ತಥಾತಳವರಾಶ್ಚಾಷ್ಟಾದಶಶ್ರೇಣೀನಿರೂಪಿಸತಾ | ಪ್ತಾಂಗರಾಜ್ಯಸಂಪತ್ತಿರಭೂತ್ಯಕ್ತಿ ತ್ರಯಂವಿಭೊಃ || ೧೦೨ || ವಿಧಾತಾವಿಶ್ವಕರ್ಮ್ಮಾಚಸ್ರಷ್ಟಾಚೆತ್ಯಾದಿನಾಮಭಿಃ | ಪ್ರಜಾಸ್ತಂವ್ಯಾಹರಂತಿಸ್ಮಜಗ ತಾಂಪತಿಮಚ್ಯುತಂ || ೧೦೩ || ಭಗವತಿಜಿತಮೊಹೆಕೆವಲ ಜ್ಞಾನಲಕ್ಷ್ಯ್ಮಾಸ್ಪುರತಿಸತಿಸುರೆಂದ್ರಾಃಪ್ರಾಣ ಮನ್‌ಭಕ್ತಿಭಾರಾತ್ | ನಭಸಿಜಯನಿನಾಗೋ ವಿಶ್ವಿದಕ್ಕಂಜಜೃಂಭೆ ಸುರಪಟಹರವೈಶ್ಚಾರುದ್ದ ಮಾಸೀ ತ್ಖರಂಧ್ರಂ || ೧೦೪ ||

ಇತ್ಯಾರ್ಷೆಸ್ಮೃತಿಸಂಗ್ರಹೆವರ್ಣ್ನೊತ್ಪತ್ತಿವರ್ಣ್ನನಂನಾಮ.

|| ಚತುರ್ತ್ತೋಧ್ಯಾಯಃ ||

* * *

ಟ್ಟ ಶ್ರೇಷ್ಠರಾದಂಥ ಪುರೋಹಿತರು, ಮಹಾಮಾತ್ಯರು, ಗಣಗಳು, ನಾನಾ ಪ್ರಕೀರ್ಣಗಳು ದಂಸಕರು || ೧೦೧ || ತಳವಾರರು, ಇಂತೆಂದು (೧೦೧) ಶ್ರೇಣಿಯು ನಿರೂಪಿಸಲ್ಪಟ್ಟಿತು. ಸಪ್ತಾಂಗ ರಾಜ್ಯ ಸಂಪತ್ತಿಯುತ್ಯಕ್ತಿತ್ರಯವು ಸ್ಮಾಜೀದೆಶೆಯಿಂದ ಆಯಿತು. || ೧೦೨ || ವಿಧಾತಾ, ವಿಶ್ವಕರ್ಮ, ಸೃಷ್ಟಾ, ಇತ್ಯಾದಿನಾಮಗಳಿಂದ ಪ್ರಜೆಗಳು, ನಾಶವಿಲ್ಲದೇ ಇರುವಂಥ ಅಚ್ಯುತನಾದಂಥ ಜಗತ್ಪತಿಯನ್ನು ಕೊಂಡಾಡಿದರು || ೧೦೩ || ಆ ಸಂಪದ್ಯುಕ್ತನಾದಂಥ ಸ್ವರ್ಗಜನ್ಯವಾದ ಪದಾರ್ಥಗಳಲ್ಲಿ ನಿರತನಾದಂಥ ಸ್ವಕೀಯರಾದ ಪುತ್ರರಿಂದಲೂ, ಪೌತ್ರರಿಂದಲೂ, ತುಂಬಿಕ್ಕೊಂ ಡಿರುವಂಥ ಸ್ನೇಹಿತರಿಂದ ತೆಗೆದುಕ್ಕೊಳ್ಳಲ್ಪಟ್ಟ ಮನಸ್ಸಂತೋಷ ಉಳ್ಳಂಥ ಸಿಂಹಾಸನ ಮಧ್ಯದಲ್ಲಿರುವಂಥ ದೇವೇಂದ್ರ ಸೂರ್ಯ್ಯಚಂದ್ರ ಮುಂತಾದ ದೇವತೆಗಳಿಂದ ಸುತ್ತಲ್ಪಟ್ಟಂಥ ಒಳ್ಳೇ ಆಜ್ಞೆವುಳ್ಳಂಥ ಪ್ರತಿಶಾಸನವಿಲ್ಲದೇ ಇರುವಂಥ ಜಿನನು ಸಮುದ್ರವೇ ಏಲ್ಲೆ ಯಾಗಿಯುಳ್ಳ ಈ ಭೂಮಿಯನ್ನು ಪರಿಪಾಲಿಸಿದನು || ೧೦೪ ||

ಇತ್ಯಾರ್ಷೆಸ್ಮೃತಿಸಂಗ್ರಹೆ ವರ್ಣೋತ್ಪತ್ತಿವರ್ಣನೋನಾಮ.
ಚತುರ್ತ್ತೋಧ್ಯಾಯಸಂಪೂರ್ಣಂ

* * *

ಪಂಚಮೋಧ್ಯಾಯಃ

ಭರತೊಭಾರತಂವಷಣನಿರ್ಜ್ಜತ್ಯಸಹಪಾರ್ಥಿವೈಃ | ಷಷ್ಠ್ಯಾವರ‍್ಷ ಸಹಸ್ರೈಸ್ತುದಿ ಶಾಂನಿವವೃತೆಜಯಾತ್ || ೧ || ಕೃತಕೃತ್ಯಸ್ಯತಸ್ಯಾಂತಶ್ಚಿಂತೆಯಮುದಪದ್ಯತ | ಪರಾರ್ಧೆಸಂಪದಾಸ್ಮಾಕೀಸೊಪಯೊಗಾಕಥಂ ಭವೆತ್ || ೨ || ಮಹಾಮಹಮ ಹಂಕೃತ್ವಾಜನೆಂದ್ರಸ್ಯಮಹೊದಯಂ | ಪ್ರೀಣಯಾನಿಜಗದ್ವಿಶ್ವಂ ವಿಷ್ವನ್ವಿಶ್ರಾಣಯನ್ ಧನಂ || ೩ || ನಾನಗಾರಾವಸೂನ್ಯಸ್ಮತ್ಪ್ರತಿಗೃಹ್ಣಂತಿನಿಸ್ಪೃಹಾಃ | ಸಾಗಾರಃಕತಮಃ ಪೂಜ್ಯೊಧನಧಾನ್ಯಸಮೃದ್ಧಿಭಿಃ || ೪ || ಯೆಣುವ್ರತದರಾಧೀರಾಧೌರೆಯಾ ಗೃಹಮೆಧಿನಾಂ | ತರ್ಪ್ಪಣೀಯಾಹಿತೆಸ್ಮಾಭಿರೀಪ್ಸಿತೈರ್ವಸ್ತುವಾಹನೈಃ || ೫ || ಇತಿನಿಶ್ಚಿತ್ಯರಾಜೆಂದ್ರಃಸತ್ಕರ್ತ್ತುಮುಚಿತಾನಿಮಾನ್ | ಪರಿಚಿಕ್ಷಿಷುರಾಹ್ವಾಸ್ತತದಾಸರ‍್ವಾ

* * *

ಪಂಚಮೋಧ್ಯಾಯ ಪ್ರಾರಂಭಃ

ಭರತನು ಧೊರೆಗಳೊಡನೇ ಕೂಡ, ಭರತಕ್ಷೇತ್ರವನ್ನು ಜಯಿಸಿ ಅರುವತ್ತು ಸಾವಿರ ವರ್ಷಗಳಿಂದ ದಿಕ್ಕುಗಳ ಜಯದ್ದೆಶೆಯಿಂದಸುಖವನ್ನು ಹೊಂದಿದನು || ೧ || ನಮ್ಮ ಸಂಬಂಧವಾದ ಸಂಪತ್ತು, ಅನ್ಯ ಪ್ರಯೋಜನ ವಿಷಯದಲ್ಲಿ ಉಪಯೋಗದೊಡನೇ ಕೂಡಿದ್ದು ಹ್ಯಾಗೆ ಆಗುತ್ತದೆ, ಇಂತೆಂದು ಕೃತಕೃತ್ಯನಾದ ಭರತನಿಗೆ ಅಂತಃ ಈ ಚಿಂತೆಯು ಹುಟ್ಟಿತು || ೨ || ಜಿನೇಂದ್ರನಿಗೆ, ಮಹಾ ಉದಯವುಳ್ಳ ದೊಡ್ಡ ಪೂಜೋತ್ಸವವನ್ನು ಮಾಡಿ ಯಥೇಚ್ಛವಾಗಿ ಹಣವನ್ನು ಕೊಡುವಂಥಾವನಾಗಿ ಸಮಸ್ತ ಜಗತ್ತನ್ನು ಸಂತೋಷಪಡಿಸುತ್ತೇನೆ || ೩ || ಅಶೆಯಿಲ್ಲದೇ ಇರುವಂಥ ಮನೆಯಿಲ್ಲದ ಯತಿಗಳು, ನಮ್ಮ ದ್ರವ್ಯಗಳನ್ನು ಗ್ರಹಿಸುವದಿಲ್ಲ ಧನಧಾನ್ಯಾದಿ ಸಮೃದ್ಧಿಗಳಿಂದ ಎಂಥಾ ಗ್ರಹಸನು ಪೂಜಿಸುವದಕ್ಕೆ ಯೋಗ್ಯ ನಾದಂಥಾವನು || ೪ || ಯಾರುಗಳು ಅಣುವ್ರತಧರರಾದಂಥಾವರೋ ಧೀರರಾದಂಥಾವರೋ ಗೃಹಸ್ಥರುಗಳೊಳಗೆ ಧುರಂಧರರಾದಂಥಾವರೋ ಅವರುಗಳು ನಮ್ಮ ಗಳಿಂದ ವಸ್ತು ವಾಹನಾದಿ ಸಂಪತ್ತುಗಳಿಂದ ನಿಶ್ಚಯ್ಯವಾಗಿ ತೃಪ್ತಿಪಡಿಸುವುದಕ್ಕೆ ಯೋಗ್ಯರಾ ದಂಥಾವರು || ೫ || ರಾಜಶ್ರೇಷ್ಠನು ಹೀಗೆ ನಿಶ್ಚಯಿಸಿ ಯೋಗ್ಯರಾದಂಥಾ ಇವರುಗಳನ್ನು ಸತ್ಕರಿ ಸುವದಕ್ಕೋಸ್ಕರ ಪರೀಕ್ಷೆ ಮಾಡಲಿಚ್ಚೆಯುಳ್ಳವನಾಗಿ ಅಸಮಯದಲ್ಲಿ ಸಮಸ್ತ ದೊರೆಗಳನ್ನು ಸದಾಚಾರ ಉಳ್ಳಂಥ ಸ್ವಕೀಯರಾದಂಥ ಇ

