ನಕಾರ: ಬ್ರಹ್ಮ  ೧೨೦ – ೧೫೫

ನವಖಂಡ: ಮರುತ, ಈಶಾನ್ಯ, ಉತ್ತರ, ಭರತ, ವರುಷ, ತ್ರೇತಾ, ದಕ್ಷಿಣ, ಅಗ್ನಿ  ೩೭೧ ಗದ್ಯ

ನವದ್ವಾರ: ಪಂಚಜ್ಞಾನೇಂದ್ರಿಯಗಳು, ಅಂತಃಕರಣ ಚತುಷ್ಟಯ  ೯೦ – ೧೧೯

ನವನಾಳ: ಪಂಚಜ್ಞಾನೇಂದ್ರಿಯಗಳು, ಅಂತಃಕರಣದ ಚತುಷ್ಟಯ  ೫೭ – ೬೩

ನವರಂಗ: ೧) ಧ್ಯಾನ ಸ್ಥಾನ – ಹೃದಯ ಇಲ್ಲವೆ ಸಹಸ್ರಾರ  ೮೯ – ೧೧೫
೨) ಗರ್ಭಗುಡಿಯ ಮುಂದಿನ ವಿಶಾಲವಾದ ಕೋಣೆ  ೮೮ ಗದ್ಯ

ನವಲಿಂಗ: ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ, ಇಷ್ಟಲಿಂಗ, ಪ್ರಾಣಲಿಂಗ, ಭಾವಲಿಂಗ  ೧೫ – ೧೪

ನವಶೈವಾಕ್ಷರಗಳು: ಅ, ಉ, ಮ, ಓಂ, ನ, ಮ, ಶಿ, ವಾ,ಯ  ೩೦೧ ಗದ್ಯ

ನಾದ: ಪ್ರಣವಗಳ ಮುಲ ರೂಪು  ೭೮ ಗದ್ಯ

ನಾಮ: ಹೆಸರು, ಶಬ್ದ  ೭೫ ಗದ್ಯ

ನಾಲ್ಕುದ್ವೀಪ:  ತನು ಒಂದು ದ್ವೀಪ, ಮನ ಒಂದು ದ್ವೀಪ, ಅಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ  ೬೪ – ೮೦

ನಾಲ್ಕು ಮಥನ: ಉತ್ತರ ಖಂಡಣೆಯೆಂಬ ವೇದ, ವೈಖರಿಯೆಂಬ ಶಾಸ್ತರ‍್ರ, ಪಂಚಾಕ್ಷರಿ ಕಲ್ಪ, ಬ್ರಹ್ಮಾಂಡ ಪುರಾಣ  ೨೨೫ ಗದ್ಯ

ನಾಲ್ಕು ಯೋನಿ: ಅಂಡಜ, ಶ್ವೇತಜ, ಉದ್ಬಿಜ, ಜರಾಯುಜ.  ೧೫೦ – ೨೧೨

ನಿಚ್ಚಣಿಗೆ: ನೂರೊಂದುಸ್ಥಲಗಳೇ ಆದ ಉಪಕರಣ  ೬೪ ಗದ್ಯ
ನಿಜಹಂಕಾರ: ತೂರ್ಯಾವಸ್ಥೆಯಿಂದ ಅರಿವು ಮರವೆಂಬ ಮನ ಸಂಕಲ್ಪ ಹುಟ್ಟಲು ಜನಿತ ಮಾದುದು  ೧೧೪ ಗದ್ಯ

ನಿರಾಕುಳ: ಮನದ ಕಳವಳರಹಿತತೆ  ೮೬ – ೧೧೪

ನಿರಾಭಾರಿ: ಅಹಂ, ಸೋಹಂ ವಿರಹಿತನು  ೮೬ – ೧೧೪

ನಿರಾಳವಾಗು: ಹೃದಯ ಬಾವಿಯ ತಡಿಯ ಬಾಳೆ ಬೀಗಿ  ೧೨೯ – ೧೭೫
ಸರ್ಪನೇಳಲು ಒದಗುವ ಸ್ಥಿತಿ ಸಂಭವಿಸು

ನಿಶ್ಯಬ್ದ: ವಸ್ತು, ಪರಶಿವ  ೮೬ – ೧೧೪

ನಿಷ್ಕಲರು: ಆಣವಮಲವೊಂದೆಯಿರುವ ಆತ್ಮ  ೧೭೩ ಗದ್ಯ

ನೀರು: ಪರಬ್ರಹ್ಮ  ೨೩ – ೨೫

ನೂರೆಂದು ಸ್ಥಲಗಳು: ೧೦೪ – ೧೩೧

ನೂರೊಂದು ಕೊಂಬೆಅಂಗಸ್ಥಲ: ೪೪

ಭಕ್ತಸ್ಥಲ:

ಪಿಂಡಸ್ಥಲ  ಪಿಂಡಜ್ಞಾನಸ್ಥಲ  ಸಂಸಾರಹೇಯಸ್ಥಲ  ಗುರುಕಾರುಣ್ಯಸ್ಥಲ  ಲಿಂಗಧಾರಣಸ್ಥಲ  ರುದ್ರಾಕ್ಷಧಾರಣಸ್ಥಲ  ಪಂಚಾಕ್ಷರಿಜಪಸ್ಥಲ  ಭಕ್ತಮಾರ್ಗಕ್ರಿಯಾಸ್ಥಲ  ಉಭಯಸ್ಥಲ  ತ್ರಿವಿಧಸಂಪತ್ತಿಸ್ಥಲ  ಚತುರ್ವಿಧಸಾರಾಯಸ್ಥಲ  ಉಪಾಧಿಮಾಟಸ್ಥಲ  ನಿರುಪಾಧಿಮಟಸ್ಥಲ  ಸಹಜಮಾಟಸ್ಥಲ

ಮಾಹೇಶ್ವರಸ್ಥಲ:

ಮಾಹೇಶ್ವರ ಪ್ರಶಂಸಾಸ್ಥಲ  ಲಿಂಗನಿಷ್ಠಾಸ್ಥಲ  ಪೂರ್ವಾಶ್ರಯನಿರಸನಸ್ಥಲ  ಸರ್ವಾದ್ವೈತನಿರಸನಸ್ಥಲ  ಆವ್ಹಾನನಿರಸನಸ್ಥಲ  ಅಷ್ಟಮೂರ್ತಿನಿರಸನಸ್ಥಲ  ಸರ್ವಗತತ್ವನಿರಸನಸ್ಥಲ  ಶಿಜಗನ್ಮಯಸ್ಥಲ  ಭಕ್ತದೇಹಿಕಲಿಂಗಸ್ಥಲ

ಪ್ರಸಾದಿಸ್ಥಲ:

ಪ್ರಸಾದಿಸ್ಥಲ  ಗುರುಮಹಾತ್ಮಸ್ಥಲ  ಲಿಂಗಮಾಹಾತ್ಮ್ಯಸ್ಥಲ  ಜಂಗಮಮಹಾತ್ಮಸ್ಥಲ  ಭಕ್ತಮಹಾತ್ಮ್ಯಸ್ಥಲ  ಶರಣಮಹತ್ವಸ್ಥಲ  ಪ್ರಸಾದಮಹತ್ವಸ್ಥಲ

ಪ್ರಾಣಲಿಂಗಿಸ್ಥಲ:

ಪ್ರಾಣಲಿಂಗಿಸ್ಥಲ  [ಪ್ರಾಣಲಿಂಗಾರ್ಚನಾಸ್ಥಲ  ಶಿವಯೋಗಸಮಾಧಿಸ್ಥಲ ಅಂಗಲಿಂಗಿಸ್ಥಲ

ಶರಣಸ್ಥಲ: ಶರಣಸ್ಥಲ ತಾಮಸನಿರಸನಸ್ಥಲ  ನಿರ್ದೇಹಸ್ಥಲ  ಶೀಲಸಂಪಾದನಸ್ಥಲ.

ಐಕ್ಯಸ್ಥಲ:

ಐಕ್ಯಸ್ಥಲ ಸರ್ವಾಚಾರಸಂಪತ್ತಿಸ್ಥಲ  ಏಕಭಾಜನಸ್ಥಲ  ಸಹಭೋಜನಸ್ಥಲ

ಲಿಂಗಸ್ಥಲ: ೫೭

ಭಕ್ತಸ್ಥಲ:

ದೀಕ್ಷಾಗುರುಸ್ಥಲ  ಶಿಕ್ಷಾಗುರುಸ್ಥಲ  ಜ್ಞಾನಗುರುಸ್ಥಲ  ಕ್ರಿಯಾಲಿಂಗಸ್ಥಲ  ಭಾವಲಿಂಗಸ್ಥಲ  ಜ್ಞಾನಲಿಂಗಸ್ಥಲ  ಸ್ವಯಲಿಂಗಸ್ಥಲ  ಚಿರಲಿಂಗಸ್ಥಲ  ಪರಲಿಂಗಸ್ಥಲ

ಮಾಹೇಶ್ವರಸ್ಥಲ:

ಕ್ರಿಯಾಗಮಸ್ಥಲ  ಭಾವಾಗಮಸ್ಥಲ  ಜ್ಞಾನಾಗಮಸ್ಥಲ  ಸಕಾಯಸ್ಥಲ  ಅಕಾಯಸ್ಥಲ  ಪರಕಾಯಸ್ಥಲ  ಧರ್ಮಾಚಾರಗಸ್ಥಲ  ಭಾವಾಚಾರಸ್ಥಲ  ಜ್ಞಾನಾಚಾರಸ್ಥಲ

ಪ್ರಸಾದಿಸ್ಥಲ

ಕಾಯಾನುಗ್ರಹಸ್ಥಲ  ಇಂದ್ರಿಯಾನುಗ್ರಹಸ್ಥಲ  ಪ್ರಾಣಾನುಗ್ರಹಸ್ಥಲ  ಕಾಯಾರ್ಪಿತಸ್ಥಲ  ಕರಣಾರ್ಪಿತಸ್ಥಲ  ಶಿಷ್ಯಸ್ಥಲ  ಶುಶ್ರೂಷಸ್ಥಲ  ಸೇವ್ಯಸ್ಥಲ

ಪ್ರಾಣಲಿಂಗಸ್ಥಲ:

ಆತ್ಮಸ್ಥಲ  ಅಂತರಾತ್ಮಸ್ಥಲ  ಪರಮಾತ್ಮಸ್ಥಲ  ನಿರ್ದೇಹಾಗಮಸ್ಥಲ  ನಿರ್ಭಾವಾಗಮಸ್ಥಲ  ನಷ್ಟಾಗಮಸ್ಥಲ  ಆದಿಪ್ರಸಾದಿಸ್ಥಲ  ಅಂತ್ಯಪ್ರಸಾದಿಸ್ಥಲ

ಶರಣಸ್ಥಲ:

ದೀಕ್ಷಾಪಾದೋದಕಸ್ಥಲ  ಶಿಕ್ಷಾಪಾದೋದಕಸ್ಥಲ  ಜ್ಞಾನಪದೋದಕಸ್ಥಲ  ಕ್ರಿಯಾನಿಷ್ಪತ್ತಿಸ್ಥಲ  ಭಾವನಿಷ್ಪತ್ತಿಸ್ಥಲ  ಜ್ಞಾನನಿಷ್ಪತ್ತಿಸ್ಥಲ  ಪಿಂಡಾಕಾಶಸ್ಥಲ  ಬಿಂದ್ವಾಕಾಶಸ್ಥಲ  ಮಹಾಕಾಶಸ್ಥಲ  ಕ್ರಿಯಾಪ್ರಕಾಶನಸ್ಥಲ  ಭಾವಪ್ರಕಾಶನಸ್ಥಲ  ಜ್ಞಾನಪ್ರಕಾಶನಸ್ಥಲ

ಐಕ್ಯಸ್ಥಲ:

ಸ್ವೀಕೃತಪ್ರಸಾದಿಸ್ಥಲ  ಶಿಷ್ಟೋದನಸ್ಥಲ  ಚರಾಚರಲಯಸ್ಥಲ  ಭಾಂಡಸ್ಥಲ  ಭಾಜನಸ್ಥಲ  ಅಂಗಾವಲೇಪಸ್ಥಲ  ಸ್ವಪರಾಜ್ಞನಸ್ಥಲ  ಭಾವಾಭಾವಲಯಸ್ಥಲ  ಜ್ಞಾನಶೂನ್ಯಸ್ಥಲ

ನೂರೊಂದುಸ್ಥಲ  : ೮೭ ಗದ್ಯ

ಅಂಗಸ್ಥಲ – ೪೪, ಲಿಂಗಸ್ಥಲ – ೫೭

ಪರಶಿವತತ್ವಗಳ: ೧೮ ಸ್ವಾಮಿಗಳು  ೯೯ ಗದ್ಯ
೧೮ ಶಕ್ತಿಗಳು

ಪರಶಿವಲೋಕಗಳು: ಚಿದ್ಬ್ರಹ್ಮಾಂಡ, ಪ್ರಕಾಶ ಬ್ರಹ್ಮಾಂಡ, ಅನು  ಭಾವ ಬ್ರಹ್ಮಾಂಡ, ಭಕ್ತಿಯೆಂಬ ಹಸೆ, ಶಕ್ತಿಯೆಂಬ ಹಸೆ, ಚೈತ್ಯವೆಂಬ ಹಸೆ, ಅನುಭಾವ ರಸವಜ್ರ ಮಹಾಮೇರು ೧೨ ಗದ್ಯ

ಪಿಶಾಚಗ್ರಹಜಾತಿ: ಕಾಳರಾಶಿ, ಕರುಣರಾಶಿ, ಭೂತರಾಶಿ  ೧೫೮ ಗದ್ಯ

ಪೂರ್ವಾಶ್ರಯ: ಪ್ರಾಕೃತತೆ, ತತಪ್ತತೆ, ಅದೀಕ್ಷಿತಸ್ಥಿತಿ.  ೯೮ ಗದ್ಯ

ಪಂಚತಂಡದವರು: ನಿಷ್ಕಳರು, ಪ್ರಳಯಾಕಳರು, ವಿಜ್ಞಾನಕಲರು, ಸಕಲರು, ಸಕಲಾಕರು  ೩೧೫ ಗದ್ಯ

ಪಂಚತತ್ವ: ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ  ೩೧೫ ಗದ್ಯ

ಪಂಚಬ್ರಹ್ಮ: ಈಶಾನ, ಅಘೋರ, ತತ್ಪುರುಷ, ವಾಮದೇವ, ಸದ್ಯೋಜಾತ  ೮೪ – ೧೧೪

ಪಂಚಾಕ್ಷರ: ನಮ ಶಿವಾಯ  ೨೮೪ – ೩೮೭

ಪಂಚವರ್ಣಾಶ್ರಮ: ಶುಕ್ಲ, ಶೋಣಿತ, ಅಮೇಧ್ಯ, ಮಜ್ಜೆ, ಶ್ಲೇಷ್ಮ  ೩೦೬ – ೪೦೭

ಪಂಚವಾಯು: ಪ್ರಾಣ, ಅಪಾನ, ವ್ಯಾನ, ಉದಾನ, ಸಮಾನ  ೭೦ –

ಪಂಚವಿಂಶತಿತತ್ವ: ೧) ಪೃಥ್ವಿಯಿಂದ ಈಶ್ವರ ಪರಿಯಂತ  ೧೫೧ ಗದ್ಯ
೨) ತನುತ್ರಯ, ಮಲತ್ರಯ, ಕರ್ಮತ್ರಯ
ಭಾವತ್ರಯ, ಗುಣತ್ರಯ, ಅಂಹಕಾರ
ತ್ರಯ, ವಿಷಯತ್ರಯ, ಪದತ್ರಯ,
ಲೋಕತ್ರಯ, ವೇದತ್ರಯ    ೩೩೯ ಗದ್ಯ

ಪಂಚಶಕ್ತಿಗಳು: ಪರ, ನಾದ, ಬಿಂದು, ಕಳೆ, ಸ್ವರಿ,  ೨೦ ಗದ್ಯ

ಪಂಚಶಾಖೆ: ನಕಾರವೆ ಬ್ರಹ್ಮ, ಮಕಾರವೆ ವಿಷ್ಣು, ಶಿಕಾರವೆ ರುದ್ರ, ವಕಾರನೆ ಈಶ್ವರ, ಮಕಾರವೆ ಸದಾಶಿವ  ೧೨೦ – ೧೫೫

ಪಂಚಸದಾಚಾರ: ಗುರುದಾಸೋಹ, ಲಿಂಗದಾಸೋಹ, ಜಂಗಮ ದಾಸೋಹ, ಪಾದೋದಕದಾಸೋಹ, ಪ್ರಸಾದದಾಸೋಹ  ೯೦ – ೧೨೦

ಪಂಚಸೂತಕ: ಜಾತಿಸೂತಕ, ಪ್ರೇತಸೂತಕ, ಉಚ್ಛಿಷ್ಟ ಸೂತಕ, ಜನನಸೂತಕ, ರಜಸ್ಸೂತಕ  ೩೩೦ – ೪೨

ಪ್ರಣಮತ್ರಯ: ಬ ಸ ವ  ೩೫ – ೪೨

ಪ್ರಮಥಗಣರು: ಆದಿನಂದಿಕೇಶ್ವರ, ಆದಿಭದ್ರ, ಆದಿಭೃಂಗೀಶ್ವರ, ಆದಿಶಂಕರ, ಆದಿವೀರಭದ್ರ, ಆದಿರುದ್ರ, ಆಧಿಶಶಿಧರ  ೨೨ – ೨೫

ಪ್ರಮಾಣತ್ರಯ: ಶ್ರುತ, ದೃಷ್ಟ, ಅನುಮಾನ  ೧೪೬ ಗದ್ಯ

ಪ್ರಮಾಣ: ಶ್ರುತ, ಗುರು, ಸ್ವಾನುಭಾವ  ೪೪ ಗದ್ಯ

ಪ್ರಸಾದ: ಗುರುಲಿಂಗ ಜಂಗಮ ಆರೋಗಣೆ ಮಾಡಿಮಿಕ್ಕುದು  ೬೧ – ೭೩

ಪಸಾದಿ: ಘನವಪ್ಪ ಲಿಂಗವನು ಒಂದನುವಿನಲ್ಲಿ ತಂದಿರಿಸಿ ಘನವಪ್ಪ ಬೋನವನುಲಿಂಗಕ್ಕೆ ಆರೋಗಣೆ ಮಾಡಿ ಮಿಕ್ಕುದಕೊಳ ಬಲ್ಲವ  ೬೧ – ೭೩

