೨೩೫
ಕಾಮನ ಸುಟ್ಟು, ಹೋಮವನುರುಹಿ
ತ್ರಿಪುರಸಂಹಾರದ ಕೀಲ ಬಲ್ಲಡೆ, ಯೋಗಿಯಾದಡೇನು?
ಭೋಗಿಯಾದಡೇನು? ಶೈವನಾದಡೇನು?

[1]ಸನ್ಯಾಸಿಯಾ[2] ದಡೇನು?
ಅಸನವ ತೊಱೆದಾತ ವ್ಯಸನವ ಮಱೆದಾತ,
ಗುಹೇಶ್ವರಲಿಂಗದಲ್ಲಿ ಅವರ ಹಿರಿಯಿರೆಂಬೆನು. ||೧೩||

೨೩೬

[3]ಏನೆಂದ[4]ಱೆಯರು ಎಂತೆಂಬಱೆಯರು.[5]ಬರಿಯ[6] ಮಾತಿನ [7]ಬೊಮ್ಮವ[8]ನಾಡುತ್ತಿಪ್ಪರು.
ರುದ್ರನ ನೊಸಲ ಕಣ್ಣ ಕಿಚ್ಚಿನೊಳಗೆ
ತ್ರಿಪುರವ ಸುಡಲರಿಯದೆ,
ಕಾಮನ[9] ಕಿಚ್ಚಿನೊಳಗೆ ತ್ರಿಪುರವ ಸುಡುತ್ತಿಪ್ಪರು.
ಭೂಮಿಯಾಕಾಶವ ಮೆಟ್ಟಿ ಕಾಮಗಣಂಗಳ ಕೂಡೆ ಕಾದಿ
ಗೆಲಲರಿಯದೆ, ನೀಲಗಿರಿಯ ಮೇಲೆ ನಿಂದು ಉಲಿವ
ಉಯ್ಯಾಲೆಯನೇರಿ ಆಡುತಿಪ್ಪರು.
ಗುಹೇಶ್ವರ, ನಿಮ್ಮನರಿದೆವೆಂದೆಲ್ಲರು ಬಱುದೊರೆವೋದರಯ್ಯಾ. ||೧೪||

