ನಡಿ ತಾಯಿ ನಡಿ ಹೋಗೋಣ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ಆಗರದ ಗಿಣಿಬಾರೆ, ಸೋಗಿ ನವಿಲಬಾರೆ
ಈಗಲೇ ನಿನ್ನ ಕರೆದೇನೇ
ನಡಿ ತಾಯಿ ನಡಿ ಹೋಗೋಣಾ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ಈಗವ್ವನೇ ನಿನ್ನ ಕರೆದೇನೇ ಕರಿ ಹುಲುಗುವ್ವಾನಾ
ಯಾಲಕ್ಕಿ ಮರದ ಶರಣೋಳೇ
ನಡಿ ತಾಯಿ ನಡಿ ಹೋಗೋಣಾ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ತುಪ್ಪಾವ್ವಾ ಹಚ್ಚಿರಿ ವಸ್ತೀಲೀ ಸಳಗೊಟ್ಟಿರೀ
ನಿಚ್ಚಮಲ್ಲಿಗೆ ಹರವೀರೀ
ನಡಿ ತಾಯಿ ನಡಿ ಹೋಗೋಣಾ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಿಚ್ಚನೆ ಮಲ್ಲಿಗೆ ಹರವೀರೀಕೊಂಗಮ್ಮನಾ
ಗಂಗಿಗಿ ಹೋಗಿ ಬರುತ್ತಾಳೆ
ನಡಿ ತಾಯಿ ನಡಿ ಹೋಗೋಣಾ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ತಾಯ ತಡಿಯ ಮ್ಯಾಲೆ, ಗ್ಯಾನಾ ನಿನ್ನ ಮ್ಯಾಲೆ,
ನಾನೊಂದೇ ನಾಡಮನದರಿಯೇ
ನಡಿ ತಾಯಿ ನಡಿ ಹೋಗೋಣಾ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಾನೇ ವಂದನಾಡ ಮನದರಿಯೇ ಹುಲಿಗೆವ್ವಾ
ನೀಲಾದೊತ್ತಿಗೆ ದಯೇ ಮಾಡೇ
ನಡಿ ತಾಯಿ ನಡಿ ಹೋಗೋಣಾ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಿನ್ನ ಒಳವಾ ಮೂಗುತಿ ಕಪ್ಪು ವಾಲಿಯ
ಬೆಳಕೀಲೀ ಬರಬಾರದೆನವ್ವಾ ಗುಡಿಗೇ ||ಸೋ||
ನಿಮ್ಮ ಸಡಗರದಿಂದಲೇ ನಡಿಗೆಯ
ನೋಡೇನು ಬರಬಾರದೇನವ್ವಾ ಗುಡಿಗೇ ||ಸೋ||
ಆಗರದ ಗಿಣಿಬಾರೇ, ಸಾಗಿನ
