೧೫೪

[1]ಜನನಕ್ಕೆ[2] ತಾಯಾಗಿ ಹೆತ್ತಳು ಮಾಯೆ.
ಮೋಹಕ್ಕೆ ಮ[3]ಗಳಾ[4]ಗಿ ಹುಟ್ಟಿದಳು ಮಾಯೇ.
ಕೂಟಕ್ಕೆ ಸ್ತ್ರೀಯಾಗಿ ಕೂಡಿದಳು ಮಾಯೆ.
ಆವಾವ ಪರಿಯಲ್ಲಿ ಕಾಡಿತ್ತು ಮಾಯೆ.
ಈ ಮಾಯೆಯ ಗೆಲುವಡೆ ಇನ್ನಾರಿಗಳವಲ್ಲ ನೀನೆ ಬಲ್ಲೆ
ಕೂಡಲಸಂಗಮದೇವಾ.    ||೧೬||

೧೫೫

ಆಕಾರ ಉಕಾರ ಮಕಾರಂಗಳು ಪ್ರಕೃತಿಯಲ್ಲಿ
ನಾದ ಬಿಂದು ಕಳೆಯಾದವು.
ಅಕಾರ ನಾದ, ಉಕಾರ ಬಿಂದು, ಮಕಾರ ಕಳೆ.
ಅಕಾರ ರುದ್ರ, ಉಕಾರ ಈಶ್ವರ, ಮಕಾರ ಸದಾಶಿವ.
ಅಕಾರ ಉಕಾರ ಮಕಾರಂಗಳಿಗೆ ನಾದ ಬಿಂದು ಕಳೆಯೇ ಆಧಾರ.
ನಾದ ಬಿಂದು ಕಳೆಗಳಿಗೆ ಪ್ರಕೃತಿಯೇ ಆಧಾರ.
ಆ ಪ್ರಾಣಕ್ಕೆ ಲಿಂಗವೇ ಆಧಾರ.
ಆ ಎಂಬಲ್ಲಿ ನಾದವಾಯಿತ್ತು.
ಉ ಎಂಬಲ್ಲಿ ನಾದ ಉಳಿದಿತ್ತು.
ಮ ಎಂಬಲ್ಲಿ ಬಿಂದು ಒಂದುಗೂಡಲು ಓಂಕಾರಶಕ್ತಿಯಾಗಿ ತೋರಿತ್ತು.
ಆ ಓಂಕಾರ ಶಕ್ತಿಯಲ್ಲಿ ನಕಾರ ಮಕಾರ ಶಿಕಾರ ವಕಾರ
ಯಕಾರಗಳೆಂಬ ಪಂಚಾಕ್ಷರಗಳುದಯಿಸಿದವು.
ನಕಾರವೆ ಬ್ರಹ್ಮ, ಮಕಾರವೆ ವಿಷ್ಣು, ಶಿಕಾರವೆ ರುದ್ರ,
ವಕಾರವೆ ಈಶ್ವರ, ಮಕಾರವೆ ಸದಾಶಿವ ಈ ಪಂಚ ಶಾಖೆಗಳ
ದೇವನ ನೆತ್ತಿಯಲ್ಲಿ ಆ ಓಂಕಾರ ಶಕ್ತಿ ಸ್ವರೂಪಿಯಾಗಿ ಕಾಣಿಸಿತ್ತು
ಉರಿಲಿಂಗಪೆದ್ದಿಪ್ರಿಯ ವಿಶ್ವೇಶ್ವರಾ.   ||೧೭||

೧೫೬

ಆನೊಮ್ಮೆ ಬೇಂಟೆಗೆ ಹೋಗಿ ಭಸ್ಮಕ್ಕಾಹುತಿಯನಿಕ್ಕಿಹೆನೆಂದು
ಸಾಸಿರದೇಳನೂರು ವರುಷಕ್ಕೆ ಒಬ್ಬ ರಾಜನ ಕೊಂದೆನು.
ಅವನ ಹೆಂಡತಿ ಐವತ್ತೆರಡು ಕಣ್ಣವಳು.
ಅವಳು ತನ್ನ ಹೂಮುಡಿಯ ಬಿಟ್ಟು ಅತ್ತಳು.
ಅವಳ ಬಾಯಲ್ಲಿ ಅಜಂ[5]ಗಳು[6] ಬಿದ್ದರು[7] ಅವಳ ಕಂಗಳಲ್ಲಿ ಧೂಮಕೇತು ಬಿದ್ದನು.
ಕೂಡಲಸಂಗಮದೇವರ ದೇವತ್ವ ಕೆಟ್ಟುದಿಲ್ಲ.   ||೧೮||