ಅಂತಪ್ಪ ಗುಹೇಶ್ವರನನರಿಯದೆ ಬರುದೊರೆವೋಗುವ ಬ್ರಹ್ಮರಿಂದ ನಿರ್ಮಿತವಾದ ಬೆಟ್ಟದ [10]ಅಷ್ಟ[11] [12]ಕುಲ[13] ಗಿರಿಗಳೆಂಬ ಕೈಲಾಸಂಗಳುದ್ದವನು ಮೀರಿ, ಆ ಪ್ರಸಾದರಸವಜ್ರದ ಮಹಾಮೇರುವೆಂಬ ಕೈಲಾಸದ ಮರುಳ ಕಂಕಣದ ಹಜಾರಸಾಲೆ ಎಷ್ಟುದ್ದ ಉಂಟೆಂಬಂತೆ ಅನಿತ್ಯ ರೂಪಿಂದೊಪ್ಪಿನಿಂದಿರಲದರ ಮೇಲಣ ಅನಿತ್ಯ ಸುಖವನು ಮಚ್ಚಿ ಜಂಭ, ಜಲಂಧರ, ಗಜಾಸುರ ಮೊದಲಾದ ರಾಕ್ಷಸ ಪಡೆಯಿರುವಾಗ ಆ ಮಹಾ ಹಜಾರ ಕಂಕಣದ ಮೇಲಿರ್ದ ಮಹಾರುದ್ರ ಸ್ವಾಮಿಗಳು ನಿತ್ಯ ಪರಶಿವ ಸುಖಸಂತೋಷದಿಂ ಜಂಬೂದ್ವೀಪದ ನಾಣ್ದೆಸೆಯ ನೋಡುವಾಕ್ಷಣ ತ್ರಿಪುರವ ಕಂಡು ಮರೆಹೊಕ್ಕರ ಕಾಯ್ವ ಮಾರಾಂತರಂಗೆಲ್ವ[14] ಶರಣಾಗತ ವಜ್ರಪಂಜರವೆಂಬ ಬಿರಿದನುಳ್ಳ ಕೈಲಾಸದ ಶರೀರವನು ಸೋಂಕಿರ್ದ ಓಲಗ ಸಾಲೆಯ ಕಂಕಣಕ್ಕೆ ಸಮಾನವಾಗಿ ನಿಂದಿರಬಹುದೇ ಎನುತ ಶೀಘ್ರದಲ್ಲಿ ಒಳಹೊಕ್ಕು ಪೂರ್ವಾಚಾರ್ಯನಪ್ಪ ಬಸವರಾಜಂಗೆ ಬಿನ್ನೈಸಿದಡಾ ಕಾರುಣ್ಯನಿಧಿ. ಅವರ ಭಕ್ತಿ ಬಿಸ್ನಪವಂ ಲಾಲಿಸಿ ಕೇಳಿ ಕೈಕೊಂಡು ಅನಂತಕೋಟಿ ಪ್ರಮಥ [15]ಗಣಂಗಳ[16] ಸಮ್ಮೇಳನದೊಳಗೆ ವಚನಾನುಭಾವದಮೃತ ಸಂತೋಷದಿಂ ಕಂಕಣ ಚಾವುಡಿಗೆ ಬಿಜಯಂಗೈದು ನೋಡಿ ಕಂಡು ಆದ ನಿರ್ಮಿಸಿದವರುಗಳ ಭಾವದಲ್ಲಿ ಗಮ್ಮನೆಯರಿದು [17]ಒಂ[18]ದೊಂದು ಪ್ರಕಾರದ ವಿನೋದಂಗಳ ಲೀಲೆಯ ನಟಿಸಬೇಕೆಂದು ಇಚ್ಛೈಸಿ ಅಖಂಡಿತ ವೃಷಭೇಶ್ವರ ೭.(( ನ (ಬ). ನಾ ೮.(( ನ (ಬ) ಗಲಿರ್ದ ಹಾಂಗೆಯೆ ಮಹಾಗೌಣವೆಂಬ ಗೋ[19]ಮಯವ[20]ನು ಬಿಡಲೊಡನೆ ಆ ಗೋಮಿತವು ಘುಳಿಘುಳಿಸಿ ಜ್ಞಾನ ಸುಜ್ಞಾನದ ರತ್ನದ ಮಣಿಮಾಲೆಗಳೊ ಎಂಬಂತೆ ಥಳಥಳಿಸಿ ಹೊಳಹೊಳದು ಬೆಳಬೆಳಗಿ ಅಂತರ್ಗತದಿಂ ಹೊರವಂಟು ಬಹಿರ್ಗತಮಾಗಿ ಶೀಘ್ರದೊಳು ಬರುತ್ತಿರಲು ಮತ್ತೊಮ್ಮೆ ಮಹಾಜ್ಞಾನದ ರತ್ನದ ಮಣಿಮಾಲೆಗಳೋ ಎಂಬಂತೆ [21]ನೀಟಾಗಿ[22] ಯೆರಗುತ್ತಿರಲು ಮತ್ತೊಮ್ಮೆ ರುದ್ರಾಕ್ಷಿಯ ಮಣಿಮಾಲೆಗಳೊ ಎಂಬಂತೆ ಲಂಬವಾಗಿ ಕರವುತ್ತಿರಲು ಮತ್ತೊಮ್ಮೆ ಪಂಚವರ್ಣದ ಭಸಿತದ ಖಣಿಗಳೋ ಎಂಬಂತೆ ಲಂಬವಾಗಿ ಕರವುತ್ತಿರಲು ಮತ್ತೊಮ್ಮೆ ಪಂಚವರ್ಣದ ಭಸಿತದ ಖಣಿಗಳೋ ಎಂಬಂತೆ ಪ್ರಣಮನಾದವಾಗೆರಗುತ್ತಿರಲು ಮತ್ತೊಮ್ಮೆ ಚಿದ್ಬ್ರಹ್ಮಾಂಡದ ಚಿನುಮಯ ಮಿಂಚಿನ ಮೂರ್ತಿಗಳೋ ಎಂಬಂತೆ ಚಮತ್ಕರಿಸುತ್ತಿರಲು,  ಮತ್ತೊಮ್ಮೆ ಪ್ರಕಾಶ ಬ್ರಹ್ಮಾಂಡದ ಪಂಚವರ್ಣದ ಮುಗಿಲುಗಳೋ ಎಂಬಂತೆ ಚಮತ್ಕರಿಸುತ್ತಿರಲು, ಮತ್ತೊಮ್ಮೆ ಪ್ರಕಾಶ ಬ್ರಹ್ಮಾಂಡದ ಪಂಚವರ್ಣದ ಮುಗಿಲುಗಳೋ ಎಂಬಂತೆ ಅವಗವಿಸುತ್ತಿರಲು, ಮತ್ತೊಮ್ಮೆ ಅನುಭವ ಬ್ರಹ್ಮಾಂಡದನುಭವ ಸೋನೆಯ ಪ್ರಣಮನಾದ ಘೋಷದ ಸಿಡಿಲುಗಳೋ ಎಂಬಂತೆ ಆರ್ಭಟಿಸುತ್ತಿರಲು, ಮತ್ತೊಮ್ಮೆ ವಜ್ರ ಮಹಾಮೇರುಮಂದಿರ ಶ್ರುತಿ ಮೊದಲು ನಡುವೆಲ್ಲ ಠಾವಿನೊಳು ಭಂಡಾರಿ ಸಿರ್ದ ವಚನಾರ್ಧವೆಂಬ ಸಿದ್ಧರಸ ಬಲಿದುಕ್ಕಿ ಸೋರುವ ಪರಿಯೊ ಎಂಬಂತೆ ಭೋರೆಂದು ಸುರಿವುತ್ತಿರಲು, ಮತ್ತೊಮ್ಮೆ ಪ್ರಸಾದರಸ ವಜ್ರ ಮೇರುವಿಶ್ವತೋ ಮುಖವಾಗಿ ರಸಾನುಭವ ಸದ್ವಾಸನೆಯೆಂಬ ಘನಪುಷ್ಪದವೃಷ್ಟಿ ಬೀಳುವ ಪರಿಯೋ ಎಂಬಂತೆ ಭೋರ್ಭೋರೆನುತ ಬೀಳುತ್ತಿರಲು, ಅಂತಪ್ಪ ಮಹಾಚೋದ್ಯಂಗಳಂ ನಿಷ್ಕಲರು ಸಕಲರು ಪ್ರಳಯಾಕಲರು ವಿಜ್ಞಾನಕಲರು ಸಕಲಾಕಲರು ಈ ಪಂಚ ತಂಡದವರುಗಳೆಲ್ಲರು ಕಂಡು