ಪುರಾತನ ಭಾರತದ ಇತಿಹಾಸವನ್ನು ಗಮನಿಸುವಾಗ ಅಂದಿನಿಂದ ಇಂದಿನವರೆಗೂ ಲೈಂಗಿಕ ಸುಖಕ್ಕೆ ಪುರುಷಪ್ರಧಾನ ಸಮಾಜವು ಮಹತ್ವದ ಆದ್ಯತೆಯನ್ನು ನೀಡಿರುತ್ತದೆ. ಅದಕ್ಕಾಗಿಯೇ ಅದು ಕೆಲವು ತಂತ್ರಗಳನ್ನು ಪದ್ಧತಿಗಳನ್ನಾಗಿ ಮಾಡಿ ಮಹಿಳೆಯ ಲೈಂಗಿಕ ಭಾವನೆಗಳನ್ನು ತನ್ನ ಹಿಡಿತದಲ್ಲಿ ಇಟ್ಟುಕೊಂಡಿರುತ್ತದೆ. ಪರಲಿಂಗ ಲೈಂಗಿಕತೆಗೆ ಮಹತ್ವ ನೀಡುವುದರ ಮೂಲಕ ಮಹಿಳೆಯನ್ನು ಸಂಪೂರ್ಣವಾಗಿ ತನ್ನ ಅಧೀನದಲ್ಲಿರಿಸಿಕೊಂಡಿದೆ. ಮಹಿಳೆ ಸುಖವನ್ನು ಮಾತ್ರ ನೀಡುವ ಭೋಗದ ವಸ್ತುವಾಗಿ ನಿರ್ಣಯಿಸುತ್ತದೆ. ಪುರುಷ ತನ್ನ ಹೆಂಡತಿಯನ್ನು ಮಾತ್ರವಲ್ಲದೆ ಬೇರೆ ಮಹಿಳೆಯರಿಂದಲೂ ಆ ಸುಖವನ್ನು ತನ್ನದಾಗಿಸಿಕೊಳ್ಳಲು ಹಲವು ತಂತ್ರಗಳ ಮೂಲಕ ಕೆಲವು ಪದ್ಧತಿಗಳನ್ನು ವ್ಯವಸ್ಥೆಯನ್ನಾಗಿ ಮಾಡಿ ಆ ವ್ಯವಸ್ಥೆಯನ್ನು ಕೆಳಜಾತಿ ಮತ್ತು ಕೆಳವರ್ಗದ ಮಹಿಳೆಯರಿಗೆ ಕಡ್ಡಾಯಗೊಳಿಸಿದೆ.

