ಷಷ್ಠೋಧ್ಯಾಯ

ಅಥೋಚ್ಯತೆತ್ರಿವರ್ಣ್ನಾನಾಂಶೌಚಾಚಾರವಿಧಿಕ್ರಮಃ | ಶೌಚಾಚಾರವಿಧಿ ಪ್ರಾಪ್ತಾದೇಹಂ ಸಂಸ್ಕರ್ತು ಮರ್ಹತಿ || ೧ || ಸಂಸ್ಕೃತೋದೇಹ ಎವಾಸಾದೀಕ್ಷಣಾ ಯಾಭಿಸಂಮತಃ | ವಿಶಿಷ್ಟಾನ್ವಯ ಜೋಪ್ಯಸ್ಮೈನೆಷ್ಯತೆಯಮಸಂಸ್ಕೃತಃ || ೨ || ದೀಕ್ಷಣಂಜನದೀ ಕ್ಷಾತ್ರತತೋಹಿಪರಮಂತಪಃ | ತತೋದುಷ್ಕೃತನಾ ಶಸ್ಯತತೋಹಿಪರಮಂ ಸುಖಂ || ೩ || ಸುಖಂವಾಂಛಂತಿಸರ್ವೆಪಿಜೀವಾದುಃಖಂನಜಾತುಚಿತ್ | ತಸ್ಮಾತ್ಸು ಖೈಷಿಣೋ ಜೀವಸ್ಸಂಸ್ಳಾರಾಯಾಭಿಸಂಮತಾಃ || ೪ || ಶೌಚಮಾಚಾರವಾರೋಪಿಸಂಸ್ಕಾರ ಇತಿಭಾಷಿತಃ | ಅಸ್ಮಾದೇವಬಹಿಶ್ಯುದ್ಧಿರುದಿತಾಗೃಹಮೆಧಿನಾಂ || ೫ ||

* * *

ಷಷ್ಠೋಧ್ಯಾಯಃ

ಅನಂತರದಲ್ಲಿ ಬ್ರಹ್ಮಕ್ಷತ್ರಿಯ ವೈಶ್ಯರುಗಳಿಗೆ ಶೌಚಾಚಾರ ವಿಧಿಯ ಕ್ರಮವು ಹೇಳಲ್ಪಡುತ್ತೆ. ಶೌಚಾಚಾರ ದನುಷ್ಠಾನ ದಪ್ತಾಪ್ತಿಯುಂಟಾದರೆ, ದೇಹವನ್ನು ಸಂಸ್ಕರಿಸುವುದಕ್ಕೆ ಯೋಗ್ಯನಾಗುತ್ತಾನೆ || ೧ || ಸಂಸ್ಕರಿಸಲ್ಪಟ್ಟಂಥಾ ದೇಹವೇ ಯೇದೀಕ್ಷೆಗೋಸ್ಕರ ಸಂಮತವಾದಂಥಾದ್ದು ಸಂಸ್ಕರಿಸಲ್ಪಡದೇ ಇರುವಂಥಾ ಈ ದೇಹವು ಶಿಷ್ಟವಂಶದಲ್ಲಿ ಹುಟ್ಟಿದಾಗ್ಯೂ ಕೂಡ ಈ ದೀಕ್ಷೆಗೋಸ್ಕರ ಅಪೇಕ್ಷಿಸಲ್ಪಡುವದಿಲ್ಲ || ೨ || ಇಲ್ಲಿ ದೀಕ್ಷಣವು (ಜಿನದೀಕ್ಷ) ಜಿನದೀಕ್ಷಾಯೆಂದರೆ ಜಿನೇಶ್ವರನು ಹ್ಯಾಗೆದಿಗಂಬರನಾಗಿ ಇದಾನೋ ಹಾಗೆ ನಿರ್ವಾಣದೀಕ್ಷೆಯು. ಆ ನಿರ್ವಾಣದೀಕ್ಷೆ ದೆಶೆಯಿಂದ ಸ್ಫುಟವಾಗಿ ಉತ್ಕೃಷ್ಟವಾದ ತಪಸ್ಸು. ಆ ತಪಸ್ಸಿನ ದೆಶೆಯಿಂದ ಪಾಪನಾಶವು. ಆ ಪಾಪನಾಶದ್ದೆಶೆಯಿಂದ ಉತ್ಕೃಷ್ಟಸುಖವು. (ಅಂದರೆ) ಮೋಕ್ಷವು || ೩ || ಸಮಸ್ತಪ್ರಾಣಿಗಳು ಸುಖವನ್ನು ಅಪೇಕ್ಷಿಸುತ್ತಾರೆ. ಒಂದು ಕಾಲದಲ್ಲಿ ಯಾದರು ದುಃಖವನ್ನು ಅಪೇಕ್ಷಿಸುವುದಿಲ್ಲ. ಆದ್ದರದೆಶೆಯಿಂದ ಸುಖವನ್ನು ಅಪೇಕ್ಷಿಸುವಂಥಾ ಜೀವಗಳು ಸಂಸ್ಕಾರಕ್ಕೋಸ್ಕರ ವಡಂಬಡತಕ್ಕಂಥಾವರುಗಳು || ೪ || ಶೌಚವು, ಆಚಾರಸಮೂಹವೂ, ಕೂಡ ಸಂಸ್ಕಾರವಿಂತೆಂದು ಹೇಳಲ್ಪಟ್ಟಿತು. ಈ ಸಂಸ್ಕಾರದ್ದೆಶೆಯಿಂದಲೇ ಗ್ರಹಸ್ಥರುಗಳಿಗೆ ಬಾಹ್ಯಶುದ್ಧಿ ಹೇಳಲ್ಪಟ್ಟಿತು ||

* * *

ಅಂತಶ್ಯುದ್ಧಸ್ತುಜೀವಾನಾಂಭವೆತ್ಕಾಲಾದಿಲಬ್ಧಿತಃ | ಎಷಾಮುಖ್ಯಾಪಿ ಸಂಸ್ಕಾರೆಬಾ ಹ್ಯಶುದ್ಧಿರಪೇಕ್ಷ್ಯತೆ || ೬ || ದೆಹದ್ವಾರವಿಶುದ್ಧಿಶ್ಚ ಸ್ನಾನಮಾಚಮನಾದಿಕಂ | ಸೂತ ಕಾದ್ಯಘೆಶುದ್ಧಿಶ್ಚಶೌಚಮಿತ್ಯತ್ರಭಾಷ್ಯತೆ || ೭ || ಆಚಾರೊಬಹುಧಾಪ್ರೊಕ್ತೊಗ ಬ್‌ಆದಾನಾದಿಭೇದತಃ | ವಕ್ಷ್ಯತೆಸಾವಿದಾನೀಂತು ಶೌಚಸ್ಯನಿಧಿ ರುಚ್ಯತೆ || ೮ || ಪ್ರಾತರೇವಸಮುತ್ಥಾಯತಲ್ಪದ್ದಕ್ಷಿಣಪಾರ್ಶ್ವತಃ | ನಿಷಣ್ಣಸ್ತತ್ರಪೂರ್ವಾಸ್ಯಯೇಕಾಗ್ರಶ್ಚಿಂತ ಯೇದಿತಿ || ೯ || ಅನಾದೌಘೋರ ಸಂಸಾರಭ್ರಾಂತ್ವಾಭ್ರಾಂತ್ವಾಕುಯೋನಿಷು | ಕಥಂಚಿ ಜ್ಚಿನಧರ್ಮ್ಮೋಯಂಗೃಹಸ್ಥೀ ಯೋಮಯಾಧೃತಃ || ೧೦ || ಅದ್ಯಾಪಿ ಭುವನಾರಾಧ್ಯೊ ಯತಿಧರ್ಮ್ಮೋನಲಭ್ಯತೆ | ಹಂತಚಾರಿತ್ತಮೊಹೆನಲ ಬ್ಧೊನಿರ್ವಾಹತೆಧುನಾ || ೧೧ || ಚಿಂತ ಇತ್ವೆತಿನಿರ್ದೊಷಂ ಸ್ಮೃತ್ವಾಸ್ತುತ್ವಾಜಿನೆಶ್ವರಂ | ವಂದಿತ್ವಾ

* * *

ಪ್ರಾಣಿಗಳಿಗೆ ಅಂತಶ್ಶುದ್ಧಿಯಾದರೊ ಕಾಲಾದಿ ಲಬ್ಧಿಗಳದೆಶೆಯಿಂದ ಆಗುತ್ತಲಿಧೆ. ಈ ಅಂತಶ್ಯುದ್ಧಿಯು ಸಂಸ್ಕಾರದಲ್ಲಿ ಮುಖ್ಯವಾದಂಥಾದ್ದಾದಾಗ್ಯು ಕೂಡ ಬಾಹ್ಯ ಶುದ್ಧಿಯು ಅಪೇಕ್ಷಿಸಲ್ಪಡುತ್ತೆ || ೬ || ಶರೀರದ ನವದ್ವಾರ ಶುದ್ಧಿಯೂ, ಸ್ನಾನವೂ, ಆಚಮನವೇ ಮೊದಲಾದಂಥಾದ್ದೂ ಜಾತಾಶೌಚವೇ ಮೊದಲಾದ ಅಫೆಶುದ್ಧಿಯೂ ಕೂಡ (ಶೌಚ) ಇಂತೆಂದು ಸಂಸ್ಕಾರದಲ್ಲಿ ಹೇಳಲ್ಪಡುತ್ತೆ || ೭ || ಆಚಾರವು ಗರ್ಬ್ಭಾದಾನಾದಿಭೇದದ್ದೆಶೆಯಿಂದ ಹೇಳಲ್ಪಟ್ಟಿತು. ಈ ಆಚಾರವು ಮುಂದೆ ಹೇಳಲ್ಪಡುತ್ತೆ. ಈಗಲಾದರೂ ಶೌಚವಿಧಿಯು ಹೇಳಲ್ಪಡುತ್ತೆ || ೮ || ಪ್ರಾತಃಕಾಲದಲ್ಲೇ ಹಾಸಿಗೇ ದೆಸೆಯಿಂದ ಬಲದ ಭಾಗದ್ದೆಶೆಯಿಂದ ಎದ್ದು ಆ ಹಾಸಿಗೆಯಲ್ಲಿ ಪೂರ್ವಾಭಿಮುಖವುಳ್ಳಂಥಾವನಾಗಿ ಕೂತುಕೊಂಡವನಾಗಿ ದೃಢಧ್ಯಾನವುಳ್ಳಂಥಾವನಾಗಿ ಮುಂದೆ ಹೇಳುವ ಪ್ರಕಾರ ಭಾವಿಸತಕ್ಕದ್ದು || ೯ || ಮೊದಲಿಲ್ಲದೇ ಇರುವಂಥ ಭಯಂಕರವಾದ ಸಂಸಾರದಲ್ಲಿ ಕುತ್ಸಿತಯೋನಿಗಳಲ್ಲಿ ತಿರುಗಿ ತಿರುಗಿ ಅತಿಪ್ರಯಾಸವಾಗಿ ಗೃಹಸ್ಥ ಸಂಬಂಧಿಯದಂಥಾ ಈ ಜಿನಧರ್ಮವು ನನ್ನಿಂದ ಧರಿಸಲ್ಪಟ್ಟಿತು || ೧೦ || ಈಗಲೂ ಕೂಡ ಲೋಕದಲ್ಲಿ ಪೂಜಾ ಯೋಗ್ಯ ವಾದಂಥಾ ಯತಿಧರ್ಮವು ಪಡೆಯಲ್ಪಡುವುದಿಲ್ಲ. ಕಷ್ಟವು ಚಾರಿತ್ರಮೋಹದಿಂದ ಪಡೆಯಲ್ಪಟ್ಟಂಥಾದ್ದು. ಈಗ ನಿರ‍್ವಹಿಸಲ್ಪಡುತ್ತೆ || ಈ ಪ್ರಕಾರವಾಗಿ ಚಿಂತಿಸಿ ದೋಷರಹಿತನಾದಂಥ ಜಿನೇಶ್ವರನನ್ನು ಸ್ಮ

