ರಂತಾವದ್ವರ್ಷಕೊಟಿರ್ವ್ವಿಲಂಘ್ಯೆಸಃ | ಯಶಸ್ವಾನಿತ್ಯಭೂನ್ನಾಮ್ನಾಯಶಸ್ವೀನವ ಮೊಮನುಃ || ೧೦೨ || ಕುಮುದಪ್ರಮಿತಂತಸ್ಯಪರಮಾಯುರ್ಮ್ಮಹೀಯಸಃ | ಷಟ್ಛತಾನಿಚಪಂಚಾಶದ್ಧನೂಂಷಿವಪುರುಚ್ಛ್ರಿತಿಃ || ೧೦೩ || ತಸ್ಯಕಾಲೆ ಪ್ರಜಾಜನ್ಯಮುಖಾಲೊಕಪುರಸ್ಸರಂ | ಕೃತಾಶಿಷಃಕ್ಷಣಂಸ್ಥಿತ್ವಾಲೊಕಾಂತ ರಮುಪಾಗರ್ಮ || ೧೦೪ || ಯಶಸ್ವಾನಿತ್ಯಭೂತ್ತೆನಶಶಂಸುಸ್ತದ್ಯಶೊಯತಃ | ಪ್ರಜಾಃಸುಪ್ರಜಸಃ ಪ್ರೀತಾಃಪುತ್ರಾಶಾಸನದೆಶನಾತ್ || ೧೦೫ || (ದಶಮಮನುಃ) ತತೊಂತರಮತಿ ಕ್ರಮ್ಯತತ್ಪ್ರಾಯೊಗ್ಯಾಬ್ದಸಂಮಿತಂ | ಅಭಿಚಂದ್ರೊಭವನ್ನಾ ಮ್ನಾಚಂದ್ರಸೌಮ್ಯಾನನೊಮನುಃ || ೧೦೬ || ಕುಮುದಾಂಗ ಮಿತಾಯುಷ್ಕೊಜ್ವಲನ್ಮಕು ಟಕುಂಡಲಃ | ಪಂಚವರ್ಗಾಗ್ರಷಟ್ಜಾಪಶತೊತ್ಸೆಧಃಸ್ಪರತ್ತನುಃ || ೧೦೭ || ತಸ್ಯಕಾಪ್ರಜಾಸ್ತೊಕಮುಖಂವೀಕ್ಷ್ಯಲೆಸಕೌತುಕಂ | ಆಶಾಸ್ಯ

* * *

ದಂಥಾವರಾಗಿ ಹೋದರೊ ಅದ್ದರಿಂದ ಚಕ್ಷಃಷ್ಮಾ ನಿಂತೆಂದು ಅದನು || ೧೦೧ || ಬದಲಾಗೂ ಕೂಡ ವರ್ಷಕೋಟಿಗಳಾದಂಥ ಮನ್ವಂತರವನ್ನು ಕಳದು ಆದರೊ ಆ ಪ್ರಶಿದ್ದನಾದಂಥ ಯಸಸ್ಸು ಉಳ್ಳಂಥ ಒಂಭತ್ತನೇ ಮನು (ಯಶಸ್ವಾನ್) ಇಂತೆಂದು ಆದನು || ೧೦೨ || ದೊಡ್ಡವನಾದಂಥ, ಆತನಿಗೆ ಆಯುಷ್ಯವು, ಕುಮುದವೆಂಬ ಸಂಖ್ಯಾಪ್ರಮಾಣ ಉಳ್ಳಂಥಾದ್ದು. ದೇಹದ ಉತ್ಸೇಧವು ಆರುನುರು ಐವತ್ತು (೬೫೦) ಚಾಪಗಳು || ೧೦೩ || ಆತನ ಕಾಲದಲ್ಲಿ ಪ್ರಜೆಗಳು ಮೊಗುವಿನ ಮುಖವನ್ನು ನೋಡುವದೇ ಮೊದಲಾಗೋಣ ಹ್ಯಾಗೋ ಹಾಗೆ ಮಾಡಲ್ಪಟ್ಟಂಥ ಆಶೀರ್ವಾದ ಉಳ್ಳಂಥಾವರುಗಳಾಗಿ ಕ್ಷಣಕಾಲದಲ್ಲಿ ಇದ್ದು ಲೋಕಾಂತರವನ್ನು ಪಡದರು || ೧೦೪ || ಪ್ರಜೆಗಳು ಯಳೇಮಕ್ಕಳುಗಳು ಉಳ್ಳಂಥಾವರುಗಳಾಗಿ ಮಕ್ಕಳುಗಳ ಸಮಾಧಾನವನ್ನು ಹೇಳುವದರ ದೆಶೆಯಿಂದ ಆ ಮನುವಿನ ಯಶಸ್ಸನ್ನು ಯಾವಕಾರದೆಶೆಯಿಂದ ಹೊಗಳಿದರೋ ಆದ್ದರಿಂದ (ಯಶಸ್ವಾನಿಂತೆಂದು) ಆದನು || ೧೦೫ || ಅನಂತರದಲ್ಲಿ ಅದಕ್ಕೆ ಯೋಗ್ಯವಾದಂಥ ವರ್ಷ ಪ್ರಮಾಣ ಉಳ್ಳಂಥ, ಮನ್ವಂತರವನ್ನು ಅತಿಕ್ರಮಿಸಿ ಚಂದ್ರನೋಪಾದಿಯಲ್ಲಿ ಶಾಂತವಾದ ಮುಖ ಉಳ್ಳಂಥ ಮನುವು ಹೆಸರನಿಂದ ಅಭಿಚಂದ್ರನು ಆದನು || ೧೦೬ || ಕುಮುದಾಂಗವೆಂಬ ಸಂಖ್ಯೆಗೆ ಸಮಾನವಾದಂಥ ಆಯುಷ್ಯ ಉಳ್ಳಂಥಾವನು ಪ್ರಕಾಸಿಸುತ್ತಿರುವಂಥ ಕಿರೀಟವು ಹತ್ತಕಡ

* * *

ಕ್ರೀಡನಂಚಕ್ರುರ್ನಿಶಿಚಂದ್ರಾಭಿದರ್ಶನೈಃ || ೧೦೮ || ತತೊಭಿಚಂದ್ರ ಇತ್ಯಾಸೀದ್ಯ ತಶ್ಚಂದ್ರಮಭಿಸ್ಥಿತಾಃ | ಪುತ್ರಾನಾಕ್ರೀಡಯಾಮಾಸುಸ್ತತ್ಕಾಲೆತನ್ಮತಾಜ್ಜನಾಃ || ೧೦೯ || (ಏಕಾದಶಮೊಮನುಃ) ಪುನರಂತರಮುಲ್ಲಂಘ್ಯತತ್ಪ್ರಾಯೊಗ್ಯಸಮಾಶತೈಃ | ಚಂದ್ರಾಭ ಇತ್ಯಭೂತ್ಖ್ಯಾತಶ್ಚಂದ್ರಾಸ್ಯಃ ಕಾಲವಿನ್ಮನುಃ || ೧೧೦ || ನವುತಪ್ರಮೀತಾ ಯುಷ್ಕೊವಿಲಸಲ್ಲಕ್ಷಣೋಜ್ವಲಃ | ಧನುಷಾಃಷಟ್ಛತಾನ್ಯುಚ್ಚಃ ಪ್ರೊದ್ಯದರ್ಕ್ಕ ಸಮದ್ಯುತಿಃ || ೧೧೧ || ಸಪುಷ್ಕಲಾಃಕಲಾಭಿಭ್ರಮದಿತೊಜಗತಾಂ ಪ್ರಿಯಃ | ಸ್ಮಿತಜ್ಜ್ಯೊತ್ಸ್ನಾಭಿರಾಹ್ಲಾದಂಶಶೀವಸಮಜೀಜನತ್ || ೧೧೨ || ತಸ್ಯಕಾಲೆತಿ ಸಂಪ್ರೀತಾಃಪುತ್ರಾಶಾನ ದರ್ಶನೈಃ | ತುಗ್ಭಿಃಸಹಸ್ಮಜೀವಂತಿದಿನಾನಿಕತಿ ಚಿತ್ಪ್ರಜಾಃ || ೧೧೩ || ತತೊಲೊಕಾಂತರಪ್ರಾಪ್ತಿಮಭಜಂತ ಯಥಾಸುಖಂ | ಸತದಾಹ್ಲಾದನಾದಾಸೀಚ್ಚಂದ್ರಾಭ

