೧೪
ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ
ಪ್ರಸಾದಲಿಂಗ, ಮಹಾಲಿಂಗ, ಇಷ್ಟಪ್ರಾಣ ಭಾವವೆಂಬ ಲಿಂಗಂಗಳು ತಾವೆ
ಆ ಬಸವಣ್ಣನಿಂದಾದ ಕಾರಣ ಕಲಿದೇವರಲ್ಲಿ

[1]ಅಹೋ[2] ರಾತ್ರಿಯೊಳೆದ್ದು
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನ್ನುತ್ತಿರ್ದೆನು.          ||೧೪||

ನಕಾರವೆ ಬಸವಣ್ಣ ನ ನಾಶಿಕ.
ಮಕಾರವೆ ಬಸವಣ್ಣನ ಜಿಹ್ವೆ.
ಶಿಕಾರವೆ ಬಸವಣ್ಣನ ನಯನ.
ವಕಾರವೆ ಬಸವಣ್ಣನ ದೇಹ.
ಯಕಾರವೆ ಬಸವಣ್ಣನ ಶ್ರೋತ್ರ.
ಓಂಕಾರವೆ ಬಸವಣ್ಣನ ಪ್ರಾಣ.
ಅಕಾರವೆ ಬಸವಣ್ಣನ ನಾದ.
ಉಕಾರವೆ ಬಸವಣ್ಣನ ಬಿಂದು.
ಮಕಾರವೆ ಬಸವಣ್ಣನ ಕಳೆ.
ಈ ಮೂರು ಪ್ರಣಮ ಬಸವಣ್ಣನ ಶಿರಸ್‌ಆಗಿ,
ಪ್ರಣಮದ ಕುಂಡಲಿಯ ಸೋಂಕಿ ಶಾಖೆಯಾಗಿಪ್ಪವು.
ಬಕಾರ ಭವಹರಗುರು, ಸಕಾರ ಸಕಲ ಚೈತನ್ಯ ಲಿಂಗವು.
ವಕಾರವೆ ವರ್ತಿಸುವಡೆ ಜಂಗಮವು.
ಈ ಮೂರು ಪ್ರಣಮ, ಓಂಕಾರಕ್ಕೆ [3]ಮೂರು ಪಾದವೆಂಬ ಬೇರಾಗಿಪ್ಪವು.
ಇಂತು ಹನ್ನೆರಡು ಪ್ರಣಮ[4] ಗಳು[5] ತಾ[6] ನೆಯಾದ[7] ಬಸವಣ್ಣಂಗೆ
ಕೂಡಲಚೆನ್ನಸಂಗಯ್ಯನಲ್ಲಿ ನಮೋ ನಮೋ ಎನುತಿರ್ದೆನು. ||೧೫||

ಇಂತೆಂಬ ಮಹಾ ಷಡುಸ್ಥಲದ ವಚನಂಗಳಿಂದ ಷಡುದೇವತೆಗಳ, ಇವರ ಶಕ್ತಿಗಳ, ಇವರ ಕೆಳಗಣ ಅಂಗಾಲ ಕಣ್ಣವರು ಮೈಯಲ್ಲಾ ಕಣ್ಣವರಾ[8]ಗಿ ಎರಡೆಂಬ[9] ತ್ತೆಂಟು[10] ಕೋಟಿ ಪ್ರಮಥರೆನಿಸುವ ಜಡರುದ್ರಾದ್ರಿಗಳ ಮನುಮುನಿಗಳ ದೇವ ದಾನ ಮಾನವರುಗಳ ವೇದಶಾಸ್ತ್ರಾಗಮ ಪುರಾಣ ತರ್ಕ ತಂತ್ರಗಳ, ಇಂತಿವರೆಲ್ಲರ ಬಾಯ ಟೊಣದು ಕಾಣಿಸದೆ ನುಸುಳಿ ನಿರಾಕಾರವಾಗಿ ಮೀರಿನಿಂದ ಮಹಾನುಭಾವವನು, ಭೇದಿಸಿ ತೆಗೆದು ಪವಣಿಸಿ ಪುಷ್ಪಮಾಲೆಯ ಮಾಡಿ ಶರಣ ಬಸವಣ್ಣನ ಪರಿಶಿವನ ಆ ಇಬ್ಬರ ಶ್ರೀಪಾದ ಪದ್ಮಂಗಳಿಗೆ ಸಮರ್ಪಿತವಂ ಮಾಳ್ಪೆವದೆಂತೆನಲು; ಆ ಲಿಂಗಪತಿ ಶರಣಸತಿ ಎಂಬ [11]ಒಬ್ಬ[12] ಬಸವಣ್ಣನೊಳಗೆ ವಿಭೂತಿ ರುದ್ರಾಕ್ಷಿ ಗುರುಲಿಂಗಜಂಗಮ ಶಿಷ್ಯ ಅನುಭಾವ[13] ಬಸವಣ್ಣನೊಳಗೆ ವಿಭೂತಿ ರುದ್ರಾಕ್ಷಿ ಗುರುಲಿಂಗಜಂಗಮ ಶಿಷ್ಯ ಅನುಭಾವ ಪ್ರಸಾದ, ಕ್ರಿಯ, ಪ್ರಣಮ, ಮಂತ್ರ, ದೀಪ, ಧೂಪ, ಉದಕ, ಗಂಧ, ಪುಷ್ಪ, ಅಕ್ಷತೆ, ತಾಂಬೂಲ, ಜಪ, ಸ್ತೋತ್ರ, ಚಕ್ರ,  ಪದ್, ಶಕ್ತಿ ಇಂತಿವೆಲ್ಲವು ಬೇರೆ ಬೇರೆ ಬೆಳದು ಸ್ವರೂಪುವಾದವು. ಅದು ಹೇಂಗಯ್ಯ ಎಂದಡೆ:

