ಪರವೆ ಹಮ್ಮಿಂದ ಜೀವನಾಯಿತೆಂಬವನೊಬ್ಬ ವಾದಿ.
ಆತ್ಮನು ಪಶು ಪಾಶ ಬದ್ಧನು.
ಅನಾದಿ ಮಲಸಂಬಂಧಿ ಎಂಬವನೊಬ್ಬ ವಾದಿ.
ಇವರಿಬ್ಬರು ತರ್ಕೈಸಿ ದುಃಖಕ್ಕೊಳಗಾದರು.
ಆತ್ಮನು ಅನಾದಿ ಮಲ ಸಂಬಂಧಿಯಾದಡೆ,
ಆತ್ಮನ ಸ್ವರೂಪವನು, ಮಲದ ಸ್ವರೂಪವನು ಬಲ್ಲಡೆ ನೀವು ಹೇಳಿರೆ !
ಪೃಥ್ವಿ ಅಪ್ಪು ಸ್ಥೂಲತನು, ತೇಜವಾಯು ಸೂಕ್ಷ್ಮತನು,
ಅಂಬರ ಅನಲನ ಸಂಗದಿಂದಹಂಕಾರ ಹುಟ್ಟಿತ್ತಾಗಿ,
ಆಕಾಶವು ಅಹಂಕಾರವು ಕಾರಣತನು.
ಇಂತೀ ಮೂರು ತನುವಿಲ್ಲದಂದು,
ಪಂಚತತ್ವ ಶಾಖೆ ತಲೆದೊರದಂದು,
ಆದಿ ಅನಾದಿ ಸ್ವರೂಪು, ಹಮ್ಮು ಬಿಮ್ಮು ಯುಗಜುಗ
ಸುರಾಳ ನಿರಾಳ ಆತ್ಮನಲ್ಲಿ ಮಲ ಹುದುಗಿರ್ದ ಭೇದವ ತಿಳಿದು
ರೂಹಿಸಿ ಹೇಳಬಲ್ಲಡೆ ಸಿದ್ಧಾಂತಿಯೆಂಬೆ.
ಪರವೆ ಹಮ್ಮಿಂದ ಜೀವನಾದಡೆ,
ಸೃಷ್ಟಿ ಸ್ಥಿತಿ ಲಯಂಗಳೇಕಾದವು?
ಮೋಕ್ಷ ನರಕಂಗಳೇಕಾದವು?
ಜಾತಿ ವಿಜಾತಿಗಳೇಕಾದವು?
ಸ್ಥಾನಾಸ್ಥಾನಂಗಳೇಕಾದವು?
ಪೇಯಾಪೇಯಂಗಳೇಕಾದವು?
ಅಂಡಜ, ಶ್ವೇತಜ, ಉದ್ಬಿಜು, ಜರಾಯುಜವೆಂಬ ಚೌರಾಶಿ
ಲಕ್ಷ ಜೀವರಾಶಿಗಳೇಕಾದವು?
ಆದಡಾಗಲಿ, ಬ್ರಹ್ಮಾಬ್ರಹ್ಮಕ್ಕೆ, ತಥ್ಯಮಿಥ್ಯ ರಾಗದ್ವೇಷ
ಕಾಮ ಕ್ರೋಧ ನಾನೀನೆಂಬ ಭ್ರಾಂತು ಸೂತಕ ಪೆಂಪೆ?
ಅದಲ್ಲ; ನಿಲ್ಲು. ಬ್ರಹ್ಮಕ್ಕೆ ಅಹಂ ಹೋಹ ಬಾಹ ಭೇದವ ತಿಳಿದು
ಸಂಕಲ್ಪ ವಿಕಲ್ಪವಿಲ್ಲದೆ, ಪಕ್ಷಾಪಕ್ಷಂಗಳು ತೋರದೆ,
ಸ್ತುತಿ ನಿಂದ್ಯಾದಿಗಳನರಿಯದೆ, ಕಾಮನಿಷ್ಕಾಮವಿಲ್ಲದೆ,
ಭೀತಿ ನಿರ್ಭೀತಿ ಇಲ್ಲದೆ, ನಿರಂಗ ಸ್ವರೂಪನಾಗಿರಬಲ್ಲಡೆ
ವೇದಾಂತಿಯೆಂಬೆ.
ಇಂತೀ ಉಭಯ ಮತವ ಹೊದ್ದರು ನಮ್ಮ ಶರಣರು.
ಅದೆಂತೆಂದಡೆ:
ಆದಿ ಅನಾದಿಯಿಂದತ್ತಣ ಶರಣ ಲಿಂಗ ಸಂಬಂಧವನರಿಯದರಾಗಿ.
ಚಿತ್ತುವೆನಿಸಿ ಶಬ್ದ ನಿಶ್ಯಬ್ದಕ್ಕೆ ಬಾರದ
ನಿಶ್ಯೂನ್ಯಲಿಂಗವೇ ಪ್ರಾಣವಾಗಿ.
ಈ ಉಭಯ ಸಂಪುಟದಿಂದ ಸಕಲ ನಿಷ್ಕಳವಾಯಿತ್ತು.
ಆ ಸಕಲ ನಿಷ್ಕಳ ತತ್ವವೆ ತನ್ನ ಶಕ್ತಿಯ
ಸಮರಸ ಸಂಭಾಷಣೆಯಿಂದ ಲೀಲೆದೋರಲಾಗಿ,
ತಾನೆ ಗುರುವಾದ, ತಾನೆ ಲಿಂಗವದ, ತಾನೆ ಜಂಗಮವಾದ,
ತಾನೆ ಮಂತ್ರವಾದ,

