ಶರಣಸತಿ ಲಿಂಗಪತಿಗಳಿಬ್ಬರಿಂದ ಚಿದ್ಬ್ರಹ್ಮಾಂಡ ಪ್ರಕಾಶ. ಈ ಪ್ರಕಾಶ ಬ್ರಹ್ಮಾಂಡ, ಅನುಭವ ಬ್ರಹ್ಮಾಂಡ, ಭಕ್ತಿಯೆಂಬ ಹಸೆ, ಶಕ್ತಿಯೆಂಬ ಹಸೆ, ಚೈತನ್ಯವೆಂಬ ಹಸೆ, ಪ್ರಸಾದರಸ ವಜ್ರದ ಮಹಾಮೇರು, ಸ್ವಯಂಭು, ಆದಿ ರುದ್ರ ಇಂತಿವೆಲ್ಲ ಉತ್ಪತ್ಯವಾದ ಮಹಾ ಪ್ರಸಂಗಮಂ ಪುರಾತನರಗಣಿತ ವಚನಂಗಳಿಂ ತಿಳಿದೋದಿ ಅನುಭವಿಸಿದ ಭಕ್ತ ಮಾಹೇಶ್ವರರಿಗೆ ಬಿನ್ನಹಂ ಮಾಡಿಹೆನು.

೫೩

ಬ್ರಹ್ಮಾಂಡ ಗರ್ಭಿತನೆ ಜೋ ಜೋ
ಅಖಿಲ ತತ್ವಾಲಯ ಸ್ಥಾನಕನೆ ಜೋ ಜೋ     || ಪ||

ನಿನ್ನ ಮಹಾನಂದವೇ

[1] ಗರ್ಭವಾಗಿ
ಅನುಪಮ ಚಿಚ್ಛಕ್ತಿ ಪುಟ್ಟಿದಳು.
ತನ್ನಿಂದ ತತ್ವ ಜಗಜಾಲಂಗಳುದ್ಭವವೆಂದು
ನಿನ್ನಾದಿಯಂ[2] ನೆನವುತ[3] ಪಾಡಿದಳು.           ೧

ಇಚ್ಛಾ [4]ಜ್ಞಾನ[5] ಕ್ರಿಯಾಶಕ್ತಿಯರು
ಸ್ಚಚ್ಛಾನಂದಾನುಭವ ಸುಖದಿಂದ
ಅಚ್ಚಳಿಯದ ನಿರುಪಮನಧ್ವಯನೆಂದು
ನಿಶ್ಚಲ ಬ್ರಹ್ಮನ ಪಾಡಿದಳು.            ೨

ಬ್ರಹ್ಮ ವಿಷ್ಣು ರುದ್ರ ಈಶ್ವರರೆಂಬೀ
ನಿರ್ಮಲ ತತ್ವ[6] ಸದಾಶಿವಾತ್ಮಗೂಡಿ
ಬ್ರಹ್ಮ ಪಂಚಕ ಶಕ್ತಿಯರುಗಳೆರಗುವ
ಗಮ್ಯ ಶಕ್ತಿಯ ಮ[7]ತಕ್ಕ[8] ತೀತನೆ ಜೋ ಜೋ. ೩

ಅರಿವೆಂಬ ಮನೆಯೊಳು ನಿರ್ವಿಕಾರನಾಗಿ
ನಿಜ ನಿಶ್ಚಿಂತವೆಂಬ ತೊಟ್ಟಿಲೊಳಿರಿಸಿ
ಮರದರಿದುಭಯವಳಿದು ಮುಕ್ತಾಂಗನೆಯ
ಕುರುಹಿಲ್ಲದ ನಿರುಪಮನ ತೂಗಿದಳು.           ೪

ಉಪಮೆ [9]ನಿಂದು[10] ಜಗವ ಸೃಷ್ಟಿಸಲೆಂದು
ಜಪ ಕುಸುಮದ ಸ್ಫಟಿಕ ನ್ಯಾಯದಲಿ
ಅಪರಿಮಿತನು ನೀನು ಜಗವ ಹೊದ್ದಿಯು ಹೊದ್ದದ
ವಿಪರೀತ ಚರಿತನೆಂದು ಪಾಡಿದಳು. ೫

ಜೋ ಜ್ಞಾನ ಪರಿಪೂರ್ಣ ಜ್ಞಾನಿಗಳ ಹೃದಯದಲಿ
ಜೋ ಪರಮಾನಂದರ ಹೃದಯದಲಿ
ಜೋ ಪರಿಭವವಳಿದರ ಹೃದಯದಲ್ಲಿ
ಜೋ ಪರಬೊಮ್ಮವೆಂದು ಪಾಡಿದಳು.           ೬

ಶಬ್ದವೆನಲು ಆಕಾಶದ ಬಯಲು ನಿಃ
ಶಬ್ದವೆನಲು ಆಕಾಶದಗ್ಗದ ಘಟ್ಟಿ
ಶಬ್ದ ನಿಃಶಬ್ದವ ಹೊದ್ದಿಯು ಹೊದ್ದದ ನಿಜಗುರು
ಮುಗ್ಧಶಾಂತಮಲ್ಲಯೆಂದು ಪಾಡಿದಳು.         ೭

