೮೯

ಆದ ಅನಾದಿ ಹದಿನಾಲ್ಕು ಲೋಕ ಕಾಲಕಲ್ಪಿತ
ಮಕಂತ್ರ – ತಂತ್ರ, ಹೋಮ – ನೇಮ, ಸಂಧ್ಯಾ

[1] ಸಮಾಧಿ
ಮೌಂಜಿಕರ್ಮ ನೀರು ನೇಣು ಯಜ್ಞೋಪವೀತ ಹುಟ್ಟಿದಂದು.
ಒಬ್ಬ ಶರಣ, ಲಿಂಗ ಜಂಗಮಕ್ಕೆ ಭಕ್ತಿ ಮಾಡುತ್ತಿಪ್ಪುದ ಕಂಡೆನಯ್ಯಾ.
ಆ ಶರಣನ ಭಕ್ತಿಯೆಂಬ ಚಿತ್ಪಿಂಡದೊಳಗೆರಡು ಸಾವಿರದೆಂಟುನೂರುಕೋಟಿಒ
ಯೋಜದುದ್ದದೊಂದು ಮಹಾಲೋಕ
ವಜ್ರದಂತೆ ಅಡಗಿಪ್ಪುದ ಕಂಡೆನಯ್ಯಾ.
ಆ ಮಹಾ ವಜ್ರಪಿಂಡ ಲೋಕದಿಂದ ಹದಿನಾಲ್ಕು
ಲೋಕವಾಗಿಪ್ಪುದ ಕಂಡೆನಯ್ಯಾ.
ಈ ಹದಿನಾಲ್ಕು ಲೋಕದಿಂದತ್ತಲರಿಯದಿಪ್ಪ
ಷಡು ಸಾದಾಖ್ಯ ನಾಯಕರ ಹೆಂಡಿರೆಲ್ಲಾ
ಓಲೆದೆಗದು ಹೋಯಿತ್ತಕಂಡೆ ಗುಹೇಶ್ವರಾ.    ||೩೭||