ಪ್ರಾಣಲಿಂಗ: ಗುರುಲಿಂಗ ಜಂಗಮ ಪಾದೋದಕ ಪ್ರಸಾದವ ಕೊಟ್ಟುಕೊಂಬ ನಿಷ್ಠಾತ್ಮಕತೆ ಲಿಂಗದಲ್ಲಿನೆಲೆನಿಲ್ಲಲು ಆ ಲಿಂಗವು ಪ್ರಾಣಲಿಂಗವಾಯಿತು  ೬೩ – ೭೯

ಪ್ರಾಣಪದ: ಶರಣಸತಿ ಲಿಂಗಪತಿ ಎಂಬುದು  ೯೦ – ೧೨೦

ಪ್ರಾಣ: ಗುರುಲಿಂಗ ಜಂಗಮಗಳ ಪಾದೋದಕ ಪ್ರಸಾದವ ಕೊಟ್ಟು ಕೊಂಬುವ ನಿಷ್ಠಾತ್ಮಕತೆ  ೬೩ – ೭೯

ಬಹಿರ್ಗತ ಚಕ್ರಗಳು: ನಾದಚಕ್ರ, ಬಿಂದುಚಕ್ರ, ಕರ್ಮಚಕ್ರ, ಕಾಲಚಕ್ರ, ಪ್ರಳಯಚಕ್ರ  ೩೬೧ – ೫೨೮

ಬಹಿರಂಗದಷ್ಟ ಮದಗಳು: ಕುಲಮದ, ಛಲಮದ, ಯೌವನ ಮದ, ವಿದ್ಯಾಮದ, ಧನಮದ, ರೂಪಮದ, ರಾಜ್ಯಮದ, ತಪೋಮದ.  ೧೨೩ ಗದ್ಯ

ಬುದ್ಧೀಂದಿಯಗಳು: ನೇತ್ರ, ಶ್ರೋತ್ರ, ತ್ವಕ್ಕು, ಜಿಹ್ವೆ, ಘ್ರಾಣ  ೪೯ – ೫೩

ಬ್ರಹ್ಮ ಪಂಚಕ:  ೧) ಅಘೋರ, ತತ್ಪುರುಷ, ವಾಮದೇವ, ಈಶಾನ, ಸದ್ಯೋಜಾತ  ೪೯ – ೫೩
೨) ಸದಾಶಿವ, ಈಶ್ವರ, ಮಹೇಶ್ವರ, ಬ್ರಹ್ಮ, ವಿಷ್ಣು.  ೪೯ – ೫೩

ಭವಿತ್ರಯ:  ತನುಭವಿ, ಮನಭವಿ, ಧನಭವಿ  ೩೩೦ – ೪೬೩

ಮಹಾಪ್ರಸಾದಿ: ಪಂಚಜ್ಞಾನೇಂದ್ರಿಯ, ಅಂತಃಕರಣಗಳು, ಮುಟ್ಟದಂತೆ ಲಿಂಗಾರ್ಪಿತ ಮಾಡುವವ  ೬೩ – ೭೮

ಮಹಾಶರಣ: ಮಹಾಘನದಲ್ಲಿಯ ಚಿಚ್ಛಕ್ತಿ

ಮಹಾಶಿವತತ್ವಗಳು: ಈಶ್ವರ, ಬ್ರಹ್ಮ, ವಿಷ್ಣು, ರುದ್ರ, ಸದಾಶಿವ, ಶಾಂತ್ಯಾತೀತ, ಈಶಾನ, ಪರಶಿವ  ೧೫೧ ಗದ್ಯ

ಮಕಾರ: ವಿಷ್ಣು  ೧೨೦ – ೧೫೫

ಮಹಾಮಾಯೆಮ: ಮನದಪುಣ್ಯ ರೂಪವಿಡಿದು ಗಂಡಾಗಿ ಅನಾದಿಯೆಂಬ ನಾಮಧರಿಸಿ ಮಾಹಾಮಾಯೆನಿಸಿ ಕೊಂಡಿತು  ೧೧೪ ಗದ್ಯ

ಮಹಾಪ್ರಣಮ:  ವಚನ ೪೧ ನೋಡಿ  ೩೨ – ೪೧

ಮಲತ್ರಯ: ಅಣವ, ಮಾಯಾ, ಕಾರ್ಮಿಕ  ೭ – ೧

ಮೂರಕ್ಷರ: ಅ, ಉ, ಮ  ೨೧೯ – ೨೯೨
ಮನದಿಂದ ಅ, ಭಾವದಿಂದ ಉ, ಜ್ಞಾನದಿಂದ ಮ
ಕಾರಗಳುತ್ಪತ್ತಿ

ಮೂರು ಕವೆ: ಅಂಗ, ಲಿಂಗ, ಸಂಗ  ೧೦೪ – ೧೩೧

ಮೂರುಪುರ: ಬೆಳ್ಳಿ, ಚಿನ್ನ, ರತ್ನ  ೧೭೪

ಮೂರ್ತಿತ್ರಿವಿಧ: ಸ್ಥೂಲ, ಸೂಕ್ಷ್ಮ, ಕಾರಣ  ೨೬೫ – ೩೫೫

ಮೂಲಜೀವ: ಪರಮೇಶ್ವರ  ೧೩೪ ಗದ್ಯ

ಮೂಲಮಂತ್ರ: ಓಂಕಾರ  ೨೦೭ ಗದ್ಯ

ಮೂಲಪ್ರಣಮ: ವಚನ ೪೨ನ್ನುನೋಡಿ  ೩೪ – ೪೨

ಮೂಲಷಡಾಕ್ಷರಿ: ಬ, ಸ, ವ, ಅ, ಉ, ಮಕಾರಗಳು  ೨೦೭ ಗದ್ಯ

ಮೂವತ್ತಾರುಕವೆ: ಹದಿನೆಂಟು ಲಿಂಗ, ಹದಿನೆಂಟು ಅಂಗ  ೧೦೪ – ೧೩೧

ಮೂವತ್ತಾರುತತ್ವ: ಐದು ಭೂತಾದಿಗಳು  ೧೩೦ ಗದ್ಯ
ಐದು ಶಬ್ದಾದಿಗಳು
ಐದು ಜ್ಞಾನೇಂದ್ರಿಯಗಳು
ಐದು ಕರ್ಮೇಂದ್ರಿಯಗಳು
ನಾಲ್ಕುಕರಣಗಳು
ಐದು ಸಾದಾಖ್ಯಗಳು
ಆರು ಶಕ್ತಿಗಳು

