೧೦೬

ಒಂದೇ ಹೂವು ಒಂದೇ ಅಗ್ಘವಣಿ.
ಒಂದೇ ಓಗರ ಒಂದೇ ಪ್ರಸಾದ.
ಒಂದೇ ಮನ, ಒಂದೇ ಲಿಂಗ.
ಒಂದೇ ನಂದಾನಂದದ ದೀವಿಗೆ ಕುಂದದ ಬೆಳಗು.
ಸ್ವತಂತ್ರದ ಪೂಜೆ ಒಂದೇ
ಅನಾಹತವೆರಡೆಂದು ಬರುಮುಖರಾಗಿ
ಕೆಟ್ಟುಹೋದರು ಗುಹೇಶ್ವರಾ.          ||೫೪||

ಅಂತಪ್ಪತಿ ನುಣ್ಪುಳ್ಳ ವಜ್ರದ ಕಂಬದ ಮೇಲೆ ಸನ್ನರ್ಧವಾದ ಮಹಾ ವೃಷಭೇಶ್ವರನು ಆ ಅನುಭವ ಮೇರು ಮಂದಿರದ ವಿಶಾಲ ಮಂಟಪವ ನೋಡಿ ಕಂಡ ಠಾವಿಂಗೆ ಮಹಾಜ್ಯೋತಿರ್ಮಯ ಲಿಂಗ ಸಮೇತವಾದನಂತಕೋಟಿ ಶರಣರುಗಳನು ಬಿಜಯಂಗೆಯಿಸಿ ತರಲಿಂದೆಚ್ಛೈಸಲೊಡನೆ ತನ್ನ ವಾಮಭಾಗದ ಕರ್ಣ, ಬೆಳೆದು ಉತ್ತರ ದಿಕ್ಕಿಗೆ ಒಂದು ಸೋಪಾನವಾಗಿ ನಿಂದಿತ್ತು. ಮತ್ತಂತುಮಲ್ಲದೆ, ಆ ನಂದಿಕೇಶ್ವರನ ಬಲದ ಕರ್ಣ ಬೆಳೆದು ದಕ್ಷಿಣ ದಿಕ್ಕಿಗೆ ಒಂದು ಸೋಪಾನವಾಗಿ ನಿಂದಿತ್ತು. ಮತ್ತಂತುಮಲ್ಲದೆ, ಆ ಸಕಲ ಚೈತನ್ಯಾತ್ಮಕವೆಂಬ ಶರಣನ ಘ್ರಾಣದೊಳಗೆ ಇಪ್ಪ ಸದ್ವಾಸನೆ ಇಡಾಪಿಂಗಳ ನಾಳದಲ್ಲಿಂದ ಸೂಸಿ ಸ್ವರೂಪಾಗಿ ಬೆಳದು ಘಟ್ಟಿಗೊಂಡು ಪೂರ್ವ ದಿಕ್ಕಿಗೆ ಒಂದು ಸೋಪಾನವಾಗಿ ನಿಂದಿತ್ತು. ನಿಲಲಿಕೆಯಾಗಿ, ಆ ನಾಲ್ಕು ದಿಕ್ಕಿನ ಒಂದು ಸೋಪಾನವಾಗಿ ನಿಂದಿತ್ತು. ನಿಲಲಿಕೆಯಾಗಿ, ಆ ನಾಲ್ಕು ದಿಕ್ಕಿನ ಸೋಪಾನಂಗಳಲು ಮೂವೇಳುನೂರುಕೋಟಿ ಯೋಜನ ಪ್ರಮಾಣಿನ ನಿಜ ಭಕ್ತಿಯೆಂಬ ಹಸೆಯಲ್ಲಿಂಗೆರಗಿ ಒಪ್ಪಿನಿಂದಿರಲು ಅಲ್ಲಿ ಪರಮಾನಂದವಾಗಿರ್ದ ಪರಶಿವ ಮೊದಲಾದ ಪರಮಪ್ರಕಾಶದ ಪ್ರಮಥರೆಲ್ಲರು ಕಂಡಾಕ್ಷಣ ಆ ನಾಲ್ಕು ದಿಕ್ಕಿನ ಶರಣ ನಿಚ್ಚಣಿಗೆಯ ತೊಂಬತ್ತಾರು ಸಾವಿರ ಶರಣರೆಲ್ಲರು ಸಹಿತ ಶರಣು ಶರಣೆನುತ್ತ ಮೇಲಕ್ಕೇರಿ ನಿಡುಸಾಲಿಟ್ಟು ಬಿಜಯಂ ಮಾಡುತ್ತಿರುವಾಗ, ಆ ಭಕ್ತಿ ಹಸೆಯ ಮೇಲುಳಿದನಂತಕೋಟಿ ಶರಣರುಗಳು ನಾಲ್ಕು ದಿಕ್ಕಿನ ಸೋಪಾನವನೇರಿ ಮೊದಲಾದ ಭಕ್ತಿಹಸೆಯ ಮೇಲಿರ್ದಂತಿರ್ದು ಪರಮ ಸಂತೋಷದಿಂ ಕೈವಾರಿಸಿ ಉಘೆ ಚಾಂಗು ಭಲಾ ಎನುತಿಪ್ಪರಾ ಸಮಯದಲ್ಲಿ ಆ ಪ್ರಸಾದ ಮಂಟಪವೆಂಬ ವಜ್ರದ ಮಹಾ ಮೇರು ಮಂದಿರದ ಶಿಖಾಗ್ರದಮೇಲೆ ಸಂಧಾನವಾಗಿರ್ದ ಮಹಾ ವೃಷಭೇಶ್ವರನ ನಾಲ್ಕು ಭಾಗದಲ್ಲಿ ಮೂಡಿ ವಟವೃಕ್ಷದ ಬಿಳಲುಗಳಂತೆರಗಿದ ಸೋಪಾನದ ಬುಡನಾಳದೊಳಗಿಂದ ಲಕ್ಷದ ಮೇಲೆ ತೊಂಬತ್ತಾರುಸಾವಿರ ಜಂಗಮದೇವರುಗಳುದೈ ಸಜ್ಜನವೆಂಬ ಕೆಂಚೆಡೆ

