ಪ್ರಮೊದಭರತಃಪ್ರಮನಿರ್ಭರಾಬಂದುತಾತದಾ | ತಮಾಹ್ವಠಭರತಂಭಾವಿ ಸಮಸ್ತಭರತಾಧಿಪಂ || ೧೭ || ತತಃಕುಮಾರಕಾಲೊಸ್ಯಕಲಿತೋಮುನಿಸತ್ತಮೈಃ | ವಿಂಶತಿಃಪೂರ್ವ್ವಲಕ್ಷಾಣಾಂಪೂರ್ಯ್ಯ ತೆಸ್ಮಮಹಾಧಿಯಃ || ೧೮ || (ಪ್ರಜಾಜೀವನೋಪಾಯಾದಿ) ಅತ್ರಾಂತರೆಮಹೌಷಧ್ಯೋದೀಪ್ತೌಷಧ್ಯ ಶ್ಚಪಾದಪಾಃ | ಸಸರ್ವೌಷದಯಃಕಾಲಾಜ್ಜಾತಾಃಪ್ರಕ್ಷೀಣಶಕ್ತಿಕಾಃ || ೧೯ || ಸಸ್ಯಾನ್ಯಕೃಷ್ಟಪಚ್ಯಾನಿಯಾ ನ್ಯಾಸನ್‌ಸ್ಥಿತಯೆನೃಣಾಂ | ಪ್ರಾಯಸ್ತಾನ್ಯಪಿಕಾಲೆನಯಯುರ್ವಿರಲತಾಂಭುವಿ || ೨೦ || ರಸವೀರ್ಯ್ಯ ವಿಪಾಕೈಸ್ತೆಪ್ರಹೀಣಾಃಪಾದಪಾಯದಾ | ತದಾತಂಕಾದಿ ಬಾಧಾಬಿಃಪ್ರಜಾವ್ಯಾಕುಲತಾಂಗತಾ || ೨೧ || ಶ್ರುತ್ವೆತಿತದ್ವಚೊದೀನಂ ಕರುಣಾಪ್ರೆರಿತಾಶಯಃ | ಮನಃಪ್ರಣೀದಧಾವೆವಂಭಗವಾನಾದಿಪೂರುಷಃ || ೨೨ ||

* * *

ರ್ತ್ತೀಯ ಲಕ್ಷಣವುಳ್ಳಂಥ ಸುತಶ್ರೇಷ್ಠನನ್ಮು ಪ್ರಸವಿಸಿದಳು || ೧೬ || ಆ ಸಮಯದಲ್ಲಿ ಪ್ರೀತಿಯಿಂದ ತುಂಬಿಕ್ಕೊಂಡಿರುವ ಬಂಧು ಸಮೂಹವು ಸಂತೋಷಾತಿಶಯದ ದೆಶೆಯಿಂದ ಮುಂದಾಗತಕ್ಕ ಸಮಸ್ತ ಭರತಾಧಿಪತ್ಯವುಳ್ಳಂಥ ಆ ಮೊಗುವನ್ನು ಭರತನನ್ನಾಗಿ ಕರೆಯಿತು || ೧೭ || ಮಹಾ ಪ್ರಜ್ಞವುಳ್ಳಂಥ ವೃಷಭ ಸ್ವಾಮಿಗೆ ಮುನಿಗಳಿಂದ ಹೇಳಲ್ಪಟ್ಟ ಇಪ್ಪತ್ತು ಲಕ್ಷ (೨೦,೦೦,೦೦೦) ಪೂರ್ವ್ವಕಾಲವು ತುಂಬಿತು || ೧೮ || ಈ ಮಧ್ಯದಲ್ಲಿ ಮಹೌಷಧಿಗಳು ದೀಪ್ತೌಷಧಿಗಳೊಡನೆ ಕೂಡಿದ ವೃಕ್ಷಗಳು ಕೂಡ ಹುಂಡಾವಸರ್ಪಿಣೀ ಕಾಲದ್ದೆಶೆಯಿಂದ ಕ್ಷೀಣವಾದ ಶಕ್ತಿವುಳ್ಳಂಥಾವುಗಳಾಗಿ ಆದವು || ೧೯ || ಮನುಷ್ಯರುಗಳ ಸ್ಥಿತಿಗೋಸ್ಕರ ಅಕೃಷ್ಟ ಪಚ್ಚೆಗಳ ಪೈರುಗಳು ಯಾವುಗಳು, ಆದವೋ ಅವುಗಳೂ ಕೂಡ ಭೂಮಿಯಲ್ಲಿ ಬಹಳವಾಗಿ ವಿರಳತ್ವವನ್ನು ಪಡೆದವು || ೨೦ || ಯಾವ ಕಾಲದಲ್ಲಿ ವೃಕ್ಷಗಳು ರಸವೀರ್ಯ್ಯ ವಿಪಾಕಗಳಿಂದ ಕಡಮೆಯಾದಂಥಾವುಗಳಾಗಿ ಆದವೋ ಆ ಸಮಯದಲ್ಲಿ ಮನೋವ್ಯಥೆ ಮೊದಲಾದ ಬಾಧೆಗಳಿಂದ ಪ್ರಜೆಯು ವ್ಯಾಕುಲತ್ವವನ್ನು ಹೊಂದಿತು || ೨೧ || ಈ ಪ್ರಕಾರವಾಗಿ ದೀನವಾದ ಮಾತನ್ನು ಕೇಳಿ ಕರುಣೆಯಿಂದ ಪ್ರೇರಿಸಲ್ಪಟ್ಟ ಅಭಿಪ್ರಾಯವುಳ್ಳಂಥ ಆದಿ ಪುರುಷನಾದಂಥ ಭಗವಂತನಾದ ವೃಷಭಸ್ವಾಮಿಯು ಮುಂದೆ ಹೇಳುವ ಪ್ರಕಾರವಾಗಿ ಮನಸ್ಸನ್ನು ಇಟ್ಟನು || ೨೨ || ಪೂರ್ವಾಪರ ವಿದೇಹಗಳಲ್ಲಿ ಯಾವ ಸ್ಥಿತಿಯು ಇರುಂಥಾದ್ದೋ, ಈಗ ಈ ಭರತಕ್ಷೇತ್ರದಲ್ಲಿ

* * *

ಪೂರ್ವಾಪರವಿದೆಹೆಷುಯಾಸ್ಥಿತಿಸ್ಸಮವಸ್ಥಿತಾ | ಸಾದ್ಯಪ್ರವರ್ತವೀಯಾತ್ರತತೋ ಜೀವಂತ್ಯಮೂಃ ಪ್ರಜಾಃ || ೨೩ || ಷಟ್ಕರ್ಮ್ಮೊಣಿಯಥಾತತ್ರಯಥಾ ವರ್ಣ್ನಾಶ್ರಮಸ್ಥಿತಿಃ | ಯಥಾಗ್ರಾಮಗೃಹಾದೀ ನಾಂಸಂಸ್ತ್ಯಾಯಾಶ್ಚಪಥಗ್ವಿಧಾಃ || ೨೪ || ತಥಾತ್ರಾಷ್ಯಚಿತಾವೃತ್ತಿರುಪಾಯೈರೆಭಿರಂಗಿನಾಂ | ನೊಪಾಯಾಂತರ ಮಸ್ತೈಷಾಂ ಪ್ರಾನಾಂಜೀವಿಕಾಂಪ್ರತಿ || ೨೫ || ಕರ್ಮಭೂರದ್ಯಜಾತೇಯಂ ವ್ಯತೀತೌ ಕಲ್ಪಭೂರುಹಾಂ | ತತೊತ್ರಕರ್ಮ್ಮಭಿಃಷಡ್ಭಿಃಪ್ರಜಾನಾಂಜೀವಿಕೊಚಿತಾ || ೨೬ || ಇತ್ಯಾಕಲಯ್ಯತತ್ಕ್ಷೆಮ ವೃತ್ಯುಪಾಯಂಕ್ಷಣಂವಿಭುಃ | ಮುಹುರಾಶ್ವಾಸಯಾ ಮಾಸಮಾಭೈಷ್ಟೆತಿತದಾಪ್ರಜಾಃ || ೨೭ || ಅಥಾನುಧ್ಯಾನಮಾತ್ರೆಣವಿಭೊಶಕ್ರಃಸಹಾಮರೈಃ | ಪ್ರಾಪ್ತಸ್ತಜೀವನೊಪಾ ಯಾನಿತ್ಯಕಾರ್ಷೀ ದ್ವಿಭಾಗಶಃ || ೨೮ ||

* * *

ಪ್ರವರ್ತನೆ ಮಾಡುವದಕ್ಕೆ ಯೋಗ್ಯವಾದಂಥಾದ್ದು ಅವಿದೇಹ ಕ್ಷೇತ್ರೋಪಾದಿ ಯಲ್ಲಿರುವ ವೃತ್ತಿದೆಶೆಯಿಂದ ಈ ಪ್ರಜೆಗಳು ಜೀವಿಸುತ್ತಾರೆ ಆವಿದೇಹ ಕ್ಷೇತ್ರದಲ್ಲಿ ಷಟ್ಕರ್ಮ್ಮಗಳು ಹ್ಯಾಗೋ ವರ್ಣ್ನಾಶ್ರಮ ಸ್ಥಿತಿಯು ಹ್ಯಾಗೋ ಗ್ರಾಮ ಮನೆ ಮೊದಲಾದವುಗಳ ನಿವೇಶನಗಳು, ಹ್ಯಾಗೆ ಪ್ರತ್ಯೇಕವಾದಂಥಾವುಗಳೋ || ೨೪ || ಹಾಗೆ ಇಲ್ಲಿಯೂ ಕೂಡ, ಈ ಉಪಾಯಗಳಿಂದ ಪ್ರಾಣಿಗಳಿಗೆ ಜೀವನವು ಯೋಗ್ಯವಾದಂಥಾದ್ದು ಈ ಪ್ರಾಣಿಗಳಿಗೆ ಜೀವನವನ್ನು ಕುರಿತು ಉಪಾಯಾಂತ ರವಿಲ್ಲ || ೨೫ || ಕಲ್ಪವೃಕ್ಷಗಳ ಅತಿಕ್ರಮಣವಾಗುತ್ತಿರಲಾಗಿ, ಈಗ ಈ ಭರತಕ್ಷೇತ್ರವು ಕರ್ಮಭುಮಿಯಾಯಿತು. ಆ ಕಾರಣದ್ದೆಶೆಯಿಂದ ಈ ಭರತಾರ್ಯ ಖಂಡದಲ್ಲಿ ಪ್ರಜೆಗಳಿಗೆ, ಆರಾದಂಥಾ ಕರ್ಮಗಳಿಂದ ಜೀವನವು ಯೋಗ್ಯವಾದಂಥಾದ್ದು || ೨೬ || ಹೀಗೆ ಆ ಪ್ರಜೆಗಳ ಕ್ಷೇಮವೃತ್ತಿ ಉಪಾಯವನ್ನು ಕ್ಷಣಕಾಲದಲ್ಲಿ ಆಲೋಚಿಸಿ ಸ್ವಾಮಿಯಾದಂಥ ವೃಷಭತೀರ್ಥಕರ ಪರಮದೇವರು ಹೆದರಬೇಡಿ, ಇಂತೆಂದು ಆಸಮಯದಲ್ಲಿ ಪ್ರಜೆಗಳನ್ನು ಸಮಾದಾನ ಪಡಿಸಿದರು || ೨೭ || ಅನಂತರದಲ್ಲಿ ಸ್ವಾಮಿಯಾದಂಥ ವೃಷಭತೀರ್ಥಕರ ಪರಮದೇವರ ಧ್ಯಾನ ಮಾತ್ರದಿಂದ ದೇವೇಂದ್ರನು ದೇವತೆಗಳೊಡನೇ ಕೂಡ ಬರುವಂಥಾವನಾದನು. ಆ ಪ್ರಜೆಗಳ ಜೀವನೋ ಪಾಯಗಳನ್ನು, ವಿಭಾಗವಾಗಿ, ಈ ಪ್ರಕಾರ ಮಾಡಿದನು || ೨೮ || ಶುಭದಿನದಲ್ಲಿ ಒಳ್ಳೇ ನಕ್ಷತ್ರದಲ್ಲಿ, ಒಳ್ಳೇ ಮುಹೂರ್ತ್ತದಲ್ಲಿ, ಶುಭಗ್ರಹಗಳಾದ ಗುರುಶು