ಆಧಾರ ಸ್ವಾದಿಷ್ಟಾನ ಮಣಿಪೂರಕ ಅನಾಹತ ವಿಶುದ್ಧಿ ಆಜ್ಞೇಯ ಬ್ರಹ್ಮ ರಂಧ್ರ.  ಆಧಾರದಲ್ಲಿ ಸಾವಿರ ದಳಪದ್ಮ, ಆ ಕಮಲದ ಮಧ್ಯದಲ್ಲಿ ನಕಾರವೆಂಬ ಪ್ರಣಮವಿಹುದು. ಆ ನಕಾರವೆಂಬ ಪ್ರಣಮದಲ್ಲಿ ಎರಡು ಸಾವಿರ ನಕಾರಂಗಳುದಯಿಸಿ, ಎಸಳೆಸಳಿಗೆರಡೆರಡಾಗಿ, ಬಳಸಿಹವು. ಸ್ವಾಧಿಷ್ಠಾನದಲ್ಲಿ ಸಾವಿರ ದಳಪದ್ಮ. ಆ ಕಮಲದ ಮಧ್ಯದಲ್ಲಿ ಮಕಾರವೆಂಬ ಪ್ರಣಮವಿಹುದು. ಆ ಮಕರವೆಂಬ ಪ್ರಣಮದಲ್ಲಿ ಎರಡು ಸಾವಿರ ಮಕಾರಂಗಳುದಯಿಸಿ, ಎಸಳೆಸಳಿಗೆರಡೆರಡಾಗಿ ಬಳಸಿಹವು. ಮಣಿ ಪೂರಕದಲ್ಲಿ ಸಾವಿರದಳ ಪದ್ಮ. ಆ ಕಮಲ ಮಧ್ಯದಲ್ಲಿ ಶಿಕಾರವೆಂಬ ಪ್ರಣಮವಿಹುದು. ಶಿಕಾರವೆಂಬ ಪ್ರಣಮದಲ್ಲಿ ಎರಡು ಸಾವಿರ ಶಿಕಾರಂಗಳುದಯಿಸಿ ಎಸಳೆಸಳಿಗೆರಡೆರಡಾಗಿ ಬಳಸಿಹವು. ಅನಾಹತದಲ್ಲಿ ಸಾವಿರ ದಳ ಪದ್ಮ. ಆ ಕಮಲದ ಮಧ್ಯದಲ್ಲಿ ವಕಾರವೆಂಬ ಪ್ರಣಮವಿಹುದು. ಆ ವಕಾರವೆಂಬ ಪ್ರಣಮದಲ್ಲಿ ಎರಡು ಸಾವಿರ ವಕಾರಂಗಳುದಯಿಸಿ ಎಸಳೆಸಳಿಗೆರಡೆರಡಾಗಿ ಬಳಸಿಹವು. ವಿಶುದ್ಧಿಯಲ್ಲಿ ಸಾವಿರದಳ ಪದ್ಮಜ. ಆ ಕಮಲ ಮಧ್ಯದಲ್ಲಿ ಯಕಾರವೆಂಬ ಪ್ರಣಮವಿಹುದು. ಆ ಯಕಾರವೆಂಬ ಪ್ರಣಮದಲ್ಲಿ ಎರಡು ಸಾವಿರ ಯಕಾರಂಗಳುದಯಿಸಿ ಎಸಳೆಸಳಿಗೆರಡೆರಡಾಗಿ ಬಳಸಿಹವು. ಆಜ್ಞೇಯದಲ್ಲಿ ಸಾವಿರದಳ ಪದ್ಮ. ಆ ಕಮಲದ ಮಧ್ಯದಲ್ಲಿ ಓಂಕಾರವೆಂಬ ಪ್ರಣಮವಿಹುದು. ಆ ಓಂಕಾರವೆಂಬ ಪ್ರಣಮದಲ್ಲಿ ಎರಡು ಸಾವಿರ ಓಂಕಾರಂಗಳುದಯಿಸಿ ಎಸಳೆಸಳಿಗೆರಡಾಗಿ ಬಳಸಿಹವು. ಬ್ರಹ್ಮರಂದ್ರದಲ್ಲಿ ಸಾವಿರದಳ ಪದ್ಮ.  ಆ ಕಮಲ ಮಧ್ಯದಲ್ಲಿ ಆಕಾರ ಉಕಾರ ಮಕಾರವೆಂಬ ಅಕ್ಷರತ್ರಯವು ಏಕೀಕರವಾಗಿ ಪ್ರಣಮ ಬ್ರಹ್ಮಸ್ವರೂಪಾಯಿತ್ತು. ಆ ಪ್ರಣಮದಲ್ಲಿ ಎರಡು ಸಾವಿರ ಪ್ರಣಮಂಗಳು ದಯಿಸಿ ಎಸಳೆಸಳಿಗೆರಡೆರಡಾಗಿ ಬಳಸಿಹವು. ಆಧಾರ ಚಕ್ರದೊಳಗೆ ಆಚಾರಲಿಂಗವಿಹುದು. ಸ್ವಾಧಿಷ್ಠಾನ ಚಕ್ರದೊಳಗೆ ಗುರುಲಿಂಗವಿಹುದು. ಮಣಿಪೂರಕ ಚಕ್ರದೊಳಗೆ ಶಿವಲಿಂಗವಿಹುದು. ಅನಾಹತ ಚಕ್ರದೊಳಗೆ ಜಂಗಮಲಿಂಗವಿಹುದು. ವಿಶುದ್ಧಿ ಚಕ್ರದೊಳಗೆ ಪ್ರಸಾದಲಿಂಗವಿಹುದು. ಆಜ್ಞೇಯ ಚಕ್ರದೊಳಗೆ ಮಹಾ ಲಿಂಗವಿಹುದು. ಸ್ಥೂಲ ತನುವಿನಲ್ಲಿ ಇಷ್ಟಲಿಂಗವಿಹುದು. ಸೂಕ್ಷ್ಮ ತನುವಿನಲ್ಲಿ ಪ್ರಾಣಲಿಂಗವಿಹುದು. ಕಾರಣ ತನುವಿನಲ್ಲಿ ತೃಪ್ತಿ ಲಿಂಗವಿಹುದು. ಆಚಾರ ಲಿಂಗಕ್ಕೆ ನಕಾರವೆಂಬ ಪ್ರಣಮ. ಗುರುಲಿಂಗಕ್ಕೆ ಮಕಾರವೆಂಬ ಪ್ರಣಮ. ಶಿವಲಿಂಗಕ್ಕೆ ಶಿಕಾರವೆಂಬ ಪ್ರಣಮ. ಜಂಗಮಲಿಂಗಕ್ಕೆ ವಕಾರವೆಂಬ ಪ್ರಣಮ. ಪ್ರಸಾದ ಲಿಂಗಕ್ಕೆ ಯಕಾರವೆಂಬ ಪ್ರಣಮ. ಮಹಾಲಿಂಗಕ್ಕೆ ಓಂಕಾರವೆಂಬ ಪ್ರಣಮ. ಇಷ್ಟಲಿಂಗಕ್ಕೆ ಆಕಾರವೆಂಬ ಪ್ರಣಮ. ಪ್ರಾಣಲಿಂಗಕ್ಕೆ ಉಕಾರವೆಂಬ ಪ್ರಣಮ. ತೃಪ್ತಿಲಿಂಗಕ್ಕೆ ಮಕಾರವೆಂಬ ಪ್ರಣಮ. ಇಂತಿವೆಲ್ಲವಕ್ಕೆ ಬಕಾರ ಸಕಾರ ವಕಾರವೆಂಬ ಪ್ರಣಮಂಗಳೆ ಪ್ರಾ ಣಪದವಾಗಿ ಬಳಸಿಹವು. ಇಂತಪ್ಪ ಬಸವಣ್ಣ ನಾಧಾರದಲ್ಲಿ ಅಭವನುದಾರಿಕೆಯೂ, ಸ್ವಾದಿಷ್ಠಾನದಲ್ಲಿ ರುದ್ರನೂ ರುದ್ರಿಕೆಯೂ, ಮಣಿಪೂರಕದಲ್ಲಿ ಮೃಡನೂ ಕರ್ಣಿಕೆಯೂ, ಅನಾಹತದಲ್ಲಿ ಈಶ್ವರನೂ ಗೋಳಕೆಯೂ, ವಿಶುದ್ಧಿಯಲ್ಲಿ ಸದಾಶಿವನೂ ಮುಕ್ತಿಕೆಯೂ, ಆಜ್ಞೇಯದಲ್ಲಿ ಶಾಂತಾತೀತನೂ ಮೂಲಕೆಯೂ ಇಂತೆಂಬ ಪುರಾತನರ ವಚನ ಸಾರಾಯವಪ್ಪ ಅಮೃತ ವಾಕುಗಳಿಗೆ ಸಾಕ್ಷಿ.