* * *

ಚಪರಾಮೃಶ್ಯಕೃತಂಪೂರ್ವೆದ್ಯರಾತ್ಮನಾ || ೧೨ || ಕಾಲಂದೇಹಂಸ್ಥಿತಿಂದೇಶಂ ಶತ್ರುಂಮಿತ್ರಂಪರಿಗ್ರಹಂ | ಆಯುರ್ವ್ಯಯಂಧನಂವೃತ್ತಿಂಧರ್ಮಂದಾನಾದಿ ಕಂಸ್ಮರೇತ್ || ೧೩ || ಅಥಾಪರಾಹ್ಣಪರ್ಯಂತಂ ಪ್ರಾಹ್ಣಾದಾರಭ್ಯತದ್ದಿನೆ | ಯದ್ಯತ್ಕರ್ತವ್ಯತಾಂಯಾತಂತತ್ಸರ್ವಂಹೃದಿಸಂದಧತು || ೧೪ || ತತಃಪ್ರಾಗೇವ ಸಂಧೌತೆಅಂತರಿಯೊತ್ತರೀಯಕೆ | ಗ್ರಾಹಯಿತ್ವಾಗೃಹೀತ್ವಾವಾದರ್ಬ್ಬಾಕ್ಷತ ತಿಲಾನಪಿ || ೧೫ || ನ ಮಸ್ಸಿದ್ದೇಭ್ಯಿತ್ಯುಕ್ತ್ವಾತತಶ್ಚಯ್ಯಾಪ್ರದೇಶತಃ | ಉತ್ಥಾಯಾಪವನಾನ್ವೀಪಂಪಾದಮುತ್ಕ್ರಮ್ಯಗಚ್ಛತು || ೧೬ || ತತಃಕೌತ್ಕುಟಿಕೋಮಂದಂಬಹಿರ್ಗ್ಗತ್ವಾಜನೋಜ್ಝಿತೆ | ದವಿಷ್ಟೆವಿಪುಲೆಗೂಢೆ ವಿರೋಧಪರಿ ವರ್ಜಿತೆ || ೧೭ || ಜಾಲಾಧಾರಾಚ್ಚನಿಮ್ನೆವತದಪ್ರಾಪ್ತಜಲಾಧ್ವನಿ |

* * *

ರಿಸಿ ನಮಸ್ಕಾರ ಮಾಡಿ, ಮೊದಲು ದಿವಸದಲ್ಲಿ ತನ್ನಿಂದ ಮಾಡಲ್ಪಟ್ಟಂಥಾದ್ದನ್ನು ವಿಮರ್ಶೆ ಮಾಡಿ, ಕಾಲವನ್ನೂ, ದೇಹವನ್ನೂ, ಸ್ಥಿತಿಯನ್ನೂ, ರಾಜ್ಯವನ್ನೂ, ಶತ್ರುವನ್ನೂ, ಮಿತ್ರನನ್ನೂ, ಪರಿವಾರವನ್ನೂ, ಆಯುಷ್ಯವನ್ನೂ, ವ್ಯಯವನ್ನೂ, ಧನವನ್ನೂ, ಜೀವನೋಪಾಯವನ್ನೂ, ಧರ್ಮವನ್ನೂ, ದಾನವೇ ಮೊದಲಾದ್ದನ್ನು ಸ್ಮರುಸತಕ್ಕದ್ದು || ೧೨ || ಆನಂತರದಲ್ಲಿ ಪ್ರಾತಃಕಾಲದ್ದೆಶೆಯಿಂದ ಆರಂಭಿಸಿಕೊಂಡು ಸಾಯಂಕಾಲ ಪರ್ಯಂತರವೂ, ಆ ದಿವಸದಲ್ಲಿ ಯಾವ ಯಾವದು ಮಾಡುವುದಕ್ಕೆ ಯೋಗ್ಯವಾದಂಥಾ ಭಾವವನ್ನು ಪಡೆಯಿತೋ ಆ ಸಮಸ್ತವನ್ನು ಮನಸ್ಸಿನಲ್ಲಿ ಧರಿಸಿಕೊಂಡಂಥಾವನಾಗಿ ಆನಂತರದಲ್ಲಿ ಮೊದಲೇ ಒಗೆಯಲ್ಪಟ್ಟಂಥಾ ಉಟ್ಟುಗೊಳೂ ಧೋತ್ರ ಹೊದ್ದುಕೊಳೂ ಧೋತ್ರಗಳನ್ನು ದರ್ಬ್ಭೆ ಅಕ್ಷತೆ ಎಳ್ಳುಗಳನ್ನು ಕುಡ ತೆಗಸಿಕ್ಕೊಂಡಾಗಲೀ ತೆಗೆದುಕ್ಕೊಂಡಾಗಲೀ (ನಮಸ್ಸಿದ್ದೇಭ್ಯಃ) ಇಂತೆಂದು ಹೇಳಿ ಆನಂತರದಲ್ಲಿ ಹಾಸಿಗೇ ಪ್ರದೇಶದ್ದೆಶೆಯಿಂದ ಯೆದ್ದು ವಾಯುವಿಗೆ ಅನುಕೂಲವಾಗಿ ಕಾಲನ್ನು, ಯೆತ್ತಿನಡೆಯತಕ್ಕದ್ದು || ೧೬ || ಆನಂತರದಲ್ಲಿ ಸಮೀಪ ದಲ್ಲಿ ನೋಡುವಂಥಾವನಾಗಿ ಮೆಲ್ಲಗೆ ಹೊರಗೆ ಹೋಗಿ ಜನಗಳಿಂದ ಬಿಡಲ್ಪಟ್ಟಂಥಾ, ಹಳ್ಳವಾದಂಥಾ, ವಿಸ್ತಾರವಾದಂಥಾ, ಗೋಪ್ಯವಾದಂಥಾ, ವಿರೋದವಿಲ್ಲದಂಥಾ, ನೀರೂ, ಇರುವ ಪ್ರದೇಶದ್ದೆಶೆಯಿಂದ ಹಳ್ಳದಲ್ಲಿ ಅದಾಗ್ಯೂ, ಆ ಮಲಮೂತ್ರವನ್ನು ಪಡೆಯದೇ ಇರುವಂಥಾ ಜಲಮಾರ್ಗ್ಗವುಳ್ಳಂಥಾ

* * *

ತಸ್ಮಾತ್ಪಂಚಾಶತಾಹಸ್ತೈಃಪರಿತ್ಯಕ್ತಾಂತರೆಶುಚೌ || ೧೮ || ಕ್ಷೆತ್ರೆತತ್ಪಾಲಕಾನು ಜ್ಞಾಪೂರ್ವಕಂಯಕ್ಷದಿಙ್ಮಖಃ | ಶಿರಃಪ್ರದೆಶೆಕರ್ಣ್ಣೆವಾಧೃತಯ ಜ್ಞೊಪವೀತ ಕಃ || ೧೯ || ಪೂರ್ವದಿದಿಕ್ಷುನಿಕ್ಷಿಪ್ತದೃಷ್ಟಿರೂರ್ಧ್ವಮಧೊಪಿ ಚ | ಅಂತರೀಯಂ ವಿನಾಶೆಷವಸ್ತ್ರಾದಿಪರಿವರ್ಜ್ಜಿತಃ || ೨೦ || ಮಂದತಾಮಶಿರಾಭಸ್ಯಮನ್ಯಚಿತ್ತತ್ವಮು ತ್ಸೃರ್ಜಿ | ಹದನಂಮೂಹದನಂ ಮೂತ್ರಣಂತುರ್ಯಾಸ್ಮೌನೆನೈವೊಪವೆಶನಾತ್ || ೨೧ || ತತೊವಾಮಕರಾಂಗುಷ್ಠದೃಂಗುಲಿತ್ರಿತ ಯೆನವೈ | ಶಿಶ್ನಸ್ಯಾಗ್ರಂಗೃಹೀತ್ವೈವ ಜಲಾಶಯ ಮುಪವುಜಿತ್ || ೨೨ || ತಸ್ಮಾದುಧೃತ್ಯಸ ತ್ತೊಯ ಮುಪಶ್ಯಯ ಥೊಚಿ ತಂ | ಅಂತರ‍್ಜಾನುಕರೌನ್ಯಸ್ಯತಜ್ಜಲೈ ಶ್ಮೌಚಮಾಚರೆತ್ || ೨೩ || ತದಾದಕ್ಷಿಣ ಹಸ್ತೆನ ಜಲಸ್ಯಗ್ರಹಣಂ ಭವೆತ್ | ಶೌಚಂಸ್ಯಾದ್ವಾಮ ಹಸ್ತೆನತತ ಸ್ಸಂಶೊಧಯೆ ದ್ಭೃಶಂ || ೨೪ || ತದಾವಿಭ್ಜ್ಯಚು ಲಕಂಮೃತ್ಸ್ನಾಂ

