೨೧೯

ಜಲನಿಧಿ ಶಿಖರದ ನಡುವೆ ಒಂದು ದ್ರವ್ಯದ ತಳದಲ್ಲಿ
ಶಿವಲೋಕ ಕೇಳಿರಣ್ಣಾ.
ಆ ದ್ರವ್ಯದ ಕಳಸದ ಪಾಕದಲ್ಲಿ ತನ್ನ ಸುಖವನಱೆಯದೆ
ಶಿವಲೋಕದೊಳಗೆ ಬಳಲುತ್ತಿರ್ದರೆಲ್ಲರು.
ದ್ರವ್ಯಶುದ್ಧ, ಪಾಕಶುದ್ಧ,
ಕೂಡಲ ಚೆನ್ನಸಂಗಯ್ಯ ನಿಮ್ಮ ಪ್ರಸಾದಿಗೆ.     ||೮೦||

೨೨೦

ಮಂದರವೆಂಬ ಅಷ್ಟ ಕುಲಗಿರಿಗಳು ಮೊದಲಾದವನೊಳಕೊಂಡು
ಆರಾರ ಕಡೆಯ ಸ್ವಾದೋದಕ ಸಮುದ್ರದಲ್ಲಿ ವಿಶ್ರಮಿಸಿದ,
ಇಕ್ಷು ಸಮುದ್ರದಲ್ಲಿ ತೃಪ್ತನಾದ,
ಮಹಾಮೇರು ಮಂದಿರದಲ್ಲಿ ಮುಗ್ಧನಾದ ಕಾಣಾ
ಕೂಡಲ ಚೆನ್ನಸಂಗಯ್ಯ ನಿಮ್ಮ ಶರಣ.           ||೮೧||

೨೨೧

ಕೈಲಾಸವೆಂಬುದೊಂದು ಬೆಳ್ಳಿಯ ಬೆಟ್ಟ:
ಅಲ್ಲಿದ್ದಾತನೊಬ್ಬ ರುದ್ರ.
ಆ ಬೆಟ್ಟಕ್ಕೂ ಆ ರುದ್ರಂಗೆಯೂ ಪ್ರಳಯ ಉಂಟೆಂಬುದ
ಗುಹೇಶ್ವರ ನಿಮ್ಮ ಶರಣಬಲ್ಲನು.      ||೮೨||

೨೨೨

ತಾನಿರಿಸಿದ ಕಡವರವೆಂದಡೆ,
ಸಾಕ್ಷಿಯಿಲ್ಲದೆ ಕುರುಹನಱೆಯಬಹುದೆ?
ಸಕಲ ವೇದ ಪುರಾಣಂಗಳ ತಾ ಬಲ್ಲೆನೆಂದಡೆ ಮತ್ತೇನುವನಱೆಯಬಲ್ಲನೆ?
ಇದುಕಾರಣ, ಕ್ರಿಯೆಗೆ ಪೂಜೆ ಅಱೆವಿಂಗೆ ತ್ರಿವಿಧದ ಬಿಡುಗಡೆ.
ಆ ಬಿಡುಗಡೆಗಾದಿಯ ಮುಟ್ಟದ ಶರಣ,
ಉಂಡುಪವಾಸಿ ಬಳಸಿ ಬ್ರಹ್ಮಚಾರಿ ,
ಪಳುಕಿನ ವರ್ತಿಯ

[1]ಂತೆ ತಿಲಕ[2]ದ ರಸದಪ್ಪುವಿನಂತೆ.
ಹೊದ್ದಿಯೂ ಹೊದ್ದ ನಿಜಲಿಂಗಾಂಗದ ಯೋಗ.
ಶಂಭುವಿನಿಂದಿತ್ತ ಸ್ವಯಂಭುವಿನಿಂದತ್ತ ಅತಿಬಳನೋಡಾ
ಮಾತುಳಂಗ ಮಧುಕೇಶ್ವರ.           ||೮೩||

