶೆಯಿಂದಲೂ, ಆತ್ಮಾಭಿಧಾನದ್ದೆಶೆಯಿಂದಲೂ ಸುತ್ತಲ್ಪಟ್ಟ ಭಾವದಿಂದ ದೇಶತಃ ಪ್ರತ್ಯಕ್ಷಜ್ಞಾನ ವಿಂತೆಂದು, ಹೇಳಲ್ಪಟ್ಟಿತು || ೭ || ದ್ರವೃಪರ್ಯ್ಯಾಯ ಸಾಮಾನ್ಯ ವಿಶೇಷಾತ್ಮ ಪದಾರ್ತ್ಥ ತಿಳಿವಳಿಕೆವುಳ್ಳಂಥ ಶೀಘ್ರವಾಗಿ ಪ್ರಕಾಶ ಉಳ್ಳಂಥ ಆಕಾರದೊಡನೆ ಕೂಡಿದಂಥಾ ಪ್ರಮಾಣವು ಪ್ರತ್ಯಕ್ಷ ಲಕ್ಷಣ ಉಳ್ಳಂಥಾದ್ದು || ೮ || ಇತಿ ಪ್ರಮಾಣ ಲಕ್ಷಣಂಸಂಪೂರ್ಣಂ (ಅಥ ನಯಲಕ್ಷಣಂ) ಸಮಾನ ಧರ್ಮಉಳ್ಳ ಪದಾರ್ತ್ಥದಿಂದಲೇ, ಸಾಧೃಪದಾರ್ತ್ಥದ ಸಮಾನ ಧರ್ಮ್ಮತ್ವದ್ದೆಶೆಯಿಂದ, ವಿರೋಧವಿಲ್ಲದೆ ಇರುವದರ ದೆಶೆಯಿಂದ ಸ್ಯಾದ್ವಾದದಿಂದ ವಿಭಾಗ ಮಾಡಲ್ಪಟ್ಟ ವಿಶೇಷಾರ್ತ್ಥವನ್ನು ಪ್ರಕಾಶ ಮಾಡುವಂಥಾದ್ದೇ ನಯವು ||೯ || ದ್ರವ್ಯ ಪರ್ಯ್ಯಾಯ ಗೋಚರಗಳಾದಂಥ ನಯಗಗಳು, ಸಂಕ್ಷೇಪದ್ದೆಶೆಯಿಂದಲೂ ವಿಶೇಷದಿಂದ ಎರಡು ಆದಂಥಾವುಗಳು, ದ್ರವ್ಯಾರ್ತ್ಥಿಕ ನಯವೂ ವ್ಯವಹಾರವೇ ಕೊನೆಯಾದಂಥಾದ್ದು, ಅಂದರೆ (ತಾತ್ವಾರ್ತ್ಥ ಸೂತ್ರದಲ್ಲಿ. ಸೂ || ನೈಗಮಸಂಗ್ರಹವ್ಯವಹಾರ ಋಜಿ ಸೂತ್ರಶಬ್ದ ಸಮಾಭಿರೂಡೈವಂಭೂತಾ ವಯಾಃ) ಎಂತ ಹೇಳಿ ಇರುವದರಿಂದ, ನೈಗಮಗಳಿಂತೆಂದು ಹೇಳಲ್ಪಡುತ್ತಲಿವೆ. ಅದಕ್ಕೆ ಅನ್ಯವಾದಂಥ ಋಜಿಸೂ