* * *

ಶುಭೆದಿನೆಸುನಕ್ಷತ್ರೆಸುಮುಹೂರ್ತ್ತೆಶುಭೊದಯೆ | ಸ್ವೊಚ್ಚಸ್ಥೆಷುಗ್ರಹೇಷೂಚ್ಚೈ ರಾನುಕೂಲೈಜಗದ್ಗುರೊಃ || ೨೯ || ಕೃತಪ್ರಥಮಮಾಂಗಲೈಸುರೇಂದ್ರೊಜಿನ ಮಂದಿರಂ | ನ್ಯವೆಶಯತ್ಪುರಸ್ಯಾಸ್ಯಮಧ್ಯೆದಿಕ್ಷ್ವಪ್ಯ ನುಕ್ರಮಾತ್ || ೩೦ || ಕೌಶಲಾದೀನ್ ಮಹಾದೆಶಾನ್‌ಸಾಕೆತಾದಿಪುರಾಣಿಚ | ಸಾರಾಮಸೀ ಮನಿಗಮಾನ್ ಖೇಟಾದೀಂಶ್ಚಸ್ಯ ವೆಶಯನ್ || ೩೧ || ದೆಶಾಃಸುಕೊಶಲಾವಂತೀ ಪುಂಡ್ರೊಗ್ರಾಶ್ಮ ಕರಮ್ಯಕಾಃ | ಕುರುಕಾ ಶೀಕಲಿಂಗಾಂಗವಂಗಸಿಂಹಸಮುದ್ರಕಾಃ || ೩೨ || ಕಾಶ್ಮೀರೊಶೀನರಾನರ್ತ್ತ ವತ್ಸಪಂಚಾಲಮಾಳವಾಃ | ದಶರ್ನಾಃಕಚ್ಛಮಗಥಾವಿದರ್ಬ್ಭಾಃ ಕುರುಜಾಂಗಲಂ || ೩೩ || ಕರಹಾಟಮಹಾರಾಷ್ಟ್ರಸುರಾಷ್ಟ್ರಾ ಭೀರಕೊಂಕಣಾಃ | ವನವಾಸ್ಯಂದ್ರಕರ್ಣ್ನಾಟ ಕೊಸಲಾಶ್ಚೊಳಕೆರಳಾಃ || ೩೪ || ದಾರ್ವಾಭಿಸಾರಸಾವೀರ ಸೂರಸ್ಸೆನಾಪರಾಂತಕಾಃ | ವಿದೆಹಿಸಿಂದುಗಾಂಧಾರಯವನಾಶ್ಚೆತಿಪಲ್ಲವಾಃ || ೩೫ || ಕಾಂಭೊ ಜಾರಟ್ಟಬಾಹ್ಲೀಕ

* * *

ಕ್ರೋದಯದಲ್ಲಿ ಗ್ರಹಗಳು ಉಚ್ಚಸ್ಥಾನದಲ್ಲಿ ಯಿರುತಿರಲಾಗಿ, ಮೂರು ಲೋಕಕ್ಕು ಗುರುವಾದ ಈ ಸ್ವಾಮಿಗೆ ಅನುಕೂಲ ಕಾಲದಲ್ಲಿ || ೩೯ || ಮಾಡಲ್ಪಟ್ಟ ಪ್ರಥಮ ಮಾಂಗಲ್ಯದಲ್ಲಿ ಈ ಅಯೋದ್ಯಾಪಟ್ಟಣದ, ಮಧ್ಯದಲ್ಲಿಯೂ ದಿಕ್ಕುಗಳಲ್ಲಿಯೂ ಅನುಕ್ರಮವಾಗಿ ಚೈತ್ಯಾಲಯವನ್ನು, ಸ್ಥಾಪಿಸಿದನೂ || ೩೦ || ಕೋಸಲಾದಿ ಮಹಾದೇಸಗಳನ್ನು ಅಯೋಧ್ಯೆಯೇ ಮೊದಲಾದ ಪಟ್ಟಣಗಳನ್ನು ತೋಟ, ಯಲ್ಲೆ, ಹಳ್ಳಿಗಳನ್ನು ಖೇಟ ಮೊದಲಾದವುಗಳನ್ನು ನಿರ್ಮಿಸಿದನು || ೩೧ || ದೇಸಗಳು ಯಾವದೆಂದರೆ, ಸುಕೌಸಲ, ಸಲ, ಅವಂತಿ, ಪುಂಡ್ರ, ಉಗ್ರ, ಅಶ್ಮಕ, ರಮ್ಯಕ, ಕುರು, ಕಾಶಿ,ಕ ಲಿಂಗ, ಅಂಗ, ವಂಗ, ಸಿಂಹ, ಸಮುದ್ರಕ || ೩೨ || ಕಾಶ್ಮೀರರ ಉಸೀನ ಆನರ್ರ‍್ತ‍, ವತ್ಸ, ಪಾಂಚಾಲ, ಮಾಳವ, ದಶಾರ್ನ, ಕಚ್ಛ, ಮಗಧ, ವಿದರ್ಭ, ಕುರುಜಾಂಗಲ || ೩೩ || ಕರಹಾಟ, ಮಹಾರಾಷ್ಟ್ರ, ಸುರಾಷ್ಟ್ರ ಅಭೀರ, ಕೊಂಕಣ, ವನವಾಸಿ, ಆಂಧ್ರ, ಕರ್ಣಾಟಕ, ಕೋಸಲ, ಚೋಳ, ಕೇರಳ || ೩೪ || ದಾರ್ವ, ಅಭಿಸಾರ, ಸಾವ್ವೀರ, ಸೂರಸೇನ, ಅಪರಾಂತಕ, ವಿದೇಹಿ, ಸಿಂಧು, ಗಾಂಧಾರ, ಯವನ, ಪಲ್ಲವ || ೩೫ || ಕಾಂಭೋಜ, ಆರಟ್ಟ, ಬಾಹ್ಲೀಕ, ತುರುಷ್ಕ, ಶಕ, ಕೇಕಯಾ, ಇನ್ನೂ ಳಿದಂಥ ದೇಶಗಳು ಪ್ರತ್ಯೇಕವಾದಂಥಾವುಗಳಾಗಿ ಆ ಸಮ

* * *

ತುರುಷ್ಕಶಕಕೆಕಯಾಃ | ನಿವೇಶಿತಾಸ್ತಥಾನ್ಯೆಪಿವಿಭಕ್ತಾವಿಷಯಾಸ್ತದಾ || ೩೬ || ಲದೇವಮಾತೃಕಾಃ ಕೆಚಿದ್ವಿಷಯಾದೇವಮಾತೃಕಾಃ | ಪರೇಸಾಧಾರಣಾಃ ಕೆಚಿದ್ಯಥಾಸ್ವಂತೆನಿವೆಶಿತಾಃ || ೩೭ || ಅಭೂತ ಪೂರ್ವ್ವೈರು ದ್ಭೂತೈರ್ಬ್ಭೂರ ಭಾತ್ತೈರ್ಜ್ಜನಾಸ್ಪದೈಃ | ದಿವಃಖಂಡೈರಿ ವಾಯಾತೈಃಕೌತುಕಾದ್ಧ ರಣೀತಲಂ || ೩೮ || ದೆಶೈಃಸಾಧಾರಣಂನೂಪಜಾಂಗಲೈಸ್ತೈಸ್ತಥಾ ಮಹೀರಂರೆಜಿರಜತಭೂಭರ್ತುರಾ ರಾದಾ ಲವಣಾಂಬುಧೆಃ || ೩೯ || ತದಂತೆಷ್ವಂ ಥಪಾಲಾನಾಂದುರ‍್ಗಾಣಿಪರಿತೊಭವನ್ | ಸ್ಥಾನಾನಿಲೊಕಪಾ ಲಾನಾಮಿವಸ್ಪರ್ದ್ಧಾಮಸೀಮನು || ೪೦ || ತದಂತರಾಳದೆಶ್ಚಬಭೂವುರನುರಕ್ಷಿತಾಃ | ಲು