ಇಂತು ಶಬ್ದ ನಿಃಶಬ್ದವ ಬೆರಸದ ಸ್ತೋತ್ರಂಗಳಂ ಮಾಡುತ್ತ ಇರ್ದಂಥಾ, ಶರಣಸತಿ ಲಿಂಗಪತಿಗಳಿಬ್ಬರು ಮುಖ್ಯವಾದನಂತಕೋಟಿ ಗಣಂಗಳ ಮೇಲೆ ತೊಂಬತ್ತಾರು ಸಾವಿರ ಗಣಂಗಳನೂ, ಅವರೆಲ್ಲರನೊಳಕೊಂಡನಂತ ಪರಶಿವ ಲೋಕಂಗಳನೂ, ದ್ವೈತಾದ್ವೈತವನಿದಿರಿಟ್ಟು, ತುದಿ ಮೊದಲು ನಡುವಣ ಭೇದ, ಮಾತನಾಡುವ ವೇದ ಶಾಸ್ತ್ರಾಗಮ ಪುರಾಣಂಗಳಿಂದರಿಯಬಾರದು. ಅದೇಕಂದಡೆ: ಈ ಶ್ರುತಿಗಳೆಲ್ಲವು ಮಾಯಾ ಯೋನಿಯೊಳು ಜನಿಸಿ ರುದ್ರ ಬೆನಕ ಷಣ್ಮುಖ ವಿಷ್ಣು ಖುಷಿಯರು ಬ್ರಹ್ಮ ಸರಸ್ವತಿ ಇಂತಿವರೆಲ್ಲರ ಬಾಯಲ್ಲಿ ಹೊಕ್ಕು ಹೊರವಂಟು, ತಿರಿಗಾಡಿದ ಎಂಜಲಿ ಮಾತುಗಳಾಗಿ ಪ್ರಾಣವಧೆಯ ಹೇಳಿ ಕರ್ಮವ ಭಜಿಸುತ್ತಿಪ್ಪವಾಗಿ, ಅವರಿಂದಲರಿಯಬಾರದು. ಮತ್ತಾವುದರಿಂದಲರಿಯಬೇಕೆಂದಡೆ, ಪುರಾತನರ ಷಡುಸ್ಥಲವ ಬಲ್ಲಂಥಾ ಗುರುವಿನಲ್ಲಿ ಕಾರುಣ್ಯಮಂ ಪಡೆದು ಅವರ ವಚನಂಗಳ [11]ಮೊದಲು[12] ಪಙ್ತಿಯ ಚೆನ್ನಾಗಿ ತಿಳಿದು, ವೀರಶೈವ ಮಾರ್ಗ ವಿಡಿದು ನಿಂದು ತನ್ನ ತಾನೆ ಕಂಡು ಸತ್ಕ್ರಿಯಮಂ ಮಾಡಿ, ಜಂಗಮ ಪ್ರಸಾದ ಲಿಂಗಕ್ಕೆ ಕೊಟ್ಟು ಕೊಂಡು ಅಭೇದ್ಯ ಪದವ ಕಂಡರಿಯಬಹುದು. ಇಂತೆಂಬನು ಭವಕ್ಕೆ ಸಾಕ್ಷಿ.

ಸ್ವಾನುಭಾವದುದಯದಿಂದ ಜ್ಞಾನನೇತ್ರ ಮುಸುಕ ತೆಱೆದು
ತಾನು ತನ್ನ ನಿಜವ ನೋಡಿ ತಿಳಿದ ಮಹಿಮನು.          ||ಪ||

ಚಿತ್ತ ಬಿಂದು ಪ್ರಕೃತಿ ಹಿಂಗಿ, ನಿತ್ಯಾನಿತ್ಯ ವಿವೇಕದಿಂದ –
ಲತ್ತ ನಿಲುಕಿ ನೋಡಿ, ಕಂಡ ಸಕಲದಳಿವನು.
ತತ್ವದಲಿ ವಿವೇಕಿಯಾಗಿ ನಿಶ್ಚಲದ ನಿಜಾಂತರಂಗ
ನಿಶ್ಚಯವನೆಯ್ದಿ, ಸುಖದ ಮುಖದವನರಱಿದನು.         ೧

ಜ್ಞಾನ ಮುಕುರದೊಳಗೆ ನೋಡಿ, ತಾನು ತನ್ನ ಕುಱುಹುವಿಡಿದು,
ತಾನು ತನಗೆ ಅನ್ಯ ವಿಲ್ಲವೆಂಬ ಭೇದವ
ತಾನೆಯಱಿದು, ಮಾಯಾಮಿಥ್ಯವಂ ನಿವೃತ್ತಿಮಾಡಿ, ಶಿವ
ಧ್ಯಾನದಲ್ಲಿ ಮನವನಿತ್ತ ಸತ್ಯಶರಣನು.          ೨

ಹಿಂದ ಹಱಿದು, ಹಱಿದ ಹಿಂದನೊಂದು ಮಾಡಿ ಬೆರಸದಾ
ನಂದದಿಂದಲೆಯ್ದಿ ಮನೋಭಾವಿಯಾಗಿ
ಬಿಂದು ನಾದ ಕಳಾತ್ರಯದ ಸಂದನಳಿದು ಚಿತ್ಸ್ವರೂಪ –
ಬಿಂದುವಿನೊಳು ನಿಂದು ಮೆಱೆದ ಸತ್ಯಶರಣನು.          ೩

ಶಕ್ತಿಯೊಳು ಶಿವಾತ್ಮವಡಗಿ, ಶಕ್ತಿರಹಿತನೆಂಬ ಬೆಡಗ
ಶಕ್ತಿಮುಖದೊಳಱಿದು, ಶಕ್ತಿಸಂಗಭಂಗವಾವಿ –
ರಕ್ತಿಯಿಂದ ಗೆಲಿದು, ಪರಮ ಶಕ್ತಿ ಸುಖವ ಕಂಡ ಸುಖಿಯ
ಚಿತ್ತದಱಿವು ಜಗವ ನುಂಗಿಯುಗಳದಿರ್ದುದು.

ಆದಿ – ಮಧ್ಯ – ಅಂತ್ಯವೆಂಬ ಭೇದವಾಕ್ಯದೊಳಗೆ ಪುಗದ
ನಾದಿಸಿದ್ಧವಾಗಿ, ತನ್ನ ತಾನೆ ಕಂಡು, ಅ –
ಭೇದ್ಯಪದವನೆಯ್ದಿ, ಕೂಡಲಚೆನ್ನಸಂಗನಲ್ಲಿ
ಭೇದವಿಲ್ಲದಿಪ್ಪ ದಿವ್ಯಜ್ಞಾನಿ ನೋಡಾ.            ೫

೫೫

ವೇದವೆಂಬುದು ಯೋನಿಯ ಹಂಗು.
ಶಾಸ್ತ್ರವೆಂಬುದು ಯೋನಿಯ ಹಂಗು.
ಆಗಮವೆಂಬುದು ಯೋನಿಯ ಹಂಗು.
ಪುರಾಣವೆಂಬುದು ಯೋನಿಯ ಹಂಗು,
ಬಂದುದು ವೆಜ್ಜ, ನಿಂದುದು ವೆಜ್ಜ
ಹೇಳೂದು ವೆಜ್ಜ, ಕೇಳೂದು ವೆಜ್ಜ
ಈ ವೆಜ್ಜದ ಗುಜ್ಜಿನಲ್ಲಿ ಬಿದ್ದವರಿಗೆ
ನಿರ್ಧರವಿಲ್ಲವೆಂದಾತುರವೈರಿ ಮಾರೇಶ್ವರಾ.  ||೩||