ವಿಲಬಾರೇ ಈಗಲೇ ನಿನ್ನ ಕರೆದೇನೇ
ನಡಿ ತಾಯಿ ನಡಿ ಹೋಗೋಣಾ
ನಡಿ ತಾಯಿ ನಡಿ ಹೋಗೋಣಾ
ರಾಜ್ಯದ ಮ್ಯಾಲ ವಡಿಬಂಡಿ ಗುಡಿ ಗೋಗೂನು ||ಸೋ||
ನಿನ್ನ ಒಳವಾ ಮೂಗುತಿ ಕಪ್ಪು ವಾಲಿಯ
ಬೆಳಕೀಲೀ ಬರಬಾರದೆನವ್ವಾ ಗುಡಿಗೇ ||ಸೋ||
ಗಾಳ್ಯಾ ಗಾ ಧೂಳ್ಯಾಗಾ ಗಾಳೆವ್ವಾ ಬರುತ್ತಾಳೆ
ಈಗ ಬಾಲಕಿದಿರೀಗಿ ನಿಲ್ಲದೀರೇ, ಬರಬಾರದೇನವ್ವಾ ಗುಡಿಗೆ
ನಿನ್ನ ಒಳವಾ ಮೂಗುತಿ ಕಪ್ಪು ವಾಲಿಯ
ಬೆಳಕೀಲೀ ಬರಬಾರದೆನವ್ವಾ ಗುಡಿಗೇ ||ಸೋ||
ನಿಮ್ಮ ಸಡಗರದಿಂದಲೇ ನಡಿಗೆಯ ನೋಡೇನೂ
ಬರಬಾರದೇನವ್ವಾ ಗುಡಿಗೇ ||ಸೋ||
ಬಾಲರು ಎದುರಿಗೇ ನಿಲ್ಲದೀರೇ ಹುಲಿಗೆವ್ವಾ
ಈ ಬಾಲಕಿದರೀಗಿ ನಿಲ್ಲದೀರೇ ಬರಬಾರದೇನವ್ವಾ ಗುಡಿಗೇ ||ಸೋ||
ನಿನ್ನ ಒಳವಾ ಮೂಗುತಿ ಕಪ್ಪು, ವಾಲಿಯ
ಬೆಳಕೀಲೀ ಬರಬಾರದೆನವ್ವಾ ಗುಡಿಗೇ ||ಸೋ||
ಹಾಡಿದಾಳೋ
ಆಡಿದಾಳೋ ಚಂಡಾಡಿದಾಳೋ
ಲಗ್ಗೇ ಓಡಿದಾಳೋ, ರಥವೇರಿದಾಳೋ
ಲೋಕ ನೋಡಿದಾಳೋ ||ಸೋ||
ಆಡಿದಾಳೋ ಚಂಡಾಡಿದಾಳೋ
ಲಗ್ಗೇ ಓಡಿದಾಳೋ, ರಥವೇರಿದಾಳೋ
ಲೋಕ ನೋಡಿದಾಳೋ ||ಸೋ||
ಗಳ್ಯಾಗಾ ಧುಳ್ಯಾಗಾ ಗಾಳೆವ್ವಾ ಬರುತ್ತಾಳೆ
ಬಾಲಕಿದರೀಗೇ ನಿಲ್ಲದೀರೇ
ಲಗ್ಗೇ ಓಡಿದಳೋ, ರಥವೇರಿದಾಳೋ ||ಸೋ||
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಬಾಲರು ಎದುರಿಗೇ ನಿಲ್ಲದೀರೇ ಕರಿ ಹುಲುಗನಾ
ಬಾಳೆ ಜೂಜಾಡಿ ಬರುತ್ತಾಳೇ
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಗುಡುಗು ಮಿಂಚಿನಾಗೇ ಹಡದವ್ವಾ ಬರುತ್ತಾಳೆ
ಹುಡುಗರು ಎದುರಿಗೇ ನಿಲ್ಲದೀರೇ