[1]ತಾನೆ ತಂತ್ರವಾದ[2] ತಾನೆ ಸರ್ವೇಚೈತನ್ಯಾತ್ಮಕವಾದ ಭೇದವ
ತಮ್ಮಿಂದ ತಾವೆ ಅರಿದರಾಗಿ,
ವೇದಾಂತ ಸಿದ್ದಾಂತವೆಂಬ ವಾಗಾದ್ವೈತವ[3] ನುಡಿಯರು.
ಅದೆಂತೆಂದಡೆ:
ತರ್ಕ ಅತರ್ಕ್ಯರು, ಸಾಧ್ಯಕ್ಕೆ ಅಸಾಧ್ಯರು,
ಭೇದ್ಯಕ್ಕೆ ಅಭೇದ್ಯರು. ದ್ವೈತಾದ್ವೈತವ ಮೀರಿನಿಂದ
ನಿಜಸುಖಿಗಳಯ್ಯಾ ನಿಮ್ಮ ಶರಣರು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.   ||೧||

ಇಂತೆಂಬ ವಚನ ವ್ಯಾಖ್ಯಾನಂಗಳು ಏನ ಹೇಳಿಹವೆಂದಡೆ: ಅನಾದಿ ಎಂಬ ಮನ, ಆದಿ ಎಂಬ ಮಾಯೆ ಈ ಎರಡು ಇಲ್ಲದಂದತ್ತತ್ತಲತ್ತಲು ಆ ಮಹಾಘನ ಲಿಂಗವು. ಆ ಘನದ[4]  ಚಿದ್ವಿಭೂತಿಯು ಅರಿವು. ಅರಿವಿನ ಬೆಳಗು ಭಿನ್ನವಿಲ್ಲ – ದಿಪ್ಪಂತೆ ಇಪ್ಪವೆಂದು ಪೆಳ್ವ[5]ವು. ಹಾಂಗೆ ಇಪ್ಪ ಮಹಾ ಪರತತ್ವವು ತನ್ನ ಲೀಲೆಯಿಂದ ತನ್ನಾತ್ಮನೊಳು ಭಿನ್ನವಿಲ್ಲದಡೆ ಆದ ಮಹದಹಂಕಾರ ಭೂಷಣವಪ್ಪ ಚಿದ್ವಿಭೂತಿಯನು ಚಿಚ್ಛತ್ತಿಯ ಮಾಡಿ ಆ ಚಿಚ್ಛಕ್ತಿಯೂ ಆ ಚಿದ್ಘನವೂ ದೇಹವು ಭಿನ್ನವಿಲ್ಲದಿಪ್ಪಂತೆ ಇಪ್ಪವೆಂದು ವರ್ಣಿಸಿದವು. ಹಾಂಗಿಪ್ಪ ಮಹಾಘನದೊಳಗಿರ್ದ ಚಿಚ್ಛಕ್ತಿಯೆ ಮಹಾಶರಣನಾಗಿ, ಷಡು ದೇವತೆಗಳು ತತ್ವವಿತತ್ವಂಗ[6]ಳು ಇಲ್ಲದಂದು[7] ಶಿರಸ್ಸು ಶರೀರವು ಭಿನ್ನವಿಲ್ಲದಿಪ್ಪಂತೆ ಶರಣ ಸತಿ ಲಿಂಗಪತಿಗಳಿಬ್ಬರು ಭಿನ್ನವಿಲ್ಲದಿಪ್ಪವೆಂದು ವಿಸ್ತರಿಸಿದವು. ಹಾಂಗೆ ಘನದೊಳಗೆ ಭಿನ್ನವಿಲ್ಲದಿಪ್ಪ ಶರಣ ತಾನೆ ಬಸವಣ್ಣನೆಂಬ ನಾಮಮಂ ಧರಿಸಿ, ಏನು ಏನೂ ಇಲ್ಲದಂದು ಪರತತ್ವು ಬಸವಣ್ಣನೂ, ಜ್ಯೋತಿಯೂ[8] ಜ್ಯೋತಿಯ ಬೆಳಗೂ ಭಿನ್ನವಿಲ್ಲದಿಪ್ಪಂತೆ ಇಪ್ಪವೆಂದು ಉಸುರಿದವವು. ಸಿದ್ಧಾಂತ ಉಸುರಿದ ಹಾಂಗೆಯಾ ಪರಶಿವನು ಶರಣನು ಐವತ್ತೆರಡಕ್ಷರಗಳು ವೇದಾಂತ ಸಿದ್ಧಾಂತಂಗಳಿಲ್ಲದಂದು ಸೂರ್ಯನೂ[9] ಸೂರ್ಯನ ಕಿರಣವೂ ಭಿನ್ನವಿಲ್ಲದಿಪ್ಪಂತೆ ರತ್ನವು ರತ್ನದ ಕಿರಣವೂ ಭಿನ್ನವಿಲ್ಲದಿಪ್ಪಂತೆ ನಯನದ ಬಿಳಿಯಾಲಿಯೂ, ಕರಿಯಾಲಿಯೂ ಭಿನ್ನವಿಲ್ಲದಿಪ್ಪಂತೆ ಇಪ್ಪವೆಂದರಿವುದು ಸಮಸ್ತ ಭಕ್ತ ಮಹೇಶ್ವರರು. ಲಿಂಗ ಲಿಂಗದ ಪೀಠವೂ ಭಿನ್ನವಿಲ್ಲದಿಪ್ಪಂತೆ ದೇಹವೂ ನೆಳಲೂ ಭಿನ್ನವಿಲ್ಲದಿಪ್ಪಂತೆ, ವೃಕ್ಷವೂ ಬೀಜವೂ ಭಿನ್ನವಿಲ್ಲದಿಪ್ಪಂತೆ ಪುಷ್ಪವೂ ಪುಷ್ಪದ ಗಂಧವೂ ಭಿನ್ನವಿಲ್ಲದಿಪ್ಪಂತೆ ತರ್ಕ ತಂತ್ರಂಗಳಿಲ್ಲದಂದು ಪರಶಿವ ತತ್ವವು ಪರಮ ಬಸವಣ್ಣನು ಭಿನ್ನವಿಲ್ಲದಿರ್ಪರೆಂದರಿವುದು ಸರ್ವ ಜನಂಗಳು[10]  ಇಂತೆಂಬ ದೃಷ್ಟಂಗಳಿಗೆ ಸಾಕ್ಷಿ.


