೧೨೫

ಆಯತವಾಯಿತ್ತು ಅನುಭಾವ.
ಸ್ವಾಯತವಾಯಿತ್ತು ಶಿವಜ್ಞಾನ.
ಸಮಾಧಾನವಾಯಿತ್ತು ಸದಾಚಾರ.
ಇಂತೀ ತ್ರಿವಿಧವು ಏಕಾರ್ಥವಾಗಿ,
ಅರಿವಿನ ಹೃದಯ ಕಣ್ದೆರೆದು
ಅನಂತ ಲೋಕ ಲೋಕದಸಂಖ್ಯಾತ ಮಹಾಗಣಂಗಳೆಲ್ಲರು
ಲಿಂಗ ಭಾವದಲ್ಲಿ ಭರತಿರಾಗಿ,
ಗಗನ ವೀರಶೈವ ಸಿದ್ಧಾಂತದಿಂದುಪದೇಶಕ್ಕೆ ಬಂದು,
ಭಕ್ತಿ ರಾಜ್ಯವನೆ ಹೊಕ್ಕು, ನಿಜಲಿಂಗ ಸುಕ್ಷೇತ್ರವನೆ ಕಂಡು,
ಅಮೃತ ಸರೋವರದೊಳಗಣ ವಿವೇಕವೃಕ್ಷ ಪಲ್ಲವಿಸಿ
ವಿರಕ್ತಿ ಎಂಬ ಪುಷ್ಪ ವಿಕಸನವಾಗಲು,
ಪರಮಾನಂದದ ಮಠದೊಳಗೆ
ಪರಿಣಾಮ ಪಶ್ಚಿಮ ಜ್ಯೋತಿಯ ಬೆಳಗಿನಲ್ಲಿ
ಪರುಷದ ಸಿಂಹಾಸನವನಿಕ್ಕಿ
ಪ್ರಾಣಲಿಂಗ ಮೂರ್ತಿಗೊಂಡಿರಲು,
ದಕ್ಷಿಣವದಾಂಟಿ ಉತ್ತರಾಬ್ಧಿಯಲ್ಲಿ ನಿಂದು
ಅಖಂಡಿತ ಪರಿಪೂರ್ಣ ಪೂಜಿಯಮಾಡುವವರಿಗೆ
ನಮೋ ನಮೋ ಎಂಬೆನು ಕಾಣಾ ಗುಹೇಶ್ವರಾ          ||೭೩||

ಇಂತೆಂಬ ಪರಶಿವನು ಪರಶಕ್ತಿಯು ಪರಮ ಶರಣ ಬಸವಣ್ಣನು ಅನಂತ ಕೋಟಿ ಮಹಾಗಣಂಗಳು ಮೂಲ ಪ್ರಣಮಂಗಳು ಹನ್ನೆರಡು ನವಲಿಂಗ