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಹುಡುಗರು ಎದುರಿಗೇ ನಿಲ್ಲದೀರೇ ಕೊಂಗಮ್ಮನಾ
ಪಗಡಿ ಜೂಜಾಡಿ ಬರುತ್ತಾಳೇ
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಹಸುಮಗಳೇ ಕವಿ ಹುಲುಗಾ
ಬಸವನೇರಿಕೊಂಡೆ ಎಸಳೆಕ್ಯಾದಿಗಿ ಮುಡಕೊಂಡೆ,
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಎಸವಳೇನೇ ಕ್ಯಾದಿಗಿ ಮುಡಕೊಂಡೆ ಹೊಸಪೇಟೆ
ಶಶಿದೇವಿಯ ನೆನುದಾಳೋ,
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಲಗ್ಗೇ ಓಡಿದರೋ, ರಥವೇರಿದಾರೋ ||ಸೋ||
ಎಂಥಸೇವೆ ಮಾಡಲಿ ಗಂಗಳ ಕಸ್ತೂರಿ ತೀಡಲೇ
ಸಣ್ಣ ಮಲ್ಲಿಗೆ ನಿನಗೆ ಸುಮ್ಮನಿಟ್ಟು ಹೋಗಲೇ
ನಾನೆಂಥ ಸೇವೆ ಮಾಡಲಿ ||ಸೋ||
ದುಂಡಾ ಮಲ್ಲಿಗೆ ನಿನಗೆ ಮಂಡಿಲಿಟ್ಟು ಹೋಗಲೇ
ನಾನೆಂಥ ಸೇವೆ ಮಾಡಲಿ ||ಸೋ||
ಆರಾಣೆ ಬಳ್ಳಿಗೇ ಆರೇವನ್ನುಂಗೋರು
ದೇವಿಗೆ ಎಣ್ಣೆ ಎರವೇಕ್ಕಿ ನಾನೆಂಥ ಸೇವೆ ಮಾಡಲಿ ||ಸೋ||
ದೇವಿಗೆ ಎಣ್ಣೆ ಎರವೇಕ್ಕಿ ನಾನೆಂಥ ಸೇವೆ ಮಾಡಲಿ ||ಸೋ||
ದೇವಿಗೆ ಏ ಎಣ್ಣೆ ಯರವಾ ಅಯ್ಯಮ್ಮಗೆ
ರಾವ ಕಣ್ಣಾಳ್ಳೇ ವಲತಾಳೆ ನಾನೆಂಥ ಸೇವೆ ಮಾಡಲಿ ||ಸೋ||
ರಾವ ಕಣ್ಣಾಳ್ಳೇ ವಲತಾಳೆ ನಾನೆಂಥ ಸೇವೆ ಮಾಡಲಿ ||ಸೋ||
ಹತ್ತಾಣ್ಣೆ ಬಳ್ಳಿಗೆ ಅರ್ಧವನ್ನುಂಗೋರು
ಬಡ್ಡಿಲೀ ಎಣ್ಣೆ ಎರವೆಕ್ಕಿ ನಾನೆಂಥ ಸೇವೆ ಮಾಡಲಿ ||ಸೋ||
ಬಡ್ಡಿಲೀ ಎಣ್ಣೆ ಎರವೆಕ್ಕಿ ನಾನೆಂಥ ಸೇವೆ ಮಾಡಲಿ ||ಸೋ||
ಬಡ್ಡಿಲೀ ಏ ಎಣ್ಣೆ ಯರವಾ ಅಯ್ಯಾಮ್ಮಗೆ
