೨೭

ಜ್ಞಾನಗುರುವಿನೊಳೈಕ್ಯವಾಗಿ ಸು
ಜ್ಞಾಣಾಮೃತವ ಸೇವಿಸಿದಾತನೆ ಸುಖಿ           ||ಪ||

ಅಮೃತವಮೃತವೊಂದಾದಂತೆ
ಕೇವಲ ಸಮರಸ ನಿಜರೂಪಾಗಿ
ಸಮಹಿತ ಜ್ಞಾನಾನಂದ ಜಲದೊಳಗೆ
ವಿಮಲನಾದ ನಿರುಪಮ ಶರಣ        ೧

ಕರಗಿ ತಿಳಿದು ತನ್ನೊಳು ತಾನೆ, ಘೃತ
ನೆಱೆಘಟ್ಟಿಕೊಂಡು ರೂಪಾದಂತೆ;     ೧

ಪಾವನತರ ಸುಜ್ಞಾನ ರಸವೇ ತುಂಬಿ
ತುಳುಕುತಿಹ ಪರಮಾನಂದ ಶರಣ  ೨

ಉದಕವನುಂಡಿರ್ದ ಕಬ್ಬುನದಲ್ಲಿ ಮ
ತ್ತುದಕವ ಬೇಱೆ ತೆಗೆಯಲುಂಟೆ ?
ಸದಮಲಜ್ಞಾನ ಪಾದೋದಕದಲ್ಲಿ
ತೃಪ್ತವಡೆದ ಶರಣ ನಿಜಭರಿತನು      ೩  .

ತಾನೆ ಗುರು ತಾನೆ ಲಿಂಗ ತಾನೆ ಜಂಗಮ
ತಾನೆ ಪಾದ ತಾನೆ ಪಾದೋದಕ
ತಾನೆ ಪರಮಾನಂದ ಶರಣನು ಸುಖಿ
ತಾನೆ ನಿತ್ಯನಿರಂಜನನು    ೪

ನಿಜದ ನಿರಾಳದ ಪರಮ ಸುಖದ ರಸ
ದೊಳಗೆರಡಱೆಯದೆ ಮುಳುಗಿಪ್ಪ
ಅಜಾತ ಕೂಡಲಚನ್ನಸಂಗಯ್ಯನಲ್ಲಿ
ಭಕ್ತಿಯ ತವನಿಧಿ ಬಸವಣ್ಣ   ೫

೨೮

ಬಿಸಿಲೆಂಬ ಗುರುವಿಂಗೆ ನೆಳಲೆಂಬ ಶಿಷ್ಯ.
ನಿರಾಳಲಿಂಗಕ್ಕೆ ಬಯಲೆಂಬ ಸೆಜ್ಜೆ.
ವಾಯು ಶಿವದಾರ, ಬೆಳಗೆ ಸಿಂಹಾಸನ.
ಅತ್ತಲಿತ್ತ ಚಿತ್ತವ ಹರಿಯಲೀಸದೆ
ಮಜ್ಜನಕ್ಕೆರದು ಸುಖಿಯಾದೆನು ಕಾಣಾ ಗುಹೇಶ್ವರಾ.    ||೨೮||

೨೯

ಪಾದವಿಲ್ಲದ ಗುರುವಿಂಗೆ ತಲೆಯಿಲ್ಲದ ಶಿಷ್ಯನು.
ಅನಾಚಾರಿ ಗುರುವಿಗೆ ವ್ರತಗೇಡ ಶಿಷ್ಯನು.
ಈ ಗುರು ಶಿಷ್ಯರಿಬ್ಬರು ಸತ್ತ ಸಾವ
ನಿಮ್ಮಲ್ಲರಸುವೆ ಕಾಣಾ ಗುಹೇಶ್ವರಾ. ||೨೯||

೩೦

ಅರಿದು ನೆನೆಯಲಿಲ್ಲ, ಮರದು ಪೂಜಿಸಲಿಲ್ಲ.
ತೆರಹಿಲ್ಲದ ಘನಕ್ಕೆ ಕುರುಹು ಮುನ್ನಿಲ್ಲ.
ತನಗೆ ಗುರುವಿಲ್ಲ, ಗುರುವಿಗೆ ತಾನಿಲ್ಲ.
ಗುರುವಿಂಗೆ ಶಿಷ್ಯನು ಹೊಡವಡುವಕಾರಣ ಮುನ್ನಿಲ್ಲಾ>
ಬಯಲ ಬತ್ತಲಿಲ್ಲ ಬೆಳೆಯಲಿಲ್ಲ ಒಕ್ಕಲಿಲ್ಲ ತೂರಲಿಲ್ಲ
ಗುಹೇಶ್ವರನೆಂಬಲಿಂಗಕ್ಕೆ ಕುರುಹು ಮುನ್ನಿಲ್ಲಾ ||೩೦||

