ಮುಂದೆ ಆಕಾರ ಪೀಠಿಕಾಸ್ಥಲವ ಕೂಡಿದ ತ್ರಿವಿಧ ವಿಡಂಬನ ಸ್ಥಲದೊಳಗೆ ಮನ ಮಾಯೆ ಜೀವ ಈ ಮೂರರುತ್ಪತ್ಯವ ಪೇಳ್ವೆ: ಪರತತ್ವದಿಂದ ಪರಮ ಮೂಲ

[1]ಜ್ಞಾನ ಜ್ಞಾನ[2] ಪಿಂಡಜ್ಞಾನ[3] ಚಿದ್ಘನಾತ್ಮಕ ಶರಣಬಸವ ಗುರುವಿನಿಂದಲು ಷಡುಸ್ಥಲಬ್ರಹ್ಮಿಗಳು ಏಳು ಚಕ್ರಂಗಳು, ಪದ್ಮಂಗಳು ಹನ್ನೆರಡು ಪ್ರಣಮಂಗಳು, ನವಲಿಂಗಂಗಳು, ನಾನಾಪ್ರಕಾರದ ಸುವಾಕ್ಯಂಗಳ ನುಡಿವ ಹದಿನಾಲ್ಕು ಸಾವಿರಕ್ಷರಂಗಳು, ನೂರೊಂದು ಸ್ಥಲಗಳು, ವಿಭೂತಿ ರುದ್ರಾಕ್ಷಿ ದೀಕ್ಷೆ ತೀರ್ಥ ಪ್ರಸಾದ ಗುರುಲಿಂಗ ಜಂಗಮದ ಮಾಟಕೂಟ ಪಾದೋದಕ ಪ್ರಸಾದವ ಲಿಂಗಕ್ಕೆ ಕೊಟ್ಟು ಕೊಂಬುದಕ್ಕೆ ಕೊಡುವುದು. ಕೊಟ್ಟಬಳಿಕ ತಾವು ತೀರ್ಥ ಪ್ರಸಾದವಕೊಂಬುದು. ಪ್ರಮಥಗಣ ವೃಷಭಗಣ ಜಂಗಮದೇವರುಗಳು ಅನುಭವ ಸಮುದ್ರ [4]ದೊಳ[5]ಗಣ ಸ್ವಯಂಭು ರುದ್ರಗಣ, ಅಸಂಖ್ಯಾತಗಣ, ಮರುಳುಗಣ, ಅನಂತ ಕ್ರಿಯೆಗಳು, ಚಿದ್ಬ್ರಹ್ಮಾಂಡ, ಅನುಭಾವಬ್ರಹ್ಮಾಂಡ, ಪ್ರಕಾಶಬ್ರಹ್ಮಾಂಡ, ಭಕ್ತಿಹಸೆ, ಶಕ್ತಿಹಸೆ, ಚೈತನ್ಯಹಸೆ ಪ್ರಸಾದರಸವಜ್ರದ ಮೇರು ಇಷ್ಟುಪ್ರಕಾರದ ನೈ[6]ಜತತ್ವಗಳೆಲ್ಲವು ಉದಯವಾದುದಕ್ಕೆ ದೃಷ್ಟವೇನೆಂದಡೆ, ಒಬ್ಬಪುರುಷ ತಾನೊಬ್ಬ ಸತಿಯೊಳು ರತಿಸಂಯೋಗವಾಗಲು ಆ ಸತಿಯ ಗರ್ಭಂದಿಂದಲುದೈಸಿದ ಶಿಶುಗಳಹಾಂಗೆ ಶರಣ[7]ನೆಂಬ[8] ಸತಿಯೊಳು ಲಿಂಗವೆಂಬ ಪತಿಯಿಂದುದಯವಾಗಲು ಬೇಕೆಂದು ತನ್ನ ಲೀಲೆಯಿಂದ ನೆನೆದಿಚ್ಛೈಸಲು, ಆ ಇಚ್ಛೆಯೆ ಶರಣ ಸತಿಯೆಂಬ ಬಸವಣ್ಣನ ಗರ್ಭದೊಳು ಪೂರ್ಣೀಕರಿಸಿ ಬೆಳಗಿ, ನಾನಾ ಪ್ರಕಾರದ ಸ್ವರೂಪವಾಗಿ ಬೆಳೆದು, ಬೆಳಗಿನ ಬೆಳಗಿನಿಂದವೆ ಬೆಳಗಾಗುದೈಸಿ, ಹರಕರಿಸಿ ವರಮೂರ್ತಿಗಲಾಗಿ ಬೆಳಗುತ್ತಿರ್ದರು. ಅಂತಪ್ಪನಂತಕೋಟಿ ಪರಶಿವ ತತ್ವಂಗಳೆಲ್ಲವು ಆದಿ, ಅನಾದಿಯೆಂಬ ಮನಮಾಯೆಗಳು ಹುಟ್ಟಿದ ಮುನ್ನತ್ತತ್ತ ಸಂಗಸುಖ ಹುಟ್ಟದ ಮುನ್ನತ್ತತ್ತ, ಸತಿಪುರುಷರ  [9]ಸಂಗಸಂಯೋಗ[10] ಹುಟ್ಟದ ಮುನ್ನತ್ತತ್ವ, ಚಂದ್ರಾದಿತ್ಯರು ಹುಟ್ಟದ ಮುನ್ನತ್ತತ್ತ, ಜೀವ ದೇಹ ವಿಕಳತೆಯೆಂಬಿವು ಹುಟ್ಟದ ಮುನ್ನತ್ತತ್ತ, ಜೀವ ದೇಹ ವಿಕಳತೆಯೆಂಬಿವು ಹುಟ್ಟದ ಮುನ್ನತ್ತತ್ತ, ಶಿವಶಕ್ತಿ ಸಂಪುಟದಲ್ಲಿ ಉದಯಿಸಿ ಅನೇಕ ಪ್ರಕಾರವಾಗಿ ಕೋಟ್ಯಾನುಕೋಟಿ ವರುಷವು, ಕೋಟ್ಯಾನುಕೋಟಿ ಕಾಲವು ನೂರೊಂದುಸ್ಥಲದ ಅನುಭವ ರಸದೊಳಗೋಲಾಡುತ್ತಿರುತ್ತಿರ್ದ ಬಳಿಕ ಮತ್ತೆ ಇತ್ತಿತ್ತ ಮನ ಮಾಯೆಗಳೆರಡು, ಬಸವಣ್ಣನೆನದಡೆ ಸ್ವಯಂಭು ಆದಿರುದ್ರನಲ್ಲಿ ಲೀಲೆದೋರಿತ್ತು. ತೋರಲಾಗಿ ಆ ಲೀಲೆಯಹಂಕಾರದ ತೂರ್ಯಾವಸ್ಥೆಯೊಳು ಹುಟ್ಟಿದವು. ಇಂತೆಂಬ ಪುರಾತನರ [11]ಗಣಿತ[12] ಗೀತ ಮಾತೃಕೆಗಳ ಸಾರಾಯವಪ್ಪಮೃತ ವಾಕುಗಳಿಗೆ ಸಾಕ್ಷಿ.

