೩೧೩

ಇಪ್ಪತ್ತುನಾಲ್ಕು

[1]ಸ್ಥಿತಿ[2] ಗಳಿಂದವೆಗ್ಗಳ.[3]ಗ್ರಹಣ, ಸಂಕ್ರಾತ್ರಿ,[4] ಗ್ರಹಣ ಸಂಕ್ರಾತ್ರಿಯಿಂದ ವೆಗ್ಗಳ.
ಏಕಾದಶಿ, ಏಕಾದಶಿಯಿಂದ ವೆಗ್ಗಳ.
ವ್ಯತಿಪಾತ, ವ್ಯತಿಪಾತದಿಂದ ವೆಗ್ಗಳ.
ಪೂರ್ವ ಶಿವಪಥವನರಿಯದವಂಗೆ
ಹೋಮ ನೇಮ ಜಪ ತಪದಿಂದ ವೆಗ್ಗಳ
ಕೂಡಲ ಸಂಗಮದೇವಾ ನಿಮ್ಮ ಮಾಣದೆ ನೆನವಂಗೆ    ||೨೪||

೩೧೪

ನಿರಾಲಂಬದಲ್ಲಿ ನಿಜಲಿಂಗ ನಾನೆಂಬ ಮಹದಂಕಾರವೆ
ಸಂಸಾರಿಯಾಗಿ ಬಂದು ಬಳಲುವ
ಭ್ರಾಂತು ಇನ್ನಾರಿಗೆ ತಿಳಿವುದಯ್ಯಾ?
ಇನ್ನಾರು ಪರಿಹರಿಸುವದಯ್ಯಾ ಬಸವಣ್ಣನಲ್ಲದೆ?
ಇದು ಕಾರಣ ಬಸವಣ್ಣನ ಶ್ರೀಪಾದವ
ತೋರಿ ಬದುಕಿಸಾ ಕೂಡಲ ಚನ್ನಸಂಗಮದೇವಾ         ||೨೫||

೩೧೫

ಬಾಯಿ ಭಗವಾಗಿ, ಕೈ [5]ಗುಹ್ಯವಾಗಿ,[6] ಹಾಕುವ ತುತ್ತುಗಳೆಲ್ಲ ಬಿಂದು[7]ಗಳಾಗಿ ತೋರುತಾವೆ[8] ಕಾಣಿರೋ!
ಪ್ರಮಥ ವಿಷಯವಿಂತಿರಲಿಕೆ ಗುಹೇಶ್ವರಾ ಯಾಕೋ ಅದ್ವೈತ?    ||೨೬||

೩೧೬

ಆದಿಯಲ್ಲಾಗಲಿ, ವೇದದಲ್ಲಿಯಾಗಲಿ
ಶಾಸ್ತ್ರದಲ್ಲಿಯಾಗಲಿ, ಪುರಾಣದಲ್ಲಿಯಾಗಲಿ
ಆಗಮದಲ್ಲಾಗಲಿ, ಸಮಯದಲ್ಲಿಯಾಗಲಿ
ಎನ್ನವರೆನ್ನನು ಎನ್ನವನೆಂದೆನ್ನನು
ಎನ್ನವರೆಂದಡೆ ಕೂಡಲಸಂಗಮದೇವ ನಿಮ್ಮಲ್ಲಿಗೆ ದೂರ,
ಎನ್ನವರಾಡಿದಡೀ ಜನ್ಮಕ್ಕೆ ನಡವರೆ,
ಅದು ಕಾರಣ ಎನ್ನವರಲ್ಲ ಸಂಗ ನಿಮ್ಮಾಣೆ.     ||೨೭||