೧೬
ತನ್ನರುಹಿನ ಕುರುಹ ನರಿ[14]ದುದಾ[15] ಪರ[16] ಯೋಗವು.
ತನುಪುರದ ಕೆರೆಯೊಳಗೊಂದು ಮಹಾದಳ[17] ಪದ್ಮಹುಟ್ಟಿ,
ತೊಟ್ಟು ಮುಟ್ಟಿದೆ ಚಿವುಟಿ ಲಿಂಗಕ್ಕೆ ಸಲಿಸುವ
ಹಿರಿಯರ[18] ಕಾಣೆನು.         ೧

ಸುತ್ತಲು ಷಡುವರ್ಣ ನಡುವೆ ಏಕೋವರ್ಣ,
ಮೊದಲು ಬಿಳಲಿದು ತುದಿಯೆಸಳು ಕೆಂಪು,ಲ
ಅದಕ್ಕದು ಸಹಜ ನೋಡಯ್ಯ.         ೨

ಅಕ್ಕುಲಿಜನವನೊಬ್ಬ ಕರಿಯಬೇಡನು ಕಂಡ.
ಸೋಹಮೆಂಬೆರಡಕ್ಷರಂಗಳ ಲಾಲಿಸುತ್ತಿರ್ದ ನೋಡಯ್ಯ.          ೩

ಏಳೆಸಳನುಳುಹಿ ಸಹಸ್ರ ಎಸಳ ಕೊಯ್ದಡೆ
ಎಸಳೆಸಳಿಗೆರಡೆರಡಕ್ಷರಂಗಳ ಕಂಡಜಿದೆ ನೋಡಯ್ಯ. ೪

ಪರದೈವಕ್ಕೆ ಪದ್ಮವ ಕೊಯ್ದೆಹನೆಂದು ಹೋದಡೆ
ಕೂಡಿಕೊಂಬನೆ ನಮ್ಮ ಕೂಡಲಚೆನ್ನಸಂಗಯ್ಯನು.       ೫

೧೭

ಶರಣ ಲಿಂಗಾರ್ಚನೆಯ ಮಾಡಲೆಂದು
ಪುಷ್ಪಕ್ಕೆ ಕರವ ನೀಡಿದಡೆ,
ಆ ಪುಷ್ಪ ನೋಡ ನೋಡ ಕಿರದೊಳಗಡಗಿತ್ತಲ್ಲಾ !
ಆ ಪದ್ಮವೋಗರದ ಗೊಬ್ಬರವನುಣ್ಣದು.
ಕಾಮದ ಕಣ್ಣರಿಯದು. ನಿದ್ರೆಯಕಪ್ಪೊತ್ತದು.
ಅರುಣಂ[19] ಚಂದ್ರರ ಧರೆಯಲ್ಲಿ ಬೆಳೆಯದು.

ಲಿಂಗವೆ ಧರೆಯಾಗಿ ಬೆಳೆದ ಪುಷ್ಪವನು,
ಗುಹೇಶ್ವರ ನಿಮ್ಮ ಶರಣ ಪ್ರಾಣಲಿಂಗಕ್ಕೆ ಪೂಜೆಯ ಮಾಡಿದನು. ||೧೭||

೧೮

ಮಜ್ಜನಕ್ಕೆರವಡೆ ನೀನು ಶುದ್ಧ ನಿರ್ಮಲ ದೇಹಿ.
ಪೂಜೆಯ ಮಾಡುವಡೆ ನಿನಗೆ ಗಗನ ಕಮಲದ ಕುಸುಮದಖಂಡಿತ ಪೂಜೆ.
ಧೂಪಾರತಿಗಳ  ಬೆಳಗುವಡೆ ನೀನು ಜ್ಯೋತಿರ್ಮಯನು.
ಅರ್ಪಿತವ ಮಾಡುವಡೆ ನೀನು ನಿತ್ಯತೃಪ್ತನು.
ಅಷ್ಟವಿಧಾರ್ಚನೆ ಷೋಡಶೋಪಚಾರಂಗಳ ಮಾಡುವಡೆ
ನೀನು ಮುಟ್ಟಬಾರದ ಘನವೇದ್ಯನು.
ನಿತ್ಯನೇಮಂಗಳ ಮಾಡುವಡೆ,
ನಿನಗನಂತ ನಾಮಂಗಳಾದವು ಕಾಣಾ ಗುಹೇಶ್ವರಾ.    ||೧೮||

೧೯

ಸರೋವರದ ಕಮಲದೊಳಗೆ ತಾನಿಪ್ಪನು.
ಕೆಂದಾವರೆಯ ಪುಷ್ಪದ ನೇಮವಿನ್ನೆಂತೊ?
ಹೂವ ಮುಟ್ಟದೆ ಕೊಯ್ವ ನೇಮವೆಂತೊ?
ಮುಟ್ಟದೆ ಕೊಯ್ವ ಮುಟ್ಟಿದ ಪರಿಮಳ
ಗುಹೇಶ್ವರಾ ನಿಮ್ಮ ಶರಣ. ||೧೯||