ಇಂತು ಅನಿತ್ಯವನುಳ್ಳ ರಜತಾದ್ರಿ ಮೊದಲಾದ ನವ ಕೈಲಾಸಂಗಳು ಶಿಖಾಗ್ರದ ಮೇಲೆ ಅನಿತ್ಯವಾಗಿರ್ದ ಸ್ವಯಂಭು ಶಂಭುಯೆಂಬ ಷಡುಸಾದಾಖ್ಯ ನಾಯಕರುಗಳು ಮುಖ್ಯವಾದನಂತಕೋಟಿ ರುದ್ರರು ಮನು ಮುನಿ ದೇವ ದಾನ ಮಾನವ ಸಚರಾಚರ ಜೀವಿಗಳೆಲ್ಲರು ಅನಿತ್ಯವಾಗಿರ್ದ ಚತುರ್ದಶ ಭುವನ[3]ಂಗಳೊಳಗೆ ವಚಿಸಿ ವರ್ತಿಸುತ್ತಿರ್ಪ ವ್ಯಾಪಾರಂಗಳ ಬಲ್ಲವರಲ್ಲದೆ, ಪಾತಾಳಲೋಕದಿಂ ಕೆಳಗೆ ನಿತ್ಯತ್ವವಾಗಿರ್ದ ಪರಶಿವ ಲೋಕಂಗಳನು, ಪರಮ ಗಣೇಶ್ವರರುಗಳನೂ ಅರಿಯರು. ಆಕಾಶದಿಂ ಮೇಲೆ ನಿತ್ಯತ್ವವಾಗಿರ್ದ ಪರಶಿವಲೋಕಂಗಳನು ಪರಮ ಗಣೇಶ್ವರರುಗಳನು ಅರಿಯರು. ಈ ಚತುರ್ದಶ ಭುವನ ಲೋಕಂಗಳು, ಈ ಲೋಕಂಗಳೊಳಡಗಿಪ್ಪವರು ಇಂತಿವೆಲ್ಲವು ಪರತತ್ವವೆಂಬ ಮಹಾದೇವನ ಅನುಜ್ಞೆಯೆಂಬ ದೇಹದ ಅವಯವಂಗಳೊಳಗೆ ಅಡಗಿಪ್ಪವು. ಅವನೆಲ್ಲವನತಿಗಳದು ಮೂಲ ಪ್ರಣಮಗಂಗಳಿಂದ ಮಹಾತುಳಬಳ ಲಿಂಗವನು ಹಿಡಿವಂಥ ಭಕ್ತ ಮಾಹೇಶ್ವರರುಗಳು ಕೆಲರುಂಟು. ಇಂತೆಂಬ ಪುರಾತನರಗಣಿತ ವಚನ[4]ಗಳಿಗೆ ಸಾಕ್ಷಿ.