* * *

ಹಳ್ಳದಲ್ಲಿ ಅದಾಗ್ಯೂ, ಆ ಜಲಧಾರದ್ದೆಶೆಯಿಂದ ಐವತ್ತು (೫೦) ಮೋಳಗಳಿಂದ ಬಿಡಲ್ಪಟ್ಟಂಥಾ, ಮಧ್ಯಪ್ರದೇಶವುಳ್ಳಂಥಾ, ಭೂಮಿಯಲ್ಲಿ ಕ್ಷೇತ್ರಪಾಲನ ಅನುಜ್ಞಾ ಪೂರ್ವಕವಾಗೋಣ ಹ್ಯಾಗೋ ಹಾಗೆ, ಉತ್ತರಾಭಿ ಮುಖನಾಗಿ, ಮಸ್ತಕ ಪ್ರದೇಶದಲ್ಲಿ ಆದಾಗ್ಯೂ, ಕಿವಿಯಲ್ಲಿ ಆದಾಗ್ಯೂ, ಧರಿಸಲ್ಪಟ್ಟಂಥಾ ಯಜ್ಞೋಪವೀತ ಉಳ್ಳಂಥಾವನಾಗಿ ಪೂರ‍್ವವೇ ಮೊದಲಾದಂಥಾ ದಿಕ್ಕುಗಳಲ್ಲಿ, ಮೇಲುಭಾಗದಲ್ಲಿ, ಕೆಳಭಾಗದಲ್ಲಿ ಸಹಾ ನೋಡಿ ಉಟ್ಟುಗೊಳೂ ಧೋತ್ರ ಹೊರತಾಗಿ ಬಾಕಿ ವಸ್ತ್ರಗಳನ್ನು ಬಿಟ್ಟವನಾಗಿ, ಸಾವಕಾಶವನ್ನು ಅತಿ ಶೀಘ್ರತ್ವವನ್ನು, ಇಂನೊಂದು ಕಡೆ ಮನಸ್ಸುಳ್ಳ ಭಾವವನ್ನು, ಬಿಟ್ಟು ಮೌನದಿಂದ ಮಲಮೂತ್ರ ವಿಸರ್ಜ್ಜನೆಯನ್ನು ಮಾಡಬೇಕು || ೨೧ || ಆನಂತರದಲ್ಲಿ ಹೆಬ್ಬೆರಳೇ ಮೊದಲಾದ ಮೂರು ಬೆರಲಾಳುಗಳಿಂದ ಶಿಶ್ನಾಗ್ರವನ್ನು ಹಿಡಿದುಕ್ಕೊಂಡೇ ಜಲಸಮೀಪಕ್ಕೆ ಹೋಗಬೇಕು || ೨೨ || ಆ ಕಾಲಕ್ಕೆ ಹ್ಯಾಗೆ ಯೋಗ್ಯವೋ ಹಾಗೆ ಕೂತುಕ್ಕೊಂಡು ಎರಡು ಮಂಡಿಯ ಮಧ್ಯದಲ್ಲಿ ಕೈಗಳನ್ನು ಇಟ್ಟು ಆ ಜಲಾಧಾರದ್ದೆಶೆಯಿಂದ ಒಳ್ಳೇ ನೀರನ್ನು ಎತ್ತಿ ಆ ಜಲಗಳಿಂದ ತೊಳೆಯೋಣವನ್ನು ಮಾಡತಕ್ಕದ್ದು || ೨೩ || ಆ ಪುಷ್ಪ ಪ್ರಕ್ಷಾಲನಾ ಸಮಯದಲ್ಲಿ ಬಲಗೈಯಿಂದ ನೀರನ್ನು ತೆಗೆದುಕೊಳ್ಳುವುದು. ಎಡಗೈಳೈಯಿಂದ ತೊಳಯುವುದು ಆಗುತ್ತಲಿದೆ || ೨೪ || ಆ ಸಮಯದಲ್ಲಿ ಒಂದು ಹಿಡಿಯ ಮಣ್ಣನ್ನು ಏ

* * *

ಸಪ್ತಭಿರಂಶಕೈಃ | ತಧೈಕೈಕೆನಹಸ್ತಸ್ಯರುದ್ದಿಂಶೌಚಂಪುನಃಪುನಃ || ೨೫ || ಕೃತ್ವಾತ್ರಿರೆವಂತದನುಕ್ಷಾಲಯೆ ತ್ಪಾಣಿಮೆಕತಃ | ಕ್ಷಾಲಯೆದ್ದಕ್ಷಿಣಾದೃಂ ಘ್ರೀತತೊ ನ್ಯೊನ್ಯಮಘರ್ಷಯನ್ || ೨೬ || ಪಾಣೀತತಶ್ಚಪ್ರ ಕ್ಷಾಲ್ಯತತೊಪ್ಯನ್ಯಪ್ರದೆಶಕೆ | ಅಸಿತ್ವಾಗಾಲಿತಾಂಭೊಭಿರ್ಮುಖಪ್ರಕ್ಷಾ ಲನಮಾಚರೆತ್ || ೨೭ || ತತಃಪುನಃಪುನಃ ಕೃತ್ವಾಗಂಡೂಷಂವಿಮ ಲಾಂಬುನಾ | ನಿಷ್ಠೀವ್ಯವಾಮತೊ ದೂರಂ ಬಹುವಾರಮಶೀ ಕರಂ || ೨೮ || ತತೊಪಾಮಾರ್ಗ ಪೌರಸ್ತ್ಯಪುಣ್ಯ ಕಾಷ್ಟೆನವಾನ್ಯತಃ | ದಂತಧಾವನ ಮಾಚರ್ಯಜಿ ಹ್ವಾಘರ್ಷಣಮಾಚರೆತ್ || ೨೯ || ನಾಸಾವಿವರನೆತ್ರಾಣಾಂಶುದ್ಧಿಂ ಕುತ್ವಾಯಥೊಚಿತಂ | ತತೊಂಗುಲಿ ಶಲಾಕಾದ್ಯೈಃಶ್ರೊತ್ರ ದ್ವಾರೆನಿಘರ್ಷಯೆತ್ || ೩೦ || ತತೊಪಿವಾರಿ ಗಂಡೂಷಂಕತ್ವಾನಿಷ್ಠೀವ್ಯತನ್ಮುಹುಃ | ಮುಖಂಪ್ರಕ್ಷಾಲಯೆ ದ್ಭೂಯಃಸಮಂತಾ

* * *

ಳುಭಾಗಮಾಡಿ ಒಂದೊಂದು ಭಾಗದಿಂದ ಕೈತೊಳೆಯುವುದನ್ನು ಪೃಷ್ಟಪ್ರಕ್ಷಾಲನೆ ಯನ್ನು ಬದಬದಲಾಗಿ ಮೂರಾವರ್ತಿ ಈ ಪ್ರಕಾರವಾಗಿ ಮಾಡಿ ಅನಂತರದಲ್ಲಿ ಒಂದು ಭಾಗದ್ದೆಶೆಯಿಂದ ಕಯ್ಯನ್ನು ತೊಳೆಯತಕ್ಕದ್ದು ಅನಂತರದಲ್ಲಿ ಪರಸ್ಪರವಾಗಿ ತೀಡದೇಯಿರುವಂಥಾವನಾಗಿ ಎರಡು ಕಾಲುಗಳನ್ನು ತೊಳೆಯತಕ್ಕದ್ದು || ೨೬ || ಅನಂತರದಲ್ಲಿ ಕೈಗಳನ್ನು ತೊಳೆದು ಆ ಸ್ಥಳದ್ದೆಶೆಯಿಂದ ಮತ್ತೊಂದು ಪ್ರದೇಶದಲ್ಲಿ ಕೂತುಕ್ಕೊಂಡು ಸೋದಿಸಲ್ಪಟ್ಟ ನೀರುಗಳಿಂದ ಮುಖವನ್ನು ತೊಳೆಯ ತಕ್ಕದ್ದು || ೨೭ || ಅನಂತರದಲ್ಲಿ ಬದ ಬದಲಾಗಿ ನಿರ್ಮಲ ನೀರುಗಳಿಂದ ಮುಕ್ಕುಳಿಸೋಣವನ್ನು ಮಾಡಿ ಯೆಡಪಾರ್ಶ್ವದ್ದೆಶೆಯಿಂದ ದೂರದಲ್ಲಿ ತುಂತುರುಗಳು ಇಲ್ಲದೇ ಇರೋಣ ಹ್ಯಾಗೋ ಹಾಗೆ, ಬಹಳಾವರ್ತಿವುಗುಳಿ ಅನಂತರದಲ್ಲಿ ಉತ್ತರಣೇ ಕಡ್ಡಿಯೇ ಮೊದಲಾದಂಥಾ, ಪುಣ್ಯಕಾಷ್ಠದಿಂದದಾಗಲೀ, ಮತ್ತೊಂದ ರಿಂದಾಗಲೀ, ಹಲ್ಲು ಉಜ್ಜೋಣವನ್ನು ಮಾಡಿ ನಾಲಿಗೇ ತೀಡೋಣವನ್ನು ಮಾಡತ ಕ್ಕದ್ದು || ೨೯ || ಯಥಾ ಯೋಗ್ಯವಾಗಿ ಮೂಗಿನರಂದ್ರ ಕಣ್ಣು ಇವುಗಳ ಶುದ್ಧಯನ್ನೂ ಮಾಡಿ ಅನಂತರದಲ್ಲಿ, ಬೆಟ್ಟು, ಕಡ್ಡಿ, ಮೊದಲಾದವುಗಳಿಂದ ಕಿವಿಯರಂದ್ರಗಳನ್ನು ತೀಡತಕ್ಕದ್ದು || ೩೦ || ಅನಂತರದಲ್ಲಿ ನೀರು ಮುಕ್ಕುಳಿಸೋಣವನ್ನು ಮಾಡಿ, ಭಾರಿ ಭಾರಿಗೂ ಅದನ್ನು ವುಗುಳಿ ವಳ್ಳೇ

* * *

ಚ್ಛುದ್ದವಾರಿಭಿಃ || ೩೧ || ದೆಹದ್ವಾರಾಣಿತೊಯಾದ್ಯೈರೆವಂಸಂಶೊಧ್ಯಸರ‍್ವತಃ | ತತಆಚಮನೆನೈ ವಂವಿಶೆಷೆಣವಿಶೊದಯೆತ್ || ೩೨ || ಕ್ಷೆತ್ರಂಕಾಲಾದಿಕಾನ್ವಂಶಂಗೊತ್ರಂ ನಾಮತಥೈವಚ | ಪ್ರಾಹ್ಣಾದಿ ಸಂದ್ಯಾಸೆವಾಂಚಸಂಕಲ್ಪ್ಯಾಚಮನಂಚರೆತ್ || ೩೩ || ಯಥೊಚಿತಂತಥಾಸಿತ್ವಾಕುರ್ಯಾದಾಚ ಮನಂಬುಧಃ | ನಶಿಷ್ಟನ್ನಾಪಿಚಪ್ರ ಹ್ವೊನಾಮಂತ್ರೊನಾಸ್ಪೃರ್ಶಜಲಂ || ೩೪ || ಸ್ರಾವಪ್ರಸ್ವೇದಸಂಭೂತಿ ಷ್ವಂಗೆಷುಪ್ರಜಾ ಯತೆ | ವಿಣ್ಮೂತ್ರೊತ್ಸರ್ಜನೆಸ್ನಾನೆಭೊಜನೆಗಮನಾದಿಷು || ೩೫ || ವಕ್ತ್ರಾದಿಷುತ ದಾಸ್ರಾವಃಸ್ವೆದೊನಾಬ್ಯಾದಿದೆಶತಃ | ತಸ್ಮಾತ್ತತ್ತದ್ವಿಶೊಧ್ಯೆವಂಕರ್ತ