* * *

ನ್ಮಹೀಭುಜಃ || ೬ || ಸದಾಚಾರೈರ್ನಿಜೈರಿಷ್ಟೈರನುಜೀವಿಭಿರನ್ವಿತಾಃ | ಅದ್ಯಾಸ್ಮರುತ್ಸವೆ ಯೂಯ ಮಾಯಾತೆತಿಪೃಥಕ್‌ಪೃಥಕ್ || ೭ || ಹರಿತೈರಂಕುರೈಃಪುಷ್ಯೆಃ ಫಲೈಶ್ಚಾ ಸೀಣ್ನಮಂಗಣಂ | ಸಮ್ರಾಡಚೀಕರತ್ತೆಷಾಂಪರೀಕ್ಷಾಯೈಸ್ಮವೆಶ್ಮನಿ || ೮ || ತೆಷ್ವವ್ರತಾ ವಿನಾಸಂಗಾತ್ ಪ್ರಾವಿಕ್ಷನ್ನೃಪ ಮಂದಿರಂ | ತಾನೆಕತಃ ಸಮುತ್ಸಾರ್ಯ್ಯಶೆಷಾನಾಹ್ವಾಯ ಯತ್ಪ್ರಭುಃ ತೆತುಸ್ವವ್ರತಶುದ್ಧ್ಯರ್ಥಮಿಹಮಾನಾಮಹಾನ್ವಯಾ; | ನೆಷುಃಪ್ರವೇಶ ನಂತಾವತ್ ಯವಾದಾರ್ದ್ರಾಂಕುರಾಃಪಥಿ || ೯ || ಸಧಾನ್ಯೈಹರಿತೈಃಕೀರ್ಣ್ನಮನಾಕ್ರ

* * *

ಷ್ಟರಾದಂಥ ಅನುಜೀವಿಗಳೊಡನೆ ಕೂಡಿದಂಥಾವರಾಗಿ ಈಗ ನಮ್ಮ ಉತ್ಸವದಲ್ಲಿ ಬನ್ನಿ. ಇಂತೆಂದು ಪ್ರತ್ಯೇಕ ಪ್ರತ್ಯೇಕವಾಗಿ ಕರೆಸಿದನು || ೬ || ಚಕ್ರವರ್ತಿಯಾದ ಭರತರಾಜನು, ತಂನ ಮನೆಯಲ್ಲಿ ಅಂಗಣವನ್ನು ಗರಿಕೆಗಳಿಂದಲೂ, ಮೊಳಕೆಗ ಳಿಂದಲೂ, ಹುವುಗಳಿಂದಲೂ, ಹಣ್ಣುಗಳಿಂದಲೂ ಹರಡಲ್ಪಟ್ಟಂಥಾದ್ದನ್ನಾಗಿ ಅವರುಗಳ ಪರೀಕ್ಷೆಗೋಸ್ಕರ ಮಾಡಿದನು ಅವರುಗಳಲ್ಲಿ ವ್ರತ ಹೀನರಾದಂ ಥಾವರುಗಳು, ಆಳೋಚನೆ ಇಲ್ಲದೆ ಧೊರೆಯ ಮನೆಯನ್ನು ಪ್ರವೇಶಮಾಡಿದರು, ಅವರುಗಳನ್ನು ವಂದುಕಡೆ ಹೊರಡಿಸಿ ಪ್ರಭುವಾದ ಭರತರಾಜನು, ಉಳಿದವರನ್ನು ಕರೇಸಿದನು ||೭ || ತಂಮ ವ್ರತಶುದ್ಧಿ ನಿಮಿತ್ತವಾಗಿ ಅಪೇಕ್ಷೆಯುಳ್ಳಂಥ ದೊಡ್ಡವಂಶವುಳ್ಳಂಥ ಅವರುಗಳು, ಎಷ್ಟು ಪರ್ಯಂತರ ಹಸೀದಾದ ಅಂಕುರಗಳು, ಮಾರ್ಗದಲ್ಲಿ ಇವೆಯೋ ಅಷ್ಟು ಪರ್ಯಂತರ ಪ್ರವೇಶವನ್ನು ಅಪೇಕ್ಷೆಸಲಿಲ್ಲ || ೮ || ಪಾಪಭೀತರಾದಂಥ ಕೆಲವರು, ಕೃಪೆವುಳ್ಳಭಾವದಿಂದ ಧಾನ್ಯಗಳೊಡನೆ ಕೂಡಿದ ಗರಿಕೆಗಳಿಂದ ವ್ಯಾಪಿಸಲ್ಪಟ ರಾಜಾಂಗಣವನ್ನು ಆಕ್ರಮಿಸಿದೆ ಹಿಂತುರುಗಿ ಹೊರಟರು || ೯ || ಬಹಳವಾಗಿ ನಿರ್ಬಂಧವುಳ್ಳ ಅವರುಗಳು ಪ್ರಾಸುಕವಾದ ಮತ್ತೊಂದು, ಮಾರ್ಗದಿಂದ ರಾಜಾಂಗಣವನ್ನು ವ್ಯಾಪಿಸಿ ಚಕ್ರವರ್ತ್ತಿಯ ಸಮೀಪವನ್ನು ಪಡದರು || ೧೦ || ಪೂರ್ವದಲ್ಲಿ ಯಾವಕಾರಣದಿಂದ ಬಂದಂಥಾವರಲ್ಲ ಬದಲಾಗಿ ಯಾವ ಕಾರಣದಿಂದ ಬಂದಂಥಾವರುಗಳೂ, ಹೇಳಿ ಇಂತೆಂದು ಪ್ರಶ್ನೆಮಾಡಲ್ಪಟ್ಟ ಅವರುಗಳು ಚಕ್ರವರ್ತಿಯನ್ನು ಕುರಿತು ಪ್ರತಿಯಾಗಿ ಹೇಳಿದರು || ೧೧ || ಈಗ ಜಂತುಗಳಿಗೆ ದ್ರೋಹಮಾಡದೇ ಯಿರುವಂಥ ಆ ದೋಷವನ್ನು ತಿಳಿದಂಥಾ ನಮಗಳಿಗೆ ಪರ್ವಕಾಲದಲ್ಲಿ ಚಿಗುರಯಲೆ ಪುಷ್ಟ ಮೊದಲಾದವುಗಳೊಡನೆ ವ್ಯ

* * *

ಮ್ಯನೃಪಾಂಗಣಂ | ನಿಶ್ಚಕ್ರಮುಃಕೃಪಾಲುತ್ವಾತ್ತೆಚಿತ್ಸಾವದ್ಯಭೀರವಃ || ೧೦ || ಕೃತಾನುಬಂಧನಾ ಭೂಯಶ್ಚಕ್ರಿಣಃಕಿಲತೆಂತಿಕಂ | ಪ್ರಾಸುಕೇನಪಥಾನ್ಯೆನಭೆಜಿಃ ಕ್ರಾಂತ್ವಾನೃಪಾಂಗಣಂ || ೧೧ || ಪ್ರಾಕ್ಕೆನಹೆತುನಾಯೂಯಂನಾಯಾತಾಃಪುನರಾಗತಾಃ | ಕನಬ್ರೂತೆ ತಿಪೃಷ್ಟಾ ಸ್ತೆಪ್ರತ್ಯಭಾಷಂತಚಕ್ರಿಣಂ || ೧೨ || ಪ್ರವಾಲಪತ್ರ ಷುಷ್ಟಾದ್ಯೈಃ ಪರ್ವಣಿವ್ಯಪರೊಪಣಂ | ನಕಲ್ಪತೆದ್ಯತಜ್ಞಾನಾಂಜಂತೂನಾಂ ನೊನಭಿದ್ರುಹಾಂ || ೧೩ || ಸಂತ್ಯೆವಾನಂತಶೊಜೀವಾಹರಿತೆಷ್ವಂ ಕುರಾದಿಷು | ನಿಗೊತಾಇತಿ ಸಾರ್ವಜ್ಞಂದೆವಾಸ್ಮಾಭಿಃಶ್ರುತಂವಚಃ || ೧೪ || ತಸ್ಮಾನ್ನಾಸ್ಮಾಭಿರಾಕ್ರಾಂತ ಮಧ್ಯತ್ವೆತ್ವದ್ಗೈಹಾಂಗಣಂ | ಕೃತೊಪಹಾರಮಾರ್ದ್ರಾದ್ಯೈಃಫಲಪುಷ್ಟಾಂಕುರಾದಿಭಿಃ || ೧೫ || ಇತಿತದ್ವಚನಾತ್ಸರ‍್ವಾಸ್‌ಸೊ ಭಿನಂದ್ಯದೃಢವ್ರರ್ತಾ | ಪೂಜಯಾಮಾಸಲಕ್ಷ್ಮೀ ವಾನ್ ದಾನಮಾನಾದಿಸತ್ಕ್ರಿಯೈಃ || ೧೬ || ತೆಷಾಂಕೃತಾನಿಚಿಹ್ಮಾನಿಸೂತ್ರೈಃಪದ್ಮಾಹ್ವಯಾನ್ನಿಧಃ | ಉಪಾ ತ್ರೈಬ್ರಃಹ್ಮಸೂತ್ರಾಹ್ವೈರೆಕಾದ್ಯೆಕಾದ ಶಾಂತಕೈಃ || ೧೭ || ಗುಣ

* * *

ಪರೋಪಣೆಯು ಯೋಗ್ಯವಾಗುವುದಿಲ್ಲ || ೧೨ || ಗರಿಕೆಗಳಲ್ಲೂ ಮೊಳಕೆ ಮೊದಲಾದವುಗಳಲ್ಲೂ ಅಪರಿಮಿತವಾಗಿ ನಿಗೋತ ಜೀವಗಳು ಇರುತ್ತಲೇ ಇರುತ್ತವೆ. ಇಂತೆಂದು ಸರ್ವಜ್ಞ ಸಂಬಂಧಿಯಾದಂಥ ವಾಕ್ಕು ನಮ್ಮಿಂದ ಕೇಳಲ್ಪಟ್ಟಿತು || ೧೩ || ಹಸೀದು ಮೊದಲಾದಂಥ ಫಲಪುಷ್ಟಾಂಕುರ ಮೊದಲಾದ ವುಗಳಿಂದ ಮಾಡಲ್ಪಟ್ಟ ಉಪಹಾರವುಳ್ಳ ನಿನ್ನ ಮನೆಯ ಅಂಗಣವು ಈ ಸಮಯದಲ್ಲಿ ಆ ಕಾರಣದ್ದೆಶೆಯಿಂದ ನಮ್ಮಗಳಿಂದ ಆಕ್ರಮಿಸಲ್ಪಡಲಿಲ್ಲ || ೧೪ || ಸಂಪತ್ತು ಉಳ್ಳಂಥಾ ಭರತೇಶ್ವರನು ಈ ಪ್ರಕಾರವಾದ ಮಾತಿನ ದೆಶೆಯಿಂದ ದೃಢವ್ರತ ಉಳ್ಳಂಥ ಸಮಸ್ತರನ್ನು ಕುರಿತು ಸಂತೋಷಮಾಡಿ ದಾನಾಮಾನಾದಿ ಸತ್ಕಾರಗಳಿಂದ ಪೂಜೆ ಮಾಡಿದನು || ೧೫ || ಅವರುಗಳಿಗೆ ಪದ್ಮ ಎಂಬ ಹೆಸರುಳ್ಳ ನಿಧೀದೆಶೆಯಿಂದ ತೆಗೆದುಕ್ಕೊಂಡು ಬರಲ್ಪಟ್ಟಂಥ ಒಂದೇಮೊದಲಾಗಿ ಹಂನೊಂದೇ ಕೊನೆಯಾದಂಥ ಬ್ರಹ್ಮಸೂತ್ರವೆಂಬ ಹೆಸರುಳ್ಳಂಥ ಸೂತ್ರಗಳಿಂದ ಚಿಹ್ನೆಗಳು ಮಾಡಲ್ಪಟ್ಟವು || ೧೬ || ಗುಣಸ್ಥಾನದಲ್ಲಿ ಮಾಡಲ್ಪಟ್ಟ ಭೇದದ್ದೆಶೆಯಿಂದ ರಚಿಸಲ್ಪಟ್ಟ ಯಜ್ಞೋಪವೀತ ಉಳ್ಳಂಥ ಇವರುಗಳಿಗೆ ಸತ್ಕಾರವು ಮಾಡಲ್ಪಟ್ಟಿತು ವ್ರತಹೀನರಾದಂಥಾವರುಗಳು ಬಹಿಷ್ಕರಿಸಲ್ಪಟ್ಟರು || ೧೭ ||

