೩೮೦

*ಅಲ್ಪ ಜ್ಞಾನಿಯಾಗಿ ಪ್ರಕೃತಿ ಸ್ವಭಾವ ಬಿಡದೆ,
ಮಧ್ಯಮ ಜ್ಞಾನಿಯಾಗಿ, ವೇಷ ಭೂಷಕನಾಗಿ,
ಮಹದ ಸುಜ್ಞಾನಿಯಾಗಿ, ಜ್ಞಾನ ನೆಲೆಗೊಂಡು
ಮೌನವನೆಯ್ದಿ ಸಂದಾತ ನಿರವಯ ಕಾಣಾ ಗುಹೇಶ್ವರ. ||೯೧||

೭೮೧

ಯೋಗದಾಗೆಂಬುದನಾರು ಬಲ್ಲರೋ!
ಅದು ಮೂಗ ಕಂಡ ಕನಸು,
ನಡವ ಬಟ್ಟೆ ಮೂರು, ನಡೆಯದ ಬಟ್ಟೆ ಒಂದೆ.

[1] ಒಂದನೊಂಬತ್ತ ಮಾಡಿ ನಡದೆನೆ[2]ಂಬರು.
ಒಂಬತ್ತನೊಂದ ಮಾಡಿ ನಡದೆನೆ[3]ಂಬರು.
ಒಂದು ಮುಖದ ಕತ್ತಲೆ ಮೂರು ಮುಖವಾಗಿ ಕಾಡುತ್ತಿಪ್ಪುದು,
ಪ್ರಾಣಲಿಂಗವೆಲ್ಲಿಯದೊ ಗುಹೇಶ್ವರಾ?          ||೯೨||

೭೮೨

+ಯೋಗದಾಗೆಂಬುವ ಮುನ್ನವೆ ಹೊದ್ದದ ಯೋಗಿಯೆ ಶಿವಯೋಗಿ.
ಮೂಗಕಂಡ ಕನಸಿನ ಸ್ನೇಹದಂತೆ,
ಮುಗ್ಧೆಯ ಮನ ಹರುಷದ ರತಿಯಂತೆ, ಸಂದಾನದಂತೆ;
ನಡು ಬಟ್ಟೆಯ ಮೂರು ನಡೆಗಳಲ್ಲಿ ಬರಿಗೆಯ್ದೆಡೆ
ನಡೆಯೊಂದೆ ಸಸಿನ ಕಂಡಾ.
ಒಂದು ಮೂರು ಮಾಡಿದಡೆಯೂ ಒಂದೆ ಕಂಡಾ.
ಮೂರಾರಾದಡೆಯೂ ಒಂದೆ ಕಂಡಾ.
ಆರು ಮೂವತ್ತಾರಾದಡೆಯೂ ಒಂದೆ ಕಂಡಾ.
ನಿನ್ನ ಅವಯವಂಗಳೆಲ್ಲ ಒಂದೆ ಕಂಡಾ.
ನಿನ್ನ ಅರಿವು ಹಲವಾದಡೆ ಅರಿವು ನಿನಗೊಂದೆ ಕಂಡಾ.
ಕತ್ತಲೆಯೆ ಮನ, ಮಾಯೆಯೆ ಕಾಡನುವ ನಿದ್ರೆ
ಜಾಗರವಾಗಿ ಕಂಗೆಡಿಸಲು, ಕಂಗಳ ಹರವರಿಯಲು,
ಮನವ ಮಣ್ಣಿಸು ಕಂಡಾ.
ಗುಹೇಶ್ವರ ಗಾನಾದ ಮುಗ್ಧತನಕ್ಕೆ ಕಡೆಮೊದಲುಂಟೆ  || ೯೩ ||

೩೮೩

ಮಾಯಾ ಮಂಜಿನ ಸಂಗ್ರಹದಲ್ಲಿ
ಘಟಾಘಟಿತರೆಲ್ಲಾ[4] ಕುಂಜರ[5]ದಲ್ಲಿ ಸಂ[6]ಜೀವಿ[7]ತರಾಗಿಪ್ಪರು.
ಎಂಜಲನುಂಡುಂಡು ಬಂದಂಜದೆ ನುಡಿವರು.
ರಂಜನೆಗೊಳಗಪ್ಪುದೆ ನಿರಂಜನದ ಬೆಳಗು?
ಆಗರದ ಸಂ[8]ಚವನರಿಯರು.
ರಂಜಕನೂ ಅಲ್ಲ ಭುಂಜೆನೂ ಅಲ್ಲ,
ಗುಹೇಶ್ವರಾ ನಿಮ್ಮ ಶರಣ ಸಂಜೀವನ[9] ರಹಿತನು.     || ೯೪ ||

೩೮೪

*ಮಾಯಾಮಂಜಿನ ಜಲವುಕ್ಕಿ
ಜನ್ಮ ಸಂಸಾರಕ್ಕೆ ಬೀಜವಾಗಿ,
ಘಟಾ ಘಟಿತರ ಲಯ ಜನನವ ತನ್ನೊಳಗೆ ಮಾಡಿಸಿ
ಕುಂಜರ ಬಂದು ಸಿಂಹನ ಸೀಳಿದಂತೆ
ನಿನ್ನ ನಂಗದಲ್ಲಿ ನಿನ್ನನೆ ಕೊಲುವುದಾಗಿ
ರಂಜನೆಗೆ ಸಿಲುಕುಗೊಳಿಸಿ
ಮಂಜಿನ ರಂಜಕನ ಮಾಡದ ಮುನ್ನ
ನಿರಂಜನನಾಗು ಕಂಡ ನೀನು
ನೀನಂಜದೆ ನೆನೆ ಕಂಡ ಗುಹೇಶ್ವರನ.

