ರ್ಭವಲಿತಂಬ್ರಹ್ಮಗ್ರಂಥಿಸಮನ್ವಿತಾ | ಮುಷ್ಟ್ಯಗ್ರಯೊಗ್ಯವಲಯಂಪವಿತ್ರಮಿತಿಭಾಷಿತಂ || ೮೭ || ಇತಿಗಂಧಾದಿಭಿಸ್ತ್ವಂಚಭೂಷಯೆದವಿಕಾರಕೈಃ | ಇಂದ್ರಂಮತ್ವಜಿನೆಂದ್ರಶ್ರೀ ಪಾದಪೂಜಾಧಿಕಾರತಃ || ೮೮ || ತತಃಕುಂಭಾನ್‌ಸಮುಧೃತ್ಯಪುಷ್ಪಾಂಜಲಿ ಪುರಸ್ಸರಂ | ಜಲೈಶ್ಚೋಚಜಲೈರಿಕ್ಷುರ ಸೈಶ್ಚೂತರಸೈರ್ಘೃ ತೈಃ || ೮೯ || ಕ್ಷೀರೈರ್ದಧಿಭಿರಪ್ಯು ದ್ಘೈಃಸ್ನಾಪಯಿತ್ವಾ ಜಿನೇಶ್ವರಂ | ಉದ್ವರ್ತ್ಯಕಲ್ಕಚೂರ್ಣ್ನೆನಶಿಕ್ರ್ವಾಕೊಣ ಘಟಾಂಬುಭಿಃ || ೯೦ || ಗಂಧದ್ರವ್ಯವಿಮಿಶ್ರೈಶ್ಚಸ್ನಾಪಯೆದ್ಗಂಧವಾರಿಭಿಃ | ಜಿನಸ್ನಾನೊದಕಂತಚ್ಚುಪ್ರಕು ರ್ಯ್ಯಾ ನ್ನಿಜಮೂರ್ಧನಿ || ೯೧ || ತತಸ್ತತ್ಪ್ರತಿಮಾಂಯಂತ್ರಮಧ್ಯೆ ಸಂಸ್ಥಾಪ್ಯ ಭಕ್ತಿತಃ | ವಾರ್ಗ್ಗಂಧಾಕ್ಷತಪು ಷ್ಪಾನ್ನದೀಪಧೂಪಫಲೈರ್ಯ್ಯಜೇತ್ || ೯೨ || ಶ್ರುತಂಸೂರಿಂತತೊಭ್ಯರ್ಚ್ಯಯಕ್ಷಾಯಕ್ಷ್ಯೌಸಮರ್ಚ್ಯಚ | ಯಂತ್ರಸ್ಥದೇವ

* * *

ಲಾದಂಥ ಆಭರಣವು, ಅಪೇಕ್ಷಿಸಲ್ಪಡುತ್ತಲಿದೆ || ೮೬ || ಮೂರು ಐದ್ದು ದರ್ಭೆಗಳಿಂದ ಸುತ್ತಲ್ಪಟ್ಟಂಥ ಬ್ರಹ್ಮ ಗಂಟಿನೊಡನೇ ಕೂಡಿದಂಥ ಮುಷ್ಟಿ ಪ್ರಮಾಣ ಅಗ್ರವು, ಬೆಟ್ಟಿಗೆ ಯೋಗ್ಯವಾದ ಬಟುವುವುಳ್ಳಂಥಾ ಪವಿತ್ರವು ಈ ಪ್ರಕಾರ ಹೇಳಲ್ಪಟ್ಟಿತು || ೮೭ || ಈ ಪೂರ್ವೋಕ್ತ ಪ್ರಕಾರವಾಗಿ ಜಿನೇಶ್ವರನಶ್ರೀಪಾದ ಪೂಜಾಧಿಕಾರದ್ದೆಶೆಯಿಂದ ತಂನನ್ನು ದೇವೇಂದ್ರನನ್ನಾಗಿ ತಿಳಿದು, ಈ ಪೂರ್ವೋಕ್ತ ಪ್ರಕಾರವಾಗಿ ವಿಕಾರವಿಲ್ಲದೇ ಯಿರುವಂಥ ಗಂಧಾದಿಗಳಿಂದ ತಂನನ್ನು ಅಲಂಕರಿಸತಕ್ಕದ್ದು || ೮೮ || ಅನಂತರದಲ್ಲಿ ಪುಷ್ಪಾಂಜಲಿಯೇ ಮೊದಲಾಗೋಣ ಹ್ಯಾಗೋ ಹಾಗೆ ಕುಂಭಗಳನ್ನು ಎತ್ತಿ ಜಲಗಳಿಂದಲೂ, ಎಳುನೀರುಗಳಿಂದಲೂ, ಕಬ್ಬಿನರಸಗಳಿಂದಲೂ, ಮಾವಿನಹಣ್ಣಿನ ರಸಗಳಿಂದಲೂ, ತುಪ್ಪಗಳಿಂದಲೂ, ಹಾಲುಗಳಿಂದಲೂ ಮೊಸರುಗಳಿಂದಲೂ, ಅಭಿಷೇಕ ಮಾಡಿ ಜಿನೇಶ್ವರನನ್ನು, ಕಲ್ಕಚೂರ್ಣದಿಂದ ಉದ್ವರ್ತನೆ ಮಾಡಿ ಗಂಧ ದ್ರವ್ಯಮಿಶ್ರವಾದಂಥ ಕೋಣಕುಂಭ ಜಲಗಳಿಂದ ಅಭಿಷೇಕ ಮಾಡಿ ಗಂಧೋ ದಕಗಳಿಂದ ಅಭಿಷೇಕ ಮಾಡತಕ್ಕದ್ದು. ಆ ಜಿನಸ್ನಾನೋದಕವನ್ನು ತಂನಮಸ್ತಕದಲ್ಲಿ ಮಾಡತಕ್ಕದ್ದು || ೯೧ || ಅನಂತರದಲ್ಲಿ ಆ ಪ್ರತಿಮೆಯನ್ನು ಯಂತ್ರಮಧ್ಯದಲ್ಲಿ ಸ್ಥಾಪಿಸಿ ಭಕ್ತಿದೆಶೆಯಿಂದ ಜಲಗಂಧಾಕ್ಷತೆ ಪುಷ್ಪಚರುದೀಪ ಧೂಪ ಫಲಗಳಿಂದ ಅರ್ಚಿಸತಕ್ಕದ್ದು || ೯೨ || ಶ್ರುತವನ್ನೂ, ಆ

* * *

ತಾಃಪಶ್ಚಾತ್ಸರ್ವ್ವಾಅಪಿಸಮರ್ಚ್ಚಯೆತ್ || ೯೩ || ಯಂತ್ರಸ್ಯ ಮೂಲವಿದ್ಯಾಂ ಚಜಪೆದ ಷ್ಟಶತಂತತಃ | ತದ್ಯಂತ್ರಂಚಪರಿತ್ಯಾಥನಮೇದ್ಭಕ್ತ್ಯಾ ಜಿನೇಶ್ವರಂ || ೯೪ || ಶ್ರುತಂಸೂರಿಂಚವಂದಿತ್ವಾವ್ರತಂಧೃತ್ವಾಯ ಥೋಚಿತಂ | ಜಿನಶ್ರೀಪಾದಪೀಠಸ್ಥಾಂ ಶೇಷಾಂಶಿರಸಿಧಾರಯೆತ್ || ೯೫ || ಅಥತದ್ದೆವತಾರಾದ್ಧಿಗ್ಯಹಾದ್ಬ ಹ್ಯಪ್ರಕಲ್ಪ್ಯತೆ | ಕೂಟಾದೌಹೊಮಶಾಲಾ ಖ್ಯೆಕುರ್ಯಾದೌಪಾಸನಂದ್ವಿಜಃ || ೯೬ || ನಮಸ್ಕೃತ್ಯಜಿನಂ ಹೊಮಭಸ್ಮಹೃತ್ಯಾತಿಪಾವನಂ | ಧರೆತ್ಭಾಲಾದಿದೆಶೆಷುತ್ರಿ ಪುಂಡ್ರಾಕಾರತೊಬುಧಃ || ೯೭ || ಅಗ್ನೆರೂಪಾ ಸ್ತಿಕರ್ಮ್ಮೆದಮೌಪಾಸ ನಮಿತಿಸ್ಮೃತಂ | ಕುರ್ವ್ವಾಣಃಪ್ರತ್ಯಹಂ ಚೈತದಾಹಿತಾಗ್ನಿರಿತೀರಿತಃ || ೯೮ || ಆ ಹಿತಾಗ್ನಿರಸವಲೋಕೆ ಭೂಮಿಗೆವೊದ್ವಿಜೊತ್ತಮಃ | ಅರ್ಯ್ಯಶ್ಚೊಪಾಸ ಕಶ್ಮಿಷ್ಟೊಧಾರ್ಮಿಕಶ್ಚೆತಿಕೀರ್ತ್ಯತೆ || ೯೯ || ಏತಸಂಭಾವನಿಯಾ

* * *

ಚಾರ್ಯನನ್ನೂ, ಪೂಜಿಸಿ ಅನಂತರದಲ್ಲಿ ಯಕ್ಷಾಯಕ್ಷಿಗಳನ್ನು ಪೂಜಿಸಿ ಯಂತ್ರದಲ್ಲಿ ಇರುವಂಥಾ ಸಮಸ್ತ ದೇವತೆಗಳನ್ನು ಪೂಜಿಸತಕ್ಕದ್ದು || ೯೩ || ಯಂತ್ರದ ಮೂಲಮಂತ್ರವನ್ನು ೧೦೮ ಸಲ ಜಪಿಸತಕ್ಕದ್ದು. ಅನಂತರದಲ್ಲಿ ಆ ಯಂತ್ರವನ್ನು ಪ್ರದಕ್ಷಿಣ ಮಾಡಿ ಅನಂತರದಲ್ಲಿ ಭಕ್ತಿಯಿಂದ ಜಿನೇಶ್ವರನನ್ನು ನಮಸ್ಕರಿಸತಕ್ಕದ್ದು || ೯೪ || ಶ್ರುತವನ್ನೂ ಆಚಾರ್ಯನನ್ನೂ, ನಮಸ್ಕರಿಸಿ ಎಥಾಯೋಗ್ಯವಾಗಿ ವ್ರತವನ್ನು ಧರಿಸಿ ಜಿನೇಶ್ವರನಶ್ರೀಪಾದಪೀಠದಲ್ಲಿರುವಂಥಾ, ಶೇಷೆಯನ್ನು ಮಸ್ತಕದಲ್ಲಿ ಧರಿಸತಕ್ಕದ್ದು || ೯೫ || ಅನಂತರದಲ್ಲಿ ದೇವತಾರಾಧನೆಯ ಮನೆಯ ಬಾಹ್ಯದಲ್ಲಿ ಮಾಡಲ್ಪಟ್ಟಂಥ ಹೋಮಶಾಲೆಯೆಂದು ಹೆಸರುಳ್ಳಂಥ ಶಾಲಾ ದಿನಗಳಲ್ಲಿ ಬ್ರಾಹ್ಮಣನು ಔಪಾಸನೆಯನ್ನು ಮಾಡತಕ್ಕದ್ದು || ೯೬ || ಜಿನೇಶ್ವರನನ್ನು ನಮಸ್ಕರಿಸಿ ಅತಿಪವಿತ್ರವಾದಂಥ ಹೋಮಭಸ್ಮವನ್ನು ತೆಗೆದುಕ್ಕೊಂಡು ಹಣೆಯೇ ಮೊದಲಾದ ಪ್ರದೇಶದಲ್ಲಿ ತ್ರಿಪುಂಡ್ರಾಕಾರವಾಗಿ ವಿದ್ವಾಂಸನಾದವನು ಧರಿಸತಕ್ಕದ್ದು || ೯೭ || ಅಗ್ನಿಯ ಸತ್ಕಾರರ್ಮವಾದ ಇದು ಔಪಾಸನವೆಂದು ಸ್ಮರಿಸಲ್ಪಟ್ಟಿತು. ಪ್ರತಿದಿವಸ ದಲ್ಲಿಯೂ ಇದನ್ನು ಮಾಡುವಂಥಾವನು ಆ ಹಿತಾಗ್ನಿ ಇಂತೆಂದು ಹೇಳಲ್ಪಟ್ಟಿತು || ೯೮ || ಅಹಿತಾಗ್ನಿಯಾದಂಢಾ ಇವನು ಲೋಕದಲ್ಲಿ, ಭೂಮಿಯಲ್ಲಿರತಕ್ಕಂಥಾ ದೇವನು, ದ್ವಿಜರಲ್ಲಿ ಶ್ರೇಷ್ಠನು, ಪೂಜ್ಯನಾದಂಥಾವನು, ಉಪಾಸಕನು, ಶಿಷ್ಟನು,

* * *

ಸ್ಸ್ಯುರಾಜಾದ್ಯೈರಾಹಿತಾಗ್ನಯಃ | ಗ್ರಾಮಕ್ಷೇತ್ರಗೃಹಾಮತ್ರಗೊವಸ್ತ್ರಾದಿ ಪ್ರದಾನತಃ || ೧೦೦ || ಗೃಹಿಣೀವಾಸ ಗೆಹಥಸಂತರ್ಪ್ಯಗೃಹದೆವತಾಃ | ಗಂಧಪುಷ್ಪಾದಿಭಿಶ್ಚಾಪಿ ಪೂಜಯೆತ್ಕುಲದೆವತಾಃ || ೧೦೧ || ಇತ್ಯೆವಂವಿ ಶ್ವದೆವಾನಾಮಾದರೆಣಸಮರ್ಚ್ಚನಂ | ವೈಶ್ವದೆವಂಭವೆದೆತದ್ಗೃಹೀಣಾಂಪ್ರತ್ಯಹಂಮೆತಂ || ೧೦೨ || ತತಶ್ಚೈತ್ಯಾಲಯಂ ಗಚ್ಛೆತ್ಸರ್ವಭವ್ಯಪ್ರಪೂಜಿತಂ | ಜಿನಾದಿಪೂಜಾಯೊಗ್ಯಾನಿದ್ರವ್ಯಾಣ್ಯಾದಾಯಶಕ್ತಿತಃ || ೧೦೩ || ದೃಷ್ಟ್ಯಾಹೃಷ್ಟೊಭವನ್ ಶಶ್ವಪೂರ್ವಸ್ಯಾಂಕಕುಭಿಕ್ಷಣಂ | ಸ್ಥಿತ್ವಾಂಜಲೆಸ್ತ್ರಿರಾ ವರ್ತಂ ಕುರ್ಯ್ಯಾದೆ ಕಶಿರೊನ್ನತಿಂ || ೧೦೪ || ಎವಂಚದರ್ಶನಸ್ತುತ್ಯಾ ಶೆಷಸಪ್ತದಿಶಾನ್ವಪಿ | ವಂದನಾಂವ್ರಜಯನ್ನೆಕವಾರಂಪರ್ಯ್ಯ ಯಮಾಚರೆತ್ || ೧೦೫ || ತತೊಪಿಸಂನಿಧೌಸ್ಥಿತ್ವಾ

* * *

ಧಾರ್ಮೀಕನು, ಇಂತೆಂದು ಹೊಗಳಲ್ಪಡುತ್ತಾನೆ || ೯೯ || ಈ ಅಹಿತಾಗ್ನಿಗಳು ಧೊರೆಯೇ ಮೊದಲಾದವರುಗಳಿಂದ ಗ್ರಾಮ, ಭೂಮಿ, ಮನೆ, ಪಾತ್ರೆ, ಗೋವು, ವಸ್ತ್ರ, ಇವು ಮೊದಲಾದವುಗಳ ಕೊಡುವುದರ ದೆಶೆಯಿಂದ ಸನ್ಮಾನಿಸುವುದಕ್ಕೆ ಯೋಗ್ಯರಾದಂಥಾರುಗಳು || ೧೦೦ || ಗೃಹಸ್ತೆಯಾದ ಹೆಂಗಸು ಅನಂತರವಾಸ ಮಾಡುವ ಮನೆಯಲ್ಲಿ ಗಂಧಪುಷ್ಟಾದಿಗಳಿಂದ ಮನೆ ದೇವತೆಗಳನ್ನು ತೃಪ್ತಿಪಡಿಸಿ ಕುಲದೇವತೆಗಳನ್ನು ಪೂಜಿಸತಕ್ಕದ್ದು || ೧೦೧ || ಈ ಪ್ರಕಾರವಾಗಿ ಸಮಸ್ತವಾದ ದೇವತೆಗಳ ಪ್ರೀತಿಯಿಂದ ಪೂಜಿಸೋಣವು, ವೈಶ್ವದೇವವಾದಂಥಾದ್ದಾಗಿ ಆಗುತ್ತಿದೆ. ಇದು ಗೃಹಸ್ಥರುಗಳಿಗೆ ಪ್ರತಿ ದಿವಸದಲ್ಲಿ ಸಮ್ಮತವಾದಂಥಾದ್ದು || ೧೦೨ || ಅನಂತರದಲ್ಲಿ ಶಕ್ತ್ಯನುಸಾರವಾಗಿ ಜಿನೇಶ್ವರನೇ ಮೊದಲಾದಂಥ ದೇವತೆಗಳ ಪೂಜಾಯೋಗ್ಯವಾದಂಥ, ದ್ರವ್ಯಗಳನ್ನು ತೆಗೆದುಕ್ಕೊಂಡು ಸಮಸ್ತಭವ್ಯರುಗಳಿಂದ ಪೂಜಿಸಲ್ಪಟ್ಟಂಥ, ಜಿನಾಲಯವನ್ನು ಕುರಿತು ಹೋಗತಕ್ಕದ್ದು || ೧೦೩ || ಜಿವಾಲಯವನ್ನು ಸಂತುಷ್ಟನಾದವನಾಗಿ ನೋಡಿ ಪೂರ‍್ವದಿಕ್ಕಿನಲ್ಲಿ ಕ್ಷಣ ಹೊತ್ತು ನಿಂತುಕೊಂಡು ಕೈಮುಗಿಯೋಣದರ ಮೂರು ಆ ವರ್ತವನ್ನು ಒಂದು ಶಿರೋನ್ನತಿಯನ್ನು ಮಾಡತಕ್ಕದ್ದು || ೧೦೪ || ಈ ಪ್ರಕಾರವಾಗಿ ದರ್ಶನಸ್ತುತಿಯೊಡನೆ ಸಮಸ್ತವಾದ ಸಪ್ತದಿಕ್ಕುಗಳಲ್ಲಿಯೂ ಕೂಡ ಒಂದಾವರ್ತಿವಂದನೆಯನ್ನು ಮಾಡುವಂಥಾವನಾಗಿ ಪ್ರದಕ್ಷಿಣವನ್ನು ಮಾಡತಕ್ಕದ್ದು || ೧೦೫ || ಅನಂತರದಲ್ಲಿ

