ಕರ್ನಾಟಕ ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಕೇವಲ ಮೂರು ವಿಶ್ವವಿದ್ಯಾಲಯಗಳಲ್ಲಿ ಮಾನವಶಾಸ್ತ್ರ ವಿಭಾಗಗಳು ಅಸ್ತಿತ್ವದಲ್ಲಿರುವುದು ಮಾತ್ರ, ಅದರಲ್ಲಿ ಕನ್ನಡ ವಿಶ್ವವಿದ್ಯಾಲಯವು ಒಂದು. ಕನ್ನಡ ವಿಶ್ವವಿದ್ಯಾಲಯದ ಮಾನವಶಾಸ್ತ್ರ ವಿಭಾಗ, ಮಾನವಶಾಸ್ತ್ರ ಅಸೋಸಿಯೇಷನ್‌, ಮೈಸೂರು ಇವರ ಸಹಯೋಗದೊಂದಿಗೆ ನವೆಂಬರ್‌೧೪, ೧೫, ೨೦೦೮ರಲ್ಲಿ ವಿಶ್ವವಿದ್ಯಾಲಯದ ಆವರಣದಲ್ಲಿ ಪರಿವರ್ತನೆಯ ಹಾದಿಯಲ್ಲಿ ಬುಡಕಟ್ಟು ಸಮಾಜಗಳು ಎಂಬ ವಿಷಯದ ರಾಷ್ಟ್ರೀಯ ವಿಚಾರ ಸಂಕೀರಣವನ್ನು ಆಯೋಜಿಸಲಾಗಿತ್ತು. ಈ ವಿಚಾರ ಸಂಕಿರಣದಲ್ಲಿ ಮಾನವಶಾಸ್ತ್ರ ವಿದ್ವಾಂಸರು ಹಾಗೂ ಇತರ ವಿದ್ವಾಂಸರುಗಳು ಆಗಮಿಸಿ ಬುಡಕಟ್ಟು ಸಮುದಾಯಗಳ ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ, ಆರ್ಥಿಕ, ಆರೋಗ್ಯ, ಆಚರಣೆಗಳು, ಉಡುಗೆ-ತೊಡುಗೆಗಳು ಮುಂತಾದ ವಿಷಯಗಳನ್ನಿಟ್ಟುಕೊಂಡು ರಾಜ್ಯ ಹಾಗೂ ಹೊರರಾಜ್ಯದ ಬುಡಕಟ್ಟು ಹಾಗೂ ಅಲೆಮಾರಿ ಸಮಾಜಗಳ ಪರಿವರ್ತನೆಯ ಅಥವಾ ಸ್ಥಿತ್ಯಂತರದ ಬಗ್ಗೆ ಪ್ರಬಂಧಗಳನ್ನು ಮಂಡಿಸಿದರು.

ಈ ವಿಚಾರ ಸಂಕಿರಣದಲ್ಲಿ ಮಂಡಿಸಿದ ಲೇಖನಗಳನ್ನು ಸಂಗ್ರಹಿಸಿ ಪುಸ್ತಕದ ರೂಪದಲ್ಲಿ ಪ್ರಕಟಿಸಲು ಅನುವು-ಮಾಡಿಕೊಟ್ಟ ಮಾನ್ಯ ಕುಲಪತಿಯವರಾದ ಡಾ. ಎ. ಮುರಿಗೆಪ್ಪ ಅವರಿಗೂ ಹಾಗೂ ಮಾನ್ಯ ಕುಲಸಚಿವರು ಹಾಗೂ ಪ್ರಸಾರಾಂಗದ ನಿರ್ದೇಶಕರಾದ ಡಾ. ಮಂಜುನಾಥ ಬೇವಿನಕಟ್ಟಿ ಅವರಿಗೂ, ಹಿಂದಿನ ಕುಲಸಚಿವರಾಗಿದ್ದ ಡಾ. ಹಿ. ಚಿ. ಬೋರಲಿಂಗಯ್ಯ ಅವರಿಗೂ ಹಾಗೂ ಸಮಾಜ ವಿಜ್ಞಾನಗಳ ಡೀನ್ ಆದ ಡಾ. ಟಿ. ಆರ್‌. ಚಂದ್ರಶೇಖರ್‌ಅವರಿಗೂ, ವಸ್ತು ಸಂಗ್ರಹಾಲಯದ ನಿರ್ದೇಶಕರಾದ ಡಾ.ಕೆ. ಎಂ. ಸುರೇಶ ಅವರಿಗೆ ಮತ್ತು ಮಾನವಶಾಸ್ತ್ರ ಅಸೋಷಿಯೇಷನ್‌ಮೈಸೂರು ಇದರ ಅಧ್ಯಕ್ಷರಾದ ಡಾ. ಪಿ. ಕೆ. ಮಿಶ್ರ ಅವರಿಗೆ, ಈ ವಿಚಾರ ಸಂಕಿರಣ ನಡೆಸಲು ಸಲಹೆ ಹಾಗೂ ಮಾರ್ಗದರ್ಶನ ಮಾಡಿದ ಗುರುಗಳಾದ ಡಾ. ಹೆಚ್‌. ಕೆ. ಭಟ್ಟ ಅವರಿಗೂ ನನ್ನ ಮೊದಲ ನಮನಗಳು.

