೬೬

ಕರಿಯ

[1]  ತಲೆಯ ಅರಮನೆಯ ಸುರಧೇನು ಹಯನಾಯಿತ್ತು.
ಕರದುಂಬಾತಂಗೆ ಕೈ ಕಾಲಿಲ್ಲಾ.[2]ಕೃಱುನಾಲ್ವೆರಳಿನ ಪ್ರಮಾಣಿನಲ್ಲಿಹುದು.
ಇದ ಕರದುಂಬಾತನೆ ದೇವ, ಕಾಣಾ ಗುಹೇಶ್ವರಾ.[3]      || ೧೪ ||

ನಾಭಿ ಮಂಡಲದೊಳಗೀರೈದು ಪದ್ಮಪಳ
ಸದಮದಗಜದ ಮಸ್ತಕದ ಮೇಲೆ ತೋರುತ್ತದೆ.
ಅಕಾರ ಉಕಾರ ಮಕಾರ ಮರ್ಮಸ್ಥಾನದ
ತ್ರಿಕೂಟಸ್ಥಾನದ ಸಮರಸದ ಸುಖದಲ್ಲಿ ಬೆಳದ ಕಂದಮೂಲಾದಿಗಳ
ಹೊಸರಸದಮೃತವನು ಓಸರಿಸಿ ದಣಿಯಲುಂಡು
ತೃಪ್ತಿಯಿಂದ ಸುಖಯಾದೆನು ಕಾಣಾ ಗುಹೇಶ್ವರ.         ||೧೫||

೬೮

ಮೊಲೆಯಿಲ್ಲದಾವಿಂಗೆ ತಲೆಯೆ ಮೊಲೆ.
ಮನದಲ್ಲಿ ಉಣ್ಣು ಕಂಡಾ ! [4]ಮನದಲ್ಲಿ ಉಣ್ಣು ಕಂಡಾ[5] ತಾ ಸತ್ತು ಹಾಲ ಕುಡಿಯಬಲ್ಲಡೆ,
ಗುಹೇಶ್ವರನೆಂಬ ಲಿಂಗವು ತಾನೆ ಕಂಡಾ.      ||೧೬||

೬೯

ಅನುಭಾವದಿಂದ ಹುಟ್ಟಿತ್ತು ಲಿಂಗ,
ಅನುಭಾವದಿಂದ ಹುಟ್ಟಿತ್ತು ಜಂಗಮ,
ಅನುಭಾವದಿಂದ ಹುಟ್ಟಿತ್ತು ಪ್ರಸಾದ.
ಅನುಭಾವದನುವಿನಲ್ಲಿ ಗುಹೇಶ್ವರ,
ನಿಮ್ಮ ಶರಣನನು [6]ಪಮ[7] ಸುಖಿಯಾಗಿರ್ದನು.            ||೧೭||

೭೦

ತನ್ನ ಮುಟ್ಟಿ ನೀಡಿದುದೆ ಪ್ರಸಾದ;
ತನ್ನ ಮುಟ್ಟದೆ ನೀಡಿದುದೆ ಓಗರ.
ಇದು ಕಾರಣ ಇಂತಪ್ಪ ಭೃತ್ಯಾಚಾರಿಗಲ್ಲದೆ,
ಪ್ರಸಾದವಿಲ್ಲ ಗುಹೇಶ್ವರ,    ||೧೮||

೭೧

ತನುವ ತಾಗದಮುನ್ನ, ಮನವ ತಾಗದಮುನ್ನ,
ಆಪ್ಯಾಯನ ಬಂದು ಎಡಗೊಳ್ಳದ ಮುನ್ನ ಅರ್ಪಿತವ ಮಾಡಬೇಕು.
ಗುರುವಿನ ಕೈಯಲ್ಲಿ ಎಳತಟವಾಗದಮುನ್ನ ಅರ್ಪಿತವಮಾಡಬೇಕು.
ಎಡದ ಕೈಯಲ್ಲಿ ಕಿಚ್ಚು, ಬಲದ ಕೈಯಲ್ಲಿ ಹುಲ್ಲು
ಉರಿ ಹತ್ತಿತ್ತು ಗುಹೇಶ್ವರ ನಿಮ್ಮ ಪ್ರಸಾದಿಯ.  ||೧೯||

೭೨

ಪದವನರ್ಪಿಸಬಹುದಲ್ಲದೆ, ಪದಾರ್ಥವನರ್ಪಿಸಬಾರದು.
ಓಗರವನರ್ಪಿಸಬಹುದಲ್ಲದೆ, ಪ್ರಸಾದವನರ್ಪಿಸಬಾರದು.
ಇದು ಕಾರಣ ಗುಹೇಶ್ವರ, ನಿಮ್ಮ ಶರಣರು
ಹಿಂದನರಿದು ಮುಂದನರ್ಪಿಸುವರು. ||೨೦||

