೨೦೬

ಗಂಗಾದೇವಿಯ ಹುಳಿಯ ಕಾಸಿ, ಗೌರಿದೇವಿಯ ಕೂಳನಟ್ಟು,
ಭಕ್ತನ ಬಾಡನಟ್ಟು ದೇವನ ಸಾಸವೆಗಲಸಿ,
ಬ್ರಹ್ಮನಡ್ಡಣಿಗೆ; ವಿಷ್ಣು ಪರಿಯಾಣಪ; ರುದ್ರನೋಗರ;
ಈಶ್ವರ ಮೇಲೋಗರ; ಸದಾಶಿವ ತುಪ್ಪ;
ಪರಮೇಶ್ವರ ಬಾಯಿ ಉಣಲಿಕ್ಕೆ ಕೈಕಾಲು
ಮುರಿಯಿತ್ತು ಗುಹೇಶ್ವರ.    ||೬೮||

೨೦೭

ಅತಿರಥ ಸಮರಥರೆನಿಪ ಹಿರಿಯರೆಂಬವರುಗಳೆಲ್ಲ
ಮತಿಗೆಟ್ಟು ಮರುಳಾದರು.
ದೇವ ಸತ್ತ, ಬ್ರಹ್ಮ ಹೊತ್ತ, ವಿಷ್ಣು ಕಿಚ್ಚ ಹಿಡಿದ;
ಗಂಗೆ ಗೌರಿಯರಿಬ್ಬರು ಮುಂದೆಯಾದರು,
ಇದಕಂಡು ಬೆರಗಾದೆ

[1]ನು ಗುಹೇಶ್ವರಾ.||೬೯||

೨೦೮

ಕಳಾಬಿಂದು ವಟಾಮುಖಿಯೆಂಬ ಹೆಂಗೂಸಿನ ಕೈಯಲ್ಲಿ
ಜಲಾಕಾರವೆಂಬ ಗಡಿಗೆ ಇದ್ದಿತ್ತು.
ಆ ಗಡಿಗೆಯ ನೀರ ನೆರೆಯೆ ಚನ್ನಬಸವಣ್ಣ ತಂದ.
ಮಡಿವಾಳ ಸಯಿದಾನವ ತಂದ.ಇದರ ಒಲೆಯಡಿಯನುರುಹಿ ಕೊಡಾ ಕೂಡಲಸಂಗಮದೇವಾ.         ||೬೯||

೨೦೯

ಇದರ ಒಲೆಯಡಿಯನುರುಹಿದಡೆ ಹೊಗೆ
ಗೋಳಕನಾಥನ ಕೋರಳ ಸುತ್ತಿತ್ತು.
ಮಹೀತಳನ ಜಡೆ ಹತ್ತಿತ್ತು, ಮರೀಚನ ಸಿರ ಬೆಂದಿತ್ತು,
ರುದ್ರನ ಹಾವುಗೆ ಉರಿಯಿತ್ತು, ದೇವಗಣಂಗಳೆಲ್ಲ ವಿತಾಪವಾದರು
ಮಡದಿಯರು ಮುಡಿಯ ಹಿಡಿದುಕೊಂಡು ಹೋದರು.
ಭಸ್ಮಧಾರಿಯಾದೆ ಕಾಣಾ ಗುಹೇಶ್ವರ.           ||೭೦||

೨೧೦

ಆ ಭಸ್ಮಕ್ಕಾಗಿ ಬ್ರಹ್ಮನ ಕಪಾಲ ಸಿಡಿಯಿತ್ತು.
ಗಣನಾಥನ ಐವತ್ತೆರಡು ಸರಹರಿದು ಬಿದ್ದವು.
ಆ ಭಸ್ಮಕ್ಕಾಗಿಯಂಡಜ ಮುಖಿಯರ ಮೂಗುನೊಲೆ ಬೆಂದವು.
ನಾದಸ್ತ್ರೀಯರು ಉರಿಯನೇರಿಕೊಂಡು,
ಆಡಿನ ಮೇಲೆ ಅನಂತ ಸಿಂಹಾಸನವನಿಕ್ಕಿ ಕುಳ್ಳಿರ್ದುಕೆಟ್ಟರು,
ಕೂಡಲಸಂಗಮದೇವರ ಲೀಲೆ ಕೆಟ್ಟುದಿಲ್ಲ.      ||೭೧||

ಇಂತು ಷಡುದೇವತೆಗಳು ಪಂಚ ಭೂತಂಗಳು ಮನು ಮುನಿ ದೇವದಾನವ ಮಾನವರು ಅನಂತ ಶ್ರುತಿಗಳು ವಿನಾಯಕ ಭೈರವ ಷಣ್ಮುಖ ಎರಡೆಂಭತ್ತೇಳು ಕೋಟಿ ರುದ್ರರು ಐವತ್ತೆರಡಕ್ಷರಂಗಳು, ಇಂತಿವರೆಲ್ಲರು ಪರಶಿವ ತತ್ವದ ಮಹಾ ಪ್ರಳಯಾಗ್ನಿಯೊಳಗೆಯು ಮಹಾಪ್ರಳಯ ಜಲಧಿಯೊಳಗೆಯೂ ಲಯವಾಗುತ್ತಿಹರಾಗಿ ಪರಶಿವನ ಮಕುಟದ ಗಂಗೆಯೆನಲಿಲ್ಲ. ಆ ಗಂಗೆ ಜಡ ಅಗಸ್ತ್ಯನ ಕೈಯಲ್ಲಿ ಕಮಂಡಲದೊಳಗೆಯು ತೊಗಲತಿತ್ತಿಯೊಳಗೆಯೂ ಅಂಜಿ ಅಡಗುವುದೆ? ಅಡಗಿ ಮತ್ತೆ ಕೆಲರಿಂ[2] ಚರ್ಮ ಜಲವಾಗದೆನಿಸಿಕೊಂಬುದೆ? ಮತ್ತೆ ಬಿನುಗು ಜಾತಿಯ ಮನೆಯ ಮಡಕೆಯಲು ಶೌಚ ಮಡಕೆಯಲು ಅಡಗುವುದೆ? ಬತ್ತುತ್ತ ತುಂಬುತ್ತಲಿಹುದೆ? ಇಂಥಾ ಅಬದ್ಧತ್ವವೆಲ್ಲವು ಈ ಜಡಜಲಕಲ್ಲದೆ ಆ ಪರಮಾನಂದ ಜಲಕಲ್ಲ. ವಿಷ್ಣುವಿನ ಕಾಲಲ್ಲಿ ಗಂಗೆ ಜನಿಸಿತೆಂದಡಾತ ಕಾಲ ನೀರಿನೊಳಗೆ ತಾನು ಮತ್ಸ್ಯ ಕೂರ್ಮನಾಗಿ ಜನಿಸಲೇಕೆ? ತನ್ನ ಕಾಲ ನೀರೊಳಗೆ ತಾನು ಮುಳುಗಿರಲೇಕೆ? ಇಂತಪ್ಪ ದೃಷ್ಟಂಗಳ ತಿಳಿದು ವಿಚಾರಿಸಿ ಬಸವಾದಿ ಪ್ರಮಥರ ವಚನಂಗಳ ನೋಡಿದಡೆ ಆ ನಾಲ್ಕು ಮಾತುಗಳೆಲ್ಲ ಸಟೆ, ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೨೧೧

ಪೃಥ್ವಿಯೊಳಗಿಲ್ಲ ಆಕಾಶದೊಳಗಿಲ್ಲ.
ಚತುರ್ದಶ ಭುವನ ಭವನದೊಳಗೆಯೂ ಇಲ್ಲ.
ಏನಾಯಿತ್ತೆಂದರಿಯೆನಯ್ಯಾ,
ಎಂತಾಯಿತ್ತೆಂದರಿಯೆನಯ್ಯಾ.
ಗುಹೇವರ ಅಂದೂ ಇಲ್ಲ ಇಂದೂ ಇಲ್ಲ.          ||೭೨||

