ಬ್ಯಾಡ, ಬ್ಯಾಡ, ಎಂದಾರೆ
ಬ್ಯಾಡ, ಬ್ಯಾಡ, ಅಂದಾರೆ, ಬೆನ್ನತ್ತಿ ಬಂದ್ಯಾವ್ವಾ
ವಾಲಿ ಕೊಡುತ್ತೀನಿ ಬಿಡಿಸೆರಗೇ ಸೂವ್ವಯೋ
ವಾಲಿ ಕೊಡುತ್ತೀನಿ ಬಿಡಿಸೆರಗೇ ಸೂವ್ವಯೋ ||ಸೋ||
ವಾಲಿ ಕೊಟ್ಟಾರುವಲ್ಲೇ, ಶಾಲಿ ಕೊಟ್ಟಾರುವಲ್ಲೇ
ಜಾನ ಜಂಗಮರ ಮಗಳವ್ವಾ, ಸೂವ್ವಯೋ
ಜಾನ ಜಂಗಮರ ಮಗಳವ್ವಾ, ಸೂವ್ವಯೋ ||ಸೋ||
ಸಾಸಿಯ ಕಳ್ಳಾಟ, ರೇಷಿಮೇ ಉಟ್ಯಾವ್ವಾ
ಏಸೊಂದು ನಿರಿಗೆ ವೈದ್ಯಾವ್ವಾ, ಸೂವ್ವಯೋ
ಏಸೊಂದು ನಿರಿಗೆ ವೈದ್ಯಾವ್ವಾ, ಸೂವ್ವಯೋ ||ಸೋ||
ಏಸೋವಂದು ನಿರಿಗೆ, ವೈದ್ಯಾವ್ವಾ, ಕೊಂಗವ್ವಾ
ಹೊಸಪದರಿಗೆ ಹಾಕ್ಯಾಳಾ ಕೊನೆ ಸೆರಗೇ ಸೂವ್ವಯೋ
ಹೊಸಪದರಿಗೆ ಹಾಕ್ಯಾಳಾ ಕೊನೆ ಸೆರಗೇ ಸೂವ್ವಯೋ ||ಸೋ||
ಹೊಸಪದರಿಗೆ ಹಾಕ್ಯಾಳೆ ಕೊನೆ ಸೆರಗೇ ಹುಲಿಗೆವ್ವಾ
ಬಜಾರ ಸರಿಸಿ, ಬರುತ್ತಾಳೆ, ಸೂವ್ವಯೋ
ಬಜಾರ ಸರಿಸಿ, ಬರುತ್ತಾಳೆ, ಸೂವ್ವಯೋ ||ಸೋ||
ದಾಸೂವಾಳಾದುವ್ವಾ ಸೂಸಿ ಪೂಟರೀಕೆ ತುಂಬಿ,
ದಾಸಾಳುಕೂಟ ಕಳುವೇನೇ, ಸೂವ್ವಯೋ
ದಾಸಾಳ ಕೂಡ ಕಳುವೇನೇ ಸೂವ್ವಯೋ
ದಾಸೂವಾಳಾಕೂಟ, ಕಳುವೇನೇ ಹುಲಿಗೆವ್ವಾ
ಬಂಗಾರ ಗರಿಯಾಗ, ಇಳುಮುಡಿವೇ ಸೂವ್ವಯೋ
ಬಂಗಾರ ಗರಿಯಾಗ, ಇಳುಮುಡಿವೇ ಸೂವ್ವಯೋ ||ಸೋ||
ಪರಾನಾಮಾರಿಗಿ ಗಿರುವುಳ್ಳ ಉಬ್ಬಿಗಿ,
ಪರಮಳ ನಿಮಗ್ಯಾರೆ ದರಿಸ್ಯಾರೆ, ಸೂವ್ವಯೋ
ಪರಮಳ ನಿಮಗ್ಯಾರೆ ದರಿಸ್ಯಾರೆ, ಸೂವ್ವಯೋ ||ಸೋ||
ಪರಮಾಳ ನಿಗ್ಯಾರೆ ಧರಿಸಾರೆ ಭಕುತಾರ
ಇಡಿ ಹೊನ್ನಾ ಕೊಟ್ಟು, ತರಿಸ್ಯಾರೆ ಸೂವ್ವಯೋ
ಇಡಿ ಹೊನ್ನಾ ಕೊಟ್ಟು, ತರಿಸ್ಯಾರೆ ಸೂವ್ವಯೋ ||ಸೋ||
ಕೆಂಪನಾ ಮಾರಿಗಿ, ಮುಂಚುಳ್ಲ ಉಬ್ಬಿಗಿ
ಕುಂಕುಮ ನಿಮಗ್ಯಾರೆ, ಧರಿಸ್ಯಾರೆ ಸೂವ್ವಯೋ
ಕುಂಕುಮ ನಿಮಗ್ಯಾರೆ, ಧರಿಸ್ಯಾರೆ ಸೂವ್ವಯೋ ||ಸೋ||
