೨೮೩

ಸನಕ ಸನಂದಾದಿಗಳೆಲ್ಲರು, ಮುನಿಜನಂಗಳೆಲ್ಲರು
ಭಸ್ಮಾಂಗಿಗಳೆಲ್ಲರು, ಇವರೆಲ್ಲ ಸತ್ಯರೆಂಬುದು ಹುಸಿ
ನಿತ್ಯರೆಂಬುದು ಹುಸಿ, ಸತ್ತರೆಂಬುದು ದಿಟ ಗುಹೇಶ್ವರ.  ||೬೧||

ಇಷ್ಟರಿಂದಂ ಮೇಲೆ ಬಸವಣ್ಣನು ಪರಿಶಿವ ಸಹಿತ ಮರ್ತ್ಯಲೋಕದ ಮಹಾ ಮನೆ ಹಾಳಾಗಿ ಹೋಗಬಾರದೆಂದು ಮರ್ತ್ಯಲೋಕಕ್ಕೂ ಮಹಾ ಶಿವಲೋಕಕ್ಕೂ ತಾನೆ ನಿಚ್ಚಣಿಗೆಯಾಗಿ ಬಲಿಕೆಪರ್ವತದ ಮೇಲೆ ಮೂಲಪ್ರಣವ

[1]ಗಳ ನೂರೊಂದು ಸ್ಥಲಂಗಳ ಆರುವತ್ತುನಾಲ್ಕು ಶೀಲಂಗಳ ಇಂತಿವೆಲ್ಲವನು ಪ್ರತಿಷ್ಠೆಯಂ ಮಾಡಿ ತೋರುತ್ತ ಅನಂತ ಜಂಗಮಭಕ್ತರಿಗನಂತ ಮಠಂಗಳಮಾಡಿ ತೋರುತ್ತ, ಅನಂತ ಕೆರೆ ಅನಂತ ಕೂಪ ಅನಂತ ಕೊಣಂಗಳಂ ಮಾಡಿ ತೋ [2]ರುತ್ತ[3] [4]ಅನಂತ ಉಪ್ಪರಗುಡಿ ಸಿಂಧು ಪತಾಕಿಗಳಮಾಡಿ ತೋರುತ್ತ, ಅನಂತ ಅಶ್ವಪತಿ, ಗಜಪತಿ ನರಪತಿಗಳೆಂಬ ರಾಯರಾಯರುಗಳಿಗೆ ಅನಂತ ಪವಾಡಂಗಳ ಮಾಡಿ [5]ತೋರುತ್ತ[6] ಮೆರವುತ್ತ ಷಡುದೇವತೆಗಳ ನೆನಹಿಗಳವಡದ ಮಹಾ ಜಂಗಮ ಭಕ್ತಿಗಳ ಹಗಲಿರುಳು ಎನ್ನದೆ ಮಾಡಿ ತೋರಿ, ಜೀವಾತ್ಮರುಗಳಿಗೆ ಸವಿಗಲಿಸಿ. ಅವರಿಗೆ ವೀರಶೈವ ದೀಕ್ಷೆಯಂ ಕೊಟ್ಟು ಭಕ್ತ ಮಾಹೇಶ್ವರರ ಮಾಡಿ ಮಾಡಿ ಮಹಾ ಕರ್ಣನಿಚ್ಚಿಣಿಗೆಯ ಮೇಲೆ ಮಾಹಾಶಿವಲೋಕಕ್ಕೆ ಕಳುಪುತ್ತ ಚರಲಿಂಗಂಗಳ [7]ಪಾದ[8] ಪ್ರಕ್ಷಲ[9]ನವಾದ ಉದಕಂಗಳಲ್ಲಿ ಸಕಲ ಸೈದಾನಂಗಳ ಬೆಳವುತ್ತ ಇಂತೀ ಕ್ರಮಂಗಳೆಲ್ಲವನು ಒಂದು ಮ[10]ಹತ್ತ[11]ಪ್ಪ ಕಲ್ಲಮೇಲೆ ಶಾಸನವಾಗಿರುವಂತೆ ಹತ್ತಿಸಿದ [12]ಬಳಿಕ[13] ಗಣಂಗಳು ಶರಣಾಗತ ವಜ್ರಪಂಜರವೆಂಬ ಬಿರಿದನುಳ್ಳ ಪರಶಿವಲೋಕ ಮುಖ್ಯವಾದ ನವಕೈಲಾಸಂಗಳು, ಚತುರ್ದಶ ಲೋಕಂಗಳು ಪ್ರಖ್ಯಾತವಾಗಿ ಪರಮ ಮೂಲಜ್ಞಾನ ಭಕ್ತಿಭಂಡಾರಿ ಬಸವಣ್ಣನಿರುತ್ತಿಪ್ಪ ಸಮಯದಲ್ಲಿ ಸಾವಿರ ಮುಖವನುಳ್ಳ ಸ್ವಯಂಭುವಾದಿ ರುದ್ರನು ತನ್ನ ಶಕ್ತಿಯೂ ಅಖಂಡಿತರಾಗಿ ಅನಂತ ಗಣಂಗಳ ಸಮ್ಮೇಳನ – ದಿಂಬಲಿಕೆ ಪರ್ವತದ ಶರಣರುಗಳ ನೋಡಬೇಕೆಂದು ಇಚ್ಛೆದೋರಿ ಕರ್ಣನಿಚ್ಚಣಿಗೆಯಲ್ಲಿಳಿದು ಬಿಜಯಂಗೈದು ಆ ಕ್ಷಣವೆ ಬಸವಣ್ಣ ಕಂಡು [14]ಇದಿರೆದ್ದುನಡವ ಕಾಲದೊಳು ಈ ಅಸಮಗಣಂಗಳು ತಮ್ಲಮ ಮಹಾಲೀಲೆಯ ವಿನೋದಂಗಳಿಂದ ಬಸವಣ್ಣನ ಹಿಂದೆ ಗಮಿಸುತ್ತಿರ್ದಹಾಂಗೆಯೇ ನಾನಾ ಜೀವಜಾಲಂಗಳ ತಲೆ ಮುಖ ಕಣ್ಣು ಕಿವಿಗಳಂ ತಾಳಿ ಮತ್ತೆ ನಾನಾ ಮೃಗ ಪಶುಗಳ ತಲೆ ಮುಖ ಕಣ್ಣು ಕಿವಿಗಳಂ ತಾಳಿ ಮತ್ತೆ ನಾನಾ ವರ್ಣದ ಧ್ವನಿಗಳಂ ತಾಳಿ ಮತ್ತೆ ಸರ್ವಾಂಗದೊಳು ಮುಖಗಳು ತಲೆಗಳು ಕಣ್ಣು ಕಿವಿಗಳು ಮೂಗು ಬಾಯಿ ಭುಜಂಗಳು ತೋಳುಗಳಂ ತಾಳಿ ಮತ್ತೆ ನಾನಾವರ್ಣಧ್ವನಿಗಳಿಂದಂ ತಾಳಿ ಮತ್ತೆ ನಾನಾ ವರ್ಣದ ರೂಪು ಸ್ವರೂಪು ನಿರೂಪು ನವಿಕಟ ರೂಪು ವಿಕೃತ ರೂಪು ಚಿದ್ರೂಪು ವಿಶ್ವತೋ ರೂಪುಗಳಂ ತಾಳಿ ಮತ್ತೆ ಮೂಲಪ್ರಣಯಂಗಳು ನಾಮಂಗಳು ಮುಖ್ಯವಾದ ನಾನಾ ನಾಮಂಗಳಂ ತಾಳಿ [15]ಅಂತು[16] ಅನಂತ ರೂಪುಗಳನು ಅನಂತ ನಾಮಂಗಳನು ತಾಳಿದ ಅನಂತ ಕೋಟಿ ಗಣಂಗಳ ಸ್ವಯಂಜ್ಯೋತಿ ರುದ್ರನ ಶಕ್ತಿ ಕಂಡು ಚೋದ್ಯಂಬಟ್ಟು ಚಪ್ಪರ ಮಾಳಿಗೆಗೆ ಚಿತ್ತೈಸಿ ಅಸಮಗಣಂಗಳು ಸಹಿತ ಮೂರ್ತಿಗೊಂಡು ಸಂತೋಷಂಮಾಡಿ ಈ ಮಹಾ ಅಗಣಿತ ಗಣಂಗಳಿಗೆ ಬೋನ ಪದಾರ್ಥಂಗಳ ಮಾಳ್ಪೆನೆಂದು ಉದ್ಯೋಗಿಸಿ ವಿಭೂತಿ ವಿಳ್ಯಯಮಂ [17]ಸಂಧಿಸಿ[18] ಬಸವಣ್ಣನ ಪಂಚಪರುಷದ ಸೈದಾನಂಗಳಂ ತಂದು [19]ಅವರ[20] ಶಕ್ತಿಗಳಂ ಕೂಡಿಕೊಂಡು ಅನಂತ ಪರಿಯ ಕಜ್ಜಾಯಂಗಳು ರಸಂಗಳು ಬೋನ ಪದಾರ್ಥಂಗಳಂ ಪರ್ವತಂಗಳಂತೆ ಮಹಾರಾಶಿಗಳಾಗಿರಿಸಲು ಅಷ್ಟರಿಂದ ಮೇಲೆ ಭಕ್ತಿಯರು ಶಿವಗಣಂಗಳು ಪಂಕ್ತಿ ಪಂಕ್ತಿಯಾಗಿ ಮೂರ್ತಿಗೊಳಿಸಿ ಒಬ್ಬ ಜಂಗಮ ದೇವರ ಪಾದದಲ್ಲಿರ್ದ ತೀರ್ಥಮಂ ತೆಗೆದುಕೊಂಡಬಳಿಕ ವಿಭೂತಿಯಂ [21]ಪರುಷಮಂ ಮಾಡಿ ಮಾಡಿ ಆ ರಾಶಿಗಳ ಮೇಲೆ ತಳಿದು ಎಡೆಮಾಡಿದಡಾ ಜಂಗಮ ದೇವರುಗಳು ಪಾದೋದಕ ಪ್ರಸಾದ ಮುಂತಾಗಿ ತಮ್ಮ ಲಿಂಗಂಗಳಿಗೆ ಕೊಟ್ಟು ಸ್ವೀಕರಿಸಿದ ಉಳಿದ ಶೇಷವ ಶರಣೆಯರುಗಳು ತಮ್ಮ ಲಿಂಗಂಗಲಿಗೆ ಕೊಟ್ಟಾರೋಗಿಸಿ ದಣಿದ ಬಳಿಕ ಆ ರಾಶಿಗಳಲ್ಲಿ ಉಳಿದ ಕಜ್ಜಾಯ ಬೋನ ಪದಾರ್ಥಂಗಳು ಮೊದಲಂತೆ ಮಹಾರಾಶಿಗಳಾಗಿಪ್ಪುದಂ ಆ ಶಕ್ತಿಗಳು ಗಣಂಗಳೆಲ್ಲ ಕಂಡು ವಿಸ್ಮಯಗೊಂಡು ಮತ್ತೂ ಆರೋಗಿಸಿ ಮುಗಿಯಬೇಕೆಂಬ ಭಕ್ತಿ ಜ್ಞಾನ ವೈರಾಗ್ಯದಿಂ ಕಂಕಣಂ ಕಟ್ಟುವ ಸಮಯದಲ್ಲಿ ಮೊದಲು ಸಲಿಸಿದ ಗಣಂಗಳೊಳಗೊಬ್ಬ ಭಂಡಾರಿ ಗಣೇಶ್ವರನೆಂಬವನೊಂದೊಂದು ಭೋಜ್ಯವಂ ಮಾಡಿಯೆತ್ತಿ ಕಬಳೀಕರಿಸಿ ಬರುಗೈದ ಬಲಿಕ ಪಂಚವಿಕೃತನ ಪರಮ ಶಾಂತಿಯಂ ತೆಗದು ಶಕ್ತಿಯಂ ಮಾಡಿ ಶರಣರು ಕಲ್ಯಾಣಮಂ ಮಾಡಿದಡಾ ಪಂಚವಿಕೃತ ಆ ಚಪ್ಪರ ಮಾಳಿಗೆಯ ಮಧ್ಯದಲ್ಲಿ ಲಿಂಗ ಜಂಗಮ[22]ವಾದ[23] ಸ್ವರೂಪವಾಗಿ ಮೂರ್ತಿಗೊಂಡಾಕ್ಷಣ ಬಸವಣ್ಣ ಪ್ರಮಥರ ಮುಂದಿಟ್ಟು ತ್ರಿಪುರಾಂತಕ ಲಿಂಗವೆಂಬ ನಾಮಂ ಕೊಟ್ಟು ತದನಾಂತರದಲ್ಲಿ ಸ್ವಯಂ ರುದ್ರನು ತನ್ನಶಕ್ತಿ ಸಮೇತವಾಗಿ ಬರುವಷ್ಟಗಣಂಗಳಂ ಕೂಡಿಕೊಂಡು ಬಸವಾದಿ ಪ್ರಮಥರಿಗೆ ಬಿನ್ನವಿಸಿ ಬಲಿಕೆಪರ್ವತಕ್ಕೆ ಶ್ರೀ ಕಲ್ಯಾಣಪುರವೆಂಬ ಹೆಸರಂ ಕಲ್ಪಿಸಿ ಬಸವಾದಿ ಪ್ರಮಥ ಸಂಕುಳದಿ ಕಳುಹಿಸಿಕೊಂಡು ಮೊದಲಿರ್ದ ಠಾವಿಂಗೆ ಬಿಜಯಂ ಮಾಡಿ ಅಖಂಡಿತನಾಗಿ ವೀರಶೈವ ಭಕ್ತಿ ಸಾಮ್ರಾಜ್ಯ ಸಂಪತ್ತನಾಳುತ್ತಿರ್ದನು. ಅಷ್ಟರಿಂದಂ ಮೇಲೆ ಕಲ್ಯಾಣದಲ್ಲಿರ್ದ ವಿಕಟಗಣಂಗಳೆಲ್ಲರೂ [24]ಸಹಜಾ[25] ಕೃತಿಯಂ ತಾಳಿ ಮಹಾ ಜಂಗಮ ಭಕ್ತಿಯನು ಜಗತ್ಪ್ರಖ್ಯಾತವಾಗಿ ಮಾಡುವಲ್ಲಿ ತಮ್ಮ ಮಹಾವೀರಶೈವವನು ಬಯಸಿ ಬಂದವರಿಗೆ ಸಮಸ್ತ ದುರ್ಗುಣಂಗಳಂ ಬಿಡಿಸಿ ಮೂಲ ಮಂತ್ರವೆಂಬ ಓಂಕಾರನಾತ್ಮನಿಗೆ ವೇದಿಸಿಕೊಟ್ಟು ಮೂಲ ಪಂಚಾಕ್ಷರಿಗಳ ಜಪಂಗಳಿಗೆ ಸಂಬಂಧಿಸಿಕೊಟ್ಟು ಮೂಲ ಷಡಾಕ್ಷರಿಗಳೆಂಬ ಬಕಾರ ಸಕಾರ ವಕರ ಉಕಾರ ಮಕಾರಂಗಳ ಷಡಾಂಗಕ್ಕೆ ಸಂಬಂಧಿಸಿಕೊಟ್ಟು ಅವರಿಂದಾದ ಭಕ್ತಮಾಹೇಶ್ವರರುಗಳ ಹಿಂದಣ ಅನಂತಯುಗಂಗಳಿಗೆಯೂ[26] ಒಪ್ಪವಿಡುತ್ತ ಅಂತಪ್ಪ ವೀರಶೈವೋಪದೇಶದ ವರ್ಮವರಿಯದ ಜಡಶೈವ ಸಮಯದವರುಗಳ ಹೊದ್ದಿಯೂ ಹೊದ್ದದೆ, ಬೆರಸಿಯೂ ಬೆರಸದೆ ಜಲದೊಳಗಣ ಸೂರ್ಯನಂತಿರುತ್ತಿದ್ದರು. ಇಂತೆಂಬ ಪುರಾತನರಗಣಿತ ವಚನ ರಸಂಗಳಿಗೆ ಸಾಕ್ಷಿ.