೨೧೨

ಅಂಡಜ ಶ್ವೇತಜ ಉದ್ಭಿಜ ಜರಾಯುಜ ಈ ನಾಲ್ಕು [3]ಯೋನಿಗಳಲ್ಲಿ[4] ಬರುತ್ತಿಹ ಅನಂತಕೋಟಿಜೀವಂಗಳು ಸತ್ತ ಪಾಪಂಗಳು
ವಿಧಿಯ ತಾಗುವುದೆ ಅಯ್ಯಾ?
ಕಾರ್ಮೇಘವು ಗಗನದಿಂದ ಸುರಿಯಲು ಭೂಮಿ ಜಜ್ಜರಿತವಾಗಿ
ಹಳ್ಳ ಕೊಳ್ಳ ಕೆರೆ ತುಂಬಿ ದಶ ದಿಕ್ಕುಗಳೆಲ್ಲ ಭರಿತವಾಗಿ
ಪುರಂಗಳ ಪೊಗಲು, ಅನಂತಕೋಟಿ ಜೀವಂಗಳು
ಸತ್ತ ಪಾಪಂಗಳು ಆ ಮೇಘಂಗಳ ತಾಗುವುದೆ ಅಯ್ಯಾ.
ಕಾನನದಡವಿಯೊಳಗೊಂದು ಕಾಳುಕಿಚ್ಚು ಹುಟ್ಟಿ
ಧಗಿಲು ಭುಗಿಲೆಂಬುರಿ ಸುಳಿಗೊಂಡಟ್ಟಿ ಮುಟ್ಟಿ ಸುಡುವಲ್ಲಿ
ಅನಂತಕೋಟಿ ಜೀವಂಗಳು ಸತ್ತ ಪಾಪವು ಕಿಚ್ಚ ತಾಗುವವೆ ಅಯ್ಯಾ?
ಧರೆಹತ್ತಿ ಉರಿಯೆ ಬ್ರಹ್ಮಾಂಡವ ಮುಟ್ಟಿ ಮಲತು ಬೀಸುವಲ್ಲಿ
ಅನಂತಕೋಟಿ ಜೀವಂಗಳು ಸತ್ತ ಪಾಪವು ಪವನನ ತಾಗುವುದೆ ಅಯ್ಯಾ?
ಧರೆಹತ್ತಿ ಉರಿಯೆ ಬ್ರಹ್ಮಾಂಡವನುರಿ ತಾಗುವುದೆಂದು ಕೆಂಡದ
ಮಳೆ ಸುರಿಯಲು ಸೂರರು ಅರಸರು ಎಲ್ಲಾ ಧಗಿಭುಗಿಲೆಂದು
ಉರಿಯು ಮುಟ್ಟಿತಾಗಲ್ಕೆ ವಿಶೇಷಪಾಪವು ಗಗನವ ತಾಗುವುದೆ ಅಯ್ಯಾ?
ಪೃಥ್ವಿಯಪ್ಪುತೇಜ ವಾಯುವಾಕಾಶ ಚಂದ್ರ ಸೂರ್ಯ ಆತ್ಮ
ಅಷ್ಟ ಮೂರ್ತಿಗಳು ನಷ್ಟವಾದ ಪಾಪವು ಶಿವನ ತಾಗುವುದೆ ಅಯ್ಯಾ?
ಉತ್ಪತ್ತಿ ಸ್ಥಿತಿ ಲಯವೆಂಬ ಕಲ್ಪಿತನಲ್ಲ, ಪ್ರಳಯ ವಿರಹಿತ
ಕೂಡಲಚೆನ್ನಸಂಗಾ ನಿಮ್ಮ ಶರಣ ಬಸವಣ್ಣ.    ||೭೩||

೨೧೩

ಪೃಥ್ವಿ ಅಪ್ಪು ತೇಜ ವಾಯು ಆಕಾಶವೆಂಬ
ಪಂಚಭೂತದೊಳಗೆ ಬೆಳವುತ್ತಿರ್ದಡೇನು ನೋಡಾ.
ಘನವನರಿದೆನೆಂಬ ಮರುಳು ಮಾನವರ ನೋಡಾ
ನಿರ್ಣಯವಿಲ್ಲದ ನಿರ್ವಿಕಾರ[5]ಗುಹೇರ್ಶವರನೆಂಬ ಮಹಾಘನವ ತಿಳಿಯರು ನೋಡಾ[6]          ||೭೪||