[1] [2]ಷಡುಸ್ಥಲ[3] ವಿಭೂತಿ ರುದ್ರಾಕ್ಷಿ ಗುರುಲಿಂಗ ಜಂಗಮದ ಸೇವೆ ಪಾದೋದಕ ಪ್ರಸಾದ ಇಂತಿವೆಲ್ಲವನಲು ಮನ ಮಾಯೆ ಷಡು ದೇವತೆಗಳು ಯುಗವೇಳು ಲೋಕ ಶ್ರುತಿಗಲು ಇಂತಿವರೆಲ್ಲರು ಹುಟ್ಟದತ್ತತ್ತ ಪರಶಿವ ಲೋಕಗಂಗ [4]ಳೊಳ[5]ಗಿಪ್ಪಲ್ಲಿಯೆ ಪೂರ್ಣೀಕಾರವಾಗಿ ಧರಿಸಿಕೊಂಡು ಭಕ್ತಿಯಮಾಡುತ್ತಿರ್ದ ಕಾರಣವರ ಕೃಪೆಯನುಳ್ಳ ಭಕ್ತಮಾಹೇಶ್ವರರಿಗಿತ್ತ ಭಸಿತ ರುದ್ರಾಕ್ಷಿ ಜಪಂಗಳ ಸಿದ್ಧಿ ಮಾಡಿಕೊಂಬ ಮಂಗಳಂ ಭಿನ್ನಹಂ ಮಾಡಿಹೆನ [6]ದೆಂತೆ[7]ನಲು, ವೀರಶೈವವನುಳ್ಳ ಗುರುವಿನ ಕಾರಣ್ಯವಿಡಿದು ಸಜ್ಜನರ[8]ಶುದ್ಧ ಶಿವಾ[9] ಚಾರದಿಂದ ಕಾಯದ ಪೂರ್ವಾಶ್ರಯಮಂ ಕೆಡಿಸಿ ಹೊನ್ನು ಹೆಣ್ಣು ಮಣ್ಣೆಂಬವನು ಬೇಕಾದಡೆ ಮನಗಣ ಸಾಕ್ಷಿಯಾಗಿ ಹಿಡಿದು ಬೇಡವಾದಡೆ ಮನಗಣ ಸಾಕ್ಷಿಯಾಗಿ ಬಿಟ್ಟು ಅವು ಸಹಿತ ತಾನು ಗುರುಲಿಂಗ ಜಂಗಮಕ್ಕೆ ದಾಸೋಹಮಂ ಮಾಡಿದವರ ಪೂರ್ವಾಶ್ರಯ [10]ಹಿಂಗಿ[11] ಹೋಹುದು. ಹೋದ ಬಳಿಕ ಅನುಭವ ಪ್ರಸಾದರಸವಜ್ರದ ಮಹಾ ಮೇರುವಿನ ಹದಿನಾಲ್ಕು ನೆಲೆಯನರಿದು ಹನ್ನೆರಡು ನೆಲೆಯ ಕುರಿತು ಹನ್ನೆರಡು ಮಣಿಗಳಂ ಪವಣಿಸಿ ಭಸಿತ ರುದ್ರಾಕ್ಷಿಗಳಂ ಪುರಾತನರ ಷಡುಸ್ಥಲವೆಂಬ ಆಗಮಯುಕ್ತವಾಗಿ ಸ್ಥಾನ ಸ್ಥಾನಂಗಳಿಗಳವಡಿಸಿಕೊಂಡು ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟುಕೊಂಡು ಹನ್ನೆರಡುಮಣಿಯನುಳ್ಳ ಅಂಗುಷ್ಠ ಮಾಲೆಯಂ ಜಪಿಸುವಲ್ಲಿ ಬಾಂ ಸಾಂ ವಾಂ ನಾಂ ಮಾಂ ಶಿಂ ವಾಂ ಯಾಂ ಓಂ ಆಂ ಊಂ ಮಾಂ ಹೀಗೆನುತ್ತೆಷ್ಟು ವೇಳೆಯಾದಡು ಮಣಿಮಣಿಗಳ ಮುಟ್ಟಿ [12]ಜಪಿಸುತ್ತಿಹುದು. ಮತ್ತೆ ಚಿದ್ಬ್ರಹ್ಮಾಂಡದಿಪ್ಪತ್ತೆಂಟುನೂರು ಕೋಟಿಯೋಜನ ಪ್ರಮಾಣವನರಿದು ಅದರೊಳಗಿಪ್ಪ ನಾಲ್ವತ್ತೈದುಕೋಟಿ ವಿಕಟ ಗಣಂಗಳಂ ಕುರಿತು ಇಪ್ಪತ್ತೇಳು ಮಣಿಗಳಂ ಪವಣಿಸಿ ಜಪಿಸುವಲ್ಲಿ ಬಾಂ, ಬಾಂ ಸಾಂ ಸಾಂ ವಾಂ ವಾಂ ನಾಂ ನಾಂ ಮಾಂ ಮಾಂ ಶಿಂ ಶಿಂ ವಾಂ ವಾಂ ಯಾಂ ಯಾಂ ಓಂ ಓಂ ಆಂ ಆಂ ಉಂ ಉಂ ಮಾಂ ಮಾಂ ಶಿವಂ ಹರಂ ನಮೋ ಹೀಂಗೆನುತ್ತೆನುತ್ತೆಷ್ಟು ವೇಳೆಯಾದಡು ಮಣಿಮಣಿಗಳ ಮುಟ್ಟಿ ಮುಟ್ಟಿ ಜಪಿಸುತ್ತಿಹುದು. ಪರಶಿವ[13] ತತ್ವವೆ ಇಷ್ಟಲಿಂಗವೆಂದರಿದು ಪರಶಿವ ಶಕ್ತಿಯನೆ ಪ್ರಾಣಲಿಂಗವೆಂದರಿದು ಪರಮ ಶರಣ ಬಸವಣ್ಣನೆ ತೃಪ್ತಿಲಿಂಗವೆಂದರಿದು ಮತ್ತಿಷ್ಟಲಿಂಗದೊಳಗಾಚಾರಲಿಂಗ ಗುರು ಲಿಂಗ[14] ಮಹಾಲಿಂಗ[15] ಉದೈಸಿದವೆಂದರಿದು. ಪ್ರಾಣಲಿಂಗದೊಳಗೆ ಶಿವಲಿಂಗ ಜಂಗಮಲಿಂಗ ಉದೈಸಿದವೆಂದರಿದು, ತೃಪ್ತಿಲಿಂಗದೊಳಗೆ ಪ್ರಸಾದಲಿಂಗ ಮಹಾಲಿಂಗವುದೈಸಿದವೆಂದರಿದು, ಆ ಒಂಬತ್ತು ಲಿಂಗಗಳ ಸಮೇತನುಳ್ಳ ಅಭವ ರುದ್ರ ಮೃಡ ಈಶ್ವರ ಸದಾಶಿವ ಶಾಂತ್ಯಾತೀತ ಇಂತಪ್ಪ ಷಡುಸ್ಥಲ ಬ್ರಹ್ಮಿಗಳ್ಥು ನಂದೀಶ್ವರ, ವೀರೇಶ್ವರ, ಘಂಟಾಕರ್ಣ, ಗಜಕರ್ಣ, ಶಂಕುಕರ್ಣ ಇಂತಪ್ಪ ಷಡಾಚಾರ್ಯರುಗಳು ತ್ರಿಯಂಬಕ, ಗಂಗಾಪತಿ, ಅಂಬಿಕಾಪತಿ, ಉಮಾಪತಿ, ಕೈಲಾಸಪತಿ, ಪಶುಪತಿ, ಇಂತಪ್ಪ ಷಡುಗಣೇಶ್ವರರುಗಳು ಅಂತು ಹದಿನೆಂಟು ಸ್ವಾಮಿಗಳು ಅವರುಗಳ ಗುರುಸ್ವರೂಪವನುಳ್ಳ ಶಕ್ತಿಗಳು ಹದಿನೆಂಟು. ಅಂತು ಪರಶಿವ ತತ್ವಂಗಳು ಮೂವತ್ತಾರು. ಆ ಮೂವತ್ತಾರು ತತ್ವಂಗಳ ಕುರಿತ ಮೂವತ್ತಾರು ಮಣಿಗಳಂ ಪವಣಿಸಿ ಜಪಿಸುವಲ್ಲಿ ಬಾಂ ಬಾಂ ಬಾಂ ಸಾಂ ಸಾಂ ಸಾಂ ವಾಂ ವಾಂ ವಾಂ ನಾಂ ನಾಂ ನಾಂ ಮಾಂ ಮಾಂ ಮಾಂ ಶಿಂ ಶಿಂ ಶಿಂ ವಾಂ ವಾಂ ವಾಂ ಯಾಂ ಯಾಂ ಯಾಂ ಓಂ ಓಂ ಓಂ ಅಂ ಅಂ ಆಂ ಉಂ ಉಂ ಉಂ ಮಾಂ ಮಾಂ ಮಾಂ ಹೀಂಗೆನುತ್ತೆಷ್ಟು ವೇಳೆಯಾದಡು ಮಣಿಮಣಿಗಳ ಮುಟ್ಟಿ  ಮುಟ್ಟಿ ಜಪಿಸುತ್ತಿಹುದು ಮತ್ತೆ ಹಿಂದೆ ಹೇಳಿದ ಮೂವತ್ತಾರು ಮೂಲ ಪ್ರಣಮ ಮಂತ್ರಗಳ ಸ್ವರೂಪವನು ಚೆನ್ನಾಗಿ ತಿಳಿದು ನುಡಿದ ಭೇದನರಿದು ಷಡುಸ್ಥಲ ಬ್ರಹ್ಮಿಗಳ ಸಮಯಾಚಾರದ ಎಪ್ಪತ್ತೆರಡು ಸಾವಿರ ಜಂಗಮದೇವರುಗಳ ಕುರಿತು ಎಪ್ಪತ್ತೆರಡು ಮಣಿಗಳಂ ಪವಣಿಸಿ ಜಪಿಸುವಲ್ಲಿ ನಾಂ ಮಾಂ ಶಿಂ ವಾಂ ಯಾಂ ಓಂ ಮಾಂ ಶಿಂ ವಾಂ ಯಾಂ ಓಂ ನಾಂ ಶಿಂ ವಾಂ ಯಾಂ ಓಂ ನಾಂ ಮಾಂ ಶಿಂ ವಾ ಯಾಂ ಓಂ ನಾಂ ಮಾಂ ಶಿಂ, ವಾಂ ಯಾಂ ಓಂ ನಾಂ ಮಾಂ ಶಿಂ, ವಾಂ ಯಾಂ ಹೀಂಗೆನುತ್ತೆಷ್ಟು ವೇಳೆಯಾದಡು ಮಣಿ ಮಣಿಗಳ ಮುಟ್ಟಿ ಮುಟ್ಟಿ ಜಪಿಸುತ್ತಿಹುದು. ಮತ್ತಾ ಎಪ್ಪತ್ತೆರಡು ಮೂಲ ಪ್ರಣಮ ಮಂತ್ರಂಗಳ ಸ್ವರೂಪು, ನಿರೂಪಂಗಳನು[16]ಳಿದು ನೋಡಿ ಉಚ್ಚರಿಸುವ ಭೇದವನು ಆಮೂಲಾಗ್ರಪರಿಯಂತರವು ಚೆನ್ನಾಗಿ ವಿಚಾರಿಸಿ ಅರಿದು ಪ್ರಮಥಗಣ, ವೃಷಭಗಣ, ಸ್ವಯಂಭುಗಣ, ಅಸಂಖ್ಯಾತಗಣ, ಮರುಳುಗಣ, ಇಂತಪ್ಪ ಮಹಾ ಸ್ವಾಮಿಗಳ ಕುರಿತು ನೂರೆಂಟು ಮಣಿಗಳಂ ಪವಣಿಸಿ ಜಪಿಸುವಲ್ಲಿ ಮೂವತ್ತಾರು ಮಂತ್ರಗಳನ್ನು ಮೂರುವೇಳೆ ಕೂಡಿಕೊಂಡು ಜಪಿಸಲು, ನೂರೆಂಟು ಮಣಿಗಳಿಗೆಯೂ ನೂರೆಂಟು ಪ್ರಣಮಂತ್ರಂಗಳಾಗಿ ಮುಟ್ಟಿ ಮುಟ್ಟಿ ಜಪಿಸುತ್ತಿಹುದು. ಇಂತಪ್ಪ ವೀರಶೈವದ ಸುಲಕ್ಷಣವಿಡಿದ ಮಹಾಮಂತ್ರಂಗಳ ಸನ್ನಹಿತ ಮಾಡಿಕೊಂಡು ಎಷ್ಟು ವೇಳೆಯಾದಡು ಮಣಿಮಣಿಗಳ ಮುಟ್ಟಿ ಜಪಿಸುತ್ತಿಹುದು. ಇಂತೈದು ಪ್ರಕಾರದ ಮಹಾ[17]ಮಂತ್ರ[18] ಜಪಲಕ್ಷಣ ಹೀಂಗಹುದೆಂದು ಅರಿದಂಥಾ ಭಕ್ತಮಾಹೇಶ್ವರರಿಗೆ ಪರಶಿವೆನ ಮಹಾಲಿಂಗವಾಗಿ ಬರುವನು. ಪರಶಕ್ತಿಯೆ ಮಹಾಗುರುವಾಗಿ ಬರುವಳು. ಪರಮ ಶರಣಬಸವಣ್ಣನೆ ಮಹಾಜಂಗಮವಾಗಿ ಬರುವನು. ಆ ಶರಣ ಸತಿ ಲಿಂಗ ಪತಿಗಳಿಂದುದೈಸಿದ ಹನ್ನೆರಡು ಮೂಲ ಪ್ರಣಂಗಳೆ ಇಪ್ಪತ್ತೇಳು ಪ್ರಣಮಂಗಳಾಗಿ, ಮೂವತ್ತಾರು ಪ್ರಣಮಂಗಳಾಗಿ, ಎಪ್ಪತ್ತೆರಡು ಪ್ರಣಮಂಗಳಾಗಿ, ನೂರೆಂಟು ಪ್ರಣಮಂಗಳಾಗಿ, ಷಡುಲಿಂಗ ಸಮೇತ [19]ವಾಗಿ[20] ಷಡುಸ್ಥಲ ಮುಖ್ಯವಾದ ನೂರೊಂದು ಸ್ಥಲದ ವಚನಂಗಾಳಾಗಿ ಶೈವ ಪ್ರಣಮದ ಮಂತ್ರ ಜಪಂಗಳಿಗತ್ತತ್ತವಾಗಿ ವೇದಾಗಮಂಗಳಿಗತ್ತತ್ತವಾಗಿ ಜ್ಯೋತಿಯ ಬೆಳಗಿನಂತೆ ಕಾಣಬರುವವು. ಅವನೆಲ್ಲವನೂ ಕೇಳಿಯಾದಡೂ ಅರಿದು, ಓದಿಯಾದಡು ತಿಳಿದು ಜಂಗಮದ ಪಾದೋದಕ ಪ್ರಸಾದಮಂ ಲಿಂಗಕ್ಕೆ ಕೊಟ್ಟುಕೊಂಡು ಗುರುಲಿಂಗ ಜಂಗಮದಲ್ಲಿ ವಿಶ್ವಾಸವಾಗಿ ಜಪಿಸಿ ಅನುಭವ ಪ್ರಸಾದ ರಸವಜ್ರ ಕೈಲಾಸದೊಳಗಿರಬೇಕೆಂದು ಪರಶಿವನ ಬೇಡಿಕೊಂಡಡೆಯೂ ಆದೀತು, ಆ ಚಿದ್ಬ್ರಹ್ಮಾಂಡದೊಳಗಿರಬೇಂದು ಪರಶಿವನ ಬೇಡಿಕೊಂಡಡೆಯೂ ಆದೀತು, ಮರ್ತ್ಯಲೋಕದೊಳಗೆ ಮುಕ್ತನಾಗಿಯು, ಸುಜ್ಞಾನಿಯಾಗಿಯು, [21]ಭೋಗದಿಂದಿರಲಿಚ್ಛೈಸಿದರೆಯೂ[22] ಪರಶಿವನ ಬೇಡಿಕೊಂಡಡೆಯೂ ಆದೀತು. ಇಂತೆಂಬ ಪುರಾತನರಗಣಿತ ವಚನ ಸಾರಾಯದಮೃತ ಮಂತ್ರವಾಕ್ಯಂಗಳಿಗೆ ಸಾಕ್ಷಿ.