೨೮೪

ಮರ್ತ್ಯಲೋಕದ ಮಹಾಮನೆ ಹಾಳಾಗಿ ಹೋಗಬಾರದೆಂದು
ಕರ್ತ ಕಳುಹಿದನಯ್ಯಾ ಒಬ್ಬ ಶಿವಶರಣನ.
ಆ ಶರಣ ಬಂದು ಕಲ್ಯಾಣವೆಂಬ ಶಿವಪುರವ ಕೈಲಾಸವಮಾಡಿ
ರುದ್ರಗಣ ಪ್ರಮಥಗಣಂಗಳೆಲ್ಲರ ಹಿಡಿತಂದು ಅಮರಗಣಂಗಳೆಂದು
ಹೆಸರಿಟ್ಟು ಕರದು,
ಅಗಣಿತಗಣಂಗಳೆಲ್ಲರ ಹಿಡಿತಂದು ಅಸಂಖ್ಯಾತರೆಂದು ಹೆಸರಿಟ್ಟು ಕರದು,
ಭಕ್ತಿಯ ಕುಳಸ್ಥಲವ ಶ್ರುತ ದೃಷ್ಟಾನುಮಾನಂಗಳಿಂದ ಕಾಣಿಸಿ
ಜಗವರಿಯಲು ಶಿವಾಚಾರದ ಧ್ವಜವನೆತ್ತಿಸಿ
ಅನಂತ ಪವಾಡಂಗಳಂ ಮೆರದು ತೋರಿಸಿ ಮರ್ತ್ಯಲೋಕವ
ಶಿವಲೋಕವ ಮಾಡಿ,
ಮರ್ತ್‌ಲೋಕಕ್ಕೂ [27]ಶಿವ[28]ಲೋಕಕ್ಕೂ ತಾನೇ ನಿಚ್ಚಣಿಗೆಯಾಗಿ ನಿಂದನು
ಆತನ ಮನೆಯೊಳಗಿಪ್ಪ ಶಿವಗಣಂಗಳ[29] ತಿಂಥಿಣಿಯಂ ಕಂಡು
ಎನ್ನ ಮನ ಉಬ್ಬಿಕೊಬ್ಬಿ ಓಲಾಡುತ್ತಿರ್ದೆನಯ್ಯಾ
ನಮ್ಮ [30]ಗುಹೇ[31]ಶ್ವರನ ಶರಣ ಸಂಗನ ಬಸವಣ್ಣನ ದಾಸೋಹದ
ಘನವನೇನೆಂದೆನಬಹುದು ನೋಡಾ ಸಿದ್ಧರಾಮಯ್ಯ.

