ಸಾರಾಂಶ

ಪ್ರಾಣಿ ಸಂಪತ್ತು ಬುಡಕಟ್ಟು ಸಮುದಾಯಗಳ, ಆರ್ಥಿಕಾಭಿವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರಾಣಿಗಳ ಆರೋಗ್ಯವನ್ನು ಕಾಪಾಡುವುದರಲ್ಲಿ ಸ್ಥಳೀಯವಾಗಿ ಔಷಧೀಯ ಸಸ್ಯಗಳು ಮಹತ್ತರವಾದ ಪಾತ್ರವನ್ನು ವಹಿಸುತ್ತವೆ. ಬುಡಕಟ್ಟು ಜನಾಂಗಗಳು ತಾವು ಸಾಕುವ ಪ್ರಾಣಿಗಳ ಆರೋಗ್ಯವನ್ನು ಕಾಪಾಡುವುದಕ್ಕೆ ಸಂಪೂರ್ಣವಾಗಿ ಔಷಧಿ ಸಸ್ಯಗಳನ್ನೇ ಅವಲಂಬಿಸಿರುತ್ತಾರೆ. ಪ್ರಸ್ತುತ ಈ ಲೇಖನವು ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಕುಡಿಯಾ ಬುಡಕಟ್ಟು ಜನಾಂಗವು ಪ್ರಾಣಿಗಳ ಆರೋಗ್ಯವನ್ನು ಕಾಪಾಡುವುದಕ್ಕೆ ಸಾಮಾನ್ಯವಾಗಿ ಬಳಸುವ ಔಷಧಿ ಸಸ್ಯಗಳ ಬಗ್ಗೆ ಬೆಳಕು ಚೆಲ್ಲುತ್ತದೆ.

ಗುರಿ ಮತ್ತು ಉದ್ದೇಶಗಳು

ಔಷಧಿ ಸಸ್ಯಗಳು ಇನ್ನೂ ಬಳಕೆಯಲ್ಲಿ ಇದೆ ಎನ್ನುವುದಾದರೆ, ಅದಕ್ಕೆ ಬುಡಕಟ್ಟು ಜನಾಂಗಗಳೇ ಮುಖ್ಯ ಕಾರಣ. ಮಾನವನ ಆರೋಗ್ಯ ಕಾಪಾಡುವುದರ ಜೊತೆಗೆ ಪ್ರಾಣಿಗಳ ಆರೋಗ್ಯವನ್ನು ಸಹ ಕಾಪಾಡುವುದರಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತವೆ. ಪ್ರಸ್ತುತ ಈ ಲೇಖನವು ಕುಡಿಯಾ ಜನಾಂಗವು ಪ್ರಾಣಿಗಳ ಆರೈಕೆಯಲ್ಲಿ ಬಳಸುವ ಔಷಧಿ ಸಸ್ಯಗಳನ್ನು ಪಟ್ಟಿ ಮಾಡುವುದರ ಜೊತೆಗೆ, ಔಷಧಿ ಸಸ್ಯಗಳ ಆರ್ಥಿಕ ಮಹತ್ವದ ಬಗ್ಗೆ ಮಾಹಿತಿಯನ್ನು ಒದಗಿಸುತ್ತದೆ.

ಕರ್ನಾಟಕದ ಸಸ್ಯ ಸಂಪತ್ತು

ಕರ್ನಾಟಕವು ವಿವಿಧ ರೀತಿಯ ಸಸ್ಯ ಸಂಪತ್ತಿಗೆ ಹೆಸರುವಾಸಿಯಾಗಿರುವ ನಾಡು. ಪುರಾತನ ಗ್ರಂಥಗಳಲ್ಲಿ ಕೂಡ ರಾಜ್ಯದ ಔಷಧಿ ಸಸ್ಯಗಳ ಬಗ್ಗೆ ಉಲ್ಲೇಖವಿದೆ. ಈ ಔಷಧಿ ಸಸ್ಯಗಳು ಪ್ರಾಣಿಗಳ ಆರೋಗ್ಯವನ್ನು ಕಾಪಾಡುವುದರ ಜೊತೆಗೆ, ಯಾವುದೇ ಸಮುದಾಯದ ಆರ್ಥಿಕ ಪ್ರಗತಿಗೂ ಕಾರಣವಾಗುತ್ತದೆ.