* * *

ಭೂಮಿಕೃತಾದ್ಭೆದಾತ್ ಕ್ಲುಪ್ತಯಜ್ಞೊಪವೀತಿನಾಂ | ಸತ್ಕಾರಃಕ್ರಿಯತೆಸ್ಮೈಷಾಮವ್ರತಾಶ್ಚ ಬಹಿಷ್ಕೃತಾಃ || ೧೮ || ಅಥತೆಕೃತಸನ್ಮಾನಾಶ್ಚಕ್ರಿಣಾವ್ರತಧಾರಣೆ | ಭಜಂತಿಸ್ಮಪರಂ ದಾರ್ಢ್ಯಂಲೊಕಶ್ಚೈನಾನಮಾ ಜಿಯತ್ || ೧೯ || ಇಜ್ಯಾಂವಾರ್ತ್ತಾಂಚದತ್ತೀಂ ಚಸ್ವಾಧ್ಯಾಯಂಸಂಯಮಂತಪಃ || ೨೦ || ಶ್ರು ತೊಪಾಸಕಸೂತ್ರತ್ವತ್ ಸತೆಭ್ಯಃಸಮುದಾದಿಶತ್ || ೨೧ || ಕುಲಧರ್ಮ್ಮೊಯಮಿತ್ಯೆಷಾ ಮರ್ಹತ್ಪೂಜಾ ದಿವರ್ಣನಂ | ತದಾಭರತರಾಜರ್ಷಿರನ್ವವೊಚದನುಕ್ರಮಾತ್ || ೨೨ || ಪ್ರೊಕ್ತಾಪೂಜಾರ್ಹತಾಮಿ ಜ್ಯಾಸಾಚತುರ್ದ್ದಾಸದಾರ್ಚನಂ | ಚತುರ್ಮುಖಮಹಃಕಲ್ಪದ್ರುಮಶ್ಚಾಷ್ಟಾಹ್ನಿಕೊಪಿಚ || ೨೩ || ತ ತ್ರನಿತ್ಯಮಹೊನಾಮಶಶ್ವಜ್ಜಿನಗೃಹಂಪ್ರತಿ | ಸ್ವಗೃಹಾನ್ನಿಯಮಾನಾರ್ಚ್ಚಾ ಗಂದಪುಷ್ಟಾಕ್ಷತಾದಿಕಾ || ೨೪ || ಚೈತ್ಯಚೈತ್ಯಾಲಯಾದೀನಾಂಭಕ್ತ್ಯಾನಿರ್ಮಾಪಣಂ ಚಯತ್ | ಶಾಸನೀಕೃತ್ಯದಾನಂಚ

* * *

ಅನಂತರದಲ್ಲಿ ಚಕ್ರವರ್ತಿಯಿಂದ ವ್ರತಧಾರಣೇ ವಿಷಯದಲ್ಲಿ ಮಾಡಲ್ಪಟ್ಟ ಸನ್ಮಾನ ಉಳ್ಳಂಥಾವರಾಗಿ ಅತ್ಯಂತವಾದ ದೃಢತ್ವವನ್ನು ಪಡದರು. ಜಗತ್ತು ಇವರುಗಳನ್ನು ಪೂಜಿಸಿತು || ೧೮ || ಅ ಭರತೇಶ್ವರನು ಕೇಳಲ್ಪಟ್ಟ ಉಪಾಸಕ ಸೂತ್ರ ಭಾವದ್ದೆಶೆಯಿಂದ ಆ ಬ್ರಾಹ್ಮಣರಿಗೋಸ್ಕರ ಇಜ್ಜೆಯನ್ನು ವಾರ್ತ್ತೆಯನ್ನು, ದತ್ತಿಯನ್ನು, ಸ್ವಾಧ್ಯಾಯವನ್ನು ಸಂಯಮವನ್ನು, ತಪಸ್ಸನ್ನು ಉಪದೇಶ ಮಾಡಿದನು || ೨೧ || ಆ ಸಮಯದಲ್ಲಿ ಭರತರಾಜರ್ಷಿಯ, ಇದು ಇವರಿಗೆ ಕುಲಧರ್ಮವು ಇಂತೆಂದು ಅರ್ಹತ್ಪೂಜೆಯೇ ಮೊದಲಾದವುಗಳ ವರ್ಣನೆಯನ್ನು, ಅನುಕ್ರಮವಾಗಿ ಹೇಳಿದನು || ೨೨ || ಅರ್ಹತ್ಪರಮೇಷ್ಠಿಗಳ ಪೂಜೆಯು ಇಜ್ಜಾ ಇಂತೆಂದ್ನ ಹೇಳಲ್ಪಟ್ಟಿತು. ಆ ಇಜ್ಜೆಯು ನಾಲ್ಕು ಪ್ರಕಾರವಾದಂಥಾದ್ದು. ಸದಾರ್ಚನೆಯು, ಚತುರ್ಮುಖಮಹವು, ಕಲ್ಪದೃಮವು, ಅಷ್ಟಾಹೀಕವೂ ಕೂಡ ಆಗುತ್ತದೆ || ೨೩ || ಆ ನಾಲ್ಕರಗಳಲ್ಲಿ ನಿತ್ಯ ಮಹವಾದರೋ ಪೂಜಾವಿಷಯಕವಾದ ಗಂದ ಪುಷ್ಪಾಕ್ಷತೆ ಮೊದಲಾದದ್ದು. ಜಿನಗೃಹವನ್ನು ಕುರಿತು ಭಾರಿಭಾರಿಗೂ ತನ್ನ ಮನೇದೆಶೆಯಿಂದ ತೆಗೆದುಕ್ಕೊಂಡು ಹೋಗಲ್ಪಡತಕ್ಕಂಥಾದ್ದು || ೨೪ || ಭಕ್ತಿಯಿಂದ ಚೈತ್ಯಚೈತ್ಯಾಲಯ ಮೊದಲಾದಂಥಾವುಗಳ, ನಿರ್ಮ್ಮಾಪಣೆಯು ಯಾವದೋ ಅದು ಶಾಂತಿಸನವನ್ನು ಮಾಡಿ ಗ್ರಾಮ ಮೊದಲಾದಂಥಾವುಗಳ ದಾನವು ಯಾವದೋ

* * *

ಗ್ರಾಮಾದೀನಾಂಸದಾರ್ಚನಂ || ೨೫ || ಯಾಚಪೂಜಾನರೇಂದ್ರಾಣಾಂ ನಿತ್ಯದಾಣಾನುಷಂಗಿಣೀ | ಸಚಿನಿತ್ಯಮಹೊಜ್ಞೆಯೋಯಥಾಶಕ್ತ್ಯುಪಕಲ್ಪಿತಃ || ೨೬ || ಮಹಾಮಕುಟಬದ್ಧೈಸ್ತುಕ್ರಿಯಮಾಣೋ ಮಹಾಮಹಃ | ಚತುರ್ಮುಖಃಸವಿಜ್ಞೆಯಃಸರ್ವ್ವತೊಭದ್ರಿತ್ಯಪಿ || ೨೭ || ದತ್ವಾಕಿಮಿಛ್ಛಕಂದಾನಂ ಸಮ್ರಾಡ್ಬಿರ್ಯ್ಯತ್ಪ್ರವರ್ತ್ತತೆ | ಕಲ್ಪದೃಮಮಹಸ್ಸೊಯಂಜಗದಾಶಾಪ್ರಪೂರಣಃ || ೨೮ || ಅಷ್ಟಾಹ್ನಿಕೊ ಮಹಃಸಾರ‍್ವಜನಕೊರೂಢೆವಸಃ | ಮಹಾನೈಂದ್ರಧ್ವಜೊಯಸ್ತುಸುರರಾಜೈಃಕೃತೊ ಮಹಃ || ೨೯ || ಬಲಿಸ್ನಪನ ಮಿತ್ಯನೃತ್ರಿಸಂಧ್ಯಾಸೆವಯಾಸಮೈ ಉಕ್ತಷ್ವೆವವಿಕಲ್ಪೆಷು ಜ್ಞೆಯಮನ್ಯಚ್ಚತಾದೃಶಂ || ೩೦ || ಎವಂವಿಧವಿಧಾನೆನಯಾಮಾಹಜ್ಯಾಜಿನೆಶಿನಾಂ | ವಿಧೀಜ್ಞಾಸ್ತಾಮುಶಂತೀಜ್ಯಾಂ ವೃತ್ರಿಂಪ್ರಾಥಮಜಲ್ಪಿಕೀಂ || ೩೧ ||

* * *

ಅದೂ ಕೂಡ ನಿತ್ಯಮಹವು || ೨೫ || ಶಕ್ತಿಯನ್ನು ಅತಿಕ್ರಮಿಸದೇ ಮಾಡಲ್ಪಟ್ಟಂಥ ಜಿನೇಶ್ವರರುಗಳ ನಿತ್ಯದಾನ ಸಂಬಂಧ ಉಳ್ಳಂಥಾ ಪೂಜೆಯು ಯಾವದೋ ಅದೂ ಕೂಡ ನಿತ್ಯಮಹವಾಗಿ ತಿಳಿಯವದಕ್ಕೆಯೋಗ್ಯವಾದಂಥಾದ್ದು || ೨೬ || ಮಹಾ ಮಕುಟ ಬದ್ಧರುಗಳಿಂದ ಮಾಡಲ್ಪಡುವಂಥಾದ್ದು ಮಹಾಮಹವು ಆ ಮಹಾಮಹವು ಚತುರ್ಮುಖವು ಸರ್ವತೋಭದ್ರವು ಇಂತೆಂದೂ ಕೂಡ ತಿಳಿಯುವದಕ್ಕೆ ಯೋಗ್ಯವಾ ದಂಥಾದ್ದು || ೨೭ || ಯಾವದು ಚಕ್ರವರ್ತ್ತಿಗಳಿಂದ ಅವರು ಅಪೇಕ್ಷಿಸುವಂಥಾ ದಾನವನ್ನು ಕೊಟ್ಟು ಪ್ರವರ್ತ್ತಿಸಲ್ಪಡುತ್ತಿಧೆಯೊ ಆ ಈ ಜಗತ್ತಿನ ಆಶೆಯನ್ನು ಪೂರ್ಣಮಾಡತಕ್ಕಂಥಾದ್ದು ಕಲ್ಪದ್ರುಮಮಹವು || ೨೮ || ಆಷ್ಟಾಹ್ನಿಕ ಮಹವು ಸಾರ್ವಜನಿಕವಾಗಿಯು ರೂಢವಾಗಿಯೇ ಇದೆ. ದೇವೇಂದ್ರರುಗಳಿಂದ ಮಾಡಲ್ಪಟ್ಟ ಪೂಜೆಯು ಯಾವದೋ ಅದು ದೊಡ್ಡದಾದ ಐಂದ್ರಧ್ವಜವು || ೨೯ || ಬಲಿಸ್ನಪನವು ಇಂತೆಂದು ತ್ರಿಸಂಧ್ಯಾ ಸೇವೆಯೊಡನೆ ಕೂಡ ಮತ್ತೊಂದು ಹೇಳಲ್ಪಟ್ಟ ವಿಕಲ್ಪಗಳಲ್ಲಿಯೇ ಯೇ ತಿಳಿಯುವದಕ್ಕೆ ಯೋಗ್ಯವಾದದ್ದು. ಇತರವಾದದ್ದೂ ಕೂಡ ಅದೇ ಪ್ರಕಾರವಾದಂಥಾದ್ದು || ೩೦ || ಈ ಪ್ರಕಾರವಾದ ವಿಧಾನದಿಂದ ಜೀನೇಶ್ವರರಿಗೆ ಮಹಾ ಪೂಜೆಯು ಯಾವದೋ ಅದನ್ನು ವಿಧಿಯನ್ನು ತಿಳಿದಂಥಾವರುಗಳು ಪ್ರಥಮಕಲ್ಪವಾದ ಇಜ್ಜಾವೃತ್ತಿಯನ್ನಾಗಿ ತಿಳಿಯುತ್ತಾರೆ || ೩೧ || (ವಾರ್ತಾಲಕ್ಷಣ)ವಿಶುದ್ಧವೃತ್ತಿಯಿಂದ ಕೃಷ್ಯಾದಿಗ ಅನುಷ್ಠಾನವು