[1]ಮುಡಿ[2]ಯ ಧರಿಸಿ, ಶಿವಶಕ್ತಿ ಶರಣನ ಮೂರೆ ತ್ರಿವಿಧ ಲಿಂಗವೆಂಬ ತ್ರಿಪುಂಡ್ರವ ಧರಿಸಿ, ಇಳಿದು ಬಿಜಯಂ ಮಾಡುವಾಗ ಸೋಪಾನದ ಮೇಲೇರಿ ನಡೆದು ಹೋಗುತ್ತಿರ್ಪ ಶರಣರ ದರುಶನ ಅವರ ನೋಟವೆಂಬ ಲಿಂಗಂಗಳ ಕರತಳದೊಳು ಧರಿಸಿ, ಆಚಾರವೆಂಬ ಓಲೆಯನಿಟ್ಟು, ಜ್ಞಾನವೆಂಬ ವಸ್ತ್ರವನುಟ್ಟು ಶರಣಸತಿ ಲಿಂಗಪತಿಯಾದರು. ಆ ಪ್ರಕಾರದ ಜ್ಞಾನವೇಷದಿಂದವರು ಇವರು ಮೇಲಕ್ಕೇರಿ ಚಿತ್ತೈಸುವಾಗ ಶರಣರುಗಳಿಗೆ ಚೌದಿಕ್ಕಿನ ನಿಚ್ಚಣಿಗೆಗಳಲ್ಲಿ ಸುಖ[3]ವೇನೆಂದಡೆ[4] ನೂರೊಂದು ಸ್ಥಲದನುಭಾವದಮೃತ ಸುಖರಸವೆ ಶಿವಸುಖವಾಗಿ, ಮೂಲ ಪ್ರಣಮಂಗಳ ನಾದಂಗಳಿಂದ ತುದಿ ಮೊದಲು ನಡುವೆಲ್ಲಿಯ ಬಳಲಿಕೆಯಿಲ್ಲದೆ ಮನೋಹರದ ಶಿವ ಸಂತೋಷಂಗಳಿಂದ ಶಿವಬಸವ ಮೂರ್ತಿಗೊಂಡು[5] ಮಹಾ ಪ್ರಸಾದ ಮಂಟಪವೆಂಬ ಮೇರುವಿನ ಮೇಲಕ್ಕೆ ಬಿಜಯಂ ಗೈದು ತಮತಮಗನೇಕ ಪರಿಯಲ್ಲಿ ಚೋದ್ಯಂ ಮಾಡುತ್ತ ನೂರೊಂದು ಸ್ಥಲಕುಳದ ಮೇಲಡಿಯಿಟ್ಟು ನಡತಂದಂತಾಯಿತ್ತೆಂದು ಪರಿಣಾಮಿಸುತ್ತ, ಮತ್ತಂತು ಮಲ್ಲದೆ ಆ ಪ್ರಸಾದ ಕಾಯವೆಂಬ ಕೈಲಾಸ ವಿಶ್ವತೋಮುಖವಾದ ಕಾರಣ ವರದ ವಿಶಾಲ್ಯವನು ನೋಡಿ ಬೆರಗಾಗುತ್ತ ಮೊದಲ ಭಕ್ತಿಹಸೆಯ ಮೇಲಿರ್ದ ಷಡುಸ್ಥಲಂಗಳೊಳಗೆ ಕೆಲ ಷಡುಸ್ಥಲಮಂ ಪ್ರಸಾದರಸವಜ್ರಕಾಯಕವೆಂಬ ಮೇರುವಿಗೆ ಗಮನಿಸುವಾಗ ಗಣಂಗಳು ತಮ್ಮ ಹೃದಯಕಮಲವೆಂಬ ಪತ್ರ ಚಿಪ್ಪಾಡುಗಳೊಳಗೆ ಇರಿಸಿಕೊಂಡೊಯಿದಕಾರಣ ಕೆಲ ಗಣಂಗಳೋಡುತ್ತ, ಕೆಲಗಣಂಗಳಾ ವಚನಂಗಳಿಗರ್ಥವಂ ವಿಸ್ತರಿಸುತ್ತ ಷಟ್ಸ್ಥಲ ಮೊದಲಾದ ನೂರೊಂದು ಸ್ಥಲವಲ್ಲವೆ ಮತ್ತಿಲ್ಲವೆಂದು ಹಿಂದನು ಮುಂದನು ನೋಡಿ ತಿಳಿದು ವಿಚಾರಿಸಿದಿಲ್ಲವಾಯಿತ್ತಾಗಿ ಗಣಸ್ತೋಮ ಶಿವಬಸವ ಸಾಕ್ಷಿಯಾಗಿ ಪ್ರತಿಷ್ಠೆಯಂ ಮಾಡುತ್ತ, ಆ ಷಡುಸ್ಥಲದನುಭಾವರಸಪದಾರ್ಥವನೆ ತಮ್ಮ ತಮ್ಮ ಸಮಯಾಚಾರದ ಜಂಗಮ ದೇವರುಗಳಿಗೆ ಪರಶಿವ ಷಡಸ್ಥಲದ ಭಕ್ತರು ಶಕ್ತಿಗಳು ನೀಡಿದ ಬಳಿಕವರು ಸ್ವೀಕರಿಸಿ ಉಳಿದ ಶೇಷಪ್ರಸಾದವನು ತಮ್ಮ ತಮ್ಮ ಷಡುವಿಧ ಲಿಂಗಂಗಳಿಗೆ ಕೊಟ್ಟು ಕೊಂಬಾಗ, ಆ ಮಹಾ ವೃಷಭೇಶ್ವರನಾಕೃತಿಯನಲ್ಲಿಯೇ ಬಸವಣ್ಣ ಸ್ಥಾಪಿಸಿ, ತಾನು ಪರಶಿವ ಸ್ವರೂಪನಾಗುತ್ತ ಷಡುಸ್ಥಲದ ಭಕ್ತನಾಗುತ್ತ ಶರಣನಾಗುತ್ತ ಬಂದು ಆ ಜಂಗಮದೇವರುಗಳು ಆರೋಗಿಸಿದ ಶೇಷಪ್ರಸಾದವ ಗುಡಿಸಿಕೊಂಡು ತನ್ನ ಲಿಂಗಕ್ಕೆ ಕೊಟ್ಟುಕೊಳ್ಳುತ್ತ[6] ಮಹೋಹರದ ಭಕ್ತ ಮಾಹೇಶ್ವರನು ತಾನೆಯಾಗುತ್ತ ತಾನೆ ಪೂರ್ವಾಚಾರ್ಯನಾಗುತ್ತ, ಮಹಾದೇವನನು ಮಹಾವೃಷಭೇಶ್ವರನ ಮೇಲೆ ಮೂರ್ತಿಗೊಳಿಸುತ್ತಿರ್ಪ ಸಮಯದೊಳು ಆ ಮಹಾ ಮೇರುವಿನ ಮಸ್ತಕದ ಮೇಲೆ ಪಸರಿಸಿಪ್ಪ ಷಡುಭಕ್ತರ‍ಜಂಗಮದೇವರುಗಳು ಎಪ್ಪತ್ತೆರಡು ಸಾವಿರ. ವೃಷಭಗಣ ಹನ್ನೆರಡು ಸಾವಿರ, ಪ್ರಮಥಗಣ ಹನ್ನೆರಡು ಸಾವಿರ.[7] ಆ ಎಲ್ಲರಿಗೆಯೂ ಪರಾತ್ಪರವಾದ ಜಂಗಮದೇವರುಗಳು ಲಕ್ಷದ ಮೇಲೆ ತೊಂಬತ್ತಾರು ಸಾವಿರ. ಅಂತು ಲಕ್ಷದ ಮೇಲಣ ನೂರತೊಂಬತ್ತೆರಡು ಸಾವಿರ ಭಕ್ತ ಮಾಹೇಶ್ವರರು. ಷಡುಸ್ಥಲ ಬ್ರಹ್ಮಿಗಳು ಗುರುಸ್ವರೂಪನುಳ್ಳ ಶಕ್ತಿಗಳು ತಮ್ಮ ಮಹಾಗಾನವೆಂಬಾರತಿಗಳನೆತ್ತಿದಡವರ ಕಿರಣ ಪ್ರಭೆಗಳು ಕಾಲಾಗ್ನಿಯ ಕಿರಣ ಪ್ರಭೆಗಳನ್ನು ಮೀರಿ ಕೋಟಿ ಸೂರ್ಯರ ಕಿರಣ ಪ್ರಭೆಗಳನ್ನು ಮೀರಿ ಕೋಟಿ ಮಿಂಚುಗಳ ಕಿರಣ ಪ್ರಭೆಗಳನು ಮೀರಿ, ಬೆಳಗುತ್ತಿರಲು, ಮತ್ತಾ ಬೆಳಗಿನ ಕೂಡೆ ಶಕ್ತಿಗಳು ತಮ್ಮ ಮಹಾ ಸದ್ವಾಸನೆಯೆಂಬ ಧೂಪಂಗಳು [8]ತುಂಬಿ[9] ದಡವರ ಧೂಮಂಗಳು ದಶಾಂಗದ ಧೂಪ ಧೂಮಂಗಳನು ಮೀರಿದ ಮಹಾ ವಾಸನೆಯಾಗಿರಲು, ಆ ಸಮಯ[10]ದಲ್ಲಿ ಕೆಲ ಗಣಂಗಳು ಹನ್ನೆರಡು ಮೂಲ ಪ್ರಣಮಂಗಳನುಚ್ಚರಿಸಲವರ ಧ್ವನಿಗಳು ಕೋಟಿ ಸಿಡಿಲುಗಳ ಆರ್ಭಟಗಳನು ಮೀರಿ ಮಹಾರ್ಭಟಗಳಾಗಿ [11]ವಾದ್ಯದ ಧ್ವನಿಗಳನು ಮೀರಿದ ಮಹಾ ಸುನಾದ ವಾದ್ಯಂಗಳಾಗಿರಲು ಅಂಥ ಮಹಾ ಚೋದ್ಯದ ಮೂಲ ಪ್ರಣಮಂಗಳ ಸುನಾದ ನೂರೊಂದು ಸ್ಥಲದ ಗೀತ ಮಾತೃಕೆಗಳನು ಎರಡುಸಾವಿರದೆಂಟನೂರು ಕೋಟಿ ಯೋಜನ ಪರಿಪ್ರಮಾಣಿನ ಮಹಾ ಮೇರುಮಂದಿರದ ಮಧ್ಯದೊಳು ಮೂರ್ತಿಗೊಂಡಿರ್ದ ಮಹಾವೃಷಭೇಶ್ವರನು ಕೇಳಿ ತನ್ನ ತಾ ಮೈಮರದು ಗಣ ಸಮೂಹಂಗಳ ಕಣ್ಣು ತುಂಬಿ ನೋಡಿ ಷಡುಸ್ಥಲದನುಭಾವರಸದೊಳು ಮುಳಗಿ, ಭಕ್ತಿರತಿಯ ಕೂಡಿ, ಸಮತೆಯೆಂಬ ಬಸುರಾಗಿ, ಪರಿಣಾಮವೆಂಬ ಶಿಶುಗಳನಂತನಂತ ಕೋಟಿಗಳು, ವೃಷಭನನಂತಕೋಟಿ ರೋಮ ಕೂಪಂಗಳೊಳಗಿಂದ ಉಘೆ ಚಾಂಗು ಭಲಾಎನುತ, ಬಸವಾ ಎಂಬ ಸುಮಂತ್ರ ವಾಕ್ಯಂಗಳುವೆರಸಿ ಖಗಂಗಳ ರೂಪು, ಮೃಗಂಗಳ ರೂಪು, ಉರಗಂಗಳ ರೂಪು, ತುರಗಂಗಳ ರೂಪು, ಗಿರಿಗಳ ರೂಪು, ಯೋಮರೂಪು, ವಾಯುರೂಪು, ಅಗ್ನಿರೂಪು, ಅಪ್ಪುರೂಪು, ಪೃಥ್ವಿರೂಪು, ಮನುಷ್ಯರೂಪು, ನಾನಾರೂಪು, ಸ್ವರೂಪು, ಚಿದ್ರೂಪು, ವಿಕೃತರೂಪು ವಿಕಟರೂಪು, ನಿರೂಪುಗಳು ಇಂತಪ್ಪ ರೂಪುಗಳುಸಹಿತ ಶ್ವೇತವರ್ಣ, ಪೀತವರ್ಣ, ಕಪೋತವರ್ಣ, ಹರಿತವರ್ಣ, ಮಾಂಜಿಷ್ಟವರ್ಣ, ಗೌರವರ್ಣ, ನಾನಾವಣ ನಾನಾ ಮುಖ ಸಹಿತನಂತಕೋಟಿ ಗಣಂಗಳು ಸ್ವಯಂಭು ರೂಪುಗಳಿಂದ ಕಕ್ಷೆ, ಕರಸ್ಥಲ, ಕಂಠ, ಉರಸೆಜ್ಜೆ, ಉತ್ತುಮಾಂಗ, ಅಮಳೋಕ್ಯವೆಂದಾರು ಸ್ಥಾನಂಗಳೊಳಗೆ ಲಿಂಗಂಗಳುಸಹಿತ ಉದಯವಾಗಿ, ನಿತ್ಯ ತೃಪ್ತಿಯೊಳಗಿರ್ದರು. ಅವರೆಷ್ಟೆಷ್ಟು ಎಂದಡೆ: ಆಕಾಶದಂತೆ ಕಾಯವನುಳ್ಳಗಣಂಗಳೊಂದುಕೋಟಿ ಗಾಳಿಯಂತೆಕಾಯವನುಳ್ಳ ಗಣಂಗಳೊಂದುಕೋಟಿ, ತೇಜದಂತೆ ಕಾಯವನುಳ್ಳ ಗಣಂಗಳೊಂದುಕೋಟಿ, ಉದಕದಂತೆ ಕಾಯವನುಳ್ಳ ಗಣಂಗಳೊಂದು ಕೋಟಿ, ಭೂಮಿಯಂತೆ ಕಾಯವನುಳ್ಳಗಣಂಗಳೊಂದುಕೋಟಿ, ನಕ್ಷತ್ರಗಲಂತೆ  [12]ಕಾಯವನು[13]ಳ್ಳ [14]ಗಣಂಗಳೊಂ[15]ದು ಕೋಟಿ, ಶಶಿಯಂತೆ ಶರೀರವನುಳ್ಳ ೩. ಶರಣರೊಂ (ಬ). ಂದುಕೋಟಿ, ಶಶಿಯಂತೆ ಶರೀರವನುಳ್ಳ[16] ಗಣಂಗಳೊ[17]ಂದುಕೋಟಿ, ಸೂರ್ಯನಂತೆ ಶರೀರವನುಳ್ಳ ಶರಣರುಗಳೊಂದು ಕಲೋಟಿ, ಮಿಂಚಿನಂತೆ ಶರೀರವನುಳ್ಳ ಶರಣರುಗಳೊಂದುಕೋಟಿ, ಸುವರ್ಣದಂತೆ ಪಿಂಡವನುಳ್ಳ ಪುರಾತನರೊಂದುಕೋಟಿ, ಕಾಪ್ಯದಂತೆ ಶರೀರವನುಳ್ಳ ಪುರಾತನರೊಂದುಕೋಟಿ, ನವರತ್ನದಂತೆ ಪಿಂಡವನುಳ್ಳ ಪುರಾತನರೊಂದು ಕೋಟಿ, ಮೌಕ್ತಿಕದಂತೆ ಪಿಂಡವನುಳ್ಳ ಪುರಾತನರೊಂದುಕೋಟಿ, ನಾನಾ ಪ್ರಕಾರದ ಮುಗಿಲಂತೆ ದೇಹವನುಳ್ಳ ಪ್ರಮಥರೊಂದುಕೋಟಿ, ನಾನಾಪ್ರಕಾರದ ಪರ್ವತಗಳಂತೆ ದೇಹವನುಳ್ಳ ಪ್ರಮಥರೊಂದುಕೋಟಿ, ಶಾಖಳೋಪಶಾಖೆವಡೆದ ನಾನಾಪ್ರಕಾರದ ವೃಕ್ಷಗಳಂತೆ ಮುಖದೇಹವನುಳ್ಳ ಪ್ರಮಥರೊಂದುಕೋಟಿ, [18]  ಮೃಗಪಶುಗಳಂತೆ ಮುಖದೇಹವನುಳ್ಳ ಪ್ರಮಥರೊಂದುಕೋಟಿ, ಮೃಗ ಪಶುಗಳಂತೆ ಮುಖದೇಹವನುಳ್ಳ ಪ್ರಮಥರೊಂದುಕೋಟಿ, ನಾನಾ ಪ್ರಕಾರದ ಪಕ್ಷಿಗಳಂತೆಯು ಮುಖದೇಹವನುಳ್ಳ ಪ್ರಮಥರೊಂದುಕೋಟಿ, ಲಿಂಗಾಕೃತಿಯನುಳ್ಳ ರುದ್ರಗಣರೊಂದುಕೋಟಿ, ದೀಪಧೂಪಧೂಮಂಗಳಾಕೃತಿಯನುಳ್ಳ ರುದ್ರಗಣಂಗಳೊಂದುಕೋಟಿ, ರುದ್ರಾಕ್ಷಿಯಾಕೃತಿಯನುಳ್ಳ ರುದ್ರ ಗಣರೊಂದುಕೋಟಿ, ವಿಭೂತಿಯಾಕೃತಿಯನುಳ್ಳ ರುದ್ರಗಣರೊಂದುಕೋಟಿ, ಕ್ರೀನಿಷ್ಕ್ರೀಜ್ಞಾನಕ್ರೀಯನುಳ್ಳ ರುದ್ರಗಣರೊಂದುಕೋಟಿ, ದೀಪಧೂಪಧೂಮಂಗಳಾಕೃತಿಯನುಳ್ಳ ರುದ್ರಗಣಂಗಳೊಂದುಕೋಟಿ, ರುದ್ರಾಕ್ಷಿಯಾಕೃತಿಯನುಳ್ಳ ರುದ್ರ ಗಣರೊಂದುಕೋಟಿ, ವಿಭೂತಿಯಾಕೃತಿಯನುಳ್ಳ ರುದ್ರಗಣರೊಂದುಕೋಟಿ, ಕ್ರೀನಿಷ್ಕ್ರೀಜ್ಞಾನಕ್ರೀಯನುಳ್ಳ ರುದ್ರಗಣರೊಂದುಕೋಟಿ, ಮರುಗ ಪಚ್ಚೆಯತೆನೆ ಮೊದಲಾದ ಪರಿಪರಿಯ ಪುಷ್ಪದ ಗಿಡಗಳಾಕೃತಿಯನುಳ್ಳ ರುದ್ರಗಣರೊಂದುಕೋಟಿ, ಮತ್ತೆ ಭಯಂಕರರೆಂಬಗಣಂಗಳು ವಿಮುಖ ಸುಮುಖ ಜಾನುಮುಖ, ಜಾಂಗೆಮುಖ, ಪಾದಮುಖ, ಹಸ್ತಮುಖ , ಬಾಹುಮುಖ, ಕರಿಮುಖ, ಉದರಮುಖ, ವರಮಲುಖ, ಬೆನ್ನುಮುಖ, ಇಂತೀ ಅನಂತಮುಖವನಂತ ತಲೆ, ಅನಂತ ಕರ್ಣ, ಅನಂತ ಕಣ್ಣು, ಅನಂತ ನಾಸಿಕ, ಅನಂತ ಜಿಹ್ವೆ, ಅನಂತದೇಹ, ಅನಂತ ಭುಜ, ಅನಂತ ತೋಳು, ಅನಂತ ಕೈ, ಅನಂತ ಉರ, ಅನಂತ ನಾಭಿ, ಅನಂತ ಕಟಿ, ಅನಂತ ತೊಡೆ, ಅನಂತ ಕಿರುದೊಡೆ,  ಅನಂತ ಹಜ್ಜೆ, ಅನಂತ ಬೆರಳು, ಅನಂತ ರೋಮ, ಅಂತು ಹಿಂದೆ ಸ್ವರೂಪಿಸಿ ಕೊಂಡನಂತಕೋಟಿ ಗಣಂಗಳನಂತಕೋಟಿ ದೇಹಂಗಳೆಲ್ಲವು, ಗುರುಲಿಂಗ ಜಂಗಮಮಯ, ಪಾದೋದಕ ಪ್ರಸಾದಮಯ, ಭಸಿತ ರುದ್ರಾಕ್ಷಿಮಯ, ಪರುಷಜ್ಞಾನ ಸದ್ವಾಸನೆಯೆಂಬ ದೀಪಧೂಪಮಯ ಮೂಲಪ್ರಣಮಂಗಳ, ನಾದ ಘೋಷಮಯ, ಬಸವನ ಷಡಸ್ಥಲದನುಭಾವವೆಂಬ ಕಂತೆ ಕೌಪು ಕಿರೀಟಾವುಗೆ ಯೋಗವಟ್ಟಿಗೆ ದಂಡ ಕಮಂಡಲ ಪ್ರತಿಶಿತಾಳ ಇವು ಮೊದಲಾದನಂತಾಭರಣಮಯವು. ಆ ಮಹಾಷಡುಸ್ಥಲದನುಭವ ಪ್ರಸಾದರಸ ವಜ್ರಮೇರುಮಂದಿರದ ಮಧ್ಯದೊಳಗೆ ಮೂರ್ತಿಗೈದಿರ್ದ ಮಹಾವೃಷಭೇಶ್ವರನನಂತಕೋಟಿ, ರೋಮ ಕೂಪಂಗಳಿಂದುದೈಸಿದರನಂತಕೋಟಿ ಮಹಾ ವಿಕಟಗಣಂಗಳೆಲ್ಲರು ಏಕಿಂತಹವೆಂಬ ಚಿದ್ಬ್ರಹ್ಮಾಂಡ, ಪ್ರಕಾಶ ಬ್ರಹ್ಮಾಂಡ, ಅನುಭಾವ ಬ್ರಹ್ಮಾಂಡ, ಪುರುಷಭಕ್ತಿಯೆಂಬ ಹಸೆ, ಶಕ್ತಿ ಭಕ್ತಿಯೆಂಬ ಹಸೆ, ಚೈತನ್ಯವೆಂಬ ಹಸೆ, ಇಂತಡಕಿಲಡಕಿಲಾಗಿಪ್ಪ ಪರಶಿವ ಲೋಕಂಗಳೊಳಗೆ ಬಿಜಯಂಮಾಡಿ, ತಮ್ಮ ಲೀಲೆ ಮಿಗಿಲಾಗಿ ಮೂರ್ತಿಗೊಂಡಾಕ್ಷಣ. ಆ ಚಿದ್ಬ್ರಹ್ಮಾಂಡದೊಳಗೆ ನವಲಿಂಗಗಳು