೧೩೯

ಶಿವಶಕ್ತಿ ಸಂಪುಟವೆಂಬುದೆ[13]ಂತದು[14] ಹೇಳಿರಣ್ಣ !
ಶಿವನೆ ಚೈತನ್ಯಾತ್ಮನು; ಶಕ್ತಿಯೇ ಚಿತ್ತು.
ಇಂತು ಚೈತನ್ಯಾತ್ಮಕನೆ ಚಿತ್ಸ್ವರೂಪನೆಂದಱೆಯಬಲ್ಲಡೆ
ಆತನೆ ಶರಣ ಗುಹೇಶ್ವರಾ. ||೧||

೧೪೦

ಆದಿ ಅನಾದಿ ಸಂಗದಿಂದಾದವನಲ್ಲ.
ಸಂಗಸುಖದೊಳಗಿರ್ದವನಲ್ಲ.
ಇಬ್ಬರ ಸಂಗದಿಂದಾದವನಲ್ಲ.
ರವಿ ಶಶಿಯ ಬೆಳಗಿನಿಂದ ಬೆಳೆದವನಲ್ಲ.
ನಾದ ಬಿಂದು ಕಳೆ ಹುಟ್ಟಿದ ಮುನ್ನಲ್ಲಿಂದತ್ತತ್ತ ಕಾಣಾ.
ಗುಹೇಶ್ವರ ನಿಮ್ಮ ಶರಣ.   ||೨||

೧೪೧

ತೆಲೆಯಿಲ್ಲದ ತಲೆಯಾತಂಗೆ,
ಕರುಳಿಲ್ಲದ ಒಡಲು ನೋಡಾ!
ಆ ನಲ್ಲಂಗೆ ಅಂಗವಿಲ್ಲದಂಗನೆ ಸತಿಯಾಗಿಪ್ಪಳು ನೋಡಾ.
ಅವರಿಬ್ಬರ ಬಸುರಲ್ಲಿ ಹುಟ್ಟಿದಳೆಮ್ಮ ತಾಯಿ ನೋಡಾ.
ನಾನು ಹುಟ್ಟಿ ತಾಯಿ ಕೈವಿಡಿದು ಸಂಗವಮಾಡಿ
ದೋಷ ನಿರ್ದೋಷಂಗಳನರಿಯದಿರ್ದೆನು ಕಾಣಾ ಗುಹೇಶ್ವರಾ.   ||೩||

೧೪೨

ಒಂದೂ ಇಲ್ಲದ ಬಿಂದುವ,
ತಂದೆಯಿಲ್ಲದ ಕಂದನ,
ಮಾತೆಯಿಲ್ಲದ ಜಾತನ,
ಗಮನವಿಲ್ಲದ ಗಮ್ಮನ,
ಮೂವರಱೆಯದ ಮುಗ್ಧನ ಠಾವ ತೋರಿ ೧.( + ಸಿ (ಬ). ಬದುಕಿಸಾ ಗುಹೇಶ್ವರ. ||೪||

೧೪೩

ಆದಿ ಅನಾದಿ [15]ಅಧಿ[16] ದೇವತೆಗಳು
ಮೀನಜ ರೋಮಜ ಚಿಟ್ಟಜ ಚಿಪ್ಪಜ
ಖುಷಿಯರುಗಳು ಮೊದಲಾದನಂತ
ಬ್ರಹ್ಮರಿಲ್ಲದಂದಲ್ಲಿಂದತ್ತತ್ತ.
ಏಕಲಿಂಗ ಒಬ್ಬನೆ ಶರಣ.
ಗುರುವೆ ಪರಮ ಗುರುವೆ ನೀನೆಯಯ್ಯಾ.
ಆದಿಕುಳ[17]ಕ್ಕೆ ಮೂಲಿಗನಾಗಿ ಸುಳುಹುದೋರಿ
ಪಾವನವ ಮಾಡಬಂದೆಯಯ್ಯಾ.
ಬಹುಮುಖ ಜೀವಿಗಳಿಗೆ ಬಹುಮುಖದಾಹಾರವ
ತೋರಿದೆಯಯ್ಯಾ.
ಭುವನವ ಸಲಹಲೆಂದು ಆದಿಯ ಲಿಂಗವ
ಅನಾದಿಯ ಶರಣನ ಕೈಯಲ್ಲಿ ಕೊಟ್ಟಿರಿ.
ಆ ಲಿಂಗವ ನೀವು ಸಂಘಟಿಸಿದ ಘಟಕ್ಕೆ ಕಾರಣ್ಯವಮಾಡಿ
ಸಲಹಯ್ಯಾ ಕೂಡಲಚೆನ್ನಸಂಗಮದೇವಾ.     ||೫||