ಸಿಕ್ಕ ಕಣ್ಣೊಳೇ ವಲತಾಳೆ ನಾನೆಂಥ ಸೇವೆ ಮಾಡಲಿ ||ಸೋ||
ಸಿಕ್ಕ ಕಣ್ಣೊಳೇ ವಲತಾಳೆ ನಾನೆಂಥ ಸೇವೆ ಮಾಡಲಿ ||ಸೋ||
ಬಾಲ ಮರದಡಿಯಲಿದ್ದೇ, ಅಯ್ಯಮ್ಮಗೆ ವಲಿತೇ
ಅಕ್ಕ ತಂಗಿಯರೆಲ್ಲ ಮರಿಸಿದೇ
ದೇಶದ ಮ್ಯಾಲೆ ಕರೆಕಂಡೇ
ನಡಿರೀ ಹುಲಿಗವ್ವಾಗೆ ಹೋಗೋನು ||ಸೋ||
ದೇಶದ ಮ್ಯಾಲೆ ಕರೆಕಂಡೇ ನಡಿರೀ ಹುಲಿಗವ್ವಾಗೆ ಹೋಗೋನು ||ಸೋ||
ಹುಲಿಗೆವ್ವಾಗೆ ಹೋಗೋನೆ, ಅಮ್ಮನ ಸೇವೆ ಮಾಡೋನೆ
ಗಂಧ ತಂದಾವ್ಯಾಗೆ ಕೂತಾನೆ, ಗರಡಿ ಪಕ್ಷಿ ಯಾಗೋನೆ
ನಡಿರೀ ಕೊಂಗಮ್ಮನಗೆ ಹೋಗೋನೆ ||ಸೋ||
ಗರಡಿ ಪಕ್ಷಿಯಾಗೋನೆ, ನಡಿರೀ ಕೊಂಗಮ್ಮಗೆ ಹೋಗೋನೆ ||ಸೋ||
ಅಡಿಕಿ ಮರದಡಿಯಾಗೇ ಇಟ್ಟಿದೆ ಬುದ್ಧಿ ಅಯ್ಯಾಮ್ಮಗೆ ವಲಿತೇ
ತಾಯಿ ತಂದೆಯರೆಲ್ಲ ಮರಿಸಿದ್ದೇ
ದೇಶದ ಮ್ಯಾಲೆ ಕರೆಕೊಂಡೆ ನಡಿರೀ ಮರಿಯವ್ವಾಗೇ ಹೋಗೋನೆ ||ಸೋ||
ದೇಶದ ಮ್ಯಾಲೆ ಕರೆಕೊಂಡೆ ನಡಿರೀ ದುರುಗವ್ವಾಗೇ ಹೋಗೋನೆ ||ಸೋ||
ದುರುಗವ್ವಗೆ ಹೋಗೋನೆ, ಅಮ್ಮನ ಸೇವೆ ಮಾಡೋನೆ
ಗಂಧ ತಂದವ್ವಾಗೆ ಕೂಸಾನೆ, ಗರಡಿ ಪಕ್ಷಿಯಾಗೋನೆ
ನಡಿರೀ ಎಲ್ಲಮ್ಮನಾಗೆ ಹೋಗೋನೆ ||ಸೋ||
ಗರಡಿ ಪಕ್ಷಿಯಾಗೋನೆ, ನಡಿರೀ ಎಲ್ಲವ್ವಾಗೆ ಹೋಗೋನೆ ||ಸೋ||
ಎಲ್ಲವ್ವಾಗೆ ಹೋಗೋನೆ, ಅಮ್ಮನ ಸೇವೆ ಮಾಡೋನೆ
ಗಂಧ ತಂದವ್ವಾಗೆ ಕೂಸಾನೆ, ಗರಡಿ ಪಕ್ಷಿಯಾಗೋನೆ
ನಡಿರೀ ಹೊಸೂರಮ್ಮಗೆ ಹೋಗೋನೆ ||ಸೋ||
ಗಡಿ ಪಕ್ಷಿಯಾಗೋನೆ, ನಡಿರೀ ಹೊಸೂರಮ್ಮಾಗೆ ಹೋಗೋನೆ ||ಸೋ||
ಹೊಸುರಮ್ಮಾಗೆ ಹೋಗೋನೆ, ಅಮ್ಮನ ಸೇವೆ ಮಾಡೋನೆ
ಗಂಧ ತಂದವ್ವಾಗೆ ಕೂಸಾನೆ, ಗರಡಿ ಪಕ್ಷಿಯಾಗೋನೆ