* * *

ದ್ವಾವಿಶೆಷಣದ್ರವ್ಯಪರ್ಯ್ಯಾಯಗೊಚರೌ | ದ್ರವ್ಯಾರ್ತ್ಥೊವ್ಯವಹಾರಾಂತಃ ಪರ್ಯ್ಯಾಯಾರ್ತ್ಥ ಸ್ತತೊಪಠಃ || ೧೦ || ವಿಸ್ತರೆಣತು ಸಪ್ತೈತೆ ವಿಜ್ಞೆಯೊನೈಗಮಾದಯಃ | ತಥಾತಿವಿಸ್ತರೆಣೈತದ್ಭೆದಾಸ್ಸಂಖ್ಯಾತವಿಗ್ರಹಾ || ೧೧ || ನಯೊನಯೌನಯಾಶ್ಚತಿವಾ ಕ್ಯಭೆದನಯೊಜಿತಾಃ | ನೈಗಮಾದಯ ಇತ್ಯೇವಂಸರ್ವ್ವಸಂಖ್ಯಾಭಿ ಸೂಚನಾನ್ || ೧೨ || ನಿರುಕ್ತ್ಯಾಕ್ಷಣಂ ಲಕ್ಷ್ಯಂತತ್ಸಾಮಾನ್ಯವಿಶೇಷತಃ | ನೀಯತೆಗಮ್ಯತೆಯೆನಶ್ರು ತಾರ್ತ್ಥಾಂಶಃಸನೊನಯಃ || ೧೩ || ತದಂಶೊದ್ರವೃಪರ್ಯ್ಯಾಯಲಕ್ಷಣೌ ಸವ್ಯಪೆಕ್ಷಣೌ | ನೀಯತೆತುಯಕಾಭ್ಯಾಂತೌ ನಯಾವಿತಿವಿನಿಶ್ಚಿತೌ || ೧೪ || ಗುಣಃಪರ್ಯ್ಯಾಯೇವಾತ್ರಸಂಭಾವಿವಿಭಾವಿತಃ | ಇತಿತದ್ಗೊಚರೊನಾನ್ಯಸ್ತೃತೀಯೊರ್ತಿ ಗುಣಾರ್ತಿಕಃ || ೧೫ || ಪ್ರಮಾಣಗೊಚರಾ

* * *

ತ್ರ, ಶಬ್ದ, ಸಮಾಭಿರೂಢ, ಏವಂಭೂತವೆಂಬ ನಾಲ್ಕು ನಯವು ಪರ್ಯಾಯಾರ್ಥಿಕ ನಯವು || ೧೦ || ವಿಸ್ತಾರದಿಂದ ಈ ನೈಗಮಾದಿ ನಯಗಳು, ಏಳುಪ್ರಕಾರವಾಗಿ ತಿಳಿಯತಕ್ಕವುಗಳು, ಹಾಗೆ ಅತಿವಿಸ್ತಾರದಿಂದ ಈ ನಯಭೇದಗಳು ಸಂಖ್ಯಾತ ಭೇದವುಳ್ಳಂಢಾಮಗಳು || ೧೧ || ನಯಮ, ಎರಡು ನಯಗಳು ಅನೇಕನಯಗಳು ಇಂತೆಂದು ವಾಕ್ಯಭೇದದಿಂದ ಪ್ರಯೋಗಿಸಲ್ಪಟ್ಟಂಥಾವುಗಳು, ಸರ್ವಸಂಖ್ಯೆಯನ್ನು ಸೂಚನೆ ಮಾಡುವದರ ದೆಶೆಯಿಂದ ನೈಗಮ ಮೊದಲಾದವುಗಳು ಆಗುತ್ತವೆ || ೧೨ || ಅದರ ಸಾಸಾಮಾನ್ಯ ವಿಶೇಷ, ದ್ದೆಶೆಯಿಂದ, ನಿರುಕ್ತಿಯಿಂದ ಲಕ್ಷಣವು ತಿಳಿಯುವದಕ್ಕ ಯೋಗ್ಯವಾದಂಥಾದ್ದು. ನಿರುಕ್ತಿ ಹ್ಯಾಗೆಂದರೆ, ಯಾತರಿಂದಶಾಸ್ತ್ರಾಂಶೆಯು, ನೀಯತೆ, ಅಂದರೆ, ತಿಳಿಯಲ್ಪಡುತ್ತಲಿಧೆಯೊ, ಅದೇ ನಮಗೆ ನಯವು || ೧೩ || ವ್ಯಪೇಕ್ಷೆಯೊಡನೆ ಕೂಡಿದಂಥಾ ದ್ರವ್ಯ ಪರ್ಯಾಯ ಲಕ್ಷಣಗಳುಳ್ಳಂಥ ಅದರ ಅಂಶೆಗಳು, ಯಾವುಗಳದೆಶೆಯಿಂದ, ಪಡೇಸಲ್ಪಡುತ್ತಲಿವೆಯೊ, ಅವೇ ನಯಗಳೆಂದು ನಿ‌ಶ್ಚಯಿಸಲ್ಪಟ್ಟವು || ೧೪ || ಈ ನಯದಲ್ಲಿ ಸಹ ಭಾವಿಯಾದಂಥ, ವಿಭಾವಿಯಾದಂಥ, ಗುಣವು, ಪರ್ಯಾಯವೇಯೆ ಹೀಗೆಂತೆಂದು, ತದ್ಗೋಚರವಾದಂಥ, ಗುಣಾರ್ತ್ಥಿಕವು, ಮತ್ತೊಂದು ಪ್ರಯೋಜನ ಉಳ್ಳಂಥಾದ್ಧಾಗಿ ಮೂರನೇ ದಾಗೋದಿಲ್ಲ. ಅಂದರೆ, ಗುಣವೇ ಪರ್ಯಾಯವಾಗುತ್ತಿದೆ, ಆದ್ದರಿಂದ ಗುಣಾರ್ಥಿಕನಯವಿಂತೆಂದು ಬೇರೆಹೇಳತಕ್ಕ ಅವಶ್ಯಕವಿಲ್ಲವೆಂತ ತಾತ್ಪರ್ಯ || ೧೫ ||