೧೪೪

ಅಂಡಜವೆಂಬ ತತ್ತಿ ಒ[18]ಡದು ಪಿಂಡ ಪಲ್ಲಟವಾಗಿ
ಗಂಡಗಂಡರನರಸಿ ತೊಳಲಿ ಬಳುತ್ತೈದಾರೆ[19] ಖ[20]ಂಡಮಂಡಲದೊಳಗೆ ಕಂಡೆನೊಂದು ಚೋದ್ಯವ.
ಕಂದನ ಕೈಯದರ್ಪಣವ ಪ್ರತಿಬಿಂಬನುಂಗಿತ್ತು.
ದಿವರಾತ್ರಿ ಉದಯದ ಬೆಳಗನು ಕತ್ತಲೆ ನುಂಗಿತ್ತು.
ಗುಹೇಶ್ವರನಲ್ಲಿಯೆ ನಿರ್ವಯಲಾಯಿತ್ತು.         ||೬||

 

ಅಂಡಜವೆಂಬ ಚಿದ್ಬ್ರಹ್ಮಾಂಢದೊಳಗಡಗಿದ ಅನುಭವ ರಸವಜ್ರ ಕೈಲಾಸದ ಮರುಳ ನಖಾಗ್ರಗವೆಂಬ ಹಜಾರಕ್ಕೆ ಸ್ವಯಂಜ್ಯೋತಿ ರುದ್ರನು ಬಿಜಯಂಗೈದು ಪೂರ್ವಮುಖವಾಗಿ ಮೂರ್ತಿಗೊಂಡು[21]. [22]ಗಗನ[23]ವೆಂಬ ಚಿದ್ಘನಾತ್ಮಕ ಬಸವಣ್ಣನ ನೆರಹನೊಳಕೊಂಡು ತನ್ನ ಲೀಲೆಯಿಂದೆ ಸಕಲ ನಿಷ್ಕಲವೆಂಬ ಜೀವಾತ್ಮ ತತ್ವಂಗಳನುಂಟುಮಾಡಿ ತೋರಬೇಕೆಂದು ಇಚ್ಚೈಸಲೊಡನೆ ಆ ಇಚ್ಛೆಯಲ್ಲಿಯೆ ಬೆಳಗೆಂಬ ನಿಜಹಂಕರ ಉದಯಿಸಿತ್ತು. ಆ ನಿಜಹಂಕಾರದ ತೂರ್ಯವಸ್ಥೆಯೊಳು ಅರಿವು ಮರವೆಂಬ ಮನ ಸಂಕಲ್ಪ ಹುಟ್ಟಿತ್ತು. ಅರಿವು ಮರವೆಂಬ ಮರ್ಕಟನ ಹೃದಯಕಮಲಕರ್ಣಿಕಾ ಕುಹರದ ಮಧ್ಯದಲ್ಲಿರ್ದ ಅರಿವು ಮರವೆಂಬ ಉನ್ಮತ್ತ ಬೀಜದಿಂ[24]ದ ಅಜ್ಞಾನ ಸ್ವರೂಪನಾಗಿ ಹುಟ್ಟಿದಳು ಮಾಯೆ. ಇಂತು ಅರಿವೆಂಬ ಮನದಲ್ಲಿ ಮರವೆಂಬ ಮಾಯೆ ಹುಟ್ಟಲಾಗಿ ಈ ಅರಿವು ಮರವೆಂಬ ಮನಮಾಯೆಗಳೆರಡುಪ್ರಕಾರಿನ ವಿಕೃತಿಗಳೆಂಬ ಅದ್ಭುತಗಳಾಗಿ ತಾವಾರೆಂಬುದನರಿಯದೆ, ತಮ್ಮಿಂದ ತಾವೆ ಸಂಕಲ್ಪ ವಿಕಲ್ಪವನುಂಟುಮಾಡಿಕೊಂಡು ತಮ್ಮ ಮುಂದಿರ್ದ ಮಹದರಿವಿನ ತೇಜೋಮಯ ರುದ್ರನನರಿಯದೆ ತಾವೆರಡು ಇರ್ದ ಠಾವಿಂಗೆ ಭಿನ್ನರಾಗಿ ದೇಹಧರ್ಮದೊಳಗೆ ಸಿಕ್ಕಿ ಆ ಮರುಳುಗಳ ಹಸ್ತದ ತುದಿಯಿಂದು ನಿಜಹಂಕರನೂಕಿತೊ ಎಂಬಂತೆ ಜಾರಿ ಉರುಳಿ ಬಿದ್ದವು, ಇನ್ನೂರುಕೋಟಿ ಯೋಜನ ಪ್ರಮಾಣಿನಲ್ಲಿ ನಿಲಲೊಡನೆ ಆ ಮನ ಪುಣ್ಯವೆಂಬ ಗಂಡುರೂಪಾಗಿ ಅನಾದಿಯೆಂಬ ನಾಮವಿಡಿದು ಮಹಾಮಾಯೆಯೆನಿಸಿಕೊಂಡಿತ್ತು ಮಾಯೆ ಪಾಪರೂಪೆಂಬ ಹೆಣ್ಣುದೇಹವಂ ತಾಳಿ ಆದಿಯೆಂಬ ನಾಮವಿಡಿದು ಅಧೋಮಾಯೆಯೆನಿಸಿಕೊಂಡಳು. ಇಂತಪ್ಪ ಹೆಸರುವೆತ್ತ ಮನಮಾಯೆಗಳೆರಡು ಸತಿಪತಿಗಳಂತೆ ಒಬ್ಬರನ್ನೊಬ್ಬರು ನೋಡಿ ನೆರೆಯಬೇಕೆಂದಿಚ್ಚೈಸಿ ನೆರದು ಸಂಯೋಗವಾಗಲೊಡನೆ ಅವರ ಶುಕ್ಲಶ್ರೋಣಿತಾತ್ಮನೊಳಗವರ ಜ್ಞಾನಾ ಜ್ಞಾನ ಸಂಬಂಧವನುಳ್ಳ ಮೂಲಜೀವನೆಂಬ ಒಂದು ಗಿಳಿಹುಟ್ಟಿ ಇಪ್ಪತ್ತೈದು ಗಿಳಿಯಾಯಿತ್ತು. ಆಗಲಾಜ್ಞಾನಮೂಲ ಜೀವನೆಂಬ ಗಿಳಿಗೆ ಮನಮಾಯೆಯೆರಡು ನಿಜಾತ್ಮನದೆಂದು ಸರ್ವಗತ ಶಿವನೆಂದು ಉಪಮಾತೀತನೆಂದು ವ್ಯೋಮಾತೀತನೆಂದು ಅತೀತನೆಂದು, ಪರಮೇಶ್ವರನೆಂದು, ನಿರವಯನೆಂದು, ಶರಣನೆಂದು ಪರಶಿವನ ಹೆಸರಿಟ್ಟರು. ಇಟ್ಟಬಳಿಕ ಪರಮೇಶ್ವರನು ಪಂಚಮುಖ ತ್ರಿಣೇತ್ರಸಹಿತ ನಿಂದನು. ಹಾಂಗೆ ನಿಂದಾತಗಾ ಮಾಯೆ ಪರಮೇಶ್ವರಿಯೆಂಬ ಹೆಂಡತಿಯಾದಳು. ಆಗಲ್ಕೆ ಈ ಪರಮೇಶ್ವರನ ಬ್ರಹ್ಮರಂಧ್ರದಲ್ಲಿ ಮನ ಭಾವ ಜ್ಞಾನ ಜನಿತನಾಗಿ ಅಕಾರ, ಉಕಾರ, ಮಕಾರವೆಂಬಕ್ಷರತ್ರಯವಾದವು. ಈ ಅಕ್ಷರ ಮೂರರೊಳಗೆ ಓಂಕಾರ ಜನಿಸಿ ಆಕಾರವೆಂಬ ಭೂತನಾಮವಿಡಿಯಿತ್ತು.  ಈತನ ಸದ್ಯೋಜಾತ ಮುಖದಲ್ಲಿ ನಕಾರ ಪುಟ್ಟಿತ್ತು. ವಾಮದೇವ ಮುಖದಲ್ಲಿ ಮಕಾರ ಪುಟ್ಟಿತ್ತು. ಅಘೋರ ಮುಖದಲ್ಲಿ ಶಿಕಾರಪುಟ್ಟಿತ್ತು. ತತ್ಪುರುಷ ಮುಖದಲ್ಲಿ ವಕಾರ ಪುಟ್ಟಿತ್ತು. ಈಶಾನ್ಯ ಮುಖದಲ್ಲಿ ಯಕಾರ ಪುಟ್ಟಿತ್ತು. ಹೀಂಗೆ ಜನಿಸಿದ ಒಂಭತ್ತಕ್ಷರಕ್ಕೆ ಶೈವಪ್ರಣಮ[25] ಪಂಚಾಕ್ಷರಿಯೆಂದು ನಾಮವೆತ್ತವು. ವೆತ್ತಬಳಿಕ ಈ ಪರಮೇಶ್ವರನ ಹೆಂಡತಿಯೆಂಬ ಮಾಯಿಕದೊಳಗೆ ಐವತ್ತೆರಡಕ್ಷರಂಗಳು ಹುಟ್ಟಿ ಅವಳಿಗೈವತ್ತೆರಡು ಕಣ್ಣುಗಳಾದವು. ಇಂತಪ್ಪಕ್ಷರಂಗಳು ಯುಕ್ತವಾದ ಮೂಲಜೀವಗಿಳಿಯೆಂಬ ಪರಮೇಶ್ವರನ ಉತ್ತರ ಮುಖದಲ್ಲಿ ಪೃಥ್ವಿ ಪುಟ್ಟಿತ್ತು. ಪಶ್ಚಿಮ ಮುಖದಲ್ಲಿ ಅಪ್ಪು ಪುಟ್ಟಿತ್ತು. ದಕ್ಷಿಣ ಮುಖದಲ್ಲಿ ಅಗ್ನಿ ಪುಟ್ಟಿತ್ತು. ಪೂರ್ವಮುಖದಲ್ಲಿ ವಾಯು ಪುಟ್ಟಿತ್ತು. ಈಶಾನ್ಯ ಮುಖದಲ್ಲಿ ಆಕಾಶ ಪುಟ್ಟಿತ್ತು. ಇಂತು ಪುಟ್ಟಿದ ಪಂಚಭೂತ ಸಹಿತ ಪಂಚವಿಶಂತಿ ತತ್ವ ತಾನೆಯಾದ[26] ಮೂಲ ಜೀವಗಿಣಿಯೆಂಬ ಪರಮೇಶ್ವರನಿಗೆ ಭೋಗ ಭುಕ್ತಿಯಾಗಬೇಕೆಂದು ಮೂರುತೆರದಕ್ಷರಂಗಳಿಂದ ಶಬ್ದ ಜಾಲಂಗಳ ನುಡಿಸುತ್ತ ಮಾಯೆ ಇಪ್ಪತ್ತುನಾಲ್ಕು ಕರಣ ಗ್ರಾಮಂಗಳ[27] ಪರಮೇಶರನು[28] ನುಂಗಿ ಉಗುಳುತ್ತ, ತಾಯಿ ರಕ್ಕಸಿಯಾದಳೆಂಬಂತೆ ಕೆಡಿಸುತ್ತ ಹುಟ್ಟಿಸುತ್ತ [29]ಸಲಹುತ್ತ[30] ತಾನು ಪಂಚಭೂತ ಪಿಂಡದೊಳಗಡಗಿರುತ್ತಿಪ್ಪಳು. ಇಂತಪ್ಪ ಮನ ಮಾಯೆಗಳಲಿಂದ ಹುಟ್ಟಿ ಪರಮೇಶ್ವರನು ಪಾರ್ವತಿಯು ತಾವಿಬ್ಬರು ಕೂಡಿ ರತಿಸಂಯೋಗವಾಗಲೊಡನೆ [31]ಶುದ್ಧಾತ್ಮ[32] ಪಂಚಮುಖ ತ್ರಿಣೇತ್ರ ಸಹಿತ ಹುಟ್ಟಿ ಸದಾಶಿವನೆಂಬ ನಾಮವಾಯಿತ್ತು. ಆಗಲಾಗಿ ಸದಾಶಿವಂಗೆ ಮಾಯೆ ಜ್ಞಾನಶಕ್ತಿಯಾದಳು. ಆ ಸದಾಶಿವ ಸುಜ್ಞಾನ ಶಕ್ತಿಯು ತಾವಿಬ್ಬರು ಕೂಡಿ ರತಿಸಂಯೋಗವಾಗಲೊಡನೆ ನಿರ್ಮಲಾತ್ಮಕ ಪಂಚಮುಖ ತ್ರಿಣೇತ್ರ ಸಹಿತ [33]ಹುಟ್ಟಿ[34] ಈಶ್ವರನೆಂಬ ನಾಮವಾಯಿತ್ತು. ಆಗಲ್ಕೆ ಈಶ್ವರಂಗೆ ಮಾಯೆ ಇಚ್ಛಾಶಕ್ತಿಯಾದಳು. ಈ ತಾವಿಬ್ಬರು ಕೂಡಿ ರತಿಸಂಯೋವಾಗಲೊಡನೆ ಪಂಚಮುಖ ತ್ರಿಣೇತ್ರ ಸಹಿತ ಹುಟ್ಟಿ ರುದ್ರನೆಂಬ ನಾಮವಾಯಿತ್ತು. ಆಗಲಿಕೆ ರುದ್ರನಿಗೆ ಮಾಯೆ ಕ್ರಿಯಾಶಕ್ತಿಯಾದಳು. ರುದ್ರನು ಕ್ರಿಯಾಶಕ್ತಿ ತಾವಿಬ್ಬರು ಬೆರದು ರತಿಸಂಯೋಗವಾಗಲೊಡನೆ ಅಂತರಾತ್ಮ ಪಂಚಮುಖ ಸಹಿತ ಹುಟ್ಟಿ ವಿಷ್ಣುವೇಂಬ ನಾಮವಾಯಿತ್ತು. ಆಗಲಾಗಿ ವಿಷ್ಣುವಿಗೆ ಮಾಯೆ ಲಕ್ಷ್ಮೀಯಾದಳು. ವಿಷ್ಣು ಲಕ್ಷ್ಮೀಯು ತಾವಿಬ್ಬರು ನೆರದು ರತಿಸಂಯೋವಾದ ಬಳಿಕ ಜೀವಾತ್ಮ ಪಂಚಮುಖ ಸಹಿತ ಹುಟ್ಟಿ ಬ್ರಹ್ಮನೆಂಬ ನಾಮವಾಯಿತ್ತು. ಆಗಲಿಕ್ಕಾಗಿ ಬ್ರಹ್ಮಂಗೆ ಮಾಯೆ ಸರಸ್ವತಿಯಾದಳು. ಆದಬಳಿಕ ಬ್ರಹ್ಮನು ಸರಸ್ವತಿಯು ತಾವಿಬ್ಬರು ಕೂಡಿ ರತಿಸಂಯೋಗವಾಗಲೊಡನೆ ಮನು ಮುನಿ ದೇವದಾನವ ಮಾನವರು ಮೊದಲಾದ ಎಂಬತ್ತುನಾಲ್ಕುಲಕ್ಷ ಜೀವರಾಶಿಗಳೆಲ್ಲಾ ಹುಟ್ಟಿದವು. ಹುಟ್ಟಿ ಮತ್ತೆ ರುದ್ರ ಈಶ್ವರ ಸದಾಶಿವ ಪರಮೇಶ್ವರ ಇವರ ಶಕ್ತಿಗಳು ಆ ಎಂಟು ಪಿಂಡಾಂಡಂಗಳು ಶುಕ್ಲಶ್ರೋಣಿತಾತ್ಮಸಂಗದಿಂದ ನಂದಿಗಳು ಭೃಂಗಿಗಳು ವೀರಭದ್ರಾದಿಗಳು ಇವರು ಮೊದಲಾದ ಎರಡೆಂಬತ್ತೇಳುಕೋಟಿ ರುದ್ರರುಗಳು ಪಂಚಮುಖ ತ್ರಿಣೇತ್ರ ಅಂಗಾಲಕಣ್ಣವರು ಮೈಯೆಲ್ಲ ಕಣ್ಣವರು ಸಹಿತ ಹುಟ್ಟಿ ಪ್ರಮಥರೆನಿಸಿಕೊಂಡು ಜಡರುಗಳಾಗಿಪ್ಪರು. ಮತ್ತೆ ಬ್ರಹ್ಮ ವಿಷ್ಣು ಸರಸ್ವತಿ ಲಕ್ಷ್ಮೀ ಈ ನಾಲ್ಕು ಪಿಂಡಾಂಡಂಗಳ ಶುಕ್ಲ ಶ್ರೋಣಿತಾತ್ಮಸಂಗದಿಂದ ನವಕೋಟಿ ನಾರಾಯಣರು, ನವಕೋಟಿ ಬ್ರಹ್ಮರು ಇಂತಿವರೆಲ್ಲ ಹುಟ್ಟಿ ಜಡರುಗಳಗಿಪ್ಪರು. ಆ ಷಡುಸಾದಾಖ್ಯ ನಾಯಕರು ಮುಖ್ಯವಾದ ನಂತರುಗಳೆಲ್ಲಾ ಭೂತಾತ್ಮನೆಂಬ ಮಾಯೆ, ಮಹಾತ್ಮನೆಂಬ  ಮನ, ಆ ಎರಡರ ಶುಕ್ಲ  ಶ್ರೋಣಿತಾತ್ಮಸಂಗದಿಂದ ನವಕೋಟಿ ನಾರಾಯಣರು, ನವಕೋಟಿ ಬ್ರಹ್ಮರು ಇಂತಿವರೆಲ್ಲ ಹುಟ್ಟಿ ಜಡರುಗಳಾಗಿಪ್ಪರು. ಆ ಷಡುಸಾದಾಖ್ಯ ನಾಯಕರು ಮುಖ್ಯವಾದ ನಂತರುಗಳೆಲ್ಲಾ ಭೂತಾತ್ಮನೆಂಬ ಮಾಯೆ, ಮಹಾತ್ಮನೆಂಬ ಮನ, ಆ ಎರಡರ ಶುಕ್ಲ ಶ್ರೋಣಿತಾತ್ಮ ಸಂಗದಿಂದ ಹುಟ್ಟಿ ಹಬ್ಬಿ ಕೊಬ್ಬಿ ಹರಕರಸಿದ ಕಾರಣ ತಮಗೆಲ್ಲರಿಗೆಯೂ ಮನಮಾಯೆಗಳಿಬ್ಬರು ಅರ್ಧನಾರಿಯರಾಗಿ ತಮ್ಮೆಲ್ಲರನು ನೊಣನೆಂಬ ಸಂಶಯದೊಳು ಕೆಡಹುತ್ತ ಹುಟ್ಟಿಸುತ್ತ ಫಲಪದವಿಗಳನು ತೊಡುತ್ತ ಇಂತಪ್ಪರಿವು ಮರವೆಗಳೊಳಗೆ ಹೊದಕುಳಿಗೊಂಡು ಪುಣ್ಯಪಾಪಂಗಳಿಗೆ ಹೋಗುತ್ತಿಪ್ಪುದಂ ಗುಹೇಶ್ವರನ ಶರಣರುಗಳರಿದು ಆದಿದೇವತೆಗಳ ಮುಟ್ಟದೆ ಪರಮ ಶಾಂತಿಯೆಂಬ ಪರಶಿವನ ಪರಶಕ್ತಿಗಳ ಇಬ್ಬರ ತಿಳಿದರಿದು ಚಿಕ್ಕಾಡೆಂಬ ಚಿತ್ತಿನಲ್ಲಿ ನಿಂದು ಉತ್ಪತ್ಯ ಸ್ಥಿತಿ ಲಯಂಗಳಿಗೆ ಒಳಗಾ [35]ಗದಿ[36] ರು ತಿಪ್ಪ ಕಾರಣ ಅವರು ಷಡುದೇವತೆಗಳೊಳಗಾದನಂತಕೋಟಿ ರುದ್ರಪ್ರಮಥರ ಸ್ಥಲದೊಳಗಲ್ಲ. ಇಂತೆಂಬ ಪುರಾತನರಗಣಿತ ವಚನಸಾರಾಯಂಗಳಿಗೆ ಸಾಕ್ಷಿ.