ಮೂವತ್ತಾರುಮುಲಪ್ರಣಮ: ವಚನ ೪೦ ನೋಡಿ  ೩೧ – ೪೦

ಮೂವರು: ಬ್ರಹ್ಮ, ವಿಷ್ಣು, ರುದ್ರ, ಶ್ರುತ, ದೃಷ್ಟ, ಅನುಮಾನ  ೧೧೩ – ೪೧೨

ಯಕಾರ: ಸದಾಶಿವ  ೧೨೦ – ೧೫೫

ಯೋಗ: ದೇಹದ ರಹಸ್ಯ ಶಕ್ತಿಯನರಿವುದು, ಜೀವಭಾವ ಇಲ್ಲದಾಗುವುದು  ೬೪ – ೮೧

ಯೋಗವಟ್ಟಿಗೆ: ಲಾಕುಳ  ೮೪ – ೧೧೪

ಲಿಂಗ: ನಮಃಶಿವಾಯ  ೩೦ – ೩೭

ಲಿಂಗ: ವಸ್ತು, ಪದಾರ್ಥ, ಪತಿ  ೭೫ ಗದ್ಯ

ಲಿಂಗ: ಸದ್ವಸ್ತು, ಪರಬ್ರಹ್ಮವಸ್ತು  ೭೬ – ೧೦೪

ಲಿಂಗಧಾರಣಸ್ಥಲಗಳು: ೬ – ಕಕ್ಷೆ, ಕರಸ್ಥಲ, ಕಂಠ, ಉರಸೆಜ್ಜೆ, ಉತ್ತಮಾಂಗ, ಅಮಳೋಕ್ಯ  ೨೨೮ – ೩೦೧

ಲಿಂಗದ್ರೋಹ: ಲಿಂಗದಲ್ಲಿ ತ್ರಿಕಾಲಪೂಜೆ ಪ್ರೀತಿ ಪ್ರೇಮ ಮೋಹವಿಲ್ಲದಿರುವುದು  ೧೯೭ ಗದ್ಯ

ಲಿಂಗಪ್ರಸಾದಿ: ಜ್ಞಾನಪೂರ್ವಕ ಸ್ವಸ್ವರೂಪವನರಿದಿರುವವ  ೧೦೫ – ೧೩೩

ಲಿಂಗಮಯಕಾಯವಾಗುವ ರೀತಿ: ಆಚಾರ ಕ್ರಮದಲ್ಲಿ ವಿಚಾರವ ಕಾಣಬಲ್ಲಡೆ ಆ ಕಾಯಲಿಂಗ ಮಯವಹುದು  ೧೨೯ – ೧೭೩

ಲಿಂಗಸ್ವರೂಪದೊಟ್ಟಿಲು: ಮುಖ, ಭ್ರೂಮಧ್ಯ ಉನಮನೀಪರ‍್ಯಂತ ವ್ಯಾಪಿಸಿದ ಅವಕಾಶ  ೬೬ – ೮೭

ವಕಾರ: ಈಶ್ವರ  ೧೨೦ – ೧೫೫

ವರ್ಣಾಶ್ರಮದುದಯ: ಓಂಕಾರದಿಂದಾಕಾಶ, ಅದರಿಂದುದಯ ಆಶ್ರಮ  ೨೧೯ – ೨೯೨

ವಾಙ್ಮನಕ್ಕೆಗೋಚರ: ಐಂದ್ರಿಯಜ್ಞಾನಕ್ಕೆ ನಿಲುಕದ  ೮೬ – ೧೧೪

ವಾಯುನಿಂದಸ್ಥಾನ: ತ್ರಿಕೂಟ, ಭ್ರೂಮಧ್ಯ  ೧೮೦ – ೨೪೨

ವೀರಮಾಹೇಶ್ವರತ್ವ: ವೀರಶೈವತ್ವ  ೧೯೬ ಗದ್ಯ

ವೇದ್ಯರು: ಷಡುದೇವತೆಗಳ ಕೆಳಗಣ ಪಡೆಗಳು  ೧೩೯ ಗದ್ಯ

ವೇದಾಂತಿ: ಪರಬ್ರಹ್ಮದಲ್ಲಿಯ ಅಹಂಕಾರ ಜಾಗ್ರತಿಯಿಂದ ಸೃಷ್ಟಿ ಎಂಬ ವಾದಿ  ೭ – ೧

ಶಕ್ತಿಪೀಠ: ಬಸವಣ್ಣ, ಚಿಚ್ಛಕ್ತಿ  ೩೫ ಗದ್ಯ

ಶರಣ: ಸಕಲಚೈತನ್ಯಾತ್ಮಕಚಿಚ್ಛಕ್ತಿ  ೨೮ – ೩೨

: ಚಿಚ್ಛಕ್ತಿ, ಬಸವಣ್ಣ,  ೧೩ ಗದ್ಯ
: ಮಹಾಘನಲಿಂಗದ ನಿಜಘನವೆಂಬ ಚಿದ್ಘನಾತ್ಮಕನು,  ೧೨೦ – ೧೫೫
: ಚೈತನ್ಯಾತ್ಮಕನೆ ಚಿತ್‌ಸ್ವರೂಪ ಎಂದರಿದವನು,  ೧೧೨ – ೧೪೦
: ಆದಿ ಅನಾದಿ ಸಂಗ ಜನಿತನಲ್ಲ ನಾದಬಿಂದು ಕಳೆಗಳು  ೧೧೨ – ೧೪೦
ಹುಟ್ಟಿದಮುನ್ನಲ್ಲಿಂದತ್ತ ಇದ್ದವನ್ನು