ನಾವು ಪುರಾತನ ವೇದಗಳಲ್ಲಿ ಇದರ ಬಗ್ಗೆ ಅಷ್ಟಾಗಿ ಕಾಣದಿದ್ದರೂ ಮನುವಿನ ಧರ್ಮ ಶಾಸ್ತ್ರದಲ್ಲಿ ಮದುವೆಯ ವಿಚಾರಗಳನ್ನು ಗಮನಿಸಿದಾಗ ಶೂದ್ರನಿಗೆ ಶುದ್ರಳೇ ಹೆಂಡತಿಯಾಗಬೇಕು. ವೈಶ್ಯನಿಗೆ ವೈಶ್ಯ ಜಾತಿಯ ಹಾಗೂ ಶೂದ್ರ ಜಾತಿಯ ಹೆಣ್ಣಾಗಬಹುದು. ಕ್ಷತ್ರಿಯನಿಗೆ ಕ್ಷತ್ರಿಯ ಜಾತಿಯವಳು ವೈಶ್ಯ ಜಾತಿಯವಳು ಹಾಗೂ ಶೂದ್ರಳು ಹೆಂಡತಿಯಾಗಬಹುದು. ಬ್ರಾಹ್ಮಣನಿಗೆ ಬ್ರಾಹ್ಮಣ ಸ್ತ್ರೀಯೂ ಕ್ಷತ್ರಿಯಳೂ ವೈಶ್ಯಳೂ ಶೂದ್ರಳೂ ಹೆಂಡತಿಯಾಗಬಹುದು. ಹಾಗೆಯೇ ಮುಂದುವರೆದು ಅವರು ಹೇಳುವುದೇನೆಂದರೆ ಎಂಥ ಅನಿವಾರ್ಯದ ಸಂದರ್ಭದಲ್ಲೂ ಬ್ರಾಹ್ಮಣ ಹಾಗೂ ಕ್ಷತ್ರಿಯ ವರಗಳು ಗಂಡುಗಳು ಶೂದ್ರ ಸ್ತ್ರೀಯನ್ನು ಪ್ರಥಮ ಹೆಂಡತಿ ಎಂದು ವಿವಾಹ ಮಾಡಿಕೊಳ್ಳಬಾರದು. ಅವನ ವಿಚಾರಗಳನ್ನು ಗಮನಿಸುದಾಗ ಶೂದ್ರ ಮಹಿಳೆಯನ್ನು ಎಲ್ಲ ವರ್ಗದ ಪುರುಷನು ಅನುಭವಿಸಬಹುದು. ಆದರೆ ಆಕೆಯನ್ನು ಧರ್ಮಪತ್ನಿಯನ್ನಾಗಿ ಶೂದ್ರನ ಹೊರತು ಬೇರೆ ಯಾರು ಸ್ವೀಕರಿಸಬಾರದು ಎಂಬ ನಿಯಮವನ್ನು ಸ್ಪಷ್ಟಪಡುತ್ತದೆ. ಇದು ಅವಳನ್ನು ಸಂಬಂಧಗಳಾದ ಉಪಪತ್ನಿ, ಸೂಳೆ, ವೇಶ್ಯೆ ಈ ವ್ಯವಸ್ಥೆಯನ್ನು ಅರಮನೆಗಳಲ್ಲಿ ನರ್ತಕಿಯರನ್ನು ಹಿಂದೂ ದೇವಾಲಯಗಳಲ್ಲಿ ದೇವದಾಸಿಯರನ್ನು ಮತ್ತು ಕೆಲವು ಪ್ರಮುಖ ಮತ್ತು ಶ್ರೀಮಂತರ ಬೀದಿಗಳಲ್ಲಿ ಸೂಳೆಗಾರಿಕೆಯನ್ನು ರೂಢಿ ಮಾಡಿಕೊಂಡಿತು. ಆಗಿನ ಕಾಲದಲ್ಲಿ ಈ ಪದ್ಧತಿಗಳು ಗೌರವಯುತ ಸ್ಥಾನಮಾನಗಳನ್ನು ಪಡೆದಿದ್ದವು ಎಂಬ ಅಂಶಗಳನ್ನು ನಾವು ಮಹಾಕಾವ್ಯಗಳಾದ ರಾಮಾಯಣ ಮತ್ತು ಮಹಾಭಾರತಗಳಲ್ಲಿ ಕಾಣುತ್ತೇವೆ.

ಕೌಟಿಲ್ಯನು ತನ್ನ ಅರ್ಥಶಾಸ್ತ್ರದಲ್ಲಿ ವೇಶ್ಯಾವಾಟಿಕೆಯಲ್ಲಿರುವ ಮಹಿಳೆಯರನ್ನು ಮೂರು ವರ್ಗಗಳಾಗಿ ವಿಂಗಡಿಸಲಾಗಿತ್ತೆಂದು ತಿಳಿಸುತ್ತಾನೆ. ಆ ವರ್ಗಗಳು ರೂಪಾಜೀವ, ಕುಂಭದಾಶಿ ಮತ್ತು ಗಣಕ.

ಕುಂಭ ಕೆಳವರ್ಗದ ಮಹಿಳೆಯಾಗಿದ್ದು ತಾನು ಕೆಲಸ ಮಾಡುವ ಮನೆಯ ಯಜಮಾನನಿಗೆ ಲೈಂಗಿಕ ಸೇವೆಯನ್ನು ಪೂರೈಸುತ್ತಿದ್ದಳು. ಇದು ಒತ್ತಾಯಪೂರ್ವಕವಾಗಿ ಕೂಡ ನಡೆಯುತ್ತಿತ್ತು.