ನಡಿರೀ ಹುಲಿಗೆವ್ವಾಗೆ ಹೋಗೋನೆ ||ಸೋ||
ಗರಡಿ ಪಕ್ಷಿಯಾಗೋನೆ, ನಡಿರೀ ಹುಲಿಗೆವ್ವಾಗೆ ಹೋಗೋನೆ ||ಸೋ||
ಮಲ್ಲಿಗೂವಿನ ದಂಡೆ
ಮಲ್ಲಿಗೂವಿನ ದಂಡೆ ಕಟ್ಟಿಸಿ
ತಾಯಿ ದಿಟ್ಟಿಸಿ ನೋಡ್ಯಾಳೇ ರಕಸಿ
ಸಿಕ್ಕು ಬಳ್ಳಾಂಗ ಸುವಾರ ಕುಡಿಸಿ
ಬಂಗಾರದ ಭರಣಿ ಬರೆಸಿ
ಈ ಭರಣಾದಳೋ ಲಿಂಗಾದ ಪೂಜಾಗಲೇಳೋ ||ಸೋ||
ಸಾವಂತಿಗೇಯ ಹೂವಿನ ದಂಡೆ ಕಟ್ಟಿಸಿ
ತಾಯಿ ದಿಟ್ಟಿಸಿ ನೋಡ್ಯಾಳಾ ರಕಸಿ
ಸಕ್ಕು ಬಳ್ಳಾಂಗ ಸುವಾರ ಕುಡಿಸಿ
ಬಂಗಾರದ ಭರಣಿ ಬಗಸಿ
ಈ ಭರಣಾದಳೋ ಲಿಂಗಾದ ಪೂಜಾಗಲೇಳೋ ||ಸೋ||
ಈ ಭರಣಾದಳೋ ಲಿಂಗಾದ ಪೂಜಾಗಲೇಳೋ ||ಸೋ||
ಸಾವಂತಿಗೇಯ ಹೂವಿನ ದಂಡೆ ಕಟ್ಟಿಸಿ
ತಾಯಿ ದಿಟ್ಟಿಸಿ ನೋಡ್ಯಾಳಾ ರಕಸಿ
ಸಕ್ಕು ಬಳ್ಳಾಂಗ ಸುವಾರ ಕುಡಿಸಿ
ಬಂಗಾರದ ಭರಣಿ ಬಗಸಿ
ಈ ಭರಣಾದಳೋ ಲಿಂಗಾದ ಪೂಜಾಗಲೇಳೋ ||ಸೋ||
ಈ ಭರಣಾದಳೋ ಲಿಂಗಾದ ಪೂಜಾಗಲೇಳೋ ||ಸೋ||
ಕನಗಲೂವಿನ ದಂಡೆ ಕಟ್ಟಿಸಿ
ತಾಯಿ ದಿಟ್ಟಿಸಿ ನೋಡ್ಯಾಳಾ ರಕಸಿ
ಸಕ್ಕು ಬಳ್ಳಾಂಗ ಸುವಾರ ಕುಡಿಸಿ
ಬಂಗಾರದ ಭರಣಿ ಬಗಸಿ
ಈ ಭರಣಾದಳೋ ಲಿಂಗಾದ ಪೂಜಾಗಲೇಳೋ ||ಸೋ||
ಈ ಭರಣಾದಳೋ ಲಿಂಗಾದ ಪೂಜಾಗಲೇಳೋ ||ಸೋ||
ಕಾಡಿ ಬರುವವರೆ
ಕಾಡಿ ಬರುವವರೆ ಎಲ್ಲವ್ವಾ, ಬೇಡಿ ಬರುವವರೇ
ಬೇಡಿದ ಭಾಗ್ಯ ಕೊಟ್ಟ ಕಾಲಕಾ ನಿನ್ನ ಮರೆಯುವರೇ
ಎಲ್ಲವ್ವಾ ಸುಮ್ಮನಿರುವವರೇ ||ಸೋ||
ಬೇಡಿದ ಭಾಗ್ಯ ಕೊಟ್ಟ ಕಾಲಕಾ ನಿನ್ನ ಮರೆಯುವರೇ
ಎಲ್ಲವ್ವಾ ಸುಮ್ಮನಿರುವವರೇ ||ಸೋ||
ಬೇಡಿದ ಭಾಗ್ಯ ಕೊಟ್ಟ ಕಾಲಕಾ ನಿನ್ನ ಮರೆಯುವರೇ
ಎಲ್ಲವ್ವಾ ಸುಮ್ಮನಿರುವವರೇ