ಸಿಡಿಲು ಮಿಂಚುಗಳಿಗಂಜಿ ಓಡುವ [23]ಎರಳೆ[24]ಗಳಂತೆ ಓಡಡಗುತ್ತಂ, ಆದಿತ್ಯನಂ ಕಂಡ ಗೂಗಿಗಳಂತೆ ಕಣ್ಮುಚ್ಚುತ್ತಂ, ಅನಂತನಂ ಕಂಡ ಕಪಿಗಳಂತೆ, ಏಡಿಸುತ್ತಂ, ಅಗಸ್ತ್ಯನಂ ಕಂಡ ಶರಣ ನಿಧಿಗಳಂತೆ ತಲ್ಲಣಿಸುತ್ತಂ, ಅಗ್ನಿಯಂ ಕಂಡ ಅರಣ್ಯಗಳಂತೆ ಮುಖಂಗಳು ವಣಗುತ್ತಂ, ಬಾಚಿ ಮುಟ್ಟಿದ ತೊಲೆಗಳಂತೆ ತಪ್ಪಾ[25]ಗುತ್ತಂ [26]ದಂತಿಯಂ[27] ಮುಟ್ಟಿನೋಡಿ ಏನಂದರಿಯದೆ ತತ್ತಳಮತ್ತಳಗೊಂಬಂಥಾ ಕರುಗಳಂತೆ, ಅಂಧಕರುಗಳಂತೆ ತತ್ತಳಮತ್ತಳಗೊಂಬಂತೆ ಅಂಕುಶವಕಂಡಜುವ ಅಂಜನಾವತಿಗಳಂತೆ ಅಂಜುತ್ತಂ, ಸಿಂಹನಂ ಕಂಡ ಗಜಗಳಂತೆ ಹಿಮ್ಮೆಟ್ಟುತ್ತಂ, ಹಾಲ ಕಂಡ ರೋಗಿಗಳಂತೆ ಬಾಯ ಮುಚ್ಚುತ್ತಂ, ಕನ್ನಡಿಯಂ ಕಂಡ ಮೂಕೊರೆಯಂತೆ ಮೋರೆಗಳನುರುಗಿಕೊಳ್ಳುತ್ತಂ, ರಾಹು ಕೇತುಗಳಂ ಕಂಡ ಚಂದ್ರಾದಿತ್ಯರಂತೆ ಈ ಗ್ರಹಗಳು ದಿಗಿಲುದಿಗಿಲುವೆನುತ್ತಂ, ವಜದ್ರದ ಬಿರುವೊಯ್ಲಿಂಗಂಜಿ ಪರ್ವತಂಗಳು ಒಡದು ಬಿದ್ದು ಕುಪ್ಪರಿಸುವಂತೆ ಬಿದ್ದು ಕುಪ್ಪರಿಸುತ್ತಂ, ಗಾಳಿಗೆ ಯೆಲೆಗಳುದುರುವಂತೆ ಮೇಲಿರ್ದ ಲೋಕದವರುಗಳುದುರುತ್ತಂ, ವೈದ್ಯನಂ ಕಂಡ ವ್ಯಾಧಿಗಳು ತೊಲಗುವಂತೆ ತೊಲಗುತ್ತಂ, ಭೂತ ಹೊಡದವರುಗಳಂತೆ ಭ್ರಮೆಗೊಂಡು. ತಿರುಗುತ್ತಂ, ಚಾಪವಂ ಕಂಡ ಮೃಗ ಪಶು ಪಕ್ಷಿಗಳಂತೆ ದೂರಕ್ಕೆ ಓಡುತ್ತಂ, ಮಹದೈಶ್ವರ್ಯವ ಕಂಡು ಸರಿವ ದರಿದ್ರಗಳಂತೆ ಸರಿವುತ್ತಂ, ನವಶೈಲಂಗಳೆಂಬ ಕೈಲಾಸಂಗಳು ಚತುರ್ದಶಲೋಕಂಗಳೆಂಬ ಭುವನಂಗಳು ಪಂಚತಂಡದವರುಗಳೆಂಬ ದೇಹಿಗಳು, ಈ ಹಲವು ಪ್ರಕಾರಂಗಳೆಲ್ಲಾ ಬಿಗಡುಗೊಂಡು ಭ್ರಮಿಸಿಬಿದ್ದು ಧರೆಯೊಳುರುಳಿ ಮೂರ್ಛಿಯಾಗಿ ಕಳಕಳವನೈದಿ ಸತ್ತು ಸಾಯದಿಪ್ಪ ಸಮಯದಲ್ಲಿ ಆ ಗೋಸಿದ್ಧಿ ಪಾಪರಹಿತವಹಂಥಾ ಮೃತ್ತಿಕೆಯೋ ಎಂಬಂತೆ, ಕೀಟನಂ ತನ್ನಂತ ಮಾಡಿಕೊಂಬ ತುಂಬಿಯೋ ಎಂಬಂತೆ, ಲೋಹಮಂ ಹೇಮವಂ ಮಾಡಿಕೊಂಬ ಸಿದ್ಧರಸವೊ ಎಂಬಂತೆ, ಆ ಹೇಮವಂ ತನ್ನಂತೆ ಮಾಡಿಕೊಂಬ ಪರಷರಸವೋ ಎಂಬಂತೆ, ಪಂಚತಂಡದವರುಗಳಿಗೆಲ್ಲಕ್ಕೂ ಮಹಾಲಿಂಗವ ತೋರಿ ಕೊಟ್ಟೆಹೆನೆಂದು ಪ್ರಸಾದರಸ ವಜ್ರಮಹಾಮೇರುಮಂದಿರದಲ್ಲಿಂದ ನೂರೆಂದು ಸ್ಥಲಮಾರ್ಗವೆಂಬ ನಿಚ್ಚಣಿಕೆಯಲ್ಲಿಳಿದು ಪರಮಶಾಂತಿಯಿಂದ ಬಿಜಯಂಗೈದು ಮಹಾಸುಜ್ಞಾನಿಯೆಂಬ ಗುರುಸ್ವಾಮಿ ಮೂರ್ತಿಗೊಂಡಿರ್ದ ಪರಿಯೋ ಎಂಬಂತೆ, ಮುಪ್ಪುರಕ್ಕೆ ಪಶ್ಚಿಮದೊಳು ಕೆಲಯೋಜನದಲ್ಲಿ ಮೂರ್ತಿ ಮಾಡಿರುತ್ತಿರಲು, ಇರಲ್ಕೆ ಸಂಕಲರಹಿತವಹಂಥ ಮಹಾಗೋಮಿತದ ಭರಭಾರಮಂ ತಾಳಲಾರದೀಪೃಥ್ವಿ, ಬಾವಿ[28]ಣದೆರೆಯಲಾಕ್ಷಣ. ಕೆಳಗಣೇಳೇಳು ಲೋಕಂಗಳನುತಟವಾಯಿದು ಪಾತಾಳ ಪೃಥ್ವಿಯಿಂದ ಕೆಳಗಣ ನಾಲ್ವತ್ತು ಕೋಟಿ ಯೋಜನ ಪ್ರಮಾಣಿನಲ್ಲಿರ್ದ ಜಂಗಮಭಕ್ತಿಯೆಂಬ ಹಸೆಯ ತಾಗಿ ಕಡೆಯಲ್ಲಿ ಪದ್ಮಾಸನಂಗೈದು ಬೇರೂರಿ ಪಾತಾಳಲೋಕದಿಂ ಮೇಲೆ ತನ್ನೊಡಲೊಳಗೆ ಜಾಳಂದ್ರಮಾಗಿ ಪರಮ ಶಾಂತಿಯನೊಳಕೊಂಡು ಮುಪ್ಪುರದಷ್ಟುದ್ದವನು ಮೀರಿ ಬೆಳದು ತನ್ನ ತಾನೆ ಕರಣದಿಂದೊಪ್ಪಿ ನಿಂದಿತ್ತು. ಹಾಗೊಪ್ಪಿನಿಂದಬಳಿಕ ನವಕೈಲಾಸಂಗಳು ಪಂಚ ತಂಡದವರುಗಳು ಯುಗವೇಳು ಲೋಕಂಗಳು ಇಂತಿವೆಲ್ಲವು ಮೂರ್ಛೆ ತಿಳಿದೆದ್ದು ಎಂದಿನಂತೆ ಹರಕರಿಸಿ ಸ್ಥೂಲಸೂಕ್ಷ್ಮಕಾರಣವೆಂಬ ಪಿಂಡಾಂಡಂಗಳಾಗಿರುತ್ತಿರ್ದವು. ಇಂತೆಂಬ ಪುರಾತನರಗಣಿತ ವಚನಂಗಳಿಗೆ ಸಾಕ್ಷಿ.