* * *

ಕೂ ಉಳ್ಳಂಥಾವನು, ಐದರ ವರ್ಗ್ಗವೇ ಕೊನೆಯಲ್ಲಿ ಉಳ್ಳಂಥ ಆರು ಧನಸ್ಸುಯಗಳ ನೂರು (೧೦೦) ಉತ್ಸೇಧದಿಂದ ಪ್ರಕಾಸಿಸುತ್ತಿರುವಂಥ ಶರೀರ ಉಳ್ಳಂಥಾವನು || ೧೦೭ || ಆತನ ಕಾಲದಲ್ಲಿ ಪ್ರಜೆಗಳು ರಾತ್ರಿಯಲ್ಲಿ ಚಂದ್ರನನ್ನು ತೋರಿಸುವದರಿಂದ ಕೌತುಕದೊಡನೆ ಕೂಡಿಕ್ಕೊಂಡಿರೋಣ ಹ್ಯಾಗೋ ಹಾಗೆ ಮೊಗುವಿನ ಮುಖವನ್ನು ನೋಡಿ ಸಮಾಧಾನಪಡಿಸಿ ಆಟವನ್ನು ಮಾಡಿದರು || ೧೦೮ || ಯಾವಕಾರಣ ದ್ದೆಶೆಯಿಂದ ಆ ಮನುವಿನ ಕಾಲದಲ್ಲಿ ಆತನ ಒಡಂಬಡಿಕೆಯಿಂದ ಜನಗಳು ಚಂದ್ರನ ಎದುರಿಗೆ ನಿಂತಂಥಾವರಾಗಿ ಮಕ್ಕಳುಗಳನ್ನು ಆಡಸಿದರೊ ಆಕಾರಣ ದ್ದೆಶೆಯಿಂದ ಚಂದ್ರಾಭ ನಿಂತೆಂದು ಆದನು || ೧೦೯ || ಮತ್ತು ಅದಕ್ಕೆ ಯೋಗ್ಯವಾದ ವರ್ಷ ಶತಗಳಿಂದ ಮನ್ವಂತರವನ್ನು ಕಳಿದು ಚಂದ್ರನೋಪಾದಿಯಲ್ಲಿ ಮುಖವುಳ್ಳಂಥ ಕಾಲವನ್ನು ತಿಳಿದಂಥ ಮನುವು ಚಂದ್ರಾಭನಿಂತೆಂದು ಆದನು || ೧೧೦ || ನವುತ ನೆಂಬ ಸಂಖ್ಯೆಯ ಪ್ರಮಾಣಾಯುಷ್ಯ ಉಳ್ಳಂಥಾವನು ಹೊಳೆಯುತ್ತಿರುವಂಥಾ ಲಕ್ಷಣದಿಂದ ಪ್ರಕಾಶಮಾನ ನಾದಂಥಾವನು, ಉತ್ಸೇಧವು ಜಾಪಗಳ ಆರನೂರು (೬೦೦) ಉದಯಿಸುತ್ತಿರೂವಂಥ ಸೂರ್ಯ್ಯನಿಗೆ ಸಮಾನನಾದಂಥ ಕಾಂತಿಯುಳ್ಳವನು || ೧೧೧ || ಪುಷ್ಕಳವಾದಂಥ ಕಲೆಗಳನ್ನು ದರಿಸಿಕ್ಕೊಂಡುರಿವಂಥ ಲೋಕಗಳಿಗೆ ಯಿಷ್ಟನಾದಂಥ ಆ ಮನುವು ಹುಟ್ಟಿದನು. ಮುಗಳನಗೆ ಎಂಬಂಥ ಚಂದ್ರಿಕೆಗಳಿಂದ ಚಂದ್ರನೋಪಾದಿಯಲ್ಲಿ ಆಹ್ಲಾದವನ್ನು ಹುಟ್ಟಿಸಿದನು || ೧೧೨ || ಆತನ ಕಾ

* * *

ಇತಿವಿಶ್ರುತಃ || ೧೧೪ || (ದ್ವಾದಶಮೋಮನುಃ) ಮರುದ್ದೆವೋಭವೆತ್ಯಾಂತಃ ಕುಲಧೃತ್ತದನಂತರಂ | ಸ್ವೊಚಿತಾಂತರಮುಲ್ಲಂಘ್ಯೆ ಪ್ರಜಾನಾ ಮುತ್ಸವೋದೃಶಾಂ || ೧೧೫ || ಶತಾನಿಪಂಚ ಪಂಚಾಗ್ರಸಪ್ತತಿಶ್ಚಸಮುಛ್ರಿತಃ | ಧನೂಂಷಿನ ವುತಾಂಗಾ ಯುರ್ವ್ವಿವಸ್ವಾನಿವಭಾಸ್ಕರಃ || ೧೧೬ || ತಸ್ಯಕಾಲೆಪ್ರಜಾದೀರ್ಗ್ಘಂ ಪ್ರಜಾಭಿಃ ಸ್ವಾಭಿರನ್ವಿತಾಃ | ಪ್ರಾಣಿಷುಸ್ತನ್ಮುಖಾ ಲೊಕತದಂಗಸ್ಪರ್ಶನೊತ್ಸವೈಃ || ೧೧೭ || ಸತದುಚ್ಛಸಿತಂಯಸ್ಮಾತ್ತದಾಯತ್ತಸ್ವ ಜೀವಿಕಾಃ | ಪ್ರಜಾಜೀವಂತಿತೆನಾಭಿರ್ಮ್ಮರುದ್ದೆವ ಇತೀರಿತಃ || ೧೧೮ || ನೌದ್ರೊಣಿ ಸಂಕ್ರಮಾದೀನಿಜಲದುರ್ಗ್ಗೆಷ್ವಕಾರಯತ್ | ಗಿರಿದುರ್ಗ್ಗೆಷುಸೊಪಾನ ಪದ್ದತಿಃ ಸೊಧಿರೊಹಣೆ || ತಸ್ಯೈವಕಾಲೆಕುತ್ ಶೈಲಾಃಕುಸಮುದ್ರಃಕುನಿಮ್ನಗಾಃ | ಜಾತಾಸ್ಸಾ

* * *

ಲದಲ್ಲಿ ಮಕ್ಕಳ ಸಮಾಧಾನವನ್ನು ತೋರಿಸುವದ್ದರಿಂದ ಸಂತುಷ್ಟರಾದಂಥ ಜನಗಳು ಮಕ್ಕಳುಗಳೊಡನೆ ಕೂಡ ಕೆಲವು ದಿನಗಳಲ್ಲಿ ಜೀವಿಸಿದರು || ೧೧೩ || ಅನಂತರದಲ್ಲಿ ಸುಖವನ್ನು ಅತಿಕ್ರಮಿಸದೇ ಪರಲೋಕ ಪ್ರಾಪ್ತಿಯನ್ನು ಪಡದರು. ಆ ಸಮಯದಲ್ಲಿ ಆ ಮನುವು ಆ ಆಹ್ಲಾದನೇ ದೆಶೆಯಿಂದ ಚಂದ್ರಾಭನಿಂತೆಂದು ಪ್ರಶಿದ್ದನಾದಂಥಾವನು ಆದನು || ೧೧೪ || ಅದರ ಅನಂತರದಲ್ಲಿ ತನಗೆ ಯೋಗ್ಯವಾದ ಮನ್ವಂತರವನ್ನು ಕಳದು, ಪ್ರಜೆಗಳ ಕಣ್ಣುಗಳಿಗೆ ಸಂತೋಷ ಕರವಾದಂಥ ಮನೋಹರವಾದಂಥ ಮನುವಾದಂಥಾ ಮರದ್ದೇವನು ಆಗುತ್ತಾನೆ || ೧೧೫ || ಉತ್ಸೇಧವು ಐನೂರು ಎಪ್ಪತ್ತೈದು (೫೭೫) ಚಾಪಗಳುನಉತವೆಂಬ ಸಂಖ್ಯಾಪ್ರಮಾಣಾಯುಷ್ಯ ಉಳ್ಳಂಥಾವನು || ೧೧೬ || ಆತನ ಕಾಲದಲ್ಲಿ ಪ್ರಜೆಗಳು ಸ್ವಕೀಯರಾದಂಥ ಮಕ್ಕಳುಗಳೊಡನೆ ಕೂಡಿದಂಥಾವರಾಗಿ ಆ ಪ್ರಜೆಗಳ ಮುಖವನ್ನು ನೋಡೋಣವು, ಆ ಮಕ್ಕಳುಗಳ ಶರೀರ ಸ್ಪರ್ಶನವು, ಇವುಗಳ ಸಂತೋಷದಿಂದ ಬಹುಕಾಲದಲ್ಲಿ ಜೀವಿಸಿದರು || ೧೧೭ || ಯಾವ ಕಾರಣದ್ದೆಶೆಯಿಂದ ಆ ಮನುವು ಆ ಪ್ರಜೆಗಳ ಉಸರೋ ಆತನಿಗೆ ಸ್ವಾಧಿನವಾದಂಥ ತಮ್ಮ ಜೀವನವುಳ್ಳಂಥ ಪ್ರಜೆಗಳು ಜೀವಿಸುತ್ತಾರೆ. ಆದ್ದರಿಂದ ಈ ಪ್ರಜೆಗಳಿಂದ ಮರುದ್ದೇವನಿಂತೆಂದು ಹೇಳಲ್ಪಟ್ಟನು || ೧೧೮ || ಜಲದುರ್ಗ್ಗಗಳಲ್ಲಿ ಹಡಗು, ದೋಣಿ, ತೆಪ್ಪ ಮುಂತಾದವುಗಳನ್ನು ಮಾಡಿದನು. ಗಿರಿ ದುರ್ಗ್ಗಗಳಲ್ಲಿ ಹತ್ತು ವನಿಮಿತ್ತವಾಗಿಸೋಪಾನ ಮಾರ್ಗ್ಗಗಳನ್ನು ಮಾಡಿದನು || ೧೧೯ || ಆತನ ಕಾಲದಲ್ಲಿ ಕ್ಷುದ್ರ ಪರ್ವ್ವಗಳು ಕ್ಷು

* * *

ಸಾರಮೆಘಾಶ್ವಕಿಂರಾಜಾನಇವಾಸ್ಥಿರಾಃ || ೧೨೦ || (ತ್ರಯೊದಶಮೊಮನುಃ) ತತಃಪ್ರಸೆನಜಿಜ್ಜಜ್ಞೆಪ್ರಭವಿಷ್ಣುನಮನುಃರ್ಮಹಾನ್ | ಕರ್ಮ್ಮಭೂಮಿಸ್ಥಿತಾವೆವ ಮಭ್ಯರ್ಣ್ನಾಯಂಶನೈಶ್ಯನೈಃ || ೧೨೧ || ಪರ್ವ್ವಪ್ರಮಿತಮಾಮ್ನಾತಂ ಮನೊರಸ್ಯಾಯುರಂಜಸಾ | ಶತಾನಿಪಂಚಚಾಪಾನಾಂ ಶತಾರ್ದ್ದಮಚ ತಸುಚ್ಛಿತಿಃ || ೧೨೨ || ಪ್ರಜಾನಾಮದಿಕಂಚಕ್ಷುಸ್ತಮೊದೊಷೊರವಿಪ್ಲುತಃ | ಸೋಭಾದ್ರವಿರಿವಾ ಭ್ಯುದ್ಯನ್ಪದಾಕರಪರಿಗ್ರಹಾತ್ || ೧೨೩ || ತದಾಭೂದರ್ಬ್ಭ ಕೊತ್ಪತ್ತಿರ್ಜ್ಜರಾಯು ಪಟಲಾವೃತಾ | ತತಸ್ತತ್ಕರ್ಷಣೊಪಾಯಂಸ ಪ್ರಜಾನಾ ಮುಪಾದಿಶತ್ || ೧೨೪ || ತನುಸಂವರಣಂ ಯತ್ತಜ್ಜರಾಯುಪಟಲಂನೃಣಾಂ | ಸಪ್ರಸೇನೊಜಯಾ ತ್ತಸ್ಯಪ್ರಸೇನಜಿದಸಾ