೩೮೫

ಬಲ್ಲೆನೆಂಬಹಂಕಾರ ಸಲ್ಲದಾಗಿ
ನಿಲ್ಲು ಕಂಡಾ ಮನವೆ ಫಲ…
ವಿಲ್ಲದ ಪರಮಯೋಗಿದೆ.   ||ಪ||

ಆನೆಯುದರದೊಳೊಂದಾನೆ ಜನಿಸಿದ ಕಂಡೆ
ಆನೆ ಮದವೇರಿ ಬೀದಿಯಲ್ಲಿ ಬರಲು
ನಾನು ನೀನೆಂಬ ಮದ ಮತ್ಸರದಂಕುಶ ಮುರಿದು
ತಾನಾಗ ಬಲ್ಲಡದು ಶಿವಯೋಗ.     ೧

ಆನೆ ಮದವೇರಿ ರಾಜ ಬೀದಿಗೆ ಸುಳಿವಲ್ಲಿ ಸಿಂಹ
ತಾನೆ ಮಾವತಿಗನಾಗಿ ನಖದ ಸುಳುಹಿನ ಅಂಕುಶವಿಡಿದು
ತಾನಾಗುವ ಧಾನ್ಯವ ನೆನಹಿಸಿಕೊಡುವುದನು
ಗುಹೇಶ್ವರನಲ್ಲಿ ತಿಳಿದುಕೊ ಜಡತೆಯಂ ಮರದು.         ೨

೩೮೬

ಆರು ಅಂಕಣದೊಳಗಾರು ದರುಶನ ಪೂಜೆ.
ಆರೂಢರೂಢಾದಿಯೋಗಿಗಳಿರುತ್ತಿರಲು,
ಅರಾರಿಂದತ್ತತ್ತ ಮೀರಿ ತೋರುವ ಸ್ವಯಂಜ್ಯೋತಿ ಇರಲು,
ಬೇರೆಯರಸಲುಂಟೆ ಶಿವಯೋಗವು?
ಆರು ಅಂಕಣದೊಳಗೆ ಆರು ಮಂದಿಯ
ಸಂದಣಿಯ ಓಲಗದ ಸಡಗರವೆಂದು
ಅರೂಢ ಯೋಗಿಗಳದನೇಣಿಕೆಗೊಲರು.
ಮೂರು ಮನೆಯ ಮತ್ತೆ ದಾಳಿಗೊಳುವ ಕಾರಣಿಕರಲ್ಲವಾಗಿ
ಮೀರಿ ಒಂಬತ್ತು ಗೋಪೆಯೊಳು
ಲಯ ಗಮನ ಸ್ಥಿತ್ಯಾರ್ಥಂಗಳ ಹಂಗಿಲ್ಲದ ಹಂಗಿನಲ್ಲಿ
ನೀನು ನಿನ್ನಲ್ಲಿ ಪತಂಗ ನ್ಯಾಯದಂತೆ
ಗುಹೇಶ್ವರನೊಳೊಂದು ಕಂಡಾ.      ||೯೭||

೩೮೭

*ಕಾಯದ ಕರಡಿಗೆಯೊಳಗೆ
ಪ್ರಾಣದ ಕರ್ಪೂರವ ತುಂಬಿ ಬೆಳಗಿಭೋ.
ಪಂಚಾಕ್ಷರವೆರಸಿ ಕಾಯಜೀವದ ನೆಲೆಯ
ಅರಿಯಬಲ್ಲಡೆ ಬೇರೆ ಕಾಣಲುಂಟೆ ಶಿವಯೋಗವು*       ೧

ಘಟವೆಂಬ ಮರದೊಳಗೆ ಸಟೆದಿಟವ ಮೂರ್ತಿಗೊಳಿಸಿ
ಕುಟುಕು ತೋರುವ ಇರುವೆ ಕಡೆಯೆಂಬತ್ತು ನಾಲ್ಕು ಲಕ್ಷ ಜೀವರಾಶಿಗಳಿಗೆ
ಘಟವೆ[10]ಂಬ ಮಟದೊಳಗೆ ಉಳಿದು ಸಟೆಯಾಗಿ ಹೋಗುವಲ್ಲಿ
ದಿಟದ ಸುದ್ದಿಯ ಬಲ್ಲಡದು[11] ಶಿವಯೋಗವು   ೨

[12]ನರವೃಂದ ತರುವೃಂದ ಗಿರಿಗಹ್ವರಂಗಳೊಳಗೆ
ಅನಂತಕಾಲ ಉಗ್ರ ತಪವ ಮಾಡಿ ತರಗೆಲೆಗಳಮೆದ್ದು
ತೃಪ್ತರಾಗಿ ಫಲವ ಕಾಣದೆ ಭ್ರಮಿತರಾದಿರಲ್ಲಾ[13]           ೩

[14]ಅರಿವೆಂಬ ಮೂರ್ತಿಯನೊಂದು ಕುರುಹು ಧ್ಯಾನಿಸುತ್ತಿರಲು
ಅರಿವು ಕುರುಹನು ಒಂದು ವೈರವೆನುಂಗಿ
ತೆರಹಿಲ್ಲದ ಘನವು ನಿಶ್ಚಿಂತ ನಿರವಯಲು
ಪರವು ತನ್ನೊಳಗಡಗಿದಡದು ಶಿವಯೋಗವು[15]          ೪

ಒಂದಾಗಿ ಚಿಂತಿಸಿದೊಂದಿ ಕಂಡುದ ಕಂಡು
ನೊಂದಿದ ಬಳಿಕ ಭವವ ತಾನೆಯ್ದದೆ
ನಿಂದುದೆ ತಾನು ಶಿವಯೋಗ         ೫

[16]ಆಕಾರ ನಿರಾಕಾರ ಸಾಕಾರ ಸಂಬಂಧನು
ಲೋಕ ವಿರಹಿತ ಶರಣ ಲಿಂಗೈಕ್ಯನು
ಭ್ರಾಂತುವಿನ ಬಲೆಯೊಳಗಾತ ಸಿಲುಕುವನಲ್ಲ
ಅಜಾತ ಕೂಡಲಚೆನ್ನಸಂಗಯ್ಯನು[17] ೬

