ಹರಿದೇವರು ಬಂದೆ ಹುಲಿಗೆವ್ವಾ

ಹರಿದೇವರು ಬಂದೆ ಅಂಗಳಕ್ಕೆ ನಿಂತಾರೆ
ಹರಿದೇ ಹುಲಿಗೆವ್ವ ಒಳಗಿಲ್ಲೇ           ||ಸೋ||

ಹರಿದೇ ಹುಲಿಗೆವ್ವ ಒಳಗಿಲ ಭರಮಲಿಂಗ
ಆಕಾಶದ ಕ್ವಾಲೆ ಬರುವಾನೆ            ||ಸೋ||

ಆಕಾಶದ ಕ್ವಾಲೆ ಬರೆದೆ ಹೇಳಿದಾರೆ
ಗಾದೆ ನಿಮದಂಡೆ ತಿರುಗಲಿ            ||ಸೋ||

ರಂಬೇರು ಬಂದೆ ಅಂಗಳಕ್ಕೆ ನಿಂತಾರೆ
ರಂಬೆ ಕೊಂಗಮ್ಮ ಒಳಗಿಲ್ಲೇ           ||ಸೋ||

ರಂಬೆ ಕೊಂಗಮ್ಮ ಒಳಗಿಲ ಭರಮಲಿಂಗ
ಅಂಬಾರದ ಕ್ವಾಲೆ ಬರುದಾನೆ         ||ಸೋ||

ಆರು ಬಂಡಿ ಬಂದೆ ವಾರಿಲೀ ನಿಂತಾವೆ
ಗ್ಯಾನಿಲ್ಲ ಈ ಊರ ಗೌಡಗೇ            ||ಸೋ||

ಗ್ಯಾನಿಲ್ಲ ಈ ಊರಾ ಗೌಡಾ ಹುಲಿಗೆವ್ವನಾ
ಅವಳುದಾರುತಿ ಬರುಬೇಕೇ            ||ಸೋ||

ಹತ್ತು ಬಂಡಿ ಬಂದೆ, ಜೊತ್ತಿಲೀ ನಿರತಾವಾ
ಗೊತ್ತಿಲ್ಲ ಈ ಊರ ಗೌಡಾಗೇ          ||ಸೋ||

ಗೊತ್ತಿಲ್ಲ ಈ ಊರ ಗೌಡ
ಕೊಂಗಮ್ಮನಾರುತ ಬರುಬೇಕೇ      ||ಸೋ||

ಹಸುಮಗಳೆ ಕೊಂಗಮ್ಮ ಬಸವನೇರಿ
ಕೊಂದೆ ಎಸಳ ಕ್ಯಾದಗಿ ಮುಂಡಕೊಂಡೆ        ||ಸೋ||

ಎಸಳ ಕ್ಯಾದಗಿ ಮುಡಕೊಂಡೆ ಹೊಸಪೇಟೆ
ಶಶಿದೇವಿನಾಗೆ ನೆನುದಾಳೆ ||ಸೋ||

ದಂಡಿನ ಮಾರಿದುರುಗೆ ದಂಡಲ್ಲಿ ತರುಬಿಯಾ
ತಂಡಾ ತಾರಾಂಬಾ ಬಯಲಾಗೇ    ||ಸೋ||

ತಂಡಾ ತಾರಾಂಬಾ ಬಯಲ ಕರಿಹುಲುಗನಾ
ಗಂಡಾ ಗಾರುತಿ ಬೆಳಗ್ಯಾಳೇ          ||ಸೋ||

ಅಂಗಳ ಬಿರಿಸೀರೆ ಹಾಲೀಲಿ ಸೆರಗೊಟ್ಟಿರೀ
ತೋದ ಮಲ್ಲಿಗೆ ಹರವೀರಿ   ||ಸೋ||

ತೋದ ಮಲ್ಲಿಗೆ ಹರವೀರಿ ಹರಿಹುಲುಗನಾ
ಸಾನಕಾ ಹೋಗಿ ಬರುತ್ತಾಳೆ           ||ಸೋ||

ಹೊಸ್ತಿಲು ಬಿಳಿಸೀರಿ ತುಪ್ಪಾ ಸೆಳಗೊಟ್ಟಿರೀ
ನಿಚ್ಚ ಮಲ್ಲಿಗೆ ಹರವೀರೀ     ||ಸೋ||

ನಿಚ್ಚ ಮಲ್ಲಿಗೆ ಹರವೀರೀ ಕೊಂಗಮ್ಮನಾ
ಗಂಗಿಗಿ ಹೋಗಿ ಬರುತ್ತಾಳೆ ||ಸೋ||

ಅಕ್ಕಿ ಬಾನದ ಬುತ್ತಿ, ಬಿಚ್ಚಾಂಗ ರೋಳಿಗಿ,
ಇಟ್ಟಿನೀ ಬಾರೋ, ಮಡಿವಾಳ ಹೂವಾ ಬಾಡಿದವೋ     ||ಸೋ||

ಇಟ್ಟಿನೀ ಬಾರೋ ಮಡಿವಾಳ ಹೂವಾ ಬಾಡಿದವೋ      ||ಸೋ||

ಇಟ್ಟಿನೀ ಬಾರೋ ಮಡಿವಾಳ ಕರಿಹಲುಗನಾ
ಮಕ್ಕಳಿಗೆಲ್ಲ ಉಡಿಬಿಚ್ಚಿ ಹೂವಾ ಬಾಡಿದವೋ  ||ಸೋ||

