ಟ್ಯೊಸ್ಯಸಂಮಿತಿಃ | ತದಾಸ್ಮಿನ್‌ಭಾರತೆವರ್ಷೆ ಮಧ್ಯಭೋಗಭುವಾಂಸ್ಥಿತಿಃ || ೧೫ || ತದಾಮರ್ತ್ತ್ಯಾಹ್ಯಮ ರ್ತ್ಯಾಭಾದ್ವಿಪಲ್ಯೋಪಮಜೀವಿತಾಃ | ಚತುಸ್ಸಹಸ್ರಚಾಪೊಚ್ಚ ವಿಗ್ರಹಾಃಶುಭಚಿಪ್ಪಿತಾಃ || ೧೬ || (ತೃತೀಯಕಾಲ) ತತಃಕ್ರಮಣಕಾಲೆಸ್ಮಿನ್ನವಸರ್ಪ್ಪ ತ್ಯನುಕ್ರಮಾತ್ | ಪ್ರಹೀಣಾವೃಕ್ಷವಿರ್ಯ್ಯಾದಿ ವಿಶೇಷಾಃಪ್ರಾಕ್ತನಾಯಥಾ || ೧೭ || ಜಘನ್ಯಭೊಗ ಭೂಮೀನಾಂಮರ್ಯ್ಯಾದಾ ವಿರಭೂತ್ತದಾ | ಯಥಾವಸರಸಂಪ್ರಾ ಪ್ತಸ್ತೃತೀಯಂಕಾಲಪರ್ಯ್ಯಯಃ || ೧೮ || ಸಾಗರೊಪಮಕೋಟೀನಾಂ ಕೋಟ್ಯೌದ್ವೆಲಬ್ಧಸಂಜ್ಞಕೌ | ಕಾಲೆಸ್ಮಿನ್‌ಭಾರತೆವರ್ಷ ಮರ್ತ್ಯಾಃಪಲ್ಯೊಪಮಾಯುಷಃ(ಪಥಮಮನು) ತತಸ್ತೈತೀಯಕಾಲೆಸ್ಮಿನ್ ವ್ಯತಿಕ್ರಾಮತ್ಯನುಕ್ರಮಾತ್ | ಪಲ್ಯೊಪಮಾಷ್ಟಭಾಗಸ್ರುಯದಾಸ್ಮಿನ್ಪರಿ ಶಿಷ್ಯತೆ ಕಲ್ಪಾನೊಕಹ ವೀರ್ಯಾಣಾಂಕ್ರಮಾದೆವಪರಿ ಚ್ಯುತೌ | ಜ್ಯೊತಿರಂಗಾಸ್ತದಾವೃಕ್ಷಾಗತಾಮಂದ ಪ್ರಕಾಶತಾಂ || ೨೧ || ಪುಷ್ಪ

* * *

ಈ ಭರತಕ್ಷೇತ್ರದಲ್ಲಿ, ಮಧ್ಯಮಭೋಗ ಭೂಮಿಗಳಸ್ಥಿತಿಯು || ೧೫ || ಆಗ ಮನುಷ್ಯರುಗಳು ದೇವತೆಗಳಕಾಂತಿವುಳ್ಳಂಥಾವರುಗಳು, ಎರಡು ಪಲ್ಯೋಪಮಯು ಷ್ಯಸ್ಥಿಆತಿಉಳ್ಳಂಥಾವರುಗಳು ನಾಲ್ಕು ಸಾವಿರ, ಚಾಫೋತ್ಸೇದ ಉಳ್ಳಂಥಾವರುಗಳು ಶುಭವ್ಯಾಫಾರ ಉಳ್ಳಂಥಾವರುಗಳು || ೧೬ || ಮೂರನೇಕಾಲ ಅನಂತರ ಕ್ರಮವಾಗಿ ಈ ಕಾಲವು ಕಳಿಯುತ್ತಿರಲಾಗಿ, ಅನುಕ್ರಮವಾಗಿವೃಕ್ಷ ವೀರ್ಯ್ಯಾದಿ ವಿಶೇಷಗಳು ಪ್ರಾಚೀನಗಳು ಹ್ಯಾಗೋಹಾಗೆ ಕಡಮೆಯಾ ದಂಥಾವುಗಳು || ೧೭ || ಆ ಸಮಯದಲ್ಲಿ ಜಘನ್ಯಭೋಗ ಭೂಮಿಗಳ ಮರ್ಯ್ಯಾದೆಯು ಹುಟ್ಟಿತು.ಸಮಯವನ್ನು ಅತಿಕ್ರಮಿಸದೆ ಮೂರನೇ ಕಾಲ ಪರ್ಯ್ಯಾಯವು ಪಡೆಯಲ್ಪಟ್ಟಿತು || ೧೮ || ಪಡೆಯಲ್ಪಟ್ಟ ಸಂಜ್ಞೆಯುಳ್ಳಂಥ ಎರಡು ಸಾಗರೋಪಮ ಕೋಟಿಗಳ ಕೋಟಿಗಳು ಆ ಸಮಯದಲ್ಲಿ ಭರತಕ್ಷೇತ್ರದಲ್ಲಿ ಮನುಷ್ಯರುಗಳು ಪಲ್ಯೋಪಮ ಆಯುಷ್ಯವುಳ್ಳಂಥಾವರುಗಳು || ೧೯ || ಅನಂತರದಲ್ಲಿ ಈ ತೃತೀಯಕಾಲವು ಕ್ರಮವಾಗಿ ಕಳಿಯುವಂಥಾದ್ದಾಗುತಿರಲೀಕಾಗಿ ಯಾವ ಸಮಯದಲ್ಲಿ ಪಲ್ಯೋಪಮಾಷ್ಪಭಾಗವು ಉಳಿಯುತ್ತಿದೆಯೋ || ೨೦ || ಕ್ರಮವಾಗಿ ಕಲ್ಪವೃಕ್ಷಗಳು ವೀರ್ಯ್ಯಗಳು ಇವುಗಳಿಗೆ ಪರಿಚ್ಯತಿ ಉಂಟಾಗುತ್ತಿರಲು ಆಗ ಜ್ಯೊತಿರಂಗ ಕಲ್ಪವೃಕ್ಷಗಳು ಮಂದಪ್ರಕಾಶತ್ವವನ್ನು ಪಡದವು || ೨೧ || ಆ

* * *

ದಂತಾವಥಾಷಾಢ್ಯಾಂಪಾರ್ನ್ನಮಾಸ್ಯಂಸ್ಫುರತ್ಪ್ರಭೌ | ಸಾಯಾಹ್ನ ಪ್ರಾದುರಾಸ್ತಾಂತೌಗಗನೊಭಯ ಭಾಗಯೊಃ || ೨೨ || ಫಾರ್ಣ್ನ ಮಾಸೀವಿಲಾಸಿನ್ಯಾಕ್ರೀಡ್ಯಮಾನೌಸಮುಜ್ವಲೌ | ಪರಸ್ಪರಕರಾಶ್ಲಿಷ್ಟೌ ಜಾತುಷಾವಿವಗೊಳಕೌ || ೨೩ || ಜಗದ್ಗೃಹಮಹಾದ್ಯಾರಿವಿನ್ಯಸ್ತಾಕಾಲಭೂಭೃತಃ | ಪ್ರತ್ಯಗ್ರಸ್ಯಪ್ರವೆಶಾಯ ಕುಂಭಾವಿವಹಿರಣ್ಮಯೌ || ಪ್ರತಿಶೃತಿರಿತಿ ಖ್ಯಾತಃಸ್ತದಾಕುಲಧರೊಗ್ರಿಮಃ | ಭಿಭ್ರಲ್ಲೊಕಾತಿಗಂತೆಜಃ ಪ್ರಜಾನಾಂನೆತ್ಪ ಮುದ್ಬಭೌ || ೨೫ || ಪಲ್ಯಸ್ತದಶಮೊಭಾಗತಸ್ಯಾಯುರ್ಜಿನದರ್ಶಿ ತಂಧನುಸ್ಸಹಸ್ರಮು ತ್ಸೆಧಃಶತೈರಧಿಕಮಷ್ಟಭಿಃ || ೨೬ || ಜಾಜ್ವಲ್ಯಮಾನ ಮಕುಟೊಲಸನ್ಮಕರಕುಂಡಲಃ | ಕನಾದ್ರಿರಿ ವೊತ್ತುಂಗೊರ್ಭಿಬ್ರಾಣೋಹಾರನಿಝರಂ || ೨೭ || ನಾನಾಭರಣಭಾ ಭಾರಭಾಸುರೊದಾರವಿಗ್ರ

* * *

ನಂತರದಲ್ಲಿ ಆಷಾಢ ಘಾರ್ಣ್ನಮಾಸಿಯಲ್ಲಿ ಸಾಯಂಕಾಲದಲ್ಲಿ ಪ್ರಕಾಶಿಸುತ್ತಿರುವಂಥ ಪ್ರಭೆ ಉಳ್ಳಂಥ ಸೂರ್ಯ್ಯಚಂದ್ರುಗಳು ಆಕಾಶದ ಉಭಯ ಪಾರ್ಶ್ವಗಳೊಳಗೆ, ಆವಿರ್ಬ್ಬವಿಸಿದರು || ೨೨ || ಘಾರ್ಣ್ನಮಾಸೀ ಎಂಬ ಸೂಳೆಯ ಪರಸ್ಪರಕೈಯಿಗಳಿಂದ ಹಿಡಿಯಲ್ಪಟ್ಟಂಥ ಅಡುತ್ತಿರುವಂಥ ಪ್ರಕಾಶಿಸುತ್ತಿರುವಂಥ ಅರಗಿನ ಗೋಳಗಳೋಪಾದಿಯಲ್ಲಿ ಪ್ರಕಾಶಿಸಿದವು || ೨೩ || ನೂತನನಾದಂಥ ಕಾಲವೆಂಬ ಧೊರೆಯ ಪ್ರವೇಶಕ್ಕೋಸ್ಕರ ಲೋಕವೆಂಬ ಮನೆಯ ಮಹಾದೊಡ್ಡ ಬಾಗಿಲಲ್ಲಿ ಇರಸಲ್ಪಟಂಥ ಸುವರ್ಣ್ನ ವಿಕಾರಗಳಾದಂಥ ಕುಂಭಗಳೋ ಪಾದಿಯಲ್ಲಿಕಾಣಲ್ಪಟ್ಟವು || ೨೪ || ಆ ಸಮಯದಲ್ಲಿ ಲೋಕಾತಿಕ್ರಮವಾದಂಥ ತೇಜಸ್ಸನ್ನು ಧರಿಸಿಕ್ಕೊಂಡಿರುವಂಥ ಪ್ರತಿಶ್ರುತಿ ಇಂತೆಂದು ಪ್ರಶಿದ್ಧನಾದಂಥ ಪ್ರಥಮ ಮನುವು ಪ್ರಜೆಗಳನೇತ್ರವನ್ನು ಕುರಿತು ಉತ್ಕೃಷ್ಟವಾಗಿ ಪ್ರಕಾಶಿಸಿತು || ೨೫ || ಆತನ ಆಯುಷ್ಯವು ಪಲ್ಯದಹತ್ತನೇಭಾಗವಾಗಿ ತೀರ್ಥಕರಿಂದತೋರಿಸಲ್ಪಟ್ಟಿತು ಎಂಟುನೂರು ಗಳಿಂದ ಅಧಿಕವಾದಂಥ ಧನುಸ್ಸಹಸ್ರ ಉತ್ಸೇಧವು || ೨೬ || ಪ್ರಕಾಸಿಸುತ್ತಿರೂವಂಥ ಕಿರೀಟವುಳ್ಳಂಥಾವನು ಹೊಳಯುತ್ತಿರೂವಂಥ ಮಕರಕುಂಡಲ ವುಳ್ಳಂಥಾಮೇರು ಪರ್ವತದೋಪಾದಿಯಲ್ಲಿ ಉನ್ನತನಾದಂಥಾವನು ಹಾರವೆಂಬ ನದಿಯನ್ನು ದರಿಶಿಕೊಂಡಿರುವಂಥಾವನು || ಅನೇಕವಿಧವಾದ ಆಭರಣಗಳು ಕಾಂತಿಯ ಅತಿಶಯಗಳಿಂದ ಹೊಳೆಯುತ್ತಿರುವಂಥ ದೊಡ್ಡದಾಗ ಶರೀರವುಳ್ಳಂಥಾವನು ಸ್ವಕೀಯವಾದಂಥ ಮೇ

