ಗ್ರಹೊನಯಃ | ಸ್ವಜಾತೆರವಿರೋಧೆನದೃಷ್ಟೆಷ್ಟಾಬ್ಯಾಂಕಥಂಚನ || ೨೦ || ಸಮಕೀಭಾವಸಮ್ಯಕ್ರ‍್ವೆವ ರ್ತ್ತಮಾನೊಹಿಗೃಹ್ಯತೆ | ನಿರುಕ್ತ್ಯಾಲಕ್ಷಣಂ ತಸ್ಯತಥಾಸತಿ ವಿಭಾವ್ಯತೆ || ೨೧ || ಶುದ್ಧದ್ರವ್ಯಮ ಭಿಪ್ರತಿಸನ್ಮಾತ್ರಂಸಂಗ್ರಹಃಪರಃ | ಸಚಾಶೆಷವಿಶೆಷಷುಸದೌದಾಶೀನ್ಯಬಾಗಿಹ || (ವ್ಯವಹಾರನಯ) ಸಂಗ್ರಹೆಣಗೃಹಿತಾನಾಮರ್ತ್ಥಾನಾಂವಿಧಿಪೂರ್ವ್ವಕಃ | ಯೊವಹಾರೊ ವಿಭಾಗಸ್ಯಾದ್ವ್ಯವಹಾರನಯಸ್ಸನಃ || ೨೩ || (ಋಜಿಸೂತ್ರನಯ) ಋಜಿಸೂತ್ರಂ ಕ್ಷಣಧ್ವಂಸೀವಸತ್ತೊತ್ರಯೆದೃಜಿ | ಪ್ರಾಧಾನೈನಗುಣೀ ಭಾವಾದ್ದ್ರವ್ಯಸ್ಯಾನರ್ಪ್ಪಣಾತ್ಸತಃ || ೨೪ || (ಶಬ್ದನಯವಿಚಾರ) ಕಾಲಾದಿಭೆದ ತೊರ್ತ್ಥಸ್ಯಬೆದಂಯಃ ಪ್ರತಿಪಾದಯೆತ್ | ಸೂತ್ರಶಶಬ್ದನಯಶ್ಯಬ್ದಪ್ರಧಾನತ್ವಾದುದಾಹೃತಃ || ೨೫ || (ಸಮಭಿರೂ

* * *

ಕಾರ್ಥದಿಂದ ಗ್ರಹಿಸತಕ್ಕದ್ದು ಸಂಗ್ರಹನಯವು || ೨೦ || ಚಂದಾಗಿ ವಟ್ಟು ಮಾಡುವ ಒಳ್ಳೇಯುಕ್ತಿಯಲ್ಲಿ ಇರುವಂಥಾದ್ದು ಸಂಗ್ರಹನಯವಿಂತೆಂದು ಹೇಳಲ್ಪಡುತ್ತಲಿಧೆ. ನಿರುಕ್ತಿಯಿಂದ ಅದರ ಲಕ್ಷಣವುಗ್ರಹಿಸಲ್ಪ ಡುತ್‌ಎ. ಹಾಗಾದರೆ ಅದು ಚಂದಾಗಿ ತಿಳಿಯಲ್ಪಡುತ್ತೆ ||೨೧ || ಮತ್ತೊಂದಾದಂಥ ಸಂಗ್ರಹನಯವು ಸನ್ಮಾತ್ರವಾದಂಥ ಶುದ್ಧದ್ರವ್ಯವನ್ನು ಪಡೆಯುತ್ತಲಿಧೆ. ಇಲ್ಲಿ ಆ ಸಂಗ್ರಹನಯವಾದರೆ ಸಮಸ್ತವಾದಂಥ ವಿಶೇಷಗಳಲ್ಲಿ, ಸರ್ವದಾ ಉದಾಶೀನದ ಭಾವವನ್ನು ಪಡದಂಥಾದ್ದು || ೨೨ || (ಅಥವ್ಯವಹಾರನಯ ಪ್ರರೂಪಣ.) ಸಂಗ್ರಹದಿಂದ ಗ್ರಹಿಸಲ್ಪಟ್ಟಂಥ, ಪದಾರ್ಥಗಳನ್ನು, ವಿಧಿಪೂರ‍್ವಕವಾಗಿ ತೆಗೆದುಕೊಳ್ಳತಕ್ಕಂಥಾ ಅದು ನಮಗೆ ವ್ಯವಹಾರ ನಯವಾಗುತ್ತೆ || ೨೩ || (ಅಥ ಋಜು ಸೂತ್ರನಯ ವಿಚಾರ) ಕ್ಷಣದ್ವಂಸಿಯಾದಂಥ ವಸ್ತುವನ್ನು ಋಜಿವಾಗಿಯಾವಾದು ಹೇಳಲ್ಪಡುತ್ತಲಿಧೆಯೊ ಅದು ಪ್ರಾಧಾನ್ಯದಿಂದ ಗುಣವಿಳ್ಳಭಾವದ್ಪೆಶೆಯಿಂದ ಇರುವಂಥಾ ದ್ರವ್ಯದ ಅರ್ಪಣೆ ಇಲ್ಲದೇ ಇರುವದರ ದೆಶೆಯಿಂದ ಋಜುಸೂತ್ರನಯವಾಗುತ್ತಿದೆ || ೨೪ || (ಅಥಶಬ್ದನಯವಿಚಾರ) ಕಾಲಾದಿ ಭೆದದ್ದೆಶೆಯಿಂದ ಅರ್ಥದ ಭೇದವನ್ನು ಯಾವದು ಹೇಳುತ್ತಿಧೆಯೊ ಅದು ಶಬ್ದ ಪ್ರಧಾನತ್ವದ್ದೆಶೆಯಿಂದ ಶಬ್ದನಯವಿಂತೆಂದು ಹೇಳಲ್ಪಟ್ಟಿತು || ೨೫ || (ಅಥ ಸಮಭಿರೂಢ ನಯವಿಚಾರ) ಪರ್ಯಾಯ ಶಬ್ದ ಭೇದದಿಂದ ಭಿನ್ನವಾದಂಥಾ ಅರ್ಥಕ್ಕೆ ಆರೋಪಣೆ ದೆಶೆಯಿಂದ ಆ

* * *

ಢ ನಯವಿಚಾರ) ಪರ್ಯ್ಯಾಯಶಬ್ದಭೆದೆನಭಿನ್ನಾರ್ತ್ಥಸ್ಯಾಭಿರೊಹಣಾತ್ | ನಯಸ್ಸಮ ಭಿರೂಡ ಸ್ಯಾತ್ಪೂರ್ವ್ವವಚ್ಚಾಸ್ಯನಿಶ್ಚಯಃ || ೨೬ || (ಏವಂಭೂತನಯ ವಿಚಾರ) ತತ್ಕ್ರಿಯಾಪರಿಣಾಮೊರ್ತ್ಥ ಸ್ತದೈವೆತಿವಿನಿಶ್ಚಯಾತ್ | ಏವಂಭೂತೆನನೀಯೆತಕ್ರಿಯಾಂತರ ಪರಿನ್ಮುಖಃ || ೨೭ || (ಅರ್ತ್ಥಪ್ರಧಾನತ ಶಬ್ದ ಪ್ರಧಾನ ನಯಭೇದವಿಚಾರ) ತತ್ರಜ್ಜಿ ಸೂತ್ರಪಯ್ಯಂ ತಾಶ್ಚತ್ವಾರೊರ್ತ್ಧನಯಾಮತಾಃ | ತ್ರಯಶಬ್ದನಯಾ ಶ್ಯೆಷಾಃಶಬ್ದವಾಚ್ಯಾರ್ತ್ಥಗೊಚರಾಃ || ೨೮ || (ಬಹುವಿಷಯಾಲ್ಪ ವಿಷಯನಯನ ವಿಚಾರ) ಪೂರ್ವ್ವಃಪೂರ್ವ್ವೊನಯೊಭೂಮವಿಷಯಃಕಾರಣಾತ್ಮಕ | ಪರಃಪರಃ ಪುನಸೂಕ್ಷ್ಮ ಗೊಚರೊಹೆತುಮಾನಿಹ || ೨೯ || (ಪ್ರಮಾಣನಯವಿವೆಕ ವಿಶೇಷವಿಚಾರ) ನಯಾರ್ತ್ಥೆಷುಪ್ರಮಾಣಸ್ಯವೃತ್ತಿಸ್ಸಕಲದೆಶಿನಃ |

* * *

ನಯವು ಸಮಾಭಿ ರೂಡವಿಂತೆಂದು ಆಗುತ್ತಿಧೆ. ಪೂರ್ವದೋಪಾದಿಯಲ್ಲಿ ಇದರ ನಿಶ್ಚಯವು || ೨೬ || (ಅಥ ಎವಂ ಭೂತನಯ ವಿಚಾರ) ತತ್ಕ್ರಿಯಾ ಪರಿಣಾಮವುಳ್ಳಂಥಾ ಅರ್ಥವು ಹಾಗೇ ಇಂತೆಂದು ನಿಶ್ಚಯದ್ದೆಶೆಯಿಂದ ಕ್ರಿಯಾಂತರ ನೋಡದೇ ಇರುವಂಥಾದ್ದಾಗಿ ಈ ಪ್ರಕಾರವಾದಂಥಾದ್ದರಿಂದ (ಏವಂಭೂತನೆಯ) ಅನ್ನಿಶಿಕ್ಕೊಳ್ಳುತ್ತಿದೆ || ೨೭ || (ಅರ್ಥಪ್ರಧಾನಶಬ್ದಪ್ರಧಾನ ನಯಭೇದನಿರೂಪಣ) ಆ ಸಪ್ತನಯಗಳಲ್ಲಿ, ನೈಗಮ ಸಂಗ್ರಹ ವ್ಯವಹಾರ ಋಜಿಸೂತ್ರಗಳೆಂಬ ನಾಲ್ಕು ಅರ್ಥ ನಯಗಳಂತಲೂ, ಉಳಿದ ಶಬ್ದ ಸಮಭಿರೂಢ ಏಂಭೂತಗಳೆಂಬ ಮೂರು ನಯಗಳು, ಶಬ್ದ ನಯಗಳಾಗಿಯು ಸಂಮತವಾದಂಥಾವುಗಳು ಇದು ಶಬ್ದದಿಂದ ಹೇಳಲ್ಪಡತಕ್ಕ ಅರ್ಥ ವಿಷಯವಾದಂಥಾವುಗಳು || ೨೮ || (ಬಹುವಿಷಯಾಲ್ಪ ವಿಷಯ ನಯವಿಚಾರ) ಮೊದಲನೇ ಮೊದಲನೇ ನಯವು ಬಹು ವಿಷಯವುಳ್ಳಂಥಾದ್ದು. ಇದು ಕಾರಣಾತ್ಮಕವಾದಂಥಾದ್ದು, ಕೊನೆಕೊನೆದಾದಂಥಾ ನಯವು ಹೇತುವುಳ್ಳಂಥಾದ್ದು. ಇದು ಸೂಕ್ಷ್ಮಗೋಚರವಾದಂಥಾದ್ದು || ೨೯ || ಪ್ರಮಾಣದಲ್ಲೇ ನಯಬರುತ್ತೆ, ನಯದಲ್ಲಿ ಪ್ರಮಾಣ ಬರೋದಿಲ್ಲ. ಪ್ರಯೋಜನ ಸಕಲವನ್ನು ಹೇಳತಕ್ಕಂಥಾ ಪ್ರಯಾಣಕ್ಕೆ ನಯಾರ್ಥಗಳಲ್ಲಿ ಪ್ರವರ್ತನೆ ಯಾಗುರ್ತ್ತೆಮುಖ್ಯವಾಗಿ ಸಂಪೂರ್ಣವಾದಂಥ ಪ್ರಮಾಣಾರ್ಥದಲ್ಲಿನಯಗಳಿಗೆ ಪ್ರವೃತ್ತಿ ಇಲ್ಲ || ೩೦ || (ಅಥನಿಕ್ಷೇಪ) ನಾಮಲಕ್ಷಣ) ತನ್ನ ಇಷ್ಟದ್ದೆಶೆಯಿಂದ