ಮಕ್ಕಳಿಗೆಲ್ಲ ಉಡಿಬಿಚ್ಚಿ ಹೂವಾ ಬಾಡಿದವೋ  ||ಸೋ||

ಜಾಳದ ಬಾನದ ಬುತ್ತಿ ನೀಲಾಂಗನೋಳಿಗೆ
ನೀಡಿ ನೀ ಬಾರೋ ಮಡಿವಾಳ ಹೂವಾ ಬಾಡಿದವೋ    ||ಸೋ||

ನೀಡಿನೀ ಬಾರೋ ಮಡಿವಾಳ ಹೂವಾ ಬಾಡಿದವೋ     ||ಸೋ||

ನೀಡಿನೀ ಬಾರೋ ಮಡಿವಾಳ ಕೊಂಗಮ್ಮನಾ
ಬಾಲಂಮಾಗೆಲ್ಲ ಮಡಿಬಿಕ್ಕಿ ಹೂವಾ ಬಾಡಿದವೇ           ||ಸೋ||

ಬಾಲಂಮಾಗೆಲ್ಲ ಮಡಿಬಿಕ್ಕಿ ಹೂವಾ ಬಾಡಿದವೇ           ||ಸೋ||

ಅಂಬಾರವಾಲಿದ್ದ ಲಿಂಬಿಯಾ ಹೊಗೆಬಂಡಿ,
ರೆಂಬೆ ಹುಲಿಗೆವ್ವಾನಾ ಶಿವಪೂಜೆ ಹೂವಾ ಬಾಡಿದವೇ   ||ಸೋ||

ರೆಂಬೆ ಹುಲಿಗೆವ್ವಾನಾ ಶಿವಪೂಜೆ ಹೂವಾ ಬಾಡಿದವೇ   ||ಸೋ||

ರಂಬೆನಾ ಹುಲಿಗೆವ್ವನಾ ಶಿವಪೂಜೆ ಮಾಡಲಿ ಹೋಗೆ
ಅಂಬಾರದ ಗಂಟೆ ಡಣಲೆಂದೇ, ಹೂವಾ ಬಾಡಿದವೇ    ||ಸೋ||

ಅಂಬಾರದ ಗಂಟೆ ಡಣಲೆಂದೇ, ಹೂವಾ ಬಾಡಿದವೇ    ||ಸೋ||

ಅಕ್ಕವಸಲಿದ್ದ ತುಪ್ಪಾದ ಹೊಗೆಬಂಡಿ,
ಆಕೆ ಕೊಂಗಮ್ಮನಾ ಶಿವಪೂಜೆ ಹೂವಾ ಬಾಡಿದವೇ      ||ಸೋ||

ಆಕೆ ಕೊಂಗಮ್ಮನಾ ಶಿವಪೂಜೆ ಹೂವಾ ಬಾಡಿದವೇ      ||ಸೋ||

ಆಕೆನಾ ಕೊಂಗಮ್ಮನಾ ಶಿವಪೂಜೆ ಮಾಡಲಿ ಹೋಗೆ
ಆಕಾಶದ ಗಂಟೆ ಡಣಲೆಂದೇ, ಹೂವಾ ಬಾಡಿದವೇ       ||ಸೋ||

ಸಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನಾದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ          ||ಸೋ||

ಸಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನಾದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ          ||ಸೋ||

ಕಂಚುಗಾರ ಮನೆಮುಂದೆ ಸಂಪತ್ತು ನೋಡಿರಿ,
ಕಂಚಿನ ನಾಟಿ ತಿರುಗಲೀ   ||ಸೋ||

ಸಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ            ||ಸೋ||

ಕಂಚಿನಾನ್ಯಾಗಾ ಗಿರುಗ ಕರಿ ಹುಲುಗನಾ,
ಸಂಪತ್ತಿಲಿಂದ ರಥವೇರಿ     ||ಸೋ||

ಸಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನಾದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ          ||ಸೋ||

