(ಸೂಚನೆ: ಸೂಚಿತ ಅಂಕಿಗಳಲ್ಲಿ ಮೊದಲನೆಯದು ಪುಟ, ಎರಡನೆಯದು ವಚನದ ಕ್ರಮಾಂಕ)

ಅಕಲ್ಪಿತ: ತರ್ಕಕ್ಕತೀತವಾದ, ತರ್ಕಕ್ಕಲ್ಲದ, ೮೬ – ೧೧೪

ಅಗಮ್ಯ: ಜ್ಞಾನಾತೀತ, ಗ್ರಹಿಸಲಸದಳ. ೮೪ – ೧೧೪

ಅಚ್ಚಪ್ರಸಾದಿ: ೧) ಭ್ರಮೆಗಳನು ಜರದು ಲಿಂಗಪ್ರಸಾದ ಪಡೆದವ ೧೦೫ – ೧೩೩
೨) ಆದಿ ವ್ಯಾಧಿ ಲೌಕಿಕ ಸೋಂಕದ ಲಿಂಗ ಪ್ರಸಾದಿ,
ಜಂಗಮ ಪ್ರಸಾದಿ, ಸಮಯ ಪ್ರಸಾದಿ.

ಅಡಿಯನೆಲೆ: ಅಧೋಹೃದಯದಲ್ಲಿಯ ಮೊದಲನೆಯ ಚಕ್ರ, ಆಧಾರಚಕ್ರ ೮೭ ಗದ್ಯ

ಅಂಡಜ: ಚಿದ್ಭ್ರಹ್ಮಾಂಡ, ಆಕಾಶ.    ೧೪೪ ಗದ್ಯ ೬೬ – ೮೬

ಅಧೋಮಾಯೆ: ಮನವು ಪಾಪರೂಪೆಂಬ ಹೆಣ್ನಾಗಿ ಆದಿಯೆಂಬ            ನಾಮವಿಡಿದು ಅಧೋಮಾಯೆಯೆನಿಸಿದಕೊಂಡಳು ೧೪೪ ಗದ್ಯ

ಅದ್ವೈತ: ಪರತತ್ವ ವೆಂಬುದು ಒಂದೇ ಒಂದು ಇದೆ ಎಂಬ ಪ್ರಣಾಲಿ ೫೬ – ೬೨

ಅನಾದಿ: ಪ್ರಥಮತತ್ವ      ೭ – ೧
ಬಸವಣ್ಣ ೧೪ – ೯
ಮನ     ೮ ಗದ್ಯ
ಲಿಂಗ     ೧೪ – ೯

ಅನಾಹುತ: ಅಸ್ಪಂದಿತ, ಹೃದಯ ಸ್ಥಾನದ ಚಕ್ರ ೮೪ – ೧೧೪

ಅನುಭಾವ: ಬ್ರಹ್ಮ, ನಿಶ್ಯಬ್ಧ ೧೭೨ – ೨೩೦
ಲಿಂಗ.    ೮೬ – ೧೪

ಅನುಭಾವಿ: ಶಿವಜ್ಞಾನಿ ೫೪ ಗದ್ಯ

ಅನುಭಾವಿಗಳು: ೧) ಕಾಯಾನುಭಾವಿಗಳು  ೨೯ – ೩೩
೨) ಜೀವಾನುಭಾವಿಗಳು
೩) ಪವನಾನುಭಾವಿಗಳು
೪) ಪ್ರಾಣಾನುಭಾವಿಗಳು
೫) ಲಿಂಗಾನುಭಾವಿಗಳು

ಅನಂತರು: ಮನು ಮುನಿಗಳು ೧೩೯ ಗದ್ಯ

ಅಂತಃಕರಣ ಚತುಷ್ಟಯ: ಮನ, ಬುದ್ಧಿ, ಚಿತ್ತ, ಅಹಂಕಾರ, ೩೦೬ – ೪೦೭

ಅಂತರಂಗದಷ್ಟ ಮದಗಳು: ತೃಣೀಕೃತ, ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ, ವಾಸಿನಿ:         ೧೨೩ ಗದ್ಯ

ಅಪರಾಬೋಧ: ಇಂದ್ರಿಯ ಪ್ರತ್ಯಕ್ಷ ೪೨ – ೪೮

ಅರ್ಪಿತದಮುಖ: ಪ್ರಾಕೃತ ಅಪ್ರಾಕೃತ ಭೂತಗಳ ಸಹಾಯದಿಂದ ಅಡಿಗೆ ಮಾಡುವದನರಿದು ಅಪ್ರಾಕೃತ ಪಂಚ ಭೂತಗಳ ನೆರವಿನಿಂದ ಅಡಿಗೆ ಮಾಡುವದನರಿವುದು.       ೬೨ – ೭೭

ಅರ್ಪಿತ: ಭಕ್ತಿಪೂರ್ವಕವಾಗಿ ಲಿಂಗಕ್ಕೆ ನೈವೇದ್ಯ ಮಾಡುವುದು; ಅದು ಶೇಷ್ಠ ಪ್ರಸಾದವೆಂದು ಸ್ವಿಕರಿಸುವುದು.   ೬೧ – ೭೧

ಅಪ್ರಮಾಣ: ಅಳತೆಗೆ ನಿಲುಕದ, ಜ್ಞಾನಕ್ಕೆ ನಿಲುಕದ, ಇಂದ್ರಿಯ ಆಪ್ತವಾಕ್ಯ ತರ್ಕಾದಿಗಳಿಗತೀತವಾದ. ೮೬ – ೧೧೪

ಅಮರಗಣಂಗಳು: ರುದ್ರಗಣರು, ಪ್ರಮಥಗಣರು ೨೦೭ – ೨೮೪

ಅವಸ್ಥಾತ್ರಯ: ಜಾಗ್ರ, ಸ್ವಪ್ನ, ಸುಷುಷ್ತಿ.