೩೮೮

ಪ್ರಣತೆಯಿದೆ, ಬತ್ತಿಯಿದೆ,
ಬೆಳಗುವ ತೈಲವಿಲ್ಲ[18]ದೆ ಪ್ರಭೆ ತಾನೆಲ್ಲಿಯದೋ
ಗುರುವಿದೆ, ಲಿಂಗವಿದೆ
ಶಿಷ್ಯನ ಸುಜ್ಞಾನವಂಕುರಿಸದನ್ನಕ್ಕರ ಭಕ್ತಿ ಎಲ್ಲಿಯದೋ
ಸೋಹಮೆಂಬುದ ಕೇಳಿ ದಾಸೋಹವ ಮಾಡದಿರ್ದಡತಿಗಳವೆನು
ನೋಡಾ ಗುಹೇಶ್ವರಾ        ||೯೯||

ಈ ಸ್ಥಲದೊಳಗೆ ಹಿಂದೆ ಹೇಳಿದ ಹದಿನೆಂಟು ಯುಗ  ದಿನಂಗಳಿಗೆಯೂ, ಹದಿನೆಂಟು ಲಿಂಗಂಗಳಿಗೆಯೂ, ಹದಿನೆಂಟು ತರ್ಕಂಗಳಿಗೆಯೂ, ಹದಿನೆಂಟು ರಾಯರುಗಳಿಗೆಯೂ, ಹದಿನೆಂಟು ಧ್ಯಾನಂಗಳಿಗೆಯೂ, ಹದಿನೆಂಟು ಕುಲಂಗಳಿಗೆಯೂ, ಉತ್ಪತ್ಯ, ಸ್ಥಿತಿ, ಲಯಂಗಳಿಗೆಯೂ, ಸ್ವರ್ಗ ನರಕಂಗಳಿಗೆಯೂ ಷಡುದೇವತೆ ಮುಖ್ಯವಾದ ಸರ್ವ ಪ್ರಳಯಂಗಳಿಗೆಯು ಇಂತಿವೆಲ್ಲಕ್ಕೂ ಸಾಕ್ಷಿ.

