೨೯೦

ಸಟೆ ದಿಟ ಮಾಡಿದಡೆ ಸ್ವಭಾವ ಸ್ವಭಾವವಾಗಿ,
ಸದ್ಭಾವ ಲಿಂಗವಾಗಿ, ಲಿಂಗವ ಸದ್ಭಕ್ತಿಯಿಂದ ಪೂಜಿಸುವರಂಬಡೆದು ಶಿವಪಥವ ಹಡೆದರು ಪುರಾತನರು.
ಅದೆಂತೆನಲು,
ಕೇಳಿರೆ ಬಳ್ಳ ಲಿಂಗ

[1]ವೆಯಲ್ಲವದು[2] ಸಟೆ.
ಸದ್ಭಾವದಿಂದ ಲಿಂಗವಾಯಿತ್ತು ಬಳ್ಳೇಶ ಮಲ್ಲಣ್ಣಗಳಿಗೆ.
ಆಡಿನ ಹಿಕ್ಕಿ ಲಿಂಗವೇ? ಅಲ್ಲ; ಅದು ಸಟೆ.
ಸದ್ಭಾವದಿಂದ ಲಿಂಗವಾಯಿತ್ತು ಗೊಲ್ಲಣ್ಣಗಳಿಗೆ.
ನರಮಾಂಸವನು ಭಕ್ಷಿಸಿಹೆನೆಂಬವ ಜಂಗಮವೆಯಲ್ಲದು ಸಟೆ.
ಸದ್ಭಾವದಿಂದ ಪ್ರಸನ್ನವಾದನು ಶಿವನು ಸಿರಿಯಾಳಂಗೆ.
ಮಿಳಿ ಕಂಕರಿಗೋಲು ಹಿಡಿದು ಬರುವುದು ಜಂಗಮಸ್ಥಲವೆಯಲ್ಲದು ಸಟೆ.[3]ಸದ್ಭಕ್ತಿಯಿಂದ[4] ಪ್ರಸನ್ನವಾದನು ಶಿವನು ಸಾಮವೇದಿಗಳಿಗೆ.
ಡೊಂಬಿತಿ ಗುರುವೆಯಲ್ಲವದು ಸಟೆ.
ಸದ್ಭಾವದಿಂದ ಪ್ರಸನ್ನವಾದ ಶಿವನು ಗುರುಭಕ್ತಯ್ಯಂಗೆ.
ಇಂತಿವರು ಮೊದಲಾದವರು ಅನಂತರುಂಟು.
ಸಟೆಯ ದಿಟವಮಾಡಿ ನಿಜಪದವನೈದಿದವರು ಅವರಂತಿರಲಿ.
ಇನ್ನು ದಿಟ ಸಟೆಮಾಡಿ ಆರಾರು ಕೆಟ್ಟರೆಂಬುದ ಕೇಳಿರಣ್ಣಾ;
ದೇವಜಾತಿಗಳೆಲ್ಲರು ದೇವ ದೇವ ಶಿಖಾಮಣಿಯ ಹತ್ತಿರಿದ್ದು,
ಬ್ರಹ್ಮನಾ[5]ರಾಯಣರು[6] ನಿರಾಕಾರವೆಂದು ಪರಬ್ರಹ್ಮವ ಹುಸಿಮಾಡಿ,
ಸನತ್ಕುಮಾರ ಒಂಟೆಯಾದ.
ಅನಂತ ಬ್ರಹ್ಮಾಂಡಗಳ ಹೆತ್ತತಂದೆಯಂ ಹುಸಿಮಾಡಿ,
ಕರ್ತನೆಂದು ಬ್ರಹ್ಮನ ಶಿರವ ಹೋಗಾಡನೆ?
ಸರ್ವ ಲೋಕಂಗಳಿಗೆ ಸುಖವನೆ ಮಾಳ್ಪ ಶಂಕರನ ಹುಸಿಮಾಡಿ,
ಕರ್ಮದಿಂದಸುವ[7]ನು ಹುಸಿಮಾಡಿದೆನೆಂದ[8] ದಕ್ಷನ ತಲೆಯನೀಗಿ,

ಕುರಿದಲೆಯನ ಮಾಡಿ ಬಿಡಲಿಲ್ಲವೆ?
ಪ್ರಭು ಪ್ರೇರಕ ವಿಶ್ವ [9]ಭುಕ್ತನೆಂದು[10] ಶ್ರುತಿಗಳು ಹೊಗಳುವವು.[11]ಹ[12] ಕಾರನಂ ಹುಸಿ ಮಾಡಿ ತಾನೆ ಜಗತ್ಸಂ ಹಾರಕನೆಂದ
ನರಸಿಂಹನು ತೊಗಲ ಸುಲಿಯಿಸಿಕೊಳ್ಳನೆ?
ಇಂತಿವರು ಮೊದಲಾದ ಮದಾಂಧರೆಲ್ಲರು ಅನಂತರು
ದಿಟವ ಸಟೆಮಾಡಿ ನಾಸ್ತಿಗೊಳಗಾದರು ಕೇಳಿರಯ್ಯಾ.
ಅದಂತಿರಲಿ,
ಪುರಾತನರಂತೆ ಸಟೆಯಮಾಡುವರೆ, ನೀವು ಸ್ವಾರ್ಥಪುರುಷರಲ್ಲ
ಅದು ಸಲ್ಲದು.
ಮತ್ತೆಂತೆನಲು ಕೇಳಿರೆ:
ಸಟೆ ದಿಟಗಳ ಸಂಶಯವ ಬಿಡಿಸಿ ಸಹಜವನೆ ನೆಲೆಗೊಳಿಸುವ
ಶ್ರೀಗುರು, ಲಿಂಗ, ಜಂಗಮವ ನಂಬಿ ಸದ್ಭಾವ [13]ಬುದ್ದಿ[14] ಯಿಂದ
ಭಜಿಸಿ ಮುಕ್ತರಾಗಿರೆ,
ಸಟೆಯೆಂದು ನರಕಕ್ಕಿಳಿಯ ಬೇಡ.
ಕಾಯಕ್ಲೇಶದಿಂದ ತನು ಮನವ ಬಳಲಿಸಿ,
ಧನವ ಗಳಿಸಿ ತಂದು ಗುರುಲಿಂಗ ಜಂಗಮಕ್ಕೆ
ವೆಚ್ಚಿಸಿ ದಾಸೋಹವ ಮಾಡುವ ಸದ್ಭಕ್ತನ ಪಾದವತೋರಯ್ಯಾ
ನಿಮ್ಮ ಧರ್ಮ,
ಅದೇಕೆಂದಡೆ ಆತನ ತನು ಶುದ್ಧ,
ಆತನ ಮನ ಶುದ್ಧ, ಆತನ ನಡೆ ನುಡಿ ಪಾವನ,
ಆತಗೆ ಉಪದೇಶವ ಮಾಡಿದ ಗುರು ನಿರಂಜನೆ ನಿರಾಮಯ.
ಅಂತಹ ಭಕ್ತನ ಕಾಯವೆ ಕೈಲಾಸವೆಂದು [ಆತನ ಮಠವ] ಹೊಕ್ಕು
ಲಿಂಗಾರ್ಚನೆಯ ಮಾಡುವ ಜಂಗಮ ಜಗತ್ಪಾವನ.
ಇಂತಿವರಿಗೆ ನಮೋ ನಮೋ ಎಂಬೆ ಕೂಡಲ ಸಂಗಮದೇವಾ. ||೧||

೨೯೧

ಲಿಂಗವನರಿದಡೆ ಮನವೆ ನಿಚ್ಚಣಿಕೆ,
ಜಂಗಮವನರಿವಡೆ ಧನವೆ ನಿಚ್ಚಣಿಕೆ,
ಪ್ರಸಾದವರಿವಡೆ ತನುವೆ ನಿಚ್ಚಣಿಕೆ,
ಈ ತ್ರಿವಿದನವರಿವಡೆ ಯುಕ್ತ ಮಾರ್ಗವು[15] ತ್ರಿವಿಧ ನಿಚ್ಚಣಿಗೆ
ಇದು ಕಾರಣ ಕೂಡಲ ಚೆನ್ನಸಂಗಯ್ಯ ನಿಮ್ಮ
ಶರಣರಿಗಲ್ಲದೀಸಂಪತ್ತಿಲ್ಲ.  ||೨||

೨೯೨

ಉಪಮಿಸಬಾರದ ಮಹಾಘನಲಿಂಗವನುಪಮೆಗೆ ತಂದು
ಸಕಲ ನಿಃಕಲ ರೂಪನೆಂಬುದು ಹುಸಿನೋಡಾ ||ಪ||

ಮಹಾಘನ ನಿಜದಿಂದುದಯಿಸಿದಾ
ದಿಯನಾದಿತತ್ವದಿಂದ
ಮನ ಭಾವಜ್ಞಾನ ಜನಿತವಾಗಿ
ಅಕಾರ ಉಕಾರ ಮಕಾರ ಜನಿತವಾದುದು.                 ೧

ಅಕ್ಷರ ಮೂಱಱೆಳೋಂಕಾರೋದಯವಾಗಿ
ಆಕಾಶ ಭೂತನಾಮ [ಸಂಖ್ಯೆ] ವಿಡಿದು
ವರ್ಣಾಶ್ರಮವನೆಯ್ದಿ ನಾದ
ಬಿಂದು ಕಲಾರೂಪವಾದುದು.                                  ೨

ಆಕಾಶದ ಶಬ್ದದ ಮಥನದ ಮುಖ
ಸೋಂಕಿನಿಂದ ಸ್ಫುರಿಸಿ
ವಾಯು ಉದಯವಾಗಿ ಗಮ
ನಾಗಮನ ನಾಮ ರೂಪಾದುದು.                             ೩

ವಾಯುವಿಕಾರದ ಬದ್ಧಾಕೃತಿಯಿಂ
ರೂಪ ಸಂಜ್ಞೆಯಾಗಿ
ತೇಜೋಮಯವಾಗಿ
ಅಗ್ನಿಜನಿಸಲು ದೃಷ್ಟನಷ್ಟವೆಂಬಿವಾದುವು.                   ೪

ತೇಜೋವಿಕಾರದ ಪ್ರಕೃತಿ ವಿಕೃತಿ
ಯಿಂದುದಯಿಸಿದಪ್ಪುತತ್ವದಿ
ರಸಮಾತ್ರ ವಿಷಯರೂಪವಾಗಿ
ಜಲಬಿಂದು ಭಿನ್ನರುಚಿಮುಖವಾದುದು.                      ೫

ಜಲದಿಂ ಬದ್ಧಾಕೃತಿಯಂ ಧರಿಸಿ
ಉದಯಿಸಿದಾ ಪೃಥ್ವೀತತ್ವದಿ
ಅನಂತ ಸಚರಾಚರಂಗಳುದಯವಾಗಿ
ಉತುಪತಿಸ್ಥಿ ತಿಲಯಕಾರಣವಾದುವು.                      ೬

ಮನದಿಂ ಶಶಿ ನಯನದೊಳಗೆ ರವಿ
ದೇಹದ ಸಂಕಲ್ಪದೊಳಾತುಮ ಜನಿಸಿ
ಅಷ್ಟತನುಗಳು ಶಿವನೆಂಬುದು ಮಿಥ್ಯೆ
ನಿರಾಳ ನಿರಂಜನ ಕೂಡಲಸಂಗ.                             ೭

೨೯೩

ಬಂದುದೆಲ್ಲವ ನುಂಗಿ
ಬಾರದುದನೆಲ್ಲವ ಹಿಂಗಿಸಿದೆ
ಆರಿಲ್ಲದಾವಸ್ಥೆ ಎನಗಾಯಿತ್ತು
ಆ ಅವಸ್ಥೆಯಱತು ನಾನು[16] ನೀನೆಂದರಿದೆ[17] ಗುಹೇಶ್ವರಾ          ||೪||

೨೯೪

ವೇದದ ಮೂಗಕೊಯಿದು ಆಗಮದ ಬೆನ್ನ[18] ನೆತ್ತಿದೆ.
ಶಾಸ್ತ್ರಕ್ಕೆ ಒರೆಯನಿಕ್ಕಿದೆ.
ಪುರಾಣಕ್ಕೆ ನಿಗಳವನಿಕ್ಕಿದೆ.
ಕೂಡಲ ಸಂಗಮದೇವಯ್ಯನು ನಮ್ಮ ಮಾದಾರ ಚೆನ್ನಯ್ಯನಕೂಡೆ
ಒಲಿದುಂಡ ಕಾರಣ.                                                          ||೫||

೨೯೫

ಆಗಮ ಪುರುಷಗಳಿರಾ ನಿಮ್ಮಾಗಮವಾಯುವಾಗಿ ಹೋಯಿತಲ್ಲಾ!
ವಿರಾಪುರುಷರಿರಾ ನಿಮ್ಮ ವಿದ್ಯೆ ಅವಿದ್ಯೆಯಾಗಿ ಹೋದಲ್ಲಿ
ಬಹು[19]ಮುಖರಾಗಿದ್ದಿರಲ್ಲಾ!
ವೇದ ಪುರುಷರಿರಾ ನಿಮ್ಮ ವೇದ ಹೊಲಬುದಪ್ಪಿ ಹೋದಲ್ಲಿ,
ವೇದವೇ ದೈವವೆಂದು ಕೆಟ್ಟಿರಲ್ಲ!

[20]ಪುರುಷರಿರ ನಿಮ್ಮ ಪುರಾಣವಿಚಾರ ಭ್ರಷ್ಟವಾಗಿ ಹೋದಲ್ಲಿ
ಒಡನೆ ಭ್ರಷ್ಟರಾಗಿ ಹೋದಿರಲ್ಲಾ!
ಶಾಸ್ತ್ರ ಪುರುಷರಿರ ನಿಮ್ಮ ಶಾಸ್ತ್ರದ ಮಹಾಪಥ ಹೊನಲೊಳು
ಹೋದಲ್ಲಿ ಭಕ್ತದೇಹಿಕ ದೇವನೆಂದರಿಯದೆ ಕೆಟ್ಟಿರಲ್ಲಾ!
ಯತ್ರಶಿವ ತತ್ರಮಹೇಶ್ವರನೆಂದು ಹೇಳಿತ್ತು ಮುನ್ನ,
ಅಂತು ಭಕ್ತ ನಿತ್ಯ ಸತ್ಯ ಸನ್ನಹಿತ ಗುಹೇಶ್ವರಾ
ನಿಮ್ಮ ಶರಣ.                                                      ||೬||