೫೬

ವೇದಂಗಳೆಲ್ಲಾ ಬ್ರಹ್ಮನೆಂಜಲು,
ಶಾಸ್ತ್ರಂಗಳೆಲ್ಲ ಸರಸ್ವತಿಯೆಂಜಲು,
ಆಗಮಂಗಳೆಲ್ಲ ರುದ್ರನೆಂಜಲು,
ಪುರಾಣಂಗಳೆಲ್ಲ ವಿಷ್ಣುವಿನೆಂಜಲು,
ನಾದ ಬಿಂದು ಕಳೆಗಳೆಂಬವಕ್ಷರತ್ರಯದೆಂಜಲು,[13]ಅಕ್ಷರತ್ರಯಂಗಳು ಪ್ರಕೃತಿಯ ಎಂಜಲು,
ಇಂತಿವನೆಲ್ಲವ ಹೇಳುವರ ಕೇಳುವರ
ಪುಣ್ಯ ಪಾಪಂಗಳೆಂಜಲೆಂದಾತನಂಬಿಗರ ಚವುಡಯ್ಯಾ.            ||೪||

೫೭

ವೇದ ಘನವೆಂಬೆನೆ ಪ್ರಾಣವಧೆಯ ಹೇಳುತ್ತದೆ.
ಶಾಸ್ತ್ರ ಘನವೆಂಬೆನೆ ಕರ್ಮವ ಭಜಿಸ ಹೇಳುತ್ತದೆ.
ಆಗಮ ಘನವೆಂಬೆನೆ ಮುಂದಿಟ್ಟು ಅರಸಿ ಕಾಣೆನೆನುತ್ತದೆ.
ಅಲ್ಲೆಲ್ಲಿಯೂ ನೀನಿಲ್ಲ ಕಾರಣ, ತ್ರಿವಿಧ ದಾಸೋಹದಿಂದಲರಿದು
ಕಂಡೆನು ಕಾಣಾ ಕೂಡಲಚೆನ್ನಸಂಗಮದೇವಾ.            ||೫||

೫೮

ಇಂತಪ್ಪ ಶರಣನು ಜಡಶಬ್ದ ತೊಟ್ಟಿಲಾಗಿರ್ದ
ಶ್ರುತಿಗಳ ತಲೆ ಕಾಲು ನಡುವೆಲ್ಲಾ ಠಾ[14]ವನೂ
ವೀರಶೈವವೆಂಬ ಮಹಾ ಶಾ[15]ಸ್ತ್ರದ ವಾಕು
ಶ[16]ಸ್ತ್ರಧಾರೆಯಲಿ ಖಂಡಿಸಿ
ಅರಿವು ಮೆರೆವೆಗೆಯೂ, ಪುರ್ಣಯ ಪಾಪಕ್ಕೂ ಬಿನಾಟ ಕಾರಣ
ನಾ ಮಹಾ ಶರಣನ ಕಾರುಣ್ಯದಿಂದ
ಯುಗವೇಳು[17] ಜಡ ಲೋಕಂಗಳ ಹೊದ್ದದೆ [18]ನಿಂದಂಥಾ[19] ಭಕ್ತಿ ಜ್ಞಾನ ವೈರಾಗ್ಯ ಲೋಕಂಗಳನು
ಸಜ್ಜನ ಶುದ್ಧ ಶಿವಾಚಾರ ಸಂಪನ್ನರಪ್ಪ ವಚನ
ಷಡುಸ್ಥಲ ಬ್ರಹ್ಮಿಗಳಾಗುತ್ತಂ ಇದ್ದಂಥಾ
ಮಾಹೇಶ್ವರರಿಗೆ ಬಿನ್ನಪವಂ ಮಾಡಿಹೆನು.
ಅದೆಂತೆಂದಡೆ:
ಊರ ಹೊರಗೊಂದು ಹೊಸ ಕೀಲನಿಕ್ಕಿದೆ.
ಅದು ದಾನವರ ಕೀಲಲ್ಲ, ಮಾನವರ ಕೀಲಲ್ಲ
ಆತುರ ವೈರಿ ಮಾರೇಶ್ವರನ ಹೆಂಡತಿಯ ಕೀಲು.         ||೬||

೫೯

ಪಾತಾಳದಿಂದತ್ತತ್ತ ಮಾತ ಬಲ್ಲವರಿಲ್ಲ.
ಗಗನದಿಂದತ್ತತ್ತ ಅನುಭಾವ ತಾನಿಲ್ಲ.
ಒಳಗಣ ಜ್ಯೋತಿಯ ಬೆಳಗಬಲ್ಲವರಿಲ್ಲ.
ಹೊರಗಣ ಹೊರಗನು ಅರಿಯಬಲ್ಲವರಿಲ್ಲ.
ಹಿಂದಣ ಹಿಂದನು ಮುಂದಣ ಮುಂದನು
ತಂದು[20] ತೋರಿದ ನಮ್ಮ ಗುಹೇಶ್ವರನು.      ||೭||

೬೦

ಅಂಡಜವ ಮೇಲು ಮಾಡಿದ ಪಿಂಡವಡಿ[21]ಯಾಗಿ[22] ಆ ಅಂಡಜದೊಳಗೆ ನಾಲ್ಕು ಕೈಕರಣನೇಕ[23]ವಾದವು.
ಆ ಕೈಕರಣದೊಳಗೊಬ್ಬ ಶರಣ ದಾಸೋಹಮೆನಲಾಕ್ಷಣ
ಒಂದು ಸೋಜಿಗ ಮೂಡಿತ್ತಕಂಡೆ ಗುಹೇಶ್ವರಾ. ||೮||

೬೧

ಜಗದಗಲದ ಮಂಟಪಕ್ಕೆ
ಮುಗಿಲಗಲದ ಮೇಲು ಕಟ್ಟು.
ಅಲ್ಲಿ ವಿಚಿತ್ರವ ನೋಡುತ್ತ ನೋಡುತ್ತ
ಧಾನ್ಯ ವಿಶ್ರಮಿಸಿ ನಿಂದಿತ್ತು.
ದಿಟ ದಿಟವೆಂ[24]ಬುದೊಂ[25]ದು ದರುಶನವ ನೋಡುತ್ತ ನೋಡುತ್ತ
ಗಗನ ಗಂಭೀರದಲ್ಲಿ ಉದಯವಾಯಿತ್ತ ಕಂಡೆ
ಗುಹೇಶ್ವರನೆಂಬಲಿಂಗ ತಾನೆಯಾಗಿ.            ||೯||