ರೂಪಾಜೀವ ಎರಡನೇ ವರ್ಗದ ಮಹಿಳೆ. ಇವಳು ಮದ್ಯಮ ವರ್ಗದವಳಾಗಿದ್ದು ಇವಳು ತನ್ನ ಗಿರಾಕಿಗಳನ್ನು ಲೈಂಗಿಕವಾಗಿ ಆಕರ್ಷಿಸುವ ಬಗ್ಗೆ ಹಲವಾರು ರೀತಿಯಾಗಿರುತ್ತದೆ ಈ ವರ್ಗದ ಜನ ಗಂಡನ ಗಮನಕ್ಕೆ ಬಾರದೇ ವೇಶ್ಯಾವೃತ್ತಿ ಕೆಲವರು ಮಾಡಿದರೆ ಇನ್ನು ಕೆಲವರ ಗಂಡಂದಿರೇ ಅವರ ತಲೆ ಹಿಡಿದು ಅವಳ ಗಳಿಕೆಯ ಮೇಲೆ ಬದುಕುತ್ತಿದ್ದರು.

ಗಣಕದಾಸಿಯರು ಇವರು ಮೊದಲನೇ ವರ್ಗದ ಶ್ರೀಮಂತ ಮಹಿಳೆಯರು ಇವರಿಗೆ ಕೌಟಿಲ್ಯನ ಪ್ರಕಾರ ೬೪ ಕಲೆಗಳು ಗೊತ್ತಿರುತ್ತಿದ್ದವು. ಕಾನೂನು ಇವರಿಗೆ ಬೆಂಬಲವಾಗಿರುತ್ತಿತ್ತು. ಸರ್ಕಾರದಲ್ಲಿ ಇದನ್ನು ಹುದ್ದೆಯಾಗಿ ಪರಿಗಣಿಸಿ ಇವರಿಗೆ ತಿಂಗಳಿಗೆ ೧,೦೦೦ ರೂ. ಸಂಬಳವನ್ನು ಕೊಡುತ್ತಿದ್ದರು. ಇವರನ್ನು ಯಾರಾದರೂ ಅವಮಾನಿಸಿದರೂ ಅವರಿಗೆ ೧೦೦ಪೌಂಡ್ಸ್‌ದಂಡ ವಿಧಿಸುತ್ತಿದ್ದರು. ಈ ವರ್ಗದ ಜನ ರಾಜ್ಯಕ್ಕೆ ತೆರಿಗೆಯನ್ನು ಕೊಡುತ್ತಿದ್ದರು ಮತ್ತು ಈ ವರ್ಗದ ಜನ ಗೌರವದಿಂದ ಬದುಕುತ್ತಿದ್ದರು. ವೇಶ್ಯಾವಾಟಿಕೆಗೂ ಆಗ ನೈತಿಗೆ ಧೋರಣೆಯಲ್ಲಿಯೇ ಮುಂದುವರೆದಿತ್ತು. ಆದರೂ ಆ ವೇಳೆಯಲ್ಲಿ ಕೂಡ ಈ ಪದ್ಧತಿಯಲ್ಲಿಯ ಆರ್ಥಿಕವಾಗಿ ದುರ್ಬಲರನ್ನು ಮತ್ತು ಕೆಳಜಾತಿಯ ಮಹಿಳೆರನ್ನು ಮಾತ್ರ ಈ ಪದ್ಧತಿಯಲ್ಲಿ ಅಳವಡಿಸಿಕೊಂಡಿತು.

ಭಾರತದ ಇತಿಹಾಸದಲ್ಲಿ ವೇಶ್ಯಾವಾಟಿಕೆಯನ್ನು ಕಡ್ಡಾಯಗೊಳಿಸಿದ್ದು ಬ್ರಿಟಿಷರಾರದೂ ಅವರು ಹೋದ ನಂತರವೂ ಈ ವೃತ್ತಿ ಇಂದಿನವರೆಗೂ ಮುಂದುವರೆದಿದೆ. ಕೌಟಿಲ್ಯನ ಅರ್ಥಶಾಸ್ತ್ರದ ೩ ವರ್ಗದ ದೇವದಾಸಿಯರು ಅನ್ನುವ ಪದ ಈಗ ಇಲ್ಲವಾದರೂ ವೇಶ್ಯೆಯರು ಈಗ ಅದೇ ವರ್ಗಗಳಲ್ಲಿ ಮುಂದುವರೆದಿದ್ದಾರೆ. ಮೊಗಲರ, ಬ್ರಿಟಿಷರ ಕಾಲದ ನೈತಿಕತೆಯ ವೇಶ್ಯಾಗೃಹ ತಲೆಹಿಡುಕತನ ಇಂದಿಗೂ ಮುಂದುವರೆದಿದೆ. ಪ್ರಸ್ತುತ ಸಮಾಜದಲ್ಲಿ ಈ ಪದಗಳು ಯಾವ ರೀತಿ ಲಿಂಗ ವ್ಯವಸ್ಥೆಯ ಮತ್ತು ಪರಲಿಂಗ ಸಂಬಂಧಗಳಲ್ಲಿ ಪ್ರಭಾವ ಬೀರುತ್ತಿವೆ. ಎಂಬುದು ಕೂಡ ಮುಖ್ಯವಾಗಿರುತ್ತದೆ.