* * *

ಲ್ಲಕ ಲವಣ ಸಮುದ್ರವು ಕುತ್ಸಿತ ನದಿಗಳು ಜಲಧಾರೆಯೊಡನೆ ಕೂಡಿಕ್ಕೊಂಡಿರುವ ಮೇಘಗಳೂ ಕೂಡ ಅಸ್ಥಿರವಾದಂಥ ಕುತ್ಸಿತ ಧೊರೆಯೋಪಾದಿಯಲ್ಲಿ ಹುಟ್ಟಿದವು || ೧೨೦ || ಅನಂತರದಲ್ಲಿ ಮೆಲ್ಲಮೆಲ್ಲಗೆಕರ್ಮ್ಮ ಭೂಮಿಯು ಸಮೀಪ ವರ್ತ್ತಿಯಾಗುತ್ತಿರಲಾಗಿ ದೊಡ್ಡವನಾದಂಥ ವೃದ್ಧಿ ಹೊಂದುವಂಥ ಮನುವಾದಂಥ ಪ್ರಸೇನಜಿತ್ತು ಹುಟ್ಟಿದನು || ೧೨೧ || ಆ ಮನುವಿಗೆ ನಿಶ್ಚಯವಾಗಿ ಪರ್ವ್ವವೆಂಬ ಪ್ರಮಾಣ ವುಳ್ಳಂಥಾ ಆಯುಷ್ಯವೂ ಹೇಳಲ್ಪಟ್ಟತು. ಆತನ ಉತ್ಸೇಧವು ಧನುಸ್ಸುಗಳ ಐದನೂರು ಐವತ್ತು (೫೫೦) || ೧೨೨ || ಪ್ರಜೆಗಳಿಗೆ ಅಧಿಕವಾದ ಕಣ್ಣಾದಂಥ ಅಜ್ಞಾನವೆಂಬ ಅಂಧಕಾರ ದೋಷಗಳಿಂದ ಕೂಡದೇ ಇರುವಂಥ ವೃದ್ಧಿಯನ್ನು ಹೊಂದುತ್ತಿರುವಂಥ ಪದ್ಮೆ ಎಂಬ ಸ್ತ್ರೀಯ ಹಸ್ತವೆಂಬಂಥ ಸರೋವರ ಪರಿಗ್ರಹ ದ್ದೆಶೆಯಿಂದ ಸೂರ್ಯ್ಯನೋಪಾದಿಯಲ್ಲಿ ಪ್ರಕಾಸಿಸಿದರು || ೧೨೩ || ಆ ಸಮಯದಲ್ಲಿ ಜರಾಯು ಪಟದಿಂದ ಸುತ್ತಿಕ್ಕೊಂಡು ಇರುವಂಥ ಮೊಗುವಿನ ಉತ್ಪತ್ತಿಯು ಉಂಟಾಯಿತು ಆ ಕಾರಣ ದ್ದೆಶೆಯಿಂದ ಆ ಪ್ರಸೇನಜಿತ್ತೆಂಬ ಮನುವು ಆ ಜಾರಾಯುವನ್ನು ತೆಗೆ ಯತಕ್ಕ ಲಕ್ಷಣವನ್ನು ಉಪದೇಶ ಮಾಡಿದನು || ೧೨೪ || ಮನುಷ್ಯರುಗಳ ಶರೀರವನ್ನು ಸುತ್ತಿಕ್ಕೊಂಡಿರುವದು ಯಾವದೋ ಅದು, ಜರಾಯುವೆಂಬ ನಾಮ ಉಳ್ಳಂಥಾದ್ದಾಗುತ್ತೆ. ಆ ಜರಾಯುವೇಯೆ ಪ್ರಸೇನವೆಂಬ ಹೆಸರು ಉಳ್ಳಂಥಾದ್ದು ಆ ಜಾರಾಯುವನ್ನು ಜೈಯಿಸುವದರ ದೆಶೆಯಿಂದ ಈ ಮನುವು ಪ್ರಸೇನ ಜಿತ್ತೆಂದು ಸ್ಮರಿಸಲ್ಪಟ್ಟನು || ೧೨೫ || ಪ್ರಸಾ ಎಂದರೆ ಪ್ರಸೂತಿಯು, ಅ

* * *

ಸ್ಮೃತಃ || ೧೨೫ || ಪ್ರಸಾಪ್ರಸೂತಿಃ ಸಂರೊದಾದಿನಸ್ತ ಸ್ಯಾಃಪ್ರಸನಕಃ | ತದ್ಧಾನೋಪಾಯ ಕಥನಾತ್ತಜ್ಜಯಾದ್ವಾಪ್ರಸೇನಜಿತ್ || ೧೨೬ || (ಚತುರ್ದಶಮೊ ಮನುಃ) ತದನಂತರಮವಾಭೂ ನ್ನಾಭಿಃಕುಲಧರಃಸುಧೀಃ | ಯುಗಾದಿಪುರುಪೈಃ ಪೂರ್ವ್ವೈರುಢಾಂಧುರಮುದ್ವಹನ್ || ೧೨೭ || ಪೂರ್ವ್ವಕೊಟಿಮಿತಂತಸ್ಯಪಠ ಮಾಯುಸ್ತದುಚ್ಛ್ರಿತಿಃ | ಶತಾನಿಪಂಚಚಾಪಾನಾಂ ಪಂಚವರ್ಗ್ಗಾ ಧಿಕ್ಕಾನಿವೈ || ೧೨೮ || ತಸ್ಯಕಾಲೆಸುತ್ತೊತ್ಪತೌನಾಭಿನಾಲಮದೃಶ್ಯತ | ಸತಸ್ನಿಕರ್ತ್ತನೊಪಾ ಯಮಾದಿಶನ್ನಾಭಿರಿ ತ್ಯಭೂತ್ || ೧೨೯ || ತಸ್ಯೈವ ಕಾಲೆಜಲದಾಃಕಾಳಿಕಾಃಕರ್ಬುರತ್ವಿಷಃ | ಪ್ರಾದುರಾ ಸನ್ನಬೊಭಾಗೆ ಸಾಂಧ್ರಾಃಸೆಂದ್ರಶರಾಸನಾಃ || ೧೩೦ || ನಭೊನೀರಂಧ್ರಮಾರುಂದನ್‌ಜಜೃಂಭೆಂಭೊ ಮುಚಾಂಚಯಃ | ಕಾಲಾದುದ್ಭೂತಸಾಮರ್ರ‍್ಥೈ‍ರಾರಬ್ದಃ ಸೂಕ್ಷ್ಮಪುದ್ಗಲೈಃ || ೧೩೧ || ಶನೈ

* * *

ದಕ್ಕೆ ಕಡೆಯಾದ್ದರ ದೆಶೆಯಿಂದ ಪ್ರಸೇನವೆಂಬ ಹೆಸರಾಯಿತು. ಆ ಪ್ರಸೇನವನ್ನು ಹೋಗಲಾಡಿಸುವ ಉಪಾಯವನ್ನು ಹೇಳುವದರ ದೆಶೆಯಿಂದ ಆ ಪ್ರಸೇನವನ್ನು ಜಯಿಸುವದರ ದೆಶೆಯಿಂದಲಾದಾಗ್ಯೂ ಪ್ರಸೇನಜಿತ್ತೆಂದು ಆಗುತ್ತಾನೆ || ೧೨೬ || (ನಾಬಿರಾಜ) ಅವನ ಅನಂತರದಲ್ಲಿಯೇ ಪುರಾತನರಾದ ಯುಗಾದಿ ಪುರುಷರು ಗಳಿಂದ ವಹಿಸಲ್ಪಟ್ಟಂಥಾ ಭಾರವನ್ನು ವಹಿಸಿಕ್ಕೊಂಡಿರುವಂಥ ಬುದ್ಧಿಶಾಲಿ ಯಾದ ನಾಭಿನಾಮಕನಾದಂಥ ಕುಲಧರನು ಆದನು || ೧೨೭ || ಅವನ ಪರಮಾಯುಷ್ಯವು ಪೂರ್ವ್ವಕೋಟಿಮಿತವಾದಂಥಾದ್ದು, ಅವನ ಉನ್ನತಿಯು ಐನೂರು ಇಪ್ಪತ್ತೈದು (೫೨೫) ಬಿಲ್ಲು || ೧೨೮ || ಆತನ ಕಾಲದಲ್ಲಿ ಮೊಗುವಿನ ಉತ್ಪತ್ತಿಯಲ್ಲಿ ನಾಭಿನಾಳವು ಕಾಣಲ್ಪಟ್ಟಿತು. ಅದನ್ನು ಕತ್ತಿರುಸುವ ಉಪಾಯವನ್ನು ಉಪದೇಶ ಮಾಡಿದಂಥ ಆ ಮನುವು ನಾಭಿಯೆಂತ ಆದನು || ೧೨೯ || ಆತನ ಕಾಲದಲ್ಲಿಯೇ ಆಕಾಶ ಭಾಗದಲ್ಲಿ ದಟ್ಟವಾಗಿ ಸೇರಿರುವಂಥ ಇಂದ್ರಧನುಸ್ಸಿನೊಡನೆ ಕೂಡಿದಂಥ ಕರ್ಬುರ ವರ್ಣ್ನಗಳಾದಂಥ ಮೇಘಗಳು ಉತ್ಪನ್ನಗಳಾದವು || ೧೩೦ || ಆಕಾಶವನ್ನು ರಂಧ್ರವಿಲ್ಲದೇ ಇರೋಣ ಹ್ಯಾಗೋ ಹಾಗೆ ತಡೆಯುತ್ತಿರುವಂಥ, ಕಾಲದ್ದೆಶೆಯಿಂದ ಉತ್ಪನ್ನವಾದ ಸಾಮರ್ತ್ಥ್ಯಉಳ್ಳಂಥ ಸೂಕ್ಷ್ಮಪುದ್ಗಲಗಳಿಂದ ಆರಂಭಿಸಲ್ಪಟ್ಟಂಥ ಮೇಘ ಸಮೂಹವು ಅವಿರ್ಭವಿಸಿತು || ೧೩೧ || ಆ ಸಮಯದಲ್ಲಿ ಭೂಮಿಗಳಲ್ಲಿ