* * *

ಹಃ | ಪ್ರೊತ್ಸರ್ಪ್ಪತ್ತೆಜಸಾಸ್ವೆನನಿರ್ಬ್ಬರ್ತ್ಸಿತರವಿಗ್ರಹಃ || ೨೮ || ಮಹಾನ್ ಜಗದ್ಗೃಹೊನ್ಮಾನಮಾನದಂಡ ಇವೊಚ್ಛ್ರಿತಃ | ದಧಜ್ಜನ್ಮಾಂತರಾಭ್ಯಾಸ ಜರಿತಂಬೊದಮಿದ್ದಧೀಃ || ೨೯ || ಸ್ಫುರದ್ದಂತಾಂ ಶುಸಲಿಲೈರ‍್ಮುಹುಃಪ್ರಕ್ಷಾಲಯ ನ್ದಿಶಃ | ಪ್ರಜಾನಾಂಪ್ರೀಣನಂವಾಕ್ಯಂ ಸಾಧಂರಸಮಿವೊದ್ಗಿರನ್ || ೩೦ || ಅದೃಷ್ಟಪೂ ರ್ವ್ವೌತೌದೃಷ್ಟ್ಯಾಸಭೀರ್ತಾಭೊಗಭುಮಿಜಾನ್ | ಭೀತೆರ್ನ್ನಿ ವರ್ತ್ತಯಾಮಾಸತ ತ್ಸ್ವರೂಪಮಿತಿಬ್ರುವನ್ || ೩೧ || ಎತೌತೌಪ್ರತಿದೃಶ್ಯೆತೆ ಸೂರ್ಯ್ಯಾಚಂದ್ರಮಸೌಗ್ರಹೌ | ಜ್ಯೊತಿರಂಗ ಪ್ರಭಾಪಾಯಾತ್ಕಾಲ ಹ್ರಾಸವಶೊದ್ಭವತ್ || ೩೨ || ಸದಾಪ್ಯಧಿನಬೊ ಭಾಗಂಭ್ರಾಮ್ಯ ತೊಮೂಮ ಹಾದ್ಯುತೀ | ನವಸ್ತಾಭ್ಯಾಂಭಯಂಕಿಂ ಚಿತ್ತತೊಮಾಭೈ ಷ್ಟಭದ್ರಕಾಃ || ೩೩ || ಇತಿತದ್ವಚನಾತ್ತೆಷಾಂಪ್ರತ್ಯಾ

* * *

ಲಕ್ಕೆ ಹೊರಡುತ್ತಿರುವಂಥ ತೇಜಸ್ಸಿನಿಂದ, ಧಿಕ್ಕರಿಸಲ್ಪಟಂಥ ಸೂರ್ಯ ಗ್ರಹವುಳ್ಳಂಥಾವನು || ೨೮ || ದೊಡ್ಡವನು ಜಗತ್ತೆಂಬಮನೆಯನ್ನು ಅಳೆಯುವ ಅಳತೇ ಕೋಲಿನೋಪಾದಿಯಲ್ಲಿ ಉನ್ನತನಾದಂಥಾವನು, ಜನ್ಮಾಂತರಾಭ್ಯಾಸದಿಂದ ಹುಟ್ಟಿ ದಂಥ ಜ್ಞಾನವನ್ನು ದರಿಸಿಕ್ಕೊಂಡಿರುವಂಥಾವನು ಪ್ರಶಸ್ತವಾದ ಬುದ್ಧಿಉಳ್ಳಂಥಾವನು || ೨೯ || ಹೊಳೆಯುತ್ತಿರೂವಂಥ ಹಲ್ಲುಗಳಕಾಂ ತಿಯೆಂಬಂಥ ಜಲಗಳಿಂದ ಭಾರಿಭಾರಿಗೂ ದಿಕ್ಕುಗಳನ್ನು ತೊಳೆಯುವಂಥಾವನಾಗಿ ಪ್ರಜೆಗಳಿಗೆ ಸಂತೋಷಕರ ವಾದಂಥವಾಕ್ಕನ್ನು ಅಮೃತ ಸಂಬಂಧವಾಂಥ ರಸವನ್ನೋಪಾದಿ ಯಲ್ಲಿ ಹೇಳುವಂಥಾವನು || ೩೦ || ಪೂರ್ವದಲ್ಲಿ ಕಾಣಲ್ಪಡದೇ ಇರುವಂಥ ಆ ಸೂರ್ಯ ಚಂದ್ರರುಗಳನ್ನು ನೋಡಿ ಭಯಪಟ್ಟಂಥ ಭೋಗಭೂಮಿಯಲ್ಲಿ ಹುಟ್ಟಿದಂಥಾವರನ್ನು ಕುರಿತು ಆಪ್ರತಿಶ್ರತಿ ಮನವು ಹೀಗೆ ಹೇಳುವಂಥಾವನಾಗಿ ಭಯದ್ದೆಶೆಯಿಂದ ಹಿಂತಿರಿಗಿಸಿದನು || ೩೧ || ಆ ಈ ಸೂರ್ಯ ಚಂದ್ರರಾದಂಥ ಗ್ರಹಗಳು, ಕಾಲ ಕಡಮೆಯಾಗುವದರ ಅಧೀನದಿಂದ ಹುಟ್ಟಿದಂಥ ಜ್ಯೋತಿರಂಗ ಕಲ್ಪವೃಕ್ಷಗಳ ಪ್ರಭಾವಾಶದ್ದೆಶೆಯಿಂದ ಕಾಣಲ್ಪಡುತ್ತಾರೆ || ೩೨ || ಮಹಾಕಾಂತಿಉಳ್ಳಂಥ ಈ ಸೂರ್ಯ್ಯಚಂದ್ರರುಗಳು ಸರ್ವಕಾಲದಲ್ಲಿಯೂ ಕೂಡ ಆಕಾಶಭಾಗದಲ್ಲಿ ಸುತ್ತುವಾಡಾವರುಗಳು ಆ ಸೂರ್ಯ್ಯಚಂದ್ರರುಗಳಿಂದ ನಿಮಗೆ ಭಯವುಸ್ವಲ್ಪವೂ ಇಲ್ಲ ಆ ಕಾರಣದ್ದೆಶೆಯಿಂದ ಎಲೇ ಮಂಗಳ ಸ್ವರೂಪರಾದಂಥಾವರುಗಳಾ, ಹೆ

* * *

ಕ್ವಾಸೊಮಹಾನುಭೂತ್ | ಕ್ಷೆತ್ರೆಸೊತಃಪರಂಚಾಸ್ಮಿನ್ನಿಯೊಗಾನ್ವಾವಿನೊನ್ವಶಾತ್ || ೩೪ || ಪ್ರತಿಶ್ರುತಿರಯಂಧೀರೊಯನ್ನಃಪ್ರತ್ಯಶ್ರುಣೊದ್ವಚಃ | ಇತೀದಾಂಚಕ್ರಿರೆನಾಮ್ನಾತೇತಂ ಸಂಪ್ರೀತಮಾನಸಾಃ || ೩೫ || ಅಹೊಧೀಮನ್ ಮಹಾಭಾಗಚಿರಂಜೀವಪ್ರಶೀದನಃ | ಯಾನಪಾತ್ರಾಯಿತಂಯೆ ನತಯಾಸ್ಮದ್ವ್ಯಸ ನಾರ್ಣ್ನವೆ || ೩೬ || ಇತಿಸ್ತುತ್ವಾರ್ಯ್ಯಕಾಸ್ತೆತಂಸತ್ಕೃತ್ಯಚಪನಃಪುನಃ | ಲಬ್ದಾನುಜ್ಞಾಸ್ತತಃಸ್ವಂಸ್ವಮೊಕೊಜಗ್ಮುಸಜಾನಯಃ || ೨೭ || ಮಾನೌಯಾತೆ ದಿವಂತಸ್ಮಿನ್ಕಾಲೆಗಲತಿ ಚಕ್ರಮಾತ್ | ಮನ್ವಂತರಮಸಂಖ್ಯೆಯಾ ವರ‍್ಷಿಕೊಟೀರ್ವ್ಯತೀತ್ಯಚ (ದ್ವಿತೀಯಮನು) || ೩೮ || ಸನ್ಮತಿಸ್ಸನ್ಮತೀರ್ನ್ನಾಮ್ಮಾ ದ್ವಿತೀಯೊಭೂನ್ಮನುಸ್ತದಾ | ಪ್ರೌತ್ಸರ್ಪ್ಪದಂಶುಕಃ ಪ್ರಾಂಶುಶ್ಚಲತ್ಕಲ್ಪತರೂಪಮಃ || ೩೯ || ತಸ್ಯಾ