ಅನಂತನೆಂಬ ಯುಗದಲ್ಲಿ ಈಶ್ವರನೆಂಬ ದೇವರು. ಅದ್ಭುತನೆಂಬ ಯುಗದಲ್ಲಿ ಸದಾಶಿವವನೆಂಬ ದೇವರು. ತಮಂಧನೆಂಬ ಯುಗದಲ್ಲಿ ತೇಜೋಮಯನೆಂಬ ದೇವರು. ತಾರಜನೆಂಬ ಯುಗದಲ್ಲಿ ಚಂದ್ರಶೇಖರನೆಂಬ ದೇವರು. ತಾಂಡಜನೆಂಬ ಯುಗದಲ್ಲಿ ನೀಲಕಂಠನೆಂಬ ದೇವರು. ಭಿನ್ನಜನೆಂಬ ಯುಗದಲ್ಲಿ ಗಂಗಾಧರನೆಂಬ ದೇವರು. ಭಿನ್ನಾಯುಕ್ತನೆಂಬ ಯುಗದಲ್ಲಿ ಶಂಕರನೆಂಬ ದೇವರು. ಆಯುಕ್ತನೆಂಬ ಯುಗದಲ್ಲಿ ಸರ್ವಜ್ಞನೆಂಬ ದೇವರು, ಮದ್ರಯುಕ್ತನೆಂಬ ಯುಗದಲ್ಲಿ ಮಹಾಲಿಂಗನೆಂಬ ದೇವರು. ಮನ್ಯಾರಣನೆಂಬ ಯುಗದಲ್ಲಿ ಶಂಭುವೆಂಬ ದೇವರು. ವನ್ಯಾರಣನೆಂಬ ಯುಗದಲ್ಲಿ ವಿಶ್ವೇಶ್ವರನೆಂಬ ದೇವರು. ವಿಶ್ವಾರಣನೆಂಬ ಯುಗದಲ್ಲಿ ಭೂತೇಶ್ವರನೆಂಬ ದೇವರು. ವಿಶ್ವಾ[19]ವಸುವೆಂಬ ಯುಗದಲ್ಲಿ ಪಶುಪತಿ ಎಂಬ ದೇವರು. ಅಲಂಕೃತನೆಂಬ ಯುಗದಲ್ಲಿ ರುದ್ರೇಶ್ವರನೆಂಬ ದೇವರು. ಕೃತಯುಗದಲ್ಲಿ ವಿರೂಪಾಕ್ಷನೆಂಬ ದೇವರು. ತ್ರೇತಾಯುಗದಲ್ಲಿ ತ್ರಿಪುರಾಂತಕನೆಂಬ ದೇವರು. ದ್ವಾಪಾರದಲ್ಲಿ ಮಲ್ಲಿಕಾರ್ಜುನನೆಂಬ ದೇವರು. ಕಲಿಯುಗದಲ್ಲಿ ತ್ರಿಯಂಬಕನೆಂಬ ದೇವರು. ಅನಂತನೆಂಬ ಯುಗ[20]ದಲ್ಲಿ ಅವರ ವರುಷಂಗಳು[21] ಎಂಟು ನೂರು ಅರುವತ್ತು ಕೋಟಿಯು, ಅರವತ್ತು ಲಕ್ಷವು ಅರುವತ್ತು ಸಾವಿರ ವರುಷವು ವರ್ತಿಸಿ ನಿಂದಿತ್ತು. ಅದ್ಭುತನೆಂಬ ಯುಗ[22]ದಲ್ಲಿ[23] ಏಳನೂರೈವತ್ತು ಕೋಟಿಯು ಐವತ್ತು ಲಕ್ಷವು ಐವತ್ತು ಸಾವಿರ ವರ್ಷ ವರ್ತಿಸಿ ನಿಂದಿತ್ತು. ತಮಂಧನೆಂಬ ಯುಗವು ಆರು ನೂರನಾಲ್ವತ್ತು ಕೋಟಿಯು, ನಾಲ್ವತ್ತು ಲಕ್ಷವು ನಾಲ್ವತ್ತು ಸಾವಿರ ವರುಷವು ವರ್ತಿಸಿ ನಿಂದಿತ್ತು. ತಾರಜನೆಂಬ ಯುಗವು ಮೂವತ್ತು ಕೋಟಿಯು ಮೂವತ್ತು ಲಕ್ಷವು ಮೂವತ್ತು ಸಾವಿರ ವರುಷವು ವರ್ತಿಸಿ [24]ನಿಂದಿ[25]ತ್ತು. ಭಿನ್ನಜನೆಂಬಯುಗ ಮುನ್ನುರಾ ಹತ್ತು ಕೋಟಿಯು ಹತ್ತು ಲಕ್ಷ ಹತ್ತು ಸಾವಿರ ವರ್ಷವೂ ವರ್ತಿಸಿ ನಿಂದಿತ್ತು. ಭಿನ್ನಾಯುಕ್ತನೆಂಬ ಯುಗ ಇನ್ನೂರೈದು ಕೋಟಿಯು ಐದು ಲಕ್ಷವು ಐದು ಸಾವಿರ ವರ್ಷ ವರ್ತಿಸಿ ನಿಂದಿತ್ತು. ತಾಂಡಜನೆಂಬ ಯುಗವು ನೂರಾ ಇಪ್ಪತ್ತು ಕೋಟಿಯೂ ಇಪ್ಪತ್ತು ಲಕ್ಷವು ಇಪ್ಪತ್ತು ಸಾವಿರ ವರುಪವು ವರ್ತಿಸಿ ನಿಂದಿತ್ತು. ಆಯುಕ್ತನೆಂಬ ಯುಗವು ನೂರೈದು ಕೋಟಿಯು ಐದು ಲಕ್ಷವು ಐದು ಸಾವಿರ ವರುಷವು ವರ್ತಿಸಿ[26]ನಿಂದಿ[27]ತ್ತು. ವನ್ಯಾರಣನೆಂಬ ಯುಗವು ಎಪ್ಪತ್ತೈದು ಕೋಟಿಯೂ ಐದು ಲಕ್ಷವು ಐದು ಸಾವಿರ ವರುಷವು ವರ್ತಿಸಿ [28]ನಿಂದಿ[29]ತ್ತು. ವಿಶ್ವಾವಸುವೆಂಬ ಯುಗ೩ದಲ್ಲಿ೪ ಐವತ್ತು ಕೋಟಿಯು, ಐದು ಲಕ್ಷವು ಐದು ವಿಸಾರ ವರುಷವು ವರ್ತಿಸಿ[30]ನಿಂದಿ[31]ತ್ತು. ಅಲಂಕೃತನೆಂಬ ಯುಗವು ನಾಲ್ವತ್ತು ಕೋಟಿಯು ಐದು ಲಕ್ಷವು ಐದು ಸಾವಿರ ವರುಷವು ವರ್ತಿಸಿ[32]ನಿಂದಿ[33]ತ್ತು. ಕೃತ ಯುಗ ಮೂವತ್ತೆರಡು ಲಕ್ಷವು ಐದು ಸಾವಿರ ವರುಷವು ವರ್ತಿಸಿನಿಂದಿತ್ತು. ತ್ರೇತಾಯುಗದಲ್ಲಿ ಹದಿನಾರು ಲಕ್ಷವು ಐದು ಸಾವಿರ ವರುಷವು ವರ್ತಿಸಿನಿಂದಿತ್ತು. ದ್ವಾಪಾರ ಎಂಟು ಲಕ್ಷವು ಐದು ಸಾವಿರ ವರುಷವು ವರ್ತಿಸಿನಿಂದಿತ್ತು. ಅನಂತನೆಂಬ ಯುಗದಲ್ಲಿ ಅನಂತನೆಂಬ ರಾಯನಾಳಿದನು. ಅದ್ಭುತನೆಂಬ ಯುಗದಲ್ಲಿ ಪುಂಡರಿಃಕಾಕ್ಷನೆಂಬ ರಾಯನಾಳಿದನು. ತಮಂಧನೆಂಬ ಯುಗದಲ್ಲಿ ತೇಜೋಮಯನೆಂಬ ರಾಯನಾಳಿದನು. ತಾರಜನೆಂಬ ಯುಗದಲ್ಲಿ ನವಚಕ್ರರಾಯನಾಳಿದನು. ತಾಂಡಜನೆಂಬ ಯುಗದಲ್ಲಿ ನೀಲಕಂಠರಾಯನಾಳಿದನು. ಭಿನ್ನಜನೆಂಬ ಯುಗದಲ್ಲಿ ಸೂ[34]ರರಾಯನಾಳಿದನು. ಆಯುಕ್ತನೆಂಬ ಯುಗದಲ್ಲಿ ಸರ್ವಜ್ಞ ರಾಯನಾಳಿದನು. ಮಯುಕ್ತನೆಂಬ ಯುಗದಲ್ಲಿ ಮಹಾರಾಯನಾಳಿದನು. ಮನ್ಯಾರಣನೆಂಬ ಯುಗದಲ್ಲಿ ಶಂಬುರಾಯನಾಳಿದನು. ವನ್ಯಾರಣನೆಂಬ ಯುಗದಲ್ಲಿ ವಿಶ್ವೇಶ್ವರ ರಾಯನಾಳಿದನು. ವಿಶ್ವಾರಣನೆಂಬ ಯುಗದಲ್ಲಿ ಭೂತೇಶ್ವರರಾಯನಾಳಿದನು. ವಿಶ್ವಾವಸುವೆಂಬ ಯುಗದಲ್ಲಿ ಪಶುಪತಿರಾಯನಾಳಿದನು. ಅಲಂಕೃತನೆಂಬ ಯುಗದಲ್ಲಿ ಶ್ರೀ ವೀರವಲ್ಲಭರಾಯನಾಳಿದನು. ಕೃತ ಯುಗದಲ್ಲಿ ಹರಿಶ್ಚಂದ್ರ ರಾಯನಾಳಿದನು. ತ್ರೇತಾಯುಗದಲ್ಲಿ ಶ್ರೀ ರಾಮಚಂದ್ರ ರಾಯನಾಳಿದನು. ದ್ವಾಪಾರದಲ್ಲಿ ಕೌರವರಾಯನಾಳಿದನು. ಕಲಿಯುಗದಲ್ಲಿ ಜನಮೇಜಯನಾಳಿದನು. ಅನಂತನೆಂಬ ಯುಗದಲ್ಲಿ ಆ ಶಿವನ ಲೀಲೆಯಿಂದ ಅನಾದಿಯಾದಿಗಳೆಂಬವು ಹುಟ್ಟಿದವು. ಅದ್ಭುತನೆಂಬ ಯುಗದಲ್ಲಿ ಅನಾದಿಯಾದಿಗಳಿಂದ ಅದ್ಭುತನೆಂಬಧಿ ದೇವತೆಗಳು ಹುಟ್ಟಿದವು. ತಮಂಧನೆಂಬ ಯುಗದಲ್ಲಿ ಅದ್ಭುತನೆಂಬಧಿ ದೇವತೆಗಳ ತಮಂಧದಿಂದ ವೇದಶಾಸ್ತ್ರಾಗಮ ಪುರಾಣಂಗಳು ಹುಟ್ಟಿದವು. ತಾರಜನೆಂಬ ಯುಗದಲ್ಲಿ ವೇದಶಾಸ್ತ್ರಾಗಮ ಪುರಾಣಂಗಳಿಂದ ಇಂದ್ರ ಹುಟ್ಟಿದ. ತಾಂಡಜನೆಂಬ ಯುಗದಲ್ಲಿ ಆ ಇಂದ್ರನಿಂದಾದಿತ್ಯರು ಹುಟ್ಟಿದರು. ಭಿನ್ನಜನೆಂಬ ಯುಗದಲ್ಲಿ ಆ ಚಂದ್ರಾದಿತ್ಯರಿಂದ ನವಗ್ರಹಂಗಳು ಹುಟ್ಟಿದವು. ಭಿನ್ನಾಯುಕ್ತನೆಂಬ ಯುಗದಲ್ಲಿ ನವಗ್ರಹಂಗಳಿಂದ ಹದಿನೆಂಟು ಧಾನ್ಯಂಗಳು ಹುಟ್ಟಿದವು. ಯುಕ್ತನೆಂಬ ಆ ಯುಗದಲ್ಲಿ ಆ ಹದಿನೆಂಟು ಧಾನ್ಯಂಗಳಿಂದ ಎಂಬತ್ತನಾಲ್ಕು ಲಕ್ಷ ಜೀವ ರಾಶಿಗಳು ಹುಟ್ಟಿದವು. ಮಯುಕ್ತನೆಂಬ ಯುಗದಲ್ಲಿ ಎಂಬತ್ತುನಾಲ್ಕು ಲಕ್ಷ ಜೀವರಾಶಿಗಳಿಂದ ಹದಿನೆಂಟು ಕುಲಂಗಳು ಹುಟ್ಟಿದವು. ಮನ್ಯಾರಣನೆಂಬ ಯುಗದಲ್ಲಿ ಹದಿನೆಂಟು ಕುಲಂಗಳಿಂದ ಆರು ದರುಶನಂಗಳು ಹುಟ್ಟಿದವು. ವನ್ಯಾ ರಣನೆಂಬ ಯುಗದಲ್ಲಿ ಆರು ದರುಶನಂಗಳಿಂದ ಹದಿನೆಂಟು ತರ್ಕಂಗಳು ಹುಟ್ಟಿದವು. ವಿಶ್ವಾರಣನೆಂಬ ಯುಗದಲ್ಲಿ ಆ ಹದಿನೆಂಟು ತರ್ಕಂಗಳಿಂದ ನರಕಂಗಳು ಹುಟ್ಟಿದವು. ವಿಶ್ವಾವಸುವೆಂಬ ಯುಗದಲ್ಲಿ ಆ ನರಕಂಗಳಿಮದ ಸ್ವರ್ಗಂಗಳಾದವು. ಅಲಂಕೃತನೆಂಬ ಯುಗದಲ್ಲಿ ಆ ಸ್ವರ್ಗದಿಂದ ಧರ್ಮಂಗಳಾದವು. ಕೃತಯುಗದಲ್ಲಿ ಆ ಧರ್ಮಂಗಳಿಂದ ಕಾಮ ಭೋಗಂಗಳಾದವು. ತ್ರೇತಾಯುಗದಲ್ಲಿ ಆ ಕಾಮ ಭೋಗಂಗಳಿಂದದರಿಂದ ಸುಖದುಃಖಗಳಾದವು. ದ್ವಾಪಾರ ಯುಗದಲ್ಲಿ ಆ ಸುಃಖ ದುಖಂಗಳಿಂದ ಜನನ ಮರಣಂಗಳಾದವು. ಕಲಿಯುಗದಲ್ಲಿ ಆ ಜನನ ಮರಣಗಳಿಂದ ಸತ್ಯ ಪುಟ್ಟಿದವು. ಇದು ಕಾರಣ ಕೂಡಲಸಂಗನ ಶರಣ ಚೆನ್ನಬಸವಣ್ಣಂಗೆ ನಮೋ ನಮೋ ಎಂಬೆನು ಕಾಣಾ ಪ್ರಭುವೆ.