* * *

ಶ್ಯನೈರ್ವ್ವಿವೃದ್ಧಾನಿಕ್ಷೇತ್ರೆಷ್ವವಿರಲಂತದಾ | ಸಸ್ಯಾನ್ಯಕೃಷ್ಟಪಚ್ಚಾನಿನಾನಾಭೆದಾನಿ ಸರ್ವ್ವತಃ || ೧೩೨ || ಪ್ರಜಾನಾಂಪೂರ್ವ್ವಸುಕೃತಾತ್ ಕಾಲಾದಪಿಚತಾದೃಶಾತ್ | ಸುಪಕ್ವಾನಿಯಥಾ ಕಾಲಂಫಲದಾ ಯಿನಿರೇಜಿರೆ || ೧೩೩ || ಷಷ್ಟಿಕಾಕಲಮಪ್ರೀಹಿಯವ ಗೊಧುಮ ಕಂಗವಃ | ಶ್ಯಾಮಾಕಕೊ ದ್ರಮೊದಾರನೀವಾರವರಕಾಸ್ತಥಾ || ೧೩೪ || ತಿಲಾತಸ್ಯಾಮಸೂರಾಶ್ಚಸರ್ಷಪೊಧಾನ್ಯಜೀರಿಕೆ ಮುದ್ಗಮಾಷಾಢಕೀರಾಜಮಾಷನಿ ಷ್ಟಾವಕಾಶ್ಚಣಾಃ || ೧೩೫ || ಕುಲತ್ಥತಿಪುಟೌಚೆತಿ ಧಾನ್ಯ ಭೆದಾಸ್ತ್ವಿಮೆಮತಾಃ | ಸಕುಸಂಭಾಸಕಾರ್ಪ್ಪಾಸಾಃಪ್ರಜಾಜೀವನ ಹೇತವಃ || ೧೩೬ || ಉಪ ಭೊಗ್ಯೆಷುವಾನ್ಯೆಷುಸತ್ಸ್ವಪ್ಯೆಷುತದಾಪ್ರಜಾಃ | ತದುಪಾಯಮಜಾನಾನಾಃ ಸ್ವಯತೊ ಮೂರ್ಮುಹುರ್ಮು ಹುಃ || ೧೩೭ || ಕಲ್ಪದೃಮೆ

* * *

ವಿರಳವಿಲ್ಲದೇ ಇರೋಣ ಹ್ಯಾಗೋ ಹಾಗೆ, ಉಳದೇ ಬೆಳೆಯತಕ್ಕಂಥ ನಾನಾ ಭೇದಗಳುಳ್ಳಂಥ ಪೈರುಗಳು ಎಲ್ಲಾ ಕಡೆಯಲ್ಲೂ ಮೆಲ್ಲಮೆಲ್ಲಗೆ ಅತ್ಯಂತ ವೃದ್ಧಿಯನ್ನು ಹೊಂದಿದವು || ೧೩೨ || ಪ್ರಜೆಗಳ ಪೂರ್ವಪುಣ್ಯ ದೆಶೆಯಿಂದಲೂ ಆ ಪ್ರಕಾರವಾದ ಕಾಲದ ದೆಶೆಯಿಂದಲೂ ಕೂಡ ಕಾಲವನ್ನು ಅತಿಕ್ರಮಿಸದೆ ಪರಿಪಕ್ವಗಳಾಗಿಯು, ಫಲವನ್ನು ಕೊಡುವವುಗಳಾಗಿಯೂ ಪ್ರಕಾಸಿಸಿದವು || ೧೩೩ || ಅರುವತ್ತು (೬೦) ದಿನಕ್ಕೆ ಆಗ ತಕ್ಕ ಭತ್ತ, ಸಣ್ಣ ಭತ್ತ, ಧಪ್ಪ ಭತ್ತ ಜವೇಗೋದಿ, ಹೊಟ್ಟೇಗೋದಿ ಕಬ್ಬು, ಸಾಮೆ, ಹಾರಕ, ಶ್ರೇಷ್ಠವಾದ ನವಣೆವರಕವೆಂಬ ಧಾನ್ಯಗಳು || ೧೩೪ || ಎಳ್ಳು ಮಸೂರವೆಂಬ ಧಾನ್ಯಗಳು, ಸಾಸವೆ, ಕೊತ್ತುಂಬರಿ, ಜೀರಿಗೆ, ಹೆಸರು, ಉದ್ದು, ತೊಗರಿ, ಹಲಸಂದೆ, ಅವರೆ, ಕಡಳೆ. || ೧೩೫ || ಹುರಳಿ, ತ್ರಿಪುಟವೆಂಬ ಧಾನ್ಯವೆಂತೆಂದುಕು ಸುಂಬೆಯೊಡನೆಕೂಡಿದಂತ ಹತ್ತಿಯೊಡನೆ ಕೂಡಿದಂಥ ಪ್ರಜೆಗಳ ಜೀವನಕ್ಕೆ ಕಾರಣಗಳಾದಂತ ಇವುಗಳು ಧಾನ್ಯ ಭೇದಗಳಾಗಿ ಸಮ್ಮತ ಗಳಾದಂಥಾ ವುಗಳು || ೧೩೬ || ಆ ಸಮಯದಲ್ಲಿ ಪ್ರಜೆಗಳು ಇನ್ನೂ ಉಪಭೋಗ್ಯಗಳು ಇದ್ದಾಗ್ಯೂ ಕೂಡ ತಮ್ಮಗಳ ದೆಶೆಯಿಂದ ಅದರ ಉಪಾಯವನ್ನು ತಿಳಿಯದೇ ಇರುವಂಥಾವರಾಗಿ ಭಾರಿಭಾರಿಗೂ ಮೂರ್ಛೆ ಹೋದರು || ೧೩೭ || ಕಲ್ಪವೃಕ್ಷಗಳು ಅತ್ಯಂತವಾಗಿ ಅಡಿಗಿ ಹೋದಂಥಾವುಗಳು ಆಗುತ್ತಿರಲೀಕಾಗಿ ಈ ಯುಗದ ಪರಿವರ್ತನೆಯಲ್ಲಿ, ಪ್ರಜೆಗಳು ನಿರಾಶ್ರಯರಾಗಿ ಅತ್ಯಂತ ವ್ಯಾಕುಲ

* * *

ಷುಕಾರ್ತ್ಸ್ನೆಪ್ರಲೀನೇಷುನಿರಾಶ್ರಯಾಃ | ಯುಗಸ್ಯಪರಿವರ್ತ್ತೆಸ್ಮಿನ್ನಭೂವನ್ನಾ ಕುಲಾಕುಲಾಃ || ೧೩೮ || ತೀವ್ರಾಯಾಮಶನಾಯಾಯುಮುದೀರ್ಣ್ನಾಹಾರಸಂಜ್ಞಕಾಃ | ಜೀವನೊ ಪಾಯಸಂಶೀತಿವ್ಯಾಕುಲೀ ಕೃತಚೆತಸಃ || ೧೩೯ || ಯುಗಮುಖ್ಯ ಮುಪಾಸೀನಾನಾಭಿಂ ಮನುಮಪಶ್ಚಿಮಂ | ತೆತಂವಿಜ್ಞಾಪಯಾಮಾಸುರಿ ತಿದೀನಗಿರೊನರಾಃ || ೧೪೦ || ಜೀವಾಮಃಕಥಮೆವಾದ್ಯನಾಥಾ ವಿನಾದೃಮೈಃ | ಕಲ್ಪದಾಯಿಭಿರಾಕಲ್ಪಮ ವಿಸ್ಮಾರ್ಯ್ಯೈರಪುಣ್ಯಕಾಃ || ೧೪೧ || ಇಮೆಕೆಚಿದಿತೊ ದೆವತರುಭೆದಾ ಸ್ಸಮುತ್ಥಿತಾಃ | ಶಾಖಾಭಿಃಫಲನಮ್ರಾಭಿ ಹ್ವಯಂತಿವನೊಧುನಾ || ೧೪೨ || ಕಿಮಿಮೆ ಪರಿಹರ್ತ್ತವ್ಯಾಃಕಿಂವಾಭೊಗ್ಯಫಲಾಇಮೆ | ಫಲೆಗ್ರಹೀನಿಮೆಸ್ಮಾನ್ವಾ ನಿಗೃಹಂತ್ಯನಿಪಾಂತಿವಾ || ೧೪೩ || ಅಮೀಷಾಮುಪಶಲ್ಯೆಷುಕೆಷೃಮೀ