* * *

ಪಾದೌಪ್ರಕ್ಷಾಲ್ಯಪಾರ್ಶ್ವತಃ | ತತೊನುಜ್ಞಾಪಯೆದ್ವಾರಪಾಲ ಕಾನಿಸಿಹಿತ್ಯಣನ್ || ೧೦೬ || ದಕ್ಷಿಣಾಂಘ್ರಿಂ ಪುರಸ್ಕೃತ್ಯಪ್ರವಿತ್ಯಾಭ್ಯಂತರಂಶನೈಃ | ತತ್ತಾಂತರ್ಭವನಂ ಚಾಪಿದ್ವಿಃಪ್ರದಕ್ಷಿಣಯೆತ್ತದಾ || ೧೦೭ || ಕ್ಷುದ್ರಂ ಚೆತ್ತಜ್ಜಿನಾಗರಂತದಾತ್ರಿಃ ಪರ್ಯ್ಯಯೊಬಹಿಃ | ತತೊಂಘ್ರಿಕ್ಷಾಲನಂದ್ವಾರ ಪ್ರವೆಶಶ್ವವಿಧೀಯತೆ || ೧೦೮ || ತತಸ್ತತ್ಸನ್ನಿಧೌಸ್ಥಿತ್ವಾವಿಲೊಕ್ಯಜನಭಾಸ್ಕರಂ | ನಮೆತ್ಸಾಷ್ಟಾಂಗವಿಧಿನಾ ಪಂಚಾಂಗವಿಧಿ ನಾಥವಾ || ೧೦೯ || ಪಶ್ಚರ್ಥಶಯಯಾಯ ದ್ವಪ್ರಣಾಮಃಕ್ರಿಯತೆ ಬುಧೈಃ | ಅಸಂಕಟಪ್ರದೆಶೆತು ಪ್ರಾಗುಕ್ತನಿಯಮಂಮತಂ || ೧೧೦ || ಉದಶ್ಶಿರಶ್ಚಹ ಸ್ತಾಜಪಾದೌಗಂಡದ್ವಯಂತಥಾ | ಸಾಷ್ಟಾಂಗನಮನೆಪ್ರೊಕ್ತಾನೈತಾನ್ಯಯಂಗಾ ನಿಧೀಧನೈಃ || ೧೧೧ || ಜಾನುದ್ವಂದ್ವಂಶರದ್ವಂದ್ವಂಶೀರ್ಷಂ ಪಂಚಾಂಗವಂದನೆ | ಪ್ರೊಕ್ತಾನ್ಯಲಂಗಾನಿಪ ಶ್ವರ್ಧಶಯನಂಪಶು

* * *

ಯೂ ಕೂಡ ಸಂನಿಧಿಯಲ್ಲಿ ನಿಂತುಕ್ಕೊಂಡು ಪಾರ್ಶ್ವದಲ್ಲಿ ಪಾದಪ್ರಕ್ಷಾಲನೆಯನ್ನು ಮಾಡಿ, (ನಿಸಿಹಿ) ಇಂತೆಂದು ಹೇಳುವಂಥಾವನಾಗಿ ದ್ವಾರಪಾಲಕರನ್ನು ಅನುಜ್ಞಾಪನೆ ಮಾಡತಕ್ಕದ್ದು || ೧೦೬ || ಬಲದ ಕಾಲನ್ನು ಮುಂದು ಮಾಡಿ ವೊಳಗೆ ಪ್ರವೇಶಿಸಿ, ಅಂತರ್ಭವನದಲ್ಲಿಯೂ ಕೂಡ ಪೂರ್ವೋಕ್ತ ಪ್ರಕಾರವಾಗಿ ಎರಡಾವರ್ತಿ ಪ್ರದಕ್ಷಿಣ ಮಾಡತಕ್ಕದ್ದು || ೧೦೭ || ಆ ಚೈತ್ಯಾಲಯವು ಚಿಕ್ಕದಾದದ್ದೇ ಆದರೆ, ಆ ಸಮಯದಲ್ಲಿ ಮೂರು ಪ್ರದಕ್ಷಿಣವು ಹೊರಗೆ ಮಾಡತಕ್ಕದ್ದು. ಅನಂತರದಲ್ಲಿ ಪಾದ ಪ್ರಕ್ಷಾಲನೆಯು ದ್ವಾರಪ್ರವೇಶವೂ ಕೂಡ ಮಾಡಲ್ಪಡುತ್ತಲಿದೆ || ೧೦೮ || ಅನಂತರದಲ್ಲಿ ಆಜಿನೇಶ್ವರನ ಸಂನಿಧಿಯಲ್ಲಿ ನಿಂತುಕೊಂಡುಸೂರ್ಯಪಾದಿಯಲ್ಲಿರುವ ಜಿನೇಶ್ವರನನ್ನು ನೋಡಿ ಸಾಷ್ಟಾಂಗವಿಧಿಯಿಂದ, ಹಾಗಲ್ಲದೇ ಹೋದರೆ ಪಂಚಾಂಗವಿಧಿಯಿಂದ ನಮಸ್ಕರಿಸತಕ್ಕದ್ದು || ೧೦೯ || ಹ್ಯಾಗಾದಾಗ್ಯೂ ವಿದ್ವಾಂಸರುಗಳಿಂದ ಪಶ್ವರ್ಧಶಯೆಯಿಂದ ನಮಸ್ಕಾರವು ಮಾಡಲ್ಪಡುತ್ತದೆ. ಆ ಸಂಕುಚಿತ ಪ್ರದೇಶದಲ್ಲಾದ ರೊ ಪೂರ್ವದಲ್ಲಿ ಹೇಳಲ್ಪಟ್ಟ ನಮಸ್ಕಾರವು ಸಮ್ಮತವಾದಂಥಾದ್ದು. || ೧೧೦ || ವಕ್ಷಸ್ಥಳವು, ಶಿರಸ್ಸು ಕೈಗಳು, ಕಾಲುಗಳು, ಕೆನ್ನೆಗಳು ಎರಡು, ಹಾಗೆ ಬುದ್ಧಿಯೇ ದ್ರವ್ಯವಾಗಿ ಉಳಲ್ಳಂಥಾವರುಗಳಿಂದ ಈ ಅವಯವಗಳು ಸಾಷ್ಟಾಂಗ ನಮಸ್ಕಾರದಲ್ಲಿ ಹೇಳಲ್ಪಟ್ಟವು || ೧೧೧ || ಮಂಡಿಗಳೆರಡು ಕೈಗ

* * *

ವನ್ಮತಂ || ೧೧೨ || ಸಾಷ್ಟಾಂಗನಮನೆಭೂಮಿಂಮಾರ್ಜ ಯಿತ್ವಾಂಶುಕಾದಿನಾ | ಸ್ಥಿತ್ವಾಸಮಪದಂಸಮ್ಯ ಗ್ನರೀಕ್ಷೈಪರಮೇಶ್ವರಂ || ೧೧೩ || ಕರದ್ವಂದ್ವಂಚ ಸಂಯೊಜ್ಯ ವಕ್ಷೊಫಾಲಪ್ರದೇಶಯೊಃ | ಕ್ಷಣಂನ್ಯಸ್ಯವಿಘಟ್ಯಾನುಸಕ್ತಿಕೌಲಂಭಯೆತ್ತತಃ || ೧೧೪ || ವಾಮಾಂಘ್ರಿಮಗ್ರತಃ ಕೃತ್ವಾಹಸ್ತಾವಿನ್ಯಸ್ಯಭೂತಲೆ | ಪಶ್ಚಾತ್ಪ್ರಸಾರ್ಯ್ಯ ಪಾದೌದ್ವೌ ಶಾಯಿತಾಧೊಮುಖಂಶನೈಃ || ೧೧೫ || ಆನುದೆಹಂಕರದ್ವಂದ್ವಂ ಪ್ರಸಾರ್ಯ್ಯಾಥಸಮೀಕ್ಷ್ಯಚ | ವಾಮಾದಿಗಂಡೌಭಾಲಂಚ ಸ್ವರ್ಶಯೆತ್ಕ್ರಮತೊಭುವಿ || ೧೧೬ || ತತಃಕೃತ್ವಾಗ್ರ ತೊಹಸ್ತಾಲಲಾಟೇಚಪ್ರಣಮ್ಯಚ | ಹಸ್ತಾದಕ್ಷಿಣಮಂಘ್ರಿಂ ಚತತೊವಿನ್ಯಸ್ಯಭೂತಲೆ || ೧೧೭ || ಉ ತ್ತಿಷ್ಠೆತತ್ರಿರಪ್ಯವಮೆತತ್ಪ್ರಪ್ರಣಮನಂಮತಂ | ಜಿನೇಂದ್ರಸ್ಯಗಣೆಂದ್ರಸ್ಯಸಾಧು ಸಂಘಸ್ಯಚಪೈಥುಕ || ೧೧೮ || ಪದ್ಭ್ಯಾಮೆವೊಪವಿ ಶ್ಯಾಥಸಮೀ