ಇಂತೆಂಬ ಶರಣಸತಿ ಲಿಂಗಪತಿ ಮುಖ್ಯವಾದ ಗಣಂಗಳನರಿಯದ ನಿಷ್ಕಳರೆಂಬ ಷಡುದೇವತೆಗಳಾಗಲಿ, ಸಕಲರೆಂಬ ಎರಡೆಂಬತ್ತೆಂಟು ಕೋಟಿ ರುದ್ರರಾಗಲಿ, ಪ್ರಳಯಕಲರೆಂಬ ಬ್ರಹ್ಮ ಪಡೆ ವಿಷ್ಣುಪಡೆಗಳಾಗಲಿ, ವಿಜ್ಞಾನಕಲರೆಂಬ ದೇವದಾನವರಾಗಲಿ, ಸಕಲಕಲರೆಂಬ ಮಾನವರಾಗಲಿ, ಪ್ರಳಯ ಉಂಟು. ಈ ಪಂಚಾಂಗ ಪಂಚತಂಡದವರಿಗೆ ಪ್ರಳಯನುಂಟೆಂಬುದನರಿದು ಅವರನು ಅವರ ಶ್ರುತಿಗಳನು ಬಿಟ್ಟು ಶರಣಸತಿ ಲಿಂಗಪತಿಗಳಿಬ್ಬರ ಹದಿನಾಲ್ಕು ತೆರದ ಭಕ್ತಿಯನೊಳಕೊಂಡು ಹದಿನಾಲ್ಕು ಷಡುಸ್ಥಲದ ವಚನಂಗಳೊಳಗೆಯೆ ನುಡಿದು, ನಡದು ನಿಂದು ಜಂಗಮ ಪ್ರಸಾದವ ಲಿಂಗಕ್ಕೆ ಕೊಟ್ಟಾರೋಗಿಸುವಂಥಾ ಭಕ್ತ ಮಹೇಶ್ವರರು ಅವರಿಗೆ ಪ್ರಳಯವಿಲ್ಲ. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೩೮೯