* * *

ಯದಲ್ಲಿ ಸ್ಥಾಪಿಸಲ್ಪಟ್ಟವು || ೩೬ || ಕೆಲವುಗಳು, ಅದೇವಮಾತೃಕಾ, ಎಂದರೆ ನದೀಮಾತೃಕಗಳು, ನದೀಮಾತೃಕವೆಂದರೆ ಮಳೆಯಿಲ್ಲದೆಯಿದ್ದಾಗ್ಯು, ಕ್ಷಾಮವಿಲ್ಲದೇ ನದೀ ಆಧಾರದಿಂದ ಬೆಳಸಾಗತಕ್ಕವು, ದೇವಮಾತೃಕಗಳು, ಅಂದರೆ, ಮಳೆಯಿಂದ ಮಾತ್ರವೇಬೆಳಸಾಗತಕ್ಕವು. ಮತ್ತು ಕೆಲವು, ಸಾಧಾರಣದೇಶಗಳು ಈಮೇರಿಗೆ ತಂಮತಂಮನ್ನು ಅತಿಕ್ರಮಿಸದೇ ಇರೋಣ ಹ್ಯಾಗೋ ಹಾಗೆ ಸ್ಥಾಪಿಸಲ್ಪಟ್ಟವು || ೩೭ || ಪೂರ‍್ವದಲ್ಲಿ ಇಲ್ಲದೇ ಇರುವಂಥ ಈಗ ಹುಟ್ಟಿದಂಥ ಕುತೂಹಲದ್ದೆಶೆಯಿಂದ ಭೂಮಿಯನ್ನು ಕುರಿತು ಬಂದಂಥ ಸ್ವರ್ಗ್ಗದ ಖಂಡಗಳೋಪಾದಿಯಲ್ಲಿರುವಂಥ ಜನಸ್ಥಾನಗಳಿಂದ ಭೂಮಿಯು ಪ್ರಕಾಸಿಸಿತು || ೩೮ || ಸಾಧಾರಣವೆಂದರೆ, ಕೇವಲ ಉಷ್ಣವು ಸೀತವು ಇಲ್ಲದೇ ಇರತಕ್ಕದೇಶವು, ಅನೂಪವೆಂದರೆ, ವಿಶೇಷವಾದ ಗಿಡವು, ಜಲವು ಉಳ್ಳ ದೇಶವು. ಜಾಂಗಲವೆಂದರೆ ಗಿಡವು ನೀರು ಕಮ್ಮಿಯಾದ ದೇಶವು ಇವುಗಳಿಂದ ಭೂಮಿಯು ವಿಜಯಾರ‍್ಧ ಪರ್ವತದ ದೆಶೆಯಿಂದ ಲವಣ ಸಮುದ್ರಪರಿಯಂತರದಲ್ಲೂ ಪ್ರಕಾಸಿಸುತ್ತೆ || ೩೯ || ಅವುಗಳ ಕೊನೆಗಳಲ್ಲಿ ಅಂಕಪಾಲರುಗಳ ದುರ್ಗಗಳು ಯೆಲ್ಲಾಕಡೆಯಲ್ಲಿಯೂ ಸ್ವರ್ಗಲೋಕದ ಎಲ್ಲೆಗಳಲ್ಲಿ ಲೋಕಪಾಲರುಗಳ ಸ್ಥಾನಗಳೋಪಾದಿಯಲ್ಲಿ ಆದವು || ೪೦ || ಅವುಗಳ ಅಂತರಾಳ ದೇಶಗಳಾದ ಲುಬ್ದಕವೆಂದರೆ, ಬೇಡರು, ಅರಣ್ಯವೆಂದರೆ, ಕಾಡುಮನುಷ್ಯರುಗಳು ಚರಕವೆಂದರೆ, ಪ್ರಾಣಗಳನ್ನು ಹೊಡದು ಜೀವಿಸತಕ್ಕವರು, ಪುಳಿಂದರೆಂದರೆ, ಮೀನು ಮೊದಲಾದವುಗಳಿಂದ ಜೀವಿಸತಕ್ಕವರು, ಶಬರರೆಂದರೆ, ಪ್ರತಿದಿನವು ಬೇಟೆಯಾಡುವರು, ಇವರು ಮೊದಲಾದವರುಗಳಿಂದ ಸಂ

* * *

ಬ್ದಕಾರಣ್ಯಚರಕಪುಳಿಂದಸಬರಾದಿಭಿಃ || ೪೧ || ಮಧ್ಯೆಜನಪದಂರೇಜಾ ರಾಜಧಾನ್ಯಃ ಪರಿಷ್ಕೃತಾ | ವಪ್ರಪ್ರಾಕಾರಪರಿಖಾಗೊಪುರಾಟ್ಟಾಲಕಾದಿಭಿಃ || ೪೨ || ತಾನಿಸ್ಥಾನೀಯಿಸಂ ಜ್ಞಾನಿದುರ್ಗ್ಗಾಣ್ಯಾ ವೃತ್ಯಸರ್ವ್ವತಃ | ಗ್ರಾಮಾದೀನಾಂನಿ ವೇಶೊಭೂದ್ಯಥಾಭಿ ಹಿತಲಕ್ಷ್ಮಣಾಂ || ೪೩ || ಗ್ರಾಮಾವೃತ್ತಿ ಪರಿಕ್ಷೆಪಮಾತ್ರಾಸ್ಯುರಿ ಚಿತಾಶ್ರಯಾಃ ಶೂದ್ರಕರ್ಫೆತಭೂಇಷ್ಟಾಸ್ಸಾರಾಮಾಃಸಜಲಾಶಯಾಃ || ೪೪ || ಗ್ರಾಮಃಕುಲಶತೇನೆ ಷ್ಟೊನಿಕೃಷ್ಟಃಸಮಧಿಷ್ಠಿತಃ | ಪರಸ್ತತ್ಪಂಚ ಶತ್ಯಾಸ್ಯಾತ್ಸು ಸಮೃದ್ಧಕೃಷೀವಲಃ || ೪೫ || ಕ್ರೊಶದ್ವಿಕ್ರೋಶಸೀಮಾನೊಗ್ರಾಮಸ್ಯುರಧಮೊತ್ತಮಾಃ | ಸಂಪನ್ನಸಸ್ಯಸುಕ್ಷತ್ರಾಃ ಪ್ರಭೂತಯವಸೊದಕಾಃ || ೪೬ || ಸರಿದ್ಗಿರಿದರೀದೃಷ್ಟಿಕ್ಷೀರಕಂಟಕಶಾಖಿನಃ | ವನಾನಿಸೇತವಶ್ಚೆತಿತೆಷಾಂಸೀಮೊಪಲಕ್ಷ

* * *

ರಕ್ಷಿಸಲ್ಪಟ್ಟಂಥ ಅಂತರಾಳ ದೇಶಗಳು ಆದವು || ೪೧ || ದೇಶಮಧ್ಯದಲ್ಲಿ, ವಪ್ರಪ್ರಾಕಾರ, ಪರಿಖ, ಗೋಪುರ, ಅಟ್ಟಾಲಕ, ಮೊದಲಾದವುಗಳಿಂಧ ಪರಿಷ್ಕರಿಸಲ್ಪಟ್ಟಂಥ ರಾಜಧಾಣಿಗಳು ಆದವು || ೪೨ || ಸ್ಥಾನೀಯವೆಂಬ ಸಂಜ್ಞೆವುಳ್ಳಂಥ ದುರ್ಗ್ಗಗಳನ್ನು ಸುತ್ತಿಕೊಂಡು ಎಲ್ಲಾಕಡೆಯಲ್ಲು ಯಥಾಶಾಸ್ತ್ರವಾಗಿ ಹೇಳಲ್ಪಟ್ಟ ಲಕ್ಷಣವುಳ್ಳಂಥ ಗ್ರಾಮಾದಿಗಳ ಸ್ಥಾಪನೆಯು ಆಯಿತು. || ೪೩ || ಯೋಗ್ಯವಾದ ಆಶ್ರಯವುಳ್ಳಂಥ ಶೂದ್ರರಿಂದಲೂ ಕೃಷಿಮಾಡುವರಿಂದಲೂ ತುಂಬಿಕ್ಕೊಂಡಿರುವಂಥ ತೋಟಗಳೊಡನೇ ಕೂಡಿದಂಥ ಜಲಾಧಾರಗಳೊಡನೆ ಕೂಡಿದಂಥ ಗ್ರಾಮಗಳು ಬೇಲೀ ಹಾಕೋಣ ಮಾತ್ರವೇವುಳ್ಳಂಥಾವುಗಳು || ೪೪ || ಸ್ಥಾಪಿಸಲ್ಪಟ್ಟ ಗ್ರಾಮವು ನೂರು (೧೦೦) ಮನೆಗಳಿಂದ ನಿಕೃಷ್ಟವಾದಂಥದ್ದಾಗಿ ಇಷ್ಟವಾದಂಥಾದ್ದು. ಒಳ್ಳೇ ವೃದ್ಧಿಯನ್ನು ಹೊಂದಿದಂಥ ಕೃಷಿ ಮಾಡುವರುಳಾಂಥ ಗ್ರಾಮವು ಆ ಐನೂರು (೫೦೦) ಮನೆಗಳಿಂದ ಉತ್ಕೃಷ್ಟವಾದಂಥಾ ದ್ದಾಗುತ್ತೆ || ೪೫ || ಪರಿಪೂರ್ಣಗಳಾದ ಪೈರುಉಳ್ಳ ಒಳ್ಳೇ ಕ್ಷೇತ್ರ ಉಳ್ಳಂಥ ಸಂಪೂರ್ಣವಾದ ನೀರುಉಳ್ಳಂಥ, ಒಂದು ಕ್ರೋಶ, ಎರಡು ಕ್ರೊಶ ಎಲ್ಲೆಯುಳ್ಳಂಥ, ಗ್ರಾಮಗಳು ಅಧಮಗಳಾಗಿಯು, ಉತ್ತಮಗಳಾ ಗಿಯು, ಸಮ್ಮತವಾದವುಗಳು || ೪೬ || ಗ್ರಾಮದ ಎಲ್ಲೆಗಳು ಯಾವವೆಂದರೆ, ನದೀ, ಬೆಟ್ಟ, ಗುಹೇ, ಹಳ್ಳ, ಹಾಲು, ಮುಳ್ಳುವುಳ್ಳಂಥ ವೃಕ್ಷಗಳು ಕಾಡುಗಳು, ಸೇತುವೆಗಳು

* * *

ಣಂ || ೪೭ || ತತ್ಕರ್ತೃಭೊಕ್ತೃನಿಯಮೊಯೊಗಕ್ಷೆಮಾನುಚಿಂತನಂ | ವಿಷ್ಟಿದಂಡ ಕರಣಾಂಚ ನಿಬಂಧೊರಾಜಸಾದ್ಭವೆತ್ || ೪೮ || ಪರಿಖಾಗೊಪುರಾಟ್ಟಾಲವಪ್ರ ಪ್ರಾಕಾರಮಂಡಿತಂ | ನಾನಾಭವನ ವಿನ್ಯಾಸಂಸೊದ್ಯಾನಂಸಜಲಾಶಯಂ || ೪೯ || ಪುರಮೆವಂವಿದಂಶಸ್ತಮುಚಿತೊದ್ದೆಶಸುಸ್ಥಿತಂ | ಪೂರ್ವೋತ್ತರಪ್ಲವಾಂಭಸ್ಕಂಪ್ರಧಾನ ಮರುಷೋಚಿತಂ || ೫೦ || ಸರಿದ್ಗಿರಿಭ್ಯಾಂಸಂರುದ್ಧಂಖೇಟಮಾ ಹುರ‍್ಮನೀಷಿಣಃ | ಕೆವಲಂಗಿರಿಸಂರುದ್ದಂಖರ್ವ್ವಟಂಟತ್ಪ್ರಚಕ್ಷತೆ || ೫೧ || ಮಡಂಬಮಾಮನಂತಿ ಜ್ಞಾಃಪಂಚಗ್ರಾಮಶತೀವೃತಂ | ಪತ್ತನಂತತ್ಸಮುದ್ರಾಂತೆಯನ್ನೌಭಿರವತೀರ್ಯತೆ || ೫೨ || ಭವೇ ದ್ರೋಣಮುಖಂನಾಮ್ನಾನಿಮ್ನಗಾತಪಮಾಶ್ರಿತಂ | ಸಂವಾಹಸ್ತುಸು ರೊವ್ಯೊಢಧಾನ್ಯಸಂಚಯ ಇಷ್ಯತೆ || ೫೩ || ಪುಟಭೇದನಭೇದಾ ನಾಮಮೀ