ಶತ ಸಿತ ಬ್ರಹ್ಮಾಂಢ ಚಕ್ರದಂಡ ಸ್ವಚಿತ್ತ ಭೂನಾಳದಂಡ ಜಾತಿನಾಳ ಕೂಪದಂಡ ಚೌಷಷ್ಠಿ ಕಿತ್ತಭ್ರೂವಕರು. [5]ವಿಭೂತಿ[6] ದ್ವಿತಿಯ ನಿಕಾಕಾಲದಂಡ. ಶಿವಭಕ್ತಿ ಸಂಪೂರ್ಣ ಸ್ವಚಿತ್ತವೆಂಬ ಭೂನಾಳದಂಡದಿಂ. ಕೆಳಗೆ ತೊಂಬತ್ತೈದುಕೋಟಿಯೂ, ತೊಂಬತ್ತಾರುಲಕ್ಷವು ತೊಂಬತ್ತೇಳುಸಾವಿರಯೋಜನ ಪ್ರಮಾಣುವಿನೊಳಗೆ ಕೆಳಗೆ ಕಿನ್ನರರುಗಳಿಹರು. ಆ ಕಿನ್ನರರುಗಳಿಂದ ಕೆಳಗೆ ತೊಂಬತ್ತೈದುಕೋಟಿಯು ತೊಂಬತ್ತಾರುಲಕ್ಷವು ತೊಂಬತ್ತೇಳುಸಾವಿರ ಯೋಜನ ಪ್ರಮಾಣಿನೊಳಗೆ ಕಿಂಪುರುಷರುಗಳಿಹರು. ಆ ಕಿಂಪುರುಷರುಗಳಿಂದ ಕೆಳಗೆ ತೊಂಬತ್ತೈದುಕೋಟಿಯು ತೊಂಬತ್ತಾರುಲಕ್ಷವು ತೊಂಬತ್ತೇಳುಸಾವಿರ ಯೋಜನ ಪ್ರಮಾಣಿನೊಳಗೆ ಸಿದ್ಧರುಗಳಿಹರು. ಆ ಸಿದ್ಧರುಗಳಿಂದ ಕೆಳಗೆ ತೊಂಬತ್ತೈದುಕೋಟಿಯು, ತೊಂಬತ್ತಾರು ಲಕ್ಷವು, ತೊಂಬತ್ತೇಳುಸಾವಿರ ಯೋಜನ ಪ್ರಮಾಣಿನೊಳಗೆ ವಿದ್ಯಾಧರರುಗಳಿಹರು. ಆ ವಿದ್ಯಾಧರರುಗಳಿಂದ ಕೆಳಗೆ ತೊಂಬತ್ತೈದುಕೋಟಿಯು ತೊಂಬತ್ತಾರು ಲಕ್ಷವು ತೊಂಬತ್ತೇಳುಸಾವಿರ ಯೋಜನ ಪ್ರಮಾಣಿನೊಳಗೆ ಗರುಡರಿಹರು. ಆ ಗರುಡರುಗಳಿಂದ ಕೆಳಗೆ ತೊಂಬತ್ತೈದುಕೋಟಿಯು ತೊಂಬತ್ತಾರುಲಕ್ಷವು ತೊಂಬತ್ತೇಳುಸಾವಿರ ಯೋಜನ ಪ್ರಮಾಣಿನೊಳಗೆ ಗಂಧರ್ವರುಗಳಿಹರು. ಆ ಗಂಧರ್ವರುಗಳಿಂದ ಕೆಳಗೆ ತೊಂಬತ್ತೈದುಕೋಟಿಯು ತೊಂಬತ್ತಾರುಲಕ್ಷವು ತೊಂಬತ್ತೇಳುಸಾವಿರ ಯೋಜನ ಪ್ರಮಾಣಿನೊಳಗೆ ಯಕ್ಷರು ರಾಕ್ಷಸರು ಮಯೂರಗಣ, ನಾಗರ್ಕಳು ನಾಗಗಣಗಳಿಹರು. ಇಂತು ಪಾತಾಳಭೂಮಿಯೆಂಬ ಕೂಪ[7] ನಾಳದಂಡದಿಂ ಸ್ವಚಿತ್ತವೆಂಬ ಭೂನಾಳದಂಡದಿಂ ಈ ಎರಡು ಭೂಮಿಯೊಳಗಿಪ್ಪ ಸಪ್ತಲೋಕಂಗಳೊಳಗೆ ಜಾತಿನಾಳಂ ಒಳ್ಳಿತಹಂಥಾ ಚೌಷಷ್ಠಿ, ಅರುವತ್ತು ನಾಲ್ಕು ವಿದ್ಯಂಗಳನು ಕಿತ್ತು ತೆಗೆದುಕೊಂಡು ಭ್ರೂವಕರು ಬಲ್ಲರುಗಳಾಗಿ ವಿಭೂತಿ ಆಶ್ಚರ್ಯಂಗಳಿಂದಲು ದ್ವಿತೀಯ, ದ್ವೈತ ಭಾವಂಗಳಿಂದಲು ನಿಕಾಸಮೂಹಂಗಳಿಂದಲು ಇರುತ್ತಿರ್ಪರು. ಇವು ಕೆಳಗಣ ಸಪ್ತಲೋಕಂಗಳಡಕಿಲುಗಳ ಪರಿಯಾಯಗಳೆಂದರಿವುದು. ಇಂತು ಪಾತಾಳ ಭೂಮಿಯೂ  ಈ ಭೂಮಿಯ[8] ಉಭಯವು ಕೂಡಲು ಆರುನೂರರುವತ್ತುಕೋಟಿಯು ಅರುವತ್ತುಲಕ್ಷವು ಎಂಬತ್ತೆಂಟುಸಾವಿರ ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು. ಇದು ಕೆಳಗಣ ಚಕ್ರದಂಡ. ಇನ್ನು ಬ್ರಹ್ಮಾಂಢ ಚಕ್ರದಂಡ. ಇಂತು ಧರೆಯಿಂದಂ ಮೇಲೆ ಹನ್ನೆರಡು ಯೋಜನ ಪ್ರಮಾಣಿನಲ್ಲಿ ಸಿಡಿಲು ಮಿಂಚು ಮುಗಿಲುಗಳಿಹವು. ಅದರಿಂದ ಮೇಲೆ ಮೂನೂರು ಮೂವತ್ತೇಳು ಯೋಜನ ಪ್ರಮಾಣಿನಲ್ಲಿ ಒಂದು ಮಹಾ ಲೋಕವಿಹುದು. ಆ ಮಹಾ ಲೋಕದ ಮೇಲೆ ಅದು ನೂರೆಪ್ಪತ್ತುನಾಲ್ಕು ಯೋಜನ ಪ್ರಮಾಣಿನಲ್ಲಿ ಅಷ್ಟ ದಿಕ್ಪಾಲಕರು ಇಹರು. ಆ ದಿಕ್ಪಾಲಕರಿಂದಂಮೇಲೆ ಒಂದುಲಕ್ಷ ಯೋಜನ ಪ್ರಮಾಣಿನಲ್ಲಿ ಸೂರ್ಯನಿಹನು. ಆ ಸೂರ್ಯನಿಂದ ಮೇಲೆ ಎರಡುಲಕ್ಷ ಪ್ರಮಾಣಿನಲ್ಲಿ ಚಂದ್ರನಿಹನು. ಆ ಚಂದ್ರನಿಂದ ಮೇಲೆ ನಾಲ್ಕುಲಕ್ಷ ಯೋಜನ ಪ್ರಮಾಣಿನಲ್ಲಿ ಬೃಹಸ್ಪತಿಯಿಹನು. ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನ ಪ್ರಮಾಣಿನಲ್ಲಿ ಮಂಗಳನಿಹನು. ಆ ಮಂಗಳನಿಂದ ಮೇಲೆ ಎಂಟುಲಕ್ಷ ಯೋಜನ ಪ್ರಮಾಣಿನಲ್ಲಿ ಬುಧನಿಹನು. ಆ ಬುಧನಿಂಧ ಮೇಲೆ ಹದಿನಾರುಲಕ್ಷ ಯೋಜನ ಪ್ರಮಾಣಿನಲ್ಲಿ ಬೃಹಸ್ಪತಿಯಿಹನು. ಆ ಬೃಹಸ್ಪತಿಯಿಂದ ಮೇಲೆ ಮೂವತ್ತೆರಡುಲಕ್ಷ ಯೋಜನ ಪ್ರಮಾಣಿನಲ್ಲಿ ಶುಕ್ರನಿಹನು. ಆ ಶುಕ್ರನಿಂದ ಮೇಲೆ ಅರುವತ್ತುನಾಲ್ಕು ಲಕ್ಷ ಯೋಜನ ಪ್ರಮಾಣಿನಲ್ಲಿ ಶನಿ ಇಹನು. ಆ ಶನಿಯಿಂದ ಮೇಲೆ ಒಂದು ಕೋಟಿ ಇಪ್ಪತ್ತೆಂಟುಲಕ್ಷ ಯೋಜನ ಪ್ರಮಾಣಿನಲ್ಲಿ ನಕ್ಷತ್ರಂಗಳಿಹವು. ಆ ನಕ್ಷತ್ರಂಗಳಿಂದ ಮೇಲೆ ಎರಡುಕೋಟಿ ಐವತ್ತಾರುಲಕ್ಷ ಯೋಜನ ಪ್ರಮಾಣಿನಲ್ಲಿ ರಾಹು ಕೇತುಗಳಿಹವು. ಆ ರಾಹು ಕೇತುಗಳಿಂದ ಮೇಲೆ ನಾಲ್ಕುಕೋಟಿ ಹನ್ನೆರಡುಲಕ್ಷ ಯೋಜನ ಪ್ರಮಾಣಿನಲ್ಲಿ ವರುಣನಿಹನು. ಆ ವರುಣನಿಂದ ಮೇಲೆ ಹತ್ತುಕೋಟಿ ಇಪ್ಪತ್ತೇಂಟುಲಕ್ಷ ಯೋಜನ ಪ್ರಮಾಣಿನಲ್ಲಿ ಸಪ್ತ ಮಹಾ ಋಷಿಗಳಿಹರು. ಆ ಸಪ್ತ ಋಷಿಗಳಿಂದಂ ಮೇಲೆ ಇಪ್ಪತ್ತು ಕೋಟಿ ನಾಲ್ವತ್ತೆಂಟುಲಕ್ಷ ಯೋಜನ ಪ್ರಮಾಣಿನಲ್ಲಿ ತ್ರಿವಿಧ ದೇವತೆಗಳಿಹರು. ಆ ತ್ರಿವಿಧ ದೇವತೆಗಳಿಂದಂ ಮೇಲೆ ಎಂಬತ್ತುಕೋಟಿ ತೊಂಬತ್ತುಲಕ್ಷ ಯ೬ಓಜನ ಪ್ರಮಾಣಿನಲ್ಲಿ ದೇವರ್ಕಳಿಹರು. ಆ ದೇವರ್ಕಳಿಂದ ಮೇಲೆ ತೊಂಬತ್ತು ಕೋಟಿ ಇನ್ನೂರುಲಕ್ಷ ಯೋಜನ ಪ್ರಮಾಣಿನಲ್ಲಿ ದ್ವಾದಶ ಆದಿತ್ಯರುಗಳಿಹರು. ಆ ದ್ವಾದಶ ಆದಿತ್ಯರುಗಳಿಂದ ಮೇಲೆ ನೂರರುವತ್ತುಮೂರುಕೋಟಿ ಎಂಬತ್ತು ನಾಲ್ಕುಲಕ್ಷ ಯೋಜನ ಪ್ರಮಾಣಿನಲ್ಲಿ ಸೇನ ಮಹಾಸೇನರುಗಳಿಹರು. ಆ ಸೇನ ಮಹಾಸೇನರುಗಳಿಂದ ಮೇಲೆ ಮುನ್ನೂರಿಪ್ಪತ್ತೇಳುಕೋಟಿ ಐವತ್ತಾರುಲಕ್ಷ ಯೋಜನ ಪ್ರಮಾಣಿನಲ್ಲಿ ಕೃತರೆಂಬ ಮಹಾ ಮುನಿಗಳಿಹರು. ಆ ಕೃತರೆಂಬ ಮಹಾ ಮುನಿಗಳಿಂದ ಮೇಲೆ ಮಹಾ ಕಾಳರಾತ್ರೆಯೆಂಬ ಕತ್ತಲೆ ಕವಿದಿಹುದು. ಇಂತು ಧರೆಯು ಆಕಾಶವು ಉಭಯವು ಕೂಡಲು ಆರುನೂರರವತ್ತುಕೋಟಿ ಅರುವತ್ತು ಲಕ್ಷ ಎಂಬತ್ತೆಂಟುಸಾವಿರ ಯೋಜನ ಪ್ರಮಾಣಿನ ಕಟ್ಟಳೆಯಾಯಿತ್ತು. ಆಕಾಶದ ಮೇಲೆ ಒಂದು ಮಹಾ ಮೇರುಮಂದಿರವೆಂಬ ಪರಶಿವ ಲೋಕವುಂಟು. ಆ ಪರಶಿವ ಲೋಕದಿಂದ ಹದಿನಾಲ್ಕು ಲೋಕವಾಗಿ ಹೋಗುತ್ತಿಹುದುಂಟು.  ಈ ಲೋಕಂಗಳೆಲ್ಲಿಹವೆಂದಡೆ ಮಹಾ ದೇವನ ಆಜ್ಞೆಯೆಂಬ ದೇಹದ ಅವಯವಂಗಳ ರೋಮ ಕೂಪಂಗಳೊಳಗಿಹವು. ಅದು ಹೇಗೆಂದಡೆ ಅತಳಲೋಕ ದೇವರ ಬಸುರಲ್ಲಿಹುದುಕ, ವಿತಳಲೋಕ ದೇವರ ಕಟಿಯಲ್ಲಿಹುದು, ಸುತಳಲೋಕ ದೇವರ ತೊಡೆಯಲ್ಲಿಹುದು. ಮಹೀತಳಲೋಕ ದೇವರ ಘಂಘೆಯಲ್ಲಿಹುದು. ತಳಾತಳ ಲೋಕ ದೇವರ ಜಾನುವಿನಲಿಹುದು. ರಸಾತಳಲೋಕ ದೇವರ ಗುಲ್ಪದಲ್ಲಿಹುದು. ಪಾತಾಳಲೋಕ ದೇವರ ಪಾದದಲ್ಲಿಹುದು. ಅಲ್ಲಿಂದ ಕೆಳಗುಳ್ಳಲೋಕವನಾತನೆ ಬಲ್ಲನು. ಮತ್ತೆ ಭೂಲೋಕ ದೇವರ ನಾಭಿಯಲ್ಲಿಹುದು. ಭುವರಲೋಕ ದೇವರ ಹೃದಯದಲ್ಲಿಹುದು. ಸುವರ್ಲೋಕ ದೇವರ ಭುಜದಲ್ಲಿಹುದು. ಮಹರ್ಲೋಕ ದೇವರ ಕಂಠದಲ್ಲಿಹುದು. ಜನಲೋಕ ದೇವರ ತಾಳೋಖ್ಯದಲ್ಲಿಹುದು. ತಪರ್ಲೋಕ ದೇವರ ಲಲಾಟದಲ್ಲಿಹುದು. ಸತ್ಯಲೋಕ ದೇವರ ಉತ್ತಮಂಗದಲ್ಲಿಹುದು. ಇಂತು ಈರೇಳು ಲೋಕಂಗಳನು ತನ್ನನೂಜ್ಞೆಯೆಂಬಲ್ಲಿಂದಂ ಮೇಲುಳ್ಳ ಲೋಕವನಾತನೆಬಲ್ಲನು. ಈ ಹದಿನಾಲ್ಕು ಲೋಕಂಗಳೆಲ್ಲವು ಕಾಲ ದಂಡವೆಂಬ ಪ್ರಳಯಕ್ಕೊಳಗಾಗುತ್ತಿಪ್ಪವು. ಇಂತೀ ಈರೇಳು