ಅಷ್ಟಕುಲಪರ್ವತಗಳು: ಮೇರು, ಮಾನುಷ್ಯ, ರಜತ, ನೀಲ, ಹಿಮ, ಕೀಲ, ಮಂದರ, ಅಸಿತ. ೩೭೧ ಗದ್ಯ

ಅಷ್ಟಕುಲ ಪರ್ವತಗಳ ಅಳತೆ: ೧) ಮೇರುಪರ್ವತ ನೂರು ಲಕ್ಷ ೧೫೯ ಗದ್ಯ
ಯೋಜನೆ ಪ್ರಮಾಣ.
೨) ಮನುಷ್ಯ ಪರ್ವತ ತೊಂಬತ್ತು
ಲಕ್ಷಯೋಜನ ಪ್ರಮಾಣ.
೩) ರಜತ ಪರ್ವತ, ಎಂಬತ್ತು ಲಕ್ಷ
ಯೋಜನ ಪ್ರಮಾಣ.
೪) ನೀಲಪರ್ವತ, ಎಪ್ಪತ್ತು ಕ್ಷಲ
ಯೋಜನೆ ಪ್ರಮಾಣ
೫) ಹಿಮ ಪರ್ವತ, ಅರವತ್ತು
ಲಕ್ಷ ಯೋಜನ ಪ್ರಮಾಣ
೬) ಕೀಲ ಪರ್ವತ, ಐವತ್ತು ಲಕ್ಷ
ಯೋಜನ ಪ್ರಮಾಣ
೭) ಮಂದರ ಪರ್ವತ, ನಲವತ್ತು
ಲಕ್ಷ ಯೋಜನ ಪ್ರಮಾಣ.
೮) ಅಸಿತ ಪರ್ವತ, ಮೂವತ್ತು
ಲಕ್ಷ ಯೋಜನ ಪ್ರಮಾಣ.

ಅಷ್ಟಗಿರಿ: ಅಷ್ಟ ಅಹಂಕಾರ. ೧೨ ಗದ್ಯ

ಅಷ್ಟ ಜೀವಾತ್ಮರು: ಸ್ವಯಂಭೂ, ಈಶ್ವರ, ಸದಾಶಿವ, ಪರಮೇಶ್ವರ, ಶಂಭು, ಬ್ರಹ್ಮ, ವಿಷ್ಣು, ರುದ್ರ. ೧೪೮ ಗದ್ಯ

ಅಷ್ಟತನು: ಪಂಚ ಮಹಾಭೂತಗಳು, ಚಂದ್ರ, ಸೂರ್ಯ, ಆತ್ಮ.

ಅಷ್ಟದಿಕ್ಪಾಲಕರು: ಅಗ್ನಿ, ಯಮ, ನೈಋತ್ಯ, ವರುಣ, ವಾಯವ್ಯ, ಕುಬೇರ, ಈಶಾನ್ಯ, ಇಂದ್ರ           ೩೭೨ ಗದ್ಯ

ಅಷ್ಟದಿಗ್ಗಜಗಳು: ಐರಾವತ, ಪುಂಡರೀಕ, ವಾಮನ, ಕುಮುದ, ಅಂಜನ, ಪುಷ್ಟದಂತ, ಸಾರ್ವಭೌಮ, ಶಾರ್ದೂಲ, ಸುಪ್ರಲೇಕ. ೩೭೨ ಗದ್ಯ.

ಅಷ್ಟಮದ: ೧) ಕುಲ ಛಲ ಧನ ಯೌವನ ರೂಪ ವಿದ್ಯಾಜರ್ಯಾ ತಪ ೪೦ – ೪೭
೨) ಅಹಂಕಾರ, ಮಮಕಾರ ೩೨೭ – ೩೬೬

ಅಷ್ಟಮದಗಳ ವಿವರ: ಪೃಥ್ವಿಮದ, ಸಲಿಲಮದ, ಪಾವಕ ಮದ, ಪವನಮದ, ಅಂಬರಮದ, ರವಿಮದ, ಶಶಿಮದ, ಆತ್ಮಮದ ೩೭೨ – ೩೬೬

ಅಷ್ಟಮಹಾಸಿದ್ಧಿ: ಅಣಿಮಾ, ಗರಿಮಾ, ಲಘಿಮಾ ಮುಂತಾದವುಗಳು ೧೭೩ ಗದ್ಯ

ಅಷ್ಟಮಹಾಸಿದ್ಧಿ: ಅಂಜನಸಿದ್ದಿ, ಘುಟಿಕಾಸಿದ್ಧಿ, ಮಂತ್ರಸಿದ್ಧಿ, ದೂರದೃಷ್ಟಿ, ದೂರಶ್ರವಣ, ಕಮಲ ದರ್ಶನ, ತ್ರಿಕಾಲಜ್ಞಾನ, ಪರಕಾಯಪ್ರವೇಶ ೧೩೮ – ೧೮೮