೧೫೭

ಮಹಾಘನಲಿಂಗದ ನಿಜ ಘ[8]ನವೆಂಬ ಚಿದ್ಭನಾತ್ಮಕ ಶರಣನ
ಲೀಲೆಯಿಂದ ಮಹಾಜ್ಯೋತಿ ಪುಟ್ಟಿತ್ತು.
ಆ ಜ್ಯೋತಿಯ ಬೆಳಕಿನಲ್ಲಿ ಅರಿವು ಮರವೆಂಬ
ಭೂತಾತ್ಮ ಮಹಾತ್ಮಂಗಳು ಪುಟ್ಟಿದವು.
ಆ ಆತ್ಮಂಗಳಿಂದ ಜ್ಞಾನಾತ್ಮ ಶುದ್ಧಾತ್ಮ ನಿರ್ಮಲಾತ್ಮ ಪರಮಾತ್ಮ
ಅಂತರಾತ್ಮ ಜೀವಾತ್ಮಂಗಳು ಹುಟ್ಟಿದವು.
ಆ ಜ್ಞಾನಾತ್ಮನಲ್ಲಿ ಮಹಾಭಾವ ಜ್ಞಾನಂಗಳು ಪುಟ್ಟಿ
ತ್ರಿಯಕ್ಷರವಾದವು. ಆ ತ್ರಿಯಕ್ಷರಂಗಳಲ್ಲಿ ಓಂಕಾರ ಪುಟ್ಟಿತ್ತು.
ಆ ಓಂಕಾರದಲ್ಲಿ ಪಂಚಾಕ್ಷರಂಗಳು ಪುಟ್ಟಿದವು.
ಆ ಪಂಚಾಕ್ಷರಂಗಳಲ್ಲಿ ಐವತ್ತೆರಡಕ್ಷರಂಗಳು ಪುಟ್ಟಿದವು.
ಇಂತೀ ಅಕ್ಷರಂಗಳೆಲ್ಲವು ಷಡಾತ್ಮರ ತೃಣವೆಂದಾತನಂಬಿಗರ ಚೌಡಯ್ಯ. ||೧೯||

೧೫೮

ಮಜ್ಜನಕ್ಕೆರದ[9]ಡೆ ಭೂತವಿಕಾರ.
ನಂದಿ ಭೃಂಗಿ ವೀರಭದ್ರಾದಿ ಗಣಂಗಳೆಲ್ಲರು
ಬ್ರಹ್ಮರಾಕ್ಷಸರು, ಪ್ರಮಥ ಗಣಂಗಳೆಲ್ಲಾ ಪ್ರೇತರು.
ಅರ್ಧನಾರೀಶ್ವರರೆಲ್ಲ ಚಿಕ್ಕಮಕ್ಕಳ ಮೇಲೆ ತಪ್ಪ [10]ಸಾಧಿಸಿ[11] ಕಾಡಿ ಉಂಬರು.
ಈ ನಾಲ್ಕು ಸ್ಥಲದೊಳಗಾದುವಲ್ಲ ಗುಹೇಶ್ವರ,
ನಿಮ್ಮ ಶರಣರುಗಳ ಪರಿಬೇರೆ         ||           ೨೦||

೧೫೯

ಉಮನಾಥರೊಂದುಕೋಟಿ, ಪಂಚವಕ್ತ್ರರೊಂದುಕೋಟಿ.
ನಂದಿವಾಹನರೊಂದುಕೋಟಿ, ಪಾರ್ವತೀನಾಥರೊಂದುಕೋಟಿ.
ಸದಾಶಿವರೊಂದುಕೋಟಿ, ಗಂಗೆಗೌರಿಯ ಪತಿಗಳೊಂದುಕೋಟಿ.
ಗಂಗೆವಾಳುಕ ಸಮಾರುದ್ರರಿವರೆಲ್ಲರೂ
ಕೂಡಲಸಂಗನ ಶರಣ ಸನ್ನಿಧಿಯವರಲ್ಲದೆ
ಸಮರಸವೇದ್ಯರೊಬ್ಬರೂ ಅಲ್ಲ.       ||೨೧||

೧೬೦

ಬ್ರಹ್ಮ ವಿಷ್ಣಲುಗಳ ಮಾಯೇ ತೊತ್ತಳದುಳಿವಂದು,
ರುದ್ರಗಣಂಗಳ ಮಾಯೆ [12]ಮರುಳುಮಾಡಿ ಕಾಡುವಂದು[13] ನೊಸಲಕಣ್ಣ ಪಂಚಮುಖದವರುಗಳಿಗೆ ಮಾಯೆ
ಅರ್ಧಾಂಗಿಯಾಗಿ ಕಾಡುವಂದು,
ಅಷ್ಟಾಶತ ಸಹಸ್ರ ಋಷಿಯರುಗಳ ಮಾಯೆ
ತಪೋಮದಲ್ಲಿ ಕೆಡಹುವಂದು,
ದೇವ ದಾನವ ಮಾನವರುಗಳ ಮಾಯೆ ಅಗಿದಗಿದು ತಿಂಬಂದು,
ನಾನು ಮಾಯಾ ಕೋಳಾಹಳನಾಗಿರ್ದೆನು ಕಾಣಾ ಗುಹೇಶ್ವರಾ. ||೨೨||