* * *

ಭವೆನ್ನ ತುಪ್ರಮಾಣರ್ತ್ಥೆನಯಾನಾಮಖಿಲೆಂಹಸಾ || ೩೦ || (ನಾಮ) ಸಂಜ್ಞಾಕರ್ಮ ನಪೆಕ್ಷ್ಯೈವನಿಮಿತ್ತಾಂತರವಿಷ್ಟತಃ | ನಾಮಾನೇಕವಿಧಂಲೊಕವ್ಯವಹಾರಾಯ ಸೂತ್ರಿತಂ || ೩೧ || (ಸ್ಥಾಪನಾ) ವಸ್ತುನಃಕೃತಸಂಜ್ಞಸ್ಯಪ್ರತಿಷ್ಠಾಪನಾಮತಾ | ಸದ್ಭಾವತರಭೆದೆನದ್ವಿಧಾತತ್ವಾಧಿರೊಪತಃ || ೩೨ || (ದ್ರವ್ಯ) ಯತ್ಸ್ವತೊಭಿಮುಖಂ ವಸ್ತುಭವಿಷ್ಯತ್ಪರ್ಯ್ಯಯಂಪ್ರತಿ || ತದ್ದ್ರವ್ಯಂದ್ವಿ ವಿಧಂಜ್ಞೆಯಮಾಗಮೆತರಭೆದತಃ || ೩೩ || (ಭಾವ) ಸಾಂಪ್ರತೊವಸ್ತು ಪರ್ಯ್ಯಾಯೊಭಾವೊದ್ವೆಧಾ ಸಪೂರ್ವ್ವವತ್ | ಆಗಮಃ ಪ್ರಾಭೃತಜ್ಞಾಯೀಪುಮಾಂಸ್ತತ್ರೊಪಯುಕ್ತಧೀಃ || ೩೪ || ನಾಮೊಕ್ತಂ ಸ್ಥಾಪನಾದ್ರವ್ಯಂವ್ಯಾರ್ತ್ಥಿಕನಯಾರ್ಪ್ಪಣಾತ್ | ಪರ್ಯ್ಯಾಯಾರ್ತ್ಥಾರ್ಪ್ಪರಣಾದ್ಬಾವ ಸ್ತೈರ್ನ್ಯಾಸಃಸಮ್ಯಗೀರಿತಃ || ನನ್ವನಂತಃ ಪದಾರ್ತ್ಥಾನಾಂನಿಕ್ಷೆಪೊವಾಚ್ಯ ಇತ್ಯಸತ್‌ | ನಾಮಾ

* * *

ನಿಮಿತ್ತಾಂತರವಾದಂಥ ಕರ್ಮವನ್ನು ಅಪೇಕ್ಷಿಸದೆಯೆ ಮಾಡುವ ಸಂಜ್ಞೆಯು ನಾಮವೆಂತ ಅನ್ನಿಸಿಕೊಳ್ಳುತ್ತಿದೆ. ಇದು ಅನೇಕ ವಿಧವಾದಂಥಾದ್ದು || ೩೧ || (ಸ್ಥಾಪನಾ) ಮಾಡಲ್ಪಟ್ಟ ಸಂಜ್ಞೆಯುಳ್ಳ ವಸ್ತುವಿಗೆ ಪ್ರತಿಷ್ಠೆಯು ಸ್ಥಾಪನೆಯಾಗಿ ವಡಂಬಡತಕ್ಕದ್ದು, ಸದ್ಭಾವಾ ಸದ್ಭಾವಭೇದದಿಂದ ಎರಡು ಪ್ರಕಾರವು ಅಪದಾರ್ಥಭಾವದಲ್ಲಿ ಆರೋಪಣೆ ಮಾಡಲ್ಪಟ್ಟಂಥಾದ್ದು || ೩೨ || (ದ್ರವ್ಯ) ಮುಂದೆ ಆಗತಕ್ಕ ಪರ್ಯಾಯವನ್ನು ಕುರಿತು ಸ್ವತಃ ಆಭಿಮುಖವಾದಂಥಾದ್ದು ಯಾವದೋ ಅದೇ ದ್ರವ್ಯವು ಆ ದ್ರವ್ಯವು ಆಗಮದ್ರವ್ಯನೋ ಆಗಮದ್ರವ್ಯ ಭೇದದಿಂದ ಎರಡು ಪ್ರಕಾರವಾದಂಥಾದ್ದು || ೩೩ || (ಭಾವ) ಈಗ ಇರುವಂಥಾ, ವಸ್ತು ಪರ್ಯ್ಯಾಯವು ಭಾವವು ಪೂರ್ವದೋಪಾದಿಯಲ್ಲಿ ಎರಡು ಪ್ರಕಾರವಾಗಿ ಆಗಮಪ್ರಾಭೃತವಿಂತೆಂದು ತಿಳಿಯತಕ್ಕಂಥಾ ಪುರುಷನು ಅಲ್ಲಿ ಉಪಯುಕ್ತವಾದಂಥಾ ಬುದ್ಧಿ ಉಳ್ಳಂಥಾವನು || ೩೪ || (ನಾಮಾದಿನಿಕ್ಷೇಪಭೇದ) ನಾಮೋಕ್ತ ವಾದಂಥಾ ದ್ರವ್ಯವುದ್ರವ್ಯಾರ್ತ್ಥಿಕ ನಯಾರ್ಪಣೆ ದೆಶೆಯಿಂದ ಸ್ಥಾಪನಾದ್ರವ್ಯವು, ಪರ್ಯಾಯಾರ್ತ್ಥಿಕ ನಯಾರ್ಪಣೆ ದೆಶೆಯಿಂದ ಭಾವವು ಆಗುತ್ತಿದೆ. ಈ ನಾಮಸ್ಥಾಪನಾ ದ್ರವ್ಯಭಾವನೆಗಳಿಂದ ನಿಕ್ಷೇಪವು ಚಂದಾಗಿ ಹೇಳಲ್ಪಟ್ಟಿತು || ೩೫ || ಅಯ್ಯಾಪದಾರ್ಥಗಳಿಗೆ ಅನಂತವಾದ ನಿಕ್ಷೇಪವು ಹೇಳುವದಕ್ಕೆ ಯೋಗ್ಯವಾದದ್ದು. ಆ ನಿ

* * *

ದಿಷ್ವೆವತಸ್ಯಾಂತರ್ಭ್ಬಾವಾತ್ಸಂಕ್ಷೆಪರೂಪತಃ || ೩೬ || ತತ್ವಾರ್ತ್ಥಾಧಿಗಮ ಸ್ತಾವತ್ಸ್ರಮಾಣ ನಯತೊಮತಃ | ಸಚಸ್ವಾರ್ತ್ಥಃ ಪರಾರ್ತ್ಥೊವಾಜ್ಞಾನ ಶಬ್ದಾತ್ಮಕಸ್ಥಿತಃ || ೩೭ || ಪರಾರ್ತ್ಥಾಧಿಗಮಸ್ತತ್ರಾನುದ್ಭವದ್ರಾಗ ಗೊಚರಃ | ಜಗೀಷುಗೊಚರಶ್ಚೆತಿದ್ವಿಧಾ ಶುದ್ಧಧಿಯೊವಿದುಃ || ೩೮ || ಸತ್ಯವಾಗ್ಭಿರ್ವಿಧಾತವ್ಯಃಪ್ರಥಮ ಸ್ತತ್ವವದಿಭಿಃ | ಯಥಾತಥಂಚಿದಿತ್ಯೆಷಚತುರಂಗೊನಯೊಮತಃ || ೩೯ || ಪ್ರವಕ್ತಾಜ್ಞಾಪ್ಯಮಾನಸ್ಯ ಪ್ರಭುಸಭ್ಯಾನಪೆಕ್ಷಯಾ | ತತ್ವಾರ್ತ್ಥಾಧಿಗಮಂಕರ್ತುಂಸಮರ್ತ್ಥೊಹ್ಯತ್ರವಿಶ್ರುತಃ || ೪೦ || ಯಥಾಗಣಭೃದಾದೀನಾಂಜಿನೆಂದ್ರಾದಿಸ್ವಯಂಪ್ರಭುಃ | ತಾದೃಶೆನ್ಯಸಭಾಸೀನಾ ಭಾವೆಪಿ ಪ್ರತಿಬೊದಕಃ || ೪೧ || ಸಾಭಿಮಾನಜನಾರಭ್ಯಶ್ಚತುರಂಗೊನಿ