ಅಷ್ಟಮೂರ್ತಿ: ಪಂಚಮಹಾಭೂತಗಳು, ಸೂರ್ಯ, ೨೭೩ – ೩೬೮ ೧೫೧ – – ೨೧೨
ಚಂದ್ರ, ಆತ್ಮ       ೧೭ ಗದ್ಯ
ಅಷ್ಟಾತ್ಮರು: ೧) ಮನ ಮಾಯೆ ಷಡುಸಾದಾಖ್ಯರು.     ೧೨೨ ಗದ್ಯ
೨) ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ
ಪರಮೇಶ್ವರ, ಮಾಯೆ, ಮನ

ಅಷ್ಟಾತ್ಮರ ಅಷ್ಟತನು: ಬ್ರಹ್ಮಂಗೆ ಸ್ಥೂಲತನು, ವಿಷ್ಣುವಿಂಗೆ, ೧೨೨ ಗದ್ಯ
ಸೂಷ್ಮತನು, ರುದ್ರಂಗೆ ಕಾರಣತನು,
ಈಶ್ವರಂಗೆ ನಿರ‍್ಮಲತನು, ಸದಾಶಿವಂಗೆ
ಶುದ್ಧತನು, ಪರಮೇಶ್ವರಂಗೆ ಚಿದ್ರೂಪ
ತನು, ಮಾಯೆಗೆ ಚಿನ್ಮಯತನು, ಮನಕ್ಕೆ
ಆನಂದತನು

ಅಷ್ಟಾತ್ಮರುಗಳ ಅಷ್ಟ ಅಹಂಕಾರಗಳು: ಬ್ರಹ್ಮಂಗೆ ರಾಜಹಂಸಾ ೧೨೩ ಗದ್ಯ
ಹಂಕಾರ, ವಿಷ್ಣುವಿಗೆ ಸಾತ್ವಿಕಾಹಂಕಾರ, ರುದ್ರಂಗೆ
ತಾಮಸಾಹಂಕಾರ, ಈಶ್ವರಂಗೆ ತೊರ‍್ಯಾಹಂಕಾರ
ಸದಾಶಿವಂಗೆ ತೀತಾಹಂಕಾರ, ಪರಮೇಶ್ವರಂಗೆ
ಅತೀತಾಹಂಕಾರ, ಮಾಯಿಗೆ, ಆದಿಯಹಂಕಾರ,
ಮನಕ್ಕೆ ಅನಾದಿಯಹಂಕಾರ

ಅಷ್ಟಾಂಗಯೋಗ: ಯಮ, ನಿಯಮ, ಅಸನ, ಪ್ರಾಣಾಯಮ, ೨೭೯ ಗದ್ಯ
ಪ್ರತ್ಯಾಹಾರ, ಧ್ಯಾನ, ಧಾರಣ, ಸಮಾಧಿ

ಅಸುರ ಪಡೆ: ಮೂವತ್ತಾರು ತತ್ವಗಳು, ಲಿಂಗಾಂಗ ತತ್ವಗಳು    ೧೩೦ ಗದ್ಯ
ಇಪ್ಪತ್ತು ನಾಲ್ಕು ತತ್ವಗಳು: ಷಡೂರ್ಮಿಷಡು
ವರ್ಗ ಷದ್ಭ್ರಮೆ ಷಡ್ಭಾವವಿಕಾರಗಳು ಹೀಗೆ ಇವೆಲ್ಲ
ಕೂಡಿ ೧೪೮ ದೇಹವಿಕಾರ ಗಳಾದವು. ಅವೆಲ್ಲ
ಸೇರಿ ೬೬ ಕೋಟಿ ಅಸುರಪಡೆಯವಾಯಿತ್ತು

ಅಸಂಖ್ಯಾತರು: ಅಗಣಿತಗಣಂಗಳು. ೨೦೭ – ೨೦೦

ಅಹಂಕಾರ: ಅಂಬರ ಅನಲನ ಸಂಗದಿಂದ ಹುಟ್ಟಿದ ತತ್ವ ೭ – ೧

ಅಕ್ಷರತ್ರಯ: ಅ, ಉ, ಮ ೫೨ – ೫೬

ಆಗಮ: ೧) ಶೈವಧರ್ಮದ ಆಕರಸಾಹಿತ್ಯ, ಇದು ೨೮ – ದಿವ್ಯಾಗ            ೨೨೧ ಗದ್ಯ
ಮಗಳೆಂದು ಪ್ರಸಿದ್ಧ.
೨) ಜ್ಞಾನ, ಶಾಸ್ತ್ರ ವಿಶೇಷ   ೮೫ – ೧೧೩

ಆಚಾರ್ಯ: ಪ್ರಥಮಾಚಾರ್ಯ, ಲಿಂಗಾಚಾರ್ಯ, ಜಂಗಮಾಚಾರ್ಯ, ಪ್ರಸಾದಾಚಾರ್ಯ. ೩೦ – ೩೬

ಆತುಮಧ್ಯಾನದ ಪರಿಣಾಮ: ಅಷ್ಟ ಮದ ಕಳೆದ ತನುಗುಣವಳಿದ ೧೦೬ – ೧೩೬
ನಿತ್ಯ ನಿರಂಜನ ತಾನೆಂದರಿದ ಸತ್ಯ
ಸ್ವರೂಪು.

ಆತ್ಮ: ಪರಮಾತ್ಮ ೭ – ೧

ಆದಿ: ೧) ತನು, ಮಾಯೆ ೧೧ ಗದ್ಯ
೨) ಬಸವಣ್ಣ  ೧೪ – ೯
೩) ಮಾಯೆ  ೮ ಗದ್ಯ
೪) ಲಿಂಗ  ೧ – ೯

ಆದಿ ಅನಾದಿ: ಮನ ಮಾಯೆ  ೨೨೧ ಗದ್ಯ

ಆದಿಕುಳ: ಲಿಂಗ ೧೧೩ – ೧೪೩

ಆದಿಯಾಧಾರ: ಪ್ರಥಮ ಚಕ್ರ, ಪೃಥ್ವೀತತ್ವ. ೮೬ – ೧೧೪

ಆದ್ಯರೆಂಬವರು: ಷಡುದೇವತೆಗಳು ೧೩೯ ಗದ್ಯ

ಆಧಾರ: ೧) ಆತ್ಮ ಸ್ಥಾನ   ೧೩ ಗದ್ಯ
೨) ಮನ, ಪ್ರಾಣ   ೧೧ ಗದ್ಯ
೩) ಲಿಂಗ (ಪ್ರಾಣಕ್ಕೆ ಆಧಾರವಾದುದು)  ೧೨೦ ೧೫೫
೪) ಪ್ರಕೃತಿ (ನಾದ ಬಿಂದು ಕಳೆಗಳಿಗೆ ಆಧಾರ)  ೧೨೦ – ೧೫೫

ಆಯತ: ಇಷ್ಟಲಿಂಗ ೬೩ – ೭೮

ಆರುಕವೆ: ಅಂಗವಾರು ಲಿಂಗವಾರು ೧೦೪ – ೧೩೧

ಆರುಶೈವ: ಶೈವ, ಪಾಶುಪತ, ಕಾಳಾಮುಖ, ಮಹಾವ್ರತ, ೧೯೬ ಗದ್ಯ
ಸನ್ಯಾಸಿ, ಕಾಪಾಲಿಕ

ಆರುಸ್ಥಾನಗಳು: ಚತುಃಕೋಣೆ, ಧನುರ್ಗತಿ, ತ್ರಿಕೋಣೆ, ೩೬೨ ಗದ್ಯ
ಷಟ್ಕೋಣೆ, ವರ್ತುಳಾಕಾರ, ತಮಂಧಾಕಾರ

,, , ,

ಇಡಾ: ನಾಡಿ, ಯೋಗನಾಳ, ಸುಷುಮ್ನೆಯ ಜೊತಗಿರುವನಾಡಿ.            ೭೭ ಗದ್ಯ
ಈರೇಳುಲೋಕ: ೧) ಅತಳ ವಿತಳ ಸುತಳ ಮಹಾತಳ ತಳಾ     ೪೦೨ – ೫೮೭
ತಳ ರಸಾತಳ ಪಾತಾಳ
೨) ಭೂಲೋಕ ಭುವರ್ಲೋಕ ಸುವರ್ಲೋಕ
ಜನರ್ಲೋಕ ಮಹರ್ಲೋಕ ತಪರ್ಲೋಕ
ಸತ್ಯಲೋಕ.

ಈರೈದುಕೇರಿ: ದಶೇಂದ್ರಿಯಗಳು ೧೭೧ – ೨೨೭

ಉಭಯ: ಲಿಂಗ ಮತ್ತು ಪ್ರಾಣ.  ೭೬ – ೧೦೪

ಉಭಯಮತ:  ಸಿದ್ಧಾಂತ ಹಾಗು ವೇದಾಂತ ಪ್ರಣಾಲಿಗಳು  ೭ – ೧

ಎಳೆಯಕರ್ಣಿಕೆ: ಚಿತ್‌ಶಕ್ತಿ  ೨೧ – ೨೩

ಎಂಬತ್ತುನಾಲ್ಕು ಲಕ್ಷ ಜೀವಿ: ಜೀ ಚರಂಗಳು ೭ ಲಕ್ಷ  ೧೨ ಗದ್ಯ
ಮೂರು ಕಂಡ ೭ ಲಕ್ಷ
ವಸುಜೆ ಜಾತ ೧೦ ಲಕ್ಷ
ಚತುಷ್ಪಾದ ೧೧ ಲಕ್ಷ
ಖಗ ಜಾತಿ ೮ ಲಕ್ಷ
ಮನುಷ್ಯ ಜಾತಿ ೨೦ ಲಕ್ಷ
ದೇವರಾಸಿ ೨೧ ಲಕ್ಷ

ಏಕ ಪ್ರಸಾದ: ತನ್ನ ಪ್ರಸಾದ ಲಿಂಗಕೆ ಲಿಂಗದ ಪ್ರಸಾದ ತನಗೆ  ೬೨ – ೭೫
ಆದುದು ಏಕಪ್ರಸಾದ.

ಏಳುತಾಳ: ಏಳುತಾಣ, ಏಳು ಚಕ್ರಗಳು  ೮೫ – ೧೧೨

ಐದು ಬಗೆಯ ಜನ: ೧) ಹನ್ನೆರಡು ಮಣೆಯ ಜಪ  ೧೦೪ – ೧೩೨
೨) ಇಪ್ಪತ್ತೇಳು ಮಣಿಯ ಜಪ
೩) ಮೂವತ್ತಾರು ಮಣಿಯ ಜಪ
೪) ಎಪ್ಪತ್ತೆರಡು ಮಣಿಯ ಜಪ
೫) ನೂರೆಂಟು ಮಣಿಯ ಜಪ

ಐವತ್ತೆರಡಕ್ಷರ: ಸ್ವರ, ವರ್ಗೀಯ, ಅವರ್ಗೀಯ ವ್ಯಂಜನಗಳು  ೩೭೩ ಗದ್ಯ

ಐವತ್ತೆರಡಕ್ಷರುಗಳುತ್ಪತ್ತಿ: ಪಂಚಾಕ್ಷರಗಳಿಂದ ಐವತ್ತೆರಡಕ್ಷರಗಳು  ೧೨೧ – ೧೫೭
ಹುಟ್ಟಿದವು.