ದೇಶೀಯ ಪಶುವೈದ್ಯಕೀಯ ಜ್ಞಾನ

ವೈಜ್ಞಾನಿಕ ಲೋಕದ ಅರಿವಿಗೆ ಬಾರದ ಹಲವಾರು ಔಷಧಿ ಸಸ್ಯಗಳನ್ನು ಬುಡಕಟ್ಟು ಸಮುದಾಯಗಳು ಮಾತ್ರ ಗುರುತಿಸಬಲ್ಲರು. ಇಂತಹ ಜ್ಞಾನವನ್ನು ದಾಖಲಾತಿ ಮಾಡುವುದಕ್ಕೆ ಸರ್ಕಾರವು ಇತ್ತೀಚೆಗೆ ಹಲವಾರು ಕ್ರಮಗಳನ್ನು ಕೈಗೊಂಡಿದೆ. ಇದಲ್ಲದೆ ವಿಜ್ಞಾನಿಗಳು ಪ್ರಾಣಿಗಳ ಆರೋಗ್ಯವನ್ನು ಕಾಪಾಡುವುದರಲ್ಲಿ ವಿವಿಧ ಬುಡಕಟ್ಟು ಸಮುದಾಯಗಳು ಬಳಸುವ ಬಹಳ ಅಪರೂಪದ ಔಷಧೀಯ ಸಸ್ಯಗಳನ್ನು ಅಂತರರಾಷ್ಟ್ರೀಯ ಮಾರುಕಟ್ಟೆಗೆ ಒದಗಿಸುವುದರ ಮೂಲಕ ಬುಡಕಟ್ಟು ಸಮುದಾಯಗಳಿಗೆ ಉದ್ಯೋಗವನ್ನು ಒದಗಿಸಲು ಸಾಧ್ಯವೆಂದು ತೋರಿಸಿ ಕೊಟ್ಟಿದ್ದಾರೆ.

ಕುಡಿಯಾ ಬುಡಕಟ್ಟು ಜನಾಂಗ

ಕುಡಿಯಾ ಬುಡಕಟ್ಟು ಸಮುದಾಯವು ಹೆಚ್ಚಾಗಿ ಮಂಗಳೂರು ಮತ್ತು ಕೊಡಗು ಜಿಲ್ಲೆಯಲ್ಲಿ ಕಂಡುಬರುತ್ತದೆ. ಸದ್ಯದ ಇವರ ಒಟ್ಟು ಜನಸಂಖ್ಯೆ ೨೪,೦೦೦. ಇವರಲ್ಲಿ ಸಸ್ಯಹಾರದ ಬಳಕೆ ಅತೀ ಕಡಿಮೆ. ವ್ಯವಸಾಯ ಮತ್ತು ಸಾರಾಯಿ ತಯಾರಿಕೆ ಇವರ ಮುಖ್ಯ ಕಸುಬು. ಪುರುಷಪ್ರಧಾನ ವ್ಯವಸ್ಥೆ ಜಾರಿಯಲ್ಲಿದೆ. ‘ಹಾಡಿ’ಯ ಮುಖ್ಯಸ್ಥನನ್ನು ‘ಕುರುವ’ ಎಂದು ಕರೆಯುತ್ತಾರೆ. ವಿವಾಹ ವಿಚ್ಛೇದನ ಸಾಮಾನ್ಯವಾಗಿದೆ.

ಕೊಡಗು ಜಿಲ್ಲೆಯು ಕರ್ನಾಟಕದ ದಕ್ಷಿಣ ಭಾಗದಲ್ಲಿದೆ. ಇದು ಬೆಟ್ಟಗುಡ್ಡ ಮತ್ತು ಸದಾ ಮಳೆ ಬರುವ ಪ್ರದೇಶವಾಗಿದೆ. ಸುಮಾರು ೮ ವಿವಿಧ ರೀತಿಯ ಬುಡಕಟ್ಟು ಸಮುದಾಯಗಳು ಈ ಪ್ರದೇಶದಲ್ಲಿ ಕಂಡುಬರುತ್ತವೆ. ಹೆಚ್ಚು ಕಡಿಮೆ ಸಂಪೂರ್ಣ ಜಿಲ್ಲೆಯು ನಿತ್ಯ ಹಸಿರು ಕಾಡಿನಿಂದ ತುಂಬಿದೆ. ಜಿಲ್ಲೆಯಲ್ಲಿ ಭತ್ತ, ರಾಗಿ, ಕರಿಮೆಣಸು, ಶುಂಠಿಯನ್ನು ಸಾಮಾನ್ಯವಾಗಿ ಬೆಳೆಯುತ್ತಾರೆ.