* * *

ಕ್ಷೇಪಕ್ಕೆ ನಾಮಾದಿಗಳಲ್ಲೆ ಅಂತರ್ಬಾವದ್ದೆಶೆಯಿಂದ ಸಂಕ್ಷೇಪ ರೂಪದ್ದೆಶೆಯಿಂದ ಹೀಗೆ ಹೇಳುವಂಥಾದ್ದು ಸುಳ್ಳು || ೩೬ || (ತತ್ವಾರ‍್ಥಾಧಿಗಮಲಕ್ಷಣ) ಯಥಾರ್ಥದ ತಿಳವಳಿಕೆ ಯಾದರೊ ಪ್ರಮಾಣದ್ದೆಶೆಯಿಂದಲೂ, ನಯದ್ದೆಶೆಯಿಂದಲೂ, ತಿಳಿಯತಕ್ಕದ್ದು. ಆ ತತ್ವಾರ‍್ಥಾದಿಗಮವುಸ್ವಪ್ರಯೋ ಜನವಾಗಿಯು, ಪರಪ್ರಯೋಜನವಾಗಿಯು, ಜ್ಞಾನಶಬ್ದಸ್ವರೂಪಾದಂಥಾದ್ದಾಗಿಯು ಇರತಕ್ಕಂಥಾದ್ದು || ೩೭ || ಪರಾರ‍್ಥಾಧಿಗಮವಾದರೋ ಹುಟ್ಟದೆ ಇರೂವಂಥ ರಾಗವಿಷಯಕವಾದಂಥಾದ್ದು, ಜೈಯಿಸಲಿಚ್ಛೆಉಳ್ಳಂಥಾವನ ವಿಷಯವಾದ್ದು, ಇಂತೆಂದು ಎರಡುಪ್ರಕಾರವಾಗಿ ಶುದ್ಧಬುದ್ಧಿಯುಳ್ಳಂ ಥಾವರುಗಳು ತಿಳಿಯುವರು || ೩೮ || ಯಥಾರ್ಥವಾದ ಮಾತುವುಳ್ಳಂಥ ತತ್ವವನ್ನು ತಿಳಿದಂಥಾವರುಗಳಿಂದ, ಅನುರ‍್ಬವಾದ್ರಾಗಗೋಚರವೆಂಬ ಮೊದಲನೇ ಪದಾರ‍್ಥಾಧಿಗಮವು ಮಾಡುವದಕ್ಕೆ ಯೋಗ್ಯವಾದಂಥಾದ್ದು. (ಯಥಾಕಥಂಚಿತ್) ಎಂಬುವ ಇದು ಚತುರಂಗನಯವಾಗಿ ಒಡಂಬಡತಕ್ಕದ್ದು || ೩೯ || ತಿಳಿಸುವದಕ್ಕೆ ಯೋಗ್ಯವಾದಂಥ ಪದಾರ್ಥವನ್ನು, ರಾಜ, ಸಭ್ಯರುಗಳ ಅಪೇಕ್ಷೆಯಿಲ್ಲದೇ ಯಥಾರ್ಥ ತಿಳವಳಿಕೆಯನ್ನು ಮಾಡುವದಕ್ಕೆ ಸಮರ್ಥನಾದಂಥ ವಕ್ತೃವು ಪ್ರಶಿದ್ಧನಾದಂಥಾವನು || ೪೦ || ಯಾವ ಪ್ರಕಾರವಾಗಿ (ಗಣಧರರು) ಮೊದಲಾದಂಥಾವರುಗಳಿಗೆ ಜಿನೇಂದ್ರ ಮೊದಲಾದಂಥಾವನು ತಾನೇ ಸಮರ್ಥನೋ ಆಪ್ರಕಾರವಾದಂಥಾದ್ಧರಲ್ಲಿ, ಅನ್ಯ ಸಭ್ಯರ ಅಭಾವದಲ್ಲಿಯೂ ಕೂಡ ಪ್ರತಿಬೋಧಿಸುವಂಥಾವನು || ೪೧ || ಅಭಿಮಾನದೊಡನೆ ಕೂಡಿ

* * *

ವೆದಿತಃ | ತದ್ಜ್ಞೈರನ್ಯತಮಾಪಾಯೆಪ್ಯರ್ತ್ಥಾಪರಿಸಮಾಪ್ತಿತಃ || ೪೨ || ಜಿಗೀಷುಭ್ಯಾಂವಿನಾ ತಾವನ್ನವಿವಾದಃಪ್ರವರ್ತತೆ | ತಾಭ್ಯಾಮೆನಜಯೊನ್ಯೊನ್ಯಂ ವಿಧಾತುಂನಚಶಕ್ಯತೆ || ೪೩ || ವಾದಿನೊಸ್ಸ್ಪರ್ದ್ಧಯಾವೃತ್ತಿರಭಿಮಾನಪ್ರವೃದ್ಧಿತಃ | ಸಿದ್ಧೈವಾತ್ರಾಕಲಂ ಕಸ್ಯಮಹತೊನ್ಯಾಯವೆದಿನಃ || ೪೪ || ಸ್ವಪ್ರಜ್ಞಾಪರಿಪಾಕಾದಿ ಪ್ರಯೋಜನವೆಶಾದಪಿ | ವಿವಾದಸ್ಸಂಪ್ರವರ್ತ್ತೆತಕಯೊಶ್ಚಿದಿತಿಕೆಚನ || ೪೫ || ತೆಷಾಮಪಿವಿನಾಮಾನಾತ್ತಯೊ ರ್ಯ್ಯದಿಸಸಮ್ಮತಃ | ತಥಾತತ್ರಭವೆದ್ವರ್ತ್ಥಃಸದ್ವೃತ್ಪ್ರಾಪ್ತೈಕ ಪರಿಗ್ರಹಃ || ೪೬ || ತಯೊರನ್ಯತರ ಸ್ಯಸ್ಯಾದಭಿಮಾನಃಕದಾಚನ | ತನ್ನಿವೃತ್ಯರ್ತ್ಥ ಮೆಲೆಷ್ಠಂಸಭ್ಯಾಪೆಕ್ಷಣ ಮತ್ರಚೆತ್‌ || ೪೭ || ರಾಜಾಪೆಕ್ಷಣಮಪ್ಯಸ್ತುತಧೈವಚತುರಂಗ

* * *

ದ ಜನಗಳಿಂದ ಆರಂಭಿಸುವದಕ್ಕೆ ಯೋಗ್ಯವಾದಂಥ ಪರಾರ‍್ಥಾಧಿಗಮವು ನಾಲ್ಕು ಅಂಗವುಳ್ಳಂಥಾದ್ದು, ಯಾವದಾದರು ಒಂದರ ಅಭಾವದಲ್ಲಿ ಪ್ರಯೋಜನದ ಪೂರ್ತಿಇಲ್ಲದೇ ಇರುವುದರ ದೆಶೆಯಿಂದ ಅದನ್ನ ತಿಳಿದಂಥಾವರುಗಳಿಂದ ತಿಳಿಸಲ್ಪಟ್ಟಿತು || ೪೨ || ಜಯಿಸಲಿಛ್ಛೆಯುಳ್ಳ ಎರಡು ಜನಗಳಿಂದ ಹೊರ‍್ತಾಗಿ ವಿವಾದ ಪ್ರವರ‍್ತಿಸೋದಿಲ್ಲ. ಜಯವು ಆ ಎರಡು ಜನಗಳಿಂದಲೇಯೆ. ಪರಸ್ಪವಾಗಿ ಮಾಡುವದಕ್ಕೋಸ್ಕರ ಸಮರ್ಥವಾಗುವದಿಲ್ಲ || ೪೩ || ವಾದಿಗಳಿಗೆ ಸ್ಪರ್ಧೆಯಿಂದ ಕಲಂಕ ರಹಿತನಾದಂಥ ಮಹಾದೊಡ್ಡವನಾದಂಥ, ನ್ಯಾಯವನ್ನು ತಿಳಿದಂಥಾ ವಾದಿಗೂ ಕೂಡ ಅಹಂಕಾರ ವೃದ್ಧಿದ್ದೆಶೆಯಿಂದ ಇರೋಣವು, ಪ್ರಶಿದ್ಧವಾದಂಥಾದ್ಧೆಯೇ || ೪೪ || ಕೆಲವು ಜನಗಳು ತಮ್ಮಗಳ ಪ್ರಜ್ಞಾಪರಿಪಾಕವೇ ಮೊದಲಾದ ಪ್ರಯೋಜನಾಧೀನದ್ದೆಶೆಯಿಂದಲೂ, ಕೂಡ ವಿವಾದವು ಪ್ರವರ್ತಿಸಿತು ಎಂದು ಹೇಳುತ್ತಾರೆ || ೪೫ || ಆ ಜನಗಳಿಗೂ ಕೂಡ, ಅಹಂಕಾರದಿಂದ ಹೊರ‍್ತಾಗಿ ಆ ಇಬ್ಬರುಗಳಿಗೆ ವಿವಾದ ಉಂಟಾದರೆ, ಅದು ಸಮ್ಮತವಾದಂಥಾದ್ದು, ಅದೇ ಮೇರೆಗೆ ಆ ಅಭಿಮಾವವೇ ಮುಖ್ಯ ಪರಿಗ್ರಹವಾಗಿ ಉಳ್ಳಂಥಾದ್ದು, ಆ ಇಬ್ಬರೇ ಮಾಡುವ ವಿವಾದದಲ್ಲಿ ವ್ಯರ್ಥವಾದಂಥಾದ್ದಾಗುತ್ತದೆ || ೪೬ || ಆ ಇಬ್ಬರುಗಳಲ್ಲಿ ಯಾವೋನಿಗಾದರೂ ಒಬ್ಬನಿಗೆ ಒಂದಾನೊಂದು ಕಾಲದಲ್ಲಿ ಅಭಿಮಾನ ಉಂಟಾದೀತು. ಅದರ ನಿವಾರಣಾರ್ಥವಾಗಿ ಆ ಇಬ್ಬರುಗಳ ಪರಸ್ಪರ ವಿವಾದದಲ್ಲಿ ಸಭಾಜನರ ಅಪೇಕಷೆಯು ಇಷ್ಟವಾದಂಥ್ಥಾದ್ದೇ ಆದರೆ || ೪೭ || ಧೊರೆಯ ಅಪೇಕ್ಷೆಯೂ ಕೂಡ ಆಗಲಿ, ಅದೇ ಮೇರಿಗೆ ವಾ

* * *

ತಾ | ವಾದಸ್ಯಭಾವಿನೀಮಿಷ್ಟಾಮಪೆಕ್ಷ್ಯವಿಜಿಗೀಷುತಾಂ || ೪೮ || ಸಭ್ಯೈರನುಮತಂ ತತ್ವಜ್ಞಾನಂದೃಢತರಂ ಭವತ್ | ಇತಿತೇ ವೀತರಾಗಾಭ್ಯಾ ಮಪ್ಯಪೆಕ್ಷಾತ ಏವಚೆತ್ || ೪೯ || ನನ್ವೆವಮೀಶ್ವರ ಸ್ಯಾಪಿಸ್ವಶಿಷ್ಯಪತಿಪಾದನೆ | ಸಭ್ಯಾಪೆಕ್ಷಾ ಪ್ರಸಜ್ಯೆತವ್ಯಾಖ್ಯಾನೆಪಿ ಭವಾದೃಶಮ || ೫೦ || ಸ್ವಯಂಮಹಶ್ವರಸ್ಸಭ್ಯೊಮಾಧ್ಯ ಸ್ಥ್ಯಾತತ್ವವಿತ್ವತಃ | ಪ್ರವಕ್ತಾಚವಿ ನೆಯಾನಾಂತತ್ವಾಖ್ಯಾಪ ನತೊಯದಿ || ೫೧ || ತವಾನ್ಯೊಪಿಪ್ರವಕ್ತೈವಂಭವೆದಿ ತಿವೃಥಾತವ | ಪ್ರಾಶ್ನಿಕಾಪೆಕ್ಷಣ ವಾದೆಸರ್ವ್ವತ್ರೆಹಾಪಿವಸ್ತುತತ್ || ೫೨ || ಯದಾಚೈಕಃಪ್ರವಕ್ತಾಚಸಭ್ಯಶ್ಚಾಪ್ಯುಪಗಮ್ಯತೆ | ತದಾಸಭಾಪತಿಃಕಿಂನಪ್ರತಿಪಾದಸ್ಯಸ್ಸ ಏವತೆ || ೫೩ || ಮರ್ಯ್ಯಾದಾತಿಕ್ರಮಾಭಾವಹೆತುತ್ವಾದ್ಬೊ