,

ಒಂದೆ ಮರ: ಬ್ರಹ್ಮವೃಕ್ಷ  ೧೦೪ – ೧೩೧

ಓಂಕಾರದುತ್ಪತ್ತಿ: ಆ ಎಂಬಲ್ಲಿ ನಾದವಾಗಿ, ಉ ಎಂಬಲ್ಲಿ ನಾದ  ೧೨೦ – ೧೫೫
ಉಳಿದು, ಮ ಎಂಬಲ್ಲಿ ಬಿಂದು ಒಂದು ಗೂಡಲು
ಓಂಕಾರ ಶಕ್ತಿಯಾಗಿ ತೋರಿತ್ತು

ಓಂಕಾರದುದಯ: ಅಕ್ಷರ ಮೂರರಲಿ (ಅ, ಉ, ಮ) ಓಂಕಾರದುದಯ.  ೨೧೯ – ೨೯೨

,

ಕರ್ಣದನಾದ: ಅನಾಹತನಾದ  ೧೮೯ – ೨೫೮

ಕರ್ಣಾಮೃತ:  ದಯಾಮೃತ, ಪ್ರಸಾದಮೃತ  ೧೦೨ – ೧೨೯

ಕದಳಿ: ದೇಹ, ಮಾಯೆ, ಸಂಸಾರದ ಜಂಜಡ  ೮೭ – ೧೫

ಕರ್ಮಕಾಂಡಿಗಳು: ತತ್ವವಿವೇಕ, ಸ್ವಾನುಭಾವಗಳ ತಿಳಿಯದ  ೫೫ ಗದ್ಯ
ಹದಿನೆಂಟು ಜಾತಿಗಳಿಗೆ ಬೋಧಿಸಿ ಲಿಂಗ ಕೊಟ್ಟವರು

ಕರ್ಮತ್ರಯ: ಸಂಚಿತ, ಪ್ರಾರಬ್ಧ, ಆಗಾಮಿ  ೧೭೪ ಗದ್ಯ
ಕಲರು ಐವರು: ನಿಃಕಲರು, ಸಕಲರು, ಪ್ರಳಯಾಕಲರು, ವಿಜ್ಞಾನಕಲರು, ಸಕಲಾಕಲರು.  ೧೭೦ ಗದ್ಯ

ಕಾರಣತನು: ಆಕಾಶ, ಅಹಂಕಾರ, ಪಿಂಡ, ಸೃಷ್ಟಿ  ೭ – ೧

ಕಾರುಣ್ಯ ಮಾಡು: ದೀಕ್ಷೆ ಮೂಲಕ ಲಿಂಗ ಕೊಡು  ೧೧೩ – ೧೪೩

ಕೀಲ: ವಿಧಾನ  ೧೭೬ – ೨೩೫

ಕುರುಹಿಲ್ಲದವ: ನಿರಾಕಾರನಾದವ, ಪರಶಿವ  ೪೯ – ೫೩

ಕುಲ: ಹದಿನೆಂಟು ಜಾತಿ

ಕಂಗಳ ಬೆಳಗು: ಬಿಂದು  ೧೮೯ – ೨೫೮

ಕಂಭ: ಆಧಾರ, ಸ್ಥಲತತ್ವ  ೭೬ – ೧೦೫

ಕುಂಭದ ಮಳೆ: ಸಹಸ್ರಕ ಮಲಕುಂಭದಲ್ಲಿಯ ಅಮೃತಮಳೆ  ೧೦೪ – ೧೩೧

ಕೈದರ್ಪಣ: ಕರಸ್ಥಲ, ಲಿಂಗ  ೧೧೩ – ೧೪೪

ಕ್ರಿಯಾದ್ವೈತ: ಭಕ್ತಿ, ಸೂಕ್ಷ್ಮ, ಭಕ್ತಿ ಕಟ್ಟಣೆ, ಭಕ್ತಿ, ಕ್ರಮ, ಶರಣಸತಿ ಲಿಂಗಪತಿಯಾದ ಸಂಬಂಧ, ಪಾದೋದಕ, ಪ್ರಸಾದ ನಿರ್ಣಯ ಇಂತಿವು ಕ್ರಿಯಾದ್ವೈತ.  ೧೯೬ ಗದ್ಯ

ಕ್ಲೇಶ: ಕಷ್ಟ.ದುಃಖ  ೨೧೮ – ೨೯೦

ಖೇಚರ: ಯೋಗ ವಿಧಾನ, ಯೋಗ ಮುದ್ರೆ  ೮೯ – ೧೧೫

ಗಗನಸ್ಥಾನ: ಬ್ರಹ್ಮರಂಧ್ರ ಚಕ್ರ  ೮೬ – ೧೧೪

ಗಣಗಳು: ೧) ಪ್ರಮಥ ಗಣ  ೯೯ ಗದ್ಯ
೨) ವೃಷಭ ಗಣ
೩) ಸ್ವಯಂಭುಗಣ
೪) ಅಸಂಖ್ಯಾತರು
೫) ಮರುಳುಗಣ
ಗೀತಾ ಸಂಪ್ರದಾಯ: ಶರಣಸತಿ ಲಿಂಗಪತಿ ಎಂಬುದು  ೧೪೬ – ೨೦೪