೧೪೫

ಗಗನದಮೇಲೊಂದು ಅಭಿನವ ಗಿಳಿ ಹುಟ್ಟಿತ್ತು.
ಸ್ವಯ ಸಂಭ್ರಮದಲ್ಲಿ ಮನೆಯಮಾಡಿತ್ತು.
ಒಂದು ಗಿಣಿ ಇಪ್ಪತ್ತೈದು ಗಿಣಿಯಾಯಿತ್ತು.
ಬ್ರಹ್ಮನಾ ಗಿಣಿಗೆ ಪಂಜರವಾದ.
ವಿಷ್ಣುವಾಗಿಣಿಗೆ ಕೊರೆ ಕೂಳಾದ.
ರುದ್ರನಾ ಗಿಣಿಗೆ ತಾ ಕೊಳು ಹೋದ.
ಇಂತೀ ಮೂವರ ಮಂದಣ ಕಂದನ
ನುಂಗಿದ ದೃಷ್ಟ, ನಾಮ ನಷ್ಟವಾಯಿತ್ತು.
ಇದೇನು ಹೇಳಿ ಗುಹೇಶ್ವರ?            ||೭||

೧೪೬

ಹರಿದು ಹತ್ತಿ ಮುತ್ತಿ ಹಿಡಿದೆವೆಂದು
ಜಾರಿ ಉರುಳಿ ಬಿದ್ದರನಂತರೆಲ್ಲಾ.
ಹಿಡಿದವರೆಲ್ಲಾ ಹೆಣನುಂಡು ಹೋದರು.
ನಾನು ಹಿಡಿದ ಬಂದಿ ಒಡಬಂದಿಯಾಯಿತ್ತಯ್ಯ ಗುಹೇಶ್ವರ.        ||೮||