೧೬೧

[14]ಕಾಳಂಢರ[15]ಧರೆ ಅಂಬರ ವಾರಿಧಿ ಸಹಿತಾರೂ ಇಲ್ಲದಂದು,ಲ
ಪ್ರಮಥನೊಬ್ಬನೆ ಇರ್ದ ನೊಂದನಂತಕಾಲ.
ನಿರವಯ ನಿರ್ಮಾಯನಾಗಿರ್ದನೊಂದು ಕೋಟ್ಯಾನುಕೋಟಿ ವರುಷ.
ಅಲ್ಲಿ ಅನಾಗತವುಂಟು.
ಮನವು ಮಹವನೊಕ್ಕಾಡಿ, ತತ್ತಲೆವಾಗಿ
ಮತ್ತಲ್ಲಿಯೆ ಬೆರಸಿ ಬಯಲು ಬೆಸಲಾಯಿತ್ತು.
ಪ್ರಕೃತಿ ಪುರುಷರು ಮೊದಲಾದ ನರರು ಸುರರು
ಚೌರಾಸಿ ಲಕ್ಷ ಜೀವರಾಶಿಗಳು ಪುಟ್ಟಿದವಯ್ಯಾ.
ಇಂತಿವೆಲ್ಲವು ಕೂಡಲಚೆನ್ನಸಂಗಯ್ಯ, ನಮ್ಮ ಬಸವಣ ನೆನದಡೆ. ||೨೩||

೧೬೨

ಎಂಬತ್ತುನಾಲ್ಕು ಒಂಟೆ ಮೂಱುತತ್ತಿಯನಿಕ್ಕಿತ್ತಕಂಡೆ.
ಆನೆಯಾಡ ಹೋದಲ್ಲಿ ಒಂದು ಚಿಕ್ಕಾಡ ನುಂಗಿತ್ತ ಕಂಡೆ.
ನಾರಿಯಾಡ ಹೋದಲ್ಲಿ ಒಂದು ಚಂದ್ರಮತಿಯ ಕಂಡೆ.
ಪೃಥ್ವೀಮಂಡಲವನೊಂದು ನೊಣ ನುಂಗಿತ್ತ ಕಂಡೆ.
ಗುಹೇಶ್ವರನೆಂಬ ಲಿಂಗವ ಕಂಡವರುಳ್ಳಡೆ ಹೇಳಿರೆ.      ||೨೪||