ಯುಕ್ತವಾಗಿಪ್ಪ ಷಡುಸ್ಥಲವೆಂಬ ಮನೆಗಳಿಂದ ನೂರೊಂದು ಸ್ಥಲದನುಭಾವವೆಂಬಮೃತಸೋನೆ ನವಧಾರೆಯಾಗಿ ಪ್ರಕಾಶ ಬ್ರಹ್ಮಾಂಡವೆಂಬ ಭೂಮಿಯಮೇಲೆ ಪದ್ಮಾಸನಗೈದಿರ್ದ ನವಕೋಟಿಗಣಂಗಳನವಗಮಿಸಿ ಪ್ರಥಮ ಪ್ರಣಮಂಗಳಂತೆ ಸುನಾದಂಗಳಂತೆ ಮೃದುನಾದಂಗಳಿಂದ ವಿಭೂತಿ ರುದ್ರಾಕ್ಷಿ ಅಗ್ಗವಣಿ ಅಕ್ಷತೆ ಪುಷ್ಪ ದೀಪಧೂಪ ತಾಂಬೂಲ ನೈವೇದ್ಯವಿಂತೆಂಟು ತಾನು ಸಹಿತ ನವಪ್ರಕಾರವಾಗೆರಗಿ ಅನುಭಾವ ಮಂಟಪವೆಂಬ ವಜ್ರದ ಮಹಾಮೇರುವಿಯ ನವಸಮುದ್ರಂಗಳಾಗಿ ಪ್ರತಿಷ್ಠಿಸಿ ಕೊಂಡಿರುತಿರ್ದವು. ಇರುತಿರಲಿಕ್ಕಾಗಿ ನವಕೋಟಿ ವಿಕಟವೇಷದ ಗಣಂಗಳು ಚಿದ್ಬ್ರಂಹ್ಮಾಂಡದೊಳಗಿಗೆ ಕರ್ತುವಾದ ಚಿದ್ಭನಾತ್ಮಕನೆಂಬ ಗಣೇಶ್ವರ ಮೊದಲಾದನಂತ ಚಿದ್ಗಣೇಶ್ವರರ ಸಮೇತವಾಗಿ ಆ ಪ್ರಕಾಶ ಸಮುದ್ರವೆಂಬ ಸ್ವಚ್ಛಾನಂದ ಜಲಪ್ರವಾಹದೊಳಗೆ ಮುಳುಗಿಯಾಡುತ್ತಿರ್ದರು. ಇರುತ್ತಿರಲಾಗಿ ಆ ಪ್ರಕಾಶ ಬ್ರಹ್ಮಾಂಡದೊಳಗೆ ನವಲಿಂಗಂಗಳೆಂಬ ಪ್ರಕಾಶಜ್ಞಾನಂಗಳ ಬೆರಸಿಪ್ಪ ಷಡುಸ್ಥಲವೆಂಬ ಮೇಘಂಗಳಿಂದ ನೂರೊಂದುಸ್ಥಲದನುಭಾವೆಂಬಮೃತಸೋನೆ, ಅನುಭಾವ ಬ್ರಹ್ಮಾಂಡವೆಂಬ ಭೂಮಿಯಮೇಲೆ ಸಂದಾನವಾಗಿರ್ದವೆಂಬತ್ತುಕೋಟಿ ಗಣಂಗಳನೊಂಬತ್ತು ಧಾರೆಯಾಗಿ ಪ್ರಣಮನಾದಂಗಳಿಂದವಗವಿಸಿ ಸುರಿದು ಅನುಭಾವರಸವೆಂಬ ವಜ್ರದಮೇರುವೆಯವೆಂಬತ್ತು ಶರಧಿಗಳಾಗಿ ಪರಿವೇಷ್ಠಿಸಿ ಅನುಭಾವ ಬ್ರಹ್ಮಾಂಡವೆಂಬ ಭೂಮಿಯಮೇಲೆ ಇರುತಿರ್ದವು. ಇದ್ದಬಳಿಕ ಒಂಬತ್ತು ಕೋಟಿ ವಿಕೃತವೇಷದ ಗಣಂಗಳು ಆ ಪ್ರಕಾಶ ಬ್ರಹ್ಮಾಂಡದೊಳಗೆ ಕತೃವಾದ ದೇವಾಂಗನೆಂಬ ಗಣೇಶ್ವರ ಮೊದಲಾದ ದೇವಾಂಗ ಗಣೇಶ್ವರ ಸಮೇಳವಾಗಿ ಅನುಭಾವ ಸಮುದ್ರವೆಂಬ ಸ್ವಚ್ಛಾನಂದ ಜಲಪ್ರವಾಹದೊಳಗೆ ಓಕುಳಿಯಾಡುತ್ತ ನಿತ್ಯ ತೃಪ್ತರಾಗಿರ್ದರು. ಇರ್ದಸಮಯದಲ್ಲಿ ಆ ಅನುಭಾವ ಬ್ರಹ್ಮಾಂಡದೊಳಗೆ ಒಂಬತ್ತು ಶಿವಲಿಂಗಗಳೆಂಬ ಸುಜ್ಞಾನ ರತ್ನಂಗಳಕೂಡಿಪ್ಪ ಷಡುಸ್ಥಲವೆಂಬ ಮೇಘಂಗಳಿಂದ ನೂರೊಂದು ಸ್ಥಲದವಚನಾಮೃತಸೋನೆ ಶಕ್ತಿ ಭಕ್ತಿಯೆಂಬ ಹಸೆಯ ಮೇಲೆ ಮೂರ್ತಿಗೊಂಡಿರ್ದ ನವಕೋಟಿ ವಿಕಟಗಣಂಗಳಮೇಲೆ ಮೊದಲೆರಗಿದ ನವಪ್ರಕಾಶ ದೋಪಾದಿಯಂತೆ ಹದಿನಾಲ್ಕು ಸಾವಿರಕ್ಷರಂಗಳ ಘೋಷಂಗಳಿಂದವಗವಿಸಿ ಸುರಿದು ಅನುಭಾವ ಪ್ರಸಾದವೆಂಬ ಕೈಲಾಸವ ಸುತ್ತಿ ಹರಿದು, ಶಕ್ತಿ ಭಕ್ತಿಯೆಂಬ ಹಸೆಯ ಭೂಮಿಯ ಮೇಲೆ ನವರಸಾದಿಗಳಾಗಿರುತಿರ್ದವು. ಇರಲ್ಕೆ ನವಕೋಟಿ ವಿಚಿತ್ರವೇಶದ ಗಣಂಗಳು ಆ ನಿಜಭಕ್ತಿ ಹಸೆಯೊಳಗಿಗೆಕರ್ತುವಾದಂಥ ಭಕ್ತಿ ಸಮೇತಗಣೇಶ್ವರ ಮೊದಲಾದ ಭಕ್ತಿಸಮೇತ ಗಣೇಶ್ವರರು ಅನಂತರು ಸಮೇತವಾಗಿ ಶಕ್ತಿ ಭಕ್ತಿ ಸಮುದ್ರವೆಂಬ ಪರಮಾನಂದಜಲ ಪ್ರವಾಹದೊಳಗೆ ಓಕುಳಿಯಾಡುತ್ತ ನಿತ್ಯ ತೃಪ್ತರಾಗಿಪ್ಪರು. ಇಪ್ಪ ಭಕ್ತಿ ಹಸೆಯೊಳಗೆ ನವಲಿಂಗಂಗಳೆಂಬ ಜ್ಯೋತಿಗಳು ಯೋಗವಾಗಿಪ್ಪ ಷಡುಸ್ಥಲವೆಂಬ ಮೇಘಗಳಿಂದ ನೂರೊಂದು ಸ್ಥಳಕುಳದ ವಚನಾಮೃತಸೋನೆ ಶಕ್ತಿ ಭಕ್ತಿಯೆಂಬ ಹಸೆಯಮೇಲೆ ಮೂರ್ತಿಗೊಂಡಿರ್ದ ನವಕೋಟಿ ವಿಕಟಗಣಂಗಳಮೇಲೆ ಮೊದಲೆರಗಿದ ನವಪ್ರಕಾರದೋಪಾದಿಯಂತೆ ಹದಿನಾಲ್ಕು ಸಾವಿರಕ್ಷರಂಗಳ ಘೋಷಂಗಳಿಂದವಗವಿಸಿ ಸುರಿದು ಅನುಭಾವಪ್ರಸಾದವೆಂಬ ಕೈಲಾಸವ ಸುತ್ತಿ ಹರಿದು ಶಕ್ತಿ ಭಕ್ತಿಯೆಂಬ ಹಸೆಯ ಭೂಮಿಯಮೇಲೆ ನವರಸಾದಿಗಳಾಗಿರುತ್ತಿರ್ದವು. ಇರಲ್ಕೆ ನವಕೋಟಿ ವಿಚಿತ್ರವೇಶದ `ಗಣಂಗಳು ಆ ಶಕ್ತಿಹಸೆಯೊಳಗಿಗೆ ಒಡಯನಾದಂಥ ಸಕಲ ಚಯತನ್ಯಾತ್ಮಕನೆಂಬ ಗಣೇಶ್ವರ ಮುಖ್ಯವಾದ ಚೈತನ್ಯಗಣೇಶ್ವರರನಂತರ ಕೂಡಿಕೊಂಡು ಚಯತನ್ಯ ಸಮುದ್ರವೆಂಬ ಪರಮಾನಂದ ಜಲಪ್ರವಾಹದೊಳಗೆ ಮುಳುಗಿಯಾಡುತ್ತ ನಿತ್ಯ ತೃಪ್ತರಾಗಿರುತ್ತಿಹರು. ಅಂತಪ್ಪ ಚಿದ್ಬ್ರಹ್ಮಾಂಡ ಪ್ರಕಾಶಬ್ರಹ್ಮಾಂಡ ಅನುಭಾವ ಬ್ರಹ್ಮಾಂಡ ಭಕ್ತಿಹಸೆ ಚೈತನ್ಯಹಸೆ ಇಂತಪ್ಪ ಭಕ್ತಿ ನಿತ್ಯತ್ವವಾಗಿರ್ದ ಪರತತ್ವ ಲೋಕಂಗಳಕೊಂಡು ಸ್ವರೂಪಾಗಿ ಸಿಂದಾರು ಪರತತ್ವವೆಂಬ ಬ್ರಹ್ಮಾಂಡಗಳೊಳಗಿಪ್ಪ ನಿತ್ಯತ್ವನುಳ್ಳ ಗಣಂಗಳನೊಳಕೊಂಡು ನಿತ್ಯತ್ವವಾಗಿರ್ದ ಬ್ರಹ್ಮಾಂಡಗಳಾದಿಮಧ್ಯಾಂತದೊಳಗೆ ಘಾಳಿಮೇಘದ್ರುವಮಂಡಲ ಚಂದ್ರ ಸೂರ್ಯ ಇಂತಿವರಂತೆ ಪ್ರಸಾದಮಂಟಪವೆಂಬ ಮಹಾಮೇರುವಿಯ ತಮ್ಮಾ ಲೀಲೆಯಿಂದ ಪ್ರವೇಷ್ಟಿಸಿ ಮೂರ್ತಿಗೈದಿರುತ್ತ ಚರಿಸುತ್ತ ಜಂಗಮ ಪ್ರಸಾದವ ತಮ್ಮ ಲಿಂಗವೆಂಬ ಗಂಡನಿಗೆ ಕೊಟ್ಟುಕೊಳ್ಳುತ್ತ, ಗುರುಲಿಂಗ ಜಂಗಮದ ಸ್ವರೂಪರಾಗುತ್ತ ನಿತ್ಯ ತೃಪ್ತಿಯೊಳಿರುತ್ತಿಪ್ಪರು. ಇಂತೆಂಬ ಪುರಾತನರ ವಚನಾಮೃತಕ್ಕೆ ಸಾಕ್ಷಿ.