ಇಂತಪ್ಪ ಮಹಾಘನಲಿಂಗವು ಶರಣರುಗಳು ನಿತ್ಯ ತೃಪ್ತಿಯಿಂದ ಮೂರ್ತಿಗೈದಿರ್ದ ಪ್ರಸಾದ ರಸವಜ್ರ ಮಹಾಮೇರುಮಂದಿರದ ಕೆಳಗಳ ಮಾಯಾ ತತ್ವಂಗಳನು ದ್ವೀಪಂಗಳನು[7] ವಿಸ್ತೀರ್ಣವನು ಸಮಸ್ತ ಕಟ್ಟಣೆಯನು ಇಂತಿವರೆಲ್ಲರ ನಿಲುಕಡೆಯಂಗಳನು ಪುರಾತನರು ಏನೆಂದು ನಿರೂಪವ ಕೊಟ್ಟರೆಂದಡೆ, ಅವರ ವಚನಂಗಳ ವಿಚಾರಿಸಿ ತಿಳಿದು ನೋಡಿದಡೆ ಕಾಣಬಹುದು. ಅದು ಹೇಂಗೆಂದಡೆ ಪೃಥ್ವಿಯಿಂದ ಕೈಲಾಸ ಪತಿಯೆಂಬ ಈಶ್ವರ ಪರಿಯಂತರ ಪಂಚವಿಂಶತಿ ತತ್ವಂಗಳುತ್ಪತ್ಯವೆಂದರಿವುದು. ಆ ಈಶ್ವರಾದಿ ಪರಶಿವ ಪರಿಯಂತರ ಮಹಾ ಶಿವ ತತ್ವಂಗಳುತ್ಪತ್ಯವೆಂದರಿವುದು. ಮತ್ತೆ ದೇವಾದಿಗೆ ಜಗವಾದಿಗೆ ಪೃಥ್ವಿಯಾದಿಗೆ ಪಂಚವಿಂಶತಿ ತತ್ವಂಗಳುತ್ಪತ್ಯವುಂಟೆಂದರಿವುದು. ಪಂಚ ಶತಕೋಟಿ ವಿಸ್ತೀರ್ಣದ ಭೂಮಂಡಲವಳಯದ ಮಧ್ಯದಲ್ಲಿ ಮೂಲಸ್ತಂಭವಾಗಿ ಮೂರ್ತಿಗೈದಿರ್ದ ಮಹಾ ಮೇರುಮಂದಿರದ ಮಧ್ಯದಿಂ ಮೇಲಣ ನೆಲೆಯ ವಿಸ್ತೀರ್ಣ ಒಂದು ಕೋಟಿಯು ಇಪ್ಪ[8]ತ್ತೆಂಟು[9] ಲಕ್ಷವು ಎಂಬತ್ತೈದುಸಾವಿರ ಯೋಜನ [10]ಪರಿ[11] ಪ್ರಮಾಣವಾಗಿ ಕೈಲಾಸವೆನಿಸಿತ್ತು. ಆ ಮೇರುಮಂದಿರದ ಮೇಲೆ ಪರಶಿವತತ್ವ ಸಮೇತವಾದ ಶರಣ ಬಸವರಾಜದೇವರು[12] ಭೃಂಗೀಶ್ವರದೇವರು ವೀರಭದ್ರದೇವರು ಮುಖ್ಯವಾದನಂತಕೋಟಿ ಗಣಂಗಳ ಮೇಲೆ ತೊಂಭತ್ತಾರುಸಾವಿರ ಅಮರ ಗಣಂ ಗಳು ಅಸಂಖ್ಯಾತರು, ಅನಂತ ಮರುಳು ತಂಡಗಳು ಇಂತಿವರೆಲ್ಲರು ಮಹಾನುಭವ ಸುಖ ಸಂಕಥಾ ವಿನೋದದಿಂ ಭಕ್ತಿ ಸಾಮ್ರಾಜ್ಯಂಗೈವುತ್ತಿಹರು. ಮಹಾ ಸ್ವಯಂಭುಮೂರ್ತಿ ಪರಶಿವನು ಆ [13]ಮ[14]ಹಾ ಮೇರುಮಂದಿರದ ಕೆಳಗಣ ಗರ್ವ ಮೇರು ಎಂಬ ಮಂದಿರ ಎಂಭತ್ತು ಸಾವಿರ ಯೋಜನ ಪ್ರಮಾಣು. ಈ ಮೇರುಮಂದಿರದ ಮೇಲೆ ಬ್ರಹ್ಮ ವಿಷ್ಣು ರುದ್ರ ಈಶ್ವರ ಸದಾಶಿವ ಪರಮೇಶ್ವರ ನಂದಿ ಭೃಂಗಿ ವೀರಭದ್ರ ನಂದಿಮಹಾಕಾಳ ಏಕಾದಶ ರುದ್ರರು ಅಸಂಖ್ಯಾತ ಮರುಳುಗಳು ಅಷ್ಟಾಶತ ಸಹಸ್ರ ಋಷಿಯರು ದ್ವಾದಶಾದಿತ್ಯರು ನಾದರ ಯೋಗಿಶ್ವರರು ಅಷ್ಟದಿಕ್ಪಾಲಕರು. ಇಂತಿವರೆಲ್ಲರ ಸಮೂಹದೊಳು ರುದ್ರ ಚತುರ್ವಿಧ [15]ಪದ[16]ಸುಖ ಸಂಕಥಾ ವಿನೋದದಿಂ ರಾಜ್ಯಂಗೈವನು. ಆ ಮಹಾ ಮೇರು ಮಂದಿರದ ಕೆಳಗಣ ಜಂಬುದ್ವೀಪದ ವಿಸ್ತೀರ್ಣ ಲಕ್ಷವೂ ಇಪ್ಪತ್ತೈದುಸಾವಿರ ಯೋಜನ ಪ್ರಮಾಣು. ಲವಣ ಸಮುದ್ರದಿಂದಾಚೆಯಲ್ಲಿ ಭೂಮಿ ಎರಡು ಲಕ್ಷವು ಐವತ್ತು ಸಾವಿರ ಯೋಜನ ಪ್ರಮಾಣವು. ಲ[17]ಕ್ಷ ದ್ವೀಪಕ್ಕೆ ಇಕ್ಷುಸಮುದ್ರ ಎರಡು ಲಕ್ಷವು ಐವತ್ತುಸಾವಿರ ಯೋಜನ ಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ [18]ಸಿಡಿದು ಎರಡು[19] ಲಕ್ಷ ಯೋಜನ ಪ್ರಮಾಣು ಶಾಲ್ಮಲೀದ್ವೀಪವೆಂಬ ಭೂಮಿಯಿಹುದು. ಶಾಲ್ಮಲೀದ್ವೀಪಕ್ಕೆ ಮಧುಸಮುದ್ರ ಐದುಲಕ್ಷ ಯೋಜನ ಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ಹತ್ತು ಲಕ್ಷ ಯೋಜನ ಪ್ರಮಾಣು. ಕ್ಲು[20]ಶದ್ವೀಪಕ್ಕೆ ಘೃತ ಸಮುದ್ರ ಹತ್ತು ಲಕ್ಷ ಯೋಜನ ಪ್ರಮಾಣು.ಶಾಖದ್ವೀಪಕ್ಕೆ ದಧೀಸಮುದ್ರ ಇಪ್ಪತ್ತುಲಕ್ಷ ಯೋಜನ ಪ್ರಮಾಣು. ಅದರಿಂದಾಚೆಯಲ್ಲಿ ಭೂಮಿ ನಾಲ್ವತ್ತುಲಕ್ಷ ಯೋಜನ ಪ್ರಮಾಣು. ಕ್ರೌಂಚದ್ವೀಪಕ್ಕೆ ಕ್ಷೀರಸಮುದ್ರ ನಾಲ್ವತ್ತುಲಕ್ಷ ಯೋಜನ ಪ್ರಮಣು. ಅದರಿಂದಾಚೆಯಲ್ಲಿ ಭೂಮಿ ಎಂಭತ್ತುಲಕ್ಷ ಯೋಜನ ಪ್ರಮಾಣು. ಪುಸ್ಕರ ದ್ವೀಪಕ್ಕೆ ಸ್ವಾದೋದಕ ಸಮುದ್ರ ಎಂಭತ್ತು ಲಕ್ಷ ಯೋಜನ ಪ್ರಮಾಣು. ಇಂತೀ ಸಪ್ತಸಮುದ್ರಂಗಳನೊಂದಾಗಿ ಮೇಳೈಸಿದಡೆ ಮೂರು ಕೋಟಿಯು ಹದಿನೇಳುಲಕ್ಷವು ಐವತ್ತುಸಾವಿರ ಯೋಜನ ಪ್ರಮಾಣಿನ ಕಟ್ಟಣೆಯಾಯಿತ್ತು. ಮತ್ತೆ ಸ್ವಾದೋದಕ ಸಮುದ್ರದಿಂದಾಚೆಯಲ್ಲಿ ಲೋಕಾದಿ ಲೋಕಂಗಳು ಪರ್ವತಾಕಾರವಾಗಿ ತೈಲದ ಸಮುದ್ರವನೊಳಕೊಂಡು ಇಪ್ಪವು. ಮತ್ತದೆರಿಂದಾಚೆಯಲ್ಲಿ ಭೂಮಂಡಲ ಉಂಟೆಂದೊಡೆ ಉಂಟು. ನಾನೂರು ಕೋಟಿ ನಾಲ್ವತ್ತುಲಕ್ಷ ಯೋಜನ ಪ್ರಮಾಣಿನ ಹೇಮ ಉರ್ವಿ ಪಂಚ ಲೋಹದ ರಸ ಸಮುದ್ರವನೊಳಕೊಂಡಿಪ್ಪುದು. ಮತ್ತದರಿಂದಾಚೆಯಲ್ಲಿ ಭೂಮಂಡಲ ಉಂಟೆಂದಡೆ ಉಂಟು. ನಾಲ್ವತ್ತು ಕೋಟಿ ಇಪ್ಪತ್ತೈದುಲಕ್ಷ ಯೋಜನ ಪ್ರಮಾಣಿನ ಹೇಮದ ಪರ್ವತಂಗಳು ಸಿದ್ಧರಸದ ಸಮುದ್ರವನೊಳಕೊಂಡಿಪ್ಪವು. ಮತ್ತದರಿಂದಾಚೆಯಲ್ಲಿ ಭೂಮಂಡಲ ಉಂಟೆಂದಡೆ ಉಂಟು. ಎಂಭತ್ತೈದು [21]ಲಕ್ಷ[22] ಕೋಟಿಯು ಮೂವತ್ತೈದುಲಕ್ಷವು, ಅರುವತ್ತಾರುಸಾವಿರ ಯೋಜನ ಪ್ರಮಾಣು ವಳಯದ ಭೂಮಿ ಮಧ್ಯಪಾನ ಸಮುದ್ರವನೊಳಕೊಂಡು ಚಂದ್ರ ಸೂರ್ಯರ ಬೆಳಗು ಸಾಲದೆ ಅಂಥಃಕಾರವಾಗಿಪ್ಪುದು. ಇಂತಿವನೆಲ್ಲವನೊಳಕೊಂಡು ಒಂದು ಮಾಡಿ ಮೇಳೈಸಿದಡೆ, ಐನೂರುಕೋಟಿ ಯೋಜನ ಪ್ರಮಾಣಿನ ಕಟ್ಟಣೆಯಾಯಿತ್ತು. ಈ ಲೆಕ್ಕವು ಶರಣಾಗತ ವಜ್ರಪಂಜರವೆಂಬ ಬಿರಿದನುಳ್ಳ ಮಹಾ ಮೇರುಮಂದಿರದೊಂದು ದಿಕ್ಕಿನ ಪ್ರಮಾಣಂಉ. ಆ ಮೇರುಮಂದಿರದ ಪ್ರದಕ್ಷಣವಾಗಿಯೆಂಟುದಳದಲೆಂಟು ಪಂಚ ಶತಕೋಟಿ ವಿಸ್ತೀರ್ಣದ ಕಟ್ಟಣೆಯಿತ್ತು; ಈ ಭೂಮಂಡಲವನು, ದಿವದೊಳಗೆ ಸೂರ್ಯ ತಿರುಗುವನು. ರಾತ್ರೆಯೊಳಗೆ ಚಂದ್ರ ತಿರುಗುವನು. ಇಪ್ಪತ್ತೇಳು ನಕ್ಷತ್ರ, ಧೃವಮಂಡಲ, ಸಪ್ತಮಾತೃಕೆಯರು, ಸಪ್ತ ಋಷಿಯರು, ರಾಹುಕೇತುಗಳು, ನವಗ್ರಹಂಗಳು ಇಂತಿವರೆ ಲ್ಲರು ಮಹಾ ಮೇರುಮಂದಿರದ ಹೊರಪ್ರದಕ್ಷಿಣವಾಗಿ ದಿವ ರಾತ್ರೆಯೊಳು ತಿರು[23]ಗಿ ಬರು[24]ತ್ತಿಹರು. ಇಂತಿವರೆಲ್ಲರು ಮೊದಲಾದ ಜ್ಯೋತಿಜ್ಞಾನ, ಜ್ಯೋತಿ ಸುಜ್ಯೋತಿಗ್ರಹಣ ಸಂಕ್ರಮಣ ಈರೇಳು ಲೋಕದ ಚಿಟುಕು ವಿಷಗಳಿಗೆ ವಿಘಳಿಗೆ ಜಾವ ದಿವಸ ಮಾಸ ವರುಷ ತಿಥಿ ವಾರ ನಕ್ಷತ್ರ ಯೋಗ ಕರಣ ಲಗ್ನ ಮುಹೂರ್ತ ವಜ್ರ ಸಂಕಲ್ಪ ಶಕುನ ಶಾಸ್ತ್ರ ಲೆಕ್ಕ ಇಂತಿವೆನಲ್ಲವನು ಆದಿಯ ಲಿಂಘ ಅನಾದಿಯ ಶರಣನಪ್ಪ ಪೂರ್ವಾಚಾರ್ಯ ಸಂಗನ ಬಸವಣ್ಣ ಷಡುದೇವತೆಗಳು ಮೊದಲಾದ ಸಮಸ್ತ ಜಡಜೀವರುಗಳಿಗೆ ಕಟ್ಟಿದ ಕಟ್ಟಣೆಯ ಮೂಲವನಾರು ಬಲ್ಲರಯ್ಯಾ ಎಂದಡೆ ಕೂಡಲ ಚೆನ್ನಸಂಗಯ್ಯನ ಮಹಕ್ಕೆ ಮಹಾವಾಗಿಪ್ಪ ಶರಣಸ್ಥಲದವರು ಬಲ್ಲರು. ಸಿದ್ಧರಾಮಯ್ಯ ದೇವರು, ಪ್ರಭುದೇವರು, ಸಾಮವೇದಿಗಳು ಇವರು ಮುಖ್ಯವಾದ ಆದಿ ಅನಾದಿಯಿಂದತ್ತಣ ಮಹಾ ಪ್ರಮಥರು ಬಲ್ಲರಾಗಿ ಅವರಿಗೆ ನಮೋ ನಮೋ ಎಂಬೆನು. ಇನ್ನು ಮನಮಾಯೆ ಷಡುದೇವತೆಗಳು ಜೀವಾತ್ಮರುಗಳೆಲ್ಲವೆಂಬುದಕ್ಕೆ ದೃಷ್ಟವ ಹೇಳಿಅಹುದು ಎನಿಸಿಹೆನು. ಅದು ಹೇಂಗೆನಲು, ಮರ್ತ್ಯಲೋಕದೊಳ ಗಣ ಜೀವರುಗಳು ಕೆಲಬಲರು ಹದಿನಾರು ವರುಷದ ಒಳ ಹೊರಗಿನೊಳಗೆ [25]ಲಯವಹರು[26] ಮತ್ತೆ ಕೆಲಬರು ಮೂವತ್ತೆರಡು ವರುಷದ ಒಳ ಹೊರಗಿನೊಳಗೆ ಮೃತಹರು. ಮತ್ತೆ ಕೆಲಬಲರು ಆರುವತ್ತು ವರುಷದ ಒಳ ಹೊರಗಿನೊಳಗೆ ಲಯವಹರು. ಮತ್ತೆ ಕೆಲ ತಂ[27]ಡದವರುಗಳು ನೂರು ವರುಷದ ಒಳ ಹೊರಗಿನೊಳಗೆ ಅಳಿವರು. ಮತ್ತೆ ಕೆಲಬರು ಕೆಲ ಜೀವಿಗಳು ನೂರಿಪ್ಪತ್ತು ವರುಷದ ಒಳ ಹೊರಗಿನೊಳಗೆ ವೆಚ್ಚವಹರು. ಈ ನರ ಬಲವೆಲ್ಲ ಪ್ರಳಯವಾದ ಬಳಿಕ ಸುರಬಲವೆಲ್ಲ ಪ್ರಳಯವಪ್ಪುದು. ಸುರಬಲವೆಲ್ಲ ಪ್ರಳಯವಾದ ಬಳಿತ ಋಷಿಬಲವೆಲ್ಲ ಪ್ರಳಯವಪ್ಪುದು, ಋಷಿಬಲವೆಲ್ಲ ಪ್ರಳಯವಾದ ಬಳಿಕ ವಿಷ್ಣುಬಲವೆಲ್ಲ; ಪ್ರಳಯವಪ್ಪುದು. ನರ ಸುರ ಋಷಿ ಬ್ರಹ್ಮ ವಿಷ್ಣು ಇಂತಿವರು ತಮ್ಮ ತಮ್ಮ ಪಡೆಗಳುಸಹಿತ ರುದ್ರನ ನಾಲ್ವತ್ತೆರಡು ಕೋಟಿ ರುದ್ರಪಡೆಯ ಬೆರಸಿ ರುದ್ರನಡಿ ಮುಡಿ ನಡುವೆಲ್ಲಾ ಠಾವಿನೊಳಗೆ ಅತ್ತಿಯ ಕರುವಿನ ಹೊರಂಗದಲ್ಲಿ ತುದಿ ಮೊದಲು ಮಧ್ಯವೆಲ್ಲಾ ಠಾವಿನೊಳಿಪ್ಪ ಹಣ್ಣುಗಳಂತೆ ರುದ್ರನ ಬೆನ್ನ ಹತ್ತಲಾಕ್ಷಣ ರುದ್ರನು ಭೈರವಾಕೃತಿಯಾಗಿ ಭೀತಿಗೊಳುತ್ತಿರ್ಪನು. ಅಷ್ಟರಿಂದ ಮೇಲೆ ರುದ್ರನಿವರುಗಳು ಸಹಿತ ಪ್ರಳಯವಾಗಿ ಈಶ್ವರನ ನಾಲ್ವತ್ತೆರಡು ಕೋಟಿ ಈಶ್ವರರ ಬೆರಸಿ ಮೊದಲವರುಗಳಂತೆ ಈಶ್ವರನೆಂಬತ್ತಿಯಮರನೆಮ್ಮಿದಡಾ ಬಾತೆಗೆ ಈಶ್ವರ ಭೈರವಾಕಾರವಾಗುವನು. ಅಷ್ಟರಿಂದ ಮೇಲೆ ಈಶ್ವರನಿವರುಗಳು ಸಹಿತ ಪ್ರಳಯವಾಗಿ ಸದಾಶಿವನ ನಾಲ್ವತ್ತೆರಡು ಕೋಟಿ ಸದಾಶಿವನ ಬೆರಸಿ ಮೊದಲರವರುಗಳಂತೆ ಸದಾಶಿವನೆಂಬ ಅವುದುಂಬರ ವೃಕ್ಷವ ನೆಮ್ಮಿದಡಾಬಾಧೆಗೆ ಸದಾಶಿವ ಭೈರವತಾರವಾಗುವನು. ಅಷ್ಟರಿಂದ ಮೇಲೆ ಸದಾಶಿವನಿವರುಗಳು ಸಹಿತ ಪ್ರ ಳಯವಾಗಿ ಪರಮೇಶ್ವರನ ನಾಲ್ವತ್ತೆರಡು ಕೋಟಿ ಪರಮೇಶ್ವರರ ಬೆರಸಿ ಮೊದಲವರುಗಳಂತೆ, ಪರಮೇಶ್ವರನೆಂಬ ಅತ್ತಿಯ ಮರನ ನೆಮ್ಮಿದಡಾಬಾಧೆಗೆ ಪರಮೇಶ್ವರ ಭೈರವಾಕೃತಿಯಾಗುವನು. ಅಷ್ಟರಿಂದ ಮೇಲೆ ಪರಮೇಶ್ವರನಿವರುಗಳು ಸಹಿತ ಪಂಚ ಭೂತಂಗಳು ಯುಕ್ತವಾಗಿ ಮಾಯೆಯೊಳಗಡಗುವನು. ಈ ಮಾಯೆಯವರುಗಳು ಸಹಿತ ಮನದೊಳಗಡೆಗುವಳು[28]  ಮನವಿವರುಗಳು ಸಹಿತ ಮಹಾಗಣೇಶ್ವರನ ಮಹಾಕಾಲಾಗ್ನಿಯಲ್ಲಿ ಬೆಂದುದಗ್ಘವಾಗಿ ಭಸ್ಮೀಕೃತವಪ್ಪುದು ತಪ್ಪದು. ಇಂತು [29]ಎಂಟು[30] ಕಲ್ಪಾಂತರಕ್ಕಾದ [31]ರೂ ಷಡು[32] ದೇವತೆಗಳು ಸಾವುದರಿಂದ ಜೀವ[33]ರೆನಿಸಿಕೊಂಬರು. ಇಂತೆಂಬ ಪ್ರಮಥರ ವಚನಂಗಳ ಸಾರಾಯಂಗಳಿಗೆ ಸಾಕ್ಷಿ.