ವೇದ ಶಾಸ್ತ್ರ ಪುರಾಣಾಗಮಾದಿಯಾದ ಸಕಲ ವಿದ್ಯಂಗಳು ಶಿವನ ನಿಲುಕಡೆಯನರಿಯವಾಗಿ, ಅವನೋದಿದವರಿಗೆಂತು ಮುನ್ನವೇನರಿಯರು. ಅದು ಕಾರಣ ಸತ್ಯ ಸದಾಚಾರವುಳ್ಳ ಮಹೇಶ್ವರರಲ್ಲಿ ಶಿವನಿಪ್ಪ. ಆ ಮಹೇಶ್ವರರೆ ಶಿವನ ನಿಲವು ಬಲ್ಲರಲ್ಲದೆ ಮತ್ತಾರುವರಿಯರು. ಇಂತೆಂಬ ಶರಣಸತಿ ಲಿಂಗಪತಿಗಳಿಬ್ಬರು ಮುಖ್ಯವಾದ ಅನಂತ ಶರಣರುಗಳ ವಚನಂಗಳೊಗಹುದೆಂದವೆಲ್ಲವನು ಬಸವಾಗಿ ಪ್ರಮಥರ ಸಮಯಕ್ಕೆ ಉಂಟುಮಾಡಿ ತೋರಿ ಪ್ರತಿಷ್ಠೆಯಂಮಾಳ್ಪೆ [21]ವೆಂದವೆಲ್ಲವನು[22] ಷಡು ದೇವತೆ ಷಡುಸಮಯದವರುಗಳಿಗುಂಟು ಮಾಡಿ ತೋರಿ ಪ್ರತಿಷ್ಠೆಯಂ ಮಾಳ್ಪೆವದೆಂತೆನಲು, ಆ ಮಹಾಘನಲಿಂಗದ ನಿಜವೆಂಬ ಶರಣನ ಲೀಲೆಯಾಹಂಕಾರದಿಂದ ಹುಟ್ಟಿದ ಆದಿ ಅನಾದಿಯೆಂಬ ಮನ ಮಾಯೆಗಳ ಕಣ್ಣು ಮನ ದೇಹಾದಿ ಸಂಕಲ್ಪಗಳಿಂದ ಮನ ಭಾವಜ್ಞಾನ ಶೈವಪ್ರಣಮ, ನಾಲ್ಕು ಶೈವ ಪಂಚಾಕ್ಷರಿ, ನಾದ ಬಿಂದು ಕಳೆ, ಷಡುಸಾದಾಖ್ಯರು ಐವತ್ತೊಂದಕ್ಷರ, ವೇದ ಶಾಸ್ತ್ರಾಗಮ ಪುರಾಣಂಗಳು, ಅಷ್ಟ ತನುಗಳು ಅಷ್ಟ ಕುಲಗಿರಿಗಳೆಂಬ ಕೈಲಾಸಂಗಳು. ಇಂತಿವು ಮೊದಲಾದ ಶೂನ್ಯ – ನಿಷ್ಕಲ ಸಕಲ ಸ್ಥೂಲ ಸೂಕ್ಷ್ಮ ಕಾರಣಂಗಳೆಲ್ಲಾ ಹುಟ್ಟಿ ಹರಕರಿಸಿದವು. ಅಷ್ಟರಿಂದ ಮೇಲೆ ಶ್ರೀ ಕಲ್ಯಾಣಪುರವೆಂಬ ಕೈಲಾಸದೊಳಗಿಪ್ಪ ಬಸವಾದಿ ಪ್ರಮಥರನು ಅವರ ಮೂಲಪ್ರಣಮ ಹನ್ನೆರಡರಿಂದು ದೈಸಿದ ಹದಿನಾಲ್ಕು ಸಾವಿರ ಅಕ್ಷರವೆ ತಾವೆಂಬ ನೂರೊಂದು ಸ್ಥಲಂಗಳನು ಅವರ ವೀರಶೈವಾಚಾರವನು ಇಂತಿವೆಲ್ಲವನು ನಿಃಕಲರು ಸಕಲರು ಪ್ರಳಯಾಕಲರು ವಿಜ್ಞಾನಕಲರು ಸಕಲರೆಂಬ ಪಂಚತಂಡದವರುಗಳರಿದು ಮುಕ್ತರಾಗಿ ತಮ್ಮ ಮರದಹರೆಂದು ಪಂಚತಂಡದವರುಗಳಿಗೆ ಹದಿನೆಂಟು ಯುಗ, ಹದಿನೆಂಟು ತರ್ಕ, ಹದಿನೆಂಟು ಕುಲ, ಹದಿನೆಂಟು ಪುರಾಣ, ಇಪ್ಪತ್ತೆಂಟಾಗಮ, ಆರು ವೇದ, ಹದಿನಾರು ಶಾಸ್ತ್ರ ಇಂತಿವೆಲ್ಲವನು ಒಟ್ಟಿತ್ತೆಂದರಿಹಿ ಕೊಟ್ಟ ಬಳಿಕ ತಾವೆ ತ್ರಿವಿಧ ಕರ್ಮಂಗಳಲ್ಲಿಯೂ ತ್ರಿವಿಧ ಮಲಂಗಳಲ್ಲಿಯೂ ನಾಲ್ಕು ಪದಫಲಂಗಳಲ್ಲಿಯೂ ಹೊದಕುಳಿಗೊಳುತ್ತಿದ್ದಾರೆಂದು ಮನ ಮಾಯೆಗಳಿಚ್ಛೈಸುವಾಗಲೆ ಅನಂತನೆಂಬ ಯುಗ ಹುಟ್ಟಿ ಎಂಟುನೂರರುವತ್ತು ಕೋಟಿಯು ಅರುವತ್ತು ಲಕ್ಷವು ಅರವತ್ತು ಸಾವಿರ ವರುಷ ವರ್ತಿಸುತ್ತಿರ್ದಿತ್ತು. ಈ ಒಂದು ಯುಗದ ಅರಸನ ಹೆಸರು ಅನಂತರಾಯನೆಂದು. ಈ ರಾಯನು ಶ್ರೀ ಕಲ್ಯಾಣದ ಸಿಂಹಾಸನದ ಮೇಲೆ ಕುಳಿತು ಈಶ್ವರನೆಂಬ ದೇವರ ಪೂಜೆ ಸುತ್ತ ಸುಖಸಂಕಥಾ ವಿನೋದದಿಂ ರಾಜ್ಯವನ್ನಾಳುತ್ತಿಹನು. ಈ ಯುಗದಲ್ಲಿಯು ಮರ್ತ್ಯಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟು ಆರೋಗಿಸಿ ತ್ರಿವಿಧ ದಾಸೋಹವಂ ಕೆಲವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದರಸವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಮನ ಮಾಯೆಗಳು ಮೂಲ ಜೀವಾತ್ಮನೆಂಬ ಪರಮೇಶ್ವರನ ಹೃದಯದೊಳಗೆ ನಿಂದು ಸತ್ಯಜ್ಞಾನವೆಂಬ ಶಾಸ್ತ್ರವೆಂಬ ಶೈವಪ್ರಣಮಂಗಳನು ಶೈವಪಂಚಾಕ್ಷರಿಯನು ನುಡಿಸಿದಡಿತ್ತ ಮೊದಲು ಅಥರ್ವಣವೇದ, ನಿಶ್ಯಬ್ದಶಾಸ್ತ್ರ, ಪರಮಹಾಸ್ಯ, ಲೈಂಗ್ಯ ಪುರಾಣ ಈ ನಾಲ್ಕು ಮತಂಗಳನು ಮಾಡಿ ಮುಗಿದನು. ಈ ಶ್ರುತಿ ಶಬ್ದ ಜಾಲಂಗಳೊಳಗೆಯೂ ಕುಂಜರ ಅಶ್ವ ಮಹಿಷ ಅಜ ಹರಿಣ ಮತ್ಸ್ಯ ಕೂರ್ಮ ಇಂತಿವೆಲ್ಲವನು ತಿನ್ನ ಹೇಳಿದ್ದಾವು. ಈ ಯುಗದಲ್ಲಿ ಪರಮೇಶ್ವರನು ಸ್ಫಟಿಕವರ್ಣದ ಲಿಂಗವನು ಅಮಳೋಕ್ಯದಲ್ಲಿ ಧರಿಸಿಕೊಂಡು ಯಜ್ಞೋಪವೀತವನು ಶ್ರುತಿಗಳಿಂದ ಕುಲಂಗಳ ಹಿಡಿವುತ್ತ ಬಿಡುವುತ್ತ ತನ್ನ ಪಂಚಮುಖಂಗಳಲ್ಲಿ ಹುಟ್ಟಿದ ಶೈವ ಅಕ್ಷರಂಗಳನು ತನ್ನ ಅಡಿ ಮುಡಿ ನಡುವೆಲ್ಲ ಠಾವುಗಳಾದಿಯ ಮಾಡಿಕೊಂಡು ಆಡಿನ ಚರ್ಮವನುಟ್ಟು ಬೆಳುಕಪ್ಪಟವ ಹೊದ್ದು [23]ಕಾಳಾ[24] ಮುಖಿಯಾಗಿ ಸುಳಿವುತ್ತ ಮಹಾ ಲಿಂಗವನು ಬಯಲೆಂದು ವಾದಿಸಿ ಶೂನ್ಯವಾದವ ಪ್ರತಿಷ್ಠೆಯಂ ಮಾಡಿನುಡಿವುತ್ತ ನವಕೈಲಾಂಸಗಳ ಮಧ್ಯದಲ್ಲಿ ಅಧಿದೇವರೆನಿಸಿಕೊಂಡಿಪ್ಪ ಸಮಯದೊಳು ಅದ್ಭುತವೆಂಬ ಯುಗಹುಟ್ಟಿ ಏಳನೂರೈವತ್ತು ಕೋಟಿಯೂ ಅರುವತ್ತು ಲಕ್ಷವು ಅರವತ್ತು ಸಾವಿರ ವರುಷವು ವರ್ತಿಸುತ್ತಿದ್ದಿತ್ತು. ಈ ಒಂದು ಯುಗದ ಅರಸನ ಹೆಸರು ಪುಂಡರೀಕಾಕ್ಷರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದಲ್ಲಿಹ ಸಿಂಹಾಸನದ ಮೇಲೆ ಕುಳಿತು ಸದಾಶಿವನೆಂಬ ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂ ರಾಜ್ಯವನಾಳುವನು. ಈ ಯುಗದಲ್ಲಿಯ ಮರ್ತ್ಯಲೋಕದೊಳಗೆ ಜಂಗಮ ಪ್ರಸಾದ ಪಾದೋದಕವ ಲಿಂಗಕ್ಕೆ ಕೊಟ್ಟು ಆರೋಗಿಸಿ ತ್ರಿವಿದ ದಾಸೋಹವಂ ಕೆಲವರುಷಂ ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದರ ವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಮನಮಾಯೆಗಳು ಸದಾಶಿವನ ಹೃದಯದೊಳಗೆ ನಿಂದು ಸತ್ಯ ಜ್ಞಾನಶಾಸ್ತ್ರವೆಂಬ ಶೈವಾಕ್ಷರದ ಒಂಭತ್ತು ನುಡಿ[25]ದಡೀತ ಮೊದಲು ಸಾಮವೇದ ಗೌಣಶಾಸ್ತ್ರ ವೀರಾಗಮಲಭ್ಯಪುರಾಣ ಈ ನಾಲ್ಕು ಮತಂಗಳಮಾಡಿ ಮುಗಿದನು. ಈ ಶ್ರುತಿಗಳ ಶಬ್ದಾಡಂಬರದೊಳಗೆಯೂ ಹಿಂದೆ ಹೇಳಿದವನೆಲ್ಲವನು ತಿನ್ನ ಹೇಳಿದ್ದವು. ಈ ಯುಗದಲ್ಲಿ ಸದಾಶಿವನು ಮಾಣಿಕ್ಯವರ್ಣದ ಲಿಂಗವನು ಉತ್ತ ಮಾಂಗದಮೇಲೆ ಧರಿಸಿಕೊಂಡು ಯಜ್ಞೋಪವೀತವ ಶ್ರುತಿಗಳಿಂದ ಕಾಲಂಗಳ ಹಿಡಿವುತ್ತ ಮತ್ತು ಬಿಡುವುತ್ತ ಪುಲಿಚರ್ಮವನುಟ್ಟು ರತ್ನಗಂಬಳಿ ಹೊದ್ದು ಯೋಗಿಯಾಗಿ ಸುಳಿವುತ್ತ ಮಹಾಲಿಂಗವನು ನಿಃಕಳನೆಂದು ವಾದಿಸಿ ಪ್ರತಿಷ್ಟೆಯಂ ಮಾಡಿ ನುಡಿವುತ್ತ ನವಕೈಲಾಸಂಗಳ ಮಧ್ಯದಲ್ಲಿ [26]ಅ[27]ಧಿದೇವರೆಂದೆನಿಸಿ ಕೊಂಡಿಪ್ಪ ಸಮಯದಲ್ಲಿ ತಮಂಧನೆಂಬ ಯುಗಹುಟ್ಟಿ ಐನೂರ ನಲವತ್ತು ಕೋಟಿಯೂ ನಾಲ್ವತ್ತು ಲಕ್ಷವೂ ಸಾವಿರ ವರುಷವೂ ವರ್ತಿಸುತ್ತಿದ್ದಿತ್ತು. ಈ ಒಂದು ಯುಗದ ಅರಸನ ಹೆಸರು ತೇಜೋಮಯರಾಯನೆಂದು. ಈ ರಾಯನು ಶ್ರೀ ಕಲ್ಯಾಣ ಮಧ್ಯದ ಸಿಂಹಾಸನದ ಮೇಲೆ ಕುಳಿತು ತೇಜೋಮಯನೆಂಬ ದೇವರ ಪೂಜಿಸುವ ಸುಖಸಂಕಂಥಾ ವಿನೋದದಿಂದ ರಾಜ್ಯಂಗೆಯ್ಯುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಚರಶೇಷವ ಲಿಂಗಕ್ಕೆ ಕೊಟ್ಟು ಆರೋಗಿಸಿ ತ್ರಿವಿಧ ದಾಸೋಹವಂ ಕೆಲವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದರಸವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಮನಮಾಯೆಗಳು ಈಶ್ವರನ ಹೃದಯದೊಳಗೆ ನಿಂದು ಸತ್ಯಜ್ಞಾನ ಶಾಸ್ತ್ರವೆಂಬ ಶೈವಾಕ್ಷರ ಒಂಬತ್ತು ನುಡಿಸಿದಡೀತ ಮೊದಲು