೨೮೫

ಖಂಡ ಮಂಡಿಗೆ ಬೆಲ್ಲ ದ್ರಾಕ್ಷೆ ಸಕ್ಕರೆ
ಸರಿಭಾಗವಾದ ಹೊಸಹೆಸರ ಭಕ್ಷ್ಯ ಹನ್ನೆರಡು ಖಂಡುಗ.
ಸುಲಿಗಡಲೆಯ ಕಜ್ಞಾಯ ಹದಿನೆಂಟು ಖಂಡುಗ.
ಅಕಾಲಮಾವಿನಹಣ್ಣು ಇಪ್ಪತ್ತುನಾಲ್ಕು ಲಕ್ಷ.
ಕಡೆಯಿಲ್ಲದ ಕದಳೀ ಫಲ ಮೂವತ್ತುಮೂರು ಖಂಡುಗ.
ಕೇರಬೀಜ ಎಂಬತ್ತು ಖಂಡುಗ.
ತವರಾಜ ಹೆತ್ತುಪ್ಪ ಹಲಸಿನಹಣ್ಣು ಹಾಲು ಮೊಸರು ಲೆಕ್ಕವಿಲ್ಲ.
ಮನಮೀರಿ ಹಾಲಕೆನೆ ಹದಿನೆಂಟು ಖಂಡುಗ.
ಉತ್ಪತ್ತಿ ಚಿನಿಪಾಲಘಟ್ಟಿ ಕಟ್ಟಣೆಯಿಲ್ಲ.
ಮನವೊಲಿದ ಕಜ್ಜಾಯವನಾರೋಗಣೆಯ ಮಾಡಯ್ಯ
ಕೂಡಲಸಂಗಮದೇವ ಪ್ರಭುವೆ.       ||೬೩||

ಇಂತಪ್ಪ ಪ್ರಭು ಸಿದ್ಧರಾಮಯ್ಯದೇವರಿಗೆ ಕಲ್ಯಾಣಪುರದ ಮಹಾತ್ಮೆಯಂ ಹೇಳಿ ಕೊಂಡಾಡುತಿಪ್ಪ ಸಮಯ ಕಾಲೋಚಿತದಲ್ಲಿ ಆ ಪುರದ ದ್ವಾರವಟ್ಟದ ಮುಂದೆ ಶಾಸನದೊಳಗೆ ಕಲ್ಯಾಣಪುರದ ಮಹಾತ್ಮೆಯನು ಚೆನ್ನಬಸವರಾಜದೇವರು ವಿವರವಾಗಿ ವಚನ ನಿರೂಪಕವಾಗಿ ಬರದಿರಿಸಲು ಆ ಪ್ರಭುದೇವರು ಕಂಡು ಓದಿ ನೋಡಿದ ಪ್ರಸ್ತಾವದ ವಚನ.