೨೧೪

ಮಹಾಕಾಲ ಕಾಲದಲ್ಲಿ ಮಹಾಪ್ರಮಥರ
ಮಹಾ ಕಾಲಾಗ್ನಿಯಲ್ಲಿ ನರರುಗಳು ಬೆಂದು ಸುರರುಗಳನೆಮ್ಮುವರು.
ಸುರರುಗಳು ಬೆಂದು ಋಷಿಗಳ ನೆಮ್ಮುವರು.
ಋಷಿಗಳು ಬೆಂದು ಬ್ರಹ್ಮರುಗಳ ನೆಮ್ಮುವರು.
ಬ್ರಹ್ಮರುಗಳು ಬೆಂದು ವಿಷ್ಣುಗಳ ನೆಮ್ಮುವರು.
ವಿಷ್ಣುಗಳು ಬೆಂದು ರುದ್ರರುಗಳ ನೆಮ್ಮುವರು.
ರುದ್ರರುಗಳು ಬೆಂದು ಈಶ್ವರರುಗಳ ನೆಮ್ಮುವರು.
ಈಶ್ವರರುಗಳು ಬೆಂದು ಸದಾಶಿವರುಗಳ ನೆಮ್ಮುವರು.
ಸದಾಶಿವರುಗಳು ಬೆಂದು ಪರಮೇಶ್ವರರುಗಳ ನೆಮ್ಮುವರು.
ಪರಮೇಶ್ವರರುಗಳು ಬೆಂದು ಪಂಚಭೂತಂಗಳು ಸಹಿತ
ವೃಕ್ಷಭೈರವ ಮುಂತಾಗಿ ಬೆಂದು ಮಾಯೆಯ ನೆಮ್ಮುವರು.
ಮಾಯೆ ಮನವ ನೆಮ್ಮಿದೊಡಾ ಮನ ನೆಮ್ಮುವದಕ್ಕೆ
ಠಾವಿಲ್ಲದೆ ಬೆಂದುಹೋಯಿತ್ತು
ಕಾಣಾ ರೇಕಣ್ಣಪ್ರಿಯ ನಾಗಿನಾಥ      ||೭೫||