೨೦

ಆದಿ ಅನಾದಿಯಿಂದತ್ತಣ ಶರಣನ ಷಡಾಧಾರ ಚಕ್ರದೊಳಗೆ
ಷಡುಲಿಂಗವು ಷಡುಮಂತ್ರವು
ಷಡುಭಕ್ತರು ಷಡುಶಕ್ತಿಗಳಿಪ್ಪವಯ್ಯಾ.
ಆ ಶರಣನ ಜ್ಞಾನ ಕ್ರೀ
ಅರವತ್ತು ನಾಲ್ಕು ಭೇದವಾಯಿತ್ತಯ್ಯಾ.
ಆ ಒಬ್ಬ ಶರಣನನಂತ ಶರಣರಾದುದ
ಕಂಡೆನೆಂದಾತನಂಬಿಗರ ಚವುಡಯ್ಯಾ.         ||೨೦||

ಇಂತೆಂಬ ಪುರಾತನರ ವಚನಂಗಳ ತಿಳಿದು ಬಸವಣ್ಣನ ಲೀಲೆಯಿಂದ ಅನೇಕ ಶಿವತತ್ವಂಗಳುದಯವಾಹಂತಾ ಚೋದ್ಯಪ್ರಸಂಗಮಂ ಭಕ್ತಿ ಹಿತಾರ್ಥವಾಗಿ ಭಕ್ತರೊಡೆಯರಿಗೆ ಬಿನ್ನಹಂ ಮಾಳ್ಪೆವದೆಂತೆನಲು: ಆ ಬಸವನ ಏಳು ಕಮಲಂಗಳ ಎಸಳಿನೊಳಗಿರ್ದ ಹದಿನಾಲ್ಕು ಸಾವಿರಕ್ಷರಂಗಳೆ ನಾನಾ ಪ್ರಕಾರದಕ್ಷರಂಗಳಾಗಿರ್ದವು. ಆ ಅಕ್ಷರಂಗಳಿಗೆ ಏಳು ನೆಲೆಯೊಳಗಿರ್ದ ಪದ್ಮಂಗಳೆ ವಜ್ರದ ಚಿಪ್ಪಾಡಾಗಿ ಆ ಶರಣನೊಳಗೆ ಷಡುಸ್ಥಲ ಮಾರ್ಗ ವಿರಾಜಿಸುತ್ತಿರ್ದವು. ಇಂತಪ್ಪ ಷಡುಸ್ಥಲ ಮಾರ್ಗವನೊಳಕೊಂಡು ಆದಿ ಅನಾದಿಗಾದಿಯಾಗಿಪ್ಪ ಶರಣ [20]ಬಸವಣ್ಣ[21] ನಿಲ್ಲಲೊಡನೆ ಆ ಪರಶಿವ ತತ್ವದ ಮೂಲಜ್ಞಾನ ಪಂಚಶಕ್ತಿ ಸ್ವರೂಪಾಗಿ ತೋರಿತ್ತು. ತೋರಲಾಗಿ ಆ ಶಕ್ತಿಗಳ ಭಿನ್ನನಾಮಂಗಳಾವಾವೆಂದಡೆ: ಪರ ಎಂದು ನಾದ ಎಂದು ಬಿಂದು ಎಂದು ಕಳೆ ಎಂದು ಸ್ಪರಿ ಎಂದು ಇಂತೈದು ನಾಮವನುಳ್ಳ ಶಕ್ತಿಗಳು ಪರಶಿವನ ಶರೀರದಲ್ಲಿ ಬೆರಸಿ ಬೇರಿಲ್ಲದೆ ಇರುತಿಷ್ಪರು. ಇರುತ್ತಿರಲಿಕ್ಕಾಗಿ ಬಸವಣ್ಣನೊಳಗಿರ್ದ ಷಡುಸ್ಥಲದ ಮಹಾ ಬೆಳಗು ಬೆಳದು ಷಡುಸ್ಥಲದ ಬ್ರಹ್ಮ ತತ್ವ ಸ್ವರೂಪಾಗಿ ತೋರಿತ್ತು. ತೋರಲಾಗಿಯೂ ಷಡುಷ್ಥಲ ಬ್ರಹ್ಮಿಗಳ ಭಿನ್ನ ನಾಮಂಗಳಾವಾವೆಂದಡೆ: ಅಭವನೆಂದು, ರುದ್ರನೆಂದು, ಮೃಡನೆಂದು, ಈಶ್ವರನೆಂದು, ಸದಾಶಿವನೆಂದು, ಶಾಂತ್ಯಾತೀತನೆಂದು, ಆ ಒಂದು ಬೆಳಗು ಮಹಾಬೆಳಗು ಬೆಳೆದು, ಬೇರೆ ಬೇರೆ ಶರಣ ರೂಪಾಗಿನಿಂದು ಬಸವಣ್ಣನೊಳಗುದಯಿಸಿ, ಷಡುಸ್ಥಲ ಬ್ರಹ್ಮಿಗಳಾಗಿ ನಿಲಲೊಡನೆ, ಆ ಬಸವಣ್ಣನ ಮಹಾ ವಿಶ್ರಾಂತಿಯೆಂಬ ಪರಮಜ್ಞಾನ ಪರಮ ಶಾಂತಿ ಎಂಬ ಶಕ್ತಿಯಾಗಿ ತೋರಿ ಆ ಪರಮ ಪುರುಷನೊಳು ಬೆರಸಿ ಬೇರಿಲ್ಲದಿಪ್ಪುದೊಂದು ಚೋದ್ಯಮನೇನ ಬಣ್ಣಿಸುವೆ ಇಂತಾದ ಬಳಿಕ ಪರಶಿವತತ್ವದ ಶಕ್ತಿಗಳಲ್ಲಿ ಷಡುಶಕ್ತಿಗಳುದಯಿಸಿದವವರ ಭಿನ್ನನಾಮಂಗಳಾವಾವೆಂದಡೆ: ಮೂಲಕ, ಮುಕ್ತಕ, ಗೋಳಕ, ಕರ್ಣಿಕ, ರುದ್ರಕ, ದಾರುಕ ಇಂತು ಶಕ್ತಿಗಳುದಯವಾದುದಕ್ಕೆ ಸಾಕ್ಷಿ.