ಔಷಧಿ ಸಸ್ಯಗಳ ಸಮೀಕ್ಷೆ

ಸಮೀಕ್ಷೆಗೆ ಸಂಬಂಧಿಸಿದಂತೆ ಕ್ಷೇತ್ರಕಾರ್ಯವನ್ನು ಕೊಡಗು ಜಿಲ್ಲೆಯ ಕುಡಿಯಾ ಬುಡಕಟ್ಟು ಹಾಡಿಗಳಲ್ಲಿ ಕೈಗೊಳ್ಳಲಾಗಿತ್ತು. ಒಟ್ಟು ೩೦ ಕುಟುಂಬಗಳು ಮತ್ತು ನೂರಕ್ಕಿಂತ ಹೆಚ್ಚು ಸಮುದಾಯದ ಸದಸ್ಯರುಗಳನ್ನು ಸಂದರ್ಶಿಸಲಾಯಿತು. ಕ್ಷೇತ್ರಕಾರ್ಯದ ಸಮಯದಲ್ಲಿ ಅವಲೋಕನ ವಿಧಾನವನ್ನು ಬಳಸಲಾಯಿತು. ಸಂದರ್ಶಿಸಿದವರಲ್ಲಿ ೧೭ ಜನ ಸ್ಥಳೀಯ ವೈದ್ಯರು ಇದ್ದರು.

ದೈನಂದಿನ ಬಳಕೆ

ಕುಡಿಯಾ ಬುಡಕಟ್ಟು ಸಮುದಾಯವು ಹಸು, ಕುರಿ, ಆಡು, ಎಮ್ಮೆ, ಹಂದಿಗಳನ್ನು ಸಾಕುತ್ತಾರೆ. ಸಾಮಾನ್ಯವಾಗಿ ಇಂತಹ ಪ್ರಾಣಿಗಳಲ್ಲಿ ಮೂಳೆ ಮುರಿಯುವಿಕೆ, ಹೊಟ್ಟೆಗೆ ಸಂಬಂಧಿಸಿದ ಕಾಯಿಲೆಗಳು ಮತ್ತು ಮೂರ್ಛೆ ರೋಗಗಳು ಕಂಡುಬರುತ್ತವೆ. ಈ ಎಲ್ಲ ಕಾಯಿಲೆಗಳನ್ನು ಗುಣಪಡಿಸಲು ಈ ಸಮುದಾಯವು ಔಷಧಿ ಸಸ್ಯಗಳ ಮೇಲೆ ಅವಲಂಬಿತರಾಗಿದ್ದಾರೆ.

ಔಷಧಿ ಸಸ್ಯಗಳ ಪಟ್ಟಿ

ಸರ್ಕಾರಿ ಪಶು ವೈದ್ಯಕೀಯ ಆಸ್ಪತ್ರೆಗಳು ಕಡಿಮೆ ಸಂಖ್ಯೆಯಲ್ಲಿರುವುದರಿಂದ ಮತ್ತು ‘ಹಾಡಿ’ಗಳಿಂದ ಸಾಕಷ್ಟು ದೂರವಿರುವುದರಿಂದ ಕುಡಿಯಾ ಸಮುದಾಯವು ಸ್ಥಳೀಯ ವಿಶೇಷ ನಾಟಿ ಪಶುವೈದ್ಯರನ್ನೇ ಅವಲಂಬಿಸಿರುತ್ತಾರೆ. ಈ ಪಶು ವೈದ್ಯರಿಗೆ ಸಾಮಾನ್ಯವಾಗಿ ಔಷಧಿ ಸಸ್ಯಗಳ ಬಳಕೆ ಚೆನ್ನಾಗಿ ತಿಳಿದಿರುತ್ತದೆ. ವೈದ್ಯಕೀಯ ಜ್ಞಾನವು ಪೀಳಿಗೆಯಿಂದ ಪೀಳಿಗೆಗೆ ಮುಂದುವರಿಯುತ್ತದೆ. ಸಾಮಾನ್ಯವಾಗಿ ಸ್ಥಳೀಯ ವೈದ್ಯರೇ ಗುರುತಿಸಿ ಔಷಧಿ ಸಸ್ಯಗಳಿಂದ ಔಷಧಿಯನ್ನು ತಯಾರಿಸುತ್ತಾರೆ.