ಇಂತೆಂಬ ಪುರಾತನರ ವಚನಂಗಳು ಅನೇಕ [26]ಚೋದ್ಯವಹಂಥಾ[27] ಅರ್ಥಂಗಳನೊಳಕೊಂಡಿದ್ದವು. ಆ ಅರ್ಥಂಗಳ ತೆಗದು ಬಸವೇಶ್ವರನ ಕರಣದಿಂದ ಚಿದ್ಬ್ರಂಹ್ಮಾಂಡದುದಯಮಂ [28]ಹೇಳಿಹೆನು[29]. ಅದು [30]ಹೇಗೆಂ[31]ದಡೆ: ಆ ಮಹಾ ಶರಣ ಸನ್ನಹಿತ ಪರಶಿವನು ಪರಶಕ್ತಿಯೂ ತಾವಿಬ್ಬರು ತಮ್ಮ ಲೀಲೆಯಿಂದ ಶರಣ ಬಸವಣ್ಣ ಮೊದಲಾದನಂತಕೋಟಿಗಣಂಗಳಮೇಲೆ ತೊಂಬತ್ತಾರುಸಾವಿರ ಪ್ರಮಥ ಗಣಂಗಳಂ ನೋಡಿ ಸಂತೋಷ ಮಾಡಿ ನಮಗೆಯೂ ಈ ಮಹಾ ಶರಣರುಗಳಿಗೆಯೂ ಒಂದು ಮಹಾಮನೆ ಬೇಕೆಂದು ಇಚ್ಛೈಸಲೊಡನೆ ಆ ಪರಬ್ರಹ್ಮದ ಬ್ರಹ್ಮರಂಧ್ರವೆಂಬ ನಾಳದಲ್ಲಿಂದ ಉರ್ಧ್ವ ಮುಖವನುಳ್ಳ ಚಿದ್ಬಿಂದು ಷಡುವರ್ಣ ಸ್ವರೂಪೆಂಬಂತೆ ಷಡುವರ್ಣಾತೀತವಾಗಿ ಸ್ವರೂಪಾಗುದೈಸಿ ಸಮಾಸ್ತ ತತ್ವಂಗಳೆಲ್ಲವನೂ ಗರ್ಭೀಕರಿಸಿದ ಪರಶಿವ ತತ್ವವನು, ಗಣಂಗಳನು ಗರ್ಭೀಕೃತವ ಮಾಡಿ, ಚಿದ್ಬ್ರಹ್ಮಾಂಡವಾಯಿತ್ತು. ಅದರ ಘಾತವನಾರೂ ಕಾಣಬಾರದು. ಅದೇನು ಕಾರಣವೆಂದಡೆ: ಆರಾರೂ ವರ್ತಿಸುವಂಥಾ ವರ್ಧಕವು, ಆರಾರೂ ವಚಿಸುವಂಥಾ ವಾಕು. ಆರಾರೂ ವಚಿಸುವಂಥಾ ವಾಗಾದ್ವೈತಂಗಳು, ಆರಾರೂ ಅರಿವಂಥಾ ಅರಿವು ಖಂಡಿತವಾಗಿಪ್ಪವು. ಅದು ಕಾರಣ ಪಾತಾಳಲೋಕದಿಂದಾಕಾಶದೊಳಗುಳ್ಳ ಭೋಗ ಮೋಕ್ಷವನೂ ಸರ್ವ ವ್ಯಾಪಾರವನೂ ಇಂತಿನೆಲ್ಲವ ಹೇಳುವ ವೇದಶಾಸ್ತ್ರ ಆಗಮ ಪುರಾಣ ಇವೆಲ್ಲರೊಳಗಣ ಜಡದ ಮನವಾರ್ತೆಯಂ ಬಲ್ಲರಲ್ಲದೆ ಪಾತಾಳಲೋಕದ [32]ಪೃಥ್ವಿಯಿಂದ[33] ಕೆಳಗೇನುಂಟೆಂಬುದನರಿಯರು, ಆಕಾಶದಿಂ ಮೇಲೇನುಂಟೆಂಬುದನರಿಯರು. ಅಂ[34]ತಪ್ಪ ಘನ ಸ್ವರೂಪನರಿಯದಿಪ್ಪವರ ಖಂಡಿತ ವಿವೇಕದೊಳಗೆಯೂ, ತಾವಿರ್ದ ಅನಿತ್ಯ ಲೋಕಂಗಳೊಳಗೆಯೂ ಇಪ್ಪ ಜ್ಯೋತಿರ್ಮಯ ಲಿಂಗವು ಅಖಂಡಿತವಾಗಿರ್ದು ಇವರಿಗಭೇದ್ಯವಾದ ಕಾರಣ [35]ವಸ್ತುವನರಿಯದೆ ಅನುಭಾವಿಗಳೆಲ್ಲರು ಭ್ರಾಂತುಗೊಂಡರು. ಇಂತಪ್ಪ ಭ್ರಾಂತುಗಳಿಗೆ ಇದಿರಿಟ್ಟು ತೋರುವ ತೋರಿಕೆಗೆ ಎಲ್ಲವೂ ತಮ್ಮಿಂದ ಹೊರಗು. ಆ ಹೊರಗಿಂಗೆ ಹೊರಗಾಗಿಪ್ಪುದು ಪರಬ್ರಹ್ಮವು. ಅದನಾರೂ ತಿಳಿಯದೆ ಅನುಭಾವಿಗಳೆಲ್ಲರೂ ಆಸೆಯೊಳಗೆ ಭ್ರಮಣಗೊಂಡು ಬಿದ್ದರು. ತಮ್ಮಿಂದ ಹಿಂದಾದುದು ಜೀವಭಾವ. ಆ ಜೀವ ಭಾವದಿಂದ ಹಿಂದಾದುದು ಯೋಗ ಮೂಲ ಜ್ಞಾನ. ಈ ಎರಡರ ಭೇದವ ತಿಳಿಯದೆ ಅನುಭಾವಿಗಳೆಲ್ಲರು ತ್ರಿವಿಧ ಸಂಕಲೆಯ ತೊಟ್ಟು ಮೂರ್ತಿಗೈದರು. ತಮ್ಮಿಂದ ಮುಂದಾದುದು ತತ್ವವಿವೇಕ. ಆ ತತ್ವ ವಿವೇಕದಿಂ ಮುಂದಾದುದು ತಮ್ಮ ಸ್ವಾನುಭಾವದ ನಿಲವು. .ಈ ಎರಡರ ಭೇದವ ತಿಳಿಯಲ[36]ನುಭಾವಿಗಳೆಲ್ಲರೂ ಹದಿನೆಂಟು ಜಾತಿಗಳಿಗೆ ಬೋಧಿಸಿ ಲಿಂಗವ ಕೊಟ್ಟು ಕರ್ಮಕಾಂಡಿಗಳಾದರು. ಇಂತಪ್ಪ ಪುಣ್ಯ ಪಾಪ ರಹಿತವಾಗಿ ನಿಂದಿಪ್ಪ ಭಕ್ತರ ಸದ್ವಿವೇಕ ಸುಖವನಾರು ಬಲ್ಲರಯ್ಯಾ ಎಂದಡೆ: ನಮ್ಮ ಪುರಾತನರ ಷಡುಸ್ಥಲ ಮಾರ್ಗದೊಳಗೆ ನಿಂದ ಭಕ್ತ ಮಾಹೇಶ್ವರರು ಆದಿ ಪ್ರಮಥರು ಬಲ್ಲರೆಂದು ಪ್ರಭುಸ್ವಾಮಿ ತಮ್ಮ ತಾವು ವಿವೇಕಿಸಿದ ಪ್ರಸ್ಥಾವದ ವಚನ. ಈ ವಚನ ವಿವೇಕವನುಸುರಿದ ಪ್ರಭುಲಿಂಗದ ಕೃಪಾ ಪ್ರಸಾದದ ಪ್ರಸಂಗದಿಂದ ಚಿದ್ಬ್ರಹ್ಮಾಂಡಮಂ ಹೇಳಿಹೆನದೆಂತೆನಲು: ಪರಶಿವ ತತ್ವದಲ್ಲಿ ಒಂದು ಚಿತ್ತೆಂಬ ಬಿಂದುದೈಸಿ ಊರ್ಧ್ವರೇತಸ್ಸೆಂಬ ಒಂದು ರಸಬದ್ಧದಿಂ ಒಂದಂಡಾಕೃತಿಯಾ[37]ಗಲದು ಅಂಡಜವೆಂಬ ನಾಮಕ್ಕೆ ಸಂದು, ಅದು ಚಿದ್ಬ್ರಹ್ಮಾಂಡವೆನಿಸಿತ್ತು. ಆ ಚಿದ್ಬ್ರಹಾಂಡದೊಳಗಣ ಪರಿ ಪ್ರಮಾಣಿನ ವಳಯವೆಷ್ಟು ಯೋಜನವೆಂದಡೆ, ಅದರೊಳಗಿಷ್ಟು ಯೋಜನವೆಂದು ವಚಿಸಬಾರದು. ಅದೇನು ಕಾರಣವೆಂದಡೆ: ಅದು ಶರಣನಲ್ಲಿ ಲಿಂಗೈಕ್ಯವಾಗಿ ಲಿಂಗದಲ್ಲಿ ಶರಣನೈಕ್ಯವಾಗಿ ನಿಂದಹಾಂಗಿಪ್ಪ ಚಿತ್ತು. ಆ ಮಹಾಲಿಂಗವನು ಶರಣನು ಗರ್ಭೀಕರಿಸಿಪ್ಪ ಕಾರಣ. ಅದನುಪಮಿಸಬಾರದು ಅದು ಉಪಮಾತೀತವಾದ ಕಾರಣ. ಅದನು ಖಂಡಿತದರಿವಿನಿಂದರಿಯ ಬಾರದು ಅದು ಅಖಂಡಿತವಾಗಿಪ್ಪ ಕಾರಣ. ಅದನು ಧ್ಯಾನಿಸಬಾರದು ಅದು ಧ್ಯಾನಾತೀತವಾದ ಕಾರಣ. ಅದನು ಪ್ರಮಾಣಿಸಬಾರದು ಅದು ಅಪ್ರಮಾಣುವಾಗಿಪ್ಪ ಕಾರಣ. ಅದನು ರೂಪಿಸಬಾರದು ಅದು ರೂಪಾತೀತವಾಗಿಪ್ಪ ಕಾರಣ. ಜ್ಞಾತೃ ಜ್ಞಾನ ಜ್ಞೇಯಂಗಳೆಂಬ ವೇದ ಶಾಸ್ತ್ರಾಗಮ ಪುರಾಣಂಗಳು ಇಂತೀ ಶ್ರುತಿಗಳೆಂದೂ ಅರಿಯದಾದವು, ಅದು ನಿರ್ವಾಚ್ಯವಾಗಿಪ್ಪ ಕಾರಣ. ತತ್ವಮಸಿ ಎಂಬ ಜಡ ಶಬ್ದದೊಟ್ಟಿಲನ್ನು ನುಡಿವ ಆಗಮಂಗಳಿಗೆಂದೂ ಒಳಗು ಕಾಣಿಸದು. ಅದು ದ್ವೈತಂಗಳಿಗೆ ಹೊದ್ದದಾಗಿ ಅದು ದ್ವೈತಾದ್ವೈತಂಗಳ ಮೀರಿ ನಿಂದಿತ್ತು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೬೨