* * *

ತ್ಥಾಂಶಾನೀಯಂತೆಯ್ಯೆರನೆಕಥಾ | ತೆನಯಾಇತಿವಿಖ್ಯಾತಾಜಾತಾಮೂಲನ ಯಾದ್ವಯಾತ್ || ೧೬ || ದ್ರವ್ಯಪರ್ಯ್ಯಾಯ ಸಾಮಾನ್ಯ ವಿಶೇಷಪರಿಬೊಧಕಾಃ | ನಮೂಲಂನೈಗಮಾದೀನಾಂ ನಯಾಶ್ಚತ್ವಾರ ಏವತು || ೧೭ || ತತ್ರಸಂಕಲ್ಪಮಾತ್ರ ಸ್ಯಗ್ರಾಹಕೊನೈಗಮೊನಯಃ | ಸೊಪಾದಿರಿತ್ಯಶುರ್ದ್ಧದ್ರವ್ಯಾರ್ತ್ಥಸೃಸ್ಯಭಿದಾಮತಃ || ೧೮ || ಸಂಕಲ್ಪೊನಿಗಮಸ್ತತ್ರಭವೊಯಂತತ್ಪ್ರಯೊಜನಃ | ಯಥಾಪ್ರಸ್ಥಾದಿಸಂಕಲ್ಪಸ್ತ ಧಬಿಪ್ರಾಯ ಇಷ್ಯತೆ || ೧೯ ||