ಯತ್ತಾಕಲ್ಲಿನ ಮ್ಯಾಲೆ, ಹೆತ್ತವ್ವಾ ಕುಂತಾಳೆ,
ಕಡಗದ ಕೈಯಾ ತಿರುವ್ಯಾಳೆ          ||ಸೋ||

ದಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನಾದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ          ||ಸೋ||

ಕಡುಗವ್ವಾದ ಕೈಯಾ ತಿರುವ್ಯಾಳೆ,
ಹಂಪಿಯ ಅಪ್ಪಯ್ಯನ ತೇರಾ ಕೆಡುವ್ಯಾಳೇ     ||ಸೋ||

ಸಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನಾದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ          ||ಸೋ||

ಕಂಚುಗಾರ ಮನೆಮುಂದೆ ಸಂಪತ್ತು ನೋಡಿರಿ,
ಕಂಚಿನ ನಾಟಿ ತಿರುಗಲೀ   ||ಸೋ||

ಸಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನಾದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ          ||ಸೋ||

ಕಂಚಿನಾನ್ಯಾಗಾ ಗಿರುಗ ಕರಿ ಹುಲುಗನಾ,
ಸಂಪತ್ತಿಲಿಂದ ರಥವೇರಿ     ||ಸೋ||

ಸಾರಿಯ ದುರುಗೇ ದೂರ ಹೊಗ್ಯಾಳೆಂದು
ದಾರಿ ನೋಡ್ಯಾರವ್ವಾ ಜನರೇ         ||ಸೋ||

ರತ್ನಾದ ಗಾಡೇ ಮುತ್ತಿನ ಗಾಡ್ಯಾಗಾ ಹೊತ್ತಿಗಿ ಓದುತ್ತಾಳೆ          ||ಸೋ||

 

ಮೋಡದ ತೆರೆಯಾಗ

ಮೋಡದ ತೆರೆಯಾಗ, ಕಾಗದ ಗೆರಿಯಾಗ
ಕಾವೇರಿ ಮಗ್ಯಾಗ, ಮಲ್ಲಿಗಿ ವನದಾಗ
ಆಳ್ಳಾವ್ವ ಗಂಡನ ಅಪ್ಪನಾ ಕೇಳಿಲ್ಲ
ಬಾಲನಾ ತೊಟ್ಟಿಲ ತೂಗೋಲ ಬನ್ನೀರಿ
ಬೇಗಿನ ಪೂಜೆಗೆ ನಾ ಬಂದು ನಿಂತೆನೇ
ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಹೆತ್ತವ್ವಾನಾ ಕೂದಲಿಗೆ, ತುಪ್ಪಾ ಶೀಗೆ ಕಾಯಿ
ಇಪ್ಪತ್ತು ಕೊಡನಾ ಬಸೀ ನೀರೇ, ಮಾಡದಾ ತೆರಿಯಾಗೇ
ಮಾಡದ ತೆರಿಯಾಗ, ಕಾಗದ ಗೆರಿಯಾಗ
ಕಾವೇರಿ ಮಗ್ಯಾಗಾ, ಮಲ್ಲಿಗಿ ವನದಾಗ
ಆಳ್ಳವ್ವಾ ಗಂಡನ ಅಪ್ಪನಾ ಕೇಳಿಲ್ಲ
ಬೇಗಿನ ಪೂಜೆಗೆ ನಾ ಬಂದು ನಿಂತೇನೇ