ಲೋಕಂಗಳನು ತನ್ನನೂಜ್ಞೆಯೆಂಬ ದೇಹದಲ್ಲಿರಿಸಿ ತಾನು ಹೊದ್ದಿಯೂ ಹೊದ್ದದೆ ಇಪ್ಪ ಮಹಾ ತುಳಬಳಲಿಂಗವನಂ ಅಡಗಿಸಿಕೊಂಡೆನೆಂಬ ಮಹಾತುಳ ಬಲ್ಲಿದರುಂಟು. ಅದು ಹೇಂಗೆಂದೊಡೆ ಭಕ್ತಿ ಎಂಬ ಭಾವದಲ್ಲಿ ಸತ್ಯ ಸದ್ಭಾವವಿಡಿದು ಮೂಲ ಪ್ರಣಮಂಗಳೊಳಗೆ ಓಂ ಎಂಬ ಪ್ರಣಮವ ನೋಡಿ ಅರಿದ ಬಳಿಕ ದೇವರು ಒಂದು ರೂಪಾಗಿ ಬಪ್ಪರು ನಾಯೆಂಬ ಪ್ರಣಮವ ನೋಡಿ ಅರಿದ ಬಳಿಕ ದೇವರು[9] ನಂದಿ[10]ಯಾಗುತ್ತಂ ಬಪ್ಪ, ಮಾಯೆಂಬ ಪ್ರಣಮವ ನೋಡಿ ಅರಿದ ಬಳಿಕ ದೇವರು ಮಗನಾಗುತ್ತಬಪ್ಪ ಶಿ ಎಂಬ ಪ್ರಣಮವ ನೋಡಿ ಅರಿದ ಬಳಿಕ ದೇವರು ಶಿರದ ಮೇಲೆ ಬಂದಿಪ್ಪ. ವಾ ಎಂಬ ಪ್ರಣಮವ ನೋಡಿ ಅರಿದ ಬಳಿಕ ದೇವರು ವದನದಲ್ಲಿ ಬಂದಿಪ್ಪ. ಯ ಯೆಂಬ ಪ್ರಣಮವ ನೋಡಿ ಅರಿದ ಬಳಿಕ ದೇವರು ಸಂಗನ ಶರಣರ ಅಂಗೈಯೊಳಗೆ ಲಿಂಗವಾಗಿ ಬಂದಿಪ್ಪ. ಇಂತಪ್ಪ ಶರಣರುಗಳ[11]ಲ್ಲಿ ಏಕೈಕವಾಗಿರ್ದ ಮಹಾಲಿಂಗಕ್ಕೆ ಶಿವಭಕ್ತನ ಕಾಯವೆ ಕೈಲಾಸ, ಶಿವಭಕ್ತನ ನಡೆಯಲ್ಲಾ ತೀರ್ಥ, ನುಡಿಯೆಲ್ಲ ಶಿವತತ್ವ, ಶಿವಭೂತಿ ಶಿವಮಂತ್ರವೆ ಸಿದ್ಧಿ ಹೀಂಗಹುದೆಂದರಿದ ಪಾದೋದಕ ಪ್ರಸಾದಕ್ಕೆ ಮನ ಬಯಸುತ್ತದೇನೆ ಕಾಣಾ ಕೂಡಲ ಚೆನ್ನಸಂಗಮದೇವಯ್ಯ.

ಮನ ಮಾಯೆ ಜೀವವೆಂಬ ತ್ರಿವಿಧವಿಡಂಬನಸ್ಥಲ
ಸಮಾಪ್ತ ಮಂಗಳಮಹಾ.


[1] ತೆತ್ತಿಸಿ (ಬ)

[2] + ಭವನ (ಬ)

[3] + ಭವನ (ಬ)

[4] + ರಸ (ಬ)

[5] ವಿಶ್ರಾಂತಿ (ಬ)

[6] ವಿಶ್ರಾಂತಿ (ಬ)

[7] + ಂಗಳ (ಬ)

[8] ಯು (ಬ)

[9] ನೆಂಟ (ಅ)

[10] ಳಿ (ಅ)

[11] ಳಿ (ಅ)