ಗುಣಗಳು ೨೫: ರೋಮ,ಪಿತ್ತ, ಶ್ಲೇಷ್ಮ, ಶುಕ್ಲ, ರಕ್ತ,  ೧೭೦ ಗದ್ಯ
ಮೂತ್ರ, ಕ್ಷುತ್ತು, ತೃಷ್ಣೆ, ನಿದ್ರೆ, ಆಲಸ್ಯ,
ಸಂಗವಹರಿವ, ಹಾರುವ, ಸುಳಿವ, ಸುತ್ತುವ,
ಕೂಡುವ, ಅಗಲುವ, ಆಹ್ವಾನಿಸುವ, ವಿಸರ್ಜಿ
ಸುವ, ಅಂಜುವ, ನಾಚುವ, ಮೋಹಿಸುವ.

ಗುರು: ಶರಣತತ್ವ, ಚಿಚ್ಛಿಕ್ತಿತತ್ವ  ೧೩ ಗದ್ಯ

ಗುರುದ್ರೋಹ: ಗುರುವಿನಲಿ ಅಹಂಕಾರದೊಳಿರುವುದು, ಸಹ  ೧೯೭ ಗದ್ಯ
ಪಂಕ್ತಿಯಲಿ ಕುಳ್ಳಿರುವುದು, ಸಂಭಾಷಣೆಯಂ
ಮಾಡುವುವು, ಕೈಯೊಡ್ಡಿ ಬೇಡುವುದು.

ಗುರುಸ್ವರೂಪದೊಟ್ಟಲು: ಆಧಾರಲಿಂಗ ನಾಭಿಪರಿಯಂತರ ವ್ಯಾಪಿಸಿದ ಅವಕಾಶ  ೬೬ – ೮೭

ಗೋಸಾಸಿರ: ಇಂದ್ರಿಯರಾಸಿ, ಕಿರಣರಾಸಿ  ೧೮೫ – ೨೫೦೨

ಚತುರ್ವಿಧ ಪದ: ೧) ಸಾಲೋಕ್ಯ, ಸಾಮೀಪ್ಯ, ಸಾರೂಪ್ಯ,  ೧೪೨ ಗದ್ಯ
ಸಾಯುಜ್ಯ
೨) ಬ್ರಹ್ಮಪದವಿ, ವಿಷ್ಣಪದವಿ, ಇಂದ್ರಪದವಿ,
ರುದ್ರಪದವಿ.

ಚರಶೇಷ: ಜಂಗಮದ ಶೇಷ ಪ್ರಸಾದ  ೭೪ – ೧೦೦

ಚವುಕ: ಸ್ಕಂದ, ಪಿಂಡ  ೭೩ ಗದ್ಯ, ೧೩ ಗದ್ಯ

ಚಿಚ್ಛಕ್ತಿ: ಚಿದ್ವಿಭೂತಿ, ಬಹಿರ್ಗತವಾದ, ಚಿದ್ವಿಭೂತಿ ಅರಿವು ೯ ಗದ್ಯ, ೮ ಗದ್ಯ

ಚೌಕ: ನಾಲ್ಕುಯೋಜನ  ೧೯೬ – ೨೬೭

ಚೌದಿಕ್ಕಿನ ನಿಚ್ಛಣಿಗಿ ಸುಖ:  ನೂರೊಂದುಸ್ಥಲದನುಭವಾಮೃತ ಸುಖ.  ೭೮ ಗದ್ಯ

ಚೌದಿಕ್ಕು: ಚರ್ಯಾ, ಕ್ರಿಯಾ, ಯೋಗ, ಜ್ಞಾನ  ೭೮ ಗದ್ಯ

ಚೌರಾಸಿ: ನಾಲ್ಕುರಾಸಿ: ಅಂಡಜ, ಶ್ವೇದಜ, ಉದ್ಬಿಜ, ಜರಾಯುಜ  ೭ – ೧

ಜಿವ್ಹೆಯರುಚಿ: ಪ್ರಸಾದರಸ  ೧೮೯ – ೨೫೮

ಜೀವ: ಪ್ರಾಣ  ೭ – ೧

ಜಂಗಮ: ನಿಸ್ಸೀಮ, ನಿಜೈಕ್ಯ, ನಿರಾಭಾರಿ  ೩೩೬ – ೪೯೦

ಜಂಗಮದ್ರೋಹ: ಜಂಗಮದಲ್ಲಿ ಅನೃತ, ಅಸ್ಥಿರವಾಕ್ಯ, ಪಙ್ತಭೇದ, ಉದಾಸೀನ, ನಿರ್ದಯಳ ಮಾಡುವದು.  ೧೯೭ ಗದ್ಯ

ಜಂಗಮದೊಟ್ಟಲು: ನಾಭಿ, ಹೃದಯ ಪರಿಯಂತರ ವ್ಯಾಪಿಸಿದ, ಅವಕಾಶ.  ೬೬ – ೮೭

ತರ್ಕ: ಪ್ರಮಾಣದ ಒಂದುವಿಧ, ವಿಷಯ ಪ್ರತಿಪಾದನೆಯ ಒಂದು ವಿಶಿಷ್ಟ ರೀತಿ, ಇದು ಹದಿನೆಂಟು ವಿಧವೆಂದು ಸಂಪಾದಕನ ವಿಚಾರ  ೨೨೧ ಗದ್ಯ