೩೧

ಮಹಾಕಾಲದಲ್ಲಿ ಓಂಪ್ರಥಮ
ನಿಮ್ಮಿಂದ ನೀವೇ ಸ್ವಯಂಭುವಾಗಿರ್ದಿರಿ
ಒಂದನಂತಕಾಲ. ಮನವು ಮಹದ
ಆನಂದದಲ್ಲುಕ್ಕಾಡಿ ಮತ್ತಲ್ಲಿಯೆ
ತಲ್ಲೀಯವಾಗಿರ್ದನೊಂದನಂತ
ಕೋಟಾನುಕೋಟಿ ವರುಷ.
ಕೂಡಲಚೆನ್ನ ಸಂಗಮದೇವ ವಿಪರೀತ ಚರಿತ್ರನು         ||೩೧||

ಎಲೆ ಗಂಡುಗೂಸೆ ನೀ ಕೇಳ, ನಿನಗೆಂದುಟ್ಟೆ ಗಂಡಂಡಿಗೆಯನು. ಮತ್ತೊಮ್ಮೆ ನಾನು ಹೆಣ್ಣಪ್ಪೆನಯ್ಯಾ. ಮತ್ತೊಮ್ಮೆ ನಾಣು ಗಂಡಪ್ಪೆನಯ್ಯಾ. ಲಿಂಗಪತಿಗಳು ಮುಖ್ಯವಾದನಂತಕೋಟಿ ಮೇಲೆ ತೊಂಬತ್ತಾರುಸಾವಿರ ಅಮರ ಗಣಂಗಳೆಲ್ಲರು ವಿಭೂತಿಯನು ಸರ್ವಾಂಗಕ್ಕೆ ಉದ್ಧೊಳನಂಗೈದು ಸ್ಥಾನ ಸ್ಥಾನಕ್ಕೆ ಧರಿಸಿಕೊಂಡ ಬಳಿಕ, ರುದ್ರಾಕ್ಷಿಯನು ಹಸ್ತ, ಬಾಹು, ಕಂಠ, ಕರ್ಣ, ಮೇಗಳುತ್ತುಮಾಂಗ, ಶಿಖಿ ಮೊದಲಾದ ಎಲ್ಲಾ ಸ್ಥಾನದಲ್ಲಿ ತುಂಬಿಯಳವಡಿಸಿಕೊಂಡು ಮತ್ತೆ ಹನ್ನೆರಡು ಪ್ರಣಮಕ್ಕೆ ಹನ್ನೆರಡು ಮಣಿ ನೂಲು , ಆ ಮರ್ಯಾದಿಯಲ್ಲಿ ಇಪ್ಪತ್ತೇಳು ಪ್ರಣಮಕ್ಕೆ ಇಪ್ಪತ್ತೇಳು ಮಣಿ ನೂಲು, ಆ ಮರ್ಯಾದಿಯಲ್ಲಿ ಮೂವತ್ತಾರು ಪ್ರಣಮಕ್ಕೆ ಮೂವತ್ತಾರು ಮಣಿ ನೂಲು, ಆ ಮರ್ಯಾದಿಯಲ್ಲಿ ಎಪ್ಪತ್ತೆರಡು ಪ್ರಣಮಕ್ಕೆ ಎಪ್ಪತ್ತೆರಡು ಮಣಿ ನೂಲು, ಆ ಮರ್ಯಾದಿಯಲ್ಲಿ ನೂರೆಂಟು ಪ್ರಣಮಕ್ಕೆ ನೂರೆಂಟು ಮಣಿ ನೂಲು. ಆ ಮರ್ಯಾದಿಯಲ್ಲಿ ಅಂಗಕ್ಕೆ ಧರಿಸುವ ಮಣಿಗಳನು ಐದು ತೆರದ ಜಪದ ಮಣಿಗಳನು ಅನುಭಾವವೆಂಬ ಸುಸೂತ್ರದಿಂ ವೃಷಭನ ಬಾಲದ ಪ್ರಮಾಣಿನ ಮರ್ಯಾದಿಯಲ್ಲಿ ಸರಂಗೈದು ಅಂಗಕ್ಕೆ ಅಳವಡುವಷ್ಟು ಮಣಿಮಾಲಿಗಳನಳವಡಿಸಿಕೊಂಡ ಬಳಿಕ ಮತ್ತೆ ಹನ್ನೆರಡು ಪ್ರಣಮದ ಮೂರಾರು ವೇಳೆ ಕೂಡಿ ಜಪಿಸಲು ನೂರೆಂಟು ಮಣಿಗಳ ಸಂದಿತ್ತು. ಈ ಪ್ರಕಾರದ ಜಪದ ಲಕ್ಷಣವನರಿದು, ಮಣಿಗಳ ಮೂಮುಖವನರಿದು ಪವಣಿಸಿ ಜಪವಮಾಡುತ್ತ ಶಿವ ಸಮೇತವನುಳ್ಳ ಬಸವಾದಿ ಪ್ರಮಥರೆಲ್ಲರು ತಮ ತಮಗೆ ಒಬ್ಬರಿಗೊಬ್ಬರ ಸ್ತೋತ್ರವಂ ಮಾಡಿಕೊಳ್ಳುತ್ತ ಶಿವಸುಖಾನುಭಾವ ವಿನೋದದಿಂದಿರುತ್ತಿರ್ದ, ಮಂತ್ರಪಿಂಡಗಳ ಅನಂತ ಕೋಟಿಯ ಮೇಲೆ ತೊಂಬತ್ತಾರು ಸಾವಿರ. ಅವರೆಲ್ಲರ ತನ್ನ ಲೀಲಾ ಸೂತ್ರ ಪರವೆಂಬ ಭಕ್ತಿ ಮಂಟಪದೊಳಗೆ ಕೂಡಿಕೊಂಡು ಪೂರ್ವಾಚಾರ್ಯನಪ್ಪ ಬಸವಣ್ಣ ಪ್ರಮಥ ಗುರುವೆಂಬ ನಾಮಮಂ ತಾಳ್ದು ಅನಂತಾನಂತಕಾಲವಿರುತಿರ್ದನು. ಎಂಬ ಪುರಾತನರ ವಚನ ಸಾರಾಯವೆನಿಸುವಂಥಾ ಅಮೃತ ಮಂತ್ರಂಗಳಿಗೆ ಸಾಕ್ಷಿ.