* * *

ದರಬೇಡಿ || ೩೩ || ಈ ಪ್ರಕಾರವಾಗಿ ಆ ಮನುವಿನ ಮಾತಿನದೆಶೆಯಿಂದ ಆ ಭೋಗಭೂಮಿಜರಿಗೆ ದೊಡ್ಡಸಮಾದಾನವುಆಯ್ತು, ಅನಂತರ ಆ ಮನುವು ಈ ಕ್ಷೇತ್ರದಲ್ಲಿ ಇಲ್ಲಿಂದಾ ಮುಂದೆ ಆಗತಕ್ಕಂಥಾ ನಿಯೋಗಗಳನ್ನು ಹೇಳಿದನು || ೩೪ || ಯಾವ ಕಾರಣದ್ದೆಶೆಯಿಂದ ನಮಗೆವಾಕ್ಯವನ್ನು ತಿಳಿಸಿದನೊ ಆದ್ದರಿಂದ ಈ ಧೀರನು ಪ್ರತಿಶ್ರುತಿ ಎಂಬ ಹೆಸರುಉಳ್ಳಂಥಾವನು ಎಂದು ಹೆಸರಿನಿಂದ ಸಂತುಷ್ಟ ಮನಸ್ಸುವುಳ್ಳಂಥಾವರಾಗಿ ಸ್ತೋತ್ರವನ್ನು ಮಾಡಿದರು || ೩೫ || ಅಹೋ ಬುದ್ಧಿ ಉಳ್ಳಂಥಾವನೇ ಮಹಾಭಾಗ್ಯ ಉಳ್ಳಂಥಾವನೇ ಬಹುಕಾಲಗಳಲ್ಲಿ ಜೀವಿಸು, ಯಾವ ಕಾರಣದ್ದೆಶೆಯಿಂದ ನಿನ್ನಿಂದ ನಮ್ಮ ವ್ಯಸನವೆಂಬ ಸಮುದ್ರದಲ್ಲಿ ಹಡಗಿನೊಪಾದಿಯಲ್ಲಿ ಆಚರಿಸೋಣವಾಯ್ತೊ ಆ ಕಾರಣದ್ದೆಶೆಯಿಂದ ನಮಗೆ ಪ್ರಸನ್ನನಾಗು || ೩೬ || ಭೋಗಭೂಮಿಯಲ್ಲಿ ಹುಟ್ಟಿದಂಥ ಆ ಆರ್ಯ್ಯರುಗಳು ಈ ಪ್ರಕಾರವಾಗಿ ಸ್ತೋತ್ರ ಮಾಡಿಬದಲಾಗಿ ಆ ಮನುವನ್ನು ಸತ್ಕರಿಶಿಪಡೆಯಲ್ಪಟ್ಟಂಥ ಆ ಮನುವಿನ ಅಪ್ಪಣೆಉಳ್ಳಂಥಾವರಾಗಿ ಹೆಂಡತೀರೊಡನೆ ಕೂಡಿದಂಥಾವರಾಗಿ ತಂಮತಂಮ ಮನೆಗಳನ್ನ ಪಡೆದರು ||೩೭ || ಆ ಮನುಸ್ವರ್ಗ್ಗವನ್ನು ಪಡದಂಥಾವನಾಗುತಿರಲೀಕಾಗಿ ಕ್ರಮವಾದಿ ಕಾಲವು ಕಳಿಯುತ್ತಿರಲಾಗಿಅಸಂಖ್ಯಾತವರ‍್ಷ ಕೋಟಿಗಳನ್ನು ಕೆಳಿದು ಮನ್ವಂತರವುಆಯ್ತು ||೩೮ || ಮಹಾಬುದ್ಧಿವುಳ್ಳಂಥ ಹೆಸರಿನಿಂದ ಸನ್ಮತಿ ಎಂಬಂಥ ಹೊರಡುತ್ತಿರೂವಂಥ ಹಲ್ಲುಗಳ ಕಾಂತಿವುಳ್ಳಂಥ ಉನ್ನತನಾದಂಥ ಸಂಚರಿಸುವಕಲ್ಪವೃ

* * *

ಯುರಮಮಪ್ರಖ್ಯಮಾಸೀತ್ಸಂಖ್ಯೆಯಹಾಯನಂ | ಸಹಸ್ವಂತ್ರಿಶತೀಯುಕ್ತ ಮುತ್ಸೆಧೊಧ ನುಷಾಂಮತಃ || ೪೦ || ಜ್ಯೊತಿರ್ವ್ವಿಟಪಿನಾಂಭೂಯೊ ಪ್ರಯಾಸೀತ್ಕಾಲೆನಮಂದಿಮಾ | ಪ್ರಹಾಣಾಭಿಮುಖಂ ತೆಜೆನಿರ್ವ್ವಾಸ್ಯತಿಹಿದೀಪವತ್ || ೪೧ || ನಭೊಂಗಣಮಥಾ ಪೂರ್ಯ್ಯತಾರಕಾಃಪ್ರಚಕಾಶಿರೆ | ನಾತ್ಯಂಧಕಾರೆಕ ಲುಷಾಂವೆಲಾಂಪ್ರಾಪ್ಯತಮೀಮುಖೆ || ೪೨ || ಅಕಸ್ಮಾತ್ತಾರ ಕಾದೃಷ್ಟ್ಯಾ ಸಂಭ್ರಾಂತಾನ್ ಭೊಗಭೂಭುವಃ | ಭೀತೊರ್ವ್ವಿ ಚಲಯಾವಾಸಪ್ರಾಣಿಹತ್ಯೆವಯೊಗಿನಃ || ೪೩ || ಸಸನ್ಮತಿರನು ಧ್ಯಾಯಕ್ಷಣಂ ಪ್ರಾವೊಚದಾರ್ಯ್ಯಕಾನ್‌ | ನೊತ್ಪಾತಃಕೊಪ್ಯ ಯಂಭದ್ರಾಸ್ತನ್ಮಾಗಾತಭಿಯೊವಶಿಂ || ೪೪ || ಏತಾಸ್ತಾಸ್ತಾರಕಾನಾಮತಚ್ಚ ನಕ್ಷತ್ರಮಂಡಲಂ | ಗ್ರಹಾಇಮೆಸದೊ ದ್ಯೊತಾಇದಂತಾರಕಿತಂನಭಃ || ೪೫ || ಜ್ಯೊತಿಶ್ಚಕ್ರಮಿದಂಶಶ್ವ

* * *

ಕ್ಷಕ್ಕೆ ಸಮಾನನಾದಂಥ ಎರಡನೇ ಮನವು ಅದನು || ೩೯ || ಅಮಮವೆಂಬ ಸಂಖ್ಯೆಉಳ್ಳಂಥ ಸಂಖ್ಯೆಯವರ್ಷವು ಆತನ ಆಯುಷ್ಯವು ಆಯಿತು. ಉನ್ನತವು ಮುನ್ನೂರು ಧನುಸ್ಸುಗಳೊಡನೆ ಕೂಡಿದಸಾವಿರವು (೧೩೦೦) ಆಗ ಸಮ್ಮತ ವಾದದ್ದು || ೪೦ || ಜ್ಯೋತಿರಂಗ ಕಲ್ಪವೃಕ್ಷಗಳಿಗೆ ಕಾಲದಿಂದ ಬಹಳವಾಗಿ ಮಾಂದ್ಯವು ಆಯಿತು. ಹಾನಿಗೆ ಅಭಿಮುಖವಾದತೇಜಸ್ಸು ದೀಪದೋಪಾದಿಯಲ್ಲಿ ಹೋಗುತ್ತಿದೆ ನಿಶ್ಚಯವು || ೪೧ || ಅನಂತರದಲ್ಲಿ ಅತ್ಯಂತ ಅಂಧಕಾರದಿಂದ ಕಪ್ಪಾದಂಥ ವೇಳೆಯನ್ನು ಪಡದು ರಾತ್ರಿಮುಖದಲ್ಲಿ ನಕ್ಷತ್ರಗಳು ಅಂತರೀಕ್ಷ ಪ್ರದೇಶವನ್ನು ತುಂಬಿ ಪ್ರಕಾಸಿಸಿದವು || ೪೨ || ಅಕಸ್ಮಾತ್ತಾಗಿ ನಕ್ಷತ್ರಗಳನ್ನು ನೋಡಿ ಅತ್ಯಂತ ಭ್ರಾಂತರಾದಂಥ ಭೊಗಭೂಮಿಜರನ್ನು ಪ್ರಾಣಿವಧೆಯಿಂದ ಯೋಗಿಗಳೋಪಾದಿಯಲ್ಲಿ ಭಯದ್ದೆಶೆಯಿಂದ ಚಲನೆ ಮಾಡಿಸಿನು || ೪೩ || ಆ ಸನ್ಮತಿ ಮನುವು ಕ್ಷಣಕಾಲದಲ್ಲಿ ದ್ಯಾನವನ್ನು ಮಾಡಿ ಭೋಗಭೂಮಿಜರನ್ನು ಕುರಿತು ಹೇಳಿದನು. ಇದು ಯಾವ ಉತ್ಪಾತವು ಅಲ್ಲ. ಆದ್ದರಿಂದ ಎಲೇ ಮಂಗಳಸ್ವರೂಪರಾದಂಥಾವರೇ, ಭಯಕ್ಕೆ, ಅಧೀನತ್ವವ ಪಡೆಯಬೇಡಿ || ೪೪ || ಇವುಗಳಾದರೋ ತಾರಕೆಗಳು ಅದಾದರೋ ನಕ್ಷತ್ರ ಮಂಡಲವು ಸರ‍್ವಕಾಲದಲ್ಲೂ ಪ್ರಕಾಶ ಉಳ್ಳಂಥಾ ಇವುಗಳು ಗ್ರಹಗಳು ಈ ಆಕಾಸವು ನಕ್ಷತ್ರ ಉಳ್ಳದಾಗಿ ಮಾಡಲ್ಪಟ್ಟದ್ದು || ೪೫ || ಭಾರಿಭಾರಿಗೂ ಆಕಾಶಮಾರ್ಗದಲ್ಲಿ ಮಾಡಲ್ಪಟ್ಟ ಸ್ಥಿತಿಉಳ್ಳಂಥ ಇದು ಜ್ಯೋತಿಶ್ಚಕ್ರವು, ಜ್ಯೋತಿರಂ ಗಕಲ್ಪವೃ

* * *

ದ್ವ್ಯೊಮಮಾರ್ಗ್ಗೆಕೃತಸ್ಥಿತಿ | ಸ್ಪಷ್ಟತಾಮಧುನಾಯಾತಂಜ್ಯೊತಿರಂಗಪ್ರಭಾಕ್ಷಯಾತ್ || ೪೬ || ಇತಃಪ್ರಭುತ್ಯಹೊರಾತ್ರವಿಭಾಗಶ್ಚಪ್ರವರ್ತತೆ | ಉದಯಾಸ್ತ ಮಯೈಸ್ಸೂರ್ಯ್ಯಚಂದ್ರಯೊಃ ಸಹತಾರಯೊಃ || ೪೭ || ಗ್ರಹಣಗ್ರಹವಿಕ್ಷೆಪದಿನಾನ ಯನಸಂಕ್ರಮಾನ್ | ಜ್ಯೊತಿರ್ಜ್ಞಾನಸ್ಯಬೀಜಾನಿಸೊನ್ವವೊಚದ್ವಿದಾಂವರಃ || ೪೮ || ಆಸ್ಮಾರ‍್ಧರಾಸಮಾಭಾಗಾದೂರ್ಧ್ವಂತೆಷಾಂಪ್ರಕಾಶಿತಾಃ | ಆವಾಸಾಃ ಕ್ರಮಶಃಸರ್ವ್ವ ಜ್ಯೊತಿಷಾಂವಿಶ್ವವೆದಿಭಿಃ || ೪೯ || ಯೋಜನಾನಾಂಶತಾ ನ್ಯಷ್ಟಾಹೀನಾನಿದಶಯೊಜನೈಃ | ಉತ್ಪಾತ್ಯಾತಾರಕಾಸ್ತವಚ್ಚರಂತ್ಯಧ ಇತಿಶ್ರುತಿಃ || ೫೦ || ತತಃಸೂರ್ಯ್ಯಾದಶೊತ್ಪತ್ಯ ಯೊಜ ನಾನಿಮಹಾಪ್ರಭಾಃ | ತತಶ್ಚಂದ್ರಮಸೊಸೀತಿಂಭಾನಿತ್ರಿಣಿತತಸ್ತ್ರಯಂ || ೫೧ || ತ್ರೀಣಿತ್ರೀಣಿ ಬುಧಾಶ್ಯುಕ್ರಾಃಗುರ ವಶ್ಚಪ