* * *

ವಾರ್ತಾವಿಶುದ್ಧವೃತ್ಯಾಸ್ಯಾತ್ಕೃಷ್ಯಾಧೀನಾಮನುಷ್ಠತಿಃ | ಚತುರ‍್ಧಾವರ‍್ಣಿತಾದತ್ತಿರ‍್ದಯಾಪಾತ್ರ ಸಮನ್ವಯೈಃ || ೩೨ || ಸಾನುಕಂಪಮನುಗ್ರಾಹ್ಯಪ್ರಾಣಿವೃಂದೆಭಯಪ್ರದಾ | ತ್ರಿಶುಧ್ಯನು ಗತಾಸೆಯಂದಯಾದತ್ತಿರ್ಮ ತಾಬುಧೈಃ || ೩೩ || ಮಹಾತಪೊಧನಾಯಾರ್ಚ್ಚಾಪ್ರತಿ ಗ್ರಹಪುರಸ್ಸರಂ | ಪ್ರಧಾನಮಶನಾದೀನಾಂಪಾತ್ರ ದಾನಂತದಿಷ್ಯತೆ || ೩೪ || ಸಾಮಾನಾಯಾತ್ಮನಾನ್ಯಸ್ಮೈಕರಿಯಾಮಂತ್ರವ್ರತಾದಿಭಿಃ | ಸಿಸ್ತಾರಕೊತ್ತಮಾ ಯೆಹಭೂಹ ಮಾದ್ಯತಿಸರ್ಜ್ಜನಂ || ೩೫ || ಸಮಾನದತ್ತಿರೆಷಾಸ್ಯಾತ್ಪಾತ್ರೆಮಧ್ಯಮತಾಮಿತೆ | ಸಮಾನ ಪ್ರತಿಪತ್ಯೈವ ಪ್ರವೃತ್ತಾ ಶ್ರದ್ಧಯಾಸ್ವಿತಾ || ೩೬ || ಆತ್ಮಾನ್ವಯಪ್ರತಿಷ್ಠಾರ್ತ್ಥಂ ಸೊನವೆಯಿದೆಶೆಷತಃ | ಸಮಂಸಮಯವಿತ್ತಾಭ್ಯಾಂಸ್ವವರ್ಗ್ಗಸ್ಯಾತಿಸರ್ಜ್ಜನಂ || ೩೭ ||

* * *

ಯಾವದೋ ಅದು ವಾರ್ತ್ತೆಯು ಆಗುತ್ತೆ. (ದತ್ತಿಲಕ್ಷಣ) ದತ್ತಿಯು, ದಯಾ, ಪಾತ್ರ, ಸಮ, ಅನ್ವಯಗಳಿಂದ ನಾಲ್ಕು ಪ್ರಕಾರವಾಗಿ ವರ್ಣಿಸಲ್ಟಟ್ಟಿತು || ೩೨ || (ದಯಾದತ್ತಿ) ದಯೆಯೊಡನೆ ಕೂಡಿಕ್ಕೊಂಡಿರೋಣ ಹ್ಯಾಗೋ ಹಾಗೆ ಅನುಗ್ರಹಿಸುವದಕ್ಕೆ ಯೋಗ್ಯವಾದಂಥ ಪ್ರಾಣಸಮೂಹದಲ್ಲಿ ಅಭಯವನ್ನು ಕೊಡುವಂಥ ಮನೋವಾಕ್ಕಾಯ ಶುದ್ಧಿಯನ್ನು ಅನುಸರಿಸಿದಂಥ ಆ ಇದು ದಯಾದತ್ತಿ ಇಂತೆಂದು ಆ ವಿದ್ವಾಮಸರುಗಳಿಂದ ವಡಂಬಡಲ್ಪಟ್ಟಿತು. (ಪಾತ್ರದತ್ತಿ) ಮಹಾತಪಸ್ಸೇದ್ರವ್ಯವಾಗಿಉಳ್ಳಂಥಾವನಿಗೋಸ್ಕರ ಪೂಜೆ ಪ್ರತಿಗ್ರಹವೇ ಮೊದಲಾಗಿ ಆಶನಾದಿಗಳನ್ನು ಕೊಡ ತಕ್ಕದ್ದು ಯಾವದೋ ಅದು ಪಾತ್ರದಾನವೆಂದು ಅಪೇಕ್ಷಿಸಲ್ಪಡುತ್ತೆ || ೩೪ || (ಸಮಾನದತ್ತಿ) ಕ್ರಿಯಾಮಂತ್ರ ವ್ರತಾದಿಗಳಿಂದ ತಂನೊಡನೆ ಸಮಾನನಾದಂಥ ಬ್ರಾಹ್ಮಣಶ್ರೇಷ್ಠನಾದ ಮಂಥಾವನಿಗೋಸ್ಕರಭೂಮಿ ಸುರ್ವಣ ಮೊದಲಾದವುಗಳನ್ನು ಕೊಡತಕ್ಕದ್ದು ಯಾವದೋ || ೩೫ || ಮಧ್ಯಮವಾದಂಥಾ ಪಾತ್ರವಿಷಯದಲ್ಲಿ ಸಮಾನಪ್ರತಿಪತ್ತಿಯಿಂದ ಪ್ರವರ್ತಿಸಲ್ಪಟ್ಟಂಥ ಶ್ರದ್ಧೆ ಯೊಡನೆ ಕೂಡಿದಂಥ ಆ ಇದು ಸಮಾನದತ್ತಿಯಾಗುತ್ತೆ || ೩೬ || (ಅನ್ವಯದತ್ತಿ) ತನ್ನ ವಂಶ ಸ್ಥಾಪನೆ ಗೋಸ್ಕರಸ್ವವರ್ಗದವನ ಮಗನಿಗೋಸ್ಕರ, ಸಮಯವೆಂದರೆ ತಂನವಂಶಾಚಾರಸ್ವತ್ತು ಇವುಗಳೊಡನೇ ಕೂಡ, ಕೊಡೋಣ ಯಾವದೋ ಅದು ಕುಲದತ್ತಿಯು || ೩೭ || ಅನಂತರದಲ್ಲಿ ಗೋತ್ರಜಾತ್ಯಾದಿಗಳ ಮತ್ತೊಂದು

* * *

ಜೈನೊಪಾಸಕದೀಕ್ಷಾಸ್ತಾತ್ಯಮಯಃಸಮಯೊಚಿತಂ | ದಧತೊಗೊತ್ರಜಾತ್ಯಾದಿ ನಾಮಾಂತರಮತಃಪರಂ || ೩೮ || ಸೈಷಾಸಕಲದತ್ತಿಸ್ಯಾತ್‌ಸ್ವಾಧ್ಯಾಯಃ ಶ್ರುತಭಾವನಾ | ತಪೊನಶನವೃತ್ಯಾದಿಸಂಯಮೊವ್ರತ ಧಾರಣಂ || ೩೯ || ವಿಶುದ್ಧಾವೃತ್ತಿರೆಷಾಂಹಿ ಷಟ್ತ್ರೈವೆಷ್ಟಾದ್ವಿಜನ್ಮನಾಂ | ಯೊತಿಕ್ರಾಮೆದಿಮಾಂ ಸೊಜ್ಞಾನಾಮ್ನ್ಯೈವಸಗುಣಾದ್ವಜಃ || ೪೦ || (ದಶಾಧಿಕಾರಃ) ದಶಾದಿಕಾರಾಸ್ತತ್ಪ್ರೊಕ್ತಾಸ್ಸೊತ್ರೆಣೌ ಪಾಸಕೆನಹಿ | ತಾನ್ಯಥಾ ಕ್ರಮಮುದ್ದೆಶ ಮಾತ್ರೆಣಾನಿಪ್ರಚಕ್ಷ್ಮಹೆ || ೪೧ || ತತ್ರಾತಿಬಾಲವಿದ್ಯಾದ್ಯಾಕ ಲಾವದಿ ರನಂತರಃ | ವರ್ಣ್ನೊತ್ತಮತ್ವಪಾತ್ರತ್ವೆತಥಾಸೃಷ್ಟ್ಯಧಿಕಾರತಾ || ೪೨ || ವ್ಯವಹಾರಶಿತಾನ್ಯಾಸ್ಯದವ ಧ್ಯತ್ವಮದಂಡ್ಯತಾ | ಮಾನಾರ್ಹತಾಪ್ರಜಾಸಂಬಂಧಾಂತರಂ ಚೆತ್ಯನುಕ್ರಮಾತ್ || ೪೩ || ದಶಾಧಿಕಾರ ವಸ್ತೂನಿಸ್ಯುರುಪಾಸಕಸಂಗ್ರಹ | ತಾನೀಮಾನಿಯ