೩೨

ಹಜ್ಜೆ ಇಲ್ಲದ ಪುರುಷ, ಆ ಸಜ್ಜನ ಸ್ತ್ರೀ, ಷಡುಪಂಚಮರುದ್ರ,
ಕಾಳಾಂಧರ, ವಾರಿಧಿ , ಆತ್ಮಾನಾತ್ಮ ಇಂತಿವೇನೂ ಇಲ್ಲದಂದು.
ಅತ್ತತ್ತಲಿರ್ದ ಬೆಳಗಿನ ಚಿನ್ಮೂರ್ತಿಯಲ್ಲಿ ಚಿದ್ವಿಭೂತಿ ಇದ್ದಿತ್ತು.
ಆ ಚಿದ್ವಿಭೂತಿ ಚಿದ್ಘನಾತ್ಮಕ ರತ್ನವಾಯಿತ್ತು.
ಆ ಚಿದ್ಘನಾತ್ಮಕ ರತ್ನವೆ ಚಿಚ್ಛಕ್ತಿಯಾಯಿತ್ತು.
ಆ ಚಿಚ್ಛಕ್ತಿ ಸಕಲ ಚೈತನ್ಯಾತ್ಮಕ ಶರಣನಾಯಿತ್ತು.
ಆ ಶರಣನೊಳಗೊಂದು ಕೋಳಿ
ದ್ವಾದಶ ವರ್ಣದ ಸುನಾದವಾಗಿ ಕೂಗಿತ್ತು.
ಆ ಸುನಾದಂಗಳ ಝಂಕಾರವು
ಚತುರ್ದಶ ಸಾವಿರಕ್ಷರ ರೂಪಕವಾಗಿ
ಆ ಶರಣನ ಸಪ್ತ ಚಕ್ರದ ಕಮಲದೊಳಗೆ
ಪ್ರವೇಷ್ಟಿಸಿ ಗೋಪ್ಯವಾಗಿದ್ದವು.
ಆ ಶರಣನಲ್ಲಿ ಷಡು ಶಿವಮೂರ್ತಿಗಳುದೈಸಿದರು.
ಆ ಮೂರ್ತಿಗಳಲ್ಲಿ ಷಡುಸ್ಥಲ ಸತ್ಕ್ರಿಯಗಳು ತೋರಿದವು.
ಅವರೆಲ್ಲರಲ್ಲಿ ಅನಂತಕೋಟಿ ಮೂರ್ತಿಗಳ ಮೇಲೆ
ತೊಂಬತ್ತಾರು ಸಾವಿರ ಶಿವಮೂತ್ತಿಗಳುದಯಿಸಿದರು.
ಆ ಶರಣನ ನಾಡಿಗಳೊಳಗೆ ಚಿದ್ಮಣಿ, ಚಿದ್ಭಸ್ಮ, ಚಿಲ್ಲಿಂಗ
ಇಂತಿವೆಲ್ಲ ತೋರಿದವು.
ಇವನೆಲ್ಲವ ಶಿವಗಣಂಗಳಲ್ಲಿ ಆ ಶರಣನು
ಉಪದೇಶ ಮಾರ್ಗದಿಂ ಧರಿಸಿಕೊಂಡು
ನೂರೊಂದರ ಮೇಲೆ ನಿಂದು ದ್ವಾದಶ ಸಪ್ತವಿಂಶತಿ
ಚತ್ತೀಶದ್ವಯವೆ ಎಪ್ಪತ್ತು ಶತಾಷ್ಟವೆಂಬ ಪಂಚ