ಆದಿ ಆಧಾರವಿಲ್ಲದಂದು, ಹಮ್ಮು ಬಿಮ್ಮಿಲ್ಲದಂದು,
ಸುರಾಳ ನಿರಾಳವಿಲ್ಲದಂದು,
ಸಚರಾಚವರೆಲ್ಲ ರಚನೆಗೆ ಬಾರದಂದು,
ಗುಹೇವರ,ನಿಮ್ಮ ಶರಣನುದಯಿಸಿದನಂದು.  ||೨||


ನಾದ ಬಿಂದುಗಳಿಲ್ಲದಂದು[11]  ನಿರ್ಭಯನೆಂಬ ಗಣೇಶ್ವರನು.
ಉತ್ಪತ್ಯ ಸ್ಥಿತಿ ಲಯಂಗಳಿಲ್ಲದಂದು ಅಕ್ಷಯನೆಂಬ ಗಣೇಶ್ವರನು.[12]ಓದು ವೇದಂಗ[13]ಳಿಲ್ಲದಂದು ಓಂಕಾರನೆಂಬ ಗಣೇಶ್ವರನು.
ಯುಗ ಜುಗಂಗಳಿಲ್ಲದಂದು ಊರ್ಧ್ವಮುಖನೆಂಬ ಗಣೇಶ್ವರನು.
ಗುಹೇರ್ಶವರಲಿಂಗವಿಲ್ಲದಂದು, ತಾನು ನಿರ್ಮಾಯನೆಂಬ ಗಣೇಶ್ವರನು. ||೩||


ಅಯ್ಯಾ ಜಲ, ಕೂರ್ಮ, ಗಜ, ಫಣಿಕಯ [14]ಮೇಲೆ
ಧರೆ ವಿಸ್ತರಿಸಿ ನಿಲ್ಲದಂದು[15] ಗಗನವಿಲ್ಲದಂದು, ಪವನನ ಸುಳುಹಿಲ್ಲದಂದು, ಅಗ್ನಿಕಳೆದೋರದಂದು,
ತರು, ಗಿರಿ, ತೃಣ, ಕಾಷ್ಟಾದಿಗಳಿಲ್ಲದಂದು,
ಯುಗ ಜುಗ ಮಿಗಿಲೆನಿ [16]ಸದಂದು[17] ಹದಿನಾಲ್ಕು ಭುವನ ನೆಲೆಗೊಳ್ಳದಂದು,
ನಿಜವನರಿದೆಹೆನೆಂಬ ತ್ರಿಜಗಾಧಿಪಗತಿಳಿಲ್ಲದಂದು,
ತೋರುವ ಬೀರುವ ಭಾವದ ಪರಿಯ
ಭಾವದಲ್ಲಿ ಭರಿತ ಅಗಮ್ಯ ಗುಹೇಶ್ವರಾ ನಿರಾಳವು. ||೪||


ಅಯ್ಯಾ ನೀನು ನಿರಾಳ ನಿರ್ಮಾಯನಾಗಿಪ್ಪೆಯಾಗಿ,
ಆಕಾಶ ಪ್ರಕಾಶವಿಲ್ಲದಂದು, ಸಾಕ್ಷಿ ಸಭೆಗಳಿಲ್ಲದಂದು,
ಸಚರಾಚರವೆಲ್ಲ ರಚನೆಗೆ ಬಾರದಂದು,
ಆಧಾರದೊಳಗಣ ವಿಭೂತಿಯನೆ ತೆಗದು,
ಭೂಮಿಯ ನೆಲೆಗೊಳಿಸಿ, ಪಂಚ ಶತಕೋಟಿ ವಿಸ್ತೀರ್ಣ ಭೂಮಂಡಲಕ್ಕೆ
ಸುತ್ತಿ ಹರಿದವು ಸಪ್ತ ಸಮುದ್ರಂಗಳು.
ಎಂಬತ್ತಾರು ಕೋಟಿಯು ತೊಂಬತ್ತೇಳು ಲಕ್ಷ ಕಾಲ
ಭುವನ ಮಂಡಲಕ್ಕೆ ಉದಯ ಬ್ರಹ್ಮಾಂಡ,
ಅರುವತ್ತಾರು ಕೋಟಿ ತಾರಾಮಂಡಲವೆಂದಡೆ.
ಬೆಳಬೆಳಗಿ ತೋರಿದ, ಹನ್ನೆರಡು ಜ್ಯೋತಿಯ,
ನಿಲಿಸಿ ತೋರಿದ, ಹನ್ನೆರಡು ಜ್ಯೋತಿಯ,
ಈ ಜಗದ ಜಂಗುಳಿಯ ಕಾಯ್ದ ಗೋಪಾಲ ತಾನಾಗಿ,
ಚೌರಾಶಿ ಲಕ್ಷ ಜೀವರಾಶಿಗಳಿಗೆ ರಾಸಿವಾಳ ತಾನಾಗಿ,
ಸಕಲದಳಿವಿನುಳಿವಿನ ನಿಂದ ನಿಜದ ನಿಲವ
ನೋಡಿ ಕಂಡೆನು, ಗುಹೇಶ್ವರ ನಿಮ್ಮ ಶರಣ
ಬಸವಣ್ಣನ ಶ್ರೀಪಾದಕ್ಕೆ ನಮೋ ನಮೋ ಎನ್ನುತ್ತಿರ್ದೆನಯ್ಯಾ. ||೫||


ಒಂದು ಒಂದೂ ಇಲ್ಲದಂದು, ನಂದಿವಾಹನರಿಲ್ಲದಂದು,
ಹಿಂದೆ ಹದಿನಾಲ್ಕು ಭುವನವಿಲ್ಲದಂದು,
ಅಂದಾರು ಲಿಂಗವ ಕಂಡವರೊಳಗೆ?
ಅಂದಾರು ಲಿಂಗವ ಕಂಡು ಹೇಳಿದವರೊಳರೆ?
ನಿರಂತರ ತಮಂಧವಿಲ್ಲದಂದು
ಕೂಡಲಚೆನ್ನಸಂಗನಲ್ಲಿ ಬಸವಣ್ಣನೊಬ್ಬನೆ ಉದಯವಾದನು. ||೬||


`ಅಣೋರಣಿಯಾಣ್‌ಮಹತೋ ಮಹಿಯಾನ್‌’ ಎಂಬ ಶ್ರುತಿ ಹುಸಿ.
ಲಿಂಗವಿದ್ದ ಠಾವಿಂಗೆ ಪ್ರಳಯ ಉಂಟೆ?
ಭಕ್ತರ ಭಾವದಲ್ಲಿಪ್ಪನಲ್ಲದೆ ಮತ್ತೆ ಎಲ್ಲಿಯೂ ಇಲ್ಲ.
ರಾಹೇಶ್ವರ, ನಿಮ್ಮ ಶರಣ ಬಸವಣ್ಣನು ನಿತ್ಯ ತೃಪ್ತನು. ||೭||