ಉಪಮೆ ಉಪಮಿಸಲರಿಯದೆ
ಉಪಮಾತೀತನೆನುತ್ತಿದ್ದಿತ್ತು.
ಅರಿವು ಅರಿವಿನ ಮರೆಯಲಿದ್ದುದನರಿಯಲರಿಯದೆ
ಅರಿವು ಪರಾಪರವೆನುತ್ತಿದ್ದಿತ್ತು.
ಧ್ಯಾನ ಧ್ಯಾನಿಸಲರಿಯದೆ, ಧ್ಯಾನ ತದ್ಧ್ಯಾನಗೊಂಡಿತ್ತು.
ಜ್ಞಾತೃ ಜ್ಞಾನ ಜ್ಞೇಯಕ್ಕೆ ಇನ್ನಾವ ಜ್ಞಾನವೋ?
ವೇದ ವಿಜ್ಞಾನವೆಂದುದಾಗಿ, ತತ್ವಮಸಿ ವಾಕ್ಯಂಗಳೆಲ್ಲವೂ
ಹುಸಿಯಾಗಿ ಹೋದವು.
ಸಚ್ಚಿದಾನಂದವೆಂದುದಾಗಿ, ದ್ವೈತಾದ್ವೈತಿಗಳೆಲ್ಲ
ಸಂಹಾರವಾಗಿಹೋದರು.
ಬಂದೂ ಬಾರದ ನಿಂದನಿರಾಳ ಗುಹೇಶ್ವರ.    ||೧೦||