ಜಪಮಾಲೆಗಳಿಗೆ ಹನ್ನೆರಡು ಸಿಡಿಲ ಸುನಾದವ
ನೊಡದು ತ್ರೀ ೧.( X (ಬ)). ಆರು ೨.( X (ಬ),) ವೇಳೆ ಕೂಡಿ
ನೂರೆಂಟಕ್ಕೆ ಸಂದಾನಿಸಿ ಜಪಿಸುತ್ತಿಪ್ಪನಂತ ಪ್ರಮಥರಂ
ಬಸವಪ್ರಿಯ ಕೂಡಲಚೆನ್ನಸಂಗಯ್ಯನಲ್ಲಿ ಕಂಡು
ಸುಖಿಯಾದೆನು.   ||೩೨||

೩೩

ಪ್ರಣಮ ಪ್ರಾಣವಾಯುವಿನ
ನೆಲೆಯನರಿದು ಬಿಡಬಲ್ಲಡೆ ಮೂಲ ಪ್ರಣಮ.
ಓಂಕಾರದ ಶ್ರುತಿಗಳಿಂದತ್ತಣ ಮೂಲ ಪ್ರಣಮದ
ಮೂಲಾಂಕುರವನರಿಯ ಬಲ್ಲಡೆ ಮೂಲ ಪ್ರಣಮ.
ಐವತ್ತೆರಡಕ್ಷರದ ಲಿಪಿಯ ತಿಳಿದು ನೋಡಿ
ಓದಿ ಮೀರಬಲ್ಲಡೆ ಮೂಲ ಪ್ರಣಮ.
ನಾದ ಬಿಂದು ಕಳಾತೀತನಾಗಬಲ್ಲಡೆ ಮೂಲ ಪ್ರಣಮ.
ಇದು ಕಾರಣ ಕೂಡಲ ಚೆನ್ನಸಂಗಯ್ಯ,
ನಿಮ್ಮ ಶರಣರು ಸಹಸ್ರವೇದಿಗಳಾದರಾಗಿ
ಪ್ರಣಮ ಪ್ರತಿಷ್ಠಾ ಚಾರ್ಯರು ಅವರಿಗೆ
ಮಿಗೆ ಮಿಗೆ ನಮೋ ನಮೋ

[1]ಎಂಬೆನು[2].      ||೩೩||

೩೪

ಕಾಯಾನುಭಾವಿಗಳು ಕಾಯದಲ್ಲಿಯೆ ಮುಕ್ತರು.
ಜೀವಾನುಭಾವಿಗಳು ಜೀವದಲ್ಲಿಯೆ ಮುಕ್ತರು.
ಪ್ರಾಣಾನುಭಾವಿಗಳು ಪ್ರಾಣದಲ್ಲಿಯೆ ಮುಕ್ತರು.
ಪವನಾನುಭಾವಿಗಳು ಪವನದಲ್ಲಿಯೆ ಮುಕ್ತರು.
ಇವರೆಲ್ಲರು ಸ್ಥಲ ಕುಳದ ಲಿಂಗಾಣುಭಾವಿಗೆಂತು ಸರಿಯೆಂಬೆ?
ನಿರವಯ ಸ್ವಯಂಭು[3] ಪ್ರಕಾಶವಾಗಿಪ್ಪ
ಲಿಂಗದಂಗ ಕೂಡಲಚೆನ್ನಸಂಗಾ ನಿಮ್ಮ ಶರಣನು.        ||೩೪||