* * *

ಇಂತೆಂದು ಆ ಎಲ್ಲೆಗಳ ಗುರುತು || ೪೭ || ಅದನ್ನು ಮಾಡತಕ್ಕವರು, ಅನುಭವಿಸತಕ್ಕವರು, ಇವರುಗಳ ನಿಯಮವು ಯೋಗಕ್ಷೇಮ ಚಿಂತನೆಯು ತಪ್ಪು ಮಾಡುವರಿಗೆ ಶೀಕ್ಷೆ ಮಾಡುವಂಥಾವರುಗಳ ನಿಬಂಧವು ಧೊರೆಯ ಪ್ರತ್ಯಕ್ಷವಾಗಿ ಆಗತಕ್ಕದ್ದು || ೪೮ || ಅಗಳು, ಗೋಪುರ, ಅಟ್ಟಾಲ, ವಪ್ರಪ್ರಾಕಾರಗಳಿಂದ ಅಲಂಕರಿಸಲ್ಪಟ್ಟಂಥ, ನಾನಾವಿಧ ಮನೆಗಳ ವಿನ್ಯಾಸ ಉಳ್ಳಂಥ, ಉದ್ಯಾನಗಳೊಡನೆ ಕೂಡಿದಂಥ, ಜಲಾಧಾರದೊಡನೇ ಕೂಡಿದಂಥ || ೪೯ || ಈ ಪ್ರಕಾರವಾದಂಥಾದ್ದನ್ನು ಪುರವನ್ನಾಗಿಯು, ಪ್ರಸಿದ್ಧವಾದಂಥ ಉಚಿತವಾದ ಪ್ರದೇಶದಲ್ಲಿ ಸ್ಥಾಪಿಸಲ್ಪಟ್ಟಂಥ, ಪೂರ್ವೋತ್ತರವಾಗಿ ಪ್ರವಹಿಸುವ ನೀರುವುಳ್ಳಂಥ ಪ್ರಧಾನಪುರುಷನಿಗೆ ಯೋಗ್ಯವಾ ದಂಥ || ೫೦ || ನದೀ ಬೆಟ್ಟಗಳಿಂದ ತೆಡೆಯಲ್ಪಟ್ಟಂಥಾದ್ದನ್ನು ವಿದ್ವಾಂಸರು ಖೇಟವನ್ನಾಗಿ ಹೇಳುವರು. ಕೇವಲವಾಗಿ ಬೆಟ್ಟದಿಂದ ತಡೆಯಲ್ಪಟ್ಟಂಥಾದ್ದನ್ನು ಖರ್ವ್ವಟವನ್ನಾಗಿ ಹೇಳುವವರು || ೫೧ || ತಿಳವಳಿಕೆ ಉಳ್ಳಂಥಾವರು ಐನೂರು (೫೦೦) ಗ್ರಾಮಗಳಿಂದ ಸುತ್ತಲ್ಪಟ್ಟಂಥಾದ್ದನು ಮಡಂಬವನ್ನಾಗಿ ತಿಳಿಯುತ್ತಾರೆ. ಸಮುದ್ರದ ಕೊನೆಯಲ್ಲಿಯಾವದು, ಹಡಗುಗಳಿಂದ ಇಳಿಯಲ್ಪಟ್ಟುತ್ತಿಧೆಯೋ ಅದು ಪತ್ತನವು || ೫೨ || ನದಿಯ ತಡಿಯನ್ನು ಆಶ್ರಯಿಸಿದಂಥಾದ್ದು ಹೆಸರಿನಿಂದ ದ್ರೋಣಾಮುಖವಾಗುತ್ತೆ. ಸರೋವರದಿಂದ ವಹಿಸಲ್ಪಟ್ಟಧಾನ್ಯ ಸಮೂಹವುಳ್ಳಂಥಾದ್ದು, ಸಂವಾಹವೆಂದು ಅಪೇಕ್ಷಿಸಲ್ಪಡುತ್ತೆ || ೫೩ || ಒಂದು ಒಂದು

* * *

ಷಾಂಚಕ್ವಚಿತ್ಕ್ವಚಿತ್‌ | ಸನ್ನಿವೆಶೊಭವೆತ್ ಪ್ರಥ್ಯ್ವಾಯಧೊದ್ದೇಶಮಿತೊಮುತಃ || ೫೪ || ಶತಾನ್ಯ ಷ್ಟಾಚಚತ್ವಾರಿದ್ವೆಚಸ್ಯುರ್ಗ್ರಾಮಸಂಖ್ಯಯಾ | ರಾಜಧಾನ್ಯಾಂಸ್ತಥಾದ್ರೊಣ ಮುಖಕರ್ವ್ವಟಯೊಃಕ್ರ ಮಾತ್ || ೫೫ || ದಶಗ್ರಾಮ್ಯಾಸ್ತುಮದ್ಯೆಯೊ ಮಹಾನ್‌ಗ್ರಾಮಸ್ಸಸಂಗ್ರಹಃ | ತಥಾಗಘೋಷಕರಾದೀನಾ ಮಪಿಲಕ್ಷ್ಮವಿಲಕ್ಷ್ಯತಾಂ || ೫೬ || ಪುರಾಂವಿಭಾಗಮಿತ್ಯುಚ್ಚೈಃ ಕುರ್ವ್ವನ್ಗೀರ್ವ್ವಾಣನಾಯಕಃ | ತದಾಪು ರಂದರಖ್ಯಾತಿಮಗಾದನ್ವರ್ಥತಾಂಗತಾಂ || ೫೭ || ತತಃಪ್ರಜಾನಿವೆಶ್ಯೈಷು ಸ್ಥಾನೆಷುಸ್ರುಷ್ಟುರಾಜ್ಞಯಾ | ಜ ಗಾಮಿಕೃತಕಾರ್ಯ್ಯೊಗಾಂಮಘವಾನುಜ್ಞಯಾಪ್ರಭೊಃ ಅಸಿರ್ಮ್ಮಷಿಃ ಕೃಷಿರ್ದ್ವಿದ್ಯಾವಾಣಿಜ್ಯಂ ಶಿಲ್ಪಮೆವಚ || ೫೮ || ಕರ್ಮ್ಮಾಣೀಮಾನಿ ಷೊಢಾಸ್ಯುಃ ಪ್ರಜಾಜೀವನಹೆತವಃ || ತತ್ರವೃತ್ತಿಂಪ್ರಜಾ

* * *

ಪ್ರದೇಶದಲ್ಲಿ ಭೂಮಿಯ ಉದ್ದೇಶವನ್ನು ಅತಿಕ್ರಮಿಸದೆ ಪುಟಭೇದನವೆಂಬ ಭೇದಗಳುಳ್ಳಂಥ ಈ ಗ್ರಾಂಗಳ ಸ್ಥಾಪನೆಯು ಆಗುತ್ತೆ || ೫೪ || (೮೦೦) ಗ್ರಾಮಗಳಿಗೆ ರಾಜಧಾನಿಯು (೪೦೦) ಗ್ರಾಂಗಳಿಗೆ ದ್ರೋಣ ಮುಖವು (೨೦೦) ಗ್ರಾಂಗಳಿಗೆ ಖರ್ವ್ವಡವು || ೫೫ || (೧೦) ಗ್ರಾಮಗಳಿಗೆ ದೊಡ್ಡ ಗ್ರಾಮದ ಸಂಗ್ರಹವು ಹಾಗೆ. ಘೋಷಾಕರಾದಿ ಚಿಹ್ನೆಯೂಕೂಡ ತಿಳಿಯಲ್ಪಡತಕ್ಕದ್ದು || ೫೬ || ಈ ಪ್ರಕಾರವಾಗಿ ಅತ್ಯಂತವಾಗಿ ಪಟ್ಟಣಗಳ ವಿಭಾಗವನ್ನು ಮಾಡುತ್ತಿರುವಂಥ ದೇವೇಂದ್ರನು ಅನ್ವರ್ಥವನ್ನು ಪಡೆದಂಥ ಪುರಂದರನೆಂಬ ಖ್ಯಾತಿಯನ್ನು ಆಗ ಪಡದನು || ೫೭ || ಅನಂತರದಲ್ಲಿ ದೇವೇಂದ್ರನು ಆದಿ ಬ್ರಹ್ಮನ ಆಜ್ಞೆಯಿಂದ ಪ್ರಜೆಗಳನ್ನು ಸ್ಥಾನಗಳಲ್ಲಿ ಇಟ್ಟು ಮಾಡಲ್ಪಟ್ಟ ಕಾರ್ಯ್ಯವುಳ್ಳಂಥಾವನಾಗಿ ವೃಷಭಸ್ವಾಮಿಯು ಅಪ್ಪಣೆಯಿಂದ ಸ್ವರ್ಗ್ಗವನ್ನು ಕುರಿತು ಹೋದನು || ೫೮ || ಕತ್ತಿಯಿಂದ ಜೀವನ ಮಾಡೋಣವು, ಬರವಣಿಗೆಯಿಂದ ಜೀವನ ಮಾಡೋಣವು, ಭೂ ವ್ಯವಸಾಯದಿಂದ ಜೀವನ ಮಾಡೋಣವು, ಗಾನ ವೈದ್ಯ ಮುಂತಾದ ವಿದ್ಯದಿಂದ ಜೀವನ ಮಾಡೋಣವು, ವ್ಯಾಪಾರದಿಂದ ಜೀವನ ಮಾಡೋಣವು, ಚಿತ್ರ ಚಿನ್ನ ಬೆಳ್ಳಿ ಮರಗೆಲಸ ಮುಂತಾದವುಗಳಿಂದ ಜೀವನ ಮಾಡೋಣವು, ಈðಗಳು ಪ್ರಜೆಗಳ ಜೀವನಕ್ಕೆ ಹೇತುವಾದಂಥಾವುಗಳು || ೫೯ || ಆ ಸಮಯದಲ್ಲಿ ಭಗವಂತನಾದ ವೃಷಭಸ್ವಾಮಿಯು ಬುದ್ಧಿ ಕೌಶಲ್ಯದ್ದೆಶೆಯಿಂದ ಪ್ರಜೆಗಳಿಗೆ ವೃತ್ತಿಯನ್ನು ಹೇಳಿದನು.