* * *

ಹೆಸರನ್ನು ಧರಿಸಿಕ್ಕೊಂಡಿರುವಂಥಾವನಿಗೆ, ಜೈನೋಪಾಸಕ ದೀಕ್ಷೆಯು ಸಮಯವೆಂತಾ ಅನ್ನಿಶಿಕ್ಕೊಳ್ಳುತ್ತೆ || ೩೮ || ಆ ಈ ಇದು, ಸಕಲದತ್ತಿ ಎಂತಾ ಅನ್ನಿಶಿಕ್ಕೊಳ್ಳುತ್ತೆ. ಶಾಸ್ತ್ರಭಾವನೆಯು, ಸ್ವಾಧ್ಯಾಯವೆಂತಾ ಅನ್ನಿಶಿಕ್ಕೊಳ್ಳುತ್ತೆ. ಅನಶನ ವೃತ್ತಿಯೇ ಮೊದಲಾದಂಥಾದ್ದು. ತಪಸ್ಸೆಂತ ಅನ್ನಿಶೋಕ್ಕೊಳ್ಳುತ್ತೆ. ವ್ರತಧಾರಣೆಯು ಸಂಯಮವೆಂತಾ ಅನ್ನಿಶಿಕ್ಕೊಳ್ಳುತ್ತೆ || ೩೯ || ಬ್ರಾಹ್ಮಣರುಗಳಿಗೆ, ಪರಿಶುದ್ಧವಾದಂಥಾ ವೃತ್ತಿಯು ಆರು(೬) ಸಂಮತವಾದಂಥಾದ್ದು, ಯಾವೋನು ಅತಿಕ್ರಮಿಸುತ್ತಾನೊ ಅವನು ಹೆಸರಿನ ಮಾತ್ರದಿಂದಲೇ ಬ್ರಾಹ್ಮಣು ಗುಣದ್ದೆಶೆಯಿಂದ ಬ್ರಾಹ್ಮಣನಲ್ಲ || ೪೦ || (ದಶಾಧಿಕಾರಃ) ಆ ದ್ವಾದಶಾಂಗ ವೇದದಲ್ಲಿ, ಔಪಾಸಕ ಸೂತ್ರದಿಂದ ಹತ್ತು ಅಧಿಕಾರವು ಹೇಳಲ್ಪಟ್ಟವು. ಅವುಗಳನ್ನು ಯಥಾಕ್ರಮವಾಗಿ ಉದ್ದೇಶಮಾತ್ರದಿಂದ ಹೇಳುತ್ತೆವೆ || ೪೧ || ಅವುಗಳಲ್ಲಿ ಅತಿಬಾಲವಿದ್ಯಾ ಎಂಬುವದು ಮೊದಲನೇದು, ಅನಂತರ ಕುಲಾವಧಿ ಎರಡನೇದು ವರ್ಣೋತ್ತಮತ್ವ ಮೂರನೇದು, ಪಾತ್ರತ್ವ ನಾಲ್ಕನೇದು, ಸೃಷ್ಟ್ಯಧಿಕಾರತ್ವ ಐದನೇದು || ೪೨ || ವ್ಯವಹಾರೇ ಶಿತ್ವ ಆರನೇದು, ಅವಧ್ಯತ್ವ ಏಳನೇದು, ಆದಂಡ್ಯತ್ವ ಎಂಟನೇದು, ಮಾನಾರ್ಹ ಒಂಭತ್ತನೇದು, ಪ್ರಜಾಸಂಬಂಧಾಂತರ ಹತ್ತನೇದು || ೪೩ || ಉಪಾಸಕಸಂಗ್ರಹದಲ್ಲಿ ದಶಾಧಿಕಾರವಸ್ತುಗಳು ಆಗುತ್ತವೆ. ಆ ಇವುಗಳನ್ನು ಯಥೋ

* * *

ಥೊದ್ದೆಶಂಸಂಕ್ಷೆಣವಿವೃಣ್ಮಹ || ೪೪ || ಬಾಲ್ಯಾಪ್ರಭೃತಿಯಾವಿದ್ಯಾಶಿಕ್ಷೊದ್ಯೊಗಾದ್ವಿ ಜನ್ಮನಃ | ಪ್ರೊಕ್ತಾತಿ ಬಾಲವಿದ್ಯೆತಿಸಾಕ್ರಿಯಾದ್ವಿಜಸಂಮತಾ || ೪೫ || ತಸ್ಯಾಮಸತ್ಯಾಂಮುಢಾತ್ಮಾಹಯಾದೆಯಾನಭಿಜ್ಞಕಃ | ಮಿಥ್ಯಾಶ್ರುತಿಂಪ್ರಪದ್ಯೆತ ದ್ವಿಜನ್ಮಾ ನ್ಯೈಪ್ರತಾರಿತಃ || ೪೬ || ಬಾಲ್ಯೆವತತೊಭ್ಯಸ್ಯೆದ್ವಿಜನ್ಮೌಪಾಸಕೀಂ ಶ್ರುತಿಂ | ಸತಯಾಪಾಪ್ತಸಂಸ್ಕಾರಸ್ವಪರೊತ್ತಾರಕೊಭವೆತ್ || ೪೭ || ಕುಲಾವಧಿಃಕುಲಾಚಾರರಕ್ಷಣಂ ಸ್ಯಾದ್ವಿಜನ್ಮನಃ | ತಸ್ಮಿನ್ನಸತ್ಯಸೌನಷ್ಟಕ್ರಿಯೊನ್ಯಕುಲತಾಂಭಜೆತ್ || ೪೮ || ವರ್ಣ್ನೋತ್ತ ಮತ್ವಂವ ರ್ಣ್ನೆಷುಸರ್ವ್ವೆಷ್ಯಾಧಿಕ್ಯಮಸ್ಯವೈ | ತೆನಾಯಂಶ್ಲಾಘ್ಯೆತಾಮೆತಿಸ್ವಪ ರೊದ್ಧರಣಕ್ಷಮಃ || ೪೯ || ವರ್ಣ್ನೊ ತ್ತಮತ್ವಂಯದ್ಯಸ್ಯನಸ್ಯಾನೆಸ್ಯಾತ್ಪ್ರಕೃಷ್ಟತಾ | ಅಪ್ರಕೃಷ್ಟಶ್ಚನಾತ್ಮಾನಂಶೊ

* * *

ದ್ದೇಶವಾಗಿ ಸಂಕ್ಷೇಪದಿಂದ ವಿವರಿಸುತ್ತೇವೆ || ೪೪ || ಬಾಲ್ಯಮೊದಲ್ಗೊಂಡು ವಿದ್ಯಾಶಿಕ್ಷೋದ್ಯೋಗ ಯಾವದೋ ಅದು ಬ್ರಾಹ್ಮಣನಿಗೆ ಅತಿಬಾಲವಿದ್ಯೆ ಇಂತೆಂದು ಸಂಮತವಾದಂಥಾದ್ದು || ೪೫ || ಅತಿಬಾಲವಿದ್ಯವು ಇಲ್ಲದೇ ಹೋದರೆ ಮೂಢಾ ತ್ಮನಾಗಿಯು ಜ್ಞಾನಹೀನನಾಗಿಯು ಮಿಥ್ಯಾಬ್ರಾಹ್ಮಣರುಗಳಿಂದ ವಂಚಿಸಲ್ಪಟ್ಟವನಾಗಿ, ಮಿಥ್ಯಾಶಾಸ್ತ್ರವನ್ನು ಪಡದಾನು || ೪೬ || ಆ ಕಾರಣದ್ದೆಶೆಯಿಂದ, ಬಾಲ್ಯದಲ್ಲಿಯೇ ಉಪಾಸಕ ವೇದವನ್ನು ಅಭ್ಯಾಸ ಮಾಡತಕ್ಕದು ಅದರಿಂದ ಪಡೆಯಲ್ಪಟ್ಟ ಸಂಸಾರ ಉಳ್ಳಂಥಾವನಾಗಿ ತನಗೂ ಪರರಿಗೂ ಉತ್ತಾರಕ ನಾಗುತ್ತಾನೆ || ೪೭ || (ಕುಲಾವಧಿ) ಬ್ರಾಹ್ಮಣನಿಗೆ, ಕುಲಾಚಾರ ಸಂರಕ್ಷಣೆಯು ಕುಲಾವಧಿ ಎಂಬುವಂಥಾದ್ದಾಗುತ್ತದೆ. ಆ ಕುಲಾವಧಿಯು ಇಲ್ಲದೇ ಹೋದರೆ ನಷ್ಟವಾದಕರ್ಮ ಉಳ್ಳಂಥಾವನಾಗಿ ಅನ್ಯ ಕುಲತ್ವವನ್ನು ಪಡದಾನು || ೪೮ || (ವರ್ಣೋತ್ತಮತ್ವ) ಸಮಸ್ತ ವರ್ಣಗಳಲ್ಲಿಯೂ, ನಿಶ್ಚಯವಾಗಿ ಆಧಿಕ್ಯವು ಯಾವದೋ ಅದು, ವಣ್ಣೋತ್ತಮತ್ವವೆಂತಾ ಅನ್ನಿಸಿಕ್ಕೊಳ್ಳುತ್ತೆ ಆ ವರ್ಣ್ನೋತ್ತಮತ್ವದಿಂದ ತನನ್ನು ಪರರನ್ನು ಉದ್ಧರಿಸುವದರಲ್ಲಿ ಯೋಗ್ಯವಾದಂ ಥಾವನಾಗಿ ಶ್ಲಾಘ್ಯೆತ್ವವನ್ನು ಪಡೆಯುತ್ತಾನೇ || ೪೯ || ಈತನಿಗೆ ವರ್ಣ್ನೋತ್ತಮತ್ವು ಯಿಲ್ಲದೇ ಹೋದರೆ ಉತ್ಕೃಷ್ಟತ್ವಯಿಲ್ಲ, ಉತ್ಕೃಷ್ಟನಲ್ಲದೇ ಇರುವಂಥಾವನು ತನ್ನನ್ನೂ, ಪರರನ್ನೂ ಕೂಡ ಶೋಧಿಸಲಾರನು || ೫೦ || ಕಾರಣದ್ದೆಶೆಯಿಂದ, ಶುದ್ಧಿಯನ್ನು ಅಪೇಕ್ಷಿ

* * *

ಧಯೆನ್ನಪರಾನಪಿ || ೫೦ || ತತೊಯಂಶುದ್ದಿಕಾಮಸ್ಸನ್‌ಗೆವೇತಾನ್ಯಂಕುಲಿಂಗಿನಂ | ಕುಬ್ರಹ್ಮಪಾ ತತಸ್ತರ್ಜ್ಜಾದೊಷಾನ್‌ಪ್ರಾಪ್ನೆತ್ಯಸಂಶಯಂ || ೫೧ || ಪ್ರಧಾನಾರ್ಹತ್ವಮ ಸ್ಯೆಷ್ಟಂಪಾತ್ರತ್ವಂಗುಣಗೌರವಾತ್ | ಗುಣಾಧಿಕೊಹಿಲೊಕರ್ಸ್ಮಿ ಪೂಜ್ಯಸ್ಯಾಲೊತಪೂ ಜಿತೈಃ || ೫೨ || ತತೊಗುಣಕೃತಾಂಸ್ವಸ್ಮಿನ್ ಪಾತ್ರ ತಾಂದೃಢಯೆದ್ದ್ವಿಜಃ | ತದಭಾವೆವಿ ಮಾನ್ಯತ್ವಾದ್ಧ್ರಿಯತೆಸ್ಯದನಂನೃಪ್ಯೆಃ || ೫೩ || ರಕ್ಷ್ಯಃಸೃಷ್ಟ್ಯಧಿಕಾರೊಪಿ ದ್ವಿಜೈರುತ್ತಮಸೃಷ್ಟಿಭಿಃ | ಅಸದ್ದೃಷ್ಟಿಕೃತಾಂಸೃಷ್ಟಿಂಪರಿಹೃತ್ಯ ವಿದೂರತಃ || ೫೪ || ಅನ್ಯಥಾಸೃಷ್ಟಿವಾ ದೇನದುರ್ದ್ರುಫ್ಟೆನಕುದೃಷ್ಟೆಯಃ | ಲೊಕಂನೃಪಾಂಶ್ಚಸಂಮೊಹ್ಯನಯೆಂತ್ಯುತ್ವಥಗಾಮಿತಾಂ || ೫೫ || ಸೃಷ್ಟ್ಯಂ