* * *

ಳೆರಡು ತಲೆ ಒಂದು ಈ ಐದು (೫) ಅವಯವಗಳು ಪಂಚಾಂಗ ನಮಸ್ಕಾರದಲ್ಲಿ ಹೇಳಲ್ಪಟ್ಟವು, ಪಶ್ಚರ್ಧಶಯನವು ಪಶುವಿನೋಪಾದಿಯಲ್ಲಿ ಸಮ್ಮತವಾದಂ ಥಾದ್ದು || ೧೧೨ || ಸಾಷ್ಟಾಂಗ ನಮಸ್ಕಾರ ದಲ್ಲಿ ವಸ್ತ್ರ ಮೊದಲಾದ್ದರಿಂದ ಭೂಮಿಯನ್ನು ಗುಡಿಸಿಸಮವಾದ ಕಾಲು ಉಂಟಾಗೋಣ ಹ್ಯಾಗೋ ಹಾಗೆ ಚಂದಾಗಿ ಪರಮೇ ಶ್ವರನನ್ನೂ ನೋಡಿ ಅನಂತರದಲ್ಲಿ ಕೈಗಳೆರಡನ್ನೂ ಜೋಡಿಸಿ ಕ್ಷಣಕಾಲದಲ್ಲಿ, ಯದೆ, ಹಣೆ, ಈ ಪ್ರದೇಶಗಳಲ್ಲಿ, ಇಟ್ಟು, ತೆಗೆದು, ಮಣಕಾಲು ಪರ್ಯಂತರದಲ್ಲೂ ಜೋಲು ಬಿಡತಕ್ಕದ್ದು || ೧೧೪ || ಎಡದ ಕಾಲನ್ನು ಮುಂದಾಗಿ ಮಾಡಿ ಕೈಯ್ಗಳನ್ನು ಭೂಮಿಯಲ್ಲಿಟ್ಟು ಅನಂತರ ಎರಡು ಕಾಲುಗಳನ್ನು ನೀಡಿ ಮೆಲ್ಲಗೆ ಕೆಳಗೆ ಮುಖವಾಗೋಣ ಹ್ಯಾಗೋ ಹಾಗೆ ಮಲಗಿಕ್ಕೊಳ್ಳತಕ್ಕದ್ದು || ೧೧೫ || ಶರೀರವನ್ನು ಅನುಸರಿಸಿ ಕೈಗಳೆರಡನ್ನೂ ನೀಡಿ ಅನಂತರದಲ್ಲಿ ಸ್ವಾಮಿಯನ್ನು ನೋಡಿ ಎಡಗಡೆ ಮೊದಲಾದ ಗಂಡ ಸ್ಥಳಗಳನ್ನು ಹಣೆಯನ್ನೂ ಕೂಡ ಭೂಮಿಯಲ್ಲಿ ಕ್ರಮವಾಗಿ ಮುಟ್ಟಿಸತಕ್ಕದ್ದು || ೧೧೬ || ಅನಂತರ ಕೈಗಳನ್ನು ಮುಂದು ಮಾಡಿ ಹಣೆಯಲ್ಲಿಯೂ ಕೂಡ ನಮಸ್ಕರಿಸಿ ಅನಂತರದಲ್ಲಿ ಕೈಗಳನ್ನು ಬಲಗಾಲನ್ನು ಕೂಡ, ಭೂಮಿಯಲ್ಲಿಟ್ಟು || ೧೧೭ || ಮೇಲಕ್ಕೆ ಏಳತಕ್ಕದ್ದು ಮೂರಾವರ್ತಿಯೂ ಕೂಡ ಇದೇ ಪ್ರಕಾರವಾಗುತ್ತೆ ಈ ಸಾಷ್ಟಾಂಗ ನಮಸ್ಕಾರವು, ಜಿನೇಶ್ವರನಿಗೆ, ಗಣಧರ

* * *

ಕ್ಷ್ಯಜಗತಾಂಪತಿಂ | ಕರದ್ವಂದ್ವಸಮಾಯೊಜ್ಯನ್ಯಸ್ಯಹೃದ್ಭಾಲದೆಶೆಯೊಃ || ೧೧೯ || ವಿಘಟ್ಯತೌಭುವಿನ್ಯ ಸ್ಯಜಾನುವೀಚಲಲಾಟತಃ | ನಮೆತ್ರಿರೆವಂ ಪಂಚಾಂಗ ನಮನಂಪ್ರವಿಧೀಯತೆ || ೧೨೦ || ವಾಮೊರೌದ ಕ್ಷಿಣಂನ್ಯಸ್ಯ ಪಾದೌಸಂಕೊಚ್ಯ ಭೂತಲೆ | ಕರೌನ್ಯಸ್ಯನಮೆನ್ಮೂರ್ಧ್ನಾ ಪ್ವಾರ್ಧಶಯವಂದನೆ || ೧೨೧ || ಕೃತ್ವೈವಂವಂದನಾಂಪಶ್ಚಾದುಪವಿಷ್ಟಸ್ಥಿ ತೊಪಿವಾಶಿ | ಈರ್ಯ್ಯಾಪಥಸ್ಯಸಂ ಶುದ್ಧಿಂಕುರ್ಯ್ಯಾದೆಕಾಗ್ರ ಮಾನಸಃ || ೧೨೨ || ತತೊಜನಾದಿಪೂಜಾಂ ಚವಿಧದ್ಯಾದ್ವಾವಿಧಾಪಯೆತ್ | ಕುರ್ಯ್ಯಾತ್ತತಶ್ಚೈತ್ಯಪಂ ಚಗುರುಶಾಂತಿನುತೀಸ್ತಥಾ || ೧೨೩ || ತತೊಜಿನಂಶ್ರುತಂ ಪೂರ್ವ್ವಾಚಾರ್ಯ್ಯನಪಿನಮೆನ್ಮದಾ | ಧರ್ಮ್ಮಾ ಚಾರ್ಯ್ಯಂತತೊನತ್ವಾ ಪ್ರತ್ಯಾಖ್ಯಾನಂ ಪ್ರಕಾಶಯೆತ್ || ೧೨೪ || ತತೊಭಿವಾದನಂ

* * *

ನಿಗೆ, ಯತಿಸಮೂಹಕ್ಕೆ ಪ್ರತ್ಯೇಕವಾಗಿ ಸಮ್ಮತವಾದಂಥಾದ್ದು || ೧೧೮ || ಕಾಲುಗ ಳಿಂದಲೆಯೇ ಕೂತುಕ್ಕೊಂಡು ಅನಂತರದಲ್ಲಿ ಲೋಕಗಳಿಗೆ ಸ್ವಾಮಿ ಯಾದಂಥಾ ಜಿನೇಶ್ವರನನ್ನು ನೋಡಿ ಕೈಗಳೆರಡನ್ನೂ, ಜೋಡಿಸಿ, ಎದೆ, ಹಣೆಪ್ರದೇಶಗಳಲ್ಲಿಟ್ಟು ತೆಗೆದು ಆ ಎರಡು ಕೈಗಳನ್ನು ಭೂಮಿಯಲ್ಲಿ ಇಟ್ಟು ಮೂರಾವರ್ತಿ ಹಣೇದೆಶೆಯಿಂದ ನಮಸ್ಕರಿಸತಕ್ಕದ್ದು. ಈ ಪ್ರಕಾರವಾಗಿ ಪಂಚಾಂಗ ನಮಸ್ಕಾರವು ಮಾಡಲ್ಪಡುತ್ತಲಿಧೆ || ೧೨೦ || ಪಶ್ವರ್ಧಶಯನವೆಂಬ ನಮಸ್ಕಾರದಲ್ಲಿ ಎಡದತೊಡೆಯಲ್ಲಿ ಬಲದ ತೊಡೆಯನ್ನು ಇಟ್ಟು ಕಾಲುಗಳನ್ನು ಸಂಕೋಚ ಮಾಡಿ ಭೂಪ್ರದೇಶದಲ್ಲಿ ಕೈಗಳನ್ನು ಇಟ್ಟು ತಲೆಯಿಂದ ನಮಸ್ಕರಿಸತಕ್ಕದ್ದು || ೧೨೧ || ಈ ಪ್ರಕಾರವಾಗಿ ವಂದನೇಮಾಡಿ ಅನಂತರದಲ್ಲಿ ಕೂತುಕ್ಕೊಂಡಂಥಾವನಾಗಿ, ನಿಂತುಕ್ಕೊಂಡಂ ಥಾವನಾದಾಗ್ಯೂ, ಈರ್ಯಾಪಥ ಶುದ್ಧಿಯನ್ನು ಏಕಾಗ್ರಮನ ಸ್ಸುಳ್ಳಂಥಾವನಾಗಿ ಮಾಡತಕ್ಕದ್ದು || ೧೨೨ || ಅನಂತರದಲ್ಲಿ ಜಿನಾದಿ ಪೂಜೆಯನ್ನು ಕೂಡ ಮಾಡತಕ್ಕದ್ದು. ಅಥವಾ ಮಾಡಿಸತಕ್ಕದ್ದು. ಅನಂತರದಲ್ಲಿ ಚೈತ್ಯಭಕ್ತಿ, ಪಂಚಗುರುಭಕ್ತಿ, ಶಾಂತಿಭಕ್ತಿ ಈ ಸ್ತೋತ್ರಗಳನ್ನೂ ಹಾಗೇ ಮಾಡತಕ್ಕದ್ದು || ೧೨೩ || ಅನಂತರದಲ್ಲಿ ಜಿನೇಶ್ವರನನ್ನೂ, ಶ್ರುತವನ್ನೂ, ಪೂರ್ವಾಚಾರ್ಯರನ್ನೂ, ಕೂಡ, ಸಂತೋಷದಿಂದ ನಮಸ್ಕರಿಸತಕ್ಕದ್ದು ಧರ್ಮಾಚಾರ್ಯನನ್ನೂ ನಮಸ್ಕರಿಸಿ (ಪ್ರತ್ಯಾಖ್ಯಾನ) ವನ್ನು ಪ್ರಕಾಶ ಮಾಡತಕ್ಕದ್ದು || ೧೨೪ || ಅನಂತರದ

* * *

ಕುರ್ಯ್ಯಾದ್ವಾತ್ಸಲ್ಯೆನಯಧೊಚಿತಂ | ವಂಶವಿದ್ಯಾವಯೊವೃತ್ತೈಃಶ್ರೆಷ್ಠಾ ನಾಂಗೃಹಿಣಾಮಪಿ || ೧೨೫ || ವಂದ್ಯಕೊವಂದ್ಯಪಾದಾ ಗ್ರೆಉಪವಿಶ್ಯಯಥೊಚಿತಂ | ತಸ್ಯದಕ್ಷಿಣವಾಮಾಂ ಘ್ರೀತಥಾಸ್ವಸ್ಯಕರದ್ವಯಾತ್ || ೧೨೬ || ಸ್ಪೃಷ್ಟ್ವಾಸ್ಪೃಷ್ಟ್ವಾಸ್ವ ಕರ್ಣ್ನೌಚಪಾದಗ್ರಹಣ ಪೂರ್ವ್ವಕಂ | ಅಭಿವಂದನಮೂದ್ನೈವಮಭಿವಾದ ನಮಿಷ್ಯತೆ || ೧೨೭ || ವಂದ್ಯೊಪಿನತ ಪೂರ್ವಾಂಗೊವಿನಯೆನಕರದ್ವಯಾತ್ | ಉದ್ಧೃತ್ಯತಸ್ಯಮೂರ್ದ್ಧಾನಂಬೃಯಾ ದೃಕ್ಕಿದ್ಧಿರಸ್ತ್ವಿತಿ || ೧೨೮ || ಅಭಿವಾದನಮಿತ್ಯೆ ವಂಸುಪೂಜ್ಯಾನಾಂ ವಿಧೀಯತೆ | ಅನ್ಯೆಷಾಂತುನಮಸ್ಕಾರವಚೊಯುಕ್ತಾಂಜಲಿರ್ಭವೆತ್ || ೧೨೯ || ಕೆಷಾಂಚಿದಂಜಲಿಃ ಕಾರ್ಯ್ಯಕ್ಷೆಮಃಪ್ರ ಶ್ನಃಪರೋಚಿತಃ | ಗುಣಾನುರೂಪತಃಸದ್ಭಿರ್ವ್ವಿನೆಯೊಹಿ