ಯಜುರ್ವೇದ ಸೂಕ್ಷ್ಮಾಗಮಶಾಸ್ತ್ರ, ಉತ್ತರವಾತುಲ ತಂತ್ರ ವೇದ ಪುರಾಣ ಈ ನಾಲ್ಕು ಮತಂಗಳಮಾಡಿ ಮುಗಿದನು. ಈ ಶ್ರುತಿಗಳ ಶಬ್ದ ದೊಟ್ಟಿಲುಗಳೊಳಗೆಯೂ ಹಿಂದೆ ಹೇಳಿದವನೆಲ್ಲವನು ತಿನ್ನ ಹೇಳಿದವು. ಈ ಯುಗದಲ್ಲಿಯು ಈಶ್ವರನು ಮಾಂಜಿಷ್ಟವರ್ಣದ ಲಿಂಗವನು ಉರಸೆಜ್ಜೆಯೊಳು ಧರಿಸಿಕೊಂಡು ಯಜ್ಞೋಪವೀತವ ಶ್ರುತಿಗಳಿಂದ ಕುಲಂಗಳ ಹಿಡಿವುತ್ತ ಬಿಡುತ್ತ ಯರಳೆಯ ಚರ್ಮನುಟ್ಟು ಕಾವಿಯಕಪ್ಪಟವ ಹೊದ್ದು ಸನ್ಯಾಸಿಯಾಗಿ ಸುಳಿವುತ್ತ ಮಹಾಲಿಂಗವನು ಸಕಲನೆಂದು ವಾದಿಸಿ ಪ್ರತಿಷ್ಟೆಯಂ ಮಾಡಿ ನುಡಿವುತ್ತ ನವಕೈಲಾಸಂಗಳ ಮಧ್ಯದಲ್ಲಿ [28]ಅ[29]ಧಿದೇವರೆನಿಸಿಕೊಂಡಿಪ್ಪ ಸಮಯದೊಳು ತಾರಜನೆಂಬ ಯುಗಹುಟ್ಟಿ ಐನೂರು ಮೂವತ್ತು ಕೋಟಿಯು ಮೂವತ್ತು ಲಕ್ಷವು ಮೂವತ್ತು ಸಾವಿರ ವರುಷ ವರ್ತಿಸುತ್ತಯಿದ್ದಿತ್ತು. ಈ ಒಂದು ಯುಗದ ಅರಸನ ಹೆಸರು ನವಚಕ್ರವರ್ತಿರಾಯನೆಂದು. ಈ ರಾಯನು ಶ್ರೀಕಲ್ಯಾಣಮಧ್ಯದಲ್ಲಿಹ ಸಿಂಹಾಸನದ ಮೇಲೆ ಕುಳಿತು ಚಂದ್ರಶೇಖರನೆಂಬ ದೇವರ ಪೂಜಿಸುತ್ತ ಸುಖ ಸಂಕಥಾ ವಿನೋದದಿಂ ರಾಜ್ಯಂಗೈಯುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಜಂಗಮ ಪ್ರಸಾದವ ಲಿಂಗಕ್ಕೆ [30]ಕೊಟ್ಟಾ[31]ರೋಗಿಸಿ ತ್ರಿವಿಧ ದಾಸೋಹಮಂ ಕೆಲ ವರುಷವು ಮಾಡಿದವರು ಕಲ್ಯಾಣಕ್ಕಾಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದರಸವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಮನಮಾಯೆಗಳು ರುದ್ರನ ಹೃದಯಗೊಳಗೆ ನಿಂದು ಸತ್ಯಜ್ಞಾನ ಶಾಸ್ತ್ರವೆಂಬ ಶೈವಾಕ್ಷರ ಒಂಭತ್ತ ನುಡಿದಡೀತ ಮೊದಲು ಋಗ್ವೇದ ಪಶ್ಯಂತೀಶಾಸ್ತ್ರ ವಾತುಲ ಸ್ಕಂದ ಪುರಾಣ ಈ ನಾಲ್ಕು ಮತಂಗಳ ಮಾಡಿ ಮುಗಿದನು. ಈ ಶ್ರುತಿಗಳ ವಾಗ್ಜಾಲಂಗಳೊಳಗೆಯು ಹಿಂದೆಹೇಳಿದವನೆಲ್ಲವನು ತಿನ್ನ ಹೇಳಿದ್ದವು. ಈ ಯುಗದಲ್ಲಿ ರುದ್ರನು ಕಪಿಲವರ್ಣದ ಲಿಂಗವನು ಕಂಠದಲ್ಲಿ ಧರಿಸಿಕೊಂಡು ಯಜ್ಞೋಪವೀತದ ಶ್ರುತಿಗಳಿಂದ ಕುಲಂಗಳ ಹಿಡಿವುತ್ತ ಬಿಡುತ್ತ. ಕಾಗಿನ ತಟ್ಟನುಟ್ಟು ಕರಿಯಕುಂಬಳಿಯ ಹೊದ್ದು ಶ್ರವಣನಾಗಿ ಸುಳಿವುತ್ತ ಮಹಾಲಿಂಗವನು ಕಾರಣನೆಂದು ವಾದಿಸಿ ಪ್ರತಿಷ್ಠೆಯಂ ಮಾಡಿ ನುಡಿವುತ್ತ ಅಭಿನವ ಕೈಲಾಸಂಗಳ ಮಧ್ಯದಲ್ಲಿ[32] ಅಧಿದೇವರೆನಿಸಿಕೊಂಡಿಪ್ಪ ಸಮಯದೊಳು ತಾಂಡಜನೆಂಬಯುಗಹುಟ್ಟಿ ನಾನೂರು ಇಪ್ಪತ್ತು ಕೋಟಿಯು ಇಪ್ಪತ್ತು ಲಕ್ಷವು ಸಾವಿರವರುಷವು ವರ್ತಿಸುತ್ತಿದ್ದಿತ್ತು. ಈ ಒಂದುಯುಗದ ಅರಸನ ಹೆಸರು ನೀಲಕಂಠರಾಯನೆಂದು, ಈ ರಾಯನು ಶ್ರೀ ಕಲ್ಯಾಣ ಮಧ್ಯದಲ್ಲಿಹ ಸಿಂಹಾಸನದ ಮೇಲೆ ಕುಳಿತು ನೀಲಕಂಠನೆಂಬ ದೇವರ ಪೂಜಿಸುತ್ತ [33] ಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯು ಮರ್ತ್ಯಲೋಕದೊಳಗೆ ಚರಪ್ರಸಾದವ ಲಿಂಗಕ್ಕೆ ಕೊಟ್ಟು ಆರೋಗಿಸಿ ತ್ರಿವಿಧ ದಾಸೋಹಂ ಕೆಲವರುಷವು ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣನಿಚ್ಚಣಿಗೆಯ ಮೇಲೆ ಪ್ರಸಾದ ರಸವಜ್ರ ಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಮನಮಾಯೆಗಳು ವಿಷ್ಣುವಿನ ಹೃದಯದೊಳಗೆ ನಿಂದು ಸತ್ಯಜ್ಞಾನ ಶಾಸ್ತ್ರವೆಂಬ ಶೈವಾಕ್ಷರ ಒಂಭತ್ತನು