ನರರು [35]ಸುರರು ನವಕೋಟಿ ಯುಗಗಳ
ಪ್ರಳಯಕ್ಕೆ ಒಳಗಾಗಿ ಹೋ[36]ದರು[37].
ಒಳಗಾಗಿ ಹೋಹಲ್ಲಿ ಸುರಪತಿಗೆ
ಪರಮಾ[38]ಯುವು[39] ನೋಡಿರೆ!
ಅಂಥಾ ಸುರಪತಿ ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ,
ಚಿಟ್ಟಜನೆಂಬ ಋಷಿಗೆ ಒಂದು ಚಿಟ್ಟು ಸಡಿಲಿತ್ತು ನೋಡಿರೆ!
ಅಂಥಾ ಚಿಟ್ಟಜನೆಂಬ ಋಷಿಗೆ ನವಕೋಟಿ ಯುಗ
ಪ್ರಳಯಕ್ಕೊಲಗಾಗಿ ಹೋಹಲ್ಲಿ,
ಚಿಪ್ಪಜನೆಂಬ ಋಷಿಗೆ ಒಂದು ಚಿಪ್ಪು ಸಡಿಲಿತ್ತು ನೋಡಿರೆ.
ಅಂಥಾ ಚಿಪ್ಪಜನೆಂಬ ಋಷಿ ನವಕೋಟಿ ಯುಗ.
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ,
ಡೊಂಕಜನೆಂಬ ಋಷಿಗೆ ಒಂದು ಡೊಂಕು ಸಡಿಲಿತ್ತು ನೋಡಿರೆ.
ಅಂಥಾ ಡೊಂಕಜನೆಂಬ ಋಷಿಗೆ ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ,
ರೋಮಜನೆಂಬ ಋಷಿಗೆ ಒಂದು ರೋಮ ಸಡಿಲಿತ್ತು ನೋಡಿರೆ.
ಅಂಥಾ ರೋಮಜನೆಂಬ ಋಷಿಗೆ ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಆದಿ ಬ್ರಹ್ಮಂಗೆ ಆಯುಷ್ಯವು ನೂರಾಯಿತ್ತು ನೋಡಿರೆ.
ಅಂಥಾ ಆದಿ ಬ್ರಹ್ಮಂಗೆ ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಆದಿ ನಾರಾಯಣಂಗೆ ಒಂದು ದಿನವಾಯಿತ್ತು ನೋಡಿರೆ.
ಅಂಥ ಆದಿನಾರಾಯಣ ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ರುದ್ರಂಗೆ ಕಣ್ಣೆವೆ ಹಳಚಿತ್ತು ನೋಡಿರೆ.
ಅಂಥಾ ರುದ್ರರು ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಫಣಿಮುಖರೊಂದು ಕೋಟಿ, ಪಂಚಮುಖರೊಂದು ಕೋಟಿ,
ಷಣ್ಮುಖರೊಂದು ಕೋಟಿ, ಸಪ್ತಮುಖರೊಂದು ಕೊಟಿ,
ಅಷ್ಟಮುಖರೊಂದು ಕೋಟಿ, ನವಮುಖರೊಂದು ಕೋಟಿ
ದಶಮುಖರೊಂದು ಕೋಟಿ,
ಇಂತಿವರೆಲ್ಲರ ಕಿರೀಟದಾಭರಣಂಗಳು ಬಿದ್ದವು ನೋಡಿರೆ.
ಅಂಥಾ ಸಪ್ತಕೋಟಿಗಳು ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ನಂದಿವಾಹನರೊಂದು ಕೋಟಿ,
ಭೃಂಗಿಪ್ರಿಯರೊಂದು ಕೋಟಿ,[40]ಚಂದ್ರ[41]ಪ್ರಿಯರೊಂದು ಕೋಟಿ.
ಇಂತೀ ತ್ರಿಕೋಟಿಗಳ ತಲೆಗಳು ಬಾಗಿದವು ನೋಡಿರೆ.
ಅಂಥಾ ತ್ರಿಕೋಟಿಗಳ ತಲೆಗಳು ನವಕೋಟಿ ಯುಗ
ಪ್ರಳಯಕ್ಕೆ ಒಳಗಾಗಿ ಹೋಹಲ್ಲಿ
ಕೂಡಲಚೆನ್ನಸಂಗಯ್ಯ,
ನಮ್ಮ ಬಸವಣ್ಣನೀಸುದ್ದಿಯನೇನೆಂದುವರಿಯನು         ||೧೦೦||