* * *

ಕ್ಷದ ಪ್ರಭೆಯ ನಾಶದ್ದೆಶೆಯಿಂದ ಈಗ ವ್ಯಕ್ತಭಾವವನ್ನು ಪಡೆಯಿತು || ೪೬ || ಇದು ಮೊದಲ್ಗೊಂಡು ನಕ್ಷತ್ರಗಳೊಡನೆ ಕೂಡಿದ ಸೂರ್ಯ್ಯಚಂದ್ರರುಗಳ ಉದಯಾಸ್ತಮಯಗಳಿಂದ ಅಹೋರಾತ್ರಿವಿಭಾಗವು ಕೂಡ ಪ್ರವರ್ತಿಸುತ್ತೆ || ೪೭ || ಗ್ರಹಣಂ ಗ್ರಹವಿಕ್ಷೇಪ ಅಂದರೆ, ಸಂಚಾರವಿಶೇಷ, ದಿನ, ಅಯನ, ಸಂಕ್ರಮಣಗಳನ್ನು ರ್ಜ್ಯೋತಿಜ್ಞಾನದ ಬೀಜಗಳನ್ನು ತಿಳಿದಂಥಾವರುಗಳೊಳಗೆ ಶ್ರೇಷ್ಠನಾದಂಥ ಆಮನುವು ಹೇಳಿದನು ||೪೮ || ಈ ಭೂಮಿಯ ಸಮಾನವಾದ ಭಾಗದ್ದೆಶೆಯಿಂದ ಮೇಲಗಡೆ ಯಲ್ಲಿ ಆ ಜೋತಿರ್ಗ್ಗಣಗಳ ಆ ವಾಸಗಳು ಸಮಸ್ತವನ್ನು ತಿಳಿದಂಥಾವರಗಳಿಂದ ಪ್ರಕಾಶಮಾಡಲ್ಪಟ್ಟವು ||೪೯ || ಹತ್ತು ಯೋಜನಗಳಿಂದ ಕಡಮೆಯಾದಂಥ ಯೋಜನಗಳ ಎಂಟುನೂರನ್ನು (೭೯೦) ಅತಿಕ್ರಮಿಸಿ ಕೆಳಭಾಗದಲ್ಲಿ, ನಕ್ಷತ್ರಗಳು ಸಂಚರಿಸುತ್ತಿವೆ, ಇಂತೆಂದು ವೇಚವು ಹೇಳುತ್ತೆ ||೫೦ || ಅನಂತರದಲ್ಲಿ ಹತ್ತು (೧೦) ಯೋಜನಗಳನ್ನು ಅತಿಕ್ರಮಿಸಿ ಮಹಾ ಕಾಂತಿಉಳ್ಳಂಥಾ ಸೂರ್ಯರುಗಳು, ಅನಂತರ ಎಂಭತ್ತು (೮೦) ಯೋಜನಗಳನ್ನು ಅತಿಕ್ರಮಿಸಿಚಂದ್ರರುಗಳು, ಅನಂತರದಲ್ಲಿ ಮೂರು (೩) ಯೋಜನವನ್ನು ಅತಿಕ್ರಮಿಸಿ ನಕ್ಷತ್ರಗಳು ಅನಂತರದಲ್ಲಿ ಮೂರು (೩) || ಮೂರು (೩) ಮೂರು ಯೋಜನಗಳನ್ನು ಅತಿಕ್ರಮಿಸಿ ಕ್ರಮವಾಗಿ ಬುಧರುಗಳು ಶುಕ್ರರುಗಳು ಗುರುಗಳು, ನಾಲ್ಕು (೪) ಯೋಜನಗಳನ್ನು ಅತಿಕ್ರಮಿಸಿ ಅಂಗಾರಕರುಗಳು ಅದರೋಪಾದಿಯಲ್ಲಿ ನಾಲ್ಕು (೪) ಯೋಜನಗಳನ್ನು ಅತಿಕ್ರಮಿಸಿ ಶನೈಶ್ಚರರುಗಳು || ೫೧ ||

* * *

ರಿಕ್ರಮಾತ್ | ಚತ್ವಾರ್ಯ್ಯಂಗಾರಕಾಸ್ತದ್ವಚ್ಚತ್ವಾರಿಚ ಶನೈಶ್ಚರಾಃ || ೫೨ || ಅಷ್ಟಾಸಿತಿಗ್ರಹಾ ಶ್ಚೆಂದ್ರೊಸ್ಸಾಷ್ಟಾಭಾನಾಂಚವಿಂಶತಿಃ | ಏಕೈಕಸ್ಯತು ವಿಜ್ಞೆಯಂರವಯ ಶ್ಯಶಿಭಿಃಸ್ಸಮಾಃ || ೫೩ || ಚರಂತಿತಾದೃಶಾದೃಷ್ಟವಿಶೆಷವಶವರ್ತ್ತಿನಃ | ಸ್ವಾಭಾವಾದ್ವಾತಥಾನಾದಿನಿಧನಾ ದ್ರವ್ಯರೂಪತಃ || ೫೪ || ಏಷೆವನಭೊಭಾಗೊಜ್ಯೊತಿಸ್ಸಂಘಾತಗೊಚರಃ | ಬಹುಲಃ ಸದಶಂ ಸರ್ವ್ವೊಯೊಜ ನಾನಾಂಶ ಸಂಸ್ಮೃತಂ || ೫೫ || ಸಫೆನೊದ ಧಿಪರ್ಯ್ಯಂ ತೊನೃಲೊಕೆನ್ಯತ್ರಚಸ್ಥಿತಃ | ಸಿದ್ಧಸ್ತಿರ್ಯ್ಯಗಸಂಖ್ಯಾತ ದ್ವೀಪಾಂಭೊಧ ಪ್ರಮಾಣಕಃ || ೫೬ || ಸರ್ವ್ವಾಭ್ಯಂತರ ಚಾರೀಷ್ಟಃತತ್ರಾಭಿಜಿದತೊಬಹಿಃ | ಸರ್ವಭ್ಯೊಗದಿತಂ ಮೂಲಂಭರಣ್ಯೊಧಸ್ತಧೊ ದಿತಾಃ || ೫೭ || ಸರ್ವ್ವೆಷಾಮುಪರಿಸ್ವಾತಿರಿತಿಸಂಕ್ಷೆಪತಃಕೃತಾ | ವ್ಯವಸ್ಥಾಜ್ಯೊತಿಷಾಂಚಿಂ ತ್ಯಾಪ್ರಮಾ

* * *

ಒಬ್ಬೊಬ್ಬ ಚಂದ್ರನಿಗೆ ಎಂಭತ್ತೆಂಟು (೮೮) ಗ್ರಹಗಳು ನಕ್ಷತ್ರಗಳಿಪ್ಪತ್ತೆಂಟುಇಂತೆಂದು ತಿಳೀತಕ್ಕದ್ದು. ಸೂರ್ಯರುಗಳು ಚಂದ್ರರೊಡನೆ ಸಮಾನವಾದಂಥಾವರುಗಳು || ೫೩ || ಸ್ವಭಾವದ್ದೆಶೆಯಿಂದಲಾದರೂ ಆ ಪ್ರಕಾರವಾಗಿ ಮೊದಲೂ ಕೊನೆಯು ಇಲ್ಲದೇ ಇರುವಂಥ ದ್ರವ್ಯರೂಪದ್ದೆಶೆಯಿಂದಲಾದರು ಆ ಪ್ರಕಾರಗಳಾದಂಥಾ ವರಗಳಾಗಿ ಆಲೋಕನ ವಿಶೇಷಾವರ್ತ್ತಿಗಳಾಗಿ ಸಂಚಾರಮಾಡುತ್ತಲಿಧಾರೆ || ೫೪ || ಇದೇಯೇ ಜ್ಯೋತಿಷ್ಕಗೋಚರವಾದಂಥ ನಭೋಭಾಗವು ಇದರಬಾಹುಲ್ಯವು ನೂರಹತ್ತು ಯೋಜನ ಪ್ರಮಾಣವಾದಂಥಾ ಆಕಾಶವು || ೫೫ || ಆ ಜ್ಯೋತಿರ್ಲ್ಲೋಕವು ಘನೋದಧಿ ಪರ್ಯಂತರವಾದದ್ದಾಗಿ ಮನುಷ್ಯ ಲೋಕದಲ್ಲೂ ಅನ್ಯತ್ರವು ಕೂಡ ಇರೂವಂಥಾದ್ದು, ತಿರ್ಯ್ಯಗ್ಲೋಕದ ಅಸಂಖ್ಯಾತ ದ್ವೀಪಸಮುದ್ರ ಪ್ರಮಾಣದ ಉಳ್ಳದ್ದಾಗಿ ಸಿದ್ದವಾದಂಥಾದ್ದು || ೫೬ || ಅದರಲ್ಲಿ ಅಭಿಜನ್ ನಕ್ಷತ್ರವು ಸಮಸ್ತಗಳವಳಗೆ ಸಂಚರಿಸುವದಾಗಿ ಇಷ್ಟವಾದದ್ದು. ಸರ್ವನಕ್ಷತ್ರಗಳ ದೆಶೆಯೊಂದಲ್ಲೂ ಅದರದೆಶೆಯಿಂದ ಹೊರಗೆ ಮೂಲಾನಕ್ಷತ್ರವು ಹೇಳಲ್ಪಟ್ಟಿತು. ಅದೇ ಪ್ರಕಾರವಾ ಭರಣೀ ನಕ್ಷತ್ರವು ಕೆಳಭಾಗದಲ್ಲಿ ಹೇಳಲ್ಪಟ್ಟಿತು || ೫೭ || ಸಮಸ್ತ ನಕ್ಷತ್ರಗಳ ಮೇಲುಭಾಗದಲ್ಲಿ ಸ್ವಾತಿಯು ಇಂತೆಂದು ಸಂಕ್ಷೇಪವಾಗಿ ಹೇಳಲ್ಪಟ್ಟಿತು. ಜ್ಯೋತಿಷ್ಕರ ವ್ಯವಸ್ಥೆಯು ಪ್ರಮಾಣನಯವನ್ನು ತಿಳಿದಂಥಾವರಗಳಿಂಧ ಚಿಂಥಿಸುವದಕ್ಕೆ ಯ್ಯೋಗುವಾದದ್ದು || ೫೮ || (ಮೇರುಪ್ರದಕ್ಷಣಾಸಿತ್ಯ