೨೩೭

ವಸುಧೆಯಿಲ್ಲದ ಬೆಳಸು, ರಾಜಾನ್ನದ ಹೆಸರಿನಲ್ಲದ ಓಗರ,
ವೃಷಭ ಮುಟ್ಟದ ಹಯನು, ಬೆಣ್ಣೆಯ ಹೊಸೆವರಿಲ್ಲದೆ ಕಂಡುಂಡೆನು.
ಶಿಶು ಕಂಡ ಕನಸಿನಂತೆ ಗುಹೇಶ್ವರನೆಂಬುದು
ಹೆಸರಿಲ್ಲದ ಬಯಲು.         ||೧೫||

೨೩೮

ಸುಟ್ಟ ಬೂದಿಯೊಳಗೊಂದು ಸುಡದ ಬೂದಿಯ ಕಂಡಡೆ,
ಆ ಸುಡದ ಬೂದಿಯಂ ಬಿಟ್ಟು ಬೆಟ್ಟವ ಮಾಡಿದಾತನ
ಗುಟ್ಟನಾರು ಕಂಡವರಿಲ್ಲ.
ನಾನು ಆ ಪಿತನನರಿದು[29] ಶರಣೆಂದು ಬದುಕಿದೆ.
ಆ ಬೆಟ್ಟದ ಮೇಲೆ ಅನೇಕ ವಸ್ತುವ ಕಂಡು ಚರಿಸುತ್ತಿದ್ದೇನೆ ಕಾಣಾ
ಶ್ರೀಶೈಲ ಚೆನ್ನಮಲ್ಲಿಕಾರ್ಜುನ.         ||೧೬||

೨೩೯

ಉರಿವ ಕಿಚ್ಚಿನೊಳಗೆ ಹಾಕಿದಡೆ ಬೆಂದುದೆಂದರಿಯಬಾರದು,
ಬೇಯದೆಂದರಿಯಬಾರದು.
ಹಿಡಿದು ಸುಟ್ಟು ಬೂದಿಯ ಹೂಸಿಕೊಂಡಡೆ
ಮರಳಿ ಹುಟ್ಟಲಿಲ್ಲ ಕಾಣಾ ಗುಹೇಶ್ವರ.            ||೧೭||

ಧರೆಯ ಮೇಲೊಂ [30]ದರಿದಪ್ಪ ರತ್ನ[31] ಹುಟ್ಟಿರಲು
ಅದನರಸಲರಸ ಹೋಯಿತ್ತು.
ನಡುನೀರೊಳಗೆ ಮುಳುಗಿ ಆಳವರಿದು ನೋಡಿಕಂಡೆಹೆನೆಂದಡೆ
ಕಾಣಬಾರದು.
ಧಾರೆವಟ್ಟಲ ಕಳೆದುಕೊಂಡು ನೀರಸೋದಿಸಿನೋಡಿದಡೆ
ದೂರದಲ್ಲಿ ಕಾಣಬರುತ್ತಿಹುದು ನೋಡಾ.
ಸಾರಕ್ಕೆ ಹೋಗಿ ಹಿಡಿದುಕೊಂಡೆಹೆನೆಂಬ ಧೀರರುಗಳೆಲ್ಲರ
ನುಂಗಿತ್ತು ಗುಹೇಶ್ವರ.       ||೧೮||

೨೪೧

ಕರಗಿಸಿ ನೋಡಿರಣ್ಣ ಕರಿಯ ಘಟ್ಟಿಯನು.
ಆ ಕರಿಯ ಘಟ್ಟಿಯೊಳಗೊಂದು ರತ್ನವಿಪ್ಪುದು.
ಆ ರತ್ನದ ಪರೀಕ್ಷೆಯ ಬಲ್ಲೆನೆಂಬವರೆಲ್ಲರು ಕಣ್ಣುಗೆಡಿಸಿತ್ತು.
ಆರುಹಿರಿಯರೆಲ್ಲರು ಮರುಳಾಗಿಹೋದರು.
ಆ ಕರಿಯ ಘಟ್ಟಿಯನು ಬಿಳಿದು ಮಾಡಿ
ಮುಖದ ಮುದ್ರೆಯನೊಡೆಯಬಲ್ಲರಿಗಲ್ಲದೆ
ಗುಹೇಶ್ವರನ ನಿಲವ ಕಾಣಬಾರದು ನೋಡಿರಣ್ಣ.          ||೧೯||

೨೪೨

ನೀರುಸುಟ್ಟ ಕಿಚ್ಚಿನ ಬೂದಿಯ ವರ್ಮವ ನೀವುಕಂಡಡೆ ಹೇಳಿರೆ!
ಬಯಲ ಸುಟ್ಟ ಕಿಚ್ಚಿನ ಬೂದಿಯ ವರ್ಮವ
ನೀವು ಕಂಡಡೆ ಹೇಳಿರೆ!
ವಾಯುನಿಂದ ಸ್ಥಾನವ, ಗುಹೇಶ್ವರನಿಂದ ನಿಲವ
ನೀವು ಕಂಡಡೆ ಹೇಳಿರೆ.     ||೨೦||

೨೪೩

ಕಡಲ ಮೇಲಣ ಕಲ್ಲು ಸಿಡಿಲು ಹೊಯ್ದ ಬಾವಿಯ ತಡಿಯ
ರಕ್ಕಸಿಯ ಮಗಳು ಅಡವಿಯಲ್ಲಿ ಮಡಿದಳು ನೋಡಾ.
ತೊಡಯಬಾರದ ಲಿಪಿಯ ಬರೆಯಬಾರದು ನೋಡಾ.
ನಡುನೀರಜ್ಯೋತಿಯ ವಾಯುವಿನ ಕೊನೆಯಲ್ಲಿ ನೋಡಾ.
ಮೊದಲಿಲ್ಲದ ನಿಜ, ಕಡೆಯಿಲ್ಲದ ನಡು, ಏನೂ ಇಲ್ಲದ
ಊರೊಳಗೆ ಹಿಡಿದಡೆ ನುಂಗಿತ್ತು ಹೆಮ್ಮಾರಿ ಗುಹೇಶ್ವರ. ||೨೧||

೨೪೪

ರಸದ ಬಾವಿಯ ತುಡುಕ ಬಾರದು, ಕತ್ತರಿ –
ವಾಣಿಯ ದಾಂಟಿದಂಗಲ್ಲದೆ.
ಪರುಷವಿದೆ ಕಬ್ಬಿನವಿದೆ ಸಾಧಿಸಬಲ್ಲವಂಗೆ.
ಶ್ರೀಶೈಲದುದಕವ ಧರಿಸಬಾರದು, ಗುಹೇಶ್ವರಾ,
ನಿಮ್ಮ ಶರಣಂಗಲ್ಲದೆ.        ||೨೨||

೨೪೫

ಅನಾದಿಯಲೊಬ್ಬ ಶರಣ ಆಹ್ವಾನ ವಿಸರ್ಜನವಿಲ್ಲದ
ಪರತತ್ವವ ಸ್ಥಾಪಿಸಿ
ಪ್ರತಿಷ್ಠೆಯ ಮಾಡುವಲ್ಲಿ, ಷಡುವರ್ಣಾತ್ಮಕ ಮೃಗಿ ಹುಟ್ಟಿದಳುನೋಡಾ.
ಆ ಮೃಗಿಯೊಳು ಪಂಚಾಂಗ ಪಂಚ ತಂಡದವರುಗಳೆಲ್ಲಾ
ಹುಟ್ಟಿ ವರ್ತಿಸಿ ಲಯವಾಗಿ ಮತ್ತೆ ಪಲ್ಲವಿಸುತ್ತಿರ್ದರು ನೋಡಾ
ಆ ಪರತತ್ವದ ಲೀಲೆಯನಾ ಶರಣನೇ ಬಲ್ಲ ಗುಹೇಶ್ವರ. ||೨೩||