೭೩

ಘನವಪ್ಪ ಬೋನವನು ಅನುವಿನ ಪರಿಯಾಣದಲ್ಲಿ ಹಿಡಿದು,ಲ
ಗುರುಲಿಂಗ ಜಂಗಮಕ್ಕೆ ಆರೋಗಣೆಯ ಮಾಡಿ ಮಿಕ್ಕುದು ಪ್ರಸಾದ.
ಈ ತೆರದ ಘನವಪ್ಪ ಲಿಂಗವನು ಒಂದನುವಿನಲ್ಲಿ ತಂದಿರಿಸಿ
ಘನವಪ್ಪ ಬೋನವನು ಲಿಂಗಕ್ಕೆ ಆರೋಗಣೆಯ ಮಾಡಿ,
ಮಿಕ್ಕುದ ಕೊಳಬಲ್ಲಡೆ ಪ್ರಸಾದಿ.
ಇಂತೀ ತೆರನ ಬೆಸಗೊಳಬಲ್ಲಡೆ ಎನ್ನ ಬೆಸಗೊಳ್ಳೈ ಗುಹೇಶ್ವರ. ||೨೧||

೭೪

ಶಿಷ್ಯನ ಮುಖದಿಂದಾದ ಗುರಿವಿಂಗೆ ಶಿಷ್ಯನ ಪ್ರಸಾದ
ಗುರುವಿಂಗಲ್ಲದೆ, ಗುರುವಿನ ಪ್ರಸಾದ ಶಿಷ್ಯಂಗೆಯಿಲ್ಲ.
ಇದು ಕಾರಣ ಗುರುವೆ ಓಗರ, ಓಗರವೆ ಅರ್ಪಿತ.
ಇದನರಿಯದೆ ಪ್ರಸಾದ ಪ್ರಸಾದವೆಂದು ಉಂಡುಂಡು ಸವೆದರಲ್ಲಾ.
ಸುಡು ಸುಡು ಶಬ್ದ ಸೂತಕರ ಕೈಯಲ್ಲಿ
ಸ್ಥಾವರ ವಿಧಿವಶವಾಯಿತ್ತು ಗುಹೇಶ್ವರ.         ||೨೨||

೭೫

ನಾನು [8]ಸಜ್ಜೀ[9] ವವೊ ನೀನು ೧.( ಸಂಜೀ (ಬ).) ೨.( ಸಮಝೀ (ಬ). ವವೊ?
ಎನಗೆಯೂ ನಿನಗೆಯೂ ಸಂಬಂಧವಯ್ಯಾ.
ನಿನ್ನನೆಂತು ಪ್ರಾಣಲಿಂಗವೆಂದು ಪೂಜಿಸುವೆನಯ್ಯಾ?
ಎನ್ನ ಪ್ರಸಾದ ನಿನಗೆ, ನಿನ್ನ ಪ್ರಸಾದ ಎನಗೆ.
ಎನಗೂ ನಿನಗೂ ಏಕಪ್ರಸಾದ ಕಾಣಾ ಗುಹೇಶ್ವರ.        ||೨೩||

೭೬

ನಾ ದೇವನಲ್ಲದೆ ನೀ ದೇವನೇ ಹೇಳಾ?
ನೀ ದೇವನಾದರೆ ಎನ್ನನೇಕೆ ಸಲಹೆ?
ಆರೈದು ಒಂದು ಕುಡಿತೆ ಉದಕವನೆಱೆವೆ.
ಹಸಿದಾಗ ಒಂದುತುತ್ತು ಓಗರವನಿಕ್ಕುವೆ,
ನಾ ದೇವಕಾಣಾ, ಗುಹೇಶ್ವರ.          ||೨೪||

೭೭

ಹದಿನೆಂಟು ಯುಗದವರೆಲ್ಲ ಲಿಂಗವ ಪೂಜಿಸಿ
ದೃಷ್ಟವಾವುದು ನಷ್ಟವಾವುದು ಎಂದರಿಯದೆ.
ಭಾ ವ ಭ್ರಮಿತರಾದರು; ಜೀವ ಕಲ್ಪಿಗಳಾದರು.
ಜೀವಾಹುತಿಯನೆ ಲಿಂಗಾರ್ಪಿತವೆಂಬರು.
ಭವದ ಬಳ್ಳಿಯ ಹರಿಯಲರಿಯದವರು ಪ್ರಸಾದಿಗಳೇ ಅಲ್ಲ.
ಕೇಳು ಕೇಳು ಭಕ್ತನ ಮಹಿಮೆಯ:
ಪೃಥ್ವಿಯಿಂದಾದ ಪದಾರ್ಥವ ಲಿಂಗಕ್ಕೆ ಕೊಡದ ಭಾಷೆ.
ಅಪ್ಪುವಿನಿಂಧಾದಗಘವಣಿಯ ಲಿಂಗಕ್ಕೆ ಮಜ್ಜನಕ್ಕೆರೆಯದ ಭಾಷೆ.
ತೇಜದಿಂದಾದ ದೀಪವ ಲಿಂಗಕ್ಕೆತ್ತದ ಭಾಷೆ.
ವಾಯುವಿನಿಂದಾದ ಪ್ರಾಣನ ಗುಣವ ಲಿಂಗಕ್ಕೆ ಮು[10]ಟ್ಟಿಸ[11] ಭಾಷೆ.
ಆಕಾಶದಿಂದಾದ ಶೂನ್ಯವ ಲಿಂಗಕ್ಕೆ[12] ಭಾವಿಸದ ಭಾಷೆ.
ಅದೆಂತೆಂದಡೆ:
ಮತ್ತೊಂದು ಪೃಥ್ವಿ ಉಂಟಾಗಿ, ಮತ್ತೊಂದು ಅಪ್ಪು ಉಂಟಾಗಿ,
ಮತ್ತೊಂದು ತೇಜ ಉಂಟಾಗಿ, ಮತ್ತೊಂದು ವಾಯು ಉಂಟಾಗಿ,
ಮತ್ತೊಂದಾಕಾಶ ಉಂಟಾಗಿ.
ಇಂತಿವರ ಮೇಲಾದ ಪಾಕದ್ರವ್ಯಂಗಳ ಲಿಂಗಕ್ಕೆ ನೀಡೂದೆ ಭಕ್ತಿಭಾಷೆ.
ಇದು ಕಾರಣ ಕೂಡಲ ಚನ್ನಸಂಗಯ್ಯ,
ಅರ್ಪಿತದ ಮುಖವ ನಿಮ್ಮ ಶರಣನೆ ಬಲ್ಲನು.   ||೨೫||