* * *

ಸುವಂಥಾವನಾಗಿ, ಕುಲಿಂಗಿಯನ್ನು ಸೇವಿಸ್ಯಾನುಹಾಗಲ್ಲದೇ ಹೋದರೇ, ಕುಬ್ರಹ್ಮವನ್ನಾಗಲಿ, ಮಿಥ್ಯಾದೃಷ್ಟಿಗಳಲ್ಲಿ ಹುಟ್ಟಿದ ದೋಷಗಳನ್ನಾಗಲಿ ಸಂಶಯವಿಲ್ಲದೇ ಇರೋಣ ಹ್ಯಾಗೋ ಹಾಗೆ ಪಡೆಯುತ್ತಾನೆ || ೫೧ || (ಪಾತ್ರತ್ವ) ಗುಣ ಗೌರವ ದ್ದೆಶೆಯಿಂದ, ಈ ಬ್ರಾಹ್ಮಣನಿಗೆ, ಪ್ರಧಾನಾ ರ್ಹತ್ವವು, ಪಾತ್ರತ್ವವು, ಇಷ್ಟವಾದಂಥಾದ್ದು, ಈ ಲೋಕದಲ್ಲಿ ಗುಣಾದಿಕ ನಾದಂಥಾವನಾದರೋ, ಲೋಕದಲ್ಲಿ ಪೂಜಿತರಾದಂಥಾ ವರುಗಳಿಂದ ಪೂಜಿಸುವದಕ್ಕೆ ಯೋಗ್ಯನಾದಂಥಾವನು ಆಗುತ್ತಾನೆ. || ೫೨ || ಅದರದೆಶೆಯಿಂದ ಗುಣದಿಂದ ಮಾಡಲ್ಪಟ್ಟಂಥಾತಂನಲ್ಲಿ ಪಾತ್ರತ್ವವನ್ನು ಬ್ರಾಹ್ಮಣನು ದೃಢಮಾಡತಕ್ಕದ್ದು. ಆಪಾತ್ರತ್ವ ಇಲ್ಲದೇಹೋದರೆ, ದೊರೆಗಳಿಂದ ಮಾನಾರ್ಹತ್ವ ಯಿಲ್ಲದೇಯಿ ರುವದರಿಂದ ದ್ರವ್ಯವು ಹೋಗಲ್ಪಡುತ್ತೆ || ೫೩ || (ಸೃಷ್ಟ್ಯಧಿಕಾರ) ಉತ್ತಮ ಸೃಷ್ಟಿಉಳ್ಳ ಬ್ರಾಹ್ಮಣರುಗಳಿಂದ, ದೂರದಲ್ಲಿ ಮಿಥ್ಯಾ ದೃಷ್ಟಿಗಳಿಂದ ಮಾಡಲ್ಪಟ್ಟ ಸೃಷ್ಟಿಯನ್ನು ಪರಿಹರಿಸಿ ಸೃಷ್ಟ್ಯಧಿಕಾರವು, ರಕ್ಷಿಸುವದಕ್ಕೆ ಯೋಗ್ಯವಾದಂಥಾದ್ದು || ೫೪ || ಹಾಗಲ್ಲದೇ ಹೋದರೆ, ಮಿಥ್ಯಾದೃಷ್ಟಿಗಳು ದುರ್ದರ್ಶನ ಉಳ್ಳಂಥ ಸೃಷ್ಟಿವಾದದಿಂದ ಲೋಕವನ್ನು ಧೊರೆಗಳನ್ನು ಮೋಹಪಡಿಸಿ ಉನ್ಮಾರ್ಗಗಾಮಿತ್ವವನ್ನು ಪಡೇಸುತ್ತಾರೆ || ೫೫ || ಈ ಕಾರಣದ್ದೆಶೆಯಿಂದ, ನಯತತ್ವವನ್ನು ತಿಳಿದಂಥಾ ವನಾಗಿ, ಸೃಷ್ಟ್ಯಂತರವನ್ನು ದೂರದಲ್ಲಿ ಬಿಟ್ಟು ಅನಾದಿಕ್ಷತ್ರಿಯರಿಂದ ಸೃಷ್ಟಿ ಮಾಡಲ್ಪಟ್ಟಂಥ ಧರ್ಮ್ಮ ಸೃಷ್ಟಿಯನ್ನು ಪ್ರಭಾವನೇ ಮಾಡತಕ್ಕದು || ೫೬ || ತೀರ್ಥಕರ ಪರದೇವ

* * *

ತರಮತೊದೂರಮಪಾಸ್ಯನಯತತ್ವವಿತ್ | ಅನಾದಿಕ್ಷತ್ರಿಯೈಸೃಷ್ಟಾಂಧರ್ಮ್ಮಸೃಷ್ಟಿಂ ಪ್ರಜಾವಯತ್ || ೫೬ || ತೀರ್ತ್ಥಕೃದ್ಭಿರಿಯಂಸೃಷ್ಟಾಧರ್ಮಸೃಷ್ಟೆಸ್ಸನಾತನೀ | ರ್ತಾಸಂ ಶ್ರೀತಾನ್‌ನೃಪಾನೇವಸೃಷ್ಟಿ ಹೇತೂನ್‌ಪ್ರಕಾಶಯೆತ್ || ೫೭ || ಅನ್ಯಥಾನ್ಯಕರತಾಂ ಸೃಷ್ಟಿಂಪ್ರಪನ್ನಾಸ್ಯುರ್ನೃಪೊತ್ತಮಾಃ | ತತೊನೈಶ್ವ ರ್ಯಮೆಷಾಂಸ್ಯಾತ್ತತ್ರಸ್ತಾಶ್ಚಸ್ಯು ರಾರ್ಹತಾಃ || ೫೮ || ವ್ಯವಹಾರೆಶಿತಾಂಪ್ರಾಹುಃ ಪ್ರಾಯಶ್ಚಿತ್ತಾದಿಕರ್ಮ್ಮಣಿ | ಸ್ವತಂತ್ರತಾಂದ್ವಿಜಸ್ಯಾಸ್ಯಶ್ರಿತಸ್ಯಪರಮಾಂಶ್ರುತಿಂ || ೫೯ || ತದಭಾವೇಸ್ವಮನ್ಯಾಂಶ್ಚನಶೊಧ ಇತುಮರ್ಹತಿ | ಅಶುದ್ದಃಪರತಃಶುದ್ದಿಮಭೀಪ್ಸನ್ಯಕೃತೊ ಭವೆತ್ || ೬೦ || ಸ್ಯಾದವಧ್ಯಾಧಿಕಾರೆಪಿಸ್ಥಿರಾ ತ್ಮಾದ್ವಿಜಸತ್ತಮಃ | ಬ್ರಾಹ್ಮಣೊಹಿಗುಣೊತ್ಕರ್ಷ್ಷಾನಾನ್ಯತೊ ವದಮರ್ಹತಿ || ೬೧ ||

* * *

ರಿಂದ, ಸನಾತನವಾಗಂಥಾ ಈ ಧರ್ಮ್ಮಸೃಷ್ಟಿಯು, ಸೃಷ್ಟಿಸಲ್ಪಟ್ಟಿತು. ಅದನ್ನು ಆಶ್ರಯಿಸಿಕೊಂಡಿ ರುವಂಥ ಧೊರೆಗಳನ್ನೇಯೇ ಸೃಷ್ಟಿ ಹೇತುಗಳನ್ನಾಗಿ ಪ್ರಕಾಶಮಾಡತಕ್ಕದ್ದು || ೫೭ || ಹಾಗಲ್ಲದೇ ಹೋದರ ಮತ್ತೊಂಬ್ಬನಿಂದ ಮಾಡಲ್ಪ ಟ್ಟಂಥಾ ಸೃಷ್ಟಿಯನ್ನು ರಾಜಶ್ರೇಷ್ಠರು ಪಡದಂಥಾವರುಗಳು ಆಗುವರು. ಅದರ ದೆಶೆಯಿಂದ, ಇವರುಗಳಿಗೆ ಐಶ್ವರ್ಯವು ಇಲ್ಲ ಅರ್ಹನ್ಮತ ಉಳ್ಳಂಥಾವರುಗಳು ಆ ಮಿಥ್ಯಾ ದೃಷ್ಟಿಗಳಿಂದ ಭಯ ಪಡಿಸಲ್ಪಟ್ಟವರು ಆಗುತ್ತಾರೆ || ೫೮ || (ವ್ಯವಹಾರೇಶಿತ್ವ) ಸ್ವತಂ ತ್ರತ್ವವನ್ನು ಪರಮವೇದವನ್ನು ಆಶ್ರಯಿಸಿ ಇರುವಂಥಾ ಈ ಬ್ರಾಹ್ಮಣನಿಗೆ, ಪ್ರಾಯಶ್ಚಿತ್ತಾದಿ ಕರ್ಮಗಳಲ್ಲಿ, ವ್ಯವಹಾರೇ ಶಿತ್ವವನ್ನು ಹೇಳುವರು || ೫೯ || ಪ್ರಾಯಶ್ಚಿತ್ತಾದಿ ಕರ್ಮದಲ್ಲಿ ಸ್ವತಂತ್ರತ್ವ ಇಲ್ಲದೇ ಹೋದರೆ ತನ್ನನ್ನು ಪರನನ್ನು ಶೋಧಿಸುವದಕ್ಕೆ ಅರ್ಹನಾಗುವದಿಲ್ಲ. ಅಶುದ್ಧನಾದಂಥಾವನು ಮತ್ತೊಬ್ಬನ ದೆಶೆಯಿಂದ ಶುದ್ಧಿಯನ್ನು ಅಪೇಕ್ಷಿಸುವನಾಗಿ ನಿಂದಿತ ನಾಗುತ್ತಾನೆ || ೬೦ || (ಅವಧ್ಯತ್ವ) ಬ್ರಾಹ್ಮಣಶ್ರೇಷ್ಠನು, ವಧಿಸುವದಕ್ಕೆ ಯೋಗ್ಯವಲ್ಲದ ಅಧಿಕಾರದಲ್ಲಿ ಸ್ಥಿರಾತ್ಮನಾದಂಥಾವನು ಆಗುತ್ತಾನೆ. ಬ್ರಾಹ್ಮಣನು, ಗುಣೋತ್ಕರ್ಷ ನಾದ್ದರದೆಶೆಯಿಂದ ನಿಶ್ಚಯವಾಗಿ ಮತ್ತೊಬ್ಬನದೆಶೆಯಿಂದ ವಧೆಯನ್ನು ಕುರಿತು ಅರ‍್ಹನಾಗುವದಿಲ್ಲ || ೬೧ || ಸಮಸ್ತಪ್ರಾಣಿಯು ಕೊಲ್ಲುವದಕ್ಕೆ, ಯೋಗ್ಯವಾದಂಥಾದ್ದಲ್ಲ, ಬ್ರಾಹ್ಮಣನಾದರೋ ಗುಣವಿಶೇಷವಾಗಿ, ಗುಣಗಳ ಉತ್ಕರ್ಷ, ಅಪಕರ್ಷ