ಅಂತಪ್ಪ ಶರಣಸತಿ ಲಿಂಗಪತಿಗಳಿಬ್ಬರಿಂದ ಲಿಂಗಗಳು ಪ್ರಣಮಂಗಳು ಸ್ಥಲಕುಳಂಗಳು ಭಸಿತ ರುದ್ರಾಕ್ಷಿಗಳು ತೀರ್ಥ ಪ್ರಸಾದಗಳು ಪ್ರಸಾದ ರಸವಜ್ರ ಶೈಲ ಶ್ರೀಶೈಲ ಇಂತಿವೆಲ್ಲವು ಬಹಿರಂಗಕ್ಕೆ ಬಂದುದಕ್ಕೆ ದೃಷ್ಟವೇನು ಎಂದಡೆ: ಸ್ವಯಂಜ್ಯೋತಿ ರುದ್ರನ ಲೀಲೆಯಹಂಕಾರದೊಳು ಪುಟ್ಟಿದ ಮನೆಮಾಯೆಗಳಂತ ರಂಗದಿಂದ ಪಂಚಾಂಗ ಪಂಚತಂಡದವರುಗಳೆಲ್ಲ ಹುಟ್ಟಿ ಬಹಿರಂಗಕ್ಕೆ ಕಬಂದು ಪಸರಿಸಿಪ್ಪಂತೆ ಆ ಪರವಸ್ತುಗಳಿಬ್ಬರ ಷಡಾಧಾರ ಪತ್ರಂಗಳೆಂಬ ಚಿಪ್ಪಾಡುಗಳೊಳಗೆ ಅವೆಲ್ಲವು ಅನಾದಿ ಸಂಸಿದ್ಧವಾಗಿರ್ದು. ವೀರಶೈವವ ಬಯಸುವಂಥಾ ಭಕ್ತ ಮಾಹೇಶ್ವರರಿಗೋಸ್ಕರವಾಗಿ ಬಹಿರಂಗಕ್ಕೆ ಬಿಜಯಂಗೈದವೆಂದರಿವುದು. ಅದು ಕಾರಣ ಮುಸುಟಿಯ ಚೌಡಿದೇವರು ಸುರಗಿಯ ಚೌಡಿದೇವರುಗಳಿಬ್ಬರು ಸಮಾಧಿಯೊಳಗೆಯಿಲ್ಲದೆ ಬಸವಗಳನುಂಟುಮಾಡೆಬ್ಬಿಸಿ ಬಹಿರಂಗಕ್ಕೆ ತಂದವರೊಡಲೊಳಗಿರ್ದ [32]ಗೋಸಿದ್ಧಿಯಂ ಬಹಿರಂಗಕ್ಕೆ ಬಿಡಿಸಿತೋರಿದರು. ಮತ್ತೆ ಬಾವೊರ ಬೊಮ್ಮದೇವರುಗಳು ಜಂಗಮದೇವರುಗಳಿಗೆ ಸಾಮಾರ್ಜನೆಯ ಮಾಡಬೇಕೆಂದು ಗೋಮಿತವ ತರಹೋಗಿ ಕಾಣದೆ ಕೋಲ ಹಿಡಿದು ಒಂದು ಕಲ್ಲ ವೃಷಭನ ಬೆನ್ನಹೊಯಿದು, ಗೋಸಿದ್ಧಿಯನಿಕ್ಕಿಸಿಕೊಂಡು ಮಠಕ್ಕೆ ತಂದದ ವಿಭೂತಿ ರುದ್ರಾಕ್ಷೆ ಪ್ರಣಮ ಪಂಚಾಕ್ಷರಿ ಲಿಂಗಗೋಮಕಯ ಇಂತಿವ ಮಾಡಿ ತೋರಿದಳು. ಪರಶಿವನ ಶರೀರದಲ್ಲಿ ಏಕೀಕರಿಸಿರ್ದ ಪರಶಕ್ತಿ ತನ್ನ ಲೀಲೆಯ ಬಳಸಬೇಕೆಂದು ಇಚ್ಛೈಸಿ ಅಖಂಡಿತ ಸ್ವರೂಪಿಯಾಗಿ ಮರ್ತ್ಯಲೋಕದೊಳಗಿರ್ದ ಭಕ್ತ ಮಾಹೇಶ್ವರರುಗಳ ರಕ್ಷಿಸಲೆಂದು ಸೊನ್ನಲಿಗೆಗೆ ಚಿತ್ತೈಸಿ ಒಬ್ಬರ ಮಗನೆಂಬಂತೆ ಪುರುಷರೂಪಿನ ಹಸುಳೆಯಂತಿರ್ದ ಮಹಾವೃಷಭನ ನೆನೆಯಲಾಕ್ಷಣವದು ಕಪಿಲ ವರ್ಣದ ವೃಷಭನಾಗಿ ಬಿಜಯಂಗೈದು ಆಡುವ ಬಾಲಕನ ಮುಂದೆ ಗೋಸಿದ್ಧಿಯಂ ಬಹಿರಂಗಕ್ಕೆ ಬಿಡುವಾಗ ಆ ಶಿಶು [33]ಕರ[34]ದೊಳಾಂತು ಕೊಂ[35]ಡದ ಲಿಂಗ ವಿಭೂತಿ ರುದ್ರಾಕ್ಷಿ ಪ್ರಣಮ ಪಂಚಾಕ್ಷರಿ ಗೋಮಿತ ಇಂತಿಷ್ಟುವನು ಮಾಡಿ ತೋರಿಸಿ ಕಪಿಲಸಿದ್ಧ ಮಲ್ಲಿಕಾರ್ಜುನಲಿಂಗವೆಂದು[36] ಕಲ್ಪಿಸಿ ಧರಿಸಿಕೊಂಡಿರ್ದನು. ಮತ್ತೆ ಸೋಲೂರ ಬಸವತಂದೆ ಲಿಂಗಯಕ್ಯವಾದೀಚೆ ಹುಲಿಗೆರೆಯಲ್ಲಿ ಮೂಗು ಇಲ್ಲದ ಒಂದು ವೀರಣ್ಣನಿಗೆ ಲಿಂಗಮುದ್ರೆಯ ಬಸವನ ಗೋಸಿದ್ಧಿಯಂ ತಂದು ಭಕ್ತ ಮಾಹೇಶ್ವರರು ಹತ್ತಿಸಿ ಮೊದಲ ಮೂಗಿನಂತೆ ಮಾಡಿದರು. ಇಂತು ಆಗದಂಥಾ ಕಾರಣವನಾಗುಮಾಡಿಕೊಂಬ ಶರಣರುಗಳು ತಮ್ಮಲ್ಲಿ ಮುನ್ನವೆ ಯಾಗಿರ್ದ ಶಿವತಂತ್ವಂಗಳನಾಗು ಮಾಡಿಕೊಂಬುದರಿಂದಲ್ಲದು ಸ್ವಭಾವ. ಇಂತಪ್ಪ ದೃಷ್ಟವನೇಕ ಉಂಟು. ಅದನು ಪುರಾತನರಗಣಿತ ವಚನಂಗಳ ಚೆನ್ನಾಗಿ ನೋಡಿ ವಿಚಾರಿಸಿ ತಿಳಿದ ಭಕ್ತ ಮಹೇಶ್ವರರೆಬಲ್ಲರು. ಅಂತಪ್ಪ [37]ಗೋಸಿದ್ಧಿ[38] ಶ್ರೀಶೈಲವೆಂಬ ದಕ್ಷಿಣ ಕೈಲಾಸಕ್ಕೆ ಬಸವಣ್ಣನ ಮರುಳ ಕೈಗಳ ಹಜಾರದಲ್ಲಿರ್ದ ತನ್ನ ವೃಷಭೇಶ್ವರ ರೂಪನಲ್ಲಿಯೇ ಬಸವಣ್ಣನ ಮರುಳ ಕೈಗಳ ಹಜಾರದಲ್ಲಿರ್ದ ತನ್ನ ವೃಷಭೇವರ ರೂಪನಲ್ಲಿಯೇ ಸ್ಥಾಪಿಸಿ ಮುನ್ನ ತಾನಿರ್ದ ಪರಶಿವ ಶರಣ ಗುರು ಲಿಂಗ ಜಂಗಮವೆಂಬ ಮೊದಲ ವಿಶ್ವತೋ ರೂಪನಾಗುತ್ತಂ ಪಂಚವಿಕೃತ ಪರ್ವತಾ ಭರಣ ಕ್ಷಿತಿ ವಿಯತ್ತಳ ಅಂಡಾಭರಣ ರುಂಡಾಭರಣ ಮುಖ್ಯವಾದ ಕೆಲಗಣಂಗಳು ಅನುಭವ ಪ್ರಸಾದ ರಸವಜ್ರದ ಮಹಾಮೇರುವಿನ ಶಿಖಾಗ್ರದ ಮಹಾ ವೃಷಭೇಶ್ವರನ ಕರ್ಣದ್ವಾರದಿ ಬಿಜಯಂಗೈದು ಲಕ್ಷದ ಮೇಲೆ ತೊಂಭತ್ತಾರು ಸಾವಿರ ಜಂಗಮದೇವರುಗಳು ಅಸಂಖ್ಯಾತರೊಳಗೆ ಕೆಲರು ಸುಜ್ಞಾನ ಮರುಳಗಳೊಳಗೆ ಕೆಲವು, ಇಂತಪ್ಪ ಸ್ವಾಮಿಗಳು ಸಹಿತ ಹಜಾರ ಮಂಟಪದ ಮೂಲಪ್ರಣಮಂಗಳು ಯುಕ್ತವಾದ ನೂರೊಂದು ಸ್ಥಲದನುಭವ ರಸದೊಳಗೋಲಾಡುತ್ತಂ ಘಮ್ಮನೆ ಗಮಿಸಿ ಮೂರ್ತಿಗೊಂಡು ಉಪಮಾತೀತರಾಗಿರ್ದರು. ಇಂತೆಂಬ ಮೂಲಪ್ರಣಮಂಗಳಿಗೆ ಸಾಕ್ಷಿ.