೭೮

ಆಯತ ಸ್ವಾಯತ ಸಂಭಾವಿತವ, ಅನಾಯತಂಗಳು
ಮುಟ್ಟಲಮ್ಮವು ನೋಡಾ !
ಶ್ರೋತ್ರದ ಕೈಯಲರ್ಪಿಸುವ, ಕಂಗಳಕೈಯಲರ್ಪಿಸುವ,
ನಾಶಿಕದ ಕೈಯಲರ್ಪಿಸುವ, ಜಿಹ್ವೆಯ ಕೈಯಲರ್ಪಿಸುವ,
ತ್ವಕ್ಕಿನ ಕೈಯಲರ್ಪಿಸುವ, ಮನದ ಕೈಯಲರ್ಪಿಸುವ,
ಅಲ್ಲಲ್ಲಿ ತಾಗಿದ ಸುಖವನಲ್ಲಲ್ಲಿಯೇ ಲಿಂಗಾರ್ಪಿತವ ಮಾಡಬಲ್ಲನಾಗಿ
ಕೂಡಲ ಚೆನ್ನಸಂಗಯ್ಯ, ಆತನೆ ಮಹಾಪ್ರಸಾದಿ.          ||೨೬||

೭೯

ಗುರುಲಿಂಗ ಜಂಗಮಪಾದೋದಕ ಪ್ರಸಾದವ
ಲಿಂಗಕ್ಕೆ ಕೊಟ್ಟು ಕೊಂಬ ಪ್ರಾಣವೆ ಪ್ರವೇಶವಾದುದಾಗಿ,
ಲಿಂಗ ಪ್ರಾಣದೊಳಗೆ ಪ್ರಾಣಲಿಂಗಿ ನೋಡಾ.
ಭಕ್ತನೊಳಗೆ ಪ್ರಸಾದ ಕಾಯ ನೋಡಾ.
ವಿಶ್ವತೋಚಕ್ಷುವಿನೊಳಗೆ ಜ್ಞಾನ ಚಕ್ಷು ನೋಡಾ.
ವಿಶ್ವ ತೋ ಮುಖದೊಳಗೆ ಸುಮುಖ ನೋಡಾ.
ವಿಶ್ವತೋ ಬಾಹುವಿನೊಳಗೆ ಸಮಸ್ಕಾರ ಬಾಹು ನೋಡಾ.
ವಿಶ್ವತೋ ಪಾದದೊಳಗೆ ನಿಂದ ಮಹಾತ್ಪಾದ ನೋಡಾ,
ಕೂಡಲ ಚೆನ್ನಸಂಗಯ್ಯಾ.   ||೨೭||