ಸ್ತ್ರೀಲಿಂಗ, ಪುಲ್ಲಿಂಗ, ನಪುಂಸಕಲಿಂಗವೆಂದೆಂಬರು.
ಆದಿ ಅನಾದಿ ಸಂದಣಿಸಿ ಸ್ವಯವಾಯಿತ್ತು.
ಪ್ರಣಮ ಪ್ರಜ್ವಲಿತ ಕುಲವಳಿದು
ಮೂಲ ಪ್ರಣಮಲಿಂಗ, ಕೂಡಲಚೆನ್ನಸಂಗಯ್ಯಾ ನಿಮ್ಮ ಶರಣಂಗೆ. ||೩೫||

೩೬

ಬಸವಣ್ಣ ಓಂಕಾರದಿಂದತ್ತತ್ತ ನೀನೆ,
ನಾದ ಬಿಂದುವಿಂದತ್ತತ್ತ ನೀನೆ,
ಪ್ರಥಮಾಚಾರ್ಯ ನೀನೆ, ಲಿಂಗಾಚಾರ್ಯ,
ಜಂಗಮಾಚಾರ್ಯ, ಪ್ರಸಾದಚಾರ್ಯ
ಎನಗೆ ಸರ್ವಾಚಾರ್ಯ ನೀನೆ.
ನೀನೆ ಗತಿಮತಿಯಾಗಿ ಎನ್ನನುಳುಹಿದ ಕಾರಣ.
ಕೂಡಲಚೆನ್ನಸಂಗಮದೇವಾ, ಆವ ವರ್ಣವು ಇಲ್ಲದಂದು
ಓಂ ನಮಃಶಿವಾಯ ಎನುತಿರ್ದೆನು.  ||೩೬||

೩೭

ನಮಃಶಿವಾಯ ಲಿಂಗವು.
ಓಂ ನಮಃಶಿವಾಯ ಬಸವಣ್ಣು.
ಎನ್ನ ಮನಸ್ಥಲದಲ್ಲಿ ಬಿಂದು ಬೆಳಗಿ
ಬಸವಣ್ಣ ತೋರಿದ ಕಾರಣ ಕೂಡಲಚೆನ್ನಸಂಗಯ್ಯಾ,
ಆದಿ ಆಧಾರವಿಲ್ಲದಂದು ಓಂ ನಮಃಶಿವಾಯ ಎನುತಿರ್ದೆನು.      ||೩೭||

ನೆಲ ಹುಟ್ಟಿದಂದಿನ ಧ[4] ವಳಾರ.
ಆ ಧ[5]ವಳಾರದೊಳಗೊಬ್ಬ ಸೂಳೆ ನೋಡಯ್ಯಾ.
ತಲೆಯಿಲ್ಲದಾತ ನಿಚ್ಚಕ್ಕೆ ಬಪ್ಪ.
ಕರುಳಿಲ್ಲದಾತ ನಿಚ್ಚಕ್ಕೆ ಬಪ್ಪ.
ಕರುಳಿಲ್ಲದಾತ ಕುಂಟಣಿಯಾದ.
ಕೈಕಾಲಿಲ್ಲದೆ ಅಪ್ಪಲೊಡನೆ ಇದಕಂಡು ಬೆಱಗಾದೆ ಗುಹೇಶ್ವರಾ.   ||೩೮||

೩೯

ಮಣ್ಣಿಲ್ಲದ ಹಾಳ ಮೇಲೆ
ಕಣ್ಣಿಲ್ಲದಾತನೊಂದು ಮಣಿಯ ಕಂಡ,
ಕೈಯಿಲ್ಲದಾತ ದಾರದಲ್ಲಿ ಪವಣಿಸಿದ,
ಕೊರಳಿಲ್ಲದಾತ ಕಟ್ಟಿ ಕೊಂಡ.
ಅಂಗವಿಲ್ಲದ ಶೃಂಗಾರಕ್ಕೆ ಭಂಗ ಉಂಟೆ ಗುಹೇಶ್ವರಾ?  ||೩೯||