* * *

ಸರ್ವಪ್ರಾಣೀನಹಂತವ್ಯೊ ಬ್ರಾಹ್ಮಣಸ್ತುವಿಶೆಷತಃ | ಗುಣೊತ್ಕರ್ಷಾಪಕರ್ಷಾಭ್ಯಾಂ ವದೆವಿದ್ಯಾತ್ಮತಾಮತಾ || ೬೨ || ತಸ್ಮಾದವಧ್ಯತಾಮೇಷಪೋಷಯೆದ್ಧಾರ್ಮಿಕೆಜನೆ | ಧರ್ಮ್ಮಸ್ಯತದ್ಧಿಮಹಾತ್ಮ್ಯಂತತ್ಸೊಯಂ ನಾಭಿಭೂಯತೆ || ೬೩ || ತದಭಾವೆಚ ವಧ್ಯತ್ವಮ ಯ ಮೃಛ್ಛತಿಸರ್ವತಃ | ಎವೆಂಚಸತಿ ಧರ್ಮ ಸ್ಯನಸ್ಯೇತ್ಪ್ರಾಮಾಣ್ಯ ಮರ್ಹ ತಾಂ || ೬೪ || ತತಃಸರ್ವಪ್ರಯತ್ನೆನರಕ್ಷ್ಯೊಧರ್ಮಸ್ಸನಾತನಃ | ಸಹಿಸಂರಕ್ಷಿತೊರಕ್ಷಾಂಕ ರೊತಿಸಚರಾಚರೆ || ೬೫ || ಸ್ಯಾದದಂಡ್ಯತ್ವಮಪ್ಯೆವ ಮಸ್ಯಧರ್ಮ್ಮ ಸ್ಥಿರಾತ್ಮನ | ಧರ್ಮ್ಮ ಸ್ಥೊಹಿಜನಸ್ತಸ್ಯದಂಡಪ್ರಸ್ಥಾಪನೆಪ್ರಭುಃ || ೬೬ || ತದ್ದರ್ಮಸ್ಥೀಯಮಾಮ್ನಾಯಂಭಾವ ಯನ್‌ಧರ್ಮದರ್ಶಿಭಿಃ | ಅಧರ್ಮಸ್ಥೆಷುದಂಡಸ್ಯಪ್ರಣೇತಾಧಾರ್ಮ್ಮಿಕೋನೃಪಃ || ೬೭ ||

* * *

ಗಳ ದೆಶೆಯಿಂದ ವಧಿಸುವದಕ್ಕೆ ಯೋಗ್ಯನಾದಂಥಾವನಲ್ಲ. ವಧೇವಿಷಯದಲ್ಲಿ ತಿಳುವಳಿಕೆ ಇಲ್ಲ ದಭಾವವು ವಡಂಬಡತಕ್ಕಂಥಾದ್ದು || ೬೨ || ಅದ್ದರದೆಶೆಯಿಂದ ಧಾರ್ಮ್ಮಿಕ ಜನದಲ್ಲಿ ಅವಧ್ಯತ್ವವನ್ನು ಈ ಬ್ರಾಹ್ಮಣನು ಪುಷ್ಟೀಮಾಡತಕ್ಕದ್ದು. ಅದಾದ ರೋ ಧರ್ಮ್ಮದ ಮಾಹಾತ್ಮೆಯು ಆ ಕಾರಣದ್ದೆಶೆಯಿಂದ ಆ ಈ ಬ್ರಾಹ್ಮಣನು, ತಿರಸ್ಕರಿಸಲ್ಪಡುವದಿಲ್ಲ || ೬೩ || ಆ ಅವೃಧ್ಯತ್ವ ಇಲ್ಲದೇ ಇರುವದರ ವಿಷ ಯದ ಲ್ಲಾದರೊ, ಈ ಬ್ರಾಹ್ಮಣನು ಮಧ್ಯತ್ವವನ್ನು ಪಡೆಯುತ್ತಾನೆ. ಈ ಪ್ರಕಾರವಾಗಿ ಬ್ರಾಹ್ಮಣ ವಧೆಯಾಗುತ್ತಿರಲಾಗಿ, ಆ ತೀರ್ತ್ಥಕರ ಪರಮದೇವರುಗಳ ಧರ್ಮ್ಮಕ್ಕೂ ಪ್ರಾಮಾಣ್ಯವಾಗುವದಿಲ್ಲ || ೬೪ || ಆ ಕಾರಣದ್ದೆಶೆಯಿಂದ ಸರ್ವ್ವಪ್ರಯತ್ನದಿಂದಲೂ ಆ ಸನಾತನವಾದ ಧರ್ಮ್ಮವು ರಕ್ಷಿಸುವದಕ್ಕೆ ಯೋಗ್ಯವಾದಂಥಾದ್ದು, ಆ ಧರ್ಮ್ಮವು ಸಂರಕ್ಷಿಸಲ್ಪಟ್ಟಂಥಾದ್ದಾರೆ, ಜಂಗಮಸ್ಥಾ ವರಾತ್ಮಕವಾದ ಜಗತ್ತು ರಕ್ಷಿಸಲ್ಪಟ್ಟಂಥಾದ್ದಾಗುತ್ತೆ || ೬೫ || (ಅದಂಡ್ಯತ್ವ) ಧರ್ಮದಲ್ಲಿ ಸ್ಥಿರಾತ್ಮನಾದಂಥಾ ಬ್ರಾಹ್ಮಣನಿಗೆ ಅದಂಡ್ಯತ್ವವೂ ಕೂಡ ಆಗುತ್ತಿದೆ. ಧರ್ಮದಲ್ಲಿ ಇರುವಂಥಾ ಜನವು ಆ ದರ್ಮ್ಮದಲ್ಲಿ ಇರುವಂಥಾ ಆ ಜನಕ್ಕೆ ನಿಗ್ರಹ ಸ್ಥಾಪನಾ ವಿಷಯದಲ್ಲಿ ಸಮರ್ತ್ಥವಾಗುತ್ತೆ || ೬೬ || ಆ ಕಾರಣದ್ದೆಶೆಯಿಂದ ಧರ್ಮಸ್ಥರ ಸಂಬಂಧವಾದಂಥಾ ವೇದವನ್ನು ಧರ್ಮವನ್ನು ತಿಳಿದಂಥಾವರುಗಳೊಡನೇ ಕೂಡ ಭಾವಿಸುವಂಥಾವನಾಗಿ ಅಧರ್ಮದಲ್ಲಿ ಇರುವಂಥಾವರುಗಳ ನಿಮಿತ್ತವಾಗಿ ದಂಡವನ್ನು ಪಡೇಸು

* * *

ಪರಿಹಾರ್ಯ್ಯಂಯಥಾದೆವಗುರುದ್ರವ್ಯಂಹಿತಾರ್ತ್ಥಿಭಿಃ | ಬ್ರಹ್ಮಸ್ವಂಚತಥಾಭೂತಂನ ದಂಡರ್ಹಸ್ತತೊ ದ್ವಿಜಃ || ೬೮ || ಯುಕ್ತ್ಯಾನಯಾಗುಣಾಧಿಕ್ಯ ಮಾತ್ಮನ್ಯಾರೊಪಯನ್‌ ವಶೀ | ಅದಂಡಪಕ್ಷೆಸ್ಯಾತ್ಮನಂ ಸ್ಥಾಪಯೆದ್ದಂಡಧಾರಿಣಾಂ || ೬೯ || ಅಧಿಕಾರೆ ಹ್ಯಸತ್ಯಸ್ಮಿನ್‌ಸ್ಯಾದ್ದಂಡ್ಯೊಯಂಯಧೇತರಃ | ತತಶ್ಚ ನಿಸ್ವತಾಂಪ್ರಾಪ್ತೊನೇಹಾ ಮುತ್ರ ಚನಂದತಿ ದೂನ್ಯತ್ವಮಸೃಸಂಧತ್ತೆಮಾನಾರ್ಹತ್ವಂಸ್ವಭಾವಿತಂ ಗುಣಾಧಿಕೊಹಿ ಮಾನೃ ಸ್ಯಾದ್ವಂದೃಃ ಪೂಜ್ಯಶ್ಚ ಸತ್ತಮೈಃ || ೭೧ || ಅಸತ್ಯಸ್ಮಿನ್‌ನಮಾನ್ಯತ್ವಮತ ಸ್ಯತ್ಸಂಮತೈರ್ಜನೈಃ | ತತಶ್ಚಸ್ಥಾನಮಾನಾದಿಲಾಭಾಭಾವಾತ್ಪದಚ್ಯುತಿಃ || ೭೨ || ತಸ್ಮಾದಯಂ ಗುಣೈ‌ರ್ಯ್ಯತ್ನಾದಾತ್ಮನ್ನ್ಯಾ ರೊಪ್ಯತಾಂದ್ವಿಜೈಃ | ಯಶಶ್ಚಜ್ಞಾನವೃತ್ತಾದಿಸಂಪತ್ತಿಸ್ಸೊರ್ಚತಾಂ

* * *

ವಂಥಾ ಧೊರೆಯು ಧಾರ್ಮಿಕನಾದಂಥಾವನು ಆಗುತ್ತಾನೆ || ೬೭ || ಹ್ಯಾಗೆ ಹಿತವನ್ನು ಅಪೇಕ್ಷಿಸುವಂಥಾವರಿಂದ, ದೇವದ್ರವ್ಯವು ಗುರುದ್ರವ್ಯವು ಬಿಡುವದಕ್ಕೆ ಯೋಗ್ಯವಾದಂಥಾದ್ದೋ ಆ ಬ್ರಾಹ್ಮಣಸ್ವತ್ತು ಅದೇ ಪ್ರಕಾರವಾದಂಥಾದ್ದು | ಆ ಕಾರಣದ್ದೆಶೆಯಿಂದ ಬ್ರಾಹ್ಮಣನು ದಂಡಯೋಗ್ಯನಲ್ಲ || ೬೮ || ಅದ್ದರದೆಶೆಯಿಂದ ಈ ಯುಕ್ತಿಯಿಂದ ತಂನಲ್ಲಿ ಗುಣಾಧಿಕ್ಯವನ್ನು ಆರೋಪಣೆ ಮಾಡುವಂಥಾವನಾಗಿಯು ಇಂದ್ರಿಯನಿಗ್ರಹವುಳ್ಳಂಥಾವನಾಗಿಯು ತಂನನ್ನು ದಂಡಧಾರಿಗಳೊಳಗೆ ಅದಂಡಪ ಕ್ಷದಲ್ಲಿ ಸ್ಥಾಪಿಸತಕ್ಕದ್ದು || ೬೯ || ಈ ಅಧಿಕಾರವು ಇಲ್ಲದೇ ಹೋದರೆ ಹ್ಯಾಗೆ ಇತರವರ್ಣದವನೊ ಅದರೋಪಾದಿಯಲ್ಲಿ ದಂಡಿಸುವುದಕ್ಕೆ ಯೋಗ್ಯನಾಗುತ್ತಾನೆ. ಅದರದೆಶೆಯಿಂದ ದರಿದ್ರತ್ವವನ್ನು ಪಡೆದಂಥಾವನಾಗಿ, ಈ ಜನ್ಮದಲ್ಲಿಯೂ ಮುಂದಲಜನ್ಮದಲ್ಲಿಯೂ ಕೂಡ ಸಂತೋಷ ಪಡುವದಿಲ್ಲ || ೭೦ || (ಮಾನ್ಯತ್ವ) ತನ್ನಲ್ಲಿ ಭಾವಿಸಲ್ಪಟ್ಟಂಥ ಮಾನ್ಯತ್ವವು ಈ ಬ್ರಾಹ್ಮಣನಿಗೆ ಮಾನಾರ್ಹತ್ವವನ್ನು ಸೃಷ್ಟಿಮಾಡುತ್ತೆ. ಗುಣಾಧಿಕನಾದಂಥಾವನು ಸತ್ಪುರುಷರುಗಳಿಂದ ಸನ್ಮಾನಿಸುವದಕ್ಕೆ ಯೋಗ್ಯನಾದಂಥಾವನು ವಂದಿಸುವದಕ್ಕೆ ಯೋಗ್ಯನಾದಂಥಾವನು ಪೂಜಿಸುವದಕ್ಕೆ ಯೋಗ್ಯನಾದಂಥಾವನೂ ಕೂಡಾ ಆಗುತ್ತಾನೆ || ೭೧ || ಈ ಗುಣವು ಇದೇ ಹೋದರೆ ಈ ಬ್ರಾಹ್ಮಣನಿಗೆ ಸತ್ಪುರುಷರಾದಂಥಾ ಜನಗಳಿಂದ, ಸನ್ಮಾನಿಸುವದಕ್ಕೆ ಯೋಗ್ಯವಾದಂಥಾ ಭಾವವು ಆಗುವುದಿಲ್ಲ. ಅದರ