೧೨೬

ಶ್ರೀ ವಿಭೂತಿಯನೊಲಿದು ಧರಿಸಿದ
ಡಾವ ಕರ್ಮವು ಹೊದ್ದಲಮ್ಮವು,
ಪಾವನವ ಮಾಡುವುದು; ಪರಮಪದವಿಯ ತೋರುವುದು.        ||ಪ||

ಶಿವನ ಪರಮಜ್ಞಾನದ ಮೂಲದಾಧಾರ
ಶಕ್ತಿಯ ಸರ್ವಾಂಗಮಂಗಳ ಭೂಷಣ,
ಸಾರೋದ್ಧಾರದ ಸುಖದ ಮಹದೈಶ್ವರ್ಯ
ಅನಾದಿ ಸಂಸಿದ್ಧವಾದ ವಿಭೂತಿ.      ೧

ಆಗಮಕ್ಕೆ ಮೊದಲಿದು, ಆಚಾರದ ಸುಗತಿ
ಪಥವಿದು, ಕಾಲಕರ್ಮದ ಮೂಲನಾಶಕವಿದು;
ಜನನ ಮರಣ ಭಯವೆಂಬ ದು –
ಷ್ಕೃತವ ದೂರಮಾಡುವುದು ವಿಭೂತಿ.           ೨

ಅಣುಮಾತ್ರ ವಿಭೂತಿಯ ಹಣೆಯೊಳಿಡಲು
ಎಣಿಕೆಯಿಲ್ಲದ ಭವಪಾಶವ ಪರಿವುದು.
ತ್ರಿಣಯನೊಲಿದು ಧರಿಸಿಹನೆಂದೆನ
ಆನು ಧರಿಸಿ ಬದುಕಿದೆನು ಕೂಡಲಸಂಗಯ್ಯ.  ೩

ಮಸ್ತಕದಲ್ಲಿ ಮಹಾದೇವನೆಂಬ ರುದ್ರನಿಪ್ಪನಯ್ಯ.
ನೊಸಲಲ್ಲಿ ಲಕುಲೀಶ್ವರನೆಂಬ ರುದ್ರನಿಪ್ಪನಯ್ಯ.
ನಾಭಿಯಲ್ಲಿ ಶಂಕರನೆಂಬ ರುದ್ರನಿಷ್ಪನಯ್ಯ.
ಎದೆಯಲ್ಲಿ ಮಹೇಶ್ವರನೆಂಬ ರುದ್ರನಿಪ್ಪನಯ್ಯ.
ಗರಳದಲ್ಲಿ ಲೋಕೇಶ್ವರನೆಂಬ ರುದ್ರನಿಪ್ಪನಯ್ಯ.
ಬಲದ ಭುಜದಲ್ಲಿ ಶ್ರೀಕಂಠನೆಂಬ ರುದ್ರನಿಪ್ಪನಯ್ಯ.
ಎಡದ ಭುಜದಲ್ಲಿ ದೇವೇಶನೆಂಬ ರುದ್ರನಿಪ್ಪನಯ್ಯ.
ಬಲದ ಬಾಹುವಿನಲ್ಲಿ ಈಶ್ವರನೆಂಬ ರುದ್ರನಿಪ್ಪನಯ್ಯ.
ಎಡದ ಬಾಹುವಿನಲ್ಲಿ ಶೂಲಪಾಣಿಯೆಂಬ ರುದ್ರನಿಪ್ಪನಯ್ಯ.
ಬಲದ ಮುಂಗೈಯಲ್ಲಿ ಕೋದಂಡನೆಂಬ ರುದ್ರನಿಪ್ಪನಯ್ಯ.
ಎಡದ ಮುಂಗೈಯಲ್ಲಿ ಲಿಂಗಕಾಮಿಯೆಂಬ ರುದ್ರನಿಪ್ಪನಯ್ಯ.
ಬಾಯಲ್ಲಿ ಭವನಾಶನೆಂಬ ರುದ್ರನಿಪ್ಪನಯ್ಯ.
ನಾಶಿಕದಲ್ಲಿ ನಾಗಭೂಷಣನೆಂಬ ರುದ್ರನಿಪ್ಪನಯ್ಯ.
ಬಲದ ಕಣ್ಣಲ್ಲಿ ಕಾಮಸಂಹಾರನೆಂಬ ರುದ್ರನಿಪ್ಪನಯ್ಯ.
ಎಡದ ಕರ್ಣದಲ್ಲಿ ಪಾರ್ವತಿಪ್ರಿಯನೆಂಬ ರುದ್ರನಿಪ್ಪನಯ್ಯ.
ಹಿಂದಲೆಯಲ್ಲಿ ಪಂಚಮುಖನೆಂಬ ರುದ್ರನಿಪ್ಪನಯ್ಯ.
ಬ್ರಹ್ಮರಂಧ್ರದಲ್ಲಿ ಬ್ರಹ್ಮಾಂಡ ಖಂಡಿತನೆಂಬ ರುದ್ರನಿಪ್ಪನಯ್ಚ.
ಇಂತೀ ರುದ್ರರುಗಳು ತಮ್ಮ ತಮ್ಮ ಸ್ಥಾನಂಗಳೊಳಗಿಪ್ಪರಾಗಿ,
ಇದನರಿಯದೆ ವಿಭೂತಿಯ ಧರಿಸಿದಡೆ
ಕತ್ತೆ ಬೂದಿಯಲ್ಲಿಲ ಹೊರಳಿದಂತೆ ಕಾಣಾ
ಕೂಡಲಚೆನ್ನಸಂಗಮದೇವಯ್ಯ.      ||೭೫||