ಇಂತೆಂಬ ಪ್ರಭುಲಿಂಗದ ಶರಣ ಸತಿ[2]ಯೆಂಬ[3] ಬಸವಣ್ಣ ತನ್ನೊಳಂತರ್ಗ ತವಾಗಿರ್ದ ಮಹಾಶಿವಲೋಕವನು ಬಹಿರ್ಗತವ ಮಾಡಿ ತೋರಬೇಕೆಂದಿಚ್ಛೈಸಿ[4] ಆ ನಿಜ ನಿತ್ಯತ್ವದ ಜಂಗಮ ಭಕ್ತಿಯೆಂಬ ಹಸೆಯ ಮೇಲಿರ್ದನಂತಕೋಟಿ ಗಣಂಗಳ ಮೇಲೆ ತೊಂಬತ್ತಾರು ಸಾವಿರ ಪ್ರಮಥ ಗಣಂಗಳಿಗೆಲ್ಲಕ್ಕೂ ದ್ವೈತಾದ್ವೈತವೆಂಬೆರಡಿಲ್ಲದೆ ಭಕ್ತಿ ಜ್ಞಾನ ವೈರಾಗ್ಯ ಮುಖ್ಯವಾದ ಷಡುಸ್ಥಲದನುಭಾವವನೆ ಮಾಡುತ್ತ ಗುರೋಹಂ ಶಿವೋಹಂ, ಸೋಹಂ ದಾಸೋಹಂ, [5]ಕೋಹಂ[6] ಚಿದೋಹಂ ನಾಹಂ ಎಂದಿಂತ್ತು ಏಳು ಸ್ವರ ಕೂಡಿ ನೂರೊಂದು ಸ್ಥಲ ಕುಳದ ಪರಿಯಾಯದ ಮೇಲೆ ಮಹಾಪ್ರಜ್ಞತ್ವದಿಂ ಮೂಲ ಗೌಣವಾದ ವಚನ ಪ್ರಸಂಗದ ನಿರೂಪವ ಚಿತ್ತೈಸುತ್ತಿರುವಾಗ, ಆ ನೂರೊಂದು ಸ್ಥಲದನುಭಾವ ರಸ ಬಸವಣ್ಣನ ಜಿಹ್ವೆಯೊಳಗಿಂದ ಭಕ್ತಿ ಜ್ಞಾನ ವೈರಾಗ್ಯವೆಂಬ ಮಹಾವಜ್ರದ ಗುಂಡಾಗಿ ಗಣಂಗಳ ಮಧ್ಯಕ್ಕೆ ಝುಣುಪಿ ಬಿದ್ದು ಭಕ್ತಿಹಸೆಯ ತಟವಾಯಿದು ಶಕ್ತಿಹಸೆಗೆ ಮೂಲಪ್ರಣಮನಾದ ಘೋಷಂಗಳಿಂದೆರಗಿ [7]ತಟ್ಟಲುಚ್ಚಿ,[8] ಅಲ್ಲಿಂದ ಕೆಳಗಣ ಸಕಲ ಚೈತನ್ಯವೆಂಬ ಹಸೆಗೆರಗಲದರ ಭರಭಾರಮಂ ಚೈತನ್ಯ ಹಸೆ[9]  ತಡೆಯಲದರ ಮೇಲೆ ಮೂರ್ತಿಗೊಂಡು ಮತ್ತೆ ಊರ್ಧ್ವಕ್ಕೆ ಮಹಾಸ್ಥೂಲವಾಗಿ ಬಂದವಿರಳದೊಳಗೆ ಬೆಳದನುಭವ ಬ್ರಹ್ಮಾಂಡವನು ಮೀರಿದ ಬಳಿಕಲ್ಲಿಂದ ಮೇಲೆ ಪ್ರಕಾಶ ಬ್ರಹ್ಮಾಂಡವನು ಮೂಲ ಮಂತ್ರಂಗಳ ನಾದಯುಕ್ತವಾಗಿ ಮೀರಿ ಆ ಚಿದ್ಬ್ರಹ್ಮಾಂಡವ ನೂರೊಂದು ಯೋಜನ ಪ್ರಮಾಣವನು ಮೇಲೆ ಮಿಗಿಲೆನಿಸಿ ತಾನು ದತ್ತೂರದ ಹೂವಿನಂತೆ ಹೆಗ್ಗಾಳೆಯ ತಲುಪಿನಂತೆ ಕೆಲ ತೆರಪನೊಳಕೊಂಡು ಮಹಾ ಶ್ವೇತವರ್ಣವಾಗಿ, ತನ್ನ ತಾನೆ ವಿವೇಕಿಸಿ ನೋಡಿ ತನ್ನಡಿ ಮುಡಿ ನಡುವ ತಾನೆ ಕಂಡು ಕರಣದಿಂದೊಪ್ಪಿನಿಂದ ಬಳಿಕ ತಾನು ಗುರುಲಿಂಗ ಜಂಗಮಕ್ಕೆ ತನು ಮನ ಧನವ ಸವದು ಷಡುಸ್ಥಲ ಮಾರ್ಗವ ತಿಳಿದು ಭಕ್ತಿಯಾಗಿ ಜಂಗಮದ ಪಾದತೀರ್ಥ ಪ್ರಸಾದವ ಲಿಂಗಕ್ಕೆ ಕೊಟ್ಟುಕೊಂಡ ಭಕ್ತರನೊಳಕೊಂಬೆ, ಈ ವರ್ಮವನರಿಯದ ಪ್ರೇತ ಲಿಂಗ ಸಂಸ್ಕಾರಿಗಳ ಎಂದೆಂದಿಗೆಯು ಒಳಕೊಳ್ಳೆನೆಂಬ ಮಹಾ ಬಿರಿದಿನ ಭಾಷೆಗಳಂ ಹಿಡಿದ ಬಳಿಕ ಕೆ[10]ಲ ಹಿಗ್ಗಿ ಬೆಳ ಬೆಳದು ಹೊಳ ಹೊಳದು ಥಳಥಳಸಿ ಬೆಳ ಬೆಳಗಿನೊಳಗೆ ಬೆಳಗಾಗಿಪ್ಪುದಂ ಆ ಭಕ್ತಿ ಹಸೆಯ ಮೇಲೆ ಬಿಜಯಂಗೆಯ್ದಿರ್ದ ಪರಮ ಶಿವ ಬಸವಣ್ಣಾದಿ ಪ್ರಮಥರೆಲ್ಲರು ಕಂಡು, ಮುಂದೆ ಹುಟ್ಟುವ ಮನ ಮಾಯೆ ಷಡುದೇವತೆಗಳನೊಳಕೊಳ್ಳದ ಮಹಾ ವಜ್ರದ ಮೇರುವೆಯ ಜಯ ಜಯ, ಯುಗವೇಳು ಲೋಕಂಗಳ ಹೊದ್ದದ ಷಡುಸ್ಥಲದ ಮಹಾನುಭಾವ ಪ್ರಸಾದ ರಸ ಮೇರುವೆ ಜಯ ಜಯ, ಅಷ್ಟಕುಲ ಪರ್ವತಂಗಳ ಹೊದ್ದದ ಮಹಾ ಮೇರುವೆ ಜಯ ಜಯ, ಹಗಲಿರುಳನೊಳಕೊಳ್ಳದ ನಿರಾಕಾರದ ಮಹಾ ಮೇರುವೆ ನಮೋ ನಮೋ, ಅರಿವು ಮರವೆಯನೊಳಕೊಳ್ಳದ ಸಾಕಾರ ಮಹಾ ಮೇರುವೆ ನಮೋ ನಮೋ, ಪುಣ್ಯ ಪಾಪವನೊಳಕೊಳ್ಳದ ಆಕಾರ ಮಹಾ ಮೇರುವೆ ನಮೋ ನಮೋ, ಮಹಾಲಿಂಗದ ನಿಲವೆ ನಮೋ ನಮೋ, ಮಹಾಶಕ್ತಿಯ ನಿಲವೆ ನಮೋ ನಮೋ, ಮಹಾಶರಣನ ನಿಲವೆ ನಮೋ ನಮೋ, ಮರೆಹೊಕ್ಕವರ ಕಾಯಿವಾತನೆ ನಮೋ ನಮೋ, ಮಾರಾಂತವರ ಕೊಲುವಾತನೆ ನಮೋ ನಮೋ, ಶರಣಾಗತ ವಜ್ರವೆಂಬ ಬಿರಿದನುಳ್ಳಾತನೆ ನಮೋ ನಮೋ, ಮಹಾಗಮ್ಮನೆ ನಮೋ ನಮೋ, ಮಹಾ ಗೋಚರಾಯ ನಮೋ ನಮೋ, ಮಹಾ ಅಪ್ರಮಾಣಾಯ ನಮೋ ನಮೋ, ಮಹಾ ಸ್ಥೂಲಾಯ ನಮೋ ನಮೋ, ಮಹಾ ಸೂಕ್ಷ್ಮಾಯ ನಮೋ ನಮೋ, ಮಹಾ ಕಾರಣಾಯ ನಮೋ ನಮೋ. ಇಂತೆಂಬ ಸ್ತೋತ್ರ ಸಮಯದಲ್ಲಿ ತನ್ನಡಿಯು ಮುಡಿಯು ಒಂದು ಸಮಾನವಾಗಿ ಮಹಾ ಶರಣ ಬಸವಣ್ಣನಂತೆ ಮನೋಹರದ ಸಿದ್ಧಿಯನೊಳಕೊಂಡು ಮಹಾ ಮೇರುಮಂದಿರವೆಂಬ ನಾಮಮಂ ಧರಿಸಿ, ನಿತ್ಯತ್ವದಿಂ ಮೂರ್ತಿಗೊಂಡು ಷಡುಸ್ಥಲ ಮಾರ್ಗದೊಳಗೆ ನಿಂದ ಭಕ್ತ ಮಾಹೇಶ್ವರದೊಳಗೆ ತಾನಿಂದು ತನ್ನೊಳಗವರು ನಿಂದು ಪಂಚ ತಂಡದವರುಗಳೆಲ್ಲ ಹಾರೈಸುವಂತೆ ನಿಂದಿತ್ತು. ಇಂತೆಂಬ ಶರಣರಗಣಿತವಚನ ರಸಾಮೃತಕ್ಕೆ ಸಾಕ್ಷಿ.