೧೦೭

ಪಾತಾಳದಗ್ಗವಣಿಯ ನೇಣಿಂದಲ್ಲದೆ ತೆಗೆಯಬಹುದೆ?
ಶಬ್ದ ಸೋಪಾನವ ಕಟ್ಟಿ ನಡೆಸಿದರೆಂದು ಪುರಾತನರು,
ಮರ್ತ್ಯ ಲೋಕದವರ ಮನದ ಮೈಲಿಗೆಯ ಕಳೆಯಲೆಂದು
ಗೀತಮಾತೆಂಬ ಜ್ಯೋತಿಯಬೆಳಗಿ ಕೊಟ್ಟು ಹೋದರು
ಕೂಡಲ ಚೆನ್ನಸಂಗನ ಶರಣರು.       ||೫೫

೧೦೮

ಗಿಡುವಿನ ಮೇಲಣ ತುಂಬಿ ಕೂಡೆ ವಿಕಸಿತವಾಯಿತ್ತು.
ತುಂಬಿ ನೋಡಾ? ಆತುಮ ತುಂಬಿ ತುಂಬಿ ನೋಡಾ?
ಪರಮಾತುಮ ತುಂಬಿ ತುಂಬಿ ನೋಡಾ!
ಗುಹೇಶ್ವರನೆಂಬ ಲಿಂಗಕ್ಕೆ ಱಗಿ ನಿಬ್ಬೆಱಗಾಯಿತು ತುಂಬಿ ನೋಡಾ.         ||೫೬||