೧೨೮

ಮಂತ್ರ ಮೂಲ ಗೂಢಪದದ
ಚಿಂತಾಮಣಿ ರುದ್ರಾಕ್ಷಿಗಳವ
ರಂತುವರಿದು ಧರಿಸಬಲ್ಲಡಾತ ರುದ್ರನು.       ||ಪ||

ಸ್ಮರಿಸೆ ದುರಿತಹರವು, ಈಕ್ಷಿಸಲ್ಕೆ ಕರ್ಮವಳಿವುದೊಲಿದು
ಸ್ಪರುಶನವನುಮಾಡೆ ಜನ್ಮಪಾಶಪರಿವುದು,
ಧರಿಸೆ ರುದ್ರಪದವಿಯಱೆದು ಧರಿಸೆ ಜಪಿಸೆ ಸದ್ಯೊನ್ಮುಕ್ತಿ,
ಪರಮವೀರಶೈವ ಸಮಯ ಮೂಲಭೂಷಣ.    ೧

ಪರಮಶಿವನ ಪರಬ್ರಹ್ಮದೇಹದಲ್ಲಿ ತೊಡಿಗೆಯಾಗೆ.
ಪರಮ ಪುಣ್ಯಪುಂಜಮಾಲೆಯೆನಿಸಿಯೊಪ್ಪುವ
ಶರಣಜನಮನೋರಥವೆನಿಪ ರುದ್ರಾಕ್ಷಿಗಳನು
ಧರಿಸಿಯಾನು ಬದುಕಿದೆನು ಸಂಗನಿಮ್ಮೊಳು. ೨

೧೨೯

ಸುರಿದು ಕರ್ಣಾಮೃತವ,
ಹೊರೆವುದೈ ಭಕ್ತರನು,
ಪುರದ ಮಲ್ಲನ ನಾಮ ಪಂಚಾಕ್ಷರಿ.   ||ಪ||

ತಾಯಿಶ್ರುತಿಗಳ, ಮೊತ್ತದಾಯ ಭಕ್ತ್ಯಂಗನೆಯ,
ಶ್ರೀಯಖಿಳ ಭುವನ ಭವನವ ಸಲಹುವ.
ಈಯಲಿಕೆ ಬೇಡಿದುದ, ಕಾಯಲಿಕೆ ತನ್ನುವನು
ತಾಯಿಂದಲನುಕಂದಿ ಪಂಚಾಕ್ಷರಿ.   ೧

ಪ್ರಣವರಾಜನಹೊಳೆವ ಮಣಿಮಕುಟದಲ್ಲಿಕೇ –
ವಣದ ರತುನದ ತೊಡಿಗೆಯಾಭರಣದ,
ತ್ರಿಣಯನೊಸೆದಿಪ್ಪ ಗುಣಮಣಿಯ ಚಿಂತಾಮಣಿಯ
ಕಣಿಯ ಕರಡಗೆ ನೋಡು ಪಂಚಾಕ್ಷರಿ            ೨

ಗುರುದೈವ ತಂದೆತಾಯ್‌ಹೊರೆವಸಖಿತೇಜ ಬಲ
ಹರನ ಸಿರಿಸೌಭಾಗ್ಯದಾನಂದದ
ಪರಿಪರಿಯೊಳಾಗಿ, ನೆನೆವರ ಸಲಹುವುದುಗುರು –
ಪುರದ ಮಲ್ಲನನಾಮ ಪಂಚಾಕ್ಷರಿ.    ೩

೧೩೦

ಹಮ್ಮಿಲ್ಲದೆ, ಬಿಮ್ಮಿಲ್ಲದೆ, ಮಾಟದ
ಹೆಮ್ಮೆಯ ಬೀರದೆ, ತನುಮನಧನ ಶಿವ –
ಸೊಮ್ಮೆಂದರ್ಪಿಸಬಲ್ಲಾತನೆ ನಿರುಪಾಧಿಕದಾಸೋಹಿ.   ||ಪ||

ಒಡಲೊಡವಭಿಮಾನಂಗಳ ಹಂಗಿನೊ
ಳೊಡಗಲಸದೆ, ದಾಸೋಹದೊಳಗೆ ಧೃತಿ –
ಗೆಡದೆ, ನಿರಾಯಾಸದಿಂ ಸರ್ವಾಚಾರದೊಳಗೆ ಎಚ್ಚತ್ತು,ಲ
ಒಡೆಯರಿಗೊಡವೆಯನೊಪ್ಪಿಸುವಾಳಿನ
ನಡೆವಳಿಯಂತಿರಲರ್ಥಪ್ರಾಣವ
ಹಿಡಿದು, ಬಳಸದನವರತಂ, ಲಿಂಗಮುಖಕೆ ಸವೆಸುತ್ತಿಹನು.       ೧

ಏನುಂಟಾದ ಪದಾರ್ಥವ ದೇಹಾಭಿ –
ಮಾನಕ್ಕೀಯದೆ, ಮನದೊಡೆಯಗೆ ಸು –
ಜ್ಞಾನದ ಕೈಯಿಂ ನೀಡುವ ನಿರುತದ ಮಾಟದ ಕೂಟಸುಖಿ;
ಏನೊಂದಣುಮಾತ್ರವು ಭಾವನೆಯೊಳು
ಮಾನಸವಾಚಕದೊಳಗಿಲ್ಲದೆ, ಪರ –
ಮಾನಂದದ ಸುಖದೊಳು ಮಾಡುವ ಮಂಗಳಮಯದಾಸೋಹಿ.            ೨

ತನುವೆನ್ನದು, ಮನವೆನ್ನದು, ಮತ್ತಾ –
ಧನವೆನ್ನದುಯೆಂದೆಂಬಾ ಬಳಕೆಯ –
ನನುಕರಿಸದೆ; ನಾನೇದಾಸನು ಶಿವನೆ ಪತಿಯೆಂದರಿದು;
ಮನಕೆ ಮನೋಹರವಾಗಿಹ ಸತ್ಕೃ –
ಯನುಭವದೊಳು ಸುಖವಡೆದು, ನಿರಂತರ
ಘನಪರಿಣಾಮದ ಬಯಕೆಯೊಳಿಪ್ಪಾತನೆ ಸಾತ್ವಿಕ ಭಕ್ತ             ೩

ಖ್ಯಾತಿಯ, ಲಾಭದ, ಪೂಜೆಯ ಫಲಗಳ
ನೇತಿಗಳೆದು; ಸದ್ಭಕ್ತಿರತಿಯೊಳತಿ –
ಭೀತಿವಡೆದು; ಕಿಂಕಿಲಭೃತ್ಯಾಚಾರಸ್ಥಲನಿಜವಾಗಿ;
ಸೋತು ಶರಣರೊಳು ಗೆಲಲರಿಯದೆ; ಸಂ
ಪ್ರೀತಿವಡೆದು ಸಜ್ಜನಶುದ್ಧನೆನಿ
ಪ್ಪಾತನೆ ಜಂಗಮಲಿಂಗಕ್ಕಾಶ್ರಯವೆನಿಸುವ ದಾಸೋಹಿ.           ೪

ಒಡೆಯರಿಗೊಡವೆಯನೊಲಪ್ಪಿಸಿ ಶುದ್ಧನು,
ಎಡೆಯೊಳಗಾಂ ಮಾಡಿದುದಿಲ್ಲೆಂದಱೆ –
ದೊಡಲ ಗುಣವನಡಗಿಸಿ, ನಿರಹಂಭಾವದೊಳಗೆ ಸಲೆಸಂದು
ಮೃಡನ ಶರಣರನು ಕಂಡವರಡಿಗಳ
ಪಿಡಿದು ಸದಾಸುಖಿಯಾಗಿಪ್ಪರಮೆ –
ಲ್ಲಡಿಗಳೊಳಗೆ ಆವುಗೆಯಾಗಿರಿಸೆನ್ನನು ಸಂಗಪ್ರಭುವೆ.  ೫

ಕುಂಭದ ಮಳೆ ಹೊಯ್ದಲ್ಲಿ ಮೂರಂಗದ ನೇಗಿಲ ತರಿಯಬೇಕು.
ಆರಂಗದ ಭೂಮಿಯಲ್ಲಿ ಅರಸಲಾಗಿ ಒಂದೆ ಮರ ಹುಟ್ಟಿತ್ತು.
ಹುಟ್ಟುವಾಗ ಮರ ಮೂರಕವೆ,
ಅಲ್ಲಿಂದತ್ತಾರು ಕವೆಯಾಯಿತ್ತು.
ಆರರ ಮಧ್ಯದಲ್ಲಿ ಮೂವತ್ತಾರು ಕವೆಯಾಯಿತ್ತು.
ಆ ಮೂವತ್ತಾರರ ಮಧ್ಯದಲ್ಲಿ ನೂರೊಂದು ಕೊಂಬೆ ಶಾಖೆಗೊಂಡಿತ್ತು.
ಆ ಮರನೇರಿ ಹಿಂದ ಮುಂದಣ ಕೊನೆಯ ಕಡಿದು
ಕೊಡಲಿಯಾಡುವದಕ್ಕೆ ತೆರಪುಮಾಡಿ
ಒಂದು ಹೊಯಿಲಿಂಗದರಂಗದ ತೊಪ್ಪೆ ಹರಿದವು.
ಉಭಯದಿಂಡು ಹರಿದು ಮರ ಕಾಲೂರಬೇಕೆಂದಿರಿಸಿ ಬಂದಿದ್ದೇನೆ
ಎನ್ನ ಹಟ್ಟಿಗೊಟ್ಟಿಗೆಯ ಕಾಮಭೀಮ ಜೀವದನದೊಡೆಯ ನೀನೆ ಬಲ್ಲೆ.        ||೭೯||