ಇಂತೆಂಬ ಪರಶಿವನಪ್ಪ ಪ್ರಭುಸ್ವಾಮಿಯ ವಚನಂಗಳಿಂದ ವೇದ ಶಾಸ್ತ್ರಾಗಮ ಪುರಾಣ ಇತಿಹಾಸಾದಿಕಂಗಳನು ಜಂಗಮ ಪ್ರಸಾದವ ಲಿಂಗ[18]ದ ಪುರುಷರು, ಆಗಮ ಪುರುಷರು ಕೈ[19] ಕೊಟ್ಟು ಕೊಂಬಂಥಾ ಭಕ್ತರೊಡೆಯರಿಗೆ ಸಟೆಮಾಡಿ ತೋರಿ, ಷಡುಸಮಯದವರಿಗೆ ದಿಟಮಾಡಿ ತೋರಿ, ಪುರಾತನರ ಸಮಯಕ್ಕೆ ಶ್ರುತಿಗಳು ಬೇಕೆಂಬ ವೇದ ಪುರುಷರು, ಶಾಸ್ತ್ರ ಪುರುಷರು, ಪುರಾಣ ಪುರುಷರು, ಆಗಮ ಪುರುಷರು, ತರ್ಕ ಪುರುಷರು, ಇಂತಿವರೆಲ್ಲರು ವಾಗ್ವ್ಯವಹಾರಂಗಳನು ತೋರಿ, ಕಳದು ರಚಿಸಿ ತಲೆವಾಗಿಸಿ, ಅನೇಕ ಚೋದ್ಯ ಪ್ರಸಂಗಗಳನ್ನು ಪುರಾತನರ ಗೀತ ಮಾತೃಕೆಗಳೊಳಗೆ ತೆಗೆದು [20]ಮಹತ್ವಪ್ಪ[21] ಒಂದು [22]ಷಡುಸ್ಥಲವಂ[23] ಮಾಳ್ಪೆವದೆಂತೆನಲು, ಆದಿ ಎಂಬ ತನು, ಮಾಯೆ, ಆಧಾರವೆಂಬ ಮನ, ಪ್ರಾಣ ಈ ನಾಲ್ಕನನುಗೊಳಿಸದಂದು, ಮಹದಹಂಕರ ಮೈ ದೋರದಂದು, ನಿಷ್ಕಳರೆಂಬ ಷಡಾತ್ಮರುಗಳಿಲ್ಲದಂದು, ಸಕಲರೆಂಬ ಹಲವಾತ್ಮರುಗಳಿಲ್ಲದಂದು, ಸಮಸ್ತ ಲೋಕ ಪ್ರಪಂಚು ಪಸರಿಸದಂದು ಪರಬ್ರಹ್ಮದಲ್ಲಿ ಪರಶಕ್ತಿ ಮೊದಲಾದ ನಾದ ಬಿಂದು ಕಳೆ ಮಹದೈಶ್ವರ್ಯವೆಂಬ ಪಂಚಶಕ್ತಿಗಳು ಮೈದೋರದಂದು, ಉತ್ಪತ್ಯ ಸ್ಥಿತಿಲಯಂಗಳಿಲ್ಲದಂದು, ಮೂಲ ಜೀವನೆಂಬ ಪರಮೇಶ್ವರನ ಮುಖದಲ್ಲಿ ಶೈವ ಪ್ರಣಮ, ಶೈವ ಪಂಚಾಕ್ಷರಿ ಈ ಒಂಬತ್ತಕ್ಷರಂಗಳಿಲ್ಲದಂದು, ಐವತ್ತೊಂದಕ್ಷರಂಗಳಿಲ್ಲದಂದು, ಅದು ಬ್ರಹ್ಮವಿದುಬ್ರಹ್ಮವೆಂದು ವಚಿಸುವ ವೇದ ಶಾಸ್ತ್ರಾಗಮ ಪುರಾಣವೆಂಬೀ ತರ್ಕ ತಂತ್ರಂಗಳಿಲ್ಲದಂದು, ಹದಿನೆಂಟು ಯುಗಂಗಳು ಹುಟ್ಟಿ ಲಯವಾಗದಂದು, ಹದಿನಾಲ್ಕು ಲೋಕವು, ಬ್ರಹ್ಮಾಂಡಂಗಳು ಅಧೋಮುಖ ಶಾಖೆಯಾಗಿ ನಿಲ್ಲದಂದು, ನಮಗೆ ಲಿಂಗವಾಗಬೇಕೆಂಬ ಶರಣರಿಗೆ ಭಿನ್ನ ಬುದ್ಧಿ ತಲೆದೋರದಂದು, ಪಂಚ ಭೂತಂಗಳು ಕೂರ್ಮ ಗಜ ಫಣಿಯ ಮೇಲೆ ನಿಲ್ಲದಂದು, ಜಲ ಚರಂಗಳೇಳು ಲಕ್ಷ, ಮೂರು ಕಂಡ ಏಳು ಲಕ್ಷ, ವಸುದೆಜಾತ ಹತ್ತುಲಕ್ಷ, ಚತುಷ್ಪಾದ ಹನ್ನೊಂದು ಲಕ್ಷ, ಖಗಜಾತಿ ಎಂಟು ಲಕ್ಷ, ಮನುಷ್ಯರಾಶಿ ಇಪ್ಪತ್ತು ಲಕ್ಷ, ದೇವರಾಶಿ ಇಪ್ಪತ್ತೊಂದು ಲಕ್ಷ, ಅಂತು ಎಂಬತ್ತು ನಾಲ್ಕು ಲಕ್ಷ ಜೀವರಾಶಿಗಳೆಂಬೀ ಸ್ಥಾವರ ಜಂಗಮಂಗಳಿಲ್ಲದಂದು, ಮಹಾಲಿಂಗದ ನಿಜವ ಕಂಡರಿದೆಹೆನೆಂತಿದ್ದೆಹೆನೆಂಬ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರರೆಂಬ ಷಡುದೇವತೆಗಳಿಲ್ಲದಂದು, ಸಜ್ಜನ ಸದ್ಭಾವ ಸದಾಚಾರದಲ್ಲಿ ನಿಂದ ಭಕ್ತಜಂಗಮದೊಳಗೆ ಆ ವಸ್ತು ತದ್ಗತವಾಗಿ, ಭರಿತವಾಗಿ[24]ನಿರ್ಗಮನವಾಗಿ[25]ರ್ಪನೆಂಬ ವಿವೇಕ ದೃಢ ಬುದ್ಧಿ ತಲೆದೋರದಂದು, ಆಕಾಶ ಪ್ರಕಾಶಿಸದಂದು, ತನ್ನ ನಿಜವನುಸುರಿಹೆನೆಂದಡೆ ತನ್ನಿಂದ [26]ಅನ್ಯ[27]ವಪ್ಪುದೊಂದು ಇಲ್ಲದಂದು, ಸಚರಾಚರವೆಲ್ಲ ರಚನೆಗೆ ಬಾರದಂಧು, ಷಡುಸ್ಥಲ ಬ್ರಹ್ಮಿಗಳಿಲ್ಲದಂದು, ಪ್ರಮಥಗಣ, ವೃಷಭಗಣ, ಶಾಂತ್ಯತೀತಗಣ, ಸದಾಶಿವಗಣ, ಈಶ್ವರಗಣ, ಮೃಡಗಣ, ರುದ್ರಗಣ, ಅಭವಗಣ, ಶಾಂತ್ಯತೀತಗಣ, ಸದಾಶಿವಗಣ, ಈಶ್ವರಗಣ, ಮೃಡಗಣ, ರುದ್ರಗಣ, ಅಭವಗಣ, ಸ್ವಯಂಭುರುದ್ರಗಣ, ಅಸಂಖ್ಯಾತ ಮರುಳುಗಣ, ವಿಭೂತಿ ರುದ್ರಾಕ್ಷೆ ವೀರಶೈವ ಪ್ರಣಮ ಹನ್ನೆರಡು. ವೀರಶೈವಾಕ್ಷರ ಹದಿನಾಲ್ಕು ಸಾವಿರ. ಸಾವಿರ ಎಸಳನುಳ್ಳ ಏಳು ಪದ್ಮ ಐದು ತೆರದ ಜಪ ಇಂತಪ್ಪ ಪರಶಿವ ಸ್ವರೂಪುಗಳಿಲ್ಲದಂದು ಚಿದ್ಬ್ರಹ್ಮಾಂಡ, ಪ್ರಕಾಶ ಬ್ರಹ್ಮಾಂಡ, ಅನುಭಾವ ಬ್ರಹ್ಮಾಂಡ, ಭಕ್ತಿಯೆಂಬ ಹಸೆ ಭೂಮಿ, ಶಕ್ತಿ[28] ಯೆಂಬ ಹಸೆ ಭೂಮಿ, ಚೈತನ್ಯವೆಂಬ ಹಸೆ ಭೂಮಿ, ಅದರೊಳನುಭಾವ ರಸ ವಜ್ರವೆಂಬ ಮಹಾ ಮೇರು[29] ಇಂತಪ್ಪ ಪರಶಿವ ಲೋಕಂಗಳಿಲ್ಲದಂದು ಮನ ಮಾಯೆ ಷಡುಸಾದಾಖ್ಯನಾಯಕರೆಂಬ ಅಷ್ಟಾತ್ಮರುಗಳಿಲ್ಲದಂದು, ಬಹಿರಂಗದಷ್ಟ ಮದಂಗಳಿಲ್ಲದಂದು, ಅಷ್ಟವಸುಗಳಿಲ್ಲದಂದು, ಸಪ್ತ ಸಮುದ್ರಂಗಳಿಲ್ಲದಂಧು ಪಾತಾಳ ಲೋಕದಿಂದ ಆಕಾಶ [30]ಕೇಶ[31] ಯೋಜನ ಪ್ರಮಾಣದ[32] ಮುನ್ನ ಅದರೊಳಗೆ ಮನ ಮಾಯೆ. ಈ ಮನ ಮಾಯೆಗಳಿಂದ ಹುಟ್ಟಿದ ತ್ರಿವಿಧ ಕರ್ಮ, ತ್ರಿವಿಧ ಕರ್ಮಂಗಳಿಂದ ಹುಟ್ಟಿದ ತ್ರಿವಿಧ ಮಲ, ಈ ತ್ರಿವಿಧ ಮಲಂಗಳಿಂದ ಹುಟ್ಟಿದ ಷಡು ದೇವತೆಗಳು, ಈ ಷಡುದೇವತೆಯರೊಳಗಿರ್ದ ಒಬ್ಬ ರುದ್ರನಲ್ಲಿ ಪಂಚ ರುದ್ರರು. ಈ ಪಂಚ ರುದ್ರರಲ್ಲಿ ಮೂವರು ರುದ್ರರು. ಈ ಮೂವರು ರುದ್ರರಲ್ಲಿ ಮೂವರು ಬ್ರಹ್ಮರು. ಮೂವರು ಬ್ರಹ್ಮರಲ್ಲಿ ತ್ರೈದ ಸ್ತ್ರೀಯರು. ಈ ತ್ರೈದಶ ಸ್ತ್ರೀಯರಲ್ಲಿ ರಾಕ್ಷಸರು, ದೇವರ್ಕಗಳು, ದ್ವಾದಶಾದಿತ್ಯರು, ನವಗ್ರಹಂಗಳು, ಇಪ್ಪತ್ತೇಳು ನಕ್ಷತ್ರಂಗಳು, ಧೃವ ಮಂಡಲಂಗಳು, ಖಗ ಕುಲಂಗಳು, ದಶಕುಲನಾಗಂಗಳು, ನಾಲ್ಕು ಕಾಲ ಪ್ರಾಣಿಗಳು, ಋಷಿಯರುಗಳು, ಅಷ್ಟಕುಲ ಪರ್ವತಂಗಳು, ಪಂಚ ವರ್ಣದ [33]ಮುಗಿಲು[34]ಗಳು, ಕಾಮಧೇನುಗಳು, ಹೋರಿಗಳು, ಕಲ್ಪವೃಕ್ಷಂಗಳು, ನವರತ್ನಂಗಳು[35], ದೀಕ್ಷಾಲರುಗಳು, ಅಷ್ಟಪಾಷಾಣಂಗಳು, ಮೂರು ರಸಂಗಳು, ಮೂರು ಭೂತ ರಾಶಿಗಳು, ಇಪ್ಪತ್ತೈದು ತತ್ವಂಗಳು ಮುಖ್ಯವಾದ ತೊಂಬತ್ತಾರು ಕಾರಣ ಇಂದ್ರಿಯಂಗಳು, ವಿಷಯಂಗಳು ಈರೇಳು ಲೋಕ[36]ದ ವಿಘಳಿಗೆ[37] ಘಳಿಗೆ ಜವ, ದಿನ, ಮಾಸ, ವರುಷ, ಜ್ಯೋತಿಜ್ಞಾನ, ಜೋತಿಷ್ಯ, ಸಂಕ್ರಮಣ, ತಿಥಿ, ವಾರ, ನಕ್ಷತ್ರ, ಯೋಗ, ಕರಣ, ಲಗ್ನ, ಮೂರ್ತ, ಕಾಲ, ಕಲ್ಪಿತ, ಮಂತ್ರ, ತಂತ್ರ, ಜಪ, ಹೋಮ, ನೇಮ, ಸಂಜೆ, ಸಮಾಧಿ, ಹಿಂದೆ ಹೇಳಿದ ಪರಶಿವ ತತ್ವಂಗಳಿಲ್ಲದಂದು, ಹಿಂದೆ ಹೇಳಿದ ಮನ ಮಾಯಾ ತತ್ವಂಗಳು ಇವಾವಾವೂ ಇಲ್ಲದಂದು, ಅತ್ತಲತ್ತತ್ತಲಿರ್ದಮಹಾಬಯಲ ಪರಬ್ರಹ್ಮವು ಜಗತ್ಸೃಷ್ಟಾರ್ಥ ಕಾರಣಕನಾಗಿ ತನ್ನ ಮಹದಹಂಕಾರ ಭೂಷಣವಪ್ಪ ಚಿದ್ವಿಭೂತಿ ಯನು ತನ್ನಾತ್ಮಗತಸ್ಥಾನದಿಂ ಬಹಿರ್ಗತವ ಮಾಡಲು ಅದೆ ಚಿಚ್ಛಕ್ತಿ ಸ್ವರೂಪಾವಾಯಿತ್ತು. ಆ ಬಸವಣ್ಣನಲ್ಲಿ ಷಡುಸ್ಥಲ ಬ್ರಹ್ಮಿಗಳುದಯಿಸಿದರು. ಇಂತೆಂಬ ಪುರಾತನರ ವಚನ [38]ರಸಂ[39]ಗಳಿಗೆ ಸಾಕ್ಷಿ.