೧೦೯

ಮಾಣಿಕ್ಯದ ಮಂಟಪದೊಳಗೆ
ಏಳು ಚಿತ್ರಕರೊಡನೆ ಮೇಳವಿಸಿದನು ಮಹಾಮಂತ್ರಗಳನು.
ಮೂಲಮಂತ್ರದ ಮೇಲೆ ಪ್ರಾಣಲಿಂಗದ ಬೆಳಗು.
ಆಲಿ ಕಲ್ಲಲ್ಲಿ ವಜ್ರದ ಕೀಲು;
ಕೂಟ ಜಾಳಂದ್ರದೊಳಗೆ ಮಾಣಿಕ್ಯದ ಪ್ರತಿಬಿಂಬ;
ಏಳು ರತ್ನದ ಪುತ್ಥಳಿಗಳು; ಮಣಿ ಮಾಲೆಗಳ ಹಾರ,
ಹೊಳವ ಮುತ್ತಿನದಂಡೆ, ಎಲೆಯ ನೀಲದ ತೊಡಿಗೆಯನೆ ತೊಟ್ಟು
ಸುಳಿದು ಮುದ್ದಳೆಗಾರರೊಳಗೆ ಧಂಧಳವೆನಲು
ಕುಣಿವ ಪರಿ ಬಹುರೂಪುಗಳ ನಾಟಕ.
ತಾಳಧಾರಿಯ ಮೇಳ ಕಹಳೆಕಾರನ ನಾದ
ಕೊಳಲ ಸರಗಳ ರವದೊಳಗಾಡುತ್ತ
ಒಳ ಹೊರಗೆ ಕಾಣಬರುತ್ತಿದೆ ಚಿತ್ರದಬೊಂಬೆ.
ಫಣಿಪತಿಯ ಕೋಣೆಸಂದಣಿಸುತ್ತಿರಲು ಗಣಮೇಳ
ಕೂಡಲಚೆನ್ನಸಂಗಯ್ಯನಲ್ಲಿ ಕಳಾಸ
ಪ್ರಾಣಲಿಂಗದ ಬೆಳಗಿನೊಳು ಬೆಳಗಿತ್ತು.         ||೫೭||

೧೧೦

ಗಿರಿಗಳ ಕಂದರವ ವಿವರಿಸಿ
ಶಿವಸಂಸ್ಕಾರಿಗಳು

ಸಜ್ಜನ – ಕೆಂಜೆಡೆ – ಮುಡಿ – ತ್ರಿಪುಂಡ್ರ – ದರ್ಶನ
ಓರೆ ನೋಟವು ಲಿಂಗದ ಭಾವ
ಆಚಾರವೆಂಬೋತಿಯನಿಟ್ಟು,
ಜ್ಞಾನವೆಂಬ ವಸ್ತ್ರವನುಟ್ಟು,
“ಶರಣಸತಿ ಲಿಂಗಪತಿ”ಯಾದರು.   ೧

ಎಕ್ಕೆ ಗೃಹವಾಗಿ , ಮರನೆ ಮಡಕೆಯಾಗಿ,
ಹಣ್ಣೆ ಓಗರವಾಗಿ,
ತಣ್ಣನಡಕಿಲು ಸಿತಾಳವಾಗಿ
ಉಣ್ಣಲಿಕ್ಕಿ ಅಣಿಲೆದಂಬುಲಗೊಟ್ಟರು.ಲ          ೨

ಬೇಡನಾರಂಬವ ಮಾಡುವಪರಿ !
ಬೇರಿಂದ ಕಂದ ಮೂಲಾದಿಗಳ
ಶಾಕವಿಲ್ಲದೆ ಪಾಕವಕಮಾಡಿ,
ತಮ್ಮ ಗಂಡರಿಗಿಕ್ಕಿ ತಾವುಮೇಲುವರಯ್ಯಾ.   ೩

ಎರಳೆ ಸಾರಂಗ ಪುಲಿ ಮೃಗ
ಪಶುವಾನರ ನೆರೆಯಾಗಿರಲು,
ಕೂಗುವ ಕೋಗಿಲೆ (ಕಳಹಂಸೆ)
ಕುಣಿ ಕುಣಿದಾಡುವ ನವಿಲುಗಳು.     ೪

ಸತ್ತು ಸಂಯೋಗದಿಂದ ಭಕ್ತಿರತಿಯ ಕೂಡಲು,
ಸಮತೆಯೆಂಬ ಬಸಿರಾಗಲು,
ಪರಿಣಾಮವೆಂಬ ಮಗ ಹುಟ್ಟಲು
ರೇಕನಾಥಯ್ಯನೆಂದು ಹೆಸರಿಟ್ಟರು.  ೫

೧೧೧

ಪರಿಮಳವಿದ್ದು ಹೃದಯ ಗಮನಾಗಮನವಿಲ್ಲದವಿದೇನೊ?
ಬಯಲ ಸಿಡಿಲು ಹೊಯ್ದಡೆ
ಹಿಂದೆ ಹೆಣನ ಸುಡುವರಿಲ್ಲ ಗುಹೇಶ್ವರ.          ||೫೯||

೧೧೨

ಏಳು ತಾಳಮೇಲೆ ಕೇಳುವ ಸುನಾದ;
ಸ್ಥೂಲ ಸೂಕ್ಷ್ಮಕಾರಣ ರಭಸ;
ಗಂಗೆ ವಾಳುಕ ಸಮಾರುದ್ರರ ತಿಂಥಿಣಿ
ಗಗನಗಂಭೀರದ ಶಿವಸ್ತುತಿಯ ನೋಡ ನೋಡಲು
ಪಿಂಡ ಬ್ರಹ್ಮಾಂಡವಾಯಿತ್ತು;
ಅಖಂಡಿತ ನಿರಾಲ ಗುಹೇಶ್ವರ.        ||೬೦||

೧೧೩

ಬಿತ್ತಿದ ಬೀಜದ ಫಲವು ವಿಪರೀತ ನೋಡಾ.
ತನ್ನಲ್ಲಿ ತಾನೆಯಾಗಿ [19]ಆಗಮವನರಿಯರು.
ತಾನೆ[20] ಸ್ವಯಂಕೃತ ಸಹಜ
ಕೂಡಲಚೆನ್ನಸಂಗಯ್ಯನಲ್ಲಿ ಬಸವಣ್ಣ ನು.       ||೬೧||

೧೧೪

ಜ್ಞಾನಚಕದ್ರ, ಪರಮತತ್ವ, ಪರಮಾರ್ಥ, ಪರಮಜ್ಞಾನ,
ಪರಾಪರ, ವಾಙ್ಮನಕ್ಕಗೋಚರ, ಶಬ್ದಗಂಭೀರ, ಉಪಮಾತೀತ
ಉನ್ನತ ಪರಶಿವಜ್ಞಾನಜ್ಯೋತಿ ಸುಜ್ಞಾನದ ಪ್ರಭೆಯ
ಬೆಳಗಿನೊಳಗೆ ಸುಳಿದಾಡುವ ಪರಮಾನಂದದ ಮಹಾಮಹಿಮಂಗೆ
ಶಿವಜ್ಞಾನವೇ ಶೃಂಗಾರ, ಮಹಾಬೆಳಗೇ ವಿಭೂತಿ,
ಪಂಚಬ್ರಹ್ಮವೇ ದರುಶನ, ಗಗನಸ್ಥಾನವೇ ಕಂಥೆ,
ಆಕಾಶವೇ ಕಪ್ಪರ, ಅಜಾಂಡಬ್ರಹ್ಮಾಂಡವೇ ಕರ್ಣಕುಂಡಲ;
ಆದಿಯಾಧಾರವೇ ಕಕ್ಷಪಾಳ, ಅನಾಹತವೇ ಒಡ್ಡ್ಯಾಣ,
ಅದ್ವೈತವೇ ಯೋಗವಟ್ಟಿಗೆ, ಅಗಮ್ಯವೇ ಯೋಗವಾವುಗೆ,
ಅಚಳಿತವೆ ಖರ್ಪರ, ಅಪ್ರಮಾಣವೇ ಲಾಕುಳ,
ಅವಿಚಾರವೇ ಸುಳುಹು, ಅಕಲ್ಪಿತವೇ ಭಿಕ್ಷ,
ಕೊಂಡುದೆ ಗಮನ, ನಿಂದುದೆ ನಿವಾಸ,
ನಿಶ್ಚಿಂತವೆಂಬಾಶ್ರಮದಲ್ಲಿ ನಿರಾಕುಳವೆಂಬ ಸಿಂಹಾಸನವನಿಕ್ಕಿ
ಗಗನ ಗಂಭೀರದ ಭಾವಿಯೊಳಗೆ, ಅಗೋಚರದ ಅಗ್ಗವಣಿಯತಂದು,
ಮಹಾಘನ ಪ್ರಾಣಲಿಂಗಕ್ಕೆ ಮಂಗಳದ ಬೆಳಗಿನಲ್ಲಿ ಮಜ್ಜನಕ್ಕೆರೆದು
ಬಿಂದ್ವಾಕಾಶವೆ ಗಂಧ, ಮಹದಾಕಾಶವೆ ಅಕ್ಷತೆ,
ಪರಾಪರವೆ ಪತ್ರಿಪುಷ್ಪ, ನಿರ್ಮಳವೆ ಲಿಂಗಾರ್ಚನೆ
ಮಹಾಪ್ರಕಾಶವೆ ಪೂಜೆ, ನಿತ್ಯನಿರಂಜನವೆ ಧೂಪ ದೀಪಾರತಿ
ಸಕಲ ಭುವನಾದಿ ಭುವನಂಗಳೆ ಸಯಿದಾನ,
ಆಚಾರವೇ ಅರ್ಪಿತ, ಮಹತ್ವವೆ ಸಿತಾಳ,
ಅಖಂಡಿತವೆ ಅಡಕೆ, ಏಕೋಭಾವವೆ ಎಲೆ,
ಶುದ್ಧ ಶಿವಾಚಾರವೆ ಸುಯಿಧಾನದ ಸುಣ್ಣ,
ವಿವೇಕ ವಿಚಾರದಿಂದ ವೀಳೆಯವನಧರಿಸುವುದು
ಮಹಾಲಿಂಗದ ಪರಿಣಾಮವೆ ಪ್ರಸಾದ.
ಸಮ್ಯಜ್ಞಾನವೆ ಸಂತೋಷ, ಸಹಜ ನಿರಾಭಾರಿಗಳ
ಮೇಳದಿಂದ ನಿಸ್ಸೀಮದ ನಿಭ್ರಾಂತಿನ ಸಂಗದಲ್ಲಿ
ನಿರಾಶಾಪದವೆ ಅನುಕೂಲ, ನಿಶ್ಶಬ್ದವೆ ಅನುಭಾವ
ಅನುಪಮದ ನಿಶ್ಯೂನ್ಯವೆ ವಿಶ್ರಾಮ, ನಿರಾಕಾರವೆ ಗಮನ
ನಿರಂತರ ಪಾತಾಳ, ಉರ್ಧ್ವಪವನ
ತ್ರಿಭುವನಗಿರಿಯೆಂಬ ಪರ್ವತವನೇರಿ,
ಕಾಯವೆಂಬ ಕದಳಿಯ ಹೊಕ್ಕು ಸುಳಿದಾಡುವ
ಮಹಾಮಹಿಮಂಗೆ ಇಹಲೋಕವೇನು, ಪರಲೋಕವೇನು?
ಅಲ್ಲಿಂದತ್ತ ಅಗಮ್ಯ ನಿರಾಳ ಪರಮಜ್ಞಾನಸಿದ್ಧಿ
ಮಹಾಲಿಂಗದ ಬೆಗಳು.
ಗುಹೇಶ್ವರ, ನಿಮ್ಮ ನಿಜವನರಿದ ಮಹಾಮಹಿಮ ಶರಣಂಗೆ
ನಮೋ ನಮೋ ಎಂಬೆನು.            ||೬೨||