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ನಾಲವತ್ತು ಕೊಡನಾ, ಬಿಸೀನೀರಾ ಜಳಕ ಮಾಡೆ
ನಾಡಿಗೆತೆನೆ ಜಡೆಯ ಕೂಡಿವ್ಯಾಳೆ, ಮಾಡದ ತೆರಿಯಾಗೇ
ಮಾಡದ ತೆರಿಯಾಗ, ಕಾಗದ ಗೆರಿಯಾಗ
ಕಾವೇರಿ ಮಗ್ಯಾಗಾ ಮಲ್ಲಿಗಿ ವನದಾಗ
ಅಳ್ಳಾವ್ವಗಂಡನ, ಅಪ್ಪನಾ ಕೇಳಿಲ್ಲ
ಬಾಲನಾ ತೊಟ್ಟಿಲ, ತೂಗೋಲ ಬನ್ನಿರಿ
ಬೇಗಿನ ಪೂಜೆಗೆ ನಾ ಬಂದು ನಿಂತೇನೇ
ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಹೆತ್ತವ್ವನಾ ಕೂದಲಿಗೆ ತುಪ್ಪಾಶೀಗೆ ಕಾಯಿ,
ಇಪ್ಪತ್ತು ಕೊಡನಾ ಬಿಸೀನೀರೇ ಮಾಡದ ತೆರಿಯಾಗೇ
ಮಾಡದ ತೆರಿಯಾಗ, ಕಾಗದ ಗೆರಿಯಾಗ,
ಕಾವೇರಿ ಮಗ್ಯಾಗಾ, ಮಲ್ಲಿಗಿ ವನದಾಗ,
ಅಳ್ವಾವ್ವಗಂಡನಾ ಅಪ್ಪನಾ ಕೇಳಿಲ್ಲ
ಬಾಲನಾ ತೊಟ್ಟಿಲ ತೂಗೋಲ ಬನ್ನೀರಿ
ಬೇಗಿನ ಪೂಜೆಗೆ ನಾ ಬಂದು ನಿಂತೇನೇ

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಇದ್ದನೀರೆರಕೊಂಡ, ಗದೆಂಬಾ ಪೂಜಾರಿ
ಗುದ್ದಾಟ ಬೇಡಾ ಮನೀಯಾಗೇ, ಮಾಡದ ತೆರಿಯಾಗೇ
ಮೊಡದ ತೆರಿಯಾಗ, ಕಾಗದ ಗೆರಿಯಾಗ,
ಕಾವೇರಿ ಮಗ್ಯಾಗಾ, ಮಲ್ಲಿಗಿ ವನದಾಗ,
ಆಳ್ಳಾವ್ವ ಗಂಡನ, ಅಪ್ಪನಾ ಕೇಳಿಲ್ಲ
ಬಾಲನಾ ತೊಟ್ಟಿಲ ತೂಗೋಲ ಬನ್ನೀರಿ
ಬೇಗಿನ ಪೂಜೆಗೆ ನಾ ಬಂದು ನಿಂತೇನೇ
ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಗುದ್ದಾಟ ಬೇಡಾ ಮನಿಯಾಗ, ಕರಿಯುಲುಗನಾ
ದಡ್ಡಾಕಿ ಪೂಜೆ ತಡುದಾವೆ, ಮಾಡದ ತೆರಿಯಾಗೇ
ಮಾಡದ ತೆರಿಯಾಗ, ಕಾಗದ ಗೆರಿಯಾಗ
ಕಾವೇರಿ ಮಗ್ಯಾಗಾ, ಮಲ್ಲಿಗಿ ವನದಾಗ,
ಆಳ್ಳಾವ್ವ ಗಂಡನ, ಅಪ್ಪನಾ ಕೇಳಿಲ್ಲ
ಬಾಲನಾ ತೊಟ್ಟಿಲ ತೂಗೋಲ ಬನ್ನೀರಿ
ಬೇಗಿನ ಪೂಜೆಗೆ ನಾ ಬಂದು ನಿಂತೇನೇ
ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಕಾದ ನೀರೆರಕೊಂಡೆ, ಬೇಗನಾ ಬಾ ಪೂಜಾರಿ
ಕಾದಾಟ ಬೇಡ ಮನಿಯಾಗೇ ಮಾಡದ ತೆರಿಯಾಗೇ
ಮಾಡದ ತೆರಿಯಾಗ, ಕಾಗದ ಗೆರಿಯಾಗ,
ಕಾವೇರಿ ಮಗ್ಯಾಗಾ, ಮಲ್ಲಿಗಿ ವನದಾಗ,
ಆಳ್ಳಾವ್ವ ಗಂಡನ, ಅಪ್ಪನಾ ಕೇಳಿಲ್ಲ
ಬಾಲನಾ ತೊಟ್ಟಿಲ ತೂಗೋಲ ಬನ್ನೀರಿ
ಬೇಗಿನ ಪೂಜೆಗೆ ನಾ ಬಂದು ನಿಂತೇನೇ
ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

ಆಗಲ್ಲಾ
ಹೊತ್ತಿಲಿ ದಯಾಮಾಡೆ      ||ಸೋ||

 

ಇವನೋಡೆ, ನೋಡೆ

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಹುಲಿಗೆವೋ  ||ಸೋ||

ಇವ ನೋಡೆ, ನೋಡೆ, ಮೋಡಿನ ಕ್ಯಾಳೆ : ಕೊಂಗಮ್ಮೋ            ||ಸೋ||

ಅಂದರು ಹಾಕ್ಯಾರೆ, ಹನ್ನೊಂದು ಗಾವಾದ
ರಂಗಾ ವೈದಾರೆ ಮಡಿಕಿಲೀ, ಇವ ನೋಡೆ,
ನೋಡೆ ಮೋಡಿನ ಕ್ಯಾಲೆ ಹುಲಿಗೆವೋ           ||ಸೋ||