* * *

ಲ್ಲಿ ವಂಶವು, ವಯಸ್ಸು, ಚಾರಿತ್ರ, ಇವುಗಳಿಂದ ಶ್ರೇಷ್ಠನಾದಂಥ ಗ್ರಹಸ್ಥರಿಗಳಿಗೂ ಕೂಡ ಯಥಾಯೋಗ್ಯವಾಗಿ ವಾತ್ಸಲ್ಯದಿಂದ ನಮಸ್ಕಾರವನ್ನು ಮಾಡತಕ್ಕದ್ದು || ೧೨೫ || ನಮಸ್ಕಾರ ಮಾಡುವಂಥಾವನು ನಮಸ್ಕಾರ ಮಾಡುವದಕ್ಕೆ ಯೋಗ್ಯನಾದಂಥಾವನ ಪಾದದ ಮುಂದುಗಡೆಯಲ್ಲಿ ಯಥಾಯೋಗ್ಯವಾಗಿ ಕೂತು ಕ್ಕೊಂಡು ಆತನ ಬಲದ ಎಡದ ಕಾಲುಗಳನ್ನು ತನ್ನ ಕೈಗಳ ಎರಡರ ದೆಶೆಯಿಂದ ತನ್ನ ಕಿವಿಗಳನ್ನು ಮುಟ್ಟಿ ಮುಟ್ಟಿ ಪಾದಗ್ರಹಣವಾಗೋಣ ಹ್ಯಾಗೋ ಹಾಗೆ ತಲೆಯಿಂದಲೇ ನಮಸ್ಕರಿಸತಕ್ಕದ್ದು. ಈ ಪ್ರಕಾರವಾಗಿ ಅಭಿವಾದನೆಯು ಹೆಳಲ್ಪಟ್ಟಿತು || ೧೨೬ || ನಮಸ್ಕರಿಸುವುದಕ್ಕೆ ಯೋಗ್ಯನಾದಂಥಾವನೂ ಕೂಡ ವಿನಯದಿಂದ ನಮಸ್ಕರಿಸಲ್ಪಟ್ಟ ಪೂರ್ವಾಂಗವುಳ್ಳಂಥಾವನಾಗಿ ವಿನಯದಿಂದ ಕೈಗಳ ಎರಡರ ದೆಶೆಯಿಂದ ಆ ನಮಸ್ಕರಿಸುವಂಥಾ ಮಸ್ತಕವನ್ನು ಮೇಲಕ್ಕೆ ಎತ್ತಿ ಸಮ್ಯಗ್ದರ್ಶನ ಶುದ್ಧಿಯು ಆಗಲೀ ಇಂತೆಂದು ಹೇಳತಕ್ಕದ್ದು || ೧೨೮ || ಅತ್ಯಂತ ಪೂಜ್ಯರಾದಂಥಾ ವರುಗಳಿಗೆ ಈ ಪ್ರಕಾರ ಅಭಿವಾದನವು ಮಾಡಲ್ಪಡುತ್ತಿದೆ. ಅನ್ಯರಿಗಾದರೋ ನಮಸ್ಕಾರ ವಚನದೊಡನೇ ಕೂಡಿದಂಥ ಅಂಜಲಿಯು ಆಗುತ್ತಿಧೆ || ೧೨೯ || ಕೆಲವು ಜನಗಳಿಗೆ ಅಂಜಲಿಯು ಮಾಡತಕ್ಕದ್ದು. ಕ್ಷೇಮ ಪ್ರಶ್ನೆಯು, ಮತ್ತೊಬ್ಬನಿಗೆ ಯೋಗ್ಯವಾದದ್ದು ಸತ್ಪುರುಷರುಗಳಿಂದ ಗುಣಾನುರೂಪವಾಗಿ ಸ್ಫುಟವಾಗಿ ವಿನ

* * *

ವಧೀಯತೆ || ೧೩೦ || ಅಭ್ಯಕ್ತಶ್ಚಾಶುಚಿಸ್ನಾನಂಕುರ್ವ್ವಾಣಶ್ಚಕ್ರಿಯಾರತಃ | ಭುಂಜಾನಃಪತಿತೊಲೊಕ ನಿಂದಿತೊನೀಚಜೀವಿಕಃ || ೧೩೧ || ಕುಪ್ಯನ್‌ರೊಗೀಚವಿ ಮುಖಃಶೊರ್ಚಕಲಹೌತ್ಟರಃ | ಗಛ್ಛನ್‌ಗುಪ್ತಸ್ತ ದೊನ್ಮತ್ತವ್ರಾತ್ಯಃಕುಂಡಶ್ಚಗೊಳಕಃ || ೧೩೨ || ಅಹಂಕಾರಪ್ರಮತ್ತಶ್ಚಪ್ರತಿವಂದನಯೆವಚ | ಎವಂವಿಧೊಗುಣೊತ್ಕರ್ಷ ಯುತಶ್ಚಾಪಿನವಂದ್ಯತೆ || ೧೩೩ || ವಕ್ತೃಶೊತೃಸಮೂಹೆ ನಯತ್ರಶಾಸ್ತ್ರಪ್ರಸಜ್ಯತೆ | ತ ತ್ರಭೂಮೌಕರೌನ್ಯಸ್ಯವಿಧ್ಯಾದಭಿವಂದನಂ || ೧೩೪ || ಪಂಚಾದ್ಯಾಃಪುರು ಷಾಯೊಗ್ಯಾ ಯೋಗ್ಯಸ್ಥಾನೆ ವಸಂತಿಚೆತ್ | ತತ್ಪುರೊವಸತಿಂಕುರ್ಯ್ಯಾನ್ನಮಸ್ತಸದಸಬೃವೆ || ೧೩೫ || ಯಥಾವಕಾರಮವ್ಯಗ್ರಂಜಿನಾ ಗಮರಹಸ್ತತಃ | ಗುರುಭ್ಯಃಶ್ರುಣು ಯಾದ್ಭಕ್ತ್ಯಾ ಕಥಯೆದ್ವಾಸಧರ್ಮ

* * *

ಯವು ಮಾಡಲ್ಪಡುತ್ತಲಿಧೆ || ೧೩೦ || ಎಣ್ಣೆ ಹಚ್ಚಿಕ್ಕೊಂಡಿರುವಂಥಾವನು ಅಶುಚಿಯನ್ನು ಸ್ನಾನವನ್ನು ಮಾಡುವನು, ಕ್ರಿಯಾಸಕ್ತನು, ಊಟ ಮಾಡುವನು, ಪತಿತನು, ಲೋಕನಿಂದಿತನು, ನೀಚ ಜೀವನ ವುಳ್ಳಂಥಾವನು, ಕೋಪ ಮಾಡುವನು, ರೋಗವುಳ್ಳಂಥಾವನು, ಹಿಂಮುಖನಾದಂಥಾವನು, ದುಃಖ ಪಡುವನು, ಕಲಹಾ ಸಕ್ತನು, ನಡೆಯುವನು, ಮಲಗಿಯಿರುವನು. ಹಾಗೆ ಹುಚ್ಚು ಹಿಡಿದವನು, ಉಪನ ಯನಾದಿ ಸಂಸ್ಕಾರ ಹೀನನು, ಗಂಡ ಇದ್ದಾಗ್ಯುವ್ಯಭಿಚಾರಕ್ಕೆ ಹುಟ್ಟಿದವನು, ಮುಂಡೇ ಮಗನು, ಅಹಂಕಾರ ಯುಕ್ತನು, ಹೇಳದೇ ಇರುವ ಪ್ರತಿವೊಂದನೆಯುಳ್ಳವನು, ಈ ಪ್ರಕಾರವಾದಂಥಾವನು ಗುಣೋತ್ಕರ್ಷ ಯುಕ್ತನಾದಂಥಾವನಾದಾಗ್ಯೂ ಕೂಡ ನಮಸ್ಕರಿಸಲ್ಪಡುವುದಿಲ್ಲ || ೧೩೩ || ಎಲ್ಲಿ ವಕ್ತ್ಯಶ್ರೋತೃಗಳ ಸಮೂಹದಿಂದ ಶಾಸ್ತ್ರವು, ಪ್ರಸಕ್ತಿಸಲ್ಪಡುತ್ತಿದೆಯೋ ಅಲ್ಲಿ ಭೂಮಿಯಲ್ಲಿ ಕೈಗಳನ್ನು ಇಟ್ಟು ಅಭಿವಾದನ ಮಾಡತಕ್ಕದ್ದು || ೧೩೪ || ಐದು ಜನವೇ ಮೊದಲಾದಂಥ ಪುರುಷರುಗಳು ಯೋಗ್ಯ ಸ್ಥಾನದಲ್ಲಿ ವಾಸ ಮಾಡುವಂಥಾವರಾದರೆ ಅವರುಗಳ ಮುಂದುಗಡೆಯಲ್ಲಿ ನಮಸ್ಕಾರವನ್ನು ಮಾಡತಕ್ಕದ್ದು. ಸಭೆಗೋಸ್ಕರ ನಮಸ್ಕಾರವನ್ನು ಹೇಳುತ್ತೇನೆ || ೧೩೫ || ಅನಂತರದಲ್ಲಿ ಯಥಾವಕಾಶವಾಗಿ ತ್ವರೆಯಿಲ್ಲದೇ ಇರೋಣ ಹ್ಯಾಗೋ ಹಾಗೆ ಜಿನ್ನಾಗಮ ರಹಸ್ಯವನ್ನು ಗುರುಗಳ ದೆಶೆಯಿಂದ, ಭಕ್ತಿಯಿಂದ ಕೇಳತಕ್ಕದ್ದು. ಹಾಗಲ್ಲದೇ ಹೋದರೆ ಸಮಾನ