* * *

ನೀರುಗಳಿಂದ ಬಹಳವಾಗಿ ಯೆಲ್ಲಾ ಕಡೆಯಲ್ಲೂ ಮುಖವನ್ನು ತೊಳೆಯತಕ್ಕದ್ದು || ೩೧ || ಈ ಪ್ರಕಾರವಾಗಿ ಶರೀರದ ನವದ್ವಾರಗಳನ್ನೂ ಎಲ್ಲಾ ಕಡೆಯಲ್ಲೂ ನೀರೇ ಮೊದಲಾದವುಗಳಿಂದ ಚಂದಾಗಿ ಶುದ್ಧೀ ಮಾಡಿ, ಅನಂತರದಲ್ಲಿ ಆಚಮನದಿಂದ ಈ ವಕ್ಷ್ಯಮಾಣ ಪ್ರಕಾರವಾಗಿ ವಿಶೇಷದಿಂದ ಶುದ್ಧೀ ಮಾಡ ತಕ್ಕದ್ದು || ೩೨ || ಜಂಬೂದ್ವೀಪ ಮೊದಲಾದ ಕ್ಷೇತ್ರವನ್ನೂಮ ವಿಕ್ರಮಾರ್ಕಶಕೆ ಮೊದಲಾದ ಕಾಲವನ್ನೂ, ತನ್ನ ತ್ರಿಪೌರುಷೇಯಾದಿ ವಂಶವನ್ನೂ, ತನ್ನ ಗೋತ್ರವನ್ನೂ, ಅದೇ ರೀತಿಯಾಗಿ ತನ್ನ ಹೆಸರನ್ನೂ, ಪ್ರಾತಃಕಾಲ ಮೊದಲಾದ ಸಂಧ್ಯಾವಂದನೆಗಳನ್ನು, ಸಂಕಲ್ಪ ಮಾಡಿ ಆಚಮನವನ್ನು ಮಾಡತಕ್ಕದ್ದು || ೩೩ || ಆ ಆಚಮನ ಮಾಡುವ ಸಮಯದಲ್ಲಿ ಯಥಾ ಯೋಗ್ಯವಾಗಿ ಕೂತುಕ್ಕೊಂಡು ವಿದ್ವಾಂಸನಾದವನು ಆಚಮನವನ್ನು ಮಾಡತಕ್ಕದ್ದು. ಬಕ್ಕೊಂಡಂಥಾವನಾಗಿಯೂ, ಮಂತ್ರವನ್ನು ಹೇಳದೇ ಇರುವಂಥಾವನಾಗಿಯೂ, ನೀರನ್ನು ಮುಟ್ಟದೇಯಿರುವಂಥಾ ವನಾಗಿಯೂ, ಆಚಮನ ಮಾಡತಕ್ಕದ್ದಲ್ಲ || ೩೪ || ಮಲಮೂತ್ರಗಳ ಬಿಡುವುದರಲ್ಲಿ ಸ್ನಾನದಲ್ಲಿ ಭೋಜನದಲ್ಲಿ ಗಮನವೇ ಬದಲಾದಂಥಾವುಗಳಲ್ಲಿ ಈ ಶರೀರಗಳಲ್ಲಿ ಸುರಿಯೋದು ಬೆವರೋದು ಇವುಗಳ ಉತ್ಪತ್ತಿಯ ಆಗುತ್ತಲಿದೆ || ೩೫ || ಅಗಮನಾದಿಗಳಲ್ಲಿ ಮುಖವೇ ಮೊದಲಾದವುಗಳಲ್ಲಿ ಸುರಿಯೋಣವು, ನಾಭಿಯೇ ಮೊದಲಾದ ಪ್ರದೇಶದ್ದೆಶೆಯಿಂದ ಬೆವರೋಣವು, ಆದ್ದರಿಂದ ಅವಾವ ಪ್ರದೇಶವನ್ನು ತೊಳೆದು ಪೂರ‍್ವೋಕ್ತ ಪ್ರಕಾರವಾಗಿ ಆಚಮನ ಕ್ರಿಯೆಯು ಮಾಡತಕ್ಕದ್ದು || ೩೬ || ಈ ಪ್ರಕಾರ ಆಚಮನ ಮಾ

* * *

ವ್ಯಾಚಮನಕ್ರಿಯಾ || ೩೬ || ಎವಮಾಚಮನಂಕೃತ್ವಾನಾಮಿ ಕಾಯಾಂತತಃಕುಶಂ | ನಿಧಾಯಧೃತ್ವಾನಾ ಸಾಗ್ರಂತಯಾಚಾಂಗುಷ್ಠ ಕೆನಚ || ೩೭ || ಪ್ರಾಣಾಯಾಮಂ ತಥಾಕುರ್ಯಾತ್ಕುಂಭಪೂರಕರೆಚಕಾತ್ | ಸ್ನಾತಸ್ಥಾನಮಹೀಂಪಶ್ಷಾತ್ಕೊದಯೆದಂಬು ಶೆಚನೈಃ || ೩೮ || ತತಃಸ್ಷೃಶತ್ಕರಾಗ್ರೆಣಗಂಗಾಸಿಂಧ್ವಾದಿತೀ ರ್ಥಜಂ | ಜಲಂಮತ್ವಾಮೃತೀ ಕೃತ್ಯಸ್ನಾನಾಂಬುಪ್ರಕೃತಿಸ್ಥಿತಂ || ೩೯ || ತತೊವಗಾಹ್ಯತನ್ಮಧ್ಯೆಜಲ ಯಂತ್ರವಿಲಿಖ್ಯಚ | ದರ್ಶಯೆತ್ತತ್ರಸುರಭಿಮುದ್ರಾಂಬೀಜಾಕ್ಷರಾನ್ವಿತಾಂ || ೪೦ || ತ್ರಿವಾರಂಪಂಚಕೃ ತ್ವಾವಾತತಸ್ತತ್ರಶನೈಸ್ಮನೈಃ | ನಿಮಜ್ಜ್ಯೊಥ್ಥಾಯಚಪ್ರಾಗ್ವದಾಚಮ್ಯ ಜಲಮಾರ್ಜನಂ || ೪೧ || ಖಲ್ಯಾದಿ ವಸ್ತುನಾಪಶ್ಚಾತ್ಸಮಸ್ತಾಂಗಂನಿಘೃಷಚ | ಭೂಯಸ್ನಾಯಾತ್ತತೊವಾರಿ ಚರಾನ್‌ಜೀವಾನಬಾಧಯನ್ || ೪೨ || ಆಚಮ್ಯಪಂಚದಶಧಜಲತರ್ಪಣ

* * *

ಡಿ ಅನಂತರದಲ್ಲಿ ಅನಾಮಿಕಾಂಗುಲಿಯಲ್ಲಿ ದರ್ಭೆಯನ್ನು ಇಟ್ಟು ಆ ಆನಾಮಿಕಾಂಗುಲಿಯಿಂದಲೂ ಹೆಬ್ಬೆರಳಿನಿಂದಲೂ ಕೂಡ ಮೂಗಿನ ಕೊನೆಯನ್ನು ಹಿಡಿದುಕ್ಕೊಂಡು, ಕುಂಭಕ, ಪೂರಕ, ರೇಚಕದ್ದೆಶೆಯಿಂದ ಪ್ರಾಣಾಯಾಮವನ್ನು ಆ ಪ್ರಕಾರವಾಗಿ ಮಾಡತಕ್ಕದ್ದು. ಆನಂತರದಲ್ಲಿ ಜಲಸೇಚನೆಗಳಿಂದ ಮಜ್ಜನಸ್ಥಾನ ಭೂಮಿಯನ್ನು ಚೊಕ್ಕಟ ಮಾಡತಕ್ಕದ್ದು || ೩೭ || ಸ್ನಾನ ಮಾಡುವ ನೀರನ್ನು ಸ್ವಭಾವದಿಂದ ಇರುವಂಥಾದ್ದನ್ನಾದಾಗ್ಯೂ ಗಂಗಾ ಸಿಂಧ್ವಾದಿ ತೀರ್ಥದಲ್ಲಿ ಹುಟ್ಟಿದಂಥಾದ್ದನ್ನಾಗಿ ತಿಳಿದು ಅಮೃತಮಂತ್ರದಿಂದ ಅಮೃತವನ್ನಾಗಿ ಮಾಡಿ ಹಸ್ತಾಗ್ರದಿಂದ ಮುಟ್ಟತಕ್ಕದ್ದು || ೩೯ || ಅನಂತರದಲ್ಲಿ ಆ ಜಲಮಧ್ಯದಲ್ಲಿ ಪ್ರವೇಶಿಸಿ ಜಲಯಂತ್ರವನ್ನು ಬರದು ಬೀಜಾಕ್ಷರದೊಡನೇ ಕೂಡಿದಂಥಾ ಸುರಭಿ ಮುದ್ರೆಯನ್ನು ತೋರಿಸತಕ್ಕದ್ದು || ೪೦ || ಆ ನೀರಲ್ಲಿ ಮೂರಾವರ್ತಿ ಐದಾವರ್ತಿಯಾದರೂ ಮೆಲ್ಲಮೆಲ್ಲಿಗೆ ಮುಳುಗಿ ಮೇಲಕ್ಕೆ ಯೆದ್ದು ಮೊದಲಿನೋಪಾದಿಯಲ್ಲಿ ಆಚಮನಮಾಡಿ ಜಲಮಾರ್ಜನೆಯನ್ನು ಮಾಡಿ || ೪೧ || ಕಲ್ಕದ್ರವ್ಯವೇ ಮೊದಲಾದ ವಸ್ತುವಿನಿಂದ ಸಮಸ್ತ ಶರೀರವನ್ನು ತಿಕ್ಕಿ ನೀರಿನಲ್ಲಿ ಸಂಚರಿಸತಕ್ಕಂಥಾ ಪ್ರಾಣಿಗಳನ್ನು ಬಾಧಿಸದೆ ಇರುವಂಥಾವನಾಗಿ ಬಹಳವಾಗಿ ಸ್ನಾನ ಮಾಡತಕ್ಕದ್ದು || ೪೨ || ಆಚಮನವನ್ನು ಮಾಡಿ (೧೫) ಪ್ರಕಾರವಾಗಿ ಜಲತರ್ಪಣವನ್ನು ಮಾ