ಅಂಥಾ ಸಚ್ಚಿದಾನಂದ ಬ್ರಹ್ಮಾಂಡವನು ಮತ್ತೊಂದು ಪ್ರಕಾರದಲ್ಲಿ ಕಲ್ಪಿಸ[38]ಬಹುದು. ಅದು ಹೇಗೆಂದಡೆ: ಸಜ್ಜನನ ಸದ್ಭಾವ ಸದಾಚಾರದಿಂದ ವರ್ಣಾತೀತವಾದ ಮಹಾಲಿಂಗವನು ಜ್ಯೋರ್ತಿಮಯ ಲಿಂಗವೆಂದು ವರ್ಣಕ್ಕೆ ತಂದು, ಕಲ್ಪಿಸಿ ನುಡಿವಂತೆ, ಆ ಚಿದ್ಬ್ರಹ್ಮಾಂಡವನು ಇಷ್ಟು ಯೋಜನ ಪ್ರಮಾಣೆಂದರಿದಿರಬೇಕೆಂಬುದಕ್ಕೆ ಕಲ್ಪಿಸಿ ಹೇಳಬಹುದು. ಚಿದ್ಬ್ರಹ್ಮಾಂಡದುದ್ದವೆರಡು ಸಾವಿರದೆಂಟನೂರುಕೋಟಿ ಯೋಜನ ಪ್ರಮಾಣವಾಗಿಪ್ಪುದು. ಅದರ ಹೊರಗಣವಳಯವನಾ ಶಿವನೆ ಬಲ್ಲನು. ಆ ಚಿದ್ಬ್ರಹ್ಮಾಂಡದಿಂ ಕೆಳಗೆ ಮುನ್ನೂರೈವತ್ತು ಕೋಟಿ ಯೋಜನ ಪ್ರಮಾಣಿನಲ್ಲಿ ಆ ಪರಶಿವಭಕ್ತಿ ತನ್ನ ಸರ್ವಾಂಗದ ಪ್ರಕಾಶಮಂ ತೆಗದು ತಾನೊಂದು ಬ್ರಹ್ಮಾಂಡಮಂ ಮಾಡಿ ತೋರಿದಳು. ತೋರಲಾಗಿ ಆ ಪ್ರಕಾಶ ಬ್ರಹ್ಮಾಂಡದಿಂ ಕೆಳಗೆ ಮುನ್ನೂರೈವತ್ತು ಯೋಜನ ಕೋಟಿ ಪ್ರಮಾಣಿನಲ್ಲಿ ಆ ಶರಣ ಬಸವಣ್ಣನು ತನ್ನ ಮಹಾನುಭಾವವನೆ ತೆಗದು ಒಂದು ಬ್ರಹ್ಮಾಂಡಮಂ ಮಾಡಿ ತೋರಿದನು. ತೋರಿದ ಬಳಿಕ ಮಹಾನುಭಾವವೆಂಬ ಬ್ರಹ್ಮಾಂಡದಲ್ಲಿಂದಿಳಿದು ಶಿವ ಬಸವ ಮೊದಲಾದ ಷಡುಸ್ಥಲ ಬ್ರಹ್ಮಿಗಳು ತಮ್ಮ ತಮ್ಮ ಶಕ್ತಿಳು ಅನಂತಕೋಟಿ ಗಣಂಗಳ ಮೇಲೆ ತೊಂಬತ್ತಾರು ಸಾವಿರ ಅಮರಗಣಂಗಳು ಸಮೇತವಾಗಿ, ಸಾವಿರದ ನೂರು ಕೋಟಿ ಯೋಜನ ಪ್ರಮಾಣಿನಲ್ಲಿಂಗೆ ಬಿಜಯಂಗೈದು ತಮ್ಮ ತಮ್ಮ ಅಖಂಡಿತ ಜಂಗಮ ಭಕ್ತಿಯೊಳಗೆ ಕೆಲ ಭಕ್ತಿಯಂ ತೆಗದು ಸ್ವರೂಪಿಸಿ, ಒಂದು ಭಕ್ತಿ ಹಸೆ ಎಂಬ ಭೂಮಿಯಂ ಮಾಡಿ ಆದಮೇಲೆ ಮೂರ್ತಿಗೆಯ್ದು ನಿತ್ಯ ತೃಪ್ತಿಯೊಳಿರುತ್ತಿರ್ದುದು. ಇಂತೆಂಬ ಪುರಾತನರಗಣಿತ ವಚನ ಗೌಣಾರ್ಥಂಗಳಿಗೆ ಸಾಕ್ಷಿ.

೬೩

ನುಡಿಯ ಗಡಣದ ಬೆಳಗು ಮರುತ ಪರಿಮಳದಂತೆ
ಭಾವವಿಲ್ಲದ ಬಯಲು ಪರವು ತಾನೆ.
ಅಱಿವು ಕುಱಿಹಿನ ಮಱಹು ತೆಱಹಿಲ್ಲದಾ ಘನವು
ನಿಂದ ನಿಜಪದದಿಂದ ಪ್ರಭೆಯಾದುದು.||ಪ||

ಎಳೆಯ ಮಾಣಿಕದಂತೆ ಹೊಳೆದ ಜ್ಞಾನದ ಜ್ಯೋತಿ
ನವನಾಳದಲ್ಲಿ ಪ್ರಾಣಲಿಂಗಭರಿತ
ಪಿಂಡ ಬ್ರಹ್ಮಾಂಡವನು ಮೀಱಿ ಗೋಱುವ ವಚನ
ಗಗನದುದಯದ ಮೇಲೆ ಘನಕೆ ಗಮನ.         ೧

ಆಕಾಶದಿಂದತ್ತಲಾರು ಬಲ್ಲವರಿಲ್ಲ
ಪಾತಾಳದ ಪ್ರಮಾಣ ಕಾಂಬರಾರೋ
ಆತುಮನ ವಿಡಿದು ಪರಮಾತುಮನ ಪರಿಭಾವ
ನೋಡ ನೋಡಾ ನೋಡ ಘಮಕೆ ಗಮನ      ೨

ಇರುಳು ಮನವನೆ ನುಂಗಿ ಹಗಲು ಘನವನೆ ನುಂಗಿ
ಮಾತು ಮಥನವ ನುಂಗಿದಾತ ಭರಿತ
ನೀತಿ ನಿಜನಿಂದಲ್ಲಿ ನಿಜದ ನಿರ್ಮಳ ಜ್ಯೋತಿ
ಪ್ರಾಣಲಿಂಗದ ಘನಕೆ ಪ್ರಮಾಣಿಲ್ಲವೊ.           ೩

ಆರು ದರುಶನದೊಡೆಯನಂತರಂಗದೊಳಿಪ್ಪ
ನಾರಿಗಾದಡೆ ಗಗನ ಭುವನ ಒಂದೆ.
ಹೃದಯ ಕಮಲದ ಬೆಳಗು ಪರಬ್ರಹ್ಮದಲಿ ತುಂಬಿ
ಪರಿಣಾಮ ಪರಮ ಪದವಿಯ ತೋಱಿತು.      ೪

ಧರೆಗೆ ನಿದ್ರೆಯ ಇಲ್ಲ ಉದಕಕ್ಕೆ ಕನಸಿಲ್ಲ
ಅಗ್ನಿ ಕಳವಳಕೆ ಒಳಗಾಗದೆಂತೋ
ಸುಳಿವ ಪವನನು ತಾನು ತಾಮಸಕ್ಕೊಳಗಾಗ
ಬರಲಿಮಗೆ ಭ್ರಮೆಯುಂಟೆ ಗುಹೇಶ್ವರ           ೫

೬೫

ನೀರಿಲ್ಲದ ವರಳಿಂಗೆ ನೆಳಲಿಲ್ಲದ ವನಕೆ,
ರೂಹಿಲ್ಲದ ನಾರಿಯರು ಬೀಜವಿಲ್ಲದ ಅಕ್ಕಿಯ ತಳಿಸುತ್ತೈದಾರೆ.

ಬಂಜೆಯ ಮಗನ ಜೋಗುಳನಾಡುತ್ತೈದಾರೆ.
ಉರಿಯ ಚಪ್ಪರವನಿಕ್ಕಿ ಗುಹೇಶ್ವರನ ಕಂಧನು
ಲೀಲೆಯನಾಡಿದನು.         ||೧೨||

೬೫

ಅವಿರಳ ದಿ[39]ಟನ ಮದುವೆಗೆ ನಿಬ್ಬಣಗಿತ್ತಿಯರೆಲ್ಲಾ ಬಂದು,
ಕೆಂಡ ದಂಡೆಯನೆ ಮುಡಿದು,
ಅಂಡಜವೆಂಬರಿಶಿನವ ಮಿಂದು,
ಉರಿಯೆಂಬ ಹಚ್ಚಡದ ಹೊದಕೆಯಲ್ಲಿ,
ನಿಬ್ಬಣಗಿತ್ತಿಯರು ಬಪ್ಪ ಬರ[40]ವ ಕಂಡು,ನೀರಲಡಿಗೆಯ ಮಾಡಿ, ವಾಯದ ಕೂಸಿಂಗೆ[41]ಮಾಯದ[42] ಮದವಣಿಗೆ ಸಂಗ ಸಂಯೋಗವಿಲ್ಲದೆ ಬಸುರಾಯಿತ್ತು.
ಕೂಸೆದ್ದು ಕುಣಿದಾಡಿ ಸೂಲಗಿತ್ತಿಯನವಗ್ರಹಿಸಿತ್ತು.
ಗುಹೇಶ್ವರ, ಒಬ್ಬನಿಬ್ಬ ಮೂವರು
ತ್ರಿದೇವತೆಗಳು ಬಲ್ಲರೆ ಆ ಲಿಂಗದ ಘನವನು? ||೧೩||

ಒಬ್ಬರಿಬ್ಬ ಮೂವರೆಂಬ ವೇದ ಶಾಸ್ತ್ರಾಗಮ ತ್ರಿದೇವತೆಗಳೆಂಬ, ಬ್ರಹ್ಮ, ವಿಷ್ಣು, ರುದ್ರ ಮೂವರೆಂಬ, ಈಶ್ವರ ಸದಾಶಿವ [43]ಪರಮೇ[44]ಶ್ವರ [45]ಈ ನ[46]ವ ದೇಹಿಗಳಿಗೆ ಕಾಣಿಸದ ಮಹಾಜ್ಞಾನಾ[47]ಕಾಶದೊಳಗಣ ಮಹಾಲಿಂಗಕ್ಕೆಯೂ, [48]ಮಹಾ[49] ಶರಣರಿಗೆಯೂ, ಮಹಾ ಆರೋಗಣೆಯಾಗಬೇಕೆಂದಿಚ್ಛೈಸಲೊಡನೆ, ತಾವಿರ್ದ ಠಾವಿಂಗೆ ಸಾವಿರದ ನಾನೂರುಕೋಟಿಯೋಜನ ಪ್ರಮಾಣಿನಲ್ಲಿರ್ದ ಮಹಾನುಭಾವ ಬ್ರಹ್ಮಾಂಡವೆಂಬ ಕಾಮಧೇನು ಪರಮಾಮೃತವನೆ ಸೋನೆಯಾಗಿ ಯವಗವಿಸಿ ಸುರಿವುತ್ತಿರಲು, ಹಾಂಗೆ ಸುರಿದ ಷೋಡಶಮು[50]ವುಳ್ಳಮೃತ ಬಿಂದುಗಳನು,[51] ಉರ್ಧ್ವಮುಖವನುಳ್ಳ[52] ಮೃತ ಬಿಂದುಗಳನು, ಪರಶಿವ[53]ಸಮಯಾಚಾರದ ಗಣಂಗಳು ಹನ್ನೆರಡು ಸಾವಿರ, ಬಸವಣ್ಣನ ಸಮಯಾಚಾರದ ಗಂಣಗಳು ಹನ್ನೆರಡುಸಾವಿರ, [54]ಶಾಂತಾತೀತನ[55] ಸಮಯಾಚಾರದ ಗಣಂಗಳು ಹನ್ನೆರಡು ಸಾವಿರ,  ಸದಾಶಿವನ ಸಮಯಾಚಾರದ ಗಣಂಗಳು ಹನ್ನೆರಡು ಸಾವಿರ, ಈಶ್ವರನ ಸಮಯಾಚಾರದ ಗಣಂಗಳು ಹನ್ನೆರಡು ಸಾವಿರ, ಮೃಡನ ಸಮಯಾಚಾರದ ಗಣಂಗಳು ಹನ್ನೆರಡು ಸಾವಿರ, ರುದ್ರನ ಸಮಯಾಚಾರದ ಗಣಂಗಳು ಹನ್ನೆರಡು ಸಾವಿರ, ಅಭವನ ಸಮಯಾಚಾರದ ಗಣಂಗಳು ಹನ್ನೆರಡು ಸಾವಿರ. ಅಂತು ಅನಂತಕೋಟಿ ಗಣಂಗಳ ಮೇಲೆ ತೊಂಬತ್ತಾರು ಸಾವಿರ ಪ್ರಮಥ ಗಣಂಗಳು ಪ್ರಣಮನವಾದ ಘೋಷಂಗಳಿಂದಾದ ಅಮೃತವನೆ ತೆಗೆದುಕೊಂಡು, ಪರಶಿವ [56]ಬಸವ[57] ಮೊದಲಾದ ಷಡುಸ್ಥಲ ಬ್ರಹ್ಮಿಗಳು ತಮ್ಮ ಶಕ್ತಿಗಳು ಸಹಿತ ಒಬ್ಬ ಜಂಗಮದೇವರ ಪಾದಾಂಗುಷ್ಟದಲ್ಲಿ ತೀರ್ಥಮಂ ತೊಳಕೊಂಡು, ವಿಭೂತಿಯಂ ಎಲ್ಚಾ ಜಂಗಮ ದೇವರುಗಳ ಹಸ್ತಮಂ ಸೋಂಕಿಸಿ, ಆ ಪರುಷನದ ವಿಭೂತಿಯ [58]ಹನ್ನೆರಡು[59] ಪ್ರಣಮಂಗಳಿಂದ ಅಮೃತದ ಮೇಲೆ ಮಿಶ್ರಮಂ ಮಾಡಿ ಆ ಜಂಗಮ ದೇವರುಗಳಿಗೆ ಆ ಚಿದಾಮೃತವನೆಡೆಮಾಡಿದ ಬಳಿಕ ಭಕ್ತಗಣಂಗಳು [60]ಜಂಗಮದ ಪಾದೋದಕ ಪ್ರಸಾದಂಗಳ ತಮ್ಮ ತಮ್ಮ ಲಿಂಗಂಗಳ ಮುಖ[61]ವನರಿದು, ಪ್ರಣಮ ಮಂತ್ರಂಗಳ ಜಪಿಸುತ್ತ ಕೊಟ್ಟು ಆ ಪ್ರಸಾದದ ರೂಪು ರುಚಿ ತೃಪ್ತಿಯನರಿದಿಷ್ಟ ಪ್ರಾಣ [62]ತೃಪ್ತಿ[63] ಲಿಂ[64]ಗಂಗಳು ಮೊದಲಾದ ಷಡುವಿಧ ಲಿಂಗಂಗಳಿಗರ್ಪಿಸಿ, ಪರಮಾನಂದ[65]  ದಿಂದಾರೋಗಿಸಿ, ಉಳಿದ ಶೇಷ ಪ್ರಸಾದಮಂ ಪರಶಿವ ಪರಶಕ್ತಿಗಳು ಬಸವಾದಿ ಷಡುಸ್ಥಲ[66] ಭಕ್ತರು [67]ತಮ್ಮ ಶಕ್ತಿಗಳ ಕೂಡಿಕೊಂಡು[68] ತಮ್ಮ ತಮ್ಮೊಳಗಿರ್ದ ಒಂಬತ್ತು ಲಿಂಗಗಳ ತಿಳಿದು, ರೂಪು ರುಚಿ ತೃಪ್ತಿಯನರಿದು, ಮಹಾ ತೀರ್ಥ ಪ್ರಸಾದಮಂ ಪ್ರಣಮ ಮಂತ್ರಂಗಳು ಮುಂತಾಗಿ ಸ್ವೀಕರಿಸಿ ನಿತ್ಯ ತೃಪ್ತಿಯಿಂ[69] ಷಡುಸ್ಥಲದನುಭವ ಸುಖದೊಳಗಿರುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನಗಳಿಗೆ ಸಾಕ್ಷಿ.