* * *

ರಾದಂಥಾವರಾಗಿ ಆದರು || ೧೩೮ || ಅಶನಾ ಪೇಕ್ಷೆಯು ತೀವ್ರವಾದಂಥಾ ದ್ದಾಗುತ್ತಿರಲೀಕಾಗಿ ಉತ್ಪನ್ನವಾದ ಆಹಾರ ಸಂಜ್ಞೆಉಳ್ಳಂಥ ಅತ್ಯಂತ ವ್ಯಾಕುಲವುಳ್ಳ ವರಾಗಿ ಮಾಡಲ್ಪಟ್ಟಂತ ಈ ಪ್ರಜೆಗಳು ಜೀವನೋಪಾಯವನ್ನು, ಹೇಳತಕ್ಕಂಥಾವನು ಇಂತೆಂದು || ೧೩೯ || ಯುಗಮುಖ್ಯನಾದಂಥ ಸಮರ್ಥನಾದಂಥ ನಾಭಿ ನಾಮ ಕನಾದಂಥ ಮನುವನ್ನು ಆಶ್ರಯಿಸಿದರು. ದೀನವಾದ ವಾಕ್ಕುಉಳ್ಳ ಆ ಮನಷ್ಯರುಗಳು ಆ ಮನುವನ್ನು ಕುರಿತು ವಿಜ್ಞಾಪನೆ ಮಾಡಿದರು || ೧೪೦ || ಎಲೇ ಸ್ವಾಮಿಯೇ, ಈಗ ಅನಾಥರಾದಂಥ ನಾವುಗಳು ಇಷ್ಟಾರ್ತ್ಥ್ವವನ್ನು ಕೊಡತಕ್ಕಂಥ ಪ್ರಳಯ ಪರ್ಯಂತರದಲ್ಲೂ ಸ್ಮರಿಸಲು ಯೋಗ್ಯಗಳಾದಂಥ ವೃಕ್ಷಗಳನ್ನು ಬಿಟ್ಟು ಹ್ಯಾಗೆ ಜೀವಿಸೇವು. ಪುಣ್ಯ ಹೀನರಾದಂಥಾ ವರುಗಳು || ೧೪೧ || ಎಲೇ ಸ್ವಾಮಿಯೇ, ಈಚಿಗೆ ಈ ಕೆಲವು ವೃಕ್ಷಭೇದಗಳು ಹಣ್ಣುಗಳಿಂದ ಬಾಗಿಯಿರುವಂಥ ಕೊಂಬುಗಳಿಂದ ಈಗ ನಮ್ಮನ್ನು ಕರೆಯುತ್ತವೋ ಯೆಂಬುವಹಾಗೆ ಹುಟ್ಟಿದಂಥಾವುಗಳು || ೧೪೨ || ಇವುಗಳು ಬಿಡುವದಕ್ಕೆ ಯೋಗ್ಯಗಳಾದಂಥಾವುಗಳೋ ಯೇನು, ಹಾಗಲ್ಲದೇಹೋದರೆ ಭೋಗಿಸುವದಕ್ಕೆ ಯೋಗ್ಯಗಳಾದಂಥಾ ಹಣ್ಣುಗಳೊ ಯೇನು, ಇವುಗಳು ಹಣ್ಣುಗಳನ್ನು ಗ್ರಹಿಸತಕ್ಕಂಥ ನಮ್ಮಗಳನ್ನು ನಿಗ್ರಹಿಸುತ್ತವೆಯೇ ಅಥವಾ ಸಂರಕ್ಷಣೆ ಮಾಡುತ್ತವೆಯೇ || ೧೪೩ || ಇವುಗಳ ಸಮೀಪದಲ್ಲಿ ಕೆಲವು ಹುಲ್ಲುಗಳು, ಮೆಳೆಗಳು, ಹಣ್ಣುಗಳಿಂದ ಬಗ್ಗಲ್ಪಟ್ಟ ಕೊನೆಗಳ್ಳುಳ್ಳಂ

* * *

ತೃಣಗುಲ್ಮಕಾಃ | ಫಲಾನಮ್ರಶಿಖಾಭಾಂತಿವಿಶ್ವದಿಕ್ಕಮಿತೊಮುತಃ || ೧೪೪ || ಕಏಷಾಮುಪಯೊಗಃ ಸ್ಯಾದ್ವಿನಿಯೊಜ್ಯಾಃಕಥಂನುವಾ | ಕಿಮಿಮೆಸ್ವೈರಸಂಗ್ರಾಹ್ಯಾನವೆತೀ ದಂವದಾದ್ಯನಃ || ೧೪೫ || ತ್ವಂದೆವಸರ್ವ್ವ ಮಪ್ಯೆತದ್ವೆತ್ಸಿನಾಭೆನಭಿಜ್ಞಕಾಃ | ಪೃಚ್ಛಾಮೊವಯಮದ್ಯಾರ್ತ್ತಾಸ್ತತೊಬ್ರೂಹಿ ಪ್ರಸೀದನಃ || ೧೪೬ || ಇತಿಕರ್ತವ್ಯತಾಮೂ ಢಾನತಿಭೀತಾನ್‌ಸ್ತದಾರ್ಯ್ಯಕಾಸ್ | ನಾಭಿರ್ನ್ನಭೆಯಮಿತ್ಯುಕ್ತ್ವಾವ್ಯಾ ಜಹಾರಪುನಸ್ಸತಾ ನ್‌ || ೧೪೭ || ಇಮೆಕಲ್ಪತ ರೂಚ್ಛೆದದ್ರುಮಾಪಶ್ಚಫಲಾನತಾಃ | ಯುಷ್ಮಾನವ್ಯಾ ನುಗೃಹ್ಣಂತಿಪುರಾ ಕಲ್ಪದೃಮಾಯಥಾ || ೧೪೮ || ಭದ್ರಕಾಸ್ತದಿಮೆ ಭೊಗ್ಯಾಕಾರ್ಯ್ಯಾನ ಭ್ರಾಂತಿರತ್ರವಃ | ಅಮೀಚಪರಿಹರ‍್ತವ್ಯಾದೊರತೊವಿಷವೃಕ್ಷಕಾಃ || ೧೪೯ ||

* * *

ಥಾವುಗಳಾಗಿ ಸಮಸ್ತದಿಕ್ಕಿನಲ್ಲಿಯೂ ಇಲ್ಲಿ ಅಲ್ಲಿ ಪ್ರಕಾಸಿಸುತ್ತವೆ || ೧೪೪ || ಇವುಗಳ ಉಪಭೋಗವುಯಾವದಾಗುತ್ತೆ. ಹ್ಯಾಗೆ ವಿನಿಯೋಗಿಸುವದಕ್ಕೆ ಯೋಗ್ಯಗಳಾ ದಂಥಾವುಗಳು ಇವುಗಳು ಯಧೇಚ್ಛವಾಗಿ ಸಂಗ್ರಹಿಸುವದಕ್ಕೆಯೋಗ್ಯಗಳಾದಂಥಾ ವುಗಳೋ ಏನು, ಅಥವಾ ಇಲ್ಲವೋ ನಮಗೆ ಇದನ್ನ ಹೇಳು || ೧೪೫ || ಎಲೇ ಸ್ವಾಮಿಯೇ, ನೀನು ಈ ಸರ್ವವನ್ನು ತಿಳಿಯುತ್ತೀಯೆ, ಎಲೇ ನಾಭಿರಾಜನೇ, ತಿಳಿಯದೇಯಿರುವಂಥ ಈಗ ಖಿನ್ನರಾದಂಥ ನಾವುಗಳು ಪ್ರಶ್ನೆ ಮಾಡುತ್ತೇವೆ. ಆ ಕಾರಣದ್ದೆಶೆಯಿಂದ ಹೇಳು ನಮಗೆ ಪ್ರಸನ್ನನಾಗು || ೧೪೬ || ಈ ಪ್ರಕಾರವಾಗಿ ಮಾಡುವದಕ್ಕೆ ಯೋಗ್ಯವಾದ ಭಾವದಲ್ಲಿ ಮೂಢರಾದಂಥ ಅತ್ಯಂತ ಭೀತರಾದಂಥ ಆರ್ಯರನ್ನು ಕುರಿತು, ಆ ಸಮಯದಲ್ಲಿ ನಾಭಿರಾಜನು ಭಯಪಡುವದಕ್ಕೆ ಯೋಗ್ಯವಾದ್ದಲ್ಲ, ಇಂತೆಂದು ಹೇಳಿ ಪುನಹಾ ಅವರುಗಳನ್ನು ಕುರಿತು ಹೇಳಿದನು || ೧೪೭ || ಈ ವೃಕ್ಷಗಳು ಕಲ್ಪವೃಕ್ಷದ ನಾಶದಲ್ಲಿ ಪಕ್ವವಾದ ಹಣ್ಣುಗಳಿಂದ ಕಲ್ಪವೃಕ್ಷದ ನಾಶದಲ್ಲಿ ಪಕ್ವವಾದ ಹಣ್ಣುಗಳಿಂದ ಬಗ್ಗಿರುವಂಥಾವುಗಳಾಗಿ ಪೂರ್ವದಲ್ಲಿ ಕಲ್ಪವೃಕ್ಷಗಳು ಹ್ಯಾಗೋ ಹಾಗೆ ಈಗ ನಿಮ್ಮನ್ನು ಅನುಗ್ರಹಿಸುತ್ತವೆ || ೧೪೮ || ಎಲೇ ಮಂಗಳಸ್ವರೂಪರಾದಂಥಾವರೇ, ಈ ವೃಕ್ಷಗಳು ಭೋಗಿಸುವದಕ್ಕೆ ಯೋಗ್ಯಗಳಾದಂ ಥಾವುಗಳಾಗಿ ಮಾಡುವದಕ್ಕೆ ಯೋಗ್ಯವಾದಂಥಾವುಗಳು, ಆ ಕಾರಣದ್ದೆಶೆಯಿಂದ ನಿಮಗೆ ಭ್ರಾಂತಿಯು ಬೇಡ. ವಿಷವೃಕ್ಷಗಳಾದ ಇವುಗಳು ದೂರದಲ್ಲಿ ಬಿಡುವದಕ್ಕೆ ಯೋಗ್ಯವಾದಂಥಾವುಗಳು || ೧೪೯ || (ಈ ಔಷವಿಧಿಗಳು) ಸ್ತಂಭಕರಿಯೇ ಮುಂತಾದವುಗಳಾಗಿ