* * *

ದಕ್ಕೆ ಮುಂದೆ ಆಗತಕ್ಕಂಥಾ ಜಯಶೀಲಭಾವವನ್ನು ಅಪೇಕ್ಷಿಸಿ ಚತುರಂಗತ್ವ ಇಷ್ಟವಾದಂಥಾದ್ದು || ೪೮ || ರಾಗರಹಿತರಾದಂಥವಾದಿ ಪ್ರತಿವಾದಿಗಳಿಂದ ಅಪೇಕ್ಷೆದೆಶೆಯಿಂದಲೇ ತತ್ವಜ್ಞಾನವು ಸಭಾ ಜನರಿಂದ ಅನುಮತವಾದಂಥಾದ್ದಾಗಿ ಅತ ದೃಡತರವಾದಂಥಾದ್ದಾಗುತ್ತಿದೆ. ಹೀಗಿಂತೆಂದು ನಿನಗೆ ಅಭಿಪ್ರಾಯವಾದಂ ಧಾದ್ದಾದರೆ || ೪೯ || ನಿನ್ನಂಥಾವರುಗಳಿಗೆ, ಅಯ್ಯಾ, ಈಶ್ವರನಿಗೂ ಕೂಡ ತಂನ ಶಿಷ್ಯನಿಗೆ ಹೇಳತಕ್ಕಂಥಾ ವ್ಯಾಖ್ಯಾನದಲ್ಲಿಯೂ ಕೂಡ ಸಭಾಜನರ ಅಪೇಕ್ಷೆಯು ಪ್ರಸಕ್ತಿಸಿತು || ೫೦ || ಮಹೇಶ್ವರನು ಮಧ್ಯಸ್ಥ ವ್ಯಕ್ತೀದೆಶೆಯಿಂದಲೂ, ತತ್ವವನ್ನು ತಿಳಿದ್ದರ ದೆಶೆಯಿಂದಲೂ ಭವ್ಯ ಜನಗಳಿಗೆ ತತ್ವವನ್ನು ಪ್ರಶಿದ್ಧ ಮಾಡುವದರ ದೆಶೆಯಿಂದಲೂ ತಾನೇ ವೃಕ್ತೃವು ಅಂದರೆ, ಹೇಳತಕ್ಕವನು. ಸಭಾಜನವು ಆಗುವಂಥಾವನೇ ಆದರೆ || ೫೧ || ಈ ಪ್ರಕಾರವಾಗಿ, ಮತ್ತೊಬ್ಬನೂ ಕೂಡ, ನಿನಗೆ, ಹೇಳುವಂಥಾವನು, ಆದಾನು. ಹೀಗೆಂದು ನಿನಗೆ ಪ್ರಶ್ನೆ ಮಾಡುವಂಥಾವನ ಅಪೇಕ್ಷೆಯು ವ್ಯರ್ಥವು, ವಾದದಲ್ಲಿಯೂ ಎಲ್ಲಾ ಕಡೆಯಲ್ಲಿಯೂ, ಇಲ್ಲಿಯೂ ಕೂಡ ಆ ಪ್ರಾಶ್ನಿಕಾಪೇಕ್ಷದಣವು ಮುಖ್ಯ ವಸ್ತುವಾದಂಥಾದ್ದು || ೫೨ || ಯಾವ ಸಮಯದಲ್ಲಿ ಒಬ್ಬನೇ ಹೇಳತಕ್ಕವನಾಗಿಯು ಸಭಾಜನವಾಗಿಯೂ ತಿಳಿಯಲ್ಪಡುತ್ತಾನೆ. ಆಗ ಆ ಒಬ್ಬನೇಯೇ ನಿನಗೆ ಸಭಾಪತಿಯಾದಂಥಾವನಾಗಿ ಹೇಳುವದಕ್ಕೆ ಯೋಗ್ಯವಾದಂಥಾವನು ಅಲ್ಲವೊ ಏನು || ೫೩ || ಮರ್ಯ್ಯಾದೆಯನ್ನು ಅತಿಕ್ರಮಿಸುವದರ ಅಭಾವ ಕಾರಣತ್ವದ್ದೆಶೆಯಿಂದ

* * *

ಧ್ಯಶಕ್ತಿತಃ | ಪ್ರಸಿದ್ಧಪ್ರಭುವತ್ತಾದೃಗ್ವಿನೆಯಜನವದ್ದೈವಂ || ೫೪ || ಸ್ವಯಂಬುದ್ಧಃ ಪ್ರವಾಕ್ತಾಸ್ಯಾ ದ್ಭೊಧ್ಯಸಂದಿಗ್ದರೀತಿಹ | ತಯೊಃಕಥಂಸಹೈಕತ್ರಸದ್ಭಾವ ಇತಿಚಾಕುಲಂ || ೫೫ || ಪ್ರಾಶ್ನಿಕತ್ವ ಪ್ರವಕ್ತೃತ್ವಸದ್ಭಾವಸ್ಯಾಪಿಹಾನಿತಃ | ಸ್ವಪಕ್ಷರಾಗೌದಾಸೀನನ್ಯವಿರೊಧಸ್ಯಾನಿವಾರಣಾತ್ || ೫೬ || ಪೂರ್ವ್ವ ವಕ್ತಾಬುಧಃ ಪಶ್ಚಾತ್ಸಭ್ಯೊನವ್ಯಾಹ ತೊಯದಿ | ತದಾಪ್ರಬೊಧಕೊಬೊಧ್ಯಸ್ತ ಥೈವನವಿರುದ್ಧ್ಯತೆ || ೫೭ || ವಕ್ತೃವಾಕ್ಯಾನು ವಕ್ತಾಃಇಸಭ್ಯಸ್ಯಾತ್ಪ್ರತಿಪಾದಕಃ | ತದರ್ತ್ಥಂಬುಧ್ಯಮಾನಸ್ತು ಪ್ರತಿಪಾದ್ಯೊನು ಮನ್ಯತಾಂ || ೫೮ || ತಥೈಕಾಂಗೊಪಿವಾದಸ್ಯಾಚ್ಚತುರಂಗೊವಿಶೆಷತಃ | ಪೃಥಕ್ಸಭ್ಯಾದಿಭೆದಾನಾಮ ನಪೇಕಕ್ಷಾಚಸರ್ವ್ವಥಾ || ೫೯ || ಯಥಾವಾದ್ಯಾದಯೊಲೊ ಕೆದೃಶ್ಯಂತೆನ್ಯವೆದಿನಃ | ತಥಾನ್ಯಾಯ ವಿದಾಮಿಷ್ಟಾವ್ಯವಹಾ

* * *

ಲೂ, ತಿಳಿಯುವದಕ್ಕೆ ಯೋಗ್ಯವಾದ್ದರದೆಶೆಯಿಂದಲೂ, ಪ್ರಶಿದ್ಧವಾದ ಪ್ರಭುವಿನೋಪಾದಿಯಲ್ಲು ಆ ಪ್ರಕಾರವಾದಂಥಾ ಭವ್ಯಜನದೋಪಾದಿಯಲ್ಲು ನಿಶ್ಚಯ್ಯವಾದಂಥಾದ್ದು || ೫೪ || ಹೇಳುವಂಥಾ ತಾನೇ ತಿಳಿದಂಥಾವನು ಸಂದೇಹ ಪಡುವಂಥಾವನಲ್ಲಿ, ಬೋಧಿಸುವದಕ್ಕೆ ಯೋಗ್ಯವಾದಂಥಾವನು ಆಗುತ್ತಾನೆ, ಹೀಗೆಂದು ವಿಷಯದಲ್ಲಾದರೂ ಆ ಇಬ್ಬರುಗಳಿಗೆ ಒಂದು ಸ್ಥಳದಲ್ಲಿ ಇರೋಣವುಹ್ಯಾಗೆ ಹೀಗೆಂತೆಂದು ವ್ಯಾಕುಲವಾದಂಥಾದ್ದು || ೫೫ || ಪ್ರಶ್ನೆಮಾಡುವಂಥಾವನ ಭಾವದ ಹೇಳುವಂಥಾವನ ಭಾವದ ಸ್ಥಿತಿಗೂ ಕೂಡ ಹಾನೀದೆಶೆಯಿಂದ ತನ್ನ ಪಕ್ಷದಲ್ಲಿ, ರಾಗ, ಉದಾಶೀನತ್ವ, ವಿರೋಧ ಅನಿವಾರಣೇ ದೆಶೆಯಿಂದ || ೫೬ || ಮೊದಲಲ್ಲಿ ಹೇಳುವಂಥಾವನು, ಅನಂತರ ಸಭ್ಯನಾದ ವಿದ್ವಾಂಸನು ಹೇಳತಕ್ಕಂಥಾವನು, ಆದರೆ ಆಸಮಯದಲ್ಲಿ ಹಾಗೆಯೇ ಬೋಧಕನು ಬೋಧ್ಯನು ವಿರೀಧವಾಗುವದಿಲ್ಲ || ೫೭ || ಹೇಳತಕ್ಕಂಥಾವನ ವಾಕ್ಯವನ್ನು ಅನುಸರಿಸಿ ಹೇಳುವಂಥಾಸಭ್ಯನು ಪ್ರತಿವಪಾದಕನಾಗುತ್ತಾನೆ. ಅದರ ಅರ್ಥವನ್ನು ತಿಳಿಯತಕ್ಕಂಥಾವನು ಪ್ರತಿಪಾದ್ಯನಾಗಿವಡಂಬಡಲ್ಪಡಲಿ || ೫೮ || ಹಾಗೆ ಒಂದೇ ಅಂಗವು ಕೂಡ ವಾದವಾಗಲಿ, ವಿಶೇಷವಾಗಿ ಚತುರಂಗವಾದವು ಆಗುತ್ತಿದೆ. ಸಭಾಜನವೇ ಮೊದಲಾದ ಭೇದಗಳ ಪ್ರತ್ಯೇಕವು ಸರ್ವ್ವಪ್ರಕಾರದಲ್ಲೂ ಅಪೇಕ್ಷೆ ಇಲ್ಲದೇ ಇರುವಂಥಾದ್ದು || ೫೯ || ಲೋಕದಲ್ಲಿ ವಾದಿಯೇ ಮೊದಲಾದಂಥಾವರುಗಳು ಪರಸ್ಪರ ತಿಳಿಯುವಂಥಾ ವರಗಳಾಗಿ, ಹ್ಯಾ

* * *

ರೆಷುತೆಯದಿ || ೬೦ || ತಥಾಭಾವಾತ್ಸ್ಯಯಂವಕ್ತುಃಸಭ್ಯಾಭಿನ್ನಾಭವಂತುತೆ | ಸಭಾಪತಿಶ್ಚತದ್ಬೊದ್ಯಜನವತ್ತಚ್ಚನೆಷ್ಯತೆ || ೬೧ || ಜಿಗೀಷಾವಿರಹಾತ್ತಸ್ಯತತ್ವಂ ಬೊಧಯ ತೊಜನಾನ್ | ನಸಭ್ಯಾದಿಪ್ರತೀಕ್ಷಾಸ್ತಿಯದಿವಾದೆಕ್ವಸಾಭವೆತ್ || ೬೨ || ತತೊವಾದೊಜಿಗೀಷಾಯಾಂವಾದಿನೊ ಸ್ಸಂಪ್ರವರ್ತತೆ | ಸಭ್ಯಾಪೆಕ್ಷಣತೊಜಲ್ಪವಿ ತಂಡಾವದಿತಿಸ್ಪುಟಂ || ೬೩ || ತದಪೆಕ್ಷಾಚತತ್ರಾಸ್ತಿಜಯೆತರವಿಧಾನತಃ | ತದ್ವದೇವಾನ್ಯಥಾಪ್ರತ್ರಸಾನಸ್ಯಾದವಿಶೆಷತಃ || ೬೪ || ಸಿದ್ಧೋಜಿಗೀಷಿತೊರ್ವ್ವಾ ದಶ್ಚತುರಂಗಸ್ತಥಾಸತಿ | ಸ್ವಾಭಿಪ್ರೆತವ್ಯವಸ್ಥಾನಾಲ್ಲೊಕ ಪ್ರಖ್ಯಾತವಾದವತ್ || ೬೫ || ಅಸ್ತಾಂತಾವದ ಲಾಭಾದಿರಯಮೆವಹಿನಿಗ್ರಹಃ | ನ್ಯಾಯೆನವಿಜಿಗೀಷೂಣಾಂಸ್ವಾಭಿ

* * *

ಗೆ ತಿಳಿಯಲ್ಪಡುತ್ತಾರೊ, ಹಾಗೆ ನ್ಯಾಯವನ್ನು ತಿಳಿದಂಥಾವರುಗಳ, ವ್ಯವಹಾರಗಳಲ್ಲಿ, ನಿನಗೆ ಇಷ್ಟವಾದಂಥಾದ್ದೇ ಆದರೆ || ೬೦ || ಹಾಗೆ ಹೇಳುವಂಥಾ ನಿನಗೆ, ಸಭಾ ಜನಗಳು ತಾವೇ ಪ್ರತ್ಯೇಕರಾದಂಥಾವರಾಗಲೀ ತಿಳಿಸುವುದಕ್ಕೆ ಯೋಗ್ಯರಾದಂಥ ಜನದೋಪಾದಿಯಲ್ಲಿ ಸಭಾಪತಿಯೂ ಕೂಡ ಅಪೇಕ್ಷಿಸಲ್ಪಡುವದಿಲ್ಲ || ೬೧ || ಜಯಿಸಲಿಚ್ಛೆಯ ವಿರಹದ್ದೆಶೆಯಿಂದ ಜನಗಳನ್ನು ಕುರಿತು ತತ್ವವನ್ನು ಬೋಧಿಸತಕ್ಕಂಥಾವನಿಗೆ, ಸಭಾಜನಾದಿ ನಿರೀಕ್ಷಣೆಯು ಇರುವದಿಲ್ಲ. ವಾದ ಉಂಟಾದ್ದೇ ಆದರೆ ಅದು ಯಲ್ಲಿಯಾದೀತು || ೬೨ || ವಾದಿಗಳೊಳಗೆ ಜೈಸಲಿಚ್ಛೆವುಂಟಾಗಿ ಅದರ ದೆಶೆಯಿಂದವಾದವೂ ವುಂಟಾಗುತ್ತೆ. ಸಭ್ಯರುಗಳ ಅಪೇಕ್ಷೆ ದೆಶೆಯಿಂದ ಜಲ್ಪವೆಂದರೆ, ಜಯಿಸಲಿಚ್ಛೆಉಳ್ಳಂಥಾವರಕಡೆಯು, ವಿತಂಡವೆಂದರೆ, ಸ್ವಪೇಕ್ಷಸ್ಥಾವನೆ ಇಲ್ಲದೆ ಪರಪಕ್ಷ ನಿರಾಕರಣೆಯು ಉಳ್ಳಂಥಾದ್ದು, ಎಂಬುವದು ನಿಶ್ಚಯ್ಯವಾದಂಥಾದ್ದು || ೬೩ || ಜಯವನ್ನು ಅಪಜಯವನ್ನು ಮಾಡುವದರ ದೆಶೆಯಿಂದ ಆ ವಾದದಲ್ಲಿ ಆ ಸಭ್ಯಾದ್ಯಪೇಕ್ಷೆಯು ಇಧೆ, ಮತ್ತೊಂದು ಪ್ರಕಾರವಾಗಿ ಮತ್ತೊಂದು ಸ್ಥಳದಲ್ಲಿ ಅದರೋಪಾದಿಯಲ್ಲಿ ವಿಶೇಷವಿಲ್ಲದೆ ಇರುವದರ ದೆಶೆಯಿಂದ ಆ ಸಭ್ಯಾಪೇಕ್ಷೆವುಂಟಾಗುವದಿಲ್ಲ || ೬೪ || ಜಯಿಸಲಿಚ್ಛೆ ಉಳ್ಳಂಥಾವರುಗಳಿಗೆ ಚತುರಂಗವಾದವು ಪ್ರಶಿದ್ಧವಾದಂಥಾದ್ದು ಆಗುತ್ತಿರಲಾಗಿ, ಲೋಕದಲ್ಲಿ ಪ್ರಶಿದ್ಧವಾದಂಥಾ ವಾದದಲ್ಲಿ ತಮ್ಮ ಅಭಿಪ್ರಾಯದ ಸ್ಥಾಪನೇದೆಶೆಯಿಂದ ಸಿದ್ಧಿಯಾಗುತ್ತಿದೆ || ೬೫ || ಜಯಿಸಲಿ ಚ್ಚೆವುಳ್ಳಂಥಾವರುಗಳಿಗೆ ತಮ್ಮ ಅಭಿಪ್ರಾಯಗಳನ್ನು ಬಿಡೋಣವು ಇದೇ ನಿಗ್ರ

* * *

ಪ್ರಾಯನಿವರ್ತ್ತನಂ || ೬೬ || ಮರ್ಯ್ಯಾದಾತಿಕ್ರಮಂಲೊಕೆಯಥಾಹಂತಿ ಮಹೀಪತಿಃ | ತಥಾವಾದೆ ಪ್ಯಹಂಕಾರಗ್ರಸ್ತಯೊರ್ವಾದಿನೊಃಕ್ವಚಿತ್ || ೬೭ || ವಾದಿನೊರ್ವ್ವದನಂವಾದಃ ಸಮರ್ತ್ಥೆಹಿಸಭಾಪತೌ | ಸಮರ್ತ್ಥಯೊಸ್ಸಮರ್ತ್ಥೆಷು ಪ್ರಾಶ್ನಿಕೇಷು ಪ್ರವರ್ತತೆ || ೬೮ || ಸಾಮತ್ಥ್ಯಂಪುನರೀಶಸ್ಯಶಕ್ತಿತ್ರ ಯಮುದಾ ಹೃತಂ | ಏನಸ್ವಮಂಡಲೇಸಾಜ್ಞಾವಿಧೆಯತ್ವಂಪ್ರಶಿದ್ಧ್ಯತಿ || ೬೯ || ಮಂತ್ರಶಕ್ರ‍್ಯಾಪ್ರಭು ಸ್ತಾವತ್ಸಲೊಕಾನ್‌ಸಮಯಾನಪಿ | ಧರ್ಮ್ಮಂನ್ಯಾಯೆನಸಂರಕ್ಷೆದ್ವಿಪ್ಲವಾತ್ಸ ಹಸಾಸುಧೀಃ || ೭೦ || ಪ್ರಭುಸಾಮರ್ತ್ಥ್ಯತೊವಾಪಿದುರ್ಲಂಗ್ಯಾತ್ಸಕಲೈರಪಿ | ಸೊತ್ಸಾಹಶಕ್ತಿ ತೊವಾಪಿದಂಡನೀತಿವಾದಂವರಃ || ೭೧ || ರಾಗದ್ವೆಷ ವಿಹೀನನತ್ವಂ ವಾದಿನಿಪ್ರತಿವಾದಿನಿ | ನ್ಯಾಯೆನ್ಯಾಯೆಚತದ್ವತ್ವಂಸಾಮರ್ತ್ಥ್ಯಂ ಪ್ರಾಶ್ನಿಕೆಷ್ವದಃ ||

