ಚಿದ್ಬ್ರಹ್ಮಾಂಡದೊಳಗೆ ಮೊರೆಹೊಕ್ಕವರ ಕಾಯುವೆ, ಮರಾಂತವರ ಕೊಲುವೆನೆಂಬ ಬಿರುದನುಳ್ಳ ಶರಣಾಗತವಜ್ರಪಂಜರವೆನಿಸುವ ಮಹಾಮೇರು ಮಂದಿರದ ಗರ್ಭದೊಳಗೆ ಶರಣಲಿಂಗ ಸಂಬಂಧಿಗಳೆನಿಸಿ

[1] ದುಷ್ಟ ನಿಗ್ರಹ ಶಿಷ್ಟ ಪಾಲಕರಾಗಿಪ್ಪ ಗಣಂಗಳೆಷ್ಟು ಎಂದಡೆ:

ನಂದೀಶ್ವರದೇವರು, ಭೃಂಗೀಶ್ವರದೇವರು, ವೀರಭದ್ರದೇವರು ಮುಖ್ಯವಾದ ಪ್ರಮಥಗಣ ಹನ್ನೆರಡುಸಾವಿರ. ವೃಷಭಗಣ ಹನ್ನೆರಡುಸಾವಿರ, ಶಾಂತ್ಯಾತೀಗಣ ಹನ್ನೆರಡುಸಾವಿರ, ಸದಾಶಿವಗಣ ಹನ್ನೆರಡುಸಾವಿರ, ಈಶ್ವರಗಣ ಹನ್ನೆರಡುಸಾವಿರ, ಮೃಡಗಣ ಹನ್ನೆರಡುಸಾವಿರ, ರುದ್ರಗಣ ಹನ್ನೆರಡುಸಾವಿರ, [2]ಅಭವಗಣ ಹನ್ನೆರಡುಸಾವಿರ, ಸ್ವಯಂಭುಗಣ ರುದ್ರಗಣ  ಹನ್ನೆರಡುಸಾವಿರ, ಅಸಂಖ್ಯಾತ ಮರಳುಗಣ ಹನ್ನೆರಡುಸಾವಿರ[3]. ಅಂತು ಲಕ್ಷದಮೇಲೆ ಇಪ್ಪತ್ತು ಸಾವಿರ ಪರಶಿವತತ್ವಂಗಳು. ಚಿದ್ಬ್ರಂಹ್ಮಾಂಡ ಮುಖ್ಯವಾದ ಪ್ರಕಾಶ ಮುಖ್ಯವಾದ ಬ್ರಹ್ಮಾಂಡ, ಅನುಬಾವ ಬ್ರಹ್ಮಾಂಢ, ಪುರುಷಭಕ್ತಿಯೆಂಬ ಹಸೆ, ಶಕ್ತಿಭಕ್ತಿಯೆಂಬ ಹಸೆ, ಚೈತನ್ಯವೆಂಬ ಹಸೆ, ಇಂತಪ್ಪ ಪರಶಿವಲೋಕಂಗಳೊಳಗೆ ಇಪ್ಪ ಷಡುಸ್ಥಲದನುಭಾವ ಸಮುದ್ರ ಸಮೇತವಾದ ನಾನಾಸ್ವರೂಪನುಳ್ಳಗಣಂಗಳು ನಾಲ್ವತ್ತೈದುಕೋಟಿ, ಸ್ವಯಂಭು ರುದ್ರಗಣ ಹತ್ತುಲಕ್ಷ, ಅಸಂಖ್ಯಾತರು ಮರುಳುತಂಡರು,[4] ಇಂತಪ್ಪನಂತ ಕೋಟಿಗಣಂಗಳಿಗೆ ಅದಿಷ್ಠಾಯಕವಪ್ಪ, ಬಸವೇಶ್ವರದೇವರ ಕಾರಣ್ಯದಿಂದುದಯಿಸಿದ, ಶ್ರೀಶೈಲ ಮುಖ್ಯವಾಗಿಪ್ಪ ಅನಂತ ಶಿವಸ್ಥಾನದೊಳಗಾದ ವಾರಣಾಶಿಯ ಕ್ಷೇತ್ರದಲ್ಲಿ ಶೈವದೀಕ್ಷಾಚಾರ್ಯ[5]ನೆನೆಸಿಕೊಂಡಿಪ್ಪ, ಕಾಶಿವಿಶ್ವನಾಥಯ್ಯಗಳು ಪಂಡಿತಾರಾಧ್ಯದೇವರ[6] ವೀರಶೈವಾನುಭಾವದ ಬೋಧೆ ದಶದಿಕ್ತಟದೊಳು ಪೂರ್ಣೀಕರವಾದ ಕ್ರೀರ್ತಿಯಂ ಕೇಳಿ, ತಮ್ಮ ಸತಿ ಒಬ್ಬಳು ಕೆಲವು ಶಿಷ್ಯಾದಿಗಳು ಸಹಿತ ಪರ್ವತದ ಸಮೀಪದಲ್ಲಿರ್ದ [7]ವಣು[8]ಪುರಕೆ ಬಂದು ಆರಾದ್ಯರಂ ಕಂಡು, ಅವರಲ್ಲಿ ವೀರಶೈವ ದೀಕ್ಷೆಯಂ ಪಡೆದು, ಅವರಿಗೆ ಶಿಶುವಾದ ಬಳಿಕ ಉತ್ತರಾಭಿಮುಖವಾಗಿ ಶ್ರೀಕಲ್ಯಾಣಕ್ಕೆ ಬಂದು; ನೆನದಂತೆ ಮಾಳ್ಪ ಬಸವ, ಪ್ರಭು, ಸಿದ್ಧರಾಮ, ಮಡಿವಳ, ಚನ್ನಬಸವಣ್ಣ, ರೇವಣಾದಿ ಇವರು ಮೊದಲಾದ ಸಕಲ ಪುರಾತನರಂ ಕಂಡು, ಅವರೆಲ್ಲರ ಶೇಷಪ್ರಸಾದಮಂ ತಮ್ಮ ಲಿಂಗಕ್ಕೆ ಕೊಟ್ಟು ಕೊಂಡು; ತದನಂತರದಲ್ಲಿ ಬಸವಾದಿಪ್ರಮಥರಿಗಡ್ಡಬಿದ್ದು; ಮತ್ತೆ ದಕ್ಷಿಣ ಮುಖವಾಗಿ ವಣುಪುರದಲ್ಲಿಗೆ ನಡೆ ತಂದು; ತಮ್ಮ ಶ್ರೀಗುರು ಸ್ವಾಮಿಗೆ ಮೈಯಿಕ್ಕಿ ವಿಶ್ವನಾಥಯ್ಯಗಳು ತಮ್ಮ ಶಿಷ್ಯರುಗಳು ಸಮೇತ ಹೊರವಂಟು, ಚೋಳದೇಶವ ಹೊಕ್ಕು ಪುರಾತನರ ವರ ಪುರಂಗಳನೋಡಿ ಸಂತೋಷಂ ಮಾಡಿ, ಕಂಚಿಯಪುರಕ್ಕೆ ಬರಲಾಕ್ಷಣ, ಆ ಪಟ್ಟಣದ ಗಣಾಚಾರಿ ವೀರಯ್ಯ ಲಿಂಗಯ್ಯರೆಂಬ ಶಿವಬ್ರಾಹ್ಮಣ[9]ರಿಬ್ಬರು ಕಂಡು[10] ನಡತಂದು ನಮಸ್ಕರಿಸಿ, ಭಕ್ತಿವಾಕ್ಯಗಳಿಂದ ವರಕರುಇಣಮಂ ಪಡದು, ಊರೊಳಯಿಕೆ ಕರತಂದು,ಒಂದು ಮಠದೊಳಗೆ ಮೂರ್ತಿಗೈಸಿ, ಸರ್ವ ಉಪಚಾರವನನುಗೊಳಿಸಿದಮೇಲೆ ಕೆಲಕಾಲ ನಮ್ಮೊರೊಳಗಿರಬೇಕೆಂದು ಭಿನ್ನಹ ಮಾಡಿದಡೆ, ಹಾಗೆಯಾಗಲಿಯೆಂದು ಕೈಕೊಂಡು ಕೆಲವರುಷಂಗಳಂ ಕಳೆವಾಗ, ತಮಗೊಂದು ಭಕ್ತಿ ಶಿಶು ಉದಯಿಸಿತ್ತು. ಆ ಮಗುವಿನ ಮಸ್ತಕದ ಚಿತ್ಕಳೆಯಂ ಹಸ್ತದಿಂ ತೆಗದು, ಆಕಾರಮಂ ಮಾಡಿ ಆ ಲಿಂಗಕ್ಕೆ ಪಾದೋದಕದಿಂ ಮಜ್ಜನಕ್ಕೆರೆದು, ಜಂಗಮಪ್ರಸಾದವನರ್ಪಿಸಿ, ವಿಭೂತಿ ರುದ್ರಾಕ್ಷಿ ಮೂಲ ಪ್ರಣಮ ಮಂತ್ರ ಇಂತಿವೆಲ್ಲರಿಂದ ಲಿಂಗವಂ ಶಿವ[11]ಗಣಂಗಳ[12] ಮುಂದಿಟ್ಟು ಧರಿಸಿ ಆ ಶಿಷ್ಯೋತ್ತಮನಿಗೆ ಪಂಡಿತಾರಾಧ್ಯರೆಂಬ ನಾಮವಂ ಕಲ್ಪಸಿದಡಾತ ಕೆಲ ಸಂವತ್ಸರಗಳಂ[13] ಮೀರಿ ಪ್ರಬುದ್ಧನಾದ ಬಳಿಕ,[14] ಜಂಗಮ ಭಕ್ತಿಯನುಳ್ಳ ಲಿಂಗಯ್ಯ ತನ್ನ[15]ಕುವರಿಯ[16] ನೀತಂಗೆ ಭಕ್ತರೊಡೆಯರ ಮುಂದಿಟ್ಟು ಸಂಬಂಧಿಸಲು, ಅಷ್ಟರಿಂದಂ ಮೇಲೆ ನಾಲ್ಕೆಂಟು ವರುಷಮಂ ಕಳೆದು ಕಾಶೀವಿಶ್ವನಾಥಯ್ಯಗಳು ಪಂಡಿತಾರಾಧ್ಯದೇವರ ದರುಶ ನಮಂ ಮಾಡಿ ಬಂದೆಹೆವೆಂದು ತಮ್ಮ ಭಕ್ತರೊಡೆಯರಿಗೆ ಹೇಳಿ ಹೊರವಂಟು, ಕೆಲಯೋಜನಮಂ ಕಳೆದು ಬಳಿಕಾರಾಧ್ಯ ರತ್ತ ಬಯಲಾಗೆ, ಆ ಸುದ್ದಿಯಂ ಸಮೀಪದಲ್ಲಿ ಇರುತ್ತ ಕೇಳಿ, ಕಾಯಸಹಿತ [17]ಕಾಶಿವಿಶ್ವನಾಥಯ್ಯ[18]  ಬಯಲಾಗಲು. ಅಷ್ಟರಿಂದ ಮೇಲೆ ಕಂಚಿಯೊಳಗಿರ್ದ ಪಂಡಿತಾರಾಧ್ಯರಿಗೆರಡು ಮಕ್ಕಳುದಯಿಸಿದವು. ಅವರಿಗೆ ವೀರಶೈವ ದೀಕ್ಷೆಯನಳವಡಿಸಿ ಭಕ್ತಮಾಹೇಶ್ವರರಿಗೆಯೂ, ಶಿಷ್ಯಾದಿಗಳಿಗೆಯೂ ಅರಿಕೆಯಮಾಡಿಸಿ, ಕೆಲಕಾಲದಮೇಲೆಂದಿನಂತೆ ಶಿಷ್ಯಾದಿಗಳ ಸಲ ಹುತ್ತ ದೂರವೆನ್ನದೆ ಹೋಗದದೇಶವ ಹೊಕ್ಕು ಚರಿಸುತ್ತಿಪ್ಪೆಡೆಯಲ್ಲಿ ಕೆಲ ಸೀಮೆಗೆ ಪತಿಯೆನಿಸುವ ಭೈರವಣ್ಣನಾಯಕನೆಂಬ ಶಿಷ್ಯಕಂಡು ಹೊರವಂಟವರೊಡತಣವರು ಸಹಿತ ತನ್ನಗೃಹಕ್ಕೆ ಬಿಜಯಂಗೆಯ್ಸಿಕೊಂಡೊಯ್ದು ಸಕಲುಪಚಾರಕ್ಕೆ ಬಂದಲ್ಲಿ, ಆ ಪುರದ ಪ್ರಭುಲಿಂಗರಸರ ಮಲ್ಲಯ್ಯನೆಂಬ ಶಿಷ್ಯ ಕಂಡು ತನ್ನ ವಾಸಕ್ಕೆ ಕರತಂದು ಮೂರ್ತಿಗೊಳಿಸಿ, ಕೆಲ ಉಪಚಾರದ ಮೇಲೆ ಆ ಮಲ್ಲರಸರು ನಮ್ಮ ಗುರುಸ್ವಾಮಿ ಹಿಂದಣ ಊರೊಳಗೆ ಕ್ಷತ್ರಿಯ ಶಿಷ್ಯನ ಮನೆಯಲ್ಲಿ [19]ಸೂತಕ[20] ಅನ್ನುವ ಸಲಿಸಿದರೆಂ[21]ದು ಹೂರಿಗೆಗಳ ವಿಷದೊಳು ನೆನಹಿ ನೀಡಿಸಲವರು ಆತನ ಮುಗ್ಧ ಭಕ್ತಿಯಂ ಕೈಕೊಂಬೆವೆನುತ್ತಾ ಮಹಾಲಿಂಗಕ್ಕೆ ಕೊಟ್ಟು ಆರೋಗಿಸಿ ಮುಗಿದ ಬಳಿಕ ಪಂಡಿತಾರಾಧ್ಯರು ಲಿಂಗದೊಳಗಾಗಲು, ಆ ಲಿಂಗಾಂಗವನೊಂದು ಶಿವಸ್ಥಾನದ ಮುಂದೆ ನಿಕ್ಷೇಪವ ಮಾಡಿ, ಎಲ್ಲರು ಸರಿವಾಕ್ಷಣ ಪಂಡಿತರು ಲಿಂಗ ಜಂಗಮದ ರೂಪಾಗಿ ಮೇಲಕ್ಕೆ ಪ್ರಸನ್ನ  