* * *

ಣನಯವೇದಿಭಿಃ || ೫೮ || ಮೆರುಪ್ರದಕ್ಷಿಣಾನಿತ್ಯಗತಯಸ್ತ್ವಿತಿವೆದನಾತ್ | ನೈವಾಪ್ರದಕ್ಷಿಣಾ ತೆಷಾಂಕಾದಾಚ್ಚಿತ್ಕೀಷ್ಯತೆಗತಿಃ || ೫೯ || ಗತ್ಯಭಾವೊಪಿವಾನಿತ್ಯಂಯ ಥಾಭೂಭ್ರಮ ವಾದಿನಾಂ | ಭುವೊಭ್ರಮಣ ನಿರ್ನ್ನೀತಿವಿರಹ ಸ್ಯೊಪತ್ತಿತಃ || ೬೦ || ಯೆಜೊತಿಷ್ಕಾಸ್ಮೃತಾದೆವಾಸ್ತತ್ಕೃತೊ ವ್ಯವಹಾರತಃ | ಖ್ಯಾತಃಕಾಲವಿಭಾಗೊಯಂ ಸಮಯಾದಿರ್ನಮುಖ್ಯತಃ || ೬೧ || ತದ್ವಿಭಾಗಾತ್ತ ಥಾಮುಖ್ಯೊನಾ ವಿಭಾಗಃ ಪ್ರಶಿದ್ಧ್ಯತಿ | ವಿಭಾಗರಹಿತೆ ಹೆತೌವಿಭಾಗೊನಖಲುಕ್ವಚಿತ್ || ೬೨ || (ಕಾಲಪ್ರಮಾಣ) ಅಣುರಣ್ವಂ ತರಂಕಾಲೆ ವ್ಯತಿಕ್ರಾಮತಿಯಾವತಿ | ಸಕಾಲಃಸಮಯೊಸಂಖ್ಯೈಃ ಸಮಯೈರಾವಲಿ ರ್ಬ್ಭವೆತ್ || ೬೩ || ಸಂಖ್ಯಾತಾವಲಿ ರುಚ್ಚ್ವಾಸಸ್ತೊಕ ಸ್ತೂಚ್ಚ್ವಾಸಸಪ್ತಕಂ | ಸ್ತೊಕಾಸ್ಸಪ್ತಲವಸ್ತೆಷಾಂಸಾ ರ್ದ್ಧಾಷ್ಪತ್ರಿಂಶತಾಘಟೀ || ೬೪ || ಘಟೀ

* * *

ಗತಯಃ) ಇಂತೆಂದು ತಿಳಿಯುವದರ ದೆಶೆಯಿಂದ ಆ ನಕ್ಷತ್ರಗಳಿಗೆ ಯಾವಾಗಲೂ, ಪ್ರದಕ್ಷಿಣಗತಿಯು ಅಪೇಕ್ಷಿಸಲ್ಪಡುವದಿಲ್ಲ || ೫೯ || ಭೂಮಿಯ ಭ್ರಮಣನಿರ್ಣಯದ ಉಪಪತ್ತೀ ದೆಶೆಯಿಂದ ಭೂಮಿಯ ಭೂಭ್ರಮಣವಾದಿಗಳಿಗೆ ಹ್ಯಾಗೊ ಹಾಗೆನಿತ್ಯದಲ್ಲೂ ಗತ್ಯಭಾವವೂ ಕೂಡ ಇಲ್ಲ || ೬೦ || ಯಾವ ಜ್ಯೋತಿಷ್ಕ ದೇವತೆಗಳು ತಿಳಿಯಲ್ಪಟ್ಟರೋ ಅವರುಗಳಿಂದ ಮಾಡಲ್ಪಟ್ಟಂಥಾದ್ದು ಸಮಯಾದಿಗಳು ಉಳ್ಳಂಥ ಕಾಲವಿಭಾಗವು ವ್ಯವಹಾರದ್ದೆಶೆಯಿಂದ ಪ್ರಶಿದ್ಧವಾದಂಥಾದ್ದು || ೬೧ || ಅದರ ವಿಭಾಗವೂ ಹಾಗೆ ಮುಖ್ಯವಾದಂಥಾ ವಿಭಾಗವು ಪ್ರಶಿದ್ಧಿಯಾಗುತ್ತೆ. ಕಾರಣವು ವಿಭಾಗ ರಹಿತವಾದಂಥಾದ್ದಾಗುತಿರಲಾಗಿ ವಿಭಾಗವೂ ಎಲ್ಲಿಯೂ ಇಲ್ಲವಯ್ಯಾ || ೬೨ || (ವ್ಯವಹಾರ ಕಾಲಪ್ರಮಾಣ) ಪರಿಮಾಣುವಿನ ಅತಿಕ್ರಮವು ಎಷ್ಟು ಕಾಲದಲ್ಲಿ ಅತಿಕ್ರಮಿಸುತ್ತಿಧೆಯೊ, ಅದು ಅಣುವೆಂಬ ಸಂಖ್ಯೆಯುಳ್ಳ ಕಾಲವು, ಆ ಕಾಲವು ಸಮವೆಂತ ಅನ್ನಿಶಿಕೊಳ್ಳುತ್ತೆ. ಲೆಖ್ಖ ಮಾಡುವದಕ್ಕೆ ಅಶಕ್ಯಗಳಾದಂಥಾ ಆ ಸಮಯಗಳಿಂದ ಅವಲಿ, ಎಂಬ ಸಂಖ್ಯೆಯಾಗುತ್ತೆ || ೬೩ || ಸಂಖ್ಯಾತವಾದಂಥ ಆವಲಿಯು ಉಚ್ಚ್ವಾಸವಾಗುತ್ತೆ. ಆ ಉಚ್ಛಾಸಗಳ ಏಳು ಸ್ತೋಕವಾಗುತ್ತೆ. ಆ ಸ್ತೋಕಗಳ ಏಳು ಲವವಾಗುತ್ತೆ. ಆ ಲವಗಳು ಮೂವತ್ತೆಂಟು ಅರೆಯಿಂದ ಒಂದು ಘಳಿಗೆ ಆಗುತ್ತೆ ||೬೪ || ಇಲ್ಲಿ ಆ ಘಳಿಗೆಗಳ ಎರಡು ಮುಹೂರ್ತ್ತವಾಗುತ್ತೆ. ಮೂವತ್ತಾದ ಆಮುಹೂರ್ತ್ತಗಳಿಂದ ದಿನವಾಗುತ್ತೆ. ಐ

* * *

ದ್ವಯಂಮುಹೂರ್ತ್ತೊತ್ರಮುಹೂರ್ತ್ತೆಸ್ತ್ರಿಂಶತಾದಿನಂ | ಪಂಚಘ್ನೈಸ್ತ್ರಿದಿನೈಃ ಪಕ್ಷಃಪಕ್ಷೌದ್ವೌಮಾಸ ಇಷ್ಯತೆ || ೬೫ || ಋತುರ‍್ಮಾಸದ್ವಯೆನೈವತ್ರಿಭಿಸ್ತೈರಯನಂ ಮತಂ | ತದ್ವಯಂವತ್ಸರಃಪಂಚವತ್ಸ ರಾಯುಗಮಿಷ್ಯತೆ || ೬೬ || ಅಥ ತದ್ವಚನಾದಾರ್ಯ್ಯಾಜಾತಾಸ್ಸಪದಿನಿರ್ಬ್ಬಯಾಃ | ಸಹಿ ಲೊಕೊತ್ತರಂಜ್ಯೊತಿಃ ಪ್ರಜಾನಾಮುಪಕಾರಕಂ || ೬೭ || ಅಯಂಸನ್ಮತಿರೆವಾಸ್ತುಪ್ರಭುರ್ನ್ನಸ್ಸನ್ಮತಿಪ್ರದಃ | ಇತಿಪ್ರಶಸ್ಯಸಂಪೂಜ್ಯಯಯುಸ್ತೆಸ್ವಂಸ್ವಮಾಸ್ಪದಂ || ೬೮ || (ತೃತೀಯಮನು) ತತೊಂತರಮ ಸಂಖ್ಯೆಯಾಃಕೊಟೀರುಲ್ಲಂ ಘ್ಯೆವತ್ಸರಾನ್ | ತೃತೀಯೊಮನು ರತ್ರಾಸಿತ್ಕ್ಷೆಡಮಂಕರಸ ಮಾಹ್ವಯಃ || ೬೯ || ಅಟಟಪ್ರಮಿತಂತಸ್ಯಬಭೂವಾ ಯುರ್ಮ್ಮಹೌಜಸಃ | ದೆಹೊತ್ಸೆಧಶ್ಚಚಾಪಾನಾಮಮುಷ್ಯಾಸೀ ಚ್ಚತಾಷ್ಟಕಂ | ೭೦ | ಪು