೨೪೬

ಆದಿ ಅನಾದಿ ಎನ್ನದೆ ಬಸವಣ್ಣ ಗಣ ಮೇಳವಾಗಿ,
ಅನಂತ ಯುಗಂಗಳಲ್ಲಿಯು ಸಕಲ ಲೋಕದೊಳು
ಚರಿಸುತ್ತಿಪ್ಪ ಸುಳುಹನರಿಯದೆ ಸಕಲ ನಿಷ್ಕಲರೆಲ್ಲಾ ಭ್ರಮೆಗೊಂಡು
ಬೀಳುತೇಳುತಿರ್ದರು.
ಇವರೆಲ್ಲರ [39]ಮುಂದೆ[40] ಆ ಗಣಂಗಳ ನಾನರಿದು ಬದುಕಿದೆನು ಕಾಣಾ
ಶ್ರೀಶೈಲ ಚೆನ್ನಮಲ್ಲಿಕಾರ್ಜುನಾ.       ||೨೪||

೨೪೭

ಸ್ವರವೆಂಬ ಕುದುರೆಗೆ ವಿಷ್ಣುವೆಂಬ ಕಡಿವಾಣ,
ಚಂದ್ರಸೂರ್ಯರೆಂಬ ಅಂಕಣಿ, ಬ್ರಹ್ಮನೆಂಬ ಹಲ್ಲಣ
ಸುರಾಳವೆಂಬಲ್ಲಿ ನಿರಾಳವಾಯಿತ್ತು ಗುಹೇಶ್ವರನೆಂಬ ರಾವುತಂಗೆ           ||೨೫||

೨೪೮

ಸ್ವಸ್ಥಾನ ಸ್ವಸ್ಥಿರದ ಸುಮನ ಮಂಟಪದಲ್ಲಿಯ ಬೆಳಗು
ಶಿವಭಾವದನುಭಾವ ಯಥಾರ್ಥವಾಗಿ
ಗುಹೇಶ್ವರ ನಿಮ್ಮ ಶರಣನನುಪಮ ಸುಖಿಯಾಗಿರ್ದನು.            ||೨೬||