* * *

ಇಮಾಶಸರ್ವ್ವೌಷಧಯಃಸ್ತಂಭಕರ್ಯ್ಯಾದಯೊಮತಾಃ || ಏತಾಸಂಭೊಜ್ಯಮನ್ನಾದ್ಯಂ ವೃಂಜನಾ ದ್ಯೈಸುಸಂಸ್ಕೃತಃ || ೧೫೦ || ಸ್ವಭಾವಮಧುರಾಶ್ಚೈತೆ ದೀರ್ಗ್ಘಾಃಪುಂಡ್ರೆಕ್ಷು ದಂಢಕಾಃ | ರಸೀಕೃತ್ಯ ಪ್ರಪಾತವ್ಯಾದಂತೈರ್ಯ್ಯಂತ್ರೈಶ್ಚ ಪೀಡಿತಾಃ || ೧೫೧ || ಗಜಕುಂಭಸ್ಥಲೆತನಮೃದಾನಿರ್ವ್ವತ್ತಿತಾನಿಚ | ಪಾತ್ರಾಣಿ ವಿವಿಧಾನ್ಯೆಷಾಂಸ್ಥಾಲ್ಯಾದೀನಿ ದಯಾಲುನಾ || ೧೫೨ || ಇತ್ಯಾದ್ಯುಪಾಯ ಕಥೆನೈಃ ಪ್ರೀತಾಃಸತ್ಕೃತ್ಯತಂಮನುಂ | ಭೆಜೆಸ್ತದ್ದರ್ಶಿತಾಂವೃತ್ತಿಂಪ್ರಜಾಃಕಾಲೊಚಿತಾಂತದಾ || ೧೫೩ || ಪೂರ್ವ್ವಂ ವ್ಯಾವರ್ಣ್ನಿ ತಾಯೆಯೆಪ್ರತಿಶ್ರುತ್ಯಾದಯಃ ಕ್ರಮಾತ್ | ಪುರಾಭವೆಬಭೂವುಸ್ತೆವಿದೆ ಹೆಷುಮಹಾ ನ್ವಯಾಃ || ೧೫೪ || ಕುಶಲೈಃಪಾತ್ರದಾನಾದ್ಯೈರನುಷ್ಠಾನೈರ್ಯಥೊಚಿತೈಃ | ಸಮ್ಯಕ್ತ್ವ ಗ್ರಹಣಾ ತ್ಪೂರ್ವ್ವಂಬಧ್ವಾಯುರ್ಭೊಗಭೂಭುವಾಂ || ೧೫೫ || ಪಶ್ಚಾತ್ಕ್ಷಾಯಿಕಸಮ್ಯ

* * *

ಸಮ್ಮತವಾದಂಥಾವುಗಳು. ಇವುಗಳ ಅನ್ನ ಮೊದಲಾದಂಥಾದ್ದುವ್ಯಂಜನ ಮುಂತಾದವುಗಳಿಂದ ಸಂಸ್ಕರಿಸಲ್ಪಟ್ಟದ್ದಾಗಿ ಭೋಗಿಸುವದಕ್ಕೆಯೋಗ್ಯವಾದಂಥಾದ್ದು || ೧೫೦ || (ಸ್ವಭಾತತಃ) ಸಿಹಿಯಾಗಿರುವಂಥ ದೀರ‍್ಘಗಳಾದಂಥರ ಸದಾಳೇಕಬ್ಬಿನ ದಂಡಗಳು ಹಲ್ಲುಗಳಿಂದಲೂ ಗಾಣಗಳಿಂದಲೂ ಪೀಡಿಸಲ್ಪಟ್ಟಂಥಾವು ಗಳಾಗಿ, ಫಾನಮಾಡುವದಕ್ಕೆ ಯೋಗ್ಯಗಳಾದಂಥಾವುಗಳು || ೧೫೧ || ದಯಾಶಾಲಿಯಾ ದಂಥನಾಭಿರಾಜನಿಂದ ಈ ಪ್ರಜೆಗಳಿಗೆ ಸ್ಥಾಲೀ ಮೊದಲಾದ ನಾನಾ ಪ್ರಕಾರಗಳಿಂದ ಪಾತ್ರೆಗಳು ಆನೇ ಕುಂಭಸ್ಥಳದಲ್ಲಿ ಮಣ್ಣಿನಿಂದ ಮಾಡಲ್ಪಟ್ಟವು || ೧೫೨ || ಇತ್ಯಾದಿ ಉಪಾಯವನ್ನು ಹೇಳುವದರಿಂದ ಪ್ರೀತಿಹೊಂದಿದಂಥಾ ಪ್ರಜೆಗಳು ಆ ಮನುವನ್ನು ಸತ್ಕರಿಸಿ, ಅವನಿಂಧ ತೋರಿಸಲ್ಪಟ್ಟಂಥ ಕಾಲೋಚಿತವಾದಂಥ ಜೀವನ್ನು ಆ ಸಮಯದಲ್ಲಿ ಪಡೆದರು || ೧೫೩ || ಪ್ರತಿಶ್ರುತಿಮೊದಲಾದ ಯಾವ ಯಾವ ಮನುಗಳು ಕ್ರಮವಾಗಿ ಪೂರ್ವದಲ್ಲಿ ವ್ಯಾವರ್ಣ್ನಿಸಲ್ಪಟ್ಟರೊ ಅವರುಗಳು ಪೂರ್ವ ಭವದಲ್ಲಿ ಮಹಾ ವಂಶವುಳ್ಳಂಥಾವರುಗಳಾಗಿ ವಿದೇಹ ಕ್ಷೇತ್ರಗಳಲ್ಲಿ ಆದರು || ೧೫೪ || ಕುಶಲಗಳಾದಂಥ ಪಾತ್ರದಾನಗಳಿಂದಲೂ ಯಥಾ ಯೋಗ್ಯವಾದಂಥಾ ಅನುಷ್ಠಾನಗಳಿಂದಲೂ, ಸಮ್ಯಕ್ತ್ವ ಗ್ರಹಣಕ್ಕಿಂತ ಪೂರ್ವದಲ್ಲೇ ಬೋಗಭೂವಿಜರ ಆಯುಷ್ಯವನ್ನು ಕಟ್ಟಿ || ೧೫೫ || ಕ್ಕೊಂಡು ಅನಂತರದಲ್ಲಿ ಜಿನೇಸ್ವರನ ಸಮೀಪದಲ್ಲಿ ಕ್ಷಾಯಿಸ ಸಮ್ಯಕ್ತ್ವವನ್ನು ತೆಗೆದು

* * *

ಕ್ತ್ವಮುಪಾದಾಯಜಿನಾಂತಿಕೆ | ಅತ್ರೊದಪತ್ಸತಸ್ವಾಯುರಂತೆ ತೆಶ್ರುತ ಪೂರ್ವ್ವಿಣಃ || ೧೫೬ || ಇಮಂನಿಯೋಗಮಾಧ್ಯಾಯಪ್ರಜಾನಾಮಿತ್ಯು ಪಾದಿಶನ್ | ಕೆಚಿಜ್ಜಾತಿಸ್ಮರಾಸ್ತೆಷುಕೆಚಿಚ್ಚಾವಧಿಲೊಚರಾಃ || ೧೫೭ || ಪ್ರಜಾನಾಂಜೀವನೊಪಾ ಯಮನನಾನ್ಮನವೊಮತಾಃ | ಆರ್ಯ್ಯಾಣಾಂಕುಲ ಸಂಸ್ತ್ಯಾಕೃತೆಃಕುಲಕರಾಇಮೆ || ೧೫೮ || ಕುಲಾನಾಂಧಾರಣಾದೆತೆ ಮತಾಃಕುಲಧರಾಇತಿ | ಯುಗಾದಿಪುರುಷಾಃ ಪ್ರೊಕ್ತಾಯುಗಾದ್ರೌಪ್ರಭವಿಷ್ಣವಃ || ೧೫೯ || ತತ್ರಾದ್ಯೈಃಪಂಚಭಿರ್ನೃಣಾಂ ಕುಲಕೃದ್ಬಿಃಕೃತಾಗಸಾಂ | ಹಾಕಾರಲಕ್ಷಣೊದಂಡಃಸಮವಸ್ಥಾಪಿತಸ್ತದಾ || ೧೬೦ || ಹಾಮಾಕಾರೌಚ ದಂಡೊನ್ಯೈಃಪಂಚಭಿಸಂಪ್ರವರ್ತಿತಃ | ಚತುರ್ಭಿಸ್ತುತತಃಶೆ ಷೈರ್ಹಾಮಾಧಿತ್ಕಾರ ಲಕ್ಷಣಃ || ೧೬೧ || ಇತ್ಥಂಯುಗಾದಿಪುರು