ಇಂತಪ್ಪ ಗುಹೇಶ್ವರ ಲಿಂಗದ ಶರಣರುಗಳ ಲೀಲೆಯಿಂದ ಹುಟ್ಟಿದ ಮನಮಾಯೆ ಷಡುದೇವರುಗಳೆಂಬ ಅಷ್ಟಾತ್ಮರುಗಳಿಗೆ ಅಷ್ಟತನು. ಆವಾವು ಎಂದೊಡೆ: ಬ್ರಹ್ಮಂಗೆ ಸ್ಥೂಲತನು, ವಿಷ್ಣುವಿಂಗೆ ಸೂಕ್ಷ್ಮತನು, ರುದ್ರಂಗೆ ಕಾರಣತನು, ಈಶ್ವರಂಗೆ ನಿರ್ಮಲತನು, ಸದಾಶಿವಂಗೆ ಶುದ್ಧತನು, ಪರಮೇಶ್ವರಂಗೆ ಚಿದ್ರೂಪತನು, ಮಾಯಿಗೆ ಚಿನ್ಮಯತನು, ಮನಕ್ಕೆ [16]ಆನಂದ[17] ತನು, ಇಂತಹ ಅಷ್ಟ ತನುವನುಇಳ್ಳ ಅಷ್ಟಾತ್ಮರುಗಳಿಗೆ[18] ಅಂತ[19] ರಂಗದ ಅಷ್ಟ ಮದಂಗಳಾವುವಯ್ಯಾ ಎಂದಡೆ: ತೃಣೀಕೃತ ವರ್ತಿನಿ, ಕ್ರೋಧಿನಿ, ಮೋಹಿನಿ, ಅತಿಚಾರಿಣಿ, ಗಂಧಚಾರಿಣಿ, ವಾಸಿನಿ ಇಂತಹ ಅಂತರಂಗದ ಅಷ್ಟಮದಂಗಳನುಲ್ಳ ಅಷ್ಟಾತ್ಮರುಗಳಿಗೆ ಬಹಿರಂಗದಷ್ಟಮದಂಗಳಾವುವಯ್ಯಾ ಎಂದಡೆ: ಕುಲ ಮದ, ಛಲ ಮದ, ಯೌವನ ಮದ, ವಿದ್ಯಾ ಮದ, ಧನಮದ, ರೂಪ ಮದ, ರಾಜ್ಯ ಮದ, ತಪ ಮದ ಇಂತಹ ಬಹಿರಂಗದಷ್ಟಮದಂಗಳ ಅಷ್ಟಾತ್ಮರುಗಳಿಗೆ ಅಷ್ಟಹಂಕಾರಗಳಾವುವಯ್ಯಾ ಎಂದಡೆ: ಬ್ರಹ್ಮಂಗೆ ರಾಜಸಹಂಕಾರ, ವಿಷ್ಣುವಿಂಗೆ ಸಾತ್ವಿಕಹಂಕಾರ, ರುದ್ರಂಗೆ ತಾಮಸಹಂಕಾರ, ಈಶ್ವರಂಗೆ ತೂರ್ಯಹಂಕಾರ, ಸದಾಶಿವಂಗೆ ತೀತಾಹಂಕಾರ, ಪರಮೇಶ್ವರಂಗೆ ಅತೀತಾಹಂಕಾರ, ಮಾಯಿಗೆ ಆದಿಯಹಂಕಾರ, ಮನಕ್ಕೆ ಅನಾದಿಯಹಂಕಾರ, ಇಂತಿಹ ಅಷ್ಟಹಂಕಾರಂಗಳೆ ಅಷ್ಟಾತ್ಮರುಗಳಿಗೆ ಆಶ್ರಯವಾಗಿ ಪ್ರಸಾದರಸ ವಜ್ರದ ಮಹಾಮೇರುವೆಯ ಪ್ರವೇಷ್ಟಿಸಿಕೊಂಡು ಬೇರೆ ಒಂದು ಬೆಟ್ಟವಾಗಿ ಹದಿನೆಂಟು ಜಂಘೆಯಷ್ಟಂ ಬಿಟ್ಟು ತೊಲಗಿನಿಂದವು . ಇಂತು ತೊಲಗಿನಿಂದ ಬೆಟ್ಟಕ್ಕೆ ಅಷ್ಟ ಆತ್ಮರುಗಳಂತರಂಗದಷ್ಟಮದಂಗಳೆ ದಿಕ್ಕರಿಗಳಾದವು. ಆ ದಿಕ್ಕರಿಗಳೆ ಅಷ್ಟಹಂಕಾರಂಗಳೆಂಬ ಪರ್ವತದ ಎಂಟು ದಿಕ್ಕಿನಡಿಗೆಯೂ ಆದಿಯಾಗಿ ನಿಂದವು. ಇಂತು ನಿಂದ ದಿಕ್ಕರಿಗಳಿಗಷ್ಟಾತ್ಮರುಗಳ ಆಣವ ಮಲ, ಮಾಯ ಮಲ, ಕಾರ್ಮಿಕ ಮಲ, ಸಂಚಿತ ಪ್ರಾರಬ್ಧ ಆಗಾಮಿ ಮಚ್ಚರವೆಂಬ ಸರ್ಪಸ್ನೇಹ ಕೂರ್ಮವೆಂಬ ಈ ಎಂಠು ಆದಿಆಧಾರವೆಂಬ ಮನಮಾಯೆಗಳ [20]ಸಮರಸ[21]ದಿಂದಾದಿಯಾಗಿ ನಿಂದವು. ನಿಂದಬಳಿಕ ಅಷ್ಟಾಹಂಕಾರವೆಂಬ ಬೆಟ್ಟದ ಮೇ [22]ಲಕ್ಕೆ[23] ಬಹಿರಂಗದಷ್ಟಮದಂಗಳೆ ಪಸರಿಸಿ ನೆಲಗಟ್ಟಾದವು. ಆದ ಮತ್ತೆ ಗರ್ವಮೇರು ಪ್ರಸಾದ ರಸವಜ್ರದ ಮಹಾಮೇರುವಿನ ಕೆಳಗಣ ಜಂಬುದ್ವೀಪವ ಸೋಂಕಿ ಎಂಬತ್ತುಸಾವಿರ ಯೋಜನ ಪ್ರಮಾಣಿನಗಲವಾಗಿ ನಿಂದಿಹುದು. ಅದರ ಸ್ಥೂಲಾಯಮಾನವು ಆ ವಜ್ರ ಕೈಲಾಸದ ಚಿನ್ನಕಂದಿ ಮೂರ್ತಿಗೆ ಯಿದಿರ್ದಮರುಳ ಕೈಗಳ ಮಂಟಪವೆಂಬ ಹಜಾರ ಚಾವಡಿ. ಹದಿನೆಂಟುಮಾರು ಮೇಲದೆಯೆಂಬಂತೆ ತಾನು ಕೆಳಗೆ ನಿಂದಿಹುದು. ಇಂತು ನಿಂದ ಅನಿತ್ಯದ ಮೇರುವನೆ ಕೈಲಾಸವ ಮಾಡಿಕೊಂಡು ಅದರ ಮೇಲೆ ಮನ ಮಾಯೆ ಷಡು ದೇವತೆಗಳು ಎರಡೆಂಬತ್ತೇಳುಕೋಟಿ ಜಡಪ್ರಮಥರು, ಅಂಗಾಲ ಕಣ್ಣವರು, ಮೈಯೆಲ್ಲಾ ಕಣ್ಣವರು ನಂದಿವಾಹನ ರುದ್ರರು. ಇಂತಿವರು ಮುಖ್ಯವಾದ ಮನು ಮುನಿ ದೇವ ದಾನ ಮಾನವರೆಲ್ಲರು ತಲೆ ಬಾಲಗೆಡುತ್ತ ಅಳಲುತ್ತ ಇರುತ್ತಿಹರು. ಇಂತಪ್ಪ ಜಡಲೋಕದವರುಗಳ ನೇ[24]ತ್ತಿಹರು. ತಿಗಳದ ಷಡುಸ್ಥಲದ ಭಕ್ತ ಮಾಹೇಶ್ವರಗೆ ಈ ಜಡದ ಕೈಲಾಸವ ಮೀರಿ ಮಹಾಲಿಂಗದ ನಿಜ ಸಮಾಧಿಯೆಂಬ ನಿಜಶರಣ ಬಸವಣ್ಣನ ನಿಲವೆನಿಸುವ ವಜ್ರದ ಮಹಾಮೇರುಮಂದಿರಕ್ಕೆ ತಮ್ಮ ಲೀಲೆಯಿಂದ ಹೋಗುತ್ತ ಬರುತ್ತಿಪ್ಪರಲ್ಲದೆ ಮಿಕ್ಕಿನ ವೇದಾಗಮದ ಮೇಲೆ ನಡವ ಷಡುದೇವತೆಗಳಿಗೆಯು ಷಡುಸಮಯದವರುಗಳಿಗೆಯು ಅಳವಡರು. ಇಂತೆಂಬ ಪುರಾತನರಗಣಿತ ವಚನರಂಸಂಗಳಿಗೆ ಸಾಕ್ಷಿ.