ಇಂತಪ್ಪ ಗುರು ಲಿಂಗ ಜಂಗಮದ ಮಹಾಪ್ರಸಾದಿಗಳ ಭಕ್ತಿ ಜ್ಞಾನ ವೈರಾಗ ಮುಖವಾದ ಸ್ಥಲಕುಳದ ಪರಿಯಾಯದ ವರ್ಮವೆಂತೆಂದಡೆ: ಒಂದೆರಡಾಗಿ, ಎರಡು ಮೂರಾಗಿ, ಮೂರು ಆರಾಗಿ, ಆರು ಮೂವತ್ತಾರಾಗಿ, ಮೂವತ್ತಾರು ನೂರೊಂದಾಗಿ ನಿಂದಿತ್ತು. ಆ ನೂರೊಂದು ಸ್ಥಲ ಕುಳದ ಮೇಲೆ ಭಕ್ತ ಮಾಹೇಶ್ವರ ಪ್ರಸಾದಿ ಪ್ರಾಣಲಿಂಗಿ ಶರಣನೈಕ್ಯನೆಂಬ ಷಡುಸ್ಥಲ ಬ್ರಹ್ಮಿಗಳು ಆ ಭಕ್ತಿ ಹಸೆಯ ಮೇಲಿರ್ದ ಸಮಸ್ತಗಣಂಗಳ ಮುಂದೆ ಷಡುಸ್ಥಲದನುಭಾವವ ಮಾಡುತ್ತಿರುವಾಗ, ಆ ಷಡುಶಕ್ತಿಗಳು ಭಕ್ತಿಯೆಂಬ ಹಸೆಯಿಂದ ಕೆಳಗೆ ಮುನ್ನೂರೈವತ್ತು ಕೋಟಿಯೋಜನ ಪ್ರಮಾಣನಲ್ಲಿಂಗೆ ಹೋಗಿ, ಅಲ್ಲಿ ತಮ್ಮ ಭಕ್ತಿ ಸಾಮರ್ಥಿಕೆಯ ಶಕ್ತಿಯಂ ತೆಗೆದು, ಒಂದು ಹಸೆಯಂ ಮಾಡಿಯನೇಕ ವಿಸ್ತೀರ್ಣವಾಗಿ, ಅದ ಘಟ್ಟಿಗೊಳಿಸಿ ಶಕ್ತಿ ಭಕ್ತಿ ಹಸೆಯೆಂಬ ಹೆಸರದಕೆ ಕಲ್ಪಿಸಿ ಒಪ್ಪಿರುತ್ತಿರ್ದರು. ಇಂತೆಂಬ ಪುರಾತನರ ವಚನ ಸಾರಾಯಕ್ಕೆ ಸಾಕ್ಷಿ.

೮೦

ತನು ಒಂದು ದ್ವೀಪ, ಮನ ಒಂದು ದ್ವೀಪ,
ಆಪ್ಯಾಯನ ಒಂದು ದ್ವೀಪ, ವಚನ ಒಂದು ದ್ವೀಪ.
ಇಂತೀ ನಾಲ್ಕು ದ್ವೀಪದೆಡೆಯ ಬೆಸಗೊಂಬಡೆ
ಗುಹೇಶ್ವರಾ ನಿಮ್ಮ ಸ್ಥಾನಂಗಳು.     ||೨೮||

೮೧

ತಲೆಯ ಮೇಲೆ ತಲೆ ಇದ್ದಿತ್ತಲ್ಲಾ.
ತಲೆ ತಲೆಯಾತಲೆ ನುಂಗಿತ್ತಲ್ಲಾ.
ಸತ್ತು ಹಾಲ ಕುಡಿಯ ಬಲ್ಲಡೆ
ರಥದ ಕೀಲ ಬಲ್ಲಡೆ ಅದು ಯೋಗ.
ಶಿಶು ಕಂಡ ಕನಸಿನೊಳುಳ್ಳ ತೃಪ್ತಿ ನಿನ್ನಲ್ಲುಂಟೆ ಗುಹೇಶ್ವರ?        ||೨೯||

ಇಷ್ಟು ಚೋದ್ಯವಂ ಮಾಡಿದ ಷಡುಶಕ್ತಿಗಳು ತಾವಿರ್ದ ಹಸೆಯಿಂದ ಕೆಳಗೆ ಮುನ್ನೂರೈವತ್ತು ಕೋಟಿಯೋಜನ ಪ್ರಮಾಣಿನಲ್ಲಿಂಗೈದಿ ನೋಡುವಾಗ, ಆ ಪರಶಿವ ಶಕ್ತಿಗಳೈದು ಅಖಂಡಿತ ಶಕ್ತಿಗಳಾಗಿ ತಾವಿರ್ದ ಭಕ್ತಿ ಹಸೆಯಿಂದುಳಿದು, ಶಕ್ತಿ ಹಸೆಯ [13]ಕಳಿದ[14]ಲ್ಲಿಂದ ಕೆಳಗೆ ಮುನ್ನೂರು ಐವತ್ತುಕೋಟಿ ಯೋಜನ ಪ್ರಮಣಿನಲ್ಲಿಂಗೆ ಬಿಜಯಂಗೈದು, ಅಲ್ಲಿ ತಮ್ಮ ಭ[15]ಕ್ತಿ ಸತ್ವವೆಂಬ[16]  ಸುಜ್ಞಾನ ಕ್ರೀಯನೆ[17] ಮಹಾಚೈತನ್ಯವೆಂಬ ಹಸೆಯಂ ಮಾಡಿಯನಂ[18]ತ ವಿಶಾಲವಾದ ಬಳಿಕದನು ಘಟ್ಟಿ ಗೊಳಿಸಿದಡದು ಒಪ್ಪಿರುತ್ತಿರ್ದ ನಿತ್ಯತ್ವದ ಮಹಾ ಚೈತನ್ಯವೆಂಬ ಹಸೆಯಂ ಕಂಡು, ಷಡುಶಕ್ತಿಗಳು ಚೋದ್ಯವಂ ಮಾಡಿ, ಆ ಪರಶಿವ ಶಕ್ತಿಗಳ ನೋಡಿ, ನಮಸ್ಕರಿಸಿ ಹರುಷಂ ಮಾಡಿ ಶಿವಸಂತೋಷಂ ಮಾಡಿ ಕೂಡಿಕೊಂಡಲ್ಲಿಂದ ಉರ್ಧ್ವಕ್ಕೆ ನೂರೊಂದು ಸ್ಥಲವೆಂಬ ನಿಚ್ಚಣಿಗೆಯ ಮೇಲೆ ನಡದು [19]ಬಂದು[20] ಪುರುಷರಿದ್ದ ಠಾವಿಂಗೈದು ಅವರುಗಳ ಬೆರಸಿರುತ್ತಿರ್ದರು. [21] ಇಂತೆಂಬ[22] ಪುರಾತನರಗಣಿತ ವಚನಂಗಳಿಗೆ ರಸ ಚೈತನ್ಯವೆಂಬ ನಿರೂಪಕ್ಕೆ ಸಾಕ್ಷಿ.