೨೧

ಆದಿಪುರ, ವೇದಪುರ, ಹಿಮಪುರ
ಖಂಡಿತ ಅಖಂಡಿತವಿಲ್ಲಯ್ಯಾ.
ಶಿವ ಶಿವಾ ಗಗನವ ಮನ ನುಂಗಿತ್ತು.
ಆದಿ ವೇದವನುಂಗಿತ್ತು; ವೇದ ಸ್ವಯಂಭುವ ನುಂಗಿತ್ತು.
ಕಾಲ ಕರ್ಮ ಹಿಂಗಿತ್ತು ಗುಹೇಶ್ವರ,  ನಿಮ್ಮ ಶರಣಂಗೆ.   ||೨೧||

೨೨

ಆದಿಯನರಿಯರು, ಅನಾದಿಯನರಿಯರು.
ಒಂದರೊಳಗಿಪ್ಪ ಎರಡನರಿಯರು.
ಎರಡರೊಳಗಿಪ್ಪ ಮೂರರ ಕೀಲನರಿಯರು.
ಮೂರು ಸಂದು ಆರಾದುದನಅಱಿಯರು.
ಆರೆಂದು ನುಡಿವ ಗಾರು [22]ಮಾತಂತಲ್ಲ[23] ಗುಹೇಶ್ವರನ ನಿಲವನರಿದಿರ್ದಡೆ ಒಂದೂಯಿಲ್ಲ,
ಅರಿಯದಿರ್ದಡೆ ಬಹುಮುಖವಯ್ಯಾ. ||೨೨||

ಇಂತುದಯಿಸಿದ ಷಡುಶಕ್ತಿಗಳ ಷಡುಸ್ಥಲ ಬ್ರಹ್ಮಿಗಳಿಗೆ ಪರಶಿವನನು, ಪರಶಿವನ ಶಕ್ತಿಗಳನು ಕೂಡಿಕೊಂಡು ಬಸವಣ್ಣ ಸಂಬಂಧವ ಮಾಡಿದ ಪರಿ ಹೇಂಗಯ್ಯಾ [24]ಎಂದಡೆ: ಶಾಂತ್ಯಾತೀತಂಗೆ ಮೂಲಕ, ಸದಾಶಿವಂಗೆ ಮುಕ್ತಕ, ಈಶ್ವರಂಗೆ ಗೋಳಕ, ಮೃಡಂಗೆ ಕರ್ಣಿಕ, ರುದ್ರಂಗೆ ರುದ್ರಕ, ಅಭವಂಘೆ ದಾರುಕ. ಇಂತಾದ ಕಲ್ಯಾಣಕ್ಕೆ ಸಾಕ್ಷಿ.

೨೩

ಹಳೆಗಾಲದೊಬ್ಬ ಪುರುಷಂಗೆ
ಎಳೆಯ ಕರ್ಣಿಕೆಯ ಮದುವೆಯ ಮಾಡಲು
ಕೆಳದಿಯರೈವರು ನಿಬ್ಬಣವ ಬಂದರು.
ಹಸೆಯ ಮೇಲೆ ಮದುವಣಿಗನಂ ತಂದು ನಿಲಿಸಲೊಡನೆ
ಶಶಿವದನೆ ಬಂದು ಕೈಯ ಹಿಡಿದಳು.
ಮೇಲುದಯದಲೊಬ್ಬ ಸತಿಯು ಕಣ್ಣು ಸನ್ನೆಯ ಮಾಡುತ್ತಿರೆ,
ಕೂಡೆ ಬಂದ ನಿಬ್ಬಣಗಿತ್ತಿಯರೆಲ್ಲ ಹೆಂಡರಾದರು.
ದೂರವಿಲ್ಲದ ಗಮನಕ್ಕೆ ದಾರಿ ಪಯಣ ಹಲವಾಯಿತ್ತು.
ಸಾರಾಯ ನಿರ್ಣಯವನೇನೆಂಬೆ[25] ಗುಹೇಶ್ವರಾ.          ||೨೩||

ಈ[26] ಹೀಂಗೆ ಕುರಿತು ಸಮೇತವ ಮಾಡಿದರು. ಮಾಡಲಾಗಿಯೂ ಷಡುಸ್ಥಲದ ಬ್ರಹ್ಮಿಗಳು ಕೈಕೊಂಡ ಬಳಿಕ, ಬಸವಣ್ಣ ಷಡುಸ್ಥಲ[27]ವನ್ನುಂಟು ಮಾಡಿ ತೋರಿದನು. [28]ಅದಾ[29]ರಿಗೆಂದಡೆ: ಅಭವಂಗೆ ಭಕ್ತಸ್ಥಲ, ರುದ್ರಂಗೆ ಮಹೇಶ್ವರ ಸ್ಥಲ, ಮೃಡಂಗೆ ಪ್ರಸಾದಿಸ್ಥಲ, ಈಶ್ವರಂಗೆ ಪ್ರಾಣಲಿಂಗಿಸ್ಥಲ, ಸದಾಶಿವಂಗೆ ಶರಣಸ್ಥಲ, ಶಾಂತ್ಯಾತೀತಂಗೆ ಐಕ್ಯಸ್ಥಲ, ಇಂತಿವರು ಷಡುಸ್ಥಲವ ಕೈಕೊಂಡು ನಿಲಲೊಡನೆ ಆ ಬಸವ[30]ನೊಳಗಿರ್ದ ಎಲ್ಲಾ ಸತ್ಕ್ರೀಯಗಳು, ಸಪ್ತ ಚಕ್ರಂಗಳು, ಸಪ್ತ ಪದವು ಹನ್ನೆರಡು ಪ್ರಣಮ ಲಿಂಗಂಗಳು, ನಾನಾ ಪ್ರಕಾರವಾದ ಸಪ್ತ ಪದ್ಮವು ಹನ್ನೆರಡು ಪ್ರಣಮ ಲಿಂಗಗಳು, ನಾನಾ ಪ್ರಕಾರವಾದ ಸುವಾಕ್ಯವ ನುಡಿವ ಹದಿನಾಲ್ಕು ಸಾವಿರಕ್ಷರಂಗಳು ಸುಚಿತ್ತು[31] ಬಿಂದುವೆಂಬ ರುದ್ರಾಕ್ಷಿಗಳು, ಸುಜ್ಞಾನವೆಂಬ ಚಿದ್ವಿಭೂತಿಯೂ, ಇವೆಲ್ಲವು ಷಡುಸ್ಥಲ ಬ್ರಹ್ಮಿಗಳೊಳಗೆಯು ಷಡುಶಕ್ತಿಗಳೊಳಗೆಯು ಪರಿಪೂರ್ಣವಾಗಿ ನಿಂದವು. ನಿಂದ ಬಳಿಕ ಶರಣ ಬಸವಣ್ಣಿಂದುದಿಸಿದ ಷಡುಸ್ಥಲ ಭಕ್ತರುಗಳು ಕೂಡಿಕೊಂಡು ಪರಶಿವ ಸಮೇತವಾಗಿ ಕೋಟ್ಯಾನುಕೋಟಿ ವರುಷವು ಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನು. ಇಂತೆಂಬ ಪುರಾತನ ವಚನ ರಸ ಪ್ರಸಂಗಕ್ಕೆ ಸಾಕ್ಷಿ.