* * *

ಹವು ಲಾಭವಿಲ್ಲದೇ ಇರುವದು ಮೊದಲಾದದ್ದು ಹಾಗಿರಲಿ || ೬೬ || ಧೊರೆಯು ಮರ್ಯಾದೆಯನ್ನು ಅತಿಕ್ರಮಿಸಿದಂಥಾವನನ್ನು ಹ್ಯಾಗೆ ಶಿಕ್ಷಿಸುತ್ತಾನೊ ಅದೇ ಮೇರೆ ಅಹಂಕಾರಗ್ರಸ್ತರಾದಂಥವಾದಿಗಳಿಗೆ ಒಂದು ಸ್ಥಳದಲ್ಲಿ ನಿಗ್ರಹವಾಗುತ್ತೆ || ೬೭ || ವಾದಿಗಳ ಹೇಳ್ವಿಕೆಯೆ ವಾದವು. ಸಭಾಪತಿಯು ಸಮರ್ಥನಾಗುತ್ತಿರಲಾಗಿ, ಪ್ರಶ್ನೆ ಮಾಡುವಂಥಾ ಸಭಾ ಜನರೂ ಸಮರ್ಥರಾಗುತ್ತಿರಲಾಗಿ, ಸಮರ್ಥವಾದ ವಾದಿಗಳೊಳಗೆ ಚತುರಂಗವಾದವು ಪ್ರವರ‍್ತಿಸುತೆ || ೬೮ || ಧೊರೆಗೆ ಸಾಮರ‍್ಥ್ಯವು ಪ್ರಭುಶಕ್ತಿ, ಮಂತ್ರಶಕ್ತಿ, ಉತ್ಸಾಹಶಕ್ತಿ, ಎಂಬಶಕ್ತಿ ತ್ರಯವಿಂತೆಂದು ಹೇಳಲ್ಪಟ್ಟಿತು. ಯಾತರಿಂದ ತನ್ನ ದೇಶದಲ್ಲಿ ಸ್ವಾಧೀನತ್ವಪ್ರಶಿದ್ಧವಾಗುತ್ತಿಧೆಯೋ, ಅದು ಪ್ರಭುಶಕ್ತಿಯು || ೬೯ || ಪ್ರಭುವು ಬುದ್ಧಿಶಾಲಿಯಾಗಿ ಪ್ರಭುಶಕ್ತಿಯಿಂದ ಜನಗಳನ್ನು ಮತಗಳನ್ನು ಧರ್ಮವನ್ನು ನ್ಯಾಯದಿಂದ ಕ್ಷೋಭವಿಲ್ಲದೇ ಇರುವದರ ದೆಶೆಯಿಂದ ಶೀಘ್ರವಾಗಿ ಮಂತ್ರಶಕ್ತಿಯಿಂದ ಸಂರಕ್ಷಿಸತಕ್ಕದ್ದು || ೭೦ || ಸಮಸ್ತ ಜನಗಳಿಂದಲೂ ಕೂಡ ಉಲ್ಲಂಘಿಸುವದಕ್ಕೆ ಅಶಕ್ಯವಾದಂಥ ಉತ್ಸಾಹ ಶಕ್ತಿಯೊಡನೆ ಕೂಡಿದಂಥಾ ಪ್ರಭುಶಕ್ತಿ ದೆಶೆಯಿಂದಲೂ, ದಂಡನೀತಿಯನ್ನು ತಿಳಿದಂಥಾವರೊಳಗೆ ಶ್ರೇಷ್ಠನಾದಂಥ || ೭೧ || ವಾದಿಯಲ್ಲಿ ಪ್ರತಿವಾದಿಯಲ್ಲಿ ನ್ಯಾಯದಲ್ಲಿಯೂ ಅನ್ಯಾಯದಲ್ಲಿಯೂ ಕೂಡ, ರಾಗದ್ವೇಷ ರಹಿತತ್ವವನ್ನು ಮಾಡಬೇಕು. ಪ್ರಾಶ್ನಿಕರಾದಂಥ ಸಭಾಜನರಲ್ಲೂ ಈ ಸಾಮರ್ತ್ಥ್ಯವು || ೭೨ || ವಾದಿ ಪ್ರತಿವಾದಿಗಳ ಎರಡು ಸಿದ್ಧಾಂ

* * *

ಸಿದ್ಧಾಂತದ್ವಯವೆದಿತ್ವಂದ್ವೊಕ್ತಾರ್ತ್ಥಗೃಹೀತಥಾ | ಪ್ರಿಭಾದಿಗುಣತ್ವಂಚತತ್ವ ನಿರ್ನ್ನಯ ಕಾರಿಲೌ || ೭೩ || ಜಯೆತರವ್ಯವಸ್ಥಾಯಾಮನ್ಯಥಾನಧಿಕಾರತಃ | ಸಭ್ಯಾನಾಮಾತ್ಮನಃ ಪತ್ಯುರ್ಯ್ಯಶೊಧರ್ಮ್ಮಮಚವಾಂಛತಾಂ || ೭೪ || ಎಕತಃಕಾರಯೆತ್ ಸಭ್ಯಾನ್‌ವಾ ದಿನಾಮೆಕತಃಪ್ರಭುಃ | ಸ್ವಾಭ್ಯರ್ಣ್ನಎವಚಾಂನ್ವೀಕ್ಷಾಂ ಪ್ರಮಾಣಗುಣದೊಷಯೊಃ || ೭೫ || ಲೌಕಿಕಾರ್ಥವಿಚಾರೆಷು ನಾತಜ್ಞಾಃಪಾಶ್ನಿಕಾಯಥಾ | ಶಾಸ್ತ್ರೀಯಾರ್ಥ ವಿಚಾರೆಷುನಾತದ್ಜ್ಞಾಃಪ್ರಾಶ್ನಿಕಾಸ್ತಥಾ || ೭೬ || ಸತ್ಯಸಾಧನಸಾಮರ್ತ್ಥ್ಯಾಸಂ ಪ್ರಕಾಶನಪಾಟವಃ | ವಾದ್ಯಜಿಯೊಪಿಜೆತಾನೊಸದೊಮಾಂದ್ಯೆನಕೆವಲಂ || ೭೭ || ಸಮರ್ಥ ಸಾಧನಾಖ್ಯಾನಂಸಾಂರ್ತ್ತ್ಯಂವಾದಿನೊಮ

* * *

ತಗಳನ್ನು ತಿಳೀತಕ್ಕ ಭಾವವು ಇಬ್ಬರುಗಳಿಂದ ಹೇಳಲ್ಪಟ್ಟ ಅರ್ಥ ಗ್ರಹಿಸತಕ್ಕ ಭಾವವು ಕ್ಷಣಕ್ಷಣದಲ್ಲಿ ವೃದ್ಧಿಹೊಂದುತ್ತಿರುವಂಥ ಪ್ರತಿಭಾದಿಗುಣತ್ವವು ಯಥಾರ್ಥನಿರ್ಣಯ ಮಾಡುವ ಭಾವವು || ೭೩ || ಜಯಾಪಜಯದ ವ್ಯವಸ್ಥೆಯಲ್ಲಿ ಮತ್ತೊಂದು ಪ್ರಕಾರವಾಗಿ, ಅಧಿಕಾರವಿಲ್ಲದೇ ಇರುವದರದೆಶೆಯಿಂದ ತನಗೆ ಪತಿಯಾದ ರಾಜನಿಗೆ, ಯಸಸ್ಸನ್ನು ಧರ್ಮವನ್ನು ಅಪೇಕ್ಷಿಸುವಂಥಾ ಸಭ್ಯರಿಗೆ ಸಾಮರ್ತ್ಥ್ಯವು || ೭೪ || ಪ್ರಭುವಾದಂಥಾಧೊರೆಯು ಸಭಾಜನಗಳನ್ನು ಒಂದು ಪ್ರದೇಶದಲ್ಲೂ, ವಾದಿ ಪ್ರತಿವಾದಿ ಗಳನ್ನು ಒಂದು ಪ್ರದೇಶದಲ್ಲೂ, ತನ್ನ ಸಮೀಪದಲ್ಲೇ ಪ್ರಮಾಣ ಗುಣದೋಷ ಗಳ ನಿರೀಕ್ಷಣೆಯನ್ನು ಮಾಡತಕ್ಕದ್ದು || ೭೫ || ಲೌಕಿಕಾರ್ತ್ಥ ವಿಚಾರಗಳಲ್ಲಿ ಅದನ್ನು ತಿಳಿಯದೇ ಇರುವಂಥ ಪ್ರಶ್ನೆಮಾಡುವಂಥಾವರು ಹ್ಯಾಗೋ ಅಪ್ರಕಾರವಾಗಿ ಶಾಸ್ತ್ರಿಯಾರ್ಥ ವಿಚಾರಗಳಲ್ಲಿ ಅದನ್ನು ತಿಳಿಯದೇಯಿರುವಂಥಾವರುಗಳು ಪ್ರಾಶ್ನಿಕರಾಗುವದಿಲ್ಲ || ೭೬ || ಯಥಾರ್ಥವಾದಂಥಾ ಸಾಧನದ ಸಾಮರ್ಥ್ಯವನ್ನು ಪ್ರಕಾಶಮಾಡುವದರಲ್ಲಿ ಪಟುತ್ವವುಳ್ಳಂಥ ವಾದಿಯು ಜಯಿಸುವದಕ್ಕೆ ಅಶಕ್ಯವಾದಂಥಾವನಾದಾಗ್ಯು ಕೂಡ ಸಭೆಯ ಮಂದತ್ವದಿಂದಾ ಜಯಿಸುವಂಥಾವನಾಗುವದಿಲ್ಲ || ೭೭ || ವಾದಿಗೆ ತಾನು ಸ್ಥಿರಪಡಿಸತಕ್ಕ ಸಾಧನವನ್ನು ಹೇಳತಕ್ಕದ್ದು ಸಾಮರ್ಥ್ಯವಾಗಿ ವಡಂಬಡತಕ್ಕದ್ದು, ಸಾಧನಕ್ಕು ಕೂಡ ಅನುಪಪತ್ತಿ ಇಲ್ಲದೇ ಇರುವದರದೆಶೆಯಿಂದ ಸಾಮರ್ಥ್ಯವು || ೭೮ || ಪ್ರತಿವಾದಿಗೆ ದೋಷೋದ್ಭಾವನೆಯೊಡನೆ ಕೂಡಿದ್ದೂಕೂಡ ಸಾಮರ್ಥ್ಯವು. ದೂಷಣೆಗಾದ

* * *

ತಂ || ಸಾಧನಸ್ಯಚಸಾಮರ್ಥ್ಯಮನ್ಯಥಾನುಪಪನ್ನತಾ || ೭೮ || ಸದೊಷೊದ್ಭಾವನಂಚಾಪಿ ಸಾಮರ್ಥ್ಯಂಪ್ರತಿವಾದಿನಃ | ದೂಷಣಸ್ಯಚಸಾಮರ್ಥ್ಯಂಪ್ರತಿಪಕ್ಷವಿಘಾತಿತಾ || ೭೯ || (ಪ್ರತಿಪಕ್ಷವಿಘಾತಹತು) ಸಾಪೆಕ್ಷಾಂತರಸಿದ್ಧಿಶ್ವಾಸಾಧನಾಶಕ್ತಿತಾಪಿವಾ | ಹೆತೊರ್ವ್ವಿ ರುದ್ದತಾಯದ್ವಘದ್ವಾಭಾಸಾಂತರಶಾಪಿಚ || ೮೦ || ವಿರುದ್ಧಂ ಹೆತುಮದ್ಭಾನ್ಯವಾದಿನಂ ಜಯತೀತರಃ | ಆಭಾಸಾಂತರಮುದ್ಬಾವ್ಯಪಕ್ಷಶಿದ್ಧಿಮಪೆಕ್ಷತೆ || ೮೧ || ಇತ್ಯಾಭಿಮಾನಿಕಃ ಪ್ರೊಕ್ತಸ್ತಾತ್ವಿಕಃ ಪ್ರಾತಿಭೊಪಿವಾ ಸಮರ್ಥ ವಚನಂವಾದಶ್ಚತುರಂಗೊಜಿಗೀಷತೊಃ || ೮೨ || ತತ್ರೆಹತಾತ್ವಿಕೆವಾದೆ ಕಲಂಕೈಃಕಥಿತೊಜಯಃ | ಸ್ವಪಕ್ಷಶಿದ್ಧಿರೆಕಸ್ಯನಿಗ್ರಹೂನ್ಯಸ್ಯವಾದಿನಃ || ೮೩ || ಯಸ್ತೂಕ್ತಃ ಪ್ರಾತಿಭೊವಾದಃಪ್ರಾತೀಭಪರಿರಕ್ಷಣೆ | ನಿಗ್ರಹಸ್ತತ್ರವಿಜ್ಞೆಯಃಸ್ವಪ್ರತಿಜ್ಞಾವ್ಯತಿಕ್ರಮಾಃ || ೮೪ || ಶ್ರೀಮದ್ಭವ್ಯಾಜ್ಜನೀನಾಂ ಹೃದಯಮುಕು ಳೀತಂದುನ್ವ ದಾಧಾಯಬೊ