(ಸಂಗ್ರಹ ನಯ) ಏಕಾರ್ಥೇನವಿಶೇಷಾಣಾಂಗ್ರಹಣಂಸಂ

* * *

ಮೂಲ ನಯವಾದಂಥ ಆ ದ್ರವ್ಯಾರ್ತ್ಥಿಥಿಕ ಪರ್ಯಾಯಾರ್ಥಿಕವಾದ ಎರಡು ನಯದ್ದೆಶೆಯಿಂದ ಪ್ರಮಾಣದಿಂದ ತಿಳಿಯಲ್ಪಟ್ಟ ಅರ್ತ್ಥಾಂಶೆಗಳು ಅನೇಕಪ್ರಕಾರವಾಗಿ ಯಾವುಗಳಿಂದ ಪಡೇಸಲ್ಪಡುತ್ತಲಿವೆಯೋ ಅವುಗಳು ನಯಗಳಿಂತೆಂದು ಪ್ರಶಿದ್ಧವಾದಂಥಾವುಗಳು || ೧೬ || ದ್ರವ್ಯಪರ್ಯಾಯ ಸಾಮಾನ್ಯ ವಿಶೇಷ ಬೋಧಕಗಳಾದಂಥ ಆ ಋಜು ಸೂತ್ರಾದಿ ನಾಲ್ಕು ನಯಗಳು ನೈಗಮಾದಿ ನಯಗಳಿಗೆ ಕಾರಣವಾದಂಥಾದ್ದಲ್ಲ || ೧೭ || ಸಂಕಲ್ಪ ಮಾತ್ರವನ್ನು ಗ್ರಹಿಸತಕ್ಕ ನಯವು ನೈಗಮವೆಂತ ಅನ್ನಿಸಿಕೊಳ್ಳುತ್ತದೆ. ಉಪಾಧಿಯೊಡನೆ ಕೂಡಿದಂಥಾದ್ದು ಇಂತೆಂದು ದ್ರವ್ಯಾರ್ಥಕ್ಕೆ ಹೆಸರು ಇದು ಸಮ್ಮತವಾದಂಥಾದ್ದು || ೧೮ || ಅನಯದಲ್ಲಿ ಸಂಕಲ್ಪವು, ಅಂದರೆ ಮನಸ್ಸಿನಿಂದ ಕೋರಲ್ಪಟ್ಟದ್ದು ನಿಗಮವೆಂತ ಅನ್ನಿಶಿಕ್ಕೊಳ್ಳುತ್ತಲಿದೆ. ಅದರಲ್ಲಿ ಹುಟ್ಟಿದಂಥ ಅದರ ಪ್ರಯೋಜನ ಉಳ್ಳಾಂಥಾದ್ದು ಹ್ಯಾಗೋ ಹಾಗೆ, ಅದರ ಅಭಿಪ್ರಾಯವಾದಂಥ, ಪ್ರಸ್ಥಾದಿಸಂಕಲ್ಪವು, ಅಪೇಕ್ಷಿಸಲ್ಪಡುತ್ತದೆ. ಅಂದರೆ, ಆಯುಧಪಾಣಿಯಾಗಿ ಹೋಗುವ ಮನುಷ್ಯನನ್ನು, ಎಲ್ಲಿ ಹೋಗುತ್ತೀಯೊ ಎಂತ ಕೇಳಿದರೆ, ತಾನು ಗಿಡುವಿಗೆಹೊಗಿ, ಮರಾಕಡಿದು, ತರುವದನ್ನು ಹೇಳದೇ, ತನಗೆ ಮುಖ್ಯೋದ್ದೇಶ್ಯವಾದ, ಬಳ್ಳಕ್ಕೆ ಎಂತ ಹೇಳುತ್ತಾನೆ, ಬಳ್ಳವನ್ನು ಆದಿವಸ ಮಾಡುವದಿಲ್ಲ. ಆದಿವಸಮರ ಮಾತ್ರವನ್ನು ತರುತ್ತಾನೆ, ಆದಾಗ್ಯು, ತನ್ನ ಮುಖ್ಯ ಸಂಕಲ್ಪವನ್ನು ಹೇಳುತ್ತಾನೆ, ಆದ್ದರಿಂದ ಇದು ಉಪಾಧಿ ವಿಶಿಷ್ಟವಾದದ್ದಾಗಿಧೆ || ೧೯ || ಇತಿ ನೈಗಮನಯಃ

(ಅಥಸಂಗ್ರಹನಯಃ) ಸ್ವಜಾತಿಗೆ ವಿರೋಧವಿಲ್ಲದೆ ಇರುವದರಿಂದ ಕಾಣಲ್ಪಟ್ಟಂಥಾದ್ದರಿಂದಲೂ, ಇಷ್ಟವಾದ್ದರಿಂದಲೂ, ವಿಶೇಷಗಳಿಗೆ ಏ

* * *