೧೩೨

ನಾನು ಗುರುಲಿಂಗ ಜಂಗಮದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪಾದೋದಕ ಪ್ರಸಾದದಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಮೂಲ ಪ್ರಣಮಂಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಪುರಾತನರ ಮೇಲು ಪಂಙ್ತೆಗಳಲ್ಲಿ ನಿಷ್ಠೆವಿಡಿದು
ಬೇಡಿಕೊಂಡು ಬದುಕಿದೆನಯ್ಯಾ.
ನಾನು ಶರಣರುಗಳಲ್ಲಿ ನಿಷ್ಠೆವಿಡಿದು
ಬೇಡಿ ಹಾಡಿ ಹೊಗಳಿ ಐದು ಬಗೆಯ ಜಪವ ಜಪಿಸಿ
ಬೇಡಿಕೊಂಡು ಬದುಕಿದೆನಯ್ಯಾ.
ಗುಹೇಶ್ವರ, ನಿಮ್ಮ ಶರಣ ಬಸವಣ್ಣನ ಸನ್ನಿಧಿಯಿಂದ
ನಾನು ಕೃತಾರ್ಥನಾದೆನಯ್ಯಾ.       ||೮೦||

ಬೆಳಗಿನೊಳಗಣ ರೂಪು ತಿಳಿದುನೋಡಿಯೆ
ಕಳೆದು ಹಿಡಿಯದೆ ಹಿಡಿದು ಕೊಳಬಲ್ಲನಾಗಿ
ಆತನೇ ಲಿಂಗಪ್ರಸಾದಿ.
ಜಾತಿ ಸೂತಕವಳಿದು ಶಂಕೆತಲೆದೋರದೆ
ನಿಶ್ಯಂಕನಾಗಿ, ಆತನೆ ಸಮಯ ಪ್ರಸಾದಿ.
ಸಕಲಭ್ರಮೆಯನೆ ಜರದು ಗುಹೇಶ್ವರಲಿಂಗದಲ್ಲಿ
ಪ್ರಸನ್ನವ ಪಡೆದಾತ ಬಸವಣ್ಣನೊಬ್ಬಾತನೆ ಅಚ್ಚಪ್ರಸಾದಿ.          ||೮೧||

೧೩೪

ಅಮೃತ ಸೇವನೆಮಾಡಿ ಆಪ್ಯಾಯನ ಘನವಾಯಿತ್ತು.
ಪರುಷವೇದಿಯ ಸಾದಿಸಹೋದಡೆ
ದಾರಿದ್ರ ಘನವಾಯಿತ್ತು.
ಮರುಜಾವಣೆಯ ಹಣ್ಣಮೆದ್ದು
ಮರಣವಾಯಿತ್ತ ಕಂಡೆ,
ಎಲ್ಲವನು ಸಾಧಿಸಹೋದರೆ ಏನೂ ಇಲ್ಲದಂತಾಯಿತ್ತು
ನಾ ನಿಜವ ಸಾಧಿಸಿ ಬದುಕಿದೆನು ಗುಹೇಶ್ವರ.  ||೮೨||

೧೩೫

ಬಯಲು ಬಯಲನೆ ಬಿತ್ತಿ,
ಬಯಲು ಬಯಲನೆ ಬೆಳದು
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ಬಯಲ ಜೀವನ ಬಯಲ ಭಾವನೆ
ಬಯಲು ಬಯಲಾಗಿ ಬಯಲಾಯಿತ್ತಯ್ಯಾ.
ನಿಮ್ಮ ಪೂಜಿಸಿದವರೆಲ್ಲಾ ಮುನ್ನವೇ ಬಯಲಾದರು.
ನಾ ನಿಮ್ಮ ನಂಬಿ ಬದುಕಿದೆನು ಗುಹೇಶ್ವರ.     ||೮೨||

೧೩೬

ಪರಮಾನಂದದ ಲೀಲೆಯಲಿ
ಪರಮಗುರು ಪದವನರಿದನು
ಪರಮಸುಖದೊಳಗೋಲಾಡುವ
ಪರಮಜ್ಯೋತಿ ಪರಾಪರನು           ||ಪ||

ನಿತ್ಯನಿರಂಜನ ತಾನೆಂದರಿದನು
ಉತ್ತಮ ಸುಜ್ಞಾನಜ್ಯೋತಯ ಬೆಳಗಿನ
ಚಿತ್ತದ ಪ್ರಾಣಲಿಂಗದ ಘನದಲಿ ಸತ್ಯಸ್ವರೂಪನಾದ
ಸುತ್ತಿದ ಅಷ್ಟಮದಂಗಳನೆಲ್ಲವ
ತತ್ತರದರಿದನು ತನುಗುಣಂಗಳ
ತತ್ತಸ್ಥಾನದಲಿ ಸ್ವಸ್ಥಿರನಾದನು ಆತುಮಧ್ಯಾನದಿಂದ ಶರಣ        ೧

ಒಳಗೆ ಮಾಣಿಕ್ಯದ ಮಣಿ ಮಂಟಪವ ನೋಡಿ
ಬೆಳಗಿನ ಕದಳಿಯೆ ಬನದೊಳಗಾಡುವ
ದಳಗಳನೆಲ್ಲವನಿಲಿಸಿ ಸ್ಥೂಲಕೆಸ್ಥೂಲ ಪ್ರಳಯವಿರಹಿತನಾದ
ಮೇಳವಿಸಿದ ತನ್ನ ಸಕಲ ಗುಣಂಗಳ
ಎಣಿಕೆಯ ಗುಣಿತಕ್ಕೆ ಅಗಣಿತನಾದನು,
ಗುಣಕಮಳ ಕುಸುಮ ಪರಿಮಳನಿಳಯನು ಸುಳುಹುಸುಯಿದಾನಿಮಹಿಮ ಶರಣ     ೨