ಮತ್ತಂ, ಸ್ವಸ್ತಿ ಸಮಸ್ತ ಪ್ರಶಸ್ತಿ ಸಹಿತ ಶ್ರೀ ಕಲ್ಯಾಣದ ಪುರದ ಮಹಾತ್ಮ್ಯೆಯೆಂತೆಂದಡೆ: ವಿಸ್ತರಿಸಿ ಹೇಳಿಹೆನು, ಎಲ್ಲಾ ಶಿವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ; ಮರ್ತ್ಯಲೋಕದ ಮಹಾಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ; ರುದ್ರಲೋಕದ ರುದ್ರಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ; ನಾಗಲೋಕದ ನಾಗಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ; ದೇವಲೋಕದ ದೇವಗಣಂಗಳು ಕೇಳಿ ಕೃತಾರ್ಥರಾಗಿರಯ್ಯಾ; ಹದಿನಾಲ್ಕು ಭುವನಕ್ಕೆ ಕಳಸವೆಂದೆನಿಸುವ ಮಹಾ ರುದ್ರಲೋಕವೇ[32] ಮರ್ತ್ಯಲೋಕಕ್ಕಿಳಿತಂದು ಕಲ್ಯಾಣಪುರವಾಗಿ ಪುಟ್ಟಿತ್ತು ನೋಡಿರಯ್ಯಾ. ಅಲ್ಲಿ ಸತ್ಯರು, ಸಾತ್ವಿಕರು, ನಿತ್ಯರು, ನಿಜೈಕ್ಯರು, ಮಹಾನುಭಾವಜ್ಞಾನಿಗಳು , ಪರಶಿವಯೋಗಿಗಳು, ಶಿವಾನುಭಾವ ಸಂಪನ್ನರು, ಶಿವಲಿಂಗ ಪ್ರೇಮಿಗಳು, ಶಿವಪ್ರಸಾದ ಸಂಪನ್ನರು, ಶಿವಾಚಾರ ಸಂಪನ್ನರು, ಶಿವಾಚಾರ ವೇದ್ಯರು, ಶಿವಾಗಮ ಸಾಧ್ಯರು, ಶಿವಸಮಯ ಪಕ್ಷರು ಇಂತಿವರಲ್ಲದೆ ಮತ್ತಾರೂ ಅಲ್ಲಿಲ್ಲ ನೋಡಿರಯ್ಯಾ. ಪಾಪಿಗಳು ಕೋಪಿಗಳು ಅಸತ್ಯರು ಅನಾಚಾರಿಗಳು ಹೋಗಬಾರದಾ ಕಲ್ಯಾಣವ. ಮೀರಿ ಹೊಕ್ಕೆಹೆನೆಂಬವರಿಗೆ ಬಾಳಬಾಯಿದಾರಿ ನೋಡಿರಯ್ಯಾ. ಆ ಕಲ್ಯಾಣವಗಮ್ಯ ಅಗೋಚರ ಅಪ್ರಮಾಣ ನೋಡಿರಯ್ಯಾ. ಆ ಮಹಾ ಕಲ್ಯಾಣ[33]ದ ವಿಸ್ತೀರ್ಣ ತಾನೆಂತೆಂದೊಡೆ: ಹನ್ನೆರಡು ಯೋಜನ ಪ್ರಮಾಣಿನಗಲದ ವಿಸ್ತೀರ್ಣದ ಪಟ್ಟಣಕ್ಕೆ ಮುನ್ನೂರರುವತ್ತು ಬಾಗಿಲವಾಡ. ಆ ಬಾಗಿಲಿಂಗೆ ನೂರೈವತ್ತೈದು ವಜ್ರಧಾರೆಯ ಕದಂಗಳು. ಇನ್ನೂರಿಪ್ಪತ್ತೈದು ಕಲುಗೆಲಸದ ದ್ವಾರವಟ್ಟಕ್ಕೆ ನಾನೂರೈವತ್ತು ಸುವರ್ಣದ ಕೆಲಸದ ಕದಂಗಳು. ಅಲ್ಲಿ ನೂರಹದಿನೈದು ಚೋರಗಂಡಿಗೆ ನೂರಾಹದಿನೈದು ಮೊಳೆಯ ಕದಂಗಳು. ಇಪ್ಪತ್ತು ಬಾಗಿಲು ಅವಾರಿಯಾಗಿಪ್ಪವವಕ್ಕೆ ಕದಂಗಳಿಲ್ಲ. ಆ ಪಟ್ಟಣಕ್ಕೆ ಬಳಸಿಬಂದ ಕೋಟೆ ನಾಲ್ವತ್ತೆಂಟು ಯೋಜನ ಪರಿಪ್ರಮಾಣು. ಮಹತ್ತರಮನೆ ಲಕ್ಷ. ಮಂಡಲೀಕರ ಮನೆ ಸಾವಿರಲಕ್ಷ. ರಾಯ ರಾಹುತರ ಮನೆಗಳೊಳಗೆ ಅಡಗಿದ ಮನೆಗಳಿಗೆ ಲೆಕ್ಕವಿಲ್ಲ. ಅಂಥಾ ಮನೆಗಳನೊಳಕೊಂಡು ದ್ವಾದಶ ಯೋಜನದ ವಿಸ್ತೀರ್ಣದ ಸೂರ್ಯವೀಥಿ ನೂರಿಪ್ಪತ್ತು. ದ್ವಾದಶ ಯೋಜನದ ಸೋಮವೀಥಿ ನೂರರುವತ್ತು. ಇದರಿಂದ ಮಿಗಿಲಾದ ಒಳಕೇರಿ ಹೊರಕೇರಿಗಳು ಕಡೆಯಿಲ್ಲ. ಆ ಪಟ್ಟಣದೊಳಗೆ ಲಕ್ಷದಮೇಲೆ ತೊಂಭತ್ತಾರುಸಾವಿರ ಶಿವಾಲಯ. ಆ ಶಿವಾಲಯಂಗಳಿಗೆ ಮುಖ್ಯವಾದ ಲಕ್ಷದಮೇಲೆ ತೊಂಭತ್ತಾರುಸಾವಿರ ಶಿವಾಲಯ. ಆ ಶಿವಾಲಯಂಗಳಿಗೆ ಮುಖ್ಯವಾದ ತ್ರಿಪುರಾಂತಕ ದೇವರ ಶಿವಾಲಯ. ಅಲ್ಲಿ ಮುನ್ನೂರರವತ್ತು ಪದ್ಮ ಪತ್ರಂಗಳುಳ್ಳ ತ್ರಿವಿಧ ಸರೋವರಂಗಳು. ಎರಡೆಂಬತ್ತು ಸಾವಿರದೇಳನೂರ ಇಪ್ಪತ್ತು ದಾಸೋಹದ ಮಠಂಗಳು. ಆ ದಾಸೋಹದ ಮಠಂಗಳಿಗೆ ಮುಖ್ಯವಾದ ಬಸವರಾಜದೇವರ ಮಠದ ವಿಸ್ತೀರ್ಣವೆಂತಿಂದೊಡೆ: ಯೋಜನವರೆಯ ಬಿನ್ನಾಣದ ಕಲುಗೆಲಸದಪೌಳಿ. ಆ ಪೌಳಿಗೆ ಅತಿಸೂಕ್ಷ್ಮದ ಕುಸುರಿಗೆಲಸದ ದ್ವಾವಟ್ಟವಯದು. ಅವಕ್ಕೆ ಪಂಚಾಕ್ಷರಿಯ ಶಾಸನೆ. ಮಿಸುನಿಯ ಕಂಬದುಪ್ಪರಿಗೆ. ರುದ್ರಾಕ್ಷೆಯ ಸೂಸಕ. ಇಂತಿವೆಲ್ಲವು ಆ ಬಾಗಿಲುವಾಡದಲ್ಲಿ ಒಪ್ಪುತ್ತಿಪ್ಪವಯ್ಯಾ. ನಂದಿಯ ಕಂಬಧ್ವಜ. ಉಪ್ಪರ ಗುಡಿಪತಾಕೆ ವ್ಯಾಸತೋಳು ಇಂತಿವು ಒಪ್ಪುತ್ತಿಪ್ಪವಯ್ಯಾ. ಆ ಮಧ್ಯದಲ್ಲಿರ್ದ ಬಸವರಾಜದೇವರ ಸಿಂಹಾಸನಕ್ಕೆ ಸಹಸ್ರ ಸುವರ್ಣದ ಕಂಬದ ಉಪ್ಪರಿಗೆ. ಆ ಸಿಂಹಾಸನ ಕೆತ್ತಿದ ಹೊನ್ನಕಳಸ ಸಾವಿರ. ಆ ಪೌಳಿಯೊಳಗೆ ನಾಲ್ಕು. ಪುರುಷಪ್ರಮಾಣಿನ ಕೊಳಂಗಳು ಹನ್ನೆರಡು. ಆ ಕೊಳಂಗಳುದಕವ ತಂದು ಗುರುಲಿಂಗ ಜಂಗಮದ ಪಾದಾರ್ಚನೆಯಮಾಡುವ ಹೊಕ್ಕರಣೆಯ ನಾಲ್ಕು ಪುರುಷಪ್ರಮಾಣದ ಘಾತ. ಅಲ್ಲಿ ತುಂಬಿದ ಪಾದೋದಕದ ತುಂಬನೆತ್ತಿ ಬೆಳವ [34]ರಾಜ[35] ಸಾಲೆಯಗದ್ದೆ ಹನ್ನೆರಡು ಖಂಡುಗ. ಆ ಯೋಜನವರೆಯನ ಬಿನ್ನಾಣದರಮನೆಯ ವಿಸ್ತೀರ್ಣದೊಳಗೆ ಲಿಂಗಾರ್ಚನೆಯಮಾಡುವ ಕಟ್ಟಣೆಯ ಜಂಗಮದೇವರು ಲಕ್ಷದಮೇಲೆ ತೊಂಭತ್ತಾರುಸಾವಿರ. ಇಂತಪ್ಪ ಜಂಗಮ ದೇವರುಗಳ ಪೂಜಿಸುವ ಬಸವರಾಜದೇವರ ಮಠ ಮುಖ್ಯವಾದ ಅಸಂಖ್ಯಾತರ ಮಠಂಗಳು ಆ ಕಲ್ಯಾಣದೊಳಗೆ ಎಷ್ಟುಂಟು ಎಂದಡೆ – ಹನ್ನೆರಡು ಸಾವಿರದ ಕಟ್ಟಣೆಯ ನೇಮ ಭಕ್ತರ ಮಠಂಗಳು. ಇಪ್ಪತ್ತೆಂಟು ಸಾವಿರ ಮಹಾ ನೇಮದ ಮಠಂಗಳು. ಹತ್ತುಸಾವಿರ ನಿತ್ಯನೇಮದ ಮಠಂಗಳು. ಹದಿನೈದು ಸಾವಿರ ಚಿಲುಮೆಯ ಅಗ್ಘವಣಿಯ ವ್ರತಸ್ಥರ ಮಠಂಗಳು. ಐದುಸಾವಿರ ವ್ರತನೇಮಂಗಳ ಕಟ್ಟಣೆಯ ಮಠಂಗಳು ಹನ್ನೆರಡು ಸಾವಿರ ಅಚ್ಚ ಪ್ರಸಾದಿಗಳ ಮಠಂಗಳು ತೊಂಬತ್ತು ಸಾವಿರ. ಅರುವತ್ತು ನಾಲ್ಕು ಶೀಲಸಂಪನ್ನರ ಮಠಂಗಳು ಒಂದು ಸಾವಿರ. ನಿತ್ಯ ಸದಾಕಾಲದಲ್ಲಿಯೂ ಜಂಗಮಕ್ಕಾರೋಗಣೆಯ ಮಾಡಿಸುವ ದಾಸೋಹಿಗಳ ಮಠಂಗಳು ಮೂವತ್ತೆರಡು ಸಾವಿರ. ನಿತ್ಯ ಐನೂರ ಜಂಗಮಕ್ಕೆ ಒಲಿದು ದಾಸೋಹವಮಾಡುವ ಸತ್ಯಸದಾಚಾರಿಗಳ ಮಠಂಗಳು ಐವತ್ತೆಂಟುಸಾವಿರ. ನಿತ್ಯ ಸಾವಿರದಾರುನೂರು ಜಂಗಮಕ್ಕೆ ಒಲಿದು ದಾಸೋಹ ಮಾಡುವ ದಾಸೋಹಿಗಳ ಮಠಂಗಳು ಹನ್ನೊಂದು ಸಾವಿರ. ನಿತ್ಯನಿತ್ಯವಾರಿಯಾಗಿ ಮಾಡುವ ಮಾಟಕೂಟದ ಸದ್ಭಕ್ತರ ಮಠಂಗಳು ಒಂದುಲಕ್ಷ. ಜಂಗಮಸಹಿತ ಸಮಯಾಚಾರದಿಂದ ಲಿಂಗಾರ್ಚನೆಯ ಮಾಡುವ ಜಂಗಮ ಭಕ್ತರ ಮಠಂಗಳು ಎರಡುಸಾವಿರದೇಳನೂರೆಪ್ಪತ್ತು. ಅಂತು ಎರಡು ಲಕ್ಷವು ತೊಂಭತ್ತಾರು ಸಾವಿರದೇಳುನೂರೆಪ್ಪತ್ತು. ಇಂತೀ ಅಸಂಖ್ಯಾತರಿಗೆ ಮುಖ್ಯವಾದ ಮಹಾರುದ್ರಲೋಕದಿಂದಿಳಿತಂದ ಪ್ರಮಥಗಣಂಗಳ ಮಠಂಗಳು ಏಳನೂರೆಪ್ಪತ್ತು. ಇಂತೀ ಮಹಾಪ್ರಮಥರಿಗೆ ಪುರಾತನರಿಗೆ ಅಸಂಖ್ಯಾತ ಮಹಾಗಣಂಗಳಿಗೆ ಪ್ರಮಥ ನಾಯಕನಾದ ಏಕಮುಖ ದಶಮುಖ ಶತಮುಖ ಸಹಸ್ರ ಮುಖ ಲಕ್ಷಮುಖ ಕೋಟಿಮುಖ ಅನಂತಕೋಟಿಮುಖವಾಗಿ ಭಕ್ತರೊಡೆಯರಿಗೆ ಒಡನಾಡಿಯಾಗಿಪ್ಪಾತನು ಸಂಗನಬಸವಣ್ಣ. ಜಗದಾರಾಧ್ಯ ಬಸವಣ್ಣ, ಪ್ರಮಥ ನಾಯಕ ಬಸವಣ್ಣ, ಶರಣ ಸನ್ನಹಿತ ಬಸವಣ್ಣ, ಸತ್ಯ ಸಾತ್ವಿಕ ಬಸವಣ್ಣ, ನಿತ್ಯನಿಜೈಕ್ಯ ಬಸವಣ್ಣ, ಷಡಸ್ಥಲ ಸಂಪನ್ನ ಬಸವಣ್ಣ, ಸರ್ವಾಚಾರ ಸಂಪನ್ನ ಬಸವಣ್ಣ, ಸರ್ವಾಂಗ ಲಿಂಗಿ ಬಸವಣ್ಣ, ಸುಜ್ಞಾನ ಭರಿತ ಬಸವಣ್ಣ, ನಿತ್ಯಪ್ರಸಾದಿ ಬಸವಣ್ಣ, ಸಚ್ಚಿದಾನಂದ ಮೂರ್ತಿ ಬಸವಣ್ಣ, ಸದ್ಯೋನ್ಮುಕ್ತ ರೂಪ ಬಸವಣ್ಣ, ಅಖಂಡಿತ ಪರಿಪೂರ್ಣ ಬಸವಣ್ಣ, ಅಕಾಯ ಚರಿತ್ರ ಬಸವಣ್ಣ, ಅಸಾಧ್ಯ ಸಾಧಕ ಬಸವಣ್ಣ, ಅಭೇದ್ಯ ಭೇದಕ ಬಸವಣ್ಣ, ಅನಾಮಯ ಮೂರ್ತಿ ಬಸವಣ್ಣ, ಮಹಾಘನವ ಮನವಮಾಡಿದಾತ ಬಸವಣ್ಣ, ಮಹಾ ರುದ್ರಲೋಕವ ಮರ್ತ್ಯ ಲೋಕಕ್ಕೆ ತಂದಾತ ಬಸವಣ್ಣ, ಶಿವಾಚಾರದ ಘನವ ಮೆರೆದಾತ ಬಸವಣ್ಣ, ಇಂತಪ್ಪ ಬಸವಣ್ಣನ ಭಕ್ತಿಯನು ಒರೆದೊರೆದು ನೋಡಿ ಪ್ರಜ್ವಲಿತವ ಮಾಡುವ ಅಶ್ವಪತಿ, ಗಜಪತಿ, ನರಪತಿಗಳೆಂಬ ರಾಜಾದಿರಾಜರುಗಳು ಆ ಬಸವಣ್ಣನ ಶ್ರೀ ಕಲ್ಯಾಣ ಪಟ್ಟಣದೊಳಗೆ ಶಿವಸುಖ ಸಂಕಥಾವಿನೋದದಿಂ ರಾಜ್ಯಂಗೆಯುತ್ತಿರಲು, ಆ ಕಲ್ಯಾಣನಾಮವಿಡಿದು ವಿವಾಹಕ್ಕೆ ಕಲ್ಯಾಣವೆಂಬ ನಾಮವಾಯಿತ್ತು. ಲೋಕದೊಳಗೆ ಕಲ್ಯಾಣವೇ ಕೈಲಾಸವಾಯಿತ್ತು. ಇಂತಪ್ಪ ಕಲ್ಯಾಣಮಂ ದರುಶನ ಮಾಡಿದವರಿಗೆ ಭವಂ ನಾಸ್ತಿ. ಇಂತಪ್ಪ ಕಲ್ಯಾಣಮಂ ದರುಶನ ಮಾಡಿದವರಿಗೆ ಭವಂ ನಾಸ್ತಿ. ಇಂತಪ್ಪ ಕಲ್ಯಾಣವ ನೆನದವರಿಗೆ ಪಾಪಕ್ಷಯವಹುದು. ಇಂತಪ್ಪ ಕಲ್ಯಾಣದ ಮಹಾತ್ಮೆಯಂ ಕೇಳಿದವರಿಗೆ ಕರ್ಮಕ್ಷಯವಹುದು; ಮೋಕ್ಷ ಸಾಧ್ಯವಹುದು. ಇದು ಕಾರಣ ಕೂಡಲ [36]ಚೆನ್ನ[37]ಸಂಗಮದೇವ ನಿಮ್ಮ ಬಸವಣ್ಣವಿರ್ದ ಠಾವೇ ಮಹಾ ಕೈಲಾಸವೆನಿಸಿಕೊಂಬುದು. ಇಂತಪ್ಪ ಮಹಾದಿವ್ಯ ಶಾಸನಮಂ ಬರದು ಪಠಿಸಿದಕಾರಣ ಎನ್ನ ಭವಂನಾಸ್ತಿಯಾಯಿತ್ತು ಅಯ್ಯಾ.