ಅಷ್ಟರಿಂದ ಮೇಲೆ ಆಯುಕ್ತನೆಂಬ ಯುಗ ಹುಟ್ಟಿ ನೂರೈದು ಕೋಟಿಯ ಐದು ಲಕ್ಷವು ಐದು ಸಾವಿರ ವರುಷವು ವರ್ತಿಸುತ್ತ ಇದ್ದಿತ್ತು. ಈ ಒಂದು ಯುಗದ ಅರಸಿನ ಹೆಸರು ಸರ್ವಜ್ಞರಾಯನೆಂದು. ಈ ರಾಯನು ಶ್ರೀಕಲ್ಯಾಣ ಮಧ್ಯದ ಗದ್ದುಗೆಯ ಮೇಲೆ ಕುಳಿತು ಸರ್ವಜ್ಞನೆಂಬ ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆಯೂ ಚರಶೇಷವ ಲಿಂಗಕ್ಕೆ ಕೊಟ್ಟು ಆರೋಗಿಸುವಲ್ಲಿ ತ್ರಿವಿಧ ದಾಸೋಹವಂ ಕೆಲವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದ ರಸವಜ್ರ ಕಯಲಾಸಕ್ಕೆ ಹೋಗುತ್ತಿಹರು. ಈ ಯುಗದೊಳಗೆ ಕಾಲಬದ್ಧನೆಂಬ ವಾದಿ ಕಾಲವೆ[9] ದೈವವೆಂದು ಪ್ರತಿಷ್ಟೆಯಂ ಮಾಡಿ ಕುಲಂಗಳ ಹಿಡಿದು ಬಿಡುತ್ತ ತಿರುಗುತ್ತಿ ಹಲ್ಲಿ ಹದಿನೆಂಟು ಯುಗಕ್ಕೆ ಹದಿನೆಂಟು ಧಾನ್ಯಂಗಳುದಿಸಿರ್ದಹವು. ಆಗಲಿಕ್ಕಾಗಿ
ಅವನು ಪ್ರಸಾದರಸವಜ್ರ ಕೈಲಾಸಕ್ಕೆ ಪತಿ. ಮರುಳು ಕಂಕಣದ ಹಜಾರ ಚಾವಡಿಯ ಓಲಗಶಾಲೆಗೆ ಪಂಚತಂಡದವರುಗಳ ನೋಡಬೇಕೆಂದು ಬಿಜಯಂ ಗೈದು, ಸ್ವಯಂಜ್ಯೋತಿ[10] ಸ್ವರೂಪನಾಗಿ ಮೂರ್ತಿ ಮಾಡಿ ಅನಂತ ಕೋಟಿ ಪರಮ ಗಣೇಶ್ವರರ ಸಮ್ಮೇಳನದಿಂ ಸರ್ವಜ್ನನಾಗಿಪ್ಪ ಸಮಯದೊಳಗಾ ಸುಜ್ಞಾನ ಶಿವ ಮರುಳುಗಳ ತಂಡಗಳು, ಕಸ್ಯಪ ಸೃಷ್ಟಿಯ ಕೈಲಾಸಂಗಳಿಂಗೆ ಘಮ್ಮನೆಯ್ದು ಷಡುಸಾದಾಖ್ಯ ನಾಯಕರುಗಳಿಗೆ ಪರಶಿವ ಮೂರ್ತಿಕಂಕಣ ಚಾವಡಿಗೆ ಚಿತ್ತೈಸಿದರೆಂದು ನಿರೂಪಿಸಲಾಕ್ಷಣ ಎದ್ದು ತಮ್ಮ ತಮ್ಮ ಪಡೆಗಳು ಸಹಿತ ಮನ ಮಾಯೆಗಳು ಗರ್ವಮೇರುವೆಂಬ ದ್ರವ್ಯದ ಕೆಳಕಿಳಿದು ತ್ವರಿತದಿಂ ಬಂದು ಹದಿನೆಂಟು ಜಂಘೆಯಷ್ಟಂ ಬಿಟ್ಟು ನಿಂದು ಭೃತ್ಯಭಾವದಿಂ ಬಿದ್ದೆದ್ದು ಕಯಗಳಂ ಮುಗಿದು ಓಲೈಸುತ್ತಿರುವಾಗ ಎಂಬತ್ತು ಸಾವಿರ ಯೋಜನ ಪ್ರಮಾಣಿನ ದ್ರವ್ಯದ ಕಣದ ಮೇಲೆ ಎರಡೆಂಬತ್ತೆಂಟು ಕೋಟಿ ತಾಮಸ ಶ್ರೀಕಂಠ ಪ್ರಮಥಗಣಂಗಳು ತಮ್ಮ ನಾಲ್ವರು ಕರ್ತೃಗಳ ಸಮೀಪದಲ್ಲಿಹರು. ನವಕೋಟಿ ನಾರಾಯಣರು ನವಕೋಟಿ ಬ್ರಹ್ಮರು ತಮ್ಮ ಕರ್ತೃಗಳ ಹತ್ತಿಲಿಹರು. ಮೂವತ್ತು ಮೂರು ಕೋಟಿ ದೇವರ್ಕಳು ಚಪ್ಪನ್ನಕೋಟಿ ರಾಕ್ಷಸರು ತಮ್ಮ ಕರ್ತೃಗಳ ಸಮೀಪದಲ್ಲಿಹರು. ಅಷ್ಟಾಶತಸಹಸ್ರ ಋಷಿಯರು ತಮ್ಮ ಕರ್ತೃಗಳ ಹತ್ತಿಲಿಹರು. ತುಂಬುರ, ನಾರದರು, ಕಿನ್ನರರು, ಕಿಂಪುರುಷರು, ಗರುಡ, ಗಾಂಧರ್ವರು, ಸಿದ್ಧವಿದ್ಯಾಧರರು, ಯಕ್ಷರು, ಗುಹ್ಯಕರು, ಮಯೂರರು ತಮ್ಮ ತಮ್ಮ ಕರ್ತೃಗಳ ಹತ್ತಿಲಿಹರು. ಇಂತು ನಿಃಕಲರು ಸಕಲರು ಪ್ರಳಯಾಕಲರು, ವಿಜ್ಞಾನಕಲರು, ಸಕಲಕಲರು ಈ ಪಂಚತಂಡದವರು ಸಪ್ತಾವರಣರಾಗಿಹರು. ಕೆಲಂಬರು ಪಂಚಮಹಾವಾದ್ಯಂಗಳ ನುಡಿಸುತ್ತಿಹರು. ಕೆಲರು ನೃತ್ಯವನಾಡುತ್ತಿಹರು. ಕೆಲರು ಉಘೆ ಚಾಂಗು ಭಲಾ ಎನುತ್ತಿಹರು. ಕೆಲರು ಕೈವಾರಿ ಸುತ್ತಿಹರು. ನವಗ್ರಹಂಗಳು ಸಪ್ತ ಮಾತೃಕೆಯರು ಸಪ್ತ ವಿಂಶತಿ ನಕ್ಷತ್ರಂಗಳು ಧೃವ ಮಂಡಲಂಗಳು, ದ್ವಾದಶಾದಿತ್ಯರು ಇಂತಿವೆಲ್ಲವು ಬಳಸಿ ಬಳಸಿ ಬರುತ್ತಿಹವು. ಈ ಪಂಚಾಂಗ ಪಂಚತಂಡದವರುಗಳೆಲ್ಲರು ತಮ ತಮಗೆ ಸಲುವಂಥಾ ವಾಹನಂಗಳು ತಮ ತಮಗೆ ಸಲುವಂಥಾ ಆಯುಧಾಭಾರಣಂಗಳನು ಶಕ್ತಿಗಳನು, ತಮ ತಮಗೆ ಸಲುವಂಥಾ ಕ್ರಿಯೆಗಳು, ತಮ ತಮಗೆ ಸಲುವಂಥಾ ಶ್ರುತಿಯ ಉಪದೇಶಂಗಳು ಇಂತಿವೆಲ್ಲವು ಸಹಿತ ಆ ಸ್ವಯಂಜ್ಯೋತಿ ರುದ್ರನ ಗರ್ದುಗೆಯ ಕೆಳಗೆ ಓಲೈಸುತ್ತ ಆ ಪರತತ್ವ ಸ್ವರೂಪನ ಕೈಯಲ್ಲಿ ಕಳುಹಿಸಿಕೊಂಡು ತಮ್ಮ ತಮ್ಮ ಯೋನಿಜ ವಾಸಂಗಳಿಗೆ ಬಂದು ಇರುತ್ತ ಮತ್ತೆ ಎಂದಿನಂತೆ ಓಲಗಕ್ಕೆ ಯೋನಿಜ ಕೈಲಾಸಂಗಳಿಂದ ಹೋಗುತ್ತ ಬರುತ್ತಿಹರು. ಅಷ್ಟರಿಂದಂ ಮೇಲೆ ಬ್ರಹ್ಮ, ವಿಷ್ಣು, ರುದ್ರ, ಈಶ್ವರ, ಸದಾಶಿವ, ಪರಮೇಶ್ವರರೆಮಬೀ ಷಡುಸಾದಾಖ್ಯ ನಾಯಕರು ಒಂದಲ್ಲದೊಂದು ಕಾಲದಲ್ಲಿ ಸ್ವಯಂಭು ಸ್ವಾಮಿಯ ಎಡಬಲದ ಸಮಗದ್ದುಗೆಯ ಮೇಲೆ ಕುಳಿತಿಹೆನೆಂದು ಉಪಮಿಸುವಾಗ ಆ ಸರ್ವಜ್ಞನ ಉಪಮೆಯನರಿಯಲಾಕ್ಷಣ ಆತನ ಸ್ವಯಂ ಜ್ಯೋತಿ ಪ್ರಕಾಶವು ಪ್ರಸಾದ ರಸ ವಜ್ರಕೈಲಾಸದ ಸರ್ವಾಂಗವನು ಸುತ್ತಿದಡೆ ತಾ ಉರಿಲಿಂಗವಾದನು. ಅದೇನು ಕಾರಣ ಉರಿಲಿಂಗವಾದನೆಂದಡೆ, ಅರಿವು ಮರವೆಯೊಳು ಈಶಾಡಿದರೆಂದು ಕಾಮ ಗಣಂಗಳಿವರು. ಅರಿವು ಮರವೆ ಕಾಮಹರ ಲಿಂಗದ ಸಮಗದ್ದುಗೆಗೆ ಸಲ್ಲರೆಂದು ಹಾಂಗಾದನು. ಆಗಲಿಕೆ, ಷಡುದೇವತೆಗಳು ಅಂಜಿ ಒಪ್ಪಚ್ಚಿ ತೊಲಗಿತ್ತ ನಿಂದು ನಾವುವೆಣಿಸಿದ ಗರ್ವನಾ ಸರ್ವಜ್ಞನರಿದಲಾ ಎಂದು ತಳತ್ತಳಮತ್ತಳಗೊಳುತ್ತ ಮನ ಮಾಯೆಗಳ ಯೋನಿಜ ಪರಮೇಶ್ವರ ಮೇರು ಪರ್ವತವ ಹೊಕ್ಕನು. ಸದಾಶಿವ ಮಾನುಷ್ಯ ಪರ್ವತವ ಹೊಕ್ಕನು. ಈಶ್ವರ ರಜತ ಪರ್ವತವ ಹೊಕ್ಕನು. ರುದ್ರ ನೀಲ ಪರ್ವತನ ಹೊಕ್ಕನು. ವಿಷ್ಣು ಮಂಧರ ಪರ್ವತವ ಹೊಕ್ಕನು. ಬ್ರಹ್ಮನು ಅತಪರ್ವತ ಹೊಕ್ಕನು. ದೇವೇಂದ್ರ ಕೀಲ ಪರ್ವತವ ಹೊಕ್ಕನು. ಋಷಿಗಳು ಹಿಮವತ್ಪರ್ವತವ ಹೊಕ್ಕರು. ಇಂತಿವರೆಲ್ಲರು ಯೋನಿಜ ಕೈಲಾಸವ ಹೊಕ್ಕರು. ಆ ಸಮಯದೊಳು ಅಜಹರಿಗಳು ಸುಮ್ಮನಿರದೆ ನಾ ಕುಳಿತೆಹೆ ತಾ ಕುಳಿತೆಹೆವೆಂದು ವಾದಿಸಿ ಅಂಜನಾಸಿದ್ಧಿ, ಘಟಿಕಾಸಿದ್ಧಿ, ಮಂತ್ರ ಸಿದ್ಧಿ, ತ್ರಿಕಾಲಜ್ಞಾನ, ದೂರ ದೃಷ್ಟಿ, ದೂರ ಶ್ರವಣ, ಪರಕಾಯಪ್ರವೇಶ ಕಮಲ ದರುಶನ, ಜಲಸ್ತಂಭ, ಅಗ್ನಿ ಸ್ತಂಭ ಇಂತಿವರಿಂದ ಹೋಗಿ ಕಂಡು ಕುಳಿತಿಹೆವೆಂದು ವಾದಿಸಿ ಅಂಜನಾಸಿದ್ಧಿ, ಘಟಿಕಾಸಿದ್ಧಿ, ಮಂತ್ರ ಸಿದ್ಧಿ, ತ್ರಿಕಾಲಜ್ಞಾನ, ದೂರದೃಷ್ಟಿ, ದೂರ ಶ್ರವನ, ಪರಕಾಯಪ್ರವೇಶ ಕಮಲ ದರುಶನ, ಜಲಸ್ಥಂಭ, ಅಗ್ನಿಸ್ತಂಭ ಇಂತಿವರಿಂದ ಹೋಗಿ ಕಂಡು ಕುಳಿತಹೆವೆಂದು ತಮ್ಮ ನಾಲ್ವರು ಹಿರಿಯರುಗಳ ಕೇಳಲವರು ಬೇಡವೆಲಾ ಮಾತಿಗ ಎಅಂಚಿ ತೊಲಗದೆ ತಾವು ಹೋಗಿ ಮರುಳು ಕಂಕಣದ ಸಮೀಪಸ್ತದೊಲು ನಿಲಲಾಕ್ಷಣ ಆ ಪರಮ ಶಾಂತಿಯ ಪ್ರಕಾಶವು ಸುಡುವಂಥಾ ಪ್ರಕಾಶವಾಗಿ ಭುಗಿಭುಗಿಲೆನುತ ಮೊದಲಾರ್ಭಟಿಸಿ ಹೊಡೆಯಲೊಡನೆ ಇಬ್ಬರ ಅಟ್ಟಿ ಬೆಂದು ಉರಿದು ಬೀಳಲು ಆ ಸಿದ್ಧಗಳೆಲ್ಲ ಸಟೆಯಾದುದನರಿಯದೆ ಮತ್ತುಳಿದಿರ್ದಷ್ಟ್‌ಐಶ್ವರ್ಯಂಗಳಿಂದಾ ಸಿದ್ದಿಗಳನು ಬೆರಸಿ ವರಹನ ಜೋಹದ ವಿಷ್ಣು ತೊಟ್ಟನು. ಗರುಡನ ಜೋಹವ ಬ್ರಹ್ಮ ತೊಟ್ಟನು. ತೊಟ್ಟ ಬಳಿಕಾ ಮಹಾ ಮೇರುವಿನ ಅಡಿಯದ್ವಾರದೊಳು ಹೊಕ್ಕು ಈ ಸಮಗದ್ದುಗೆಗೆ ಬಂದೆಹೆನೆಂದು ವಿಷ್ಣು ಭೂಮಿಯ ಗುದ್ದಿ ಹೊಕ್ಕು ಪಾತಾಳಭೂಮಿ ಪರಿಯಂತರ ಹೋಗಿ ಇಳಿದು ಶರಣನ ನಿಲವಿನ ಪಾದಪದ್ಮ ಅವಿರಳವ ಕಾಣದೆ ರುದ್ರನಿರ್ದ ನೀಲ ಪರ್ವತಕ್ಕೆ ಬಂದು ನಿಲವಿನ ರುದ್ರನ ಕಂಡೆಯಾ ಎಂದಡೆ ಈತ ಕಂಡೂದಿಲ್ಲವೆಂದನು. ಬ್ರಹ್ಮಾರಿಯಾಕಾಶವದೆ ಇದೆ ಎಂಬ ಹಾಂಗೆ ಹೋಗುವಾಗ ಆಕಾಶವ ಸೋಂಕಿರ್ದ ಕಾಳಾಂಧರವದ ಲೋಕದೊಳ ಗಣ ಕೃತರೆಂಬ ಮುನಿಗಳ ತಲೆಯಿಂದ ಕೇತಕಿ ರಾಜ ನಿರ್ಮಾಲ್ಯವಾಗಿಳಿದು ಬರುವಲ್ಲಿ ಬ್ರಹ್ಮ ಕಂಡಿತ್ತಲೇಕೈತಂದೆಯೆಂದು ಕೇಳಿದಡೆ ಅಜನು ಮಹಾ ಮೇರುವಿನ ಶಿರಕಮಲವ ಕಂಡು ಅದರನಾಳದಲ್ಲಿ ಹೊಕ್ಕು ನೋಡಬೇಕೆನುತ ಬಂದೆನೆಂದನು. ಎಂದಾಕ್ಷಣ ನಿನಗಗೋಚರವಾಗಿರ್ದ ದೃವ ಮಂಡಲ ಅಗೋ ಚರಿಸೂದೆ ತಿರುಗು. ಆಕಾಶದಿಂದತ್ತ ಹೋಗಬಾರದೆಂದು ಇಬ್ಬರು ಯೋನಿಜ ಕೈಲಾಸವೆಂಬ ನೀಲಾದ್ರಿಯಲ್ಲಿಗೆ ಬರುಲು ಜಡರುದ್ರ ಕಂಡೆಯೆಂದು ಅಜನ ಕೇಳಿದಡೆ ಇಬ್ಬರ ಕಡೆಯಲೂ ಆರು ರುದ್ರ ಹುಸಿ ಎನಲು ಎನುತ ಝಂಕಿಸಿ ಜಡಿದು ಕೋಪಿಸಿದನು. ಅಷ್ಟರಿಂದಂ ಮೇಲೆ ಸ್ವಯಂಜ್ಯೋತಿ ಪರಶಿವನ ಮೊದಲು ಬಹಿರ್ಗತ ಪ್ರಕಾಶಮಂ ಅಂತರ್ಗತವ ಮಾಡಿಕೊಂಡಿಪ್ಪುದ ಷಡು ದೇವತೆಗಳು ಅರಿದು ಎಂದಿನಂತೆ ಭೃತ್ಯರಾಗಿ ಓಲಗಕ್ಕೆ ಹೋಗುತ್ತ ಬರುತ್ತ ಬರುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನರಸಂಗಳಿಗೆ ಸಾಕ್ಷಿ:

೩೧೭

ಪ್ರಥಮ ಕಾಲದಲ್ಲಿ ದೇವಗಣ
ಸುರಗಣ, ಕಿನ್ನರಗಣ, ಆಳಾಪಗಣ ಸಹಿತ
ಸಮ್ಮೇಳ ನ[11]ಮ್ಮ ಬಸವಣ್ಣನು.
ಆ ಬಸವಣ್ಣನೆ ಗಣ ಪ್ರಸಾದಿಯಾಗಿ
ಮರ್ತ್ಯಲೋಕಕ್ಕೆ ಮಹವಂ ತಂದು ಮಾಡಿದಾತ ಬಸವಣ್ಣನು.
ಸಾಕಾರ ಸ್ವರೂಪವನು ಪದಾರ್ಥವೆಂದು ಮಾಡಿದಾತನು
ಕಲಿದೇವಾ ನಿಮ್ಮ ಶರಣ ಬಸವಣ್ಣನು.           ||೨೮||

೩೧೮

ಅನಾದಿ ಪುರುಷ ಬಸವಣ್ಣ,
ಕಾಲ ಮಾಯೆಗಳೆರಡೂ ನಿಮ್ಮ ಮುಂದಿರ್ದು
ನಿಮ್ಮ ಕಾಣೆನೆನುತ್ತಿಹವು.
ಆದಿ ಪುರುಷ ಬಸವನ್ಣ ಅಸುರಾಸುರರು ನಿಮ್ಮ ಮುಂದಿರ್ದು
ನಿಮ್ಮ ಕಾಣೆನೆನುತ್ತಿಹರು.
ನಾದ ಪುರುಷ ಬಸವಣ್ಣ
ನಾದ ಮಂತ್ರಗಳು, ಪಂಚ ಮಹಾ ವಾದ್ಯಂಗಳು
ನಿಮ್ಮ ಮುಂದಿರ್ದು ನಿಮ್ಮ ಕಾಣೆನೆನುತ್ತಿಹವು.
ವೇದ ಪುರುಷ ಬಸವಣ್ಣ, ವೇದ ಶಾಸ್ತ್ರಾಗಮಂಗಳು ನಿಮ್ಮ ಮುಂದಿರ್ದು
ನಿಮ್ಮ ಕಾಣೆನೆನುತ್ತಿಹರು.
ಅಗಮ್ಯ ಪುರುಷ ಬಸವಣ್ಣ, ಅಂಗಾಲ ಕಣ್ಣವರು
ಮೈಯೆಲ್ಲ ಕಣ್ಣವರು ನಂದಿವಾಹನರು
ಗಂಗೆವಾಳುಕರೆಲ್ಲರೂ ನಿಮ್ಮ ಮುಂದಿರ್ದು, ನಿಮ್ಮ ಕಾಣೆನೆನುತ್ತಿಹರು.
ಅಗೋಚರ ಪುರುಷ ಬಸವನ್ಣ,
ಈ ಗೋಚರಿಸಿದ ಮನು ಮುನಿ ದೇವ ದಾನವ ಮಾನವರೆಲ್ಲಾ
ನಿಮ್ಮ ಮುಂದಿರ್ದು ನಿಮ್ಮ ಕಾಣೆನೆನುತ್ತಿಹರು.
ಅಪ್ರಮಾಣ ಪುರುಷ ಬಸವಣ್ಣ,
ಈ ಪ್ರಮಾಣರೆಲ್ಲರು ನಿಮ್ಮ ಮುಂದಿರ್ದು
ನಿಮ್ಮ ಕಾಣೆನೆನುತ್ತಿಹರು.
ಸರ್ವಜ್ಞ ಪುರುಷ ಬಸವಣ್ಣ,
ಈ ಸರ್ವರು ನಿಮ್ಮ [12]ಮುಂದಿರ್ದು[13] ನಿಮ್ಮ ಕಾಣೆನೆನುತ್ತಿಹರು.
ಇಂತೀ ಸರ್ವ ಪ್ರಕಾರದವರೆಲ್ಲರು[14] ನಿಮ್ಮ ಸಾಧಿಸಿ, ಭೇದಿಸಿ, ಪೂಜಿಸಿ, ತರ್ಕಿಸಿ, ಹೊಗಳಿ ಕಾಣದೆ,
ನಿಮ್ಮಿಂದವೆ ಉತ್ಪತ್ಯ, ಸ್ಥಿತಿ, ಲಯಂಗಳಾಗುತ್ತಿಹರು.
ಅದು ಕಾರಣ ಗುಹೇಶ್ವರಲಿಂ[15]ಗದೊಳಗೆ ಭಕ್ತಿವಡೆದನಂತ
ಭಕ್ತರೆಲ್ಲಾ ಬಸವಣ್ಣ, ಬಸವಣ್ಣಾ ಎನುತ ಬದುಕಿದರಯ್ಯಾ. ||೨೯||

೩೧೯

ಉಚ್ಚೆಯ ಬಚ್ಚಲ ಜವುಗಿನ ಕಂಪಿನಲ್ಲಿ
ನಿಚ್ಚಕ್ಕೆ ನಿಚ್ಚ ಹೊರಳುವ ಹಂದಿಯಂತೆ,
ಶಿವನಿಚ್ಛೆಯನರಿಯದೆ ಮಾತನಾಡುವರ
ಮೆಚ್ಚುವನೆ ಗುಹೇಶ್ವರ ಲಿಂಗವು.      ||೩೦||