೨೧೫

ತೋಂಟವ ಬಿತ್ತಿದರೆಮ್ಮವರು.
ಕಾಹಕೊಟ್ಟರು ಜವನವರು.
ನಿತ್ಯವಲ್ಲದ ಸಂಸಾರ ವೃಥಾ ಹೋಯಿತ್ತಲ್ಲಾ !
ಗುಹೇಶ್ವರನಿಕ್ಕಿದ ಕಿಚ್ಚು ಹೊತ್ತಿಕ್ಕಲುಂಟು, ಅಟ್ಟುಣ್ಣವಿಲ್ಲ.            ||೭೬||

೨೧೬

ಆಯಿತ್ತೆ ಉದಯಮಾನ.
ಹೋಯಿತ್ತೆ ಅಸ್ತಮಾನ.
ಅಳಿ [34]ದವಲ್ಲಾ ನೀರೊಳಾದ ನಿರ್ಮಿತಂ[35]ಗಳೆಲ್ಲವೂ!
ಕತ್ತಲೆ ಕವಿಯಿತ್ತು ಮೂರುಲೋಕದೊಳಗೆ.
ಇದರಚ್ಚುಗವೇನು ಹೇಳಾ ಗುಹೇಶ್ವರ.         ||೭೭||೨೧೭

ಭೂತ ಭೂತವ ಕೂಡಿ ಅದ್ಭುತವಾಯಿತ್ತು.
ಕಿಚ್ಚು ಕಿಚ್ಚ ಕೂಡಿತ್ತು.
ನೀರು ನೀರಡಿಸಿತ್ತು.
ಉರಿ ಪವನದೋಷದೊಳಡಗಿ
ವಾಯುವಿಮ್ಮಡಿಸಿ ಬೆಂದಿತ್ತ ಕಂಡೆ ಗುಹೇಶ್ವರಾ.          ||೭೮||

೨೧೮

ಹಿಂದನರಿಯದುದು ಮುಂದೇನ ಬಲ್ಲುದೊ?
ಉದಯಮುಖದಲ್ಲಿ ಹುಟ್ಟಿದ ಪ್ರಾಣಿಗಳು ಅಸ್ತಮಾನಕ್ಕೆ ಅಳಿದರಲ್ಲಾ.
ಅಂದಂದಿನ [36]ಘಟಜೀವಂಗಳೆಲ್ಲಾ ಬಂದ ಬಟ್ಟೆಗೆ ಹೋದರಲ್ಲಾ.
ಗುಹೇಶ್ವರಲಿಂಗವು ಅರಿಗೂ ಇಲ್ಲವಯ್ಯ.        ||೭೯||

ಇಂತಾದಬಳಿಕ ಸ್ವಯಂಜ್ಯೋತಿ ರುದ್ರನು ಮತ್ತೆಯು ಉತ್ಪತ್ಯಸ್ಥಿತಿಲಯಂಗಳಾಗಬೇಕೆಂದುತ್ತಮ ಮಹಾಮೇರುಮಂದಿರದೊಳಗೆಯೇನೇನವನು ನೆನೆಯಲಾಕ್ಷಣ ಇತ್ತ ಮನ ಮಾಯೆ ಷಡುದೇವತೆಗಳು ಷಡ್ಭುವನಂಗಳು ಶ್ರುತಿಗಳು ಮನು ಮುನಿ ದೇವ ದಾನವ ಮಾನವರುಗಳು ಭೂತ ಪ್ರೇತ ಪಿಶಾಚಿಗಳು ಸಚರಾಚರಂಗಳು ಇಂತಿವರೆಲ್ಲ ಹುಟ್ಟಿ ಹರಕರಿಸುತ್ತಿಹರು. ಇಂತೆಂಬನುಭಾವಂಕುರಿಸಿದ ಸೂತ್ರಕ್ಕೆ ಸಾಕ್ಷಿ.