* * *

ರೋ ಪ್ರತಿಪಕ್ಷವನ್ನು ಹೋಗಲಾಡಿಸತಕ್ಕ ಭಾವವು ಸಾಮರ್ಥೃವು || ೭೯ || ಅಪೇಕ್ಷೆಯೊಡನೆ ಕೂಡಿದಂಥಾ‌ದ್ದರ ಅಂತರ ಸಿದ್ಧಿಯಾದರು ಸಾಧನೆಯಲ್ಲಿ ಆ ಶಕ್ತಿ ಭಾವವಾದರು ಹೇತುವಿನಲ್ಲಿ ವಿರುದ್ಧತ್ವವಾದರೂ ಆ ಭಾಸಾಂತರತ್ವವಾದರೂ ಪ್ರತಿಪಕ್ಷ ವಿಘಾತ ಹೇತು ಆಗುತ್ತಿದೆ || ೮೦ || ಮತ್ತೊಬ್ಬನು ವಿರುದ್ಧವಾದ ಹೇತುವನ್ನು ಪ್ರಕಾಶಮಾಡಿ ವಾದಿಯನ್ನು ಜಯಿಸುತ್ತಾನೆ, ಅಭಾಸಾಂತರವನ್ನು ಪ್ರಕಾಸಮಾಡಿ ಸ್ವಪಕ್ಷಸಿದ್ಧಿಯನ್ನು ಮಾಡುತ್ತಾನೆ || ೮೧ || ಈ ಪ್ರಕಾರವಾಗಿ ಅಭಿಮಾನ ಉಳ್ಳಂಥಾ ವಾದವು ತಾತ್ವಿಕವೆಂತಲು, ಪ್ರಾತಿಭವೆಂತಲು, ಎರಡು ಪ್ರಕಾರವಾಗಿ ಹೇಳಲ್ಪಡುತ್ತಲಿದೆ. ಜಯಿಸಲಿಚ್ಛೆಯುಳ್ಳಂಥಾವರಗಳೊಳಗೆ ಸಮರ್ಥವಚನವು ನಾಲ್ಕು ಅಂಗವುಳ್ಳಂಥಾದ್ದು || ೮೨ || ಅಲ್ಲಿ ತಾತ್ವಿಕವಾದದಲ್ಲಿ ಕಲಂಕಗಳಿಂದ ಜಯವು ಹೇಳಲ್ಪಟ್ಟಿತು. ಒಬ್ಬನಿಗೆ ಸ್ವಪಕ್ಷಶಿದ್ಧಿಯು ಮತ್ತೊಬ್ಬ ವಾದಿಗೆ ನಿಗ್ರಹವು ಹೇಳಲ್ಪಡುತ್ತಿದೆ || ೮೩ || ಪ್ರಾತಿಭವಾದವು ಯಾವದು ಹೇಳಲ್ಪಟ್ಟಿತೋ ಅಪ್ರಾತಿಭವಾದದ ಪರಿರಕ್ಷಣೆ ನಿಮಿತ್ತವಾಗಿ ಅಲ್ಲಿ ನಿಗ್ರಹವು ತಿಳಿಯತಕ್ಕದ್ದು. ತನ್ನ ಪ್ರತಿಜ್ಞೆಯನ್ನು ಅತಿಕ್ರಮಿಸುವದೇನಿಗ್ರಹವು || ೮೪ || ಸಂಪದ್ಯುಕ್ತವಾದಂಥ ಭವ್ಯರೆಂಬ ಕಮಲಲತೆಗಳ ಹೃದಯವೆಂಬಮೊಗ್ಗನ್ನು ಅರಳಿಸುತ್ತಿರುವಂಥ ಜ್ಞಾನವನ್ನು ಪುಷ್ಟಿ

* * *

ಧಂಮಿಥ್ಯಾವಾದಾಂಧಕಾರಸ್ಥಿತಿಮಘಟಯದ್ವಾಗ್ಮಯೂಖಪ್ರತಾನೈಃ || ಸದ್ವೃತ್ತಂ ಶುದ್ಧಮಾರ್ಗಪ್ರಕಟನಮಹಿಮಾಲಂಬಿಯದ್ಬ್ರದ್ನಬಿಂಬ ಪ್ರಸ್ಪರ್ದ್ಧಿದ್ಧರ್ಧಿಜೈನಂ ಜಗತಿವಿಜಯ ತಾಂಧರ್ಮ್ಮ ಶಾಸ್ತ್ರಂನಿತಾಂತಂ || ೮೫ ||

ಇತ್ಯಾರ್ಷೆ ಸ್ಮೃತಿಸಂಗ್ರಹೆ ಪ್ರಮಾಣ ನಯನಿಕ್ಷೆಪತಾತ್ವಿಕಪ್ರಾತಿಭವರ್ಣನಂ ನಾಮದ್ವಿತೀಯೋಧ್ಯಾಯಃ

* * *

ಮಾಡಿ ಮಿಥ್ಯಾವಾದವೆಂಬ ಅಂದಕಾರದ ಸ್ಥಿತಿಯನ್ನುವಾಕ್ಕೆಂಬ ಕಿರಣಗಳ ಸಮೂಹದಿಂದ ಬಿಡಿಸುತ್ತಿರುವಂಥ ವಳ್ಳೇಚಾರಿತ್ರವುಳ್ಳಂಥ ಪರಿಶುದ್ಧವಾದಂಥ ಮಾರ್ಗದ ಪ್ರಕಟಣೆ ಮಹಿಮೆಯನ್ನು ಅಲಂಬಿಸಿ ಇರುವಂಥ ಯಾವ ಸೂರ್ಯ್ಯಬಿಂ ಬಂದೊಡನೆ ಸ್ಪರ್ದ್ದೆಮಾಡುತ್ತಿರುವಂಥಾ ಪ್ರಶಿದ್ಧವಾದಂಥ ಬುದ್ಧಿವುಳ್ಳಂಥ ಜನ ಸಂಬಂಧಿಯಾದಂಥ ಧರ್ಮಶಾಸ್ತ್ರವುಜಗತ್ತಿನಲ್ಲಿ ಅತ್ಯಂತವಾಗಿ ಪ್ರಕಾಶಿಸಲಿ || ೮೫ ||

ಇತ್ಯಾರ್ಷೆಸ್ಮೃತಿಸಂಗ್ರಹೆಪ್ರಮಾಣನಯನಿಕ್ಷೇಪತತ್ವಾರ್ಥಧಿ ಗಮಪ್ರರೂಪಣಂ ನಾಮ ದ್ವಿತಿಯೋಧಾಯಃ

* * *

ತೃತೀಯೋಧ್ಯಾಯಃ

(ಕಾಲವಿಷಯ) ಅನಾದಿನಿಧನಃ ಕಾಲೊವರ‍್ತ ನಾಲಕ್ಷಕೊಣೊಮತಃ | ಲೋಕ ಮಾತ್ರಸ್ಸಸೂಕ್ಷ್ಮಾಣು ಪರಿಚ್ಛೆನ್ನ ಪ್ರಮಾಣಕಃ || ೧ || ಉತ್ಸರ್ಪಿಣ್ಯಾವಸ ರ್ಪ್ಪಿಣ್ಯೌದ್ವೌಭೆ ದೌತಸ್ಯಕೀರ‍್ತಿತೌ | ಉತ್ಸಪ್ಪಾದವಸರ್ಪ್ಪಾಚ್ಚ ಬಲಾಯುರ್ದೆಹವರ್ಷಣಾಂ || ೨ ||

* * *

ತೃತೀಯೋಧ್ಯಾಯವು

ಕಾಲವು ಆದಿಯು ಅಂತ್ಯುವ ಇಲ್ಲದೇ ಇರುವಂಥಾದ್ದು ಆಗಿಯು, ವರ್ತ್ತನೇಯೇ ಲಕ್ಷಣ ಉಳ್ಳದ್ಧಾಗಿಯು, ವಡಂಬಡತಕ್ಕದ್ದು. ಲೋಕ ಪ್ರಮಾಣವಾದಂಥ ಆ ಕಾಲವು ಸೂಕ್ಷ್ಮ ಅಣು ಇಂತೆಂದು ವಿಭಾಗಿಸಲ್ಪಟ್ಟ ಪ್ರಮಾಣವುಳ್ಳದ್ದು || ೧ || ಆ ಕಾಲಕ್ಕೆ ಬಲ, ಆಯುಷ್ಯ, ದೇಹ, ತೇಜಸ್ಸು ಇವುಗಳಿಗೆ ವೃದ್ಧಿಯಾಗುವದರ ದೆಶೆಯಿಂದಲೂ ಕಡಮೆಯಾಗುವದರ ದೆಶೆಯಿಂದಲೂ ಉತ್ಸರ್ಪಿಣಿ ಅವಸರ್ಪಿಣಿಯಾಗಿ ಎರಡು ಭೇದಗಳು ಹೇಳ

* * *

ಟೀಕೊಟ್ಯೊದಶೈಕಸ್ಯಪ್ರಮಾಸಾಗರಸಂಖ್ಯಯಾ | ಶೆಷಸ್ಯಾಪ್ಯೆವಮೆವೆಷ್ಟಾತಾವು ಭೌಕಲ್ಪ ಇಷ್ಯತೆ || ೩ || ಷೊಢಾಸಪುನರೆಕೈಕೊಭಿದ್ಯತೆಸ್ವಭಿದಾತ್ಮಭಿಃ | ತಂನಾಮಾ ನ್ಯಾನುಕೀರ್ತ್ಯಂತೆಶೃಣುರಾಜನ್ಯಥಾಕ್ರಮಂ || ೪ || (ಕಾಲಭೇದ) ದ್ವಿರುಕ್ತ ಸುಷಮಾ ದ್ಯಾಸ್ಯಾತ್ ದ್ವಿತೀಯಾಸುಷಮಾಮತಾ | ಸುಷಮಾದುಷ್ಷ ಮಾಂತಾನ್ಯಾಸು ಷಮಾಂತಾಚದುಮಾ || ೫ || ಪಂಚಮೀದುಷ್ಷಮಾಜ್ಞೆ ಯಾಸಮಷ್ಟಿಷ್ಟ್ಯತಿ ದುಷ್ಷಮಾ | ಭೆದಾಇಮೆವಸರ್ಪ್ಪಿಣ್ಯಾಉತ್ಸರ್ಪಿಣ್ಯಾವಿಪರ್ಯ್ಯಯಃ || ಸಮಾಕಾಲವಿಭಾಗಸ್ಯಾತ್ಸುದು ಸಾವರ್ಹಗರ‍್ಹಯೋಃ | ಸುಷಮಾದುಷ್ಷಮೆತ್ಯೆವಸಂ ಮತೊನ್ವರ್ಥಮೆತಯೊಃ || ೭ || ಉತ್ಸರ್ಪಿಣ್ಯವಸರ್ಪಿ ಣೌಕಾಲೌಸಾಂತ