ಶಿಕಾರ: ರುದ್ರ  ೧೨೦ – ೧೫೫

ಶಿಖಾಗ್ರ: ಶಿಖಾಚಕ್ರದ ಮೇಲ್ಭಾಗ  ೮೭ ಗದ್ಯ

ಶೇಷ: ಗುರುಲಿಂಗ ಜಂಗಮಕ್ಕರ್ಪಿಸಿ ಉಳಿದ ಪ್ರಸಾದ  ೭೪ – ೧೦೦

ಶೈವಷಡುಸ್ಥಲದವರು: ಸದ್ಯೋಜಾತ, ವಾಮದೇವ, ಅಘೋರ, ತತ್ಪುರುಷ, ಈಶಾನ್ಯ, ರುದ್ರರು  ೨೨೫ ಗದ್ಯ

ಶ್ರೀಶಯಲದುದಕೆ: ಬ್ರಹ್ಮರಂಧ್ರದ ಚಿದ್‌ರಸ  ೧೮೧ – ೨೪೪

ಶ್ರುತಿ: ನಿಗಮಾಗಮಗಳು, ವೇದಾಗಮೋಪನಿಷತ್ತುಗಳು  ೧೭೩ ಗದ್ಯ

ಷಟ್ಅಧಿದೇವತೆಗಳು: ದಾಕ್ಷಾಯಿಣೆಯೆಂಬ ಬ್ರಹ್ಮ, ಬ್ರಹ್ಮನೆಂಬ ವಿಷ್ಣು, ವಿಷ್ಣುವೆಂಬ ಮಹೇಶ್ವರ, ಮಹೇಶ್ವರನೆಂಬ ಈಶ್ವರ, ಸದ್ಗುರು ವೆಂಬ ಸದಾಶಿವ, ಶ್ರೀಗುರುವೆಂಬ ಪರಮೇಶ  ೩೬೩ ಗದ್ಯ

ಷಟ್ಕಮಲ: ಚತುರ್ದಳ, ಷಡುದಳ, ದ್ವಾದಶದಳ, ಘೋಡಶ ದಳ, ದ್ವಿದಳ, ಏಕದಳ  ೩೬೩ಗದ್ಯ

ಷಟ್ಚಕ್ರಗಳು: ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞಾ  ೩೬೨ – ೫೪೦

ಷಟ್ಸ್ಥಲಗಳು: ಘ್ರಾಣ, ಜಿಹ್ವೆ, ನೇತ್ರ, ತ್ವಕ್ಕು, ಶೋತ್ರ, ಹೃದಯ  ೩೬ ಗದ್ಯ

ಷಟ್ಸ್ಥಲರು: ಭಕ್ತಿಸ್ಥಲ ಬ್ರಹ್ಮಗೆ, ಮಹೇಶ್ವರಸ್ಥಲ ವಿಷ್ಣುಗೆ, ಪ್ರಸಾದಿಸ್ಥಲ ರುದ್ರಗೆ, ಪ್ರಾಣಲಿಂಗಸ್ಥಲ ಈಶ್ವರಗೆ, ಶರಣಸ್ಥಲ, ಸದಾಶಿವಗೆ, ಐಕ್ಯಸ್ಥಲ ಪರಮೇಶ್ವರಗೆ ೨೨೯ – ೩೦೧

ಷಡಾಚಾರ್ಯರು: ನಂದೀಶ್ವರ, ಭೃಂಗೀಶ್ವರ, ವೀರೇಶ್ವರ, ಘಂಟಾಕರ್ಣ, ಗಜಕರ್ಣ, ಶಂಕುಕರ್ಣ  ೯೯ ಗದ್ಯ

ಷಡಾಧಾರಚಕ್ರ: ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ  ೧೯ – ೨೦

ಷಡಾತ್ಮರುಗಳು: ಜ್ಞಾನಾತ್ಮ, ಶುದ್ಧಾತ್ಮ, ನಿರ‍್ಮಲಾತ್ಮ, ಪರ ಮಾತ್ಮ, ಅಂತರಾತ್ಮ, ಜೀವಾತ್ಮ  ೧೨೦ – ೧೫೭

ಷಡಾತ್ಮರುತ್ಪತ್ತಿ: ಭೂತಾತ್ಮ ಮಹಾತ್ಮಂಗಳಿಂದ ಪುಟ್ಟಿದವು  ೧೨೦ – ೧೫೭

ಷಡ್ಲಿಂಗಗಳು:  ಆಚಾರ, ಗುರು, ಶಿವ, ಜಂಗಮ, ಪ್ರಸಾದ, ಮಹಾಲಿಂಗಗಳು  ೩೫ – ೪೩

ಷಡುಗಣೇಶ್ವರರು: ತ್ರಿಯಂಬಕ, ಗಂಗಾಪತಿ, ಅಂಬಿಕಾಪತಿ, ಉಮಾಪತಿ, ಕೈಲಾಸಪತಿ, ಪಶುಪತಿ  ೯೯ ಗದ್ಯ

ಷಡುದರುಶನ:  ಸಾಂಖ್ಯ, ಯೋಗ, ನ್ಯಾಯ, ವೈಶೇಷಿಕ, ಪೂರ್ವ ಮೀಮಾಂಸ, ಉತ್ತರಮೀಮಾಂಡ  ೪೩ ಗದ್ಯ

ಷಡುದರುಶನದವರು: ಷಡುದೇವತೆಗಳು – ಸದ್ಯೋಜಾತ, ವಾಮದೇವ, ಈಶಾನ, ಅಘೋರ, ತತ್ಪುರುಷ, ರುದ್ರ  ೨೨೫ ಗದ್ಯ

ಷಡುದೇವತೆಗಳು: ತ್ರಿವಿಧಮಲದಿಂದ ಹುಟ್ಟಿದವರು,   ೧೨ ಗದ್ಯ
: ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಪರಮೇಶ್ವರ  ೧೪೪ – ೧೯೬