* * *

ಣಾಂ || ೧೩೬ || ಗತ್ವಾನಿಜಗೃಹಂತತ್ರನಿವಿಷ್ಟಶ್ಯುಚಿವಿಷ್ಟರೆ | ಕೃತಂಚಕ್ರಿಯ ಮಣಂಚಕಾರ್ಯ್ಯಂಸ್ವೀಯೈರ್ವಿಚಾರಯೆತ್ || ೧೩೭ || ಮಧ್ಯಾಹ್ನೇಪಿಯಥಾ ದೊಷಂಜಲಾಧಾರೆಗೃಹೇಪಿವಾ | ಕೃತಶುದ್ಧಿಶ್ಯುಚೌದೆ ಶೆಕುರ್ಯ್ಯಾದಾಚಮನಾದಿಕಂ || ೧೩೮ || ಸ್ನಾನಪಾನಾವಶೆಷೆಣಶೌಚಶೆಷೆಣವಾರಿಣಾ | ಉಷ್ಣೆನಾಗಾಲಿತೆ ನಾಪಿಕುರ್ಯ್ಯಾನ್ನಾಚಮನಾದಿಕಂ || ೧೩೯ || ಅಚಮಂಚತಥಾ ಪ್ರಾಣಾಯಾಮಂಮಾರ್ಜ್ಜನಮ ಪ್ಯಥ | ಶಿರಸಃಪರಿಷೆಕಂಚಕುರ್ಯ್ಯಾ ದರ್ಗ್ಘ್ಯಂದ್ವಿಜೋತ್ತಮಃ || ೧೪೦ || ತತೋಜಿನಾ ದಿಪೂಜಾಂಚದೆ ವಾರಾಧನಸದ್ಮನಿ | ಯಥಾವಕಾಶಂಸ್ತ್ರೊತ್ರಾಣಿಜಪಾನಪಿಸಮಾ ಪಯೆತ್ || ೧೪೧ || ಅತಿಥೀನ್‌ಭೊಜ ಯೆತ್ಪಶ್ಚಾದ್ಯಥಾಕಾಲಂಯಥಾವಿಧಿ | ಯತಿಭ್ಯೊಹಿಕೃತಂಶ್ರಾದ್ಧಂಗೃಹೀಣಾಪರಮೊತ್ಸವಃ || ೧೪೨ || ತತಸ್ಸ್ವ

* * *

ಧರ್ಮವುಳ್ಳಂಥಾವರುಗಳಿಗೆ ಹೇಳತಕ್ಕದ್ದು || ೧೩೬ || ತಂನ ಮನೆಯನ್ನು ಪಡದು ಅಲ್ಲಿ ಶುಚಿಯಾದ ಪೀಠದಲ್ಲಿ ಕೂತುಕೊಳ್ಳವನಾಗಿ ಮಾಡಲ್ಪಟ್ಟಂಥಾ ಮಾಡಲ್ಪಡು ವಂಥಾ ಕಾರ್ಯವನ್ನು ಸ್ವಕೀಯರೊಡನೆ ಆಳೋಚಿಸತಕ್ಕದ್ದು || ೧೩೭ || ಮಧ್ಯಾಹ್ನದಲ್ಲಿ ಜಲಾಧಾರದಲ್ಲಾಗಲೀ ಮನೆಯಲ್ಲಾಗಲೀ ಮಾಡಲ್ಪಟ್ಟ ಶುದ್ಧಿ ಉಳ್ಳಂಥಾವನಾಗಿ ಶುಚಿಯಾದ ಪ್ರದೇಶದಲ್ಲಿ ಆ ಚಮನ ಮುಂತಾದ್ದನ್ನು ಮಾಡತಕ್ಕದ್ದು || ೧೩೮ || ಸ್ನಾನ ಪಾನಗಳ ದೆಶೆಯಿಂದ ವುಳಿದಂಥ, ಶೌಚ ಶೇಷವಾದಂಥ, ಬಿಸಿಯಾದಂಥ, ಸೋದಿಸಲ್ಪಡದೇ ಇರುವಂಥ, ನೀರಿನಿಂದ ಅಚಮನ ಮೊದಲಾದ್ದನ್ನು, ಮಾಡತಕ್ಕದ್ದಲ್ಲ || ೧೩೯ || ಬ್ರಾಹ್ಮಣ ಶ್ರೇಷ್ಠನು ಆಚಮನವನ್ನೂ, ಹಾಗೇ ಪ್ರಾಣಾಯಾಮವನ್ನೂ, ಮಾರ್ಜನೆಯನ್ನೂ, ಶಿರಃ ಪರಿಷೇಚನೆಯನ್ನೂ, ಅರ್ಘೆವನ್ನೂ ಮಾಡತಕ್ಕದ್ದು || ೧೪೦ || ಅನಂತರ ದೇವತಾರ್ಚನೇ ಮನೆಯಲ್ಲಿ ಜಿನಾದಿ ಪೂಜೆಯನ್ನು ಯಥಾವಕಾಶವಾಗಿ ಸ್ತೋತ್ರಗಳನ್ನೂ ಜಪಗಳನ್ನೂ, ಕೂಡ ಪೂರ್ತಿ ಮಾಡತಕ್ಕದ್ದು || ೧೪೧ || ಅನಂತರದಲ್ಲಿ ಕಾಲವನ್ನು ಅತಿಕ್ರಮಿಸದೆ ವಿಧಿಯನ್ನು ಅತಿಕ್ರಮಿಸದೆ ಅತಿಥಿಗಳನ್ನು ಭೋಜನ ಮಾಡಿಸತಕ್ಕದ್ದು. ಎತಿಗಳಿಗೋಸ್ಕರ ಮಾಡಲ್ಪಟ್ಟ ಶ್ವಾದ್ಧವು ಅಂದರೆ ಶ್ರದ್ಧೆಯಿಂದ ಆಹಾರ ಕೊಡೋಣವು ಗೃಹಸ್ಥರುಗಳಿಗೆ ಉತ್ಕೃಷ್ಟವಾದ ಸಂತೋಷವು, ನಿಶ್ಚಯವು || ೧೪೨ || ಅನಂತರದಲ್ಲಿ ತಾನೂ ಕೂಡ, ಕಾಲು, ಕೈ, ಮುಖ, ಇವುಗಳ ಶುದ್ಧಿಉಳ್ಳಂ

* * *

ಯಂಚವಿಹಿತಪಾದಹಸ್ತಸ್ಯಶುದ್ಧಿಕಃ | ಬಾಂದವಾಭ್ಯಾಗತೈಸ್ಸಾರ್ಧಂ ಭುಂಜೀತವಿಭವೊ ಚಿತಂ || ೧೪೩ || ಬ್ರಾಹ್ಮಣೌಃಕ್ಷತ್ರಿಯ ಗೃಹೆಕ್ಷತ್ರಿಯಾವೈಶ್ಯಸದ್ಮನಿ | ವೈಶ್ಯಾಕ್ಷತ್ರಗೃಹೆ ಸರ್ವ್ವೆಬುಂಜಂತೆವಿಪ್ರಸದ್ಮನಿ || ೧೪೪ || ತದಾಭೊಜನಶಾಲಾಯಾಂವಿಣ್ಮೂತ್ರೊ ಚ್ಛಿಷ್ಟಪಾತ್ರಕಂ | ಪೂಯಚರ್ಮಾಸ್ತಿರಕ್ತಂಚಮಾರ್ಜನೀಮಲಿನಾಂಬರಂ || ೧೪೫ || ಪಂಕೊಮೃತಾಂಗೀದುರ್ಗ್ಗಂಧಸಮೊರೊಗಾದಿಪೀಡಿತಃ | ಯದಿತಿಷ್ಠ ತಿಧೂಮೊವಾ ತತ್ರಭುಕ್ತಿರ್ನಿಪಿಧ್ಯತೆ || ೧೪೬ || ಭೊಜನೆಪಣ್ತಿಯೊಗ್ಯಸ್ಯುತ್ಕು ಲೀನೊಮಲಿನಾಂಬರಃ | ಸ್ನಾತೊಣುವ್ರತಿಕಃಪೂರ್ಣ್ನಾಂ ವಯವೊರೊಗವರ್ಜಿತಃ || ೧೪೭ || ಯಥಾಲಾಭೆ ನಸಂತುಷ್ಟೊನಿ ರ್ವಿಕಾರಃಪರಾರ್ತ್ಥಕೃತ್ | ಬ್ರಹ್ಮಚಾರೀಗೃಹಸ್ಥೊವಾಶ್ಲಾಘ್ಯವೃತ್ತಿರಮತ್ಸರಃ || ೧೪೮ || ಪುನಃಪಣ್ತೆರಯೊ ಗ್ಯಸ್ಸ್ಯಾದವಂಶೊಮಲಿನಾಂಬರಃ | ಅಸ್ನಾತಶ್ಚದು ರಾಚಾರ