* * *

ಮಾಚರೆತ್ | ತತೊಜಲಾಜಲಾದ್ವಿನಿರ್ಗತ್ಯಪ್ರೊಕ್ಷಯೆದ್ವಸ್ತ್ರಮಾತ್ಮನಃ || ೪೩ || ಸೊಂತರೀ ಯಂತತೊವಸ್ತ್ರ ಮಂತರೀಯಂಚಧಾರಯೆತ್ | ಅಂತರೀಯಂತದೆತಚ್ಚ ಚತುಷ್ಕೊಣಯುತಂಮತಂ || ೪೪ || ಷಡ್ವಿತಸ್ತಿವಿಶಾಲಂಸ್ಯಾದಥವಾಪಂಚ ವಿಸ್ತೃತಂ | ಶುಭ್ರಂಶ್ಲಕ್ಷ್ಣಂಘೆ ನಂಸ್ನಿಗ್ಧಂದೃಡಂತಚ್ಛಿದ್ರವರ್ಜಿತಂ || ೪೫ || ಪುರಕೊಣದ್ವಯಂ ಲಂಬಯಿತ್ವಾತೆನೈವವಾಸಸಾ | ಕಟಿಮಾವೇಷ್ಟ್ಯತದ್ವಾ ಮೇಧೃಡಮಾಸಜ್ಯ ಪಾರ್ಶ್ವಗೆ || ೪೬ || ಕೊಣದ್ವಯಂ ಸಮಾಧೃತ್ಯಪುರಆಸಜ್ಜ್ಯ ಲಂಬಯೆತ್ | ಶೆಷಕೊಣದ್ವಯಂ ಪೃಷ್ಠೆ ಕಚ್ಛಾರೂಪೆಣಸಂಜಯೆತ್ || ೪೭ || ಲಂನನಂಸ್ಯಾದಾನಳಕಮಥವಾಜಂಘಕಂಭವತ್ | ಆಜಾನುಕಂ ವಾತಸೈವ ಮಂತರೀಯಸ್ಯಧಾರಣಂ || ೪೮ || ಅಕಚ್ಛಂಪುಚ್ಛಕಚ್ಛಂಚದ್ವಿ

* * *

ಡತಕ್ಕದ್ದು. ಅನಂತರ ನೀರಿನ ದೆಶೆಯಿಂದ ಹೊರಟು ತನ್ನ ವಸ್ತ್ರವನ್ನು ಶೇಚನೆ ಮಾಡತಕ್ಕದ್ದು || ೪೩ || ಅನಂತರದಲ್ಲಿ ಬಹಿರ್ವಾಸದೊಡನೇ ಕೂಡಿದಂಥಾ ವಸ್ತ್ರವನ್ನು, ವುಟ್ಟುಗೊಳು ಧೋತ್ರವನ್ನು ಕೂಡ ಧರಿಸತಕ್ಕದ್ದು. ಆ ಈಉಟ್ಟುಗೊಳು ಧೋತ್ರವಾದರೋ ನಾಲ್ಕು ಮೂಲೆಯೊಡನೇ ಕೂಡದಂಥಾದ್ದಾಗಿ ಸಂಮತವಾ ದಂಥಾದ್ದು || ೪೪ || ಅ ಬಟ್ಟೆಯು ಆರುಗೇಣು ಆಗಲ ಉಳ್ಳಂಥಾದ್ದಾಗಿಯು, ಹಾಗಲ್ಲದೇ ಹೋದರೆ ಐದುಗೇಣು ಅಗಲ ಉಳ್ಳಂಥಾದ್ದಾಗಿಯು, ಬಿಳುಪಾಗಿಯೂ, ನುಣಪಾಗಿಯೂ, ಮಿಂಚಾಗಿಯೂ, ಘಟ್ಟಿಯಾಗಿಯೂ, ತೂತುಗಳಿಂದ ಬಿಡಲ್ಪಟ್ಟಂಥಾದ್ದಾಗಿಯೂ, ಆಗುತ್ತೆ || ೪೫ || ಮುಂದಗಡೆಯಲ್ಲಿ ಕೊನೆಗಳ ಎರಡನ್ನು ಜೋಲುಬಿಟ್ಟು ಅದೇ ವಸ್ತ್ರದಿಂದ ನಡುವನ್ನು ಸುತ್ತಿ ಅದರ ಎಡಗಡಯಾದಂಥಾ ಪಾರ್ಶ್ವದಲ್ಲಿ ದೃಢವಾಗಿಸಿಕ್ಕಿ ಎರಡ ಕೊನೆಗಳನ್ನು ತೆಗೆದುಕ್ಕೊಂಡು ಮುಂದುಗಡೆಯಲ್ಲಿ ಶಿಕ್ಕಿಸಿ ಜೋಲುಬಿಡತಕ್ಕದ್ದು ಉಳಿದ ಎರಡು ಕೊನೆಗಳನ್ನೂ, ಹಿಂಭಾಗದಲ್ಲಿ ಕಚ್ಛಾರೂಪದಿಂದ ಸೇರಿಸತಕ್ಕದ್ದು || ೪೭ || ಧೋತ್ರಜೋ ಲೋಣವು ಕಾಲು ಹರಡೆ ಪರ್ಯಂತರದಲ್ಲೂ ಆಗುತ್ತಲಿದೆ, ಹಾಗಲ್ಲದೇ ಹೋದರೆ, ಮಣಕಾಲು ಪರ್ಯಂತರದಲ್ಲೂ ಆಗುತ್ತೆ. ಹಾಗಲ್ಲದೇ ಹೋದರೆ ಮಂಡೀಪರ್ಯಂತರದಲ್ಲಿ ಆಗುತ್ತೆ. ಈ ಪ್ರಕಾರವಾಗಿ ಆ ಉಟ್ಟುಗೊಳುವುಧೋ ತ್ರದಧಾರಣೆಯೂ || ೪೮ || ಬ್ರಾಹ್ಮಣನು ಕಚ್ಚೆಯಿಲ್ಲದೇಯಿರುವುದು

* * *

ಕಚ್ಛಂಕಟಿವೆಷ್ಟನಂ | ಆಗುಪ್ತಜಾನ್ವಧೌತಂಚನಾಂತರೀಯಂಧರೆದ್ದ್ವಿಜಃ || ೪೯ || ಅಜಾನುಕಂಕ್ಷತ್ರಿಯಾ ಣಾಂಶಸ್ತ್ರಸಂಧಾರಣೆಮತಂ | ಕಟಿವೆಚ್ಟ್ಯಂಚ ಬಾಹ್ಯಾಳವ್ಯಾಯಾ ಮಾದಿಷುವಾಭವೆತ್ || ೫೦ || ಉತ್ತರೀಯಂಶುಕಸ್ಯಾಪಿ ವಿಸಾರಃಪುರ್ವ್ವವನ್ಮತಃ | ದಕ್ಷಿಣಂಪಾರ್ಶ್ವಮಾಚ್ಛಾದ್ಯತದ್ವಾಮಾಂಶೇವಿ ಧೇಯತೆ || ೫೧ || ವಾಮಾಂಸಾಚಪುರಃ ಪೃಷ್ಟಲಂಬಸ್ಯಾತ್ತದ್ಯಥೊಚಿತಂ | ಎವಂವಸ್ತ್ರದ್ವಯಂಧೃತ್ವಾಕರ್ಯ್ಯಾ ತ್ಕರ್ಮ್ಮಾಣಿಸರ್ವದಾ || ೫೨ || ಷಡಗ್ಘಾರ್ಯಾನ್ಯಥವಾತ್ರೀಣಿಸಮುದ್ಧಾರ್ಯ್ಯತತಸ್ಸುದೀಃ | ಪದ್ಮಾಸನಾದಿಸು ಸ್ಥಾನೆನೋಪವಿಶ್ಯಕುಶಾದಿಷು || ೫೩ || ಅಥವಾಮೆನಿಜೊತ್ಸಂಗಮ ಧ್ಯದೇಶೆಸುನಿಶ್ಚಲಂ | ಜ್ಞಾನಮು ದ್ರಾಂಕಿತೊತ್ತಾನವಾಮಸ್ತಂನಿವೇಶಯೆತ್ || ೫೪ || ದಕ್ಷಿಣಾಭ್ಯಾಂತ

* * *

ಹಿಂದೆ ಬಾಲದಂತೆ ಬಿಡುವ ಕಚ್ಚೆಯು, ಎರಡು ಕಚ್ಚೆಯು ನಡುವಿಗೆ ಸುತ್ತೋಣವೂ, ಮಂಡಿಯನ್ನು ಮರಮಾಡಲ್ಪಡದ ಕಚ್ಚೆಯು, ಉಳ್ಳ ಉಟ್ಟುಗೊಳುವ ಧೋತ್ರಧರಿಸಕೂಡದು || ೪೯ || ಕ್ಷತ್ರಿಯರುಗಳಿಗೆ ಶಸ್ತ್ರಸಂಧಾರಣೆ ಮಾಡುವಾಗ್ಗೆ ಮಂಡೀಪರ್ಯಂತರ ಉಟ್ಟುಗೊಪಳು ಧೋತ್ರ ಇರೋಣವು ಸಂಮತವು, ನಡುವಿಗೆ ಸುತ್ತುವ ಅಂತರೀಯವುಸಾದಕ ಮುಂತಾದವುಗಳಲ್ಲಿ ಯಾದಾಗ್ಯು ಆಗುತ್ತೆ || ೫೦ || ಹೊದ್ದುಕೊಳ್ಳು ಧೋತ್ರವೂ ಕೂಡ ಪೂರ‍್ವದೋಪಾದಿಯಲ್ಲಿ ಸಂಮತವಾದಂಥಾದ್ದು. ಆ ಬಹಿರ್ವಾಸವು ಬಲದ ಭಾಗವನ್ನು ಮುಚ್ಚಿ ಎಡದ ಹೆಗಲಲ್ಲಿ ಮಾಡಲ್ಪಡುತಲಿಧೆ || ೫೧ || ಎಡದ ಹೆಗಲಿನದೆಶೆಯಿಂದ ಮುಂದಗಡೆಯಲ್ಲೂ, ಹಿಂದಗಡೆಯಲ್ಲೂ, ಜೋಲೋಣವಾಗುತ್ತಿದೆ. ಈ ಪ್ರಕಾರವಾಗಿ ಯಥಾಯೋಗ್ಯವಾದಂಥಾ ಆ ಎರಡು ಬಟ್ಟೆಗಳನ್ನು ಧರಿಸಿ ಸಮಸ್ತ ಕಾಲದಲ್ಲಿಯೂ ಕರ್ಮಗಳನ್ನು ಮಾಡತಕ್ಕದ್ದು || ೫೧ || ಆರು ಅರ್ಘ್ಯೆವನ್ನು ಅಥವಾ ಮೂರು ಅರ್ಘ್ಯೆವನ್ನು ಮೇಲಕ್ಕೆ ಯೆತ್ತಿ ಅನಂತರದಲ್ಲಿ ಒಳ್ಳೇ ಬುದ್ಧಿಯುಳ್ಳಂಥಾವನಾಗಿ, ಧರ್ಭಾಸನವೇ ಮೊದಲಾ ದಂಥಾವುಗಳಲ್ಲಿ ಪದ್ಮಾಸನ ಮೊದಲಾದ ಒಳ್ಳೇ ಸ್ಥಾನದಿಂದ ಕೂತುಕ್ಕೊಂಡು ಅನಂತರದಲ್ಲಿ ಎಡಗಡೇ ದಾದ ತನ್ನ ತೊಡೆಯ ಮಧ್ಯಪ್ರದೇಶದಲ್ಲಿ ಚಂಚಲವಿಲ್ಲದೇ ಇರೋಣ ಹ್ಯಾಗೋ ಹಾಗೆ ಜ್ಞಾನಮುದ್ರೆಯಿಂದ ಕೂಡಿದಂಥಾ ಎಡಗೈಯ್ಯನ್ನು ಮೇಲುಮುಖ ನಾಗಿ ಇಡತಕ್ಕದ್ದು || ೫೩ ||