೪೦

ನ ಎಂಬುದೆ ನಂದಿಯಾಗಿ,
ಮ ಎಂಬುದೆ ಮಹತ್ತಾಗಿ,
ಶಿ ಎಂಬುದೆ ಲಿಂಗವಾಗಿ,
ವಾ ಎಂಬುದೆ ಹಂಸೆಯಾಗಿ,
ಯ ಎಂಬುದೆ ಅರಿವಾಗಿ,
ಓಂಕಾರವೆ ಗುರುವಾಗಿ,
ಸಂಬಂಧವರ ಅಸಂಬಂಧವಾಗಿ,
ಅಸಂಬಂಧವೆ ಸಂಬಂಧವಾಗಿ,
ಎರಡು ಒಂದಾಗಿ ಗುಹೇಶ್ವರಲಿಂಗ ಸಂಬಂಧಿ.            ||೪೦||

೪೧

ಪ್ರಣಮದ ಪ್ರಣಮವೆ ನಕಾರವಯ್ಯಾ.
ಪ್ರಣಮದ ದಂಡಕವೆ ಮಕಾರವಯ್ಯಾ.
ಪ್ರಣಮದ ಕುಂಡಲಿಯೆ ಶಿಕಾರವಯ್ಯಾ.
ಪ್ರಣಮದ ತಾರಕವೆ ವಕಾರವಯ್ಯಾ.
ಪ್ರಣಮದ ಬಿಂದುವೆ ಯಕಾರವಯ್ಯಾ.
ನಕಾರದ ದಂಡಕವೆ ಮಕಾರವಯ್ಯಾ.
ನಕಾರದ ಬಲದಕೋಡು ಶಿಕಾರವಯ್ಯಾ.
ನಕಾರದ ಎಡದಕೋಡು ವಕಾರವಯ್ಯಾ.
ನಕಾರದ ಬಿಂದು ಯಕಾರವಯ್ಯಾ.
ನಕರದ ತಾರಕವೆ ಓಂಕಾರವಯ್ಯಾ.
ಮಕಾರದ ದಂಡಕವೆ ನಕಾರವಯ್ಯಾ.
ಮಕಾರದ ಬಲದ ಕೋಡು ಶಿಕಾರವಯ್ಯಾ.
ಮಕಾರದ ಎಡದ ಕೋಡು ವಕಾರವಯ್ಯಾ.
ಮಕಾರದ ಬಿಂದು ಯಕಾರವಯ್ಯಾ.
ಮಕಾರದ ತಾರಕವೆ ಓಂಕಾರವಯ್ಯಾ.
ಶಿಕಾರದ ದಂಡಕವೆ ನಕಾರವಯ್ಯಾ.
ಶಿಕಾರದ ಬಲದ ಕೋಡು ಮಕಾರವಯ್ಯಾ:
ಶಿಕಾರದ ಎಡದ ಕಲೋಡು ವಕಾರವಯ್ಯಾ.
ಶಿಕಾರದ ಬಿಂದು ಯಕಾರವಯ್ಯಾ.
ಶಿಕಾರದ ತಾರಕವೆ ಓಂಕಾರವಯ್ಯಾ.
ವಕಾರದ ದಂಡಕವೆ ಶಿಕಾರವಯ್ಯಾ.
ವಕಾರದ ಬಲದ ಕೋಡು ನಕಾರವಯ್ಯಾ.
ವಕಾರದ ಎಡದ ಕೋಡು ಮಕಾರವಯ್ಯಾ.
ವಕಾರದ ಬಿಂದು ಯಕರವಯ್ಯಾ.
ವಕಾರದ ತಾರಕವೆ ಓಂಕಾರವಯ್ಯಾ.
ಯಕಾರದ ದಂಡಕವೆ ವಕಾರವಯ್ಯಾ.
ಯಕಾರದ ಬಲದ ಕೋಡು ವಕಾರವಯ್ಯಾ.
ಯಕಾರದ ಎಡದ ಕೋಡು ಮಕಾರವಯ್ಯಾ.
ಯಕಾರದ ಬಿಂದುವೆ ಶಿಕಾರವಯ್ಯಾ.
ಯಕಾರದ ತಾರಕವೆ ಓಂಕಾರವಯ್ಯಾ.
ಈ ಮೂವತ್ತಾರು ಮೂಲ ಪ್ರಣಮಂಗಳೆ
ಪ್ರಥಮ ಗುರು ಬಸವಣ್ಣನ ನಾಮವಂ
ಸೊಡ್ಡಳ ಲಿಂಗದಲ್ಲಿ ಕಂಡು ಸುಖಿಯಾಗಿ ಜಪಿಸುತ್ತಿರ್ದೆನಯ್ಯಾ.   ||೪೧||