ಮಾನವಶಾಸ್ತ್ರ ವಿಭಾಗದ ಸಹೋದ್ಯೋಗಿ ಹಾಗೂ ಮುಖ್ಯಸ್ಥರಾಗಿದ್ದ ಡಾ. ತಾರಿಹಳ್ಳಿ ಹನುಮಂತಪ್ಪ ಅವರಿಗೂ, ಕಛೇರಿಯ ಸಹಾಯಕರಾದ ಬಿ. ಪಂಪಾಪತಿ, ನರೆಗಲ್ಲಪ್ಪ ಅವರಿಗೂ, ಈ ವಿಚಾರ ಸಂಕಿರಣಕ್ಕೆ ಸಹಕಾರ ನೀಡಿದ ಮಾನವಶಾಸ್ತ್ರ ಅಸೋಷಿಯೇಷನ್‌ಮೈಸೂರಿನ ಡಾ. ಹೆಚ್‌. ಎಂ. ಮರುಳಸಿದ್ಧಯ್ಯ, ಡಾ. ಬಿ. ಆರ್‌. ವಿಜೇಂದ್ರ, ಡಾ. ಎಸ್‌. ಮಹದೇವ, ಶ್ರೀಮತಿ ವೀಣಾ ಕು. ಚಲುವಾಂಬ ಇವರಿಗೂ ಇವರಿಗೆ ನನ್ನ ಕೃತಜ್ಞತೆಗಳು.

ಕೃತಿಯು ಅಚ್ಚುಕಟ್ಟಾಗಿ ಪ್ರಕಟವಾಗಲು ಸಹಕರಿಸಿದ ಪ್ರಸಾರಾಂಗದ ಸಹಾಯಕ ನಿರ್ದೇಶಕರಾದ ಶ್ರೀ ಬಿ. ಸುಜ್ಞಾನಮೂರ್ತಿ, ಶ್ರೀ ಎಚ್‌. ಬಿ. ರವೀಂದ್ರ, ಮುಖಪುಟ ರಚಿಸಿರುವ ಕಲಾವಿದ ಶ್ರೀ ಕೆ. ಕೆ. ಮಕಾಳಿ ಹಾಗೂ ಅಕ್ಷರ ಸಂಯೋಜಿಸಿದ ಶ್ರೀ ವೀರೇಶ್‌, ಶ್ರೀ ಶ್ರೀನಿವಾಸ ಕೆ. ಕಲಾಲ್‌ಅವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇನೆ. ಲೇಖನಗಳನ್ನು ಸಕಾಲಕ್ಕೆ ಬರೆದುಕೊಟ್ಟ ಎಲ್ಲಾ ವಿದ್ವಾಂಸರಿಗೆ ಕೃತಜ್ಞತೆಗಳು.

ಡಾ. ಎಲ್‌. ಶ್ರೀನಿವಾಸ