* * *

ಕ್ಕೊಂದು ಕೇಳಲ್ಪಟ್ಟ ದ್ವಾದಶಾಂಗವೇದದ ಚತುರ್ದಶ ಪೂರ್ವಉಳ್ಳಂಥಾವರುಗಳಾಗಿ ಆಯುಷ್ಯದ ಕೊನೆಯಲ್ಲಿ ಇಲ್ಲಿ ಹುಟ್ಟಿದರು || ೧೫೬ || ಈ ನಿಯೋಗವನ್ನು ಧ್ಯಾನಿಸಿ ಪ್ರಜೆಗಳಿಗೆ ಹೀಗೆ ಉಪದೇಶಮಾಡಿದರು. ಈ ಮನುಗಳಲ್ಲಿ ಕೆಲವರು ಜಾತಿಸ್ಮರಣೆ ಉಳ್ಳಂಥಾವರುಗಳು ಕೆಲವರು ಅವಧಿ ಜ್ಞಾನವೇ ಕಣ್ಣಾಗಿ ಉಳ್ಳಂಥಾ ವರುಗಳು || ೧೫೭ || ಪ್ರಜೆಗಳ ಜೀವನೋಪಾಯವನ್ನು ತಿಳಿಯುವದರಿಂದ ಮನುಗಳೆಂದು ವಡಂಬಡಲ್ಪಟ್ಟಂಥಾವರುಗಳು. ಆರ್ಯ್ಯರುಗಳಿಗೆ ಕುಲಸ್ಥಿತಿ ಮಾಡಿದ್ದರ ದೆಶೆಯಿಂದ. ಇವರಿಗೆ ಕುಲಕರರುಯೆಂದು ಸಂಜ್ಞೆ ಉಳ್ಳಂಥಾವರು || ೧೫೮ || ಕುಲಗಳನ್ನು ಧರಿಸುವವರ ದೆಶೆಯಿಂದ ಇವರುಗಳು ಕುಲಧರರು ಇಂತೆಂದು ಸಮ್ಮತರಾದಂಥಾವರುಗಳು, ಯುಗಾದಿಯಲ್ಲಿ ಹುಟ್ಟಿದಂಥಾವರುಗಳಾಗಿ ಯುಗಾದಿ ಪುರುಷರೆಂತಲೂ ಹೇಳಲ್ಪಟ್ಟರು | ೧೫೯ | ಆ ಸಮಯದಲ್ಲಿ ಆ ಮನುಗಳಲ್ಲಿ ಮೊದಲನೇವರಾದ ಐದು ಮನುಗಳಿಂದ ಮಾಡಲ್ಪಟ್ಟಂಥಾ ಅಪರಾಧವುಲ್ಳ ಮನುಷ್ಯರುಗಳಿಗೆ ಹಾಕಾರ ಲಕ್ಷಣಗಳದಂಥಾ ದಂಡವು ಸ್ಥಾಪಿಸಲ್ಪಟ್ಟಿತು || ೧೬೦ || ಅನಂತರ, ಅನ್ಯರಾದ ೫ ಮನುಗಳಿಂದ ಹಾ ಮಾಕಾರವಾದ ದಂಡವು ಪ್ರವರ್ತ್ತನೆ ಮಾಡಲ್ಪಟ್ಟಿತು. ಅನಂತರ ಉಳಿದ ನಾಲ್ಕು ಮನುಗಳಿಂದ ಹಾಮಾಧಿಕ್ಕಾರ ಲಕ್ಷಣವಾದ ದಂಡವು ಮಾಡಲ್ಪಟ್ಟಿತು || ೧೬೧ || ಈ ಪ್ರಕಾರವಾಗಿ ಆ ಗೌತ ಮಗಣಾಧಿಪತಿಯು ಯುಗಾದಿ ಪುರುಷೋತ್ಪತ್ತಿಯನ್ನು, ಹೇಳುತ್ತಿರಲಾಗಿ ಪ್ರೀತಿಯಿಂ

* * *

ಷೊದ್ಭವಮಾದರೆಣತಸ್ಮಿನ್ನಿರೂಪ ಯತಿಗೌತಮಸದ್ಗಣೇಂದ್ರೆಸಾಸಾಧುಸಂಸದ ಖಿಲಾ ಸಹಮಾಗದೆ ನರಾಜ್ಞಾಪ್ರಮೊದರ್ಮಚಿರಾತ್ಪರಮಂಜಗಾಮ || ೧೬೨ || ಇತ್ಯಾರ್ಷೆಸ್ಮೃತಿಸಂಗ್ರಹೆಕುಲಧರವರ್ಣ್ನನಂ ನಾಮ ತೃತೀಯೋಧ್ಯಾಯ ಸಂಪೂರ್ಣಮ್.

* * *

ದ ಮಗಧ ದೇಶಾಧಿಪತಿಯಾದಂಥ ಧೊರೆಯಾದ ಶ್ರೇಣಿಕನೊಡನೇಕೂಡ ಆ ಋಷಿಸಭೆಯು ಶೀಘ್ರವಾಗಿ ಪರಮಸಂತೋಷವನ್ನು ಪಡೆಯಿತು || ಇತ್ಯಾರ್ಷೆ ಸ್ಮೃತಿಸಂಗ್ರಹೆ ಕುಲದರೋತ್ಪತ್ತಿತ್ತಿವರ‍್ಣನಂ ನಾಮ ತೃತೀಯೋಧ್ಯಾಯಃ

* * *

ಚತುತ್ಥೋಧ್ಯಾಯ ಪ್ರಾರಂಭಃ

ಇಹಜಂಬೂಮತಿದ್ವೀಪೆಭರತೆಖಚರಾಚಲಾತ್ | ದಕ್ಷಿಣೆಮಧ್ಯಮೆಖಂಡೆ ಕಾಲಸಂಧೌ ಪುರೊದಿತೆ || ೧ || ಪೂರ್ವೋಕ್ತಕುಲಕೃತ್ಸ್ವಂತ್ಯೊನಾಭಿ ರಾಜೊಗ್ರಿಮೊಪ್ಯಭೂತ್ | ವ್ಯಾವರ್ಣ್ನಿತಾಯುಠತ್ಸೆಧ ರೂಪಸಾಂದರ್ಯ್ಯ ವಿಭ್ರಮಃ || ೨ || ತಸ್ಯಾಸೀನ್ಮರುದೆವೀತಿ ದೆವೀದೆವೀವಸಾಶಚೀ | ರೂಪಲಾವಣ್ಯಕಾಂ ತಿಶ್ರೀಮತಿದ್ಯುತಿವಿಭೂತಿಭಿಃ || ೩ || ತೌದಂಪತೀತದಾತತ್ರಭೊಗೈಕರಸತಾಂಗತೌ | ಭೋಗಭೂಮಿ

* * *

ಚತುರ್ಥೋಧ್ಯಾಯಃ

ತಾತ್ಪರ್ಯ್ಯ || ಈ ಜಂಬೂದ್ವೀಪದಲ್ಲಿ ಭರತಕ್ಷೇತ್ರದಲ್ಲಿ ವಿಜಯಾರ್ಧ ಪರ್ವ್ವತದ್ದೆಶೆಯಿಂದ ದಕ್ಷಿಣವಾದ ಮಧ್ಯದಲ್ಲಿರುವ ಖಂಡದಲ್ಲಿ ಪೂರ್ವ್ವದಲ್ಲಿ ಹೇಳಲ್ಪಟ್ಟ ಕಾಲ ಸಂಧಿಯಲ್ಲಿ || ೧ || ಪೂರ್ವದಲ್ಲಿ ಹೇಳಲ್ಪಟ್ಟ ಮನುಗಳಲ್ಲಿ ಕೊನೆಯವನಾದಂಥ ವರ್ಣ್ನಿಸಲ್ಪಟ್ಟ ಆಯುಷ್ಯ ಉತ್ಸೇಧರೂಪ ಸೌಂದರ್ಯ್ಯ ವಿಭ್ರಮ ಉಳ್ಳಂಥ, ಶ್ರೇಷ್ಠನಾ ದಂಥ ನಾಭಿರಾಜನು ಆದನು || ೨ || ಆ ನಾಭಿರಾಜನಿಗೆ ರೂಪಲಾವಣ್ಯ ಕಾಂತಿ ಸಂಪತ್ತು, ಮತಿ, ದ್ಯುತಿ, ವಿಭೂತಿಗಳಿಂದ ಶಚೀದೇವಿಯೋಪಾದಿಯಲ್ಲಿ ರುವಂಥ ದೇವಿಯು ಮರುದೇವಿ ಇಂತೆಂದು ಆದುಳು. || ೩ || ಆ ಸಮಯದಲ್ಲಿ ಆ ಭರತ ಕ್ಷೇತ್ರದಲ್ಲಿ ಭೋಗದಲ್ಲಿ ಮುಖ್ಯರಸ ಭಾವವನ್ನು ಪಡದಂಥ ಆ ದಂಪತಿಗಳು ಭೋಗಭೂಮಿ ವಿಯೋಗ ದಲ್ಲಿಯೂ ಕೂಡ, ಭೋಗ ಭೂಮಿ ಸಂಪ

* * *

ಶ್ರಿಯಂಸಾಕ್ಷಾಚ್ಚಕ್ರತುರ್ವ್ವಿಯತಾಮಪಿ || ೪ || ತಾಭ್ಯಾಮಲಂಕೃತೆಪುಣ್ಯೆದೆಶೆ ಕಲ್ಪಾಂಭ್ರಪಾತ್ಯಯೆ | ತತ್ಪುಣ್ಯೈಮುರ್ಹುರಾಹೂತಃ ಪುರುಹೂತಃಪುರೀಂವ್ಯಧಾತ್ || ೫ || ನರೆಂದ್ರಭವನಂಚಾಸ್ಯಾಃಸುರೈರ್ಮ್ಮ ಧ್ಯೆನಿವೆಶಿತಂ | ಸುರೆಂದ್ರಭವನ ಸ್ಪರ್ದ್ಧಿಪರಾರ್ದ್ಧ್ಯಭವನಾನ್ವಿತಂ || ೬ || ಸಂಚಸ್ಕರುಶ್ಚತಾಂವ ಪ್ರಪ್ರಾಕಾರಪರಿಖಾ ದಿಭಿಃ | ಅಯೋಧ್ಯಾಂನಪರಂನಾಮ್ನಾಗುಣೇನಾಪ್ಯರಿಭಿಃಸುರಾಃ || ೭ || ಸುಕೊಸಲೇತಿ ಚಖ್ಯಾತಿಂಸಾದೆಶಾಭಿಖ್ಯಯಾಗತಾ | ವಿನೀತಜನತಾಕೀರ್ಣ್ನಾ ವಿನಿತೆತಿಚಸಾಮತಾ || ೮ || ಅಧ್ಯವಾಸ್ತಾಂತದಾನೀಂತೌತಾಮಯೋದ್ಯಾ ಮಹರ್ದ್ಧಿಕಾಂ | ದಂಪತೀಪರಮಾ ನಂದಾದಾಪ್ತ ಸಂಪತ್ಪರಂಪರೌ || ೯ || (ಗರ್ಬ್ಬಾವತರಣಃ) ವಿಶ್ಚೆದೃಶ್ವೈತಯೊಃಪು ತ್ರೊಜನಿತೆತಿಶತಕ್ರತುಃ | ತಯೊಃಪೂಜಾಂವ್ಯಧತ್ತೊಚ್ಚೈರಭಿಷೆಕಪುರಸ್ಸ