೧೬೩

ಕಾಯವೆಂಬ ಕದಳಿಯನಾರೂ ಗೆಲಬಲ್ಲವರಿಲ್ಲಯ್ಯ.
ಸಂಸಾರವೆಂಬ ಸಪ್ತಸಮುದ್ರಂಗಳು ಬಳಸಿಪ್ಪವು.
ಭವವೆಂಬ ಅರಣ್ಯದೊಳು ಜೀವನೆಂಬ ಮೃಗ ತಿರುಗುತ್ತಿಪ್ಪುದು.
ಪಂಚೇಂದ್ರಿಯಂಗಳೆಂಬ ವಿಷ[25]ದ ಮಳೆ ಸುರಿಯುತ್ತಿಪ್ಪುದು.
ಕೋಪವೆಂಬ ಪೆರ್ಬುಲಿ ಮೊರೆವುತ್ತಿಪ್ಪುದು.
ಅಷ್ಟಮದಗಳೆಂಬ ಮದಗಜಂಗಳು ಬೀದಿವರೆವುತ್ತಿಪ್ಪುವು.
ಕಾಮವೆಂಬ ಮಾರಂಬಿನ ಸೋನೆ ಕರೆವುತ್ತಿಪ್ಪುದು.
ಮಚ್ಚರವೆಂಬ ಮಹಾಸರ್ಪಂಗಳಲು ಕಿಡಿಯನುಗುಳುತ್ತಿಪ್ಪವು.
ಆಸೆಯೆಂಬ ಪಾಪಿಯು ಕೂಸಹಿಸಿದುತಿನ್ನುತ್ತಿಪ್ಪುದು.
ತಾಪತ್ರಯವೆಂಬ ಕೆಂಡದಮಳೆ, ಅಡಿಯಿಡಬಾರದು.
ಅಹಂಕಾರಗಳೆಂಬ ಗಿರಿಗಳಡ್ಡಬಿದ್ದಿಪ್ಪುವು.
ಪಂಚಭೂತಂಗಳೆಂಬ ಭೂತಪ್ರೇತದ ಭಯ, ದಿಟ್ಟಿಸಿ ನೋಡಬಾರದು.
ಮಾಯೆಯೆಂಬ ರಕ್ಕಸಿ ಹಸಿದು ಹರಿಯುತ್ತಿಪ್ಪಳು
ವಿಷಯವೆಂಬ ಕೂಪವ ಬಳಸಬಾರದು.
ಮೋಹವೆಂಬ ಖಂಡಾಯುಧವ ನೋಡಲೆಚ್ಚಬಾರದು.
ಇಂತಪ್ಪ ಕದಳಿಯ ಹೊಕ್ಕು ಹೊಣಚಲರಿಯದೆ,
ಆದಿದೇವತೆಗಳು ಮೊದಲಾದ ಮನುಮುನಿ
ದೇವದಾನ ಮಾನವಾದಿಗಳೆಲ್ಲರು
ಮತಿಗೆಟ್ಟು ಮರುಳಾಗಿ ಹರೆಸಾರಿ ಓಡಿದರು.
ಅಂಗಾಲ ಕಣ್ಣವರು, ಮೈಯೆಲ್ಲ ಕಣ್ಣವರು ತಲೆಬಾಲಗೆಟ್ಟರು.
ನಾನೀ ಕದಳಿಯ ಹೊಕ್ಕು ಮುಳ್ಳು ಮುಸಿ ಮುಟ್ಟದೆ
ಹೊಯ್ದಾಡಿ ಕದಳಿವರಿದು ಗೆಲಿದುತ್ತರಿಸಿ
ಗುಹೇಶ್ವರಲಿಂಗದ ನಿಜ ಸಮಾಧಿಯಲ್ಲಿ
ಪರವಶನಾಗಿ ನಿರಾಳಕ್ಕೆ ನಿರಾಳನಾಗಿರ್ದೆನಯ್ಯಾ       ||೨೫||

೧೬೪

ಅಂಬರದೊಳಗೊಂದಡವಿ ಹುಟ್ಟಿತ್ತು.
ಅಡವಿಯೊಳಗೊಬ್ಬ ವ್ಯಾಧನೈದಾನೆ.
ಆ ವ್ಯಾಧನ ಕೈಯಲ್ಲಿ ಸಿಲಿಕಿತೊಂದು ಮೃಗವು.
ಆ ಮೃಗವ ಕೊಂದಲ್ಲದೆ ವ್ಯಾಧಸಾಯನು.
ಅರಿವು ಬರಿದುಂಟೆ ಗುಹೇಶ್ವರ.        ||೨೬||