* * *

ನಾಂಸಭಗವಾನ್ಮತಿಕೌಶಲಾತ್ | ಉಪಾದಿಕ್ಷತ್ಸರಾಗೊಹಿಸತದಾಸೀನಜ್ಜಗದ್ಗುರುಃ || ೬೦ || ತತ್ರಾಸಿಕ ರ್ಮ್ಮಸೇವಾಯಾಂಮಷಿರ್ಲ್ಲಿಪಿವಿಧೌಸ್ಮೃತಾ | ಕೃಷಿ ರ್ಬ್ಭೂಕರ್ಷಣೆಪ್ರೋಕ್ತಾವಿದ್ಯಾಶಸ್ತ್ರೊಪಜೀವನೆ || ೬೧ || ವಾಣಿಜ್ಯಂವಣರ್ಜಾಂ ಕರ್ಮ್ಮಶಿಲ್ಪಂಸ್ಯಾತಕ್ಕರಕೌಶಲಂ | ತಚ್ಚಚಿತ್ರಕಲಾಪತ್ರಚ್ಛೆದಾದಿಬಹುಧಾಸ್ಮೃತಂ || ೬೨ || ಉತ್ಪಾದಿ ಶಸ್ತ್ರಯೊವರ್ಣೌ ಸ್ತದಾತೆನಾದಿವೆಧಸಾ | ವಣಿಜಃಶೂದ್ರಾಃಕ್ಷತತ್ರಾಣೌಕ್ಷತ್ರಿಯಾಶ್ಸಸ್ತ್ರಯೊವರ್ಣಾ ದಿಭಿರ್ಗ್ಗುಣೈಃ || ೬೩ || ಕ್ಷತ್ರಿಯಾಶ್ಯಸ್ತ್ರಜೀವಿತ್ವಮನು ಭೂಯತದಾಭವತ್ | ವೈಶ್ಯಾಶ್ಚ ಕೃಷಿವಾಣಿಜ್ಯಪಾಸುಪಾಲ್ಯೊಪಜೀವನಃ || ೬೪ || ತೆಷಾಂಶು ಶ್ರೂಷಣಾಚ್ಛೂದ್ರಾಸ್ತೆದ್ವಿಧಾ ಕಾರ‍್ವಕಾರವಃ | ಕಾರವೊರಜಕಾದ್ಯಸ್ಸ್ಯುಸ್ತ ತೊನ್ಯೆಸ್ಯುರಕಾವಃ || ೬೫ || ಕಾರವೊಪಿಮತಾ ದ್ವೆಧಾಸ್ಪೃಶ್ಯಾಸ್ಪೃಶ್ಯವಿಕಲ್ಪತಃ | ತ

* * *

ಅ ಸಮಯದಲ್ಲಿ ಜಗದ್ಗುರುವಾದ ವೃಷಭ ಸ್ವಾಮಿಯು ರಾಗದೊಡನೆ ಕೂಡಿದವನಾ ದನು ನಿಶ್ಚಯವು || ೬೦ || ಅವುಗಳಲ್ಲಿ ಆಯುಧ ವ್ಯಾಪಾರದಲ್ಲಿ ಅಸಿ ಎಂತಲು, ಬರವಣಿಗೆ ವಿಧಿ ಯಲ್ಲಿ ಮಷಿ ಎಂತಲು, ಸ್ಮರಿಸಲ್ಪಟ್ಟಿತು. ಭೂಮಿಯನ್ನು, ಅಗೆಯುವದರಲ್ಲಿ ಕೃಷಿಯೆಂತಲು, ಶಾಸ್ತ್ರದಿಂದ ಜೀವಿಸುವದರಲ್ಲಿ ವಿದ್ಯವೆಂತಲೂ ಹೇಳಲ್ಪಟ್ಟಿತು || ೬೧ || ವರ್ತ್ತಕರ ವ್ಯಾಪಾರವು ವಾಣಿಜ್ಯವೆಂತಲು, ಕೈಯ್ಯಿನ ಕುಶಲತ್ವವು ಶಿಲ್ಪವೆಂತಲು ಆಗುತ್ತೆ. ಆ ಶಿಲ್ಪವಾದರೋ ಚಿತ್ರಕಲೆ ಪತ್ರಚ್ಛೇದಾದಿಯಾಗಿ ಬಹಳ ಪ್ರಕಾರವಾಗಿ ಸ್ಮರಿಸಲ್ಪಟ್ಟಿತು || ೬೨ || ಆ ಸಮಯದಲ್ಲಿ ಆದಿ ಬ್ರಹ್ಮನಿಂದ ಕ್ಷತತ್ರಾಣಾದಿ ಗುಣಗಳಿಂದ ಕ್ಷತ್ರಿಯರು, ವೈಶ್ಯರು, ಶೂದ್ರರುಗಳು ಅದಂಥ ಮೂರು ವರ್ಣ್ನಗಳು, ಉತ್ಪಾದನೆ ಮಾಡಲ್ಪಟ್ಟವು || ೬೩ || ಆ ಸಮಯದಲ್ಲಿ ಶಸ್ತ್ರದಿಂದ ಜೀವಿಸುವ ಭಾವವನ್ನು ಅನುಭವಿಸಿ ಕ್ಷತ್ರಿಯರುಗಳು ಆದರು. ಕೃಷಿ ವ್ಯಾಪಾರ ಗೋಪಾಲಗಳಿಂದ ಜೀವಿಸುವಂಥಾವರು ವೈಶ್ಯರುಗಳಾಗಿ ಆದರು || ೬೪ || ಇವರುಗಳನ್ನ ಸೇವಿಸುವದರಿಂದ ಶೂದ್ರರುಗಳು, ಕಾರುಗಳು, ಅಕಾರುಗಳು, ಇಂತೆಂದು ಎರಡು ಪ್ರಕಾರ ವಾದಂಥಾವರುಗಳು. ಅಸಗನೇ ಮೊದಲಾದಂಥಾವರುಗಳು ಕಾರುಗಳು ಅವರಿಗೆ ಅನ್ಯರಾದಂ ಥಾವರುಗಳು ಅಕಾರುಗಳು || ೬೫ || ಕಾರು ಶೂದ್ರರೂ ಕೂಡ ಸ್ಪೃಶ್ಯ್ತಅಸ್ಪೃಶ್ಯವೆಂಬ ಭೇದದಿಂದ ಎರಡು ಪ್ರಕಾರರಾದಂಥಾವರುಗಳು. ಅವರುಗಳಲ್ಲಿ ಅಸ್ಪೃಶ್ಯರಾದಂಥಾವರುಗಳು ಬಾ

* * *

ತ್ರಾಸ್ಪೃಶ್ಯಾಃಪ್ರಜಾಬಾಹ್ಯಾಃಸ್ಪೃಶ್ಯಾಸ್ಯುಃಕರ್ತಕಾದಯಃ || ೬೬ || ಯಥಾಸ್ವಂಸ್ವೊಚಿ ತಂಕರ್ಮ್ಮ ಪ್ರಜಾದಧುರಸಂಕರಂ | ವಿವಾಹಜ್ಞಾತಿಸಂಬಂಧವ್ಯವಹಾರಾಶ್ಚತನ್ಮತಂ || ೬೭ || ಯಾವತೀ ಜಗತೀವೃತ್ತಿರಪಾಪೊಪಹತಾಚಯಾ | ಸಾಸರ್ವ್ವಾಸ್ಯ ಮತೆನಾ ಸೀತ್ಸಹಿದಾತಾಸನಾತನಃ || ೬೮ || ಯುಗಾದಿಬ್ರಹ್ಮಣಾತೆ ನಯದಿತ್ಥಂ ಸಕೃತೊಯುಗಃ | ತತಃಕೃತಯುಗಂನಾಮ್ನಾತಂಪುರಾಣವಿದೊವಿದುಃ || ೬೯ || ಆಷಾಢಮಾಸಬಹು ಲಪ್ರತಿಪದ್ದಿವಸೆಕೃತ | ಕೃತ್ಯಾಕೃತತ್ವಯುಗಾರಂಭಂಪ್ರಾಜಾಪತ್ಯಮು ಪೆಯುವಾನ್ || ೭೦ || ಕಿಯತ್ಯಪಿಗತೆಕಾಲೆಷಟ್ಕರ್ಮ್ಮವಿನಿಯೊಗತಃ | ಯದಾಸಾಸ್ಥಿತ್ಯಮಾಯಾತಾಃ ಪ್ರಜಾಕ್ಷೆಮೆಣಯೊಜಿತಾಃ || ೭೧ || ತದಾಸ್ಯಾವಿರಭೂದ್ದ್ಯಾವಾಪೈಥು ವ್ಯೂಪ್ರಾಭವಂ ಮಹತ್ | ಅ ಧಿರಾಜ್ಯೆಭಿಷಿಕ್ತಸ್ಯಸುರೈರಾ

* * *

ಹ್ಯಪ್ರಜೆಗಳು ಅಂದರೆ ಅವರನ್ನು ಮುಟ್ಟ ಬಾರದು. ಚಿಪ್ಪಿಲಗನೇ ಮೊದಲಾದಂಥಾ ವರುಗಳು || ೬೬ || ಸ್ಪೃಶ್ಯಶೂದ್ರರುಗಳು, ಪ್ರಜೆಗಳು ಸಂಕರವಿಲ್ಲದೇ ಇರೋಣ ಹ್ಯಾಗೋ ಹಾಗೆ ತಮ್ಮ ಯೋಗ್ಯತೆಯನ್ನು ಅತಿಕ್ರಮಿಸದೆ ತಮಗೆ ಯೋಗ್ಯವಾದ ಕರ್ಮ್ಮವನ್ನು ದರಿಸಿದರು. ವಿವಾಹ ಜ್ಞಾತಿ ಸಂಬಂಧ ವ್ಯವಹಾರಗಳೂ ಕೂಡ ತಮ್ಮತಮ್ಮಲ್ಲೆ ವಡಂಬಡತಕ್ಕದ್ದು || ೬೭ || ಪಾಪದಿಂದ ಉಪಹತವಿಲ್ಲದೇಯಿರುವಂಥ ಭೂಮಿಯಲ್ಲಿ ಜೀವನ ವರ್ತ್ತನೆಯು ಎಷ್ಟು ಉಂಟೋ ಆ ಸಮಸ್ತ ಈ ವೃಷಭಸ್ವಾಮಿಯ ಮತದಿಂದಲೇ ಆಯಿತು. ಆ ವೃಷಭಸ್ವಾಮಿಯು ನಿಶ್ಚಯವಾಗಿ ಬ್ರಹ್ಮನು, ಸನಾತನು || ೬೮ || ಯುಗದ ಆದಿ ಬ್ರಹ್ಮನಾದಂಥ ವೃಷಭ ಸ್ವಾಮಿಯಿಂದ ಆಯುಗವು, ಈ ಪ್ರಕಾರವಾಗಿ ಯಾವ ಕಾರಣದ್ದೆಶೆಯಿಂದ ಮಾಡಲ್ಪಟ್ಟಿತೋ, ಆ ಕಾರಣದ್ದೆಶೆಯಿಂದ ಪುರಾಣವನ್ನು ತಿಳಿದಂಥಾವರುಗಳು, ಹೆಸರಿನಿಂದ ಕೃತಯುಗವನ್ನಾಗಿ ತಿಳಿಯುವರು || ೬೯ || ಕೃತಕೃತ್ಯನಾದಂಥ ವೃಷಭಸ್ವಾಮಿಯು, ಆಷಾಢಮಾಸದ ಕೃಷ್ಣಪಕ್ಷದ ಪ್ರಥಮದಿವಸದಲ್ಲಿ ಕೃತಯುಗದ ಆರಂಭವನ್ನು ಮಾಡಿ, ಬ್ರಹ್ಮನ ಭಾವವನ್ನು ಪಡದನು || ೭೦ || ಷಟ್ಕರ್ಮ್ಮದ ವಿನಿಯೋಗದ್ದೆಶೆಯಿಂದ ಕೆಲವು ಕಾಲವುಕಳಿಯುತ್ತಿರಲಾಗಿ ಕ್ಷೇಮದಿಂದ ಯೋಚಿಸಲ್ಪಟಂಥಾ ಪ್ರಜೆಗಳು, ಯಾ ಸಮಯದಲ್ಲಿ ಸುಖ ಸ್ಥಿತಿಯನ್ನು ಪಡದರೋ || ೭೧ || ಆ ಸಮಯದಲ್ಲಿ ತೊರೆಯೊಡನೇ ಕೂಡಿಕೊಂಡಿರೋಣ