ಇರ್ದ ಬಳಿಕಾ ಪಂಚ ವಿಕೃತನೀ ತ್ರಿಪುರ ಮರುಳ ಕಂಕಣದಷ್ಟುದ್ದವಿರಬಹುದೆ ಎಂದು ಬಯಲಬಾಣವ ತೊಡಚದ ಮುನ್ನವೆ ಜೀವಹಂಸಗಳೆಂಬ ರಕ್ಕಸರ ಮೇಲೆ ನಿಂದರ್ತಿಯಲ್ಲಿ ನಾಣ್ದೆಸೆಯನೋಡುತ್ತಿರುವಾಗ, ಆ ಗೋಮಿತ ಪರ್ವತಮಂ ಕಂಡು ಇದೇನು ಚೋದ್ಯವೆಂದು ಉಪಮಿಸಲು, ಉಪಮಾತೀತವಾದ ಗೋಸಿದ್ಧಿಗಿರಿಯೆಂದರಿಯದೆ ವಿಷ್ಣು ರಜತಗಿರಿಯಲ್ಲಿಂದಲೂ, ನಮ್ಮೆಲ್ಲರ ಹೊರಡಿಸಿ ತಗುಳಿದುದಲ್ಲದೆ ಇಲ್ಲಿಂದಲೂ ನಮ್ಮೆಲ್ಲರನು ಓಡಿಸಿಹೆನೆಂದೀ ದುರ್ಗವಂ ನಿರ್ಮಿಸಿದನಹುದು – ಕಾಣಿರೆ, ಎನುತ ದೊಡ್ಡ ದೈತ್ಯರುಗಳು ನಿಶ್ಚಯಿಸಿ ಅದರ ಮೇಲಿರ್ದವರುಗಳ ನೋಯಿಸಿ ಹಿಡಕೊಂಡು ಬಂದೆಹವೆಂದು ದೈತ್ಯರು ಸಂದಣಿಸುವಲ್ಲಿ ಮಲಹರನಪ್ಪ ಗುರುಬಸವಣ್ಣನ ಸರ್ವಾಂಗದಲ್ಲಡಗಿರ್ದ ಜ್ಯೋತಿರ್ಮಯದ ಬೆಳಗು ಬಹಿರಂಗಕ್ಕೆ ಬಂದು ಕೋಟಿಸೂರ್ಯರ ಬೆಳಗನು ಮಸಳಿಸು [41]ವಂತಿ[42]ರಲು, ಆ ಮಹಾ ಬೆಳಗಿನ ಕಿರಣಂಗಳಿಗೆ ಯುಗವೇಳು ಲೋಕಂಗಳೆಲ್ಲನು ತತ್ತಳಗೊಳಿಸಿ ದಟ್ಟೈಸುವ ತಮಂಧವ ಕಂಡಂಜಿವಗ್ಗಾಗಿ ಮುಪ್ಪುರವ ಪ್ರವೇಶಿಸಿಕೊಂಡು ಮಸಿಯ [43]ಮುಗಿಲೋ[44] ಎಂಬಂತೆ ಅಂಧಕಾರಕವಿರ್ದುದಂ ಕಂಡು ಅಡಿ [45]ಇಡುವುದಕ್ಕೆ[46] ತೆರಪಿಲ್ಲದ ಕಾರಣ ಧನುಜರು ಬೆಗಡುಗೊಂಡು ಕೃಷ್ಣನ ಪಡೆಗಳು ಒಂದುಸುತ್ತಿನ ಬದ್ದರವಾಗಿ ನಿಂದೆದೆಯೆನುತ ಯೋಚಿಸಿ ಕಾಳಾಂದ್ರವೆಂದರಿಯದವರ ತಲೆಗಳ ಹಿಡಿದೆಹೆನೆಂದು[47] ಕೋಟಿಯ ತೆನಗಳಿಗೆ ಕೈಹಾಕುವಂತೆ ಹಾಕಿ ತೆಗೆದು ನೋಡುವಾಗ ಆ ತಿಮಿರದ ಕೋಟೆ ಕೈಗಳಿಗೆ ಶಿಲುಕದಿರ್ದುವಂ ನೋಡಿದೆನೋ ಎನುತ ಬಸವಳಿದು ಕಳವಳಗೊಂಡು ತ್ರಿಪುರದ ಕೇರಿ ಕೇರಿಗಳೊಳಗೆ ತಿಱನೆ ತಿರುಗಿ ಬರುತ್ತಿಂತು ನಲ್ವತ್ತೆಂಟು ದಿನ ಮದ್ಯ ಮಾಂಸಾ       ಱ