೨೪

ಆದಿ ಅನಾದಿ ಷಡುದೇವತೆಗಳಿಲ್ಲದಂದು.
ಒಬ್ಬ ಶರಣ ಷಡಾಕ್ಷರವನು ಷಡುಸ್ಥಲವನು
ಒಳಕೊಂಡು ಇರ್ದನಯ್ಯಾ.
ಆ ಶರಣನ ನೆನಹಿನ ಲೀಲೆಯಿಂದ
ಪರಶಿವನ ಮೂಲಜ್ಞಾನ ಪಂಚಶಕ್ತಿಗಳಾಗಿ
ತೋರಿ ಬೆರಸಿದ್ದವಯ್ಯಾ.
ಇದ್ದ ಕಾರಣ ಶರಣನ[32]  ಪರಮಶಾಂತಿ
ಭಕ್ತ್ಯಂಗನೆಯಾಗಿ ತೋರಿ ಬೆರಸಿದ್ದಳಯ್ಯಾ.
ಇದ್ದ ಕಾರಣ ಶರಣನ ಮಹಾಬೆಳಗು
ಷಡುಸ್ಥಲ ಬ್ರಹ್ಮಿಗಳಾಗಿದ್ದಿತಯ್ಯಾ.
ಇದ್ದ ಕಾರಣ ಶರಣನ ಪರಶಿವನ ಶಕ್ತಿಗಳ ಮಹಾಬೆಳಗು
ಷಡುಭಕ್ತ್ಯಂಗನೆಯಾಗಿ ಷಡುಸ್ಥಲ ಭಕ್ತರ ಬೆರಸಿದ್ದವಯ್ಯಾ.
ಇದ್ದ ಕಾರಣ ಶರಣನೊಳಗಡಗಿದ ಸುವಾಕುವಕ್ಷರ
ಲಿಂಗ ಪ್ರಣಮ ಮಂತ್ರ ಚಕ್ರ ಕಮಲ ಸತ್ಕ್ರೀಯ ಭಸಿತ ರುದ್ರಾಕ್ಷಿ
ಇಂತಿವೆಲ್ಲಾ ಇವರೊಳಗಡಗಿದ್ದ ವಯ್ಯಾ.
ಇದ್ದ ಕಾರಣ ಶರಣನನಿವರು ಸಹಿತ ಕೋಟಾನುಕೋಟಿ ಕಾಲವು
ಪ್ರಮಥಗಣೇಶ್ವರನೆಂಬ ನಾಮವಾಗಿರುತ್ತಿರ್ದನಯ್ಯಾ
ನಿಮ್ಮ ಶರಣ ಗುಹೇಶ್ವರಾ.  ||೨೪||

ಇಂಥಾ ಪ್ರಮಥಗಣೇಶ್ವರನೆಂಬ ಬಸವಣ್ಣನ ಲೀಲೆಯಿಂದ ಹನ್ನೆರಡು ಸಾವಿರ ವೃಷಭಗಣಂಗಳುದಯವಾಗಿರುತ್ತಿರ್ದರು. ಇಂತಿರುತ್ತಿರಲಿಕ್ಕಾಗಿ ಶಾತ್ಯಾತೀತ ಗಣಂಗಳುದಯವಾಗಿರುತ್ತಿರ್ದರು. ಇರುತ್ತಿರಲಿಕ್ಕೆ ಸದಾಶಿವನಿಂದ ಹನ್ನೆರಡುಸಾವಿರ ಸದಾಂಶಿವಗಣಂಗಳುದಯಗವಾಗಿರುತ್ತಿರ್ದರು. ಇರಲ್ಕೆ ಈಶ್ವರನಿಂದ ಹನ್ನೆರಡುಸಾವಿರ ಈಶ್ವರ ಗಂಣಿಗಳಲುದಯವಾಗಿರುತ್ತಿರ್ದರು. ಇರುತಿರ್ದ ಕಾರಣ ಮೃಡನಿಂದ ಹನ್ನೆರಡುಸಾವಿರ ಮೃಡಗಣಂಗಳುದಯ ವಾಗಿರುತ್ತಿರ್ದರು.[33] ಇರುತ್ತಿರ್ದ ತದಾಂತರದಲ್ಲಿ ಅಭವನಿಂದ ಹನ್ನೆರಡುಸಾವಿರ ಅಭವ ಗಣಂಗಳುದಯವಾಗಿರುತ್ತಿರ್ದರು. ಇಂತಪ್ಪ ಗಣಂಗಳುದಯವಾದುದಕ್ಕೆ ಸಾಕ್ಷಿ.

೨೫

ನೀರೂ ನೆಳಲೂ ಇಲ್ಲದಂದು, ಷಡುಶೈವರಿಲ್ಲದಂದು,
ಬ್ರಹ್ಮಾಂಡ ಭಾಂಡ ಭಾಂಢಾವಳಿಗಳಿಲ್ಲದಂದು,
ಪಿಂಡಾಂಡ ಅಂಡ ಪಿಂಡಾವಳಿಗಳಿಲ್ಲದಂದು,
ಅ ಖಂಡಿತ ಜ್ಯೋತಿರ್ಮಯಲಿಂಗ ಶರಣನ ಲೀಲೆಯಿಂದಾದ
ಏಳುತರದ ಗಣಪಿಂಡವಂ ಕಂಡು ಅಖಂಡಿತನಾಗಿ
ಬದುಕಿದೆನಯ್ಯಾ ಗುಹೇಶ್ವರಾ.        ||೨೫||