ಕರಕಟ್ಟಿ ಯಾಳಾಗೇರೆಲ್ಲ ಜನ್ನಿಗೆ ಬಡುವವರೇ
ಎಲ್ಲವ್ವಾ ಸುಮ್ಮನಿರುವವರೇ ||ಸೋ||
ಕರಕಟ್ಟಿ ಯಾಳಾಗೇರೆಲ್ಲ ಜನ್ನಿಗೆ ಬಡುವವರೇ
ಎಲ್ಲವ್ವಾ ಸುಮ್ಮನಿರುವವರೇ ||ಸೋ||
ಕರಕಟ್ಟಿ ಯಾಳಾಗೇರೆಲ್ಲ ಜನ್ನಿಗೆ ಬಡುವವರೇ
ಎಲ್ಲವ್ವಾ ಸುಮ್ಮನಿರುವವರೇ
ವಾಲಿ ಕಪ್ಪಿಗೆ ಚಂಬು ಹಾಲು ಮಾರವರು
ಎಲ್ಲವ್ವಾ ನಿರು ಬರೆಸುವರು ||ಸೋ||
ವಾಲಿ ಕಪ್ಪಿಗೆ ಚಂಬು ಹಾಲು ಮಾರವರು
ಎಲ್ಲವ್ವಾ ನಿರು ಬರೆಸುವರು ||ಸೋ||
ವಾಲಿ ಕಪ್ಪಿಗೆ ಚಂಬು ಹಾಲು ಮಾರವರು
ಎಲ್ಲವ್ವಾ ನಿರು ಬರೆಸುವರು
ದುಡ್ಡಿನಾಸೆಗೆ ಬಡ್ಡಿ ಕೊಟ್ಟು ನಿನ್ನ ಮರೆಯುವರು
ಎಲ್ಲವ್ವಾ ಸುಮ್ಮನಿರುವವರು ||ಸೋ||
ದುಡ್ಡಿನಾಸೆಗೆ ಬಡ್ಡಿ ಕೊಟ್ಟು ನಿನ್ನ ಮರೆಯುವರು
ಎಲ್ಲವ್ವಾ ಸುಮ್ಮನಿರುವವರು ||ಸೋ||
ದುಡ್ಡಿನಾಸೆಗೆ ಬಡ್ಡಿ ಕೊಟ್ಟು ನಿನ್ನ ಮರೆಯುವರು
ಎಲ್ಲವ್ವಾ ಸುಮ್ಮನಿರುವವರು
ಇಂಡೋ ಎಮ್ಮೆಗೆ ಗೊಡ್ಡು ಕಡವಿ ನೋಡೆನೆಂದಾಳೋ
ಸತ್ಯಾವಾ ತೋರೆನೆಂದಾಳೋ ||ಸೋ||
ಇಂಡೋ ಎಮ್ಮೆಗೆ ಗೊಡ್ಡು ಕಡವಿ ನೋಡೆನೆಂದಾಳೋ
ಸತ್ಯಾವಾ ತೋರೆನೆಂದಾಳೋ
ಬಿತ್ತೋ ಹೊಲಬೇಲಿ ಕೆಡವಿ ನೋಡೆನೆಂದಾಳೋ
ಕೊಂಚ ಗೆಲುವಿನೆಂದಾಳೋ ||ಸೋ||
ಬಿತ್ತೋ ಹೊಲಬೇಲಿ ಕೆಡವಿ ನೋಡೆನೆಂದಾಳೋ
ಕೊಂಚ ಗೆಲುವಿನೆಂದಾಳೋ
ದೊಡ್ಡ ದೊಡ್ಡ ಬ್ಯಾಣಿಗಳ ಹಾಕಿ, ಕಾಡಕ ನಿಂತಾಳೋ
ನಮ್ಮವ್ವಾ ಬೇಡಕಾ ನಿಂತಾಳೋ ||ಸೋ||
ದೊಡ್ಡ ದೊಡ್ಡ ಬ್ಯಾಣಿಗಳ ಹಾಕಿ, ಕಾಡಕ ನಿಂತಾಳೋ
ನಮ್ಮವ್ವಾ ಬೇಡಕಾ ನಿಂತಾಳೋ ||ಸೋ||
ದೊಡ್ಡ ದೊಡ್ಡ ಬ್ಯಾಣಿಗಳ ಹಾಕಿ, ಕಾಡಕ ನಿಂತಾಳೋ