೯೦

ಲಿಂಗಾರ್ಚನೆ ಇಲ್ಲದ ಮುನ್ನ, ಸಿಂಗಿಯನಾರೋಗಿಸಿದಿರಿ.
ಸಂಧ್ಯಾ ಸಮಾಧಿಗಳಿಲ್ಲದ ಮುನ್ನ ಉಂಡಿರಿ ಚೆನ್ನನ ಮನೆಯಲ್ಲಿ.
ಚಿತ್ರಗುಪ್ತರು ಅರಿಯದ ಮುನ್ನ ಎತ್ತಿದಿರಿ ಕಾಂಚಿಯ ಪುರವ;
ಬೈಚಿಟ್ಟಿರಿ ಕೈಲಾಸವ.
ನಿಮ್ಮ ಚಿಕ್ಕುಟುದರದಲ್ಲಿ ರೋಮಕೂಪದೊಳಗೀರೇಳು
ಲೋಕಂಗಳೆಲ್ಲ ಅಡಗಿದವು.
ಪ್ರಾಣ ಅಪಾನ ವ್ಯಾನ ಉದಾನ ಸಮಾನವೆಂಬೀ
ಪಂಚವಾಯುಗಳಿಲ್ಲದಾತನು ಕಾಣಾ
ಗುಹೇಶ್ವರ ನಿಮ್ಮ ಶರಣ ಬಸವಣ್ಣನು.           |೩೮||

೯೧

ಅರಿವರತು ಬೆರಗು ಹತ್ತಿತ್ತೆಂಬ ಜ್ಞಾನವಿದೇನೊ!
ನಾಹಂ ಎಂಬಲ್ಲಿ ತಾನಾರು, ಕೋಹಂ ಎಂಬಲ್ಲಿ ತಾನಾರು,
ಸೋಹಂ ಎಂಬಲ್ಲಿ ತಾನಾರು, ದಾಸೋಹಂ ಎಂಬಲ್ಲಿ ತಾನಾರೊ|
ಗುರುರೋಹಂ ಎಂಬಲ್ಲಿ ತಾನಾರೊ, ಶಿವೋಹಂ ಎಂಬಲ್ಲಿ ತಾನಾರೊ
ಚಿದೋಹಂ ಎಂಬಲ್ಲಿ ಮುನ್ನ ತಾನೇಂ[11]ನಾಗಿರ್ದನೊ,
ನಿಶ್ಯಬ್ದ ಬ್ರಹ್ಮಮುಚ್ಯತೆ ಎಂಬ ಶಬ್ದವನರಿದು
ಮತ್ತೆ ನುಡಿದು ಬಳಲುವ ಕಾರಣವಿದೇನೊ ಗುಹೇಶ್ವರಾ?           ||೩೯||

೯೨

ಗಗನಮಂಡಲದ ಸೂಕ್ಷ್ಮನಾಳದಲ್ಲಿ
ಸೋಹಂ ಸೋಹಂ ಎನುತ್ತಿರ್ದುದೊಂದು ಬಿಂದು.
ಅಮೃತವಾರಿಧಿಯ ದಣಿಯಲುಂಡ
ತೃಪ್ತಿಯಿಂದ, ಗುಹೇಶ್ವರ ನಿಮ್ಮಲ್ಲಿಯೆ ಎನಗೆ ನಿವಾಸವಾಯಿತ್ತು.             ||೪೦||