ತರ್ಕೈಸು: ತಾತ್ವಿಕ ರೀತಿಯಲ್ಲಿ ವಿಚಾರಿಸು, ಲಿಂಗಮುಖೇನ ನಿರ್ಣಯಿಸು.  ೭ – ೧

ತತ್ವ ೫೨: ಅಂತತ್ವಗಳು ೨೫  ೧೭೦ ಗದ್ಯ
ಗುಣಗಳು ೨೫
ಮನ ಮಾಯೆ೨

ತತ್ವಂಗಳು ೨೫: ಭೂತಗಳು ೫  ೧೭೦ ಗದ್ಯ
ಶಬ್ದಾದಿಗಳು ೫
ಜ್ಞಾನೋಂದ್ರಿಯಗಳು ೫
ಕರ್ಮೆಂದ್ರಿಯಗಳು ೫
ಕರಣ ೪೫
ಜೀವ೧

ತನುತ್ರಯ: ಸ್ಥೂಲ ಸೂಕ್ಷ್ಕಕಾರಣ  ೭ – ೧

ತಾನು: ಚಿಲ್ಲಿಂಗ  ೭೬ – ೧೦೩

ತ್ರಯ: ಪರಶಿವನೆ ಲಿಂಗ,ಕ ಪರಶಕ್ತಿಯೆ ಗುರು, ಪರಮನ ಶರಣ  ಬಸವಣ್ಣನೆ ಜಂಗಮ  ೯೯ ಗದ್ಯ

ತ್ರಿಕೂಟದ ಶಿವಾಲಯ:  ಗಂಗಾ, ಯಮುನಾ, ಸರಸ್ವತಿಯರು  ೧೪೬ – ೨೦೪
ಕೂಡುವ ಸ್ಥಳ; ಈಡಾ ಪಿಂಗಳಾ
ಸುಷುಮ್ನ ಕೂಡುವ ಸ್ಥಳ; ತ್ರಯ
ವಿಧ ತನುವಿನಿಂದಾದ ಅಂಗವೆಂಬ ಗುಡಿ

ತ್ರಿಗುಣ: ಸತವ, ರಜ, ತಮ  ೩೦೬ – ೪೦೭

ತ್ರಿದೇವತೆಗಳು: ಬ್ರಹ್ಮ, ವಿಷ್ಣು, ರುದ್ರ; ಸರಸ್ವತಿ ಲಕ್ಷ್ಮಿ ಉಮಾ  ೩೦೬ – ೪೦೭

ತ್ರಿಪುರ ದಹನ ಗೈದವನು: ಬ್ರಹ್ಮಕಪಾಲವ ಚಿವುಟಿ ವಿಷ್ಣು ಕಂಕಾಳ  ೨೪ – ೨೫
ಹಿಡಿದ ಗಣೇಶ್ವರ, ಅಖಂಡಿತ ಗಣೇಶ್ವರ

ತ್ರಿಯಕ್ಷರ: ಅ, ಉ, ಮ; ಬ, ಸ, ವ  ೩೦೪ – ೪೦೩

ತ್ರಿವಿಧ: ೧) ಲಿಂಗ ಜಂಗಮ ಪ್ರಸಾದ.  ೧೪ – ೯
೨) ಅನುಭಾವ, ಶಿವಜ್ಞಾನ, ಸದಾಚಾರ.  ೯೭ – ೧೨೫

ತ್ರಿವಿಧ ಕರ್ಪರ: ಆಚಾರಕರ್ಪರ, ವಿಚಾರಕರ್ಪರ, ಅವಿಚಾರ ಕರ್ಪರ.  ೩೩೫ – ೪೭೭

ತ್ರಿವಿಧ ಕರ್ಮ: ಮನಮಾಯೆಗಳಿಂದ ಹಟ್ಟಿದವು.  ೧೨ ಗದ್ಯ

ತ್ರಿವಿಧ ದಾಸೋಹ: ೧) ಗುರುದಾಸೋಹ, ಲಿಂಗದಾಸೋಹ,  ೫೨ – ೫೭
ಜಂಗಮದಾಸೋಹ
೨) ಉಪಾಧಿಕದಾಸೋಹ, ನಿರುಪಾಧಿಕ  ೧೦೨ – ೧೩೦

ದಾಓಹ, ಸಹಜ ದಾಸೋಹ

ತ್ರಿವಿಧ ನಿಚ್ಛಣಿಕೆ: ಮನನಿಚ್ಚಣಿಕೆ(ಲಿಂಗವರಿಯಲು)  ೨೧೮ – ೨೯೧
ಧನನಿಚ್ಚಣಿಕೆ(ಜಂಗಮವರಿಯಲು)
ತನುನಿಚ್ಚಣಿಕೆ (ಪ್ರಸಾದವರಿಯಲು)

ತ್ರಿವಿಧ ಪಾದೋದಕ: ಗುರುಪಾದೋಕ, ಲಿಂಗಪಾದೋದಕ, ಜಂಗಮಪಾದೋದಕ  ೩೦೮ – ೪೧೪

ತ್ರಿವಿಧಭಕ್ತಿ: ಗುರುಭಕ್ತಿ (ಕರ‍್ತುವೆಂಬ ಪ್ರಣಮವ ಕೂಡಿದುದು) ೧೫೬ ಗದ್ಯ
ಲಿಂಗಭಕ್ತಿ (ಕರ್ಮವೆಂಬ ಪಂಚಾಕ್ಷರಿಯ ಕೂಡಿದುದು)
ಜಂಗಮಭಕ್ತಿ (ಕ್ರಿ ಎಂಬ ಷಡಕ್ಷರಿಯ ಕೂಡಿದುದು)