ಷಡುವಿಧಲಿಂಗ: ಆಚಾರಲಿಂಗ, ಗುರುಲಿಂಗ, ಶಿವಲಿಂಗ, ಜಂಗಮಲಿಂಗ, ಪ್ರಸಾದಲಿಂಗ, ಮಹಾಲಿಂಗ  ೩೦೨ ಗದ್ಯ

ಷಡುವರ್ಣಗಳು: ಪೀತ, ಹರಿತ, ಕೃಷ್ಣ, ಶಾಮ, ಶ್ವೇತ, ಮಾಣಿಕ್ಯ  ೩೬೩ ಗದ್ಯ

ಷಡುಸ್ಥಲಬ್ರಹ್ಮಿಗಳು: ಲಿಂಗಾಂಗಳಿಂದುದಯಿಸಿದವರು, ಶರಣನಮಹಾಬೆಳಗಿನಿಂದುದಯಿಸಿದವರು  ೯೧ ಗದ್ಯ
: ಅಭವ, ರುದ್ರ, ಮೃಡ, ಈಶ್ವರ, ಸದಾಶಿವ, ಶಾಂತ್ಯಾತೀತ

ಷಡುಸ್ಥಲಬ್ರಹ್ಮಿಗಳಿಗೆ ಷಡುಶಕ್ತಿಯರು:  ೨೧ ಗದ್ಯ
ಅಭವಂಗೆ ದಾರುಕಶಕ್ತಿ, ರುದ್ರಂಗೆ ರುದ್ರಕಶಕ್ತಿ, ಮೃಡಂಗೆ ಕರ್ಣಿಕಶಕ್ತಿ, ಈಶ್ವರಂಗೆ ಗೋಳಕಶಕ್ತಿ, ಸದಾಶಿವಂಗೆ ಮುಕ್ತಕಶಕ್ತಿ, ಶಾಂತ್ಯಾತೀತಂಗೆ ಮೂಲಕಶಕ್ತಿ  ೨೧ ಗದ್ಯ

ಷಡ್ಭೂತ: ಪೃಥ್ವಿ, ಅಪ್ಪು, ತೇಜ, ವಾಯು, ಆಕಾಶ, ಮನ  ೩೦ ಗದ್ಯ

ಷಡುಬ್ರಹ್ಮರಿಗೆ ಷಡುಸ್ಥಲಗಳು: ಅಭವಂಗೆ ಭಕ್ತಸ್ಥಲ, ರುದ್ರಂಗೆ ಮಾಹೇಶ್ವರಸ್ಥಲ, ಮೃಡಂಗೆ ಪ್ರಸಾದಿಸ್ಥಲ, ಈಶ್ವರಂಗೆ ಪ್ರಾಣಲಿಂಗಿಸ್ಥಲ, ಸದಾಶಿವಂಗೆ ಶರಣಸ್ಥಲ, ಶಾಂತ್ಯಾ ತೀತಂಗೆ ಐಕ್ಯಸ್ಥಲ  ೨೧

ಷಡುರುಚಿ: ರೂಪು, ರಸ, ಗಂಧ, ಶಬ್ದ, ಸ್ಪರ್ಶ, ಪರಿಣಾಮ  ೩೬ ಗದ್ಯ

ಷಡುಶಕ್ತಿಗಳು: ಮೂಲಕ, ಮುಕ್ತಕ, ಗೋಳಕ, ಕರ್ಣಿಕ, ರುದ್ರಕ, ದಾರುಕ.  ೨೦ ಗದ್ಯ

ಷಡುಶೈವರ ಲಿಂಗಗಳು: ಬ್ರಹ್ಮಂಗೆ ಪೀತವರ್ಣಲಿಂಗ  ೨೨೯ – ೩೦೧
ವಿಷ್ಣುವಿಂಗೆ ನೀಲವರ್ಣದಲಿಂಗ
ರುದ್ರಂಗೆ ಕಪಿಲವರ್ಣದಲಿಂಗ
ಈಶ್ವರಂಗೆ ಮಾಂಜಿಷ್ಟವರ್ಣದಲಿಂಗ
ಸದಾಶಿವಂಗೆ ಮಾಣಿಕ್ಯವರ್ಣದಲಿಂಗ
ಪರಮೇಶ್ವರಂಗೆ ಸ್ಫಟಿಕವರ್ಣದಲಿಂಗ

ಷಡುಶೈವರ ಲಿಂಗಧಾರಣ ಸ್ಥಲಗಳು:  ೨೨೯ – ೩೦೧

ಬ್ರಹ್ಮಕಕ್ಷೆಯಲ್ಲಿ
ವಿಷ್ಣು ಕರಸ್ಥಲದಲ್ಲಿ
ರುದ್ರ ಕಂಠದಲ್ಲಿ
ಈಶ್ವರ ಉರಸಜ್ಜೆಯಲ್ಲಿ
ಸದಾಶಿವ ಉತ್ತಮಾಂಗದಲ್ಲಿ
ಪರಮೇಶ್ವರ ಅಮಳೋಕ್ಯದಲ್ಲಿ
ಲಿಂಗಧರಿಸಿದರು

ಷಡುಶೈವರು: ೧ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಪರಮೇಶ್ವರ  ೨೩೦ – ೩೦೧
೨. ಪಶುಪತಿ – ಬ್ರಹ್ಮ, ಜೋಗಿ – ವಿಷ್ಣು,
ಶ್ರವಣ – ರುದ್ರ, ಸನ್ಯಾಸಿ – ಈಶ್ವರ,
ಯೋಗಿ – ಸದಾಶಿವ, ಕಾಳಾಮುಖಿ – ಪರಮೇಶ್ವರ

ಷಡುಸಾದಾಖ್ಯ ನಾಯಕರು: ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಪರಮೇಶ್ವರ  ೨೪೦ ಗದ್ಯ

ಷಡುಸ್ಥಾನ: ಕಕ್ಷೆ, ಕರಸ್ಥಲ, ಕಂಠ, ಉರಸೆಜ್ಜೆ, ಉತ್ತಮಾಂಗ, ಅಮಳೋಕ್ಯ  ೩೨೫ ಗದ್ಯ

ಸಕಲರು: ೧ ಹಲವಾತ್ಮರು  ೧೧ ಗದ್ಯ
೨ ಆಣವ ಹಾಗೂ ಮಾಯಾಮಲದ್ವಯಯುಕ್ತರು  ೧೭೩ ಗದ್ಯ

ಸಂಕಲ್ಪ: ಸರಿಯಾದ ಗ್ರಹಿಕೆ  ೨೧೩ – ೨೮೯

ಸಚರಾಚರ: ಸ್ಥಾವರ, ಜಂಗಮ  ೮೯ – ೧೧೫

ಸಪ್ತಚಕ್ರ: ಆಧಾರ, ಸ್ವಾಧಿಷ್ಠಾನ, ಮಣಿಪೂರಕ, ಅನಾಹತ, ವಿಶುದ್ಧಿ, ಆಜ್ಞೇಯ, ಬ್ರಹ್ಮರಂಧ್ರ   ೧೭ ಗದ್ಯ