* * *

ಗತ್ಯಸತ್ವರಂ || ೭೨ || ಸುರೈಃಕೃತಾದರೈರ್ದ್ದಿವ್ಯೈಃಸಲಿಲೈರಾದಿವೆಧಸಃ | ಕೃತೋಭಿಫೆರಕ ಇತ್ಯೆವ ವರ್ಣ್ನಾನಾಸೂಕ್ತಿಮಾನ್ಯಯಾ || ೭೩ || ಅಥಾದಿರಾಜ್ಯಮಾಸಾಧ್ಯನಾಭಿ ರಾಜಸ್ಯಸಂನಿಧೌ | ಪ್ರಜಾನಾಂ ಪಾಲನೆಯತ್ನಮಕರೊದಿತಿವಿಶ್ವಸೃಟ್ || ೭೪ || ಕೃತ್ವಾದಿತಃ ಪ್ರಜಾಸರ‍್ಗಂತದ್ವೃತ್ತಿನಿಯಮಂಪುನಃ | ಸ್ವಧರ್ಮ್ಮನತಿವೃತ್ಯೈವ ನಿಯಚ್ಛನ್ನನ್ವ ಶತ್ಪ್ರಜಾಃ || ೭೫ || ಸ್ವದೊರ್ಭ್ಬ್ಯಾಂಧಾರರ್ಯಶಸ್ತ್ರಂಕ್ಷತ್ರಿಯಾನಸೃಜ ದ್ವಿಭುಃ | ಕ್ಷತತ್ರಾಣಿನಿಯುಕ್ತಾಹಿಕ್ಷತ್ರಿಯಾಃಶಸ್ತ್ರಪಾಣಯಃ || ೭೬ || ಊರುಭ್ಯಾಂದರ್ಶ ಯನ್‌ಯಾತ್ರಾ ಮಸ್ರಾಕ್ಷೀತ್‌ವಣಿಜಃಪ್ರಭುಃ | ಜಲಸ್ಥಲಾದಿ ಯತ್ರಾಭಿಸ್ತದ್ವೈತ್ತಿರ್ವಾ ತ್ತಯಾಯತಃ || ೭೭ || ನ್ಯಗ್ವೈತ್ತಿನಿಯ ತಾನ್ ಶೂದ್ರಾನ್ಪದ್ಭ್ಯಾಮೆವಾಸೃಜತ್ಸುಧೀಃ | ವರ್ಣ್ನೋತ್ತಮೆಷುಶುಶ್ರೂಷಾತದ್ವೈತ್ತಿರ್ನೈಕಾಧಾಸ್ಮೃ

* * *

ಹ್ಯಾಗೋ ಹಾಗೆ ಬಂದು ದೇವತೆಗಳಿಂದ ಅಧಿರಾಜತ್ವದಲ್ಲಿ ಅಭಿಷೇಕ ಮಾಡಲ್ಪಟ್ಟಂಥ ಈ ವೃಷಭಸ್ವಾಮಿಗೆ ದೊಡ್ಡ ಪ್ರಭಾವವು ಭೂಮಿಸ್ವರ್ರ‍್ಗ‍ಗಳಲ್ಲಿ ಅವಿರ್ಭವಿಸಿತು || ೭೨ || ಮಾಡಲ್ಪಟ್ಟಂಥ ಪ್ರೀತಿಉಳ್ಳಂಥ ದೇವತೆಗಳಿಂದ ದಿವ್ಯವಾದಂಥ ಜಲಗಳಿಂದ ಆದಿಬ್ರಹ್ಮನಾದ ವೃಷಭಸ್ವಾಮಿಗೆ ಯಾವ ವರ್ಣನೆಯಿಂದ ಯಥಾರ್ಥ ವಚನವುಳ್ಳಂಥಾದ್ದಾಗುತ್ತಿದೆಯೋ ಆ ಅಭಿಷೇಕವು ಮಾಡಲ್ಪಟ್ಟಿತು. ಇಷ್ಟುಮಾತ್ರವೆ ವರ್ಣ್ನನೆಯು || ೭೩ || ಸಮಸ್ತವನ್ನು ಸೃಷ್ಟಿ ಮಾಡಿದಂಥಾ ವೃಷಭ ಸ್ವಾಮಿಯು ನಾಭಿರಾಜನ ಸಮೀಪದಲ್ಲಿ ಅಧಿ ರಾಜತ್ವವನ್ನು ಪಡದು ಪ್ರಜೆಗಳ ಪರಿಪಾಲನೆಯಲ್ಲಿ ಪ್ರಯತ್ನವನ್ನು ಮಾಡಿದನು || ೭೪ || ಮೊದಲಲ್ಲಿ ಪ್ರಜಾಸೃಷ್ಟಿಯನ್ನು ಮಾಡಿ ಮತ್ತೆ ಅವರ ಜೀವನನಿಯಮವನ್ನು ತಮ್ಮ ಧರ್ಮವನ್ನು ಅತಿಕ್ರಮಿಸದೇ ಇರುವ ವೃತ್ತಿಯಿಂದಲೇಯೆ, ಕೊಡುವಂಥಾವನಾಗಿ ಪ್ರಜೆಗಳನ್ನ ಪರಿಪಾಲಿಸಿದನು || ೭೫ || ಸ್ವಾಮಿಯು ತಂನ ಭುಜಗಳಿಂದ ಶಸ್ತ್ರವನ್ನು ಧರಿಸುವಥಾವನಾಗಿ ಕ್ಷತ್ರಿಯರನ್ನು ಸೃಷ್ಟಿಸಿದನು. ಶಸ್ತ್ರವೇ ಹಸ್ತದಲ್ಲಿ ವುಳ್ಳಂಥ ಕ್ಷತ್ರಿಯರುಗಳು ಹಾನಿ ಯುಕ್ತರದ ಪ್ರಜೆಗಳ ಸಂರಕ್ಷಣೆಯಲ್ಲಿ ಪ್ರೇರಿಸಲ್ಪಟ್ಟರು || ೭೬ || ಸ್ವಮಿಯು ಜಲಸ್ಥಲಾದಿ ಯಾತ್ರೆಗಳಿಂದ ಅವರ ಜೀವನವು ಯಾವಕಾರಣದ್ದೆಶೆಯಿಂದ ಆಗುತ್ತಿಧೆಯೋ ಆಕಾರಣದ್ದೆಶೆಯಿಂದ ತೊಡೆಯಿಂದ ಯಾತ್ರೆಯನ್ನು ತೋರಿಸುವನಾಗಿ ವರ್ತಕರನ್ನು ಸೃಷ್ಟಿಸಿದನು || ೭೭ || ಬುದ್ಧಿಶಾಲಿಯಾದಂಥ ವೃಷಭಸ್ವಾಮಿಯು ನೀಚವೃ

* * *

ತಾ || ೭೮ || ಮುಖತೊಧ್ಯಾಪಯನ್‌ಶಾಸ್ತ್ರಂಭರತಃಸ್ರಕ್ಷ್ಯತಿದ್ವಿಜಾನ್ | ಅಧೀತ್ಯ ಧ್ಯಾಪನೆದಾನಂಪ್ರ ತೀಚ್ಛೆಜ್ಯೇತಿತ್ಕ್ರಿಯಾಃ || ೭೯ || ಶೂದ್ರಾಶ್ಯೂದ್ರೆಣವೊಢವ್ಯಾನಾನ್ಯಾ ನಾಸ್ವಾಂಚನೈಗಮಃ | ವಹೇತ್ಸ್ವಾಂತೆ ಚರಾಜನ್ಯಃಸ್ವಾಂದ್ವಿಜನ್ಮಾಕ್ವಚಿಚ್ಚತಾಃ || ೮೦ || ಸ್ವಾಮಿಮಾಂವೃತ್ತಿಮುತ್ಕ್ರಮ್ಯಸ್ತ್ವನ್ಯಾಂವೃತ್ತಿಮಾಚರೆತ್ | ಸಪಾರ್ಥಿವೈರ‍್ನಿಯಂತ ವ್ಯೂವರ‍್ಣಸಂಕೀರ್ಣ್ನಿರನ್ಯಥಾ || ೮೧ || ಕೃಷ್ಯಾದಿಕರ್ಮ್ಮಟ್ಕಂಚಸ್ರಷ್ಟಾಪ್ರಾಗೆ ವಸೃಷ್ಟವಾನ್ | ಕರ್ಮ್ಮಭೂಮಿ