೮೨

ಗುರುಸ್ಥಲ ಭಕ್ತರ ಮೂಲಜ್ಞಾನ ಶಕ್ತಿಗಳಾಗಿ
ಗುರುಸ್ವರೂ [23]ಪಾದ[24]ವು.
ಆ ಗುರು ಸ್ವರೂಪನುಳ್ಳ ಶಕ್ತಿಗಳಿಂದ
ಪರಮ ಚೈತನ್ಯವೆಂಬ ಮಂಟಪ ಉದಯಿಸಿ,
ಸಕಲ ಲೋ[25]ಕಕ್ಕೆ ಆ[26](ಕಾ (ಬ)  ದಿಯಾಯಿತ್ತು.
ಆ ಮಂಟಪದ ಮೇಲೆ ನಾನು ಕುಳಿತು
ಸಂತೋಷದಿಂ ಗುಹೇಶ್ವರ ಲಿಂಗವ ಕಣು ತುಂಬಿ ನೋಡಿದ ನೋಟ
ಸಕಲ ಭಕ್ತರಿಗೆ ಕೂಟವಾಯಿತ್ತು ಕಾಣಾ ಸಂಗನಬಸವಣ್ಣ.           ||೩೦||

೮೩

ಸತ್ತಾತನೊಬ್ಬ, ಹೊತ್ತಾತನೊಬ್ಬ.
ಆ ಇಬ್ಬರನೊಯ್ದು ಸುಟ್ಟಾತನೊಬ್ಬ.
ಮದವಣಿಗನಾರೊ ಮದವಳಿಗೆ ಯಾರೊ?
ಮದುವೆಯ ನಡುವೆ ಮರಣವಡ್ಡ ಬಿದ್ದಿತ್ತು.
ಹಸೆಯಳಿಯದ ಮುನ್ನ ಮದವಳಿಗನಳಿದ
ಗುಹೇಶ್ವರ, ನಿಮ್ಮ ಶರಣನೆಂದೂ ಅಳಿಯ.     ||೩೧||

೮೪

ಆಕಾಶದ ಬೀಜ ಅಗ್ನಿಯಲೊದಗಿತ್ತು.
ಶಾಖೆಯಿಲ್ಲದೆ ಮೊಳೆತು ಪಲ್ಲವಿಸಿತ್ತು.
ಅರಿದೆ[27]ನೆಂಬವನನಾಡಿಗೊಂಡಿತ್ತು.
ಈ ನಿರ್ಣಯವನರಿಯದ ಮಾನವಂಗೆ
ಗುಹೇಶ್ವರನೆಂಬುದು ಬಯಲವಿಕಾರ.            ||೩೨||

೮೫

ಒಳಗೆ ನೋಡಿಹೆನೆಂದಡೆ ಒಳಗೆ ನಿರಾಳ,
ಹೊರಗೆ ನೋಡಿಹೆನೆಂದಡೆ ಹೊರಗೆ ನಿರಾಳ,
ಹೊಲದಲ್ಲಿ ಹಸುವಿಲ್ಲ; ಮನೆಯಲ್ಲಿ ಕರುವಿಲ್ಲ.
ನೆಲಹಿನ ಮೇಲಣ ಬೆಣ್ಣೆಯ ದೃಷ್ಟವನೋಡಾ.
ನಾರಿವಾಳದ ಕಾಯೋಳಗಣ ತಿರುಳನೊಡೆಯದೆ
ಮೆಲಬಲ್ಲರು ಗುಹೇಶ್ವರ ನಿಮ್ಮ ಶರಣರು.       ||೩೩||