ಸಪ್ತದ್ವೀಪಗಳು: ಜಂಬೂ, ಪಚ್ಚ, ಕ್ಲುಶ, ಕ್ರೌಂಚ, ಶಾಲ್ಮಲಿ, ಶಾಖ, ಪುಷ್ಕರ  ೩೭೧ ಗದ್ಯ

ಸಪ್ತವ್ಯಸನ: ತನುವ್ಯಸ್ನ, ಮನವ್ಯಸನ, ಧನವ್ಯಸನ, ವಾಹನ ವ್ಯಸನ, ಉತ್ಸಾಹವ್ಯಸನ, ವಿಶ್ವಾವ್ಯಸನ, ಸೇವಕಾವ್ಯಸನ  ೩೨೧ – ೪೪೦

ಸಪ್ತಸಮುದ್ರ: ಲವಣಸಮುದ್ರ, ಇಕ್ಷುಸಮುದ್ರ, ಮಧುಸಮುದ್ರ, ದಧಿಸಮುದ್ರ, ಘೃತಸಮುದ್ರ, ಕ್ಷೀರಸಮುದ್ರ, ಸ್ವಾದೋದಕಸಮುದ್ರ  ೭೭೧ ಗದ್ಯ

ಸಂಭಾವಿತ: ಭಾವಲಿಂಗ  ೬೩ – ೭೮

ಸಮಯಪ್ರಸಾದಿ: ಜಾತಿಸೂತಕವಳಿದು ನಿಶ್ಯಂಕನಾದವ  ೧೦೫ – ೧೩೩

ಸರ್ವತೀರ್ಥ: ಒಬ್ಬರಿಗೊಬ್ಬರು ಶರಣೆಂಬುದು  ೧೪೬ – ೨೦೪

ಸಹಸ್ರವದಿಗಳು: ಶರಣರು  ೨೯ – ೩೩

ಸಿದ್ಧಾಂತಿ: ಪಶು ಪಾಶ ಪತಿತತ್ವ ವಿವೇಚಕ  ೭ – ೧

ಸುಳುಹುದೋರು: ಮಾರ್ಗದರ್ಶನ ಮಾಡು  ೧೧೩ – ೧೪೩

ಸೂಕ್ಷ್ಮತನು: ತೇಜ ಹಾಗೂ ವಾಯುಪಿಂಡ ಸೃಷ್ಟಿ  ೭ – ೧

ಸ್ವಯವಾಗು: ಆದಿ, ಅನಾದಿ ಸಂದಣಿಸು  ೩೦ – ೩೫

ಸ್ವರೂಪ: ಚಿತ್ಪಿಂಡ  ೭೬ – ೧೦೩

ಸ್ವಾಯತ: ಪ್ರಾಣಲಿಂಗ  ೬೩ – ೭೮

ಸ್ಥೂಲತನು: ಪೃಥ್ವಿ ಹಾಗೂ ಅಪ್ಪುಗಳ ಪಿಂಡಸೃಷ್ಟಿ  ೭ – ೧

ಹದಿನಾಲ್ಕು ಭೂವನ: ೧ ಏಳು ಅಧೋಲೋಕ  ೧೧ – ೬, ೧೬೩ ಗದ್ಯ
೨ ಏಳು ಊರ್ಧ್ವಲೋಕ
೧ ಅತಳ, ವಿತಳ, ಸುತಳ, ಮಹೀತಳ, ತಳಾತಳ, ರಸಾತಳ, ಪಾತಾಳ
೨ ಭೂಲೋಕ, ಭುವರ್ಲೋಕ, ಸುವರ್ಲೋಕ, ಮಹರ್ಲೋಕ, ಜನರ್ಲೋಕ, ತಪರ್ಲೋಕ, ಜನರ್ಲೋಕ ತಪರ್ಲೋಕ, ಸತ್ಯರ್ಲೋಕ

ಹದಿನೆಂಟುಯುಗ: ಅನಂತ, ಅದ್ಭುತ, ತಮಂಧ, ತಾರಜ, ತಂಡಜ, ಭಿನ್ನಜ, ಭಿನ್ನಾಯುಕ್ತ, ಐಯುಕ್ತ, ವೈಯುಕ್ತ, ಮನ್ಯರಣ, ವನ್ಯರಣ, ವಿಶ್ವಾರಣ, ವಿಶ್ವಾಸು, ಅಲಂಕೃತ, ಕೃತಯುಗ, ತ್ರೇತಾಯುಗ, ದ್ವಾಪರಯುಗ, ಕಲಿಯುಗ  ೧೯೬ ಗದ್ಯ

ಹನ್ನೆರಡುಪ್ರಣಮ: ೧ ನಮಃಶಿವಾಯ ಒಂ ಅ ಉ ಮ ಬ ಸ ವ  ೧೬ – ೧೫
೨ ಮೂಲಪ್ರಣವ ಒಂದು: ಓಂ
ಮೂಲಪಂಚಾಕ್ಷರಿ: ನಮಃ ಶಿವಾಯ
ಮೂಲಷಡಾಕ್ಷರಿ: ಒಂ ನಮಃ ಶಿವಾಯ

ಹಸ್ತ: ಸುಚಿತ್ತಹಸ್ತ, ಸುಬುದ್ಧಿಹಸ್ತ, ನಿರಹಂಕಾರಹಸ್ತ, ಸುಮನಹಸ್ತ, ಸುಜ್ಞಾನಹಸ್ತ, ಸದ್ಭಾವಹಸ್ತ,

ಹಂಸತ್ರಯ: ಹಂಸ ಅಂದರೆ ಜೀವ. ಇದರಲ್ಲಿ ಮೂರುವಿಧಃ ಜೀವಹಂಸ, ಅಂತರಾತ್ಮಹಂಸ, ಪರ ಮಾತ್ಮಹಂಸ  ೧೬೭ – ೨೨೩