ವಿಶ್ವನಿರಾಕಾರ ನಿರ್ಮಿತ ಆವೃತಜ್ಞಾನ, ಸ್ವಯಂಭೂ ಮೂರ್ತಿ, ನಿರಾಕಾರ ನಿಜಲಿಂಗವಪ್ಪ ಮಹಾಮಹಿಮನು ಪರಶಿವಾನಂದಮೂರ್ತಿ , ತನ್ನೊಳು ತ್ರಿಗುಣಾತ್ಮಕವಾಗಿಹನು. ಅದೆಂತೆಂದಡೆ: ಶಿವ ಸದಾಶಿವ ಮಾಹೇಶ್ವರ ಎಂದಿಂತು ಆ ಪರಶಿವನಾಮಂಗಳು. ಪರಶಿವನು ಪರಮಾತ್ಮನು ತ್ರಿಗುಣಾತ್ಮಕನೆಂದವರ ಭೇದಂಗಳು. ಅಂತಪ್ಪ ಪರಶಿವನು ವಿಶ್ವೋತ್ಪತ್ಯಕಾರಣನಾಗಿ, ಷಡುಸಾದಾಖ್ಯತತ್ವರೂಪಗಳಿಂದ ಪ್ರತ್ಯಕ್ಷ ಜ್ಯೋತಿಯ ಬೆಳಗಿನಂತೆ ಆವುದು ಘನ ಆವುದು ಕಿರಿದೆಂದು ಉಪಮಿಸಬಾರದು. ಆ ಮಹಾಘಸದಂತೆ ಮ [37]ಹಾಘನ[38]ದ ಬೆಳಗು ತನ್ನೊಳಗೆ ಬೆಳದು ಪರಶಿವಮೂರ್ತಿಯ ಸ್ವರೂಪವಾಯಿತ್ತು. ಆ ಪರಶಿವಮೂರ್ತಿಯ ಸ್ವರೂಪವೆಂಬ ಬೆಳಗಿನೊಳಗೆ ಕರ್ತುವೆಂಬ ಪ್ರಣಮವ ಕೂಡಿದ ಗುರುಭಕ್ತಿ, ಕರ್ಮವೆಂಬ ಪಂಚಾಕ್ಷರಿಯ ಕೂಡಿದ ಲಿಂಗಭಕ್ತಿ, ಕ್ರೀ ಎಂಬ ಷಡಕ್ಷರಿಯ ಕೂಡಿದ ಜಂಗಮ ಭಕ್ತಿ – ಇಂತಿವು ಉದಯಿಸಿದವು. ಆ ತ್ರಿವಿಧ ಭಕ್ತಿಗಳಿಂದ ಷಡು ಸಾದಾಖ್ಯ ತತ್ವಂಗಳುದೈಸಿದವು. ಅದರೊಳಗೆ ಷಡು ಶಕ್ತಿಗಳುದೈಸಿದವು. ಆ ಷಡು ಶಕ್ತಿಗಳನು ಷಡುಸಾದಾಖ್ಯತತ್ವಂಗಳಿಗೆ ಆ ತ್ರಿಗುಣಾತ್ಮಕರೆಂಬ ಪರಶಿವ ಪರಶಕ್ತಿಪರಮ ಶರಣ ಬಸವಣ್ಣ ಆ ಮೂವರು ವಿವಾಹಮಂ ಮಾಡಿದರು. ಮಾಡಲ ಆಗಿ ಷಡಶಕ್ತಿಗಳಿಂದ ಮಹಾತೇಜೋಮಯವಪ್ಪ ಆದಿರುದ್ರನುದಯಿಸಿದನು, ಆ ಆದಿರುದ್ರಂಗೆ ಸಹಸ್ರ, ಶಿರ , ಸಹಸ್ರ ಮುಖ, ಸಹಸ್ರ ಕಣ್ಣು, ಸಹಸ್ರ ಕರ್ಣ, ಸಹಸ್ರ, ನಾಶಿಕ, ಸಹಸ್ರ ಜಿಹ್ವೆ, ಸಹಸ್ರ ದೇಹ, ಸಹಸ್ರ ಭುಜ, ಸಹಸ್ರ ಬಾಹು, ಸಹಸ್ರ ಪಾದವನುಳ್ಳ ಸ್ವಯಂಭು ಮೂರ್ತಿಯ ಮುಖದ ಲೀಲೆಯಿಂದ ಒಂದು ಮನ ವಿರಾಟ ರೂಪಾಗಿ ಹುಟ್ಟಿತ್ತು. ಆ ವಿರಾಟರೂಪೆಂಬ ಮನ ಮಾಯೆಯಯಿತ್ತು. ಆ ಮಾಯಿಕದಲ್ಲಿ ಸರ್ವಗತ ಶಿವನು ಪಂಚಭೂತ ಸಹಿತ ಹುಟ್ಟಿದನು. ಆ ಸರ್ವಗತ ಶಿವನ ಮುಖದಲ್ಲಿ ಸದಾಶಿವ ಹುಟ್ಟಿದ. ಆ ಸದಾಶಿವನ ಮುಖದಲ್ಲಿ ಈಶ್ವರ ಹುಟ್ಟಿದ. ಆ ಈಶ್ವರನ ಮುಖದಲ್ಲಿ ರುದ್ರ ಹುಟ್ಟಿದ. ರುದ್ರನ ವಾಮಭಾಗದಲ್ಲಿ ನಾರಾಯಣ ಹುಟ್ಟಿದ, ಬಲಭಾಗದಲ್ಲಿ ಬ್ರಹ್ಮ ಹುಟ್ಟಿದ. ಇಂತ ಈ ಷಡುದೇವತೆಗಳು ಹುಟ್ಟಿದರು. ಈ ತ್ರಿವಿಧ ದೇವತೆಯರೊಳಗೆ ಅಗ್ರಜನಪ್ಪ ಮಹಾಮಹಿಮನು ರುದ್ರನು. ಆ ರುದ್ರನ ಪಂಚಮುಖಂಗಳಲ್ಲಿ ಪಂಚಬವರಹ್ಮ ಮಹಾತೇಜೋಮಯವಪ್ಪ ಐವರು ರುದ್ರರು ಹುಟ್ಟಿದರು. ಅವರಾರೆಂದೊಡೆ: ಸದ್ಯೋಚಾತ, ವಾಮದೇವ, ಅಘೋರ, ತತ್ಪುರುಷ,  ಈಶಾನ್ಯಯೆಂದಿಂತು ಐವರು ಪುಟ್ಟಿದರು. ಆ ಐವರೊಳಗೆ ಸದ್ಯೋಜಾತನೆಂಬವನಗ್ರಜ ರುದ್ರನು. ಆ ಸದ್ಯೋಜಾತ ರುದ್ರಂಗೆ ಮಹಾರುದ್ರ ಪುಟ್ಟಿದನು. ಆ ಮಹಾರುದ್ರಂಗೆ ರುದ್ರ ಪುಟ್ಟಿದ. ಆ ರುದ್ರಂಗೆ ಶ್ರೀರುದ್ರ ಪುಟ್ಟಿದ. ಆ ಶ್ರೀರುದ್ರಂಗೆ ಅಗ್ನಿಯ ಅವಗತ ಬ್ರಹ್ಮ ಹುಟ್ಟಿದ. ಆ ಅಗ್ನಿಯವಗತ ಬ್ರಹ್ಮಂಗೆ ಕಾಸ್ಯಪಬ್ರಹ್ಮ ಪುಟ್ಟಿದನು. ಆ ಕಾಸ್ಯಪ ಬ್ರಹ್ಮಂಗೆ ಅವಗತ ಜಮಾಯೆ ಸ್ವಪ್ನಬ್ರಹ್ಮ ಕಾಸ್ಯಪಬ್ರಹ್ಮ ಪುಟ್ಟಿದನು. ಆ ಕಾಸ್ಯಪ ಬ್ರಹ್ಮಂಗೆ ಅವಗತ ಮಾಯೆ ಸ್ವಪ್ನಬ್ರಹ್ಮ ಪುಟ್ಟಿದನು. ಮಾಯವೆ ಮೃತ್ಯ, ಬ್ರಹ್ಮವೇ ಸತ್ಯವೆಂದರಿವುದು. ಆ ಮಾಯಾ ಸ್ವಪ್ನಬ್ರಹ್ಮನು ಮಾಯಾಜಾಲವ ಬೀಸಿದನಾಗಿ ಅದು ಮಾಯಾ ಸ್ವಪ್ನಬ್ರಹ್ಮವೆಂದೆನಿಸಿತ್ತು. ಇಂತಪ್ಪ ಮಾಯಾ ಸ್ವಪ್ನಬ್ರಹ್ಮಂಗೆ ತ್ರೈದಶ ಸ್ತ್ರೀಯರುಗಳು ಪುಟ್ಟಿದರು. ಆತ್ರೈವಶ ಸ್ತ್ರೀಯರುಗಳ ನಾಮಂಗಳು ಆವಾವುದಯ್ಯಾ ಎಂವಡೆ: ಬೃಹಿತೆ, ಅದಿತಿ, ದಿತಿ, ವಿನುತೆ, ಕದೃವೆ, ಸುವರ್ಣಪ್ರಭೆ, ಕುಮುದಿನಿ, ಪ್ರಭಾದೇವಿ, ಕಾಳದಂಡಿ, ಮೇಘದಂಡಿ, ಕುಸುಮಾವತಿ, ಧಾತುಪ್ರಭೆ, ಪಾರ್ವಂದಿನಿ ಎಂದಿಂತು ಹದಿಮೂರು ಸತಿಯರು. ಇಂತಪ್ಪ ಸತಿಯರುಗಳ ಕಾಸ್ಯಪ ಬ್ರಹ್ಮಗೆ ಮದುವೆಯ ಮಾಡಿದರು. ಹನ್ನೊಂದು ರುದ್ರರು ಮಾಡಲಾಗಿ ಆ ಸ್ವಯಂಭುವಾದಿ ರುದ್ರಾದಿರುದ್ರನು ಜಗಸೃಷ್ಟ್ಯಾರ್ಥ ಕಾರಣನಾಗಿ ಉತ್ಪತ್ಯ ಸ್ಥಿತಿಲಯಂಗಳು ಬೇಕೆಂದು ನೆನದನು. ನೆನೆಯಲಾಗಿ ಆ ಕಾಸ್ಯಪ ಬ್ರಹ್ಮನ ಮೊದಲ ಸ್ತ್ರೀ ಬೃಹಿತೆಗೆ ಹುಟ್ಟಿದ ಮಗನು ಹಿರಣ್ಯಾಕ್ಷ. ಆ ಹಿರಣ್ಯಾಕ್ಷನ ಮಗ ಪ್ರಹ್ಲಾದ. ಆ ಪ್ರಹ್ಲಾದನ ಮಗ ಕುಂಭಿ. ಆ ಕುಂಭಿಯ ಮಗ ನಿಕುಂಭಿ. ಆ ನಿಕುಂಭಿಯ ಮಗ ದುಂದುಭಿ. ಆ ದುಂದುಭಿಯ ಮಗ ಬಲಿ. ಆ ಬಲಿಯ ಮಗ ಬಾಣಾಸುರ. ಇಂತಿವರು ಮೊದಲಾದ ಛಪ್ಪನ್ನ ಕೋಟಿ ರಾಕ್ಷಸರು ಪುಟ್ಟಿದರು. ಅದಿತಿಗೆ ದ್ವಾದಶಾದಿತ್ಯರು, ಸೂರ್ಯ ದೇವೇಂದ್ರ ಇಂತಿವರು ಮೊದಲಾದ ಮೂವತ್ತು ಮೂರು ಕೋಟಿ ದೇವರ್ಕಳು ಪುಟ್ಟಿದರು. ದಿತಿತಗೆ ಕೂರ್ಮ ಮಂಡೂಕ ಕರ್ಕಾಟಕ ಶಿಶುಮಾರ, ಜಿಗುಳೆ, ಸಹಸ್ರದಂಷ್ಟ್ರ, ತಿಮಿ, ತಿಮಿಂಗಲು, ಜಷ ರಾಜೀವ, ಸುಲೂಕ – ಇಂತಿವು ಮೊದಲಾದ ಜಲಚರಂಗಳು ಪುಟ್ಟಿದವು. ವಿನುತೆಗೆ ಶಿಡಿಲು, ಮಿಂಚು, ವರುಣ, ಶಂಖ, ಗರುಡ , ಹಂಸ, ಹದ್ದು, ಶುಕ, ಪಿಕ ಇಂತಿವು ಮೊದಲಾದ ಖಗ ಕುಲಜಾತಿಗಳು ಪುಟ್ಟಿದವು. ಕದೃವಿಗೆ ಮಹಾಶೇಷ, ಅನಂತ ವಾಸುಕಿ, ತಕ್ಷಕ, ಶಂಕಪಾಳ , ಪದ್ಮ, ಕುಳಿಕ, ಕರ್ಕೋಟಕ, ಕಾಳಿಂಗ ಅಲಂಬಾರ್ಯಾನಿಲ – ಇಂತಿವು ಮೊದಲಾದ ಫಣಿಕುಲಂಗಳು ಪುಟ್ಟಿದವುಇ. ಸುವರ್ಣಪ್ರಭೆಗೆ ಸೋಮ,  ಮಂಗಳ, ಬುಧ, ಬ್ರಹಸ್ಪತಿ, ಶುಕ್ರ, ಶನಿ, ರಾಹು, ಕೇತು, ಸಪ್ತವಿಂಶತಿ ನಕ್ಷತ್ರಗಳು, ಸಪ್ತಮಾತೃಕೆಯರು ಇಂತಿವು ಮೊದಲಾದ ಧೃವಮಂಡಲಗಳು ಪುಟ್ಟಿದವು. ಕುಮುದಿನಿಗೆ ಹರಿ ಹರಿಣ, ಐರಾವತ, ಪುಂಡರೀಕ, ವಾಮದೇವ, ವಾಮನ, ಕುಮುದ, ಅಂಜನ, ಪುಷ್ಪದಂತ, ಸಾರ್ವಭೌಮ , ಸುಪ್ರತೀಕ, ಭಗದ ಂತ, [39]ಕಾಡ[40] ಕೋಣ, ಮೇಷ, ವ್ಯಾಘ್ರಮೃಗ, ಝಲ್ಲಿಮೃಗ, ನೀಲಕಂಠಮೃಗ, ಷಡ್ಗ್ರಂಥಿಲಮೃಗ, ಖಡ್ಗ ಮೃಗ, ಕಸ್ತೂರಿಮೃಗ, ಜವಾದಿ, ತೇಜಿ ಇಂತಿವು ಮೊದಲಾದ ಮೃಗಕುಲಂಗಳು ಪುಟ್ಟಿದವು. ಪ್ರಭಾದೇವಿಗೆ ಭೃಗು, ದಧೀಚಿ, ಗೌತಮ, ಅಗಸ್ತ್ಯ, ಕೌಂಡಲ್ಯ, ಉಪಮನ್ಯು, ವ್ಯಾಸ ಮುನಿ, ಚಿಪ್ಪಜ, ಚಿಟ್ಟಜ, ಚಿಟ್ಟಜ, ರೋಮಜ, ದೊಂಕಜ – ಇಂತಿವರು ಮೊದಲಾದ ಅಷ್ಟಾಶತ ಸಹಸ್ರ ಋಷಿಗಳು ಪುಟ್ಟಿದರು. ಕಾಳದಂತಿಗೆ ಮೇರುಗಿರಿ, ಮಾನುಷ್ಯಗಿರಿ, ರಜತಗಿರಿ, ನೀಲಗಿರಿ, ಹಿಮಗಿರಿ, ಕೀಲಗಿರಿ, ಮಂಧರಗಿರಿ, ಅಸಿತಗಿರಿ – ಇಂತಿವು ಮೊದಲಾದ ಪರ್ವತಂಗಳು ಪುಟ್ಟಿದವು. ಮೇಘದಂಡಿಗೆ ದ್ರೋಣಮೇಘ, ಕುಂಭಮೇಘ, ನೀಲಮೇಘ, ಧೂಮ್ರ, ಕಾರ್ಮೇಘ – ಇಂತಿಪು ಮೊದಲಾದ ಕಪಿಲೆಗಳು ಹೋರಿಗಳು ಮತ್ತೆ ಕಲ್ಪವೃಕ್ಷಗಳು ಮೊದಲಾದ ಮಾವು, ನೀರಲ, ವಟವೃಕ್ಷ, ಹಲಸು,  ನಾರಂಗ, ನಾರಿಕೇಳ, ನಾಗವಲ್ಲಿ, ಕ್ರಮುಕ, ಕದಳಿ, ಕರ್ಪರ, ಬಾಳೆ, ಖರ್ಜುರ, ಕಬ್ಬು, ರಾಜಾನ್ನ, ಜಂಬಿರ, ಪುಷ್ಪಕ ವೃಕ್ಷಗಳು, ಪರಿಮಳ ಪತ್ರಿಗಳು, ಶ್ರೀಗಂಧ, ಧೂಪದ ವೃಕ್ಷಂಗಳು ಇಂತಿವು ಮೊದಲಾದ ಮರತತಿಗಳು ಪುಟ್ಟಿದವು. ಧಾತುಪ್ರಭೆಗೆ ಚಿನ್ನ ಮಣಿ ಮೊದಲಾದ ನವರತ್ನಗಳು, ಅನರ್ಘ್ಯ ಮಣಿಮಾಲೆಗಳು ಪುಟ್ಟಿದವು. ಪಾರ್ವಂದಿನಿಗೆ ಅಷ್ಟ ದಿಕ್ಪಾಲಕರು ಮೊದಲಾದ ನರರುಗಳು ಪುಟ್ಟಿದರು. ಇಂತೀ ಸತಿಯರುಗಳ ಗರ್ಭದಲ್ಲಿ ಜನಿಸಿದ ಆನೆ, ತಗರು, ಕೋಣ, ನರ, ನೆಗಳು, ಎರಳಖೆ, ವಾಜಿ, ಪಶು, ನಂದಿ ಇವು ದಿಕ್ಪಾಲಕರ ವಾಹನಗಳೆಂದು ಅರಿವುದು. ಇಂತೀ ಹದಿಮೂರು ಸತಿಯರ ರಜಸಿಲೆಯ ಶ್ರೋಣಿತದಿಂ ಸಹಸ್ರವೇದಿ ಮೊದಲಾದ ಅಷ್ಟಪಾಷಾಣಂಗಳು ಪುಟ್ಟಿದವು. ಆ ಸತಿಯರುಗಳ  ಮಲಮೂತ್ರಂಗಳಿಂದ ಸಿದ್ಧರಸ, ಪರುಷರಸ, ನಿರ್ಮಲೋದಕ ಇಂತಿವು ಮೊದಲಾದ ರಸಂಗಳು ಪುಟ್ಟಿದವು. ಆ ಸತಿಯರ ಬೆವರು ಬಿನರಕಗಳಿಂದ ಕಾಳರಾಶಿ, ಕರುಣರಾಶಿ, ಭೂತರಾಶಿ ಇಂತಿವು ಮೊದಲಾದ ಪಿಶಾಚಗ್ರಹ ಜಾತಿಗಳು ಪುಟ್ಟಿದವು. ಇಂತ ಈ ಮನ ಮಾಯ ಷಡುದೇವತೆಗಳು ಮೊದಲಾದ ಸಮಸ್ತ ದೇಹಿಗಳೆಲ್ಲರು ಉತ್ಪತ್ಯವಾದಂಗಳ ಪ್ರಮಾಣವನಾರು ಬಲ್ಲರಯ್ಯಾ ಎಂದಡೆ: ನಮ್ಮ ಷಡುಸ್ಥಲದಲ್ಲಿ ನಿಂದ ಭಕ್ತ ಮಾಹೇಶ್ವರರು ಬಲ್ಲರಾಗಿ, ಆದಿ ಅನಾದಿಯಿಂದತ್ತತ್ತಣ ಪ್ರಮಥರು ಬಲ್ಲರಾಗಿ ಕೂಡಲ ಚೆನ್ನಸಂಗಮದೇವಯ್ಯ, ಅಂತವರ ಶ್ರೀಪಾದಕ್ಕೆ ನಮೋ ನಮೋ ಎಂಬೆನು. [41]ಕಸ್ಯಪ ಬ್ರಹ್ಮನ[42] ಸತಿ ಕೆಳದಂಡಿಯೆಂಬವಳ ಯೋನಿಯಟಳಗಿನಿಂದ ಹೊರವಂಟು ಬಂದಷ್ಟ ಕುಲಪರ್ವತಂಗಳು ತಾವು ಪ್ರಸಾದರಸವಜ್ರ ಮಹಾಮೇರುವಿಗೆಯೂ, [43]ಕೈಲಾಸಕ್ಕೆಯೂ[44] ಗರ್ವ ಮೇರುವಿಗೆಯೂ ಆವಾವ ದಿಕ್ಕಾಗಿಹವೆಂದಡೆ ಕುಬೇರನಲ್ಲಿ ಮೇರುಪರ್ವತ ನಿಂದಿಹುದು. ಇದರ ಈಶಾನ್ಯದಲ್ಲಿ ಮಾನುಷ್ಯಪರ್ವತ ನಿಂದಿಹುದು. ಇಂದ್ರನಲ್ಲಿ ಬೆಳ್ಳಿಯ ಪರ್ವತ ನಿಂದಿಹುದು. ಅಗ್ನಿಯಲ್ಲಿ ನೀಲಪರ್ವತ ನಿಂದಿಹುದು. ಯಮನಲ್ಲಿ ಹಿಮಪರ್ವತ ನಿಂದಿಹುದು. ನೈರುತ್ಯನಲ್ಲಿ ಕೀಲಪರ್ವತ ನಿಂದಿಹುದು. ವರುಣನಲ್ಲಿ ಮಂದರ ಪರ್ವತ ನಿಂದಿಹುದು. ವಾಯವ್ಯನಲ್ಲಿ ಅಸಿತ ಪರ್ವತ ನಿಂದಿಹುದು. ಇಂತು ನಿಂದಂಥ ಪರ್ವತಂಗಳು ಗರ್ವ ಮೇರುವೆಯ ಹೊರಂಗವ ಸೋಂಕಿಹವು. ಆ ಅಷ್ಟ ಕುಲಪರ್ವತಂಗಳ ಸ್ಥೂಲಾಯಮಾನವು ಎಷ್ಟುಂಟು ಎಂದಡೆ: ಮೇರು ಪರ್ವತ ನೂರುಲಕ್ಷ ಯೋಜನ ಪ್ರಮಾಣುವಾಗಿ[45]ಹುದು. ಮನುಷ್ಯ ಪರ್ವತ ತೊಂಭತ್ತು ಲಕ್ಷ ಯೋಜನ ಪ್ರಮಾಣವಾಗಿ[46]ಹುದು. ಮನುಷ್ಯ ಪರ್ವತ ತೊಂಭತ್ತು ಲಕ್ಷ ಯೋಜನ ಪ್ರಮಾಣವಾಗಿ[47]ಹುದು. ರಜತ ಪರ್ವತ ಎಂಭತ್ತು ಲಕ್ಷ ಯೋಜನ ಪ್ರಮಾಣವಾಗಿ[48]ಹುದು. ನೀಲಪರ್ವತ ಎಪ್ಪತ್ತು ಲಕ್ಷ ಯೋಜನ ಪ್ರಮಾಣವಾಗಿ[49]ಹುದು. ಹಿಮಪರ್ವತ ಅರುವತ್ತುಲಕ್ಷ ಯೋಜನ ಪ್ರಮಾಣವಾಗಿ[50]ಹುದು. ಕೀಲಪರ್ವತ ಐವತ್ತು ಲಕ್ಷ ಯೋಜನ ಪ್ರಮಾಣವಾಗಿ[51]ಹುದು. ಕೀಲಪರ್ವತ ಐವತ್ತು ಲಕ್ಷ ಯೋಜನ ಪ್ರಮಾಣವಾಗಿ[52]ಹುದು ಮಂದರ ಪರ್ವತ ನಲವತ್ತು ಲಕ್ಷ ಯೋಜನ ಪ್ರಮಾಣವಾಗಿ[53]ಹುದು. ಅಸಿತ ಪರ್ವತ ಮೂವತ್ತು ಲಕ್ಷ ಯೋಜನ ಪ್ರಮಾಣವಾಗಿ[54]ಹುದು. ಆ ಎಂಟು ಪರ್ವತಂಗಳು ಜಲನಿಧಿಯೆನಿಸಿಕೊಂಬವು. ಪ್ರಸಾದರಸ ವಜ್ರ[55]ಮಹಾಮೇರು ಶಿಖರವೆನಿಸಿಕೊಂಬುದು. ಆ ಶಿಖರದ ಕೆಳಗಣ ಷಡುದೇವತೆಗಳ ಮೇರು ಮೂಲಹಂಕಾರಶಿಖರಯೆಂಬ ದ್ರವ್ಯದ ಕಳಸವೆನಿಸಿಕೊಂಬುದು. ಈ ನವ ಶೈಲಂಗಳು ಕೈಲಾಸವೆನಿಸಿಕೊಂಬವು. ಅದೇನು ಕಾರಣವೆಂದಡೆ: ರುದ್ರ, ಈಶ್ವರ, ಸದಾಶಿವ, ಪರಮೇಶ್ವರ ಈ ನಾಲ್ವರು ಜಡರುದ್ರರು ಮೊದಲಾದ ಎರಡೆಂಭತ್ತೇಳು ಕೋಟಿ ಜಡರುದ್ರರೆಲ್ಲರು ಪುರಾತನರ ವಚನ ಪ್ರಮಾಣುವ ತಿಳಿಯಲರಿದುದವರುಗಳ ಬಾಯಿಂದ ಶಿವ ನೀನೆನೆಸಿಕೊಂಬಂತೆ ನವಶೈಲಂಗಳು ಕುರುಡಗುದುರಿಗೆ ಕರಡದ ಹುಲ್ಲು ಕೈಲಾಸವಾಗಿಪ್ಪಂತೆ ಮಹಾಜ್ಞಾನದೃಷ್ಟಿಯಿಲ್ಲದ ಕಣ್ಗು ರುಡರಿಕೆ ಇವೆ ಕೈಲಾಸವಾಗಿಪ್ಪವು. ಮೂಲಾಹಂಕಾರ ಶಿಶರಿಯೆಂಬ ಶಿವಲೋಕದೊಳಗಣ ಚತುರ್ವಿದ ಪದಂಗಳಲ್ಲಿ ತಮ್ಮ ಸುಖವ ತಾವರಿಯದೆ ಷಡುದೇವತೆಗಳು ಮುಖ್ಯವಾದ ಸರ್ವರುಗಳೆಲ್ಲರು ಬಳಲುತ್ತಿಪ್ಪರು, ನವ ಶೈಲಂಗಳೆಂಬ ಕೈಲಾಸಂಗಳಿಗೆಯೂ ಅವರೊಳಗಿರ್ದ ಮೂಲಜೀವನೆಂಬ ಪರಮೇಶ್ವರನಿಗೆಯೂ ಪ್ರಳಯವುಂಟು. ಈ ವರ್ಮವನರಿದ ಭಕ್ತ ಮಾಹೇಶ್ವರರುಗಳು ಸಪ್ತಸಮುದ್ರಂಗಳ ತಿಟ್ಟುಗಳಲ್ಲಿ ನಿಂದು ಪರಶಿವ ತತ್ವದ ಸುಖರಸದೊಳಗೆ ತೃಪ್ತಿ[56] ವಡೆದು ಮಹಾ ಮೇರುಮಂದಿರಕ್ಕೆ ಹೋಗಿ ನಿಶ್ಯಬ್ಧದಿಂ ನಿತ್ಯರಾಗಿರುತ್ತಿಹರು. ಇಂತೆಂಬ ಪುರಾತನರಗ[57]ಣಿತ ವಚನಂಗಳಿಗೆ[58]ಸಾಕ್ಷಿ.