೮೬

ತುಪ್ಪುಳು ಬಾರದ ಮುನ್ನದರೊಪ್ಪವ ನಾನಿಡಲಂಜುವೆ ಗುರುವೆ.
ಆಕಾಶವೊಂದು ಅಂಡಜ, ಪೃಥ್ವಿವೊಂದು ಪಿಂಡಜ
ಆ[28] ಎರಡರ ಮಧ್ಯದಲ್ಲಿ ಒಂದು ಪಕ್ಷಿ ತತ್ತಿಯನಿಕ್ಕಿತ್ತಲ್ಲಯ್ಯ.
ಬಯಲನೆ ಉಡುಗಿತ್ತು ನಿರ್ವಲಯನೆ ಗೂಡು ಮಾಡಿತ್ತಯ್ಯಾ.
ಉರಿಯನೆ ಉಂಡಿತ್ತು, ಮಧುರ ರಸವನೆ ಉಗುಳಿತ್ತಲ್ಲಯ್ಯಾ.
ಪಕ್ಷಿಗೆ ಪಕ್ಕ ಬಂದಿತ್ತು, ಗಗನಕ್ಕೆ ಹಾರಿತ್ತು.
ಹಾರಿ ಹೋದ ಪಕ್ಷಿ ಗುಹೇಶ್ವರನ ಕಂಡಿತ್ತಲ್ಲಯ್ಯಾ.        ||೩೪||