* * *

ತೊಂಗುಷ್ಠತರ್ಜ್ಜನೀಭ್ಯಾಂಸುನಿಶ್ಚಲಂ | ಸ್ಪಾಟಿಕಾದ್ಯಕ್ಷಮಾಲಾಂ ಚಧರೆದವ್ಯಗ್ರ ಮಾನಸಃ || ೫೫ || ಬೃಹತ್ಟಂಚನಮಸ್ಕಾರ ಮುಂತ್ರಾನಷ್ಟೊತ್ತರಂಶತಂ | ಜಪೆದಷ್ಟಾವಿಂ ಶತಿಂವಾದ್ವಿದ್ವೈಕಪದವಿಶ್ರಮಃ || ೫೬ || ಸಮುತ್ಥಾಯತೊದೀಮಾನ್‌ನಿಜ ಹಸ್ತಾಂಬುಜದ್ವಯಂ || ಮುಕಲೀಕೃತ್ಯಶಕ್ರಾನಿಚ್ಮಿಖಸ್ತಾನ್ ಪ್ರಸಾದಯೆತ್ || ೫೭ || ಸಂಧ್ಯಾಯಾವಂದನಾಕರ್ಮ್ಮನಿರ‍್ವತ್ತ್ಯೈವಮತಂದ್ರಿತಃ | ತತೊಪ್ಯುಪ ವಿಶೆತ್ತತ್ರಶಿಷ್ಟಾ ಮಾಚರಿತುಂಕ್ರಿಯಾಂ || ೫೮ || ಆಶೌಚಾಂತೆಚರೊಗಾಂತೆ ಶಬಾನುಗಮನೆತಥಾ | ಚಂಡಾಲಸೂತಕಾ ದೀನಾಂಸ್ಪರ್ಶನೆ ಪೈವಮಾಚರೆತ್ || ೫೯ || ಅಥಮಧ್ಯಾಹ್ನ ಸಾಯಾಹ್ನ ಸಂಧ್ಯಯೊಸ್ಸ್ನಾನತರ್ಪಣೆ | ತ್ಯಕ್ತ್ವಾಶೆಷವಿಧಿಸ್ಸಮ್ಯಗ್ವಿಧೆಯೊದ್ವಿಜಸತ್ತಮೈಃ || ೬೦ || ಪ್ರಾತಸ್ಸಂಧ್ಯಾಮುಪಾ ಶೀತಸೂರ್ಯ್ಯ

* * *

ಅನಂತರದಲ್ಲಿ ಬಲದ ಹೆಬ್ಬೆಟ್ಟು ತರ್ಜನಿಗಳಿಂದ ಅತ್ಯಂತನಿರ‍್ಮಲವಾದಂಥ ಸ್ಟಟಿಕ ಮುಂತಾದ ಜಪಸ್ಸರವನ್ನು ತ್ವರೆಯಿಲ್ಲದ ಮನಸ್ಸು ಉಳ್ಳಂಥಾವನಾಗಿದರಿಸ ತಕ್ಕದ್ದು || ೫೫ || ಎರಡುಪದ, ಎರಡುಪದ, ಒಂದುಪದ ಇವುಗಳಲ್ಲಿ ವಿಶ್ರಾಮವುಳ್ಳಂಥಾವನಾಗಿ, ಬೃಹತ್ಪಂಚ ನಮಸ್ಕಾರ ಮಂತ್ರಗಳನ್ನು (೧೦೮) ಗಳನ್ನಾದಾಗ್ಯು (೨೮) ಗಳನ್ನಾದಾಗ್ಯು ಜಪಿಸತಕ್ಕದ್ದು || ೫೫ || ಅನಂತರದಲ್ಲಿ ಬುದ್ಧಿಯುಳ್ಳಂಥಾವನಾಗಿ ಯೆದ್ದು ತಂನ ಕರಕಮಲಗಳೆರಡನ್ನು ಮುಗಿದು ಪೂರ್ವವೇ ಮೊದಲಾ ದಿಗ್ಮುಖವುಳ್ಳಂಥಾವನಾಗಿ ಆ ಅಥ್ಟದಿಕ್ಪಾಲಕರನ್ನು ಅನುಗ್ರಹ ಪ್ರಸನ್ನರನ್ನಾಗಿ ಮಾಡತಕ್ಕದ್ದು || ೫೬ || ಈ ಪ್ರಕಾರವಾಗಿ ತೂಕಡಿಕೆಯಿಲ್ಲದೇ ಇರುವನಾಗಿ ಸಂಧ್ಯಾಕಾಲದ ನಮಸ್ಕಾರದ ಕ್ರಿಯೆಯನ್ನು ಪೂರ್ತಿ ಮಾಡಿ ಅನಂತರದಲ್ಲಿ ಶಿಷ್ಟಾಚಾರ ಕರ್ಮವನ್ನು ಮಾಡುವುದಕ್ಕೋಸ್ಕರ ಅಲ್ಲಿ ಕೂತುಕ್ಕೊಳ್ಳ ತಕ್ಕದ್ದು || ೫೭ || ಅ ಶೌಚದ ಕೊನೆಯಲ್ಲೂ, ರೋಗನಾಶದ ಕೊನೆಯಲ್ಲೂ, ಶಬ್ದವನ್ನು ಅನುಸರಿಸಿ ಹೋದಾಗಲೂ, ಆ ಪ್ರಕಾರವಾಗಿ ಹೊಲೆಯ, ಪ್ರಸೂತಿಕಾ ಮೊದಲಾದವರ ಮುಟ್ಟೋಣದರಲ್ಲಿಯೂ, ಕೂಡ ಈ ಪ್ರಕಾರವಾಗಿ ಮಾಡ ತಕ್ಕದ್ದು || ೫೯ || ಅನಂತರ ಮಧ್ಯಾಹ್ನ ಸಾಯಾಹ್ನ ಎರಡು ಸಂಧ್ಯಾಕಾಲಗಳಲ್ಲಿಯೂ ಸ್ನಾತತರ್ಪಣಗಳನ್ನು ಬಿಟ್ಟು ಉಳಿದ ಅನುಷ್ಠಾನವು ಬ್ರಾಹ್ಮಣ ಶ್ರೇಷ್ಠರುಗಳಿಂದ ಚಂದಾಗಿ ಮಾಡುವುದಕ್ಕೆ ಯೋಗ್ಯವಾದದ್ದು || ೬೦ || ಸೀರ್ಯಬಿಂಬೋದಯವೆ ಕೊನೆಯಾಗೋಣ ಹ್ಯಾ

* * *

ಬಿಂಬೊದೆಯಾವಧಿ | ಸಾಯಾಮಾತಾರಕಾಲೊಕಾತ್ ಮಧ್ಯಸಂಧ್ಯಾಂಯಧೊಚಿತಂ || ೬೧ || ಯದ್ವಾತದೂರ್ಧ್ವಂಘಟಕಾದ ಯಾವಧಿಸಮಚರೆತ್ | ಕಾಲಸ್ಯಾತಿಕ್ರಮೆ ತಸ್ಮಾಲ್ಲೌಕಿಕಾದೆರ್ವ್ವಿರೊಧನಂ || ೬೨ || ಭಾನುಬಿಂಬ ಮದೃಷ್ಟ್ವೈವಪ್ರಾರಭೆತಪ್ರಭಾತಕೆ | ಸ್ವಾಯಮದೃಷ್ಟ್ವೈವತದ್ಬಿಂಬಂಸಂಧ್ಯಾಯಾಂಸೆವನಂದ್ವಿಜಃ || ೬೩ || ಗತ್ವಾದೆವಗೃಹೆತತ್ರ ಗೃಹಾದೀಶಾನದಿಕ್ಕೃತೆ | ಸಮಂತಾನ್ಮಾರ್ಜಿತೆಪೂವ್ವಂ ದೀಪಧೂಪಾದಿಸಂಸ್ಕೃತೆ || ೬೪ || ಗೆಹಿನ್ಯಾಸ್ನಾತಯಾ ಧೌತವಸ್ತ್ರಾಲಂಕಾರಯುಕ್ತಯಾ | ಸಂಪಾದಿತಾಭಿಷೇಕಾ ರ್ಚಾಹೊಮಯೊಗ್ಯಸುಮಸ್ತುನಿ || ೬೫ || ಕ್ಷಾಳಿತಾಂಣಘ್ರಿಃಪರೀತ್ಯತ್ರಿಃ ಪ್ರವಿಶ್ಯಾಭ್ಯಂ ತರಂಶನೈಃ | ಸಾಷ್ಟಾಂಗಾದಿವಿಧಾನೆನಜಿನಂನತ್ಪಾಕೃತಸ್ಥಿತಿಃ || ೬೬ || ಈರ್ಯಾಪಥ ಸ್ಯಸಂಶುದ್ಧಿಂಕು