ತ್ರಿವಿಧಮಲ: ಅಣವ, ಮಾಯಾ, ಕಾರ್ಮಿಕ, (ತ್ರಿವಿಧ ಕರ್ಮ ಗಳಿಂದ ಹುಟ್ಟಿದವು.).  ೩೦೧ ಗದ್ಯ

ತ್ರಿವಿಧಲಿಂಗ: ಇಷ್ಟಲಿಂಗ, ಪ್ರಾಣಲಿಂಗ, ತೃಪ್ತಿಲಿಂಗ.  ೩೦೨ ಗದ್ಯ

ತ್ರಿವಿಧ ಪ್ರಸಾದ: ಗುರುಪ್ರಸಾದ, ಲಿಂಗಪ್ರಸಾದ, ಜಂಗಮಪ್ರಸಾದ  ೩೧೦ – ೪೧೫

ತ್ರೈದಶ ಸ್ತ್ರೀಯರು: ಬೃಹಿತೆ, ಅದಿತಿ, ದಿತಿ, ವಿನುತೆ, ಕದೃವೆ, ಸುವರ್ಣಪ್ರಭೆ, ಕುಮುದಿನಿ, ಪ್ರಭಾದೇವಿ, ಕಾಳದಂಡಿ, ಮೇಘದಂಡಿ, ಕುಸುಮಾಪತಿ, ಧಾತುಪ್ರಭೆ, ಪಾರ್ವಂದಿನಿ  ೧೫೭ ಗದ್ಯ

ದಶಗಣ: ಪ್ರಮಥಗಣ, ವೃಷಭಗಣ, ಶಾಂತ್ಯತೀತಗಣ, ಸಾದ ಶಿವಗಣ, ಈಶ್ವರಗಣ, ಮೃಡಗಣ, ರುದ್ರಗಣ, ಅಭವಗಣ, ಸ್ವಯಂಭುರುದ್ರಸಗಣ, ಅಸಂಖ್ಯಾತ ಮರುಳಗಣ.  ೧೨ ಗದ್ಯ

ದಶಪ್ರಾಣವಾಯು(ದಶವಾಯು): ಪ್ರಾಣ, ಅಪಾನ, ವ್ಯಾನ, ೩೦೬ – ೪೦೭
ಉದಾನ, ಸಮಾನ, ನಾಗ, ಕೂರ್ಮ,  ೨೧೯ ಗದ್ಯ
ಕ್ರಕರ, ದೇವದತ್ತ, ಧನಂಜಯ  ೩೨೦ – ೪೫೯

ದಶವಿಧವ್ರತ: ಧ್ಯಾನ, ಮೌನ, ಅನುಷ್ಠಾನ, ಜಪ, ತಪ, ಸಮಾಧಿ, ಸಂಧ್ಯಾ, ಹೋಮ, ನೇಮ, ನಿತ್ಯ  ೩೦೦ – ೩೯೭

ದಶವಿಧಪಾದೋದಕ: ಪಾದೋದಕ, ಲಿಂಗೋದಕ, ಮಜ್ಜನೋದಕ, ಪುಷ್ಪೋದಕ, ಅವಧಾನೋದಕ, ಆಪ್ಯಾಯನೋದಕ, ಹಸ್ತೋದಕ, ಪರಿನಾಮೋದಕ, ನಿರ್ನಾಮೋದಕ, ನಿತ್ಯೋದಕ  ೩೨೩ – ೪೪೭

ದಳ: ಯೋಗವಿಜ್ಞಾನದಲ್ಲಿಯ ಕಮಲದ ಒಂದು ಪಕಳೆ. ಅದು ಗುಣರೂಪವಿರುತ್ತದೆ.  ೧೬೭ – ೨೨೩

ದೇಗುಲ: ಚಿತ್ಪಿಂಡ  ೬೭ – ೧೦೫

ದೇವ: ಸಲಹುವ ಭಕ್ತನೇ ದೇವ  ೬೨ – ೭೬

ದೇವರು: ಆರಾಧ್ಯವಸ್ತು  ೭೬ – ೧೦೫

ದೇಹವಿಕಾರ: ನೂರನಲವತ್ತೆಂಟು  ೧೩೦ ಗದ್ಯ

ದ್ವಾದಶಾಕ್ಷರ ಮಂತ್ರ: ಬಾಂ ಸಾಂ ವಾಂ ನಾಂ ಮಾಂ
ಶಿಂ ವಾಂ ಯಾಂ ಓಂ ಆಂ ಊಂ  ೯೮ ಗದ್ಯ

ದ್ವಿವಿಧ ಪಂಚಭೂತಗಳು: ಪ್ರಾಕೃತ ಪಂಚಭೂತಗಳು  ೬೨ – ೭೭
ಅಪ್ರಾಕೃತ ಪಂಚಭೂತಗಳು

ದ್ವೈತ: ೧) ಪರಮ ತತ್ವಗಳು ಎರಡು ಎಂಬ ಸೈದ್ಧಾಂತಿಕ ಪ್ರಣಾಲಿ  ೫೫ – ೬೨
೨) ಪರತತ್ವಗಳು ಒಂದರಕಿಂತಲು ಹೆಚ್ಚು ಎಂಬ ಪ್ರಣಾಲಿ  ೧೩೩ ಗದ್ಯ