೩೯೦

ತ್ರಿವಿಧ ಮಧ್ಯದ ದೇಶ
ತ್ರಿಕುಟ ಮಧ್ಯದ ಬೆಳಸು,
ದಿನ ಮಧ್ಯದ ಪರಿಯಾಣ,[42]ನಿರ್ಭಾವ[43] ಮಧ್ಯದ ಧಾನ್ಯವನೆ ತಂದು
ರಥಾರಂಬದ ಭಾಜನದೊಳಗಿವೆಲ್ಲವನು ಸಂವರಿಸುವೆ.
ಹಿಂದೆ ನೋಡಿಯಾರುವ ಕಾಣೆ,
ಮುಂದೆ ನೋಡಿಯಾರುವ ಕಾಣೆ,
ಮಧ್ಯದಲ್ಲಿ ನೋಡಿಯಾರುವ ಕಾಣೆ.
ಈ ಶಕ್ತಿಯ ಮಾಡಿದ ಭಕ್ತಿಯ ಬೇಡಲಿಕೆ
ಒಬ್ಬ ಜಂಗಮಕ್ಕೆ ಕೊಟ್ಟು ಆ ಭಕ್ತಿಯ
ಶೇಷ ಪ್ರಸಾದದಿಂದ ಶುದ್ಧನಾದೆ ಕಾಣಾ ಕಲಿದೇವಯ್ಯಾ.           ||೧೦೧||

೩೯೧

ಗಣಂಗಳು, ನಿತ್ಯಲಿಂಗಾರ್ಚನೆಯ ಮಾಡುವ ಗಣಂಗಳು,
ನಿಜಲಿಂಗಾರ್ಚನೆ ಮಾಡುವ ಗಣಂಗಳು,
ಘನಲಿಂಗಾರ್ಚನೆಯ ಮಾಡುವ ಗಣಂಗಳು,
ಸ್ವಯಂಲಿಂಗಾರ್ಚನೆಯ ಮಾಡುವ ಗಣಂಗಳು,
ಇಂತಿವೆಲ್ಲವ ಭಕ್ತಿಯನು ನಿತ್ಯಸಿಂಹಾಸನದ ಮೇಲೆ ಕುಳಿತು ಮಾಡುವಾಗ
ಅವರ ಪ್ರಸಾದದ ರುಚಿಯೊಳಗೋಲಾಡುತಿರ್ದೆನು
ಕಾಣಾ ಕಲಿದೇವಯ್ಯಾ.      ||೧೦೨||

೩೯೨

ಕಲ್ಯಾಣವೆಂಬ ಬಿಂದ್ವಾಕಾಶದೊಳಗಣ
ಪಟ್ಟಣದೊಳಗೆ [44]ಚತ್ತೀಸಪುರ[45].
ಚತ್ತೀಸಪುರದ ಮಹಾಗಣಂಗಳು
ಒಂದು ಪುರದವರು ಪತ್ರಪುಷ್ಪವ ತ[46]ಹರು.
ಎರಡು ಪುರದವರು, ಅಗ್ಫವಣಿಯ ತ[47]ಹರು.
ಮೂರು ಪುರದವರು ಸಾಮಾರ್ಜನೆಯ ಮಾಡಿ
ರಂಗವಲ್ಲಿಯ ನಿಕ್ಕುವರು.
ನಾಲ್ಕು ಪುರದವರು ಧೂಪ ದೀಪ ಗಂಧಾಕ್ಷತೆಯಗಳ ತ[48]ಹರು.
ಐದು ಪುರದವರು ಲಿಂಗಾರ್ಚನೆಗೆ [49]ನೀಡಿ ಕೊಡುವರು.
ಆರು ಪುರದವರು ಪ್ರಸಾದಕ್ಕೆ ತದ್ಗತರಾಗಿಹರು.
ಮತ್ತೆ ಮೂರು ಪುರದವರು ಧ್ಯಾನಾರೂಢರಾಗಿಹರು.
ಮುಂದಣ ಪುರದವರು ನಿಶ್ಚಿಂತನಿವಾಸಿಗಳಾಗಿಹರು.
ಆ ಪುರದ ಗಣಂಗಳ ಬಸವಣ್ಣನ ಮನೆಯ
ಜಂಗಮ ನಾನು ಕಾಣಾ ಕಲಿದೇವಯ್ಯ           ||೧೦೩||

ಯುಗಶ್ರುತಿಕುಲ ವಿಡಂಬನಸ್ಥಲ ಸಮಾಪ್ತ
ಮಂಗಳಮಹಾ

* * *

* ಅಲ್ಪಜ್ಞಾನಿ ಪ್ರಕೃತಿ ಸ್ವಭಾವಿ.
ಮಧ್ಯಮಜ್ಞಾನಿ ವೇಷಧಾರಿ.
ಅತೀತಜ್ಞಾನಿ ಆರೂಢ.
ಆರೂಢನನಾರೂ ಅರಿಯಬಾರದಯ್ಯ.
ಜ್ಞಾನವನರಿಯದಾತ ಅಜ್ಞಾನಿ, ನಾಮನಷ್ಟ.
ಈ ಚತುರ್ವಿಧದೊಳಗಾವಂಗವೂ ಅಲ್ಲ.
ಗುಹೇಶ್ವರಾ, ನಿಮ್ಮ ಶರಣನು ನಿಸ್ಸೀಮನು.    (ಬ)

[1] ದು(ಬ)

[2] ವೆಂ(ಬ)

[3] ವೆಂ(ಬ)

+  ಈ ವಚನ ‘ಬ’ ಪ್ರತಿಯಲಿಲ್ಲ.