ನುಡಿಸಿದಡೀತ ಮೊದಲು ಪ್ರೌ[34]ಢಲಕ್ಷಿತ[35]ವೆಂಬ ವೇದ, ಮದ್ಯಮ ಶಾಸ್ತ್ರ, ಕಾಮಿಕಾಗಮ, ಅಚ್ಯುತ ಪುರಾಣ ಈ ನಾಲ್ಕು ಮತಂಗಳ ಮಾಡಿ ಮುಗಿದನು. ಈ ಶ್ರುತಿಗಳ ವಾಗ್ವ್ಯವಹಾರಂಗಳೊಳಗೆಯು ಹಿಂದೆ ಹೇಳಿದವನ್ನೆಲ್ಲ ತಿನ್ನಹೇಳಿದ್ದುವ. ಈ ಯುಗದಲ್ಲಿ ವಿಷ್ಣು ನೀಲವರ್ಣದ ಲಿಂಗವನು ಕರತಳದೊಳು ಧರಿಸಿಕೊಂಡು ಯಜ್ಞೋಪವೀತವ ಹಾಕಿಕೊಂಡು ಶ್ರುತಿಗಳಿಂದ ಮಾನವರೊಳು ಕುಲಂಗಳ ಹಿಡಿವುತ್ತ ಬಿಡುತ್ತ ಪೀತಾಂಬರವನುಟ್ಟು ಸಕಲಾತಿಯ ಹೊದ್ದು ಜೋಗಿಯಾಗಿ ಸುಳಿವುತ್ತ ಮಹಾಲಿಂಗವನು ಸೂಕ್ಷ್ಮನೆಂದು ವಾದಿಸುತ್ತ  ಪ್ರತಿಷ್ಠೆಯಂ ಮಾಡಿ ನುಡಿವುತ್ತ ನವಕೈಲಾಂಸಗಳ ಮಧ್ಯದಲ್ಲಿ ಅಧಿದೇವತರೆನಿಸಿಕೊಂಡು ಇರುವ ಸಮಯದೊಳು ಭಿನ್ನಜನೆಂಬ ಯುಗಹುಟ್ಟಿ ಮುನ್ನೂರ ಹತ್ತು ಕೋಟಿಯು ಹತ್ತು ಲಕ್ಷವು ಸಾವಿರ ವರುಷವು ವರ್ತಿಸುತ್ತ ನಿಂದಿತ್ತು. ಈ ಒಂದು ಯುಗದ ಅರಸಿನ ಹೆಸರು ವೀರಶೂರರಾಯನೆಂದು. ಈ ರಾಯನು ಶ್ರೀ ಕಲ್ಯಾಣಪುರ ಮಧ್ಯದಲ್ಲಿ [36]ರುದ್ರ ಮಧ್ಯದಲ್ಲಿಹ[37] ಸಿಂಹಾ ಸನದ ಮೇಲೆ ಕುಳಿತು ಗಂಗಾಧರನೆಂಬ ದೇವರ ಪೂಜಿಸುತ್ತ ಸುಖಸಂಕಥಾ ವಿನೋದದಿಂ ರಾಜ್ಯಂಗೈವುತ್ತಿಹನು. ಈ ಯುಗದಲ್ಲಿಯೂ ಮರ್ತ್ಯಲೋಕದೊಳಗೆ ಜಂಗಮಪ್ರಸಾದವ ಲಿಂಗಕ್ಕೆ ಕೊಟ್ಟು ಆರೋಗಿಸಿ ತ್ರಿವಿಧ ದಾಸೋಹವಂ ಕೆಲ ವರುಷವೂ ಮಾಡಿದವರು ಕಲ್ಯಾಣಕ್ಕೆ ಗಮಿಸಿ ಬಸವಣ್ಣನಂ ಕಂಡು ಕರ್ಣ ನಿಚ್ಚಣಿಗೆಯ ಮೇಲೆ ಪ್ರಸಾದರಸ ವಜ್ರಕೈಲಾಸಕ್ಕೆ ಹೋಗುತ್ತಿಹರು. ಈ ಯುಗದಲ್ಲಿ ಮನಮಾಯೆಗಳು ಬ್ರಹ್ಮನ ಹೃದಯದೊಳಗೆ ನಿಂದು ಸತ್ಯಜ್ಞಾನ ಶಾಸ್ತ್ರವೆಂಬ ಶೈವಾಕ್ಷರ ಒಂಭತ್ತನು ನುಡಿಸಿದಡೀತನು ಮೊದಲು ಉತ್ತರ ಬಂಡಣೆಯೆಂಬ ವೇದ, ವೈಖರಿಯೆಂಬ ಶಾಸ್ತ್ರ, ಪಂಚಾಕ್ಷರಿಕಲ್ಪ, ಬ್ರಹ್ಮಾಂಡಪುರಾಣ. ಈ ನಾಲ್ಕು ಮಥನಂಗಳ ಮಾಡಿ ಮುಗಿದನು. ಈ ಶ್ರುತಿಗಳೊಳಗೆಯು ಹಿಂದೆ ಹೇಳಿದವನೆಲ್ಲವನುತಿನ್ನ ಹೇಳಿದ್ದವು. ಈ ಯುಗದಲ್ಲಿ ಬ್ರಹ್ಮಪೀತವರ್ಣದ ಲಿಂಗವನು ಕಕ್ಷೆಯಲ್ಲಿ ಧರಿಸಿಕೊಂಡು ಯಜ್ಞೋಪವೀತದ ಶ್ರುತಿಗಳಿಂದ ಕುಲಂಗಳ ಹಿಡಿವುತ್ತ ಬಿಡುತ್ತ ಕಾವಿಯ ಕಪ್ಪಡವ ಸುಟ್ಟು ಬಿಳಿಯ ಸೀರಿಯಹೊದ್ದು ಪಾಶುಪತಿಯಾಗಿ ಸುಳಿವುತ್ತ ಮಹಾಲಿಂಗವನು ಸ್ಥೂಲನೆಂದು ವಾದಿಸಿ ಪ್ರತಿಷ್ಠೆಯಂ ಮಾಡಿ ನಡಿವುತ್ತನವ ಕೈಲಾಸಂಗಳ ಮಧ್ಯದಲ್ಲಿ[38] ಅಧಿದೇವರೆನಿಸಿಕೊಂಡು ಇರುವ ಸಮಯದೊಳು ಮನಮಾಯೆಗಳಿಂದಲು ಶೈವಾಕ್ಷರ ಒಂಭತ್ತರಿಂದಲು ಐವತ್ತೊಂದಕ್ಷರದಿಂದಲು ಇಪ್ಪತ್ತುನಾಲ್ಕು ಶ್ರುತಿಗಳಿಂದಲು ಷಡುದೇವತೆಗಳು ತಾವು ಲಿಂಗವೆನಿಸಿಕೊಂಡು ಷಡುದರುಶನದವರಾಗಿ ಶೈವಷಡುಸ್ಥಲದವರಾದರು. [39]ಮತ್ತೆ ಮನ ಮಾಯೆಗಳೊಳಗೆ ತ್ರಿಯಕ್ಷರ[40]ದೊಳಗೆ ಷಡಾಕ್ಷರವಡಗಿದವು. ಷಡಾಕ್ಷರದೊಳಗೆ ಷಡುದೇವತೆ ಷಡ್ಭೂತಂಗಳಡಗಿದವು. ಇಪ್ಪತ್ತು ನಾಲ್ಕು ಅಕ್ಷರದೊಳಗೆ ಐವತ್ತೊಂದಕ್ಷರವಡಗಿದವು. ಐವತ್ತೊಂದಕ್ಷರದೊಳಗೆ ನವಗ್ರಹಗಳು, ಮೂಲ[41] ನಕ್ಷತ್ರಂಗಳು ಈರೇಳು ಲೊಕದಘಳಿಗೆ, ವಿಘಳಿಗೆ, ಜಾವ, ದಿನ, ಮಾಸ, ವರುಷ, ತಿಥಿ, ಬಿಸಿಗೆ, ಯುಗ, ಜುಗ, ಯೋಗ, ಕರಣ, ಜ್ಯೋತಿ, ಸುಜ್ಯೋತಿ, ಜ್ಞಾನ, ಸಂಕ್ರಮಣ, ಮುಹೂರ್ತ ಇಂತಿವೆಲ್ಲವು ಅಡಗದಿವು. ಇಂತೆಂಬ ಪುರಾತನರಗಣಿತವಚನ ರಸಂಗಳಿಗೆ ಸಾಕ್ಷಿ.