೮[40]ಅಯ್ಯಾ[41] ತತ್ವ ವಿತತ್ವಂಗಳಿಲ್ಲದಂದು,
ಪ್ರಕೃತಿ ಪುರುಷರಿಲ್ಲದಂದು,
ಜೀವ ಪರಮರೆಂಬ ಭಾವ ತಲೆ ದೊರದಂದು,
ಏನೂ ಏನೂ ಇಲ್ಲದಂದು, ಬಯಲು ಬಲಿದು[42]  ಬಿಂದುವಾಯಿತ್ತು ನೋಡಾ.
ಆ ಬಿಂದು ಅಕ್ಷರತ್ರಯದ ಗರ್ದುಗೆಯ ಮೇಲೆ ಕುಳಿತಿರಲು,
ಅಲ್ಲಿ ಓಂಕಾರ ಉತ್ಪತ್ಯವಾಯಿತ್ತು ನೋಡಾ.

ಆ ನಾದ ಉತ್ಪತ್ಯವಾದಲ್ಲಿ, ಮೂರ್ತಿಗೊಂಡ ಒಬ್ಬ ಶರಣ.
ಆ ಶರಣನಿಂದಾಯಿತ್ತು ಪ್ರಕೃತಿ.
ಆ ಪ್ರಕೃತಿಯಿಂದಾಯಿತ್ತು ಲೋಕ. [43]ಆ ಲೋಕ[44] ಲೌಲಿಕವನತಿಗಳದು
ನಿಜದಲ್ಲಿ ನಿವಾಸಿಯಾಗಿಪ್ಪ ಗುಹೇಶ್ವರನ ಶರಣ.
ಬಸವಣ್ಣನ ಘನವ ಚನ್ನಬಸವಣ್ಣನ  ಕೃಪೆಯಿಂದಲರಿದು
ನಮೋ ನಮೋ ಎನುತಿರ್ದೆನು ಕಾಣಾ ಸಿದ್ಧರಾಮಯ್ಯಾ. ||೮||

ಆದಿ ಬಸವಣ್ಣ ಅನಾದಿ ಲಿಂಗವೇಂದೆಂಬರು ಹುಸಿ ಹುಸಿ
ಈ ನುಡಿಯ ಕೇಳಲಾಗದು.
ಆದಿ ಲಿಂಗವು ಅನಾದಿ ಬಸವಣ್ಣನು.
ಲಿಂಗವು ಬಸವಣ್ಣನ ಉದರದಲ್ಲಿ ಉದಯಿಸಿತ್ತು.
ಜಂಗಮವು ಬಸವಣ್ಣನ ಉದರದಲ್ಲಿ ಉದಯಿಸಿತ್ತು.
ಪ್ರಸಾದವು ಬಸವಣ್ಣನುಕರಿಸಿದಡಾಯಿತ್ತು.
ಇಂತೀ ತ್ರಿವಿಧಕ್ಕೂ ಬಸವಣ್ಣನೆ ಕಾರಣನೆಂದರಿದೆನಯ್ಯಾ
ಕೂಡಲ ಚೆನ್ನಸಂಗಮದೇವಾಲ.      ||೯||

೧೦
ಹುಟ್ಟಿದ ಕೂಸಿಂಗೆ ಪಟ್ಟವ ಕಟ್ಟಿ
ವಿಭೂತಿಯ ಹೂಸಿ, ಲಿಂಗವ ತೋರಿ
ಜೋ ಜೋ ಎಂದು ಜೋಗುಳವಾಡಿದಳು ಮಾಯಾದೇವಿಯಕ್ಕನು.
ಜೋ ಜೋ ಎಂಬ ಸರ ಹರಿದು
ತೊಟ್ಟಿಲು ಬಿದ್ದಿತ್ತು, ಕೂಸು ಸತ್ತಿತ್ತು,
ಗುಹೇಶ್ವರನುಳಿದನವ್ವಾ.   ||೧೦||