ನಮ್ಮವ್ವಾ ಬೇಡಕಾ ನಿಂತಾಳೋ
ಎಲ್ಲೆ ಎಲ್ಲೇ ದೇವರ ಕೇಳಿದರೆ ನಾನು ಬರುವವಳು
ತನ್ನ ರೂಪ ತೋರುವಳೋ ||ಸೋ||
ಎಲ್ಲೆ ಎಲ್ಲೇ ದೇವರ ಕೇಳಿದರೆ ನಾನು ಬರುವವಳು
ತನ್ನ ರೂಪ ತೋರುವಳೋ
ಅಡಿಗೆ ಮನೆ ಹಿರೇಸೊಸೆನಾ ಕರಿರೆಂದಾಳೋ
ದೇವರ ಕಟ್ಟಿಸಿರೆಂದಾಳೋ ||ಸೋ||
ಅಡಿಗೆ ಮನೆ ಹಿರೇಸೊಸೆನಾ ಕರಿರೆಂದಾಳೋ
ದೇವರ ಕಟ್ಟಿಸಿರೆಂದಾಳೋ ||ಸೋ||
ಅಡಿಗೆ ಮನೆ ಹಿರೇಸೊಸೆನಾ ಕರಿರೆಂದಾಳೋ
ದೇವರ ಕಟ್ಟಿಸಿರೆಂದಾಳೋ
ಕಡಗದ ಮ್ಯಾಲಾ ನನ್ನ ರೂಪ ಹಾಕಿಸಿರೆಂದಾಳೋ
ಜನಕ ತೋರೆನೆಂದಾದಳೋ ||ಸೋ||
ಕಡಗದ ಮ್ಯಾಲಾ ನನ್ನ ರೂಪ ಹಾಕಿಸಿರೆಂದಾಳೋ
ಜನಕ ತೋರೆನೆಂದಾದಳೋ ||ಸೋ||
ಕಡಗದ ಮ್ಯಾಲಾ ನನ್ನ ರೂಪ ಹಾಕಿಸಿರೆಂದಾಳೋ
ಜನಕ ತೋರೆನೆಂದಾದಳೋ
ಐದು ಮನೆ ಜೋಗುಳಾದರೆ ಆಡಿಸಿರೆಂದಾಳೋ
ಸತ್ಯಾವಾ ತೋರೆನೆಂದಾಳೋ ||ಸೋ||
ಐದು ಮನೆ ಜೋಗುಳಾದರೆ ಆಡಿಸಿರೆಂದಾಳೋ
ಸತ್ಯಾವಾ ತೋರೆನೆಂದಾಳೋ ||ಸೋ||
ಐದು ಮನೆ ಜೋಗುಳಾದರೆ ಆಡಿಸಿರೆಂದಾಳೋ
ಸತ್ಯಾವಾ ತೋರೆನೆಂದಾಳೋ
ಬೆಳ್ಳಿ ಕವರಿ ಚೌರನಾದರೆ ಮಾಡಿಸಿರೆಂದಾಳೋ
ನನ್ನ ಮ್ಯಾಲೆ ಆಡಿಸಿರೆಂದಾಳೋ ||ಸೋ||
ಬೆಳ್ಳಿ ಕವರಿ ಚೌರನಾದರೆ ಮಾಡಿಸಿರೆಂದಾಳೋ
ನನ್ನ ಮ್ಯಾಲೆ ಆಡಿಸಿರೆಂದಾಳೋ ||ಸೋ||
ಬೆಳ್ಳಿ ಕವರಿ ಚೌರನಾದರೆ ಮಾಡಿಸಿರೆಂದಾಳೋ
ನನ್ನ ಮ್ಯಾಲೆ ಆಡಿಸಿರೆಂದಾಳೋ
ಅವರೇ ಮನೆ ಜಗಲಿಮ್ಯಾಲೆ ಇದ್ದೆನೆಂದಾಳೋ
ಸತ್ಯಾವಾ ತೋರೆನೆಂದಾಳೋ ||ಸೋ||
ಅವರೇ ಮನೆ ಜಗಲಿಮ್ಯಾಲೆ ಇದ್ದೆನೆಂದಾಳೋ
ಸತ್ಯಾವಾ ತೋರೆನೆಂದಾಳೋ ||ಸೋ||
Leave A Comment