ಇಂತಪ್ಪ ಪರಶಿವ ತತ್ವಂಗಳೂ, ಪರ[29] ಶಿವ[30]. ಶಕ್ತಿಗಳೂ ತಮ್ಮ ಲೀಲೆಯಿಂದ ನೆನೆದು ನಿರ್ಮಿಸಿದಡೆ, ನಿಂದಂಥ ನಿತ್ಯತ್ವದ ಬ್ರಹ್ಮಾಂಡಂಗಳು ಬರುದಿರಬಾರದೆಂದುಪಮಿಸಿ ಮಹಾಶರಣ ಬಸವೇಶ್ವರನು ಅನೇಕ ಪ್ರಕಾರವಾದನು. ಅದು ಹೇಗಯ್ಯಾ ಎಂದಡೆ: ವಿಶ್ವತೋ ಶಿರ, ವಿಶ್ವತೋ ಮುಖ, ವಿಶ್ವತೋ ಕರ್ಣ, ವಿಶ್ವತೋ ಕಣ್ಣು, ವಿಶ್ವತೋ ಹಣೆ, ವಿಶ್ವತೋ ನಾಶಿಕ, ವಿಶ್ವತೋ ಜಿಹ್ವೆ, ವಿಶ್ವತೋ ಗರಳ, ವಿಶ್ವತೋ ಭುಜ, ವಿಶ್ವತೋ ಬಾಹು, ವಿಶ್ವತೋ ಹಸ್ತ, ವಿಶ್ವತೋ ಕರಕಮಲ, ವಿಶ್ವತೋ ರೀರ, ವಿಶ್ವತೋಉರ, ವಿಶ್ವತೋ ಕುಕ್ಷಿ, ವಿಶ್ವತೋ ನಾಭಿ, ವಿಶ್ವತೋ ಕಟಿ, ವಿಶ್ವತೋ ಗುಹ್ಯ, ವಿಶ್ವತೋ ಗುಹ್ಯ, ವಿಶ್ವತೋ ತೊಡೆ, ವಿಶ್ವತೋ ಜಂಘೆ, ವಿಶ್ವತೋ ಜಾನು, ವಿಶ್ವತೋ ಗುಲ್ಪ, ವಿಶ್ವತೋ ಪಾದಕಮಲ, ವಿಶ್ವತೋ ಚಕ್ರ, ವಿಶ್ವತೋ ಕಮಲ, ವಿಶ್ವತೋ ಪ್ರಣಮ, ವಿಶ್ವತೋ ಅಕ್ಷರ, ವಿಶ್ವತೋ ಮಂತ್ರ, ವಿಶ್ವತೋ ವಿಭೂತಿ, ವಿಶ್ವತೋ ರುದ್ರಾಕ್ಷೆ, ವಿಶ್ವತೋ ಗುರು, ವಿಶ್ವತೋ ಉಪದೇಶ, ವಿಶ್ವತೋ ಲಿಂಗ, ವಿಶ್ವತೋ ಜಂಗಮ, ವಿಶ್ವತೋ ಪಾದೋದಕ, ವಿಶ್ವತೋ ಪ್ರಸಾದ, ವಿಶ್ವತೋ ಕ್ರಿಯೆ, ವಿಶ್ವತೋ ಜಪ, ವಿಶ್ವತೋ ಪ್ರಕಾಶ, ವಿಶ್ವತೋಸದ್ವಾಸೆನ, ವಿಶ್ವತೋ ಗುಣ, ವಿಶ್ವತೋ ಕೃಪೆ, ವಿಶ್ವತೋ ಶಾಂತಿ, ವಿಶ್ವತೋ ನೋಟ, ವಿಶ್ವತೋ ಕೂಟ, ವಿಶ್ವತೋ ಶಿವಸುಖ, ವಿಶ್ವತೋ ಶಿವವಚನ, ವಿಶ್ವತೋ ಷಡುಸ್ಥಲದನುಭಾವ, ವಿಶ್ವತೋ ವಾಕು, ವಿಶ್ವತೋ ದೃಷ್ಟ, ವಿಶ್ವತೋಪವಾಡ, ವಿಶ್ವತೋ ಪ್ರಮಾಣು, ವಿಶ್ವತೋ ಭಕ್ತಿ, ವಿಶ್ವತೋಜ್ಞಾನ, ವಿಶ್ವತೋ ವೈರಾಗ್ಯ, ವಿಶ್ವತೋ ಅಗಮ್ಯ, ವಿಶ್ವತೋ ಅಗೋಚರ, ವಿಶ್ವತೋ ಅಪ್ರಮಾಣ, ವಿಶ್ವತೋ ಸ್ಥೂಲ, ವಿಶ್ವತೋ ಸೂಕ್ಷ್ಮ, ವಿಶ್ವತೋ ಕಾರಣ, ವಿಶ್ವತೋ ಪ್ರಸನ್ನತ್ವ, ವಿಶ್ವತೋ ಲೋಕ ಪರಿಪೂರ್ಣವಾದ ಮಹಾಶರಣ ಬಸವಣ್ಣನಿಷ್ಟು ಪ್ರಕಾರವಾದ ಶಿವಗಣಂಗಳು ಸಹಿತ ಆ ಚಿದ್ಬ್ರಹ್ಮಾಂಡದೊಳಗಣ ಪರಶಿವ ಲೋಕದೊಳಗೆ ಚಿದ್ಭನಾತ್ಮಕನೆಂಬ ಗಣೇವರನಾಗಿಹನು. ಆ ಚಿದ್ಬ್ರಹ್ಮಾಂಡದ ಕೆಳಗಿರ್ದ ಪ್ರಕಾಶ ಬ್ರಹ್ಮಾಂಡದೊಳಗಣ ಪರಶಿವಲೋಕದೊಳಗೆ ದೇವಾಂಗನೆಂಬ ಗಣೇಶ್ವರನಾಗಿರ್ದನು. ಆ ಪ್ರಕಾಶಬ್ರಹ್ಮಾಂಡದ ಕೆಳಗಿರ್ಪ ಅನುಭವಬ್ರಹ್ಮಾಂಡದೊಳಗಣ ಪರಶಿವ ಲೋಕದೊಳಗೆ ಭಕ್ತ್ಯಾಂಗನೆಯೆಂಬ ಗಣೇಶ್ವರನಾಗಿಹನು. ಆ ಅನುಭವ ಬ್ರಹ್ಮಾಂಡದ ಕೆಳಗಿರ್ದ ಜಂಗಮ ಭಕ್ತಿಯೆಂಬ ಹಸೆಯ ಮೇಲಣ ಪರಶಿವ ಲೋಕದೊಳಗೆ ಭಕ್ತ್ಯಾಂಗನೆಯೆಂಬ ಗಣೇಶ್ವರನಾಗಿಹನು. ಆ ಅನುಭವ ಬ್ರಹ್ಮಾಂಡದ ಕೆಳಗಿರ್ದ ಜಂಗಮ ಭಕ್ತಿಯೆಂಬ ಹಸೆಯ ಮೇಲಣ ಪರಶಿವ ಲೋಕದೊಳಗೆ ಸತ್ತುಚಿತ್ತಾನಂದನೆಂಬ ಗಣೇಶ್ವರನಾಗಿಹನು. ಆ ಜಂಗಮ ಭಕ್ತಿಯೆಂಬ ಹಸೆಯ, ಶಕ್ತಿ ಭಕ್ತಿಯೆಂಬ ಹಸೆಯ, ಆ ಎರಡರ ಮಧ್ಯದ ಪರಶಿವ ಲೋಕಂಗಳೊಳಗೆ ಶಕ್ತಿ ಸಮೇತನೆಂಬ ಗಣೇಶ್ವರನಾಗಿಹನು. ಆ ಶಕ್ತಿ ಹಸೆಯ ಕೆಳಗಿರ್ದ ಚೈತನ್ಯವೆಂಬ ಹಸೆಯ ಮೇಲಣ ಪರಶಿವಲೋಕಂಗಳೊಳಗೆ, ಸಕಲ ಚೈತನ್ಯನೆಂಬ ಗಣೇಶ್ವರನಾಗಿಹನು. ಅಂತಪ್ಪ ಪರಶಿವಲೋಕದಲ್ಲಿರ್ದ ಷಡುಸ್ಥಲ ದನುಭವರಸದೊಳಗೆ ನಿತ್ಯ ತೃಪ್ತಿಯಿಂದಿಪ್ಪ ಮಹಾಶರಣರುಗಳ ಜ್ಞಾನ ಶಕ್ತಿ ಅನುಭವವೆಂಬ [31]ಸುಕೃತವನು ಮನವೆಂಬ[32] ಸೂಜಿಯೊಳು ಪವಣಿಸಿ ಆ ಮಹಾ[33] ಶಿವಲೋಕಂಗಳ ಹಿಡಿದಿಪ್ಪಳಾಗಿ, ಅವನೆಲ್ಲವನು ಶರಣನ ಮಹದರಿವು ನುಂಗಿ ಕೊಂಡಿಪ್ಪುದು. ಅವರೊಳಗೆ ಮತ್ತೆ ಮನೋಹರವೆನಿಪ ಪರಶಿವ ಲೋಕಂಗಳನೆಲ್ಲಾ ಗಣಂಗಳಿಗೆ ತೋರಿ ಆ ತ್ರಿವಿಧ ಭಕ್ತಿಯೆಂಬ ಹಸೆಯ ಮೇಲೆ ಮೂರ್ತಿ ಗೈದು ಮನೋಹರನೆಂಬ ಗಣೇಶ್ವರನಾಗಿರುತ್ತಿರ್ದನು. ಇಂತೆಂಬ ಪುರಾತನರ ವಚನ ಸಾರಾಯಂಗಳಿಗೆ ಸಾಕ್ಷಿ.