* * *

ದರಿಂದ ಗುಣಿಸಲ್ಪಟ್ಟ ಮೂರು ದಿನಗಳಿಂದ ಅಂದರೆ ಹದಿನೈದು ದಿನಗಳಿಂದ ಪಕ್ಷವಾಗುತ್ತೆ. ಎರಡು ಪಕ್ಷಗಳು ಮಾಸವೆಂದು ಅಪೇಕ್ಷಿಸಲ್ಪಡುತ್ತೆ || ೬೫ || ಎರಡು ಮಾಸಗಳಿಂದಲೇ ಋತುವಾಗುತ್ತೆ. ಆ ಮೂರು ಋತುಗಳಲಿಂದ ಅಯನ ವಿಂತೆಂದು ಸಮ್ಮತವಾದಂಥಾದ್ದು, ಆ ಎರಡು ಆಯನವು ವರ್ಷವಿಂತೆಂದು ತಿಳಿಯತಕ್ಕದ್ದು. ಐದು ವರ್ಷಗಳು ಯುಗವಿಂತೆಂದು ಅಪೇಕ್ಷಿಸಲ್ಪಡುತ್ತಲಿಧೆ || ೬೬ || ಅನಂತರದಲ್ಲಿ ಆ ಮನುವಿನವಾಕ್ಯದ್ದೆಶೆಯಿಂದ ಆರ್ಯ್ಯರುಗಳು ತತ್ಕ್ಷಣದಲ್ಲಿ ಭಯ ರಹಿತರಾದಂಥಾವರುಗಳು ಆದರು ಆತನ ಪ್ರಜೆಗಳಿಗೆ ಉಪಕಾರವನ್ನು ಮಾಡುತ್ತಿರುವಂಥಾ ಲೋಕದಲ್ಲಿ ಶ್ರೇಷ್ಠವಾದಂಥ ಜ್ಯೋತಿಸ್ವರೂಪನಾದಂಥಾವನು || ೬೭ || ನಮ್ಮಗಳಿಗೆ ಸನ್ಮತಿಯನ್ನು ಕೊಡುತ್ತರುವಂಥ ಅಸನ್ಮತಿ ಎಂಬ ಮನುವೇಯೇ ನಮಗೆ ಪ್ರಭುವಾದಂಥಾವನಾಗಲೀ, ಇಂತೆಂದು ಸ್ತೋತ್ರಮಾಡಿ, ಪೂಜಿಸಿ ತಮ್ಮ ತಮ್ಮ ಮನೆಯನ್ನು ಪಡೆದರು || ೬೮ || ಅನಂತರದಲ್ಲಿ ಮನ್ವಂತರವಾದಂಥ ಸಂಖ್ಯೆಯ ಕೋಟಿಯಾದಂಥ ವರ್ಷಗಳನ್ನು ಕಳದು, ಈ ಭರತಕ್ಷೇತ್ರದಲ್ಲಿ ಕ್ಷೇಮಂಕರನೆಂಬ ಹೆಸರುವುಳ್ಳಂಥ ಮೂರನೇ ಮನುವು ಆದನು || ೬೯ || ಮಹಾ ಪರಾಕ್ರಮವುಳ್ಳಂಥ ಆ ಮನುವಿಗೆ ಆಯುಷ್ಯವು ಅಟಟವೆಂಬ ಸಂಖ್ಯಾ ಪ್ರಮಾಣವಾದಂಥಾದ್ದಾಯಿತು. ಈತನಿಗೆದೆಹೋತ್ಸೇಧವು ಚಾಪಗಳ ಎಂಟುನೂರು(೮೦೦) ಆಯಿತು || ೭೦ || ಪೂರ್ವ್ವದಲ್ಲಾದರೋಮೃಗಗಳು ಮಂಗಳ ಸ್ವರೂಪಗಳಾದಂಥಾವುಗಳಾ

* * *

ರಾಕಿಲಮೃಗಾಭದಾಃಪ್ರಜಾನಾಂಹಸ್ತಲಾಲಿತಾಃ | ತದಾತುವಿಕೃತಿಂಭೆಜೆರ್ವ್ಯಾ ತ್ತಾಸ್ಯಾಭೀಷಣಸ್ವನಾಃ || ೭೧ || ತೆಷಾಂವಿಕ್ರಿಯಯಾಸಾಂತರ್ಘ್ಗೆರ್ಜ್ಜಯಾತತ್ರ ಸುಃಪ್ರಜಾಃ | ಪಪ್ರಚ್ಛುಸ್ತೆತ ಮಭ್ಯೆತ್ಯಮ ನುಂಸ್ಥಿತಮವಿಸ್ಮಿತಂ || ೭೨ || ಇಮೆಭದ್ರಮೃಗಾಃ ಪೂರ್ವ್ವಂಸ್ವಾದೀಯೋಭಿಸ್ತೃಣಾಂಕುರೈಃ | ರಸಾಯನ ರಸೈಃಪುಷ್ಟಾಸ್ಸರಸಾಂಸಲಿ ಲೈರಪಿ || ೭೩ || ಅಂಕಾದಿರೊಪಣೈ ರ್ಹಸ್ತಲಾಲನೈರಪಿಸಾಂತ್ವಿತಾಃ | ಅಸ್ಮಾಭಿರತಿ ವಿಶ್ರಬ್ದಾಃಸಂವಸಂತೊನುಪದ್ರವಾಃ || ೭೪ || ಇದಾನೀಂತುವಿನಾಹತೊಃಶೃಂಗೈರಭಿ ಭವಂತಿನಃ | ದಂಷ್ಟ್ರಾಭಿರ್ನಖರಾಗ್ರೈಶ್ಚಭಿಬಿತ್ಸಂತಿಚದಾರುಣಾಃ || ೭೫ || ಕೊಭ್ಯುಪಾಯೊ ಮಹಾಭಾಗಬ್ರೂಹಿನಃಕಷೆಮಸಾಧನಂ | ಕ್ಷೆಮಂಕ

* * *

ಗಿ ಪ್ರಜೆಗಳ ಹಸ್ತದಿಂದ ಲಾಲಿಸಲ್ಪಟ್ಟಂಥಾವುಗಳು, ಆಗಲಾದರೊ ತೆರೆಯಲ್ಪಟ್ಟಂಥಾವುಗಳಾಗಿ ಭಯಂಕರವಾದಂಥಾ ಧ್ವನಿ ಉಳ್ಳಂಥಾವುಗಳಾಗಿ ವಿಕಾರವನ್ನು ಪಡದವು || ೭೧ || ಅಂತರ್ಘ್ಗರ್ಜ್ಜನೆ ಉಳ್ಳಂಥ ಆ ಮೃಗಗಳ ವಿಕಾರದಿಂದ ಪ್ರಜೆಗಳು ಭಯಪಟ್ಟರು. ಆ ಪ್ರಜೆಗಳು ಆಮನುವನ್ನು ಪಡದು ವಿಸ್ಮಯವಿಲ್ಲದೇ ಇರುವಂಥಾವನಾಗಿ ಇರುವಂಥಾ ಮನುವನ್ನು ಪ್ರಶ್ನೆ ಮಾಡಿದರು || ೭೨ || ಎಲೆ ಮಂಗಳ ಸ್ವರೂಪನಾದಂಥಾವನೇ, ಈ ಮೃಗಗಳು ಪೂರ್ವ್ವದಲ್ಲಿ ರುಚಿಕರಗಳಾದಂಥ ಗರಿಕೆ ಮೊಳಕೆಗಳಿಂದ ರಸಾಯನದೋಪಾ ದಿಯಲ್ಲಿ ರಸವುಳ್ಳಂಥ ಸರೋವರದ ಜಲಗಳಿಂದಲೂ ಕೂಡ ಪುಷ್ಟಿಯನ್ನು ಹೊಂದಿದಂಥಾವುಗಳು || ೭೩ || ತೊಡೆಯನ್ನು ಹತ್ತುವದರಿಂದಲೂ ಕೈಲಾಲನೆಗಳಿಂದಲೂ ಕೂಡ ಸಮಾಧಾನವನ್ನು ಹೊಂದಿದಂಥಾ ವುಗಳು, ನಮ್ಮಗಳಿಂದ ವಿಶ್ವಾಸಮಾಡಲ್ಪಟ್ಟಂಥಾವುಗಳು ಉಪದ್ರವ ಇಲ್ಲದೇ ಇರುವಂಥಾವಗಳಾಗಿ ವಾಸ ಮಾಡುವಂಥಾವುಗಳು || ೭೪ || ಈಗಲಾದರೋ ಕಾರಣದ್ದೆಶೆಯಿಂದ ಹೊರ್ತ್ತಾಗಿ ನಮ್ಮಗಳನ್ನು ಕೊಂಬುಗಳಿಂದ ತಿರಸ್ಕರಿಸುತ್ತಿವೆ. ಕೋರು ದವಡೆಗಳಿಂದ ಉಗರುಗಳ ಕೊನೆಯಿಂದಲೂ ಕೂಡ ಭಯಂಕರಗಳಾಗಿ ಭಯಪಡಿಸುತ್ತಿವೆ. || ೭೫ || ಮಹಾ ಭಾಗ್ಯ ಉಳ್ಳಂಥಾವನೇ ಕ್ಷೇಮಸಾಧನೆಯನ್ನು ಕುರಿತು, ಉಪಾಯವೂ ಯಾವದು ನಮಗೆ ಹೇಳು, ಪೂಜ್ಯನಾ ದಂಥಾ ನೀನು ಜಗತ್ತಿಗೆ ಕ್ಷೇಮ ಚಿಂತನೆಗಳಿಂದ ಕ್ಷೇಮವನ್ನು ಮಾಡುವಂಥಾವನು ನಿಶ್ಚಯವು || ೭೬ || ಈ ಪ್ರಕಾರವಾಗಿ ಅವರುಗಳ ಮಾತಿನ ದೆಶೆ

* * *

ರೊಹಿಸಭವಾನ್‌ಜಗತಃಕ್ಷೆಮಚಿಂತನೈಃ || ೭೬ || ಇತಿತದ್ವಚನಾಜ್ಜಾತಸಾಹಾರ್ದೊ ಮನುರಬ್ರವೀತ್ | ಸತ್ಯಮೆತತ್ತಥಾಪೂರ್ವ್ವಮಿದಾನೀಂತುಭಯಾವಹಾಃ || ೭೭ || ತದಿಮೆಪರಿಹರ್ತ್ತವ್ಯಾಃ ಕಾಲಾದ್ವಿಕೃತಿಮಾಗತಾಃ | ಕರ್ತ್ತವ್ಯೊನೈಷ ವಿಶ್ವಾಸೋಬಾಧಾಃ ಕುರ್ವ್ವಂತ್ಯುಪೆಕ್ಷಿತಾಃ || ೭೮ || ಇತ್ಯಾಕರ್ಣ್ನ್ಯವಚಸ್ತಸ್ವಪರಿಜ ಹ್ರುಸ್ತದಾಮೃಗಾನ್ | ಶೃಂಗಿಣೊದಂಪ್ಟ್ರಿಣಃ ಕ್ರೂರಾನ್‌ಶೆಷೈಃ ಸಂವಾಸಮಾಯಯುಃ || ೭೯ || ವ್ಯತೀಯುಪಿತತಃಕಾಲೆಮನೊರಸ್ಯವ್ಯತಿಕ್ರಮೆ | ಮನ್ವಂತರಮ ಸಂಖ್ಯೆ ಯಸಮಾ ಕೊಟಿರ್ವಿಲಂಘ್ಯಚ || ೮೦ || (ಚತುರ್ಥಮನುಃ) ಅತ್ರಾಂತರೆಮಹೊದಗ್ರವಿಗ್ರಹೊ ದೊಷನಿಗ್ರಹಃ | ಅಗ್ರೇಸರಸ್ಸತಾಮಾ ಸೀರ್ಮ್ಮನುಕ್ಷೆಮಂಧರಾಹ್ವಯಃ || ೮೧ || ತುಟಿಕಾಬ್ದಮಿ ತಂತಸ್ಯಬಭೂವಾಯುರ್ಮ್ಮ ಹಾತ್ಮನಃ | ಶತಾನಿಸಪ್ತಚಾಪಾನಾಂ ಸಪ್ತತಿಃಪಂಚಚೊಛಿತ್ರಿಃ || ೮೨ ||