ಇವ ನೋಡೆ, ನೋಡೆ, ಮೋಡಿನ ಕ್ಯಾಳೆ : ಕೊಂಗಮ್ಮೋ            ||ಸೋ||

ಕಂಪಾರು ಹಾಕ್ಯಾರೆ ಇಪ್ಪತ್ತು ಗಾವಾದ
ಮುದ್ದಾ ವೈದಾರೆ ಮಿಡಿಕಿಲೀ
ಇವ ನೋಡೆ, ನೋಡೆ, ಮೋಡಿನ ಕ್ಯಾಳೆ ಹುಲಿಗೆವೋ   ||ಸೋ||

ಇವ ನೋಡೆ, ನೋಡೆ, ಮೋಡಿನ ಕ್ಯಾಳೆ: ಕೊಂಗಮ್ಮೋ ||ಸೋ||

ಹೊತ್ತುಟ್ಟೇ ವೈದಾರೆ, ಮಲಿಕಿಲೀ ಕೊಂಗಮ್ಮನಾ
ಇಪ್ಪತ್ತು ದಿನದ ಮೊದ ಮೊಗಳೇ
ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಹುಲಿಗೆವೋ  ||ಸೋ||

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ : ಕೊಂಗಮ್ಮೋ           ||ಸೋ||

ಎಲ್ಲರ ಗುಡಿ ಮುಂದೇ, ಕಲ್ಲಿನ ಹೊಲೆ ಹೂಡಿ,
ಬಲ್ಲೇರ ಹುಲಿಗೆವ್ವಾನಾ ಗುಡಿ ಮುಂದೆ,
ಇವ ನೋಡೆ, ನೋಡೆ, ಮೋಡಿ ನಾ ಕ್ಯಾಳೆ ಹುಲಿಗೆವೋ            ||ಸೋ||

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಕೊಂಗಮ್ಮೋ ||ಸೋ||

ಬಲ್ಲೇದ ಹುಲಿಗೆವ್ವನಾ, ಗುಡಿ ಮುಂದೆ ಪವುಳ್ಯಾಗ,
ಚತೌದ ಮೂರೆ ಹೂಲೆಗುಂಡೆ,
ಇವ ನೋಡೆ, ನೋಡೆ, ಮೋಡಿ ಕ್ಯಾಳೆ ಹುಲಿಗೆವೋ      ||ಸೋ||

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಕೊಂಗಮ್ಮೊ  ||ಸೋ||

ಬಲ್ಲೇದ ಹುಲಿಗೆವ್ವನಾ, ಗುಡಿ ಮುಂದೆ ಪವುಳ್ಯಾಗ,
ಚತೌದ ಮೂರೆ ಹೂಲೆಗುಂಡೆ,
ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಹುಲಿಗೆವೋ  ||ಸೋ||

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಕೊಂಗಮ್ಮೊ  ||ಸೋ||

ಚಲೇವುದಾ ಊರೆ, ಹೊಲೆಗುಂಡೆ ಪೂಜಾರಿ, ಹಾಲತುಪ್ಪಾದೀ ಹೆಸರಿಟ್ಟೇ
ಇವ ನೋಡೆ, ನೋಡೆ, ಮೋಡಿ ನಕ್ಯಾಳೆ ಹುಲಿಗೆವೋ   ||ಸೋ||

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಕೊಂಗಮ್ಮೊ  ||ಸೋ||

ಹಾಲೆನೇ ತುಪ್ಪಾದಲಿ, ಹೆಸರಿಟ್ಟೇ ಪೂಜಾರಿ
ಕೈ ಹುಟ್ಟಾಮಾಡಿ ತಿರುವ್ಯಾನೇ
ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಹುಲಿಗೆವೋ  ||ಸೋ||

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಕೊಂಗಮ್ಮೊ  ||ಸೋ||

ಕೈಯಾ ಹುಟ್ಟಾ ಮಾಡಿ, ತಿರುವ್ಯಾನೆ ಪೂಜಾರಿ
ಎತ್ತಿ ತೋರ್ಯಾನೆ, ತಳಸುರಸಿ,
ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಹುಲಿಗೆವೋ  ||ಸೋ||

ಇವ ನೋಡೆ, ನೋಡೆ, ಮೋಡಿ ನ ಕ್ಯಾಳೆ ಕೊಂಗಮ್ಮೊ  ||ಸೋ||