೮೭

ಬಸವಣ್ಣನ ಅಂಗುಷ್ಠದೊಳಗಷ್ಢಾಷಷ್ಠಿ ಸ್ಥಾನಂಗಳುದಕವ
ಮೀರಿದ ಮಹಾತೀರ್ಥದೊಟ್ಟಿಲಂ ಕಂಡೆನಯ್ಯಾ.
ಬಸವಣ್ಣನಾಧಾರಲಿಂಗ ನಾಭಿ ಪರಿಯಂತರವೂ
ಗುರು ಸ್ವರೂಪದೊಟ್ಟಿಲಂ ಕಂಡೆನಯ್ಯಾ.
ಬಸವಣ್ಣನ ನಾಭಿ ಹೃದಯಗಳ ಪರಿಯಂತರವು
ಜಂಗಮ ಸ್ವರೂಪದೊಟ್ಟಿಲಂ ಕಂಡೆನಯ್ಯಾ.
ಬಸವಣ್ಣನ ಮುಖ ಭ್ರೂಮಧ್ಯ ಉನ್ಮನೀ ಉತ್ತುಮಾಂಗ
ಪರಿಯಂತರವು, ಲಿಂಗಸ್ವರೂಪದೊಟ್ಟಿಲಂ ಕಂಡೆನಯ್ಯಾ.
ಬಸವಣ್ಣನ ವಿಶ್ವತೋಮುಖವನುಳ್ಳ ಶರೀರದೊಳಗೆ
ಈ ಪರಿಯ ಕಂಡಾನ ಭಕ್ತ ಜಂಗಮವೆಂಬೆನು ಕಾಣಾ ಗುಹೇಶ್ವರಾ.           ||೩೫||

೮೮

ಊರಿಂದ ಹೊರಗೊಂದು ದೇಗುಲ ಕಂಡಯ್ಯಾ.
ಆ ದೇಗುಲದೊಳಗೊಬ್ಬ ಗೊರವಿಂತಿ ಕಂಡಯ್ಯಾ.
ಆ ಗೊರವಿತಿಯ ಕೈಯಲ್ಲಿ ಸೂಜಿ ಕಂಡಯ್ಯಾ.
ಆ ಸೂಜಿಯ ಮೊನೆಯಲ್ಲಿ ಹದಿನಾಲ್ಕು ಲೋಕ ಕಂಡಯ್ಯಾ.
ಆ ಗೊರವಿತಿಯ ಕೈಸೂಜಿಯ ಹದಿನಾಲ್ಕು ಲೋಕವನೊಂದಿರುಹೆ
ನುಂಗಿತ್ತ ಕಂಡೆ ಗುಹೇಶ್ವರಾ.          ||೩೬||


[1] x (ಬ)

[2] x (ಬ)

[3] x (ಬ).

[4] x (ಬ).

[5] x (ಬ).

[6] ಭಾವ (ಬ)

[7] ಭಾವ (ಬ)

[8] ಸಂಜೀ (ಬ)

[9] ಸಂಜೀ (ಬ)

[10] ಟ್ಟ (ಬ)

[11] ಟ್ಟ (ಬ)

[12] ದಲ್ಲಿ (ಬ)

[13] ನೋಡುತ (ಬ)

[14] ನೋಡುತ (ಬ)

[15] ಶ (ಬ)

[16] + ಹಸೆಯಕಂಡ ಷಡುಶಕ್ತಿಗಳು (ಬ)

[17] ವನೈದಿ (ಬ)

[18] ತ್ಯ (ಬ)

[19] ತಮ್ಮಾ (ಬ)

[20] ತಮ್ಮಾ (ಬ)

[21] ಇಂತttಪ್ಪ (ಬ)

[22] ಇಂತttಪ್ಪ (ಬ)

[23] ಪ (ಬ)

[24] ಪ (ಬ)

[25] ಕಾ (ಬ)

[26] ಕಾ (ಬ)

[27] + ಹೆ (ಬ)

[28] ಈ (ಬ)

[29] x (೨೫೭)

[30] x (೨೫೭)

[31] x (ಅ)

[32] x (ಅ)

[33] + ಪರ (ಬ)