೨೮೬

ದುಃಸ್ವಪ್ನವ ಕಾಣದಿರಿ.
ದುರ್ವಿಕಾರದಲ್ಲಿ ಕೊಡದಿರಿ.
ಮನೋವಿಕಾರದಲ್ಲಿ ಹರಿದಾಡದಿರಿ.
ಪಂಚಾಕ್ಷರಿಯ ಜಪಿಸಿ,
ಷಡಕ್ಷರಿಯ ಸಂಬಂಧಿಸಿಕೊಳ್ಳಿ.
ಮೂಲ ಮಂತ್ರವನಾತ್ಮಂಗೆ ವೇಧಿಸಿಕೊಳ್ಳಿ.
ಮರೆಯದಿರಿ ಗುರುವಾಜ್ಞೆಯ,
ತೊರೆಯದಿರಿ ಶಿವಪೂಜೆಯ.
ಅರಿದು ಮರೆಯದಿರಿ ಚರಸೇವೆಯ.
ಇಂತೀ ಗುಣವ ನೆರೆನಂಬಿ,
ಶುದ್ಧ ಸಿದ್ಧ ಪ್ರಸಿದ್ಧ ಪ್ರಸನ್ನ ಗುರು
ಗುಹೇಶ್ವರ ಲಿಂಗವ ಕೂಡಬಲ್ಲಡೆ.     ||೬೪||

೨೮೭

ಬಸವ ಜೋ ಜೋ ಕಂದ
ಬಸವಯ್ಯ ಜೋ ಜೋ ಕರುಣಿಸು
ಬಸವಣ್ಣ ಜೋ ಜೋ ಸಂಗನ
ಬಸವ ಲಿಂಗವೆ ಜೋ ಜೋ.           ||ಪ||

ಮೂನ್ನೂರರವತ್ತು ಸತ್ತಪ್ರಾಣವನೆತ್ತಿ
ಮೆರೆದಿರಿ ಮೂವತ್ತಾರು ಕೊಂಡೆಯರ
ತೋರಿದಿರಿ ಎಂಬತ್ತೆಂಟು ಪವಾಡವನು
ಕಾರುಣ್ಯನಿಧಿಯ ಸಂಗನಬಸವ ಲಿಂಗವೆ.       ೧

ಪುರವನುರುಪುವಲ್ಲಿ ಉಪಕಂದನಾದೈ ತಂದೆ
ನೆರೆ ಬ್ರಹ್ಮ ವಿಷ್ಣು ಕಂಕಣವಾದರು
ಶಿರವನರಿವಲ್ಲಿ ಕಾಲರುದ್ರನಾದೈ ತಂದೆ
ಪರಮ ಭಕ್ತರ ಸಲಹುತ್ತಿಹ ಲಿಂಗವೆ.  ೨

ನೀಲಲೋಹಿತನಾಗಿ ಅಂಧಕಾಸುರನ ಕೊಂದೆ
ಕಾಲಕೂಟ ವಿಷವ ಧರಿಸಿದಿರಿ
ಕಾಲ ಹರಣದಲ್ಲಿ ವಿಷಕಂಠನಾದೈ ತಂದೆ
ಶೂಲಿ ರುದ್ರಗೆ ಸಂಗನಬಸವ ಲಿಂಗವೆ.          ೩