೩೨೦

ಸತ್ಯವಿಲ್ಲದವರೊಡನೆ ಸಹಸ್ರಕ್ಕೊಮ್ಮೆ ನುಡಿಯಲಾಗದು;
ಲಕ್ಷಕ್ಕೊಮ್ಮೆ ನುಡಿಯಲಾಗದು;
ಕೋಟಿಗೊಮ್ಮೆ ನುಡಿಯಲಾಗದು.
ಸುಡು ಸುಡು ಅವಂದಿರ ಕೊಡೆ ಮಾರಿ ಹೋರಲಿ.
ಗುಹೇಶ್ವರಾ, ನಿಮ್ಮ ಶರಣರಲ್ಲದವರೊಡನೆ ಬಾಯಿದೆರೆಯಲಾಗದು. ||೩೧||

೩೨೧

ಜ್ಯೋತಿಯ ಕಂಡಿರಲು ಕತ್ತಲೆ ಕಂಡ್ಯಾ.
ನಿಧಾನವ ಕಂಡಿರಲು ಬಡತನ ಕಂಡ್ಯಾ.
ಪ್ರಸಾದವ ಕಂಡಿರಲು ಪ್ರಳಯ ಕಂಡ್ಯಾ.
ಗುಹೇಶ್ವರನ ಕಂಡಿರಲು ಭ್ರಾಂತು ಕಂಡ್ಯಾ.    ||೩೨||

೩೨೨

ರೇಚಕ ಪೂರಕ ಕುಂಭಕವೆಂಬ ಗರುಡ
ವಾಯುವಿನ ಸೋಂಕ ತೆಗದು, ಬ್ರಹ್ಮಾಂಡದಲ್ಲಿಟ್ಟು
ದ್ವಾರಕವಾಟವ ತೆಗದು ಡಾ[16]ಳಿಸುತ್ತಿರ್ದುದು.
ಬಾಲ ಕುಮಾರ ಪ್ರೌಢ ವಿಭಾಗದಲ್ಲಿ
ಕಾ[17]ವಳಂ[18] ಪಕ್ಕುದು, ಕಾಳಾಂಧರದಿಂದತ್ತತ್ತಲಾರು ಬಲ್ಲರೊ?
ಇತ್ತಿತ್ತಲಾರು ಬಲ್ಲರೊ?
ಅಪ್ಪುವಿನ ಘಟವ ಹೊತ್ತುಕೊಂಡು ಸುಳಿದು
ಜಗದೊಳಗೆ ಅರು ಬಿರಿ[19]ದಿಲಾ[20]ಡುತ್ತಿಹರು.
ನಿರಾಳದಲ್ಲಿ ನೆರವ ಭೇದವ
ಕೂಡಲಚೆನ್ನಸಂಗಯ್ಯನಲ್ಲಿ ಲಿಂಗೈಕ್ಯರನುವ
ಆ ಲಿಂಗೈಕ್ಯರೆ ಬಲ್ಲರು [21]ಎಂದು ಶ್ರುತಿ ಸನುಮತವು.[22] ||೩೩||

೩೨೩.

ಮೋಟರ  ಮದುವಿಗೆ ಭಂಡರು [23]ಹರೆಯ[24] ಹಾಯ್ದರೆ,
ಮೂಕೊ[25]ರಿತಿ[26]ಯರು ಕಳಸವ ಹೊತ್ತರಲ್ಲಾ.
ಉಘೇ ಚಾಂಗು ಭಲಾ ಎಂದು ನಿಬ್ಬನ ನೆರದು
ಹೂ ತಂಬುಲಕ್ಕೆ ಮುನಿವರದೇನಯ್ಯಾ?
ತ್ರಿಜಗವೆಲ್ಲಾ ನಿಬ್ಬಣವಾಯಿತ್ತು
ಗುಹೇಶ್ವರನನರಿಯದೆ ಹಗರಣವಯ್ಯಾ.        ||೩೪||