ಅಂಬರವೆಂ[26]ಬ ಚಿದ್ಘನಾತ್ಮಕ ಶರಣನಿಂದುದಯಿಸಿದ ವಜ್ರದ ಮಹಾಮೇರುಮಂದಿರದ ಕೆಳಗಣ ಗರ್ವ ಮೇರು ಭವವೆಂಬಡವಿಯನು, ಷಡಾತ್ಮರೆಂಬ ಮೃಗಂಗಳನು ಮನವೆಂಬ ಬೇಂಟೆಕಾರನು ಒಳಕೊಂಡು ಅಂತರಂಗದ ಮದಂಗಳ[27] ನಡಿಗೆ ಹಾಕಿ[28]ಕೊಂಡು ಬಹಿರಂಗದ ಮದಂಗಳಮೇಲೆ ಕೌಸಿಕೊಂಡು ಅದ್ಭುತವಾಗಿ ಅಡ್ಡಬಿದ್ದಿರಲು, ಅದರಮೇಲಿಹ ಅನಂತಕೋಟಿ ರುದ್ರಾದಿಗಳಿಗೆಯೂ, ಅನಂತಕೋಟಿ ಬ್ರಹ್ಮವಿಷ್ಣುಗಳಿಗೆಯೂ, ಮೂಲ ಜೀವನೆಂಬ ಅತೀತನೆ ಪತಿಯಾಗಿನಿಂದು ಮತ್ತೊಂದು ಜಡಬುದ್ಧಿಯ ಮನದಲ್ಲಿ ಯೋಚಿಸಿ ಮಾಯಕದಿಂ ತನಗಿಲ್ಲದಾಸೆಯನುಂಟುಮಾಡಿಕೊಂಡನು. ಅದೇನು ಎಂದಡೆ: ತಾ ಮೊದಲಾದ ಸಮಸ್ತರಿಗೆಲ್ಲಕ್ಕೂ ಪ್ರಸಾದ ರಸವಜ್ರ ಕೈಲಾಸಕ್ಕೆ ಕರ್ತೃವಾದ, ಸ್ವಯಂಭುವಾದಿರುದ್ರನೆ ಅಖಂಡಿತ ಲಿಂಗವಾಗಿ, ತಮ್ಮೆಲ್ಲರನು ಅಖಂಡಿತ ಗುಣದಿಂ ಸಲಹುವಂಥಾ ವಸ್ತುವಹುದೆಂದು ಘಟ್ಟಿಯಾಗಿ ನಿಶ್ಚೈಸಲರಿಯದೆ, ಜೀವಾತ್ಮನೆಂಬ [29]ಯೋಮಾತೀತನ[30] ಮನ ಮಾಯೆ ಕರ್ಮ ಈ ತ್ರಿವಿಧಯುಕ್ತವಾಗಿ ತನ್ನಿಂದಾದ ಪಂಚ ಸಾದಾಖ್ಯರುಗಳು ಮುಖ್ಯವಾದ ಅನಂತರುಗಳನು ಹೊರವೆನೆಂಬೆ. ಖಂಡಿತ ವಿವೇಕ ಬುದ್ಧಿಯಿಂ, ಖಂಡಿತ ವಿವೇಕ ವೃಕ್ಷವೆನಿಸುವ ಮಾಮರ ಹುಟ್ಟಿತ್ತು. ಹುಟ್ಟಲ್ಕಾ ಮಾಮರದಮೇಲೆ ಅಜ್ಞಾನವೆಂಬ ಮಂಜು ಕವಿಯಿತ್ತು. ಕವಿದ ಮತ್ತಾ ಮಾಮರವೆಂಬ ವಿವೇಕ ಜ್ಞಾನಾಜ್ಞಾನವಿಡಿದು ಸ್ವಯಂಜ್ಯೋತಿ ರುದ್ರನನರಿದೆಹೆನೆಂದು ಧ್ಯಾನಿಸಿತ್ತು. ಅಂಥಾ ಉದ್ಯೋಗ ದಿ[31]ರಿವಿನಿಂದ ಚತುರ್ವಿಧ, ಪದಂಗಳಲು ಹುಟ್ಟಿಬೆಳೆದವು. ಈ ಮರಿಯಾದಿಯಲ್ಲಿ ಹುಟ್ಟಿಬೆಳೆದ ಪದಂಗಳೆಂಬ ಮರದ ಶಾಖೆ ಪದಂಗಳೆಂಬ ಮಾಮರದ ಶಾಖೆಗಳ ಒಳ ಹೊರಗೆ ಹೂವು ಮಿಡಿ ಫಲಂಗಳು ಅಮರ್ದು ಬೆಳೆದು ಜ್ಞಾನಾಜ್ಞಾನವೆಂಬ ಮಂಜಿನ ರಸವನುಂಡು ಷಡುದೇವತೆಗಳು ಮುಖ್ಯವಾದ ಸಕಲರೆಲ್ಲರೂ ಪ್ರಳಯವಾಗಿ ಹೋಹನ್ನಕ್ಕರ ಉದರದಿಪ್ಪುದಂ ಮಹಾಪ್ರಸಾದ ಕೈಲಾಸಪತಿಕಂಡು; ಇಂತಪ್ಪ ಫಲಪ್ರಾಪ್ತಿಗಳಿಂದ ಭವಂಗಳು ಬಂದು ಕಾಡುತ್ತಿಹವೆಂದು ನಿಜವಾಗಲರಿದು ಈ ಫಲಪದಂಗಳು ನಮಗೂ ನಮ್ಮ ಅನಂತಾನಂತಕೋಟಿ ಅಮರ ಗಣಂಗಳಿಗೆಯೂ ಯೋಗ್ಯವಲ್ಲವೆಂದು ನಿರಾಕರಿಸುತ್ತ ಪುರಾತನರ ಷಡುಸ್ಥಲದನು ಭಾವ ರಸವೆಂಬ ಪರಮಾಮೃತವೆ ಫಲಪದವೆನುತ್ತ ಹಜಾರದಿಂ ಬಿಜಯಂಗೈದು ನಿರಾಕಾರದ ಶರೀರವನುಳ್ಳ ಸಮಸ್ತಗಣಂಗಳು ಸಹಿತ ಸಾವಯ ನಿರವಯ ಸ್ವ[32]ರೂಪವನಪ್ಪಿ ಅಖಂಡಿತನಾಗಿ ಮೂರ್ತಿಗೊಂಡು ಮಾಯಿಕದ ಚತುರ್ದಶ ಲೋಕಂಗಳೊಳಗಾರಾಯಿತ್ತಾದರೂವಾಗಲಿ. ಜಂಗಮಕ್ಕೆ ದಾಸೋಹ ಭಾವದಿಂ ಹೊನ್ನು ಹೆಣ್ಣು ಮಣ್ಣೆಂಬಲುವ ಇಚ್ಛೆಯಾದಡೆ ಹಿಡಿದು ಭಕ್ತಿಯ ಮಾಡುತ್ತ ನಿತ್ಯತ್ವದಿಂದಿರುತ್ತ ಮತ್ತೆ ವೇದಾಗಮಂಗಳ ಶಾಸ್ತ್ರ ಪುರಾಣಂಗಳ ಈ ನಾಲ್ಕು ತೆರದ ಮಾತುಗಳೆಲ್ಲವು ರುದ್ರ ವಿಷ್ಣು ಬ್ರಹ್ಮ ಸರಸ್ವತಿ ಇಂತಿವರ ಬಾಯಲ್ಲಿ ಮನ ಮಾಯೆ ಕರ್ಮಂಗಳು ಹೊಕ್ಕು ನುಡಿಸಿದಡೆ ನುಡಿದು, ಅವರ ನಾಲಿಗೆಯಿಂದ ಹೊರವಂಟು ಬಂದ ಎಂಜಲಮಾತುಗಳೆಂದು ಅವ ಹಿಟ್ಟುಗುಟ್ಟಿ ನೂಂಕಿ ತೂರಿ ಕಳದು,  ಹಿಂದಣ ಅನಂತಕೋಟ್ಯಾನುಕೋಟಿ ಕಾಲದಲ್ಲಿ ಭಕ್ತಿ ಭೂಮಿಯಮೇಲೆ ಪ್ರತಿಷ್ಠೆ ಯ ಮಾಡಿದ ಪ್ರಮಥಗಣಂಗಳ ಮಹಾಷಡುಸ್ಥಲದ ಮಾರ್ಗದ ವಚನಂಗಳಿಂದ ಸುಜ್ಞಾನ ವಿವೇಕಿಗಳಾಗಿ ಅರಿದು, ಸತ್ಯ ಶುದ್ಧ ಕಾಯಕವಿಡಿದು, ಚರಶೇಷವ ರಂಗಕ್ಕೆ ಕೊಟ್ಟುಕೊಂಬ ಭಕ್ತ ಮಾಹೇಶ್ವರರನಲ್ಲದೆ ಒಪ್ಪೆನೆಂದು ಭಕ್ತಿಸಾಮ್ರಾಜ್ಯ ಸಂಪತ್ತನಾಳುತ್ತಿಲಿರುತ್ತಿರ್ದನಲು. ಇಂತೆಂಬ ಪುರಾತನರ ಗಣಿತ ವಚನ ರಸಂಗಳಿಗೆ ಸಾಕ್ಷಿ.