[1] + ಆಧಿ (ಬ)

[2] ದಿ (ಬ)

[3] ಭುವನಂ ಪೃಥ್ವಿಯೊಳಗಿಲ್ಲ, ಆಕಾಶ ದೊಳಗಿಲ್ಲ ಈ ಭುವನಂಗಳಲ್ಲಿ (ಬ)

[4] ಭುವನಂ ಪೃಥ್ವಿಯೊಳಗಿಲ್ಲ, ಆಕಾಶ ದೊಳಗಿಲ್ಲ ಈ ಭುವನಂಗಳಲ್ಲಿ (ಬ)

[5] ನೋಡಾ ನಮ್ಮ ಶರಣ ಗುಹೇಶ್ವರ (ಬ)

[6] ನೋಡಾ ನಮ್ಮ ಶರಣ ಗುಹೇಶ್ವರ (ಬ)

[7] + ಸಮುದ್ರಂಗಳನು (ಬ)

[8] ತ್ತೈದು (ಬ)

[9] ತ್ತೈದು (ಬ)

[10] x (ಬ)

[11] x (ಬ)

[12] + ನಂದೀಶ್ವರದೇವರು (ಬ)

[13] x (ಬ)

[14] x (ಬ)

[15] x (ಬ)

[16] x (ಬ)

[17] ಪ (ಬ)

[18] ಐದು (ಬ)

[19] ಐದು (ಬ)

[20] ಕು (ಬ)

[21] x (ಬ)

[22] x (ಬ)

[23] ಗು (ಬ)

[24] ಗು (ಬ)

[25] ಸಾವರು (ಬ)

[26] ಸಾವರು (ಬ)

[27] ತಾ (ಬ)

[28] ರು (ಬ)

[29] ಎಷ್ಟು (೨೫೭)

[30] ಎಷ್ಟು (೨೫೭)

[31] ಋಷಿ (ಅ)

[32] ಋಷಿ (ಅ)

[33] ವಾತ್ಮ (ಬ)

[34] ದುದೆಲ್ಲಾ ನಿರಾ ಳದ ಅನಿಮಿತಂ (ಬ)

[35] ದುದೆಲ್ಲಾ ನಿರಾ ಳದ ಅನಿಮಿತಂ (ಬ)

[36] ಗೆ ಬಂದ (ಬ)

[37] x (ಬ)

[38] x (ಬ)

[39] ಕೋ ಪ (ಅ)

[40] ಕೋ ಪ (ಅ)

[41] + ಆ (ಬ)

[42] x (ಱ)

[43] x (ಬ)

[44] x (ಬ)

[45] + ನಿಂದಿ (ಬ)

[46] + ನಿಂದಿ (ಬ )

[47] + ನಿಂದಿ (ಬ )

[48] + ನಿಂದಿ (ಬ )

[49] + ನಿಂದಿ (ಬ )

[50] + ನಿಂದಿ (ಬ )

[51] + ನಿಂದಿ (ಬ )

[52] + ನಿಂದಿ (ಬ )

[53] + ನಿಂದಿ (ಬ )

[54] + ನಿಂದಿ (ಬ )

[55] + ದ (ಬ)

[56] ಷ್ಟಿ (ಬ)

[57] ಳ ವಚನ ರಸಾಮೃತಕ್ಕೆ (ಬ)

[58] ಳ ವಚನ ರಸಾಮೃತಕ್ಕೆ (ಬ)