ಕುಂಕುಮ ನಿಮಗ್ಯಾಕೆ ಭಕುತಾರೆ
ಎಂಟೊನ್ನೆ ಕೊಟ್ಟೆ ತರಿಸ್ಯಾರೆ, ಸೂವ್ವಯೋ
ಎಂಟೊನ್ನೆ ಕೊಟ್ಟೆ ತರಿಸ್ಯಾರೆ, ಸೂವ್ವಯೋ ||ಸೋ||
ಹಸುಮಗಳೆ ಕೊಂಗಮ್ಮ, ಬಸುವಾನೇರಿಕೆಂದೆ
ಯಸುಳ ಕ್ಯಾದಾಗಿ ಮುಡಕಂಡೇ ಸೂವ್ವಯೋ
ಯಸುಳ ಕ್ಯಾದಾಗಿ ಮುಡಕೆ, ಸೂವ್ವಯೋ ||ಸೋ||
ಯಸಳೇನೇ ಕ್ಯಾದಾಗಿ ಮುಡಕಂಡೆ, ಹೊಸಪ್ಯಾಟೆ
ಶಶಿಬೇವಿನಾಗೇ ನನದಾಳೆ, ಸೂವ್ವಯೋ
ಶಶಿಬೇವಿನಾಗೇ ನನದಾಳೆ, ಸೂವ್ವಯೋ ||ಸೋ||
ಕೊಂಗಮ್ಮ – ಹುಲಿಗೆಮ್ಮ
ಕೊಂಗಮ್ಮ, ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೇ ಸಾಧಿಸಿ ಕರೆದರೆ ಮಂಗಳಾರಾರುತ್ತೇ
ಶಿವ ಪಾಲಿಸಿ ಲತ್ತೇ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ನಿಂತೇನೇ ನೀರಿಗಿ ಕುಂಕುಮ ಮಗದಾಳೆ ನಿಂತು ನೋಡ್ಯಾರೆ
ನಲಿಗಾಳ ಕೋಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೇ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೇ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ನಿಂತೇನೇ ನೀರಿಗಿ ಕುಂಕುಮ ಮಗದಾಳೆ ನಿಂತು ನೋಡ್ಯಾರೆ
ನಲಿಗಾಳ ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||

ನಿಂತೇನೇ ನೋಡ್ಯಾರೆ, ನಲಿಗಳ ಕರಿಹುಲುಗನಾ
ಮಂತ್ರ ಮಾನ್ಯರಿಗೆ ತಿಳಿಯಾವೆ
ಕೊಮಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಆಗರದ ಗಿಣಿಬಾರೆ ಸೋಗಿಸಾಲಬಾರೆ ಈಗಲೇ ನಿನ್ನ ಕರೆದೇನೆ
ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಈಗುವಲೇ ನಿನ್ನ ಕರೆದೇನು, ಕರಿಹುಲುಗನಾ
ಯಾಲಕ್ಕಿ ಮರದ ಶರಣೋಳೆ
ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಮಂಗಳವಾರಾದಿನ ತಂಗಿ ಹೊರವಂಟಾಳೆ ಅಂಗಳ ಕಲ್ಲೇ
ಸರಿಯಲ್ಲೇ ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಅಂಗುವ್ವಾಳ ಕಲ್ಲು ಸರಿಯ್ಲಲಯ್ಯಮ್ಮನ ಕಂದವ್ವ ನಿನ್ನ
ಮಾರಿಗೆಲುವಿಲ್ಲೇ ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶುಕ್ರವಾರಾದಿನ ಅಕ್ಕ ಹೊರವಂಟಾಳೆ ಕಟ್ಟೆಯ ಕಲ್ಲೇ
ಸರಿಯಲ್ಲೇ ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಕಟ್ಟೆಯನಾ ಕಲ್ಲು ಸರಿಯ್ಲಲಯ್ಯನಾ ಪುತ್ರವ್ವಾ ನಿನ್ನ
ಮಾರಿಗೆಲುವಿಲ್ಲೇ ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಪಲ್ಲಕ್ಕಿ ಹೋರೋದು ಯಾವಾಲೋಗ್ಯಾರೆಂದು ಪವಾಡಬೀರ್ಸಿ
ಕರುದಾಳೆ ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಪವಾಡ ಬೀಸೀ ಕಂಬದಾಲ ನಮ್ಮವ್ವಾ
ನನಗೆ ಜ್ವಾಳಾದ ಕಡಿಯಾ ಅಳುದಾಳೇ
ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಛತ್ರಿಕೆ ಹಿಡಿಯೋರು ಯತ್ತಾಲೋಗ್ಯಾರೆಂದು
ಕತ್ತಿಯ ಬೀಸೀ ಕರುದಾಳೆ
ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಕತ್ತಿಯನಾ ಬೀಸೀ ಕರುದಾಳೆ ನಮ್ಮವ್ವಾ ನನಗೆ ಅಕ್ಕಿಯ ಪಡಿಯ
ಅಳುದಾಳೆ ಕೊಂಗಮ್ಮ ಹುಲಿಗೆಮ್ಮ ಅವರಿಬ್ಬರ ಜೊತ್ತೇ
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ಶಿವ ಪಾಲಿಸಿ ಲತ್ತೆ ಸಾಧಿಸಿ ಕರೆದರೆ ಮಂಗಳಾರಾರುತ್ತೇ ||ಸೋ||
ತೂಗಿರವ್ವಾನಾ ತೂಗಿರೆ
ತೂಗಿರವ್ವಾನಾ ತೂಗಿರೇ, ತೂಗಿರಕ್ಕನಾ ತೂಗಿರೇ
ತೂಗಿರವ್ವನಾ ಹುಲಿಗೆವ್ವನಾ ತೂಗಿರೇ ||ಸೋ||