ಹಾರವಿಲ್ಲದಿರೆ ಬಿದ್ದೊರಲಿ ಚಪ್ಪನ್ನ ಕೋಟಿ ರಾಕ್ಷಸರುಗಳೆಲ್ಲಾ ಚೋಹಮಂ ಬಿಟ್ಟು ತೊಲಗುವ ಕಾಲ ಸಂದಣಿಸಿರ್ದುದಂ ಪರತತ್ವ ಗರ್ಭೀಕರಿಸಿಕೊಂಡಿಪ್ಪ ಬಸವಣ್ಣನು ದಕ್ಷಿಣ ಕೈಲಾಸದ ಮೇಲಿರ್ದ ಹಾಂಗೆ ಕಂಡಿರ್ದು ಸರ್ವಜೀವ ದಯಾಪರನಾಗಿ ತನ್ನ ಬಾಲದಂಡಮಂ ಪ್ರಕೃತಿ ಪಟ್ಟಣದ ಮಧ್ಯದಲ್ಲಿಂಗಿಳಿಯಬಿಡಲದು ಆ ಚಿದ್ಬ್ರಹ್ಮಾಂಡದ ಚಿತ್ತಿನ ಪ್ರಕಾಶಲತೆ ನಮ್ಮ ಬ್ರಹ್ಮಾಂಡದಂತೆರಪಿನ ಬ್ರಹ್ಮಾಂಡವುಂಟೆ ಎಂದಿತ್ತಲಿಳಿದು ನೋಡಬಂದಿತ್ತೋ ಎಂಬಂತೆ ಮತ್ತೆ ಪ್ರಕಾಶ ಬ್ರಹ್ಮಾಂಡದ ಪ್ರಕಾಶಲತೆ ನಮ್ಮ ಬ್ರಹ್ಮಾಂಡದಂಥ ಬ್ರಹ್ಮಾಂಡವುಂಟೇ ಎಂದಿತ್ತಲಿಳಿದು ನೋಡಬಂದಿತ್ತೊ ಎಂಬಂತೆ  ಮತ್ತೆ ಪ್ರಕಆಶ ಬ್ರಹ್ಮಾಂಡದ ಪ್ರಕಾಶಲತೆ ನಮ್ಮ ಬ್ರಹ್ಮಾಂಡದಂಥ ಬ್ರಹ್ಮಾಂಡವುಂಟೇ ಎಂದಿತ್ತಲಿಳಿದು ನೋಡಬಂದಿತ್ತೋ ಎಂಬಂತೆ ಮತ್ತೆ ಮತ್ತೆಯನುಭವ ಬ್ರಹ್ಮಾಂಡವನು ಭವಲತೆ ನಮ್ಮ ಬ್ರಹ್ಮಾಂಡದಂತಾ ಬ್ರಹ್ಮಾಂಡವುಂಟೇ ಎಂದಿತ್ತಲಿಂದ ನೋಡ ಬಂದಿಳ್ತೀ ಎಂಬಂತೆ ಪ್ರಸಾದರಸ ವಜ್ರದ ಕೈಲಾಸದ ತಳುಕುದಂಡಾವಳಿ ನಮ್ಮ ಮಹಾಮೇರುವಿನಂಥಾ ಮೇರುವುಂಟೇ ಎಂದಿತ್ತ ವಿಚಾರಿಸಿ ನೋಡಬಂದಿತ್ತೋ ಎಂಬಂತೆ ಮತ್ತೆ ಸ್ವಯಂ ಜ್ಯೋತಿ ರುದ್ರನ ಸ್ವಾನುಭವಸಮೇತವಾದ ಜಪಮಾಲೆ ಮರ್ತ್ಯರ ಮನದ ಮರವೆಯ ತೊಲಗಿಸಿ ಮುಕ್ತರಂ ಮಾಡಲೆಂದು ಬಂದಿತ್ತೊ ಎಂಬಂತೆ ಆಕಾಶಮಾರ್ಗದಿಂ ಬಿಜಯಂಗೈದಿರ್ದ ರಕ್ಕಸರೆಲ್ಲಾ ಕಂಡು ಈ ತಮಂಧದ ಕೋಟೆಯ ಪಟ್ಟಣದೊಳಗೆ ಸಿಕ್ಕಿಬಿದ್ದವರಂತೆ ಆಹಾರವಂ ತರುವುದಕ್ಕೆ ಹೊರವಡಬಾರದಲ್ಲಿ ಸಾವುದರಿಂದ ಬಾಲದಂಡದ ಬೆಂಬಲದತ್ತ ಹೊರವಂಟು ಏನಾದಡೂ ಉಂಡು ಸತ್ತು ಕಾಬೆವೆನುತ ನಿಶ್ಚೈಸಿ ಮಹಾವೃಷಭೇಶ್ವರನ ಬಾಲ ದಂಡವ ಅರಿವು ಮರವೆಯನುಳ್ಳ ಅರಿಮರುಳುಗಳು ಜಪಮಾಲೆಯ ಹಿಡಿವಂತೆ ಹಿಡಿಯಲದು ಪಂಚಮಹಾಪಾತಕರ ಹಿತವೆಂಬ ಗೋಮಿತ ಪರ್ವತದ ಕೆಳಗೆ ಒಪ್ಪಚ್ಚಿ ದೂರದತ ಮೆಲ್ಲನೆ ತಂದಿರಿಸಿಹೆನೆಂದು ಅತಿ ಸುಯಿಧಾನದಿಂ ತರುವಾಗ ಆ ಗೋಮಿತಿ ಗಿರಿಯ ಭಸಿತದ ಕಣಿಗಳಂ ಕಂಡು ದೈತ್ಯರುಗಳೆಲ್ಲರಂಜಿ ಗಾರುಡ ಮಂತ್ರ ಭೂತಿಯಂ ಕಂಡ ಭೂತಂಗಳು ಬಿಟ್ಟೋಡುವಂತೆ ಬಾಲದಂಡಮಂ ಬಿಟ್ಟು ಭೂಮಿಗೆ ಬಿದ್ದು ಸತ್ವಗುಂದಿರುವಲ್ಲಿ ಕೆಲ ದಾನವರು ತ್ವರಿತದಿಂ ದೆಸೆದೆಸೆಗಳಿಗೆ ಹೋಗಿ ಇಚ್ಛೆಗೆ ತಕ್ಕಂಥ ಆಹಾರಂಗಳ ದೊರಕಿಸಿ ತಂದು ಅಗ್ನಿಯಲ್ಲಿ ಸುಟ್ಟು ಸೊಪ್ಪು, ಸದೆ, ಕಾಯಿ, ಕಸುರು, ನಾರು, ಬೇರು , ಕಂದಮೂಲ, ಗಡ್ಡೆ ಗೆಣಸು ಇಂತಿವೆಲ್ಲವನು ಮೆದ್ದು ಸತ್ತು ಸಾಯದಿರುತ್ತಿರ್ದರು. ಇಂತು ಪುರಾತನಗಣಿತ ವಚನರಸಂಗಳಿಗೆ ಸಾಕ್ಷಿ.


[1] ಸನ್ನಹಿತ ನಾ (ಬ)

[2] ಸನ್ನಹಿತ ನಾ (ಬ)

[3] ಎನು ಅ (ಬ)

[4] ಎನು ಅ (ಬ)

[5] (ಬ)

[6] x (ಬ)

[7] ಒಮ್ಮನವ

[8] ಒಮ್ಮನವ

[9] + ಕಣ್ಣ (ಬ)

[10] ಸ್ಥೂಲ (ಬ)

[11] ಸ್ಥೂಲ (ಬ)

[12] x (ಬ)

[13] x (ಬ)

[14] ಕೊಲುವ (ಬ)

[15] x (ಬ)

[16] x (ಬ)

[17] ಬರಿ (ಬ)

[18] ಬರಿ (ಬ)

[19] ಮಾಯ (ಬ)

[20] ಮಾಯ (ಬ)

[21] ನಿಜವಾಗಿ (ಬ)

[22] ನಿಜವಾಗಿ (ಬ)

[23] ಮೊಸಳೆ (ಬ)

[24] ಮೊಸಳೆ (ಬ)

[25] ಟ್ಟಾ (ಬ)

[26] ಧರಿಯಂ (ಬ)

[27] ಧರಿಯಂ (ಬ)

[28] ಯಿ (ಬ)

[29] + ನೋಡಿ (ಬ)

[30] ದರಿವ ಪರತತ್ವ (ಬ)

[31] ದರಿವ ಪರತತ್ವ (ಬ)

[32] ಲ್ಲದ (ಬ)

[33] ಕಂಠ (ಬ)

[34] ಕಂಠ (ಬ)

[35] ತೊಂ (ಅ)

[36] + ಭಕ್ತ ಮಹೇಶ್ವರರು (ಬ)

[37] ಗೋಮಿತದಿ (ಬ)

[38] ಗೋಮಿತದಿ (ಬ)

[39] ಮುಟ್ಟದೆ (ಬ)

[40] ಮುಟ್ಟದೆ (ಬ)

[41] ತ್ತಿ (ಬ)

[42] ತ್ತಿ (ಬ)

[43] ಮಡಿಲೊ (ಬ)

[44] ಮಡಿಲೊ (ಬ)

[45] ಡದಚಿತ್ತನ ಪ್ರಕಾಶಕ್ಕೆ (ಬ)

[46] ಡದಚಿತ್ತನ ಪ್ರಕಾಶಕ್ಕೆ (ಬ)

[47] + ಆ ಬ್ರಹ್ಮಾಂಡವ ಪ್ರಕಾಶಲತೆ ನಮ್ಮ ಬ್ರಹ್ಮಕೋಟಿಯ (ಬ)