* * *

ಲ್ಪಟ್ಟವು || ೨ || ಉತ್ಸರ್ಪಿಣೀಕಾಲ ಅವಸರ್ಪಿಣೀ ಕಾಲಗಳೊಳಗೆ ಒಂದಕ್ಕೆ ಸಾಗರ ಸಂಖ್ಯೆಯಿಂದ ಹತ್ತು ಕೋಟೀ ಕೋಟಿಯು ಪರಿಮಿತಿಯಾದಂಥಾದ್ದು ಉಳಿದಂಥಾ ಮತ್ತೊಂದು ಕಾಲಕ್ಕೂ ಕೂಡ ಇದೇ ಪ್ರಕಾರ, ದಶಕೋಟೀ ಕೋಟಿಯು ಇಷ್ಟವಾದಂಥಾದ್ದು, ಆ ಎರಡು ಕಾಲಗಳು ಕಲ್ಪವಿಂತೆಂದು ಅಪೇಕ್ಷಿಸಲ್ಪಡುತ್ತೇ || ೩ || ಒಂದೊಂ ದಾದಂಥ ಆ ಅಕಾಲವಾದರೋ ತನ್ನ ಹೆಸರಿನ ಸ್ವರೂಪದಿಂದ ಆರು ಪ್ರಕಾರವಾಗಿ ಭೇದಿಸಲ್ಪಡುತ್ತಿದೆ, ಎಲೆ ಧೊರೆಯೇ, ಯಾಥಾಕ್ರಮವಾಗಿ ಆ ಕಾಲಭೇದಗಳ ಹೆಸರು ಗಳು ಹೇಳಲ್ಪಡುತ್ತಿವೆ ಕೇಳು || ೪ || (ಕಾಲಭೇದ) ಮೊದಲನೇದು ಸುಷಮ ಸುಷಮಾ, ಎಂಬುವಂಥಾದ್ದು ಆಗುತ್ತೆ. ಎರಡನೇದು ಸುಷಮ ಇಂತೆಂದು ವಡಂಬ ಡತಕ್ಕದ್ದು. ಮತ್ತೊಂದಾದ ಮೂರನೇದು ಸುಷಮ ದುಷಮೆಯು. ನಾಲ್ಕನೇದು ದುಷ್ಷಮ ಸುಷ್ಷಮೆಯು | ೫ | ಐದನೇದು ದುಷ್ಷಮೆಯಾಗಿ ತಿಳಿಯುವದಕ್ಕೆ ಯೋಗ್ಯವಾದದ್ದು, ಆರನೇದು ಅತಿ ದುಷ್ಷಮೆ ಇಂತೆಂದು ತಿಳಿಯತಕ್ಕದ್ದು. ಇವುಗಳೇ ಅವಸರ್ಪಿಣೀ ಕಾಲಗಳಲ್ಲಿ ಭೇದಗಳು, ಉತ್ಸರ್ಪಿಣೀ ಕಾಲಕ್ಕೆ ತಲಕೆಳಕಾದಂಥಾದ್ದು || ೬ || ಸಮಾ ಎಂದರೆ ಕಾಲ ವಿಭಾಗವಾಗುತ್ತಿದೆ, ಸು, ದುಃ, ಅಂದರೆವಳ್ಳೀದು ಕೆಟ್ಟದ್ದು ಎಂಬುವ ಅರ್ಥಗಳಲ್ಲಿ ಬರುತ್ತೆ. ಈ ಪ್ರಕಾರವಾಗಿ ಇವುಗಳಿಗೆ ಅನ್ವರ್ಥವಾಗಿ ಸುಷ್ಷಮಾದುಷ್ಷಮಾ ಇಂತೆಂದು ಹೇಳಲ್ಪಟ್ಟಿತು || ೭ || ಈ ಉತ್ಸರ್ಪಿಣೀ ಅವಸರ್ಪಿಣೀಕಾಲಗಳು ಅಂತರ್ಬ್ಭೇದವುಳ್ಳಂಥಾವುಗಳು, ಸ್ಥಿತಿಯವೃದ್ಧೀ ದೆಶೆಯಿಂದಲೂ ಇಲಿಯುವದರ ದೆಶೆರ್ಬ್ಭಿದಾವಿಮೌ | ಸ್ಥಿತ್ಯುತ್ಸರ್ಪ್ಪಾವಸರ್ಪ್ಪಾ ಭ್ಯಾಂಲಬ್ದಾನ್ವರ್ಥಾಭಿದಾನಕೌ || ೮ || ಕಾಲಚಕದ್ರಪರಿಭ್ರಾಂತ್ಯಾಷಟ್ಸಮಾಪರಿವರ್ತ್ತನೈಃ | ತಾವು ಭೌಪರಿವರ್ತೆತತಾಮಿಸ್ರೆತಪಕ್ಷವತ್ || ೯ || ಪುರಾಸ್ಯಾಮಸರ‍್ಪಿಣ್ಯಾಂಕ್ಷತ್ರೆರ್ಸ್ಮಿಭರತಾಹ್ವೆಯೆ | ಮದ್ಯಮಂಖಂಡಮಾಶ್ರಿತ್ಯವವೃದೆಪ್ರಥಮಾಸಮಾ || ೧೦ || (ಪ್ರಥಮಕಾಲ) ಸಾಗರೊಪಮಕೋಟೀನಾಂಸ್ಯಾಚ್ಚತುರಾಹತಾ | ತಸ್ಯಕಾಲಸ್ಯಪರಿ ಮಾತದಾಸ್ಥಿತಿರಿಯಂಮತಾ || ೧೧ || ದೆವೋತ್ತರ ಕುರುಕ್ಷ್ಮಾಸುಯಾ ಸ್ಥಿತಿಸ್ಸಮವಸ್ಥಿತಾ | ಸಾಸ್ಥಿತಿರ್ಬ್ಭಾರತೆವರ‍್ಷೆಯುಗಾರಂಭೆ ಸ್ಮಜಾಯತೆ || ೧೨ || ತದಾಸ್ಥಿತಿರ್ಮನುಷ್ಯಾಣಾಂ ತ್ರಿಪಲ್ಯೊಪಮಸಂಮಿತಾ | ಷಟ್ಸಹಸ್ರಾಣಿ ಚಾಪಾನಾಮುತ್ಸೇ ಧೊವಪುಷಃಸ್ಮೃತಃ || ೧೩ || (ದ್ವಿತೀಯಕಾಲ) ಯಾತಾಸುವೃಕ್ಷವೀ ರ್ಯ್ಯಾ ಯುಶ್ಮರೀರೊತ್ಸೆಧವೃತ್ತಿಷು | ಸುಷಮಾಲ ಕ್ಷಣಃ ಕಾಲೋದ್ವಿತೀಯಃ ಸಮವರ್ತ್ತತ || ೧೪ || ಸಾಗರೊಪಮಕೊಟೀನಾಂತಿಸ್ರಃಕೊ

* * *

ಯಿಂದಲೂ ಅನ್ವರ್ಥ ನಾಮವುಳ್ಳಂಥಾವುಗಳು || ೮ || ಕಾಲಚಕ್ರ ಪರಿಭ್ರಾಂತಿಯಿಂ ದಲೂ, ಆರು ಕಾಲವಿಭಾಗಗಳ ಪರಿವರ್ತನೆಗಳಿಂದಲೂ, ಆ ಎರಡಾದ ಉತ್ಸರ್ಪಿಣ್ಯವ ಸರ್ಪಿಣೀ ಕಾಲಗಳು ಕೃಷ್ಣ ಪಕ್ಷಶುಕ್ಲಪಕ್ಷಗಳೋಪಾದಿಯಲ್ಲಿವರ್ತ್ತಿಸುವವು || ೯ || ಭರತವೆಂತ ಹೆಸರುವುಳ್ಳಂಥ ಈ ಕ್ಷೇತ್ರದಲ್ಲಿ ಮೊದಲು ಈ ಅವಸರ್ಪ್ಪಿಣೀ ಕಾಲದಲ್ಲಿ ಮಧ್ಯಮಖಂಡ, ಅಂದರೆ,——- ಅರ್ಯ್ಯಾಖಂಡವನ್ನು ಆಶ್ರಯಿಸಿ ಮೊದಲನೇ ಕಾಲವು ವೃದ್ಧಿ ಹೊಂದಿತು || ೧೦ || ಆ ಕಾಲದ ಪ್ರಮಾಣವು ನಾಲ್ಕು ಕೋಟೀ ಕೊಟೀಸಾಗರೋಪಮವಾದಂಥಾದ್ದು, ಆ ಸಮಯದಲ್ಲಿ ಈ ಸ್ಥಿತಿಯು ವಡಂಬಡತಕ್ಕದ್ದು || ೧೧ || ಉತ್ತಮ ಭೋಗ ಭೂಮಿಗಳಲ್ಲಿ ಯಾವಸ್ಥಿತಿ ಇರುವ ದೋ ಆ ಸ್ಥಿತಿಯು ಭರತ ಕ್ಷೇತ್ರದಲ್ಲಿ ಯುಗದ ಆರಂಭದಲ್ಲಿ ಹುಟ್ಟಿತು || ೧೨ || ಆಗ ಮನುಷ್ಯರುಗಳಿಗೆ ಆಯುಷ್ಯ ಸ್ಥಿತಿಯು, ತ್ರಿಪಲ್ಯೋಪಮ ಸಮಾನವಾದಂಥಾದ್ದು, ದೇಹದ ಉತ್ಸೇಧವು ಚಾಪಗಳ ಆರು ಸಾವಿರವು ವೊಡಂಬಡತಕ್ಕದ್ದು || ೧೩ || (ದ್ವಿತೀಯಕಾಲ) ಕಲ್ಪವೃಕ್ಷ, ವೀರ್ಯ್ಯ, ಆಯುಷ್ಯಶರೀರೋತ್ಸೇಧ, ಇವುಗಳ ವೃತ್ತಿಗಳು ಹೋಗುವಂಥಾದ್ದಾಗುತ್ತಿರಲೀಕಾಗಿ ಸುಷಮಾಲಕ್ಷಣವಾದ ಎರಡನೇಕಾಲವು ಪ್ರವರ್ತಿಸಿತು || ೧೪ || ಮೂರುಕೋಟೀ ಕೋಟೀ ಸಾಗರೋಪಮ ಪ್ರಮಣಾವುಳ್ಳಂ ಥಾದ್ದು, ಆಗ

* * *