* * *

ತ್ತಿಯಲ್ಲಿ ನಿರತರಾದಂಥ ಶೂದ್ರರನ್ನು ಪಾದಗಳಿಂದಲೇ ಸೃಷ್ಟಿಸಿದನು, ವರ್ಣ್ನೋತ್ತಮರಾದ ಕ್ಷತ್ರಿಯಾದಿಗಳಲ್ಲಿ ಶಿಶ್ರೂಷೆಯಾದಂಥ ಆ ಶೂದ್ರರ ವೃತ್ತಿಯು, ಅನೇಕವಿಧವಾಗಿ ಸ್ಮರಿಸಲ್ಪಟ್ಟಿತು || ೭೮ || ಭರತರಾಜನು, ಮುಖದ್ದೆಶೆಯಿಂದ ಶಾಸ್ತ್ರವನ್ನು ಅಧ್ಯಾಪನೇ ಮಾಡಿಸುವಂಥಾವನಾಗಿ ದ್ವಿಜರನ್ನು ಸೃಷ್ಟಿಸುತ್ತಾನೆ. ಶಾಸ್ತ್ರಾಭ್ಯಾಸ ಮಾಡುವದು ಶಾಸ್ತ್ರಾಭ್ಯಾಸ ಮಾಡಿಸುವದು ಕೊಡುವದು ತೆಗೆದುಕೊ ಳ್ಳೂವದು ಪೂಜೆ ಮಾಡೋದು ಇಂತೆಂದು ಅವರುಗಳ ಕ್ರಿಯೆಗಳು || ೭೯ || ಶೂದ್ರ ನಿಂದ, ಶೂದ್ರಸ್ತ್ರೀಯು ವಹಿಸುವದಕ್ಕೆ ಯೋಗ್ಯಳಾದಂಥಾವಳು, ವೈಶ್ಯಾದಿ ಅನ್ಯಸ್ತ್ರೀಯು ವಹಸತಕ್ಕುವಳಲ್ಲ. ವೈಶ್ಯನು, ಆ ಶೂದ್ರಸ್ತ್ರೀಯನ್ನು ಸ್ವಜಾತಿಯಾದ ವೈಶ್ಯಸ್ತ್ರೀಯನ್ನು ವಹಿಸತಕ್ಕದ್ದು. ರಾಜವಂಶೋತ್ಪನ್ನ ನಾದಂಥಾವನು, ಸ್ವಕೀಯಳಾದ ಕ್ಷತ್ರಿಯ ಸ್ತ್ರೀಯನ್ನು ವೈಶ್ಯಶೂದ್ರಸ್ತ್ರೀಯನ್ನು ಗ್ರಹಿಸತಕ್ಕದ್ದು. ಬ್ರಾಹ್ಮಣನು, ಸ್ವಸ್ತ್ರೀಯನ್ನು ಕೆಲವು ವಿಷಯಗಳಲ್ಲಿ ಇತರ ಮೂರು ವರ‍್ಣದ ಸ್ತ್ರೀಯರನ್ನು ಗ್ರಹಿಸತಕ್ಕದ್ದು. ಕ್ವಚಿತ್ ಅಂದರೆ ತಮ್ಮ ತಮ್ಮ ವರ್ಣ ಸ್ತ್ರೀಯರನ್ನ ಬಿಟ್ಟು ಇತರವರ್ಣಸ್ತ್ರೀಯರನ್ನ ಅಂಗೀಕರಿಸುವ ವಿಷಯದಲ್ಲಿ ಕಾಮಾಸಕ್ತಿ ಮುಂತಾದ ಕೆಲವು ವಿಷಯದಲ್ಲಿ ಮಾತ್ರವೆಂತ ಅಭಿಪ್ರಾಯವಾಗುತ್ತೆ || ೮೦ || ಯಾವಪುರಷನು, ಸ್ವಕೀಯವಾದ ಈ ವೃತ್ತಿಯನ್ನು ಅತಿಕ್ರಮಿಸಿ ಅನ್ಯವೃತ್ತಿಯನ್ನು ಪಡೆಯುತ್ತಾನೊ ಆ ಪುರುಷನು ಧೊರೆಗಳಿಂದ ಶಿಕ್ಷಿಸುವದಕ್ಕೆ ಯೋಗ್ಯನಾದಂಥಾವನುಹಾಗಲ್ಲದೇ ಹೋದರೆ, ವರ್ಣಸಂಕರವು ಆಗುತ್ತೆ || ೮೧ || ಪೂರ್ವದಲ್ಲೇ ಯೇಕೃಷ್ಯಾದಿ ಆರು ಕರ್ಮ್ಮಗಳನ್ನು ಸೃಷ್ಟಿಸಿ ವರ್ಣವ್ಯವಸ್ಥೆಯನ್ನು ಸೃಷ್ಟಿಸಿದನು. ಆ ಸಮಯದಲ್ಲಿ ಆ ಕಾರಣದ್ದೆಶೆಯಿಂದ ಈ ಭೂಮಿಯು ಕರ್ಮಭೂಮಿಯಾಯ್ತು || ೮೨ || ಈ ಪ್ರಕಾರ

* * *

ರಿಯಂತಸ್ಮಾತ್ತದಾಸೀತ್ತದ್ವ್ಯವಸ್ಥಯಾ || ೮೨ || ಸ್ಮಷ್ಟ್ಯೆತಿತಾಃಪ್ರಜಾಸೃಷ್ಟಾತ ದ್ಯೊಗ್ಯಕ್ಷೆಮಸಾಧನಂ | ಪ್ರಾಯುಂಕ್ತಯುಕ್ತಿತೊದಂಡಂಹಾಮಾಧಿಕ್ಕಾರ ಲಕ್ಷಣಂ || ೮೩ || ದುಷ್ಟಾನಾಂ ನಿಗ್ರಹಶ್ಯಿಷ್ಟಪ್ರತಿಪಾಲನಮಿತ್ಯಯಂ | ನಪುರಾಸೀತ್ಕ್ರಮೊಯಸ್ಮಾತ್ಪ್ರಜಾಃ ಸರ‍್ವಾನಿರಾಗಸಃ || ೮೪ || ಪ್ರಜಾದಂಡಧ ರಾಭಾವೆಮಾತ್ಸ್ಯನ್ಯಾಯಂಶ್ರಯಂತ್ಯಮೂಃ | ಗ್ರಸ್ಯತೆಂತಪ್ರದುಷ್ಟೆನವಿ ಬಲೊಹಿಬಲೀಯಸಾ || ೮೫ || ದಂಡಭೀತ್ಯಾಹಿಲೋಕೊಯ ಮಪಥಂನಾನುಧಾವತಿ | ಯುಕ್ತದಂಡಧರಸ್ತಸ್ಮಾತ್ಪಾರ್ಥಿವಃ ಪೃಥುವೀಂಜಯತ್ || ೮೬ || ಪಯಸ್ವಿನ್ಯಾಯಥಾಕ್ಷೀರಮದ್ರೊಹಣೊಪಜೀವ್ಯತೆ | ಪ್ರಜಾಪ್ಯೆವಂದ ನಂದೊಹ್ಯಾನಾತಿಪೀಡಾಕರೈಃಕರೈಃ || ೮೭ || ತತೊದಂಡಧರಾನೆತಾನನು ಮೆನೆನೃಪಾನ್ಪ್ರಭುಃ | ತ ದಾಯತ್ತಂಹಿಲೋಕಸ್ಯಯೊಗಕ್ಷೆಮಾನುಚಿಂತನಂ || ೮೮ || ಸಮಾಹೂಯಮಹಾಭಾಗಾನ್‌ಹ ರ್ಯ್ಯಕಂಪನಕಾಶ್ಯಪಾನ್ | ಸೊ

* * *

ವಾಗಿ ಸೃಷ್ಟಿಸಿ ಅವರಿಗೆ ಯೋಗ್ಯವಾದ ಕ್ಷೇಮಸಾಧನೆವುಳ್ಳಂಥ ಹಾಮಾಧಿಕ್ಕಾರ ಲಕ್ಷಣವುಳ್ಳಂಥ ದಂಡವನ್ನು ಯುಕ್ತೀದೆಶೆಯಿಂದ ಪ್ರಯೋಗಿಸಿದನು || ೮೩ || ಯಾವಕಾರಣದ್ದೆಶೆಯಿಂದ ಸರ್ವ್ವ ಪ್ರಜೆಗಳು, ಅಪರಾಧವಿಲ್ಲದೇ ಇರುವಂಥಾವರುಗಳು ಆದರೋ ಆ ಕಾರಣದ್ದೆಶೆಯಿಂದ ದುಷ್ಟರುಗಳ ನಿಗ್ರಹವು, ಸಿಷ್ಟರಪ್ರತಿಪಾಲನೆಯು ಎಂಬುವ ಕ್ರಮವು ಪೂರ್ವದಲ್ಲಿ ಆಗಲಿಲ್ಲಾ || ೮೪ || ಶಿಕ್ಷೆಮಾಡುವಂಥಾವರ ಅಭಾವದಲ್ಲಿ ಈ ಪ್ರಜೆಗಳು, ಮತ್ಸ್ಯನ್ಯಾಯವನ್ನು ಆಶ್ರಯಿಸುತ್ತಾರೆ. ಒಳಗೆ ಅತ್ಯಂತದುಷ್ಟನಾದಂಥ ಬಲಿಷ್ಠನಿಂದ ದುರ್ಬಲನಾದಂಥಾವನು ನುಂಗಲ್ಪಡುತ್ತಾನೆ. || ೮೫ || ಈ ಜನವು, ದಂಡಭೀತಿಯಿಂದ, ಅಮಾರ್ಗವನ್ನು ಕುರಿತು ಹೋಗುವುದಿಲ್ಲ. ಯುಕ್ತವಾದ ದಂಡಧ ರನಾದ ಧೊರೆಯು, ಆ ದಂಡವಿರುವ ಕಾರಣದಿಂದ ಭೂಮಿಯನ್ನು ಜಯಿಸುತ್ತಾನೆ || ೮೬ || ಹಾಲುವುಳ್ಳ ಹಸುವಿನ ಹಾಲು ಯಾವ ಮೇರೆ ದ್ರೊಹವಿಲ್ಲದೇಯಿರುವದ್ದರಿಂದ ಕರೆಯಲ್ಪಡುತ್ತೊ ಆಮೇರೆ ಈ ಪ್ರಕಾರವಾಗಿ ಅತ್ಯಂತ ಪೀಡಾಕರವಾದಂಥ ಕಂದಾಯಗಳಿಂದ ಪ್ರಜೆಯು, ಹಣವನ್ನು, ಕರೆಯತಕ್ಕದ್ದಲ್ಲ || ೮೭ || ಆ ಕಾರಣದ ದೆಶೆಯಿಂದ ಸ್ವಾಮಿಯು, ದಂಡಧರರಾದಂಥ ಧೊರೆಗಳನ್ನು ವಡಂಬಟ್ಟನು, ನಿಶ್ಚಯವಾಗಿ ಆಲೋಕದ ಯೋಗಕ್ಷೇಮಾನು ಚಿಂತೆಯು, ಆ ದಂಡಧರರಾದಂಥ ಧೊರೆಗಳ ಸ್ವಾಧೀನವಾ ದಂಥಾದ್ದು || ೮೮ || ಮಹಾ

* * *

ಮಪ್ರಭಂಚಸಂಮಾನ್ಯಸತ್ಕೃತ್ಯಚಯಥೋಚಿತಂ || ೮೯ || ಕೃತಾಭಿಷೆಚನಾನೆತಾನ್ಮಹಾ ಮಂಡಲ ಕಾನ್ನೃಪಾನ್ | ಚತುಸ್ಸಹಸ್ರಭೂನಾಥಪರಿವಾರಾನ್ವ್ಯಧಾದ್ವಿಭುಃ || ೯೦ || ಸೋಮಪ್ರಭಃಪ್ರಭೊರಾಪ್ತಕು ರುರಾಜಸಮಾಹ್ವಯಃ | ಕುರೂಣಾಮಾದಿ ರಾಜೊಭೂತ್ಕುರುವಂಶಶಿಖಾಮಣಿಃ || ೯೧ || ಹರಿಶ್ಚಹರಿ ಕಾಂತಾಖ್ಯಾಂದ ಧಾನಸ್ತದನುಜ್ಞಯಾ | ಹರಿವಂಶಮಲಂಚಕ್ರೆಶ್ರೀಮಾನ್‌ಹರಿಪರಾಕ್ರಮಃ || ೯೨ || ಅಕಂಪನೊಪಿಸೃಷ್ಟೀಶಾತ್ಪ್ರಾಪ್ತಶ್ರೀಧರನಾಮಕಃ | ನಾಥವಂಶಸ್ಯನೆತಾಭೂತ್ ಪ್ರಸನ್ನೆಭು ವನೇಶಿನಿ || ೯೩ || ಕಾಶ್ಯಪೊಪಿಗುರೊಪ್ರಾಪ್ತಮಘವಾ ಖ್ಯಃಪತಿರ್ವ್ವಿಶಾಂ | ಉಗ್ರವಂಶಸ್ಯ ವಂಶ್ಯೊಭೂತ್ಕಿಂನಾಪ್ಯಂಸ್ವಾಮಿಸಂಪದಾ || ೯೪ || ತದಾ ಕಛ್ಛಮಹಾಕಛ್ಛಪ್ರಮುಖಾನಪಿಭೂಭುಜಃ | ಸೊಧಿರಾಜಪದೇದೇವಃಸ್ಥಾಪಯಾಮಾ