ತೋರಿ ಶಿವನಂಕಾರದೇವರೆಂಬ ನಾಮವಂ ಧರಿಸಿದ್ದುದೆ ಸಾಕ್ಷಿಯಾಗಿಪ್ಪ ಕಾರಣ ಅಂತಪ್ಪ ಮಹಾ ಪುರುಷರ ಗರ್ಭದೊಳುತ್ಪತ್ಯವಾದ ಶಿಶುಗಳ ಶಿಶು ಸೋಮನ ಹಳ್ಳಿಯ ಚಿಕ್ಕವೀರಣ್ಣೊಡೆಯರು ಬಸವಾದಿಪ್ರಮಥರ ಬಹುವಚನಂಗಳ ರಸವಂ ತೆಗದು ವಾಚ್ಯರೂಪಕವೆಂದು ಕಲ್ಪಿಸಿ ಅವರೊಳಗೆ ಕೆಲವು ವಚನಂಗಳಂ ತೆಗೆದು ಸಾಕ್ಷಿ ರೂಪಕವೆಂದು ಕಲ್ಪಿಸಿ ವೇದಾಂತ ಸಿದ್ಧಾಂತಂಗಳ ಬೆರಸದೆ, ಪರಮಮೂಲಜ್ಞಾನವೆಂಬುದೊಂದು ಷಟ್ಸ್ಥಲವಂ ಮಾಳ್ಪೆನೆಂದು ಉದ್ಯೋಗಿಸುವಲ್ಲಿ ಬಸವೇಶ್ವರದೇವರು ತನ್ನ ಮೂಲವನೊಂದು ಪತ್ರದೊಳು ಬರತಂದು ಕನಸಿನಲ್ಲಿ ಕೈಯೊಳು ಕೊಡಲು ಆ ಅಕ್ಷರಂಗಳು ಅನಂತದಕ್ಷರಂಗಳಾಗಿ ಕಾಣಿಸಲು ಅವರ ಮೇಲ್ಪಙ್ತಿಯಾಗಿರ್ದ ಕಾರಣ ಆ ಮೇಲು ಪಙ್ತಿಗಳಿಂದ ನಿರಾಕಾರ ಪೀಠಿಕಾಸ್ಥಲ, ಸಾಕಾರ ಪೀಠಿಕಾಸ್ಥಲ, ಆಕಾರ ಪೀಠಿಕಾಸ್ಥಲ, ವೃಷಭ ಪಿಂಡಜ್ಞಾನಸ್ಥಲ, ಯುಗಶ್ರುತಿ ವಿಡಂಬನಸ್ಥಲ, ಭಕ್ತ ಜಂಗಮದ ಅರಿವಿನ ಸಂಭ್ರಮದಸ್ಥಲ, ಐಕ್ಯನ ಪರಿಪೂರ್ಣಸ್ಥಲ, ಇಂತಪ್ಪ ಸ್ಥಲಂಗಳಂ ಜಂಗಮದ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಡು ಸತ್ಯವಾವಂ ನುಡಿವ ಭಕ್ತರೊಡೆಯರಿಗೆ ಬಿನ್ನಹವ ಮಾಳ್ಪೆನೆಂತೆನಲು –


[1]  ಸುವ (ಬ)

[2] x (ಬ)

[3] x (ಬ)

[4] x (ಬ)

[5] ನಾದ ಬಸವೇಶ್ವದೇವರ(ಬ)

[6] ನಾದ ಬಸವೇಶ್ವದೇವರ(ಬ)

[7] ನಿರ್ವಾಣ (ಬ)

[8] ನಿರ್ವಾಣ (ಬ)

[9] ರಲ್ಲಿಗೆ (ಬ)

[10] ರಲ್ಲಿಗೆ (ಬ)

[11] ಜಂಗಮದ (ಬ)

[12] ಜಂಗಮದ (ಬ)

[13] ಕಳವುತ್ತ ಗುರುಲಿಂಗ (ಬ).

[14] ಕಳವುತ್ತ ಗುರುಲಿಂಗ (ಬ).

[15] ಮಗಳ (ಬ).

[16] ಮಗಳ (ಬ).

[17] x (ಅ).

[18] X (ಅ).

[19] ಶೂದ್ರ (ಬ).

[20] ಶೂದ್ರ (ಬ)

[21] ನೆಂ (ಬ).