ತೂಗಿರವ್ವನಾ ಕರಿಹುಲುಗನಾ ತೂಗಿರೇ ||ಸೋ||
ತೂಗಿರಕ್ಕನಾ ತೂಗಿರೇ, ತೂಗಿರವ್ವಾನಾ ತೂಗಿರೇ
ತೂಗಿರಕ್ಕನಾ ಕೊಂಗಮ್ಮನಾ ತೂಗಿರೇ ||ಸೋ||
ತೂಗಿರಕ್ಕನಾ ಕೊಂಗಮ್ಮನಾ ತೂಗಿರೇ ||ಸೋ||
ತೂಗಿರಣ್ಣಾನಾ ತೂಗಿರೇ, ತೂಗಿರಪ್ಪಾನಾ ತೂಗಿರೇ
ತೂಗಿರೆ ಸಣ್ಣ ವಸವಣ್ಣಾನಾ ತೂಗಿರೇ ||ಸೋ||
ಹಣ್ಣಾತಂದಿನೀ ಹಣ್ಣೇ, ಹಣ್ಣಾ ಬಾಳಿಹಣ್ಣೇ
ಹಣ್ಣಾ ತಂದಿನೀ ನಾನೇ ಆದೇವಿನಾರೇ ತೂಗಿರೇ ||ಸೋ||
ಹಣ್ಣಾ ತಂದಿನೀ ನಾನಾ ಆದೇವಿನಾರೇ ತೂಗಿರೇ ||ಸೋ||
ಹಣ್ಣೀನಾ ತಂದಿನೀ ಹದಿನಾರೆ ಕರಿಹುಲುಗಾ
ಕಂದಾನಾ ತಂದಿನೀ ನಾ ನೆಸರಿಡೇ ತೂಗಿರೇ ||ಸೋ||
ಕಂದಾನಾ ತಂದಿನೀ ನಾ ನೆಸರಿಡೇ ತೂಗಿರೇ ||ಸೋ||
ಕಾ ತಂದಿನೀ ಕಾಯೆ, ಕಾಯೆ ತಂಗಿನಾ ಕಾಯೆ
ಕಾಯ ತಂದಿನೀ ನಾನು ಆ ದೇವಿ ನಾರೇ ತೂಗಿರೇ ||ಸೋ||
ಕಾಯ ತಂದಿನೀ ನಾನೇ ಆ ದೇವಿ ನಾರೇ ತೂಗಿರೇ ||ಸೋ||
ಕಾಯೆನಾ ತಂದಿನೀ ಹದಿನಾರೆ ಕೊಂಗಮ್ಮ
ಕಂದಾನಾ ತಂದಿನೀ ನಾ ನೆಸರಿಡೇ ತೂಗಿರೇ ||ಸೋ||
ಕಂದಾನಾ ತಂದಿನೀ ನಾ ನೆಸರಿಡೇ ತೂಗಿರೇ ||ಸೋ||
ಬಣ್ಣಾದ ವಸ್ತಾರ ಬೆನ್ನೀಕಟ್ಟಿಗೆಂದೇ
ಅಣ್ಣಾಯ್ಯಾಡ್ಯಾನೆ ಸಿರಿಗಳ ತೂಗಿರೇ ||ಸೋ||
ಅಣ್ಣಾಯ್ಯಾಡ್ಯಾನೆ ಸಿರಿಗಳ ತೂಗಿರೇ ||ಸೋ||
ಅಣ್ಣಾಯ್ಯಾಗ್ಯಾರೆ, ಸಿರಿಗಳ ಹೊಸಪ್ಯಾಟೆ
ಬಣ್ಣಾದ ಗುಡಿಯ, ಬಯಲಾಗ ತೂಗಿರೇ ||ಸೋ||
ಬಣ್ಣಾದ ಗುಡಿಯ, ಬಯಲಾಗ ತೂಗಿರೇ ||ಸೋ||
ಕಟ್ಟಿದ ವಸ್ತಾರ ಹೊಟ್ಟೆಕಟ್ಟಿಗ್ಯಾಂಡೆ
ಅಪ್ಪಯ್ಯಾಡ್ಯಾನಾ ಸಿರಿಗಳ ತೂಗಿರೇ ||ಸೋ||
ಅಪ್ಪಯ್ಯಾಡ್ಯಾನೆ ಸಿರಿಗಳ ತೂಗಿರೇ ||ಸೋ||
ಅಪ್ಪಯ್ಯಾಡ್ಯಾನೆ ಸಿರಿಗಳ ಹೊಸಪ್ಯಾಟೆ
ಗಚ್ಚಿನ ಗುಡಿಯ ಬಯಲಾಗೆ ತೂಗಿರೇ ||ಸೋ||