ಇಂತೆಂಬ ಪರಶಿವನಪ್ಪ ಪ್ರಭುಸ್ವಾಮಿಯ ಲೀಲೆಯಿಂದ ಸಂಹಾರ ಕಾರಣವಾಗಿ ಉದಯಿಸಿದರು, ಹನ್ನೆರಡು ಸಾವಿರ ಪರಮ ಲೀಲಾ ಗಣೇಶ್ವರರೆಂಬ ಪ್ರಮಥರು. ಅವರ ಭಿನ್ನನಾಮಂಗಳಾವಾವಯ್ಯಾ ಎಂದೆಡೆ: ಆದಿ ನಂದಿಕೇಶ್ವರನೆಂಬಾತನೊಬ್ಬ ಗಣೇಶ್ವರನು, ಆದಿ ಭೃಂಗೀಶ್ವರನೆಂಭಾತನೊಬ್ಬ ಗಣೇಶ್ವರನು, ಆದಿ ವೀರಭದ್ರನೆಂಬಾತನೊಬ್ಬ ಗಣೇಶ್ವರನು, ರುದ್ರನೆಂಬಾತನೊಬ್ಬ ಗಣೇಶ್ವರನು, ಭದ್ರನೆಂಬಾತನೊಬ್ಬ ಗಣೇಶ್ವರನು, ಶಂಕರನೆಂಬಾತನೊಬ್ಬ ಗಣೇಶ್ವರನು, ಶಶಿಧರನೆಂಬಾತನೊಬ್ಬ ಗಣೇಶ್ವರನು, ಪೃಥ್ವಿಯೇ ಪೀಠ, ಆಕಾಶವೆ ಲಿಂಗವೆಂಬಾತನೊಬ್ಬ ಗಣೇಶ್ವರನು, ಸಿರಯಾಳನ ಮಗನ ಬೇಡಿದಾತನೊಬ್ಬ ಗಣೇಶ್ವರನು, ಕಾಮನ ದಹನವಮಾಡಿದಾತನೊಬ್ಬ ಗಣೇಶ್ವರನು, ತ್ರಿಪುರವದಹನವ ಮಾಡಿದಾತನೊಬ್ಬ ಗಣೇಶ್ವರನು, ಬ್ರಹ್ಮ ಕಪಾಲವ ಚಿವುಟಿ ವಿಷ್ಣು ಕಂಕಾಳವ ಹಿಡಿದು ಮತ್ಸ್ಯ ಕೂರ್ಮವರಾಹನಾದ ಸಿಂಹನ ಸಂಹಾರಪ ಮಾಡಿದಾತನೊಬ್ಬ ಗಣೇಶ್ವರನು, ಕಾಲ ಮರ್ದನನೆಂಬಾತನೊಬ್ಬ ಗಣೇಶ್ವರನು. ಜಲಾ ಸುರಮರ್ಧನನೆಂಬಾತನೊಬ್ಬ ಗಣೇಶ್ವರನು. ಅಂಧಕಾಸುರಮರ್ದನನೆಂಬಾತನೊಬ್ಬಗಣೇಶ್ವರನು, ಗಜಾಸುರಮರ್ದನನೆಂಬಾತನೊಬ್ಬ ಗಣೇಶ್ವರನು. ಇಂತಿವರು ಮುಖ್ಯವಾದ ಹನ್ನೆರಡುಸಾವಿರ ಪ್ರಮಥಗಣಂಗಳು ಪರಶಿವತತ್ವದಲ್ಲಿ ಉದಯವಾಗಿರುತ್ತಿರ್ದರು. ಇಂತೆಂಬ ಪುರಾತನರ ವಚನ ನಾರಾಯಕ್ಕೆ ಸಾಕ್ಷಿ.

೨೬

ರುದ್ರನೆಂಬಾತನೊಬ್ಬ ಗಣೇಶ್ವರನು.
ಭದ್ರನೆಂಬಾತನೊಬ್ಬ ಗಣೇಶ್ವರನು.
ಶಂಕರನೆಂಬಾತನೊಬ್ಬ ಗಣೇಶ್ವರನು.
ಶಶಿಧರನೆಂಬಾತನೊಬ್ಬ ಗಣೇಶ್ವರನು.
ಪೃಥ್ವಿಯೇ ಪೀಠ, ಆಕಾಶವೆ ಲಿಂಗವೆಂದಾತನೊಬ್ಬ ಗಣೇಶ್ವರನು.
ಬಲ್ಲಾಳನ ವಧುವ ಬೇಡಿದಾತನೊಬ್ಬ ಗಣೇಶ್ವರನು.
ಸಿರಿಯಾಳನ ಮಗನ ಬೇಡಿದಾತನೊಬ್ಬ ಗಣೇಶ್ವರನು.
ಕಾಮನ ದಹನವ ಮಾಡಿದಾತನೊಬ್ಬ ಗಣೇಶ್ವರನು.
ತ್ರಿಪುರವ ದಹನವ ಮಾಡಿದಾತನೊಬ್ಬ ಗಣೇಶ್ವರನು.
ಬ್ರಹ್ಮಕಪಾಲವ ಚಿವುಟಿ, ವಿಷ್ಣು ಕಂಕಾಳವ
ಹಿಡಿದಾತನೊಬ್ಬ ಗಣೇಶ್ವರನು.
ಅಖಂಡಿತನೆಂಬಾತನೊಬ್ದಬ ಗಣೇಶ್ವರನು.
ಇಂತಿವರು ಮೊದಲಾದನಂತ ಗಣಂಗಳೆಲ್ಲರು
ಎನ್ನ ಗುಹೇಶ್ವರಲಿಂಗದಲ್ಲಿ ತೋರಿ ಅಡಗುತ್ತಿಪ್ಪರು.      ||೨೬||