ಒಪ್ಪುವ ಸಮಸ್ತಲೋಕ ವಿಖ್ಯಾತನು
ಅಪ್ರತಿಮ ಮಹಿಮನು, ಪ್ರಣವಸ್ವರೂಪನು
ಪಾಪಕರ್ಮಂಗಳ ವಿವರಿಸಿ ಕಳೆದನು, ಬೀಜದೊಳಡಗಿದ ವೃಕ್ಷದಂತೆ

ಅಪಾರ ವ್ಯಾಪಾರ ಪರಮನಿರಾಕಾರ
ಉಪಮಾತೀತನು, ವಿಪರೀತ ಚರಿತನು,
ಗುಪಿತ ಪ್ರಕಾಶನು, ರೂಪನಿರೂಪನು, ಕಾರಣಕರ್ತನಯ್ಯಶರಣ  ೩

ತನುಮನ ಗಮನಾಗಮನದಿಂದನುಭಾವ ಭರಿತನು
ಅನಾಥನಾಧನು, ಅಕಳಂಕ ಚರಿತನು
ನಿರ್ನಾಮ ನಿಸ್ಸೀಮ ಜ್ಞಾನ ಸುಜ್ಞಾನ ಭುವನಾದಿ ವಂದಿತನು
ಉನ್ನತ ಪರಶಿವಯೋಗಭೋಗದಿಂದ
ತನ್ನತಾನೆ ಕಂಡು ಅಸಮಾಕ್ಷನಾದನು
ಅನುಪಮ ಬೆಳಗಿನ ಆದಿಯಾನಂದನು ಮನಕೆ ಮನೋಹರನು ಶರಣ      ೪

ಅಮೃತಗಿರಿಯಮೇಲೆ ಅಮರ ಸಮೂಹವು,
ಸುಮನೋಗಮನದ ಸಕಲ ಸನ್ನಹಿತನು,
ಸಮ್ಯಜ್ಞಾನದಲಿ ಸ್ವತಂತ್ರ ಮಹಿಮನು ಸಮಸ್ತ ವಿಸ್ತಾರದಲಿ
ನಿರ್ಮಳ ನಿರುಪಮ ಪ್ರಮಥಗಣ ತಿಂಥಿಣಿಯ
ವಿಮಳ ಹೃದಯ ಕಮಳವಿಳಾಸಪುರನಿಳಯ,
ಬ್ರಹ್ಮಾಂಡಕೋಟಿಯ ಮೀರಿನಿಂದನುಭಾವಗೋಹೇಶ್ವರನಂತೆ ತಾನಾದ ಶರಣ     ೫

೧೩೭

ಸತ್ತಕೋಳಿಯೆದ್ದು ಕೂಗಿತ್ತ ಕಂಡೆ.
ಮೊತ್ತದ ಮಾಮರನು [1]ಉಳಿ[2]ಯಿತ್ತ ಕಂಡೆ.
ಹೊತ್ತಾರೆ ಎದ್ದು ಹೊಲಬುದಪ್ಪಿ[3]ದ ಕಂಡೆ.
ಕತ್ತಲೆ ಬೆಳಗಾಯಿತ್ತ ಕಂಡೆ.
ಇದೇನು ಹತ್ತಿತ್ತೆಮದರಿಯೆನಯ್ಯಾ ಗುಹೇಶ್ವರಾ?         ||೮೫||

೧೩೮

ಧರೆಯ ಮೇಲಣ ಜನಿತಿಕ್ಕೆ ಉರಗನ ಅಧರಪಾನ,ಕ
ನಖ ಕಂಕಣ ಮುಖವ ಮೂವತ್ತೊಂದು ಶಿರವು ನುಂಗಿತ್ತು ನೋಡಾ !
ಉತ್ತರಾಪಥದ ಕೊಡಗೂಸು ಈಶಾನ್ಯದ ಒಡಲೊಳಗೆ ಅಡಗಿ,
ಸಾಕಾರ ಸಂಗವ ನುಂಗಿದ ಭಾಷೆಯನರಿಯದ ಮುಗುದೆ
ಅರಿವಿನೊಳಗಣ ಮರಹು, ಮರಹಿನೊಳಗಣ ಅರಿವು
ಗುಹೇಶ್ವರನೆಂಬಲಿಂಗವು ತ್ರಿಕಾಲ ಪೂಜೆಯ ನುಂಗಿತ್ತು.            ||೮೬||

ಸಾಕಾರ ಪೀಠಿಕಾಸ್ಥಲವೆನಿಸುವ ಚಿದ್ಬ್ರಹ್ಮಾಂಡಸ್ಥಲ
ಸಮಾಪ್ತ ಮಂಗಳಮಹಾ


[1] ರಿ (ಬ)

[2] ರಿ (ಬ)

[3] ಪ್ಪು (ಬ)


[1] + ಂಗಳು (ಬ)

[2] x (ಬ)

[3] x (ಬ)

[4] ಳಾ (ಬ).

[5] ಳಾ (ಬ).

[6] ದು ಹೇಂಗೆ (ಬ)

[7] ದು ಹೇಂಗೆ (ಬ)

[8] ಸದ್ಭಾವ ಸದಾ (ಬ)

[9] ಸದ್ಭಾವ ಸದಾ (ಬ)

[10] ಅಳಿದು (ಬ)

[11] ಅಳಿದು (ಬ)

[12] + ಮುಟ್ಟಿ (ಬ)

[13] + ಮತ್ತೆ (ಬ)

[14] x (ಬ)

[15] x (ಬ)

[16] ತೀ (ಬ)

[17] x (ಬ)

[18] x (ಬ)

[19] ವನುಳ್ಳ (ಬ)

[20] ವನುಳ್ಳ (ಬ)

[21] ಭೋಗಿಯಾಗಿಯೂ ಇರಬೇಕೆಂದು (ಬ)

[22] ಭೋಗಿಯಾಗಿಯೂ ಇರಬೇಕೆಂದು (ಬ)