ಈಗ ವಿವಿಧ ರೀತಿಯ ಔಷಧಿ ಸಸ್ಯಗಳ ಹೆಸರು, ಅವು ಸೇರಿರುವ ಕುಟುಂಬದ ಹೆಸರು ಮತ್ತು ಸ್ಥಳೀಯ ಹೆಸರುಗಳನ್ನು ಸೂಚಿಸಲಾಗಿದೆ ಹಾಗೂ ಔಷಧಿ ತಯಾರಿಕಾ ವಿಧಾನವನ್ನು ವಿವರಿಸಲಾಗಿದೆ.

ಬ್ಯಾಗ್ಲಿ ಮರ್ವಿಲೋಸ್ರೋಟೆಸಿ, ಸ್ಥಳಿಯ ನಾಮ ವಿಲ್ವಾ. ಇದರ ಹಣ್ಣಿನಿಂದ ತಯಾರಿಸಿದ ಔಷಧಿಯನ್ನು ಪ್ರಾಣಿಗಳಲ್ಲಿ ಸಂಧಿವಾತ ಕಾಯಿಲೆಗೆ ಉಪಯೋಗಿಸುತ್ತಾರೆ.

ಹ್ಯಾಲಂ ಸೀಫಾ, ಸೇರಿದ ಕುಟುಂಬ ಲಿಲ್ಲೆಯೇಸಿ. ಸ್ಥಳಿಯ ನಾಮಧೆಯ ಈರುಳ್ಳಿ, ಈರುಳ್ಳಿಯನ್ನು ಬೆಲ್ಲದೊಡನೆ ಕಲಸಿ ಹಸು, ಎಮ್ಮೆಗಳಿಗೆ ನೋಡುವುದರಿಂದ ಅವುಗಳ ಸಂತಾನೋತ್ಪತ್ತಿ ಸಾಮರ್ಥ್ಯ ಹೆಚ್ಚಾಗಲು ಸಹಾಯ ಮಾಡುತ್ತದೆ. ಸೀಬಾ ಪಂಟಾಂಪ್ರ, ಸೇರಿದ ಕುಟುಂಬ ಬಾಂಬೆಸಿ, ಸ್ಥಳೀಯ ಹೆಸರು ಕಫಾಕ್‌. ಪುಡಿ ಮಾಡಿದ ಎಲೆಗಳ ಚೂರನ್ನು ಗಂಜಿಯಲ್ಲಿ ಮಿಶ್ರಣ ಮಾಡಿ ನೀಡಲಾಗುತ್ತದೆ. ಇದು ಹಸು ಮತ್ತು ಎಮ್ಮೆಗಳಲ್ಲಿ ಹಾಲನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.

ಕೆಲಾಟ್ರೋಪಸ್ಜೈಜಾಂಟ, ಸೇರಿದ ಕುಟುಂಬ ಆಸ್ಕಿಲಿಪಿಡಿಯೆಸಿ. ಸ್ಥಳೀಯ ಹೆಸರು ಎಕ್ಕ ಚೂರು ಮಾಡಿದ ಎಲೆಗಳನ್ನು ಅರೆದು ಆ ಮಿಶ್ರಣವನ್ನು ಕುರಿ ಮತ್ತು ಆಡುಗಳಿಗೆ ಕೊಡುವುದರಿಂದ ಅವು ಸದಾ ಚುರುಕಾಗಿರಲು ಸಹಾಯ ಮಾಡುತ್ತದೆ.

ದತ್ತೂರ ಮೀಟಲ್‌, ಸೇರಿದ ಕುಟುಂಬ ಸೋಲಾನ್ನೆಸಿ. ಸ್ಥಳೀಯ ಹೆಸರು ದತ್ತೂರ. ಬೀಜಗಳನ್ನು ಅರೆದು ಚೂರ್ಣ ಮಾಡಿ ನೀರಿನೊಂದಿಗೆ ಬೆರೆಸಿ ಕುರಿ ಮತ್ತು ಆಡುಗಳಿಗೆ ನೋವು ನಿವಾರಣೆಯಾಗಿ ಬಳಸುತ್ತಾರೆ.

ಎರೈತ್ರಿನಾ ಸಬ್ರೋಸಾ, ಸೇರಿದ ಕುಟುಂಬ ಲೆಗ್ಯುಮಿನೇಸಿ. ಸ್ಥಳೀಯ ಹೆಸರು ಮುರುಂಗಾಯಿ ಎಲೆಯನ್ನು ಅರೆದು ಬಳಸುತ್ತಾರೆ.