೯೩

ನಾಭಿ ಮಂಡಲದುದಯವೆ ಉದಯ.
ಮಧ್ಯ[12] ನಿರಾಳದ ನಿಲವಿನ ಪರಿಯ ನೋಡಾ.
ಪವನ ಸೂಲದ ಮೇಲೆ ಪರಿಣಾಮ ನೋಡಾ.
ಊರ್ಧ್ವಮುಖದಲ್ಲಿ ಉದಯವಾಯಿತ್ತ ಕಂಡೆ.
ಮಿಂಚುವ ತಾರಕಿದೇನೊ ಗುಹೇಶ್ವರಾ.         ||೪೧||

೯೪

ನೆನೆನೆನೆ ಎಂದಡೆ ಏನ ನೆನೆವೆನಯ್ಯಾ.
ಎನ್ನ ಕಾಯವೆ ಕೈಲಾಸವಾಯಿತ್ತು,
ಮನವೆ ಲಿಂಗವಾಯಿತ್ತು,
ಅರುವೆಂಬ ತನು ಸೆಜ್ಜೆಯಾಯಿತ್ತು.
ನೆನವಡೆ ಭಕ್ತನುಟೆ?
ನೋಡುವಡೆ ದೇವನುಂಟೆ?
ಗುಹೇಶ್ವರನೆಂಬ ಲಿಂಗವು ಲೀಯವಾಯಿತ್ತು.  ||೪೨||

೯೫

ನೆಲನಿಲ್ಲದ ಭೂಮಿಯ ಮೇಲೆ ಒಂದು ಗಿಡ ಹುಟ್ಟಿತ್ತು.
ಆ ಗಿಡುವಿಂಗೆ ಸಿಡಿಲ ಬಣ್ಣದವೆಂಟು ಹೂವಾದವು ನೋಡಾ.
ಕೊಂಬಿನೊಳಗೆ ಫಲದೋರಿ, ಬೇರಿನೊಳಗೆ ಹಣ್ಣಾಯಿತ್ತು.
ಆರೂ ಕಾಣದ ಠಾವಿನಲ್ಲಿ ತೊಟ್ಟು ಬಿಟ್ಟು ಬಿದ್ದ ಹಣ್ಣು
ಮಹಾ ಜ್ಞಾನರೂಢವಾಗಿ
ನಿರ್ಭಾವ ಹಸ್ತದಿಂ ಪಿಡಿದು ಮೆದ್ದವನಲ್ಲದೆ ಶರಣನಲ್ಲ ಗುಹೇಶ್ವರಾ. ||೪೩||

೯೬

ಅಂಬರವಿಲ್ಲದ ಮೇರು ಅಂಬು [13] ಧಿಯಿ[14]ಲ್ಲದ ಗುಂಪು
ತಂದವರಿಲ್ಲದೆ [15]ಬಂದಿತ್ತು,[16] ನಿಜ ಒಳಕೊಂಡಿತ್ತು.[17]ಸೈದಾನ [18]ವಿಲ್ಲದ ಓಗರವ ಭಾಜನವಿಲ್ಲದೆ ಗಡಣಿಸಿ
ಭೋಜನವಿಲ್ಲದೆ ತೃಪ್ತಿ ಆಯಿತ್ತು.
ಕ್ರಿಯಾ ವಿರಹಿತ ಯೋಗ ಫಲದಾಯಕ ಹೀನ ಭಕ್ತಿ
ಆಯತ ಸ್ವಾಯತವನರಿಯದೆ ಹೋಯಿತ್ತು ಗುಹೇಶ್ವರಾ.           ||೪೪||

ಇಂತಪ್ಪ ಮಹಾ ಮೇರುವಿನ ನಿಲವು, ಉದ್ದವು, ಬುಡದ ತೆರಪು, ಮಧ್ಯದ ಗಾತ್ರವು, ತುದಿಯ ವಿಸ್ತೀರ್ಣವು ಎಷ್ಟು ಪ್ರಕಾರವು, ಹೇಂಗೆ ಹೇಂಗಿಹುದಯ್ಯಾ ಎಂದಡೆ: ಅಡಿಯು ಮುಡಿಯು ಸಮಾನಿಸಿದ ಕೆಲಸ ಗತಿಯನುಳ್ಳ ಬೆಳ್ಳಿಯಘನ ದೀಪದ ಕಂಬದ ಹಾಂಗೆಯು ಅಡಿ[19]ಯ ಮೂಲವು ಹರಕರಿಸಿ ಮುಡಿಯ ಶಾಖೆಯು ಹರಕರಿಸಿರ್ಪ ವಟವೃಕ್ಷದ ಹಾಂಗೆಯು, ಅಡಿಯ ಮುಡಿಯ ಪ್ರಮಾಣಿಸಿ ಮಾಡಿದ ವಜ್ರದ ವಿಭೂತಿಯ ಹಲಗೆಯ ಹಾಂಗೆಯು , ಅಡಿ ಮುಡಿಯ ಸಂಧಾನಿಸಿ ಗೈದ ಸ್ಫಟಿಕದ ಪೀಠದ ಹಾಂಗೆಯು, ಇವರಾಯತದಂ ತಿಪ್ಪುದೆಂದರಿವುದು, ಸಕಲ ಭಕ್ತ ಮಾಹೇಶ್ವರರು. ಅಂತಪ್ಪ ಆ ಮಹಾ ಮೇರುವಿನಡಿಯ ವಿಸ್ತೀರ್ಣ ಎರಡು ಕೋಟಿಯು ಐವತ್ತಾರುಲಕ್ಷ ನೂರೆಪ್ಪತ್ತು ಸಾವಿರಯೋಜನ ಪ್ರಮಾಣು. ಆ ಮಹಾಮೇರುವಿನ ಮುಡಿಯಗಲವು ಎರಡು ಕೋಟಿಯು ಐವತ್ತಾರುಲಕ್ಷವು ನೂರೆಪ್ಪತ್ತುಸಾವಿರ ಯೋಜನ ಪ್ರಮಾಣು. ಆ ಮಹಾಮೇರುವಿನ ವಿಶುದ್ಧಿ ಚಕ್ರದ [20]ಲಿಂಗ[21] ಚಕ್ರದ ಆ ಎರಡರ ಮಧ್ಯದ ಗಾತ್ರ ಒಂದು ಕೋಟಯು ಇಪ್ಪತ್ತೆಂಟು ಲಕ್ಷವು ಎಂಬತ್ತೈದುಸಾವಿರ ಯೋಜನ ಪ್ರಮಾಣವಾಗಿ, ಪ್ರಸಾದರಸವಜ್ರದ ಮಂಟಪವೆಂಬ ಕೈಲಾಸವೆನಿಸಿತ್ತು. ಆ ವಜ್ರ ಕೈಲಾಸದ ಸ್ಥೂಲಾಯಮಾನವು ಎರಡು ಸಾವಿರದೆಂಟುನೂರುಕೋಟಿ ಯೋಜನ ಪ್ರಮಾಣವಾಗಿ ನಿಂದಿಹುದು. ಆ ಸ್ಥಲ ಕುಳದನುಭವ ರಸ ವಜ್ರ ಮೇರು ತನ್ನ ಪಾದದಿಂ ಮಸ್ತಕ ಪರಿಯಂತರವು ಸ್ಥೂಲ ಸೂಕ್ಷ್ಮ ಕಾರಣವೆಂಬ ಮೂರು ತನುವಾಗಿ, ಮೂರೊಡಲಾಗಿ ಮೂರು ಹೊರೆಯಾಗಿ, ಚವುಕವಪ್ಪಿನಿಂದಿಹುದು. ಅಂತಪ್ಪನುಭವರಸ ಮೇರುವಿನ ಹೊರಗಣ ಜಾಳಂದ್ರಂಗಳು ಒಣಗಣ ನಾಳಂಗಳು ಅವರೊಳಗಣ ಸೊಪಾನದಚ್ಚುಗಳು ಆವುದರಂತಿಪ್ಪವೆಂದಡೆ: ಉಪ್ಪರಿಗೆಯ ಜಾಳಂದ್ರಗಳಂ ನಾಳಂಗಳ ಸೋಪಾನಂಗಳಂತೆ ತುದಿಮೊದಲು ನಡುವೆಲ್ಲಿಯೂ ಸಕಲ ಕೆಲಸ ಉಂಟಾಗಿನಿಂದಿಹುದು. ಹಾಂಗೆ ನಿಂದಂಥಾ ಪ್ರಸಾದ ಮಂಟಪವೆಂಬ ಮೇರುವಿನ ಬೆನ್ನಿನ ಕುಶಲಂಗಳು ಹೇಗಿದ್ದಾವಯ್ಯಾ ಎಂದಡೆ: ಮನೋಹರದ ಸಿದ್ಧಿಯನೊಳಕೊಂಡ ವಿಚಿತ್ರದ ಕೆಲಸಗತಿಗಳಂತೆ ತೋರಿಕೊಂಡು ಮೆರವುತ್ತ ಮತ್ತೆ ಖಂಡಣಿಸಿದ ಅಚ್ಚು ಕಿರಣೆಯ ಕೆಲಸ ಗತಿಗಳಂ ಕಾಣಿಸಿ ಬಸವಣ್ಣನ ವಿಶ್ವತೋಮುಖದ ಸ್ವರೂಪವನು ಧರಿಸಿ ಒಪ್ಪಿರುತ್ತಿಹವು. ಆ ಮೇರು ಮಂದಿರದೊತ್ತಿನೊಳಗಣ ನಾಳಂಗಳು ಕಮಲಂಗಳ ಬಳ್ಳಿಯ ನಾಳಂಗಳಂತಿಹವು. ಆ ಮೇರುವಿನೊಳಗಣಚ್ಚುಗಳು ರಾಜೀವ ಬಳ್ಳಿಯೊಳ ಗಣಚ್ಚುಗಳಂತೆ ಚೌಕ ಚೌಕವಿಡಿದು ಸೋಪಾನವಾಗಿಪ್ಪವು. ಆ ನೂರೊಂದು ಸ್ಥಲದನುಭವರಸ ಮೇರುವಿನೊಳಹೊರಗನು ವೇದ ಶಾಸ್ತ್ರಾಗಮ ಪುರಾಣಂಗಳ ನೋಡಿ ತಿಳಿದುಮ್ಮಾಯಕದೊಳಗೆ ಮುಳುಗಿ ನಾವಲ್ಲದಿಲ್ಲವೆಂದು ಬೀಗಿ ಬೆರವು ತಿಪ್ಪ ಕುಲ್ಲರುಗಳಿಗೆ ಭವವೆ ಪ್ರಾಪ್ತಿಯಲ್ಲದೆ, ಇವರದನರಿದು ಕಂಡು ಸುಖಿಸಿಹೆನೆಂದಡೆ ಕಾಣಬಾರದು. ಮತ್ತೇನನೋದಿಒ ಬಸವಣ್ಣನ ಪ್ರಸಾದರಸ ಮೇರು ಮಂದಿರವ ಕಾಣಬೇಕೆಂದಡೆ: ಪುರಾತನರ ಷಡುಸ್ಥಲಮಾರ್ಗವ ಬಲ್ಲಂಥಾ ಗುರುವಿನ ಉಪದೇಶಮಂ ಪಡದು ಸಜ್ಜನ ಸದ್ಭಾವ ಸದಾಚಾರವಿಡಿದು ಸತ್ಯ ಶುದ ಕಾಯಕವಂ ತಂದು ಗುರುಲಿಂಗ ಜಂಗಮಕ್ಕೆ ನಿರ್ವಂಚೆನಯಿಂ ದಾಸೋಹಂ ಮಾಡಿ ಷಡುಸ್ಥಲದ ವಚನಂಗಳಂ ಓದಿಯಾದಡೂ ತಿಳಿದು, ಕೇಳಿಯಾದಡೂ ತಿಳಿದು ಬಸವಾದಿ ಪ್ರಮಥರ ಹೊಲಬನರಸುವಂಥಾ ಭಕ್ತಮಾಹೇಶ್ವರರಿಗೆ ಕಾಣಬಹುದು. ಇಂತೆಂಬ ಪುರಾತನರಗಣಿತವಚನ ರಸಾಮೃತಕ್ಕೆ ಸಾಕ್ಷಿ.