೧೬೫

ಮಾಮರದೊಳಗೊಂದು ಮಾಯದ ಮಂಜು ಕವಿದಡೆ,
ಹೂ ಮಿಡಿ ಫಲಂಗಳುದುರವಿನ್ನೆಂತೋ?
ಮಂಜಿನ ರಸವನುಂಡು ಫಲ ಅಮರ್ದು ಬೆಳದಡೆ
ಆ ಫಲವ ನಾನು ಮುಟ್ಟೆನು ಕಾಣಾ ಗುಹೇಶ್ವರ.           ||೨೭||

೧೬೬

ತಮ್ಮ ತಮ್ಮ ಮುಖದಲ್ಲಿ ಲಿಂಗವನೊಲಿಸಿದರು.
ಆರಾಧಿಸಿದರು, ಬೇಡಿತ್ತ ಪಡೆದರು
ಎಲ್ಲಾ ಲಿಂಗ ಭೋಗೋಪಭೋಗಿಗಳಾಗಿ ಭೋಗಿಸುವರಿ[33]ಲ್ಲಾ.
ಗಂಗೆವಾಳುಕರೆಲ್ಲಾ ವರಮುಖಿ[34]ಗಳಾಗಿ
ಮೂರ್ತಿಯಳಿದು ಹೋದರು ಗುಹೇಶ್ವರ.        ||೨೮||