* * *

ಗೋ ಹಾಗೆ ಪ್ರಾತಃಸಂಧ್ಯಯನ್ನು, ನಕ್ಷತ್ರದರ್ಶನ ಪರ್ಯಂತರದಲ್ಲೂ ಸಾಯಂ ಸಂಧ್ಯಯನ್ನು, ಯಥಾ ಯೋಗ್ಯವಾಗಿ ಮಧ್ಯ ಸಂಧ್ಯಯನ್ನೂ ಉಪಾಸನೆ ಮಾಡ ತಕ್ಕದ್ದು || ೬೧ || ಹ್ಯಾಗಾದಾಗ್ಯು ಆಸಂಧ್ಯಾ ಕಾಲದ ಮೇಲೆ ಎರಡು ಘಳಿಗೆ ಅವಧಿಯಾಗೋಣ ಹ್ಯಾಗೋ ಹಾಗೆ ಮಾಡತಕ್ಕದ್ದು. ಕಾಲದ ಅತಿಕ್ರಮವಾಗುತ್ತಿರಲಾಗಿ ಆ ಲೌಕೀಕಾದಿಗಳಿಗೆ ವಿರೋಧವು ಆಗುತ್ತೆ. || ೬೨ || ಬ್ರಾಹ್ಮಣನು ಸೂರ್ಯ ಬಿಂಬವನ್ನು ನೋಡದೇನೆ ಪ್ರಾತಃಕಾಲದಲ್ಲಿ, ಸೂರ್ಯಬಿಂಬವನ್ನು ನೋಡುತ್ತಲೇ ಸಾಯಂಸಂಧ್ಯಯಲ್ಲಿ ವಂದನೆಯನ್ನು ಉಪಕ್ರಮಿಸತಕ್ಕದ್ದು || ೬೩ || ಮನೇದೆಶೆಯಿಂದ ಈಶಾನ ದಿಕ್ಕಿನಲ್ಲಿ ಮಾಡಲ್ಪಟ್ಟಂಥಮ ಎಲ್ಲಾ ಕಡೆಯಲ್ಲಿ ಗುಡಿಸಲ್ಪಟ್ಟಂಥ, ಮೊದಲೇ ದೀಪಧೂಪಾದಿಗಳಿಂದ ಸಂಸ್ಕರಿಸಲ್ಪಟ್ಟಂಥಾ, ಸ್ನಾನ ಮಾಡಿದಂಥ, ಒಗೆದ ಬಟ್ಟೆ ಅಲಂಕಾರ ಇವುಗಳಿಂದ ಕೂಡಿದಂಥ, ಮನೇ ಹೆಂಗಸಿನಿಂದ ಉಂಟು ಮಾಡಲ್ಪ ಟ್ಟಂಥ, ಅಭಿಷೇಕ, ಅರ್ಚನೆ, ಹೋಮ, ಇವುಗಳಿಗೆ ಯೋಗ್ಯವಾದಂಥ ವಳ್ಳೇ ವಸ್ತುಗಳುಳ್ಳಂಥ, ದೇವಾಲಯದಲ್ಲಿ, ತೊಳೆಯಲ್ಪಟ್ಟ ಕಾಲುಉಳ್ಳವನಾಗಿ, ಮೂರಾವರ್ತಿ ಪ್ರದಕ್ಷಿಣೆಮಾಡಿ, ನಿಂತುಕ್ಕೊಂಡವನಾಗಿ, ಈರ್ಯಾಪಥಶುದ್ದಿಯನ್ನು ಏಕಾಗ್ರಚಿತ್ತನಾಗಿ ಮಾಡತಕ್ಕದ್ದು. ಮುಖ ಒಸ್ತ್ರವನ್ನು ತೆಗೆದು ಜಿನಚಂದ್ರನನ್ನು ನೋಡಿ ಬದಲಾಗಿ ಅದೇ ರೀತಿಯಾಗಿ ನಮಸ್ಕರಿಸಿ ಯಾಗಭೂಮಿಯನ್ನು ಪ್ರವೇಶ ಮಾಡಿ ಅನಂತರದಲ್ಲಿ ವಾದ್ಯಘೋ

* * *

ರ್ಯಾದೆಕಾಯನೊಭವನ್ | ಮುಖವಸ್ತ್ರಂಸಮುದ್ಘಾಟ್ಯಜಿನಚಂದ್ರಂವಿಲೊಕ್ಯಚ || ೬೭ || ಪುನಸ್ತಥಾನ ಮಸ್ಕೃತ್ಯಯಾಗ ಭೂಮಿಂಪ್ರವಿಶ್ಯಚ | ಕೂರ್ಯಾತ್ಪುಷ್ಟಾಂಜಲಿಂ ಪಶ್ಚಾದ್ವಾದ್ಯ ಘೊಷಪುರಸ್ಸರಂ || ೬೮ || ತತೊಜಿವನ ದಾಭ್ಯರ್ಚಾಪೂತಗಂಧಾ ನುಲೆಪನಂ | ಯಜ್ಞಸೂತ್ರಂಸೊತ್ತರೀಯಂಭೂಷಣಂಚಧರೆತ್ತಥಾ || ೬೯ || ಅರ್ಧಚಂದ್ರಾತಪತ್ರಾಂಘ್ರಿಪೀಠಚಕ್ರಂತಥೈವಚ | ತಿಲಕಂಚೆತಿಷೊಢಾಸ್ಯಾಚ್ವಂದನೆನ ಪ್ರಲೆಪನಂ || ೭೦ || ಅರ್ಧಚಂದ್ರಮಸಾಪಾಂಡುಶಿಲಾಸಂಕಲ್ಪ್ಯತೆತಥಾ | ಯಪೂತಾತೀರ್ಥಕೃಜ್ಜನ್ಮಮಜ್ಜನಾಂಭೊಭಿರುಚ್ಚಕೈಃ || ೭೧ || ಆತಪತ್ರಂಜಿನೆಂದ್ರಾ ಣಾಂಛತ್ರತ್ರಯಮಿತಿಸ್ಮೃತಂ | ಅಂಘ್ರಿಸ್ತುಮಾನಸ್ತಂಭ ಸ್ಯಪೀಠಂಸಿಂಹಾಸನಂಮತಂ || ೭೨ || ಚಕ್ರಂತು ಧರ್ಮಚಕ್ರಂಸ್ಯಾತ್ತಿಲಕಂತು

* * *

ಷಣೆ ಮೊದಲಾಗೋಣ ಹ್ಯಾಗೋ ಹಾಗೇ ಪುಷ್ಪಾಂಜಲಿಯನ್ನು ಮಾಡತಕ್ಕದ್ದು || ೬೮ || ಅನಂತರದಲ್ಲಿ ಜಿನೇಶ್ವರನ ಪಾದಾರ್ಚನೆಯಿಂದ ಪವಿತ್ರವಾದಂಥ, ಗಂಧಾನುಲೇಪನೆಯನ್ನು, ಯಜ್ಞೋಪವೀತವನ್ನೂ, ಬಹಿರ್ವಾಸ ದೊಡನೇ ಕೂಡಿದಂಥ ಆ ಭರಣವನ್ನೂ, ಕೂಡ ಆ ಪ್ರಕಾರವಾಗಿ ಧರಿಸತಕ್ಕದ್ದು || ೬೯ || ಅರ್ಧಚಂದ್ರ, ಛತ್ರ, ಪಾದ ಪೀಠ, ಚಕ್ರ, ಅದೇ ಪ್ರಕಾರವಾಗಿ, ತಿಲಕ, ಹೀಗಿಂತೆಂದು ಗಂಧದಿಂದ ಲೇಪನವು ಆರು ಪ್ರಕಾರವಾಗಿ ಆಗುತ್ತಿದೆ. || ೭೦ || ಅರ್ಧಚಂದ್ರದಿಂದ, ತೀರ್ತ್ಥಕರಜನ್ಮಾಭಿಷೇಕ ಜಲಗಳಿಂದ ಯಾವಪಾಂಡುಕಶಿಲೆಯು ಅತ್ಯಂತವಾಗಿ ಪವಿತ್ರವಾದಂಥದ್ದೋ, ಆ ಪಾಂಡುಕ ಶಿಲೆಯು ಸಂಕಲ್ಪಿಸಲ್ಪಡುತ್ತಿದೆ || ೭೧ || ಛತ್ರವು, ಜಿನೇಶ್ವರರುಗಳ ಛತ್ರತ್ರಯವಿಂತೆಂದು ಸ್ಮರಿಸಲ್ಪಟ್ಟಿತು. ಆಪಾದವು, ಮಾನಸ್ತಂಭವಾಗುತ್ತೆ. ಪೀಠವು, ಸಿಂಹಾಸನವಾಗಿ ಸಮ್ಮತವಾದದ್ದು || ೭೨ || ಚಕ್ರವಾದರೋ ಧರ್ಮಚಕ್ರವಾಗುತ್ತೆ. ತಿಲಕವಾದರೋ ಆ ಚಕ್ರದ ಸ್ವಲ್ಪಭಾಗವು. ಈ ಪ್ರಕಾರವಾಗಿ ಆರು ವಿಧವಾದಂಥ, ಗಂಧಾನುಲೇಪನೆಯು ಮೊದಲಲ್ಲಿ ಹಣೆಯಲ್ಲಿ ಯಥಾಯೋಗ್ಯವಾಗಿ ಧರಿಸುವುದಕ್ಕೆ ಯೋಗ್ಯವಾದಂಥಾದ್ದು || ೭೩ || ಯಾವ ಸಮಯದಲ್ಲಿ ಹಣೆಯಲ್ಲಿ ಅರ್ಧಚಂದ್ರವು, ಅತಪತ್ರವು, ಮಾಡಲ್ಪಟ್ಟಿತೋ ಆ ಸಮಯದಲ್ಲಿ ಭುಜಗಳಲ್ಲಿಯೂ ಕಂಠಪ್ರದೇಶದಲ್ಲಿಯೂ ಎದೆಯಲ್ಲೂ ಕೂಡತ್ರಿಪುಂಡ್ರವು || ೭೪ || ಪಾದವೂ ಪೀಠವೂ ಕೂಡ

* * *

ತದಲ್ಪಕಂ | ಇತ್ಯೆವಷಡ್ವಿಧಂಧಾರ‍್ಯಂಪೂರ್ವಂಫಾಲೆಯಧೊಚಿತಂ || ೭೩ || ಅರ್ಧೆಂದು ರಾತಪತ್ರಂವಾ ಯದಾಫಾಲೆಕೃತಂತದಾ | ಭುಜಯೊಃಕಂಥದೆಶೆಚವಕ್ಷಸ್ಕೆಚತ್ರಿ ಪುಂಡಕಂ | ೭೪ | ಅಂಘ್ರಿಶ್ಚವಿಷ್ಟರಂಚಾಪಿಲಲಾಟೆಸಂಧೃತಂಯದಾ | ತದಾಭುಜಾ ದೌಸ್ವಾಕಾರತ್ರಿಪುಂಡ್ರಮಮಥವಾಭವೆತ್ || ೭೫ || ಯದಾಚಕ್ರದ್ವಯಂಫಾಲೆತದಾ ಹ್ಯೆಕಾಪ್ರಶಶ್ಯತೆ | ಭುಜಾದಿಷುತ ದಾಕಾರಸ್ಸರ್ವ್ವಾಂಗಾಲೇಪನಂತುವಾ || ೭೬ || ಭುಜಾದಾವಥ ವತತ್ರಯೋಗ್ಯಸರ್ವಾಂಗಲೆಪನಂ | ತದೂಧ್ವಂಚಭುಜದೌಚತ್ರಿಪುಂ ಡ್ರಾದಿವುಲಖ್ಯತೆ || ೭೭ || ಪ್ರಾಗ್ದ್ವಯಂತಿರ್ಯಗೆವಶ್ಯಾದೂರ್ಧ್ವ ಗಂಮಧ್ಯಯುಗ್ಮಕಂ | ಚರಮದ್ವಿತ ಯುವೃತ್ತಂ ವಿಶಾಲಾಲ್ಪಪ್ರಭೆದತಃ || ೭೮ || ಅಂಘ್ರಿದೆ ಕಾಂಗುಲವ್ಯಾಸೊದ್ವ್ಯಂಗುಲೊಪ್ಯಥವಾಭವೆತ್ | ವಿಷ್ಟರಂತ್ರ್ಯಂ ಗುಲಂತ ತ್ರಚತುರಂಗುಲಮೆವವಾ || ೭೯ || ಕೆಶಾಂತಾಚಭೃವೊರ್ಮ್ಮ ಧ್ಯಾದಂಘ್ರಿವಿಷ್ಟರ ದೀರ್ಗ್ಘತಾ | ತನ್ಮಧ್ಯೆಚಕ್ರವೃ