೯೭

ಬಿತ್ತದೆ [22]ಬೆಳೆಯದೆ[23] ತುಂಬಿದ ರಾಶಿಯ ಕಂಡಲ್ಲಿ
ಸುಖಿಯಾಗಿ ನಿಂದವರಾರೊ ![24]ಅದ[25] ಹೇಳಲೂ ಬಾರದು, ಕೇಳಲೂ ಬಾರದು.
ಗುಹೇಶ್ವರಾ ನಿಮ್ಮ ಶರಣ ಲ[26]ಚ್ಚಣವಳಿಯದೆ ರಾಶಿಯನಳವ[27]

೯೮

ಅಂಗದೊಳಗಣ ಸಂಗದೊಳಗಣ ರುಚಿ
ಅಂಗನೆಯ ನಖದಲ್ಲಿ ಬಂದು ಮೂರುತಿಯಾಯಿತ್ತುಲ.
ಚಂದ್ರಕಾಂತದ ಗಿರಿಗೆ ಬಂದು ತೃಪ್ತಿಯ ಸಂಚ
ಅದರಂದ[28]ದೊಳಗಣ ಭ್ರಮೆಯ ಪಿಂಡದಾಹುತಿ ನುಂಗಿತ್ತ.
ಚಂದ್ರಮನ ಷೋಡಶ ಕಳೆಯನು ಇಂದ್ರಿಯ ವಾಹನವನು ನುಂಗಿ
ಗುಹೇಶ್ವರನೆಂಬ ನಿಲವ ನಖದ ಮೊನೆ ನುಂಗಿತ್ತು.      ||೪೬||

೯೯

ದೂರದ ತುದಿಗೊಂಬನಾರಯ್ಯ ಗೆಲುವವರು?
ಮೀರಲಿಲ್ಲದ ನಿರಾಳವನು,
ಮೀರಿಕಾಬ ಘನವನು ಬೇರೆ ತೋರಲಿಲ್ಲಯ್ಯ.
ತೋರಿ ಕಾಬಡೆ ತನ್ನ ಹಿಡಿಯಲಿಲ್ಲಯ್ಯ,
ಓಳೆಯಾವಿನಹಾಲನಾರಯ್ಯ ಕರವವರು?
ಮೂರು ಲೋಕದೊಳಗೆ ತಾ[29]ನಿಲ್ಲ ಗುಹೇಶ್ವರಾ.          ||೪೭||

೧೦೦

ವೇದವನೋದಿದವರೆಲ್ಲ ವಿಧಿಗೊಳಗಾದರಲ್ಲದೆ,
ದೇವರಿಪ್ಪ ರಾವನರಿದುದಿಲ್ಲ.
ಶಾಸ್ತ್ರವನೋದಿದವರೆಲ್ಲ ಸಂಶಯಕ್ಕೊಳಗಾದರಲ್ಲದೆ,
ಸದ್ಗುರುವನರಿದುದಿಲ್ಲ.ಗಮವನೋದಿದವರೆಲ್ಲ ಆಗುಛೇಗೆಗೆ ಒಳಗಾದರಲ್ಲದೆ,
ಆದಿ ಅನಾದಿಯಿಂದತ್ತಣ ಶರಣಲಿಂಗ ಸಂಬಂಧವನರಿದುದಿಲ್ಲ.
ಪುರಾಣವನೋದಿದವರೆಲ್ಲಾ ಪೂರ್ವದ ಬಟ್ಟೆಗೆ ಒಳಗಾದರಲ್ಲದೆ,
ಪೂರ್ವದ ಕರ್ಮವ ಹರಿದು ಪುರಾತನವನರಿದುದಿಲ್ಲ.
ಇಂತಿವರೆಲ್ಲರು ಚರಶೇಷವ ಲಿಂಗಕ್ಕರ್ಪಿಸಲರಿಯರಾಗಿ,
ಇವರಿಗೆ ಲಿಂಗವು ಕಾಣಿಸದೆಂದಾತನಂಬಿಗರ ಚವುಡಯ್ಯ.         ||೪೮||