ಗಚ್ಚಿನ ಗುಡಿಯ ಬಯಲಾಗೆ ತೂಗಿರೇ ||ಸೋ||
ಅಂಬಾ ಪಾಲಿಸೆ : ಮಂಗಳಾರಾತಿ ಹಾಡು
ಅಂಬಾ ಪಾಲಿಸೆ, ಜಗದಂಬಾ ದೇವಿ
ಅಂಬಾ ಪಾಲಿಸಿ,
ಸುತ್ತಮುತ್ತಲು ತೋಟಾ ನಡುವೆ ನಿನ್ನ ಪೀಠ
ಸುತ್ತಮುತ್ತಲು ತೋಟಾ ನಡುವೆ ನಿನ್ನ ಪೀಠ
ಮಾಡಿದೆ ಚೆಲ್ಲಾಟ, ತೋರು ನಿನ್ನ ಮಾಟ
ಮಾಡಿದೆ ಚೆಲ್ಲಾಟ, ತೋರು ನಿನ್ನ ಮಾಟ
ಅಂಬಾ ಪಾಲಿಸೆ, ಜಗದಂಬಾ ದೇವಿ
ಅಂಬಾ ಪಾಲಿಸೆ
ಸಾಲನಂದಾ ದೀಪ, ನಡುವೆ ನಿನ್ನ ಸ್ವರೂಪ
ಸಾಲನಂದಾ ದೀಪ, ನಡುವೆ ನಿನ್ನ ಸ್ವರೂಪ
ಮಾಡಿದೆ ಚೆಲ್ಲಾಟ, ತೋರು ನಿನ್ನ ಮಾಟ
ಮಾಡಿದೆ ಚೆಲ್ಲಾಟ, ತೋರು ನಿನ್ನ ಮಾಟ
ಅಂಬಾ ಪಾಲಿಸೆ, ಜಗದಂಬಾ ದೇವಿ
ಅಂಬಾ ಪಾಲಿಸೆ
ಶಿರದ ಮೇಲಿನ ದಂಡೆ, ತೆಗೆದುಕೊಡುವುದು ಕಂಡೆ,
ದಂಡಿಗಿ ಪಾಯಸ, ಕಂಡುಗ ಧನ್ಯಾಳಾದೆ
ದಂಡಿಗಿ ಪಾಯಸ, ಕಂಡುಗ ಧನ್ಯಾಳಾದೆ
ಅಂಬಾ ಪಾಲಿಸೆ, ಜಗದಂಬಾ ದೇವಿ
ಅಂಬಾ ಪಾಲಿಸೆ
ಮುಂದೆ ಇರುವುದು ಚಿಡಿ, ಮಾತೆಂವ್ವನ ಗುಡಿ
ಮುಂದೆ ಇರುವುದು ಚಿಡಿ, ಮಾತೆಂವ್ವನ ಗುಡಿ
ಅಗ್ನಿ ಕೊಂಡಕಾ ನಡಿ, ಬೇಡಿದ ವರವಾ ನೀಡೆ
ಅಗ್ನಿ ಕೊಂಡಕಾ ನಡಿ, ಬೇಡಿದ ವರವಾ ನೀಡೆ
ಅಂಬಾ ಪಾಲಿಸೆ, ಜಗದಂಬಾ ದೇವಿ
ಅಂಬಾ ಪಾಲಿಸೆ
ತುಂಗಭದ್ರಾ ತೀರ, ಐದಾನೆ ಸೋಮೇಶ್ವಪುರಾ
ತುಂಗಭದ್ರಾ ತೀರ, ಐದಾನೆ ಸೋಮೇಶ್ವಪುರಾ
ಹುಲಿಗಿ ಎಂಬಾ ಊರ, ಹುಲಿಗೆಮ್ಮ ದೇವರಾ
ಹುಲಿಗಿ ಎಂಬಾ ಊರ, ಹುಲಿಗೆಮ್ಮ ದೇವರಾ
ಅಂಬಾ ಪಾಲಿಸೆ, ಜಗದಂಬಾ ದೇವಿ
ಅಂಬಾ ಪಾಲಿಸೆ
ಹೋಗ ಹೊಸೂರಮ್ಮನ ತರಿಬ್ಯಾರೆ
ಸುತ್ತ ಮುತ್ತಾ ಉತ್ತುತಿಯ ಕಣ್ಣೆ, ಉತ್ತುತಿಯ ಕಣ್ಣೆ ಎಳೇನೀರೆ,
ಜಡಿಯ ಜೋತಾರದಾರ, ಜನಿವಾರದವರ ಎಲೆ ಕುಂತಳದಲ್ಲಿ ಇರುವಾರೆ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .

ವತ್ತಿಲಿಯ ಕಣ್ಣೆ ಎಳೆಬೇವಿನಾಗಗ್ಗೆ, ಹುಟ್ಟ ಮಕ್ಕಳಿಗೆ ನೆರಳಾಗೆ
ಜಡಿಯ ಜೋತಾರದಾರ, ಜನಿವಾರದವರ ಎಲೆ ಕುಂತಳದಲ್ಲಿ ಇರುವಾರೆ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ಏರೇ ಸುತ್ತಮುತ್ತಾ ಮದರಂಗಿಯ ಕಣ್ಣೆ ಎಡನಿಬೆಕಣ್ಣೆ ಇರುವಾರೆ
ಜಡಿಯ ಜೋತಾರದಾರ, ಜನಿವಾರದವರ ಎಲೆ ಕುಂತಳದಲ್ಲಿ ಇರುವಾರೆ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಹೊಸಲೂರು ರೈತರೇ. . . . . .
ವಾರಿಲಿಯ ಕಣ್ಣೆ ಎಳೆಬೇವಿಗಣ್ಣೆನಾ ಆಡಮಕ್ಕಳಿಗೆ ನೆರಳಾಗೇ. . . . . .
ಜಡಿಯ ಜೋತಾರದಾರ, ಜನಿವಾರದವರ ಎಲೆ ಕುಂತಳದಲ್ಲಿ ಇರುವಾರೆ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .

ಪಲಿಕಿ, ಪಾಲ್ಲಕ್ಕಿ ಸೆರೆ ಇಟ್ಟ ಬರುವಾಗ, ವಾರಿಲಿ ಬಾರೋ ತಳವಾರೋ. . . . . .
ಜಡಿಯ ಜೋತಾರದಾರ, ಜನಿವಾರದವರ ಎಲೆ ಕುಂತಳದಲ್ಲಿ ಇರುವಾರೋ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆವಾರೇ . . . . .

ವಾರಿಲಿಯೇ ಬಾರೋ ತಳವಾರೋ ಸರಮ್ಮನ, ವಾಲಿಬಂಗಾರ ಜತುವಾವೆ
ಜಡಿಯ ಜೋತಾರದಾರ, ಜನಿವಾರ ವಳೆ ಕುಂತಳದಲ್ಲಿ ಇರುವಾರೇ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಛತ್ತಿರಿಕಿ, ಛತ್ರಿಕಿ ಜತ್ತಿಲಿ ಬರುವಾಗ ಬತ್ತಲಿ ಬಾರೋ ತಳವಾರಾ. . . . . .
ಜಡಿಯ ಜೋತಾರದಾರ, ಜನಿವಾರದವರ ಎಳೆ ಕುಂತಳದಲ್ಲಿ ಇರುವಾರೋ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆವಾರೇ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆವಾರೇ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆವಾರೇ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆವಾರೇ . . . . .
ವಾರಿಲಿಯೇ ಬಾರೋ ತಳವಾರೊಸರಮ್ಮನ ವಾಲಿ ಬಂಗಾರ ಜತುನಾವೆ
ಜಡಿಯ ಜೋತಾರದಾರ, ಜನಿವಾರದವರ ಎಳೆ ಕುಂತಳದಲ್ಲಿ ಇರುವಾರೆ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೋ . . . . .
ಹರಿಯೇನಾ ಹಳ್ಳಕ್ಕೆ ಹರಿಗಾಗಿ ಗೈದಾಳೆ, ಆರವತ್ತು ಡೊಳ್ಳೆ ನುಡಿಸುತ್ತಾ . . . . .
ಜಡಿಯ ಜೋತಾರದಾರ, ಜನಿವಾರದವರ ಎಳೆ ಕುಂತಳದಲ್ಲಿ ಇರುವಾರೆ,
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೆ . . . . .

ಆರವತ್ತುಯೋ ಡೊಳ್ಳೆ ನುಡಿಸುತ್ತಾ ಹೊಸೂರಮ್ಮ ನಾ ಹೊಳೆಗೆ ಹೋಗ್ಯಾಳೆ ಜಳಕಾಕೆ
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೆ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೆ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೆ . . . . .
ಹೋಗ ಹೊಸೂರಮ್ಮನ ತರಿಬ್ಯಾರೆ ಇವರ, ಜಾತರಿ ನೆರೆಯೋರೆ . . . . .
Leave A Comment