ಇಂತೆಂಬ ಪ್ರಭುಸ್ವಾಮಿಯನು ಅನುಭವಪ್ರಸಾದರಸವಜ್ರವ ಮಂಟಪವೆಂಬ ಮೇರುವಿನ ಶಿಖಾಗ್ರದ ಮಧ್ಯದಲ್ಲಿ ಪಂದ್ಮಾಸನಂಗೈದಿರ್ದ ವೃಷಭ[21]ನ ಮೇಲೆ ಸ್ಥಾಪಿಸಿ, ಬಸವಣ್ಣ ತಾನು ಸಮಸ್ತ ಪ್ರಮಥರ ಕೂಡಿಕೊಂಡು ನೂರೊಂದು ಸ್ಥಲದನುಭಾವದ ಗಣ ಸುಖ ಸಂಕಥಾ ವಿನೋದದಿಂ ಮಹಾ ಭಕ್ತಿ ಸಾಮ್ರಾಜ್ಯ ಸಂಪತ್ತನಾಳುತ್ತಿರ್ದನು. ಇರು[22]ತಿರ್ದ ಬಳಿಕ ಬಸವರಾಜನು ಪರ ಶಿವತತ್ವನು, ಹನ್ನೆರಡುಸಾವಿರ ಪ್ರಮಥಗಣಂಗಳನು, ಲಕ್ಷದ ಮೇಲೆ ತೊಂಬತ್ತಾರು ಸಾವಿರ ಜಂಗಮದೇವರುಗಳನು, ವಜ್ರಪರ್ವತದ ಮೇಲೆ ಮೂರ್ತಿಗೊಳಿಸಿ, ಈ ವಜ್ರವಾಸವೆಂಬ ಕೈಲಾಸಕ್ಕೂ ಆ ಚಿದ್ಬ್ರಹ್ಮಾಂಡಕ್ಕೂ, ಆ ಚಿದ್ಬ್ರಹ್ಮಾಂಡದೊಳಗಡಗಿದ ಮಹಾ ಶಿವಲೋಕಂಗಳಿಗೆಯೂ ಮುಂದೆ ಬರುವ ಕೆಲಕಾಲದಿಂದತ್ತತ್ತ ಹುಟ್ಟುವ ಮನಮಾಯಾಕರ್ಮಂಗಳಿಗೆಯೂ, ಅವರಿಂದ ಹುಟ್ಟುವ ಷಡುದೇವತೆಗಳಿಗೆಯೂ, ಅವರಿಂದ ಹುಟ್ಟುವ ಪಂಚಭೂತಂಗಳು ಮುಖ್ಯವಾದ ಯುಗ ಏಳು ಲೋಕಂಗಳಿಗೆಯೂ, ಅವರೊಳಗಣ ಮನುಮುನಿ ದೇವದಾನವ ಮಾನವರುಗಳಿಗೆಯೂ ಕರ್ತೃವಾದಿರಿ. ನಾ ಮೊದಲಾದ ಸಕಲ ಶರಣರಿಗೆಯೂ ಗುರುವಾದಿರಿ. ವಜ್ರಪರ್ವತದ ಮಧ್ಯದಲ್ಲಿದ್ದ ಹಾಂಗೆಯೆ ಮನಕ್ಕೆ ಮನೋಹರವಾದಿರಿ. ಎಂದು ಸಮಸ್ತ ಗಣಂಗಳ ಮುಂದಿಟ್ಟು ಬಿನ್ನಹಂ ಮಾಡಿ ಚಿದ್ವಿಭೂತಿಯನು ಪರಶಿವನ ಲಲಾಟಕ್ಕೆ ಧರಿಸಿ, ಪಟ್ಟವಂ ಕಟ್ಟಿರಿಸಿ, ಅಡ್ಡ ಬಿದ್ದೆದ್ದು ನಿಮಗೆಯೂ, ನಮಗೆಯೂ ಎಂದೆಂದಿಗೆಯೂ ಭಿನ್ನವಿಲ್ಲವೆಂದೆನುತ್ತ ಬಸವೇಶ್ವರದೇವರು ಷಡುಸ್ಥಲ ಸಂಪನ್ನರನು ತಮ್ಮೆಲ್ಲರ ಸಮಯಾಚಾರದ ಎಂಬತ್ತುನಾಲ್ಕುಸಾವಿರ ಜಂಗಮದೇವರುಗಳನು ಬಿಜಯಂಗೈಸಿಕೊಳ್ಳುತ್ತ ಅನುಭವರಸವಜ್ರದ ಮಹಾ ಮೇರುಮಂದಿರದನಾಳಂಗಳ ಸೋಪಾನಂಗಳೊಳಗಿಳಿದು ಚಿತ್ತವಿಸುತ್ತ ನೂರೊಂದು ಸ್ಥಲದ ಮೇಲೆ ಹತ್ತಿ ಹೋದಂತೆ ಹೋಗಿ ಇಳಿವಂತಿಳಿದು ಬಂದೆವೆಂದು ಸಂತೋಷಂ ಮಾಡುತ್ತ ಆ ಮಹಾ ಪ್ರಸಾದರಸ ವಜ್ರಮಂಟಪದಡಿಯ ಒಂದು ನೆಲೆಯಂ ಬಿಟ್ಟು ಮೇಲಣ ನೆಲೆಯ ಪದ್ಮ ಪೀಠ ಮಧ್ಯದಲ್ಲಿ ಮೂರ್ತಿಗೊಂಡು ಬಸವಾದಿ ಭಕ್ತ ಗಣಂಗಳು ನೋಡುವಾಗ ನೆಲೆ ನವರಂಗವಾಗಿ ತೋರಿತ್ತು. ಒಂದು ಕೋಟಿಯೂ ಇಪ್ಪತ್ತೈದು ಲಕ್ಷವು ಇಪ್ಪತ್ತೈದುಸಾವಿರ ಯೋಜನ ಪ್ರಮಾಣವಾಗಿ ಇದ್ದಿತ್ತು. ಆ ನೆಲೆಯೊಳ ಉ ಹನ್ನೆರಡು ಸಾವಿರ ಜಂಗಮದೇವರುಗಳು ಯುಕ್ತವಾಗಿ ಭವನೆಂಬ ಷಡುಸ್ಥದ ಬ್ರಹ್ಮಿ ಶಿವ ಬಸವರಸರ ನಿರೂಪಣೆಯಿಂದಿರುತ್ತಿರ್ದನು. ಇರಲಾಗಿ ಬಸವಣ್ಣ ಗಣ ಸಂಯೋಗವಾಗಲಲ್ಲಿಂದ ಮೇಲೆ ನಾನೂರೂಕೋಟಿ ಯೋ ಜನ ಪ್ರಮಾಣಿನ ಎರಡು ನೆಲೆಗೆ ಅಖಂಡಿತತತ್ವದಿಂ ತೆರಳಿ ಗಣಸ್ತೋಮವನೆಲ್ಲ ನೋಡುವಾಗ, ಆ ನೆಲೆ ನವರಂಗವಾಗಿ ತೋರಿತ್ತು. ಒಂದು ಕೋಟಿಯು ಎಪ್ಪತ್ತ ಐದು ಲಕ್ಷವು ಇಪ್ಪತ್ತೈದು ಸಾವಿರ ಯೋಜನ ಪ್ರಮಾಣುವಾಗಿದ್ದಿತ್ತು. ಆ ನೆಲೆಯೊ ಳು ಹನ್ನೆರಡು ಸಾವಿರ ಜಂಗಮ ದೇವರುಗಳು ಯುಕ್ತವಾಗಿ ರುದ್ರನೆಂಬ ಷಡುಸ್ಥಲ ಬ್ರಹ್ಮಿ ಬಸವೇಶ್ವರನ ನಿರೂಪಣೆಯಿಂದಿರುತ್ತಿ[23]ರ್ದನು. ಬಳಿಕ ವಸವಣ್ಣನು ಗಣ ೨.( ರಲಿಕ್ಕಾಗಿ ಬಸವಣ್ಣ ಗಣ ಮೇಳದ (ಬ). ಸಂಯೋಗವಾಗಿ ಅಲ್ಲಿಂದ ಮೇಲೆ ನಾನೂರು ಕೋಟಿ ಯೋಜನ ಪ್ರಮಾಣಿನ ಮೂರನೆಯನೆಲೆಗೆ ಬಿಜಯಂಗೈದು ನೋಡುವಾಗ ಆ ನೆಲೆ ನವರಂಗವಾಗಿ ತೋರಿ ಒಂದು ಕೋಟಿಯು ಎಪ್ಪತ್ತೈದು ಲಕ್ಷವು ಇಪ್ಪತ್ತೈದು ಸಾವಿರ ಯೋಜನ ಪ್ರಮಾಣುವಾಗಿದ್ದಿತ್ತು. ಆ ನೆಲೆಯೊಳು ಹನ್ನೆರಡು ಸಾವಿರ ಜಂಗಮ ದೇವರುಗಳು ಸಂಬಂಧವಾಗಿ ಸದಾಶಿವನೆಂಬ ಷಡುಸ್ಥಲ ಬ್ರಹ್ಮಿಯು ಬಸವಯ್ಯನ ವಾಕ್ಯವಿಡಿದಿರುತ್ತಿರ್ದನು. ಇ[24]ರಲಿಕೆ ಬಸವಣ್ಣನು ಆರನೆಯ ನೆಲೆಗೈದಿ ನೋಡುವಾಗ ಆ ನೆಲೆ ನವರಂಗವಾಗಿ ತೋರಿ ಒಂದು ಕೋಟಿಯು ಎಪ್ಪತ್ತೈದು ಲಕ್ಷವು ಇಪ್ಪತ್ತೈದು ಸಾವಿರ ಯೋಜನ ಪ್ರಮಾಣುವಾಗಿದ್ದಿತ್ತು. ಆ ನೆಲೆಯೊಳು ಹನ್ನೆರಡು ಸಾವಿರ ಜಂಗಮ ದೇವರುಗಳು ಸನ್ನಹಿತವಾಗಿ ಶಾಂತ್ಯಾತೀತನೆಂಬ ಷಡುಸ್ಥಲ ಬ್ರಹ್ಮಿ ಬಸವ ಗುರುವಿನ ನಿರೂಪಣೆಯಿಂದಿರುತ್ತಿರ್ದನು. ಇರುತ್ತಿರ್ದ[25] ಬಳಿಕಲ್ಲಿಂದಂ ಮೇಲೆ ನಾನೂರು ಕೋಟಿ ಯೋಜನ ಪ್ರಮಾಣಿನ ಏಳನೆಯ[26] ಶಿಖಾಗ್ರದಲ್ಲಿ ಲಕ್ಷದ ಮೇಲೆ ನೂರೆಂಟು ಸಾವಿರ ಜಂಗಮ ದೇವರುಗಳು ಯುಕ್ತವಾಗಿ ಪರಶಿವ ಬಸವ ಸ್ವಾಮಿಯ ಭಕ್ತಿ ನಿರೂಪಣೆಯಿಂದಿರುತ್ತಿರ್ದನು. ಇಂತಪ್ಪ ವಜ್ರದ ಮೇರುವಿನ ಅಡಿ ನಾನೂರು ಕೋಟಿ ಯೋಜನ ಪ್ರಮಾಣುವಾಗಿಪ್ಪುದು. ಅಂತಪ್ಪ ವಜ್ರದ ಮಹಾ ಮೇರು ಗುಂದಿರದಡಿ ಮುಡಿ ನಡುವೆಲ್ಲಾ ಠಾವಿನೊಳಗೆಯು ಬಸವರಾಜದೇವರು ಹನ್ನೆರಡು ಸಾವಿರ ಜಂಗಮ ದೇವರುಗಳು ಸಹಿತ ಪರಿಪೂರ್ಣತ್ವದಿಂದಿರುತಿರ್ದ್ದನು. ಇಂತೆಂಬ ಪುರಾತನಗ ಣಿತ ವಚನ ಸಾರಾಯವಪ್ಪ ಅಮೃತವಾಕುಗಳಿಗೆ ಸಾಕ್ಷಿ.