* * *

ಥಾವನಾಗಿ ಬಂಧುಜನಗಳು, ಅಭಿಮುಖವಾಗಿ ಬಂದಂಥಾವರುಗಳು, ಇವರುಗ ಳೊಡನೇ ಕೂಡ ವಿಭಕ್ಕೆ ಯೋಗ್ಯವಾಗಿ ಭೇಜನ ಮಾಡತಕ್ಕದ್ದು || ೧೪೩ || ಬ್ರಾಹ್ಮಣರುಗಳು ಕ್ಷತ್ರಿಯನ ಮನೆಯಲ್ಲಿ, ಕ್ಷತ್ರಿಯರು ವೈಶ್ಯನಮನೆಯಲ್ಲಿ, ವೈಶ್ಯರು ಕ್ಷತ್ರಿಯನ ಮನೆಯಲ್ಲಿ ಸಮಸ್ತಜನಗಳು ಬ್ರಾಹ್ಮಣನ ಮನೆಯಲ್ಲಿ ಊಠಮಾಡತಕ್ಕದ್ದು || ೧೪೪ || ಆ ಸಮಯದಲ್ಲ ಭೋಜನ ಶಾಲೆಯಲ್ಲಿ, ಮಲ, ಮೂತ್ರ, ಯೆಂಜಲು ಪಾತ್ರೆ, ಕೀವು, ಚರ‍್ಮ ಮೂಳೆ, ರಕ್ತ, ಕಸ, ಪೊರಕೆ, ಕೊಳಕುಬಟ್ಟೆ ಕೆಸರು, ಸತ್ತ ಪ್ರಾಣಿಗಳ ದುರ್ಗಂಧ, ಕತ್ತಲೆ, ರೋಗಾಧಿಗಳಿಂದ ಪೀಡಿತನಾದಂಥಾವನು, ಹೊಗೆ, ಇವುಗಳು ಯಿರುವಂಥಾದ್ದಾದರೆ ಅಲ್ಲಿ ಭೋಜನ ಮಾಡುವುದು ನಿಷೇದವು || ೧೪೬ || ಭೋಜನದಲ್ಲಿ ಪಂಙ್ತಗೆ ಯೋಗ್ಯನಾದಂಥಾವನಾದರೋ, ಸತ್ಕುಲವುಳ್ಳಂ ಥಾವನು, ನಿರ್ಮಲವಾದ ವಸ್ತುವುಳ್ಳಂಥಾವನು, ಸ್ನಾನ ಮಾಡಿದಂಥಾವನು, ಅಣುವ್ರತುಳ್ಳಂಥಾವನು, ಪೂರ್ಣಾಂಗನು, ರೋಗದಿಂದ ಬಿಡಲ್ಪಟ್ಟವನು, ಯಥಾಲಾಭದಿಂದ ಸಂತೋಷ ಹೊಂದುವನು, ವಿಕಾರವಿಲ್ಲದೇ ಇರುವಂಥಾವನು, ಶ್ಲಾಘ್ಯವಾದ ಜೀವನವುಳ್ಳವನು ಬ್ರಹ್ಮಚಾರಿಯು, ಗೃಹಸ್ಥನಾದಾಗ್ಯು ಆಗುತ್ತಾನೆ || ೧೪೮ || ಪಙ್ತಗೆ ಆಯೋಗ್ಯನಾದವನಾದರೋ, ತನ್ನ ಕುಲವಲ್ಲದೇ ಇರುವನು, ಕೊಳಕು ಬಟ್ಟೆ ಇರುವನು ಸ್ನಾನ ಮಾಡದೆ ಇರೋಣವು ದುರಾಚಾರ

* * *

ಶ್ಛಿನ್ನಾಂಗಃಪರದೂಷಕಃ || ೧೪೯ || ಸರ್ವೆಷಾಮಶ್ನತಾಭುಕ್ತಿಪಾತ್ರಂಚಜಲಪಾತ್ರಕಂ | ಅಸನಂಚಪೃಥು ಕ್ಕಲ್ಪ್ಯಂಸಹಭುಕ್ತಿರ್ನಿಷಿಧ್ಯತೆ || ೧೫೦ || ಅನ್ನಂಪ್ರೊಕ್ಷ್ಯಾಮೃತೀ ಕೃತ್ಯಪರಿಷಿಚ್ಯಶುಭೈರ್ಜ್ಜಲೈಃ | ಅಪೊಶನಂ ಚಗೃಹ್ಣೀಯಾತ್ಪಂಚಪ್ರಾಣಾಹು ತೀರಪಿ || ೧೫೧ || ತದಾಪಕ್ವಂಕವೊಷ್ಣಂಚಭೊಜ್ಯಮನ್ನಾಮಕುತ್ಸಯನ್ | ಭುಂಜೀ ಠದಕ್ಷಿಣೇ ನಾನ್ನಂಸಂಶೊಧ್ಯವ್ಯಂಜನಾನ್ವಿತಂ || ೧೫೨ || ಜಲಪಾತ್ರಂತು ವಾಮೆನಧೃತ್ವಾ ಹಸ್ತೆನದಕ್ಷಿಣಂ | ಈಷದಾಧಾರಮಾದಾಯಪಿಬೆತ್ತೊಯಂಶನೈಶ್ರ‍್ಕನೈಃ || ೧೫೩ || ಭೋನೀಯೊದನಿಕೆಶನ ಖಶುಕ್ತಿವಿಲೊಕನೆ | ಮಷಿತಂತುತುಷಪ್ರೆತಪ್ರಾಣಿತ್ಯಕ್ತಾರ್ತ್ತ ಮಿಶ್ರಣೆ || ೧೫೪ || ಪ್ರದೀಪೆಜಂತುಪತನೆ ತದಾದೀಪಸ್ಯನಾಶನೆ | ಉಪದ್ರವೆಬಿ ಡಾಲಾದ್ಯೈಃಪ್ರಾಣಿನಂದುರ್ವಚಃಶೃತೌ || ೧೫೫ || ಶುನಾಂಶ್ರುತೆಕ ಲಿಧ್ವಾನೆಗ್ರಾಮೃ ಘೃಷ್ಟಿಧ್ವನಿಶ್ರುತೌ | ಪೀಡಾ

* * *

ನು, ಕತ್ತರಿಸಿದ ಅಂಗವುಳ್ಳಂಥಾವನು, ಅನ್ಯರನ್ನು ದೂಷಿಸುವಂಥಾವನು ಆಗುತ್ತಾನೆ || ೧೪೯ || ಊಠಮಾಡುವಂಥಾ ಎಲ್ಲರಿಗೂ ಊಟಾ ಮಾಡತಕ್ಕ ಪಾತ್ರೆಯು, ಜಲಪಾತ್ರೆಯು, ಪೀಠವೂ ಕೂಡ ಪ್ರತ್ಯೇಕವಾಗಿ ಮಾಡತಕ್ಕದ್ದು. ಸಹಭುಕ್ತಿಯುನಿಷೇದಿಸಲ್ಪಡುತ್ತಿಲಿಧೆ || ೧೫೦ || ಅನ್ನವನ್ನು ಸಂಪ್ರೋಕ್ಷಿಸಿ ಅಮೃತವಾಗಿ ಮಾಡಿ ಪರಿಷೇಚಿಸಿ ಮಂಗಳವಾದ ಜಲಗಳಿಂದ ಅಪೋಶನವನ್ನು ಪಂಚಪ್ರಾಣಾಹುತಿಗಳನ್ನು ಗ್ರಹಿಸತಕ್ಕದ್ದು || ೧೫೧ || ಆ ಸಮಯದಲ್ಲಿ ಪಕ್ವವಾದಂಥ, ಸ್ವಲ್ಪ ಬಿಸಿಯಾಗಿರುವಂಥ, ಊಠಮಾಡುವದಕ್ಕೆ ಯೋಗ್ಯವಾದಂಥಾ ಅನ್ನವನ್ನು ಕುತ್ಸಿತವಾಗಿ ಮಾಡದೇ ಇರುವಂಥಾವನಾಗಿ ಅನ್ನವನ್ನು ಶೋಧಿಸಿ ವ್ಯಂಜನಗಳಿಂದ ಕೂಡಿದಂಥಾದ್ದನ್ನು ಬಲಗೈಯಿಂದ ಊಠಮಾಡತಕ್ಕದ್ದು || ೧೫೨ || ಜಲಪಾತ್ರೆಯನ್ನು ಎಡಗೈಯಿಂದ ಧರಿಸಿ, ಬಲಗೈಯನ್ನು ಸ್ವಲ್ಪ ಆಧಾರವಾಗಿ ತೆಗೆದುಕೊಂಡು ನೀರನ್ನು ಮೆಲ್ಲಮೆಲ್ಲನೆ ಕುಡಿಯತಕ್ಕದ್ದು || ೧೫೩ || ಊಠ ಮಾಡತಕ್ಕ ಅನ್ನದಲ್ಲಿ, ಕೂದಲು, ಉಗುರು, ಕಪ್ಪೇಚಿಪ್ಪು, ಇವುಗಳ ಕಾಣುವದರಲ್ಲಿ ಮಸಿ, ದಾರ ಹೊಟ್ಟು, ಸತ್ತಪ್ರಾಣಿ, ತಾನು ಬಿಟ್ಟಿದ್ದವಸ್ತು, ಇವುಗಳ ಮಿಶ್ರದಲ್ಲಿ, ದೀಪದಲ್ಲಿ ಜಂತುಗಳು ಬೀಳುವದರಲ್ಲಿ, ಆಸಮಯದಲ್ಲಿ ದೀಪನಾಶದಲ್ಲಿ, ಬೆಕ್ಕು ಮೊದಲಾದವುಗಳಿಂದ ಪ್ರಾಣಿಗಳ ಉಪದ್ರವದಲ್ಲಿ, ಕೆಟ್ಟಮಾತು ಕೇಳುವದರಲ್ಲಿ, ಕೇಳಲ್ಪಟ್ಟಂಥಾ