೪೧

ಎನ್ನ ಚಿತ್ತಕ್ಕೆ ನಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ [6]ಬುದ್ಧಿಗೆ ಮಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ಅಹಂಕಾರಕ್ಕೆ ಶಿಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ಮನಕ್ಕೆ ವಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ಜೀವಕ್ಕೆ ಯಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ಮತಿಗೆ ಓಂಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ನಾದಕ್ಕೆ ಅಕಾರವಾಗಿ ಬಂದೆಯ್ಯಾ ಬಸವಣ್ಣಾ.
ಎನ್ನ ಬಿಂದುವಿಗೆ ಉಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ಕಳೆಗೆ ಮಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ಭವವ [7]ಕೊಂದೆ[8] ಹೆನೆಂದು
ಉಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ಸಕಾರವಸ್ಥೆಯ [9]ಕೊಂದೆ[10] ಹೆನೆಂದು
ಸಕಾರವಾಗಿ ಬಂದೆಯಯ್ಯಾ ಬಸವಣ್ಣಾ.
ಎನ್ನ ವಿಕಾರವ ಕೊಂದೆಹೆನೆಂದು
ವಕಾರವಾಗಿ ಬಮದೆಯಯ್ಯಾ ಬಸವಣ್ಣಾ.
ಎನ್ನ ಭಕ್ತಿಗೆ ಬಕಾರವಾಗಿ ಬಂದೆಯಯ್ಯಾ ಬಸವಣ್ವಾ.
ಎನ್ನ ಶಕ್ತಿಗೆ ಬಕಾರವಾಗಿ ಬಂದೆಯಯ್ಯಾ ಬಸವಣ್ವಾ.
ಎನ್ನ ವಂಚ [11]ನೆಗೆ[12] ವಕಾರವಾಗಿ ಬಮದೆಯಯ್ಯಾ ಬಸವಣ್ಣಾ.
ಇಂತಪ್ಪ ಮಹಾಪ್ರಣಮಂಗಳೆ ಬಸವಣ್ಣನಾಗಿ,
ಆ ಬಸವಣ್ಣನೆ ಮಹಾಪ್ರಣಮಂಗಳಾಗಿ
ತನ್ನ ಮಠಕ್ಕೆ ತಾನೆ ಬಂದು ಭಕ್ತಿ ವಸ್ತುವ ನಿತ್ಯ[13]ವು ನಾನು[14] ನಿಃಕಳಂಕ ಮಲ್ಲಿಕಾರ್ಜುನನ [15]ಭಕ್ತಿಗಿತ್ತು[16] ಬದುಕಿದೆನಯ್ಯಾ.      ||೪೧||