೧೦೧

ಜಗದಗಲದಾನೆ ಕನಸಿನಲ್ಲಿ [30]ಬಂದು[31] ಮೆಟ್ಟಿತ್ತಕಂಡೆ.
ಅದೇನೆಂಬೆ ಹೇಳಾ, ಮಹಾಘನವನದೆಂತೆಂಬೆ ಹೇಳಾ!
ಗುಹೇರ್ಶವರನೆಂಬ ಲಿಂಗವನ[32]ರಿದು ಮರದಡೆ,
ಲೋಳಸರದಮೇಲೆ ಬಂಡಿ ಹ[33]ರಿದಂತೆ.       ||೪೯||

೧೦೨

ಮಹಾ ಮೇರುವಿನ ಮರೆಯಲ್ಲಿದ್ದು,
ಭೂತದ ನೆಳಲನಾಚರಿಸುವ ಕರ್ಮಿ ನೀ ಕೇಳಾ.
ಮಹಾಘನಲಿಂಗಕ್ಕೆ ಮಜ್ಜನವೆಂದೇನೊ?
ಪರಿಮಳ ಲಿಂಗಕ್ಕೆ ಪತ್ರಿ ಪುಷ್ಪ [34]ಂಗಳೆಂ[35]ದೇನೊ?
ಜಗಜ್ಯೋತಿರ್ಲಿಂಗಕ್ಕೆ ಧೂಪಾರತಿಗಳೆಂದೇನೊ?
ಅಮೃತ ಲಿಂಗಕ್ಕೆ ಆರೋಗಣೆ ಎಂದೇನೊ?
ಗುಹೇಶ್ವರ ಲಿಂಗದಂತುವನಾರು ಬಲ್ಲರೊ?    ||೫೦||

ಅಂತಪ್ಪ ಮಹಾಮೇರುವಿನುತ್ತುಮಾಂಗದುತ್ತುಮದ ವಿಸ್ತೀರ್ಣಮಂ ನೋಡಿ ಬಂದ ಪ್ರಮಥಗಣಂಗಳೆಲ್ಲರನೂ ಬಿಜಯಂಗೈಸಿಕೊಂಡಿ[36]ಹೆನೆಂದು ಉಪಮಾತೀತವನುಪಮಿಸಿ ಬಸವಣ್ಣನು ತಾನಿರ್ದ ಭಕ್ತಿ ಹಸೆಯೆಂಬ ಪರಶಿವ ಲೋಕದಿಂದ ವಜ್ರದ ಮೇರುವಿನ ಶಿಖಾಗ್ರದಲ್ಲಿಂಗೆ ಅಖಂಡಿತ ಸ್ವರೂಪನಾಗಿ ಚಿತ್ತೈಸಿದೊಂದು ಮಹಾವೃಷಭೇಶ್ವರನಂತೆ ಮೂರ್ತಿಗೊಂಡಾಕ್ಷಣ[37] [38]ಮೇರು[39] ಚಿತ್ಪಿಂಡವೆಂಬ ಕಂದಲೊಳಗೆ ಷಡುಸ್ಥಲದನುಭಾವೆಂಬ ನವನೀತವಡಗಿದ ಹಾಂಗೆ, ಪರಿಪೂರ್ಣ ಜ್ಞಾನದೊಳಗೆ ಪರಿಪೂರ್ಣ ಸು[40]ಗುಣವೆಂಬ ವಾಸನೆಯಡಗಿದ ಹಾಂಗೆ, ಆವುದಾನೊಂದರ ಯೌವನ ಅದರೊಳಗಡಗಿದ ಹಾಂಗೆ, ಲಿಂಗ[41]ದ ನಾಮದೊಳಗೆ ಲಿಂಗವಡಗಿದ ಹಾಂಗೆ, ತುಂಬಿಯೊಳಗೆ ಪರಿಮಳವಡಗಿ, ಪರಿಮಳದೊಳಗೆ ತುಂಬಿಯಡಗಿದ ಹಾಂಗೆ, ಪ್ರಾಣದೊಳಗೆ ಲಿಂಗವಡಗಿ, ಲಿಂಗದೊಳಗೆ ಪ್ರಾಣವಡಗಿದ ಹಾಂಗೆ, ಶರಣನೊಳಗೆ ಲಿಂಗವಡಗಿ, ಲಿಂಗದೊಳಗೆ ಶರಣನಡಗಿದ ಹಾಂಗೆ, ಆ ಮಹಾ ಮೇರುಮಂದಿರವು ಉಪ್ಪರಿಗೆಯ ಕೆಲಸ ಮೊದಲಾದನಂತ ಕುಶೀಲವನುಳ್ಳ ಮನೋಹರ[42]ದ ಕೆಲಸಗತಿಗಳೆಲ್ಲವು ಅಳಿದವೆಂಬ ಹಾಂಗೆ, ಅವನೆಲ್ಲವನು ಮರೆಮಾಡಿಕೊಂಡು ಅತ್ಯಂತವಹಂತ ಅತಿನುಣ್ಪುಳ್ಳ ಚವುಕದ ಕಂಬವಾಗಿ ಸಕಲಲೋಕಂಗಳಿಗೆ ಬಸವನ ಕಂಬವೆಂಬ ನಾಮವನು [43]ಂಟು[44] ಮಾಡಿ. ತೋರಬೇಕೆಂಬೊಲು ಒಪ್ಪಿನಿಂದು ಶರಣಾಗತ ವಜ್ರಪಂಜರವೆಂಬ ಬಿರುದ ಧರಿಸುತ್ತಿರ್ಪುದು. ಅಂಥಾ ಬಿರಿದನುಳ್ಳ ವಜ್ರದ ಮಹಾಮೇರುವೆಂಬ ಕಂಬದ ಮೇಲೆ ಪ್ರಸನ್ನವಾಗಿರ್ದ ಮಹಾವೃಷಭೇಶ್ವರನಿಗೆ ಸಕಲ ಲೋಕದೊಳಗೆ ಷಡುಸ್ಥಲಮಾರ್ಗವನೆ ನಿಚ್ಚಣಿಗೆಯ ಮಾಡಿಕೊಂಡು ನಡೆದಾಡುವ ಭಕ್ತಜಂಗಮದ ಹೃದಯಕಮಲಂಗಳೆ ಪುಷ್ಪ, ಅವರ ಪರಮಾನಂದ ಜಲವೆ ಅಗ್ಘವಣಿ, ಅವರ ಭಕ್ತಿ ಪಿಂಡವೆ ನೈವೇದ್ಯ, ಅವರದೊಂದು ಲಿಂಗದಲ್ಲಿ ನಿಂದ ಒಂದು ಮಾನವೆ ಪೂಜಾರಿ, ಅವರದೊಂದು ಮಹಾಜ್ಞಾನವೆ ನಂದಾದೀವಿಗೆ, ಅವರು ದ್ವೈತಾದ್ವೈತಂಗಳಿಲ್ಲದಿರ್ದುದೆ ತ್ವತಂತ್ರಪೂಜೆ. ಇಂತೆಂಬ ಪುರಾತನರಗಣಿತ ವಚನಸಾರಾಯಂಗಳಿಗೆ ಸಾಕ್ಷಿ.