[1] x (ಬ)

[2] x (ಬ)

[3] x (ಬ)

[4] x (ಬ)

[5] + ವಿನೋದದಿಂ (ಬ)

[6] ತಿರ್ದನು ಆ (ಬ)

[7] + ಕಂಗಳು (ಬ)

[8] ಬೀಸಿ (ಬ)

[9] ಬೀಸಿ (ಬ)

[10] + ಲಕ್ಷದಮೇಲೆ ತೊಂಬತ್ತಾರುಸಾವಿರ ಅಂತು ಲಕ್ಷದಮೇಲೆ ನೂರಾತೊಂಬತ್ತೆರಡುಸಾವಿರ ಭಕ್ತಮಾಹೇಶ್ವರರು ಷಡುಸ್ಥಲ ಬ್ರಹಂಗಳು ಗುರುಸ್ವರೂಪ ಮಂತ್ರಶಕ್ತಿಗಳು ನಿಂ (ಬ)

[11] + ರಲು ಕೆಲಗಣಂಗಳು ಉಘೆ ಚಾಂಗು ಭಲಾ ಎನುತ್ತ ಷಡುಸ್ಥಲಗಣ ಸ್ವಯಾನುಭಾವವನೆ ಸ್ತೋತ್ರವಾಗೆತ್ತಲವರ ಸುವಾಕ್ಯಂಗಳು ಪಂಚಮ (ಬ)

[12] ಶರೀರ (ಬ)

[13] ಶರೀರ (ಬ)

[14] ಶರಣರೊ(ಬ)

[15] ಶರಣರೊ(ಬ)

[16] ಶರಣರೊ(ಬ)

[17] ಶರಣರೊ(ಬ)

[18] + ನಾನಾಪ್ರಕಾರದ (ಬ)

[19] ಆಗಮವನೇಱೆದಾತನೆ (ಚ. ಬ. ವ. ೨೨)

[20] ಆಗಮವನೇಱೆದಾತನೆ (ಚ. ಬ. ವ. ೨೨)

[21] ಭೇಶ್ವರ (ಬ)

[22] + ತ್ತಿರು (ಬ)

[23] ರಲಿಕ್ಕಾಗಿ ಬಸವಣ್ಣ ಗಣ ಮೇಳದ (ಬ)

[24] ರುತ್ತಿ (ಬ)

[25] + ರು (ಬ)

[26] + ನೆಲೆಯ (ಬ)