ಒಟ್ಟಾರೆ ಲೈಂಗಿಕ ದಂಧೆಯಲ್ಲಿರುವ ಸಮುದಾಯವನ್ನು ಕಾನೂನು ಮತ್ತು ಸಮಾಜ ಅವರ ಮಾನವ ಹಕ್ಕುಗಳೂ ದಿನನಿತ್ಯ ಉಲ್ಲಂಘನೆಯಾಗುತ್ತದೆ. ನಾವು ಮೇಲೆ ವಿಶ್ಲೇಷಿಸಿದ ಹಲವಾರು ಕಾರಣಗಳು ಈ ಸಮುದಾಯವನ್ನು ಶೋಷಣೆಗೆ ಗುರಿಮಾಡುವುದರಿಂದ ಇದು ಸಾಮಾಜಿಕವಾಗಿ ಆರ್ಥಿಕವಾಗಿ ಈ ಸಮುದಾಯದ ಅಭಿವೃದ್ಧಿಯಲ್ಲಿ ತೀವ್ರ ಪರಿಣಾಮವನ್ನು ಉಂಟುಮಾಡುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಮುದಾಯದಲ್ಲಿ ಹಲವಾರು ಸಂಘಟನೆಗಳು ಹುಟ್ಟಿಕೊಂಡಿವೆ. ಇವುಗಳಲ್ಲಿ ಚಳುವಳಿಗಳ ಪಾತ್ರ ಬಹು ಮಹತ್ತರ ಬದಲಾವಣೆಯನ್ನು ತಂದು ಸಾಕಷ್ಟು ಸಾಮಾಜಿಕ ಮತ್ತು ಕಾನೂನಿನ ವಿರುದ್ಧವಾಗಿ ಹೋರಾಟಗಳನ್ನು ನಡೆಸುತ್ತಿರುವುದನ್ನು ನಾವು ಗಮನಿಸಬಹುದು. ಒಂದು ಸಮುದಾಯದ ಪರಿಗಣನೆಗೆ ಸಂಘಟನೆ ಮತ್ತು ಅದರಿಂದ ಸಾಮಾಜಿಕ ಬದಲಾವಣೆ ಮುಖ್ಯಪಾತ್ರವನ್ನು ವಹಿಸುತ್ತದೆ. ಇದು ಲಿಂಗ ವ್ಯವಸ್ಥೆಯ ಮೇಲೂ ಈ ರೀತಿಯ ಪರಿಣಾಮವನ್ನು ಬೀರುತ್ತದೆ.

ಅಡಿಟಿಪ್ಪಣಿಗಳು

ಕಮ್ಯುನಿಟಿ ಆಂಡ್‌ಐಡೆಂಟಿಟಿಸುರಿಂದರ್‌ಸ್‌ಜೋದಕ್‌

ಮನುಸ್ಮತಿ, ಅನು: ಶೇಷ ನವರತ್ನ, ಅಧ್ಯಾಯ ೩, ವಚನ, ಪು.೧೩

ಮನುಸ್ಮತಿ, ಅನು: ಶೆಷ ನವರತ್ನ, ಅಧ್ಯಾಯ೩ ವಚನ, ಪು.೪

ಸೀನ್ಹ ಮತ್ತು ಬಾಸು, ಕೌಟಿಲ್ಯನಿಂದ: ಪ್ರಭಾ, ಕೋಟೇಶ್ವರನ್‌

ಅಂಡ್ರೊ ನೋಟ, ೧೨೧ ಪು. ೧೭೧೮