ಇಂತು ಅನಂತ ಗಣಂಗಳ ಮೇಲೆ ತೊಂಬತ್ತಾರು ಸಾವಿರ ಗಣಂಗಳು ಬಸವಣ್ಣನ ಲೀಲಾ ಸೂತ್ರ ಮಾತ್ರವನೆ ಆಡಿ ಮಾಡಿಕೊಂಡು ಅನಂತನಂತಕಾಲ ಇರುತ್ತಿರ್ದರು. ಇರುತ್ತಿರಲಿಕೆಯಾಗಿ , ಆದಿ ಅನಾದಿ ಎಂಬ ದ್ವಂದ್ವವಿಲ್ಲದಂದು, ನಿರಾಳ, ನಿರಾಕಾರ, ನಿರಂಜನ, ನಿರಾಲಂಬ, ನಿರಾಮಯ, ನಿರ್ಲೇಪ, ನಿರ್ನಾಮ, ನಿರ್ಗುಣ, ನಿತ್ಯತೃಪ್ತ, ನಿರುಪಮ, ನಿರ್ಭೇದ್ಯ, ನಿಶ್ಚಿಂತ, ನಿಜಲಿಂಗವಪ್ಪ ಮಹಾಶರಣ ಬಸವಣ್ಣನು ಅನಿರ್ವಾಚ್ಯವಾಗಿ ಪರಶಿವ ಮೊದಲಾದ ತೊಂಬತ್ತಾರು ಸಾವಿರ ವೀರಗಣಂಗಳು ನೋಡಲೊಡನೆ, ತನ್ನ ಭ್ರೂಮಧ್ಯದಲ್ಲಿರ್ದ ಮಹದಾಕಾರ ಭೂಷಣವಪ್ಪ ಚಿದ್ವಿಭೂತಿಯು ತನ್ನ ಪಣೆಗಣ್ಣಿನ ನಾಳದಲ್ಲಿಂದ ಧಾರೆಯಾಗಿ ಭೋರ್ಭೋರೆಂದೆನುತ ಸುಧೆಯ ಸೋನೆಯ ಮೀನಿನಂತೆ ಭಸಿತವೃಷ್ಟಿಯ ಮಾಲೆಯಂತೆ, ಅಂತರ್ಗತದಿಂ ಬಹಿರ್ಗತಮಾಗುತ್ತಿರುವಾಗ ತನ್ನ ಊರ್ಧ್ವ ಚಕ್ರದಲ್ಲಿಪ್ಪ ಸುಚಿತ್ತನು ವಿವೇಕವೆಂಬ ವೃಕ್ಷದ ಶಾಂತಿಬಿಂದು ಬ್ರಹ್ಮರಂದ್ರದಲ್ಲಿಂದ ಧಳಧಳನೆ ವಿನಿರ್ಗತವಾಗಿ ಪ್ರಣಮನಾದ ಘೋಷದಿಂ ಸುರಿದುದು[34] ರುದ್ರಾಕ್ಷಿಗಳಾಯಿತ್ತು. ಆಗಲಾಕ್ಷಣ ತನ್ನ ಮೂಲಜ್ಞಾನ ತನ್ನ ನವದ್ವಾರದೊಳಗೆ ನಾದವಾಯಿತ್ತು. ಆ ನಾದದೊಳಗೆ ಸುನಾದವಾಯಿತ್ತು. ಆ ಸುನಾದದೊಳಗೆ ಘಂಕಾರನಾದವಾಯಿತ್ತು. ಆ ಝಂಕರ ನಾದೊಳಗೆ ಪರಮ ಪ್ರಕಾಶವೆಂಬ ಪರಮಜ್ಯೋತಿರ್ಲಿಂಗಗಳು ಥಳಥಳಿಸಿ ಬೆಳ ಬೆಳಗಿ ಹೊಳ ಹೊಳದು ಬಿಜಯಂಗೆಯ್ಯಲೊಡನೆ, ಆ ಬಸವಣ್ಣನು ತನ್ನ ಬ್ರಹ್ಮರಂದ್ರದ ಅಮೃತವನೆ ಅಭಿಷೇಕವಂ ಮಾಡಿ ತನ್ನ ಚಿದ್ವಿಭೂತಿಯಂ ಧರಿಸಿ, ತನ್ನ ಪರಮ ಶಾಂತಿ ಎಂಬ ಗಂಧವಂ ಸಮರ್ಪಿಸಿ, ತನ್ನ ಶಿವಧರ್ಮವೆಂಬ ಅಕ್ಷತೆಯನಿಟ್ಟು, ತನ್ನ ಹೃದಯಕಮಲ ಪುಷ್ಪವಂ ತೆಗೆದು, ಪೂಜೆಯಂ ಮಾಡಿ, ತನ್ನ ಸುಜ್ಞಾನವೆಂಬ ದೀಪವನೆತ್ತಿ, ತನ್ನ ಸುಗುಣವೆಂಬ ಧೂಪವಂ ತುಂಬಿ, ತನ್ನ ಜ್ಞಾನ ಪಾದೋದಕವ ಸಮರ್ಪಿಸಿ, ತನ್ನ ಸದ್ವಾಸನೆಯನುಳ್ಳ ಪೀಠ ಮಧ್ಯದಲ್ಲಿರ್ದ ಪ್ರಸಾದಮಂ ಕೊಟ್ಟು, ತನ್ನ ನಿರ್ಮಳವೆಂಬ ಅಗ್ಘಣಿಯ ನೀಡಿ, ಅಖಂಡಿತವೆಂಬ ಡಕೆಯನು ತನ್ನ [35]ಏಕೋಭಾ[36]ವವೆಂಬ ಎಲೆಯನು ತನ್ನ ಶುದ್ಧ ಸುಯಿದಾನವೆಂಬ ಸುಣ್ಣದಿಂ[37] ತಾಂಭೂಲ ಸಮರ್ಪಿತವಾಗಲೊಡನೆ ಪೂರ್ವಾಚಾರ್ಯನೆನಿಸಿಕೊಂಬ ಶರಣ ಬಸವಣ್ಣನ ಕರಕಮಲದಿಂ ವಿಭೂತಿ ರುದ್ರಾಕ್ಷಿಗಳನು ಲಿಂಗಂಗಳನು ತೀರ್ಥ ಪ್ರಸಾದವನು ಆ [38]ಕರ್ತೃ[39] ಪರಶಿವ ಮೊದಲಾದಮರ ಗಣಂಗಳೆಲ್ಲರ ಹಸ್ತಕ್ಕೂ ಕೊಟ್ಟು ಅವರ ಮಸ್ತಕದಮೇಲೆ ತನ್ನ ಹಸ್ತಕಮಲವನಿರಿಸಿ ಅವರ ಕರ್ಣದಲ್ಲಿ ಷಡಾಕ್ಷರಮಂ ನಿರೂಪಿಸಲಾಗಿ, ಆ ಶಿವಗಣಂಗಳು ನಿರ್ವಯಲ ಲಿಂಗಂಗಳನು ನಿರ್ಲೇಪಾಂಗವೆಂಬ ಸೆಜ್ಜೆಯಲ್ಲಿ ಸ್ವಭಾವವೆಂಬ ಶಿವದಾರವ ಸಂಬಂಧಿಸಿ ಜ್ಞಾನಾಕಾರವೆಂಬ ವಸ್ತ್ರವ ಹೊದ್ದಿಸಿ ಧರಿಸಿಕೊಂಡರು. ಇಂತೆಂಬನುಭವಕ್ಕೆ ಸಾಕ್ಷಿ.


[1] ಅಘೋರ (ಅ).

[2] ಅಘೋರ (ಅ).

[3] + ಪ್ರಾಣ (ಬ).

[4] ವು (ಬ).

[5] ವು (ಬ).

[6] ನಾಗಿಪ್ಪ (ಬ).

[7] ನಾಗಿಪ್ಪ (ಬ).

[8] ರುಗಳಾ (ಬ).

[9] ತ್ತೇಳು (ಬ)

[10] ತ್ತೇಳು (ಬ)

[11] x (ಬ)

[12] x (ಬ)

[13] ಗ + ಪಾದೋದಕ (ಬ)

[14] ತಾ (ಬ)

[15] ತಾ (ಬ).

[16] + ಮ

[17] + ದ (ಬ)

[18] ನಾರು (ಬ)

[19] ೧ x (ಬ)

[20] ನಾರು (ಬ)

[21] ನಾರು (ಬ)

[22] ಮಾತುತಾನಲ್ಲ(ಬ)

[23] ಮಾತುತಾನಲ್ಲ(ಬ)

[24] x (ಬ)

[25] + ಲ್ಲಾ (ಬ)

[26] x (ಬ)

[27] + ದ (ಅ)

[28] ಅರಾ (ಬ).

[29] ಅರಾ (ಬ).

[30] + ಣ್ಣ (ಬ)

[31] ತ್ತವೆ (ಬ)

[32] + ಘನ (ಬ)

[33] + ಇಂತಪ್ಪ (ಅ)

[34] x (ಬ)

[35] ಸದ್ಭಾ (ಬ)

[36] ಸದ್ಭಾ (ಬ)

[37] ವನು (ಬ)

[38] x (ಬ)

[39] x (ಬ)