೧೪೭

[37]ಸಂಗ್ರಾಮದಲ್ಲಿ ಓಡಿದ ಹಂದೆ
ಗೆಲ್ಲ ಬಲ್ಲನೆ[38] ಹೇಳಾ !
ನಿನ್ನ ನಿಲವಿನ ಮಡುವ ಕಂಡು
ಈಸಾಡ [39]ಬಲ್ಲನೆ[40] ಹೇಳಾ?
ಗುಹೇಶ್ವರನೆಂಬ ನಿರಾಳದ ಮಹಾಘನವ
ಪಂಚೇಂದ್ರಿಯ ತಾನೆತ್ತಬಲ್ಲ ಹೇಳಾ?            ||೯||

೧೪೮

ಹೃದಯ ಕಮಲ ಮಧ್ಯದಲ್ಲಿ ಹುಟ್ಟಿ
ಹಬ್ಬಿ [41]ಕೊಬ್ಬಿ[42] ಹಲವು ಫಲವಾಯಿತ್ತು ನೋಡಿರೆ !
ಪರಿಪರಿಯ ಫಲಂಗಳನು ಬೇಇಡಿದವರಿಗಿತ್ತಳು ನೋಡಿರೆ !
ಆ ಫಲವ ಬಯಸಿದವರು ಜಲದೊಳಗೆ ಬಿದ್ದರೆ
ನೋಡಿ ನಸುನಗುತಿರ್ದೆನು ಕಾಣಾ ಗುಹೇಶ್ವರ.           ||೧೦||

೧೪೯

ಒಂದು ಶಿಲೆಯೊಡದು ಮೂರು ಹೋಳಾದ ಭೇದವ ನೋಡಯ್ಯಾ.
ಒಂದು ಶಿಲೆಗೆ ಕಪಾಲ ಡಿಂಡಿಮ ರುಂಡಮಾಲೆ
ಈ ಐದು ತಲೆ.
ತಲೆಯೊಳಗೊಬ್ಬಳು,  ತೊಡೆಯೊಳಗೊಬ್ಬಳು,
ಈ ಕಡುಗಲಿಯಾತನ ದೇವರೆಂದೆಂಬರು ನೋಡಯ್ಯಾ.
ಎನ್ನ ದೇವಂಗೆ ಈ ಐ[43]ದು ತಲೆಯಿಲ್ಲ; ಹಿಡಿವುದಕ್ಕೆ ಭುಜವಿಲ್ಲ.
ತೊಡುವುದಕ್ಕೆ ಆಭರಣವಿಲ್ಲ.
ನಾದವಿಲ್ಲವಾಗಿ ಬಿಂದುವಿಲ್ಲ; ಬಿಂದುವಿಲ್ಲವಾಗಿ ಕಳೆಯಿಲ್ಲ.
ಒಡಗೂಡುವುದಕ್ಕೆ ಪುರುಷನಿಲ್ಲ; ತನ್ನನರಿದವರಿಗೆ ಬೇರೆಗತಿಯಿಲ್ಲ.
ಗತಿಯಿಲ್ಲವಾಗಿ ಮತಿಯಿಲ್ಲ; ಮತಿಯಿಲ್ಲವಾಗಿ ಶ್ರುತಿಯಿಲ್ಲವಾಗಿ
ನಾದವಿಲ್ಲ; ನಾದವಿಲ್ಲವಾಗಿ ಬಿಂದುವಿಲ್ಲವಾಗಿ ಸಂದುವಿಲ್ಲ.
ಸಂದಿಲ್ಲವಾಗಿ ಸಂದೇಹವಿಲ್ಲ, ಸಂದೇಹವಿಲ್ಲವಾಗಿ ಹೊಂದಲಿಲ್ಲ.
ಇದುಕಾರಣ ನಿಃಕಳಂಕ ಮಲ್ಲಿಕಾರ್ಜುನನಲ್ಲಿ ಇವರೆಲ್ಲರೂ ಇಲ್ಲ.   ||೧೧||

೧೫೦

ರಕ್ಕಸಿಗಿಬ್ಬರು ಮಕ್ಕಳು; ತೊಟ್ಟಿಲಮೇಲೈವರು.
ರಕ್ಕಸಿ [44]ಬಾಣಂತಿ[45]ಯಾದರೆ ಮಕ್ಕಳಿಗಿನ್ನೆಂತೋ !
ತೊಟ್ಟಿಲ ತೂಗುವೆ , ಜೋಗುಳವಾಡುವೆ.
ರಕ್ಕಸಿ [46]ಬಾಣಂತಿ[47]ಯ ತೊಟ್ಟಿಲು ನುಂಗಿತ್ತಿದೇನು ಸೋಜಿಗ
ಹೇಳಾ ಗುಹೇಶ್ವರಾ?        ||೧೨||

೧೫೧

ಕಾಳರಕ್ಕಸಿಗೊಬ್ಬ ಮಗನು ಹುಟ್ಟಿ, ಕಾಯದರಾಶಿಯ ಮೊ[48]ಗೆವುತ್ತ
ಸುರಿವುತ್ತಲಿದಾನಯ್ಯಾ.
ಆ ಕಾಳರಕ್ಕಸಿಯ ಮೂಗು ಮೊಲೆಯನು ಕೊಯಿದು,
ದೇವಕನ್ನಿಕೆಯ ಮೊರೆಹೊಕ್ಕು ಬಾಯತುತ್ತನೆಲ್ಲವನುಣಲೊಲ್ಲದೆ[49]ಕಾರಿದಡಾತನ[50] ಭಕ್ತನೆಂಬೆನು ಕಾಣಾ ಗುಹೇಶ್ವರ.    ||೧೩||