ಕಲ್ಯಾಣದ ಕಡೆಯ ಕಾಣಲರಿದು ಆರಿಗೆಯೂ
ಕಲ್ಯಾಣವೆಂಬುದನು ತೋರಿದಿರಿ
ಎಲ್ಲಾ ಪುರಾತನರ ತೋರಿ ಮೆರೆದ ಧರ್ಮ
ಸಲ್ಲಲಿತ ಸಂಗನಬಸವ ಲಿಂಗವೆ.     ೪

ಬಸವಗೂ ಎನಗೂ ಭಾವ ಭೇದಗಳಿಲ್ಲ
ಬಸವಗೂ ಎನಗೂ ಕೂಟ
ಬಸವಣ್ಣಪ್ರಿಯ ಕೂಡಲ ಚೆನ್ನಸಂಗನಲ್ಲಿ
ಬಸವನು ಬೆಸಲಾದ ಬಾಣತಿಯಾನು.           ೫

೨೮೮

ಶಿಲೆಯೊಳಗಣ ಪಾವಕನಂತೆ
ಉದಕದೊಳಗಣ ಪ್ರತಿಬಿಂಬದಂತೆ
ಬೀಜದೊಳಗಣ ವೃಕ್ಷದಂತೆ
ಶಬ್ದದೊಳಗಣ ನಿಶ್ಯಬ್ದದಂತೆ
ಗುಹೇಶ್ವರ ನಿಮ್ಮ, ಶರಣ ಸಂಬಂಧ. ||೬೬||

೨೮೯

ಮಂಗಳ ಮಂಗಳ ಶ್ರೀ ಗುಹೇಶ್ವರನ
ಶರಣಲಿಂಗೈಕ್ಯಂಗೆ ಮಂಗಳಂ         ||ಪ||

ಜಗವೆಲ್ಲವನೂರಮಾಡಿ ಊರೆಲ್ಲವ ಮನೆಯ ಮಾಡಿ
ಹೂಗದೆಸೆಯಿಲ್ಲದ ಸುಳುಹು ನೋಡಾ
ಸುಳುಹಿನ ಭೇದನರಿಯದ ಕಾರಣ ದೇವಲೋಕ
ಮರ್ತ್ಯಲೋಕವೆಲ್ಲ ಭ್ರಮಗೊಂಡಿತ್ತಲ್ಲಾ.         ೧

ಎಂಬತ್ತುನಾಲ್ಕು ಲಕ್ಷ ಯೋನಿ ಮುಖ ಜೀವಿಗಳಿಗೆ
ಎಂಬತ್ತುನಾಲ್ಕು ಲಕ್ಷಾರಾಧನೆ
ಒಂದೊಂದಾರಾಧನೆಯನೊಂದೊಂದರಿಯದೆ
ಗೊಂದಣ ಕೊಂಡು ಲಯವಾದುದಲ್ಲಾ.          ೨

ಭಕುತಿ ಯುಕುತಿಯನಱೆಯ ಷೋಡಷೋಪಚಾರವರಿಯ
ಭಾವ ಸಂಕಲ್ಪ ವಿಕಲ್ಪವನಱೆಯ
ನಾಮ ಸೀಮೆಗಳೆಲ್ಲವ ನೇಮಿಸಿ ಕಳೆದಂಗೆ
ಆವಲೋಕ ಕಲ್ಪಿತವಾತಂಗೆ.           ೩

ಕುಲವಳಿದು ಛಲವಳಿದು ಬಲುಹಳಿದು ನಿಲಲು
ಸೂತ್ರದ ಜಂತ್ರದವಳಿಯೊಲು
ಫಲಸಿದ್ಧಿಯೆನಿಸಿ, ನಿಫಲ ಸಿದ್ಧಿಯನೆ ಬಿಟ್ಟು
ಭಕ್ತ್ಯಂಗನೆಯ ಮರ್ತ್ಯಕ್ಕೆ ತಂದಂಗೆ   ೪

ಮಧ್ಯಸ್ಥಾನದ ಲೋಕಕ್ಕೆ ಹೋಗಿ ಮಱುವಾಳ –
ನಱೆಯದ ಪರಿಯ ನೋಡಿರೆ !
ತನುರುಚಿಯನೆ ಮಱೆದು ಘನರುಚಿಯನಱೆದನ
ತನ್ನಂತೆ ಮಾಡಿದ ಗುಹೇಶ್ವರ ಲಿಂಗ.            ೫

ವೃಷಭ ಪಿಂಡಜ್ಞಾನಸ್ಥಲ ಸಮಾಪ್ತ ಮಂಗಳಮಹಾ ಶ್ರೀ ಶ್ರೀ ಶ್ರೀ. 

 – – – –
(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)


[1] ರಿ (ಬ)

[2] ರಿ (ಬ)

[3] ರಿ (ಬ)

[4] + ಉಂಟೆನಿಸಿ ಮೆರವುತ್ತಾ (ಬ)

[5] ಉಂಟೆನಿಸಿ (ಬ)

[6] ಉಂಟೆನಿಸಿ (ಬ)

[7] ಪ್ರಸಾದ (ಬ)

[8] ಪ್ರಸಾದ (ಬ)

[9] x (ಬ)

[10] ಹಾಂತ (ಬ)

[11] ಹಾಂತ (ಬ)

[12] x (ಬ)

[13] x (ಬ)

[14] ಡಾಗಲೆ (ಬ)

[15] ಇಂತು (ಬ)

[16] ಇಂತು (ಬ)

[17] ಸಂಬಂಧಿಸಿ (ಬ)

[18] ಸಂಬಂಧಿಸಿ (ಬ)

[19] ಆಪರ.

[20] ಆಪರ.

[21] + ಹಸ್ತ (ಬ)

[22] x (ಬ)

[23] x (ಬ)

[24] ಸಹಸ್ರಾ (ಬ)

[25] ಸಹಸ್ರಾ (ಬ)

[26] + ಮುಂದಣ ಅನಂತ ಯುಗಂಗಳಿಗೆಯೂ (ಬ)

[27] ಮಹಾ (ಬ)

[28] ಮಹಾ (ಬ)

[29] + ಘನ (ಬ)

[30] ನಾಗೇ (ಬ)

[31] ನಾಗೇ (ಬ)

[32] ವನೆ (ಬ)

[33] + ಪಟ್ಟಣ (ಬ)

[34] ಜಾನ (ಬ)

[35] ಜಾನ (ಬ)

[36] x (ಬ)

[37] x (ಬ)