೧೧
ಎನ್ನ ಹೊತ್ತಿಪ್ಪವಳ ನೆತ್ತಿಯೊ ಕಣ್ಣಿನಲ್ಲಿಪ್ಪ
ಲಿಂಗವ ನಾನೆಚ್ಚತ್ತು ನೋಡುವ ತೆರನೆಂತಯ್ಯಾ.
ನೋಡ ಹೋದಡೆ ನೆತ್ತಿ ಒಡದು ಕಣ್ಣಾಯಿತ್ತು.
ನೋಡದಿರ್ದಡೆ ಎನಗವಳು ತೋರಳು.
ಎನಗೆ ಕಾಬ ತೆರನ ತೋರಾ,
ಕಪಿಲಸಿದ್ಧ ಮಲ್ಲಿಕಾರ್ಜುನ ಪ್ರಭುವೆ.  ||೧೧||

೧೨
ಕಾಣದುದನರಸುವರಲ್ಲದೆ ಕಂಡದುದನರಸುವರೆ ಹೇಳಾ.
ಘನಕ್ಕೆ ಘನವಾದ ಶರಣ,
ತಾನೆ ಗುರುವಾದ, ತಾನೆ ಲಿಂಗವಾದ, ತಾನೆ ಜಂಗಮವಾದ
ತಾನೆ ಪ್ರಸಾದವಾದ, ತಾನೆ ಮಂತ್ರವಾದ,
ತಾನೆ ಯಂತ್ರವಾದ,  ತಾನೆ ಸಕಲ ವಿದ್ಯಾರೂಪನಾದ.
ಇಂತಿವನೆಲ್ಲವನೊಳಕೊಂಡು
ಎನ್ನ ಕರಸ್ಥಲಕ್ಕೆ ಬಂದನು ನಿರ್ವಿಕಾರ ಗುಹೇಶ್ವರ. ||೧೨||

೧೩
ನವ ಸೂತ್ರ [45]ಪಟ್ಟಣಕ್ಕೆ[46] ನವ ದ್ವಾರ ಬೀದಿಯೊಳು
ನವಲಿಂಗ ಸ್ಥಾವರಕ್ಕೆ ನವ ಕಳಸವು.
ನವದೀಪ, ನವಧೂಪವು, ನವಮಂತ್ರ, ನವಪೂಜೆ, ನವಜಪ.
ನಮೋ ನಮೋ ಎನ್ನುತ್ತಿರ್ದೆನು
ಕೂಡಲಚೆನ್ನ [47]ಸಂಗಯ್ಯ[48] ನಿಮ್ಮ ಬಸವಣ್ಣಂಗೆ.          ||೧೩||

ಒಂಬತ್ತು ಲಿಂಗವೆಲ್ಲಾಯಿತ್ತು ಎಂದು ಸಂದೇಹ ಬಿಡಬೇಡ.  ಮೂಲವ ತಿಳಿದು ನೋಡಿದಡೆ ಕಾಣಬಹುದೆಂಬುದಕ್ಕೆ ಸಾಕ್ಷಿ.


[1] x (ಬ).

[2] x (ಬ).

[3] + ಹೊದ್ದರು (ಬ)

[4] x (ಬ)

[5] ಳ್ಡ (ಬ)

[6] ಳಿಂದಾದವು (ಬ)

[7] ಳಿಂದಾದವು (ಬ),

[8] x (ಬ)

[9] x ನೂ (ಅ)

[10] + ಸರ್ವ ಜನಂಗಳು (ಆ)

[11] +ಅಗ್ನಿ ಕಳೆದೋಱದಂದು ತರುಗಿರಿತೃಣ (ಅ)

[12] ಮೂದೇವ ಮೂಲಿಗ (ಬ).

[13] ಮೂದೇವ ಮೂಲಿಗ (ಬ).

[14] ಮೇಲೆ ನೆಲೆಗೊಳ್ಳದಂದು (ಬ),

[15] ಮೇಲೆ ನೆಲಗೊಳ್ಳದಂಧು (ಬ),

[16] ಸಿದ (ಅ).

[17] ಸಿದ (ಅ).

[18] ಕ್ಕೆ (ಬ)

[19] ಕ್ಕೆ (ಬ)

[20] ಮಹಂತಪ್ಪ (ಬ)

[21] ಮಹಂತಪ್ಪ (ಬ)

[22] ಚೊದ್ಯ ಪ್ರಸಂಗವಂ (ಬ).

[23] ಚೊದ್ಯ ಪ್ರಸಂಗವಂ (ಬ).

[24] x (ಬ)

[25] x (ಬ)

[26] x (ಬ)

[27] x (ಬ)

[28] + ಭಕ್ತಿ (ಅ)

[29] + ವೆ (ಬ)

[30] ಕಿಷ್ಟ (ಬ)

[31] ಕಿಷ್ಟ (ಬ)

[32] ವೆಂದು ಕಾಣದ (ಬ).

[33] ಕಪಿ. (ಬ).

[34] ಕಪಿ. (ಬ).

[35] + ಜಲಚರಂಗಳು ಖಗಕುಲಂಗಳು (ಬ).

[36] ೦ಗಳು (ಬ).

[37] ೦ಗಳು (ಬ).

[38] x (ಬ).

[39] x (ಬ).

[40] x (ಬ)

[41] x (ಬ)

[42] + ಒಂದು (ಬ).

[43] x (ಅ).

[44] x (ಅ).

[45] ಮಂಟಪಕ್ಕೆ (ಬ)

[46] ಮಂಟಪಕ್ಕೆ (ಬ)

[47] ಸಂಗಮದೇವಾ (ಬ)

[48] ಸಂಗಮದೇವಾ (ಬ)