[4] ಲ್ಲರು (ಬ)

[5] + ನಪಂಜರ (ಬ)

[6] ಜಿ (ಬ)

[7] ಜಿ (ಬ)

[8] ಪ (ಬ)

[9] x (ಬ)

* ಈ ವಚನ ‘ಬ’ ಪ್ರತಿಯಲ್ಲಿಲ್ಲ.

* ಕಾಯದ ಕರಡಿಗೆಯೊಳಗೆ
ಪ್ರಾಣಕರ್ಪುರ ತೈಲ ಕೂಡಿ ಬೆಳಗುತ್ತಿದೆ ಪಂಚಾಕ್ಷರಿ.
ಕಾಯ ಜೀವದ ನೆಲೆಯ ತಾನರಿಯಬಲ್ಲಡೆ
ಬೇರೆ ಕಾಣಲುಂಟೆ ಶಿವಯೋಗವು (ಅ).

* ಕಾಯದ ಕರಡಿಗೆಯೊಳಗೆ
ಪ್ರಾಣಕರ್ಪುರ ತೈಲ ಕೂಡಿ ಬೆಳಗುತ್ತಿದೆ ಪಂಚಾಕ್ಷರಿ.
ಕಾಯ ಜೀವದ ನೆಲೆಯ ತಾನರಿಯಬಲ್ಲಡೆ
ಬೇರೆ ಕಾಣಲುಂಟೆ ಶಿವಯೋಗವು (ಅ).

[10] ಮಠವೆಂಬ ಸಟೆಯ ಮಾತನುಸುರಲು ಮಠವು ಹಾಳಾಗಿ ಹೋದುದೆ (ಅ).

[11] ಮಠವೆಂಬ ಸಟೆಯ ಮಾತನುಸುರಲು ಮಠವು ಹಾಳಾಗಿ ಹೋದುದೆ (ಅ).

[12] ಮಠವೆಂಬ ಸಟೆಯ ಮಾತನುಸುರಲು ಮಠವು ಹಾಳಾಗಿ ಹೋದುದೆ (ಅ).

[13] ನರವೃಂದ ತರುವೃಂದ ಗಿರಿಗಹ್ವರದೊಳುಗ್ರ ತಪವಿರಲು ತರಗೆಲೆಯ
ಘಟಕೀವುತಿಹುದೆ ಶಿವಯೋಗ? (ಅ)

[14] ನರವೃಂದ ತರುವೃಂದ ಗಿರಿಗಹ್ವರದೊಳುಗ್ರ ತಪವಿರಲು ತರಗೆಲೆಯ
ಘಟಕೀವುತಿಹುದೆ ಶಿವಯೋಗ? (ಅ)

[15] ಅರುವೆಂಬ ಜ್ಯೋತಿಯನು ಕುರುಹಿಟ್ಟು ಧ್ಯಾನಿಸಿ
ಅರಿದು ತಾ ಮರದು ಮರೆಯದಾವಾಗ
ನುಂಗಿರಲು ಪರವ ಕಾಣಿಪುದೆ ಶಿವಯೋಗ. (ಅ)

[16] ಆಕಾರ ನಿರಾಕಾರವೇಕೀಕರಿಸಿ ತನ್ನ ಸಾಕಾರವ ಮಾಡಿದ
ದೇಹ ಪ್ರಾಣವ ನಿರಾಕಾರಮಾಡೆ ಶಿವಯೋಗ (ಅ)

[17] ಆಕಾರ ನಿರಾಕಾರವೇಕೀಕರಿಸಿ ತನ್ನ ಸಾಕಾರವ ಮಾಡಿದ
ದೇಹ ಪ್ರಾಣವ ನಿರಾಕಾರಮಾಡೆ ಶಿವಯೋಗ (ಅ)

[18] ಆಕಾರ ನಿರಾಕಾರವೇಕೀಕರಿಸಿ ತನ್ನ ಸಾಕಾರವ ಮಾಡಿದ
ದೇಹ ಪ್ರಾಣವ ನಿರಾಕಾರಮಾಡೆ ಶಿವಯೋಗ (ಅ)

[19] x (ಬ)

[20] (ಬ)

[21] (ಬ)

[22] x (ಬ)

[23] x (ಬ)

[24] x (೨೫೭)

[25] x (೨೫೭)

[26] x (೨೫೭)

[27] x (೨೫೭)

[28] x (೨೫೭)

[29] x (೨೫೭)

[30] x (೨೫೭)

[31] x (೨೫೭)

[32] x (೨೫೭)

[33] x (೨೫೭)

[34] ಮ (೨೫೬)

[35] +ಅ (ಬ)

[36] ಹಲ್ಲಿ (ಬ)

[37] ಹಲ್ಲಿ (ಬ)

[38] ಶ್ಯ (ಬ)

[39] ಶ್ಯ (ಬ)

[40] ಭದ್ರ (ಬ)

[41] ಭದ್ರ (ಬ)

[42] ನಿರ್ಭೇದ (ಬ)

[43] ನಿರ್ಭೇದ (ಬ)

[44] x (ಬ)

[45] x (ಬ)

[46] ತಾ (ಬ)

[47] ತಾ (ಬ)

[48] ತಾ (ಬ)

[49] + ಯ ಮಾಡುವದಕ್ಕೆ (ಬ)