* * *

ತ್ತನ್ನು ಪ್ರತ್ಯಕ್ಷ ಮಾಡಿದರು || ೪ || ಆ ದಂಪತಿಗಳಿಂದ ಅಲಂಕರಿಸಲ್ಪಟ್ಟಂಥ ಪವಿತ್ರವಾದಂಥಾ ಪ್ರದೇಶದಲ್ಲಿ ಕಲ್ಪವೃಕ್ಷಗಳ ನಾಶದಲ್ಲಿ ಅವರುಳ ಪುಣ್ಯದಿಂದ ಭಾರಿಭಾರಿಗೂ ಕರೆಯಲ್ಪಟ್ಟಂಥ ದೇವೇಂದ್ರನು ಪಟ್ಟಣವನ್ನು ಮಾಡಿದನು || ೫ || ಈ ಪಟ್ಟಣದ ಮಧ್ಯದಲ್ಲಿ ದೇವತೆಗಳಿಂದ ದೇವೇಂದ್ರನ ಮನೆಯೊಡನೆ ಸ್ಪರ್ಧೆ ಮಾಡುತ್ತಿರುವಂಥ ಉತ್ಕೃಷ್ಟವಾದ ಮನೆಯೊಡನೆ ಕೂಡಿದಂಥ ರಾಜಗೃಹವು ಸ್ಥಾಪಿಸಲ್ಪಟ್ಟಿತು || ೬ || ದೇವತೆಗಳು ಪಿಳ್ಳುಗೋಟೆ, ದೊಡ್ಡ ಕೋಟೆ, ಅಗಳು ಮೊದಲಾದವುಗಳಿಂದ ಸಂಸ್ಕರಿಸಿದರು. ನಾಮಮಾತ್ರದಿಂದಲೆ ಅಯೋಧ್ಯೆಯಲ್ಲಾ, ಶತೃಗಳಿಂದ ಯುದ್ಧಮಾಡುವದಕ್ಕೆ ಅಶಕ್ಯವಾದಂಥಾದ್ದು ಆದ್ದರಿಂದ ಗುಣದಿಂದಲೂ ಕೂಡ ಅಯೋಧ್ಯಯಾದಾಢಾದ್ದು || ೭ || ಆ ಪಟ್ಟಣವು ದೇಶದ ಹೆಸರಿನಿಂದ ಸುಕೋಶಲೆ ಇಂತೆಂದು ಖ್ಯಾತಿಯನ್ನು ಪಡೆಯಿತು. ಅತ್ಯಂತ ನೀತಿಯನ್ನು ಹೊಂದಿದಂಥ ಜನ ಸಮೂಹಗಳಿಂದ ತುಂಬಲ್ಪಟ್ಟಂಥಾದ್ದಾಗಿ ಆ ಪಟ್ಟಣವು ವಿನೀತ, ಇಂತೆಂದು ಕೂಡಸಮ್ಮತವಾದಂಥಾದ್ದು || ೮ || ಆ ಸಮಯದಲ್ಲಿ ಮಹಾ ವಿಭವವುಳ್ಳಂಥ ಆ ಅಯೋಧ್ಯಾಪಟ್ಟಣದಲ್ಲಿ ಅತ್ಯಂತ ಆನಂದದಿಂದ ಪಡೆಯಲ್ಪಟ್ಟ ವಿಭವದ ಪರಂಪೆಡಯುಳ್ಳಂಥ ಆ ದಂಪತಿಗಳು ವಾಸಮಾಡಿದರು || ೯ || ಈ ದಂಪತಿಗಳಿಗೆ ಸರ್ವಜ್ಞನಾದಂಥ ಪುತ್ರನು ಹುಟ್ಟುವಂಥಾವನು, ಇಂತೆಂದು ದೇವೇಂದ್ರನು ಈ ದಂಪತಿಗಳಿಗೆ ಅಭಿಷೇಕ ಮೊದಲಾಗೋಣ ಹ್ಯಾಗೆ ಹಾಗೆ ಪೂಜೆಯನ್ನು

* * *

ರಂ || ೧೦ || (ಜನ್ಮಾಭಿಷೇಕ) ಪ್ರಾಚೀವಬಂಧು ಮಬ್ಜಾನಾಂಸಾಲೆಭೆ ಭಾಸ್ವರಂಸುತಂ | ಚೈತ್ರೆಮಾಸ್ಯಸಿ ತೆಪಕ್ಷೆನವಮ್ಯಾಮುದಯೆರವೆಃ || ೧೧ || ತ್ರಿಬೋಧ ಕಿರಣೊದ್ಭಾಸೀಬಾಲಾರ್ಕ್ಕೊಸೌಸ್ಪುರದ್ಯುತಿಃ | ನಾಭಿರಾಜೊದ ಯಾದ್ರೀಂದ್ರಾದು ದಿತೊವಿಭಭೌವಿಭುಃ || ೧೨ || ವೃಷೊಹಿಭಗವಾನ್ ಧರ್ಮ್ಮಸ್ತೆನಯ ದ್ಭಾತಿತೀರ್ತ್ಥಕೃತ್ | ತತೊಯಂವೃಷಭಸ್ವಾಮೀತ್ಯಾಹ್ವಾಸ್ತೈನಂಪುರಂದರಃ || ೧೩ || ಅಥಾಸ್ಯ ಯೌವ್ವನೆ ಪೂರ್ಣೆವಪುರಾಸೀನ್ಮನೊಹರಂ | ಪ್ರಕೃತ್ಯೈವಶಶೀಕಾಂತಃಕಿಂಪುನಃಶರದಾಗಮೆ || ೧೪ || ತನ್ವ್ಯೌಕಚ್ಛಮಹಾಕಚ್ಛಜಾಮ್ಯೌಸೌಮ್ಯೆಪತಿಂವರೆ | ಯಶಸ್ವತೀಸುನಂದಾಖ್ಯೆಸ ಏನಂಪರ್ಯ್ಯಣೀ ನಯತ್ || ೧೫ || ಯಶಸ್ವತೀಶುಭೆಲಗ್ನೆಯೊಗೆಧುರುದುರಾಹ್ವೆಯೆ | ಸಾಪ್ರಸೊಷ್ಪಶತಾಗ್ರಣ್ಯಂಸ್ಫು ರತ್ಸಾಮ್ರಾಜ್ಯಲಕ್ಷಣಂ || ೧೬ ||

* * *

ಮಾಡಿದನು || ೧೦ || ಪೂರ್ವದಿಕ್ಕು ಸೂರ್ಯ್ಯನನ್ನೋಪಾದಿಯಲ್ಲಿ ಚೈತ್ರಮಾಸದಲ್ಲಿ, ಕೃಷ್ಣಪಕ್ಷದಲ್ಲಿ, ನವಮಿಯಲ್ಲಿ, ಸೂರ್ಯ್ಯೋದಯದಲ್ಲಿ ಆ ಮರುದೇವಮ್ಮನು ಪ್ರಕಾಸಿಸುತ್ತಿರುವ ಮಗನನ್ನು ಪಡದಳು || ೧೧ || ತ್ರಿಜ್ಞಾನಗಳೆಂಬ ಕಿರಣಗಳಿಂದ ಪ್ರಕಾಸಿಸುತ್ತಿರುವಂಥ ಹೊಳೆಯುತ್ತಿರುವ ತೇಜಸ್ಸುವುಳ್ಳಂಥ, ನಾಭಿರಾಜನೆಂಬ ಉದಯ ಪರ್ವತದೆಶೆಯಿಂದ ಹುಟ್ಟಿದಂಥ ಸ್ವಾಮಿಯಾದಂಥಾ ಬಾಳ ಸೂರ್ಯ್ಯನು ಪ್ರಕಾಸಿಸಿದನು || ೧೨ || ವೃಷ ಅಂದರೆ ಧರ್ಮ್ಮವು, ಆ ಧರ್ಮ್ಮದಿಂದ ಭಗವಂತನಾದ ತೀರ್ತ್ಥಕರ ಪರಮದೇವನು ಪ್ರಕಾಸಿಸುತ್ತಾನ,ಯೆಂಬುವದು ಯಾವದುಂಬೋ ಆ ಕಾರಣದ್ದೆಶೆಯಿಂದ ದೇವೇಂದ್ರನು ಈ ಮೊಗುವನ್ನು ಈ ತನು ವೃಷಭಸ್ವಾಮಿಯು ಇಂತೆಂದು ಕರದನು || ೧೩ || ಅನಂತರದಲ್ಲಿ ಈ ವೃಷಭಸ್ವಾಮಿಗೆ ಯೌವ್ವನವು ಪೂರ್ಣ್ನವಾದಂ ಥಾದ್ದಾಗುತಿರಲಾಗಿ ಶರೀರವು, ಮನೋಹರವಾದಂಥಾದ್ದಾಯಿತು. ಚಂದ್ರನು ಸ್ವಭಾವದಿಂದಲೇ ಮನೋಹರನಾದಂಥಾವನು, ಶರತ್ಕಾಲಾಗಮನದಲ್ಲಿ ಹೇಳತಕ್ಕದ್ದೇನು || ೧೪ || ಈ ದೇವೇಂದ್ರನು ಕೃಶಾಂಗಿಯರಾದಂಥ, ಕಚ್ಛ ಮಹಾ ಕಚ್ಛರ, ತಂಗಿಯರಾದಂಥ, ಶಾಮತರೂಪರಾದಂಥಮ ಯಶಸ್ವತೀ ಸುನಂದ ಎಂದು ಹೆಸರುವುಳ್ಳವರನ್ನು ಈ ವೃಷಭಸ್ವಾಮಿಯನ್ನು ಪರಿಣೀತರನ್ನಾಗಿ ಮಾಡಿದನು || ೧೫ || ಶುಭಲಗ್ನದಲ್ಲಿ ಧುರುಧುರಾನಾಮಕವಾದ ಯೋಗದಲ್ಲಿ ಆ ಯಶಸ್ವತಿಯು, ಹೊಳೆಯುತ್ತಿರುವ ಚಕ್ರವ

* * *