ಅಷ್ಟರಿಂದಂ ಮೇಲೆ ಮಯಿಯುಕ್ತನೆಂಬ ಯುಗಹುಟ್ಟಿ ತೊಂಬತ್ತೈದು ಕೋಟಿಯೂ ಆಯ್ದು ಲಕ್ಷವು ಐದು ಸಾವಿರ ವರುಷವೂ ವರ್ತಿಸುತ್ತಿದ್ದಿತ್ತು.  ಈ ಯುಗದ ಅರಸಿನ ಹೆಸರು ಮಹಾದೇವರಾಯನೆಂದು, ಈ ರಾಯನು ಶ್ರೀಕಲ್ಯಾಣ ಮಧ್ಯದ ಗದ್ದುಗೆಯ ಮೇಲೆ ಕುಳಿತು ಮಹಾಲಿಂಗವೆಂಬ ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂದ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯು ಮರ್ತ್ಯ ಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಆರೋಗಿಸಿ ತ್ರಿವಿಧ ದಾಸೋಹವಂ ಕೆಲ ವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣ ನಿಚ್ಚಣಿಗೆಯ ಮೇಲೆ ಪ್ರಸಾದರಸವಜ್ರೋಪವೆಂಬ ರಜತ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಕರ್ಮ ಬದ್ಧಕನೆಂಬ ಒಬ್ಬ ವಾದಿ ಕರ್ಮವೆ ದೈವವೆಂದು ಪ್ರತಿಷ್ಠೆಯ ಮಾಡಿ ಕುಲಂಗಳ ಹಿಡಿವುತ್ತ ಬಿಡುತ್ತ ತಿರುಗುತ್ತಿಹಲ್ಲಿ ಬ್ರಹ್ಮ ವಿಷ್ಣುಗಳು ಮತ್ತೆಯು ಸುಮ್ಮನಿರದೆ ಕೈಲಾಸಪತಿಯೆಂಬ ಸರ್ವಜ್ಞನ ವಜ್ರ ಮಂಟಪದೊಳಗಿಗೆ ಬಿಜಯಂಗೈಸಿ ಅಲ್ಲಿಯೆ ಓಲಗವ ಮಾಡಿಸಿಕೊಂಡಿರುವಂತೆ ಮಾಡಿದಡೆ ನಾವಾರು? ಯೋನಿಜ ಮೂರ್ತಿಗಳು ಮರುಳು ಕೈಗಳ ಮಂಟಪದಲ್ಲಿಗೆ ಹೋಗಿ ಅವರ ನಾವು ಓಲೈಸಿ ಮತ್ತೆ ನಮ್ಮ ಯೋನಿಜ ಕೈಲಾಸಂಗಳಿಗೆ ಬಂದು ಭೋಗಂಗಳನುಂಬುತ್ತ ಮತ್ತೆ ಹೋಗುತ್ತ ಬರುತ್ತ ಇರಬಹುದೆ ಎಂದುಯೋಚಿಸಿ ಹೋಮವನಿಕ್ಕ [27]ಬೇಕೆಂದು[28] ತ್ರಿಮೂರ್ತಿಗಳು ತಮ್ಮ ಕರ್ತೃ ತ್ರಿಮೂರ್ತಿಗಳಿಗೆ ಬಿನ್ನ ಹವಂ ಮಾಡಿ ಕಳುಹಿಸಿಕೊಂಡು ತಮ್ಮ ತಮ್ಮ ಕೆಳಗಣ ಪಡೆಗಳು ಬೆನಕ ಭೈರವ ಇಂತಿವರುಗಳೆಲ್ಲರ ಬುದ್ಧಿಯ ಮಾಡಿ [29]ಕೊಡಿ[30] ಕೊಂಡು ಯೋನಿಜ ರಜತಾದ್ರಿ ಯಲ್ಲಿಂದಿಳಿದು ದಕ್ಷಿಣ ಭಾಗಕ್ಕೆ ಬಂದು, ಹೇಮಾದ್ರಿಯಂದಾಂಟಿ ಮತ್ತೊಂದು ಠಾವಿಯಲ್ಲಿ ಪಟ್ಟಣಮಂ ಕಟ್ಟುವಾಗ ದೇವೇಂದ್ರ ದಿಕ್ಪಾಲಕರು ನವಗ್ರಹಂಗಳು ಮೂಲ[31] ನಕ್ಷತ್ರಂಗಳೂ ತಾರಾವಳಿಗಳು, ಸಪ್ತ ಋಷಿಯರು, ಸಪ್ತ ಮಾತೃಕೆಯರು ಇಂತಿವರುಗಳು ಬಂದು ಬೆರೆದು ಹೋಮದ ಕೊಂಡವನುಂಟು ಮಾಡಿದ ಮತ್ತೆ ಸರಸ್ವತಿ ಕುಟಲ ಮಂತ್ರಂಗಳನು ಶಾಸ್ತ್ರಂಗಳ ಹಣ್ಣಿರುವಲ್ಲಿ ಅಜಹರಿ ಇಂದ್ರ ದಕ್ಷ ದೇವರ್ಕಗಳು ತಾವೆಲ್ಲರು ಅಷ್ಟ ಮಹಾ ಸಿದ್ಧಿಗಳಿಂದಲು ಅಷ್ಟ ಮಹದೈಶ್ವರ್ಯಂಗಳಿಂದಲು ಸೊಕ್ಕಿ ಮದ ಉಕ್ಕಿಕೊಂಡ[32]ಕ್ಕಾ ಹುತಿಯನು[33] ಹಾಕಿ ತಿಲ ಕಾಷ್ಠ ಘೃತಂಗಳ ಬಹಳವಾಗಿ ಕರೆಯಲಾಗಿ ದಳ್ಳುರಿ ಧೂಮವೆದ್ದು ದಿಕ್ತಟಂಗ ಮುಸುಕಿ ಆಕಾಶಮಂ ತಡುಕಿ ಪ್ರಸಾದರಸ ವಜ್ರ ಕೈಲಾಸವೆಂಬ ಅಯೋನಿಸಂಭವ ಕೈಲಾಸವನ ಬಳಸಿದ್ದ ಅಷ್ಟಕುಲಗಿರಿಗಳೆಂಬ ಯೋನಿಜ ಕೈಲಾಸಂಗಳ ಸಮೀಪ[34]ದಲ್ಲಿ ಪ್ರವೇಷ್ಠಿಸಿ ಒಂದು ಸುತ್ತಿನ ಧೂಮದ ಕೋಟೆಯಲ್ಲಿ ದಟ್ಟಿತ್ತಾಗಿ ಹುಟ್ಟಿ ನಿಂತಿದೆ ಎಂಬಂತಿರ್ದುದು. ಶರಣಾಗತ ವಜ್ರ ಪಂಜರ ದೊಳಗಿಪ್ಪ ಸಹಿ ವಿಷ್ಣು ಮುಂಡಿಜಯನೆಂಬ ವೃಷಭ ಗಣೇಶ್ವರನು ಕಂಡಾಕ್ಷಣ ಆತನ ಚಿನ್ಮಾತ್ರದಷ್ಟು ರೇಜಕದುಸುರು ಹೊರವಂಟಿತ್ತಬಂದೊತ್ತಲಾಗಿ ದಳ್ಳುರಿ ಧೂಮವೆರಡು [35]ಕೆಲ[36] ಕಡೆಯ ಶರಧಿಗೆ ಹೋಗಿ ಲಯವಾದವು. ಆದ ಬಳಿಕತ್ತ ಯಜ್ಞದ ಹೊಗೆಯ ಮತ್ತೆಯೂ ಎಸಗುತ್ತಿಹ ಗಾಳಿಯ ಪೂರಕದು ಸುರಿಂದ ಬಾಚಿ ಸೆಣದು ಮಂಧರ ಪರ್ವತದರ [37]ಕಲ್ಲ[38] ಗುಹೆಯೊಳಂಕೆ ಹಾಕಿದಡದು ಮೂರ್ಛೆ ಹೋಗಿ ಬಿದ್ದಿರಲು ಮತ್ತೆಯೂ ಕ್ರತಪುರುಷರಿತ್ತಣ ಕೃತ್ಯಮಂ ಬಿಡದಿ[39]ಪ್ಪುದನರಿದು[40] ಅ[41]ಯೋನಿ ಸಂಭವ ಕೈಲಾಸವೆಂಬ ಪರಶಿವಲೋಕದ ಶ್ರೀವೀರಭದ್ರ ದೇವರನು ನಂದೀಶ್ವರ ದೇವರನು ಭೃಂಗೀಶ್ವರ ದೇವರನು ಕೆಲ ರುದ್ರಗಣಂಗಳನು ಕೆಲ ಸುಜ್ಞಾನ ಮರುಳುಗಳನು, ಇಂತಪ್ಪ ಮಹಾಪುರುಷರುಗಳ ಕೂಡಿಕೊಂಡು ದೂರಪಟ್ಟಣಕ್ಕೆ ಲೀಲೆಯೊಳು ಬಿಜಯಂ ಮಾಡಿ [42]ಹೋಮ[43] ಬೇಡವೆಂದು ಕ್ರತಪುರುಷರಿಗೆ ನಿರೂಪಿಸಲು ಆ ನಿರೂಪಕ್ಕಂಜದೆ ತಾವೆಲ್ಲರು ತಮ್ಮ ಚತುರಂಗ ಬಲಸಹಿತ ಇದಿರಾಗಿ ಮಾರಾಂತುನಿಂದರು. ನಿಲಲಾಗಿ ಆ ಪ್ರಚಂಡಮೂರ್ತಿ ಮರೆಹೊಕ್ಕವರ ಕಾಯ್ವವಂ ಮಾರಾಂತರಕೊಲ್ವ ಶರಣಾಗತ ವಜ್ರ ಪಂಜರವೆಂಬ ಬಿರಿದು ತನಗುಂಟಾಗಿಪ್ಪ ಕಾಋಣ ಕರಣ ಸತಿ ಲಿಂಗ ಪತಿಯೆಂಬ ಖಡ್ಗ ಹಲಗೆಗಳಂ ಪಿಡಿದು ಮೇಲಕ್ಕೆ ಪುಟ ತೋರಿ ನೆಗೆಯಲಾಕ್ಷಣ ಮೇಲೇಳು ಲೋಕವಾಕಾಶ ಒಡದು ದಗ್ಧವಾಗಿ ಧೃವಮಂಡಲಂಗಳುದುರಿ ಮೂಲ ತಾರಕಿಗಳು ಸ್ವಾದ ಸಮುದ್ರವ ಸಾರಲಾಗಿ ಏಳು ದಧಿಗಳು ಕದಡಿ ಜರಿವಲ್ಲಿ ಪಾದವೆರಡನು ಧರೆಗೆ ಭರದೊಳೂರಿ ನಿಂದ ಬಿರಿಸಿಗೆ ಕುಂಭಿನಿ ಕೆಳಗೇಳು ಲೋಕದ ದಿಗ್ಗಜ ಶೇಷ ಕಮಟ ಪಾತಾಳ ಪೃಥ್ವಿ ಕಾಸ್ಯಪ ಯೋನಿಜ ಕೈಲಾಸಂಗಳು ಇಂತಿವು ಮೊದಲಾದ ದಶ ದಿಕ್ಕು ತಟಗಳೆಲ್ಲ ಪ್ರಳಯವಾದಂತೆ ಗಧ ಗಧಿಸುತ್ತಿರಲು ಅಷ್ಟರಿಂದ ಮೇಲೆ ಕರುಣಮಂ ತಾಳಿ ಎಲ್ಲವ ಮೊದಲಂತೆ ಮಾಡಿರಿಸಿ ಹೋಮದ ಪಟ್ಟಣದೊಳಗಿರ್ದ ಚೇಳುವಾಹನನ ನಡುಮುರಿಯಲೊದ್ದು ಇಲಿಯ ವಾಹನನ ಬಸುರ ಹರಿಯಕುಸುರಿ ಮಾರಿಮಸಣಿಯರುಗಳ ಕೊರಳ ಕತ್ತರಿಸಿ ದೇವೇಂದ್ರನ ಕೈಗಳಂ ಖಂಡಿಸಿ, ಸೂರ್ಯನ ಹಲ್ಲುಗಳಂ ಕಳದು, ಚಂದ್ರನ ಪದಂಗಳಲ್ಲಿ ಉತಳಿದು, ಸರಸ್ವತಿಯ ಮೂಗ ಕೊಯಿದು, ವಿಷ್ಣುವಿನ ಶಿರಚ್ಛೇದನವ ಮಾಡಿ, ಯಜ್ಞ ಕೊಂಡಕ್ಕೆ ಹಾಕಿ, ದಕ್ಷನ ತಲೆಯ ಕಡಿದು, ಹೋಮಕ್ಕೆ ಬಿಸುಟು, ಅಗ್ನಿಯ ರಸನೆಗಳಂ ಕಿತ್ತು ಹಾಕಿ, ಶ್ರುತಿಗಳ ಮುನಿಗಳನರೆಯಟ್ಟಿ ತಗುಳಿ, ಬ್ರಹ್ಮ ವಿಷ್ಣು ರುದ್ರರ ಮುಂದುಗೆಡಿಸಿ, [44]ಪಂಚಾಂಗ ಪಂಚ ತಂಡದವರುಗಳೆಲ್ಲರ ಭಂಗಿಸಿ ಮುರಿದೋಡಿಸಿದ ಬಳಿಕ ಜಡ ರುದ್ರನ ಶಕ್ತಿ ಗೌರಿ, ತನ್ನ ಮಕ್ಕಳ ನಡು ಬಸುರುಗಳ ಮುರಿದುದಂ ನೋಡಿ ತಾಳಲಾರದೆ ಯಜ್ಞದ ಕೊಂಡದಲ್ಲಿ ಬಿದ್ದು ಸತ್ತು ಹೋದಳು. ಮತ್ತೆ ದಕ್ಷನ ಮಗ ವೀರಲಕ್ಷ್ಮಿ ಎಂಬ ಹಸುಳೆ ಘಾಯವಡದು ಬಿದ್ದಿಪ್ಪುದಂ ಕಂಡು ದಯವಟ್ಟು ತನ್ನೊಳಗಣ ಗಣೇಶ್ವರನೊಬ್ಬನ ಪಾದ ತೀರ್ಥ ಪ್ರಸಾದವ ಬಾಯಿಗೆ ಬಿಟ್ಟೆಬ್ಬಿಸಿ ವಿಭೂತಿ ರುದ್ರಾಕ್ಷೆ ಮೂಲ ಪ್ರಣಮಂಗಳು ಸಮೇತವಾಗಿ ವೀರಶೈವ ದೀಕ್ಷೆಯಂ ಕೊಟ್ಟು, ತನ್ನ ಪರಶಿವ ಲೋಕಕ್ಕೆ ಕಳುಹಿದ ತದನಂತರದಲ್ಲಿ ದಕ್ಷನ ಮುಂಡಕ್ಕೆ ಕುರಿದಲೆಯ ಹತ್ತಿಸಿ ಆ ಕುರಿಯ ಮುಂಡಕ್ಕೆ ಹರಿದು ಬಿದ್ದ ಒಬ್ಬ ಪರವಾದಿಯ ತಲೆಯ ಕೆತ್ತಿಸಲಾಕ್ಷಣ, ಬ್ರಹ್ಮ, ವಿಷ್ಣು ರುದ್ರರು ಸ್ತೋತ್ರಂಗಳ ಮಾಡಲಾಕ್ಷಣವವರಿಗೆ ಕುರಿದಲೆಯ ನರನನ್ನು, ನರದೆಲೆಯ ಕುರಿಯನು ಇವರಿಬ್ಬರ ಕರಕೊಂಡು ಹೋಗಿರೈ ಎಂದಾಜ್ಞೆಯನಿತ್ತು ಕಳುಹಿದ ಬಳಿಕ, ತನ್ನ ಪರಶಿವ ಗಣಂಗಳು ಸಹಿತ ಶರಣ ನಿಲವಿನ ಕೈಲಾಸಕ್ಕೆ ಮೆಲ್ಲಗೆ ಗಮಿಸಿ, ಗಣ ಮಧ್ಯದಲ್ಲಿ ಮೂರ್ತಿ ಗೈದು, ವೀರಶೈವ ಪುರಾತನರ ಷಡುಸ್ಥಲ ಭಕ್ತಿ ಸಾಮ್ರಾಜ್ಯ ಸಂಪತ್ತನಾಳುತ್ತಿರ್ದರು. ಇಂತೆಂಬ ಪುರಾತನರಗಣಿತ ವಚನ ಸಾರಾಯಂಗಳಿಗೆ ಸಾಕ್ಷಿ:

೩೨೪

ದಕ್ಷ ಯಾಗವ ನಡೆಸಲೆಂದು,
ಅಜಹರಿ ರುದ್ರರು ಮುಖ್ಯವಾದ
ಮನು ಮುನಿ ದೇವರ್ಕ್ಕಳು
ದಿಕ್ಪಾಲಕರು, ನಕ್ಷತ್ರಂಗಳು
ಇಂತಿವರೆಲ್ಲರು ನೆರದು ಬಂದ ಬೆಂದ ಬಾಯ ನೋಡಾ.
ಬಾಯ ತಪ್ಪಿಸಿ ಉಣ ಬಂದ
ದೈವಂಗಳ ಬೆಂದ ಬಾಯ ನೋಡಾ.
ಉಣ್ಣದೆ ಉಡದೆ ಹೊಗೆಯ ಕೈಯಲ್ಲಿ
ಸತ್ತಣ್ಣಂಗಳ ಕೇಡ ನೋಡಾ
ಕೂಡಲ ಸಂಗಮದೇವಾ    ||೩೫||

೩೨೫

ನೋಡಿರೆ ನೋಡಿರೆ ಪೂರ್ವದತ್ತವ.
ವರುಣ ಹೆಳವ, ರವಿ ಕುಷ್ಟ, ಶುಕ್ರ ಅಂಧಕ,
ಶನಿಗೆ ಸಂಕಲೆ, ಬಲಿಗೆ ಬಂಧನ,
ಸೀತೆ ದ್ರೌಪತಿಗೆ ಶೆರೆ, ಹರಿ ಹರಿಣ ಹಂದಿಯಾದ,
ಅರುಹಂಗೆ ಲಜ್ಜೆ ಭಂಡುತನ,
ಬ್ರಹ್ಮಂಗೆ ಶರಿ ಹೋಯಿತ್ತು, ರುದ್ರ ತಿರಿದುಂಡ,
ಇಂತೀ ಬಲ್ಲಿದರೆಂಬವರ ಕೊಡೆಸಗದೆ ವಿಧಿ?
ಜತ್ತಕನೆಂಬವನ ಕತ್ತೆಯ ಮಾಡದೆ ವಿಧಿ?
ದಶಮುಖನೆಂಬವನ ನಾಯ ಡೋಣಿಯಲ್ಲಿ ಉಣಿಸದೆ ವಿಧಿ?
ದೇವೇಂದ್ರನೆಂಬನ ಮೈಯೆಲ್ಲವ ನಾಣ್ಗೆಡಿಸದೆ ವಿಧಿ?
ಸೂದ್ರಿಕನ ತಲೆಯ ಕಂಚಿಯಾಲದಲ್ಲಿ ನೆರಸದೆ ವಿಧಿ?
ಕೂಡಲಸಂಗಮದೇವಯ್ಯಾ ನೀನು ಬರಸಿದ
ಬಲಾಟ ಲಿಖಿತವು ಆರಿಗೆಯೂ ತಪ್ಪದು.          ||೩೮||

೩೨೬

ಪಾರ್ವತಿಯ ಪರಶವಿನ ಸತಿಯೆಂಬ
ಶಿವದ್ರೋಹಿಗಳು ನೀವು ಕೇಳಿರೆ!
ಬೆನಕನ ಪರಶವಿನ ಮಗನೆಂಬ
ಪಾತಕ ದುಃಖಿಗಳು ನೀವು ಕೇಳಿರೆ!
ಸ್ವಾಮಿ ಕಾರ್ತಿಕನ ಹರಲಿಂಗದ ಮಗನೆಂಬ
ಲಿಂಗದ್ರೋಹಿಗಳು ನೀವು ಕೇಳಿರೆ!
ಭೈರವನ ಭಯಂಕರನ ಹರನ ಮಗನೆಂಬ
ಭವಹರ ಗುರುದ್ರೋಹಿಗಳು ನೀವು ಕೇಳಿರೆ!
ಅಜಾತನ ಚರಿತ್ರ ಪವಿತ್ರ ನಮ್ಮ ಗುಹೇಶ್ವರ ಲಿಂಗಕ್ಕೆ
ಪ್ರಸಾದವ ಸಲಿಸಿದಾತ ಪೂರ್ವದಾಚಾರಿ
ಸಂಗನಬಸವಣ್ಣನೆ ಮಗನಾಗಿ ಆದಿಯ ಲಿಂಗ ಅನಾದಿಯ ಶರಣ.
ಗುರುವಿನ ಗುರು ಪರಮಗುರುವರ ತೋರಿದನಯ್ಯಾ
ಸಿದ್ಧರಾಮಯ್ಯ ಚೆನ್ನಬಸವಣ್ಣನು       ||೩೭||


[1] ತಿಥಿ (ಬ)

[2] ತಿಥಿ (ಬ)

[3] x (ಬ)

[4] x (ಬ)

[5] ಇಂದ್ರಿಯವಾಗಿ (ಅವಚಂ)

[6] ಇಂದ್ರಿಯವಾಗಿ (ಅವಚಂ)

[7] ಳು (ಬ)

[8] ಳು (ಬ)

[9] ನೆ (ಬ)

[10] +  ರುದ್ರ (ಬ)

[11] ನಿ (ಬ)

[12] ಬಳಿಯರ್ದು (ಬ)

[13] ಬಳಿಯರ್ದು (ಬ)

[14] + ಬಸವಣ್ಣ ಬಸವಣ್ಣ ಎನುತ್ತ (ಬ)

[15] x (ಬ)

[16] ಅಂದಾ (ಬ)

[17] ಳು(ಬ)

[18] ಳು(ಬ)

[19] ದನಾ (ಬ)

[20] ದನಾ (ಬ)

[21] x (ಬ)

[22] x (ಬ)

[23] ಹಸೆಯ (ಬ)

[24] ಹಸೆಯ (ಬ)

[25] ಱೆ (ಬ)

[26] ಱೆ (ಬ)

[27] ಬಹುದೆಂದು (ಬ)

[28] ಬಹುದೆಂದು (ಬ)

[29] x (ಬ)

[30] x (ಬ)

[31] ೫ ಲಾ (ಬ)

[32] ಕ್ಕೆ ಹುತ್ತವ ಹನವ (ಬ)

[33] ಕ್ಕೆ ಹುತ್ತವ ಹನವ (ಬ)

[34] ಸ್ಥಾನ (ಬ).

[35] ೧ – ೨ ತೆಲೆ (ಬ)

[36] ೧ – ೨ ತೆಲೆ (ಬ)

[37] ಕೆಲ (ಬ)

[38] ಕೆಲ (ಬ)

[39] ಹುದನರಿದು (ಬ)

[40] ಹುದನರಿದು (ಬ

[41] x (ಬ),

[42] ಹಮ್ಮು (ಬ)

[43] ಹಮ್ಮು (ಬ)

[44] ಇಂದು (ಬ).