ವೇದಶಾಸ್ತ್ರಗಮಪು ರಾಣಂಗಳು. [42]ಸದಾ[43] ಶಿವನ ಮುಖಂಗಳಲ್ಲಿ ಹುಟ್ಟಿದವೆಂಬರು. ಅಲ್ಲಲ್ಲಿ ಬಯಲಿಲೀಲೆಯಿಂದ ಹುಟ್ಟಿದ ಪ್ರಕೃತಿಯ ಗರ್ಭ[44]ದೊಳಾರಧಿಕಾರಿಗಳು[45] ಷಡಾಕ್ಷರಸಹಿತ ಪಂಚಮಖಂಗ[46]ಳೇಳು[47]ಮುಂತಾಗಿ ಹುಟ್ಟಿದರು. ಒಬ್ಬ ಅಧಿಕಾರಿಯ ಮುಖಂಗಳಲ್ಲಿ ಅಥರ್ವಣವೇದ, [48]ನಿಃಶ್ಯಬ್ದ[49] ಶಾಸ್ತ್ರರಹಸ್ಯಾಗಮ, ಲೈಂಗ್ಯ ಪುರಾಣ ಇಂತಿವು ಪುಟ್ಟಿದವು. ಒಬ್ಬ ಅಧಿಕಾರಿಯ ಮುಖಂಗಳಲ್ಲಿ ಸಾಮವೇದ, ಗೌಣಶಾಸ್ತ್ರ, ವೀರಾಗಮ, ಲಭ್ಯಪುರಾಣ ಇಂತಿವು ಪುಟ್ಟಿದವು. ಒಬ್ಬ ಅಧಿಕಾರಿಯ ಮುಖಂಗಳಲ್ಲಿ ಯಜುರ್ವೇದ, ಸೂಕ್ಷ್ಮಶಾಸ್ತ್ರ, ಉತ್ತರಾಗಮ, ವೇದಪುರಾಣ ಇಂತಿವು ಮೊದಲಾಗಿ ಪುಟ್ಟಿದವು. ಒಬ್ಬ ಅಧಿಕಾರಿಯ ಮುಖಂಗಳಲ್ಲಿ ಋಗ್ವೇದ, ಪಶ್ಯಂತಿ ಶಾಸ್ತ್ರ, ವಾತುಳಾಗಮ, ಸ್ಕಂದಪುರಾಣ ಇಂತಿವು ಪುಟ್ಟಿದವು. ಒಬ್ಬ ಅಧಿಕಾರಿಯ ಮುಖಂಗಳಲ್ಲಿ ಪ್ರೌಡಲಿಕ್ಷಿತವೇದ, ಮಧ್ಯಮ ಶಾಶ್ತ್ರ, ಕಾಮಿಕಾಗಮ ಅಚ್ಚುತಪುರಾಣ ಇಂತಿವು ಪುಟ್ಟಿದವು. ಒಬ್ಬ  ಅಧಿಕಾರಿಯ ಮುಖಂಗಳಲ್ಲಿ ಉತ್ತರ ಖಂಡಣೆಯೆಂಬ ವೇದ ವೈಖರಿ ಶಾಸ್ತ್ರ ಪಂಚಾಕ್ಷರಿಯ ಕಲ್ಪ, ಬ್ರಹ್ಮಾಂಡ ಪುರಾಣ ಇಂತಿವು ಪುಟ್ಟಿದವು. ಮತ್ತೆ ಪ್ರಕೃತಿಯೊಳಗೆ ತ್ರಿಯಕ್ಷರವಡಗಿದವು ತ್ರಿಯಕ್ಷರದೊಳಗೆ ಷಡಾಕ್ಷರವಡಗಿದವು, ಷಡಾಕ್ಷರದೊಳಗೆ ಷಡುದೇವತೆ ಷಡ್ಭೂತವಡಗಿದವು. ಷಡ್ಭೂತದೊಳಗೆ ಇಪ್ಪತ್ತನಾಲ್ಕು ಅಕ್ಷರವಡಗಿದವು. ಇಪ್ಪತ್ತು ನಾಲ್ಕು ಅಕ್ಷರದೊಳಗೆ ಐವತ್ತೊಂದು ಅಕ್ಷರವಡಗಿದವು, ಐವತ್ತೊಂದಕ್ಷರದೊಳಗೆ ಇಪ್ಪತ್ತು ನಾಲ್ಕು ಶ್ರುತಿಗಳು ನವಗ್ರಹಂಗಳು ಮೂಲ ನಕ್ಷತ್ರಂಗಳು ಈರೇಳು ಲೋಕದ ಘಳಿಗೆ ವಿಘಳಿಗೆ, ದಿನ, ವಾರ, ಮಾಸ, ತಿಥಿ, ಬಿದಿಗೆ, ಯುಗ, ಜುಗು, ಯೋಗ, ಕರಣ, ಜ್ಯೋತಿ, ಸುಜ್ಯೋತಿ, ಜ್ಞಾನ, ಸಂಕ್ರಮಣ, ಮುಹೂರ್ತ ಇಂತಿವೆಲ್ಲವು ಅಡಗಿದ ಭೇದವ ಸಂಗನ ಬಸವಣ್ಣ ಬಲ್ಲನಯ್ಯಾ ಮಹಾದಾನಿ ಸೊಡ್ಡಳ.