೧೫೨

ಐದು ಮುಖದಂಗನೆಗೆ ಹದಿನೈದುದೇಹನೋಡಾ.
ಆ ಅಂಗನೆಯ ಮನೆಯೊಳಗಿರ್ದ ತಾವಾರೆಂಬುದನರಿಯದೆ,
ಬಾಯಿಗೆ ಬಂದಂತೆ ನುಡಿವರು ಗುಹೇಶ್ವರ,
ನಿಮ್ಮನರಿಯದ ಜಡರುಗಳು.          ||೧೪||

೧೫೩

ಆದಿ ಅನಾದಿಗಳಿಗೊ[51]ಬ್ಬ ಶರಣ ಮೂರ್ತಿಯಾದನು.
ಆ ಮೂರ್ತಿಗೆ ಗರುವ ಶಕ್ತಿಯಾದಳು.
ಆ ಮೂರ್ತಿಗೆ ಗರುವ ಶಕ್ತಿಯ ಆ ಇಬ್ಬರಿಗೆ ಸದಾಶಿವನಾದ.
ಆ ಸದಾಶಿವಂಗೆ ಜ್ಞಾನಶಕ್ತಿಯಾದಳು.
ಸದಾಶಿವ ಜ್ಞಾನಶಕ್ತಿಯ ಆ ಇಬ್ಬರಿಗೆ ಈಶ್ವರನಾದ.
ಆ ಈಶ್ವರಂಗೆ ಇಚ್ಛಾಶಕ್ತಿಯಾದಳು.
ಆ ಈಶ್ವರನ ಇಚ್ಛಾಶಕ್ತಿಯ ಆ ಇಬ್ಬರಿಗೆ ರುದ್ರನಾದ.
ಆ ರುದ್ರಂಗೆ ಕ್ರಿಯಾಶಕ್ತಿಯಾದಳು.
ಆ ರುದ್ರ ಕ್ರಿಯಾಶಕ್ತಿಯ ಆ ಇಬ್ಬರಿಗೆ ವಿಷ್ಣುವಾದ.
ಆ ವಿಷ್ಣುವಿಂಗೆ ಲಕ್ಷ್ಮೀಯಾದಳು.
ಆ ವಿಷ್ಣು ಲಕ್ಷ್ಮೀಯ ಆ ಇಬ್ಬರಿಗೆ ಬ್ರಹ್ಮನಾದ.
ಆ ಬ್ರಹ್ಮಂಗೆ ಸರಸ್ವತಿಯಾದಳು.
ಆ ಬ್ರಹ್ಮನ ಸರಸ್ವತಿಯ ಆ ಇಬ್ಬರಿಗೂ ಮನು
ಮುನಿದೇವ ದಾನವ ಮಾನವರು ಹೆಣ್ಣು ಗಂಡು
ಸಚರಾಚರ ಎಂಬತ್ತುನಾಲ್ಕುಲಕ್ಷ ಜೀವಜಂತು
ತೋರುವ ತೋರಿಕೆಯೆಲ್ಲವು ಹುಟ್ಟಿತ್ತು ಕಾಣಾ
ಕೂಡಲಚೆನ್ನಸಂಗಯ್ಯಾ.    ||೧೫||


[1] x (ಬ)

[2] x (ಬ)

[3] ನಿ (ಬ)

[4] x (ಬ)

[5] x (ಬ)

[6] ನಿ (ಬ)

[7] ನೊಬ್ಬ(ಬ)

[8] ನೊಬ್ಬ(ಬ)

[9] x (ಬ)

[10] x (ಬ)

[11] x (ಬ)

[12] x (ಬ)

[13] ತು (ಬ)

[14] ತು (ಬ)

[15] ಆದಿ (ಬ)

[16] ಆದಿ (ಬ)

[17] ಲ (ಬ)

[18] ಯನೊ (ಬ)

[19] ಳೆ (ಬ)

[20] ಕ (ಬ)

[21] + ದ (ಬ)

[22] ಘನ (ಬ)

[23] ಘನ (ಬ)

[24] ಲ್ಲಿಂ (ಬ)

[25] + ವೆಂದು ಶೈವ (ಬ)

[26] ಗಿರ್ದ (ಬ)

[27] ಳಂ (ಬ)

[28] x (ಬ)

[29] x (ಬ)

[30] x (ಬ)

[31] ನಿರ್ಮಲಾತ್ಮ (ಬ)

[32] ನಿರ್ಮಲಾತ್ಮ (ಬ)

[33] x (ಬ)

[34] x (ಬ)

[35] ಗಿ (ಬ)

[36] ಗಿ (ಬ)

[37] ಸಂಗ್ರಹದಲ್ಲಿ ಓಡಹಂದಿಗೆ ನಿಲ್ಲನೆ (ಬ)

[38] ಸಂಗ್ರಹದಲ್ಲಿ ಓಡಹಂದಿಗೆ ನಿಲ್ಲನೆ (ಬ)

[39] x (ಬ)

[40] x (ಬ)

[41] x (ಬ)

[42] x (ಬ)

[43] ರೈ (ಬ)

[44] ಬಾಣಸಿ (ಬ)

[45] ಬಾಣಸಿ (ಬ)

[46] ಬಾಣಸಿ (ಬ)

[47] ಬಾಣಸಿ (ಬ)

[48] ಹೊ (ಬ)

[49] ಕಾರಣವ ಕಂಡಾತನ (ಬ)

[50] ಕಾರಣವ ಕಂಡಾತನ (ಬ)

[51] ಂದೊ (ಬ)