೪೨

ಪ್ರಣಮದ ಚಿದ್ಘನ ನಾದವೆ ಅಕಾರ.
ಪ್ರಣಮದ ಚಿದ್ಬಿಂದುವೆ ಉಕಾರ.
ಪ್ರಣಮದ ಚಿತ್ಕಳೆಯೆ ಮಕಾರ.
ಪ್ರಣಮದ ಬಹಳ ಸ್ವರೂಪೆ ಬಕಾರ ಗುರು.
ಪ್ರಣಮದ ಚೈತನ್ಯ ಸ್ವರೂಪೆ ಸಕಾರ ಲಿಂಗ.
ಪ್ರಣಮದ ವಚನ ಸ್ವರೂಪೆ ವಕಾರ ಜಂಗಮ.
ಪ್ರಣಮದ ಬಟ್ಟೆಯೆ  ಬಕಾರ.
ಪ್ರಣಮದ ಸೋಪಾನವೆ ಸಕಾರ.
ಪ್ರಣಮದ ವರ್ತನವೆ ವಕಾರ.
ಪ್ರಣಮದ ಬಳ್ಳಿಯೆ ಬಕಾರ.
ಪ್ರಣಮದ ಲೇಸೆ ಸಕಾರ.
ಪ್ರಣಮದ ವರವೆ ವಕಾರ.
ಪ್ರಣಮದ ಬಹಳಾಕಾರವೆ ಬಕಾರ.
ಪ್ರಣಮದ [17]ಸಹಸವೆ[18] ಸಕಾರ.
ಪ್ರಣಮದ ಒಲ್ಮೆಯೆ ವಕಾರ.
ಪ್ರಣಮದ ಬರನೆ ಬಕಾರ.
ಪ್ರಣಮದ ರಸವೆ ಸಕಾರ.
ಪ್ರಣಮದ ವರ್ಣವೆ ವಕಾರ.
ಪ್ರಣಮದ ಬಿರುಸೆ ಬಕಾರ.
ಪ್ರಣಮದ ಸರಸವೆ ಸಕಾರ.
ಪ್ರಣಮದ ವಿರಸವೆ ವಕಾರ.[19]ಪ್ರಣಮದ ಬಲವೆ ಬಕಾರ.
ಪ್ರಣಮದ ನಿಲವೆ ಸಕಾರ.[20] ಪ್ರಣಮದ ಬಲಪಶ್ಯಂತಿವಾಕ್ಯ ಬಕಾರ.ಪ್ರಣಮದ ಸೂಕ್ಷ್ಮವಾಕ್ಯ ಸಕಾರ.
ಪ್ರಣಮದ ವೈಕರಿವಾಕ್ಯ ವಕಾರ.
ಪ್ರಣಮದ ಬಹಳಜ್ಞಾನವೆ ಬಕಾರ.
ಪ್ರಣಮದ ಸಹಜ [21]ಜ್ಞಾನವೆ[22] ಸಕಾರ.
ಪ್ರಣಮದ ಶುದ್ಧಜ್ಞಾನವೆ ವಕಾರ.
ಪ್ರಣಮದ ಬಹಳನಾದವೆ ಬಕಾರ.
ಪ್ರಣಮದ ಸುನಾದವೆ ಸಕಾರ,
ಪ್ರಣಮದ ಸುನಾದವೆ ವಕಾರ.
ಪ್ರಣಮದ ಬೇರೇ ಬಕಾರ.
ಪ್ರಣಮದ ಶಾಖೆ ಸಕಾರ.
ಪ್ರಣಮದ ವರಫಲವೆ ವಕಾರ.
ಪ್ರಣಮದ ಭಕ್ತಿಯೆ ಬಕಾರ.
ಪ್ರಣಮದ ಸುಜ್ಞಾನವೆ ಸಕಾರ.
ಪ್ರಣಮದ ವೈರಾಗ್ಯವೆ ವಕಾರ.
ಪ್ರಣಮದ ಬಹಳಶಬ್ದವೆ ಬಕಾರ.
ಪ್ರಣಮದ ನಿಃಶಬ್ದವೆ ಸಕಾರ.
ಪ್ರಣಮದ ಶಬ್ದ ನಿಃಶಬ್ದವಾಕುಗಳಾದುದೆ ವಕಾರ.
ಇಂತಪ್ಪ ಮೂಲ ಪ್ರಣಮವೆ ಬಸವ ಎಂಬ
ಪ್ರಣಮತ್ರಯವಾಗಿ ಬಸವಣ್ಣನಾದುದಂ
ತ್ರಿಪುರಾಂತಕ ಲಿಂಗದಲ್ಲಿ ಕಂಡು ಜಪಿಸಿ
ಬದುಕಿದೆನಯ್ಯಾ ಪ್ರಭುವೆ.  ||೪೭||


[1] ಎನುತಿರ್ದೆನು ಕಾಣಾ (ಬ)

[2] ಎನುತಿರ್ದೆನು ಕಾಣಾ (ಬ).

[3] x (ಬ)

[4] ಡ (ಬ).

[5] ಡ (ಬ).

[6] + ಸು (ಬ)

[7] ಕಡಿದೆ (ಬ)

[8] ಕಡಿದೆ (ಬ)

[9] ಕಡಿದೆ (ಬ)

[10] ಕಡಿದೆ (ಬ)

[11] ಚಿಸುವುದಕ್ಕೆ (ಬ)

[12] ಚಿಸುವುದಕ್ಕೆ (ಬ)

[13] ತ್ತಡವನನು (ಬ)

[14] ತ್ತಡವನನು (ಬ)

[15] ಭಕ್ತರಿಗಿತ್ತು (ಬ)

[16] ಭಕ್ತರಿಗಿತ್ತು (ಬ)

[17] ಸಲೆಯೆ (ಬ)

[18] ಸಲೆಯೆ (ಬ)

[19] x (ಬ)

[20] X (ಬ)

[21] x (ಬ)

[22] x (ಬ)