೧೬೭

ನೀರ ನಡುವೆ ಒಂದು ಗಿಡ ಹುಟ್ಟಿತ್ತು.
ಆ ಗಿಡುವಿನೆಲೆಯ ಮೆಲ ಬಂದಿತ್ತು ಒಂದು ಕೋಡಗ.
ಆ ಕೋಡಗದ ಕೊಂಬಿನಲ್ಲಿ ಮೂಡಿತ್ತೊಂದು ಅದ್ಭುತ;
ಆ ಅದ್ಭುತವಳಿದಲ್ಲದೆ ಶರಣನಾಗಬಾರದು ಗುಹೇಶ್ವರ. ||೨೯||

೧೬೮

ಹೋಹಬಟ್ಟೆಯಲೊಂದು ಮಾಯವಿದ್ದುದ ಕಂಡೆ.
ಠಾಣಾಂತರ ಹೇಳಿತ್ತು;
ಅಲ್ಲಲ್ಲಿಗೆ ಹೇಳಿರೆ ಗುಹೇಶ್ವರನ
ಕರಣಂಗಳು ಕುತಾಪಿಗಳು[35]           ||೩೦||

೧೬೯

ವೇದವೆಂಬುದು ಮಾಯಿಕದ ಕೈಯ ವಿಕಾರದಲ್ಲಿ ಹುಟ್ಟಿತ್ತು.
ಆಗಮವೆಂಬುದು ಮಾಯಿಕದ ಬಾಯವಿಕಾರದಲ್ಲಿ ಹುಟ್ಟಿತ್ತು.
ಶಾಸ್ತ್ರವೆಂಬುದು ಮಾಯಿಕದ ದೇಹವಿಕಾರದಲ್ಲಿ ಹುಟ್ಟಿತ್ತು.
ಪುರಾಣವೆಂಬುದು ಮಾಯಿಕದ ಕಾಲವಿಕಾರದಲ್ಲಿ ಹುಟ್ಟಿತ್ತು.
ಇದು ಕಾರಣ ಇವ ತೂರಿ ಕಳದು
ಮಹಾಸ್ಥಲದಲ್ಲಿ ನಿಂದವರುಗಳನಲ್ಲದೆ
ಮಹಾಲಿಂಗ [36]ಕಲ್ಲೇಶ್ವರ ದೇವರುವಲ್ಲರು[37]    ||೩೧||

೧೭೦

ವೇದ ಶಾಸ್ತ್ರ ಪುರಾಣಂಗಳೆಂಬವು ಕೊಟ್ಟಣವ
ಕುಟ್ಟುವ ನುಚ್ಚು ತೌಡುಕಾಣಿ ಭೋ.
ಅವ ಕುಟ್ಟಲೇಕೆ ಕುದಿಸಲೇಕೆ?
ಅತ್ತಲಿತ್ತ ಹರಿವ ಮನದ ಶಿವನರಿಯಬಲ್ಲಡೆ,
ಬಿಟ್ಟ ಬರಿಯ ಬಯಲು ಚೆನ್ನಮಲ್ಲಿಕಾರ್ಜುನಾ. ||೩೨||


[1] ಜನಕ್ಕೆ ಜನನಿಯಾಗಿ (ಬ)

[2] ಜನಕ್ಕೆ ಜನನಿಯಾಗಿ (ಬ)

[3] ಗುವಾ (ಬ)

[4] ಗುವಾ (ಬ)

[5] x (ಬ)

[6] x (ಬ)

[7] x (ಬ)

[8] ಗಗ (೨೫೭)

[9] ವ (ಬ)

[10] ಹೊರಿಸಿ (ಬ)

[11] ಹೊರಿಸಿ (ಬ)

[12] ಮರುಳಾಡುವಂದು (ಅ)

[13] ಮರುಳಾಡುವಂದು (ಅ)

[14] ಕಾಳಾಂಬರ (ಅ)

[15] ಕಾಳಾಂಬರ (ಅ)

[16] ಅನಂತ (ಬ)

[17] ಅನಂತ (ಬ)

[18] ಬಹಿ (ಬ)

[19] ಬಹಿ (ಬ)

[20] ಸಾಹಸ (ಬ)

[21] ಸಾಹಸ (ಬ)

[22] ಲೆ (ಬ)

[23] ಲೆ (ಬ)

[24] ನ (ಬ)

[25] + ಯ (ಅ)

[26] + ದೆಂ (ಬ)

[27] ಕೆಳಗೆ ಹಾಸಿ (ಬ)

[28] ಕೆಳಗೆ ಹಾಸಿ (ಬ)

[29] ಉಪಮಾತೀತನ (ಬ)

[30] ಉಪಮಾತೀತನ (ಬ)

[31] ದ (ಬ)

[32] ನಿ (ಬ)

[33] ರ (ಬ)

[34] ಖ (ಬ)

[35] ಳಾದರು (ಬ)

[36] ಕಲಿದೇವರ ದೇವನೊಲ್ಲನು (ಬ)

[37] ಕಲಿದೇವರ ದೇವನೊಲ್ಲನು (ಬ)