೨೯೬

ಅಜ್ಞಾನವೆಂಬ ತೊಟ್ಟಿಲೊಳು ಜ್ಞಾನವೆಂಬ ಶಿಶುವ ಮಲಗಿಸಿ,
ಸಕಲ ವೇದಶಾಸ್ತ್ರಾಗಮ ಪುರಾಣವೆಂಬ ನೇಣಕಟ್ಟಿ ಹಿಡಿದು,
ತೂಗಿ ಜೋಗಳವಾಡುತ್ತೈದಾಳೆ ಭ್ರಾಂತಿಯೆಂಬ ತಾಯಿ,
ನೇಣ ಹರಿದು ತೊಟ್ಟಿಲಮುರಿದು ಜೋಗುಳ ನಿಂದಲ್ಲದೆ
ಗೋಹೇಶ್ವರನೆಂಬ ಲಿಂಗವ ಕಾಣಬಾರದು.                                        ||೬||

೨೯೭

ಹಿಂದೆ ಅನಾದಿಕಾಲದಲ್ಲಿ ಲೆಕ್ಕವಿಲ್ಲದ ಯುಗಂಗಳು ಹೋದವು.
ದ್ವಯಮುಖರು, ಅದ್ವಯಮುಖರು, ಸ್ವತಂತ್ರಮುಖರು,
ಸನ್ನಹಿತ ಮುಖರು, ಉಗ್ರಮುಖರು, ಉತ್ಪತ್ಯಕ್ಕೆ
ಹೊರಗಾದಮುಖರು, ಸ್ಥಿತಿಗತಿಯಿಂದರಿಯದ ಮುಖರು,
ಸರ್ವವಿಸ್ತೀರ್ಣದೊಳಗುಳ್ಳ ಮುಖರು, ಅಷ್ಟತನು ಮೂರ‍್ತಿ
ಮೊದಲಾದ ಅನಂತಮೂರ್ತಿಗಳೆಲ್ಲಾ ದೇವಾರಾಧನೆ
ಪೂಜಕರಾದರಲ್ಲದೆ ಭಕ್ತ ಮುಖರಲ್ಲ,
ಸಂಸಾರಸಂಗದೊಳಗಿದ್ದವರಲ್ಲ.
ಇಂಥ ಮುಖರಲ್ಲ[50] ಅಂತಿರಲಿ
ಇಲ್ಲದ ನಿರವಯವ ಆಕಾರಕ್ಕೆ ತಂದು
ಜಂಗಮಲಿಂಗವೆನಿಸಿ ಸಾಹಿತ್ಯವ ಮಾಡಿದಾತ ಬಸವಣ್ಣನು,
ಇದನರಿದು ಧನ್ಯನಾದೆನೆಂಬೀತಪರುಷದೊಳಗೂ
ಈ ಕ್ರಮವನರಿಯದೆ ಅನಂತಮತವ ಹಿಡಿದು ಭೂ[51]ಭಾರಕರಾದರು.
ಅವರ ಮುಟ್ಟಿ ಲಿಂಗಕ್ಕೆ ಕೊಟ್ಟು ಕೊಂಡಡೆ ಪ್ರಸಾದ
ವಾಗದೆಂದು ಜಂಗಮಕ್ಕೆ ಅರ್ಪಿಸಿದ ನಿತ್ಯ ಪ್ರಸಾದವೆನಗೆ
ಬಸವಣ್ಣನ ಪ್ರಸಾದ.
ಆ ಬಸವಣ್ಣನ ಪ್ರಸಾದವೆ ಎನಗೂ ನಿನಗೂ ವಿಸ್ತಾರವಾಗಿತ್ತು
ಕಾಣಾ ಕಲಿದೇವಯ್ಯಾ.                                          ||೮||

೨೯೮

ವಿಷ್ಣು ವರಾಹಾವತಾರದಲ್ಲಿ ಹಂದಿಯಂ ತಿಂಬುದಾವಾಚಾರವೋ?
ವಿಷ್ಣು ಮತ್ಸ್ಯಾವತಾರದಲ್ಲಿ ಮೀನಂ ತಿಂಬುದಾವಾಚಾರವೋ?
ವಿಷ್ಣು ಕೂರ್ಮಾವತಾರದಲ್ಲಿ ಆಮೆಯ ತಿಂಬುದಾವಾಚಾರವೋ?
ವಿಷ್ಣು ಹರಿಣಾವತಾರದಲ್ಲಿ ಯರಳೆಯ ತಿಂಬುದಾವಾಚಾರವೋ?
ಇಂತಿವನೆಲ್ಲ ಅರಿಯದೆ ತಿಂದರು.
ಅರಿದರಿದು ನಾಲ್ಕು ವೇದ, ಹದಿನಾರು ಶಾಸ್ತ್ರ
ಹದಿನೆಂಟು ಪುರಾಣ ಇಪ್ಪತ್ತೆಂಟಾಗಮ
ಇಂತಿವೆಲ್ಲವನೋದಿ ಕೇಳಿ ಹೋಮವನಿಕ್ಕಿ ಹೋತನ ಕೊಂದು
ತಿಂಬುದಾವಾಚಾರದೊಳಗೋ?
ಇಂತೀ ಶ್ರುತಿಗಳ ವಿಧಿಯ ಜಗವೆಲ್ಲ ನೋಡಿರೆ
ನಮ್ಮ ಕೂಡಲಸಂಗಮದೇವಂಗೆ
ಅ[52]ಧಿದೇವತೆಗಳ ಸರಿಯೆಂಬವರ ಬಾಯಲ್ಲಿ ಸುರಿಯವೆ
ಬಾಲಹುಳಗಳು?                                      ||೯||


[1] ಅದು (ಬ)

[2] ಅದು (ಬ)

[3] ಸದ್ಭಾವದಿ (ಬ)

[4] ಸದ್ಭಾವದಿ (ಬ)

[5] x (ಬ)

[6] x (ಬ)

[7] ಖವನು ಹಡೆದೆಹೆನೆಂದು (ಬ)

[8] ಖವನು ಹಡೆದೆಹೆನೆಂದು (ಬ)

[9] ಭಕ್ತಿಯಿಂದ (ಬ)

[10] ಭಕ್ತಿಯಿಂದ (ಬ)

[11] ಆ (ಬ)

[12] ಆ (ಬ)

[13] ಸುದ್ಧಿ (ಬ)

[14] ಸುದ್ಧಿ (ಬ)

[15] x (ಚಬವ)

[16] ನಿನಗೆ (ಬ)

[17] ನಿನಗೆ (ಬ)

[18] +ಭಾರವ (ಬ)

[19] ಱು (ಅವಚಂ)

[20] + ಪುರಾಣ (ಬ)

[21] ಅಲ್ಲವೆಂದೆಲ್ಲವನು (ಬ).

[22] ಅಲ್ಲವೆಂದೆಲ್ಲವನು (ಬ).

[23] ಹೊಳೆವ (ಬ)

[24] ಹೊಳೆವ (ಬ)

[25] +ಸಿ (ಬ)

[26] ಆ (ಬ)

[27] ಆ (ಬ)

[28] ಆ (ಬ)

[29] ಆ (ಬ)

[30] ಇತ್ತಾ (ಬ)

[31] ಇತ್ತಾ (ಬ)

[32] ಆ (ಬ)

[33] ಸುಖ (ಬ)

[34] ಕ್ಷ್ಮಿ(ಬ)

[35] ಕ್ಷ್ಮಿ(ಬ)

[36] x (ಬ)

[37] x (ಬ)

[38] + ಅದ (ಬ)

[39] x (ಬ)

[40] x (ಬ)

[41] ಲಾ (ಬ)

[42] ಪರ(ಬ)

[43] ಪರ(ಬ)

[44] ಳಗೆ. (ಬ)

[45] ಳಗೆ. (ಬ)

[46] ಳು(ಬ)

[47] ಳು(ಬ)

[48] ನಿಜ (ಬ)

[49] ನಿಜ (ಬ)

[50] + ಇವರೆಲ್ಲ (ಬ)

[51] ಭವ (ಬ)

[52] ಅ(ಬ)