[1] ಕಲೆ (ಅ)

[2] x (ಬ)

[3] x (ಬ)

[4] x (ಬ)

[5] x (ಬ)

[6] + ದ (ಬ)

[7] ಸ್ತಕ (ಬ)

[8] ಸ್ತಕ (ಬ)

[9] ನಿನ್ನದು (ಬ).

[10] ನಿನ್ನದು (ಬ).

[11] ಮೇಲು (ಬ)

[12] ಮೇಲು (ಬ)

[13] + ಈ (ಬ)

[14] ದಾ (೨೫೭)

[15] ಶ (೨೫೭)

[16] ಶಾ (ಬ)

[17] + ಜಗವೇಳು (ಬ)

[18] ನಿಂದದಾ (ಅ) (ಬ)

[19] ನಿಂದದಾ (ಅ) (ಬ)

[20] ದೆ (೨೫೭)

[21] ಯ ಮಾಡಿ (ಬ)

[22] ಯ ಮಾಡಿ (ಬ)

[23] + ವುದ್ದ (ಆ) (೨೫೭)

[24] x (ಬ).

[25] x (ಬ)

[26] ವಾಗಿದಂಥಾ (ಬ)

[27] ವಾಗಿದಂಥಾ (ಬ)

[28] ಪೇಳ್ವೆ (ಬ)

[29] ಪೇಳ್ವೆ (ಬ).

[30] ಎಂತೆ (ಬ)

[31] ಎಂತೆ (ಬ).

[32] ಎಂತೆ (ಬ).

[33] ಎಂತೆ (ಬ).

[34] ಇ (ಬ).

[35] + ಆ (ಬ).

[36] ದೆ ಅ (ಬ)

[37] ಯಾ ತನ್ನಿಂದಾ (ಅ)

[38] ಸಿ ಹೇಳ (ಬ)

[39] ವಿ (ಬ)

[40] + ಹ (ಬ)

[41] x (ಬ)

[42] x (ಬ)

[43] ಮಹೇ (ಬ)

[44] ಮಹೇ (ಬ)

[45] ಇ (ಬ)

[46] ಇ (ಬ)

[47] ನಪ್ರ (ಬ)

[48] x (ಬ)

[49] + ನು ಭಾವದ (ಬ)

[50] ದಲ್ಲಿ ತಿಳಿದುನೋಡಿ ನಾನೂರು ಕೋಟಿಯೋಜನ ಪ್ರಮಾಣಿನಲ್ಲಿರ್ದ ಮಹಾ (ಬ)

[51] ದಲ್ಲಿ ತಿಳಿದುನೋಡಿ ನಾನೂರು ಕೋಟಿಯೋಜನ ಪ್ರಮಾಣಿನಲ್ಲಿರ್ದ ಮಹಾ (ಬ)

[52] + ಪರಮಾ (ಬ)

[53] + ನ (ಬ)

[54] ಮಹೇಶ್ವರನ (ಬ)

[55] ಮಹೇಶ್ವರನ (ಬ)

[56] x (ಬ)

[57] x (ಬ)

[58] x (ಬ)

[59] x (ಬ)

[60] + ಆ (ಬ)

[61] + ಮುಖ (ಬ)

[62] ದೃಷ್ಟ (ಬ)

[63] ದೃಷ್ಟ (ಬ)

[64] ಗಾಂಗಂಗಳಿಗರ್ಪಿತ (ಬ)

[65] ಗಾಂಗಂಗಳಿಗರ್ಪಿತ (ಬ)

[66] + ದ (ಬ)

[67] ತಮ್ಮ ಭಕ್ತಿಗಳು ತಮ್ಮ ತಮ್ಮ ಲಿಂಗಾಂಗಿಗಳಿಗೆ ಕೊಟ್ಟುಕೊಂಡು (ಬ)

[68] ತಮ್ಮ ಭಕ್ತಿಗಳು ತಮ್ಮ ತಮ್ಮ ಲಿಂಗಾಂಗಿಗಳಿಗೆ ಕೊಟ್ಟುಕೊಂಡು (ಬ)

[69] ಯಸವಿದು (ಬ)