೧೦೩

ಬೆಣ್ಣೆಯ ಕಂದಲ ಒಲೆಯ ಮೇಲಿಟ್ಟಡೆ
ಕಂದಲು ಕರಗಿತ್ತು, ಬೆಣ್ಣೆಯುಳಿಯಿತ್ತು.
ತುಂಬಿಯಿದ್ದಿತ್ತು ಪರಿಮಳವಿಲ್ಲ;
ಪರಿಮಳವಿದ್ದಿತ್ತು ತುಂಬಿಯಿಲ್ಲ.
ತಾನಿದ್ದನು ತನ್ನ ಸ್ವರೂಪವಿಲ್ಲ.
ಗುಹೇಶ್ವರನಿದ್ದನು ಲಿಂಗವಿಲ್ಲ.          ||೫೧||

೧೦೪

ತುಂಬಿ ಪರಿಮಳವನುಂಡಿತ್ತೊ?
ಆ ಪರಿಮಳ ತುಂಬಿಯನುಂಡಿತ್ತೊ?
ಪ್ರಾಣಲಿಂಗವಾಯಿತ್ತೊ?
ಆ ಲಿಂಗ ಪ್ರಾಣವಾಯಿತ್ತೊ?
ಗುಹೇಶ್ವರ ಗುಹೇಶ್ವರ ಇವರ ಉಭಯದ ಭೇದವ ನೀನೇ ಬಲ್ಲೆ.  ||೩೨||

೧೦೫

ಕಂಬವೊಂದೆ, ದೇಗುಲವೊಂದೆ, ದೇವರೊಂದೆ
ಗುಹೇಶ್ವರ ನಿಮ್ಮ ಮನ್ನಣೆಯ ಶರಣರ ದೇವರೆಂಬೆನು. ||೫೩||


[1] ಜ್ಞೆ (ಬ)

[2] ಯು (ಬ)

[3] ಯು (ಬ)

[4] ಸಲೊಡನೆ (ಬ)

[5] x (ಬ)

[6] x (ಬ)

[7] ತಟ್ಟುರುಚಿ (ಬ)

[8] ತಟ್ಟುರುಚಿ (ಬ)

[9] + ಗೆ (ಬ)

[10] ಕಾ (ಬ)

[11] + ತಾ (ಬ)

[12] (ಧ್ಯಾನ (ಅ)

[13] ವಿ (ಬ)

[14] ವಿ (ಬ)

[15] ಬಂತು (ಅ)

[16] ಬಂತು (ಅ)

[17] ಸಾಧನ (ಅ)

[18] ಸಾಧನ (ಅ)

[19] + ಮುಡಿ (ಬ)

[20] x (ಬ)

[21] x (ಬ)

[22] ದ (ಅ)

[23] ದ (ಅ)

[24] ಆಗ (ಬ)

[25] ಆಗ (ಬ)

[26] ಕ್ಷ (ಬ)

[27] x (ಅ)

[28] ಗ (ಬ)

[29] ಆ (ಬ)

[30] x (ಬ)

[31] x (ಬ)

[32] x (ಅ)

[33] ಹಾ (ಬ)

[34] ವೆ (ಬ)

[35] ವೆ (ಬ)

[36] + ಡುಹೋದೆ (ಬ)

[37] + ವೆ (ಬ)

[38] x (ಬ)

[39] x (ಬ)

[40] + ವಸ್ತು (ಬ)

[41] + ವಾ (ಅ)

[42] + ವಾ(ಬ)

[43] x (ಬ)

[44] x (ಬ)