* * *

ಯಿಂದ ಉಂಟಾದ ಮಿತ್ರತ್ವವುಳ್ಳಂಥ ಮನುವು ಹೇಳಿದನು. ಈ ಮಾತು ಯಥಾರ್ತ್ಥವು, ಪೂರ್ವ್ವದಲ್ಲಿ ಹಾಗೆ. ಈಗಲಾದರೋ ಭಯಂಕರಗಳಾದಂಥಾವುಗಳು || ೭೭ || ಕಾಲದ್ದೆಶೆಯಿಂದ ವಿಕಾರವನ್ನು ಪಡದಂಥ ಆ ಈ ಮೃಗಗಳು ಪರಿಹರಿಸುವದಕ್ಕೆ ಯೋಗ್ಯವಾದಂಥಾವುಗಳು, ಇವುಗಳಲ್ಲಿ ವಿಶ್ವಾಸವು ಮಾಡುವದಕ್ಕೆ ಯೋಗ್ಯವಾದಂಥಾ ದ್ದಲ್ಲ ಉದಾಶೀನ ಮಾಡಲ್ಪಟ್ಟಂಥಾವುಗಳಾಗಿ ಬಾಧಗಳನ್ನು ಮಾಡುತ್ತಿವೆ. || ೭೮ || ಈ ಪ್ರಕಾರವಾಗಿ ಆತನ ಮಾತನ್ನು ಕೇಳಿ, ಆ ಸಮಯದಲ್ಲಿ ಕೊಂಬುಗಳುಳ್ಳಂಥ ಕೊರದವಡೆಗಳುಳ್ಳಂಥ ಕ್ರೂರಗಳಾದಂಥ ಮೃಗಗಳನ್ನು ಬಿಟ್ಟುಬಿಟ್ಟರು. ಉಳಿದಂಥಾ ಮೃಗಗಳೊಡನೆ ಸಹವಾಸವನ್ನು ಪಡದರು || ೭೯ || ಅನಂತರದಲ್ಲಿ ಕಾಲವು ಕಳಿಯುತ್ತಿರಲಾಗಿ ಈ ಮನುವಿನ ಅತಿಕ್ರಮಣದಲ್ಲಿ ಮನ್ವಂತರವಾದಂಥ ಆ ಸಂಖ್ಯೆಯ ವರ್ಷಕೋಟಿಗಳನ್ನು ದಾಟಿ || ೮೦ || ಅದರ ಮಧ್ಯದಲ್ಲಿ ಮಹಾ ದೊಡ್ಡದಾದಂಥ ಶರೀರವುಳ್ಳಂಥ ದೋಷಗಳ ನಿಗ್ರಹ ಉಳ್ಳಂಥ ಸತ್ಪುರುಷರುಗಳಿಗೆ ಮುಖ್ಯನಾದಂಥ ಕ್ಷೇಮಂಧರನೆಂಬ ಹೆರು ವುಳ್ಳಂತ ಮನುವು ಆದನು || ೮೧ || ಮಹಾತ್ಮನಾದಂಥೆ ಆ ಮನುವಿಗೆ ತುಟಿಕವೆಂಬ ವರ್ಷ ಪ್ರಮಾಣ ಉಳ್ಳಂಥ ಆಯುಷ್ಯವು ಆಯಿತು. ಉತ್ಸೇಧವು ಧನುಸ್ಸುಗಳ ಏಳುನೂರು ಎಪ್ಪತ್ತೈದು (೭೭೫) ಯಾವ ಸಮಯದಲ್ಲಿ ಕ್ರೂರಮೃಗಗಳು ಮಹಾ ಕೋ

* * *

ಯದಾಪ್ರಬಲತಾಂಯಾತಾಃಪಾಕಸತ್ವಾಮಹಾಕೃಧಃ | ತದಾಲ ಕುಟಯಷ್ಟ್ಯಾದ್ಯೈಸರ ಕ್ಷಾವಿಧಿಮನ್ವಶಾತ್ || ೮೩ || ಕ್ಷೆಮಂಧರ ಇತಿಖ್ಯಾತಿಂಪ್ರಜಾನಾಂಕ್ಷೆಮಧಾರಣಾತ್ | ಸದದೆಪಾಕಸತ್ವೆಭ್ಯೊರಕ್ಷೊಪಾ ಯಾನುಶಾಸನೈಃ || ೮೪ || (ಪಂಚಮೊಮನುಃ) ಪುನರ್ಮ್ಮನ್ವಂತರಂತತ್ರಸಂಜಾತಂಪೂರ್ವ್ವವತ್ಕ್ರಮಾತ್ | ಮನುಸ್ಸೀಮಂಕರೊಜಗ್ನೆ ಪ್ರಜಾನಾಂಪುಣ್ಯಪಾಕತಃ || ೮೫ || ಕಮಲಪ್ರಮಿತಂತಸ್ಯಪ್ರಾಹುರಾಯು ರ್ಮ್ಮಹಾಧಿಯಃ | ಶತಾಣಿಸಪ್ತಪಂಚಾಶದುಛ್ರಾಯೊಧನುಷಾಂಮತಃ || ೮೬ || ಕಲ್ಪಾಂಘ್ರಿಪಾಯ ದಾಜಾತಾವಿರಳಾ ಮಂದಕಾಃಫಲೈಃ | ತದಾತೆಷುವಿಸಂವಾದೊಬಭೂವೈಷಾಂ ಪರಸ್ಪರಂ || ೮೭ || ತತೊಮನುರಸಾಮತ್ವಾವಾಚಾಸೀಮಾವಿಧಿಂವ್ಯಧಾತ್ | ಅತಃಸೀಮಂಕರಾಖ್ಯಾಂತೈರ್ಲ್ಲಂಬಿ ತೊನ್ವರ್ಥತಾಂಗತಾಂ || ೮೮ || (ಷಷ್ಠಮನುಃ) ಪುನರ್ಮ್ಮನ್ವಂತರಂಪ್ರಾಗ್ವದ

* * *

ಪವುಳ್ಳಂಥಾವುಗಳಾಗಿ ಪ್ರಾಬಲ್ಯವನ್ನು ಪಡದವೋ ಆ ಸಮಯದಲ್ಲಿ ಆ ಮನುವು ದೊಣ್ಣೆ ಮಣ್ಣು ಹಿಂಟೆ ಮೊದಲಾದವುಗಳಿಂದ ರಕ್ಷಾವಿಧಿಯನ್ನು ಹೇಳಿದನು || ೮೩ || ಪ್ರಜೆಗಳಿಗೆ ಕ್ಷೇಮ ಪುಷ್ಟೀ ಮಾಡುವ ಹೇತುವಿನಿಂದ ಕ್ರೂರ ಮೃಗಗಳ ದೆಶೆಯಿಂದ ರಕ್ಷಣೋಪಾಯವನ್ನಿ ಹೇಳುವದರಿಂದ ಆಮನುವು ಕ್ಷೇಮಂಧರನು ಇಂತೆಂದು ಖ್ಯಾತಿಯನ್ನು ಪಡದನು || ೮೪ || ಮತ್ತು ಆ ಭರತಕ್ಷೇತ್ರದಲ್ಲಿ ಕ್ರಮವಾಗಿ ಪೂರ್ವ್ವದೋಪಾದಿಯಲ್ಲಿ ಮನ್ವಂತರವು ಹುಟ್ಟಿತು. ಪ್ರಜೆಗಳ ಪುಣ್ಯಪಾಕದ್ದೆಶೆಯಿಂದ ಸೀಮಂಕರ ನಾಮಕನಾದಂಥ ಮನುವು ಹುಟ್ಟಿದನು || ೮೫ || ಮಹಾಬುದ್ಧಿ ಉಳ್ಳಂಥಾವರುಗಳು, ಆ ಮನುವಿಗೆ ಆಯುಷ್ಯವನ್ನು ಕಮಲವೆಂಬ ಸಂಖ್ಯಾ ಪ್ರಮಾಣುಳ್ಳದ್ದನ್ನಾಗಿ ಹೇಳುವರು. ಅವರ ಉತ್ಸೇಧವುಚಾಪಗಳು ಏಳುನೂರ ಐವತ್ತಾಗಿ (೭೫೦) ವಡಂಬಡ ತಕ್ಕದ್ದು || ೮೬ || ಯಾವ ಸಮಯದಲ್ಲಿ ಕಲ್ಪವೃಕ್ಷಗಳು ಫಲಗಳಿಂದ ಕಡಮೆಯಾದಂಥಾವುಗಳು ವಿರಳಗಳಾ ದಂಥಾವುಗಳು ಆದವೂ. ಆ ಸಮಯದಲ್ಲಿ ಈ ಭೋಗಭೂಮಿಜರಿಗೆ ಪರಸ್ಪರವಾಗಿ ಆ ವೃಕ್ಷಗಳ ನಿಮಿತ್ತವಾಗಿ ವಿವಾದವು ಆಯಿತು. ಅನಂತರದಲ್ಲಿ ಈ ಮನುವು ತಿಳಿದು ಮಾತಿನಿಂದ ಎಲ್ಲೆಯ ವಿಧಿಯನ್ನು ಮಾಡಿದನು. ಈ ಕಾರಣದ್ದೆಶೆಯಿಂದ ಆ ಆರ್ಯ್ಯರಿಂದ ಸೀಮಖರನೆಂಬ ಹೆಸರನ್ನು ಆಶ್ರಯಿ ಸಲ್ಪಟ್ಟನು || ೮೮ || ಮತ್ತು ಪೂರ್ವ್ವದೋಪಾದಿಯ

* * *

ತಿಲಂಘ್ಯಮಹೊದಯಃ | ಮನುಸ್ಸೀಮಂಧರೊನಾಮ್ನಾಸಮಜಾಯತಪುಣ್ಯಧೀಃ || ೮೯ || ನಳಿನಪ್ರಮಿತಾಯುಷ್ಕೊನಳಿನಾಸ್ಯಕ್ಷಣದ್ಯುತಿ | ಧನುಷಾಂಪಂಚವರ್ಗ್ಗಾಗ್ರಮು ಚ್ಟ್ರೆತಿಃಶತಸಪ್ತಕಂ || ೯೦ || ಅತ್ಯಂತ ವಿರಾಲಾಜಾತಾಃಕ್ಷ್ಮಾಜಾಮಂಥಫಲಾಯದಾ | ನೃಣಾಂ ಮಹಾನ್ವಿಸಂವಾ ದಕೆಶಾಖೆ ಶೀತದಾವೃಧತ್ || ೯೧ || ಕ್ಷೆಮವೃತ್ತಿಂತಂತಸ್ತೆಷಾಂ ಮನ್ವಾನಸ್ಸಮನುಸ್ತದಾ | ಸೀಮಾನಿತರುಗು ಲ್ಮಾದಿಚಿಹ್ನಿ ತಾನ್ಯಕರೊತ್ಕೃತೀ || ೯೨ || (ಸಪ್ತಮಮನುಃ) ತತೊಂತರಮ ಭೂದ್ಬೂಯೊಪ್ಯಸಂಖ್ಯಾ ವರ್ಷಕೊಟಿಯಃ | ಹೀಯಮಾನೆಷುಸ ರ್ವ್ವೆಷುನಿಯೊಗೆಷ್ವನುಪೂರ್ವ್ವಶಃ || ೯೩ || ತದಂತರ ವ್ಯತಿಕ್ರಾಂತಾವಭೂದ್ವಿಮಲವಾ ಹನಃ ಮನೂನಾಂಸಪ್ತಮೋಭೋಗಲಕ್ಷ್ಯಾ | ಲಿಂಗಿತವಿಗ್ರಹಃ || ೯೪ || ಪದ್ಮಪ್ರಮಿತಮಸ್ಯಾಯುಃಪದ್ಮಾಶ್ಲಿಷ್ಟತನೊರಭೂತ್ | ಧನುಃಶತಾನಿಸಪ್ತೈವತನೂ ತ್ಸೆಧೊಸ್ಯವ