* * *

ನೃಪೈಃ || ೭೩ || ಸ್ಯಾತ್ಪ್ರಜಾಂತರಸಂಬಂಧೆಸೊಂನತೆರಪರಚ್ಯುತಿಃ | ಯಾಸ್ಯಸೊಕ್ತಾಪ್ರಜಾ ಸಂಬಂಧಾಂತ ರಂನಾಮತೊಗುಣಃ || ೭೪ || ಯಥಾಕಾಲಾಯಸಾವಿದ್ದಾಸ್ವರ್ಣ್ನಂ ಯಾತಿವಿವರ್ಣ್ನತಾಂ | ನತಥಾಸ್ಯಾ ನ್ಯಸಂಬಂಧೆಸುಗುಣೊತ್ಕರ್ಷವಿಪ್ಲವಃ || ೭೫ || ಕಿಂತುಪ್ರಜಾಂತರಂಸ್ವೆನಸಂಬಂಧಸ್ವಗುಣಾನಯಂ | ಪ್ರಾಪಯತ್ಯಚಿರಾದೆ ವಲೊಹಧಾತುಂಯಥಾರಸಃ || ೭೬ || ತತೋಮಹಾನಯಂಧರ‍್ಮಪ್ರಭಾ ವೂದ್ಯೊ ತಕೊಗುಣಃ | ಯೆನಾಯಂಸ್ವಗುಣೈರನ್ಯಾನಾತ್ಮಸಾತ್ಕರ್ತ್ತುಮರ್ಹತಿ || ೭೭ || ಅಸತ್ಯಸ್ಮಿನ್ ಗುಣೆನ್ಯಸ್ಮಾತ್ಪ್ರಾಪ್ನುಯಾತ್ಸ್ವಗುಣಚ್ಯುತಿಂ | ಸತ್ಯೆವಂಗುಣವೃತ್ತಾಸ್ಯನಿಕೃಷ್ಯೆತದ್ವಿ ಜನ್ಮನಃ || ೭೮ || ಅತೊತಿಬಾಲ ವಿದ್ಯಾದಿನಿಯೊಗಾಂದಶಧೋದಿತಾನ್ | ಯಥಾರ್ಹ ಮಾತ್ಮಸಾತ್ಕುರ‍್ವನ್‌ದ್ವಿಜಸ್ಯಾಲ್ಲೊಕ ಸಂಮ

* * *

ದೆಶೆಯಿಂದ ಸ್ಥಾನಮಾನ ಮೊದಲಾದ ಲಾಭದ ಅಭಾವದ್ದೆಶೆಯಿಂದ ಪದಚ್ಯುತಿಯು ಆಗುತ್ತದೆ || ೭೨ || ಆ ಕಾರಣದ್ದೆಶೆಯಿಂದ ಗುಣಗಳಿಂದ ಪ್ರಯತ್ನದ್ದೆಶೆಯಿಂದ ಬ್ರಾಹ್ಮಣರುಗಳೊಡನೇ ಕೂಡ ಮಾನ್ಯತ್ವವನ್ನು ಆರೋಪಿಸತಕ್ಕದ್ದು ಎಸಸ್ಸುಜ್ಞಾನ ಚಾರಿತ್ರ ಮುಂತಾದ ಸಂಪತ್ತು ಉಳ್ಳಂಥ ಆ ಬ್ರಾಹ್ಮಣನು, ಧೊರೆಗಳಿಂದ ಅರ್ಚಿಸಲ್ಪಡುತ್ತಾನೆ. || ೭೩ || (ಪ್ರಜಾಸಂಬಂಧಾಂತರ) ಅನ್ಯಪ್ರಜೆಗಳ ಸಂಬಂಧ ದಲ್ಲಿಯೂ ಕೂಡ ತನ್ನ ಉನ್ನತಿಗೆ ಅಪರಿಚ್ಯುತಿಯು ಯಾವದು ಆಗುತ್ತಧೆಯೊ ಅದು ಹೆಸರಿನದೆಶೆಯಿಂದ ಪ್ರಜಾಸಂಬಂಧಾಂತರವೆಂಬ ಗುಣವಾಗಿ ಹೇಳಲ್ಪಟ್ಟಿತು || ೭೪ || ಚಿನ್ನವು, ಕಪ್ಪಾದ ಕಬ್ಬಿಣದೊಡನೇ ಸಂಬಂಧ ಉಳ್ಳಂಥಾದ್ದಾಗಿ, ವಿವರ್ಣತ್ವವನ್ನು ಪಡೆಯುತ್ತಿಧೆಯೊ ಹಾಗೆ, ಈತನಿಗೆ, ಅನ್ಯಸಂಬಂಧದಲ್ಲಿ ಗುಣದ ಅಧಿಕ್ಯಕ್ಕೆ, ತೊಂದರೆಯು ಆಗತಕ್ಕದ್ದಲ್ಲ || ೭೫ || ಮತ್ತೇನೆಂದರೆ, _______ ತನ್ನೊಡನೆ ಪ್ರಜಾಂತರವನ್ನು, ಸಂಬಂಧವನ್ನು ಗುಣವನ್ನೂ ಸಿದ್ಧರಸವು ಲೋಹಧಾತುವನ್ನು ಹ್ಯಾಗೋ ಹಾಗೆ ಶೀಘ್ರವಾಗಿ ಉತ್ಕೃಷ್ಟತ್ವವನ್ನು ಪಡೇಸುತ್ತಾನೆ || ೭೬ || ತಂನಂತೆ ಮಾಡುವದಕ್ಕೆ ಯೋಗ್ಯಣಾಗುತ್ತಾನೆಯೊ ಆ ಕಾರಣದ್ದೆಶೆಯಿಂದ ಧರ್ಮ ಪ್ರಭಾವಪ್ರಕಾಶನ ಮಾಡತಕ್ಕಂಥಾ ಈ ಗುಣವು, ದೊಡ್ಡದಾದಂಥಾದ್ದು || ೭೭ || ಈ ಗುಣವು ಇಲ್ಲದೇಹೋದರೆ ಮತ್ತೊಬ್ಬನ ದೆಶೆಇಂದ ತನ್ನ ಗುಣಹಾನಿಯನ್ನು ಪಡೆಯುತ್ತಾನೆ ಈ ಪ್ರಕಾರವಾಗುತ್ತಿರ

* * *

ತಃ || ೭೯ || ಗುಣೆಷ್ವೇಷುವಿಶೆಷೊನ್ಯೊಯೊವಾಚ್ಯೊಬಹುವಿಸ್ತರಃ | ಸೌಪಾಸಕ ಸಿದ್ಧಾಂತಾದಧಿಗಮ್ಯಃಪ್ರ ಪಂಚಿತಃ || ೮೦ || ಇತಿಭರತನರೆಂದ್ರಾತ್ಪ್ರಾಪ್ತಸತ್ಕಾರ ಯೊಗಾವ್ರತಪರಿಚಯಚಾರೂದಾರವೃತ್ತಾಶ್ರು ತಾಢ್ಯಾಃ | ಜಿನವೃಷಭಮತಾನುವ್ರಜ್ಯಯಾ ಪೂಜ್ಯಮಾನಾಜಗತಿಬಹುಮತಾಸ್ತೆಬ್ರಾಹ್ಮಣಾಃಖ್ಯಾತಿ ಮೀಯುಃ || ೮೧ ||

ಇತ್ಯಾರ್ಷೆಸ್ಮೃತಿಸಂಗ್ರಹಬ್ರಾಹ್ಮಣವರ್ಣ್ನನೊ ನಾಮ
ಪಂಚಮೊದ್ಯಾಯಸ್ಸಂಪೂರ್ಣಂ

* * *

ಲಾಗಿ ಈ ಬ್ರಾಹ್ಮಣನ ಗುಣವುಳ್ಳ ಭಾವವು ನಿಕೃಷ್ಟವಾದೀತು || ೭೮ || ಈ ಕಾರಣದ್ದೆಶೆಯಿಂದ ಹತ್ತು ಪ್ರಕಾರವಾಗಿ ಹೇಳಲ್ಪಟ್ಟಂಥ ಅತಿಬಾಲವಿದ್ಯವೇ ಮೊದಲಾ ದಂಥ ನಿಯೋಗಗಳನ್ನು, ಯಥಾಯೋಗ್ಯವಾಗಿ ತಂನ ಸ್ವಾಧಿನಮಾಡಿ ಕ್ಕೊಳ್ಳುವಂಥಾ ಬ್ರಾಹ್ಮಣನು ಲೋಕ ಸಮ್ಮತನಾಗುತ್ತಾನೆ || ೭೯ || ಈ ಗುಣಗಳಲ್ಲಿ ವಿಶೇಷವಾದಂಥಾ ಮತ್ತೊಂದು ಬಹುವಿಸ್ತಾರವಾದಂಥಾದ್ದು ಯಾವದೋ ಅದು, ಉಪಾಸಕ ಸಿದ್ಧಾಂತ ದ್ದೆಶೆಯಿಂದ ಸಮಗ್ರವಾಗಿ ತಿಳಿಯುವದಕ್ಕೆ ಯೋಗ್ಯವಾದಂಥಾದ್ದು || ೮೦ || ಈ ಪ್ರಕಾರವಾಗಿ, ಭರತರಾಜರ್ಷಿದೆಶೆಯಿಂದ ಪಡೆಯಲ್ಪಟ್ಟ ಸತ್ಕಾರಯೋಗ ಉಳ್ಳಂಥ ವ್ರತಪರಿಚಯ ದ್ದೆಶೆಯಿಂದ ಮನೋಹರವಾದಂಥ ಮಹತ್ತಾದಂಥ ಚಾರಿತ್ರ ಉಳ್ಳಂಥ ಶಾಸ್ತ್ರಾಢ್ಯಾರಾದಂಥ ಜಿನೇಶ್ವರನಾದ ವೃಷಭಸ್ವಾಮಿಯ ಮತವನ್ನು ಅನುಸರಿಸುವದ ರಿಂದ ಜಗತ್ತಿನಲ್ಲಿ ಪೂಜಿಸಲ್ಪಡುವಂಥ ಬಹು ಸಮ್ಮತರಾದ ಅವರುಗಳು ಬ್ರಾಹ್ಮಣ ರೆಂಬ ಖ್ಯಾತಿಯನ್ನು ಪಡೆಯುವಂಥಾವರಾದರು.

ಇತ್ಯಾರ್ಷೆಸ್ಮೃತಿಸಂಗ್ರಹೆ ಬ್ರಾಹ್ಮಣಾ ಚಾರನಿರೂಪಣಂ ನಾಮ
ಪಂಚಮೋಧ್ಯಾಯಃ ಸಂಪೂರ್ಣ.

* * *