* * *

ರೊಡನನಿಶ್ವಾನಶ್ರುತೌಭುಕ್ತಿಂಪರಿತ್ಯಜೇಶ್ || ೧೫೬ || ಭಕ್ತೌಸ್ವಸ್ಯಕ್ಷುತಂವಾತಿ ಕಾಸೊರೊ ದನಮೆವವಾ | ವಿಟಸಂಜ್ಞಾವಾಯದಿಭವೆತ್ತದಾಭುಕ್ತಿಂ ಪರಿತ್ಯಜೆತ್‌ || ೧೫೭ || ಭುಕ್ತ್ವಾಂತೆಕೊಷ್ಠಶುದ್ಧ್ಯರ್ತ್ಥಂಪಾಣಿ ಪೂರ್ಣ್ನೊದಕಂಪಿಬೆತ್ | ಹಸ್ತಸ್ಯಪಾದೆಪ್ರಕ್ಷಾಲ್ಯ ಶುಚೌದೆಶೆತಥಾಚಮೆತ್ || ೧೫೮ || ಅಷ್ಟೊತ್ತರಶತಂ ಪಾದಾಂಸ್ತತೊಗತ್ವಾಶನೈಶ್ಶನೈಃ | ಉಪವಿಶ್ಯಘಟೀಮೇಕಾಂಸ್ವಪೆದ್ವವಾಮಪಾರ್ಶ್ವತಃ || ೧೫೯ || ದಿವಸೆನಸ್ವಪೆದ್ಭೂರಿತೆನ ರೊಗಾಭವಂತಿವೈ | ಕಾರ್ಯಹಾನಿಶ್ಚತಸ್ಮಾದ್ಧಿದಿವಾಸ್ವಾಪೊನಿಷಿದ್ಯತೆ || ೧೬೦ || ಸ್ವಯಂಪಶ್ಯೆಜ್ಜೀವಧನಂ ಸಮೀಪೆಕಾರಯೆತ್ಕೃಷಿಂ | ವೃದ್ಧಬಾಲಕ್ಷೀಣಪಶೂನ್‌ಬಾಂಧ ವಾನಿವಪೊಷಯೆತ್ || ೧೬೧ || ಸಂಧ್ಯಾಸುನಿದ್ರಾಸ್ತ್ರೀಸೇವಾಭುಕ್ತ್ಯದ್ಯಯನಚಿಂತನಂ | ಮುಹುರ್ವಿವಾ

* * *

ನಾಯಿಗಳ ಕೆಟ್ಟಧ್ವನಿಯಲ್ಲಿ, ಊರುಹಂದಿ, ಕಾಡುಹಂದಿ, ಇವುಗಳ ಧ್ವನಿ ಕೇಳುವದರಲ್ಲಿ, ಬಾಧೆಯಿಂಧ ಅಳುವ ಧ್ವನಿಶ್ರವಣದಲ್ಲಿ ಭೋಜನವನ್ನು ಬಿಡತಕ್ಕದ್ದು || ೧೫೬ || ಭೋಜನದಲ್ಲಿ ತನಗೆ ಅತಿಸೀನು, ಅತಿಕೆಂಬಲು, ರೋದನ, ಮಲಸಂಜ್ಞಾ, ಆದಂಥಾದ್ದೇ ಆದರೆ ಭೋಜನವನ್ನು ಬಿಡತಕ್ಕದ್ದು || ೧೫೭ || ಭೋಜನದ ಕೊನೆಯಲ್ಲಿ ಕೋಷ್ಠ ಶುದ್ಧ್ಯರ್ಥವಾಗಿ ಕೈಯ್ಯಲ್ಲಿ ತುಂಬಲ್ಪಟ್ಟ ನೀರನ್ನು ಪಾನ ಮಾಡತಕ್ಕದ್ದು. ಕೈ, ಮುಖ, ಕಾಲು ಇವುಗಳನ್ನು ತೊಳೆದು ಶುಚಿಯಾದ ಪ್ರದೇಶದಲ್ಲಿ ಅಪೂರ್ವೋಕ್ತ ಪ್ರಕಾರವಾಗಿ ಆಚಮನ ಮಾಡತಕ್ಕದ್ದು || ೧೫೮ || ಅನಂತರದಲ್ಲಿ ನೂರೆಂಟಾದಂಥಾ ಹೆಜ್ಜೆಗಳನ್ನು ಮೆಲ್ಲಮೆಲ್ಲಗೆ ನಡದು ಕೂತುಕ್ಕೊಂಡು ಒಂದು ಘಳಿಗೆಕಾಲದಲ್ಲಿ ಎಡದಭಾಗದಿಂದ ಮಲಗಿಕೊಳ್ಳತಕ್ಕದ್ದು || ೧೫೯ || ಹಗಲಲ್ಲಿ ಬಹಳವಾಗಿ ಮಲಗಿಕೊಳ್ಳಬಾರದು. ಅದರಿಂದ ರೋಗಗಳು, ಕಾರ್ಯಹಾನಿಯು ಆಗುತ್ತವೆ. ಆಕಾರಣದ್ದೆಶೆಯಿಂದ ನಿಶ್ಚಲವಾಗಿ ಹಗಲ ನಿದ್ರೆಯು ನಿಷೇಧಿಸಲ್ಪಟ್ಟಿದೆ || ೧೬೦ || ಗೋವು ಮುಂತಾದ ಜೀವದನವನ್ನು ತಾನೇ ನೋಡತಕ್ಕದ್ದು. ಸಮೀಪದಲ್ಲಿ ಕೃಷಿಯನ್ನು ಮಾಡತಕ್ಕದ್ದು ಮುದಿಯವಾದಂಥ, ಬಾಲವಾದಂಥ, ಕ್ಷೀಣವಾದಂಥ, ಪಶುಗಳನ್ನು ಬಾಂಧವರೋಪಾದಿಯಲ್ಲಿ ರಕ್ಷಿಸತಕ್ಕದ್ದು || ೧೬೧ || ಸಂಧ್ಯಾಕಾಲದಲ್ಲಿ ನಿದ್ರೆ, ಸ್ತ್ರೀಸೇವೆ, ಭೋಜನ ಅಧ್ಯಯನ, ಆಳೋಚನೆ, ಇವನ್ನೂ ಸತ್ಪುರುಷರುಗಳೊಡನೆ ಭಾರಿಭಾರಿಗೂ ವಿವಾದವ

* * *

ದೆಂಸುಜನೈರ್ವಿಗ್ರಹಂಚಪರಿತ್ಯಜಿತ್‌ || ೧೬೨ || ಭುಂಜಾನೊಪ್ಯೈಹಿಕಂಸೌಖ್ಯಂ ಪರಲೊಕಂಪ್ರಚಿಂ ತಯೆ | ಸ್ತನಮೆತ್‌ಕಂಪಿಬನ್ನನ್ಯಸ್ತನಮರ್ದ್ದೀವಬಾಲಕಃ || ೧೬೩ || ಸರ್ವೊಪಿತೌಕಿ ಕಾಚಾರೊಜೈನಾನಾ ಮವಿಗರ್ಹಿತಃ | ಯತ್ರ ದರ್ಶನಶುದ್ಧಿರ್ನಯತ್ರನ ವ್ರತದೂಷಣಂ || ೧೬೪ || ಎವಂಸಂಧ್ಯೊಪಾಸನಾಡಿ ಕ್ರಿಯಾಯಾಂಸರ್ವ್ವಜ್ಞಸ್ಯಾರಾಧ ನಾಯಾಂಚಸಕ್ತಃ | ಭುಕ್ತ್ವಾಸಮ್ಯಗ್ನಾಕಲೊಕಾದಿಸೌಖ್ಯಂಪ್ರಾಂತೆಯಾಸ್ಯತ್ಯಕ್ಷಯ ಬ್ರಹ್ಮರೂಪಂ ||

ಇತ್ಯಾರ್ಷೆಸ್ಮೃತಿಸಂಗ್ರಹ ನಿತ್ಯಕರ್ಮಾನುಷ್ಠಾ
ನನಾಮಷಷ್ಠೋಧ್ಯಾಯಃ
ಸಪ್ತಮೊಧ್ಯಾಯಃ
ಆಧೈಷಾಂಜಾತಿಸಂಸ್ಕಾರಂಧೃಢಯನ್ನಿತಿಸೊಧಿರಾಟೌ | ಸಂಪ್ರೊ

* * *

ನ್ನೂ, ವಿರೋಧವನ್ನೂ, ಕೂಡ ಬಿಡತಕ್ಕದ್ದು || ೧೬೨ || ಒಂದು ಸ್ತೆನವನ್ನು ಪಾನಮಾಡುತ್ತಿರುವಂಥ, ಮತ್ತೊಂದು ಸ್ತನವನ್ನು ಮರ್ದನೆ ಮಾಡುತ್ತಿರುವಂಥ, ಬಾಲಕನೋಪಾದಿಯಲ್ಲಿ, ಈ ಜನ್ಮದ ಸುಖವನ್ನು ಅನುಭವಿಸುವ ನಾದಾಗ್ಯೂ ಕೂಡ ಪರಜನ್ಮವನ್ನು ಚಿಂತಿಸತಕ್ಕದ್ದು || ೧೬೩ || ಎಲ್ಲಿ ದರ್ಶನಹಾನಿ ಇಲ್ಲವೋ ಎಲ್ಲಿ ವ್ರತದೊಷಣೆಯಿಲ್ಲವೋ ಆ ಸಮಸ್ತವಾದ ಲೌಕೀಕಾಚಾರವು ಜೈನರುಗಳಿಗೆ ನಿಂದಿತವಾದ್ದಲ್ಲ || ೧೬೪ || ಈ ……..ವಾಗಿ ಸಂಧ್ಯೋಪಾಸನಾದಿ ಕರ್ಮ್ಮದಲ್ಲಿ, ಸರ‍್ವಜ್ಞ ಪೂಜೆಯಲ್ಲಿ ಕೂಡ ಆಸಕ್ತನಾದವನು ಚಂದಾಗಿ ಸ್ವರ್ಗಲೋಕಾದಿ ಸೌಖ್ಯವನ್ನು ಅನುಭವಿಸಿ ಕೊನೆಗೆ ನಾಶರಹಿತವಾದ ಪರಮಾತ್ಮ ಸ್ವರೂಪವನ್ನು ಪಡೆಯುತ್ತಾನೆ |

ಇತ್ಯಾರ್ಷೆ ಸ್ಮತಿಸಂಗ್ರಹೆ ನಿತ್ಯಕರ್ಮಾನುಷ್ಠಾನ
ನಾಮ ಷಷ್ಠೋಧ್ಯಾಯಃ

* * *