* * *

ಲ್ಲಿ ಮನ್ವಂತರವನ್ನು ಕಳದು ಮಹಾ ಅಭ್ಯುದಯುವುಳ್ಳಂಥ ಪುಣ್ಯಕರವಾದ ಬುದ್ಧಿಉಳ್ಳಂಥ ಹೆಸರಿನಿಂದ ಸೀಮಂಧರನಾದಂಥ ಮನವು ಹುಟ್ಟಿದನು || ೮೯ || ನಳಿನವೆಂಬ ಸಂಖ್ಯೆಗೆ ಸಮಾನವಾದ ಆಯುಷ್ಯವುಳ್ಳಂಥಾವನು, ಕೆಂದಾವರೆಯೋ ಪಾದಿಯಲ್ಲಿ ಮುಖವೂ ಕಣ್ಣು ಕಾಂತಿಯೂ ಉಳ್ಳಂಥಾವನು. ಉತ್ಸೇಧವು ಧನುಸ್ಸುಗಳ ಐದರ ವರ್ಗ್ಗವೇ ಕೊನೆಯಾಗಿ ಉಳ್ಳಂಥ ಏಳನೂರು(೭೦೦) || ೯೦ || ಯಾವ ಸಮಯದಲ್ಲಿ ಕಲ್ಪವೃಕ್ಷಗಳು ಸ್ವಲ್ಪ ಫಲ ಉಳ್ಳಂಥಾವುಗಳಾಗಿ, ಅತ್ಯಂತ ವಿತಳಗಳಾದವೊ ಆ ಸಮಯದಲ್ಲಿ ಕೇಶಾಕೇಶಿ, ಎಂದರೆ ಒಬ್ಬರ ಜುಟ್ಟನ್ನು ಒಬ್ಬರು ಹಿಡಿದುಕೊಳ್ಳುವ ದೊಡ್ಡ ವಿವಾದವು ವೃದ್ಧೀಹೊಂದಿತು || ೯೧ || ಅನಂತರದಲ್ಲಿ ಆ ಆರ್ಯ್ಯರಿಗೆ ಕ್ಷೇಮವೃತ್ತಿಯನ್ನು ತಿಳಿಯುವಂಥ ಕೃತಾರ್ಥನಾದಂಥ ಆ ಮನುವು ಎಲ್ಲೆಗಳನ್ನು ವೃಕ್ಷಮೆಳೆ ಮೊದಲಾದವುಗಳಿಂದ ಗುರುತುಮಾಡಲ್ಪಟ್ಟವುಗಳನ್ನಾಗಿ ಮಾಡಿದನು || ೯೨ || ಅನಂತರದಲ್ಲಿ, ಆ ಸಂಖ್ಯಾತ ವರ್ಷ ಕೋಟಿಗಳು ಕಳಿಯುವಂಥಾವುಗಳಾದವು ಸಮಸ್ತವಾದಂಥ ನಿಯೋಗಗಳು ಅನುಪೂರ‍್ವವಾಗಿ ಕಡೆಮೆಯಾದಂಥಾವುಗಳು ಆಗುತ್ತಿರಲಾಗಿ || ೯೩ || ಆ ಮನ್ವಂತರದ ಅನಂತರದಲ್ಲಿ ಮನುಗಳಿಗೆ ಏಳನೇವನಾ ದಂಥ ಭೋಗಲಕ್ಷ್ಮಿಯಿಂದ ಆಲಿಂಗಿಸಲ್ಪಟ್ಟ ಶರೀರಉಳ್ಳಂಥ ವಿಮಲವಾಹನನು ಆದನು || ೯೪ || ಲಕ್ಷ್ಮಿಯಿಂದ ಆಲಂಗಿಸಲ್ಪಟ್ಟ ಶರೀರಉಳ್ಳಂಥ

* * *

ರ್ಣ್ಣೆತಃ || ೯೫ || ತದುಪಜ್ಜಂಗಜಾದೀನಾಂಬಭೂವಾರೊಹಣಕ್ರಮಃ | ಕುಠಾರಾಂಕುಶಪರ್ಯ್ಯಾಣ ಮುಖಭಾಂಡಾ ದ್ಯುಪಕ್ರಮೈಃ || ೯೬ || (ಅಷ್ಟಮಮನುಃ) ಪುನರಂತರಮತ್ರಾಭೂದಸಂಖ್ಯೆಯಾಬ್ದ ಕೋಟಯಃ | ತತೊಷ್ಟಮೊ ಮನುರ್ಜ್ಜಾತಶ್ಜಕ್ಷುಷ್ಮಾನಿತಿಶಬ್ದಿತಃ || ೯೭ || ಪದ್ಮಾಂಗಪ್ರಮಿತಾ ಯುಷ್ಕಶ್ಚಾಪಾನಾಂ ಪಂಚಸಪ್ತತಿಃ | ಷಟ್ಧತಾನ್ಯಪ್ಯದಗ್ರಶ್ರೀರುಛ್ರಿತಾಂಗೊಬ ಭುವಸಃ || ೯೮ || ತಸ್ಯಕಾಲೆಭವತ್ತೆಷಾಂಕ್ಷಣಂಪುತ್ರ ಮುಖೆಕ್ಷಣಂ | ಅದೃಷ್ಟಪೂರ್ವ್ವ ಮಾರ್ಯ್ಯಾಣಾಂ ಮಹದುತ್ತ್ರಾಸಕಾರಣಂ || ೯೯ || ತತಸ್ಸಪದಿಸಂಜಾತ ಸಾಧ್ವಸಾನಾರ್ಯ್ಯಕಾಂಸ್ತದಾ | ತದ್ಯಾಥಾತ್ಮ್ಯೊಪದೇಶೆನಸ ಸಂತ್ರಾಸಮಥೊಜ್ಝಯತ್ || ೧೦೦ || ಚಕ್ಷುಷ್ಮಾನಿತಿತೆ ನಾಭೂತ್ತತ್ಕಾಲೆತೆಯತೊರ್ಬ್ಭಕಾಃ | ಜನಯಿತ್ರೊಕ್ಷಣಂ ಯಾತಾಶ್ಜಕ್ಷುದರ್ಶನಗೊಚರಂ || ೧೦೧ || (ನವಮಮನುಃ) ಪುನರಷ್ಯಂತ

* * *

ಈ ಮನುವಿಗೆ ಪದ್ಮವೆಂಬ ಸಂಖ್ಯಾಪ್ರಮಾಣ ಉಳ್ಳಂಥ ಆಯುಷ್ಯವು ಆಯಿತು. ಆತನಿಗೆ ಶರೀರ ಉತ್ಸೇಧವು; ಏಳುನೂರು (೭೦೦) ಧನುಸ್ಸು || ೯೫ || ಗಜಾದಿಗಳ ಆರೋಹಣ ಕ್ರಮವು ಅವನ ಅಧೀನವಾದಂಥಾದ್ದಾಗಿ, ಕೊಡಲಿ, ಅಂಕುಶ, ಕಡಿವಾಣ, ಮುಕಾರ ಇವೇ ಮೊದಲಾದಂಥ ಉಪಕ್ರಮಗಳಿಂದ ಆಯಿತು. || ೯೬ || ಪುನಹ ಈ ಭರತಕ್ಷೇತ್ರದಲ್ಲಿ ಅಸಂಖ್ಯಾವರ್ಷ ಕೋಟಿ ಮನ್ವಂತರವು ಆಯಿತು. ಅನಂತರದಲ್ಲಿ (ಚಕ್ಷುರ್ಷ್ಮಾ) ಇಂತೆಂದು ಹೇಳಲ್ಪಟ್ಟಂಥ ಎಂಟನೇ ಮನುವು ಹುಟ್ಟಿದನು || ೯೭ || ಪದ್ಮಾಂಕವೆಂಬ ಸಂಖ್ಯಾ ಪ್ರಮಾಣವಾದ ಆಯುಷ್ಯ ಉಳ್ಳಂಥಾವನು ಉತ್ಸೇದಚಾಪಗಳು ಆರನೂರ ಎಪ್ಪತ್ತೈದು (೬೭೫) ಶ್ರೇಷ್ಢವಾದ ಸಂಪತ್ತು ಉಳ್ಳಂಥ ಉನ್ನತವಾದ ಅವಯವ ಉಳ್ಳಂಥ, ಆಮನುವು ಆದನು || ೯೮ || ಆತನ ಕಾಲದಲ್ಲಿ ಆ ಆರ್ಯ್ಯರುಗಳಿಗೆ, ಕ್ಷಣಕಾಲದಲ್ಲಿ ಪೂರ್ವದಲ್ಲಿ ಕಾಣಲ್ಪಡದೇ ಇರುವಂಥ, ಪುತ್ರರ ಮುಖ ನಿರೀಕ್ಷಣೆಯೇ, ಮಹಾಭಯಕ್ಕೆ ಕಾರಣವಾದಂಥಾದ್ದು || ೯೯ || ಅನಂತರದಲ್ಲಿ ತತ್ಕ್ಷಣದಲ್ಲಿ ಉತ್ಪನ್ನವಾದಂಥ ಭಯವುಳ್ಳಂಥ ಭೋಗಭೂಮಿಜರನ್ನು, ಆ ಸಮಯದಲ್ಲಿ ಅದರ ಯಥಾರ್ಥವನ್ನು ಉಪದೇಶ ಮಾಡುವದರಿಂದ ಆ ಮನುವು ಭಯವನ್ನು ಅನಂತರದಲ್ಲಿ ಬಿಡಿಸಿದನು || ೧೦೦ || ಯಾವಕಾರಣದ್ದೆಶೆಯಿಂದ ಆ ಮನುವಿನ ಕಾಲದಲ್ಲಿ ಮಕ್ಕಳುಗಳು ಕ್ಷಣಕಾಲದಲ್ಲಿ ಕಣ್ಣಿನ ನೋಟಕ್ಕೆ ವಿಷಯರಾ