* * *

ಪುಣ್ಯವುಳ್ಳಂಥ ಹರಿಯನ್ನು ಅಕಂಪನನನ್ನು, ಕಾಶ್ಯಪನನ್ನು, ಸೋಮಪ್ರಭನನ್ನು ಕರೆದು, ಸನ್ಮಾನಮಾಡಿ, ಯಥೋಚಿತವಾಗಿ ಸತ್ಕರಿಸಿ || ೮೯ || ಸ್ವಾಮಿಯು ಮಹಾಮಂದಲೀಕರಾದಂಥ ಮಾಡಲ್ಪಟ್ಟ ರಾಜ್ಯಾಭಿಷೇಕವುಳ್ಳಂಥನಾಲ್ಕು ಸಾವಿರ ಧೊರೆಗಳ ಪರಿವಾರ ಉಳ್ಳಂಥ ಧೊರೆಗಳಾದಂಥ ಹಿಂದೆ ಹೇಳಲ್ಪಟ್ಟ ನಾಲ್ಕು ಜನರನ್ನು ಮಾಡಿದನು |೯೦ || ಸೋಮ ಪ್ರಭನು, ಸ್ವಾಮೀದೆಶೆಯಿಂದ ಪಡೆಯಲ್ಪಟ್ಟ, ಕುರುರಾಜನೆಂಬ ಹೆಸರು ಉಳ್ಳಂಥಾವನು ಕುರುವಂಶಕ್ಕೆ ಶಿಖಾಮಣೆಯಾದಂಥಾವನು ಕುರುವಂಶದವರೊಳಗೆ ಮೊದಲನೇ ಧೊರೆಯಾದಂಥಾವನು ಆದನು || ೯೧ || ಹರಿಯೂಕೂಡ ಆ ಸ್ವಾಮಿಯ ಅಪ್ಪಣೆಯಿಂದ ಹರಿ ಕಾಂತನೆಂಬ ಹೆಸರನ್ನು ಪಡದಂಥಾವನು. ಸಂಪದ್ಯುಕ್ತಿ ಯುಳ್ಳಂಥಾವನು, ಸಿಂಹದೋಪಾದಿಯಲ್ಲಿ ಪರಾಕ್ರಮವುಳ್ಳಂಥಾವನು, ಆಗಿ ಹರಿವಂಶವನ್ನು ಅಲಂಕರಿಸಿದನು || ೯೨ || ಅಕಂಪನನನ್ನೂ ಕೂಡ ತ್ರಿಜಗತ್ಪತಿಯಾದಂಥಾ ಸ್ವಾಮಿಯುಪ್ರಸನ್ನನಾಗುತ್ತಿರಲಾಗಿ ಸೃಷ್ಟಿಗೆ ಅಧಿಪತಿಯಾದಂಥ ಸ್ವಾಮಿದೆಶೆಯಿಂದ ಶ್ರೀಧರನೆಂಬ ಹೆಸರುವುಳ್ಳಂಥಾವನಾಗಿ, ನಾಥವಂಶಕ್ಕೆ ಅಧಿಪತಿಯಾದಂಥಾವನಾದನು || ೯೩ || ಪ್ರಜೆಗಳಿಗೆ ಅಧಿಪತಿಯಾದಂಥ ಕಾಶ್ಯಪನೂ ಕೂಡ ಗುರುವಾದಂಥ ಸ್ವಾಮೀದೆಶೆಯಿಂದ ಪಡೆಯಲ್ಪಟ್ಟ ಮಘವಯೆಂಬ ಹೆಸರುಳ್ಳವನಾಗಿ, ಉಗ್ರವಂಶಕ್ಕೆ ವಂಶದ ಮೂಲ ಪುರುಷನು ಆದನು. ಸ್ವಾಮಿ ಸಂಪತ್ತಿನಿಂದ ಯಾಮದು ಪಡೆಯವದಕ್ಕೆ ಯೋಗ್ಯವಾದಂಥ

* * *

ಸಸತ್ಕೃತಾನ್ || ೯೫ || ಪುತ್ರಾನಪಿಯಥಾಯೊಗ್ಯವಸ್ತುವಾಹನಸಂಪದಾ | ಭಗವಾನ್ಸಂವಿಧತ್ತೆಸ್ಮತದ್ಧಿ ರಾಜ್ಯಾರ್ಜ್ಜನೆಪಲಂ || ೯೬ || ಆಕಾನಾಚ್ಚತದೆಕ್ಷೂಣಾಂರಸ ಸಂಗ್ರಹಣೇನೃಣಾಂ | ಇಕ್ಷಾಕುರಿತ್ಯಭೂದ್ದೆ ವೊಜಗತಾಮಪಿಸಂಮತಃ || ೯೭ || ಗೌಸ್ಸ್ವರ್ಗ್ಗಸ್ಸಪ್ರಕೃಷ್ಟಾತ್ಮಾಗೊತಮೊಭಿಮತಸ್ಸತಾಂ | ಸತ ಸ್ಮಾದಾಗ ತೊದೆವೊ ಗೌತಮಶ್ರುತಿಮನ್ವಭೂತ್ || ೯೮ || ಕಾಸ್ಯಮಿತ್ಯುಚ್ಯತೆತೆಜಃಕಾಶ್ಯಪಸ್ತಸ್ಯ ಪಾಲನಾತ್ | ಜೀವ ನೊಪಾಯಮನನಾನ್ಮನುಃಕುಲಧರೊಪ್ಯಸೌ || ೯೯ || ರಥಾಶ್ವಕರಿನಾಥಾಶ್ವಸೆನೆ ಶಾದ್ದಂಡ ನಾಯಕಾಃ | ಶ್ರೇಷ್ಠಿನೊಭ್ರಾಹ್ಮಣಾಕ್ಷತ್ರಂವೈಶ್ಯಾಶ್ಯೂದ್ರಾಮಹತ್ತರಾಃ || ೧೦೦ || ರಾಜಾನೊಮಂತ್ರಿಣಃ ಪ್ರೊಕ್ತಾಃ ಪ್ರವರಾಶ್ಚಪುರೊಧಸಃ | ಮಹಾಮಾತ್ಯಾಗಣಾನಾನಾಪ್ರಕೀರ್ಣ್ನಾದಂಸಕಾಸ್ತಥಾ || ೧೦೧ ||

* * *

ದಲ್ಲ || ೯೪ || ದೇವನಾದಂಥ ಆ ವೃಷಭಸ್ವಾಮಿಯು, ಸತ್ಕರಿಸಲ್ಪಟ್ಟಂಥ ಕಚ್ಛ ಮಹಾಕಚ್ಛ ಮೊದಲಾದಂಥ ಧೊರೆಗಳನ್ನು ಕೂಡ ಅಧಿರಾಜಸ್ಥಾನದಲ್ಲಿ ಸ್ಥಾಪಿಸಿದನು || ೯೫ || ಭಗವಂಥನಾದಂತ ವೃಷಭಸ್ವಾಮಿಯು ಮಕ್ಕಳುಗಳನ್ನು ಕೂಡ ಯಥಾಯೋಗ್ಯ ವಸ್ತುವಾಹನ ಸಂಪತ್ತಿನಿಂದ ಪುಷ್ಟಿ ಮಾಡಿದನು. ರಾಜಸಂಪಾದನೆಯಲ್ಲಿ ಅದು ನಿಶ್ಚಯವಾಗಿ ಪ್ರಯೋಜನವು || ೯೬ || ಮನುಷ್ಯರುಗಳಿಗೆ ಕಬ್ಬಿನ ರಸಗಳನ್ನು ಸಂಗ್ರಹಿಸುವ ವಿಷಯದಲ್ಲಿ ಯುಕ್ತಿಯನ್ನು ಉಪದೇಶ ಮಾಡಿದ್ದರ ದೆಶೆಯಿಂದ ಇಕ್ಷ್ವಾಕು ಇಂತೆಂದು ಆದನು. ಲೋಕಗಳಿಗೆ ಸಮ್ಮತನು ಆದನು || ೯೭ || ಗೌಃ ಎಂದರೆ ಸ್ವರ್ಗ್ಗದ ಹೆಸರು ಅದು ಉತ್ಕೃಷ್ಟವಾದಂಥಾ ಸ್ವರೂಪವಾದರೆ ಗೋತಮ ಇಂತೆಂದು ಸತ್ಪುರುಷರುಗಳಿಗೆ ಸಂಮತವಾದಂಥಾದ್ದು, ಆ ಸ್ವಾಮಿಯು, ವುತ್ಕೃಷ್ಟಸ್ವರ್ಗ್ಗವಾದಂಥ ಸರ್ವ್ವಾರ್ಥ ಸಿದ್ಧೀದೆಶೆಯಿಂದ ಬಂದಂಥಾ ವನು ಈ ಕಾರಣದ್ದೆಶೆಯಿಂದ ಗೌತಮನೆಂದು ಪ್ರಸಿದ್ಧಿಯನ್ನು ಅನುಭವಿಸಿದನು || ೯೮ || ಕಾಸ್ಯಂ ಎಂದರೆ ತೆಜಸ್ಸಿನ ಹೆಸರು ಅದನ್ನು ಪರಿಪಾಲಿಸುವದರ ದೆಶೆಯಿಂದ ಕಾಶ್ಯಪನು, ಜೀವನೋಪಾಯವನ್ನು ತಿಳಿಯುವದರ ದೆಶೆಯಿಂದ ಮನುವು, ಕುಲಧರನು ಕೂಡ ಆಗುತ್ತಾನೆ || ೯೯ || ರಥಾಧಿಪತಿಗಳು, ಆಶ್ವಾದಿಪತಿಗಳು, ಗಜಾಧಿಪತಿಗಳು, ಸೇನಾಧಿಪತಿಗಳು, ದಂಡನಾಯಕರು, ಶ್ರೇಷ್ಠಿಗಳು, ಬ್ರಾಹ್ಮಣರು, ಕ್ಷತ್ರಿಯರು ವೈಶ್ಯರು, ಮಹತ್ತರರು || ೧೦೦ || ಧೊರೆಗಳು, ಮಂತ್ರಿಗಳು, ಹೇಳಲ್ಪ

* * *