* * *

ಯಾವ ಸಮಯದಲ್ಲಿ ಹಣೆಯಲ್ಲಿ ಧರಿಸಲ್ಪಟ್ಟಿತೋ ಆ ಸಮಯದಲ್ಲಿ ಅದೇ ಆಕಾರವು ಹಾಗಲ್ಲದೆ ಹೋದರೆ ತ್ರಿಪುಂಡ್ರವೂ ಆಗುತ್ತಿದೆ || ೭೫ || ಯಾವ ಸಮಯದಲ್ಲಿ ಹಣೆಯಲ್ಲಿ, ಪೂರ್ಣಚಕ್ರ, ತಿಲಕ, ಎಂಬ ಎರಡು ಚಕ್ರವೋ, ಆ ಸಮಯದಲ್ಲಿ ಭುಜಾದಿಗಳಲ್ಲಿ ಅದೇ ಆಕಾರವಾದಂಥ ಒಂದು ಪ್ರಶಸ್ತವಾಗುತ್ತಿದೆ. ಹಾಗಲ್ಲದೆ ಹೋದರೆ ಸರ್ವಾಂಗಲೇಪನವು || ೭೬ || ಭುಜವೇ ಮೊದಲಾಧಂಥಾದ್ದರಲ್ಲಿ ಹಾಗಲ್ಲದೇಹೋದರೆ ಅಲ್ಲಿ ಯೋಗ್ಯವಾದಂಥ ಸರ್ವಾಂಗಲೇಪನವು, ಅದರ ಮೇಲುಗಡೆಯಲ್ಲಿ ಭುಜ ಮೊದಲಾದ್ದರಲ್ಲಿ ತ್ರಿಂಪುಂಡ್ರಾದಿಯು ಬರೆಯಲ್ಪ ಡುತ್ತಿದೆ || ೭೭ || ವಿಸ್ತಾರವು, ಸ್ವಲ್ಪವು ಎಂಬ ಭೇದದ್ದೆಶೆಯಿಂದ, ಅರ್ದ್ಧೇಂದು, ಆತಪತ್ರ, ಎಂಬ ಮೊದಲು ಎರಡು ಅಡ್ಡಲಾಗಿಯೇ ಆಗುತ್ತಿದೆ. ಪಾದ, ಪೀಠ, ಎಂಬ ಮದ್ಯದ ಎರಡು, ಮೇಲು ಮುಖವಾದಂಥಾದ್ದು, ಚಕ್ರ, ತಿಲಕ, ಎಂಬಕಡೇ ಎರಡು ಬಟುವದಂಥದ್ದು || ೭೮ || ಪಾದವು ಒಂದು ಬೆಟ್ಟು ಅಗಲವುಳ್ಳಂಥಾದ್ದು. ಅಥವಾ ಎರಡು ಬೆಟ್ಟು ಅಗಲವುಳ್ಳಂಥಾದ್ದು. ಪೀಠವು ಮೂರು ಬೆಟ್ಟು ಅಗಲವುಳ್ಳಂಥಾದ್ದು. ಆ ಪೀಠದಲ್ಲಿ ನಾಲ್ಕು ಬೆಟ್ಟು ಅಗಲವಾದರೂ ಆಗುತ್ತೆ || ೭೯ || ಹುಬ್ಬಿನಮಧ್ಯದ್ದೆಶೆಯಿಂದ ಕೂದಲ ಕೊನೆಯವರಿಗೂ, ಪಾದ, ಪೀಠಗಳ ದೀರ್ಘಾಭಾವವು ಆಗುತ್ತಿದೆ. ಅದರ ಮಧ್ಯ

* * *

ತ್ತತ್ವಂಪರಂದ್ವೈಕಾಂಗುಲಂಭವೆತ್ || ೮೦ || ಪ್ರಾಗ್ದ್ವಯಂತುಯಥಾಶೊಭಂ ಕರ್ತವ್ಯಂನಿರ್ವ್ವಿಕಾರಕಂ | ಭಾಲಸ್ಥಾದಪಿಸರ್ವ್ವ ತ್ರಭುಜಾದೌಸ್ವಲ್ಪಮಿಷ್ಯತೆ || ೮೧ || ಅರ್ದ್ಧಂದುರಾತಪತ್ರಂವಾಕ್ಷತ್ರಿಯಸ್ಯ ಪಿಸಮ್ಮತಂ | ಆತಪತ್ರಾಂಘ್ರಿಪೀಠ್ಯಶ್ಚ ಬ್ರಾಹ್ಮಣಸ್ಯಪ್ರಕೀರ್ತಿತಾಃ || ೮೨ || ಆತಪತ್ರಂತಧೈವಾಂಘ್ರಿರಿತ್ಯೆವದ್ವಿತಯಂವಿಶಾಂ | ಸಚ್ಛೂದ್ರಸ್ಯಭವೆಚ್ಚಕ್ರಂಪರಸ್ಯತಿಲಕಂಭವೆತ್ || ೮೩ || ತ್ರಿವರ್ಣಯೊಷಿತಾಂಫಾಲೆ ಪ್ರಾಗುಕ್ತದ್ವಯಮಲ್ಪಕಂ | ತಿರ್ಯ್ಯಕ್ಕೃತೊತ ದಂಘ್ರಿಸ್ಯಾದನ್ಯಾಸಾಂತಿಲಕಂಬವೆತ್ || ೮೪ || ಚಂದನಾಲೆಪನ ರ್ಸ್ಯ್ವೊಂಮಧ್ಯೆಫಾಲಂಧರೆದ್ದ್ವಿಜಃ | ಅಂಗುಲಾಗ್ರಮಿತೆದೆಶೆ ಜನಪಾದಾರ್ಚ್ಚಿತಾಕ್ಷತಾನ್ || ೮೫ || ಯಜ್ಞಸೂತ್ರಂಸೊತ್ತರೀಯಂ ಶೆಖರಂಕುಂಡಲಂತಥಾ | ಕಂಕಣಂಸಪವಿತ್ರಂಚ ಮುದ್ರಾಭೂಷಣಮಿಷ್ಯತೆ || ೮೬ || ತ್ರಿಪಂಚದ

* * *

ದಲ್ಲಿ ಅತ್ಯಂತವಾಗಿ, ಎರಡು, ಒಂದು ಬೆಟ್ಟು ಪ್ರಮಾಣವುಳ್ಳಂಥ, ಧರ‍್ಮಚಕ್ರದ ಬಟು ವಿನ ಭಾವವು ಆಗುತ್ತಿದೆ || ೮೦ || ಮೊದಲನೇ ಅರ್ಧಚಂದ್ರಾತಪತ್ರವೆಂಬ ಎರಡು ಯಥಾಶೋಭೆಯಾಗಿ ವಿಕಾರವಿಲ್ಲದೆಯಿರುವುದಾಗಿ ಮಾಡುವುದಕ್ಕೆ ಯೋಗ್ಯವಾದದ್ದು. ಹಣೆಯಲ್ಲಿ ಇರುವಂಥಾದ್ದರದೆಶೆಯಿಂದ ಎಲ್ಲಾ ಕಡೆಯಲ್ಲೂ ಭುಜಾದಿಯಲ್ಲಿ ಸ್ವಲ್ಪವಾದಂಥಾದ್ದಾಗಿ ಅಪೇಕ್ಷಿಸಲ್ಪಡುತ್ತೆ || ೮೧ || ಅರ್ಧಚಂದ್ರವು, ಆತಪತ್ರವು, ಕ್ಷತ್ರಿಯನಿಗೆ ಸಮ್ಮತವಾದಂಥಾದ್ದು. ಆತಪತ್ರ, ಪಾದ, ಪೀಠ, ಇವುಗಳು ಬ್ರಾಹ್ಮಣನಿಗೆ ಹೇಳಲ್ಪಟ್ಟವು || ೮೨ || ಆತಪತ್ರವು, ಪಾದವು, ಈ ಎರಡು ವೈಶ್ಯರಿಗೆ ಆಗುತ್ತೆ. ಸಚ್ಛೂದ್ರನಿಗೆ ಚಕ್ರವಾಗುತ್ತೆ. ಉಳಿದವನಿಗೆ ತಿಲಕವಾಗುತ್ತಿದೆ || ೮೩ || ಬ್ರಹ್ಮಕ್ಷತ್ರಿಯ ವೈಶ್ಯ ಸ್ತ್ರೀಯರುಗಳ ಹಣೆಯಲ್ಲಿ ಅರ್ಧಚಂದ್ರ, ಆತಪತ್ರಗಳೆಂದು ಮೊದಲಲ್ಲಿ ಹೇಳ ಲ್ಪಟ್ಟ ಎರಡು ತಿಲಕವು ಅಡ್ಡವಾಗಿ ಮಾಡಲ್ಪಟ್ಟ ಆಪಾದವು ಆಗುತ್ತಿದೆ. ಉಳಿದ ಸ್ತ್ರೀಯರುಗಳಿಗೆ ತಿಲಕವು ಆಗುತ್ತಿದೆ || ೮೪ || ಚಂದನಾನು ಲೇಪದಮೇಲು ಭಾಗದಲ್ಲಿ ಹಣೆಯ ಮಧ್ಯದಲ್ಲಿ ಬೆಟ್ಟನ ಕೊನೆ ಪ್ರಮಾಣವುಳ್ಳ ಪ್ರದೇಶದಲ್ಲಿ ಜಿನಪಾದಾರ್ಚಿತಾಕ್ಷತೆಗಳನ್ನು ಬ್ರಾಹ್ಮಣನು ಧರಿಸತಕ್ಕದ್ದು || ೮೫ || ಯಜ್ಞೋಪವೀತವು, ಬಹಿರ್ವಾಸದೊಡನೆ ಕೂಡಿದಂಥಾ ಕಿರೀಟವು, ಕರ್ಣಕುಂಡಲವು, ಹಾಗೆ ಪವಿತ್ರದೊಡನೇ ಕೂಡಿದಂಥ ಕಂಕಣವು, ಮುದ್ರಿಕೆಯು, ಕಂಠಸರಮೊದ

* * *